May 8, 2020

ನಿಂಬೆಹಣ್ಣಿನ ದೀಪ ಯಾರು ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಹಚ್ಚಬಾರದು


ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಹಾಗು ಇದರ ಮಹತ್ವ  ತಿಳಿದಿರಬೇಕು …? 


ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ.

ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು, ನಿರುತ್ಸಾಹ, ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತುದೋಷಕ್ಕೆ, ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ ತೊಂದರೆ ಯಾಗುತ್ತಿದ್ದರೆ, ಶತೃಗಳ ಕಾಟ ಹೆಚ್ಚಿದ್ದರೆ, ಮದುವೆ ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ಅನುಭವಿಸುತಿದ್ದರೆ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.
ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು.
ನಿಂಬೆ ಹಣ್ಣನ್ನು ದೀಪದ ರೂಪದಲ್ಲಿಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಮಿಶ್ರಣ ಮಾಡಿ ದೇವರಿಗೆ ಸಮರ್ಪಿಸಿದರೆ ನಮ್ಮ ಸಮಸ್ಯೆಗಳು ನಿವಾರಣೆಯಾಗುವುದು. ಈ ದೀಪಗಳು ಪಾರ್ವತಿ ದೇವಿಯ ನಾನಾ ರೂಪದಲ್ಲಿ ನೆಲೆಸಿರುವ ದೇವಿ ದೇವಾಲಯಗಳಲ್ಲಿ ಹಚ್ಚುವುದು ಒಳ್ಳೆಯದು. ಹಾಗೆಯೇ ಈ ನಿಂಬೆಹಣ್ಣಿನ ದೀಪವನ್ನು ಸರಿಯಾದ ಸಮಯದಲ್ಲಿ ಸರಿಯಾದ ವಾರದಲ್ಲಿ ಹಚ್ಚಬೇಕು.
ಮಂಗಳವಾರ ದಿನದಂದು ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 11.00ರಿಂದ 12.30 ವರೆಗೆ
ನಿಂಬೆದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ.
ನಿಂಬೆಹಣ್ಣಿನ ದೀಪವನ್ನು ಹಚ್ಚಿಸಿ ನಂತರ ದೇವಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿಸಬೇಕು.
ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆರ್ಶಿವಾದವನ್ನು ತೆಗೆದುಕೊಳ್ಳಬೇಕು.ಯಾರಿಗೆ ಸಮಸ್ಯೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರು ಬೇಕಾದರು ದೀಪವನ್ನು ಹಚ್ಚಬಹುದು.
ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು



ನಿಂಬೆ ಹಣ್ಣಿನ ದೀಪ ಹಚ್ಚಿದ ನಂತರ ದೇವಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿಸಬೇಕು. ಪೂಜೆಯ ಬಳಿಕ ಹೆಂಗಸರು , ಅಲ್ಲಿಗೆ ಬಂದಿರುವಂತಹ ಸುಮಂಗಲಿಯರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಹಾಗೂ ಆದಷ್ಟು ಈ ರೀತಿಯ ದೀಪವನ್ನು ದೇವಸ್ಥಾನಗಳಲ್ಲಿ ಹಚ್ಚುವುದು ತುಂಬಾ ಒಳ್ಳೆಯದು. ಈ ರೀತಿಯ ದೀಪವನ್ನು ಆರೋಗ್ಯ ಸರಿ ಇಲ್ಲದೇ ಇರುವವರು ಸೂತಕ ಇರುವವರು ಹಚ್ಚಬಾರದು. ಹಾಗೂ ಮಕ್ಕಳ ಹುಟ್ಟುಹಬ್ಬದಂದು ಮದುವೆಯಾದ ನಂತರದ ದಿನಗಳು ಈ ರೀತಿಯ ದೀಪಗಳನ್ನು ಹಚ್ಚಬಾರದು. ಈ ರೀತಿಯಾಗಿ ನಿಂಬೆಹಣ್ಣಿನ ದೀಪವನ್ನು ಹಚ್ಚುವುದರ ಮೂಲಕ ನಮ್ಮ ಇಷ್ಟಾರ್ಥಗಳನ್ನು ಹೀಡೇರಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.


No comments:

Post a Comment

If you have any doubts. please let me know...