May 5, 2020

ಶಿವ ಸಂಕಲ್ಪ ಸೂಕ್ತ. ಶ್ಲೋಕ ೫, ೬



The Adiyogi Shiva Statue – Booluvampatti, India - Atlas Obscura Images may be subject to copyright.

ಶಿವ ಸಂಕಲ್ಪ ಸೂಕ್ತ. ಶ್ಲೋಕ ೫, ೬

ಶ್ಲೋಕ - 5 
ಸಂಸ್ಕೃತದಲ್ಲಿ :

ಯಸ್ಮಿನ್ ಋಕ್ಸಾಮ ಯಜೂಂಷಿ
ಯಸ್ಮಿನ್ ಪ್ರತಿಷ್ಠಿತಾಃ ರಥನಾಭಾವಿವಾರಾಃ|
ಯಸ್ಮಿನ್ಚಿತ್ತಂ ಸರ್ವಮೋತಂ ಪ್ರಜಾನಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು||೫

ಕನ್ನಡದಲ್ಲಿ :

ರಥಗಾಲಿಯರೆಗಳೊಲು
ವೇದಗಳೇನನಾಶ್ರಯಿಸಿಹವೊ
ಯಾರ ಚಿತ್ತವೆಲ್ಲರ ಬುದ್ಧಿಯನಾಳ್ವುದೋ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಆ ಮನಸ್ಸು ರಥದ ಚಕ್ರದ ಕೇಂದ್ರ ಹಾಗೂ ಅದರ ಕಡ್ಡಿಗಳೆ ಋಗ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು ಮತ್ತು ಚಕ್ರದ ಅಚ್ಚು ಜ್ಞಾನವನ್ನು ಪ್ರತಿನಿಧಿಸುತ್ತದೆ ಹಾಗೂ ಇಂದ್ರಿಯಗಳೆಂಬ ಅಶ್ವಗಳು ರಥವನ್ನು ಈ ರೀತಿಯಾಗಿ ಎಳೆಯುತ್ತಿದೆ. ಆ ನನ್ನ ಮನಸ್ಸು ಸದಾ ಒಳ್ಳೆಯ ಭಾವನೆಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಯಾವ ಮನಸ್ಸಿನಲ್ಲಿ ಋಗ್ವೇದದ ಶ್ಲಾಘನೆಗಳು, ಸಾಮವೇದದ ಸ್ತೋತ್ರ ಮತ್ತು ಕೀರ್ತನೆಗಳು ಮತ್ತು ಯಜುರ್ವೇದ ಧರ್ಮಾಚರಣೆಗೆ ಸಂಬಂಧಿಸಿದ ಗಾಯನಗಳು ಸ್ಥಾಪಿಸಲ್ಪಟ್ಟಿರುವುದೋ --- ಆ ಮನಸ್ಸಿನ ಸ್ವಾಸ್ಥ್ಯ ಮತ್ತು ಆರೋಗ್ಯದೊಂದಿಗೆ ವೇದಗಳ ಮೂರು ಹಂತದ ಜ್ಞಾನವು ಮತ್ತು ಆ ಮನಸ್ಸಿನಲ್ಲಿ ಸಮಸ್ತ ವಿಶ್ವವೂ ಸ್ಥಾಪಿಸಲ್ಪಟ್ಟಿರುವುದು.

ಛಾಂದೋಗ್ಯೋಪನಿಷತ್ತಿನ ಒಂದು ಮಂತ್ರದ ಪ್ರಕಾರ :
"ಓ ! ಶಾಂತಿ ಹಾಗೂ ಪ್ರೀತಿಯ ಮನಸ್ಸು ಆಹಾರದಿಂದಾಗಿದೆ". 6.1-16

ವೇದಮಂತ್ರಗಳನ್ನು ಪಠಿಸುವ ಶಕ್ತಿಯು ಮನಸ್ಸಿನ ಆರೋಗ್ಯ ಮತ್ತು ಸ್ವಸಾಮರ್ಥ್ಯಗಳಿಂದಾಗಿ ಮಾತ್ರವೆಂದು ವಿವರಿಸಲಾಗಿದೆ.
ಅದು ಹೇಗೆ ಸಾಧ್ಯ ? ಈ ಕೆಳಗಿನ ಒಂದು ದೃಷ್ಟಾಂತವನ್ನು ಗಮನಿಸೋಣ :

ರಥದ ಚಕ್ರದ ಮಧ್ಯಬಾಗದಲ್ಲಿ ಕಡ್ಡಿಗಳನ್ನು ಸ್ಥಾಪಿಸಿರುವಂತೆ, ಪದಗಳ ಜಾಲವೂ ಮನಸ್ಸಿನಲ್ಲಿ ಸ್ಥಾಪಿಸಲ್ಪಟ್ಟಿದೆ.
ಮುಂದುವರೆದು, ವಸ್ತ್ರದಲ್ಲಿ ದಾರಗಳ ಸಮೂಹವನ್ನು ಹೆಣೆದು ನೇಯ್ದಿರುವಂತೆ ಎಲ್ಲ ವಿಷಯಗಳು / ವಸ್ತುಗಳ ಬಗೆಗಿನ ನಿಖರವಾದ ಮತ್ತು ಸುಸಂಗತವಾದ ಜೀವಿಗಳ ಅರಿವಿನ ಬಗೆಗಿನ ಸಂಪೂರ್ಣ ಜ್ಞಾನವು ಮನಸ್ಸಿನಲ್ಲಿ ನಿಖರವಾಗಿ ಹೆಣೆದು ಅದರಲ್ಲೇ ಸ್ಥಳಾಂತರಿಸಲಾಗಿದೆ.

ಜ್ಞಾನವು ಅಂತರಂಗದಿಂದ ಉದಯಿಸುವುದು ಮನಸ್ಸಿನ ಸ್ವಾಸ್ಥ್ಯದ ಸ್ಥಿತಿ ಮತ್ತು ಸ್ವಸ್ಥಿರತೆಯ ಮೇಲೆ ಮಾತ್ರ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಬೇಕು; ಆತಂಕ ಮತ್ತು ಗೊಂದಲದಿಂದ ಕೂಡಿದ ಮನಸ್ಸಿನಲ್ಲಿ ಜ್ಞಾನವು ಇರುವುದಿಲ್ಲ.
ಅಂಥಹ ನನ್ನ ಮನಸ್ಸು ಸದಾ ಶಿವ-ಸಂಕಲ್ಪದಲ್ಲಿ, ಶಮನಗೊಳಿಸಿದ ಕ್ರಿಯೆಗಳಲ್ಲಿ ಹಾಗೂ ಎಲ್ಲ ಕಾರ್ಯಾಚರಣೆಗಳೂ ಶಾಂತಿ ಹಾಗೂ ನೆಮ್ಮದಿಯಿಂದಿರುವುದು.

ವ್ಯಾಖ್ಯಾನ - 2 :

ಋಗ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು ಸ್ಥಿರಗೊಳಿಸಿದ ಮನಸ್ಸು ರಥದ ಚಕ್ರದ ಕೇಂದ್ರದಲ್ಲಿನ ಕಡ್ಡಿಗಳಂತೆ ಎಲ್ಲ ದಿಕ್ಕಿನಿಂದಲೂ ಸ್ಥಿರವಾಗಿದೆ,
ಮನಸ್ಸಿನಲ್ಲಿ ಜೀವಿಗಳ ಬಗೆಯ ಅರಿವು ಎಲ್ಲ ವಿಷಯ / ವಸ್ತುಗಳು ಹೇಗೆ ಕಂಠೀಹಾರದ ದಾರದಲ್ಲಿ ಒಡವೆಗಳು ಹೆಣೆದುಕೊಂಡಿರುವುದೋ ಹಾಗೆ ಹೆಣೆದುಕೊಂಡಿರುವುದು 
--- ಅಂಥಹ ನನ್ನ ಮನಸ್ಸು , ವೇದಗಳಂಥ ನೈಜ ಗ್ರಂಥಗಳ ಬಗೆಗೆ ವಿವರಿಸುವ ಧೃಢನಿಶ್ಚಯವು ಸದಾ ತುಂಬಿರಲಿ.

ಓ! ಮಾನವ ಜೀವಿಗಳೆ, ನೀವು ಜ್ಞಾನದಿಂದ ಪರಿಶುದ್ಧರಾಗಿ ಮತ್ತು ಧಾರ್ಮಿಕ ವರ್ತನೆಗಳಾದ ಆಂತರಿಕ ಸಾಧನೆಗಳು, ಮನಸ್ಸುಗಳಿಂದ ವರ್ತಿಸುವುದು ಉತ್ತಮವಾದದ್ದು -
--- ಅವುಗಳ ಸ್ವಾಸ್ಥ್ಯ ಮತ್ತು ಸ್ವಸ್ಥಿರತೆ ಮಾತ್ರವೇ  ವೇದಗಳ ಬಗ್ಗೆ ಸ್ಥಾಪಿಸಿ ಮತ್ತು ಸದ್ವರ್ತನೆಯ ವಿಧಾನಗಳ ವಿವೇಕವು ಸೇರಿಕೊಂಡು ಜ್ಞಾನಗಳ ವೈಜ್ಞಾನಿಕ ಅಡಿಪಾಯಗಳಿಗೆ ಕಾರಣವು.

ಶ್ಲೋಕ - 6 
ಸಂಸ್ಕೃತದಲ್ಲಿ :

ಸುಸಾರಥಿರಶ್ವಾನಿವ ಯನ್ಮನುಷ್ಯಾಣ
ನೇನೀಯತೇಭೀಶುಭಿರ್ವಾಜಿನ ಇವಾ|
ಹ್ರೌಪ್ರತಿಷ್ಠಿತಂ ಯದಜಿರಂ ಜವಿಷ್ಠಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು,||೬

ಕನ್ನಡದಲ್ಲಿ :

ಮನುಜರನು ರಥಹಯ ನಿಯಂ-
ತ್ರಿಸುವಸಾರಥಿಯೊಲಾರು ನಿಯ -
ಮಿಪರೋ ಸರ್ವವ್ಯಾಪಿಯಹ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಹೇಗೆ ನುರಿತ ಸಾರಥಿಯು ಅಶ್ವಗಳನ್ನು ತನ್ನ ಆದೇಶದಂತೆ ಓಡಿಸಿ ಅವುಗಳು ತಾನೆಲ್ಲಿಗೆ ಹೋಗಬೇಕೋ ಅಲ್ಲಿಗೇ ಅವುಗಳನ್ನೂ ಕೊಂಡೊಯ್ಯುವಂತೆ ಮನಸ್ಸೂ ಕೂಡಾ ಮನುಷ್ಯನನ್ನು ಅವನ ಆಸೆಗಳೆಡೆಗೆ ಮತ್ತು ಪಶು ಪ್ರವೃತ್ತಿಗಳನ್ನು ನಿರ್ಬಂಧಿಸುವುದರೆಡೆಗೆ ಮಾರ್ಗದರ್ಶನ ಮಾಡಿ ಅದು ಹೃದಯದಲ್ಲಿ ನೆಲೆಸಿ ಅವನ ಅಮರತ್ವ ಮತ್ತು ಪ್ರಕ್ಷುಬ್ದತೆಗಳಿಂದ ಬಿಡುಗಡೆ ಹೊಂದಿದಂಥಹ ನನ್ನ ಮನಸ್ಸು ಸದಾ ಒಳ್ಳೆಯ ಭಾವನೆಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಕೇವಲ ಮನಸ್ಸೇ ಮನುಷ್ಯನನ್ನು (ವ್ಯಾಖ್ಯಾನಕಾರರ ಪ್ರಕಾರ ಮನುಷ್ಯ ಎಂಬುದು ಮೂಲದಲ್ಲಿ ಎಲ್ಲ ಜೀವಿಗಳನ್ನೂ ಒಳಗೊಂಡ ಕೇವಲ ಒಂದು ಸಾಮಾನ್ಯ ಪದ ಮಾತ್ರ ) ಇಲ್ಲಿಂದ ಅಲ್ಲಿಗೆ ಮಿತಿಮೀರಿ ಮನಸ್ಸಿನ ಪ್ರೇರೇಪಣೆಯಂತೆ ನಡೆಸುತ್ತದೆ.
ಅದು ಹೇಗೆ ? ಇಲ್ಲಿದೆ ಒಂದು ಉದಾಹರಣೆ : ನುರಿತ ಸಾರಥಿಯು ಅಶ್ವಗಳನ್ನು ಚಾವಟಿಯ ಮೂಲಕ ನಡೆಸುತ್ತಾನೆ.
ಎರಡನೇ ಉದಾಹರಣೆ : ನುರಿತ ಸಾರಥಿಯು ಅಶ್ವಗಳನ್ನು ಹತೋಟಿಯಲ್ಲಿಟ್ಟುಕೊಂಡು ಲಗಾಮಿನ ಸಹಾಯದಿಂದ ನಡೆಸುವನು.
ಇಲ್ಲಿ ಎರಡು ಉದಾಹರಣೆಗಳಿವೆ. ಮೊದಲನೇ ಉದಾಹರಣೆಯಲ್ಲಿ "ನಡೆಸುವುದು" ಮತ್ತು ಎರಡನೆಯದರಲ್ಲಿ " ಹತೋಟಿಯಲ್ಲಿಟ್ಟುಕೊಳ್ಳುವುದು". ಹೇಗೆ ಸಾರಥಿಯು ಅಶ್ವಗಳನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವನೋ ಅದೇ ರೀತಿ ಮನಸ್ಸು ಕೂಡಾ ಜೀವಿಯನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವುದು.
ಈ ವಿಧದಲ್ಲಿ ವಾಸಿಸಿರುವ ಮನಸ್ಸು, ಹೃದಯದಲ್ಲಿ ಸ್ಥಾಪಿಸಿದೆ. ಏಕೆಂದರೆ ಇದು ಹೃದಯದಲ್ಲಿ ಮಾತ್ರ ಕಂಡುಬರುವುದು ಮತ್ತು ಅರಿವಾಗುವುದು. ( ಇದು ಯೋಗಿಗಳು ವಿಷೇಶವಾದ ಧ್ಯಾನ ಮಾರ್ಗದ ಮೂಲಕ ಮನಸ್ಸನ್ನು ಅರಿತುಕೊಳ್ಳುವರು).
ಈ ಮನಸ್ಸು ಬಾಲ್ಯ, ಯೌವನ ಮತ್ತು ವಾರ್ಧಕ್ಯದ ಸ್ಥಿತಿಗಳಲ್ಲಿಯೂ ಸಹ ಮಾರ್ಪಾಡಾಗದೇ ಇರುವುದರಿಂದ ಅದು ಮುಪ್ಪಾಗದು.
ಈ ಕೆಳಗೆ ವಿವರಿಸಿರುವ ಉಲ್ಲೇಖದಂತೆ ಇದು ಅತ್ಯಂತ ವೇಗದ ಶಕ್ತಿ : -
" ಗಾಳಿಗಿಂತ ತ್ವರಿತವಾದದ್ದು ಬೇರೊಂದಿಲ್ಲ; ಮನಸ್ಸಿಗಿಂತ  ವೇಗವಾದದ್ದು ಮತ್ತೊಂದಿಲ್ಲ".

ಆ ವಿಧದ ಸುಂದರವಾದ ಮತ್ತು ದೈವೀ ನಿರ್ಣಯದ ಮನಸ್ಸು ಸದಾ ಶಿವನ ವಿಚಾರಗಳಿಂದ ತುಂಬಿರಲಿ.

ವ್ಯಾಖ್ಯಾನ - 2 :

ಹೇಗೆ ನುರಿತ ಮತ್ತು ಚುರುಕಾದ ಸಾರಥಿಯು ಕಡಿವಾಣದ ಸಹಾಯದಿಂದ ಕುದುರೆಗಳನ್ನು ಎಲ್ಲ ದಿಕ್ಕುಗಳೆಡೆಗೂ ಓಡಿಸುವನೋ ಅದೇ ರೀತಿ ಮನಸ್ಸೂ ಸಹ ಜೀವಿಗಳಾದ ಮನುಷ್ಯರನ್ನು ವೇಗವಾಗಿ ಎಲ್ಲ ದಿಕ್ಕುಗಳೆಡೆಗೂ ಓಡಿಸುವುದು.
ಹೇಗೆ ಸಾರಥಿಯು ವೇಗವಾಗಿ ಚಲಿಸುತ್ತಿರುವ ಕುದುರೆಗಳನ್ನು ಲಗಾಮಿನ ಸಹಾಯದಿಂದ ಹತೋಟಿಯಲ್ಲಿಟ್ಟುಕೊಂಡು ಅವುಗಳನ್ನು ಹತೋಟಿಯಲ್ಲಿಡುವನೋ ಅದೇ ರೀತಿ ಮನಸ್ಸೂ ಸಹ.
ಈ ಮನಸ್ಸು ಹೃದಯದಲ್ಲಿ ಸ್ಥಾಪಿಸಲ್ಪಟ್ಟು, ವಿಷಯಗಳೆಡೆಗೆ / ಗುರಿಗಳೆಡೆಗೆ  ವಯಸ್ಸಾದ ಪ್ರಕ್ರಿಯೆಯಂತೆ ಮತ್ತು ಇದು ವೇಗವಾದಂತೆ ಯಾವುದೇ ಶರತ್ತುಗಳಿಲ್ಲದೇ  ಪ್ರಚೋದಿಸುವುದು.
ಅಂಥಹ ನನ್ನ ಮನಸ್ಸು ಮಂಗಳಕರಕ್ಕೆ ಸಮಾನವಾದ ಸಂಯಮದಲ್ಲಿ ಒಲವನ್ನು ಕಂಡುಕೊಳ್ಳಲಿ.  ಈ ಶ್ಲೋಕದಲ್ಲಿ ಎರಡು ಉಪಮೆಗಳಿವೆ.
ಮನಸ್ಸು ಗತ್ಯಂತರವಿಲ್ಲದೆ ಮನುಷ್ಯನನ್ನು, ಹೇಗೆ ಸಾರಥಿಯು ಕುದುರೆಗಳನ್ನು ಕಡಿವಾಣದ ಸಹಾಯದೊಂದಿಗೆ ಕರೆದೊಯ್ಯುತ್ತಾನೋ, ಹಾಗೆ ಅವನ ಆಸಕ್ತಿಯ ವಿಷಯಗಳೆಡೆಗೆ ಮತ್ತು ಚಟಗಳೆಡೆಗೆ ಮಾರ್ಗದರ್ಶನ ಮಾಡುವುದು. ಮೂರ್ಖರು ಈ ವಿಧದ ಮನಸ್ಸನ್ನು ಅನುಸರಿಸುವರು ಆದರೆ ಬುದ್ಧಿವಂತರು ಅದನ್ನು ತಮ್ಮ ಹತೋಟಿಯಲ್ಲಿಟ್ಟು ಕೊಳ್ಳುವರು.

ಈ ಮನಸ್ಸು -
--- ಪರಿಶುದ್ಧವಾಗಿದ್ದಾಗ ಸುಖ ಹಾಗೂ ಸಂತೋಷಕ್ಕೆ ಕಾರಣವಾಗುತ್ತದೆ ಮತ್ತು ಮಲಿನವಾದಾಗ ದುಃಖಕ್ಕೆ ಕಾರಣವಾಗುವುದು, ಮತ್ತು
--- ಈ ಮನಸ್ಸನ್ನು ಗೆದ್ದಾಗ, ಅದು ಸಾಧನೆ ಮತ್ತು ಸಿದ್ಧಿಗಳನ್ನು ನೀಡುತ್ತದೆ; ಗೆಲ್ಲಲಾಗದಿದ್ದಾಗ ಇದು ವೈಫಲ್ಯಗಳನ್ನು ಉಂಟುಮಾಡುತ್ತದೆ.
ಈ ವಿಧದ ವರ್ತನೆಗಳು ಮನುಷ್ಯನನ್ನು ತನ್ನೆಡೆಗೆ ಸೆಳೆದು ಮತ್ತು ಈ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು.

ಲೇಖನದ ಮೂಲ:
ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ
ಸಂಗ್ರಹ : ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ

No comments:

Post a Comment

If you have any doubts. please let me know...