ಆಗಸ್ಟ್ 29, 2026

ಪರಿಹಾರಗಳು ಏಕೆ ಕೆಲಸ ಮಾಡುವುದಿಲ್ಲ

ಯಾವ ಪರಿಹಾರಗಳೂ ಕೈಗೂಡುತ್ತಿಲ್ಲ ಎಂದರೆ ಜಾತಕದಲ್ಲಿ 'ದೃಢ ಕರ್ಮ' (ಬದಲಾಯಿಸಲು ಸಾಧ್ಯವಿಲ್ಲದ ಪ್ರಾರಬ್ಧ ಕರ್ಮ) ಕೆಲಸ ಮಾಡುತ್ತಿದೆ ಎಂದರ್ಥ.

Sloka
"ಪೂರ್ವಜನ್ಮಾರ್ಜಿತಂ ಪಾಪಂ ವ್ಯಾಧಿರೂಪೇಣ ಬಾಧತೇ।
ತಚ್ಛಾಂತಿ ರೌಷಧೈರ್ದಾನೈರ್ಜಪಹೋಮಾರ್ಚನಾದಿಭಿಃ॥"

ಪೂರ್ವಜನ್ಮದಲ್ಲಿ ಮಾಡಿದ ಪಾಪಗಳು ಈ ಜನ್ಮದಲ್ಲಿ ರೋಗ, ಕಷ್ಟ ಮತ್ತು ಅಡೆತಡೆಗಳ ರೂಪದಲ್ಲಿ ಬಾಧಿಸುತ್ತವೆ. ಅವುಗಳನ್ನು ಔಷಧ, ದಾನ, ಜಪ, ಹೋಮ ಮತ್ತು ಅರ್ಚನೆಗಳಿಂದ ಶಾಂತಿ ಮಾಡಬೇಕು.
ಆದರೆ, ಪರಿಹಾರಗಳು ವಿಫಲವಾಗುತ್ತಿವೆ ಎಂದರೆ, ಜ್ಯೋತಿಷ್ಯ ಗ್ರಂಥಗಳು "ದೃಢ ಕರ್ಮ ನಿಬಂಧನ" ಎಂಬ ನಿಯಮವನ್ನು ಹೇಳುತ್ತವೆ. ಅಂದರೆ ಕೆಲವು ಕರ್ಮಗಳನ್ನು ಅನುಭವಿಸಲೇಬೇಕು, ಅವುಗಳಿಗೆ ಪರಿಹಾರವಿಲ್ಲ.

 ಮುಖ್ಯ ಭಾವಗಳು 💐
ಯಾವ ಪರಿಹಾರವೂ ಕೆಲಸ ಮಾಡದಿದ್ದಾಗ ಪ್ರಮುಖವಾಗಿ 5, 8 ಮತ್ತು 9ನೇ ಭಾವಗಳನ್ನು ಪರಿಶೀಲಿಸಬೇಕು:

5ನೇ ಭಾವ (ಪೂರ್ವ ಪುಣ್ಯ ಸ್ಥಾನ - most important)

5ನೇ ಮನೆ ನಿಮ್ಮ ಮಂತ್ರ ಸಿದ್ಧಿ ಮತ್ತು ದೈವ ಕೃಪೆಯನ್ನು ಸೂಚಿಸುತ್ತದೆ. ಈ ಮನೆಯಲ್ಲಿ ರಾಹು-ಕೇತು, ಶನಿ ಅಥವಾ ಗುಳಿಕನಂತಹ ಕ್ರೂರ ಗ್ರಹಗಳಿದ್ದರೆ ಅಥವಾ 5ನೇ ಮನೆಯ ಅಧಿಪತಿ 6, 8, 12ರಲ್ಲಿ Combust/Debilitated ನೀವು ಮಾಡುವ ಯಾವುದೇ ಪೂಜೆ, ಜಪ ಅಥವಾ ಪರಿಹಾರಗಳು ದೇವರಿಗೆ ತಲುಪುವುದಿಲ್ಲ. ನಿಮ್ಮ 'ಮಂತ್ರ ಶಕ್ತಿ' ಲಾಕ್ ಆಗಿರುತ್ತದೆ.

9ನೇ ಭಾವ (ಭಾಗ್ಯ ಮತ್ತು ಧರ್ಮ ಸ್ಥಾನ)

9ನೇ ಮನೆ 'ದೈವಬಲ' (Divine Grace) ಮತ್ತು ಪಿತೃಗಳ ಆಶೀರ್ವಾದವನ್ನು ತರುತ್ತದೆ. 9ನೇ ಮನೆಯಲ್ಲಿ ತೀವ್ರವಾದ ಪಿತೃ ದೋಷ (ಶನಿ-ರಾಹು ಯೋಗ ಅಥವಾ ಸೂರ್ಯ-ರಾಹು ಗ್ರಹಣ ಯೋಗ) ಇದ್ದರೆ, ದೇವಾನುದೇವತೆಗಳ ಅನುಗ್ರಹ ನಿಲ್ಲುತ್ತದೆ. ಪಿತೃಗಳ ಶಾಪವಿರುವಾಗ ದೇವತಾ ಪರಿಹಾರಗಳು ಫಲ ನೀಡುವುದಿಲ್ಲ.


8ನೇ ಭಾವ (ಕರ್ಮದ ರಹಸ್ಯ ಮತ್ತು ದೀರ್ಘಕಾಲದ ಶಾಪ)

• 8ನೇ ಮನೆ ಆಯುಷ್ಯ ಮಾತ್ರವಲ್ಲ, ಅದು 'ಅದೃಶ್ಯ ಶಕ್ತಿ' ಮತ್ತು ತೀವ್ರ ಪ್ರಾರಬ್ಧ ಕರ್ಮದ ಸ್ಥಾನ.
• 8ನೇ ಮನೆಯ ಅಧಿಪತಿ ಅತಿಯಾದ ಪಾಪಗ್ರಹಗಳ ದೃಷ್ಟಿ ಹೊಂದಿದ್ದರೆ ವ್ಯಕ್ತಿಯನ್ನು ಭ್ರಮೆಯಲ್ಲಿಡುತ್ತದೆ. ತಪ್ಪಾದ ಪರಿಹಾರಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ ಅಥವಾ ಸರಿಯಾದ ಪರಿಹಾರಗಳು ಅರ್ಧಕ್ಕೆ ನಿಲ್ಲುವಂತೆ ಮಾಡುತ್ತದೆ.

 ವರ್ಗ ಕುಂಡಲಿಗಳು 
ಕೇವಲ ಲಗ್ನ ಕುಂಡಲಿ (D1) ನೋಡಿದರೆ ಸಾಲದು. ಶಾಸ್ತ್ರದ ಪ್ರಕಾರ ಪರಿಹಾರಗಳ ವಿಫಲತೆಗೆ ಕೆಳಗಿನ ಎರಡು ಚಾರ್ಟ್ ಪರೀಕ್ಷಿಸಬೇಕು:

D-4 ಕುಂಡಲಿ (ಚತುರ್ಥಾಂಶ - ಭವಿಷ್ಯ/ಭಾಗ್ಯ): ಇದರಲ್ಲಿ ಪೂರ್ವಪುಣ್ಯದ ಸ್ಥಿತಿ ತಿಳಿಯುತ್ತದೆ.ಸುಖ ಮತ್ತು ಕರ್ಮದ ಅಡಿಪಾಯವನ್ನು ನೋಡಲು 4ನೇ ಮನೆಯಿಂದ 4ನೇ ಮನೆಯನ್ನು ನೋಡಬೇಕು (ಅಂದರೆ 7ನೇ ಮನೆ) ಮತ್ತು ಒಟ್ಟಾರೆ ಸುಖದ ಆಳವನ್ನು ತಿಳಿಯಲು D-4 ಕುಂಡಲಿಯನ್ನು ವಿಶ್ಲೇಷಿಸಬೇಕು. ನಿಮ್ಮ ಪೂರ್ವಪುಣ್ಯದ ಪುಣ್ಯದ ಫಲಗಳು ನಿಮಗೆ ಈ ಜನ್ಮದಲ್ಲಿ "ಸ್ಥಿರ ಆಸ್ತಿ, ನೆಮ್ಮದಿ ಮತ್ತು ಅದೃಷ್ಟದ ರೂಪದಲ್ಲಿ ಸಿಗುತ್ತವೆಯೇ?" ಎಂಬುದನ್ನು D-4 ನಿರ್ಧರಿಸುತ್ತದೆ.

• D-4 ನ ಲಗ್ನಾಧಿಪತಿಯು ಬಲವಾಗಿದ್ದರೆ (ಉಚ್ಚ ಸ್ವಕ್ಷೇತ್ರದಲ್ಲಿದ್ದರೆ), ವ್ಯಕ್ತಿಯು ಹುಟ್ಟುತ್ತಲೇ ಒಳ್ಳೆಯ ಪೂರ್ವಪುಣ್ಯ ಮತ್ತು ಅದೃಷ್ಟವನ್ನು ತಂದಿರುತ್ತಾನೆ.
• ಒಂದು ವೇಳೆ D-4 ಲಗ್ನಾಧಿಪತಿಯು 6, 8, 12ನೇ ಮನೆಗಳಲ್ಲಿದ್ದರೆ ಅಥವಾ ರಾಹು-ಕೇತುಗಳ ಜೊತೆಗಿದ್ದರೆ, ಪೂರ್ವಪುಣ್ಯದ ಕೊರತೆಯಿಂದಾಗಿ ಜೀವನದಲ್ಲಿ ಸ್ಥಿರತೆ ಸಿಗುವುದಿಲ್ಲ.

D-4 ಕುಂಡಲಿಯ 9ನೇ ಮನೆ (ಭಾಗ್ಯಸ್ಥಾನ)
• D-4 ನ 9ನೇ ಮನೆಯು ನಿಮ್ಮ ಪೂರ್ವಪುಣ್ಯದ ಫಲಗಳು ಭವಿಷ್ಯದಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸುತ್ತದೆ.
• ಇಲ್ಲಿ ಗುರು, ಶುಕ್ರ ಅಥವಾ ಬುಧನಂತಹ ಶುಭ ಗ್ರಹಗಳಿದ್ದರೆ, ನೀವು ಮಾಡುವ ಸಣ್ಣ ಪರಿಹಾರಗಳೂ ಕೂಡ ದೊಡ್ಡ ಮಟ್ಟದ ಅದೃಷ್ಟವನ್ನು (ಪೂರ್ವಪುಣ್ಯದ ಸಹಾಯದಿಂದ) ತಂದುಕೊಡುತ್ತವೆ.
• ಇಲ್ಲಿ ಶನಿ ಅಥವಾ ಸೂರ್ಯ ಇದ್ದರೆ ಭಾಗ್ಯೋದಯ ತಡವಾಗುತ್ತದೆ.

Deities of D-4
ಪರಾಶರ ಮಹರ್ಷಿಗಳು D-4 ನ ಪ್ರತಿ ಭಾಗಕ್ಕೂ ನಾಲ್ಕು ದೇವತೆಗಳನ್ನು ನಿಯೋಜಿಸಿದ್ದಾರೆ ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರ.
• ನಿಮ್ಮ ಪ್ರಮುಖ ಗ್ರಹಗಳು ಯಾವ ದೇವತೆಯ ಭಾಗದಲ್ಲಿವೆ ಎಂಬುದರ ಮೇಲೆ ನಿಮ್ಮ ಪೂರ್ವಪುಣ್ಯದ ಸ್ವರೂಪ ತಿಳಿಯುತ್ತದೆ.
• ಉದಾಹರಣೆಗೆ, ಗ್ರಹಗಳು 'ಸನಾತನ' ಭಾಗದಲ್ಲಿದ್ದರೆ ಆಧ್ಯಾತ್ಮಿಕ ಮತ್ತು ಪೂಜೆಗಳ ಮೂಲಕ ಭಾಗ್ಯ ಒಲಿಯುತ್ತದೆ.



D-9 ಕುಂಡಲಿ (ನವಾಂಶ ಕುಂಡಲಿ): ಲಗ್ನ ಕುಂಡಲಿಯಲ್ಲಿ ಗ್ರಹಗಳು ಚೆನ್ನಾಗಿದ್ದರೂ, ನವಾಂಶದಲ್ಲಿ ಅವು 6, 8, 12ನೇ ಮನೆಗೆ ಹೋಗಿ ನೀಚವಾಗಿದ್ದರೆ (Debilitated), ಬಾಹ್ಯವಾಗಿ ನೀವು ಮಾಡುವ ಪೂಜೆಗಳು ಒಳಗಿನಿಂದ (ಆತ್ಮದ ಮಟ್ಟದಲ್ಲಿ) ಫಲಿಸುವುದಿಲ್ಲ. ಪೂಜೆ ಮಾಡುವಾಗ ವ್ಯಕ್ತಿಗೆ ಮನಸ್ಸಿನಲ್ಲಿ ದೃಢವಾದ ಭಕ್ತಿ, ಶ್ರದ್ಧೆ ಅಥವಾ ಏಕಾಗ್ರತೆ ಇರುವುದಿಲ್ಲ. ಮಂತ್ರ ಜಪಿಸುವಾಗ ಮನಸ್ಸು ಎಲ್ಲೋ ಅಲೆಯುತ್ತದೆ. ಒಳಗಿನಿಂದ 'ಆತ್ಮ ಬಲ' ಸಿಗದ ಕಾರಣ, ಮಂತ್ರದ ಕಂಪನಗಳು (Vibrations) ಭಗವಂತನನ್ನು ತಲುಪುವುದಿಲ್ಲ. ಇದನ್ನು 'ಶೂನ್ಯ ಫಲ' ಎನ್ನಲಾಗುತ್ತದೆ.

ಯಾವಾಗ ಗ್ರಹಗಳ ರತ್ನ, ಮಂತ್ರ, ಮತ್ತು ಹೋಮಗಳು ವಿಫಲವಾಗುತ್ತವೆಯೋ, ಆಗ "ಅತಿ ದೃಢ ಕರ್ಮ" ನಿವಾರಣೆಗೆ ಕೇವಲ ಎರಡು ಮಾರ್ಗಗಳನ್ನು ಮಾತ್ರ ಸೂಚಿಸುತ್ತದೆ

• ಪ್ರಾಯಶ್ಚಿತ್ತ ದಾನ (Penance & Charity): ರಹಸ್ಯವಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಸಿದ ಜೀವಿಗಳಿಗೆ, ಅಂಗವಿಕಲರಿಗೆ ಅಥವಾ ಅನಾಥರಿಗೆ ಅನ್ನದಾನ ಮಾಡುವುದು.
• ನಿಷ್ಕಾಮ ಭಕ್ತಿ (Surrender): ಯಾವುದೇ ಫಲವನ್ನು ನಿರೀಕ್ಷಿಸದೆ ಕೇವಲ ಭಗವಂತನಿಗೆ ಶರಣಾಗುವುದು (ಶರಣಾಗತಿ ತತ್ವ).

ತಪ್ಪು ರತ್ನಗಳನ್ನು ಧರಿಸುವುದು, ತಪ್ಪು ಮಂತ್ರಗಳನ್ನು ಜಪಿಸುವುದು ಅಥವಾ ನಕಲಿ ಜ್ಯೋತಿಷಿಗಳ ಬಳಿ ಹೋಗಿ ಮೋಸ ಹೋಗುವಂತೆ ಜಾತಕವೇ ಪ್ರೇರೇಪಿಸುತ್ತದೆ.

D-4 ಕುಂಡಲಿಯಲ್ಲಿ ಭಾಗ್ಯಸ್ಥಾನ ಮತ್ತು 4ನೇ ಮನೆ ಕೆಟ್ಟಿದ್ದರೆ, ಅದು 'ವಾಸ್ತು ದೋಷ' ಅಥವಾ 'ಮನೆಯ ದೇವತೆಯ ಶಾಪ'ವನ್ನು (Kula Devatha Curse) ತೋರ್ಪಡಿಸುತ್ತದೆ.ಕುಲದೇವತೆಯ ಅನುಗ್ರಹ ಇಲ್ಲದಿದ್ದಾಗ, ನೀವು ಜಗತ್ತಿನ ಬೇರೆ ಯಾವುದೇ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ದೊಡ್ಡ ಪರಿಹಾರ ಮಾಡಿದರೂ ಅದಕ್ಕೆ ದೈವಿಕ ಶಕ್ತಿ ಸಿಗುವುದಿಲ್ಲ.


ಆತ್ಮಕಾರಕ ಗ್ರಹದ ಆರಾಧನೆ 💐
ನಿಮ್ಮ ಜಾತಕದಲ್ಲಿ ಅತ್ಯಂತ ಹೆಚ್ಚು ಡಿಗ್ರಿ ಹೊಂದಿರುವ ಗ್ರಹವೇ ಆತ್ಮಕಾರಕ. ನವಾಂಶದಲ್ಲಿ ಈ ಗ್ರಹ ಇರುವ ಮನೆಯನ್ನು 'ಕಾರಕಾಂಶ' ಎನ್ನಲಾಗುತ್ತದೆ. ಈ ಗ್ರಹಕ್ಕೆ ಸಂಬಂಧಿಸಿದ ದೇವತೆಯನ್ನು (ಉದಾಹರಣೆಗೆ ಸೂರ್ಯನಿಗೆ ಶಿವ, ಚಂದ್ರನಿಗೆ ಗೌರಿ) ಆರಾಧಿಸುವುದರಿಂದ ದೋಷಗಳು ಕರಗುತ್ತವೆ.

ಯಾವುದೇ ಮಂತ್ರ ಕೆಲಸ ಮಾಡದಿದ್ದಾಗ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಅಥವಾ ಗೋಶಾಲೆಗಳಿಗೆ ಹೋಗಿ ಸ್ವತಃ ದೈಹಿಕವಾಗಿ ಸೇವೆ ಮಾಡುವುದರಿಂದ ದೃಢ ಕರ್ಮದ ತೀವ್ರತೆ ಕಡಿಮೆಯಾಗುತ್ತದೆ.

ಅದೃಢ ಕರ್ಮ: ಸಣ್ಣ ಪ್ರಾರ್ಥನೆ ಅಥವಾ ದಾನದಿಂದ ತಕ್ಷಣ ಪರಿಹಾರವಾಗುತ್ತದೆ (ಲಗ್ನ ಮತ್ತು ನವಾಂಶ ಎರಡೂ ಬಲವಾಗಿದ್ದಾಗ).

ದೃಢಾದೃಢ ಕರ್ಮ: ಕಠಿಣ ಪರಿಶ್ರಮ, ಜಪ ಮತ್ತು ಶಾಂತಿ ಹೋಮಗಳಿಂದ ಪರಿಹಾರವಾಗುತ್ತದೆ (ಲಗ್ನದಲ್ಲಿ ಕೆಟ್ಟದಾಗಿದ್ದು, ನವಾಂಶದಲ್ಲಿ ಬಲವಾಗಿದ್ದಾಗ).

ದೃಢ ಕರ್ಮ: ಯಾವುದೇ ಪರಿಹಾರಕ್ಕೂ ಕರಗದ ಕರ್ಮ. ಇದನ್ನು ಅನುಭವಿಸಲೇಬೇಕು (ಲಗ್ನದಲ್ಲಿ ಚೆನ್ನಾಗಿದ್ದು, ನವಾಂಶ ಮತ್ತು D-4 ನಲ್ಲಿ ನೀಚವಾಗಿದ್ದಾಗ).

ಯಾವುದೇ ಪರಿಹಾರ ಮಾಡದಿದ್ದರೂ ಒಬ್ಬ ವ್ಯಕ್ತಿ ಎಲ್ಲಾ ಸುಖಭೋಗಗಳನ್ನು ಅನುಭವಿಸುತ್ತಿದ್ದಾನೆ ಎಂದರೆ, ಅದಕ್ಕೆ ಜಾತಕ ಮತ್ತು ಕರ್ಮ ಸಿದ್ಧಾಂತದಲ್ಲಿ ಸ್ಪಷ್ಟವಾದ ಕಾರಣಗಳಿವೆ

ಒಬ್ಬ ವ್ಯಕ್ತಿಯು ಪೂರ್ವ ಜನ್ಮದಲ್ಲಿ ಮಾಡಿರುವ ಅತ್ಯುನ್ನತ ಪುಣ್ಯದ ಮೂಟೆಯೇ ಈ ಜನ್ಮದಲ್ಲಿ ಅವನ ‘ಭಾಗ್ಯ'ವಾಗಿ ಬದಲಾಗಿರುತ್ತದೆ. ಆ ಪುಣ್ಯದ ಅವಧಿ (Expiration Date) ಮುಗಿಯುವವರೆಗೆ, ಅವನು ಈ ಜನ್ಮದಲ್ಲಿ ಯಾವುದೇ ಪೂಜೆ, ಪುನಸ್ಕಾರ ಅಥವಾ ಪ್ರಯತ್ನ ಮಾಡದಿದ್ದರೂ ಕಾಲವು ಅವನಿಗೆ ಎಲ್ಲಾ ಸುಖಭೋಗಗಳನ್ನು ತಂದುಕೊಡುತ್ತದೆ.

• ಇವರು ಪೂರ್ವ ಜನ್ಮದ ಪುಣ್ಯದ ಹಣವನ್ನು ಈ ಜನ್ಮದಲ್ಲಿ ಖರ್ಚು ಮಾಡುತ್ತಿರುತ್ತಾರೆ. ಅವರು ಹೊಸದಾಗಿ ಯಾವುದೇ ಪುಣ್ಯವನ್ನು (ದೇವಸ್ಥಾನಕ್ಕೆ ಹೋಗಿ ಅಥವಾ ಪರಿಹಾರ ಮಾಡಿ) ಬ್ಯಾಂಕಿಗೆ ಜಮಾ ಮಾಡುತ್ತಿರುವುದಿಲ್ಲ, ಕೇವಲ ಹಳೆಯದನ್ನು ಖಾಲಿ ಮಾಡುತ್ತಿರುತ್ತಾರೆ.

ಇವರ ಲಗ್ನ ಕುಂಡಲಿ (D1) ಮತ್ತು ನವಾಂಶ (D9) ಎರಡರಲ್ಲೂ 9ನೇ ಮನೆಯ ಅಧಿಪತಿ (ಭಾಗ್ಯಾಧಿಪತಿ) ಅತ್ಯಂತ ಬಲಶಾಲಿಯಾಗಿ, ಕೇಂದ್ರ ಅಥವಾ ತ್ರಿಕೋಣ ಸ್ಥಾನಗಳಲ್ಲಿರುತ್ತಾನೆ. ದೈವಬಲವು ಇವರನ್ನು ನೆರಳಿನಂತೆ ರಕ್ಷಿಸುತ್ತಿರುತ್ತದೆ.

ಸ್ವಯಂ ಚಾಲಿತ ರಾಜಯೋಗಗಳು (Inbuilt Raja Yogas): ಜಾತಕದಲ್ಲಿ ಗಜಕೇಸರಿ ಯೋಗ, ಪಂಚಮಹಾಪುರುಷ ಯೋಗ ಅಥವಾ ಲಕ್ಷ್ಮಿ ಯೋಗಗಳು ಯಾವುದೇ ಪಾಪಗ್ರಹಗಳ ದೃಷ್ಟಿಯಿಲ್ಲದೆ ಶುದ್ಧವಾಗಿದ್ದಾಗ, ವ್ಯಕ್ತಿಗೆ ಪರಿಹಾರಗಳ ಅಗತ್ಯವೇ ಬರುವುದಿಲ್ಲ. ಗ್ರಹಗಳು ತಾವಾಗಿಯೇ ಒಳಿತನ್ನು ಮಾಡುತ್ತವೆ.

ಶುಭ ಗ್ರಹಗಳ ದಶಾ ಕಾಲ (Benefic Dasha Period) ಅವರ ಜೀವನದ ಪ್ರಮುಖ ವಯಸ್ಸಿನಲ್ಲಿ (ಯೌವನ ಮತ್ತು ಮಧ್ಯವಯಸ್ಸು) ಗುರು, ಶುಕ್ರ, ಬುಧ ಅಥವಾ ಉಚ್ಚ ಗ್ರಹಗಳ ಮಹಾದಶೆಗಳು ನಡೆಯುತ್ತಿರುತ್ತವೆ. ಈ ದಶೆಗಳು ಯಾವುದೇ ದೋಷವಿಲ್ಲದೆ ಸುಖವನ್ನು ಉಣಬಡಿಸುತ್ತವೆ.

💐ಧನ್ಯವಾದಗಳು💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

If you have any doubts. please let me know...