ಹಿರಣ್ಯಪಾತ್ರಮ್…
ಹಿರಣ್ಯಪಾತ್ರಂ ಮಧೋಃ ಪೂರ್ಣಂ ದದಾತಿ ಮಧವ್ಯೋऽಸಾನೀತಿ | (ತೈ.ಸಂ.೫|೭|೧|೩)
ಇಲ್ಲಿ ದಕ್ಷಿಣಾಕಾಲದಲ್ಲಿ (ಋತ್ವಿಜರಿಗೆ) ನೀಡಬೇಕಾದ ದಾನವನ್ನು ಹೇಳಲಾಗಿದೆ (ಆಪಸ್ತಂಬಶ್ರೌತಸೂತ್ರ ೧೭|೨೩|೫, ಸಾಯಣ-ವೇದಾರ್ಥಪ್ರಕಾಶ / ವೇದಭಾಷ್ಯ). “ಪರಲೋಕದಲ್ಲಿ ಮಧುರವಾದ ಭೋಗ್ಯದ್ರವ್ಯಯುಕ್ತನಾಗುವೆನು” ಎಂದು ಅಭಿಪ್ರಾಯಪಟ್ಟು, ಜೇನಿನಿಂದ ತುಂಬಿದ ಚಿನ್ನದ ಪಾತ್ರೆಯನ್ನು ಪ್ರದಾನಮಾಡಬೇಕು._
ಏಕಧಾ ಬ್ರಹ್ಮಣ ಉಪ ಹರತ್ಯೇಕಧೈವ ಯಜಮಾನ ಆಯುರ್ದಧಾತಿ | (ತೈ.ಸಂ. ೨|೩|೨|೨)
_ಕಾಮ್ಯೇಷ್ಟಿವಿಧಾನದಲ್ಲಿ, ಮೃತ್ಯುಭೀತನಾದವನಿಗೆ ಆಯುಸ್ಸಿಗಾಗಿ ಶತಕೃಷ್ಣಲಾ / ನೂರು ಗುಲಗುಂಜಿಗಳನ್ನು ಯಜ್ಞಮುಖೇನ ಪ್ರದಾನಮಾಡಬೇಕೆಂದಿದೆ. ಅವುಗಳಲ್ಲಿ ನಾಲ್ಕು ನಾಲ್ಕರ ಕಟ್ಟನ್ನು ಪ್ರತ್ಯೇಕ ಪ್ರತ್ಯೇಕವಾಗಿ ದೇವತೆಗಳಿಗೆ ಸಮರ್ಪಿಸಿ, ಕೊನೆಗೆ ಉಳಿದವುಗಳನ್ನು ಒಟ್ಟಿಗೆ ಹಿಡಿದು(ಏಕಧಾ), ಬ್ರಹ್ಮನಿಗೆ(ಬ್ರಹ್ಮಣೇ) ಸಮರ್ಪಿಸಲಾಗುತ್ತದೆ (ಉಪಹರತಿ). ಇದರಿಂದ ಬ್ರಹ್ಮನು (ಯಜಮಾನೇ) ಯಜ್ಞ ಮಾಡುವ ಕರ್ತೃವಿಗೆ, (ಏಕಧಾ ಏವ ಆಯುಃ ದಧಾತಿ) ಉಳಿಕೆ ಆಯುಷ್ಯವನ್ನೆಲ್ಲ ಸೇರಿಸಿ ಪೂರ್ಣಪ್ರಮಾಣದಲ್ಲಿ ಅನುಗ್ರಹಿಸುತ್ತಾನೆ._
ಏಕಧೈವ ಯಜಮಾನೇ ವೀರ್ಯಂ ದಧಾತಿ | (ತೈ.ಸಂ. ೫|೨|೧|೬, ೫|೨|೪|೪)
ಒಮ್ಮೆಲೇ ಒಟ್ಟುಗೂಡಿಸಿದ ವೀರ್ಯ, ಪರಾಕ್ರಮ, ಶೌರ್ಯಾದಿಗಳನ್ನು ಯಜಮಾನನಿಗೆ ದೇವತೆಯು ಉಂಟುಮಾಡುತ್ತಾನೆ. [ಕಾನ್ಯಕುಬ್ಜದೇಶದ ನೃಪಶ್ರೇಷ್ಠನಾದ ಭಲಂದನನ ಪುತ್ರ ವತ್ಸಪ್ರೀಃ— ಯ ಕುರಿತಾದ ತೈ.ಸಂ. ೪|೨|೨ರ “ದಿವಸ್ಪರಿ” ಯೆಂಬ ೧೧ ಋಕ್ಕುಗಳ ಸೂಕ್ತದ (ಏಕಾದಶರ್ಚ— ೧೧ ಋಚ) ಕುರಿತು “ಏತೇನ ವೈ” ಮುಂತಾಗಿ ಇಲ್ಲಿ* ವಿವರಿಸಲಾಗಿದೆ.]
ಸಂಗ್ರಹಿಸಿದ್ದು ಮೂಲ- Dr. Krishna Moorthy D
No comments:
Post a Comment
If you have any doubts. please let me know...