May 4, 2020

ಶಿವ ಸಂಕಲ್ಪ ಸೂಕ್ತ ಶ್ಲೋಕ 3, 4.


ಶಿವ ಸಂಕಲ್ಪ ಸೂಕ್ತ ಶ್ಲೋಕ 3, 4.

ಶ್ಲೋಕ - 3

 ಸಂಸ್ಕೃತದಲ್ಲಿ :

ಯೌಪ್ರಜಾನಾಮುತ ಚೇತೋ ದೃಷ್ಟಿಶ್ಚ
ಯಜ್ಯೋತಿರಂತರಾಮೃತಂ ಪ್ರಜಾಸು|
ಯಸ್ಮಾನ್ನ ಋತೇ ಕಿಂಚನ ಕರ್ಮ ಕ್ರಿಯತೇ
ತನ್ಮೇ ಮನಃ ಶಿವಸಂಕಲ್ಪಮಸ್ತು||3

ಕನ್ನಡದಲ್ಲಿ :

ಅರಿವಿನ ಸಾರ ಬೆಳಕಿನಂತರ
ಸಕಲ ಜೀವಿಗಳೊಳಗು ಏನಿಲ್ಲ -
ದಾವೊಂದೂ ಚಲಿಸದೊ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ


ವಿವರಣೆ :

ಆ ಮನಸ್ಸು ಇಂದ್ರಿಯಗಳ ಬೇಡಿಕೆಗಳನ್ನು ಕಡೆಗಣಿಸಿ ಕೇವಲ ಜ್ಞಾನದೆಡೆಗೆ ಮಾತ್ರ ಕೇಂದ್ರೀಕರಿಸಿ ಮತ್ತು ವಿಶ್ವದ 
(ಪದಾರ್ಥಗಳು. ಸತ್ಯತೆಯ ಅವಶ್ಯವಾದ ಘಟಕಗಳು. ಬೇರೆ ಬೇರೆ ವೈಚಾರಿಕ ನೆಲೆಗಳು ಇವುಗಳನ್ನು ಬೇರೆಯಾಗಿ ಪರಿಗಣಿಸುತ್ತವೆ) ಮೂಲಧಾತುಗಳನ್ನು ಅರಿತಿರುವ, ನಿರಂತರ ಮತ್ತು ಅಮರ, ಹಾಗೂ ಮನುಷ್ಯನ ಅಂತರಂಗದಲ್ಲಿರುವ ಆದರೆ ಹೊರಗಡೆ ಇರುವುದನ್ನು ಬೆಳಗಿಸುವ ಸಾಮರ್ಥ್ಯವುಳ್ಳದ್ದು, ಹಾಗೂ ಅದಿಲ್ಲದೆ ಯಾವ ಕ್ರಿಯೆಗಳೂ ಅಸಾಧ್ಯವಾದ, ನನ್ನ ಮನಸ್ಸೇ ನಿನ್ನಲ್ಲಿ ಉತ್ತಮವಾದ ಉದ್ದೇಶಗಳಿರಲಿ.

ವ್ಯಾಖ್ಯಾನ :

ಎಲ್ಲ ಜೀವಿಗಳಲ್ಲಿ ವಿಶೇಷವಾದ ಅರಿವನ್ನು ಉತ್ಪತ್ತಿಮಾಡುವ ಮನಸ್ಸು, ಮಹೋನ್ನತ ಜ್ಞಾನವನ್ನು ಹೊಂದಲು ವಿಧಾನ ಮತ್ತು ಮಾಧ್ಯಮ.
ಈ ಮನಸ್ಸು ಸಂಪೂರ್ಣವಾಗಿ ಮತ್ತು ಹೊಂದಿಕೊಳ್ಳುವ ಕಾರಣಗಳು ಸಾಮಾನ್ಯ ಜ್ಞಾನ ( ನೇರವಾದ ಗ್ರಹಿಕೆ ) ಮತ್ತು ವಿಶೇಷವೆರಡರ ಅರಿವು ( ತಾರ್ಕಿಕ ಪ್ರಕ್ರಿಯೆ ); ಇದೇ ಮನಸ್ಸು ಮಹೋನ್ನತ ಜ್ಞಾನವನ್ನು (ಋಷಿ ಮುನಿಗಳು ಮತ್ತು ದಿವ್ಯಜ್ಞಾನದಿಂದ ) ಸ್ವೀಕರಿಸುವ ಮಾಧ್ಯಮ.
ಈ ಮನಸ್ಸು ತಾಳ್ಮೆ ಮತ್ತು ಪುನರುಜ್ಜೀವನ ಶಕ್ತಿಗಳ ಪೋಷಿಸುವ ಒಂದೇ ಬಗೆಯಾದದ್ದು ( ಕಾರ್ಯ-ಕಾರಣಗಳ ವ್ಯತ್ಯಾಸವಿರದ) (ಧೃತಿ ಪದವನ್ನು ಆದಿಶಂಕರಾಚಾರ್ಯರು ತಮ್ಮ ವ್ಯಾಖ್ಯಾನಗಳಲ್ಲಿ -  "ನಮ್ಮಲ್ಲಿನ ಅಂತರಂಗದ ಅರಿವಿನ ಶಕ್ತಿಯಾದ ನಮ್ಮ ಇಂದ್ರಿಯಗಳ ಶಕ್ತಿಯು ಯಾವಾಗ ಸಂಪೂರ್ಣವಾಗಿ ಕ್ಷೀಣವಾಗುತ್ತದೋ, ಅದು ಆದರೂ ಈ ಶಕ್ತಿಯನ್ನು ತನ್ನಲ್ಲೇ ಪುನರುಜ್ಜೀವಿತಗೊಳಿಸಲು ಪ್ರೇರಣೆ ನೀಡುತ್ತದೆಂದು," ಸತತವಾಗಿ ವಾದಿಸುತ್ತಾರೆ. ಈ ಶಕ್ತಿಯ ಮೂಲವು ಮನಸ್ಸಿನಲ್ಲಿರುವುದು ಮತ್ತು ಶಕ್ತಿಯು ಕಾರ್ಯ-ಕಾರಣಗಳೆರಡರ ಪ್ರಭಾವ, ಹಾಗೂ ಒಂದಕ್ಕೊಂದರಂತೆ ಗುರುತಿಸಲಾಗುವುದು).

ಅದೇ ಮನಸ್ಸು ಅಂತರಂಗದ ಅಮರವಾದ ದೀಪವು ಅಂತರಂಗದಲ್ಲಿ ಎಲ್ಲ ಇಂದ್ರಿಯಗಳನ್ನು ಬೆಳಗಿಸುವಂತೆ ಕಾರ್ಯನಿರ್ವಹಿಸುತ್ತದೆ - ಅಮರವಾದದ್ದು, ಎಂದೆಂದಿಗೂ ಸಾವಿಲ್ಲದ್ದು, ಸ್ವಯಂ ಆತ್ಮದೊಂದಿಗೆ ಒಂದಾಗಿರುವುದು.
ಈ ಮನಸ್ಸಿಲ್ಲದೆ ಯಾವುದೇ ಕ್ರಿಯೆಯನ್ನೂ ಮಾಡಲಾಗುವುದಿಲ್ಲ ಏಕೆಂದರೆ ಇದರಲ್ಲಿ ಎಲ್ಲ ತೊಡಗಿಸಿಕೊಳ್ಳುವುದು ಮತ್ತು ಕ್ರಿಯೆಗಳ ಕಾರ್ಯಗಳಿಗೂ ಮುಂಚೆ ಮನಸ್ಸು ಮುಂದಾಗಿರುವುದು. ಈ ಮನಸ್ಸಿನ ಸ್ವಯಂ ಸ್ಥಿರತೆ ಮತ್ತು ಆರೋಗ್ಯವಿಲ್ಲದೆ ಎಲ್ಲ ಸಾಧ್ಯತೆಗಳೂ ಅನೂರ್ಜಿತವಾಗುವುದು.
ಅಂಥಹ ನನ್ನ ಮನಸ್ಸು ಸುಂದರವಾಗಿ ಮತ್ತು ದೈವೀ ನಿರ್ಣಯಗಳಿಂದ ಕೂಡಿ ಶಿವ ಚಿಂತನೆಯಲ್ಲಿ ತುಂಬಿರಲಿ.


ಶ್ಲೋಕ - 4 

ಸಂಸ್ಕೃತದಲ್ಲಿ :

ಯೇನೇದಂ ಭೂತಂ ಭುವನಂ ಭವಿಷ್ಯತ
ಪರಿಗೃಹೀತಮಮೃತೇನ ಸರ್ವಮಾ|
ಯೇನ ಯಜ್ಞಸ್ತಾಯತೇ ಸಪ್ತಹೋತಾ
ತನ್ಮೇ ಮನಃ ಶಿವಸಂಕಲ್ಪಮಸ್ತು||4

ಕನ್ನಡದಲ್ಲಿ :

ಯಾವುದೀ ಜಗದ ಭೂತ ಭವಿಷ್ಯ -
ವೆಲ್ಲವನು ಅರಿತಿಹುದೋ
ಸಪ್ತಹೋಮಾದಿಗಳಾವುದರೆಡೆಗೊ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಅದು ಮುಕ್ತಿಯ ( ಮನಸ್ಸು ಸಂಸಾರದೊಂದಿಗೆ ವ್ಯವಹರಿಸುತ್ತದೆ. ಇಷ್ಟೇ ಮುಖ್ಯವಾದದ್ದು ಇದೂ ಕೂಡಾ ಸಂಸಾರದ ಒಂದು ಭಾಗ ಮತ್ತು ಮುಕ್ತಿಯನ್ನು ಹೊಂದಿದ ಕೂಡಲೇ ಇದು ಅಪ್ರಸ್ತುತ ಹಾಗೂ ಅಸ್ಥಿತ್ವದಲ್ಲಿರುವುದಿಲ್ಲ. ) ಗುರಿಯವರೆಗೂ ಅಸ್ಥಿತ್ವದಲ್ಲಿರುವುದು, ವರ್ತಮಾನ ಮತ್ತು ಭವಿಷ್ಯದಲ್ಲಿ ಹಾಗೂ ಇದರ ಮೂಲಕವೇ ಯೋಗಿಗಳು ಅಮರತ್ವವನ್ನು ( ಗತಕಾಲ, ವರ್ತಮಾನ ಮತ್ತು ಭವಿಷ್ಯದ ನೈಜ ಸ್ವಭಾವಗಳನ್ನು ಅರಿತು ಯೋಗಿಗಳು ಸಾವನ್ನು ಗೆಲ್ಲುತ್ತಾರೆ. ) ಪಡೆಯುವರು, ಹಾಗೂ ಇದರ ಮೂಲಕ ಸಪ್ತರ್ಷಿಗಳು (ಅಗ್ನಿಸ್ಥೋಮವೆಂಬ ಯಜ್ಞದಲ್ಲಿ ಏಳು ಪುರೋಹಿತರು (ಹೋತ್ರಿಗಳು )  ಅಥವಾ ಬದಲಾಗಿ ಋಗ್ವೇದದಲ್ಲಿ ವಿವರಿಸಿರುವಂತೆ ಏಳು ಹೋತ್ರಿಗಳು, ಯಜುರ್ವೇದದಲಿ ತಿಳಿಸಿರುವಂತೆ ಏಳು ಅಧ್ವರ್ಯುಗಳು, ಸಾಮವೇದದಲ್ಲಿ ವಿವರಿಸಿರುವಂತೆ ಏಳು ಉದ್ಗತೃಗಳು, ಅಥರ್ವವೇದದಲ್ಲಿ ತಿಳಿಸಿರುವಂತೆ ಏಳು ಬ್ರಾಹ್ಮಣರು, ಯಜ್ಞದ ಯಜಮಾನ ಮತ್ತು ಅವನ ಪತ್ನಿ, ಮತ್ತು ದೇವರ ಹೋತ್ರನಾದ ಸ್ವಯಂ ಅಗ್ನಿ ಮತ್ತು ಕಾಣಿಕೆಗಳನ್ನು ತರುವರು. ಈ ಏಳು ಮಂದಿಯು ಯಾವುದೇ ಶೃತ ಯಜ್ಞದಲ್ಲೂ ಇರಲೇಬೇಕು) ಯಜ್ಞವನ್ನು ನಿರ್ವಹಿಸುತ್ತಾರೆ, ಆ ನನ್ನ ಮನಸ್ಸು ಸದಾ ಸದುದ್ದೇಶಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಮನಸ್ಸು ಯಾವುದರಿಂದ ಎಲ್ಲ ಕಡೆಗಳಿಂದ ಭೂತಕಾಲಕ್ಕೆ ಸಂಬಂಧಿಸಿದ ವಾಸ್ತವಿಕತೆ, ಪ್ರಸ್ತುತದ ಅಸ್ಥಿತ್ವದಲ್ಲಿರುವ ಪ್ರಪಂಚ ಮತ್ತು ಭವಿಷ್ಯತ್ತುಗಳನ್ನು ಗ್ರಹಿಸುವುದು
---  ಮನಸ್ಸು ತ್ರಿಕಾಲಕ್ಕೆ ಸಂಬಂಧಿಸಿದ ವಾಸ್ತವಿಕವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಇಂದ್ರಿಯಗಳು ಕೇವಲ ಪ್ರಸ್ತುತ ನೇರ ಗ್ರಹಿಕೆಗೆ ಮಾತ್ರ ಸೀಮಿತವಾಗಿರುತ್ತವೆ
--- ಈ ಮನಸ್ಸು ಅಮರ ಹಾಗೂ ಅವ್ಯಾಹತ
--- ಏಕೆಂದರೆ ಇಂದ್ರಿಯಗಳು ಮುಕ್ತಿಯೊಂದಿಗೆ ಅಳಿದುಹೋಗುತ್ತವೆ, ಆದರೆ ಮನಸ್ಸು ಮಾತ್ರ ನಾಶವಾಗದು.
ಮನಸ್ಸು ಸಪ್ತ ಉಪಾಸಕರ  ( ವೇದಗಳ ಆಚರಣೆಗಳಲ್ಲಿ ತಜ್ಞರು ಹಾಗೂ ವ್ಯಾಖ್ಯಾನಕಾರರು ತಮ್ಮ ಯಾಜ್ಞಿಕದ {ಧಾರ್ಮಿಕ } ಅನುವಾದಗಳ ಬಗೆಗೆ ಅನೇಕ ವೇಳೆ ಸೀಮಿತ ನಿಲುವನ್ನು ಹೊಂದಿರುತ್ತಾರೆ ಮತ್ತು ಆಧ್ಯಾತ್ಮಿಕವನ್ನು  ಹಾಗೂ ಆಧ್ಯಾತ್ಮಿಕದ ಆಳವಾದ ವ್ಯಾಖ್ಯಾನಗಳನ್ನು ಮೇಲಿಂದ ಮೇಲೆ ಕಡೆಗಣಿಸುತ್ತಾರೆ.  ಅವರುಗಳು ಈ ಸಪ್ತ ಉಪಾಸಕರ ದಿವ್ಯಕರ್ಮಗಳನ್ನು ಅಗ್ನಿಸ್ಥೋಮದ ಅಗ್ನಿ ವಿಧಿಗಳೆಂದೂ ಹಾಗೂ ಅದರಲ್ಲಿ ಹೋಮದ ಆಚರಣೆ ಮತ್ತು ಪ್ರಾರ್ಥನೆಗಳ ಮೂಲಕ ವಿಧಿಸಿರುವಂತೆ ಸೋಮರಸವನ್ನು ಉಪಯೋಗಿಸುವರು.  ಯೋಗಿಗಳ ಪ್ರಕಾರ ಪ್ರಸ್ತುತ ಸ್ತೋತ್ರದ ಅನುವಾದದ ಪ್ರಕಾರ ಸಪ್ತ ಉಪಾಸಕರು ನಮ್ಮ ಅಂತರಂಗದ ಏಳು ಶಕ್ತಿಗಳು. ) ದಿವ್ಯಕರ್ಮಗಳಿಂದ ವಿಸ್ತರಿಸುತ್ತದೆ.
--- ಆ ವಿಧದ ಸುಂದರವಾದ ಮತ್ತು ದೈವೀ ನಿರ್ಣಯದ ಮನಸ್ಸು ಸದಾ ಶಿವನ ವಿಚಾರಗಳಿಂದ ತುಂಬಿರಲಿ.

ವ್ಯಾಖ್ಯಾನ - 2 :

ಓ, ಮಾನವ ಜೀವಿಗಳೇ ! ಮನಸ್ಸು ಅವಿನಾಶಿ, ಪರಮಾತ್ಮನಲ್ಲಿ ಒಂದಾಗಿ, ಯಾವುದರಿಂದ ಕಾಲದ ಮೂರು ವಿಭಾಗಗಳಾದ ಭೂತ, ಭವಿಷ್ಯತ್ ಮತ್ತು ವರ್ತಮಾನಗಳಲ್ಲಿ ಎಲ್ಲ ನೈಜತೆಗಳು ಉಳಿಯುವುದೋ ಅದನ್ನು;
ಮನಸ್ಸು ಅಗ್ನಿಯ ದಿವ್ಯಕರ್ಮವಾದ ಅಗ್ನಿಸ್ಥೋಮ ಹಾಗೂ ಪ್ರಾಯೋಗಿಕ ವಿಜ್ಞಾನದ ಉಪಯೋಗಳ ಅನ್ವಯಿಸುವಿಕೆಯಿಂದ ವಿಸ್ತಾರವಾಗುತ್ತದೆ,
ಆ ನನ್ನ ಮನಸ್ಸು ಮೋಕ್ಷದೆಡೆಗಿನ ನಿರ್ಧಾರದಿಂದ ಕೂಡಿದ ಯೋಗದೊಂದಿಗೆ ವಿಲೀನವಾಗಲಿ.

ಓ, ಮಾನವ ಜೀವಿಗಳೇ ! ಮನಸ್ಸು ಪಳಗಿದ ಮತ್ತು ಮುಖ್ಯ ವಿಧಾನದೊಂದಿಗೆ  ಹಾಗೂ ಯೋಗದ ಉಪಮಾರ್ಗಗಳೊಂದಿಗೆ ಸಾಧಿಸಿ, ತ್ರಿಕಾಲಗಳ ( ಯೋಗಿಗಳನ್ನು ಅನೇಕವೇಳೆ ತ್ರಿಕಾಲಜ್ಞ ಅಥವಾ ತ್ರಿಕಾಲ ದರ್ಶಿನ್ -  ಪ್ರಸ್ತುತವನ್ನು ಮೀರಿ ಎಲ್ಲ ತ್ರಿಕಾಲಗಳನ್ನೂ ಅರಿಯಬಲ್ಲವ, ಎಂಬುದಾಗಿ ಉಲ್ಲೇಖಿಸಲಾಗಿದೆ .) ಜ್ಞಾತ್ರೃ ಹಾಗೇ ಸಮಸ್ತ ಸೃಷ್ಟಿಯ ಮತ್ತು ಈಡೇರಿಸುವ ಕ್ರಿಯೆಗಳ ಮಾಧ್ಯಮ, ವಾಸ್ತವಿಕ ಪೂಜೆ ಮತ್ತು ಜ್ಞಾನಗಳೊಂದಿಗೆ ತಿಳಿಯುವುದು
---- ಆ ಮನಸ್ಸನ್ನು ಪ್ರೀತಿ ಮತ್ತು ದಯೆಗಳೆಡೆಗೆ ಹರಿಸು.

ಮುಂದುವರೆಯುವದು........

ಲೇಖನದ ಮೂಲಗಳು :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ.


1 comment:

  1. ಧನ್ಯವಾದಗಳು ಗುರುಗಳೇ ಚನ್ನಾಗಿದೆ

    ReplyDelete

If you have any doubts. please let me know...