ಒಂದು ಸಲ ದೇವರ್ಷಿ ನಾರದರು ಹೋಗ್ತಾ ಇದ್ರು. ಒಬ್ಬ ಮನುಷ್ಯ, ಆಲದ ಮರದ ಕೆಳಗೆ ತಪಸ್ಸು ಮಾಡುತ್ತಿದ್ದ. ನಾರದರನ್ನು ಕಂಡು," ಮಹರ್ಷಿಗಳೇ ನನಗೆ ಜೀವನದಿಂದ ಯಾವಾಗ ಮುಕ್ತಿ ಸಿಗತ್ತೆ" ಎಂದು ಕೇಳಿದನು. ನಾರದರು ಅವನು ತಪಸ್ಸು ಮಾಡುತ್ತಿದ್ದ ಮರದ ಮೇಲೆ ನೋಡಿದರು. ನಂತರ ಅವನಿಗೆ "ನೋಡಪ್ಪ ನೀನು ಕೂತಿದಿಯಲ್ಲ, ಈ ಆಲದ ಮರದಲ್ಲಿ ಎಷ್ಟು ಎಲೆಗಳು ಇದೆಯೋ ಅಷ್ಟು ಜನ್ಮ ನಿನಗೆ ಇದೆ. ಅಷ್ಟು ಜನ್ಮಗಳು ಮುಗಿದಮೇಲೆ ನಿನಗೆ ಮುಕ್ತಿ ಸಿಗುತ್ತೆ" ಅಂದರು. ಅವನು ಹೇಳಿದ ಅಯ್ಯೋ ಕರ್ಮ, ಇನ್ನೂ ಅಷ್ಟು ಜನ್ಮಗಳಿದಾವೆ, ನಾನ್ಯಾಕೆ ಕಷ್ಟಪಟ್ಟು ತಪಸ್ಸು ಮಾಡ್ಲಿ. ಸುಮ್ಮನೆ ಮನೆಗೆ ಹೋಗೋದೇ ವಾಸಿ. ಹೀಗೆ ತಪಸ್ಸು ಮಾಡುವುದರಿಂದ ಯಾವ ಪ್ರಯೋಜವು ಇಲ್ಲ. ಹೀಗೆ ಅಂದ್ಕೊಂಡು ತಪಸ್ಸು ಬಿಟ್ಟೆದ್ದು ತನ್ನ ಮನೆಕಡೆ ನಡೆದ.
ನಾರದರು ಹಾಗೆ ಮುಂದೆ ಹೋಗ್ತಾ ಇದ್ರು. ಇನ್ನೊಬ್ಬ ವ್ಯಕ್ತಿ ಹುಣಸೆ ಗಿಡದ ಕೆಳಗೆ ಕುಳಿತು ತಪಸ್ಸು ಮಾಡ್ತಿದ್ದ. ನಾರದ್ರು ಬಂದ್ಕೂಡ್ಳೆ, "ಮಹರ್ಷಿಗಳೇ, ನನ್ನ ಜನ್ಮ ಯಾವಾಗ ಮುಗಿ ಯುತ್ತೆ, ಪುನರ್ಜನ್ಮಾನೇ ಇಲ್ಲದಂತಾಗುವುದು ಯಾವಾಗ" ಎಂದು ಕೇಳಿದ. ಪುನಃ ನಾರದರು ತಪಸ್ಸು ಮಾಡ್ತಿದ್ದ ಮರದ ಮೇಲೆ ನೋಡಿ, "ನೀನು ಯಾವ ಮರದ ಕೆಳಗೆ ಕೂತಿದ್ಯೊ, ಆ ಮರದ ಎಲೆಗಳು ಎಷ್ಟು ಇದೆಯೋ, ಅಷ್ಟು ಜನ್ಮ ನಿನಗೆ ಇದೆ. ಆಮೇಲೆ ನಿನಗೆ “ಮುಕ್ತಿ” ಎಂದರು.
ಈ ಮಾತನ್ನು ಕೇಳಿ, ಆ ಮನುಷ್ಯ ಸಂತೋಷದಿಂದ ಕುಣಿ ಯಲು ಶುರುಮಾಡಿದ. ನಾರದರಿಗೆ ಆಶ್ಚರ್ಯವಾಯ್ತು. ಅಯ್ಯೋ ಇವ್ನಾ, ಇವನು ಕೂತಿರೊ ಮರ ಹುಣಸೇಮರ ಇದ್ರಲ್ಲಿ ಇರೊದೆಲ್ಲ ಸಣ್ಣ ಸಣ್ಣ ಎಲೆಗಳು,ಒಂದೊಂದು ರೆಂಬೆಗಳಲ್ಲೂ ಸಾವಿರಾರು ಎಲೆಗಳಿವೆ. ಇವನ್ಯಾಕೆ ಇಷ್ಟೊಂದು ಖುಷಿ ಪಡ್ತಿದಾನೆ. ಅಂದ್ಕೊಂಡ, ನಾರದ್ರು ಅವನನ್ನು ಏಕೆ ಹೀಗೆ ಕುಣಿಯುವೆ ಎಂದು ಕೇಳಿದರು, ಅದಕ್ಕೆ ಮಹರ್ಷಿಗಳೇ ಸದ್ಯ ಒಂದಲ್ಲ ಒಂದು ದಿವಸ ಈ ಜನುಮ ಮುಗಿಯುತ್ತೆ ಅಂತ ಖುಷಿಯಾಯಿತು ಎಂದ. ಅವನಲ್ಲಿ ಆ ನಂಬಿಕೆ ಇತ್ತು.
ಮೊದಲ ಮನುಷ್ಯ ಕುಳಿತ ಆಲದ ಮರದ ಎಲೆಗಳು ದೊಡ್ಡದಿರುತ್ತೆ. ಆದ್ರೂ ಅವನಿಗೆ ಆ ನಂಬಿಕೆ ಮತ್ತು ನಿಶ್ಚಯ ಇರಲಿಲ್ಲ. ಹಾಗಾಗಿ ಅವನು ಎದ್ಹೋಗ್ಬಿಟ್ಟ. ಎರಡನೇ ಮನುಷ್ಯ ಕುಳಿತ ಹುಣಸೆ ಮರದಲ್ಲಿ, ಆಲದ ಮರಕ್ಕಿಂತ ಎರಡುಪಟ್ಟು ಸಣ್ಣಸಣ್ಣ ಎಲೆಗಳು ಇದ್ದರೂ, ಈತನ ನಿಶ್ಚಯ ಮತ್ತು ನಂಬಿಕೆ ಗಟ್ಟಿಯಾಗಿತ್ತು. ಈ ಜೀವನ ನಂದಲ್ಲ ಭಗವಂತನದು ಎಂದು ಅವನು ತಿಳಿದಿದ್ದ. ಹಾಗಾಗಿ ಸಂತೋಷಗೊಂಡ.
" ಮಾಂ ಚಿ ಯೋ ವ್ಯಭಿಚಾರೇಣ, ಭಕ್ತಿ ಯೋಗೇನ ಸೇವತೇ, ಸ ಗುಣಾನ್ ಸಮತೀ ತ್ಯೈತಾನ್ ಬ್ರಹ್ಮ ಭೂಯಾಯ ಕಲ್ಪತೇ!"
ಅರ್ಥ:- ಯಾವನೋ ನನ್ನನ್ನು ಅನನ್ಯ, ಪರಮ ಪ್ರೇಮ ಲಕ್ಷಣವಾದ ,ಅವ್ಯಭಿಚಾರೀ ಭಕ್ತಿ ಯೋಗದಿಂದ ಸೇವಿಸುತ್ತಾನೋ ಅವನು ಈ ಗುಣಗಳನ್ನು ಮೀರಿ ಬ್ರಹ್ಮಸ್ವರೂಪವನ್ನು ಹೊಂದಲು ಸಮರ್ಥನಾಗುತ್ತಾನೆ.
No comments:
Post a Comment
If you have any doubts. please let me know...