*ಸರ್ವಾಂತರ್ಯಾಮಿಯಾದ ಪರಶಿವನ ಜನನದ ಕುರಿತಾದ ಕಥೆ ಕೇಳಿದ್ದೀರಾ?*
ಜಗತ್ಪಾಲನೆಗಾಗಿ ಅವತರಿಸಿದ ಶಿವನ ಲೀಲೆಯ ಬಗ್ಗೆ ಅನೇಕ ಕಥೆ ಹಾಗೂ ಉಪ ಕಥೆಗಳು ಇರುವುದನ್ನು ಕೇಳಿರಬಹುದು. ಆದರೆ ಶಿವನ ಜನನ ಹೇಗಾಯಿತು? ಶಿವನ ತಂದೆ ಯಾರು ಎನ್ನುವುದಕ್ಕೆ ಉತ್ತರಗಳಲಿಲ್ಲ. ಆದಿ ಹಾಗೂ ಅಂತ್ಯವಿಲ್ಲದ ಪರಶಿವನ ಜನನದ ಕುರಿತಾದ ಪುರಾಣ ಕಥೆಗಳು ಇಲ್ಲಿದೆ..
ದೇವಾದಿ ದೇವ ಎಂದು ಕರೆಯಲ್ಪಡುವ ಶಿವನು ಸೃಷ್ಟಿಯ ಲಯ ಕರ್ತ. ತ್ರಿಲೋಕದ ಕಲ್ಯಾಣಕ್ಕಾಗಿಯೇ ಶಿವನು ಹುಟ್ಟಿ ಬಂದ ಎಂದು ಹೇಳಲಾಗುವುದು. ಸೃಷ್ಟಿಯ ಒಳಿತಿಗಾಗಿ ಇರುವ ತ್ರಿಮೂರ್ತಿಗಳಲ್ಲಿ ಶಿವನು ಅತ್ಯಂತ ಸರಳ ಹಾಗೂ ಶಕ್ತಿಶಾಲಿ. ಸದಾ ಕಾಲ ದೀರ್ಘ ತಪಸ್ಸಿನ ಮೂಲಕ ಜಗತ್ತಿನ ಒಳಿತು ಮತ್ತು ಕೆಡುಕನ್ನು ನಿರ್ಧರಿಸುವ ದೇವ. ಹಾಗಾಗಿ ಶಿವ ಎಂದರೆ ಹಿಮ ಪರ್ವತದಲ್ಲಿ ಧ್ಯಾನಿಸುತ್ತಾ ಕುಳಿತಿರುವ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ.
ಜಗತ್ಪಾಲನೆಗಾಗಿ ಅವತರಿಸಿದ ಶಿವನ ಲೀಲೆಯ ಬಗ್ಗೆ ಅನೇಕ ಕಥೆ ಹಾಗೂ ಉಪ ಕಥೆಗಳು ಇರುವುದನ್ನು ಕೇಳಿರಬಹುದು. ಆದರೆ ಶಿವನ ಜನನ ಹೇಗಾಯಿತು? ಶಿವನ ತಂದೆ ಯಾರು ಎನ್ನುವುದಕ್ಕೆ ನಿರ್ದಿಷ್ಟ ಉತ್ತರಗಳಿಲ್ಲ. ಆದಿ ಹಾಗೂ ಅಂತ್ಯವಿಲ್ಲದ ಪರಶಿವನ ಜನನದ ಕುರಿತಾದ ಪುರಾಣ ಕಥೆಗಳು ಇಲ್ಲಿದೆ ಓದಿ.
ವಿಶೇಷ ಶಕ್ತಿಗಳ ಆದೇಶದ ಮೇರೆಗೆ ಬ್ರಹ್ಮನು ಸ್ವಯಂ ವಂಚನೆ, ಸಾವಿನ ಪ್ರಜ್ಞೆ, ಹತಾಶೆಯ ನಂತರ ಕೋಪ, ಸುಳ್ಳು, ಮಾಲಿಕತ್ವದ ಪ್ರಜ್ಞೆ, ಭ್ರಾಂತಿ, ದೈಹಿಕ ಪರಿಕಲ್ಪನೆ, ಒಬ್ಬರ ನೈಜ ಗುರುತನ್ನು ಮರೆಯುವಂತಹ ಗುಣಗಳನ್ನು ಸೃಷ್ಟಿ ಮಾಡಿದನು. ಕಾಳಿಯ ಯುಗದಲ್ಲಿ ಈ ಗುಣಗಳು ನಿಯಮಾಧೀನ ಆತ್ಮಗಳ ಮೇಲೆ ಸಕ್ರಿಯವಾಗಿ ಪ್ರಭಾವ ಬೀರಿದವು. ಆಗ ಇವೆಲ್ಲವೂ ತಪ್ಪು ಎನ್ನುವ ಮನೋಭಾವನೆ ಉಂಟಾಯಿತು. ಈ ಗುಣಗಳನ್ನು ಸೃಷ್ಟಿ ಮಾಡಿದ ಬ್ರಹ್ಮನು ತಪ್ಪಿತಸ್ಥ ಎಂದು ಪರಿಗಣಿಸಿದರು.
ಬ್ರಹ್ಮನ ಮೇಲೆ ಬಂದ ಅಪವಾದದಿಂದ ಬ್ರಹ್ಮನು ಸಾಕಷ್ಟು ಅಸಮಾಧಾನಕ್ಕೆ ಒಳಗಾದನು. ಈ ಅಸಮಾಧಾನಗಳನ್ನು ತೊಡೆದು ಹಾಕಿ ಶುದ್ಧೀಕರಿಸಿಕೊಳ್ಳುವ ಸಲುವಾಗಿ ಪರಮಾತ್ಮನ ಮೇಲೆ ಏಕಾಗ್ರತೆಯನ್ನು ಕೇಂದ್ರೀಕರಿಸಿದನು. ನಂತರ ತನ್ನ ಪುತ್ರರಾದ ಸನಕ, ಸನಂದ, ಸನಾತನ ಮತ್ತು ಸನತ್ ಕುಮಾರರಂತೆ ನಾಲ್ಕು ಮಹಾನ್ ಋಷಿಮುನಿಗಳನ್ನು ಸೃಷ್ಟಿಸಿದನು. ಆ ಋಷಿಗಳಿಗೆ ತಮ್ಮ ಸಂತತಿಯನ್ನು ಹೆಚ್ಚಿಸಬೇಕು ಅಥವಾ ವಿಶ್ವದಲ್ಲೆಲ್ಲಾ ತಮ್ಮ ಸಂತತಿ ಇರಬೇಕು ಎನ್ನುವ ಯಾವುದೇ ಆಸೆಗಳಿರಲಿಲ್ಲ. ಅವರು ತಮ್ಮ ತಂದೆಗೆ ಅತ್ಯಂತ ಅವಿಧೇಯರಾಗಿ ಇದ್ದರು.ಇದರಿಂದಾಗಿ ಬ್ರಹ್ಮನ ನಾಲ್ಕೂ ಶಿರಗಳಲ್ಲಿ ಅತಿಯಾದ ಕೋಪ ಹುಟ್ಟಿತು. ಅವನ ಕೋಪವನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆ ಅತಿಯಾದ ಕೋಪದಿಂದಾಗಿ ಹುಬ್ಬುಗಳ ನಡುವೆ ಕೆಂಪು ಮತ್ತು ನೀಲಿ ಬಣ್ಣದ ಮಗು ಸೃಷ್ಟಿಯಾಯಿತು.
*ಕೋಪದಲ್ಲಿ ಹುಟ್ಟಿದ ಮಗು*
ಕೋಪದಿಂದ ಹುಟ್ಟಿದ ಆ ಮಗು ಆತಂಕದಿಂದ ಅಳುತ್ತಿತ್ತು. ಆಗ ಬ್ರಹ್ಮ ದೇವನು ಆ ಮಗುವನ್ನು ರುದ್ರ ಎಂದು ಕರೆದನು. ನಂತರ ಆ ಮಗುವಿಗೆ ಬ್ರಹ್ಮನು "ನೀನು ನನ್ನ ಪ್ರೀತಿಯ ಹುಡುಗ. ನಿನ್ನ ವಿಕಾಸಕ್ಕಾಗಿ ಕೆಲವು ವಿಶೇಷ ಸ್ಥಳಗಳನ್ನು ಆಯ್ಕೆ ಮಾಡಿದ್ದೇನೆ. ಅದುವೇ ಹೃದಯ, ಇಂದ್ರೀಯಗಳು, ಜೀವನದ ಗಾಳಿ, ಆಕಾಶ, ಬೆಂಕಿ, ನೀರು, ಭೂಮಿ, ಸೂರ್ಯ, ಚಂದ್ರ ಮತ್ತು ಸಂಯಮಗಳು. ನಿನಗೆ ಸೃಷ್ಟಿಯಲ್ಲಿ ಮಾನ್ಯು, ಮನು, ಮಹಿನಾಸ, ಮಹಾನ್, ಶಿವ, ಶಧ್ವಜಾ, ಉಗ್ರರೇತಾ, ಭಾವ, ಕಲಾ, ಮಹಾದೇವ, ದೃತವೃತ ಎಂದು ಕರೆಯುವರು ಎಂದನು. ನಂತರ ನಿನ್ನ ಮಡದಿಯಾಗಿ ಧಿ, ಧರ್ತಿ, ರಾಸಲಾ, ಉಮಾ, ನಿಯುತ್, ಸರ್ಪಿ, ಇಳಾ, ಅಂಬಿಕಾ, ಐರಾವತಿ, ಸ್ವಧಾ ಮತ್ತು ದೀಕ್ಷಾ ಎನ್ನುವವರು ಇರುತ್ತಾರೆ ಎಂದು ಹೇಳಿದನು.
ಈ ರೀತಿಯಾಗಿ ಹುಟ್ಟಿಬಂದ ಶಿವನು ತನ್ನ ಅಸ್ತಿತ್ವವನ್ನು ಪಡೆದುಕೊಂಡನು. ನಂತರ ತ್ರಿಲೋಕದಲ್ಲಿ ನಾಶ ಮಾಡುವ ಮತ್ತು ಸರ್ವನಾಶವನ್ನು ನಿರ್ಧರಿಸುವ ಉಸ್ತುವಾರಿಯನ್ನು ಪಡೆದುಕೊಂಡನು. ಸೃಷ್ಟಿಯಲ್ಲಿ ಯಾವುದು ಒಳಿತು? ಯಾವುದು ಕೆಟ್ಟದ್ದು? ಎನ್ನುವುದನ್ನು ಅರಿತು ಲಯದ ಕೆಲಸವನ್ನು ನಿರ್ವಹಿಸಿದನು. ಹಾಗಾಗಿಯೇ ಮಹಾನ್ ದೇವನಿಗೆ ಲಯ ಕರ್ತ ಎಂದು ಕರೆಯಲಾಯಿತು.
ಶಿವನ ಜನನದ ಇನ್ನೊಂದು ಕಥೆ
ಶಿವನ ಲೀಲೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಇರುವುದನ್ನು ಕಾಣಬಹುದು. ಅಂತೆಯೇ ಶಿವನ ಹುಟ್ಟಿಗೆ ಸಂಬಂಧಿಸಿದಂತೆಯೇ ಇನ್ನೊಂದು ಪುರಾಣದ ಕಥೆಯಿದೆ. ಆ ಕಥೆಯ ಪ್ರಕಾರ ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು? ಎನ್ನುವ ಚರ್ಚೆ ನಡೆಯಿತು. ಆ ಸಮಯದಲ್ಲಿ ಒಂದು ಪ್ರಕಾಶಮಾನವಾದ ಕಂಬವೊಂದು ಪ್ರತ್ಯಕ್ಷವಾಯಿತು. ಅದು ಮರದ ರೂಪದಲ್ಲಿ ತೋರಿತು. ಅದರ ಬೇರುಗಳು ಪಾತಾಳದ ಒಳಗೆ ಹಾಗೂ ಮರದ ತುದಿಯು ಆಕಾಶಕ್ಕಿಂತಲೂ ಎತ್ತರಕ್ಕೆ ವ್ಯಾಪಿಸಿತು. ಈ ಮರದ ಆಳ ಮತ್ತು ಎತ್ತರವನ್ನು ತಿಳಿಯಬೇಕು ಎಂದು ಬ್ರಹ್ಮ ಮತ್ತು ವಿಷ್ಣು ನಿರ್ಧರಿಸಿದರು.
ಅಂತೆಯೇ ಬ್ರಹ್ಮ ಹಂಸ ಪಕ್ಷಿಯ ಅವತಾರ ತಳೆದು, ಮರದ ತುದಿಯನ್ನು ತಿಳಿಯಲು ಮೇಲೆ ಹಾರಿ ಹೋದನು. ವಿಷ್ಣು ಮರದ ಬೇರಿನ ಆಳ ತಿಳಿಯಲು ಹಂದಿ ರೂಪ ತಳೆದು, ಭೂಮಿಯನ್ನು ಕೊರೆಯುತ್ತಾ ಪಾತಾಳಕ್ಕೆ ಹೋದನು. ಆದರೂ ಇಬ್ಬರಿಗೂ ಅದರ ಬುಡ ಮತ್ತು ತುದಿಯನ್ನು ನಿರ್ಧರಿಸಲು ಸಾಧ್ಯವಾಗದೆ ಭೂಮಿಗೆ ಮರುಳಿದರು. ಆಗ ಕಂಬ ಒಡೆದು ಶಿವನು ಹೊರ ಬಂದನು. ಅಪಾರ ಶಕ್ತಿಯನ್ನು ಹೊಂದಿರುವ ಶಿವನನ್ನು ಕಂಡು ಇವನು ನಮಗಿಂತಲೂ ಶಕ್ತಿ ಶಾಲಿ ಎಂದು ಭಾವಿಸಿದರು. ನಂತರ ತಮ್ಮ ಜೊತೆಗೆ ಶಿವನನ್ನು ಸೇರಿಸಿಕೊಂಡು, ಜಗತ್ತಿನ ಸೃಷ್ಟಿ, ಪಾಲನೆ ಹಾಗೂ ಲಯದ ಕರ್ತವ್ಯಗಳನ್ನು ಹಂಚಿಕೊಂಡರು ಎಂದು ಹೇಳಲಾಗುವುದು. ಈ ರೀತಿಯಲ್ಲಿ ಶಿವನ ಜನನವಾಯಿತು ಎಂದು ಅನೇಕ ಕಥೆ ಪುರಾಣಗಳು ವಿವರಿಸುತ್ತವೆ.
No comments:
Post a Comment
If you have any doubts. please let me know...