February 28, 2026

ಶತ್ರು ದಂಡನ ಮುಹೂರ್ತ

    ಶತ್ರುಗಳಿಂದ ಉಂಟಾಗುವ ಅನ್ಯಾಯ, ದ್ರೋಹ, ಕಾನೂನು ವ್ಯಾಜ್ಯ ಅಥವಾ ರಹಸ್ಯ ಕುತಂತ್ರಗಳ ಸಂದರ್ಭಗಳಲ್ಲಿ ಆತುರದಿಂದ ಕ್ರಮ ಕೈಗೊಳ್ಳುವುದಕ್ಕಿಂತ, ಶಾಸ್ತ್ರೋಕ್ತ ಮುಹೂರ್ತವನ್ನು ಆಯ್ಕೆ ಮಾಡುವುದು ವಿಜಯದ ಮಾರ್ಗವೆಂದು ಮುಹೂರ್ತ ಶಾಸ್ತ್ರ ಹೇಳುತ್ತದೆ. ಅಂತಹ ಸಂದರ್ಭಗಳಿಗೆ ಆಯ್ಕೆ ಮಾಡುವ ವಿಶೇಷ ಸಮಯವೇ ಶತ್ರು ದಂಡನ ಮುಹೂರ್ತ.

ಮುಖ್ಯ ಸೂಚನೆ:
ಈ ಮುಹೂರ್ತವು ಕೇವಲ ಸ್ವರಕ್ಷಣೆ, ಧರ್ಮಪಾಲನೆ ಮತ್ತು ನ್ಯಾಯಸ್ಥಾಪನೆಗಾಗಿ ಮಾತ್ರ. ಯಾವುದೇ ಕಾರಣವಿಲ್ಲದೆ ಇತರರಿಗೆ ಹಾನಿ ಮಾಡುವ ಉದ್ದೇಶಕ್ಕೆ ಇದನ್ನು ಬಳಸುವುದು ಶಾಸ್ತ್ರೋಕ್ತ ಮಾರ್ಗವಲ್ಲ.

 ಈ ಮುಹೂರ್ತದಲ್ಲಿ ಪರಿಗಣಿಸುವ ಕಾರ್ಯಗಳು
• ಶತ್ರುವಿನ ಅನ್ಯಾಯಕ್ಕೆ ದೃಢ ಪ್ರತಿಕ್ರಿಯೆ
• ಕಾನೂನು ಕ್ರಮ ಆರಂಭ (ದೂರು ಸಲ್ಲಿಕೆ, ನ್ಯಾಯಾಲಯ ವ್ಯಾಜ್ಯ)
• ಪೊಲೀಸ್ ಠಾಣೆ / ಆಡಳಿತಾತ್ಮಕ ವಿಚಾರಣೆ
• ಕುತಂತ್ರ ಅಥವಾ ರಹಸ್ಯ ಸಂಚುಗಳನ್ನು ತಡೆಯುವುದು
• ಧೈರ್ಯಪೂರ್ಣ ಮುಖಾಮುಖಿ ಮಾತುಕತೆ
• ತಂತ್ರಾತ್ಮಕ ಅಥವಾ ರಕ್ಷಣಾತ್ಮಕ ಕ್ರಮಗಳು

1. ಉಗ್ರ ತಿಥಿಗಳ ಶ್ಲೋಕ:
ಉಗ್ರಾಣಿ ಕ್ರೂರಕಾರ್ಯೇಷು ತಿಥಯಃ ಪರಿಕೀರ್ತಿತಾಃ ।
ಚತುರ್ಥ್ಯಷ್ಟಮಿ ನವಮಿ ಚ ಚತುರ್ಧಶೀ ತ್ರಯೋದಶೀ ॥
ಗ್ರಂಥ: ಮುಹೂರ್ತ ಚಿಂತಾಮಣಿ

ಅರ್ಥ:
ಚತುರ್ಥಿ, ಅಷ್ಟಮಿ, ನವಮಿ, ಚತುರ್ಧಶಿ ಮತ್ತು ತ್ರಯೋದಶಿ ತಿಥಿಗಳು ಉಗ್ರ ಮತ್ತು ಕಠಿಣ ಕಾರ್ಯಗಳಿಗೆ ಯೋಗ್ಯವೆಂದು ಹೇಳಲಾಗಿದೆ.

ತೃತೀಯವೂ ದೃಢ ನಿರ್ಧಾರಗಳಿಗೆ ಅನುಕೂಲಕರವೆಂದು ಕೆಲವು ಪರಂಪರೆಗಳು ಪರಿಗಣಿಸುತ್ತವೆ.

2. ಉಗ್ರ ನಕ್ಷತ್ರಗಳ ಶ್ಲೋಕ:
ಉಗ್ರಾಣಿ ಭರಣ್ಯಾರ್ದ್ರಾ ಮಘಾಶ್ಲೇಷಾ ತಥೈವ ಚ ।
ಜ್ಯೇಷ್ಠಾ ಮೂಲಂ ಚ ಪೂರ್ವಾಷಾಢಾ ಪೂರ್ವಾಭಾದ್ರಾ ಚ ಕೀರ್ತಿತಾಃ ॥
ಗ್ರಂಥ: ಕಾಲಾಮೃತ

ಅರ್ಥ:
 ಭರಣಿ, ಆರ್ದ್ರ, ಮಘಾ, ಆಶ್ಲೇಷಾ, ಜ್ಯೇಷ್ಠಾ, ಮೂಲ, ಪೂರ್ವಾಷಾಢಾ ಮತ್ತು ಪೂರ್ವಾಭಾದ್ರ ನಕ್ಷತ್ರಗಳು ಉಗ್ರಸ್ವಭಾವವುಳ್ಳವು.

ಪೂರ್ವ ಫಲ್ಗುನಿಯೂ ಕೆಲವು ಸಂಪ್ರದಾಯಗಳಲ್ಲಿ ತೀಕ್ಷ್ಣ ಸ್ವಭಾವಕ್ಕೆ ಸೇರಿಸಲಾಗಿದೆ.

3. ಮಂಗಳವಾರ ಮತ್ತು ಶನಿವಾರ ಶ್ಲೋಕ:
ಭೌಮೇ ಶತ್ರುವಿನಾಶಾಯ ಶನೌ ದಂಡಪ್ರದಾಯಕೇ ॥
ಗ್ರಂಥ: ಬೃಹತ್ ಸಂಹಿತಾ

ಅರ್ಥ:
 ಮಂಗಳವಾರ ಶತ್ರುನಾಶಕ್ಕೆ ಯೋಗ್ಯ; ಶನಿವಾರ ದಂಡನೆ ಮತ್ತು ಕಠಿಣ ಕ್ರಮಗಳಿಗೆ ಅನುಕೂಲಕರ.

 ಸೋಮವಾರ ಮನೋಸ್ಥೈರ್ಯ ಮತ್ತು ನಿಯಂತ್ರಿತ ನಿರ್ಧಾರಕ್ಕೆ ಸಹಕಾರಿ.

4. ಪಾಪಗ್ರಹ ಸಂಯುಕ್ತ ಲಗ್ನ ಶ್ಲೋಕ:
ಪಾಪಗ್ರಹೈಃ ಸಂಯುತೋ ಲಗ್ನೋ ರಿಪುನಾಶಕರೋ ಭವೇತ್ ॥
ಗ್ರಂಥ: ಧರ್ಮಸಿಂಧು

ಅರ್ಥ: ಪಾಪಗ್ರಹಗಳಿಂದ ಸಂಯುಕ್ತವಾದ ಲಗ್ನವು ಶತ್ರುನಾಶಕಾರಕವಾಗುತ್ತದೆ.

ಲಗ್ನದಲ್ಲಿ ಅಥವಾ ಲಗ್ನಕ್ಕೆ ದೃಷ್ಟಿ ನೀಡುವ ಮಂಗಳ, ಶನಿ, ರಾಹು, ಕೇತುಗಳ ಬಲವು ದಿಟ್ಟ ಕ್ರಮಗಳಿಗೆ ಶಕ್ತಿ ನೀಡುತ್ತದೆ.

ಅನುಕೂಲಕರ ಲಗ್ನ / ರಾಶಿಗಳು
• ಮೇಷ
• ಸಿಂಹ
• ವೃಶ್ಚಿಕ
• ಮಕರ
• ಕುಂಭ

ಈ ರಾಶಿಗಳು ಧೈರ್ಯ, ಸ್ಥೈರ್ಯ ಮತ್ತು ಪ್ರತಿರೋಧ ಶಕ್ತಿಯನ್ನು ಸೂಚಿಸುತ್ತವೆ.

ಜ್ಯೋತಿಷ್ಯ ಸಾರಾಂಶ
ಉಗ್ರ ತಿಥಿ + ತೀಕ್ಷ್ಣ ನಕ್ಷತ್ರ + ಮಂಗಳ/ಶನಿ ಪ್ರಭಾವ + ಪಾಪಗ್ರಹ ಬಲ
= ಶತ್ರು ದಂಡನ ಅಥವಾ ರಕ್ಷಣಾತ್ಮಕ ಕ್ರಮಗಳಿಗೆ ಶಕ್ತಿದಾಯಕ ಸಂಯೋಗ.

ಆದರೆ ಜೊತೆಗೆ ಗಮನಿಸಬೇಕಾದ ಅಂಶಗಳು:

• ಲಗ್ನಬಲ ಮತ್ತು ಚಂದ್ರಬಲ
• ಷಷ್ಠಭಾವ ಬಲ (ಶತ್ರುಭಾವ)
• ಮಾತನಾಡಲು ಹೋಗವ ಕಾಲಕ್ಕೆ ರಾಹುಕಾಲ, ಯಮಗಂಡ, ಗುಳಿಕಕಾಲ ತ್ಯಜಿಸಬೇಕು
• ಗುರುದೃಷ್ಟಿ ಇದ್ದರೆ ಜಯ ಸ್ಥಿರವಾಗುತ್ತದೆ

ಧಾರ್ಮಿಕ ಸಂದೇಶ
ಧರ್ಮದ ಪರವಾಗಿ ಕೈಗೊಂಡ ಕ್ರಮವೇ ಶಾಶ್ವತ ಜಯಕ್ಕೆ ಕಾರಣ.
ಅಧರ್ಮದಿಂದ ಮಾಡಿದ ಪ್ರಯತ್ನ ಕರ್ಮಫಲದ ಮೂಲಕ ವಿಪರೀತ ಫಲ ನೀಡುತ್ತದೆ.

ಆದ್ದರಿಂದ ಶತ್ರು ದಂಡನ ಮುಹೂರ್ತವನ್ನು ಆಯ್ಕೆ ಮಾಡುವಾಗ ಧೈರ್ಯಕ್ಕಿಂತಲೂ ಧರ್ಮಬುದ್ಧಿ ಮುಖ್ಯ.

ಶ್ರೀ ಗುರುರಾಜಾಚಾರ್ಯ ಜೋಶಿ

ವಿವಾಹ ಸಮಯದಲ್ಲಿ ವಧು ವರನ ಎಡಭಾಗದಲ್ಲೇ ಏಕೆ ಕುಳಿತುಕೊಳ್ಳಬೇಕು?

ಹಿಂದೂ ವಿವಾಹದಲ್ಲಿ ವಿವಿಧ ರೀತಿಯ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ವಿವಾಹದ ಸಮಯದಲ್ಲಿ ವಧು ವರನ ಎಡಭಾಗದಲ್ಲೇ ಕುಳಿತುಕೊಳ್ಳಬೇಕೆನ್ನುವ ನಿಯಮವಿದೆ.ವಧು ವರನ ಎಡಭಾಗದಲ್ಲೇ ಯಾಕೆ ಕುಳಿತುಕೊಳ್ಳಬೇಕು.? ಇದಕ್ಕೆ ಕಾರಣ?
ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ನಡೆಯುವ ಮದುವೆಯಲ್ಲಿ ವಿವಿಧ ರೀತಿಯ ಆಚರಣೆಗಳನ್ನು ಪಾಲಿಸಲಾಗುತ್ತದೆ. ಹಿಂದೂ ವಿವಾಹದಲ್ಲಿನ ಈ ಎಲ್ಲಾ ಆಚರಣೆಗಳ ಬಗ್ಗೆ ನಮಗೆ ಪೂರ್ಣವಾಗಿ ತಿಳಿಯದೇ ಇದ್ದರೂ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡಿರಬೇಕು. ವಧು - ವರರಿಬ್ಬರೂ ಈ ಆಚರಣೆಗಳ ಬಗ್ಗೆ ತಿಳಿದಿರುವುದು ತುಂಬಾನೇ ಮುಖ್ಯ. ವಿವಾಹದಲ್ಲಿನ ಆಚರಣೆಗಳು, ಪದ್ಧತಿಗಳು ವಧು - ವರರ ವೈವಾಹಿಕ ಜೀವನದೊಂದಿಗೆ ನೇರ ಸಂಬಂಧವನ್ನು ಹೊಂದಿರುತ್ತದೆ,
ನಮ್ಮ ವಿವಾಹ ಪದ್ಧತಿಯಲ್ಲಿನ ಆಚರಣೆಗಳಲ್ಲಿ ವಧು ಮತ್ತು ವರರು ಹೇಗೆ ಕುಳಿತುಕೊಳ್ಳಬೇಕು ಎಂಬುದರ ಕುರಿತೂ ನಿಯಮಗಳಿವೆ. ಮದುವೆಯ ಸಮಯದಲ್ಲಿ ವಧು ವರನ ಎಡಭಾಗದಲ್ಲಿ ಕುಳಿತುಕೊಳ್ಳಬೇಕೆನ್ನುವ ನಿಯಮವಿದೆ. ಹೀಗೆ ಕುಳಿತುಕೊಳ್ಳುವ ಮೂಲಕ ವಿವಾಹ ಕಾರ್ಯ ಮಾಡುವುದರಿಂದ ಅದು ಪೂರ್ಣವೆಂದು ಕರೆಸಿಕೊಳ್ಳುತ್ತದೆ. ಯಾವ ಕಾರಣಕ್ಕಾಗಿ ವಧು ವರನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ,
01 ಸ್ತ್ರೀ ಅಥವಾ ಮಹಿಳೆಯು ಶಿವನ ಎಡಭಾಗದಿಂದ ಸೃಷ್ಟಿಯಾದವಳು ಎನ್ನುವ ನಂಬಿಕೆಯಿದೆ. ಈ ಭಾಗವು ಶಿವನ ಅರ್ಧನಾರೀಶ್ವರನಿಗೆ ಸಂಬಂಧಿಸಿದ. ಈ ಕಾರಣಕ್ಕಾಗಿ ವಿವಾಹದ ಸಮಯದಲ್ಲಿ ವಧು ವರನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ,
02 ಎಡಭಾಗವನ್ನು ಪ್ರೀತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಧುವಾದವಳು ವರನ ಎಡಭಾಗದಲ್ಲಿ ಕುಳಿತುಕೊಳ್ಳುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಯಾವಾಗಲೂ ತುಂಬಿರುತ್ತದೆ ಎನ್ನುವ ನಂಬಿಕೆಯಿದೆ,
03 ಪ್ರಾಚೀನ ನಂಬಿಕೆಗಳ ಪ್ರಕಾರ, ವರರು ತಮ್ಮನ್ನು ರಕ್ಷಿಸಿಕೊಳ್ಳಲು ವಿವಾಹದ ಸಮಯದಲ್ಲಿ ತಮ್ಮ ಬಲಭಾಗದಲ್ಲಿ ಆಯುಧಗಳನ್ನು ಇಟ್ಟುಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ವಧುವನ್ನು ವರನ ಎಡಭಾಗದಲ್ಲಿ ಕುಳಿತುಕೊಳ್ಳಿಸುತ್ತಿದ್ದರು.
04📖, ಇನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ಧರ್ಮಗ್ರಂಥಗಳಲ್ಲಿ ಪತ್ನಿಯನ್ನು ವಾಮಾಂಗಿ ಎಂದು ಕರೆಯಲಾಗುತ್ತಿತ್ತು. ವಧು - ವರರನ್ನು ಶಿವ - ಪಾರ್ವತಿಯ ಹಾಗೂ ಲಕ್ಷ್ಮಿ ನಾರಾಯಣರ ರೂಪವೆಂದು ಪರಿಗಣಿಸಲಾಗುತ್ತದೆ. ಪಾರ್ವತಿ ಹೇಗೆ ಶಿವನ ಎಡಭಾಗದಲ್ಲಿ ಮತ್ತು ಲಕ್ಷ್ಮಿ ಹೇಗೆ ವಿಷ್ಣುವಿನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೋ ಹಾಗೇ ವಧು - ವರರನ್ನು ಕೂಡ ಕೂರಿಸಲಾಗುತ್ತದೆ.
05 ಮದುವೆಯ ಎಲ್ಲಾ ವಿಧಿ -ವಿಧಾನಗಳಲ್ಲೂ ವಧುವನ್ನು ವರನ ಎಡಭಾಗದಲ್ಲಿ ಕೂರಿಸುವ ಮೂಲಕ ಎಲ್ಲಾ ರೀತಿಯ ವಿವಾಹ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ವಿವಾಹ ಕಾರ್ಯಗಳಲ್ಲಿ ವಧು - ವರರನ್ನು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಸ್ಥಾನದಲ್ಲಿಡುತ್ತಾರೆ.
👆,ಈ ಮೇಲಿನ ಕಾರಣದಿಂದಾಗಿ ವಧುವಾದವಳು ವಿವಾಹದ ಸಮಯದಲ್ಲಿ ಅಥವಾ ಮದುವೆಯ ಸಮಯದಲ್ಲಿ ವರನ ಎಡಭಾಗದಲ್ಲಿ ಕುಳಿತುಕೊಂಡು ವಿವಾಹದ ಎಲ್ಲಾ ವಿಧಿ - ವಿಧಾನಗಳನ್ನು ಪೂರ್ಣಗೊಳಿಸುತ್ತಾಳೆ, ಎಂದು ಹೇಳಲಾಗುತ್ತದೆ.

February 27, 2026

ಸಂಗ್ರಹ ದೋಷ ನಿವಾರಣ

ವಿವಾಹ, ಯಾತ್ರೆ, ಗೃಹಪ್ರವೇಶಾದಿ ಶುಭಕಾರ್ಯಗಳಲ್ಲಿ ಚಂದ್ರನ ಸ್ಥಿತಿ ಅತ್ಯಂತ ಮುಖ್ಯ. ಸಂಗ್ರಹ ಅಥವಾ ಯುತಿ ದೋಷ ಇದ್ದರೂ ಕೆಲವು ವಿಶೇಷ ಸ್ಥಿತಿಗಳಲ್ಲಿ ಶಾಸ್ತ್ರವು ಅದನ್ನು ಶಮನಗೊಂಡಂತೆ ಪರಿಗಣಿಸುತ್ತದೆ. 

ಶ್ಲೋಕ – 1
ಶ್ಲೋಕ :-
ಏಕಸ್ಮಿನ್ನಪಿ ಧಿಷ್ಣ್ಯೋಭಿನ್ನ ರಾಶೌ ಖಲಗ್ರಹೇ|
ತಚ್ಚಂದ್ರರ್ಕ್ಷೇ ಕುರ್ಯಾದ್ ವಿವಾಹಯಾತ್ರಾದಿಕಂ ಸರ್ವಂ||
– ಜ್ಯೋತಿರ್ನಿಬಂಧ

ಅರ್ಥ :-
ಚಂದ್ರ ಮತ್ತು ಪಾಪಗ್ರಹಗಳು ಒಂದೇ ನಕ್ಷತ್ರದಲ್ಲಿ ಸ್ಥಿತರಾಗಿ ರಾಶಿ ಬೇರೆ ಬೇರೆ ಆದರೆ ವಿವಾಹಾದಿ ಶುಭ ಕಾರ್ಯಗಳನ್ನು ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.

ವಿವರಣೆ :
“ಧಿಷ್ಣ್ಯ” ಎಂದರೆ ನಕ್ಷತ್ರ.
“ಖಲಗ್ರಹ” ಎಂದರೆ ಪಾಪಗ್ರಹಗಳು (ಶನಿ, ಮಂಗಳ, ರಾಹು, ಕೆತು ಇತ್ಯಾದಿ).
ಚಂದ್ರ ಮತ್ತು ಪಾಪಗ್ರಹಗಳು ಒಂದೇ ನಕ್ಷತ್ರದಲ್ಲಿ ಇದ್ದರೂ, ಅವು ವಿಭಿನ್ನ ರಾಶಿಗಳಲ್ಲಿದ್ದರೆ ಸಂಪೂರ್ಣ ಸಂಗ್ರಹ ದೋಷ ಉಂಟಾಗುವುದಿಲ್ಲ.

ಇದರಿಂದ ತಿಳಿಯುವುದು ಏನೆಂದರೆ —
ನಕ್ಷತ್ರ ಒಂದೇ ಆಗಿರುವುದರಿಂದ ಮಾತ್ರ ದೋಷ ನಿರ್ಧಾರ ಮಾಡಬಾರದು. ರಾಶಿ ಭೇದ ಇದ್ದರೆ ದೋಷ ಶಮನವಾಗುತ್ತದೆ.

ಆದ್ದರಿಂದ ವಿವಾಹ ಮುಹೂರ್ತ ನಿರ್ಣಯದಲ್ಲಿ ನಕ್ಷತ್ರ ಮಾತ್ರವಲ್ಲ, ರಾಶಿ ಸ್ಥಿತಿಯೂ ಪರಿಶೀಲನೀಯ.

ಶ್ಲೋಕ – 2
ಶ್ಲೋಕ :-
ವಿಧೌ ಶುಭರತೇ ಸೌಮ್ಯದೃಷ್ಟೇ ವರ್ಗೇ ನಿಜೇ ಸತಾಂ|
ಸಕ್ರೂರೇ ದುಸ್ತಿತಂ ದೋಷಂ ವ್ಯಪೋಹತಿ ವಿಧುಸ್ತದಾ||
– ಬೃಹಸ್ಪತಿ

ಅರ್ಥ :--
ಚಂದ್ರನು ಇರುವ ರಾಶಿಯು ಶುಭಗ್ರಹಾದಿಪತಿ ಆಗಿ ಅದರಲ್ಲಿ ಚಂದ್ರನು ಇದ್ದೂ ಮತ್ತು ವರ್ಗೋತ್ತಮ ಸಹಿತ ಸೌಮ್ಯಗ್ರಹ ದೃಷ್ಟಿ ಇದ್ದರೂ ಪಾಪಗ್ರಹ ಯುತಿ ಇದ್ದರು ಯಾವುದೇ ದೋಷವಾಗುವದಿಲ್ಲ.

ವಿವರಣೆ :
“ವಿಧು” ಎಂದರೆ ಚಂದ್ರ.
ಚಂದ್ರನು ಶುಭಗ್ರಹದ ಸ್ವರಾಶಿಯಲ್ಲಿ ಇದ್ದರೆ (ಉದಾ: ಗುರು, ಶುಕ್ರ ಅಧಿಪತ್ಯ ರಾಶಿ).
ವರ್ಗೋತ್ತಮ ಸ್ಥಿತಿಯಲ್ಲಿ ಇದ್ದರೆ ಬಲ ದ್ವಿಗುಣ.
ಸೌಮ್ಯಗ್ರಹಗಳ (ಗುರು, ಶುಕ್ರ, ಬುಧ) ದೃಷ್ಟಿ ಇದ್ದರೆ ಶುದ್ಧತೆ ಹೆಚ್ಚುತ್ತದೆ.

ಈ ಸ್ಥಿತಿಯಲ್ಲಿ ಪಾಪಗ್ರಹ ಯುತಿ ಇದ್ದರೂ ದೋಷ ಪರಿಣಾಮಕಾರಿಯಾಗುವುದಿಲ್ಲ.

ಅರ್ಥಾತ್ —
ಚಂದ್ರಬಲ ಮತ್ತು ಶುಭದೃಷ್ಟಿ ಇದ್ದರೆ ಪಾಪಸಂಯೋಗ ಶಮನಗೊಳ್ಳುತ್ತದೆ.

ತಾತ್ಪರ್ಯ
ಸಂಗ್ರಹ ಅಥವಾ ಯುತಿ ದೋಷವು ಪ್ರತೀ ಸಂದರ್ಭದಲ್ಲೂ ಅನಿಷ್ಟವಲ್ಲ.
ನಕ್ಷತ್ರ ಒಂದೇ ಇದ್ದರೂ ರಾಶಿ ಭೇದ ಇದ್ದರೆ ದೋಷವಿಲ್ಲ.
ಚಂದ್ರನು ಶುಭಸ್ಥಿತಿಯಲ್ಲಿ, ವರ್ಗೋತ್ತಮದಲ್ಲಿ, ಸೌಮ್ಯ ದೃಷ್ಟಿಯಲ್ಲಿದ್ದರೆ ಪಾಪಯುತಿ ಪರಿಣಾಮಕಾರಿಯಾಗುವುದಿಲ್ಲ.

ಶಾಸ್ತ್ರವಾಕ್ಯ ಸ್ಪಷ್ಟ —
“ಚಂದ್ರಬಲ ಹಾಗೂ ಶುಭದೃಷ್ಟಿ ಇದ್ದಲ್ಲಿ ದೋಷ ಶಮನ ನಿಶ್ಚಿತ.

ಶ್ರೀ ಗುರುರಾಜಾಚಾರ್ಯ ಜೋಶಿ ತಾಳಿಕೋಟೆ 

February 25, 2026

ನಿಶ್ಚಯ ಮತ್ತು ನಂಬಿಕೆ

    ಒಂದು ಸಲ ದೇವರ್ಷಿ ನಾರದರು ಹೋಗ್ತಾ ಇದ್ರು. ಒಬ್ಬ ಮನುಷ್ಯ, ಆಲದ ಮರದ ಕೆಳಗೆ ತಪಸ್ಸು ಮಾಡುತ್ತಿದ್ದ.  ನಾರದರನ್ನು ಕಂಡು," ಮಹರ್ಷಿಗಳೇ  ನನಗೆ ಜೀವನದಿಂದ ಯಾವಾಗ ಮುಕ್ತಿ ಸಿಗತ್ತೆ" ಎಂದು ಕೇಳಿದನು. ನಾರದರು ಅವನು ತಪಸ್ಸು ಮಾಡುತ್ತಿದ್ದ ಮರದ ಮೇಲೆ ನೋಡಿದರು. ನಂತರ ಅವನಿಗೆ "ನೋಡಪ್ಪ ನೀನು ಕೂತಿದಿಯಲ್ಲ, ಈ ಆಲದ ಮರದಲ್ಲಿ ಎಷ್ಟು ಎಲೆಗಳು ಇದೆಯೋ ಅಷ್ಟು ಜನ್ಮ ನಿನಗೆ ಇದೆ. ಅಷ್ಟು ಜನ್ಮಗಳು ಮುಗಿದಮೇಲೆ ನಿನಗೆ ಮುಕ್ತಿ ಸಿಗುತ್ತೆ" ಅಂದರು. ಅವನು ಹೇಳಿದ ಅಯ್ಯೋ ಕರ್ಮ, ಇನ್ನೂ ಅಷ್ಟು ಜನ್ಮಗಳಿದಾವೆ, ನಾನ್ಯಾಕೆ ಕಷ್ಟಪಟ್ಟು ತಪಸ್ಸು ಮಾಡ್ಲಿ. ಸುಮ್ಮನೆ ಮನೆಗೆ ಹೋಗೋದೇ  ವಾಸಿ.  ಹೀಗೆ ತಪಸ್ಸು ಮಾಡುವುದರಿಂದ  ಯಾವ ಪ್ರಯೋಜವು ಇಲ್ಲ. ಹೀಗೆ ಅಂದ್ಕೊಂಡು  ತಪಸ್ಸು ಬಿಟ್ಟೆದ್ದು ತನ್ನ ಮನೆಕಡೆ ನಡೆದ.

    ನಾರದರು  ಹಾಗೆ ಮುಂದೆ ಹೋಗ್ತಾ ಇದ್ರು. ಇನ್ನೊಬ್ಬ ವ್ಯಕ್ತಿ ಹುಣಸೆ ಗಿಡದ ಕೆಳಗೆ ಕುಳಿತು ತಪಸ್ಸು ಮಾಡ್ತಿದ್ದ. ನಾರದ್ರು  ಬಂದ್ಕೂಡ್ಳೆ, "ಮಹರ್ಷಿಗಳೇ, ನನ್ನ ಜನ್ಮ ಯಾವಾಗ ಮುಗಿ ಯುತ್ತೆ, ಪುನರ್ಜನ್ಮಾನೇ  ಇಲ್ಲದಂತಾಗುವುದು ಯಾವಾಗ" ಎಂದು ಕೇಳಿದ. ಪುನಃ ನಾರದರು  ತಪಸ್ಸು ಮಾಡ್ತಿದ್ದ  ಮರದ ಮೇಲೆ ನೋಡಿ, "ನೀನು ಯಾವ ಮರದ ಕೆಳಗೆ  ಕೂತಿದ್ಯೊ, ಆ ಮರದ ಎಲೆಗಳು ಎಷ್ಟು ಇದೆಯೋ, ಅಷ್ಟು ಜನ್ಮ ನಿನಗೆ ಇದೆ. ಆಮೇಲೆ ನಿನಗೆ “ಮುಕ್ತಿ” ಎಂದರು.
ಈ ಮಾತನ್ನು ಕೇಳಿ, ಆ ಮನುಷ್ಯ ಸಂತೋಷದಿಂದ ಕುಣಿ ಯಲು ಶುರುಮಾಡಿದ. ನಾರದರಿಗೆ  ಆಶ್ಚರ್ಯವಾಯ್ತು. ಅಯ್ಯೋ ಇವ್ನಾ, ಇವನು ಕೂತಿರೊ ಮರ ಹುಣಸೇಮರ ಇದ್ರಲ್ಲಿ  ಇರೊದೆಲ್ಲ ಸಣ್ಣ ಸಣ್ಣ ಎಲೆಗಳು,ಒಂದೊಂದು  ರೆಂಬೆಗಳಲ್ಲೂ  ಸಾವಿರಾರು  ಎಲೆಗಳಿವೆ. ಇವನ್ಯಾಕೆ ಇಷ್ಟೊಂದು ಖುಷಿ  ಪಡ್ತಿದಾನೆ. ಅಂದ್ಕೊಂಡ, ನಾರದ್ರು ಅವನನ್ನು ಏಕೆ ಹೀಗೆ ಕುಣಿಯುವೆ ಎಂದು ಕೇಳಿದರು, ಅದಕ್ಕೆ ಮಹರ್ಷಿಗಳೇ ಸದ್ಯ ಒಂದಲ್ಲ ಒಂದು ದಿವಸ ಈ ಜನುಮ ಮುಗಿಯುತ್ತೆ ಅಂತ ಖುಷಿಯಾಯಿತು ಎಂದ. ಅವನಲ್ಲಿ ಆ ನಂಬಿಕೆ ಇತ್ತು.

    ಮೊದಲ ಮನುಷ್ಯ ಕುಳಿತ ಆಲದ ಮರದ ಎಲೆಗಳು  ದೊಡ್ಡದಿರುತ್ತೆ. ಆದ್ರೂ ಅವನಿಗೆ ಆ ನಂಬಿಕೆ ಮತ್ತು ನಿಶ್ಚಯ ಇರಲಿಲ್ಲ. ಹಾಗಾಗಿ ಅವನು ಎದ್ಹೋಗ್ಬಿಟ್ಟ.  ಎರಡನೇ ಮನುಷ್ಯ ಕುಳಿತ ಹುಣಸೆ ಮರದಲ್ಲಿ, ಆಲದ ಮರಕ್ಕಿಂತ  ಎರಡುಪಟ್ಟು  ಸಣ್ಣಸಣ್ಣ ಎಲೆಗಳು ಇದ್ದರೂ,  ಈತನ ನಿಶ್ಚಯ ಮತ್ತು ನಂಬಿಕೆ ಗಟ್ಟಿಯಾಗಿತ್ತು. ಈ ಜೀವನ ನಂದಲ್ಲ  ಭಗವಂತನದು ಎಂದು ಅವನು ತಿಳಿದಿದ್ದ. ಹಾಗಾಗಿ ಸಂತೋಷಗೊಂಡ.

" ಮಾಂ ಚಿ ಯೋ  ವ್ಯಭಿಚಾರೇಣ, ಭಕ್ತಿ ಯೋಗೇನ ಸೇವತೇ, ಸ  ಗುಣಾನ್ ಸಮತೀ ತ್ಯೈತಾನ್ ಬ್ರಹ್ಮ ಭೂಯಾಯ ಕಲ್ಪತೇ!"
ಅರ್ಥ:- ಯಾವನೋ  ನನ್ನನ್ನು ಅನನ್ಯ, ಪರಮ ಪ್ರೇಮ ಲಕ್ಷಣವಾದ ,ಅವ್ಯಭಿಚಾರೀ   ಭಕ್ತಿ ಯೋಗದಿಂದ ಸೇವಿಸುತ್ತಾನೋ  ಅವನು ಈ ಗುಣಗಳನ್ನು ಮೀರಿ ಬ್ರಹ್ಮಸ್ವರೂಪವನ್ನು ಹೊಂದಲು ಸಮರ್ಥನಾಗುತ್ತಾನೆ.

ಅಪರಿಚಿತನ ಕೊನೆಯ ಪಯಣ

    ನಾನು ಒಬ್ಬ ಕಾರು ಚಾಲಕ. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ವಾರ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಒಬ್ಬ ವಯಸ್ಸಾದ ವ್ಯಕ್ತಿ ನನ್ನ ಟ್ಯಾಕ್ಸಿ ಏರಿದರು. ಬಿಳಿ ಕುರ್ತಾ, ದೋತಿ, ದಣಿದ ಕಣ್ಣುಗಳು—ಆದರೆ ಅವರ ಧ್ವನಿಯಲ್ಲಿ ಒಂದು ವಿಚಿತ್ರವಾದ ದೃಢತೆ ಇತ್ತು. ಅವರು ಕಾರು ಹತ್ತಿದ ತಕ್ಷಣ ಹೀಗೆಂದರು: "ಇಂದು ರಾತ್ರಿ ನೀನು ನನ್ನನ್ನು ಐದು ಸ್ಥಳಗಳಿಗೆ ಕರೆದೊಯ್ಯಬೇಕು. ನಾನು ನಿನಗೆ 5000 ರೂಪಾಯಿ ನಗದು ಕೊಡುತ್ತೇನೆ. ಆದರೆ ಪಯಣ ಮುಗಿಯುವವರೆಗೂ 'ಏಕೆ?' ಎಂದು ಪ್ರಶ್ನಿಸಬಾರದು." ಅವರು ಒಂದು ಚೀಟಿಯನ್ನು ನನ್ನ ಕೈಗಿಟ್ಟರು. ಅದರಲ್ಲಿ ಐದು ವಿಳಾಸಗಳಿದ್ದವು.

​ಮೊದಲ ನಿಲ್ದಾಣ
ದಕ್ಷಿಣ ಕೋಲ್ಕತ್ತಾದ ಒಂದು ಹಳೆಯ ಮನೆ. ನಾನು ಕಾರು ನಿಲ್ಲಿಸಿದೆ. ಅವರು ಕೆಳಗಿಳಿಯಲಿಲ್ಲ. ಕಿಟಕಿಯ ಗಾಜು ಇಳಿಸಿ ಸುಮ್ಮನೆ ಆ ಮನೆಯನ್ನು ದಿಟ್ಟಿಸಿ ನೋಡಿದರು. ಹತ್ತು ನಿಮಿಷ ಕಳೆದವು. ಅವರ ಕಣ್ಣುಗಳಿಂದ ನೀರು ಹರಿಯುತ್ತಿತ್ತು, ಆದರೆ ಸದ್ದಿರಲಿಲ್ಲ. "ಹೋಗೋಣ... ಮುಂದಿನ ಜಾಗಕ್ಕೆ," ಎಂದರು.

​ಎರಡನೇ ನಿಲ್ದಾಣ
ಒಂದು ಪ್ರಾಥಮಿಕ ಶಾಲೆ. ಗೇಟ್ ಲಾಕ್ ಆಗಿತ್ತು. ಒಳಗೆ ಕತ್ತಲಲ್ಲಿ ಆಟದ ಮೈದಾನವಿತ್ತು. ಅವರು ಕೆಳಗಿಳಿದು ಮೆಲ್ಲನೆ ಅಲ್ಲಿನ ಉಯ್ಯಾಲೆಯ ಬಳಿ ಹೋದರು. ಅದರ ಮೇಲೆ ಕುಳಿತು ಮೃದುವಾಗಿ ತೂಗಿದರು. ಇಪ್ಪತ್ತು ನಿಮಿಷಗಳ ನಂತರ ಮರಳಿ ಬಂದರು. "ನಾನು ಇಲ್ಲಿ 43 ವರ್ಷ ಪಾಠ ಮಾಡಿದ್ದೇನೆ. ಅದು ನನ್ನ ಜೀವನದ ಅತ್ಯುತ್ತಮ ಸಮಯವಾಗಿತ್ತು."

​ಮೂರನೇ ನಿಲ್ದಾಣ
ಒಂದು ಸಣ್ಣ ಹಳೆಯ ಕಾಫಿ ಹೌಸ್. ಅವರು ಒಳಗೆ ಹೋಗಿ ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದರು. ಮೂಲೆಯ ಟೇಬಲ್‌ನಲ್ಲಿ ಒಬ್ಬರೇ ಕುಳಿತರು. ಚಹಾವನ್ನು ಮುಟ್ಟಲೇ ಇಲ್ಲ. ಸುಮ್ಮನೆ ಸುತ್ತಲೂ ನೋಡುತ್ತಿದ್ದರು. ಹದಿನೈದು ನಿಮಿಷಗಳ ನಂತರ ಮಂದಸ್ಮಿತರಾಗಿ ಹಿಂತಿರುಗಿದರು. "ನಾನು ಮೊದಲ ಬಾರಿಗೆ ಉಮಾದೇವಿಯನ್ನು ಭೇಟಿಯಾಗಿದ್ದು ಇಲ್ಲೇ. 1969ರಲ್ಲಿ."

​ನಾಲ್ಕನೇ ನಿಲ್ದಾಣ
ನಿಮ್ತಾಲ ಚಿತಾಗಾರ. ಅವರು ಕೆಳಗಿಳಿದರು. ಒಂದು ನಾಮಫಲಕದ ಮುಂದೆ ನಿಂತು ಯಾವುದೋ ಮಂತ್ರ ಪಠಿಸಿದಂತೆ ಪಿಸುಗುಟ್ಟುತ್ತಿದ್ದರು. ಅರ್ಧ ಗಂಟೆಯ ನಂತರ ಮರಳಿದಾಗ ಅವರ ಕಣ್ಣುಗಳು ಕೆಂಪಾಗಿದ್ದವು. "ಅವಳು ಹೋಗಿ ಮೂರು ವರ್ಷಗಳಾದವು."

​ಐದನೇ ನಿಲ್ದಾಣ
ಒಂದು ದೊಡ್ಡ ಸರ್ಕಾರಿ ಆಸ್ಪತ್ರೆ. ಅವರು ಕಾರನ್ನು ನಿಲ್ಲಿಸಲು ಹೇಳಿದರು. ನಂತರ ನನ್ನನ್ನು ನೋಡಿ ಹೀಗೆಂದರು: "ಈಗ ನಾನು ನಿನಗೆ ಕಾರಣ ಹೇಳುತ್ತೇನೆ. ನನಗೆ ನಾಲ್ಕನೇ ಹಂತದ ಕ್ಯಾನ್ಸರ್ ಇದೆ. ಡಾಕ್ಟರ್ ಹೇಳಿದ್ದಾರೆ ಇನ್ನೇನು ಕೆಲವು ವಾರಗಳು... ಅಥವಾ ಕೆಲವು ದಿನಗಳಷ್ಟೇ ಬಾಕಿ ಅಂತ. ಇಂದು ರಾತ್ರಿ ನನ್ನ ಇಡೀ ಜೀವನವನ್ನು ಕೊನೆಯ ಬಾರಿಗೆ ಒಮ್ಮೆ ನೋಡಬೇಕೆಂದುಕೊಂಡಿದ್ದೆ."
​ನಾನು ಸ್ಟೀರಿಂಗ್ ವೀಲ್ ಮೇಲೆ ತಲೆಯಿಟ್ಟು ಅಳಲು ಪ್ರಾರಂಭಿಸಿದೆ. 

ಅವರು ಹೇಳಿದರು:
"ಆ ಮನೆ—ನನ್ನ ಮಕ್ಕಳನ್ನು ಬೆಳೆಸಿದ ಜಾಗ. 
ಆ ಶಾಲೆ—ನನ್ನ ಜೀವನದ ಉದ್ದೇಶವನ್ನು ಕಂಡುಕೊಂಡ ಜಾಗ. 
ಆ ಕಾಫಿ ಹೌಸ್—ನಾನು ಪ್ರೀತಿಯಲ್ಲಿ ಬಿದ್ದ ಜಾಗ. 
ಆ ಚಿತಾಗಾರ—ನನ್ನವಳಿಗೆ ಕೊನೆಯ ವಿದಾಯ ಹೇಳಿದ ಜಾಗ ಮತ್ತು 
ಈ ಆಸ್ಪತ್ರೆ—ಇಲ್ಲಿ ನಾನು ಇಂದು ದಾಖಲಾಗುತ್ತಿದ್ದೇನೆ. ನಾನು ಮತ್ತೆ ಮನೆಗೆ ಮರಳುವುದಿಲ್ಲ."

​ಅವರು 5000 ರೂಪಾಯಿಗಳನ್ನು ಬಲವಂತವಾಗಿ ನನ್ನ ಕೈಗಿಟ್ಟರು. "ಧನ್ಯವಾದಗಳು. ನನ್ನ ಜೀವನವನ್ನು ಮತ್ತೊಮ್ಮೆ ನೋಡಲು ನೀನು ಸಹಾಯ ಮಾಡಿದೆ. ನನ್ನನ್ನು ಪ್ರೀತಿಯಿಂದ ನಡೆಸಿಕೊಂಡ ನನ್ನ ಜೀವನದ ಕೊನೆಯ ಅಪರಿಚಿತ ವ್ಯಕ್ತಿ ನೀನು." ನಾನು ಅದನ್ನು ತೆಗೆದುಕೊಳ್ಳಲು ಇಷ್ಟಪಡಲಿಲ್ಲ. "ಬೇಡ ತಾತಾ, ಇದನ್ನು ನಾನು ಸ್ವೀಕರಿಸಲಾರೆ," ಎಂದೆ. ಅವರು ಹೇಳಿದರು, "ತೆಗೆದುಕೋ. ಇದನ್ನು ಕೊಡಲು ನನಗೆ ಯಾರೂ ಇಲ್ಲ. ನನ್ನ ಮಕ್ಕಳು ನನ್ನ ಜೊತೆ ಮಾತನಾಡುವುದಿಲ್ಲ. ಯಾವ ಸ್ನೇಹಿತರೂ ಉಳಿದಿಲ್ಲ. ನೀನು ನನಗೆ ಮೂರು ಗಂಟೆಗಳ ಕಾಲಾವಕಾಶ ನೀಡಿದ್ದೀಯ. ಮೂರು ಗಂಟೆಗಳ ಮಾನವೀಯತೆ. ಇದು ಹಣಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು."  ತಮ್ಮ ಸಣ್ಣ ಸೂಟ್‌ಕೇಸ್ ಹಿಡಿದು ಅವರು ಆಸ್ಪತ್ರೆಯ ಒಳಗೆ ಹೋದರು.

​ಮಾರನೇ ದಿನ ನಾನು ಮತ್ತೆ ಆ ಆಸ್ಪತ್ರೆಗೆ ಅವರನ್ನು ನೋಡಲು ಹೂವಿನ ಗುಚ್ಛದೊಂದಿಗೆ ಹೋದೆ.  ಅವರು ಮಂದಹಾಸ ಬೀರಿದರು. "ನೀನು ಬಂದೆಯಾ?" ಇಂದು ಕೇಳಿದರು "ನಿಮ್ಮನ್ನು ಹಾಗೆಯೇ ಬಿಟ್ಟು ಬರಲು ಮನಸ್ಸು ಬರಲಿಲ್ಲ." ಎಂದೆ 
​ನಾವು ಎರಡು ಗಂಟೆಗಳ ಕಾಲ ಮಾತನಾಡಿದೆವು. ಅವರ ಪತ್ನಿ ಉಮಾದೇವಿ, ಅವರ ವಿದ್ಯಾರ್ಥಿಗಳು ಮತ್ತು ದೂರಾದ ಮಕ್ಕಳ ಬಗ್ಗೆ ಹರಟೆ ಹೊಡೆದೆವು. 

ನಾನು ಪ್ರತಿದಿನ ಹೋಗಲಾರಂಭಿಸಿದೆ. ಚಹಾ ತೆಗೆದುಕೊಂಡು ಹೋಗುತ್ತಿದ್ದೆ, ಪತ್ರಿಕೆ ಓದಿ ಹೇಳುತ್ತಿದ್ದೆ. ಕೆಲವೊಮ್ಮೆ ಸುಮ್ಮನೆ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ಒಂದು ದಿನ ಅವರು ಹೇಳಿದರು, "ನಾನು ಒಬ್ಬಂಟಿಯಾಗಿ ಸಾಯುತ್ತೇನೆ ಎಂದುಕೊಂಡಿದ್ದೆ. ಆದರೆ ನೀನು ಈಗ ಇಲ್ಲಿದ್ದೀಯ. ಕೊನೆಯಲ್ಲಿ ಒಬ್ಬ ಅಪರಿಚಿತನೇ ಜೊತೆಯಾಗಿ ಕುಟುಂಬದಂತಾದನು—ಇದೇ ನನ್ನ ಸೌಭಾಗ್ಯ." ನಾನು ಅವರ ಕೈ ಹಿಡಿದು ಹೇಳಿದೆ, "ನೀವು ಒಬ್ಬಂಟಿಯಲ್ಲ."

​ಮರುದಿನ ಬೆಳಗಿನ ಜಾವ 3:17ಕ್ಕೆ ಅವರು ನಿಧನರಾದರು. ನಾನು ಅಲ್ಲಿಯೇ ಅವರ ಕೈ ಹಿಡಿದು ಕುಳಿತಿದ್ದೆ. ಅವರ ಕೊನೆಯ ಮಾತುಗಳೆಂದರೆ, "ಎಲ್ಲರಿಗೂ ಹೇಳು... ಅಪರಿಚಿತರನ್ನು ಗಮನಿಸಿ ನೋಡಿ ಅಂತ. ನಾವೆಲ್ಲರೂ ಎಲ್ಲೋ ಹೊರಟಿದ್ದೇವೆ. ಕೆಲವರು ವೇಗವಾಗಿ, ಕೆಲವರು ನಿಧಾನವಾಗಿ. ದಾರಿಯುದ್ದಕ್ಕೂ ದಯೆ ತೋರಿಸಿ. ನೀನು ಹಾಗೆಯೇ ಇದ್ದೆ. ನನ್ನ ಕೊನೆಯ ದಿನಗಳನ್ನು ನೀನು ಸುಂದರಗೊಳಿಸಿದೆ."
​ಮಾನಿಟರ್‌ನ ಶಬ್ದ ನಿಂತು ನೇರ ಗೆರೆಯಾಯಿತು.

​ಅವರ ಅಂತ್ಯಕ್ರಿಯೆಯಲ್ಲಿ ಕೇವಲ ಆರು ಜನರಿದ್ದರು. ನಾನು, ಮೂವರು ದಾದಿಯರು (nurses), ಒಬ್ಬ ವಕೀಲ ಮತ್ತು ಅವರ ಒಬ್ಬ ಹಳೆಯ ವಿದ್ಯಾರ್ಥಿ. 

43 ವರ್ಷಗಳ ಬೋಧನೆ. 
52 ವರ್ಷಗಳ ದಾಂಪತ್ಯ. 
81 ವರ್ಷಗಳ ಜೀವನ. ಕೇವಲ ಆರು ಜನ.

​ನಾನು ಅಂದುಕೊಂಡೆ: ಅವರು ನನಗೆ ಕಲಿಸಿದ್ದು—
ಪ್ರತಿಯೊಬ್ಬ ಅಪರಿಚಿತನೂ ಯಾರೋ ಒಬ್ಬರ ಇಡೀ ಪ್ರಪಂಚವಾಗಿರುತ್ತದೆ.
ಪ್ರತಿಯೊಬ್ಬ ಪ್ರಯಾಣಿಕನೂ ಒಂದು ಕಥೆ.
ಪ್ರತಿಯೊಬ್ಬ ವ್ಯಕ್ತಿಯೂ ಬದುಕುತ್ತಿದ್ದಾನೆ, ಸಾಯುತ್ತಿದ್ದಾನೆ, ಯಾರಾದರೂ ತನ್ನನ್ನು ಗಮನಿಸಲಿ ಎಂದು ಕಾಯುತ್ತಿದ್ದಾನೆ.

ಅವರು ತಮ್ಮ ಜೀವನದ ಹಾದಿಯಲ್ಲಿ ನನ್ನನ್ನು ಕರೆದೊಯ್ದಿದ್ದಕ್ಕಾಗಿ 5000 ರೂಪಾಯಿ ನೀಡಿದರು. ಆದರೆ ಅವರು ನನಗೆ ಕಲಿಸಿದ ಪಾಠ ಅದಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು. ಮಾನವೀಯತೆ ಎಂಬುದು ಹೆಚ್ಚುವರಿ ಗುಣವಲ್ಲ, ಅದೇ ಅಸಲಿ ಬದುಕು.

​ಇಂದಿಗೂ ನಾನು ಆ 5000 ರೂಪಾಯಿಗಳನ್ನು ಖರ್ಚು ಮಾಡದೆ ನನ್ನ ಕಾರಿನಲ್ಲೇ ಇಟ್ಟಿದ್ದೇನೆ. ಏಕೆಂದರೆ ಪ್ರತಿ ಪ್ರಯಾಣಿಕನೂ ತನ್ನ ಕೊನೆಯ ಪಯಣದಲ್ಲಿರಬಹುದು. ಪ್ರತಿಯೊಬ್ಬ ಅಪರಿಚಿತನೂ ತನ್ನ ಕೊನೆಯ ವಿದಾಯ ಹೇಳುತ್ತಿರಬಹುದು. ಹಾಗಾಗಿ ಈಗ ನಾನು ಚಾಲನೆ ಮಾಡುವ ರೀತಿಯೇ ಬದಲಾಗಿದೆ. ನಾನು ಕೇಳುತ್ತೇನೆ, ಆಲಿಸುತ್ತೇನೆ, ಜನರನ್ನು ಗಮನಿಸುತ್ತೇನೆ. ಒಬ್ಬ ವಯಸ್ಸಾದ ಶಿಕ್ಷಕ ತನಗಾಗಿ ಒಂದು ಸುಂದರವಾದ ಸಂತೋಷದ ರಾತ್ರಿಯನ್ನು ಬಯಸಿದ್ದರು, ಒಬ್ಬ ಅಪರಿಚಿತ ಅದನ್ನು ನೀಡಿದ್ದ.

​ನಾವು ಕೂಡ ಅಂತಹ ವ್ಯಕ್ತಿಯಾಗೋಣ. ನಾವು ಭೇಟಿಯಾಗುವ ಯಾರಾದರೂ ತಮ್ಮ ಜೀವನದ ಕೊನೆಯ ಪಯಣದಲ್ಲಿರಬಹುದು. ಅಂತವರ ಜೀವನವನ್ನು ಸುಂದರಗೊಳಿಸೋಣ.

ಮನುಷ್ಯರಾಗಿ ಹುಟ್ಟಿದ ಮೇಲೆ ಮಾನವೀಯತೆ ಮರೆತರೆ ಹೇಗೆ ??

ಇದು ಅದಾವ ಚಾಲಕನ ಸ್ವ ಅನುಭವವೋ ಅಥವಾ ಅದಾವ ಕತೆಗಾರನ ಕಲ್ಪನೆಯೋ ಕಾಣೆ ಇಂಗ್ಲೀಷಿನಲ್ಲಿ ಓದಿದ್ದನ್ನು ಕೊಂಚ ಬದಲಿಸಿ ಸದುದ್ದೇಶದಿಂದ ಒಂದು ಒಳ್ಳೆ ಸಂದೇಶ ಕೊಡುವ ಉದ್ದೇಶದಿಂದ ಇಲ್ಲಿ ಹಂಚಿಕೊಂಡಿರುವೆ 

*ಕೃಪೆ : ಫೇಸ್ಬುಕ್* 
*ಅನುಪಮ ಅರುಲಿಕೆ ಅವರ ವಾಲ್ ನಿಂದ... 

ದೇವರಿಗೆ ಧನ್ಯವಾದಗಳು

    ಇಕಹಾರ್ಟ್ ಅಂತ ಒಬ್ಬರು ಜಪಾನ್ ದೇಶದ ಸಂತರಿದ್ದರು. ಅವರಿಗೆ ಒಮ್ಮೆ ದೇವಿ ಪ್ರತ್ಯಕ್ಷಳಾದಳು. ಸಂತ ಸುಮ್ಮನೆ ಕೈಮುಗಿದು ನಿಂತಿದ್ದ. ಅವರ ಸ್ನೇಹಿತರು "ದೇವರು ಪ್ರತ್ಯಕ್ಷ ಆಗಿದ್ದಾರೆ. ಏನಾದರೂ ಕೇಳು" ಎಂದರು. ಅದಕ್ಕೆ ಇಕಹಾರ್ಟ್ "ನಾನು ದೇವಸ್ಥಾನದ ಒಳಕ್ಕೆ ಬರುವಾಗ ಪಾದರಕ್ಷೆ ಬಿಡ್ತಾರಲ್ಲ, ಅಲ್ಲಿಯೇ ಕೇಳುವುದನ್ನು ಬಿಟ್ಟು ಬಂದಿದ್ದೇನೆ" ಎಂದ. ಅದಕ್ಕೆ ಸ್ನೇಹಿತರು "ಕೇಳುವುದು ಬಿಟ್ಟಿದ್ದೀಯ ಅಂದ ಮೇಲೆ ದೇವಸ್ಥಾನಕ್ಕೆ ಯಾಕೆ ಬಂದೆ ?" ಎಂದು ಪ್ರಶ್ನಿಸಿದರು. ದೇವರ ಹತ್ತಿರ ಏನಾದರೂ ಕೇಳುವುದಕ್ಕಾಗಿಯೇ ದೇವಸ್ಥಾನಕ್ಕೆ ಹೋಗಬೇಕು ಎನ್ನುವುದು ನಂಬಿಕೆ. 

    ಸ್ನೇಹಿತರ ಪ್ರಶ್ನೆಗೆ ಇಕಹಾರ್ಟ್, "ನಾನು ದೇವರಲ್ಲಿ ಏನಾದರೂ ಕೇಳಲು ಬಂದಿಲ್ಲ. ನನಗೆ ಇಷ್ಟೊಂದು ಸುಂದರವಾದ ಜೀವನ ಕೊಟ್ಟಿದ್ದಾನಲ್ಲ. ಅದಕ್ಕೆ ಅವನಿಗೆ ಧನ್ಯವಾದ ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ.

    ದೇವರಿಗೆ ನಾವು ಧನ್ಯವಾದ ಹೇಳಬೇಕು. ಎಷ್ಟೋ ಜನರಿಗೆ ಉಣ್ಣಲು ಅನ್ನವೇ ಇಲ್ಲ. ಭಿಕ್ಷೆ ಬೇಡಿ ತಿನ್ನುತ್ತಾರೆ. ಆದರೆ ನನ್ನ ಡೈನಿಂಗ್ ಟೇಬಲ್ ಮೇಲೆ ಅನ್ನ ಇದೆಯಲ್ಲ. ಅದಕ್ಕಾಗಿಯಾದರೂ ನಾನು ದೇವರಿಗೆ ಕೃತಜ್ಞನಾಗಿರಬೇಕು. ಎಷ್ಟೋ ಮಂದಿಗೆ ನಡೆಯಲು ಕಾಲುಗಳೇ ಇಲ್ಲ. ನನಗೆ ನಡೆಯುವುದಕ್ಕೆ ಸದೃಢವಾದ ಕಾಲುಗಳನ್ನು ನೀಡಿದ್ದಾನಲ್ಲ. ಅದಕ್ಕೆ ಉಪಕೃತನಾಗದಿದ್ದರೆ ಹೇಗೆ ಹೇಳಿ? 

    ನಾವು ದೇವಸ್ಥಾನಕ್ಕೆ ಹೋಗುವಾಗ ಪಟ್ಟಿ ಹಿಡಿದುಕೊಂಡೇ ಹೋಗಿರುತ್ತೇವೆ. ಈ ಜೀವನ ದೇವರು ಕೊಟ್ಟ ಭಿಕ್ಷೆ. ಅದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಲು ದೇವಾಲಯಕ್ಕೆ ಹೋಗಬೇಕೇ ವಿನಃ  ಏನನ್ನೋ ಕೇಳುವುದಕ್ಕಲ್ಲ. ಸಮುದ್ರದ ನೀರು ಉಪ್ಪು. ಸಮುದ್ರದ ನೀರನ್ನೇ ನಮ್ಮ ಬಾಯಲ್ಲಿ ಹಾಕಿದ್ದರೆ ನಡೆಯುತ್ತದೆಯೇ ?  ಉಪ್ಪು ನೀರು ಮೇಲೆ ತೆಗೆದುಕೊಂಡು ಹೋಗಿ ಮಳೆಯ ಮೂಲಕ ನಮ್ಮ ಬಾಯಿಗೆ ಸಿಹಿ ನೀರು ಹಾಕಿದ್ದಾನೆ. ಅದಕ್ಕೆ ಧನ್ಯವಾದ ಹೇಳು ದೇವನಿಗೆ. ಬಸ್ಸು ತುಂಬಿತ್ತು ಅಂದರೆ ದುಡ್ಡು ಕೊಡ್ತೀನಿ ಅಂದರೂ ಹತ್ತಿಸಿಕೊಂಡು ಹೋಗಲ್ಲ. ಕೆಳಕ್ಕೆ ಇಳಿ ಅಂತಾರೆ. ಟಿಕೆಟ್ ಇಲ್ಲದೆ ನಮಗೆ ಇಲ್ಲಿ ಇರಲು ದೇವರು ಒಂದು ಅವಕಾಶ ಕೊಟ್ಟಿದ್ದಾನಲ್ಲ, ಅದಕ್ಕೆ ಒಂದು ಧನ್ಯವಾದ ಹೇಳಬೇಕು. ವಾಹನಕ್ಕೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್‌ ಬಂಕಿಗೇ  ಹೋಗಬೇಕು. ಆದರೆ ನಮ್ಮ ಮೂಗು ಇರುವಲ್ಲಿಗೇ ಗಾಳಿ ತಂದು ಇಟ್ಟಿದ್ದಾನಲ್ಲ. ಅದಕ್ಕೆ ದೇವರಿಗೆ ಒಂದು ಧನ್ಯವಾದ ಹೇಳಬೇಕು. ಮಣ್ಣು ತಿಂದರೆ ಹಣ್ಣು ತಿಂದ ಹಾಗೆ ಆಗುವುದಿಲ್ಲ. ಆದರೆ, ಹಣ್ಣು ಬಂದಿದ್ದೂ ಮಣ್ಣಿನಿಂದ. ಇಂತಹ ಮ್ಯಾಜಿಕ್ ಮಾಡಿದ ದೇವರಿಗೆ ಧನ್ಯವಾದ ಹೇಳದಿದ್ದರೆ ಹೇಗೆ?

February 24, 2026

"ಬ್ರಹ್ಮ" ಪದದ ಉಚ್ಚಾರ ಜಿಜ್ಞಾಸೆಯನ್ನು ಸ್ವತಃ ಬ್ರಹ್ಮನಿಂದಲೂ ಬಗೆಹರಿಸಲಾಗದು!

"ಬರೆದಂತೆಯೇ ಉಚ್ಚರಿಸುವುದು, ಉಚ್ಚರಿಸಿದಂತೆಯೇ ಬರೆಯುವುದು ಸಂಸ್ಕೃತ ಮತ್ತು ಕನ್ನಡ ಭಾಷೆ್ಗಳ ಜಾಯಮಾನ".  ಹೌದು ತಾನೆ? ಅಂದಮೇಲೆ "ಬ್ರಹ್ಮ"ವನ್ನು "ಬ್ರ ಹ್ ಮ" ಎಂದು, "ಜಾಹ್ನವಿ"ಯನ್ನು "ಜಾ ಹ್ ನ ವಿ" ಎಂದು, "ಮಧ್ಯಾಹ್ನ"ವನ್ನು "ಮ ಧ್ಯಾ ಹ್ ನ" ಎಂದು ಉಚ್ಚರಿಸಿದರೆ ತಪ್ಪಂತೂ ಅಲ್ಲವೇ ಅಲ್ಲ. ನಿಜವಾಗಿಯಾದರೆ ಅದೇ ಸೂಕ್ತ. 

ಆದರೆ, ಈ ರೀತಿ ಹ್ ಜೊತೆ ಇನ್ನೊಂದು ವ್ಯಂಜನ ಸೇರಿ ಸಂಯುಕ್ತಾಕ್ಷರವಾದಾಗ ಮೊದಲಿಗೆ ಆ ’ಇನ್ನೊಂದು ವ್ಯಂಜನ’ವನ್ನು ಉಚ್ಚರಿಸಿ ಆಮೇಲೆ ಹ್ ವನ್ನು ಉಚ್ಚರಿಸಬಹುದು ಎಂದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಂಡಿರುವ ಒಂದು ಅನುಕೂಲ ಶಾಸ್ತ್ರ. 

ವಿಪರ್ಯಾಸವೇನೆಂದರೆ, ಈ ತಥಾಕಥಿತ ಅನುಕೂಲ ಶಾಸ್ತ್ರದಲ್ಲಿ ಏಕರೂಪತೆ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಪಾದನೆ. ಕೆಲವರು "ಹಿ ನ ಮ ಪರೇ ತತ್ಪರಸ್ಯ ಚ" ಎಂಬ ಒಂದು ಸೂತ್ರವನ್ನು ಪ್ರಸ್ತಾವಿಸಿ, "ಹ್ ಜೊತೆ ಮ್/ನ್ ಇದ್ದರೆ ಮೊದಲಿಗೆ ಮ್/ನ್ ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. "ಹ್ ಜೊತೆ ಣ್ ಬಂದರೆ- ಉದಾಹರಣೆಗೆ ಅಪರಾಹ್ಣ- ಏನು ಮಾಡಬೇಕು?" ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ! "ಹ್ ಜೊತೆ ಯ್/ರ್/ಲ್/ವ್ ಬಂದರೆ- ಉದಾಹರಣೆಗೆ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿ- ಏನು ಮಾಡಬೇಕು?" ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ! 

ಇನ್ನು ಕೆಲವರು "ಹ್ ಜೊತೆ ಯಾವುದೇ ಅನುನಾಸಿಕ ಇದ್ದರೆ ಮೊದಲಿಗೆ ಅನುನಾಸಿಕವನ್ನು ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. ಅವರ ವ್ಯಾಖ್ಯೆಯಲ್ಲಿ ಬ್ರಹ್ಮ, ಜಾಹ್ನವಿ, ಅಪರಾಹ್ಣಗಳು ಒಳಗೊಳ್ಳುತ್ತವಾದರೂ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿಗಳ ಉಚ್ಚಾರಕ್ಕೆ ಅವರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ.

ಆದ್ದರಿಂದಲೇ, "ಬರೆದಂತೆಯೇ ಉಚ್ಚರಿಸುವುದು" ಯಾವುದೇ ಗೊಂದಲವಿಲ್ಲದ ಆಯ್ಕೆ. ಬನ್ನಂಜೆ ಗೋವಿಂದಾಚಾರ್ಯರು, ಈಗ ಅವರ ಪುತ್ರಿ ವೀಣಾ ಬನ್ನಂಜೆ ಮುಂತಾದ ಕೆಲವು ವಿದ್ವಾಂಸರು ಇದನ್ನೇ ಆಯ್ದುಕೊಂಡಿದ್ದಾರೆ. ಅವರು "ಬ್ರಹ್ಮ" ಪದವನ್ನು "ಬ್ರ ಹ್ ಮ" ಎಂದೇ ಉಚ್ಚರಿಸುತ್ತಾರೆ, "ಬ್ರ ಮ್ ಹ" ಎಂದು ಅಲ್ಲ. 

ಅಷ್ಟಾಗಿ, ‘ಬ್ರಹ್ಮ’ ಪದದ ವ್ಯುತ್ಪತ್ತಿ ಏನು? ಬೃಹ್ + ಮನಿನ್. ‘ಬೃಹ್’ ಆಂದರೆ something that is expanded, or great; ‘ಬೃಹತ್’ ಪದ ಸಹ ಅದೇ ಮೂಲದಿಂದ ಬಂದದ್ದು. ಬೃಹ್ + ಮನಿನ್ ರೀತಿಯಲ್ಲಿ ಬ್ರಹ್ಮ ಪದ ಉಂಟಾದದ್ದು ಅಂದಮೇಲೆ ಆ ದೃಷ್ಟಿಯಿಂದಲೂ ‘ಹ್’ ಉಚ್ಚಾರವೇ ಮೊದಲು. ಬ್ರಮ್ಹ ಎಂದು ಉಚ್ಚರಿಸಿದರೆ ಅಲ್ಲಿ ‘ಬೃಹ್’ ಧಾತುವನ್ನೇ ಕೊಂದಂತಾಗುತ್ತದಲ್ಲ!? 

ವಹ್ನಿ ಪದ ಸಹ ಹೀಗೆಯೇ. ವಹ್ + ನಿ. ‘ವಹ್’ ಅಂದರೆ something that carries. ಅಗ್ನಿಯು ದೇವತೆಗಳ ಮತ್ತು ಮನುಷ್ಯರ ನಡುವಿನ ಕೊಡುಕೊಳ್ಳುವಿಕೆಯ ವಾಹಕ. ಆದ್ದರಿಂದ ವಹ್ನಿ ಎಂದು ಹೆಸರು. ಅದನ್ನು ವನ್ಹಿ ಎಂದು ಉಚ್ಚರಿಸಿದರೆ ಅಲ್ಲಿ ‘ವಹ್’ ಧಾತುವಿನಿಂದ ಪಡೆದ ಅರ್ಥವನ್ನೇ ಬೆಂಕಿಗೆ ಹಾಕಿ ನಾಶಮಾಡಿದಾಂತಾಗುತ್ತದೆ.

ಮಧ್ಯಾಹ್ನ, ಅಪರಾಹ್ಣಗಳದೂ ಇದೇ ಕಥೆ. ಮಧ್ಯ + ಅಹ್ + ನ. ‘ಅಹ್’ ಎಂದರೆ ಹಗಲು. ಹಗಲಿನ ಮಧ್ಯಭಾಗವೇ ಮಧ್ಯಾಹ್ನ. ಅದನ್ನು ಮಧ್ಯಾನ್ಹ, ಮಧ್ಯಾನ್ನ, ಮಧ್ಯಾನ, ಮದ್ಯಾನ ಅಂತೆಲ್ಲ ಉಚ್ಚರಿಸಿದರೆ/ಬರೆದರೆ ಹಗಲುದರೋಡೆ (“ಅಹ್  = ಹಗಲು" ಎಂಬ ಅರ್ಥವನ್ನು ದರೋಡೆ ಮಾಡಿದಂತೆ) ಆಗುತ್ತದೆ!

ಇದ್ಯಾವ ಗೊಂದಲ ಪಾಪಪ್ರಜ್ಞೆಯೂ ಬೇಡವೆಂದು ಗೀತಾಪರಿವಾರವು "ಬರೆದಂತೆಯೇ ಉಚ್ಚರಿಸುವುದು" ರೀತಿಯನ್ನು ಆಯ್ದುಕೊಂಡಿದೆ. ಗೀತಾಪರಿವಾರದಲ್ಲಿ ನಾವು "ಬ್ರ ಹ್‌ ಮ", "ಜಾ ಹ್ ನ ವಿ", "ಮ ಧ್ಯಾ ಹ್ ನ" ಎಂಬಂತೆ ಉಚ್ಚರಿಸುತ್ತೇವೆ.

ಒಟ್ಟಾರೆಯಾಗಿ ಈ ಉಚ್ಚಾರವಿಷಯವನ್ನು ಸರಿ-ತಪ್ಪು ಎಂದು ನಿಷ್ಕರ್ಷೆ ಮಾಡುವುದಕ್ಕಿಂತ "ಎರಡು ವಿಭಿನ್ನ ಚಿಂತನಾ ಶಾಲೆಗಳು" (two different schools of thought) ಎಂದು ಪರಿಗಣಿಸಬಹುದು ಅಷ್ಟೇ. 🙏

-  ಶ್ರೀವತ್ಸ ಜೋಶಿ. 24ಫೆಬ್ರವರಿ2026.
= = =

ವೃದ್ಧ ತಂದೆಯ ವಿನಂತಿ ....

ಚಿತೆಗೆ ಬೆಂಕಿ ಹಚ್ಚುವಾಗ ಕೈ ಕಂಪಿಸದಿರಲಿ : ವೃದ್ಧ ತಂದೆಯ ವಿನಂತಿ ....   

              ಪುಣೆಯಲ್ಲಿನ ದೊಡ್ಡ ಸ್ಮಶಾನ .  ಸಂಜೆ 3:00 ಗಂಟೆ .  ರೋಹನ್ (35), ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಯ ಉಪಾಧ್ಯಕ್ಷ, ತನ್ನ ವಿಮಾನದಿಂದ ಇಳಿದು ನೇರವಾಗಿ ಸ್ಮಶಾನಕ್ಕೆ ಬಂದಿದ್ದ.
                ಅವರ ತಂದೆ ಸದಾಶಿವರಾವ್ (75) ಹಿಂದಿನ ದಿನ ರಾತ್ರಿ ಕೊನೆಯುಸಿರೆಳೆದಿದ್ದರು . ರೋಹನ್ ದುಬಾರಿ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದುಕೊಂಡು ರೇ-ಬ್ಯಾನ್ ಸನ್‌ಗ್ಲಾಸ್ ಧರಿಸಿದ್ದ. ಅವನು ಬೆವರುತ್ತಿದ್ದ ಮತ್ತು ನಿರಂತರವಾಗಿ ತನ್ನ ಗಡಿಯಾರವನ್ನು ಪರಿಶೀಲಿಸುತ್ತಿದ್ದ.       

                 "ಮೋಕ್ಷ ಈವೆಂಟ್ ಮ್ಯಾನೇಜ್ಮೆಂಟ್" 
(ಅಂತ್ಯಕ್ರಿಯೆ ಸೇವಾ ಸಂಸ್ಥೆ) ದ ಸುಮಿತ್ ಅಲ್ಲಿ ನಿಂತಿದ್ದ. ಸುಮಿತ್ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದ. ಉರುವಲುಗಳನ್ನು ಜೋಡಿಸಲಾಗಿತ್ತು, ಪುರೋಹಿತರನ್ನು ಕರೆಯಲಾಗಿತ್ತು, ಮತ್ತು ಸದಾಶಿವರಾವ್ ಅವರ ದೇಹವನ್ನು ಸ್ನಾನ ಮಾಡಿಸಿ ಸಿದ್ಧಪಡಿಸಲಾಗಿತ್ತು.
            ರೋಹನ್  ತನ್ನ ತಂದೆಯ ಮುಖವನ್ನು ನೋಡಿದ. ಒಂದು ಹನಿ ಕಣ್ಣೀರು ಅಥವಾ ಎರಡು ಅವನ ಕಣ್ಣು
ಗಳಿಂದ ಉರುಳಿತು. 
                  ಅವನು ಸುಮಿತ್‌ಗೆ ಕೇಳಿದ: "ಮಿಸ್ಟರ್ ಸುಮಿತ್, ಎಲ್ಲವೂ ಸಿದ್ಧವಾಗಿದೆ, ಸರಿ? ನನಗೆ ಸಂಜೆ 6 ಗಂಟೆಗೆ ಹಿಂದಿರುಗುವ ವಿಮಾನವಿದೆ. ನಾಳೆ ನನಗೆ ಪ್ರಮುಖ ಸಭೆ ಇದೆ. ಇದನ್ನು ಬೇಗ ಮುಗಿಸಿ." 
             ಸುಮಿತ್ ಆಶ್ಚರ್ಯಚಕಿತನಾದ. ಈ ಮಗನನ್ನು ಬೆಳೆಸಿದ ತಂದೆಗೆ ಮೂರು ಗಂಟೆಗಳ ಕಾಲಾವಕಾಶವೂ ಸಿಗಲಿಲ್ಲವೇ? ಸುಮಿತ್ ಚಪ್ಪಾಳೆ ತಟ್ಟಿದ. ಆಚರಣೆಗಳನ್ನು ನೆರವೇರಿಸಲಾಯಿತು. 
             ರೋಹನ್ ಚಿತೆಗೆ ಬೆಂಕಿ ಹಚ್ಚಿದ. ಹೊಗೆ ಆಕಾಶಕ್ಕೆ ಏರಿತು. ರೋಹನ್ ಸುಮಿತ್‌ಗೆ ಬದಿಯಲ್ಲಿ ಕರೆದು ತನ್ನ ಚೆಕ್‌ಬುಕ್ ತೆಗೆದ. "ಸುಮಿತ್, ಧನ್ಯವಾದಗಳು. ನೀವು ಉತ್ತಮ ವ್ಯವಸ್ಥೆ ಮಾಡಿದ್ದೀರಿ. ನಿಮ್ಮ ಬಿಲ್ ಎಷ್ಟು? 50,000? 1,00,000? ಮೊತ್ತವನ್ನು ಹೇಳಿ, ನಾನು ಚೆಕ್ ಬರೆಯುತ್ತೇನೆ. ನಾನು ಮತ್ತೆ ಬರಲು ಸಾಧ್ಯವಾಗುವುದಿಲ್ಲ. ಚಿತಾಭಸ್ಮವನ್ನು ವಿಸರ್ಜಿಸುವುದನ್ನೂ ನೀವು ನೋಡಿಕೊಳ್ಳಿ." 
             ಸುಮಿತ್ ವಿಚಿತ್ರವಾದ ನಗೆ ನಗುತ್ತಾ ರೋಹನ್‌ನತ್ತ ನೋಡಿದ. "ಸರ್, ಪಾವತಿಸಲು ಏನೂ ಇಲ್ಲ. ನಿಮ್ಮ ಬಿಲ್ ಈಗಾಗಲೇ ಪಾವತಿಸಲಾಗಿದೆ." 
                    ರೋಹನ್ ಗೊಂದಲಕ್ಕೊಳಗಾದ. "ಪಾವತಿಸಲಾಗಿದೆಯೇ? ಯಾರು ಪಾವತಿಸಿದರು? ನನ್ನ ಚಿಕ್ಕಪ್ಪ?" 
           ಸುಮಿತ್ ಉತ್ತರಿಸಿದ: "ಇಲ್ಲ ಸರ್. ಐದು ವರ್ಷಗಳ ಹಿಂದೆ, ಸದಾಶಿವರಾವ್ (ನಿಮ್ಮ ತಂದೆ) ನಮ್ಮ ಕಚೇರಿಗೆ ಬಂದಿದ್ದರು. ಅವರು ತುಂಬಾ ಅನಾರೋಗ್ಯದಿಂದ ಇದ್ದರು. ಅವರು ಕಷ್ಟದಿಂದ ನಡೆಯುತ್ತಿದ್ದರು. ಅವರು ನಮ್ಮನ್ನು ಕೇಳಿದರು, 'ನಿಮ್ಮ ಪ್ಯಾಕೇಜ್ ಏನು? ನನ್ನ ಮಗನಿಗೆ ಯಾವುದೇ ತೊಂದರೆಯಾಗದಂತೆ ನೀವು ಎಲ್ಲವನ್ನೂ ನೋಡಿಕೊಳ್ಳುತ್ತೀರಾ?' 
                   ನಾವು ಅವರಿಗೆ ಪ್ಯಾಕೇಜ್ ವಿವರಗಳನ್ನು ಹೇಳಿದೆವು. ಆ ದಿನವೇ ಅವರು ಮುಂಗಡವಾಗಿ 50,000 ರೂಪಾಯಿಗಳನ್ನು ಠೇವಣಿ ಇತ್ತರು. ಮತ್ತು ಅವರು ನನಗೆ ಈ ಪತ್ರವನ್ನು ನೀಡಿದರು. ಅವರು ನನಗೆ ಹೇಳಿದರು, 'ನನ್ನ ಮಗ ಬಂದಾಗ, ಈ ಪತ್ರವನ್ನು ಅವನಿಗೆ ಕೊಡಿ. ಮತ್ತು ಅವನು ಬರದಿದ್ದರೆ, ನೀವು ನನ್ನ ಅಂತ್ಯಕ್ರಿಯೆಯನ್ನು ನೋಡಿಕೊಳ್ಳಿ.'" 
           ಸುಮಿತ್ ರೋಹನ್‌ಗೆ ಪತ್ರವನ್ನು ನೀಡಿದ.  ಕಂಪಿಸುತ್ತಿರುವ ಕಂಪಿಸುತ್ತಿರುವ ಕೈಗಳಿಂದ  ರೋಹನ್ ಅದನ್ನು ತೆರೆದ.
                    ತಂದೆಯ ಅಸ್ಪಷ್ಟ ಕೈಬರಹದಲ್ಲಿ ಬರೆಯಲಾಗಿತ್ತು:  "ಪ್ರಿಯ ರೋಹನ್, ನನ್ನ ಮಗ, ನೀನು ತುಂಬಾ ಬ್ಯುಸಿ ಎಂದು ನನಗೆ ಗೊತ್ತು. ಅಮೆರಿಕದಲ್ಲಿ, ನೀನು ಉಸಿರಾಡಲು ಸಮಯವಿಲ್ಲ. ನಿನಗೆ ನನ್ನ ಸಾವು ತಿಳಿದಾಗ, ನೀನು ತುಂಬಾ ತಳಮಳಗೊಳ್ಳುತ್ತೀಯೆಂದು ನನಗೆ ಗೊತ್ತು. 'ನನಗೆ ರಜೆ ಸಿಗುತ್ತದೆಯೇ? ಟಿಕೆಟ್ ಸಿಗುತ್ತದೆಯೇ? ನನ್ನ ಸಭೆಯ ಬಗ್ಗೆ ಏನು?' — ಈ ಪ್ರಶ್ನೆಗಳು ನಿನ್ನನ್ನು ಕಾಡುತ್ತವೆ. ಮಗ, ನಿನ್ನ ಸಮಯ ಮತ್ತು ನಿನ್ನ ವೃತ್ತಿಜೀವನ ತುಂಬಾ ಮುಖ್ಯ. ನಾನು ನಿನ್ನನ್ನು ಬೆಳೆಸಿದ್ದು ನೀನು ಜಗತ್ತನ್ನು ಜಯಿಸುವುದಕ್ಕಾಗಿ. ಒಬ್ಬ ವೃದ್ಧನ ಶವಕ್ಕಾಗಿ ನೀನು ನಷ್ಟ ಅನುಭವಿಸಬೇಡ. ಆದ್ದರಿಂದ ನಾನು ನನ್ನ ಸಾವಿಗೆ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದೇನೆ. ನಾನು ಏಜೆನ್ಸಿಗೆ ಶುಲ್ಕ ಪಾವತಿಸಿದ್ದೇನೆ. ಅವರು ಅದನ್ನು ನೋಡಿಕೊಳ್ಳುತ್ತಾರೆ. ನೀನು ಬಂದರೆ ಒಳ್ಳೆಯದು, ಬಾರದಿದ್ದರೆ ನನಗೆ ಕೋಪ ಬರುವುದಿಲ್ಲ. ನಿನ್ನಲ್ಲಿ ಒಂದೇ ಒಂದು ವಿನಂತಿ... ನೀನು ಚಿಕ್ಕವನಾಗಿದ್ದಾಗ ನಾನು ನಿನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ, ನಾನು ನಿನ್ನ ಕೈಯನ್ನು ಬಿಡುತ್ತಿರಲಿಲ್ಲ. ಇಂದು, ನೀನು ನನ್ನ ಚಿತೆಗೆ ಬೆಂಕಿ ಹಚ್ಚುವಾಗ, ನಿನ್ನ ಕೈ ಕಂಪಿಸಬಾರದು. ಬೇಗ ಹಿಂತಿರುಗಿ ಹೋಗು . ನಿನ್ನ ಹೆಂಡತಿ ಕಾಯುತ್ತಿದ್ದಾಳೆ. 
                  ನಿನ್ನ, ಬಾಬಾ.
ಪತ್ರವನ್ನು ಓದಿದ ನಂತರ, ಚೆಕ್‌ಬುಕ್ ರೋಹನ್‌ನ ಕೈಯಿಂದ ಕೆಸರಿನಲ್ಲಿ ಜಾರಿತು. ಉರುವಲು ಸುಡುವ ಶಬ್ದ ತುಂಬಿದ್ದ ಶ್ಮಶಾನದಲ್ಲಿ... ರೋಹನ್‌ನ ಅಹಂಕಾರ ಮತ್ತು ವೃತ್ತಿಜೀವನದ ಮೇಲಿನ ಹೆಮ್ಮೆ ಬೂದಿಯಾಯಿತು. 
                  ಅವನು ತನ್ನ ಮೊಣಕಣಗಳ ಮೇಲೆ ಬಿದ್ದ. "ಬಾಬಾ...! ನನ್ನನ್ನು ಕ್ಷಮಿಸು, ಬಾಬಾ!" 
          ರೋಹನ್ ಸುಮಿತ್‌ನ ಪಾದಗಳನ್ನು ಹಿಡಿದುಕೊಂಡ. "ಸುಮಿತ್, ನಾನು ಅಮೆರಿಕಕ್ಕೆ ಹಿಂತಿರುಗಲು ಬಯಸುವುದಿಲ್ಲ! ನಾನು ನನ್ನ ತಂದೆಯೊಂದಿಗೆ ಇರಲು ಬಯಸುತ್ತೇನೆ! ನಾನು ಲಕ್ಷಾಂತರ ಗಳಿಸಿದೆ, ಆದರೆ ನಾನು ಭಿಕ್ಷುಕನಾದೆ! ನನ್ನ ತಂದೆ, ತಮ್ಮ ಸಾವಿನ ಸಮಯದಲ್ಲೂ, ನನ್ನ ಸಭೆಯ ಬಗ್ಗೆ ಯೋಚಿಸಿದರು... ಮತ್ತು ನಾನು ಅವರ ಅಂತ್ಯಕ್ರಿಯೆಯ ವೆಚ್ಚದ ಬಗ್ಗೆ ಚೌಕಾಸಿ ಮಾಡುತ್ತಿದ್ದೆ?"
                    ಆ ದಿನ, ರೋಹನ್ ತನ್ನ ವಿಮಾನ ಏರಲಿಲ್ಲ . ಅವನು ಸುಡುತ್ತಿರುವ ಚಿತೆಯ ಮುಂದೆ ಇಡೀ ರಾತ್ರಿ ಕುಳಿತಿದ್ದ. 
         ಏಕೆಂದರೆ ಅವನಿಗೆ ಅಂತಿಮವಾಗಿ ಅರ್ಥವಾಯಿತು— "ಪ್ರಿಪೇಡ್" ಎಂದರೆ ಸಿಮ್ ಕಾರ್ಡ್‌ಗೆ... ಆದರೆ ತಂದೆಯ ಪ್ರೀತಿಗೆ ಯಾವುದೇ ಪ್ರಿಪೇಡ್ ಇಲ್ಲ. ತಂದೆಯ ಪ್ರೀತಿ ಅಪರಿಮಿತ — ಮತ್ತು ಯಾವುದೇ ಕರೆನ್ಸಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ. ⸻ ನೀನು ಜಗತ್ತಿನಲ್ಲಿ ಎಷ್ಟೇ ದೊಡ್ಡವನಾಗಿದ್ದರೂ, ಎಷ್ಟು ಹಣ ಸಂಪಾದಿಸಿದರೂ... ನಿನ್ನನ್ನು ಡೈಪರ್‌ಗಳಲ್ಲಿ ಸುತ್ತಿದ ಪೋಷಕರು ಅಂತಿಮ ಪ್ರಯಾಣದಲ್ಲಿ ನಿನ್ನನ್ನು ಬಯಸಿದಾಗ, ಅಸುಕುಳಿಯಬೇಡ. ಅಂತ್ಯಕ್ರಿಯೆಯನ್ನು ಏಜೆನ್ಸಿ ಮಾಡಬಹುದು. ಆದರೆ ಕಣ್ಣೀರು... ಅದನ್ನು ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ಅದು ರಕ್ತದಿಂದ ಬರಬೇಕು. 

#ಶ್ರೀಕಾಂತ್ ಕಾಮತ್

February 23, 2026

ತನ್ನ ಶವವನ್ನೇ ತಾನು ತಿನ್ನುತ್ತಿದ್ದ ರಾಜ

ನಾವು ಪೌರಾಣಿಕ ಪ್ರಪಂಚದಲ್ಲಿ ವಿಹರಿಸತೊಡಗಿದರೆ ನಮಗೆ ಮುತ್ತು, ರತ್ನಗಳಂಥ ಅಸಂಖ್ಯಾತ ಕಥೆಗಳ ದೊಡ್ಡ ಗಣಿಗಳೇ ಸಿಗುತ್ತವೆ! ಬಗೆಬಗೆಯಾದ, ಸ್ವಾರಸ್ಯಕರ, ನೀತಿಬೋಧಕ, ಮನರಂಜನಾತ್ಮಕ ಕಥೆಗಳು ಹೇರಳವಾಗಿ ಸಿಗುತ್ತವೆ! ಇಂಥವನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು, ವೆಬ್ ಸೀರಿಸ್ ಗಳನ್ನು ಧಾರಾಳವಾಗಿ ಮಾಡಬಹುದು! 
    ರಾಮಾಯಣದ ಅಂಥ ಒಂದು ಉಪಕಥೆಯನ್ನು ಈಗ ನೋಡೋಣ. ಇದು ತನ್ನ ಹೆಣವನ್ನು ತಾನೇ ತಿನ್ನುತ್ತಿದ್ದ ಒಬ್ಬ ರಾಜನ ವಿಚಿತ್ರ, ವಿಲಕ್ಷಣ, ಬೀಭತ್ಸ ಕಥೆ! ಆದರೆ ಇದರಲ್ಲಿ ಒಂದು ಅದ್ಭುತ ಸಂದೇಶವಿದೆ! ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುತ್ತದೆ. ಶ್ರೀರಾಮನು ಒಮ್ಮೆ ಅಗಸ್ತ್ಯ ಮಹರ್ಷಿಗಳನ್ನು ನೋಡಲು ಹೋದಾಗ, ಅವರು ಅವನಿಗೆ ಒಂದು ದಿವ್ಯಾಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆಶ್ಚರ್ಯಗೊಂಡ ರಾಮನು, ಮುನಿಗಳಾದ ಅವರಿಗೆ ಈ ದಿವ್ಯಾಭರಣವು ಹೇಗೆ ದೊರೆಯಿತೆಂದು ಕುತೂಹಲದಿಂದ ಕೇಳಿದಾಗ, ಅವರು ಅದರ ಹಿಂದಿನ ವಿಚಿತ್ರ ಕಥೆ ಹೇಳುತ್ತಾರೆ.
      ಅಗಸ್ತ್ಯರು ಹಿಂದಿನ ತ್ರೇತಾಯುಗದಲ್ಲಿ ಒಂದು ದೊಡ್ಡ ಅರಣ್ಯಕ್ಕೆ ಹೋಗಿದ್ದರು. ನೂರು ಯೋಜನಗಳಷ್ಟು ದೊಡ್ಡದಾಗಿದ್ದರೂ ಅದು ನಿರ್ಜನವಾಗಿದ್ದು ಮೃಗಪಕ್ಷಿಗಳಿಂದಲೂ ರಹಿತವಾಗಿತ್ತು! ಆದರೆ ಅಲ್ಲಿ ಸೊಗಸಾದ ಫಲಮೂಲಗಳಿದ್ದವು! ಆ ಅರಣ್ಯದಲ್ಲಿ ಸಂಚರಿಸುತ್ತಾ ಹೋಗಲು, ಅದರ ಮಧ್ಯದಲ್ಲಿ ಅವರೊಂದು ಸುಂದರ ಸರೋವರವನ್ನು ಕಂಡರು! ಪಾಚಿಯೂ ಇಲ್ಲದ ತಿಳಿನೀರಿನಿಂದ ಕೂಡಿದ್ದ ಆ ಸರೋವರದಲ್ಲಿ ಹಂಸ, ಕಾರಂಡವ, ಚಕ್ರವಾಕ ಪಕ್ಷಿಗಳೂ ಕಮಲ, ನೀಲೋತ್ಪಲ ಪುಷ್ಪಗಳೂ ಇದ್ದವು! ಆ ಸರೋವರದ ತೀರದಲ್ಲಿ ಒಂದು ಹಳೆಯ ಆಶ್ರಮವಿತ್ತು! ಆದರೆ ಅಲ್ಲಿ ಯಾವ ಋಷಿ, ಮುನಿಗಳೂ ಇರಲಿಲ್ಲ! ಆ ಆಶ್ರಮದಲ್ಲಿ ಅವರು ಒಂದು ರಾತ್ರಿ ಕಳೆದು ಬೆಳಗಾಗೆದ್ದು ನೋಡಲು, ಆ ಸರೋವರದ ಬಳಿ ಒಂದು ಹೆಣವಿತ್ತು! ಪುಷ್ಟವಾಗಿಯೂ ಕಾಂತಿಯುಕ್ತವಾಗಿಯೂ ಇದ್ದ ಆ ಹೆಣವನ್ನು ನೋಡಿ ಇದೆಂಥ ವಿಚಿತ್ರ ಎಂದು ಆಶ್ಚರ್ಯಗೊಂಡರು ಅಗಸ್ತ್ಯರು! 
    ಆಗ ಇನ್ನೊಂದು ಆಶ್ಚರ್ಯ ನಡೆಯಿತು! ಆಕಾಶದಿಂದ ಒಂದು ಅದ್ಭುತವಾದ ದಿವ್ಯ ವಿಮಾನವು ಬರತೊಡಗಿತು! ಆ ವಿಮಾನದಲ್ಲಿ ಸ್ವರ್ಗೀಯ ಪುರುಷನೊಬ್ಬ ಸಿಂಹಾಸನದ ಮೇಲೆ ಕುಳಿತಿದ್ದನು! ಸಾವಿರಾರು ಅಪ್ಸರೆಯರು ಅವನನ್ನು ಸೇವಿಸುತ್ತಿದ್ದರು! ಕೆಲವರು ಗಾಯನ ಮಾಡುತ್ತಲೂ ಕೆಲವರು ವಾದ್ಯಗಳನ್ನು ನುಡಿಸುತ್ತಲೂ ಕೆಲವರು ಅವನಿಗೆ ಚಾಮರ ಬೀಸುತ್ತಲೂ ಇದ್ದರು! ಆಗ ಆ ವಿಮಾನ ಕೆಳಗಿಳಿದಂತೆ ಆ ಸ್ವರ್ಗೀಯ ಪುರುಷನು, ಮೇರು ಪರ್ವತವನ್ನು ಬಿಟ್ಟು ಹೋಗುವ ಸೂರ್ಯನಂತೆ ತನ್ನ ಸಿಂಹಾಸನದಿಂದ ಇಳಿದು ಸರೋವರದ ಬಳಿಗೆ ಬಂದನು. ಅನಂತರ ಅವನು ಮಾಡಿದ್ದೇನು? ಅಲ್ಲಿದ್ದ ಆ ಹೆಣವನ್ನು ಕಿತ್ತು ಕಿತ್ತು ತಿನ್ನತೊಡಗಿದನು! ಅಗಸ್ತ್ಯರಿಗೆ ಪರಮಾಶ್ಚರ್ಯವಾಯಿತು! 
     ಹಾಗೆ ಶವದ ಮಾಂಸವನ್ನು ಚೆನ್ನಾಗಿ ಭಕ್ಷಿಸಿ, ಆ ಸ್ವರ್ಗೀಯ ಪುರುಷನು ತನ್ನ ಕೈಕಾಲು ಮುಖಗಳನ್ನು ತೊಳೆದುಕೊಂಡು ಆಚಮನ ಮಾಡಿ ಹೊರಡಲನುವಾದನು! ಆಗ ಕುತೂಹಲ ತಡೆಯಲಾಗದೆ ಅಗಸ್ತ್ಯರು ಅವನನ್ನು ತಡೆದು," ಯಾರು ನೀನು? ದೇವತೆಯಂತಿರುವ ನೀನು ಇಂಥ ಕುತ್ಸಿತ, ನಿಂದನೀಯ ಆಹಾರವನ್ನೇಕೆ ಸೇವಿಸಿದೆ? ನಿನ್ನಂಥವನಿಗೆ ಶವಭಕ್ಷಣೆ ಯೋಗ್ಯವಲ್ಲ ಎಂದು ನನ್ನ ಭಾವನೆಯಾಗಿದೆ! ಏಕೆ ಹೀಗೆ ಮಾಡಿದೆ?" ಎಂದು ಕೇಳಿದರು.
     ಅದಕ್ಕೆ ಅವನು ಕೈಮುಗಿದುಕೊಂಡು," ಋಷಿವರ್ಯರೇ! ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೇ! ಈ ಕಾರ್ಯವನ್ನು ನಾನು ಬಿಡಲಾಗುತ್ತಿಲ್ಲ! ಇದಕ್ಕೆ ಕಾರಣ ಹೇಳುತ್ತೇನೆ, ಕೇಳಿ! 
      "ನಾನು ಹಿಂದೆ ಸುದೇವನೆಂಬ ರಾಜನ ಮಗನಾಗಿದ್ದೆ! ವಿದರ್ಭವನ್ನು ಆಳುತ್ತಿದ್ದ ಅವನು ಮಹಾಯಶೋವಂತನೂ ವೀರ್ಯವಂತನೂ ಆಗಿದ್ದು, ಮೂರು ಲೋಕಗಳಲ್ಲೂ ವಿಖ್ಯಾತನಾಗಿದ್ದ! ಅವನಿಗೆ ಇಬ್ಬರು ಪತ್ನಿಯರಿಂದ ಇಬ್ಬರು ಪುತ್ರರು ಜನಿಸಿದರು! ಒಬ್ಬನು ಶ್ವೇತನೆಂಬ ನಾನಾದರೆ, ಇನ್ನೊಬ್ಬನು, ಸುರಥನೆಂಬ ನನ್ನ ತಮ್ಮ! ನನ್ನ ತಂದೆಯು ಸ್ವರ್ಗಸ್ಥನಾದ ಬಳಿಕ, ನಾನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿಕೊಂಡಿದ್ದೆ. ಆಗ ಒಮ್ಮೆ ನನಗೆ ಯಾವುದೋ ಕಾರಣದಿಂದ ನನ್ನ ಆಯುಷ್ಯ ಎಷ್ಟೆಂದು ತಿಳಿದುಹೋಯಿತು! ಆಗ ನನಗೆ ರಾಜ್ಯವಾಳಲು ಮನಸ್ಸು ಬಾರದೇ ನನ್ನ ತಮ್ಮನಿಗೆ ಪಟ್ಟಗಟ್ಟಿ ತಪಸ್ಸು ಮಾಡಲೆಂದು ಮೃಗಪಕ್ಷಿರಹಿತವಾದ ಈ ದುರ್ಗಮ ಅರಣ್ಯಕ್ಕೆ ಬಂದೆ! ಈ ಸರೋವರದ ಬಳಿಯೇ ಆಶ್ರಮ ನಿರ್ಮಿಸಿಕೊಂಡು ಮೂರು ಸಾವಿರ ವರ್ಷಗಳ ಕಾಲ ದುಷ್ಕರ ತಪಸ್ಸು ಮಾಡಿ ಮೃತನಾದ ಬಳಿಕ ಬ್ರಹ್ಮಲೋಕ ಪಡೆದೆ! ಆದರೆ ಅತ್ಯಂತ ಶ್ರೇಷ್ಠವಾದ ಬ್ರಹ್ಮಲೋಕವನ್ನು ಪಡೆದರೂ ನನಗೆ ಹಸಿವು, ಬಾಯಾರಿಕೆಗಳು ಬಾಧಿಸತೊಡಗಿದವು! ಬ್ರಹ್ಮಲೋಕದಲ್ಲಿ ಹೀಗಾಗಬಾರದಲ್ಲ ಎಂದು ಯೋಚಿಸಿ ಪಿತಾಮಹ ಬ್ರಹ್ಮದೇವನ ಬಳಿ ಹೋಗಿ,'ಪಿತಾಮಹ! ಈ ಬ್ರಹ್ಮಲೋಕದಲ್ಲಿ ಕ್ಷುತ್ಪಿಪಾಸೆಗಳು ಕಾಡುವುದಿಲ್ಲ! ಆದರೆ ಅವು ನನ್ನನ್ನು ಕಾಡುತ್ತಿವೆ! ಇದೇಕೆ ಹೀಗೆ? ಈಗ ನನಗೆ ಆಹಾರ ಯಾವುದು?' ಎಂದು ಕೇಳಿದೆ. ಅದಕ್ಕೆ ಅವನು,'ಎಲೈ ಶ್ವೇತನೇ! ನಿನ್ನ ಶವದ ಮಾಂಸವೇ ನಿನಗಿನ್ನು ಆಹಾರ! ನೀನು ಹಿಂದೆ ಭೂಮಿಯ ಮೇಲೆ ತಪಸ್ಸು ಮಾಡುತ್ತಿದ್ದಾಗ ನಿನ್ನ ಶರೀರವನ್ನು ಸ್ವಾದಿಷ್ಟ ಆಹಾರದಿಂದ ಚೆನ್ನಾಗಿ ಪೋಷಿಸಿಕೊಳ್ಳುತ್ತಿದ್ದೆ! ಆದರೆ ಆಗ ನೀನು ಯಾರಿಗೂ ಏನನ್ನೂ ಕೊಡಲಿಲ್ಲ! ಒಂದಿಷ್ಟೂ ದಾನ ಮಾಡಲಿಲ್ಲ! ಕೇವಲ ತಪಸ್ಸು ಮಾಡುತ್ತಿದ್ದೆ ಹಾಗೂ ನೀನು ಮಾತ್ರ ಚೆನ್ನಾಗಿ ತಿನ್ನುತ್ತಿದ್ದೆ! ಯಾರಿಗೂ ಸ್ವಲ್ಪವೂ ಅನ್ನದಾನ ಮಾಡಲಿಲ್ಲ! ಆದ್ದರಿಂದಲೇ ಈಗ ನಿನಗೆ ಹಸಿವು, ತೃಷೆಗಳು ಬಾಧಿಸುತ್ತಿವೆ! ಬೀಜವನ್ನು ಬಿತ್ತದೇ ಸಸ್ಯವು ಬೆಳೆಯುವುದೇ? ಆದ್ದರಿಂದಲೇ ನಿನಗೆ ಹಸಿವಿನ ಸಂಕಷ್ಟ! ಇದಕ್ಕೆ ಪರಿಹಾರವೆಂದರೆ, ನೀನೇ ಬೆಳೆಸಿರುವ ಸ್ವಾದಿಷ್ಟವಾದ ನಿನ್ನ ಶರೀರವನ್ನೇ ತಿನ್ನುವುದು! ಅದು ಇನ್ನೂ ಆ ಸರೋವರದ ಬಳಿಯೇ ಇದೆ! ಒಳ್ಳೆಯ ಆಹಾರಗಳಿಂದ ಪೋಷಿಸಿರುವ ಅದು ರಸಭರಿತವಾಗಿದೆ! ದಿನವೂ ಹೋಗಿ ಅದನ್ನು ತಿನ್ನು! ಅದರಿಂದ ನಿನಗೆ ತೃಪ್ತಿಯಾಗುತ್ತದೆ! ನೀನು ತಿಂದ ಬಳಿಕ ಅದು ಪುನಃ ಮರುದಿವಸಕ್ಕೆ ತುಂಬಿಕೊಳ್ಳುತ್ತದೆ! ಕೊನೆಗೊಂದು ದಿನ, ಅಗಸ್ತ್ಯ ಮಹರ್ಷಿಗಳು ಬಂದಾಗ ನಿನ್ನ ಕಷ್ಟ ಪರಿಹಾರವಾಗುತ್ತದೆ!' ಎಂದನು. ಅದರಂತೆ ನಾನು ಅನೇಕ ವರ್ಷಗಳಿಂದ ನಿಂದ್ಯವಾದ ನನ್ನ ಶವವನ್ನೇ ತಿನ್ನುತ್ತಿದ್ದೇನೆ! ಅದು ಕ್ಷಯಿಸದೇ ಮತ್ತೆ ಮತ್ತೆ ತುಂಬಿಕೊಳ್ಳುತ್ತಲೇ ಇದೆ! ಈಗ ನೀವು ದುರ್ಗಮವಾದ ಈ ಅರಣ್ಯಕ್ಕೆ ಬಂದಿರುವಿರೆಂದರೆ ನೀವು ಅಗಸ್ತ್ಯ ಮಹರ್ಷಿಗಳೇ ಇರಬೇಕು! ನಿಮ್ಮನ್ನು ಬಿಟ್ಟು ಬೇರಾರೂ ಇಲ್ಲಿಗೆ ಬರಲಾರರು! ದಯವಿಟ್ಟು ನನ್ನನ್ನು ಈ ಸಂಕಷ್ಟದಿಂದ ಪಾರುಮಾಡಿ! ನನ್ನ ಈ ಒಂದು ಆಭರಙವನ್ನು ತೆಗೆದುಕೊಂಡು ನನ್ನನ್ನು ಅನುಗ್ರಹಿಸಿ! ಇದು ಸಾಮಾನ್ಯ ಆಭರಣವಾಗಿರದೇ ದಿನವೂ ಅಪಾರ ಚಿನ್ನ, ವಸ್ತ್ರ, ಆಭರಣ, ಭಕ್ಷ್ಯ ಭೋಜ್ಯಗಳನ್ನು ಕೊಡುತ್ತದೆ!" 
        ಹೀಗೆ ತನ್ನ ಕಥೆ ಹೇಳಿ ಆ ಸ್ವರ್ಗೀಯ ಪುರುಷನು ಅಗಸ್ತ್ಯ ಮಹರ್ಷಿಗಳಿಗೆ ಆ ದಿವ್ಯಾಭರಣವನ್ನು ಕೊಟ್ಟನು. ಅವನನ್ನು ಕಾಪಾಡಲೆಂದು ಅಗಸ್ತ್ಯರೂ ಅದನ್ನು ಸ್ವೀಕರಿಸಿದರು. ಆಗ ಶ್ವೇತನ ಶವವು ಅದೃಶ್ಯವಾಯಿತು! ಶ್ವೇತನು ಸಂತೋಷದಿಂದ ತನ್ನ ವಿಮಾನದಲ್ಲಿ ಕುಳಿತು ಬ್ರಹ್ಮಲೋಕಕ್ಕೆ ತೆರಳಿದನು!
       ಇದಿಷ್ಟು ಕಥೆಯನ್ನು ಅಗಸ್ತ್ಯರು ಶ್ರೀರಾಮನಿಗೆ ಹೇಳಿದರು. ಅದನ್ನು ಕೇಳಿ ರಾಮನೂ ಆಶ್ಚರ್ಯಗೊಂಡನು! 
     ಈ ಕಥೆಯಲ್ಲಿ ಅನ್ನದಾನ ಎಷ್ಟು ಮುಖ್ಯ ಎಂಬ ಸಂದೇಶವಿರುವುದನ್ನು ನೋಡಬಹುದು. ನಾವು ಏನೇ ಒಳ್ಳೆಯ ಕೆಲಸ ಮಾಡಿದರೂ ಕಷ್ಟದಲ್ಲಿರುವ ಇನ್ನೊಬ್ಬರಿಗೂ ಏನಾದರೂ ಕೊಡಬೇಕು. ನಮಗಷ್ಟೇ ಮಾಡಿಕೊಂಡರೆ ಸಾಲದು. ಇತರರಿಗೂ ಅಲ್ಪಸ್ವಲ್ಪ ದಾನ ಮಾಡಬೇಕು. ಆದ್ದರಿಂದಲೇ, ವೈದಿಕ ಸಂಸ್ಕೃತಿಯಲ್ಲಿ ನಾವು ಪ್ರತಿನಿತ್ಯ ಮಾಡುವ ಪಂಚಮಹಾಯಜ್ಞಗಳಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನ್ನದಾನ, ಸೇವೆಗಳು ಸೇರಿವೆ. ಪಂಚಮಹಾಯಜ್ಞಗಳೆಂದರೆ, ಬ್ರಹ್ಮಯಜ್ಞ ( ಪವಿತ್ರ ಗ್ರಂಥಗಳ ಅಧ್ಯಯನದ ಮೂಲಕ ಬ್ರಹ್ಮಪೂಜೆ), ದೇವಯಜ್ಞ (ಪೂಜೆ, ಪುನಸ್ಕಾರಗಳ ಮೂಲಕ ದೇವಪೂಜೆ), ಪಿತೃಯಜ್ಞ ( ತರ್ಪಣಗಳಿಂದ ಪಿತೃಗಳ ಸ್ಮರಣೆ, ಪೂಜೆ), ಭೂತಯಜ್ಞ ( ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳ ಸೇವೆ), ಮತ್ತು ಮನುಷ್ಯಯಜ್ಞ ( ಅತಿಥಿ ಸತ್ಕಾರ, ಕಷ್ಟದಲ್ಲಿರುವ ಮನುಷ್ಯರ ಸೇವೆ ಇತ್ಯಾದಿ ಮನುಷ್ಯರ ಸೇವೆ).
      ಭಾರತೀಯ ಕಥೆಗಳ ಒಂದು ಸ್ವಾರಸ್ಯವೆಂದರೆ ಕಥೆಯೊಳಗೆ ಕಥೆಯಿರುವುದು! ಅನೇಕ ಕಥೆಗಳು ಹೀಗಿರುತ್ತವೆ. ಅದನ್ನು ಇಲ್ಲಿಯೂ ನೋಡಬಹುದು. ಮೊದಲನೆಯ ಸ್ತರದಲ್ಲಿ ಅಗಸ್ತ್ಯರು ರಾಮನಿಗೆ ಕಥೆ ಹೇಳುತ್ತಾರೆ. ಎರಡನೆಯ ಸ್ತರದಲ್ಲಿ ಶ್ವೇತನೆಂಬ ಸ್ವರ್ಗೀಯ ಪುರುಷನು ಅಗಸ್ತ್ಯರಿಗೆ ಅವನ ಕಥೆ ಹೇಳಿಕೊಳ್ಳುತ್ತಾನೆ. ಹೀಗೆ ಕಥೆಯೊಳಗೆ ಒಂದು ಕಥೆಯಿರುವ ಸ್ವಾರಸ್ಯವನ್ನು ಇಲ್ಲಿ ನೋಡಬಹುದು.

#ರಾಮಾಯಣದ_ಉಪಕಥೆಗಳು #ಪೌರಾಣಿಕ_ಕಥೆಗಳು #ಪೌರಾಣಿಕ_ಸ್ವಾರಸ್ಯಗಳು

February 22, 2026

ವಾಸ್ತು ಎಂದರೇನು?

“ವಾಸ್ತು” ಎಂಬ ಪದದ ವ್ಯುತ್ಪತ್ತಿಯನ್ನು ಸೂಚಿಸುವ ಶ್ಲೋಕವು ಈ ಕೆಳಗಿನಂತಿದೆ. 

“ವಸಂತಿ ಪ್ರಾಣಿನೋತ್ರ ಇತಿ ವಾಸ್ತು ಶಬ್ದ ವ್ಯತ್ಪತ್ತಿಃ”
ಅಂದರೆ, ಪ್ರಾಣಿಗಳು ಎಲ್ಲಿ ವಾಸಿಸುತ್ತಾರೋ ಆ ಸ್ಥಳವೇ “ವಾಸ್ತು” ಎಂದು ಕರೆಯುತ್ತಾರೆ. ಇಲ್ಲಿ “ಪ್ರಾಣಿ” ಎಂಬ ಪದವು ಕೇವಲ ಮನುಷ್ಯನಿಗಷ್ಟೇ ಸೀಮಿತವಲ್ಲ; ಎಲ್ಲಾ ಜೀವಿಗಳನ್ನು ಒಳಗೊಂಡಿದೆ. ಮನುಷ್ಯನೂ ಒಂದು ಪ್ರಾಣಿಯಾಗಿರುವುದರಿಂದ, ಜೀವಿಗಳು ವಾಸಿಸುವ ಸ್ಥಳವನ್ನು ಸೂಚಿಸಲು “ವಾಸ್ತು” ಎಂಬ ಪದವನ್ನು ಬಳಸಲಾಗಿದೆ.

ಇದೇ ಪದವು ಸಂಸ್ಕೃತದ “ವಸ” ಧಾತುವಿನಿಂದ ಬಂದಿದೆ. ಧಾತುವಿನ ಅರ್ಥವನ್ನು ವಿವರಿಸುವಂತೆ. 

“ವಸ ನಿವಾಸೇ, ವಸ ಆಚ್ಛಾದನೇ”
ಎಂಬ ರೂಪದಲ್ಲಿ ಎರಡು ಅರ್ಥಗಳನ್ನು ಸೂಚಿಸಲಾಗಿದೆ. “ವಸ ನಿವಾಸೇ” ಎಂದರೆ ವಾಸಿಸುವುದು, ನೆಲೆಸುವುದು ಎಂಬ ಅರ್ಥ. ಈ ಅರ್ಥದ ಪ್ರಕಾರ —
“ವಸ ನಿವಾಸೇ ಭಾವೇ ಲ್ಯುಟ್ – ವಸಂತ್ಯಸ್ಮಿನ್ ವಾಸ್ತುಃ”
ಅಂದರೆ, ಯಾರು ವಾಸಿಸುತ್ತಾರೋ ಆ ಸ್ಥಳವೇ ವಾಸ್ತು ಎಂದು ಅರ್ಥವಾಗುತ್ತದೆ.

“ವಸ ಆಚ್ಛಾದನೇ” ಎಂಬ ಅರ್ಥದ ಪ್ರಕಾರ, ಹೊದಿಸುವುದು ಅಥವಾ ಆವರಿಸುವುದು ಎಂಬ ಭಾವ ವ್ಯಕ್ತವಾಗುತ್ತದೆ. ಅಂದರೆ ವಾಸ್ತು ಎಂದರೆ ಕೇವಲ ವಾಸಸ್ಥಳವಷ್ಟೇ ಅಲ್ಲ, ಅದು ಜೀವಿಗಳಿಗೆ ರಕ್ಷಣೆಯನ್ನು ನೀಡುವ ಆಶ್ರಯವೂ ಆಗಿದೆ.
ಹೀಗಾಗಿ, ಶ್ಲೋಕ ಮತ್ತು ಧಾತುವ್ಯಾಖ್ಯಾನದ ಆಧಾರದ ಮೇಲೆ ನೋಡಿದರೆ, ಜೀವಿಗಳು ವಾಸಿಸುವ ಮತ್ತು ಅವರಿಗೆ ಆವರಣ–ಆಶ್ರಯವನ್ನು ಒದಗಿಸುವ ಸ್ಥಳವೇ “ವಾಸ್ತು” ಎಂದು ತಿಳಿಯುತ್ತದೆ.

“ನಿವಾಸಾತ್ ಸರ್ವ ಭೂತಾನಾಂ ವಾಸ್ತುರಿತಿ ಶಬ್ಬಿತಃ”
ಎಂಬುದು ಅಮರಕೋಶ ದಲ್ಲಿರುವ ಉಲ್ಲೇಖ. ಸಮಸ್ತ ಭೂತಗಳ, ಅಂದರೆ ಎಲ್ಲಾ ಜೀವಿಗಳ ನಿವಾಸವಾಗಿರುವುದರಿಂದ ಅದನ್ನು ‘ವಾಸ್ತು’ ಎಂದು ಕರೆಯುತ್ತಾರೆ ಎಂಬುದೇ ಇದರ ಅರ್ಥ. ಅಂದರೆ, ವಾಸ್ತು ಎಂಬುದು ಕೇವಲ ಕಟ್ಟಡವಲ್ಲ; ಜೀವಜಗತ್ತಿನ ವಾಸಸ್ಥಾನವಾಗಿರುವ ಭೂಮಿ ಮತ್ತು ಅದರ ಆಧಾರಭೂತ ತತ್ತ್ವವೇ ವಾಸ್ತು ಎಂಬ ಅಭಿಪ್ರಾಯ ಇಲ್ಲಿದೆ.

ಇದೇ ಅರ್ಥವನ್ನು ವಿಸ್ತರಿಸುವಂತೆ ಮತ್ಸ್ಯಪುರಾಣ ದಲ್ಲಿ “ನಿವಾಸಾತ್ ಸರ್ವ ದೇವಾನಾಂ ವಾಸ್ತುರಿತಿ ಶಬ್ಬಿತಃ” ಎಂದು ಹೇಳಲಾಗಿದೆ. ಇಲ್ಲಿ ವಾಸ್ತು ದೇವತೆಗಳ ನಿವಾಸವೂ ಆಗಿದೆ ಎಂಬ ಪರಿಕಲ್ಪನೆ ಮೂಡುತ್ತದೆ. ಈ ಹೇಳಿಕೆಯ ಹಿಂದೆ ಪೌರಾಣಿಕ ಹಿನ್ನೆಲೆ ಇದೆ. ದೇವತೆಗಳೂ ವಾಸಿಸುವ ತತ್ತ್ವರೂಪದ ವಾಸ್ತುವನ್ನು ಇಲ್ಲಿ ಗಮನಿಸಬೇಕು.

‘ಅಂಧಕಾಸುರನ ವಧೆ’ ಸಂದರ್ಭದಲ್ಲಿ ಶಿವ ಪರಮೇಶ್ವರನ ದೇಹದಿಂದ ಬಿದ್ದ ಬೆವರಿನ ಹನಿಗಳು ಭೂಮಿಗೆ ತಾಗಿದಾಗ ಭೀಕರ ಭೂತರೂಪವೊಂದು ಉತ್ಪನ್ನವಾಯಿತು. ಆ ಭೂತವು ಆಕಾಶ ಮತ್ತು ಭೂಮಿಯನ್ನು ನುಂಗುವಷ್ಟು ಪ್ರಬಲವಾಗಿತ್ತು. ಭೂಮಿಯ ಮೇಲೆ ಬಿದ್ದಿದ್ದ ಅಂಧಕಾಸುರನ ರಕ್ತವನ್ನೆಲ್ಲಾ ಅದು ಹೀರಿದರೂ ತೃಪ್ತಿಯಾಗಲಿಲ್ಲ. ತೀವ್ರ ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತ ಅದು ಸದಾಶಿವನನ್ನು ಕುರಿತು ತಪಸ್ಸು ಆಚರಿಸಿ, ಮೂರು ಲೋಕಗಳನ್ನೂ ನುಂಗುವ ಸಾಮರ್ಥ್ಯವನ್ನು ಬೇಡಿತು. ಸಂತುಷ್ಟನಾದ ಶಿವನು ಅದಕ್ಕೆ ವರವನ್ನು ಕರುಣಿಸಿದನು. ವರಪ್ರಭಾವದಿಂದ ಆ ಭೂತವು ಸ್ವರ್ಗ, ಆಕಾಶ ಮತ್ತು ಭೂಮಂಡಲವನ್ನೆಲ್ಲಾ ವ್ಯಾಪಿಸಿ, ಕೊನೆಗೆ ಭೂಮಿಯ ಮೇಲೆ ಬಿದ್ದು ಹಬ್ಬಿಕೊಂಡಿತು. ಇದರಿಂದ ಭಯಗೊಂಡ ದೇವತೆಗಳೆಲ್ಲರೂ ಒಟ್ಟಾಗಿ ಸೇರಿ, ಆ ಭೂತದ ಮೇಲೆ ಬಿದ್ದು ಅದರ ದೇಹದ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ಸ್ಥಾನಗಳನ್ನು ಆಕ್ರಮಿಸಿಕೊಂಡು ಅದನ್ನು ಕಟ್ಟಿ ಹಾಕಿದರು. ಈ ರೀತಿ ದೇವತೆಗಳಿಂದ ಮೆಟ್ಟಿನಿಂತ ಭೂತವೇ ವಾಸ್ತುಮಂಡಲದಲ್ಲಿರುವ ವಾಸ್ತುಪುರುಷ.

ವಾಸ್ತುಮಂಡಲದ ಚೌಕಗಳಲ್ಲಿ ನಿರ್ದಿಷ್ಟವಾಗಿ ದೇವತೆಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಖಂಡವೂ ಒಂದು ದೇವತೆಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ “ನಿವಾಸಾತ್ ಸರ್ವದೇವಾನಾಂ” ಎಂಬ ಉಕ್ತಿಯ ಅರ್ಥ ಸ್ಪಷ್ಟವಾಗುತ್ತದೆ. ದೇವತೆಗಳಿಂದ ಮೆಟ್ಟಿನಿಂತ ವಾಸ್ತುಪುರುಷನನ್ನು ತಣಿಸಲು, ಅವನ ಕ್ಷುತ್‌ಬಾಧೆಯನ್ನು ಶಮನ ಮಾಡಲು ವಾಸ್ತುಹೋಮವನ್ನು ಆಚರಿಸಲಾಗುತ್ತದೆ. ಕಟ್ಟಡ ನಿರ್ಮಾಣದ ಪೂರ್ವದಲ್ಲಿ ನಡೆಯುವ ಈ ಕರ್ಮವು ವಾಸ್ತುಪುರುಷನ ಶಾಂತಿಗಾಗಿ ನಿರ್ದಿಷ್ಟವಾಗಿದೆ.
ಇದೇ ಹಿನ್ನೆಲೆಯಲ್ಲಿ ಮಯಮತ ದಲ್ಲಿಯೂ ವಾಸ್ತು ಪದದ ವಿವರಣೆ ದೊರೆಯುತ್ತದೆ (ಡಗೆನ್ಸ್, ೧೯೭೦: ೩೫). ಇಲ್ಲಿ ವಾಸ್ತು ಕೇವಲ ಭೌತಿಕ ವಸತಿ ಸ್ಥಳವಲ್ಲ; ಅದು ದೇವತೆಗಳ ಆವರಣ, ದೈವಿಕ ಸ್ಥಿತಿ ಮತ್ತು ಬ್ರಹ್ಮಾಂಡೀಯ ವಿನ್ಯಾಸದ ಪ್ರತಿರೂಪವೆಂದು ನಿರೂಪಿಸಲಾಗಿದೆ.

ಆಕರ
#ದೇವಾಲಯ_ವಾಸ್ತು_ದೀಪಿಕೆ

February 20, 2026

ಮರಣದ ಮಹತ್ವ

    ಊರ ಹೊರಗಿನ ಮರದ ಕೆಳಗೆ  ಸದಾ ಧ್ಯಾನಸ್ಥರಾಗಿ ಕುಳಿತಿರುವ  ಒಬ್ಬ ಋಷಿಯ ಬಳಿಗೆ , ಒಬ್ಬ ರಾಜ ಹೋಗಿ,  ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ, ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ, ಎಂದು ಕೇಳಿದ.

  ಆಗ ಋಷಿಗಳು, ರಾಜ ಇಲ್ಲಿರುವ  ಎರಡು   ಮಹಾ ಪರ್ವತಗಳನ್ನು ದಾಟಿದ ನಂತರ , ಅಲ್ಲಿ ಒಂದು ಸರೋವರವಿದೆ,ಅದರ ನೀರನ್ನು ಕುಡಿದಾಗ, ನೀನು ಅಮರನಾಗುವೆ, ಎಂದು ಹೇಳಿದರು.

    ಋಷಿಗಳು ಹೇಳಿದಂತೆ ಎರಡು ಪರ್ವತಗಳನ್ನು ದಾಟಿದ ನಂತರ ರಾಜ ,ಒಂದು ಸರೋವರವನ್ನು ಕಂಡ. ಇನ್ನೇನು ಅದರಲ್ಲಿನ ನೀರು ಬಾಚಿ ಕುಡಿಯಬೇಕೆಂದು ಕೊಂಡಾಗ,ಯಾರೋ  ಜೋರಾಗಿ ನರಳುತ್ತಿರುವಂತ  ಶಬ್ದ ಕೇಳಿಸಿತು. ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಅಲ್ಲೊಬ್ಬ ಅತ್ಯಂತ ದುರ್ಬಲ ವ್ಯಕ್ತಿಯನ್ನು ಕಂಡನು.ಆ ವ್ಯಕ್ತಿ ನರಳುತ್ತಿರುವ ಕಾರಣವನ್ನು  ರಾಜ ಕೇಳಿದಾಗ,  ಆತ ,ನಾನು  ಈ ಸರೋವರದ ನೀರನ್ನು ಕುಡಿದು ಅಮರನಾದೆ, ನನಗೆ ನೂರು ವರ್ಷ ತುಂಬಿದ ನಂತರ ‌ನನ್ನ ಮಗ ನನ್ನನ್ನು ಮನೆಯಿಂದ ಆಚೆ ಓಡಿಸಿದ,ಕಳೆದ ಐವತ್ತು ವರ್ಷಗಳಿಂದ  ನಾನು ಹೀಗೇ  ಇಲ್ಲೇ, ನರಳುತ್ತಾ ಮಲಗಿದ್ದೇನೆ, ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಮಗ  ಈಗ ತೀರಿಕೊಂಡಿದ್ದಾನೆ, ನನ್ನ ‌ಮೊಮ್ಮಕ್ಕಳೂ ಈಗ ‌ವೃದ್ದರಾಗಿದ್ದಾರೆ, ಸಾಯಬೇಕೆಂದುಕೊಂಡು ನಾನು, ಅನ್ನ ,ನೀರು  ಸೇವಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ, ಆದರೂ ಕೂಡ ನಾನಿನ್ನು ಬದುಕಿದ್ದೇನೆ, ಎಂದು ದುಃಖಿಸುತ್ತಾ ಹೇಳಿದ.

    ರಾಜನಿಗೆ ಅವನನ್ನು ನೋಡಿ, ಅಯ್ಯೋ, ಅನ್ನಿಸಿತು, ಆದರೆ ಅವನಿಗೊಂದು ‌ಆಲೋಚನೆ ಬಂತು. ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ,ಆಗ ಸರಿ ಹೋಗಬಹುದು, ಎಂದುಕೊಂಡು, ಇದಕ್ಕೆ ಪರಿಹಾರವನ್ನು ಋಷಿಗಳ ಬಳಿ ಕಂಡುಕೊಳ್ಳಲು ಅವನು ಪುನಃ ಅವರ ಬಳಿಗೆ  ಹೋಗಿ, ಗುರುಗಳೇ ನನಗೆ ಅಮರತ್ವದೊಂದಿಗೆ ಯೌವ್ವನವನ್ನು ಕೂಡಾ ಹೇಗೆ ಪಡೆಯುವುದೆಂಬುದನ್ನು ದಯವಿಟ್ಟು ತಿಳಿಸಿಕೊಡಿ ಎಂದು ಕೇಳಿದನು.

    ಆಗ ಋಷಿಗಳು, ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು  ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣುತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ ಎಂದು ಹೇಳಿದರು.

    ಆಗ ರಾಜನಿಗೆ ಬಹಳ ಸಂತೋಷವಾಯಿತು .ಋಷಿಗಳು  ಹೇಳಿದಂತೆ, ಪರ್ವತವನ್ನು ದಾಟಿ, ಹಳದಿ ಹಣ್ಣಿನಿಂದ ತುಂಬಿದ ಮರದತ್ತ ಹೋದ. ಆತ ಒಂದು ಹಣ್ಣನ್ನು ಕಿತ್ತು ತಿನ್ನಲು ಹೋದಾಗ, ಅವನಿಗೆ ಯಾರೋ, ಜೋರಾಗಿ  ಕಿರುಚಾಡುತ್ತಾ ಜಗಳ ವಾಡುತ್ತಿರುವಹಾಗೆ, ಭಾಸವಾಯಿತು. ಹಣ್ಣು ತಿನ್ನುವುದನ್ನು ಬಿಟ್ಟು, ಶಬ್ದ ಬಂದ ಕಡೆ ಹೋಗಿ ನೋಡಿದಾಗ, ನಾಲ್ವರು ಯುವಕರು ಜೋರಾಗಿ ವಾದ ಮಾಡುತ್ತಾ ಜಗಳವಾಡುತ್ತಿದ್ದರು. ಅವರು ಏಕೆ ಹೀಗೆ ಹೊಡೆದಾಡುತ್ತಿದ್ದಾರೆ ಎಂದು ರಾಜ ಕೇಳಿದ. 
   ಆಗ ಒಬ್ಬ ಹೇಳಿದ, ನನಗೀಗ ಇನ್ನೂರೈವತ್ತು ವರ್ಷವಾಗಿದೆ, ಮತ್ತು ನನ್ನ ಬಲಭಾಗದಲ್ಲಿರುವ ವ್ಯಕ್ತಿ, ಆತ ನನ್ನ ತಂದೆ, ಅವನಿಗೆ ಮುನ್ನೂರು ವರ್ಷವಾಗಿದೆ, ಅವರು ಇನ್ನೂ ನನ್ನ ಪಾಲಿನ ಆಸ್ತಿಯನ್ನು ನನಗೆ ನೀಡುತ್ತಿಲ್ಲ, ಎಂದು ಹೇಳಿದ.
    ರಾಜ ಬಲಭಾಗದಲ್ಲಿರುವ ವ್ಯಕ್ತಿಯನ್ನು ಏಕೆಂದು ಕೇಳಿದಾಗ, ಆತ , ಮುನ್ನೂರೈವತ್ತು ವರ್ಷ ವಯಸ್ಸಿನ ನನ್ನ ತಂದೆ ಇನ್ನೂ ಬದುಕಿದ್ದಾರೆ,  ಆತ ನನ್ನ ಪಾಲನ್ನು ನನಗೇ  ನೀಡಿಲ್ಲ, ಇನ್ನು ನಾನು ನನ್ನ ಮಗನಿಗೆ ಹೇಗೆ ಕೊಡಲಿ,ಎಂದ. ಮುನ್ನೂರೈವತ್ತರ ಯುವಕ,ನಾನೂರು ವರ್ಷ ವಯಸ್ಸಿನ ತನ್ನ ತಂದೆಯನ್ನು ತೋರಿಸಿ, ಅದೇ ದೂರನ್ನು ಹೇಳಿದನು.

   ಹೀಗೆ ಆಸ್ತಿಗಾಗಿ , ನಮ್ಮ ಅಂತ್ಯವಿಲ್ಲದ ಹೋರಾಟವನ್ನು ನೋಡಿ ಗ್ರಾಮಸ್ಥರು, ನಮ್ಮನ್ನು  ಹಳ್ಳಿಯಿಂದ ಹೊರಗೆ ಹಾಕಿದ್ದಾರೆ, ಎಂದು ಅವರೆಲ್ಲರೂ ರಾಜನಿಗೆ ತಿಳಿದರು. 

   ಇದನ್ನು ಕೇಳಿದ ರಾಜ ಅಘಾತಕ್ಕೊಳಗಾಗಿ,  ಸದ್ಯ!  ನಾನಿನ್ನೂ ಹಣ್ಣನ್ನು ತಿನ್ನಲಿಲ್ಲವಲ್ಲಾ!  ಎಂದುಕೊಂಡು,ಋಷಿಯ ಬಳಿಗೆ ಪುನಹ ಓಡಿ  ಹೋದ. ನನಗೆ ಸಾವಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ಗುರುಗಳೇ ಎಂದು ಅವರ ಪಾದಗಳಿಗೆ  ಎರಗಿದನು.

    ಋಷಿಗಳು ನಗುತ್ತಾ, ಸಾವು ಅಸ್ತಿತ್ವದಲ್ಲಿರುವುದರಿಂದ, ಜಗತ್ತಿನಲ್ಲಿ ಇನ್ನೂ ಪ್ರೀತಿ ವಿಶ್ವಾಸವಿದೆ. ಅಮರತ್ವವನ್ನು ಪಡೆಯಲು ಪ್ರಯತ್ನಿಸುವ ಬದಲು, ಬದುಕಿರುವಷ್ಟು ದಿನವೂ ಪ್ರತಿಕ್ಷಣವನ್ನೂ ಸಂತೋಷದಿಂದ, ಆನಂದದಿಂದ ಜೀವಿಸುವುದನ್ನು  ಕಲಿಯಿರಿ, ಆಗ  ಇಡೀ ಜಗತ್ತೇ ಜಗಮಗಿಸುತ್ತಿರುತ್ತದೆ. ಎಂದು ಹೇಳಿದರು.

ವಿವಾಹ ಮೂಹೂರ್ತದಲ್ಲಿ ಯುತಿ ದೋಷ

ಮೂಲ ಶ್ಲೋಕ ಪ್ರಮಾಣ
ಶ್ಲೋಕ ೧:
ಪಾಪದ್ವಯಯುತೇ ಚಂದ್ರೇ ದಂಪತ್ಯೋರ್ಮರಣಂ ಧ್ರುವಂ॥
— ನಾರದ ಪುರಾಣ
ಅರ್ಥ:
ವಿವಾಹ ಸಮಯದಲ್ಲಿ ಚಂದ್ರನು ಎರಡು ಪಾಪಗ್ರಹಗಳೊಂದಿಗೆ ಯುತಿಯಾಗಿದ್ದರೆ ದಂಪತಿಗಳಿಗೆ ಗಂಭೀರ ದೋಷ ಉಂಟಾಗಿ, ಆಯುಷ್ಯ ಅಥವಾ ದಾಂಪತ್ಯ ಸುಖದಲ್ಲಿ ಭಾರಿ ವಿಘ್ನ ಸಂಭವಿಸುವ ಸಾಧ್ಯತೆ ಇದೆ.

ಶ್ಲೋಕ ೨:
ಚಂದ್ರರ್ಕ್ಷೇ ಪಾಪಯುಕ್ತೇತ್ಸ್ಯಾದ್ಯು ದೋಷಸ್ತದೋದಿತಃ॥
— ಮೂಹೂರ್ತ ಗಣಪತಿ
ಅರ್ಥ:
ವಿವಾಹ ಮೂಹೂರ್ತದಲ್ಲಿ ಚಂದ್ರನಿಗೆ ಪಾಪಗ್ರಹಗಳ ಸಂಯೋಗ ಅಥವಾ ದೃಷ್ಟಿ ಇದ್ದರೆ ಯುತಿ ದೋಷ ಉಂಟಾಗುತ್ತದೆ ಎಂದು ಮೂಹೂರ್ತ ಶಾಸ್ತ್ರದಲ್ಲಿ ಹೇಳಲಾಗಿದೆ.

ಗ್ರಂಥಾಂತರ ವಚನ (ವಶಿಷ್ಠ):
ಶಶಿಯುತೈರ್ದೀರ್ಘಪ್ರವಾಸಃ ಶುಭೈಃ ॥
ಅರ್ಥ:
ಚಂದ್ರನು ಒಂದಕ್ಕಿಂತ ಹೆಚ್ಚು ಶುಭಗ್ರಹಗಳೊಂದಿಗೆ ಯುತಿಯಾದರೆ ದೀರ್ಘ ಪ್ರವಾಸ ಅಥವಾ ವಿದೇಶ ವಾಸದ ಯೋಗ ಉಂಟಾಗುತ್ತದೆ.

ವಿವಾಹ ಯುತಿ (ಸಂಗ್ರಹ) ದೋಷ ಎಂದರೆ
ವಿವಾಹ ಮೂಹೂರ್ತದಲ್ಲಿ ಚಂದ್ರನು ಅತ್ಯಂತ ಪ್ರಮುಖ ಗ್ರಹ. ಚಂದ್ರನು ಮನಸ್ಸು, ದಾಂಪತ್ಯ ಸೌಹಾರ್ದ, ಕುಟುಂಬ ಜೀವನ ಮತ್ತು ಸಂತಾನ ಭಾಗ್ಯವನ್ನು ಸೂಚಿಸುತ್ತಾನೆ.
ಚಂದ್ರನೊಂದಿಗೆ ಇತರೆ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿ ಸ್ಥಿತರಾದರೆ ಅದನ್ನು ಯುತಿ (ಸಂಗ್ರಹ) ಎಂದು ಕರೆಯುತ್ತಾರೆ.
ಈ ಯುತಿ ಶುಭಗ್ರಹಗಳಾದರೆ ಶುಭಫಲ, ಪಾಪಗ್ರಹಗಳಾದರೆ ದೋಷಫಲ ಉಂಟಾಗುತ್ತದೆ. 

ಗ್ರಹ ಯುತಿಗಳ ವಿವರವಾದ ಫಲಗಳು
1. ಚಂದ್ರ–ರವಿ ಯುತಿ Sun + Moon
ವಿವಾಹದ ನಂತರ ಹಣಕಾಸಿನ ಏರುಪೇರು.
ಕುಟುಂಬದಲ್ಲಿ ಅಹಂಕಾರದಿಂದ ಕಲಹ.
ಗೃಹಸೌಖ್ಯದಲ್ಲಿ ಅಸ್ಥಿರತೆ.
ಸೂಚನೆ: ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ.

2. ಚಂದ್ರ–ಮಂಗಳ ಯುತಿ Mars + Moon
ಅಪಘಾತ ಭೀತಿ.
ದಂಪತಿಗಳಲ್ಲಿ ಒಬ್ಬರಿಗೆ ಸದಾ ಆರೋಗ್ಯ ತೊಂದರೆ.
ಆಕ್ರೋಶದಿಂದ ಜಗಳ.
ಸೂಚನೆ: ವಾಹನ ಚಾಲನೆಯಲ್ಲಿ ವಿಶೇಷ ಜಾಗ್ರತೆ.

3. ಚಂದ್ರ–ಬುಧ ಯುತಿ Mercury + Moon
ಸಂತಾನ ಸಂಬಂಧಿ ವಿಘ್ನ.
ಗರ್ಭಹಾನಿ ಅಥವಾ ಸಂತಾನ ವಿಳಂಬ.
ಮಾನಸಿಕ ಒತ್ತಡ.
ಸೂಚನೆ: ಗರ್ಭಧಾರಣೆಗೆ ಮುಂಚೆ ವೈದ್ಯಕೀಯ ಹಾಗೂ ದೈವಪರಿಹಾರ ಅಗತ್ಯ.

4. ಚಂದ್ರ–ಗುರು ಯುತಿ Jupiter + Moon
ಸೌಭಾಗ್ಯ ವೃದ್ಧಿ.
ಸಂತಾನ ಭಾಗ್ಯ.
ಕುಟುಂಬದಲ್ಲಿ ಧರ್ಮ ಮತ್ತು ಗೌರವ.
ಇದು ಶುಭ ಯೋಗ.

5. ಚಂದ್ರ–ಶುಕ್ರ ಯುತಿ Venus + Moon
ಮರು ವಿವಾಹ ಯೋಗ.
ದಾಂಪತ್ಯದಲ್ಲಿ ತೃತೀಯ ವ್ಯಕ್ತಿ ಪ್ರವೇಶ.
ಕನ್ಯೆಗೆ ಸವತಿ ಯೋಗ.
ಸೂಚನೆ: ನಿಷ್ಠೆ ಮತ್ತು ಸಂಯಮ ಅವಶ್ಯಕ.

6. ಚಂದ್ರ–ಶನಿ ಯುತಿ Saturn + Moon
ದಂಪತಿಗಳು ಬೇರೆಬೇರೆ ಜೀವನ.
ಗೃಹತ್ಯಾಗ ಅಥವಾ ದೂರ ವಾಸ.
ಮನಸ್ಸಿನ ದೂರಾವಸ್ಥೆ.

7. ಚಂದ್ರ–ರಾಹು ಯುತಿ Rahu + Moon
ನಿತ್ಯ ಕಲಹ.
ಅನುಮಾನ, ಭ್ರಮೆ.
ಕುಟುಂಬದಲ್ಲಿ ಅಶಾಂತಿ.

8. ಚಂದ್ರ–ಕೇತು ಯುತಿ Ketu + Moon
ಕಷ್ಟಪೂರ್ಣ ಜೀವನ.
ದಾಂಪತ್ಯ ಸುಖಾಭಾವ.
ದೈನ್ಯತೆ, ಆರ್ಥಿಕ ಸಂಕಷ್ಟ.

ವಿಶೇಷ ನಿಯಮ:
ಚಂದ್ರನು ಒಂದಕ್ಕಿಂತ ಹೆಚ್ಚು ಶುಭಗ್ರಹಗಳ (ಗುರು, ಶುಕ್ರ, ಬುಧ) ಯುತಿ ಹೊಂದಿದರೆ:

ವಿದೇಶ ವಾಸ ಯೋಗ
ದೀರ್ಘ ಪ್ರವಾಸ
ಹೊರನಾಡಿನಲ್ಲಿ ಸ್ಥಿರತೆ

ಸಂಕ್ಷಿಪ್ತವಾಗಿ
ವಿವಾಹ ಮೂಹೂರ್ತದಲ್ಲಿ ಚಂದ್ರನ ಯುತಿ ಅತ್ಯಂತ ಸೂಕ್ಷ್ಮ ವಿಷಯ.
ಶುಭಗ್ರಹ ಯುತಿ ದಾಂಪತ್ಯ ಸುಖವನ್ನು ವೃದ್ಧಿಸುತ್ತದೆ.
ಪಾಪಗ್ರಹ ಯುತಿ ಜೀವನದಲ್ಲಿ ಕಲಹ, ದೂರಾವಸ್ಥೆ ಅಥವಾ ಆರ್ಥಿಕ/ಸಂತಾನ ತೊಂದರೆ ಉಂಟುಮಾಡುತ್ತದೆ.

ಆದ್ದರಿಂದ ವಿವಾಹ ನಿಶ್ಚಯಕ್ಕೂ ಮುನ್ನ ಅನುಭವಜ್ಞ ಜ್ಯೋತಿಷ್ಯರಿಂದ ಸೂಕ್ತ ಪರಿಶೀಲನೆ ಅಗತ್ಯ.

ಶ್ರೀ ಗುರುರಾಜಾಚಾರ್ಯ ಜೋಶಿ

ಲತ್ತಾಸಾರಣಿ – ವಿವಾಹ ಮುಹೂರ್ತ

ಲತ್ತಾ ದೋಷವನ್ನು ವಿವಾಹ ಮುಹೂರ್ತದಲ್ಲಿ ಪರಿಶೀಲಿಸುವಾಗ, ಮುಹೂರ್ತ ಕ್ಷಣದಲ್ಲಿ ಇರುವ ಚಂದ್ರನ ನಕ್ಷತ್ರವನ್ನು ಆಧಾರವಿಟ್ಟು, ಆ ಸಮಯದ ಗ್ರಹಗಳು ಕೆಳಗೆ ಸೂಚಿಸಿರುವ ನಕ್ಷತ್ರಗಳಲ್ಲಿ ಇದ್ದರೆ ಲತ್ತಾ ದೋಷ ಉಂಟಾಗುತ್ತದೆ ಎಂದು ಪರಿಗಣಿಸಲಾಗುತ್ತದೆ.

ಇಲ್ಲಿ ನೀಡಿರುವ ಸರಣಿಯಲ್ಲಿ “ಮುಂದೆ” ಲೆಕ್ಕ (ಉತ್ತರ ದಿಕ್ಕು) ಆಧಾರವಾಗಿ ಸೂಚಿಸಲಾಗಿದೆ.

*💠 1) ರೋಹಿಣಿ*
ರೋಹಿಣಿ ನಕ್ಷತ್ರದಲ್ಲಿ ವಿವಾಹ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಪೂರ್ವಾಷಾಢ

ಚಂದ್ರ – 22ನೇ ನಕ್ಷತ್ರ → ಪೂರ್ವಾಭಾದ್ರಪದ

ಮಂಗಳ – 26ನೇ ನಕ್ಷತ್ರ → ಭರಣಿ

ಬುಧ – 7ನೇ ನಕ್ಷತ್ರ → ಮಘಾ

ಗುರು – 23ನೇ ನಕ್ಷತ್ರ → ಉತ್ತರಾಭಾದ್ರಪದ

ಶುಕ್ರ – 5ನೇ ನಕ್ಷತ್ರ → ಪುಷ್ಯ

ಶನಿ – 21ನೇ ನಕ್ಷತ್ರ → ಶತತಾರ

ರಾಹು – 9ನೇ ನಕ್ಷತ್ರ → ಉತ್ತರಾ ಫಾಲ್ಗುಣಿ

*💠 2) ಮೃಗಶಿರಾ*
ಮೃಗಶಿರಾ ನಕ್ಷತ್ರದಲ್ಲಿ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಉತ್ತರಾಷಾಢ

ಚಂದ್ರ – 22ನೇ ನಕ್ಷತ್ರ → ಉತ್ತರಾಭಾದ್ರಪದ

ಮಂಗಳ – 26ನೇ ನಕ್ಷತ್ರ → ಕೃತ್ತಿಕಾ

ಬುಧ – 7ನೇ ನಕ್ಷತ್ರ → ಪೂರ್ವಾ ಫಾಲ್ಗುಣಿ

ಗುರು – 23ನೇ ನಕ್ಷತ್ರ → ರೇವತಿ

ಶುಕ್ರ – 5ನೇ ನಕ್ಷತ್ರ → ಆಶ್ಲೇಷ

ಶನಿ – 21ನೇ ನಕ್ಷತ್ರ → ಪೂರ್ವಾಭಾದ್ರಪದ

ರಾಹು – 9ನೇ ನಕ್ಷತ್ರ → ಹಸ್ತಾ

*💠 3) ಮಘಾ*
ಮಘಾ ನಕ್ಷತ್ರದಲ್ಲಿ ವಿವಾಹ ನಡೆದರೆ —

ರವಿ – 17ನೇ ನಕ್ಷತ್ರ → ಉತ್ತರಾಭಾದ್ರಪದ

ಚಂದ್ರ – 22ನೇ ನಕ್ಷತ್ರ → ರೋಹಿಣಿ

ಮಂಗಳ – 26ನೇ ನಕ್ಷತ್ರ → ಪುಷ್ಯ

ಬುಧ – 7ನೇ ನಕ್ಷತ್ರ → ವಿಶಾಖಾ

ಗುರು – 23ನೇ ನಕ್ಷತ್ರ → ಮೃಗಶಿರಾ

ಶುಕ್ರ – 5ನೇ ನಕ್ಷತ್ರ → ಚಿತ್ರಾ

ಶನಿ – 21ನೇ ನಕ್ಷತ್ರ → ಕೃತ್ತಿಕಾ

ರಾಹು – 9ನೇ ನಕ್ಷತ್ರ → ಜ್ಯೇಷ್ಠಾ

*💠 4) ಉತ್ತರಾ ಫಾಲ್ಗುಣಿ*
ಉತ್ತರಾ ಫಾಲ್ಗುಣಿ ನಕ್ಷತ್ರದಲ್ಲಿ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಅಶ್ವಿನಿ

ಚಂದ್ರ – 22ನೇ ನಕ್ಷತ್ರ → ಆರ್ದ್ರಾ

ಮಂಗಳ – 26ನೇ ನಕ್ಷತ್ರ → ಮಘಾ

ಬುಧ – 7ನೇ ನಕ್ಷತ್ರ → ಜ್ಯೇಷ್ಠಾ

ಗುರು – 23ನೇ ನಕ್ಷತ್ರ → ಪುನರ್ವಸು

ಶುಕ್ರ – 5ನೇ ನಕ್ಷತ್ರ → ವಿಶಾಖಾ

ಶನಿ – 21ನೇ ನಕ್ಷತ್ರ → ಮೃಗಶಿರಾ

ರಾಹು – 9ನೇ ನಕ್ಷತ್ರ → ಪೂರ್ವಾಷಾಢ

*💠 5) ಹಸ್ತಾ*
ಹಸ್ತಾ ನಕ್ಷತ್ರದಲ್ಲಿ ವಿವಾಹ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಭರಣಿ

ಚಂದ್ರ – 22ನೇ ನಕ್ಷತ್ರ → ಪುನರ್ವಸು

ಮಂಗಳ – 26ನೇ ನಕ್ಷತ್ರ → ಪೂರ್ವಾ ಫಾಲ್ಗುಣಿ

ಬುಧ – 7ನೇ ನಕ್ಷತ್ರ → ಮೂಲಾ

ಗುರು – 23ನೇ ನಕ್ಷತ್ರ → ಪುಷ್ಯ

ಶುಕ್ರ – 5ನೇ ನಕ್ಷತ್ರ → ಅನುರಾಧಾ

ಶನಿ – 21ನೇ ನಕ್ಷತ್ರ → ಆರ್ದ್ರಾ

ರಾಹು – 9ನೇ ನಕ್ಷತ್ರ → ಉತ್ತರಾಷಾಢ

*💠 6) ಸ್ವಾತಿ*
ಸ್ವಾತಿ ನಕ್ಷತ್ರದಲ್ಲಿ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ರೋಹಿಣಿ

ಚಂದ್ರ – 22ನೇ ನಕ್ಷತ್ರ → ಆಶ್ಲೇಷ

ಮಂಗಳ – 26ನೇ ನಕ್ಷತ್ರ → ಹಸ್ತಾ

ಬುಧ – 7ನೇ ನಕ್ಷತ್ರ → ಉತ್ತರಾಷಾಢ

ಗುರು – 23ನೇ ನಕ್ಷತ್ರ → ಮಘಾ

ಶುಕ್ರ – 5ನೇ ನಕ್ಷತ್ರ → ಮೂಲಾ

ಶನಿ – 21ನೇ ನಕ್ಷತ್ರ → ಪುಷ್ಯ

ರಾಹು – 9ನೇ ನಕ್ಷತ್ರ → ಧನಿಷ್ಠಾ

*💠 ಶಾಸ್ತ್ರೀಯ ಸೂಚನೆ*
ಲತ್ತಾ ಸರಣಿಯನ್ನು ಬಳಸುವಾಗ —
✔ ಮುಹೂರ್ತ ಕ್ಷಣದಲ್ಲಿ ಇರುವ ನಕ್ಷತ್ರವೇ ಪರಿಗಣನೆಗೆ ಬರಬೇಕು.
✔ ಆ ಸಮಯದ ಗ್ರಹಸ್ಥಿತಿಯನ್ನು ನಿಖರವಾಗಿ ಪರಿಶೀಲಿಸಬೇಕು.
✔ ಲತ್ತಾ ಇದ್ದರೂ, ಗುರು-ಶುಕ್ರ ದೃಷ್ಟಿ, ಲಗ್ನಬಲ, ತಾರಾಬಲ ಇದ್ದರೆ ದೋಷ ಶಮನವಾಗಬಹುದು.

*🕉️ ಓಂ ಶ್ರೀ ಗುರುಭ್ಯೋ ನಮಃ 🕉️*

 *ಲತ್ತಾ ಸಾರಣಿ – 2*

(ವಿವಾಹ ಮುಹೂರ್ತದಲ್ಲಿ ಲತ್ತಾ ಸ್ಥಾನದ ಮುಂದುವರಿದ ಸಂಗ್ರಹ)

ಮುಹೂರ್ತ ಕ್ಷಣದಲ್ಲಿ ಇರುವ ನಕ್ಷತ್ರವನ್ನು ಆಧಾರವಿಟ್ಟು, ಆ ಸಮಯದ ಗ್ರಹಗಳು ಕೆಳಗೆ ಸೂಚಿಸಿರುವ ನಕ್ಷತ್ರಗಳಲ್ಲಿ ಇದ್ದರೆ ಲತ್ತಾ ದೋಷ ಉಂಟಾಗುತ್ತದೆ ಎಂದು ಪರಿಗಣಿಸಬೇಕು.

*💠 6) ಸ್ವಾತಿ*
ಸ್ವಾತಿ ನಕ್ಷತ್ರದಲ್ಲಿ ವಿವಾಹ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ರೋಹಿಣಿ

ಚಂದ್ರ – 22ನೇ ನಕ್ಷತ್ರ → ಆಶ್ಲೇಷ

ಮಂಗಳ – 26ನೇ ನಕ್ಷತ್ರ → ಹಸ್ತಾ

ಬುಧ – 7ನೇ ನಕ್ಷತ್ರ → ಉತ್ತರಾಷಾಢ

ಗುರು – 26ನೇ ನಕ್ಷತ್ರ → ಮಘಾ

ಶುಕ್ರ – 5ನೇ ನಕ್ಷತ್ರ → ಮೂಲಾ

ಶನಿ – 21ನೇ ನಕ್ಷತ್ರ → ಪುಷ್ಯ

ರಾಹು – 9ನೇ ನಕ್ಷತ್ರ → ಧನಿಷ್ಠಾ

*💠 7) ಅನುರಾಧಾ*
ಅನುರಾಧಾ ನಕ್ಷತ್ರದಲ್ಲಿ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಆರ್ದ್ರಾ

ಚಂದ್ರ – 22ನೇ ನಕ್ಷತ್ರ → ಪೂರ್ವಾ ಫಾಲ್ಗುಣಿ

ಮಂಗಳ – 26ನೇ ನಕ್ಷತ್ರ → ಸ್ವಾತಿ

ಬುಧ – 7ನೇ ನಕ್ಷತ್ರ → ಧನಿಷ್ಠಾ

ಗುರು – 26ನೇ ನಕ್ಷತ್ರ → ಉತ್ತರಾ ಫಾಲ್ಗುಣಿ

ಶುಕ್ರ – 5ನೇ ನಕ್ಷತ್ರ → ಉತ್ತರಾಷಾಢ

ಶನಿ – 21ನೇ ನಕ್ಷತ್ರ → ಮಘಾ

ರಾಹು – 9ನೇ ನಕ್ಷತ್ರ → ಪೂರ್ವಾಭಾದ್ರಪದ

*💠 8) ಮೂಲಾ*
ಮೂಲಾ ನಕ್ಷತ್ರದಲ್ಲಿ ವಿವಾಹ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಪುಷ್ಯ

ಚಂದ್ರ – 22ನೇ ನಕ್ಷತ್ರ → ಹಸ್ತಾ

ಮಂಗಳ – 26ನೇ ನಕ್ಷತ್ರ → ಅನುರಾಧಾ

ಬುಧ – 7ನೇ ನಕ್ಷತ್ರ → ಪೂರ್ವಾಭಾದ್ರಪದ

ಗುರು – 26ನೇ ನಕ್ಷತ್ರ → ಚಿತ್ರಾ

ಶುಕ್ರ – 5ನೇ ನಕ್ಷತ್ರ → ಧನಿಷ್ಠಾ

ಶನಿ – 21ನೇ ನಕ್ಷತ್ರ → ಉತ್ತರಾ ಫಾಲ್ಗುಣಿ

ರಾಹು – 9ನೇ ನಕ್ಷತ್ರ → ರೇವತಿ

*💠 9) ಉತ್ತರಾಷಾಢ*
ಉತ್ತರಾಷಾಢ ನಕ್ಷತ್ರದಲ್ಲಿ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಮಘಾ

 ಚಂದ್ರ – 22ನೇ ನಕ್ಷತ್ರ → ಸ್ವಾತಿ

ಮಂಗಳ – 26ನೇ ನಕ್ಷತ್ರ → ಮೂಲಾ

ಬುಧ – 7ನೇ ನಕ್ಷತ್ರ → ರೇವತಿ

ಗುರು – 26ನೇ ನಕ್ಷತ್ರ → ವಿಶಾಖಾ

ಶುಕ್ರ – 5ನೇ ನಕ್ಷತ್ರ → ಪೂರ್ವಾಭಾದ್ರಪದ

ಶನಿ – 21ನೇ ನಕ್ಷತ್ರ → ಚಿತ್ರಾ

ರಾಹು – 9ನೇ ನಕ್ಷತ್ರ → ಭರಣಿ

*💠 10) ಉತ್ತರಾಭಾದ್ರಪದ*
ಉತ್ತರಾಭಾದ್ರಪದ ನಕ್ಷತ್ರದಲ್ಲಿ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ಸ್ವಾತಿ

ಚಂದ್ರ – 22ನೇ ನಕ್ಷತ್ರ → ಪೂರ್ವಾಷಾಢ

ಮಂಗಳ – 26ನೇ ನಕ್ಷತ್ರ → ಶತತಾರ

ಬುಧ – 7ನೇ ನಕ್ಷತ್ರ → ಮೃಗಶಿರಾ

ಗುರು – 26ನೇ ನಕ್ಷತ್ರ → ಉತ್ತರಾಷಾಢ

ಶುಕ್ರ – 5ನೇ ನಕ್ಷತ್ರ → ಕೃತ್ತಿಕಾ

ಶನಿ – 21ನೇ ನಕ್ಷತ್ರ → ಮೂಲಾ

ರಾಹು – 9ನೇ ನಕ್ಷತ್ರ → ಪುನರ್ವಸು

*💠 11) ರೇವತಿ*
ರೇವತಿ ನಕ್ಷತ್ರದಲ್ಲಿ ವಿವಾಹ ಮುಹೂರ್ತ ಇದ್ದರೆ —

ರವಿ – 17ನೇ ನಕ್ಷತ್ರ → ವಿಶಾಖಾ

ಚಂದ್ರ – 22ನೇ ನಕ್ಷತ್ರ → ಉತ್ತರಾಷಾಢ

ಮಂಗಳ – 26ನೇ ನಕ್ಷತ್ರ → ಪೂರ್ವಾಭಾದ್ರಪದ

ಬುಧ – 7ನೇ ನಕ್ಷತ್ರ → ಆರ್ದ್ರಾ

ಗುರು – 26ನೇ ನಕ್ಷತ್ರ → ಶ್ರವಣ

ಶುಕ್ರ – 5ನೇ ನಕ್ಷತ್ರ → ರೋಹಿಣಿ

ಶನಿ – 21ನೇ ನಕ್ಷತ್ರ → ಪೂರ್ವಾಷಾಢ

ರಾಹು – 9ನೇ ನಕ್ಷತ್ರ → ಪುಷ್ಯ

*💠 ಶಾಸ್ತ್ರೀಯ ಸೂಚನೆ*
ಈ ರೀತಿಯಾಗಿ ಗ್ರಹಗಳ ಸ್ಥಿತಿ ಇದ್ದರೆ ಲತ್ತಾ ದೋಷ ಉಂಟಾಗುತ್ತದೆ.

ಕೆಲವು ಸಂಪ್ರದಾಯಗಳಲ್ಲಿ ಭೌಗೋಳಿಕ ಪ್ರದೇಶದ ಪ್ರಭಾವವನ್ನು ಪರಿಗಣಿಸಿ, ಸೌರಾಷ್ಟ್ರ ಪ್ರದೇಶವನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಲತ್ತಾ ದೋಷದ ಫಲ ಪ್ರಬಲವಾಗುತ್ತದೆ ಎಂದು ಹೇಳಲಾಗಿದೆ.

ಆದಾಗ್ಯೂ ಅಂತಿಮ ನಿರ್ಣಯದಲ್ಲಿ —
ಲಗ್ನಬಲ, ಗುರು-ಶುಕ್ರದ ದೃಷ್ಟಿ, ತಾರಾಬಲ ಹಾಗೂ ಪಂಚಾಂಗ ಶುದ್ಧಿ ಸಮೀಕ್ಷೆ ಅಗತ್ಯ.

ಶ್ರೀ ಗುರುರಾಜಾಚಾರ್ಯ ಜೋಶಿ

February 19, 2026

ವಿವಾಹ ಮುಹೂರ್ತದಲ್ಲಿ ಪತ್ತಾ ದೋಷ

ಪತ್ತಾ ದೋಷ — ವಿವಾಹ ಮುಹೂರ್ತದಲ್ಲಿನ ದೋಷ ವಿವರ

ವಿವಾಹ ಮುಹೂರ್ತ ನಿರ್ಣಯದಲ್ಲಿ ಅನೇಕ ಸೂಕ್ಷ್ಮ ನಿಯಮಗಳನ್ನು ಗಮನಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಪತ್ತಾ ದೋಷ. ಶಾಸ್ತ್ರಗಳಲ್ಲಿ ಇದನ್ನು ಅತ್ಯಂತ ನಿಷಿದ್ಧ ದೋಷವೆಂದು ಪರಿಗಣಿಸಲಾಗಿದೆ.

ಪತ್ತಾ ದೋಷವು ಎರಡು ವಿಧವಾಗಿರುತ್ತದೆ —
1. ಯೋಗದಿಂದ
2. ನಕ್ಷತ್ರದಿಂದ

💠 1) ಯೋಗದಿಂದ ಉಂಟಾಗುವ ಪತ್ತಾ ದೋಷ
ಕೆಳಗಿನ ಯೋಗಗಳು ಇರುವ ದಿನಗಳಲ್ಲಿ, ಆ ಯೋಗಗಳ ಕೊನೆಯ ಭಾಗದಲ್ಲಿ (ಅಂತ್ಯಕಾಲದಲ್ಲಿ) ವಿವಾಹ ಮುಹೂರ್ತದ ನಕ್ಷತ್ರ ಬಂದರೆ, ಆ ಮುಹೂರ್ತ ಪತ್ತಾ ದೋಷದಿಂದ ದುಷ್ಪ್ರಭಾವಿತವಾಗುತ್ತದೆ:

ಹರ್ಷಣ ಯೋಗ
ಸಾಧ್ಯ ಯೋಗ
ವ್ಯತೀಪಾತ (ವ್ರತೀಪಾತ) ಯೋಗ
ಗಂಡ ಯೋಗ
ಶೂಲ ಯೋಗ

🔸 ಶಾಸ್ತ್ರೋಕ್ತ ಫಲ:
ಇಂತಹ ಸಮಯದಲ್ಲಿ ನಡೆದ ವಿವಾಹವು ದಾಂಪತ್ಯ ಕಲಹ, ಅಸಮ್ಮತಿ, ಆರೋಗ್ಯ ತೊಂದರೆ, ಸಂತಾನ ವಿಘ್ನ, ಆರ್ಥಿಕ ಅಸ್ಥಿರತೆ ಮುಂತಾದ ಅಶುಭ ಫಲಗಳನ್ನು ಉಂಟುಮಾಡಬಹುದು.

ಆದ್ದರಿಂದ ಈ ಯೋಗಗಳ ಅಂತ್ಯಭಾಗದಲ್ಲಿ ಬರುವ ಮುಹೂರ್ತವನ್ನು ಅತ್ಯಂತ ನಿಷಿದ್ಧ ಎಂದು ಪರಿಗಣಿಸಬೇಕು.

*💠 2) ನಕ್ಷತ್ರದಿಂದ ಉಂಟಾಗುವ ಪತ್ತಾ ದೋಷ*
ಗ್ರಂಥಾಂತರ ಪ್ರಕಾರ, ಯಾವ ನಕ್ಷತ್ರದಲ್ಲಿ ವಿವಾಹ ಮುಹೂರ್ತವನ್ನು ನಿಗದಿಪಡಿಸಿದ್ದಾರೋ, ಆ ಸಮಯದಲ್ಲಿ ರವಿ (ಸೂರ್ಯ) ಕೆಳಗೆ ಸೂಚಿಸಿದ ವಿರೋಧಿ ನಕ್ಷತ್ರಗಳಲ್ಲಿ ಸಂಚರಿಸುತ್ತಿದ್ದರೆ, ಆ ದಿನ ವಿವಾಹಾದಿ ಶುಭಕಾರ್ಯಗಳನ್ನು ನಿಷೇಧಿಸಲಾಗಿದೆ.

ವಿವಾಹ ನಕ್ಷತ್ರಕ್ಕೆ ವಿರೋಧಿ ರವಿನಕ್ಷತ್ರಗಳು

🔸 ರೋಹಿಣಿ → ಆರ್ದ್ರಾ, ಪುನರ್ವಸು, ಪೂರ್ವಾ, ಸ್ವಾತಿ, ಮೂಲಾ, ಶತತಾರ

🔸 ಮೃಗಶಿರಾ→ ಮೃಗಶಿರಾ, ಆರ್ದ್ರಾ, ಮಘಾ, ವಿಶಾಖಾ, ಜ್ಯೇಷ್ಠ, ಧನಿಷ್ಠಾ

🔸 ಮಘಾ→ ಅಶ್ವಿನಿ, ಮೃಗಶಿರಾ, ಆಶ್ಲೇಷ, ಹಸ್ತಾ, ಜ್ಯೇಷ್ಠ, ರೇವತಿ

🔸 ಉತ್ತರಾಫಲ್ಗುಣಿ→ ಕೃತ್ತಿಕಾ, ಪುಷ್ಯ, ಪೂರ್ವಾ, ವಿಶಾಖಾ, ಪೂರ್ವಾಷಾಢ, ಉತ್ತರಾಭಾದ್ರಪದ

🔸 ಹಸ್ತಾ→ ಭರಣಿ, ಆರ್ದ್ರಾ, ಮಘಾ, ಸ್ವಾತಿ, ಶತತಾರ, ಪೂರ್ವಾಭಾದ್ರಪದ

🔸 ಸ್ವಾತಿ→ ಕೃತ್ತಿಕಾ, ರೋಹಿಣಿ, ಪುಷ್ಯ, ಹಸ್ತಾ, ಶ್ರವಣ, ಧನಿಷ್ಠಾ, ರೇವತಿ

🔸 ಅನುರಾಧಾ→ ಅಶ್ವಿನಿ, ಆರ್ದ್ರಾ, ಪೂರ್ವಾ, ಪೂರ್ವಾಷಾಢ, ಉತ್ತರಾಷಾಢ, ಪೂರ್ವಾಭಾದ್ರಪದ

🔸 ಮೂಲಾ→ ರೋಹಿಣಿ, ಆಶ್ಲೇಷ, ಜ್ಯೇಷ್ಠ, ಮೂಲಾ, ಧನಿಷ್ಠಾ, ರೇವತಿ

🔸 ಉತ್ತರಾಷಾಢ→ ಭರಣಿ, ಪುನರ್ವಸು, ವಿಶಾಖಾ, ಅನುರಾಧಾ, ಉತ್ತರಾಷಾಢ, ಪೂರ್ವಾಭಾದ್ರಪದ

🔸 ಉತ್ತರಾಭಾದ್ರಪದ→ ಭರಣಿ, ಪೂರ್ವಾ, ಉತ್ತರಾ, ವಿಶಾಖಾ, ಪೂರ್ವಾಷಾಢ, ಶತತಾರ

🔸 ರೇವತಿ→ ಅಶ್ವಿನಿ, ಮಘಾ, ಪೂರ್ವಾ, ಸ್ವಾತಿ, ಮೂಲಾ, ಧನಿಷ್ಠಾ

💠 ತಾತ್ಪರ್ಯ
ವಿವಾಹ ಮುಹೂರ್ತದ ನಕ್ಷತ್ರಕ್ಕೆ ವಿರೋಧವಾಗಿ ಸೂರ್ಯನ ನಕ್ಷತ್ರ ಬಂದರೆ, ಆ ಸಂಯೋಗವು ದಾಂಪತ್ಯ ಜೀವನದಲ್ಲಿ ಅಶಾಂತಿ, ದೂರಾವಸ್ಥೆ, ವೈವಾಹಿಕ ಬಾಧೆ ಅಥವಾ ಭಾಗ್ಯಹೀನತೆಯನ್ನು ತರಬಹುದು ಎಂದು ಶಾಸ್ತ್ರಗಳು ಸೂಚಿಸುತ್ತವೆ.

ಆದ್ದರಿಂದ ವಿವಾಹ ಮುಹೂರ್ತ ನಿರ್ಣಯದಲ್ಲಿ ಪತ್ತಾ ದೋಷ ಪರಿಶೀಲನೆ ಅತ್ಯಾವಶ್ಯಕ.

 ಗುರುರಾಜಾಚಾರ್ಯ ಜೋಶಿ

February 18, 2026

ದುರ್ಜನರಿಗೆ ಸುಖ - ಸಜ್ಜನರಿಗೆ ದುಃಖ

ನಾವು ಸಾಮಾನ್ಯವಾಗಿ ಕೇಳುವ ಪ್ರಶ್ನೆ: "ನಾನು ಒಳ್ಳೆಯದನ್ನು ಮಾಡಿದರೆ ನನಗೆ ಸುಖ ಸಿಗಬೇಕಲ್ಲವೇ?"
ಆದರೆ ನಮ್ಮ ಋಷಿಗಳು ಹೇಳುತ್ತಾರೆ: "ನಿನಗೆ ಸುಖ ಬೇಕೋ ಅಥವಾ ಬಿಡುಗಡೆ (ಮೋಕ್ಷ) ಬೇಕೋ?"
ಏಕೆಂದರೆ,  ತತ್ವಶಾಸ್ತ್ರದ ಪ್ರಕಾರ, ಪಾಪ ಮತ್ತು ಪುಣ್ಯಗಳೆರಡೂ "ಬಂಧನಗಳೇ".

*💠ಚಿನ್ನದ ಸರಪಳಿ vs ಕಬ್ಬಿಣ ಸರಪಳಿ*
ಈ ಅದ್ಭುತವಾದ ತತ್ವವನ್ನು ಅರ್ಥಮಾಡಿಕೊಳ್ಳಿ:
 *⭐ಪಾಪ*: ಇದು "ಕಬ್ಬಿಣದ ಸರಪಳಿ". ಇದು ನಮ್ಮನ್ನು ನರಕ ಅಥವಾ ಕಷ್ಟ ಎಂಬ ಜೈಲಿನಲ್ಲಿ ಬಂಧಿಸುತ್ತದೆ.

 *⭐ಪುಣ್ಯ*: ಇದು "ಚಿನ್ನದ ಸರಪಳಿ". ಇದು ನಮ್ಮನ್ನು ಸ್ವರ್ಗ ಅಥವಾ ಭೂಮಿಯ ಮೇಲಿನ ಭೋಗ ಎಂಬ ಅರಮನೆಯಲ್ಲಿ ಬಂಧಿಸುತ್ತದೆ.
ಕಬ್ಬಿಣದ ಸರಪಳಿಯಲ್ಲಿದ್ದರೆ ಕೈ ನೋಯುತ್ತದೆ, ಚಿನ್ನದ ಸರಪಳಿಯಲ್ಲಿದ್ದರೆ ಕೈಗೆ ಅಂದವಾಗಿ ಕಾಣುತ್ತದೆ. ಆದರೆ ಎರಡೂ ಸರಪಳಿಗಳೇ! ಎರಡೂ ನಮ್ಮನ್ನು ಕಟ್ಟಿಹಾಕುತ್ತವೆ.
ಪಾಪ ಮಾಡಿದವನು ಕಷ್ಟ ಅನುಭವಿಸಲು ಮತ್ತೆ ಹುಟ್ಟಬೇಕು. ಪುಣ್ಯ ಮಾಡಿದವನು ಆ ಪುಣ್ಯದ ಫಲವನ್ನು (ಸುಖವನ್ನು) ಅನುಭವಿಸಲು ಮತ್ತೆ ಹುಟ್ಟಬೇಕು. ಹುಟ್ಟು-ಸಾವುಗಳ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

*💠ಜ್ಞಾನಿಯ ದೃಷ್ಟಿ:*
ನಿಜವಾದ ಭಕ್ತ ಅಥವಾ ಜ್ಞಾನಿಯು ದೇವರಿಗೆ "ನನಗೆ ಸುಖ ಕೊಡು" ಎಂದು ಕೇಳುವುದಿಲ್ಲ. "ನನ್ನ ಈ ಎರಡೂ ಸರಪಳಿಗಳನ್ನು ಕತ್ತರಿಸಿ ನನ್ನನ್ನು ಸ್ವತಂತ್ರನನ್ನಾಗಿ (ಮೋಕ್ಷ) ಮಾಡು" ಎಂದು ಕೇಳುತ್ತಾನೆ.
ಅದಕ್ಕಾಗಿಯೇ, ಪುಣ್ಯವಂತರಿಗೆ ದೇವರು ಕಷ್ಟಗಳನ್ನು ಕೊಟ್ಟು, ಅವರ ಕರ್ಮಗಳನ್ನು ವೇಗವಾಗಿ ಕಳೆದು, ಸರಪಳಿಗಳನ್ನು ಮುರಿದು ತನ್ನತ್ತ ಕರೆದುಕೊಳ್ಳುತ್ತಾನೆ.

*💠ಸುಖ-ದುಃಖಗಳನ್ನು ಮೀರಿದ ಸ್ಥಿತಿ*
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ "ಯುದ್ಧ ಮಾಡು" ಎಂದು ಹೇಳಿದನೇ ಹೊರತು "ಗೆಲ್ಲು" ಎಂದು ಹೇಳಲಿಲ್ಲ. ಜೀವನದಲ್ಲಿ ನಾವು ಹೇಗಿರಬೇಕು ಎಂಬುದಕ್ಕೆ ಇದೊಂದು ಮಹಾಮಂತ್ರ.

 *🕉️ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ* |
 *ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ* || 
(ಭಗವದ್ಗೀತೆ ೨.೩೮)


ಸುಖ ಮತ್ತು ದುಃಖವನ್ನು, ಲಾಭ ಮತ್ತು ನಷ್ಟವನ್ನು, ಜಯ ಮತ್ತು ಅಪಜಯವನ್ನು *"ಸಮ"* ನಾಗಿ (ಒಂದೇ ಎಂದು) ಭಾವಿಸು. ನಂತರ ಯುದ್ಧ ಮಾಡು (ಕರ್ತವ್ಯ ಮಾಡು). ಆಗ ನಿನಗೆ ಯಾವ ಪಾಪವೂ ಅಂಟುವುದಿಲ್ಲ.

ಪಾಪಿಗಳು ಸುಖ ಬಂದಾಗ ಹಿಗ್ಗುತ್ತಾರೆ, ದುಃಖ ಬಂದಾಗ ಕುಗ್ಗುತ್ತಾರೆ. ಆದರೆ ಪುಣ್ಯವಂತರು (ಜ್ಞಾನಿಗಳು) ಕಷ್ಟ ಬಂದಾಗಲೂ ನಗುತ್ತಾರೆ. "ನನ್ನ ಹಳೆಯ ಸಾಲ ತೀರುತ್ತಿದೆ" ಎಂಬ ಸಮಾಧಾನ ಅವರಲ್ಲಿರುತ್ತದೆ.
ಜೀವನದ ಗುರಿ "ಸುಖವಾಗಿರುವುದು" ಅಲ್ಲ, ಜೀವನದ ಗುರಿ "ಸ್ಥಿತಪ್ರಜ್ಞ" (ಶಾಂತವಾಗಿ) ಆಗಿರುವುದು.

*💠ಭೋಗವೇ ರೋಗ*
ಪಾಪಿಗಳು ಅನುಭವಿಸುವ ಇಂದ್ರಿಯ ಸುಖಗಳು ವಾಸ್ತವವಾಗಿ ದುಃಖದ ತಾಯಂದಿರು ಎಂದು ಕೃಷ್ಣ ಎಚ್ಚರಿಸುತ್ತಾನೆ.

 *🕉️ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ* |
*ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ* || (ಭಗವದ್ಗೀತೆ ೫.೨೨)
 

ಇಂದ್ರಿಯಗಳ ಸಂಪರ್ಕದಿಂದ ಹುಟ್ಟುವ ಭೋಗಗಳು (ಸುಖಗಳು) "ದುಃಖದ ಯೋನಿಗಳೇ" (ದುಃಖಕ್ಕೆ ಜನ್ಮ ನೀಡುವ ತಾಯಂದಿರೇ) ಆಗಿವೆ. ಅವುಗಳಿಗೆ ಆದಿ (ಆರಂಭ) ಮತ್ತು ಅಂತ್ಯವಿದೆ. ಬುದ್ಧಿವಂತನಾದವನು ಅವುಗಳಲ್ಲಿ ರಮಿಸುವುದಿಲ್ಲ (ಸಂತೋಷ ಪಡುವುದಿಲ್ಲ).
ಪಾಪಿಗಳು "ಸುಖ" ಎಂದುಕೊಂಡಿರುವುದು, ಬೆಂಕಿಯ ಜ್ವಾಲೆಯನ್ನು ಕಂಡು ಆಕರ್ಷಿತವಾದ ಪತಂಗದಂತೆ (Butterfly). ಅದು ಮುಟ್ಟಲು ಸುಂದರ, ಆದರೆ ಮುಟ್ಟಿದರೆ ಸಾವು. ಪುಣ್ಯವಂತರಿಗೆ ದೇವರು ಆ ಸುಖವನ್ನು ನಿರಾಕರಿಸುವ ಮೂಲಕ, ಅವರನ್ನು ಆ ಬೆಂಕಿಯಿಂದ ರಕ್ಷಿಸುತ್ತಿದ್ದಾನೆ.

*💠ಜೈಲಿನ ಉದಾಹರಣೆ*
ನಾವು ಈ ಭೂಮಿ ಎಂಬ ಜೈಲಿನಲ್ಲಿರುವ ಕೈದಿಗಳು

 ✨ ಪಾಪಿಗಳು: "ಎ-ಕ್ಲಾಸ್"  ಕೈದಿಗಳಂತೆ. ಅವರಿಗೆ ಜೈಲಿನಲ್ಲಿ ಟಿವಿ, ಒಳ್ಳೆ ಊಟ, ಹಾಸಿಗೆ ಸಿಗಬಹುದು (ಅವರ ಹಿಂದಿನ ಪುಣ್ಯದಿಂದ). ಅವರು ಜೈಲಿನಲ್ಲೇ ಇರಲು ಇಷ್ಟಪಡುತ್ತಾರೆ.

 ✨ ಪುಣ್ಯವಂತರು: ಸಾಧಾರಣ ಕೈದಿಗಳಂತೆ ಕಷ್ಟಪಡುತ್ತಿರಬಹುದು. ಆದರೆ ಅವರ ನಡತೆ  ಚೆನ್ನಾಗಿದೆ ಎಂದು ಜೈಲರ್ (ದೇವರು) ಅವರನ್ನು "ಬಿಡುಗಡೆ"  ಮಾಡಲು ನಿರ್ಧರಿಸಿದ್ದಾನೆ.
ಯಾರು ಅದೃಷ್ಟವಂತರು?
ಜೈಲಿನಲ್ಲಿ  ತಿನ್ನುತ್ತಾ ಅಲ್ಲೇ ಕೊಳೆಯುವವನೋ? ಅಥವಾ ಕಷ್ಟಪಟ್ಟರೂ ಜೈಲಿನಿಂದ ಶಾಶ್ವತವಾಗಿ ಬಿಡುಗಡೆಯಾಗಿ ಮನೆಗೆ (ದೇವಲೋಕಕ್ಕೆ) ಹೋಗುವವನೋ?
ನಿಶ್ಚಯವಾಗಿಯೂ ಬಿಡುಗಡೆ ಹೊಂದುವವನೇ ಅದೃಷ್ಟವಂತ. ಪುಣ್ಯವಂತರ ಕಷ್ಟವು ಆ ಬಿಡುಗಡೆಯ ಪ್ರಕ್ರಿಯೆ.


 ❇️ ಬ್ಯಾಂಕ್ ಬ್ಯಾಲೆನ್ಸ್: ಪಾಪಿಗಳು ಹಳೆಯ ಪುಣ್ಯವನ್ನು ಖರ್ಚು ಮಾಡುತ್ತಿದ್ದಾರೆ . ಪುಣ್ಯವಂತರು ಹಳೆಯ ಪಾಪವನ್ನು ತೀರಿಸುತ್ತಿದ್ದಾರೆ .
 ❇️ ಕಾಲದ ಅಂತರ : ಬೀಜ ಬಿತ್ತಿದ ತಕ್ಷಣ ಮರವಾಗುವುದಿಲ್ಲ. ಕರ್ಮಫಲಕ್ಕೆ ಸಮಯ ಬೇಕು.
 ❇️ ಅಗ್ನಿಪರೀಕ್ಷೆ: ಪುಣ್ಯವಂತನು ಚಿನ್ನದಂತೆ. ಬೆಂಕಿಯಲ್ಲಿ ಬೆಂದಷ್ಟೂ ಶುದ್ಧವಾಗುತ್ತಾನೆ.
 ❇️ ಆಸುರೀ ಸುಖ: ಪಾಪಿಗಳ ಸುಖವು ಮಾನಸಿಕ ರೋಗವಿದ್ದಂತೆ. ಅದು ಶಾಂತಿಯಿಲ್ಲದ ಭೋಗ.
 ❇️ ದೈವಿಕ ಚಿಕಿತ್ಸೆ: ಕಷ್ಟವೆಂಬುದು ಆತ್ಮಕ್ಕೆ ಮಾಡುವ ಶಸ್ತ್ರಚಿಕಿತ್ಸೆ .
 ❇️ ಋಣಾನುಬಂಧ: ನಾವು ಮಾಡಿದ ಸಣ್ಣ ತಪ್ಪುಗಳಿಗೂ ಲೆಕ್ಕ ಚುಕ್ತವಾಗಲೇಬೇಕು (ಮಾಂಡವ್ಯ ಋಷಿಯಂತೆ).
 ❇️ ವಿಚಿತ್ರ ಅನುಗ್ರಹ: ದೇವರು ಭಕ್ತನ ಅಹಂಕಾರ ಮುರಿಯಲು ಅವನ ಸಂಪತ್ತನ್ನು ಕಸಿದುಕೊಳ್ಳುತ್ತಾನೆ.
 ❇️ ವಿನಾಶದ ಹಾದಿ: ಪಾಪಿಗಳ ಏಳಿಗೆಯು, ಬಲೂನ್ ಒಡೆಯುವ ಮುನ್ನ ಉಬ್ಬಿದಂತೆ (ನಹುಷನಂತೆ).
 ❇️ ಶ್ರೇಯಸ್ vs ಪ್ರೇಯಸ್: ಪುಣ್ಯವಂತರು 'ಒಳ್ಳೆಯದನ್ನು' ಆರಿಸಿಕೊಂಡರೆ, ಪಾಪಿಗಳು 'ಇಷ್ಟವಾಗುವದನ್ನು' ಆರಿಸಿಕೊಳ್ಳುತ್ತಾರೆ.
 ❇️ ಮೋಕ್ಷ: ಅಂತಿಮವಾಗಿ, ಕಷ್ಟಗಳು ನಮ್ಮನ್ನು ಪ್ರಪಂಚದಿಂದ ವಿರಕ್ತರನ್ನಾಗಿ ಮಾಡಿ, ದೇವರ ಕಡೆಗೆ ತಿರುಗಿಸುತ್ತವೆ.

ಆದ್ದರಿಂದ, ಜೀವನದಲ್ಲಿ ಕಷ್ಟ ಬಂದಾಗ "ನಾನೇನು ತಪ್ಪು ಮಾಡಿದೆ?" ಎಂದು ಕೇಳಬೇಡಿ. "ದೇವರೇ, ನನ್ನ ಯಾವ ಹಳೆಯ ಸಾಲ ತೀರಿಸುತ್ತಿದ್ದೀಯಾ ತೀರಿಸು, ನನಗೆ ಶಕ್ತಿ ಕೊಡು" ಎಂದು ಪ್ರಾರ್ಥಿಸಿ.
ಪಾಪಿಗಳ ಸುಖವನ್ನು ಕಂಡು ಅಸೂಯೆ ಪಡಬೇಡಿ. ಅದು ಬಿರುಗಾಳಿಗೆ ಮುಂಚಿನ ಶಾಂತಿ.
ಧರ್ಮದ ಹಾದಿ ಕಷ್ಟವಾಗಿದ್ದರೂ, ಅದು ಶಾಶ್ವತ ಶಾಂತಿಯ ಮನೆಗೆ ಕರೆದೊಯ್ಯುತ್ತದೆ.

ಮಂಜುನಾಥ ಶರ್ಮ 

February 13, 2026

ಛತ್ರಿ ಮತ್ತು ಪಾದರಕ್ಷೆ ದಾನದ ಮಹತ್ವ

#ಛತ್ರಿ_ಮತ್ತು_ಪಾದರಕ್ಷೆ_ಉತ್ಪತ್ತಿ

ಛತ್ರಿ ಮತ್ತು ಪಾದರಕ್ಷೆಯನ್ನು ಶುಭಕಾರ್ಯಗಳಲ್ಲಿಯೂ ಮತ್ತು ಪಿತೃಕಾರ್ಯಗಳಲ್ಲಿಯೂ ದಾನವಾಗಿ ಕೊಡುವ ಪದ್ಧತಿ ಇದೆ. ಮಹಾಭಾರತದಲ್ಲಿ ಇದಕ್ಕೆ ಸಂಬಂಧಿಸಿದ ವಿಷಯವೊಂದನ್ನು ಹೇಳಲಾಗಿದೆ.

ಅದು ಜ್ಯೇಷ್ಠಮಾಸದ ಬಿಸಿಲಿನ ಕಾಲ. ಭೃಗುವಂಶೀಯರಾದ ಜಮದಗ್ನಿ ಮಹರ್ಷಿಯು ಧನುಸ್ಸಿನಲ್ಲಿ ಬಾಣಗಳನ್ನು ಹೂಡಿ ಮನೋರಂಜನೆಗಾಗಿ ಆಟವಾಡುತ್ತಿದ್ದರು. ಬಹಳ ದೂರದವರೆಗೆ ಹೋಗಿ ಬಿದ್ದ ಬಾಣಗಳನ್ನೆಲ್ಲ ಹೆಕ್ಕಿ ತರುವಂತೆ ಜೊತೆಯಲ್ಲಿದ್ದ ಪತ್ನಿ ರೇಣುಕೆಗೆ ಹೇಳಿದರು. ಮಧ್ಯಾಹ್ನದ ಬಿರುಬಿಸಿಲು, ನೆತ್ತಿಯನ್ನು ಸುಡುತ್ತಿತ್ತು. ಕೋಮಲೆಯಾದ ರೇಣುಕೆಯು ಬಿಸಿಲ ತಾಪದಿಂದಲೂ, ಕಾದ ಮಣ್ಣಿನ ಮೇಲೆ ನಡೆದು ಪರಿತಾಪಪಟ್ಟಳು. ಪತಿಯು ಮೊದಲೇ ಕೋಪಿಷ್ಟ, ತಾನು ಹೋಗುವುದು ವಿಳಂಬವಾದರೆ ಎಲ್ಲಿ ಸಿಟ್ಟಿನಿಂದ ಶಪಿಸುವನೋ ಎಂದು ಹೆದರಿ ಹೇಗೋ ಕಷ್ಟಪಟ್ಟು ಆಶ್ರಮ ತಲುಪಿದಳು. ಆದರೂ ತಡವಾಗಿ ಹೋಯಿತು! ಕ್ರುದ್ಧಗೊಂಡ ಜಮದಗ್ನಿಯು ರೇಣುಕೆಯು ಸಾವಕಾಶವಾಗಿ ಬರಲು ಕಾರಣವೇನು ಎಂದು ಕೇಳಿದಾಗ ದೀನಳಾದ ರೇಣುಕೆಯು ‘ಅಗ್ನಿಸದೃಶವಾದ ಸೂರ್ಯನ ಕಿರಣಗಳಿಂದ ನನ್ನ ನೆತ್ತಿ ಮತ್ತು ಕಾಲು ಸುಡುತ್ತಿತ್ತು. ವೃಕ್ಷದ ನೆರಳಿನಲ್ಲಿ ಸ್ವಲ್ಪಕಾಲ ನಿಂತು ಬಂದೆ’ ಎಂದಳು. ಪ್ರಿಯಪತ್ನಿಯನ್ನು ಭಾದಿಸಿದ ಸೂರ್ಯನ ಮೇಲೆ ಜಮದಗ್ನಿಯ ಕೋಪ ತಿರುಗಿತು. ಕೂಡಲೇ ಧನುಸ್ಸನ್ನು ಠೇಂಕರಿಸಿ ಬಾಣಗಳನ್ನು ಹೂಡಿ ಸೂರ್ಯನ ಕಡೆಗೆ ಮುಖಮಾಡಿ ಅವನನ್ನು ಭೇದಿಸುವುದಕ್ಕೆ ಸಿದ್ಧನಾದ. ಬ್ರಹ್ಮರ್ಷಿ ಅದರಲ್ಲೂ ಕೋಪಿಷ್ಟ, ಕ್ರೋಧಾಗ್ನಿಯಿಂದ ಮೂರುಲೋಕವನ್ನೇ ದಹಿಸುವ ಸಾಮರ್ಥ್ಯವಿದ್ದವನು ಜಮದಗ್ನಿ! ಸೂರ್ಯನಿಗೆ ಮುಂದಾಗುವ ಅನಾಹುತದ ಅರಿವಾಯಿತು. ತಕ್ಷಣವೇ ಬ್ರಾಹ್ಮಣಮುನಿಯ ವೇಷಧರಿಸಿ ಜಮದಗ್ನಿಯ ಎದುರು ಕಾಣಿಸಿಕೊಂಡ.

ಜಗತ್ತಿನ ಸರ್ವಜೀವಜಂತುಗಳಿಗೂ ಸೂರ್ಯನೇ ಆಧಾರ. ಸೂರ್ಯನ ಕಿರಣಗಳು ನೆಲವನ್ನು ಸೋಕಿದರೆ ಮಾತ್ರ ಲೋಕದಲ್ಲಿ ಮಳೆಬೆಳೆಯಾಗಿ ಪ್ರಾಣಿಕೋಟಿಗೆ ಆಹಾರ ಪ್ರಾಪ್ತವಾಗುತ್ತದೆ. ಶಾಸ್ತ್ರೋಕ್ತ ಶುಭಕರ‍್ಮಾದಿಗಳೂ, ಪಿತೃಕಾರ್ಯಗಳೆಲ್ಲಕ್ಕೂ ಸೂರ್ಯನೇ ಪ್ರಧಾನ. ಅಂತಹ ಸೂರ್ಯನನ್ನು ಬಾಣದಿಂದ ಛೇದಿಸಿ ಭೂಮಿಗಿಳಿಸಿದರೆ ಜಗತ್ತೇ ನಾಶವಾಗುತ್ತದೆ ಹಾಗೆ ಮಾಡಬೇಡ ಎಂದು ಬ್ರಾಹ್ಮಣ ಪ್ರಾರ್ಥಿಸಿದ. ಆದರೆ ಜಮದಗ್ನಿಮುನಿಯ ಕೋಪ ಶಮನವಾಗಲಿಲ್ಲ. ಜ್ಞಾನದೃಷ್ಟಿಯಿಂದ ಬ್ರಾಹ್ಮಣ ರೂಪ ಧರಿಸಿ ತನ್ನೆದುರು ನಿಂತಿರುವವನು ಸೂರ್ಯನೆಂಬುದನ್ನು ಕ್ಷಣಮಾತ್ರದಲ್ಲಿ ತಿಳಿಯಿತು. ಜಮದಗ್ನಿಯು “ಪ್ರಖರ ಕಿರಣಗಳಿಂದ ಜೀವಿಗಳನ್ನು ಸುಡುತ್ತಿರುವ ನಿನ್ನ ಅಹಂಕಾರವನ್ನು ತಗ್ಗಿಸಬೇಕು, ಮಧ್ಯಾಹ್ನ ಸಮಯದಲ್ಲಿ ಅರ್ಧನಿಮಿಷದ ಕಾಲ ನೀನು ನಿಲ್ಲುವ ಸಮಯದಲ್ಲಿ ನಿನ್ನನ್ನು ಬಾಣಗಳಿಂದ ಭೇದಿಸುತ್ತೇನೆ. ನಿನ್ನನ್ನು ಕ್ಷಮಿಸುವ ಪ್ರಮೇಯವೇ ಇಲ್ಲ” ಎಂದು ಗುಡುಗಿದ. ಜಮದಗ್ನಿಯ ಶಕ್ತಿ ಮತ್ತು ಪ್ರಾಬಲ್ಯದ ಅರಿವಿದ್ದ ಸೂರ್ಯನು ಮರುಕ್ಷಣವೇ ಮುನಿಗೆ ಶರಣಾಗತನಾದ. ಶರಣಾಗತನಾದವನನ್ನು ಕೊಲ್ಲುವುದು ಧರ್ಮವಲ್ಲ. ಆದರೆ ಸೂರ್ಯನು ಮಾಡಿದ ಅಪರಾಧವು ಮರುಕಳಿಸದಂತೆ ಏನಾದರೂ ಪರಿಹಾರ ಕಂಡುಕೊಳ್ಳುವಂತೆ ಜಮದಗ್ನಿಯು ಸೂಚಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಸೂರ್ಯದೇವನು ಒಂದು ಛತ್ರಿ ಮತ್ತು ಪಾದರಕ್ಷೆಯನ್ನು ಜಮದಗ್ನಿಗೆ ಕೊಟ್ಟು ‘ನನ್ನ ಕಿರಣಗಳು ತಲೆಯನ್ನು ಸುಡದಂತೆ ಛತ್ರಿಯೂ, ಪಾದಗಳ ರಕ್ಷಣೆಗಾಗಿ ಪಾದುಕೆಗಳನ್ನು ಕೊಡುತ್ತಿದ್ದೇನೆ. ಇವು ಲೋಕದಲ್ಲಿ ಪ್ರಚಲಿತವಾಗುತ್ತದೆ. ಇನ್ನು ಮುಂದೆ ಎಲ್ಲಾ ಪುಣ್ಯಕಾರ್ಯಗಳಲ್ಲಿಯೂ ಇವುಗಳ ದಾನದಿಂದ ಅಕ್ಷಯ ಸತ್ಫಲಗಳನ್ನು ಪಡೆಯುವರು’ ಎಂದು ಅನುಗ್ರಹಿಸಿ ಹೊರಟುಹೋದನು.

ಅಂದಿನಿಂದ ಇಂದಿನವರೆಗೂ ಪ್ರತಿಯೊಂದು ಪರಾಪರ ಕಾರ್ಯಗಳಲ್ಲಿ ಛತ್ರಿ ಮತ್ತು ಪಾದರಕ್ಷೆಯನ್ನು ದಾನವಾಗಿ ಕೊಡುವುದು ಕಾರ್ಯಗಳ ಒಂದು ಅಂಗವಾಗಿ ನಡೆದುಕೊಂಡೇ ಬಂದಿದೆ. ಮನುಷ್ಯನ ಬಾಹ್ಯ ಅಂಗಗಳಲ್ಲಿ ತಲೆ ಮತ್ತು ಪಾದಗಳು ಪ್ರಮುಖ. ಅದರ ರಕ್ಷಣೆಯ ಪ್ರಾಮುಖ್ಯತೆಯನ್ನು ತಿಳಿಸುವುದು ಒಂದು ವಿಷಯವಾದರೆ ಖಗೋಲದಲ್ಲಿ ನಡೆಯುವ ವಿಶೇಷವೊಂದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಿ. ಸೂರ್ಯನು ಅರ್ಧನಿಮಿಷ ನಿಲ್ಲುವ ಸಂದರ್ಭವನ್ನು ಖಗೋಳಶಾಸ್ತ್ರದಲ್ಲಿ ‘ಅಯನ ಸಂಕ್ರಾಂತಿ’ (Solstice)  ಎನ್ನಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಬೇಸಿಗೆ ಮತ್ತು ಚಳಿಗಾಲದ ಋತು ಬದಲಾವಣೆಯ ಸಂದರ್ಭದಲ್ಲಿ ಸೂರ್ಯನ ಪಥ ಬದಲಾವಣೆಯಾಗುವಾಗ ಒಂದುಕ್ಷಣ ಆಕಾಶದಲ್ಲಿ ನಿಂತಂತೆ ಕಾಣುತ್ತಾನೆ ಎನ್ನುತ್ತದೆ ವಿಜ್ಞಾನ. ಅದನ್ನು ಸೂರ್ಯನ ಸ್ಥಿರತೆ ಎನ್ನುತ್ತಾರೆ. ಆ ವಿಷಯವನ್ನೇ ಜಮದಗ್ನಿಯು ಇಲ್ಲಿ ಹೇಳಿದ್ದಾರೆ ಎಂದಾಗ ನಮ್ಮ ಪೂರ್ವಜರ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಯಾವ ಮಟ್ಟದಲ್ಲಿತ್ತು ಎಂಬುದು ಅನೂಹ್ಯ!!

Article by- Ashwini Hodala

ಜೀವನದ ಕಠೋರ ಸತ್ಯಗಳು

ನನ್ನ ತಲೆ ನೋಯುತ್ತಿದೆ ಎಂದು..
medical shop ಗೆ ಹೋದೆ.
ಔಷಧಿ ಅಂಗಡಿ ಮಾಲಕ..
ಅಂಗಡಿಯಲ್ಲಿ ಇರಲಿಲ್ಲ..
ಕೇಳಿದೆ... ಅಂಗಡಿ ಮಾಲಕ ಎಲ್ಲಿ..?*

ಅಂಗಡಿಯ ನೌಕರ ಹೇಳಿದ..
ಮಾಲೀಕರ ತಲೆ ನೋಯುತ್ತಿದೆ..
ಶುಂಠಿಯ ಕಷಾಯ ಕುಡಿಯಲು 
ಮನೆಗೇ ಹೋಗಿದ್ದಾರೆ..
ನಾನು ನನ್ನ ಕೈಯಲ್ಲಿಯೇ ತಲೆ ನೋವಿನ ಮಾತ್ರೆ ನೋಡುತ್ತಲೇ ನಿಂತೆ.....

ನನ್ನ ತಾಯಿಯ BP , sugar ಹೆಚ್ಚಾಗಿದೆ ಎಂದು ,ವೈದ್ಯರ ಬಳಿ ಹೋದೆ..
ಸುಮಾರು ಒಂದು ಅರ್ಧ ಘಂಟೆವರೆಗೆ ಕಾಯ್ದೆ..
ವೈದ್ಯರು ಬಂದರು..
ನನ್ನಮ್ಮನ ಪ್ರಕೃರ್ತಿ ತಪಾಸಣೆ ಮಾಡಿ.. ಉದ್ದವಾದ prescription ಕೊಟ್ಟರು.

ನಾನು , ಕೇಳಿದೆ..
ಡಾಕ್ಟ್ರೆ..ನಿಮಗೆ BP.. ಸುಗರ ಇದೆಯಾ..?
ಛೆ.. ಇಲ್ಲವೇ ಇಲ್ಲ..
ನಾನು ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡುತ್ತೇನೆ..
ಎಲ್ಲಿಂದ ಬರಬೇಕು..BP, sugar.. ನನಗೆ..
ನಾ..ಅವರು ಕೊಟ್ಟ prescription ನೋಡುತ್ತಾ ನಿಂತೆ...

ಒಮ್ಮೆ ನನ್ನದೇ ಬಿಳಿ ಕೂದಲು..
ಕಪ್ಪು ಮಾಡಲು ಹೋದೆ 
ಒಂದು men's parlour ಗೆ..

ಕೂದಲು trim and conditioning...
(, ಕೂದಲಿಗೆ ಕಪ್ಪು ಬಣ್ಣದ ಲೇಪನ)
ಕೂದಲು ಕಪ್ಪು ಮಾಡುವಾಗ..
ಆ barber ನ ಕೂದಲು ಕಡೆ 
ದೃಷ್ಟಿ ಹಾಯಿಸಿದೆ..
ಹೊಳೆಯುವ ಕಪ್ಪು ಕೂದಲು..
ನೀನ್ಯಾವ dye ಉಪಯೋಗ ಮಾಡುತ್ತಿ..?
ಎಂದು ಕೇಳಲು...
ಛೆ.. ನನಗೇಕೆ ಬೇಕು ಡೈ..?
ಕೊಬ್ಬರಿ ಎಣ್ಣೆಗೆ ಕರ್ಪೂರ ಸೇರಿಸಿ 
ಕೂದಲಿಗೆ ಹಚ್ಚಲು..
ನಾನು ಅವನು ನನ್ನ ಕೈಗೆ ಕೊಟ್ಟ parlour Bill ನೋಡುತ್ತಾ ನಿಂತೆ..

ನನಗೊಮ್ಮೆ ಗಟ್ಟಿಯಾದ ಹಾಲು ಬೇಕಿತ್ತು..
ಹೋದೆ ಒಬ್ಬ ಗೌಳಿಯ ಮನೆಗೆ..
ಅನೇಕ ಜೆರ್ಸಿ ಆಕಳು ಇದ್ದವು..
ಹಾಲು ಕೊಡುತ್ತಾ..
ಗಟ್ಟಿಯಾದ creamy milk..
ಒಂದು ಮೂಲೆಯಲ್ಲಿ ... ದೇಶೀಯ ತಳಿಯ  ಗೋವುಗಳೂ
ನೋಡಿದೆ..
ಗೌಳಿಗನಿಗೆ ಕೇಳಿದೆ..
ಅದೇಕೆ ಸಾಕಿರುವಿ ಆ ದೇಶೀಯ ಆಕಳನ್ನು..?
ಸರ... ಅವುಗಳ ಹಾಲನ್ನೇ ನಾನು ಉಪಯೋಗ ಮಾಡ್ತ ಇರೋದು 
ನನ್ನ ಮನೆಗೆ..
ನಾನು ಆ ಗೌಳಿ ಯ ಜೆರ್ಸಿ ಆಕಳಿಂದ ಪಡೆದ ಗಟ್ಟಿ ಹಾಲಿನ ಪಾತ್ರೆಯನ್ನು ನೋಡುತ್ತಾ ನಿಂತೆ....

ಒಮ್ಮೆ ಶಹರದ ಪ್ರಸಿದ್ಧ ಹೋಟೆಲ್ಗೆ ಹೋದೆ.. ಊಟಕ್ಕೆಂದು..
ಊಟ ಆಯಿತು..bill ಕೊಡಲು
Hotel ಮಾಲಿಕನ ಟೇಬಲ್ ಗೆ ಹೋದೆ..
ಒಬ್ಬ ಆಳು...
ಸರ.. ನಿಮ್ಮ ಊಟ ...ಎಂದು ಒಂದು tiffin ಕ್ಯಾರಿಯರ್ ತಂದಿಟ್ಟ ಮಾಲಿಕನ ಹತ್ತಿರ..
ನಾ ಕೇಳಿದೆ... ಹೊಟೆಲ್ ಮಾಲೀಕರಿಗೆ..
ಈ ಟಿಫಿನ್ ಕ್ಯಾರಿಯರ್ ಊಟ ಯಾರಿಗೆ...?
ಸರ್..ಅದು ನನ್ನೂಟ..
ಮನೆಯಿಂದ ತರಿಸಿದ್ದು..
ನಾ.. ನನ್ನ ಕೈಯಲ್ಲಿದ್ದ ಹೋಟೆಲ್ bill ನೋಡುತ್ತಾ ನಿಂತೆ....
ಒಂದು ದಿನ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಇತ್ತು ನಮ್ಮ ಮನೆಯಲ್ಲಿ. ಹೊರಗಡೆ ಒಬ್ಬ ಭಿಕ್ಷುಕ ಅಮ್ಮಾ ತಾಯಿ ಎನಾದರೂ ಭಿಕ್ಷೆ ಹಾಕಿ ಎಂದು ಕೂಗಿದ. ನಾನು ತುಂಬಾ ಬಿಸ್ಹೀ ಇದ್ದೆ. ಮುಂದೆ ಹೋಗು ಎಂದು ಗದರಿಸಿದೆ.
ನಂತರ ಪೂಜೆ ಮಾಡುತ್ತಿರುವಾಗ ಶ್ರೀ ಸತ್ಯನಾರಾಯಣ ಸ್ವಾಮಿ ಫೋಟೋ ದಲ್ಲಿ ಇದ್ದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರು ನಕ್ಕಂತೆ ಭಾಸವಾಯಿತು.
ಭಗವಂತನು ಎಲ್ಲಾ ಸೌಲಭ್ಯಗಳನ್ನು ಸೌಭಾಗ್ಯವನ್ನು ಈ ನಮ್ಮ ಜೀವನ,ಭೂಲೋಕ, ಪ್ರಕೃತಿ ಯಲ್ಲಿ ಖಂಡಿತ ನಮಗೆ ಕೊಟ್ಟಿದ್ದಾನೆ. ಆದರೆ ಅದನ್ನು ಉಪಯೋಗಿಸಿಕೊಂಡು ಲಾಭ ಪಡೆಯುವುದರಲ್ಲಿ ನಮಗೆ ಕಷ್ಟ ಮತ್ತು ಅಸಡ್ಡೆ.

ಹೀಗೆಯೇ...
ಕೆಲವು ಉದಾಹರಣೆಗಳು..
ಈ ಜೀವನದ...
ಕಠೋರ ಸತ್ಯಗಳು..

ತಾಯಿಗೆ ಒಂದು ಜೊತೆ ಪಾದರಕ್ಷೆ ಕೊಡಿ

ಸಾಯಂಕಾಲ ಎಂಟು ಗಂಟೆಯ ಸಮಯ, ಪಾದರಕ್ಷೆಯ ಅಂಗಡಿಯವ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅಂಗಡಿಯನ್ನು ಮುಚ್ಚಬೇಕು ಎನ್ನುವಾಗ, ಇಪ್ಪತ್ತರ ಹರೆಯದ ಹುಡುಗ ಒಳಗೆ ಬಂದ. ಮಾಲೀಕ ಆತನನ್ನು ಮತ್ತು ಆತನ ಕಾಲನ್ನು ನೋಡಲು ಆತ  ಸುಂದರವಾದ ಪಾದರಕ್ಷೆಯನ್ನು ಹಾಕಿಕೊಂಡಿದ್ದ.  ನೋಡಲು ಹಳ್ಳಿಯವನಂತೆ ಕಂಡರೂ ಓದು ಬರಹ ಬಲ್ಲವನಂತಿದ್ದ.

ಮಾಲೀಕ  "ಸರ್ ಏನಾಗಬೇಕಿತ್ತು" ಎನ್ನಲು, ಆ ಯುವಕ "ನನ್ನ ತಾಯಿಗೆ ಒಂದು ಜೊತೆ ಪಾದರಕ್ಷೆ ಬೇಕಾಗಿತ್ತು."

ಸರಿ ಅವರೆಲ್ಲಿ ಎನ್ನಲು ಆತ ಅವರು  ಊರಲ್ಲಿದ್ದಾರೆ ಎಂದ.
ಸರಿ ಹಾಗಾದರೆ ನಿಮಗೆ ಯಾವ ಸೈಜಿನ ಪಾದರಕ್ಷೆ ಬೇಕು ಎನ್ನಲು ಯುವಕನು, ತನ್ನ ಪರ್ಸ್ ತೆಗೆದು ಅದರಿಂದ ಸುಂದರವಾದ ಬಿಳಿ ಹಾಳೆಯನ್ನು ತೆಗೆದು ಮಾಲೀಕನ ಮುಂದೆ ಇಟ್ಟ.

ಅದರಲ್ಲಿ ಎರಡು ಪಾದದ ನಕ್ಷೆ ಇತ್ತು. "ಇದು ನನ್ನ ತಾಯಿಯ ಪಾದದ ನಕ್ಷೆ, ನಾನು ಪಾದರಕ್ಷೆ ಖರೀದಿಸುವುದು ಅವರಿಗೆ ಗೊತ್ತಿಲ್ಲ" ಎಂದ.

ಮಾಲೀಕ ನೋಡಿ,  "ಸರಿ ನಿಮಗೆ ಎಷ್ಟು ಬೆಲೆಯ ಪಾದರಕ್ಷೆ ಬೇಕು" ಎನ್ನಲು ಆ ಯುವಕ "ಇದು ನನ್ನ ಮೊದಲನೆಯ ಸಂಬಳ... ನನಗೆ 12 ಸಾವಿರ ಬರುತ್ತದೆ. ಅದರಲ್ಲಿ ಅದು ಇದು ಎಂದು ಹೋಗಿ ಕೈಗೆ 10 ಸಾವಿರ ಬರುತ್ತದೆ. ಅದರಲ್ಲಿ 3 ಸಾವಿರ ಮನೆಗೆ ಕೊಡಬೇಕು... ಈಗ ಒಳ್ಳೆಯ ಪಾದರಕ್ಷೆಯನ್ನು  ಕೊಡಿ. ಬೆಲೆ ಒಂದು ವಿಚಾರವೇ ಅಲ್ಲ. ನನ್ನ ತಾಯಿ  ಕೂಲಿ ಕೆಲಸ ಮಾಡುತ್ತಾರೆ. ಅವರೆಂದೂ ಪಾದರಕ್ಷೆ ಹಾಕಿದವರಲ್ಲ. ಕಲ್ಲು ಮುಳ್ಳುಗಳಲ್ಲಿ ಬರಿಗಾಲಲ್ಲಿ ನಡೆದು ಕಷ್ಟಪಟ್ಟು ದುಡಿದು ನನ್ನನ್ನು ಓದಿಸಿ ಕೆಲಸ ಸಿಗುವಂತೆ ಮಾಡಿದ ದೇವರು. ಅವರಿಗೆ ಸರಿಯಾಗುವ ಪಾದರಕ್ಷೆ ಕೊಡಿ" ಎಂದನು.

ಮಾಲೀಕ ಒಂದು ಜೊತೆ ಒಳ್ಳೆಯ ಪಾದರಕ್ಷೆಯನ್ನು ಕೊಟ್ಟು ಇದರ ಬೆಲೆ 800 ರೂಪಾಯಿಗಳು ಎನ್ನುತ್ತಲೇ ಗಿರಾಕಿ ಸಂತೋಷದಿಂದ ಅದನ್ನು ಪ್ಯಾಕ್ ಮಾಡಲು ಹೇಳಿ ತನ್ನ ಮೊದಲ ಸಂಬಳದಿಂದ ಅದನ್ನು ಕೊಟ್ಟು ಸಂತಸದಿಂದ  ಅಂಗಡಿಯಿಂದ ಹೊರಡಲನುವಾದ.

ಆಗ ಮಾಲೀಕ,  "ಅಯ್ಯ ನಿಮಗೆ ಅಭ್ಯಂತರ ಇಲ್ಲವಾದರೆ ನನಗೆ ಆ ಪಾದರಕ್ಷೆಯ ನಕ್ಷೆ ಬರೆದ ಕಾಗದವನ್ನು ಕೊಡಿ" ಎಂದ. ಯುವಕ ಅದನ್ನು ಕೊಡಲು, ಅಂಗಡಿಯ ಮಾಲೀಕ ಮತ್ತೊಂದು ಜೊತೆ ಸುಂದರವಾದ ಪಾದರಕ್ಷೆಯನ್ನು ಕೊಟ್ಟು "ಇದನ್ನು ನಿಮ್ಮ ತಾಯಿಯವರಿಗೆ, ಅಂದರೆ ನನ್ನ ತಂಗಿಗೆ ನನ್ನ ಉಡುಗೊರೆಯಾಗಿ ಕೊಡಿ. ನಿಮ್ಮಂತ ಒಳ್ಳೆಯ ಹುಡುಗನನ್ನು ಹೆತ್ತು ಸರಿದಾರಿಯಲ್ಲಿ ಬೆಳೆಸಿದ ಅವರು ಮಹಾತಾಯಿ." ಎಂದನು.

ಯುವಕನು ಅದನ್ನು ಸಂತಸದಿಂದ ಪಡೆದು ಹೊರಟ ನಂತರ ಅಂಗಡಿಯಲ್ಲಿದ್ದ ಕೆಲಸದ ಹುಡುಗ ಮಾಲೀಕನನ್ನು ಒಂದು ವಿಧವಾಗಿ ನೋಡಿದ. 
ಆಗ ಮಾಲೀಕನು,  "ನೋಡು ಈ ನಕ್ಷೆಯನ್ನು ನಾವು ದಿನಾಲು ಪೂಜೆ ಮಾಡುವ ದೇವರ ಮೂರ್ತಿಯ ಬಳಿಯಿಡು. ಇದು ಮಹಾಲಕ್ಷ್ಮಿಯ ಪಾದಗಳು. ಇದಕ್ಕೆ ಪೂಜೆ ಮಾಡಿದರೆ ನಮ್ಮ ವ್ಯಾಪಾರ ವ್ಯವಹಾರ ವೃದ್ಧಿಯಾಗಬಹುದು.  ಎಷ್ಟು ಜನ ತಾಯಂದಿರು ಮಕ್ಕಳಿಗೆ ಸರಿದಾರಿ ತೋರಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡುತ್ತಾರೋ ಆ ನಾಡು ದೇಶ ಅಭಿವೃದ್ಧಿಯಾಗುತ್ತದೆ" ಎಂದನು.