October 11, 2021

ಆಗಿದ್ದು, ಆಗುತ್ತಿರುವುದು & ಆಗೋದೆಲ್ಲಾ ಒಳ್ಳೆಯದಕ್ಕೆ

*ತಪ್ಪದೆ ಓದಿ ನಿಮ್ಮ ವ್ಯಕ್ತಿತ್ವ ವಿಕಾಸನಕ್ಕಾಗಿ*

*ಆಗಿದ್ದು, ಆಗುತ್ತಿರುವುದು & ಆಗೋದೆಲ್ಲಾ ಒಳ್ಳೆಯದಕ್ಕೆ:~*
(ವ್ಯಕ್ತಿತ್ವ ವಿಕಸನಕ್ಕಾಗಿ) 

ಒಬ್ಬ ರಾಜ ಮತ್ತು ಮಂತ್ರಿ ಕಾಡಿನಲ್ಲಿ ಬೇಟೆಗೆಂದು ಹೋಗ್ತಾ ಇರ್ತಾರೆ.

ಮಾರ್ಗ ಮದ್ಯೆ ರಾಜ ಎಡವಿ ಬೀಳ್ತಾನೆ.ಎಡಗಾಲಿನ ಹೆಬ್ಬೆರಳ ಉಗುರು ಕಿತ್ತು ರಕ್ತ ಸುರಿಯೋಕೆ ಶುರುವಾಗುತ್ತೆ .

ರಾಜ ಮಂತ್ರಿಯನ್ನು ಕರೆದು ನೋವಿನಿಂದ
ತನಗಾದ ಸ್ಥಿತಿಯನ್ನು ತೋರಿಸುತ್ತಾನೆ.

ಮಂತ್ರಿ ಏನು ಆಗಿಯೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸುತ್ತ

ಬನ್ನಿ  ಪ್ರಭುಗಳೇ  "ಆಗೋದೆಲ್ಲ ಒಳ್ಳೆಯದಕ್ಕೆ" ಅಂತ ಹೇಳ್ತಾನೆ.!!

ರಾಜ ಕೆಂಡಾಮಂಡಲನಾಗಿ ..
ನಾನು ರಾಜ
ನನ್ನ ಕಾಲು  ಕಿತ್ತು
ರಕ್ತ ಸುರಿದರೆ,
ಒಳ್ಳೆಯದಕ್ಕೆ ಅಂತಿಯಾ? ನನ್ನ ಅನ್ನ ತಿಂದು.

ನಿನ್ನಂತ ಮಂತ್ರಿಯ ಅವಶ್ಯಕತೆ ನನಗಿಲ್ಲ ಎಂದು ಅಲ್ಲೇ ಪಕ್ಕದಲ್ಲ್ಲಿದ್ದ ಹಾಳು ಬಾವಿಗೆ  ಆತನನ್ನು ತಳ್ಳಿ ಮುಂದಕ್ಕೆ ಸಾಗುತ್ತಾನೆ.!!

ಕೆಲವೇ ಪರ್ಲಾಂಗು ತಲುಪುವಷ್ಟರಲ್ಲಿ ಕಾಡಿನ ಜನರ ಗುಂಪೊಂದು  ರಾಜನನ್ನು  ಸುತ್ತುವರೆದು ಹೊತ್ತೊಯ್ಯುತ್ತಾರೆ.

ಆ ದಿನ ಕಾಡಿನ ದೇವಿಯ ಉತ್ಸವ ಇದ್ದು ದೇವಿಗೆ ನರಬಲಿ ಕೊಡಲು ಮನುಷ್ಯರನ್ನು ಹುಡುಕಿಕೊಂಡು ಬಂದಿದ್ದ ಕಾಡಿನ ಜನಗಳ ಕೈಗೆ ಒಂಟಿಯಾಗಿದ್ದ ರಾಜ ಅನಾಯಾಸವಾಗಿ ಸಿಕ್ಕಿ ಬಿಟ್ಟಿದ್ದ .!!

ಸರಿ
ಬಲಿ ಪೂಜೆ ಮಾಡಿ ಇನ್ನೇನು ರಾಜನನ್ನು ಕಡಿಯಬೇಕು
ಕತ್ತಿ  ಎತ್ತಿದವನಿಗೆ ರಾಜನ ಕಾಲ ಬೆರಳಲ್ಲಿ ರಕ್ತ ಒಸರುವುದು ಕಂಡಿತು .ಅವರ ಸಂಪ್ರದಾಯದ ಪ್ರಕಾರ ಅದಾಗಲೇ  ಊನವಾಗಿರುವ ಅಥವಾ ರಕ್ತ ಸ್ರಾವ ಆಗುತ್ತಿರುವ ಪ್ರಾಣಿ ಬಲಿ ನೀಡುವಂತಿಲ್ಲ .ಬೇಸರದಿಂದ ರಾಜನನ್ನು ಬಿಟ್ಟು ಕಳುಹಿಸುತ್ತಾರೆ .

ಖುಷಿ ಇಂದ ಬದುಕಿದೆಯಾ ಬಡ ಜೀವವೇ ಎಂದು ಹಿಂತಿರುಗಿ ಬರುವಾಗ ಮಂತ್ರಿ ಹೇಳಿದ ಮಾತು ನೆನಪಾಗುತ್ತೆ.

ಹೌದು ಗಾಯ ಆಗಿದ್ದು ಒಳ್ಳೆಯದೇ ಆಯಿತು
ಇಲ್ಲ ಅಂದಿದ್ರೆ ನನ್ನನ್ನು  ಕತ್ತರಿಸಿ ಬಿಡುತ್ತಿದ್ದರು. ಎಂದು ತಿಳಿದು ಮಂತ್ರಿಯ ರಕ್ಷಣೆಗೆ ಧಾವಿಸುತ್ತಾನೆ.ಮತ್ತು ಮಂತ್ರಿಯನ್ನು ಹಾಳು ಬಾವಿಯಿಂದ ಮೇಲಕ್ಕೆತ್ತಿ ನಡೆದ ಘಟನೆ ವಿವರಿಸಿ  ದಯವಿಟ್ಟು ನನ್ನನ್ನು ಕ್ಷಮಿಸಿ ಮಂತ್ರಿಗಳೇ ಎಂದು ವಿನಮ್ರವಾಗಿ ಕ್ಷಮೆ ಯಾಚಿಸುತ್ತಾನೆ .

ಮಂತ್ರಿ ಸಮಾಧಾನ ಚಿತ್ತದಿಂದ ಅಯ್ಯೋ ಅದಕ್ಕೇಕೆ ಕ್ಷಮೆ ಪ್ರಭುಗಳೇ "ಆಗೋದೆಲ್ಲ ಒಳ್ಳೇದಕ್ಕೆ" ನೀವು ನನ್ನನ್ನು ಹಾಳು ಬಾವಿಗೆ ತಳ್ಳಿದ್ದು ಕೂಡ ಒಳ್ಳೆಯದಕ್ಕೆ ಎನ್ನುತ್ತಾನೆ .

ರಾಜ ಆಶ್ಚರ್ಯದಿಂದ ಮಂತ್ರಿ ಕಡೆ ನೋಡುತ್ತಾನೆ .

ಮಂತ್ರಿ ಮಾತು ಮುಂದುವರೆಸಿ 
" ಪ್ರಭುಗಳೇ  ನೀವು ನನ್ನನ್ನು ಇಲ್ಲಿ ತಳ್ಳಿದ್ದಕ್ಕೆ ನಾನು ನಿಮ್ಮ ಜೊತೆ ಬರಲಾಗಲಿಲ್ಲ 
ನಾನು ನಿಮ್ಮ ಜೊತೆ ಬಂದಿದ್ದರೆ  ಗಾಯವಾದ ನಿಮ್ಮನ್ನು ಬಿಟ್ಟು ಏನು ಆಗದ ನನ್ನನ್ನು ಬಲಿ ಕೊಡುತ್ತಿದ್ದರು ."

ನಾನು ಸಂತೋಷವಾಗಿದ್ದೇನೆ,  ಹಾಗೆಯೇ ಇರುತ್ತೇನೆ ಕಾರಣ  
ನಾನು ಪ್ರತಿ ಕ್ಷಣ
ಪ್ರತಿ ಸೋಲು
ಪ್ರತಿ ಅಪಘಾತ
ಪ್ರತಿ ಎಡವು
ಪ್ರತಿ ಅವಮಾನ
ಪ್ರತಿ ಆಘಾತಗಳಲ್ಲಿಯೂ ಯೋಚಿಸುವುದು ಇದನ್ನೇ .
ಎಲ್ಲಿಯೋ ಮುಂದಾಗಬಹುದಿದ್ದ ದೊಡ್ಡ ಅಪಘಾತ ತಡೆಯಲು ಇದಾಗಿರಬಹುದು ಎಂದು .....ಮಿಕ್ಕಿದ್ದು ನಿಮ್ಮಿಚ್ಚೆ.

ಧನಾತ್ಮಕ ಮನೋಭಾವನೆ ಎಂದರೆ ಇದೇ ಅಲ್ವಾ?

ಬನ್ನಿ ಸ್ನೇಹಿತರೆ,
ಧನಾತ್ಮಕತೆಯ ಧನಿಕರಾಗೋಣ.

No comments:

Post a Comment

If you have any doubts. please let me know...