ಲಗ್ನ ಅಂದರೆ ಆತ್ಮ, ದೇಹ ಮತ್ತು ಮನಸ್ಸಿನ ನಡುವಿನ ಮದುವೆ(Marriage between soul, body & mind)
ಚತುರ್ಥ ಭಾವ ಅಂದರೆ ನೀವು ಹುಟ್ಟುವ ಮೊದಲು ತಾಯಿಯ ಗರ್ಭದಲ್ಲಿರುವುದು(4th house is womb of your mother where you are most comfortable)
ನೀವು ಹುಟ್ಟುವ ಮೊದಲು ನಿಮ್ಮ ತಾಯಿಯ ಗರ್ಭವೇ ನಿಮ್ಮ ಮನೆ(Before birth womb is your house, after death tomb is your house)
ಚತುರ್ಥ ಭಾವ ಆಗಾಮಿ ಕರ್ಮವನ್ನು ತೋರಿಸುತ್ತದೆ(ಮುಂದೆ ಮಾಡಬೇಕಾಗಿರುವ ಕರ್ಮ)
ಹಿಂದಿನ ಜನ್ಮದ ನಮ್ಮ ಇಡೇರದ ಅಥವ ಅಪೂರ್ಣ ಆಸೆಯನ್ನು ವ್ಯಯ ಭಾವ ತೋರಿಸುತ್ತದೆ(unmanifested thoughts of last birth)
ಹಿಂದಿನ ಜನ್ಮದಲ್ಲಿ ಯಾವುದಾದರೂ ಕೆಲಸ ಶುರು ಮಾಡಿ ಅದು ಅಪೂರ್ಣವಾಗಿದ್ದರೆ ಅದನ್ನು ಸೂಚಿಸುವ ಭಾವ ಷಷ್ಟ ಭಾವ.(ಭಾಗ್ಯದಿಂದ ದಶಮ ಭಾವ ಷಷ್ಟ). ಈ ಬಾಕಿಯಿಂದ ನಾವು ಈ ಜನ್ಮವನ್ನು ಶುರು ಮಾಡಬೇಕು
ಹಿಂದಿನ ಜನ್ಮದಲ್ಲಿ unmanifest ಆಗದೇ ಇರುವ ಕರ್ಮದ ಒಂದು ಭಾಗವೇ ಪ್ರಾರಾಭ್ಧ ಕರ್ಮ ( ಇದು ಸಂಚಿತ ಕರ್ಮದ ಒಂದು ಭಾಗವೂ ಹೌದು) ಷಷ್ಟ ಭಾವ ಇದನ್ನು ತೋರಿಸುತ್ತದೆ.
ತ್ರಿಕೋಣ ಭಾವಗಳು(1,5,9 ನಿಮ್ಮ ಚಾಲಕರು. ನಿಮಗೆ ಎಲ್ಲಿಗೆ ಹೋಗಬೇಕೊ ಅಲ್ಲಿಗೆ ಅವರು ಕರೆದುಕೊಂಡು ಹೋಗುತ್ತಾರೆ. Tension ಬೇಡ.
ಕೇಂದ್ರ ಭಾವಗಳಿಗೆ ನೀವೇ ಚಾಲಕರು(4,7,10 ಯೋಚಿಸಿ ಸರಿಯಾದ ದಿಕ್ಕಿನಲ್ಲಿ ವಾಹನ ಚಲಾಯಿಸಿ)
ದುಸ್ಥಾನಗಳು(6,8,12) ನಿಮ್ಮ ವಾಹನ break down ಆಗಿದೆ, ನೀವೇ ವಾಹನವನ್ನು ತಳ್ಳಬೇಕು.
ಯಾವತ್ತೂ ತ್ರಿಕೋಣ (1,5,9) ಭಾವಕ್ಕೆ ಸಂಬಂದಿಸಿದ ಗ್ರಹಗಳ ದಾನ ಕೊಡಬೇಡಿ. ಏಕೆಂದರೆ ಅವರು ನಿಮ್ಮ ಚಾಲಕರು. ನೀವು ದಾನ ಕೊಟ್ಟಾಗ ನಿಮ್ಮ ಚಾಲಕನನ್ನು ಅವರ ಬಳಿ ಕಳುಹಿಸಿದ ಹಾಗೆ ಆಗುತ್ತದೆ. ಆಗ ನಿಮಗೆ ವಾಹನ ಚಲಾಯಿಸಲು ಚಾಲಕರು ಇರುವುದಿಲ್ಲ(you will become directionless)
ನಿಮ್ಮ ಲಗ್ನ ಅಥವ ಚಂದ್ರ ಏಕೆ ಅದೇ ರಾಶಿಯಲ್ಲಿ ಅದೇ ನಕ್ಷತ್ರದಲ್ಲಿ ಸ್ದಿತವಾಗಿದೆ?
ನೀವು ಯಾವ ಮಹಾದೆಸೆಯಲ್ಲಿ ಹುಟ್ಟಿದ್ದೀರೋ ಆ ಮಹಾದೆಸೆಯ ಅಧಿಪತಿ ಎಲ್ಲಿ ಸ್ಥಿತವಾಗಿದೆಯೋ ಆ ಭಾವ ನಿಮ್ಮ ಜೀವನದಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. *ನೀವು ಈ ಜೀವನದಲ್ಲಿ ಎಲ್ಲಿ ಯಾವ Areaದಲ್ಲಿ ನಿಮ್ಮ ಅತ್ಯದಿಕ ಶಕ್ತಿಯನ್ನು ವ್ಯಯಿಸುತ್ತೀರಿ ಅಂತ ತೋರಿಸುತ್ತದೆ.(Where you are going to spend maximum amount of energy in this life)*
ಕೇತು ನಕ್ಷತ್ರದಲ್ಲಿ ಜನಿಸಿರುವವರಿಗೆ ಹಿಂದಿನ ಜನ್ಮದಲ್ಲಿ Oxygen ತುಂಬಾ ಉಳಿದಿರುವಾಗಲೇ sudden death ಆಗಿರುತ್ತೆ. ಆದ್ದರಿಂದ ಈ ಜನ್ಮದಲ್ಲಿ ಹೋದ ಜನ್ಮದ ಉಳಿಕೆ ಆಯುಷ್ಯವನ್ನು ಸೇರಿಸಿಕೊಂಡು ಈ ಜನ್ಮಕ್ಕೆ ಬಂದಿರುತ್ತಾರೆ (They will get additional Longevity in this life)
ಮೇಷ(ದೇಹ), ಸಿಂಹ (ಆತ್ಮ), ಧನುರ್(ಜೀವ).
ಯಾವುದೇ ಭಾವದ ಚತುರ್ಥ ಭಾವದಲ್ಲಿ ನಿಮ್ಮ ಆಗಾಮಿ ಕರ್ಮ ಶೇಖಯಣೆಯಾಗಿರುತ್ತದೆ. ದ್ವಿತೀಯ ನಿಮ್ಮ ಕುಟುಂಬ ಭಾವ. ದ್ವಿತೀಯ ಭಾವದಿಂದ ಚತುರ್ಥ ಭಾವ ಯಾವುದು? ಪಂಚಮ ಭಾವ. ಆದ್ದರಿಂದ ನಿಮ್ಮ ಕುಟುಂಬದ ಕರ್ಮ ಪಂಚಮ ಭಾವದಲ್ಲಿ ಶೇಖರಣೆಯಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರ ನಡುವೆ ಸಾಮರಸ್ಯವಿಲ್ಲದಿದ್ದರೆ, ಒಬ್ಬರಿಗೊಬ್ಬರು ದ್ವೇಶಿಸಿದರೆ, ಜಗಳವಾಡಿಕೊಂಡರೆ ನಿಮ್ಮ ಪಂಚಮ ಭಾವದ ಮೇಲೆ ಹೇಗೆ ಪ್ರಭಾವ ಬೀರಬಹುದು? ನಿಮ್ಮ ಮಕ್ಕಳು ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯವೇ? (Do you think your children will manifest best in life?).
ಕುಟುಂಬದ ಒಳಗೆ ನೀವು ಆಸೆಬುರುಕರಾಗಿದ್ದರೆ, ಒಬ್ಬರನ್ನೂಬ್ಬರು ದ್ವೇಶಿಸುವವರಾಗಿದ್ದರೆ, ಹೊಟ್ಟೆಕಿಚ್ಚು ಇದ್ದರೆ ಬೇರೆ ಕುಟುಂಬ ಸದಸ್ಯರ ನಡುವೆ ಶತ್ರತ್ವ ಇದ್ದರೆ ಇದು ನಿಮ್ಮ ಮಕ್ಕಳಿಗೆ ಹಾನಿ ಉಂಟುಮಾಡುತ್ತದೆ. ಇದರಿಂದ ಪಂಚಮ ಭಾವ ಪೀಡಿತವಾಗುತ್ತದೆ.
ಷಷ್ಟ ಭಾವಕ್ಕೆ ಸಂಬಂದಿಸಿದ ಕರ್ಮ ಭಾಗ್ಯ ಭಾವದಲ್ಲಿ ಶೇಖಯಣೆಯಾಗುತ್ತದೆ. ಇದು ನಿಮ್ಮ ಪೂರ್ವಜರನ್ನು ತೋರಿಸುತ್ತದೆ. ನೀವು ಯಾವುದೇ ಪೂಜೆ ಪುನಸ್ಕಾರ ಮಾಡಿ, ನಿಮ್ಮ ಪೂರ್ವಜರು ಅತ್ರಪ್ತರಾಗಿದ್ದರೆ ನಿಮಗೆ ಯಾವುದೇ ಬೌತಿಕ ಮತ್ತು ಆಧ್ಯಾತ್ಮಿಕ ಸುಖ ಸಿಗುವುದಿಲ್ಲ.(you will not fully enjoy materialistic & spiritual benefits)
ನೀವು ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಕುಲದೇವರು, ಮನೆದೇವರು ಮತ್ತು ಗ್ರಾಮದೇವತೆಯರ ಸೇವೆ ಮಾಡಬೇಕು.
ತುಂಬಾ ತಾಪತ್ರಯ ಆಯ್ತ ಅಂತ ನಾವು ಹೇಳುತ್ತೇವೆ. ಏನಿದರ ಅರ್ಥ?
1. ಆಧ್ಯಾತ್ಮಿಕ (spiritual)
2. ಆಧಿದ್ಯೆವಿಕ (ಪಿತ್ರಗಳು)
3. ಆಧಿಬೌತಿಕ (Animals)
4. ಪಂಚಭೂತಗಳು.
ಯಾವುದೇ ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡಬಾರದು(ಆಧಿಬೌತಿಕ)
ಭೂಮಿಯನ್ನ ಅಗೆಯುವುದರಿಂದ ಗಣೆಗಾರಿಕೆಯಿಂದ ಮರಗಳನ್ನ ಕಡಿಯುವುದರಿಂದ ಪಂಚಭೂತಗಳಿಗೆ ಹಾನಿಯಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
If you have any doubts. please let me know...