ಆಗಸ್ಟ್ 24, 2026

ಶ್ರೀ ದಿಗ್ಗಿ ಮಲ್ಲಿಕಾರ್ಜುನ ಮಂಗಳಾರತಿ

 ಮಂಗಳಂ ಜಯ ಮಂಗಳಂ ದಿಗ್ಗಿ ಮಲ್ಲಿಕಾರ್ಜುನಗೆ ಮಂಗಳಂ ॥ ಹೊಸಹಳ್ಳಿಯಲಿ ನೆಲೆಸಿದ ದೇವಗೆ ಪರಮಪಾವನ ಶಂಭುಗೆ ಮಂಗಳಂ ॥ಪ|| (ಮಂಗಳಂ ಜಯ...)

ಚರಣ ೧: ಫಣೆಯೊಳು ವಿಭೂತಿ ಬೆಳಗುವ ದೇವಗೆ ಕೊರಳೊಳು ನಾಗನ ಧರಿಸಿದ ಶರ್ವಗೆ । ಗಂಗೆಯ ಶಿರದಲಿ ತಾಳಿದ ಈಶಗೆ ಭಕ್ತಿಯಿಂದಲಿ ಬೆಳಗುವೆ ಆರತಿ ॥ (ಮಂಗಳಂ ಜಯ...)

ಚರಣ ೨: ಅಭಿಷೇಕ ಪ್ರಿಯನಾದ ತ್ರಿನೇತ್ರಗೆ ಭಕ್ತರ ಕಷ್ಟವ ಕಳೆಯುವ ರುದ್ರಗೆ । ಪಾರ್ವತೀರಮಣ ನಂದಿವಾಹನಗೆ ಭಾವತುಂಬಿ ಬೆಳಗುವೆ ಆರತಿ ॥ (ಮಂಗಳಂ ಜಯ...)

ಚರಣ ೩: ಮಹಾಲಿಂಗ ಸ್ವರೂಪ ಜಗದೀಶಗೆ ಕರುಣಾಸಾಗರ ಶ್ರೀ ಮಹಾದೇವಗೆ । ಚನ್ನೇಶನು ನಮಿಸುವ ಪಾದಕೆ ದಿಗ್ಗಿ ಮಲ್ಲೇಶಗೆ ಮಂಗಳಂ ॥ (ಮಂಗಳಂ ಜಯ...)

ಜಯಘೋಷ: ಹರ ಹರ ಮಹಾದೇವ ಶಂಭೋ ಶಂಕರ । ಶ್ರೀ ದಿಗ್ಗಿ ಮಲ್ಲಿಕಾರ್ಜುನ ಸ್ವಾಮಿಗೆ ಮಂಗಳಂ ॥

ಅಂಕಿತ: ವೇ. ಶ್ರೀ ಚನ್ನೇಶ ಶಾಸ್ತ್ರಿಗಳು ಉ. ಮಠದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

If you have any doubts. please let me know...