December 30, 2021

ಕೇಶವನ ರೂಪಗಳನ್ನು ಹೇಗೆ ಗುರುತಿಸುವುದು?

ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಹೇಗೆ ಗುರುತಿಸುವುದು.
ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ ಇದೆಯೆಂದು ತಿಳಿಯಬೇಕು.
 
1)  ಕೇಶವ (ಶಂಕು, ಚಕ್ರ, ಗಧ, ಪದ್ಮ)
2)  ನಾರಾಯಣ (ಪದ್ಮ, ಗಧ, ಚಕ್ರ, ಶಂಕು)
3)  ಮಾಧವ (ಚಕ್ರ, ಶಂಕು, ಪದ್ಮ, ಗಧ)
4)  ಗೋವಿಂದ (ಗಧ, ಪದ್ಮ, ಶಂಕು, ಚಕ್ರ)
5)  ವಿಷ್ಣು (ಪದ್ಮ, ಶಂಕು, ಚಕ್ರ, ಗಧ)
6)  ಮಧುಸೂದನ (ಶಂಕು, ಪದ್ಮ, ಗಧ, ಚಕ್ರ)
7)  ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ)
8)  ವಾಮನ (ಚಕ್ರ, ಗಧ, ಪದ್ಮ, ಶಂಕು)
9)  ಶ್ರೀಧರ (ಚಕ್ರ, ಗಧ, ಶಂಕು, ಪದ್ಮ)
10) ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ)
11) ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು)
12) ದಾಮೋದರ (ಶಂಕು, ಗಧ, ಚಕ್ರ, ಪದ್ಮ)
13) ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ)
14) ವಾಸುದೇವ (ಶಂಕು, ಚಕ್ರ, ಪದ್ಮ,ಗಧ)
15) ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ)
16) ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ)
17) ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ)
18) ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ)
19) ನರಸಿಂಹ (ಪದ್ಮ, ಗಧ, ಶಂಕು, ಚಕ್ರ)
20) ಅಚ್ಯುತ (ಪದ್ಮ, ಚಕ್ರ, ಶಂಕು, ಗಧ)
21)  ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ)
22)  ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು)
23)  ಹರಿ (ಚಕ್ರ, ಪದ್ಮ, ಗಧ, ಶಂಕು)
24)  ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)
(ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು)
  
ಗಾಯಿತ್ರಿಯ ಮಂತ್ರದ ಪ್ರಕಾರ:
ತತ್ =  ಕೇಶವ -----------ಸ್ಯ = ವಾಸುದೇವ            
ಸ = ನಾರಾಯಣ---------ಧೀ = ಸಂಕರ್ಷಣ
ವಿ = ಮಾಧವ-------------ಮ = ಪ್ರದ್ಯುಮ್ನ
ತು: =   ಗೋವಿಂದ-----------ಹಿ = ಅನಿರುದ್ಧ 
ವ = ವಿಷ್ಣು----------------ಧಿ = ಪುರುಷೋತ್ತಮ
ರೇ = ಮಧುಸೂಧನ------ಯೊ =  ಅಧೋಕ್ಷಜ
ಣಿ = ತ್ರಿವಿಕ್ರಮ------------ಯೋ=   ನಾರಸಿಂಹ
ಯಮ್= ವಾಮನ-------------ನ: = ಅಚ್ಯುತ
ಭರ್ =  ಶ್ರೀಧರ--------------ಪ್ರ  = ಜನಾರ್ಧನ
ಗ: = ಹೃಶೀಕೇಶ-----------ಚೋ =  ಉಪೇಂದ್ರ
ದೇ =   ಪದ್ಮನಾಭ-----------ದ  = ಹರಿ
ವ = ದಾಮೋಧರ--------ಯಾತ್ = ಕೃಷ್ಣ

ತ್ರಿವಿಕ್ರಮ ಹಾಗು ವಾಮನ ರೂಪ ಒಂದೇ ಆಗಿರುವುದರಿಂದ ಉಚ್ಚಾರಣೆ ಮಾಡುವಾಗ ಣ್ಯಿಮ್  ೨೪ ಅಕ್ಷರಗಳು ಬರುವ ಹಾಗೆ ಉಚ್ಚಾರಣೆ ಮಾಡಬೇಕು 
ಭಗವಂತನದು 77ಅಂತರ್ಯಾಮಿ ರೂಪಗಳು, ಅಕ್ಷರಗಳಿಂದ ಕರೆಯಿಸಿಕೊಳ್ಳುವ 51 ನಾಮಾತ್ಮಕ ರೂಪಗಳು, ಹಾಗು ಮೇಲೆ ಹೇಳಿರುವ 24 ರೂಪಾತ್ಮಕ ರೂಪಗಳು ಮತ್ತು ಇವೆಲ್ಲಕ್ಕಿಂತಲೂ, ಲಕ್ಷ್ಮಿಯಲ್ಲಿರುವ಻ ರೂಪ ,ಮ಻ತ್ತು ನಾರಾಯಣನಲ್ಲಿ  ಲಕ್ಷ್ಮಿ ಇರುವ ರೂಪ

December 26, 2021

ವೇದಗಳಲ್ಲಿ ಸತಿಸಹಗಮನ ಪದ್ಧತಿ

ಇಲ್ಲದುದನ್ನು ಇತ್ತೆನ್ನುವ ಸಂಪ್ರದಾಯ.

ನಮ್ಮಲ್ಲೊಂದು ಸಂಪ್ರದಾಯ ಇದೆ ಯಾವುದೇ ವಿಷಯ ಮಂಡಿಸಲಿ, ಅದಕ್ಕೆ ಆಧಾರ ಕೇಳುವುದು. ಇದು ಈ ಆಧಾರ ಕೇಳುವ ಸಂಪ್ರದಾಯ ನಮ್ಮದಲ್ಲ. ಅದು ವಿದೇಶೀ ಆಕ್ರಮಣಕಾರರು ದಯಪಾಲಿಸಿದ ಕೊಡುಗೆ ನಮಗೆ. ಅದಿರಲಿ, ಕೇಳಲಿ ದಾಖಲೆಗಳನ್ನು ಕೊಡಬಹುದಾದುದಕ್ಕೆ ಕೊಡೋಣ. ಆದರೆ ಇಲ್ಲದೇ ಇರುವುದನ್ನು ಇತ್ತು ಮತ್ತು ಇದು ಹೀಗೇ ಎಂದು ಎದೆಯುಬ್ಬಿಸಿ ನಮ್ಮ ಹಿಂದಿನವರ ಆಚರಣೆ ಸಂಪ್ರದಾಯಗಳು ಅರ್ಥಹೀನ ಎನ್ನುವ ಮಟ್ಟಕ್ಕೆ ಇಳಿಯುವುದು ಅಸಹ್ಯ. ಅಂತಹ ಒಂದು ನಿದರ್ಶನ ಇಲ್ಲಿದೆ. 

ಉದೀರ್ಷ್ವ ನಾರ್ಯಭಿ ಜೀವಲೋಕಂ ಗತಾಸುಮೇತಮುಪ ಶೇಷ ಏಹಿ |
ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ || ಇದು ಋಗ್ವೇದದ ಹತ್ತನೇ ಮಂಡಲದ ಹದಿನೆಂಟನೇ ಸೂಕ್ತ. ಇಲ್ಲಿ ಈ ಋಕ್ಕನ್ನು ಗಮನಿಸಿದರೆ ಈಗಿನ ಬೊಗಳೆಗಳೆಲ್ಲಾ ಅರ್ಥವಾಗುತ್ತವೆ. ಇಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿರುತ್ತಾನೆ. ಮರಣ ಹೊಂದಿದ ವ್ಯಕ್ತಿಯ ಶವವನ್ನು ಬಲವಾಗಿ ತಬ್ಬಿಕೊಂಡು ತಾನೂ ಸಹಗಮನ ಮಾಡುತ್ತೇನೆಂದು ಬಯಸುತ್ತಾಳೆ. ಆಗ ಅವಳ ಮನೆಯ ಹಿರಿಯರು ಅವಳನ್ನು ತಡೆದು. ನೀನು ಅವನೊಡನೆ ಹೋಗುವುದರಿಂದ ಆತನಿಗೆ ಪುನಃ ಜೀವ ಬರುವುದಿಲ್ಲ ಒಮ್ಮೆ ಹೋದ ಪ್ರಾಣ ಪುನಃ ಬರುವುದಿಲ್ಲ. ನೀನು ನಿನ್ನ ದುಃಖವನ್ನು ಸಹಿಸಿಕೊಂಡು ಮನೆಗೆ ಬಾ ಎಂದು ವಿನಂತಿಸಲಾಗಿದೆ. "ಉದೀರ್ಷ್ವ ನಾರ್ಯಭಿ ಜೀವಲೋಕಂ ಗತಾಸುಮೇತಮುಪ ಶೇಷ ಏಹಿ" ಎನ್ನುವಲ್ಲಿ ಮೃತ ಶರೀರದಲ್ಲಿ ಏನಿದೆ ? ಪ್ರಾಣ ಹೊರಟಮೇಲೆ ಅದರಲ್ಲಿ ಏನೂ ಉಳಿಯುವುದಿಲ್ಲ. ಪ್ರಾಣವು ಈ ದೇಹದಿಂದ ಬೇರೆ ಲೋಕಕ್ಕೆ ಹೋಗಿಯಾಗಿದೆ, ನಿನ್ನ ಭಾವನೆಗಳು ಮೃತ ಶರೀರಕ್ಕೆ ಅರ್ಥವಾಗುವುದಿಲ್ಲ. "ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ" ಜೀವದಿಂದಿರುವ ನಿನ್ನ ಕುಟುಂಬದವರು ಬಾಂಧವರು ಇರುವ ಕಡೆ ಬಂದು ಬಿಡು. ಮೃತ ಶರೀರದಿಂದ ಎದ್ದು ಬಾ ಎಂದು ಹೇಳುವುದು ಕಂಡುಬರುತ್ತದೆ. "ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ" ನಿನ್ನ ವಿವಾಹಕಾಲದಲ್ಲಿ ಮನೆಯನ್ನು ಬೆಳಗುವ ಮಕ್ಕಳನ್ನು ಆಶಿಸಲಾಗಿದೆ. ಆದರೆ ಈಗ ಅದ್ಯಾವುದಕ್ಕೂ ದುಃಖಿಸಬೇಡ ಎನ್ನುವುದು ಈ ಋಕ್ಕಿನ ಆಶಯ. ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಬಲವಂತದ ಸತಿ ಗಮನ ಇರಲೇ ಇಲ್ಲ. ತನ್ನ ಪತಿಯ ಮೇಲಿನ ಪ್ರೀತಿಯಿಂದ ತಾನೂ ಸಾಯಲು ಉದ್ಯುಕ್ತಳಾಗುತ್ತಿದ್ದಳು. ಆದರೆ ಹತ್ತನೇ ಶತಮಾನದ ನಂತರ ಪರಕೀಯ ಆಕ್ರಮಣ ಜಾಸ್ತಿಯಾದಾಗ ಅಲ್ಲಿಂದ ಬಂದ ಕೊಡುಗೆ ಅಷ್ಟೇ. ಹಾಗೆ ನೋಡಿದರೆ ಸತಿ ಸಹಗಮನಕ್ಕಿಂತಲೂ ಕ್ರೂರವಾದ ಇನ್ನೊಂದು ಪದ್ಧತಿ ಇತ್ತು. ಅದನ್ನು ನಮ್ಮ ಯಾವ ಇತಿಹಾಸಕಾರನೂ ಹೇಳುವುದಿಲ್ಲ. ಅದರ ಕುರಿತು ಇಲ್ಲಿ ಬೇಡವೇ ಬೇಡ. ಎಲ್ಲೂ ಇಲ್ಲದುದು ನಮ್ಮಲ್ಲಿನ ಪಿಡುಗು ಎಂದು ಬೊಬ್ಬೆ ಹೊಡೆಯುವವರು ಈ ದೃಷ್ಟಿಯಲ್ಲೂ ಒಮ್ಮೆ ಗಮನಿಸಬೇಕಲ್ಲವೆ. ಇಲ್ಲದುದನ್ನು ಇತ್ತು ಎನ್ನುವವರು ಇರುವುದನ್ನು ವಿಕೃತವಾಗಿ ಬಣ್ಣಿಸುವವರು ಒಮ್ಮೆ ಆಲೋಚಿಸಬೇಕು. 

#ಇರುವುದೆಲ್ಲವ_ಬಿಟ್ಟು 
ಸದ್ಯೋಜಾತರು

December 23, 2021

ಅಪಾಮಾರ್ಗ

ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಸನ್ನಿವೇಶ ಬರುತ್ತದೆ. ಇಂದ್ರ ವೃತ್ರಾಸುರನನ್ನು ಸಂಹರಿಸಿದ ನಂತರ ಬರುವ ಘಟನೆ ಇದು. ನಮುಚಿ ಎನ್ನುವ ಅಸುರನೊಬ್ಬ ಪ್ರಬಲನಾಗಿದ್ದ. ಈತ ಪದೇ ಪದೇ ಇಂದ್ರನಿಗೆ ಉಪಟಳ ಕೊಡುವುದು, ಯುದ್ಧಕ್ಕೆ ಬರುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದ. "ಇಂದ್ರೇಣ ಸಹ ಯುದ್ಧಂ ನ ಮುಂಚತೀತಿ ನಮುಚಿಃ" ಅಂದರೆ ಇಂದ್ರನೊಡನೆ ಈತನ ಯುದ್ಧ ಕೊನೆಯಾಗುತ್ತಲೇ ಇರಲಿಲ್ಲವಂತೆ. ಇಂದ್ರನ ಯಾವ ವಿಧವಾದ ಆಯುಧಗಳಿಗೂ ಈತ ಜಗ್ಗುತ್ತಿರಲಿಲ್ಲ.
ಇಂದ್ರ ಆಲೋಚಿಸಿದ, ಈತ ನನ್ನ ಯಾವುದೇ ಅಸ್ತ್ರಕ್ಕೂ ಮಣಿಯುವವನಲ್ಲ ಈತನನ್ನು ನನ್ನ ಶರೀರ ಬಲದಿಂದಲೇ ಬಗ್ಗಿಸ ಬೇಕೆಂದು ಮಲ್ಲ ಯುದ್ಧವನ್ನು ಆರಂಭಿಸಿದ. ಈಗ ನಮುಚಿಯ ಹಿಡಿತವೇ ಬಲವಾಗುತ್ತಾ ಸಾಗಿತು ನಮುಚಿಯಿಂದ ಬಿಡಿಸಿಕೊಳ್ಳಲು ಅಸಾಧ್ಯವಾಗುತ್ತಾ ಬಂತು. ಆಗ ನಮುಚಿಯು ಇಂದ್ರನನ್ನು ಕುರಿತು ತಾನು ಹೇಳಿದಂತೆ ಕೇಳುವುದಾದರೆ ಮಾತ್ರ ಬಿಡುವೆನು ಎಂದು ಹೇಳುತ್ತಾನೆ. ಅದಕ್ಕೆ ಇಂದ್ರನು ಒಪ್ಪಿಕೊಂಡು ಅವನ ಹಿಡಿತದಿಂದ ಬಿಡುವಂತೆ ಹೇಳುತ್ತಾನೆ. ಆಗ ಇಬ್ಬರಲ್ಲೂ ಒಂದು ಒಪ್ಪಂದವಾಗುತ್ತದೆ. ಇಂದ್ರ ! ನೀನು ಪುನಃ ನನ್ನೊಂದಿಗೆ ಯಾವುದಾದರೂ ಉಪಾಯ ಹೂಡಿ ನನ್ನನ್ನು ಕೊಲ್ಲಬೇಕೆಂದು ಬರಬಹುದು ಆದರೆ ನನ್ನನ್ನು ಕೊಲ್ಲಬೇಕೆನ್ನುವ ಉದ್ದೇಶ ಈಡೇರಬೇಕಿದ್ದರೆ ನಿನ್ನ ಆಯುಧ ಹಸಿಯಾಗಿರಕೂಡದು ಒಣಗಿರಕೂಡದು. ಹಗಲಿನಲ್ಲಿಯೂ ಹಾಗೂ ರಾತ್ರಿಯಲ್ಲಿಯೂ ನನ್ನನ್ನು ಕೊಲ್ಲಕೂಡದು. ಈ ನಿಯಮಗಳಿಗೆ ನೀನು ಒಪ್ಪುವೆಯಾದರೆ ಬಿಡುತ್ತೇನೆ ಎನ್ನುತ್ತಾನೆ. ಕೂಡಲೇ ಇಂದ್ರ ಒಪ್ಪಿಕೊಳ್ಳುತ್ತಾನೆ. ತಕ್ಷಣ ನಮುಚಿ ಇಂದ್ರನನ್ನು ಬಿಡುತ್ತಾನೆ.
ಹೀಗೇ ಕೆಲವು ಸಮಯ ಕಳೆಯುತ್ತದೆ. ಇಂದ್ರನಿಗೆ ಅವನನ್ನು ಹೇಗೆ ಮುಗಿಸಬೇಕು ಎನ್ನುವ ಚಿಂತೆಯಾಗುತ್ತದೆ. ಹೀಗೇ ಆಲೋಚಿಸುತ್ತಿರುವಾಗ ಇಂದ್ರನಿಗೆ ತನ್ನೆದುರಿಗೆ ಇದ್ದ ಸಮುದ್ರದ ಅಲೆ ಕಾಣಿಸುತ್ತದೆ. ತಟ್ಟನೆ ಆಲೋಚಿಸುತ್ತಾನೆ. ಇದೇ ಸೂಕ್ತ. ಸಮುದ್ರದ ನೊರೆ ಹಸಿಯೂ ಅಲ್ಲ ಒಣಗಿಯೂ ಇಲ್ಲ ಎಂದು ನಿರ್ಧರಿಸಿ ಅದನ್ನೇ ಆಯುಧವನ್ನಾಗಿ ಪರಿವರ್ತಿಸಿಕೊಂಡು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಉಷಃಕಾಲ ಹೇಗೂ ಸೂರ್ಯೋದಯವೂ ಆಗುವುದಿಲ್ಲ. ರಾತ್ರಿಯಂತೂ ಅಲ್ಲ. ಆದುದರಿಂದ ಅಂತಹ ಕಾಲದಲ್ಲಿ ನಮುಚಿಯನ್ನು ಕೊಲ್ಲಲು ಹೋಗುತ್ತಾನೆ. ನಮುಚಿಯನ್ನು ಆಯುಧದಿಂದ ಕತ್ತರಿಸುತ್ತಾನೆ. ಆಗ ನಮುಚಿ ಸಾಯದೇ ಇಂದ್ರನಿಗೆ ಮಿತ್ರದ್ರೋಹೀ ಎಂದು ಅಟ್ಟಿಸಿಕೊಂಡು ಬರುತ್ತಾನೆ. ಇಂದ್ರ ಭಯಗ್ರಸ್ತನಾಗುತ್ತಾನೆ. ಇಂದ್ರ ಆಗ ಅಪಾಮಾರ್ಗವೆನ್ನುವ ಸಸ್ಯವನ್ನು ಸೃಷ್ಟಿಸಿ ಅದರ ಸಮಿತ್ತಿನಿಂದಲೇ ತನ್ನ ವೀರ್ಯವೃದ್ಧಿಗಾಗಿ ಹೋಮಮಾಡಿ ಬಲ ಹೆಚ್ಚಿಸಿಕೊಂಡು ನಮುಚಿಯನ್ನು ಸಂಹರಿಸುತ್ತಾನೆ. ಇಂದಿಗೂ ವಿರೋಧಿಗಳ ಉಪಟಳದಿಂದ ಪಾರಾಗುವ ಸಲುವಾಗಿ ಅಪಾಮಾರ್ಗದಿಂದ ಸಮಿತ್ತುಗಳನ್ನು ತಯಾರಿಸಿ ಹೋಮಮಾಡುತ್ತಾರೆ. ಈ ನಮುಚಿ ದಸ್ಯುವಾಗಿದ್ದ.
#ಅಪಾಮಾರ್ಗ_ನಮುಚಿ
ಸದ್ಯೋಜಾತ
2

December 22, 2021

ಸಪ್ತ ಋಷಿಗಳ ರಾಜ್ಯಾಡಳಿತ

 ಈ ಭೂಭಾಗವನ್ನು ಯಾರ್ಯಾರೋ ಆಳಿದ್ದಾರೆ ಆದರೆ ಪಾವಿತ್ರ್ಯವನ್ನು ಉಳಿಸಿಕೊಂಡ ಋಷಿಗಳೂ ಆಳಿದ್ದರು, ರಾಜನಾಗಿದ್ದು ಋಷಿಚರ್ಯೆ ಹೊಂದಿದವರೂ ಆಳಿದ್ದರು. ಅವರೇ ರಾಜರ್ಷಿ ಎನ್ನಿಸಿಕೊಂಡಿದ್ದರು. ಅದರ ಕುರಿತು ಚಿಕ್ಕದಾಗಿ ಒಂದಷ್ಟು . . . 

ಮಮದ್ವಿತಾ ಇದು ಋಗ್ವೇದದ ನಾಲ್ಕನೇ ಮಂಡಲದ 42 ನೇ ಸೂಕ್ತ. ಪುರುಕುತ್ಸ ಎನ್ನುವವನ ಮಗನಾದ ತ್ರಸದಸ್ಯು ಎನ್ನುವವನು ಈ ಸೂಕ್ತದ ದ್ರಷ್ಟಾರ. ಈತ ಕೇವಲ ರಾಜನಾಗಿರಲಿಲ್ಲ ರಾಜರ್ಷಿ ಎನ್ನಿಸಿಕೊಂಡಿದ್ದ. ತನ್ನನ್ನೇ ಸ್ತುತಿಸಿಕೊಂಡ ಆರು ಋಕ್ಕಿಗಳಿ ಆತ್ಮವೇ ದೇವತೆ ಮಿಕ್ಕವು ಇಂದ್ರಾವರುಣ ಮಮದ್ವಿತಾ ರಾಷ್ಟ್ರಂ ಕ್ಷತ್ರಿಯಸ್ಯ ಎಂದು ಆರಂಭವಾಗುವ ಮೊದಲ ಋಕ್ಕಿನಲ್ಲಿ. ನಾನು ಋಷಿಯಾಗಿದ್ದೇನೆ ನನ್ನ ಈ ರಾಷ್ಟ್ರದಲ್ಲಿ ಎರಡು ವಿಧದ ಆಡಳಿತಗಳಿವೆ. ಒಂದು ಈ ಭೂಮಿಯ ಆಡಳಿತವಾದರೆ ಇನ್ನೊಂದು ಸ್ವರ್ಗದ್ದು ಎಂದು ಹೇಳುತ್ತಾನೆ. ನಾನೇ ವರುಣನಾಗಿದ್ದು, ಜನರಿಗೆ ಅತೀ ಸಮೀಪಸ್ಥನಾಗಿದ್ದೇನೆ ಎನ್ನುವ ಈತ ನಾನು ಮಾಡಿದ ಕರ್ಮವನ್ನು ದೇವತೆಗಳೆಲ್ಲಾ ಸ್ವೀಕರಿಸುತ್ತಾರೆ ಎನ್ನುತ್ತಾ ತನ್ನ ಪ್ರಭುತ್ವವನ್ನು ಅತ್ಯಂತ ಹೆಮ್ಮೆಯಿಂದ ಹೇಳುವುದು ಸಿಗುತ್ತದೆ. ಇದನ್ನೇ ಕ್ಷಿತಿಸ್ವರ್ಗಭೇದೇನ ಎನ್ನುವುದು ಸಾಯಣಾಚಾರ್ಯರು. ಅಂದರೆ ಸ್ವರ್ಗಕ್ಕೂ ಭೂಮಿಗೂ ಎನ್ನುವ ಅರ್ಥವಾದರೂ ತ್ರಸದಸ್ಯು ಸ್ವರ್ಗಾಧಿಕಾರ ಹಿಡಿದಿದ್ದನೇ ಎನ್ನುವ ಸಂಶಯ ಕಾಡುತ್ತದೆ. ಆದರೆ ಸ್ವರ್ಗ ಸದೃಶ ಆಡಳಿತವನ್ನಂತೂ ಕೊಟ್ಟಿರಬಹುದು. ಇನ್ನು ಅದೇ ಮಂಡಲದ ೩೮ನೇ ಸೂಕ್ತದ ದ್ರಷ್ಟಾರ ವಾಮದೇವ ಮಹರ್ಷಿ. ದ್ಯಾವಾ ಪೃಥಿವಿ ಮತ್ತು ದಧಿಕ್ರಾವನ್ನು ಕುರಿತಾಗಿ ಸ್ತುತಿಸುವ ಈ ಸೂಕ್ತದಲ್ಲಿ ತ್ರಸದಸ್ಯುವಿನ ತಂದೆಯ ವಿಷಯ ಸಿಗುತ್ತದೆ. ಈ ತ್ರಸದಸ್ಯುವಿನ ತಂದೆ ಪುರುಕುತ್ಸ, ತಾಯಿ ಪುರುಕುತ್ಸಾನಿ. ಈ ಪುರುಕುತ್ಸ ಪೂರು ಎನ್ನುವ ವಂಶೀಯನಾಗಿದ್ದ ಎಂದು ಅಲ್ಲಲ್ಲಿ ಹೇಳಲ್ಪಟ್ಟಿದೆ.

ಪುರುಕುತ್ಸನ ಸಮಕಾಲೀನನಾಗಿ ಸುದಾಸ ಎನ್ನುವವನಿದ್ದ. ಈ ಪುರುಕುತ್ಸ ರಾಜನೂ ಹೌದು ಋಷಿಯೂ ಸಹ ಹೌದು. ಋಗ್ವೇದದ ಒಂದನೇ ಮಂಡಲದ 63ನೇ ಸೂಕ್ತದಲ್ಲಿ ಬರುವ ಯತ್ಸುದಾಸೇ ವೃಥ ವರ್ಗಂಹೋ ರಾಜನ್ ಎನ್ನುವುದನ್ನು ಗಮನಿಸಿದರೆ ಸುದಾಸ ಮತ್ತು ಪುರುಕುತ್ಸ ಸಮಕಾಲೀನರು. ಇಂದ್ರನು ಯುದ್ಧಗಳಲ್ಲಿ ಇವರಿಬ್ಬರಿಗೂ ಸಹಾಯ ಮಾಡಿದ ಎನ್ನುವುದು ಈ ಋಕ್ಕಿನಿಂದ ತಿಳಿಯುತ್ತದೆ. ಆದರೆ ಇವರಿಬ್ಬರಲ್ಲಿಯೂ ಸಹ ಆಗಾಗ ಯುದ್ಧ ನಡೆಯುತ್ತಾ ಇರುತ್ತದೆ.

ಅಸ್ಮಾಕಮತ್ರ ಪಿತರಸ್ತ ಆಸನ್ ಸಪ್ತ ಋಷಯೋ ದೌರ್ಗಹೇ ಬಧ್ಯಮಾನೇ ಎನ್ನುವುದು ಋಗ್ವೇದದ 4ನೇ ಮಂಡಲದ 42ನೇ ಸೂಕ್ತದಲ್ಲಿ ಬರುತ್ತ್ತದೆ. ಪುರುಕುತ್ಸನು ಬಂಧಿತನಾದುದರಿಂದ ಅರಾಜಕವಾದ ಈ ದೇಶದಲ್ಲಿ ಪ್ರಸಿದ್ಧರಾದ ಸಪ್ತ ಋಷಿಗಳೂ ಸಹ ಪಾಲಕರಾದರು, ಪುರುಕುತ್ಸನು ಬಂಧಿತನಾದಾಗ ಅದೇ ಋಷಿಗಳು ಇಂದ್ರಾವರುಣರ ಅನುಗ್ರಹದಿಂದ ಪುರುಕುತ್ಸನ ಪತ್ನಿಯಲ್ಲಿ ಇಂದ್ರನಿಗೆ ಸಮಾನನಾದ ಶತ್ರುನಾಶಕನೂ, ದೇವತೆಗಳ ಸಾನ್ನಿಧ್ಯವುಳ್ಳವನೂ ಆದ ತ್ರಸದಸ್ಯವು ಜನಿಸುವಂತೆ ಮಾಡಿದರು. ಎನ್ನುವಲ್ಲಿ ಗಮನಿಸ ಬೇಕಾದ್ದು ಈ ದೇಶ ಸಪ್ತರ್ಷಿಗಳಿಂದ ಸಹ ಆಳಲ್ಪಟ್ಟಿತ್ತು ಎನ್ನುವುದು. 

ಈ ಋಕ್ಕಿನಲ್ಲಿ ಈ ಸೂಕ್ತದ್ರಷ್ಟಾರನಾದ ತ್ರಿಸದಸ್ಯುವು ಹೇಗೆ ಜನಿಸಿದ ಎನ್ನುವುದು ಹೇಳಲ್ಪಟ್ಟಿದೆ. ತ್ರಸದಸ್ಯುವಿನ ಹುಟ್ಟಿನ ಕುರಿತಾಗಿ ಭಾಷ್ಯಕಾರರು ಒಂದು ಸನ್ನಿವೇಶ ಹೇಳುತ್ತಾರೆ.
ಪುರುಕುತ್ಸಸ್ಯ ಮಹಿಷಿ ದೌರ್ಗಹೇ ಬಂಧನಸ್ಥಿತೇ ಎನ್ನುವಲ್ಲಿ ಪ್ರಾಚೀನ ಕಾಲದಲ್ಲಿ ದುರ್ಗಹಪುತ್ರನಾದ ಪುರುಕುತ್ಸನೆಂಬ ರಾಜನು ಯುದ್ಧ ಮಾಡುತ್ತಿರುವಾಗ ಶತ್ರುಗಳಿಂದ ಸೆರೆಹಿಡಿಯಲ್ಪಟ್ಟು ಬಂಧನಕ್ಕೊಳಗಾಗುತ್ತಾನೆ. ಆಗ ಪುರುಕುತ್ಸನನ್ನು ಸೆರೆಯಿಂದ ಬಿಡಿಸಲು ಸಾಧ್ಯವಾಗುವುದಿಲ್ಲ. ಪುರುಕುತ್ಸ ರಾಜನಿಗೆ ಮಕ್ಕಳಿಲ್ಲದ್ದರಿಂದ ಅವನ ಮಡದಿ ಪುರುಕುತ್ಸಾನೀ ಎಂಬ ರಾಜ ಪತ್ನಿಯು ತಮ್ಮ ರಾಜ್ಯವು ಅರಾಜಕವಾಗಿ ನಾಯಕನಿಲ್ಲದೇ ಶತ್ರುಗಳ ಪಾಲಾಗುತ್ತದೆ ಎಂದು ಚಿಂತಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಯಾವುದೋ ಕಾರಣಕ್ಕಾಗಿ ಸಪ್ತ ಋಷಿಗಳು ಬರುತ್ತಾರೆ. ಪುರುಕುತ್ಸಾನಿಯು ಅವರನ್ನು ಆದರಾತಿಥ್ಯಗಳಿಂದ ಸತ್ಕರಿಸಿ ಪೂಜಿಸಿ ತನ್ನ ಮತ್ತು ತನ್ನ ಗಂಡನಿಗೊದಗಿದ ದುರವಸ್ಥೆಯ ಕಥೆಯನ್ನು ಹೇಳಿಕೊಳ್ಳುತ್ತಾಳೆ. ಆಗ ಸಪ್ತ ಋಷಿಗಳು ಆವಳ ಪೂಜಾ ಸತ್ಕಾರಗಳಿಂದ ಸಂತುಷ್ಟರಾಗಿ ಭಕ್ತಿಯಿಂದ ಇಂದ್ರಾವರುಣರನ್ನು ಸ್ತುತಿಸು ಎಂದು ಉಪದೇಶಮಾಡುತ್ತಾರೆ. ಅದರಂತೆ ಪುರುಕುತ್ಸಾನಿಯು ಇಂದ್ರಾವರುಣರನ್ನು ಬೇಡಿಕೊಳ್ಳುತ್ತಾಳೆ. ಅವರಿಂದ ತ್ರಸದಸ್ಯು ಎನ್ನುವ ಪುತ್ರನು ಹುಟ್ಟುತ್ತಾನೆ. ಇದು ಆತನ ಜನ್ಮ ವೃತ್ತಾಂತವಾದರೆ, ತನ್ನ ಜನ್ಮ ವೃತ್ತಾಂತವನ್ನು ತನ್ನ ತಾಯಿಯಿಂದ ತಿಳಿದು ತ್ರಸದಸ್ಯುವು ಈ ಅಸ್ಮಾಕಮತ್ರ ಪಿತರಸ್ತ ಎನ್ನುವ ಋಕ್ಕೂ ಮತ್ತು ಮುಂದಿನ ಪುರುಕುತ್ಸಾನೀ ಹಿ ವಾಮದಾಶದ್ದವ್ಯೇಭಿರಿಂದ್ರಾ ವರುಣಾ ನಮೋಭಿಃ ಎನ್ನುವಲ್ಲಿ ಸಹ ಹೇಳಿಕೊಂಡಿದ್ದಾನೆ. ಇಲ್ಲಿ ಗಮನಿಸಬೇಕಾದ ಹಲವು ಅಂಶಗಳಲ್ಲಿ ಪುರುಕುತ್ಸನೂ ಸಹ ದುರ್ಗಹ ಮತ್ತು ಗಿರಿಕ್ಷಿತ್ ಎನ್ನುವ ವಂಶದವನು. ಇನ್ನು ೮ನೇ ಮಂಡಲದ 22ನೇ ಸೂಕ್ತದಲ್ಲಿ ಯೇಭಿಸ್ತೃಕ್ಷಿಂ ಎಂದು ಬಂದಿರುವುದರಿಂದ ತೃಕ್ಷಿ ಅಥವಾ ತೃಕ್ಷ, ತಾರ್ಕ್ಷ್ಯ ಎನ್ನುವವನೂ ಸಹ ಇದೇ ವಂಶದಲ್ಲಿದ್ದ ಎನ್ನುವುದು ಸಹ ತಿಳಿಯುತ್ತದೆ. ಇನ್ನು 6ನೇ ಮಂಡಲದ 46ನೇ ಸೂಕ್ತದಲ್ಲಿ ಯತ್ಪೂರೌ ಕಚ್ಚ ವೃಷ್ಣ್ಯಂ ಎನ್ನುವಲ್ಲಿ ಪುರುಕುತ್ಸ ಪೂರು ಎನ್ನುವ ವಂಶದವನು ಎಂದೂ ಸಹ ಹೇಳಿದೆ. ಈ ಪೂರು ಎನ್ನುವ ಜನಾಂಗ ನೆಲೆಸಿದ್ದು ಸರಸ್ವತೀ ನದೀಯ ತೀರದಲ್ಲಿ ಎಂದು ವಶಿಷ್ಠ ಮಹರ್ಷಿಯ ಪ್ರ ಕ್ಷೋದಸಾ ಎನ್ನುವ 7ನೇ ಮಂಡಲದ 95 ಮತ್ತು ವಶಿಷ್ಠ ಮಹರ್ಷಿಯ ಬೃಹದುಗಾಯಿಷೇ ಎನ್ನುವ 96ನೇ ಸೂಕ್ತದಿಂದ ತಿಳಿದುಬರುತ್ತದೆ. ಮಿತ್ರಾತಿಥಿಯ ಮಗನಾದ ಕುರುಶ್ರವಣನೆನ್ನುವ ಕುರುವಂಶಸ್ಥ ರಾಜನೂ ಸಹ ಇದೇ ತ್ರಸದಸ್ಯುವಿನ ವಂಶಸ್ಥ ಎನ್ನುವುದು ಹತ್ತನೇ ಮಂಡಲದಲ್ಲಿ ಕವಷ ಐಲೂಷನ 33ನೇ ಸೂಕ್ತದ 4 ಮತ್ತು 5ನೇ ಋಕ್ಕಿನಲ್ಲಿ ಕುರುಶ್ರವಣ ಮತ್ತು ತ್ರಸದಸ್ಯುವನ್ನು ದೇವತೆಯನ್ನಾಗಿ ಸ್ತುತಿಸುವುದು ತಿಳಿಯುತ್ತದೆ. 

ಇಲ್ಲಿ ನಾನು ಗಮನಿಸ ಹೊರಟದ್ದು ಈ ದೇಶವನ್ನು ಕೇವಲ ಕ್ಷತ್ರಿಯ ವಂಶದವರು ಆಳಿದ್ದಿಲ್ಲ, ಇಲ್ಲಿ ಋಷಿಪರಂಪರೆಯಿಂದ ರಾಜಕೀಯ ಮತ್ತು ರಾಜಕಾರಣ ಹರಿದು ಬಂದಿದೆ ಎನ್ನುವುದಕ್ಕೆ ಸಿಗುವ ನಿದರ್ಶನಗಳಲ್ಲಿ ಇದೇ ಸಪ್ತರ್ಷಿಗಳು ಪುರುಕುತ್ಸನ ಸಾಮ್ರಾಜ್ಯವನ್ನು ಆಳಿದ ಉಲ್ಲೇಖವನ್ನು. 

ಸದ್ಯೋಜಾತರು

December 20, 2021

ಸಂಸ್ಕೃತ ಕಲಿಯೋಣ


ಬಂಧೂನಾಂ ನಾಮಾನಿ – ಸಂಬಂಧಿಕರ ಹೆಸರುಗಳು

माता – ಮಾತಾ – ತಾಯಿ
पिता – ಪಿತಾ – ತಂದೆ
मातामही – ಮಾತಾಮಹೀ – ತಾಯಿಯ ತಾಯಿ (ಅಜ್ಜಿ)
पितामहः – ಪಿತಾಮಹಃ – ತಂದೆಯ ತಂದೆ  (ಅಜ್ಜ)
पितामही – ಪಿತಾಮಹೀ – ತಂದೆಯ ತಾಯಿ (ಅಜ್ಜಿ)
पतिः – ಪತಿಃ – ಪತಿ
पत्नी – ಪತ್ನೀ – ಪತ್ನಿ
पुत्री – ಪುತ್ರೀ – ಪುತ್ರಿ
पुत्रः – ಪುತ್ರಃ – ಪುತ್ರ
ज्येष्ठभ्राता – ಜ್ಯೇಷ್ಠಭ್ರಾತಾ – ಅಣ್ಣ
कनिष्ठभ्राता – ಕನಿಷ್ಠಭ್ರಾತಾ – ತಮ್ಮ
ज्येष्ठभगिनी – ಜ್ಯೇಷ್ಠಭಗಿನೀ – ಅಕ್ಕ
कनिष्ठभगिनी – ಕನಿಷ್ಠಭಗಿನೀ – ತಂಗಿ
मातुलः – ಮಾತುಲಃ – ಮಾವ (ತಾಯಿಯ ಸಹೋದರ)
पितृव्यः – ಪಿತೃವ್ಯಃ – ಚಿಕ್ಕಪ್ಪ (ತಂದೆಯ ಸಹೋದರ)
मातुलानी – ಮಾತುಲಾನೀ – ಅತ್ತೆ (ತಾಯಿಯ ಸಹೋದರನ ಹೆಂಡತಿ)
पितृव्या – ಚಿಕ್ಕಮ್ಮ (ತಂದೆಯ ಸಹೋದರನ ಹೆಂಡತಿ)
श्वशुरः – ಶ್ವಶುರಃ – ಮಾವ (ಪತ್ನಿಯ ತಂದೆ)
श्वश्रूः – ಶ್ವಶ್ರೂಃ – ಅತ್ತೆ (ಪತ್ನಿಯ ತಾಯಿ)
श्यालः – ಶ್ಯಾಲಃ – ಬಾಮೈದ
श्याली – ಶ್ಯಾಲೀ – ಬಾಮೈದನ ಪತ್ನಿ
देवरः – ದೇವರಃ – ಪತಿಯ ಸಹೋದರ
ननान्दा – ನನಂದಾ – ಪತಿಯ ಸಹೋದರಿ
पौत्रः – ಪೌತ್ರಃ – ಮೊಮ್ಮಗ
पौत्री – ಪೌತ್ರೀ – ಮೊಮ್ಮಗಳು
दौहित्रः – ದೌಹಿತ್ರಃ – ಮಗಳ ಮಗ
दौहित्री – ದೌಹಿತ್ರೀ – ಮಗಳ ಮಗಳು
मित्रम् – ಮಿತ್ರಮ್ – ಗೆಳೆಯ
सखी – ಸಖೀ – ಗೆಳತಿ


ಗೃಹೋಪಕರಣಾನಾಂ ನಾಮಾನಿ

आसन्दः – ಆಸಂದಃ – ಖುರ್ಚಿ
तालः – ತಾಲಃ – ಬೀಗ
दण्डदीपः – ದಂಡದೀಪಃ – ಟ್ಯೂಬ್ ಲೈಟ್
समीरकः – ಸಮೀರಕಃ – ಇಸ್ತ್ರಿಪೆಟ್ಟಿಗೆ
स्यूतः – ಸ್ಯೂತಃ – ಬ್ಯಾಗ್
अग्निपेटिका – ಅಗ್ನಿಪೇಟಿಕಾ – ಕಡ್ದಿಪೆಟ್ಟಿಗೆ
करदीपः – ಕರದೀಪಃ – ಟಾರ್ಚ್
कटः – ಕಟಃ – ಮ್ಯಾಟ್
पिञ्जः – ಪಿಂಜಃ – ಸ್ವಿಚ್
दर्पणः – ದರ್ಪಣಃ – ಕನ್ನಡಿ
नलिका – ನಲಿಕಾ – ನಳ (ಟ್ಯಾಪ್)
कुञ्जिका – ಕುಂಜಿಕಾ – ಬೀಗದ ಕೈ
दूरवाणी – ದೂರವಾಣೀ – ದೂರವಾಣಿ
कपाटिका – ಕಪಾಟಿಕಾ – ಕಪಾಟು
अवकरिका – ಅವಕರಿಕಾ – ಕಸದತೊಟ್ಟಿ
चुल्ली – ಚುಲ್ಲೀ – ಒಲೆ
सम्मार्जनी – ಸಮ್ಮಾರ್ಜನೀ – ಕಸಬರಿಗೆ
कङ्कतं – ಕಂಕತಮ್ – ಬಾಚಣಿಗೆ
शय्या – ಶಯ್ಯಾ – ಬೆಡ್
जवनिका – ಜವನಿಕಾ – ಕರ್ಟನ್
पेटिका – ಪೇಟಿಕಾ – ಬಾಕ್ಸ್
पुष्पाधानी – ಪುಷ್ಪಧಾನೀ – ಹೂಕುಂಡ
उपधानम् – ಉಪಧಾನಮ್ – ದಿಂಬು
व्यजनम् – ವ್ಯಜನಮ್ – ಫ್ಯಾನ್


ವೇಷಭೂಷಣಾನಿ – ವೇಷಭೂಷಣಗಳು

वसनम् – ವಸನಮ್ – ವಸ್ತ್ರ
उष्णीषम् – ಉಷ್ಣೀಷಮ್ – ಮುಂಡಾಸು
शिरस्त्राणम् – ಶಿರಸ್ತ್ರಾಣಮ್ – ಕ್ಯಾಪ್
उत्तरीयः – ಉತ್ತರೀಯಃ – ಉತ್ತರೀಯ
गलवन्धनांशुकम् – ಗಲವಂಧನಾಂಶುಕಮ್ – ಮಫ್ಲರ್
कञ्चुकः, निचोलः – ಕಂಚುಕಃ / ನಿಚೋಲಃ – ಶರ್ಟ್
करवस्त्रम् – ಕರವಸ್ತ್ರಮ್ – ಕರವಸ್ತ್ರ
रल्लकः, कम्बलः – ರಲ್ಲಕಃ / ಕಂಬಲಃ – ಬ್ಲ್ಯಾಂಕೆಟ್
शाटिका – ಶಾಟಿಕಾ – ಸೀರೆ
अधोवस्त्रम् – ಅಧೋವಸ್ತ್ರಮ್ – ಧೋತಿ
जङ्घात्राणम् – ಜಂಘಾತ್ರಾಣಮ್ – ಪ್ಯಾಂಟ್
कटिसूत्रम् – ಕಟಿಸೂತ್ರಮ್ – ಬೆಲ್ಟ್
पादत्राणम् – ಪಾದತ್ರಾಣಮ್ – ಸಾಕ್ಸ್
नीशारः – ನಿಶಾರಃ – ಗಾದಿ


ಛಾತ್ರೋಪಕರಣಾನಾಂ ನಾಮಾನಿ – ವಿದ್ಯಾರ್ಥಿಗಳು ಬಳಸುವ ವಸ್ತುಗಳು.

सुधाखण्डः  – ಸುಧಾಖಂಡಃ – ಚಾಕ್ ಪೀಸ್
निर्यास: – ನಿರ್ಯಾಸಃ – ಗಮ್
पत्रभार: – ಪತ್ರಭಾರಃ – ಪತ್ರದ ಭಾರ
उत्पीठिका – ಉತ್ಪೀಠಿಕಾ – ಟೇಬಲ್
अन्त: पेटिका – ಅಂತಃ ಪೇಟಿಕಾ- ಡ್ರಾಯರ್
रन्ध्रिका – ರಂಧ್ರಿಕಾ – ಪಂಚಿಂಗ್ ಮಶಿನ್
मृदुमुद्रा – ಮೃದುಮುದ್ರಾ – ರಬ್ಬರ್ ಸ್ಟ್ಯಾಂಪ್
मापिका – ಮಾಪಿಕಾ – ಸ್ಕೇಲ್
लेपनपट्टिका – ಲೇಪನಪಟ್ಟಿಕಾ – ಅಂಟುಪಟ್ಟೀ (Adhesive Tape)
लेखनी – ಲೇಖನೀ – ಪೆನ್ನು
अङ्कनी – ಅಂಕನೀ – ಪೆನ್ಸಿಲ್
वर्णलेखनी – ವರ್ಣಲೇಖನೀ – ಸ್ಕೆಚ್ ಪೆನ್
योजिनी – ಯೋಜಿನೀ – ಸ್ಟೇಪ್ಲರ್
पत्रसूची – ಪತ್ರಸೂಚೀ – ಪಿನ್ ಕೋಡ್
मार्जनी – ಮಾರ್ಜನೀ – ಇರೇಸರ್
कर्तरी – ಕರ್ತರೀ – ಕತ್ತರಿ
पुस्तकम् – ಪುಸ್ತಕಮ್ – ಪುಸ್ತಕ
श्वेतपत्रम् – ಶ್ವೇತಪತ್ರಮ್ – ಬಿಳಿಹಾಳೆ
लेखनपीठम् – ಲೇಖನಪೀಠಮ್ – ಡೆಸ್ಕ್
कृष्णफलकम् – ಕೃಷ್ಣಫಲಕಮ್ – ಬ್ಲ್ಯಾಕ್ ಬೋರ್ಡ್


सुभाषितम् – ಸುಭಾಷಿತಮ್

“चिन्तनीया हि विपदाम् आदावेव प्रतिक्रिया । न कूपखननं युक्तम् प्रदीप्ते वह्निना गृहे ॥”
“ಚಿಂತನೀಯಾ ಹಿ ವಿಪದಾಮ್ ಆದಾವೇವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಮ್ ಪ್ರದೀಪ್ತೇ ವಹ್ನಿನಾ ಗೃಹೇ ||”
ಭಾವಾರ್ಥಃ – ಮುಂದೆ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಮುಂಚೆಯೇ ಯೋಚಿಸಿಕೊಳ್ಳಬೇಕು. ಮನೆಗೆ ಬೆಂಕಿ ಆವರಿಸಿದಾಗ ನೀರಿಗಾಗಿ ಬಾವಿಯನ್ನು ತೋಡುವುದು ಯುಕ್ತವಲ್ಲ.

“ಪುನಃ ಮಿಲಾಮಃ” “ಶುಭಂ ಭೂಯಾತ್”


December 13, 2021

ಹನುಮಂತನ ವಾಹನ

 ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂದರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಢಾ ಎಂದೂ ಕರೆಯಲಾಗುತ್ತದೆ.

🌷🌷 ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ ಹಾರಾಟ, ಪಾತಾಳ ಲೋಕಕ್ಕೆ ಹಾರುವುದು ಹೀಗೆ ಶರವೇಗದಲ್ಲಿ ಎಲ್ಲಾ ಕಡೆಯೂ ಹಾರುವುದನ್ನೇ ಬಿಂಬಿಸಿರುವಾಗ ಒಂಟೆಯಂತಹ ನಿಧಾನವಾಗಿ ಚಲಿಸುವ ಪ್ರಾಣಿಯೇಕೆ ಹನುಮಂತನ ವಾಹನ? ಎಂಬ ಜಿಜ್ಞಾಸೆ ಬಹಳವಾಗಿ ಕಾಡಿದ ಕಾರಣ ಅದರ ಬಗ್ಗೆ ಸೂಕ್ಷ್ಮವಾಗಿ ಜಾಲಾಡಿದಾಗ ದೊರೆತ ಕೆಲವೊಂದು ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


🌷🌷 ಎಲ್ಲರಿಗೂ ತಿಳಿದಂತೆ ಹನುಮಂತ ಆಜನ್ಮ ಬ್ರಹ್ಮಚಾರಿಯಾಗಿ ಅತ್ಯಂತ ಶ್ರದ್ಧೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿದವನು. ನಮ್ಮ ಪುರಾಣಗಳ ಪ್ರಕಾರ ಈ ರೀತಿಯಾಗಿ ಕಠೋರ ಬ್ರಹ್ಮಚರ್ಯ ಪಾಲಿಸಿದವರೆಂದರೆ ಭೀಷ್ಮಾಚಾರ್ಯರು ಮತ್ತು ಹನುಮಂತ ಇಬ್ಬರೇ. ಇಂತಹ ಹನುಮಂತನಿಗೆ ನವ ವೈಕರ್ಣವನ್ನು (ಒಂಬತ್ತು ವ್ಯಾಕರಣ ನಿಯಮಗಳು) ಕಲಿಯಲು ಬಯಸಿದರಂತೆ. ಆದರೆ ಕೇವಲ ಗೃಹಸ್ಥರಾಗಿದ್ದವರು ಮಾತ್ರವೇ ಇದನ್ನು ಅಧ್ಯಯನ ಮಾಡಬಹುದು ಎಂಬ ನಿಯಮವಿದ್ದ ಕಾರಣ, ಆಜನ್ಮ ಬ್ರಹ್ಮಚಾರಿ ಹನುಮಂತ ಇದನ್ನು ಕಲಿಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಹನುಮಂತನಿಗೆ ಬಹಳ ದುಃಖವಾಗಿತ್ತು.

🌷🌷 ಇದನ್ನು ಕಂಡ ಸೂರ್ಯ ದೇವರು, ಇಂತಹ ಸಮರ್ಥನೊಬ್ಬನು ಕಲಿಕೆಯಿಂದ ದೂರವಾಗಬಾರದೆಂದು ಬಯಸಿ ತನ್ನ ಮಗಳಾದ ಸುವರ್ಚಲೆಯನ್ನು ಮದುವೆ ಮಾಡಿಕೊಟ್ಟು ಅವನಿಗೆ ಪ್ರಜಾಪತ್ಯ ಬ್ರಹ್ಮಚಾರಿ ಎಂಬ ವರವನ್ನು ಕರುಣಿಸುತ್ತಾನೆ. ಈ ವರದ ಪ್ರಕಾರ ಆಂಜನೇಯನು ಮದುವೆಯಾದ ನಂತರವೂ ತನ್ನ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುತ್ತಾನೆ. ಆಂಜನೇಯನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡ ಕುರುಹಿಗಾಗಿ ಅವರಿಬ್ಬರಿಗೂ ಒಂಟೆಯೊಂದನ್ನು ಬಹುಮಾನವಾಗಿ ಕೊಟ್ಟ ಕಾರಣದಿಂದಾಗಿ ಇಂದಿಗೂ ಸಹಾ ಅನೇಕ ದೇವಾಲಯಗಳಲ್ಲಿ ಆಂಜನೇಯನ ಪತ್ನಿ ಸಮೇತವಿರುವ ವಿಗ್ರಹಗಳ ಮುಂದೆ ಒಂಟೆಯ ಪ್ರತಿಮೆ ಇರುತ್ತದೆ ಎಂಬ ಪ್ರತೀತಿ ಇದೆ.

🌷🌷 ನಿಜವಾಗಿಯೂ ಸುವರ್ಚಲ ದೇವಿ ಎಂಬುವರು ಹೆಣ್ಣಾಗಿರದೆ ಅದೊಂದು ದೈವಿಕ ಶಕ್ತಿಯಾಗಿದ್ದು, ಸೂರ್ಯ ದೇವರ ಅನುಗ್ರಹದಿಂದ, ಹನುಮಂತನ ಜ್ಞಾನಾರ್ಜನೆಗಾಗಿ ಮತ್ತು ಧಾರ್ಮಿಕ ಪೂಜೆಯ ಉದ್ದೇಶಕ್ಕಾಗಿ ಹನುಮನೊಂದಿಗೆ ಅವಳನ್ನು ವಿವಾಹ ಮಾಡಿಕೊಡಲಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವರುಗಳಿಗೂ ಶಕ್ತಿ (ಹೆಂಡತಿ), ವಾಹಕ (ವಾಹನ) ಮತ್ತು ಆಯುಧ (ಶಸ್ತ್ರಾಸ್ತ್ರ)ಗಳು ಇರಬೇಕೆಂಬ ನಿಯಮವಿರುವುದರಿಂದ ಹನುಮಂತನಿಗೆ ಸುವರ್ಚಲಾ ದೇವಿ ಹೆಂಡತಿ, ಒಂಟೆ ವಾಹನವಾಗಿ ಮತ್ತು ಗದೆ ಆಯುಧವಾಗಿದೆ ಎನ್ನುತ್ತಾರೆ ತಿಳಿದವರು. 

🌷🌷 ಇನ್ನು ವೈಜ್ಞಾನಿಕವಾಗಿರುವ ಮತ್ತೊಂದು ದೃಷ್ಟಾಂತದ ಪ್ರಕಾರ, ಎಲ್ಲಾ ವಾನರರು ಪಂಪಾ ಸರೋವರದ ತಟದಲ್ಲಿದ್ದ ಕಿಷ್ಕಿಂದೆಯಲ್ಲಿ ವಾಸಿಸುತ್ತಿದ್ದರು. ಪಂಪಾ ಸರೋವರದ ತಟ ಬಹಳಷ್ಟು ಮರಳುಗಳಿಂದ ತುಂಬಿರುವ ಕಾರಣ ವಾನರರಿಗೆ ನಡೆಯಲು ಬಹಳ ಕಷ್ಟವಾಗಿತ್ತು , ನೀಳ ಕಾಲ್ಗಳ ಒಂಟೆಗಳು ಮರಳುಗಾಡಿನಲ್ಲಿ ಸರಾಗವಾಗಿ ನಡೆಯಲು ಸಾಧ್ಯವಿದ್ದ ಕಾರಣ ಈ ಮಾರ್ಗದಲ್ಲಿ ಒಂಟೆಗಳನ್ನು ಪ್ರಯಾಣಿಸುವ ಮಾಧ್ಯಮವಾಗಿ ಬಳಸುತ್ತಿದ್ದರು. ಹನುಮಂತನೂ ಸಹಾ ಕಿಷ್ಕಿಂದೆಯಲ್ಲಿಯೇ ವಾಸಿಸುತ್ತಿದ್ದ ಕಾರಣ ಆ ಭೂಭಾಗದಲ್ಲಿ ಸುಲಭವಾಗಿ ಓಡಾಡುವ ಸಲುವಾಗಿ ಒಂಟೆಯನ್ನು ತನ್ನ ವಾಹನವಾಗಿ ಬಳಸುತ್ತಿದ್ದನು ಎಂಬ ಉದಾಹರಣೆಯು ವಾಸ್ತವಕ್ಕೆ ಸ್ವಲ್ಪ ಹತ್ತಿರವಾದಂತಿದೆ. 

🌷🌷 ಇನ್ನೊಂದು ಕತೆಯ ಪ್ರಕಾರ, ಹನುಮಂತನ ಪರಮ ಭಕ್ತರೊಬ್ಬರು, ಹನುಮಂತನ ದರ್ಶನಕ್ಕಾಗಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತನ್ನ ಭಕ್ತರ ಅಭೀಷ್ಟೆಯನ್ನು ಈಡೇರಿಸುವ ಸಲುವಾಗಿ ಹನುಮಂತನು ಅವರಿಗೆ ತನ್ನ ದರ್ಶನದ ಪ್ರಾಪ್ತಿಯನ್ನು ಕರುಣಿಸಿ ಆಶೀರ್ವದಿಸಿದನು. ಹೀಗೆ ಬಂದು ಹಾಗೆ ಹೋದ ಹನುಮಂತನ ದರ್ಶನದಿಂದ ತೃಪ್ತರಾಗದ ಆ ಭಕ್ತರು, ಮತ್ತೊಮ್ಮೆ ಹನುಮಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಅಯ್ಯಾ ಭಗವಂತ, ನೀನು ವಾಯು ವೇಗ, ಮನೋ ವೇಗದ ಸ್ವಭಾವ ಹೊಂದಿರುವ ಕಾರಣ ನೀನು ಕ್ಷಣಾರ್ಧದಲ್ಲಿ ಬಂದು ನಿನ್ನ ದರ್ಶನ ಕರುಣಿಸಿದೆ.

🌷🌷 ಹಲವಾರು ಸಮಯದಿಂದ ನಿನ್ನ ದರ್ಶನಕ್ಕಾಗಿ ಕಾದಿದ್ದ ನಾನು, ನನ್ನ ಕಣ್ಣುಗಳನ್ನು ತೆರೆಯುವ ಮೊದಲೇ ನೀನು ಮಾಯವಾಗಿ ಹೋದೆ. ಹಾಗಾಗಿ ನಿಧಾನವಾಗಿ ಚಲಿಸುವ ಒಂಟೆಯ ಮೇಲೆ ಬಂದು ನಿನ್ನ ದರ್ಶನ ಕರುಣಿಸಿದರೆ, ಆನಂದದಿಂದ ನಿನ್ನನ್ನು ಕಣ್ತುಂಬಿಸಿಕೊಂಡು ಸಂತೋಷ ಪಡುತ್ತೇನೆ ಎಂದು ಕೋರಿಕೊಂಡರಂತೆ. ಭಕ್ತನ ಭಕ್ತಿಯಿಂದ ಬಂಧಿಸಲ್ಪಟ್ಟ ಹನುಮಂತ ತನ್ನ ಭಕ್ತನ ಆಶೆಯಂತೆಯೇ ಉಷ್ಟ್ರಾರೂಢನಾಗಿ ಒಂಟೆಯ ಮೇಲೆ ನಿಧಾನವಾಗಿ ಬಂದು ತನ್ನ ಭಕ್ತನ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊತ್ತು ದರ್ಶನವನ್ನು ನೀಡಿ ಸಂತೃಷ್ಟಗೊಳಿಸಿದನಂತೆ. 

December 10, 2021

ಮಾತೆಯ ಹಿರಿಮೆ

   ಒಬ್ಬ ವರದಿಗಾರ ಒಬ್ಬ ತಾಯಿಯನ್ನು ಸಂದರ್ಶಿಸುತ್ತಾನೆ. ಸಂದರ್ಶನ ಹೀಗೆ ನೆಡೆಯುತ್ತದೆ. 
ವ.. ತಾವು ಯಾವ ಜಾತಿಗೆ ಸೇರಿದವರು? 
ತಾ.. ಒಬ್ಬ ತಾಯಿಯಾಗಿಯೋ ಅಥವಾ ಒಬ್ಬ ಸ್ತ್ರೀ ಆಗಿಯೋ? 
ವ.. ಎರಡು ಬಗೆಯಾಗಿಯೂ ಹೇಳಿ. 
ತುಂಬು ವಿಶ್ವಾಸದಿಂದ ತಾಯಿ ಹೇಳಲು ಪ್ರಾರಂಭಿಸುತ್ತಾಳೆ. 
ತಾ...  ಒಬ್ಬ ಸ್ತ್ರೀ ತಾಯಿಯಾದಾಗ ಅವಳು ಯಾವ ಜಾತಿಗೂ ಸೇರುವುದಿಲ್ಲ. ಕಾಲ ಕಳೆದಂತೆ ಅವಳ ಜಾತಿ ಬದಲಾಗುತ್ತಾ ಹೋಗುತ್ತದೆ. 
ಆಶ್ಚರ್ಯಚಕಿತನಾಗಿ ವರದಿಗಾರ ಕೇಳುತ್ತಾನೆ "ಅದು ಹೇಗೆ? "
ತಾಯಿ ಹೇಳುತ್ತಾಳೆ.. ಒಬ್ಬ ತಾಯಿ ತನ್ನ ಶಿಶುವಿನ ಮಲಮೂತ್ರಗಳನ್ನು ಶುದ್ಧಿ ಮಾಡುವಾಗ ಅವಳು ಶೂದ್ರ ಜಾತಿಗೆ ಸೇರಿದವಳಾಗುತ್ತಾಳೆ. ಮಗುವು ಬೆಳೆದಂತೆಲ್ಲ ಆ ಮಗುವನ್ನು ರಕ್ಷಿಸಲು ಅವಳು ಕ್ಷತ್ರಿಯಳಾಗುತ್ತಾಳೆ. ಮಗು ಇನ್ನೂ ಬೆಳೆದಂತೆ ಆ ಮಗುವಿಗೆ ಜೀವನದ ಉತ್ತಮ ಮೌಲ್ಯಗಳು, ಸಂಸ್ಕೃತಿ ಮತ್ತು ಉತ್ತಮ ನೆಡವಳಿಕೆಗಳನ್ನು ಬೋಧಿಸಲು ಅವಳು ಬ್ರಾಹ್ಮಣ ರೂಪ ತಳೆಯುತ್ತಾಳೆ. ಕಡೆಯದಾಗಿ ಮಗು ಬೆಳೆದು ಯವ್ವನಾವಸ್ಥೆಯನ್ನು ಪಡೆದು ದುಡಿಯಲಾರಂಭಿಸಿದಾಗ ದುಡ್ಡಿನ ಬೆಲೆ, ಖರ್ಚು ವೆಚ್ಚ ನಿಭಾಯಿಸುವ ಬಗೆ ಮತ್ತು ಕೂಡಿಡುವ ಆವಶ್ಯಕತೆಯನ್ನು ತಿಳಿಸಲು ಅವಳು ವೈಶ್ಯ ಧರ್ಮವನ್ನು ತಳೆಯುತ್ತಾಳೆ.ಆದ್ದರಿಂದ ಒಬ್ಬ ತಾಯಿಗೆ ಒಂದು ಗೊತ್ತಾದ ಜಾತಿಯಿಲ್ಲವೆಂಬ ಹೇಳಿಕೆ ಸರಿಯಾಗಿದೆಯಲ್ಲವೇ?
ಈ ವಿವರಣೆಯನ್ನು ಕೇಳಿ ವರದಿಗಾರ ಸ್ತoಭೀಭೂತನಾಗುತ್ತಾನೆ. 
🙏🏻🙏🏻ಎಲ್ಲಾ ಸ್ತ್ರೀ ಜಾತಿಯ ಬಗ್ಗೆ ಹೆಮ್ಮೆ ಮೂಡುತ್ತದೆ. 🙏🏻🙏🏻

💐💐ಎಲ್ಲಾ ತಾಯಂದರಿಗೂ ಅರ್ಪಿಸಲಾಗಿದೆ💐💐

December 6, 2021

ಕರ್ಣನನ್ನೇ ಏಕೆ ದಾನಶೂರ ಎಂದು ಕರೆಯುತ್ತಾರೆ

 ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ?
 ಮಹಾಭಾರತದ ಒಂದು ಸಣ್ಣ ಮಾಹಿತಿ !

 ಕೃಷ್ಣಾ,....ಎಲ್ಲರೂ ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ? ನಾನೇಕೆ ದಾನಶೂರನಲ್ಲ” ಎಂದ ಅರ್ಜುನನಿಗೆ ಸಿಕ್ಕ ಉತ್ತರ ಇದು !

ಒಮ್ಮೆ ಕೃಷ್ಣ ಹಾಗೂ ಅರ್ಜುನ ವಾಯುವಿಹಾರಕ್ಕೆಂದು ಹೊರಟಿದ್ದರು. ಹಳ್ಳಿಗಾಡಿನ ಪ್ರದೇಶದಲ್ಲಿ ಹೀಗೇ ಓಡಾಡುತ್ತಾ ಅಲ್ಲೇ ಮರವೊಂದರ ನೆರಳಿನಲ್ಲಿ ವಿಶ್ರಮಿಸಲು ಕುಳಿತರು. ಆಗ ಕೃಷ್ಣನಿಗೆ ಅರ್ಜುನನು ಕೇಳುತ್ತಾನೆ, “ಕೃಷ್ಣಾ, ಎಲ್ಲರೂ ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ? ನಾನೇಕೆ ದಾನಶೂರನಲ್ಲ? ನಾನೂ ಸಹ ಬಡವರಿಗೆ, ಅಸಹಾಯಕರಿಗೆ ದಾನ ಧರ್ಮ ಮಾಡಿದ್ದೇನಲ್ಲ!!”. ಆಗ ಕೃಷ್ಣನು, “ಸಮಯ ಬಂದಾಗ ನಿನಗೆ ಸೂಕ್ತ ರೀತಿಯಲ್ಲಿ ಉತ್ತರಿಸುತ್ತೇನೆ” ಎಂದು ನಸುನಕ್ಕು ಸುಮ್ಮನಾಗುತ್ತಾನೆ.

ಕೃಷ್ಣನು ದ್ವಾರಕೆಯಲ್ಲಿ ಒಮ್ಮೆ ಔತಣ ಕೂಟವನ್ನು ಏರ್ಪಡಿಸಿರುತ್ತಾನೆ. ಕೌರವರು, ಪಾಂಡವರು, ಕರ್ಣ ಎಲ್ಲರನ್ನೂ ಆಹ್ವಾನಿಸಿರುತ್ತಾನೆ. ಅರ್ಜುನ ಅಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೂಕ್ತ ಸಮಯ ಇದೇ ಎಂದು ನಿರ್ಧರಿಸಿರುತ್ತಾನೆ. ಒಂದು ಭಾರೀ ಗಾತ್ರದ ಪರ್ವತದಷ್ಟು ಎತ್ತರದ ಚಿನ್ನದ ಒಂದೊಂದು ಗಟ್ಟಿಯನ್ನು ಅರ್ಜುನ ಹಾಗೂ ಕರ್ಣ ಇಬ್ಬರಿಗೂ ಕಾಣಿಕೆ ಕೊಡುತ್ತಾನೆ. ಇಬ್ಬರಿಗೂ ಉದ್ದೇಶಿಸಿ ಹೇಳುತ್ತಾನೆ, ನೀವಿಬ್ಬರೂ ಈ ಗಟ್ಟಿಯ ಕೊನೆಯ ಕಣವು ಉಳಿಯುವವರೆಗೂ ದಾನ ಮಾಡಬೇಕು. ಆಗ ನಾನು ನಿಮಗೆ ಕೊಟ್ಟ ಕೊಡುಗೆ ಸದುಪಯೋಗವಾಗುತ್ತದೆ ಎಂದು ಹೇಳಿ ಕಳುಹಿಸುತ್ತಾನೆ. ಸಮಾರಂಭದ ನಂತರ ಪಾಂಡವರು ಇಂದ್ರಪ್ರಸ್ಥಕ್ಕೂ, ಕೌರವರು ಹಸ್ತಿನಾವತಿಗೂ, ಕರ್ಣನು ಅಂಗದೇಶಕ್ಕೂ ಹೀಗೆ ಅವರವರ ರಾಜ್ಯಗಳಿಗೆ ಹಿಂತಿರುಗುತ್ತಾರೆ.

ಇತ್ತ ಇಂದ್ರಪ್ರಸ್ಥಕ್ಕೆ ಮರಳಿದ ಅರ್ಜುನನು ರಾಜ್ಯಾದ್ಯಂತ ಡಂಗುರ ಸಾರಿಸುತ್ತನೆ. ತಾನು ಚಿನ್ನದ ಗಟ್ಟಿಯನ್ನು ದಾನ ಮಾಡಲು ಹೊರಟಿದ್ದು, ಅವಶ್ಯವಿದ್ದವರು ಬಂದು ಸ್ವೀಕರಿಸಬಹುದೆಂದು ಪ್ರಜೆಗಳಿಗೆ ತಿಳಿಸುತ್ತಾನೆ. ಮಾರನೇ ದಿನ ಅರಮನೆಯ ಮುಂದೆ ಭಾರೀ ಜನಸ್ತೋಮ ನೆರೆದಿರುತ್ತದೆ. ಎಲ್ಲರೂ ಅರ್ಜುನನನ್ನು ಹೊಗಳುವವರೇ. ಇತ್ತ ಅರ್ಜುನನು ಬಂದ ಆಕಾಂಕ್ಷಿಗಳೆಲ್ಲರಿಗೂ ಕೃಷ್ಣನು ಕೊಟ್ಟ ಭಾರೀ ಚಿನ್ನದ ಗಟ್ಟಿಯನ್ನು ಅಗೆದೂ ಅಗೆದೂ ಇಷ್ಟಿಷ್ಟನ್ನು ತೆಗೆದು ಕೊಡುತ್ತಿರುತ್ತಾನೆ. ಎರಡು ದಿನವೂ ಹೀಗೇ ಮುಂದುವರೆಯುತ್ತದೆ. ಮೂರನೆಯ ದಿನ ಅರ್ಜುನನಿಗೆ ಸಾಕಾಗಿ ಹೋಗಿರುತ್ತದೆ. ಚಿನ್ನದ ಗಟ್ಟಿ ಅರ್ಧದಷ್ಟೂ ಸಹ ಕರಗಿರುವುದಿಲ್ಲ. ಹೀಗೇ ಎಷ್ಟು ದಿನ ಮುಂದುವರೆಸುವುದು? ಕೃಷ್ಣ ನೋಡಿದರೆ ಕೊನೆಯ ಕಣವೂ ದಾನ ಮಾಡಬೇಕೆಂದು ಹೇಳಿದ್ದಾನೆ ಎಂದು ಚಿಂತಿತನಾಗುತ್ತಾನೆ.

ಆ ಸಮಯದಲ್ಲಿ ಕೃಷ್ಣನು ತಾನು ಒಪ್ಪಿಸಿದ್ದ ಕೆಲಸವಾಯಿತೇ ಎಂದು ತಿಳಿಯಲು ಇಂದ್ರಪ್ರಸ್ಥಕ್ಕೆ ಬರುತ್ತಾನೆ. ಅರ್ಜುನನು ಇದ್ದ ವಿಷಯ ತಿಳಿಸುತ್ತಾನೆ. ಮೂರು ದಿನದಿಂದ ಸತತವಾಗಿ ದಾನ ಮಾಡುತ್ತಿದ್ದೇನೆ, ಇದು ಇನ್ನೂ ಅರ್ಧದಷ್ಟೂ ಕರಗಿಲ್ಲ ಎಂದು ತಿಳಿಸುತ್ತಾನೆ. ಕೃಷ್ಣನು ಆಶ್ಚರ್ಯ ನಟಿಸಿ, “ಓಹೋ, ಬಹಳೇ ಕೆಲಸವಾಯಿತು ನಿನಗೆ, ಬಾ ಕರ್ಣನು ಏನು ಮಾಡಿದ್ದಾನೋ ನೋಡೋಣ” ಎಂದು ಅರ್ಜುನನನ್ನು ಅಂಗ ರಾಜ್ಯಕ್ಕೆ ಕರೆದೊಯ್ಯುತ್ತಾನೆ.

ಕರ್ಣನಲ್ಲಿಗೆ ಬಂದ ಕೃಷ್ಣಾರ್ಜುನರು, ಚಿನ್ನದ ಗಟ್ಟಿಯ ಬಗ್ಗೆ ವಿಚಾರಿಸುತ್ತಾರೆ. ಕರ್ಣನು “ನಾನು ಅದನ್ನು ಅಂದೇ ದಾನ ಮಾಡಿದೆನಲ್ಲ!” ಎಂದು ತಿಳಿಸುತ್ತಾನೆ. 

 
ಅರ್ಜುನನು ಆಶ್ಚರ್ಯದಿಂದ “ಅದು ಹೇಗೆ ಮಾಡಿದೆ? ಕೃಷ್ಣನು ಪ್ರತಿ ಕೊನೆಯ ಕಣವಿರುವವರೆಗೂ ಅದನ್ನು ದಾನ ಮಾಡಬೇಕು ಎಂದಿದ್ದನಲ್ಲ! ನಾನು ಸತತ ಮೂರು ದಿನದಿಂದ ಮಾಡುತ್ತಿದ್ದೇನೆ, ಇನ್ನೂ ಕರಗಿಲ್ಲ” ಎನ್ನುತ್ತಾನೆ.
ಕರ್ಣನು ಹೇಳುತ್ತಾನೆ, 

ನಾನು ದ್ವಾರಕೆಯಿಂದ ಮರಳುತ್ತಿದ್ದಾಗಲೇ ಮಾರ್ಗ ಮಧ್ಯೆಯಲ್ಲಿ ಇಬ್ಬರು ಹಳ್ಳಿಗರನ್ನು ಭೇಟಿ ಮಾಡಿದೆ. ಅವರು ತಮ್ಮ ಹಳ್ಳಿಯಲ್ಲಿ ಗುರುಕುಲವೊಂದನ್ನು ಹಾಗೂ ಅನ್ನಛತ್ರವನ್ನು ತೆರೆಯಬೇಕೆಂದು ತಿಳಿಸಿದರು. ತಕ್ಷಣವೇ ನಾನು ಕೃಷ್ಣನು ಕೊಟ್ಟಿದ್ದ ಚಿನ್ನದ ಗಟ್ಟಿಯನ್ನು ಅವರಿಗೆ ಒಪ್ಪಿಸಿ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿ ಹೊರಟುಬಿಟ್ಟೆ ಎಂದನು. ಅದನ್ನು ಕೇಳಿದ ಅರ್ಜುನ ಮೂಕವಿಸ್ಮಿತನಾಗಿ ನೋಡುತ್ತಾ ಇಂತಹ ಉಪಾಯ ನನಗೇಕೆ ಹೊಳೆಯಲಿಲ್ಲ ಎಂದುಕೊಂಡನು.

ಆಗ ಕೃಷ್ಣನು ನಗುತ್ತಾ ” ನೋಡಿದೆಯಾ ಅರ್ಜುನಾ! ನೀನು ಅಂದು ಕರ್ಣನೇ ಏಕೆ ದಾನಶೂರ ಎಂದು ನನ್ನಲ್ಲಿ ಕೇಳಿದ್ದೆ. ಈಗ ತಿಳಿಯಿತೇ? ನಾನು ಚಿನ್ನದ ಗಟ್ಟಿ ನಿನಗೆ ಕೊಟ್ಟಾಗ, ನಿನಗೆ ಅರಿವಿಲ್ಲದಂತೆಯೇ ಅದರ ಮೇಲೆ ಮೋಹ ಬೆಳೆದಿತ್ತು. ದಾನ ಮಾಡು ಎಂದಾಗ, ಜನರೆಲ್ಲರೂ ನಿನ್ನನ್ನು ದಾನಶ್ರೇಷ್ಠನೆಂದು ಹೊಗಳಬೇಕು ಎಂಬ ಆಸೆಯಿಂದ ಡಂಗುರ ಹೊಡೆಸಿ ೩ ದಿನಗಳಿಂದಲೂ ಬಿಡುವಿಲ್ಲದೇ ಕೊಂಚ ಕೊಂಚ ಮಾತ್ರವೇ ಕೊಡುತ್ತಾ ಬಂದೆ. ಆದರೆ ಕರ್ಣನಿಗೆ ಆ ಮೋಹವಿಲ್ಲ. ದ್ವಾರಕೆಯಿಂದ ಹೊರಡುವಾಗಲೇ ಅವಶ್ಯವಿದ್ದವರಿಗೆ ಕೈ ತುಂಬಾ ಕೊಟ್ಟು ಹೊರಟು ಹೋದ, ಕನಿಷ್ಟ ಧನ್ಯವಾದ ಸಹ ಅವನು ಬಯಸಿಲ್ಲ. ಆದ್ದರಿಂದ ನಿನಗೆ ಈಗ ವ್ಯತ್ಯಾಸ ಅರಿವಾದಂತಿರಬೇಕಲ್ಲ!” ಎಂದನು...ಆಗ ಅರ್ಜುನನು ದಂಗು ಬಡಿದವನಂತೆ ನೋಡುತ್ತಾ ಮನದಲ್ಲಿಯೇ ಕರ್ಣನನ್ನು ಕೊಂಡಾಡಿ, ತನ್ನ ಸೋಲೊಪ್ಪಿಕೊಂಡ.

December 1, 2021

ಹನುಮದ್ವ್ರತ



*ಮಾರ್ಗಶೀರ್ಷ ಮಾಸ ಶುಕ್ಲಪಕ್ಷ  ತ್ರಯೋದಶೀ*
ಇದು ಅನಂತ ವ್ರತದಂತೆ ಒಂದು ವ್ರತ. 

ಅನಂತ ವ್ರತದಲ್ಲಿ ಯಮುನಾ ಪೂಜೆ ಮಾಡಿದರೆ ಇದರಲ್ಲಿ ಪಂಪಾ ಪೂಜೆ. 

ಅದರಲ್ಲಿ 14 ಗಂಟುಗಳ ದೋರ ಧರಿಸಿದರೆ ಇದರಲ್ಲಿ 13 ಗಂಟುಗಳ ದೋರ ಧರಿಸಬೇಕು.

 ಅನಂತನ ದೋರ ರಕ್ತವರ್ಣದ್ದಾದರೇ ಹನುಮದ್ವ್ರತದಲ್ಲಿ ಹಳದೀ ದೋರವನ್ನು ಧರಿಸಬೇಕು.

*ಹನುಮ*ನೆಂದರೆ *ಜ್ಞಾನ*. ಅಂತಹ ಜ್ಞಾನವನ್ನು ಹೊಂದಿರುವವನು *ಹನುಮಾನ್*.

 ಋಜುಗಣದ ಅರಸರಾದ  *ಹನುಮ ದೇವರು* ಯತಾರ್ಥ ಜ್ಞಾನಿಗಳು. ಹೀಗೆ ಇವರನ್ನು ಉಪಾಸಿಸುವುದರಿಂದ ಅವರ ಅನುಗ್ರಹವಾಗಿ ನಮಗೂ ಯತಾರ್ಥ ಜ್ಞಾನವನ್ನು ಕರುಣಿಸುವರು. ಮಕ್ತಿಯೋಗ್ಯನಿಗೆ ಇದು ಅವಶ್ಯಕ.

*ಹನುಮದಷ್ಟಕ*

ವನಜಲೋಚನಂ ಬಂಧಮೋಚನಂ ಸೃಷ್ಟಿಪಾಲನಂ ಕಷ್ಟನಾಶನಂ |ಮದನಮೋಹನಂ ಪಿಂಗಳಾನನಂ ಮಾರುತಿಂ ಭಜೇ ವಾಯುನಂದನಮ್ ||1||

ಸ್ಮರ್ಯರಕ್ಷಕಂ ದಃಖಮೋಚನಂ ಕುರುಕಲಾಂತಕಂ ದೈತ್ಯವಂಚಕಂ |
ಧರ್ಮಪಾಲಕಂ ಪಾಪನಾಶಕಂ ಮಾರುತಿಂ ಭಜೇ ರಾಮಸೇವಕಂ ||2||

ವಿಭುದತೋಷಿಣಂ ಮಧುರಭಾಷಿಣಂ ದುಷ್ಟಹಾರಿಣಂ ರಾಮಭಾಷಿಣಂ |
ಮಗಧಹಾರಿಣಂ ಸೂರ್ಯಮೋಕ್ಷಿತಂ ಮಾರುತಿಂ ಭಜೇ ಗುಣವಿಭೂಷಿತಂ ||3||

ಭಾಸಕಪ್ರದಂ ರಾಮಭಕ್ತಿದಂ ಪ್ರಣತಕಾಮದಂ ಸತ್ಯದಪ್ರದಂ |
ಭಕ್ತಿಮುಕ್ತಿದಂ ದೈತ್ಯದುಃಖದಂ ಮಾರುತಿಂ ಭಜೇ ನಿಜಸುಖಪ್ರದಂ ||4||

ನಿಜಜನೋದಯಂ ಸ್ವಜನತಾಪ್ರಿಯಂ ಮೋದಜಿನ್ಮಯಂ ನಿರ್ಜಿತಾಮಯಂ |
ದ್ಯುಮಣಿನಿರ್ಜಯಂ ರಾಘವಪ್ರಿಯಂ ಮಾರುತಿಂ ಭಜೇ ಇಂದ್ರಜಿಜ್ಜಯಂ ||5||

ಸನ್ಮನೋಹರಂ ಭಾನುಭಾಸ್ಕರಂ ಸುಗುಣಸಾಗರಂ ಪಾಲಿತಾಮಯಂ |
ಹರಿಹಯಾರ್ಜಿತಂ ಈಶವಂದಿತಂ ಮಾರುತಿಂ ಭಜೇ ದೀಪ್ತಿರಾಜಿತಂ ||6|

ಪಾರ್ಥಸೇವಿತಂ ರಾಮಯಂತ್ರಿತಂ ಕವಿಗುಣಾನ್ವಿತಂ ಶುಕ್ರವಂದಿತಂ |
ಪದ್ಮಜಾರ್ಚಕಂ ಶ್ರೀಮದಾತತಂ ಮಾರುತಿಂ ಭಜೇ ಭಕ್ತಸೇವಿತಂ ||7||

ಮೋಹನಾಶಕಂ ಜ್ಞಾನದಾಯಕಂ ತಮೋನಾಶಕಂ ಸರ್ವರಕ್ಷಕಂ |
ಭಾಷ್ಯಕಾರಕಂ ಮುಕ್ತಿದಾಯಕಂ ಮಾರುತಿಂ ಭಜೇ ಸೇವಕಂ ಹರೇ ||8||

ಇತಿ ಶ್ರೀಹನುಮದಷ್ಟಕ ಸಂಪೂರ್ಣಂ

ಸಂಗ್ರಹ

November 27, 2021

ಅಭಿಜಿತ್ ಎನ್ನುವ ನಕ್ಷತ್ರವೋ ಮುಹೂರ್ತವೋ

    ನಕ್ಷತ್ರಗಳ ಕುರಿತು ನನಗೆ ಮಾಹಿತಿಗಳು ಕಡಿಮೆ. ಆದರೂ ಕೆಲವೊಮ್ಮೆ ಕುತೂಹಲ ಕೆರಳುತ್ತದೆ. ಮಹಾಭಾರತದ ಒಂದು ಸನ್ನಿವೇಶವನ್ನು ನೋಡುವೆ. ವನಪರ್ವದ 230ನೇ ಅಧ್ಯಾಯದಲ್ಲಿ ನಕ್ಷತ್ರಗಳ ಕುರಿತಾಗಿ ವಿವರ ಸಿಗುತ್ತದೆ. ವೇದದಲ್ಲಿ ತೈತ್ತಿರೀಯ ಸಂಹಿತೆ ಮತ್ತು ಕಾಠಕ ಸಂಹಿತೆಯಲ್ಲಿ ಒಂದು ನಕ್ಷತ್ರ ಕಡಿಮೆಯಾಗಿ 27 ನಕ್ಷತ್ರಗಳ ಹೆಸರು ಉಲ್ಲೇಖವಾಗಿದ್ದರೆ ಮೈತ್ರಾಯಣೀ ಸಂಹಿತೆಯಲ್ಲಿ 20ನೇ ನಕ್ಷತ್ರವಾಗಿ ಒಂದು ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಅದರ ಕುರಿತಾಗಿಯೇ ನೋಡುವೆ.
ಸ್ಕಂದನು ಅಥವಾ ಕಾರ್ತಿಕೇಯನು ವಿವರಿಸುವ ವಿಷಯ ಇದು. ಕಾರ್ತಿಕೇಯನು ದೇವ ಸೇನಾಧಿಪತಿಯಾಗಿದ್ದನ್ನು ಕೇಳಿ ಸಪ್ತರ್ಷಿಗಳ ಪತ್ನಿಯರಲ್ಲಿ ಅರುಂಧತಿಯನ್ನು ಬಿಟ್ಟು ಉಳಿದ ಆರು ಮಂದಿ ಬರುತ್ತಾರೆ. ಸ್ಕಂದನಲ್ಲಿ ಹೇಳಿಕೊಳ್ಳುತ್ತಾರೆ. ನಾವು ನಮ್ಮ ಪತಿಗಳಿಂದ ಪರಿತ್ಯಕ್ತರಾಗಿದ್ದೇವೆ. ಯಾವುದೊಂದು ಕಾರಣವೂ ಇಲ್ಲದೇ ಅವರ ಕೋಪಕ್ಕೆ ತುತ್ತಾಗಿ ನಾವು ಅವರಿಂದ ದೂರ ಆಗಿದ್ದೇವೆ. ನೀನು ಅಗ್ನಿಯಿಂದ ಹುಟ್ಟಿದೆಯೆಂದು ಯಾರೋ ಕೆಲವರು ಸುಳ್ಳುಸುದ್ದಿಯನ್ನು ಹಬ್ಟಿಸಿದ್ದೇ ಇದಕ್ಕೆ ಕಾರಣ. ಅದನ್ನೇ ಸತ್ಯವೆಂದು ನಂಬಿದ ನಮ್ಮ ಪತಿಗಳು ನಮ್ಮನ್ನು ದೂರ ಅಟ್ಟಿಬಿಟ್ಟರು. ಈ ಸಮಯದಲ್ಲಿ ನಮ್ಮನ್ನು ಈ ಅಪವಾದದಿಂದ ಪಾರುಮಾಡಲು ನೀನೇ ಸಮರ್ಥ. ಆದರೆ, ನಮ್ಮ ಮೇಲೆ ಬಂದಿರುವ ಅಪವಾದವನ್ನು ಕಳೆದುಕೊಳ್ಳಲೂ ನಮಗೆ ಇಷ್ಟವಿಲ್ಲ. ಆದರೂ ನಾವು ನಿನ್ನ ಜನ್ಮಕ್ಕೆ ಕಾರಣರಾಗದಿದ್ದರೂ ಈಗ ನಾವು ನಿನ್ನನ್ನು ನಮ್ಮ ಪುತ್ರನೆಂದೇ ಭಾವಿಸುತ್ತೇವೆ. ನಿನ್ನ ಅನುಗ್ರಹದಿಂದ ನಮಗೆ ಸ್ವರ್ಗ ಸಿಗಲಿ. ಈ ವರ ಕೊಟ್ಟು ಮಾತೃಋಣದಿಂದ ನೀನು ವಿಮುಕ್ತನಾಗು. ನಿಮ್ಮ ಇಚ್ಛೆಯಂತೆಯೇ ನೀವು ನನ್ನ ತಾಯಂದಿರಾಗಿರಿ. ನಾನು ನಿಮ್ಮ ಮಗನಾಗುವೆನು. ನೀವು ಯಾವುದನ್ನು ಇಚ್ಛಿಸುವಿರೋ ಅವೆಲ್ಲವೂ ನಿಮಗೆ ಸಿಗುವುದು ಎಂದು ಸ್ಕಂದನು ಹೇಳುತ್ತಾನೆ. ಇಲ್ಲಿ ನಕ್ಷತ್ರಗಳ ಮಾಹಿತಿ ಬರುತ್ತದೆ.
ಅಭಿಜಿತ್ ನಕ್ಷತ್ರವು ರೋಹಿಣಿಯ ತಂಗಿ. ಆದರೆ ರೋಹಿಣಿಗಿಂತಲೂ ಉನ್ನತಸ್ಥಾನ ತನಗೆ ಸಿಗಬೇಕೆಂಬುದು ಅಭಿಜಿತಳ ಆಶಯವಾಗಿತ್ತು. ಅವಳಿಗಾಗಿ ನೀಡಲ್ಪಟ್ಟ ಸ್ಥಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಹಾಗಿರುವಾಗ ಬಹಳ ಬೇಸರಗೊಳ್ಳುತ್ತಾಳೆ. ಆಕೆ ಇದರಿಂದ ಖತಿಗೊಂಡ ಅಭಿಜಿತಳು ನಕ್ಷತ್ರಾಧಿದೇವತೆಯ ಜ್ಯೇಷ್ಠತ್ವವನ್ನು ಪಡೆಯುವ ಸಲುವಾಗಿ ಅಂತರಿಕ್ಷದಿಂದ ಭೂಮಿಗಿಳಿದು ತಪಸ್ಸು ಮಾಡಲು ಕಾಡಿಗೆ ಹೊರಟು ಹೋದಳು. ಈಗ ಅಭಿಜಿತಳ ಸ್ಥಾನ ಖಾಲಿಯಾಗಿದೆ. ಅವಳ ಸ್ಥಾನವನ್ನು ನಾವು ತುಂಬಲೇಬೇಕು. ಈ ವಿಷಯವನ್ನು ನೀನು ಬ್ರಹ್ಮನೊಡನೆ ಚರ್ಚಿಸಬೇಕು. ಧನಿಷ್ಠವೇ ಮೊದಲಾದ ನಕ್ಷತ್ರಗಳನ್ನೊಳಗೊಂಡ ಕಾಲವು ಹಿಂದೆ ಬ್ರಹ್ಮನಿಂದಲೇ ಸೃಷ್ಟಿಯಾಗಿತ್ತು. ಆ ಸಮಯದಲ್ಲಿ ರೋಹಿಣಿನಕ್ಷತ್ರವೂ ಆ ನಕ್ಷತ್ರಮಾಲೆ ಯಲ್ಲಿದ್ದಳು. ನಕ್ಷತ್ರಸಂಖ್ಯೆಯು ಪೂರ್ಣವಾಗಿತ್ತು. ಈಗ ಅಭಿಜಿತಳು ಹೊರಟುಹೋಗಿರುವುದರಿಂದ ಅವಳ ಸ್ಥಾನಕ್ಕೆ ಬೇರೊಂದು ನಕ್ಷತ್ರವನ್ನು ತುಂಬಬೇಕಾಗಿದೆ. ಇಲ್ಲದಿದ್ದರೆ ಕಾಲದಲ್ಲಿ ವ್ಯತ್ಯಯವಾಗುತ್ತದೆ. ಇಂದ್ರನು ಕಾರ್ತಿಕೇಯನಿಗೆ ಹೇಳುತ್ತಾನೆ. ಸ್ಕಂದ ಮತ್ತು ಬ್ರಹ್ಮನ ಮನಸ್ಸಿನ ಆಶಯವನ್ನು ತಿಳಿದ ಕೃತ್ತಿಕಾ ನಕ್ಷತ್ರಾಧಿದೇವತೆಗಳು ತಾರಾಮಂಡಲವನ್ನು ಸೇರಿಕೊಳ್ಳುತ್ತಾರೆ. ಆ ಕೃತ್ತಿಕಾ ನಕ್ಷತ್ರವು ಏಳು ತಲೆಗಳ ಹಾಗೇ ಈಗಲೂ ಪ್ರಕಾಶಿಸುತ್ತಿದೆ. ಮತ್ತು ಆ ನಕ್ಷತ್ರಗಳ ಅಧಿದೇವತೆ ಅಗ್ನಿಯೇ. ಸಪ್ತ ಋಷಯಃ ಪ್ರಥಮಾಂ ಕೃತ್ತಿಕಾನಾಮರುನ್ಧತೀಂ ಎನ್ನುವ ಮಂತ್ರದಂತೆ ಕೃತ್ತಿಕೆಯರು ಆರು ಜನ. ಧ್ರುವ ಅಥವಾ ಧ್ರುವೆ ಅರುಂಧತಿಯು ಏಳನೆಯವಳು. ನವ ವಿವಾಹಿತರಿಗೆ ತೋರಿಸುವ ನಕ್ಷತ್ರ ಎಂದರೆ ವಿವಾಹಿತಳಾದ ವಧುವು ಎಂಟನೆಯವಳಾಗಿ ಅವರಂತೆ ಪತಿವ್ರತೆಯಾಗಲಿ ಎಂದು ಇದರ ಅರ್ಥ. ಪೂರ್ವಾಷಾಢಾ ಮತ್ತು ಉತ್ತರಾಷಾಢಾ ನಕ್ಷತ್ರದ ನಂತರ ಹಾಗೂ ಶ್ರವಣಾ ನಕ್ಷತ್ರಕ್ಕೂ ಮೊದಲು ಈ ಅಭಿಜಿತ್ ನಕ್ಷತ್ರವಿತ್ತು.
ಅಭಿಜಿತ್ ನಕ್ಷತ್ರ ಅತ್ಯಂತ ಬುದ್ಧಿವಂತೆಯಾದ ನಕ್ಷತ್ರ. ಅಭಿಜಿತ್ ಎನ್ನುವ ಸೋಮಯಾಗವೂ ಇದೆ. ಅವುಗಳೆಂದರೆ ಅಭಿಜಿತ್ ಮತ್ತು ವಿಶ್ವಜಿತ್. ಹರಿವಂಶದಲ್ಲಿ ಯಾದವ ರಾಜ ಪುನರ್ವಸುವಿನ ತಂದೆ ಎಂದು ಹೇಳಲಾಗಿದೆ. ದಿನದ ಎಂಟನೇ ಮುಹೂರ್ತವನ್ನು ಅಭಿಜಿತ್ ಎನ್ನಲಾಗುತ್ತದೆ. ಮಧ್ಯಾಹ್ನದ 24 ನಿಮಿಷ ಮೊದಲು ಹಾಗೂ ನಂತರದ 24 ನಿಮಿಷಗಳು ಅಭಿಜಿನ್ ಮುಹೂರ್ತ ಎಂದು ಕರೆಯಲಾಗುತ್ತದೆ.
ಅಪರಾಹ್ನೇ ತು ಸಂಪ್ರಾಪ್ತೇ ಅಭಿಜಿದ್ರೌಹಿಣೋದಯೇ |
ಯದತ್ರ ದೀಯತೇ ಜಂತೋ ತದಕ್ಷಯಮುದಾಹೃತಮ್|| ಎಂದು ಹರಿವಂಶ ಹೇಳುತ್ತದೆ. ಇಪ್ಪತ್ತೆಂಟಿದ್ದ ನಕ್ಷತ್ರದಲ್ಲಿ ಒಂದು ನಕ್ಷತ್ರದ ಸ್ಥಾನ ಪಲ್ಲಟವೋ ಅಥವಾ ಕಣ್ಮರೆಯೋ ಆಗಿದೆ. ಆದರೆ ನಕ್ಷತ್ರಗಳ ಸ್ಥಾನಪಲ್ಲಟ ಅಥವಾ ಕಣ್ಮರೆಯಿಂದ ಕಾಲ ವ್ಯತ್ಯಾಸವಾಗುತ್ತದೆ ಎನ್ನುವುದು ನಕ್ಷತ್ರಗಳಿಗೂ ಕಾಲಕ್ಕೂ ಸಂಬಂಧವನ್ನು ಸೂಚಿಸುತ್ತದೆ. ಅಂದರೆ ನಕ್ಷತ್ರಗಳಿಗೆ ಹೆಸರು ಬಂದದ್ದು ಯಜುರ್ವೇದದಲ್ಲಿಯೇ.
ಇನ್ನು ಅಭಿಜಿನ್ನಾಮ ನಕ್ಷತ್ರಮ್ ಉಪರಿಷ್ಟಾದಷಾಢಾನಾಮ್ ಅಧಸ್ತಾಚ್ಛ್ರೋಣಾಯೈ ದೇವಾಸುರಾಸ್ಸಂಯತ್ತಾ ಆಸನ್| ಎಂದು ತೈತ್ತಿರೀಯಬ್ರಾಹ್ಮಣದಲ್ಲಿದೆ.
ಇತ್ತೀಚಿನ ದಿನಗಳಲ್ಲಿ ವೇಗ(vega) ಎಂಬ ಉಜ್ವಲವಾಗಿ ಹೊಳೆಯುತ್ತಾ ಕಂಗೊಳಿಸುವ ಮಕರ ರಾಶಿಯಲ್ಲಿರುವ ನಕ್ಷತ್ರವನ್ನು ಅಭಿಜಿತ್ ಎಂದು ಹೇಳಲಾಗುತ್ತಿದೆ.
#ಧ್ರುವಾರುಂಧತೀ_ಅಭಿಜಿತ್
ಸದ್ಯೋಜಾತರು

November 24, 2021

ಉದ್ದಿನಬೇಳೆಯನ್ನು ದಾನ ಮಾಡಿದರೆ ಫಲ ಏನು?

  "ಉದ್ದಿನಬೇಳೆಗೆ ಅಧಿಪತಿ ದೇವಿ "ಸಿದ್ಧಲಕ್ಷ್ಮೀ" ದೇವಿ..
ಪುರುಷ ದೇವತೆಗಳಲ್ಲಿ ಛಾಯಾಗ್ರಹವಾದ ರಾಹು..

೧. ಪ್ರತೀ ತಿಂಗಳು ಪ್ರತೀ ವರ್ಷ ಮಹಾಲಯ ಅಮಾವಾಸ್ಯೆ, ಸಂಕ್ರಮಣಗಳಲ್ಲಿ, ಸೂರ್ಯ-ಚಂದ್ರ ಗ್ರಹಣ ಕಾಲದಲ್ಲಿ, ಕ್ಷಣವತೀ
 ಪ್ರಯೋಗದಲ್ಲಿ, ಮರಣ ಹೊಂದಿದವರಿಗೆ

 ಮೊದಲ ವರ್ಷ ೧೬ ಶ್ರಾಧ್ಧವನ್ನಾದರೂ ಮಾಡದೇ ಇರುವವರು..

ಸುಮಂಗಲಿಯರಿಗೆ ಶ್ರಾಧ್ದದಲ್ಲಿ ಮುತ್ತೈದೆಯರಿಗೆ ಅರಿಸಿನ, ಕುಂಕುಮ ಕೊಡದಿರುವವರು, 

ಜಾತಕದಲ್ಲಿ "ಪಿತೃಶಾಪ" ಇರುವವರು, ಶ್ರಾದ್ಧದಲ್ಲಿ ನಂಬಿಕೆ ಇಲ್ಲದವರು, ತುಂಬಾ ಗಂಡು ಮಕ್ಕಳಿದ್ದರೂ ಶ್ರಾದ್ಧ ಮಾಡದೇ ಇರುವವರು..

ಇವೇ ಮುಂತಾದ ಹಲವು ದೋಷಗಳು, ಮನುಷ್ಯನನ್ನು ನರಕದ ಜೀವನ ಅನುಭವಿಸುವ ಹಾಗೆ ಮಾಡುತ್ತವೆ..

ರೋಗಗಳ ರೂಪದಲ್ಲಿ, ಅಪಮೃತ್ಯುವಿನ ರೂಪದಲ್ಲಿ, ಶತೃಗಳ ರೂಪದಲ್ಲಿ, ಋಣದ ರೂಪದಲ್ಲಿ, ಮನುಷ್ಯನನ್ನು ಕಾಡಿಸುತ್ತವೆ..
ನೆಮ್ಮದಿ ಇಲ್ಲದೆ ನರಕ ಯಾತನೆ ಅನುಭವಿಸುವಿರಿ..

ಇಂತಹವರಿಗೆ ಯಾವುದೇ ಶಾಂತಿ ಮಾಡಿಸಿದರೂ ಹಿಡಿಯುವುದಿಲ್ಲ..
ಈ ಸಮಸ್ಯೆ ಇರುವವರು "ಉದ್ದಿನಬೇಳೆ" ಯಿಂದ ಮಾಡಿದ ತಿನ್ನುವ ಪದಾರ್ಥಗಳನ್ನು ದಾನ ಮಾಡುವುದರಿಂದ ಸ್ವಲ್ಪಮಟ್ಟಿಗೆ ದೋಷ ಕಡಿಮೆಯಾಗುವುದು ..

(ಇದಕ್ಕೇ ಪೂರ್ಣ ಪರಿಹಾರ ತುಂಬಾ ತಿಳಿದವರು ಹೇಳೋದಿಲ್ಲ, ಕಾರಣ "ಶ್ರಾದ್ಧ ಮಾಡುವಾಗ ನಿಯಮ ಪಾಲಿಸಲು, ಶ್ರದ್ಧೆ ಇಂದ ಮಾಡಲೀ ಎಂದು)
ಸಂಕಲ್ಪ ಸಮೇತ ಮಾಡಿ..

೨. ಯಾರ ಮನೆಯಲ್ಲಿ ಮಾಂತ್ರಿಕ ಭಾಧೆಗಳು ಬಹಳವಾಗಿ ನಡೆಯುತ್ತಿರುತ್ತದೆಯೋ, ಅಂಥವರು ಉದ್ದಿನಬೇಳೆಯಿಂದ ಮಾಡಿದ ತಿನ್ನುವ ಪದಾರ್ಥಗಳನ್ನು, "ನರಸಿಂಹ" ದೇವರು, ಪಂಚಮುಖೀ ಆಂಜನೇಯ ಸ್ವಾಮಿ, ಭದ್ರಕಾಳಿ, .. ಇತ್ಯಾದಿ ದೇವರನ್ನು ಪೂಜಿಸಿ ನೈವೇದ್ಯ ಮಾಡಿದರೆ ಸಮಸ್ತ ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೩. ಮನೆಯಲ್ಲಿ ಮಕ್ಕಳು ಹೇಳಿದ ಮಾತು ಕೇಳುವುದಿಲ್ಲವೋ, ಅಂಥವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಉದ್ದಿನಬೇಳೆಯಿಂದ ಮಾಡಿದ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ದಾನ ಮಾಡಿದರೆ, ಮಕ್ಕಳು ಹೇಳಿದ ಮಾತು ಕೇಳುವಂತವರಾಗಿ,ಹಠ ಕೋಪ ಕಮ್ಮಿಯಾಗುತ್ತದೆ..

೪. ವಿವಾಹ ಕಾಲದಲ್ಲಿ ಗಲಾಟೆ ನಡೆಯುತ್ತದೆಂದು ಮುಂಚೆಯೇ ಗೊತ್ತಿದ್ದರೆ, 

ಅಂತಹವರು ವರಪೂಜೆಯ ದಿವಸವಾಗಲೀ, ಅಥವಾ ದೇವತಾಶಾಸ್ತ್ರದ ದಿವಸವಾಗಲೀ, ಮನೆದೇವರ ಪೂಜೆ ಮಾಡಿ, 

ಉದ್ದಿನಬೇಳೆಯಿಂದ ಮಾಡಿದ ಸಿಹಿ ಪದಾರ್ಥ ನೈವೇದ್ಯ ಮಾಡಿ, ಚಿಕ್ಕ ವಯಸ್ಸಿನ ಬ್ರಹ್ಮಚಾರಿ ಬ್ರಾಹ್ಮಣರಿಗೆ ತಾಂಬೂಲದೊಡನೆ ದಾನ ಮಾಡಿದರೆ, ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ..

ಶುಭಕಾರ್ಯದ ನಂತರ ಎಲ್ಲರೂ ಚೆನ್ನಾಗಿರುತ್ತಾರೆ..

೫. ಸಂಸಾರದಲ್ಲಿ ಸತಿ-ಪತಿ ಕಲಹ ಇರುವವರು ಪ್ರತೀ ಮಂಗಳವಾರ ಹಾಗೂ ಶನಿವಾರದ ದಿವಸ "ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ದುರ್ಗಾ ದೇವಿಗೆ(ಯಾವುದಾದರೂ ಒಂದು ದೇವರಿಗೆ), ಉದ್ದಿನವಡೆಯ ಹಾರವನ್ನು ಹಾಕಿಸಿ,

 ಪೂಜಿಸಿ, ಪ್ರಸಾದ ತಿನ್ನುತ್ತಾ ಬಂದರೆ, ಸತಿಪತಿ ಕಲಹ, ಜಗಳಗಳು, ಅನುಮಾನ, ವಿರಸ, ದೂರವಾಗಿ, ಸಮಸ್ಯೆ ನಿವಾರಣೆಯಾಗುತ್ತದೆ ..

ಸುಖ ಶಾಂತಿಯ ನೆಮ್ಮದಿ ಜೀವನ ನಡೆಸುತ್ತಾರೆ.
ಪಿತೃಪಕ್ಷದ ದಾನ ತುಂಬಾ ವಿಶೇಷ, 
ಸರಿಯಾಗಿ ತಿಳಿದು ಮಾಡಿ..

ಶುಭವಾಗಲಿ
ಸರ್ವಜನ ಸುಖಿನೋಭವಂತು

November 21, 2021

ವೇದದಲ್ಲಿ ಗೋಮಾಂಸ ಸೇವನೆ ಇಲ್ಲ

    ಈ ಕೆಳಗೆ ಮಂಡಿಸಿರುವ ವಿಷಯವು ಪೂರ್ಣವಾಗಿ ಹಾಗು ನಿಷ್ಪಕ್ಷಪಾತವಾಗಿ ವೇದಗಳು, ಅದರ ಅನ್ವಯ, ವ್ಯಾಕರಣ, ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ವೇದ ಮಂತ್ರಗಳ ಹಾಗು ಅದರ ಸರಿಯಾದ ಉದ್ದೇಶವನ್ನು ಆದರಿಸುವಂತಾದ್ದಾಗಿದೆ. ಆದ್ದರಿಂದ ಇದು ಮಾಕ್ಸ್ ಮುಲ್ಲರ್, ಗ್ರಿಫಿತ್, ವಿಲ್ಸನ್, ವಿಲಿಯಂಸ್ ಹಾಗು ಇತರ ಭಾರತ ದೇಶದ ಅನ್ವೇಶಕರ ಅಭಿಪ್ರಾಯವನ್ನು ಕುರುಡಾಗಿ ಪ್ರತಿಬಿಂಬಿಸುತ್ತಿಲ್ಲ. ಇವರ ಅನ್ವೇಷಣೆಯು ಪಾಶ್ಚಾತ್ಯ ದೇಶದಲ್ಲಿ ಪ್ರಸಿದ್ದಿ ಹೊಂದಿದ್ದರು ನಮಗೆ ಹಲವಾರು ಬಲವಾದ ಕಾರಣಗಳಿಂದ ಅವರ ಅನ್ವೇಷಣೆಯು ಕಪೋಲಕಲ್ಪಿತ ಹಾಗು ನ್ಯಾಯಯುತವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಭಂಧಿಸಿದಂತೆ ನಾವು ಹೆಚ್ಚಿನ ವಿಷಯವನ್ನು ಈ ವರದಿ ಯಲ್ಲಿ ವಿಮರ್ಶಿಸುತ್ತಿದ್ದೇವೆ.

ವೇದಗಳು – ಪ್ರಪಂಚದ ಮೊದಲನೆಯ ಜ್ಞಾನದ ಪುಸ್ತಕ. ನಮ್ಮ ಮೊದಲನೆ ಭಾಗವಾದ ವೇದಗಳಿಗೆ ಸಂಭಂಧಿಸಿದಂತ ತಪ್ಪು ಗ್ರಹಿಕೆಗಳ ವಿಮರ್ಶೆಗೆ ನಿಮಗೆ ಸ್ವಾಗತ.

ಹಿಂದುಗಳ ಪವಿತ್ರ ಗ್ರಂಥವಾದ ವೇದವು ಶತಕಗಳಿಂದ ಹಲವಾರು ರೀತಿಯಲ್ಲಿ ಹಲವಾರು ಜನರಿಂದ ನಿಂದನೆಗೆ ಗುರಿಯಾಗಿದೆ. ಇವರ ತಪ್ಪು ಗ್ರಹಿಕೆಯಿಂದ ಬಹಳಾ ಅಪವಿತ್ರ ವಿಷಯಗಳನ್ನು ಸೇರಿಸಿ ಜನರನ್ನು ನಂಬಿಸುತ್ತಿದ್ದಾರೆ. ಇವರ ನಿಂದನೆಗಳನ್ನು ಪೂರ್ಣವಾಗಿ ನಂಬಿದರೆ ಹಿಂದುಗಳ ತತ್ವಜ್ಞಾನ, ಸಂಸ್ಕೃತಿ, ಪದ್ಧತಿ, ಕೇವಲ ಬರ್ಬರತೆ, ಅಸಭ್ಯತೆ, ಕ್ರೌರ್ಯತೆ ಹಾಗು ನರಭಕ್ಷತೆಗೆ ಮೀಸಲೆಂದು ಅನಿಸುತ್ತದೆ.

ಹಿಂದುಗಳ ಮೂಲ ಬೇರಾದ ವೇದವು, ಪ್ರಪಂಚದ ಜ್ಞಾನದ ಮೊದಲನೆಯ ಮೂಲವಾಗಿದೆ. ಈ ವೇದಗಳು ಮನುಷ್ಯನ ಪರಮಾನಂದಕ್ಕೆ ಕೈಪಿಡಿಯಾಗಿದೆ. ಇದನ್ನು ಇಷ್ಟಪಡದ ಕೆಲವರು ವೇದಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಸಲುವಾಗಿ ಹುಚ್ಚುಹುಚ್ಚಾದ, ಅರ್ಥ ಗರ್ಭಿತವಲ್ಲದ ವಿಷಯಗಳಿಗೆ ವೇದಗಳೆ ಆಧಾರವೆಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಇವರ ಈ ಪ್ರಯತ್ನದಿಂದ ಬಡವರು ಹಾಗು ಅನಕ್ಷರಸ್ಥರು ಭಾರತದ ಮೂಲ ಆಧಾರವಾದ ವೇದವು ಹೆಂಗಸರ ಮೇಲೆ ದೌರ್ಜನ್ಯ, ಮಂಸ ಭಕ್ಷಣೆ, ಬಹು ಪತ್ನಿತ್ವ, ಜಾತೀಯತೆ ಹಾಗು ಇದೆಲಕ್ಕಿಂತ ಹೆಚ್ಚಾಗಿ ಗೋಮಾಂಸ ಭಕ್ಷಣೆಯನ್ನು ಪ್ರೊತ್ಸಾಹಿಸುತ್ತದೆ ಎಂದು ಅರ್ಥೈಸಿಕೊಳುತ್ತರೆ.

ಯಜ್ಞಗಳಂತಹ ಇತರೆ ಉತ್ಸವಗಳಲ್ಲಿ ಪ್ರಾಣಿಗಳನ್ನು ಬಲಿದಾನ ಮಾಡಲು ವೇದಗಳು ಪ್ರೋತ್ಸಾಹಿಸುವುದು ಎಂಬ ಆಪಾದನೆಗೆ ವೇದಗಳು ಗುರಿಯಾಗಿವೆ. ವಿದೇಶಿಯರಷ್ಟೆ ಅಲ್ಲ, ನಮ್ಮ ದೇಶದ ಎಷ್ಟೊ ಬುದ್ಧಿಜೀವಿಗಳು ಈ ಹಿಂದೆ ಉಲ್ಲೇಖಿಸಿದ ವಿದೇಶಿ ಅನ್ವೇಷಕರ ಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ವೇದಗಳಲ್ಲಿ ಪಾಂಡಿತ್ಯ ಹೊಂದಿದವರಂತೆ ವರ್ತಿಸಿ ವೇದಗಳ ಮೇಲೆ ಹಲವಾರು ಆಪಾದನೆ ಹೊರಸಿದ್ದಾರೆ.

ಗೋಮಾಂಸ ಭಕ್ಷಣೆಯನ್ನು ವೇದವು ಓಪ್ಪುತ್ತದೆ ಎಂಬ ಘನಘೋರ ಸುಳ್ಳನ್ನು ಹೇಳಿ, ಗೋವಿನ ಮೇಲಿರುವಂತಹ ಗೌರವವನ್ನು ಹಾಳುಮಾಡುತಿದ್ದಾರೆ. ಎಲ್ಲಿಯವರಗೆ ವೇದಗಳ ಸಂಪೂರ್ಣ ಜ್ಞಾನ ಹೊಂದಿರುವುದಿಲ್ಲವೊ ಅಲ್ಲಿಯವರೆಗೆ ಸನಾತನ ಧರ್ಮಿಯ ಅನುಯಾಯಿಗಳಾದ ಹಿಂದುಗಳು ಈ ವಿದೇಶಿ ಬೇಟೆಗಾರರಿಗೆ ಸುಲಭ ತುತ್ತಾಗಬಹುದು.

ಸಂಪೂರ್ಣವಾಗಿ ವೇದಗಳನ್ನರಿಯದ ಲಕ್ಷಾಂತರ ಹಿಂದುಗಳು ವಿದೇಶಿಯರು ಮಂಡಿಸುವ ವಿತಂಡವಾದಗಳಿಗೆ, ಹುಚ್ಚು ತರ್ಕಗಳಿಗೆ ಹಾಗು ಸುಳ್ಳಿನ ಸರಮಾಲೆಗೆ ಸೋತು ಶರಣಾಗುತ್ತಿದ್ದಾರೆ.

ವೇದಗಳನ್ನು ಕಲ್ಮಶಗೊಳಿಸಲು ಕೇವಲ ವಿದೇಶಿಯರು ಹಾಗು ಬುದ್ದಿಜೀವಿಗಳು ಮಾತ್ರ ಹೊಣೆಯಲ್ಲ, ಇವರ ಜೊತೆಗೆ ಹಿಂದುಗಳಲ್ಲೆ ಕೆಲವು ಪಂಗಡಗಳು ಆರ್ಥಿಕ ಹಾಗು ಸಾಮಾಜಿಕ ಬಲಹೇನರಾಗಿರುವ ಹಲವು ಪಂಗಡಗಳನ್ನು ವೇದಗಳ ಕಾರಣ ಹೇಳಿ ಅನುಚಿತ ಉಪಯೊಗ ಪಡೆದುಕೊಂಡಿದ್ದರೆ. ವೇದಗಳನ್ನರಿತ್ತಿದ್ದ ಈ ಜನರು, ಅದರ ಜ್ಞಾನವನ್ನು ಇತರರಿಗೆ ಹಂಚದೆ ತಮ್ಮ ಸ್ವಪ್ರಯೊಜನಕ್ಕಾಗಿ ತಾವೆ ಶ್ರೇಷ್ಠರು ಎಂಬ ನಂಬಿಕೆಯನ್ನು ಇತರ ಪಂಗಡಗಳಿಗೆ ಹುಟ್ಟುಹಾಕಿದ್ದಾರೆ.

ವೇದಗಳ ಈ ಎಲ್ಲಾ ಆಪಾದನೆಗಳಿಗೆ ಮುಖ್ಯಕಾರಣವೆಂದರೆ, ಮಧ್ಯಕಾಲೀನ ಬರಹಗಾರರಾದ ಮಾಹಿಧರ್, ಉವಾತ್ ಹಾಗು ಸಾಯನ್ ರ ವ್ಯಾಖ್ಯಾನಗಳ ಟೇಕೆಗಳಿಂದ ಹಾಗು ವೇದಗಳು ಕೇವಲ ವಾಮಾಚಾರ, ಗೂಢಾಚಾರ, ಮಾಟಮಂತ್ರಗಳಿಗೆ ಸೀಮಿತ ಎಂದು ಹಬ್ಬಿಸಿರುವುದು ಇದಕ್ಕೆ ಕಾರಣವಾಗಿದೆ. ವೇದಗಳ ಪಾವಿತ್ರ್ಯತೆಯನ್ನು ಮತ್ತಷ್ಟು ಉಲ್ಬಣಗೊಳಿಸಲು, ಅರ್ಧಜ್ಞಾನ ಹೊಂದಿದ ವಿದೇಶಿ ಅನ್ವೇಶಕರು, ಮಾಹಿಧರ್, ಉವಾತ್ ಹಾಗು ಸಾಯನ್ ರ ವ್ಯಾಖ್ಯಾನಗಳ ಟೇಕೆಯನ್ನು ಭಾಷಾಂತರಿಸಿ ವೇದಗಳನ್ನೇ ಭಾಷಾಂತರ ಮಾಡಿದುದಾಗಿ ಹೇಳಿಕೊಂಡರು.

ಸಂಸ್ಕೃತದ ಬಗ್ಗೆ ಅರ್ಧಜ್ಞಾನ ಹೊಂದಿದಂತಹ ವಿದೇಶಿ ಭಾಷಾಂತರರು ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಬಹು ಅವಶ್ಯಕವಾಗಿರುವಂತಹ ಭಾಷಾಧ್ವನಿ ರೂಪಕ(Phonetic), ನಿಘಂಟು(Vocabulary), ಛಂದಸ್ಸು(Prosody), ಜ್ಯೋತಿಷ್ಯ ಶಾಸ್ತ್ರ(Astronomy), ಮತ್ತು ಇತರ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಓಮ್ಮೆ ಮೂಲ ವೇದಗಳನ್ನು ಓದಿದರೆ ಅವರ ಈ ತಪ್ಪುಗಳನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ನಮ್ಮ(ಅಗ್ನಿವೀರ್) ಪ್ರಯತ್ನದ ಹಿಂದಿರುವ ಉದ್ದೇಶವೇನೆಂದರೆ, ವೇದಗಳ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಅದರ ಪಾವಿತ್ರ್ಯತೆಯನ್ನು ಕಾಪಡುವುದು ಹಾಗು ವೇದಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಲ್ಲದೆ ಪ್ರಪಂಚದ ಎಲ್ಲಾ ಮಾನವರಿಗು ಅನ್ವಯಸುತ್ತದೆ ಎಂದು ತಿಳಿಸುವಂತದ್ದಾಗಿದೆ.



ಭಾಗ – ೧ ಪ್ರಾಣಿ ಹಿಂಸೆ ಮಹಾ ಪಾಪ

ಯಜುರ್ವೇದ ೪೦.೭

ಯಾರು,ಎಲ್ಲಾ ಜೀವಿಗಳು ಒಂದೇ ಆತ್ಮನೆಂದು ತಿಳಿಯುತ್ತಾರೊ ಅವರು ದಡ್ಡತನದಿಂದಾಗಲಿ, ಯಾತನೆಯಿಂದಾಗಲಿ ಬಳಲುವುದಿಲ್ಲ ಏಕೆಂದರೆ ನಾವೆಲ್ಲರೂ ಒಂದೇ ಎಂಬ ಅನುಭವವನ್ನು ಹೊಂದಿರುತ್ತಾರೆ.

ಯಾವ ಮನುಷ್ಯರು ಅನಶ್ವರ ಹಾಗು ಪುನರ್ಜನ್ಮ ಸಿದ್ಧಾಂತಗಳನ್ನು ನಂಬುತ್ತರೊ, ಅವರು ಪ್ರಾಣಿಗಳನ್ನು ಯಜ್ಞಗಳಲ್ಲಿ ಕೊಲ್ಲಲು ಧೈರ್ಯವಾದರೊ ಹೇಗೆ ಮಾಡಿಯಾರು? ಯಾಕೆಂದರೆ ಆ ಪ್ರಾಣಿಗಳಲ್ಲಿ ಒಂದಾನೊಂದು ಸಮಯದಲ್ಲಿ ತಮಗೆ ಹತ್ತಿರವಾಗಿದ್ದ, ಪ್ರೀತಿ ಪಾತ್ರರಾಗಿದ್ದ ಆತ್ಮಗಳನ್ನು ನೋಡುತ್ತಾರೆ.

ಮನುಸ್ಮೃತಿ ೫.೫೧

ಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡುವವರು, ಬಲಿಕೊಡಲೆಂದೆ ಪ್ರಾಣಿಗಳನ್ನು ತರುವವರು, ಪ್ರಾಣಿಗಳನ್ನು ಕೊಲ್ಲುವವರು, ಮಾಂಸವನ್ನು ಮಾರುವವರು, ಮಾಂಸವನ್ನು ಕೊಂಡುಕೊಂಡವರು, ಮಾಂಸದಿಂದ ಅಡುಗೆ ಮಾಡುವವರು, ಮಾಂಸದ ಅಡುಗೆಯನ್ನು ಬಡಿಸುವವರು ಮತ್ತು ಮಾಂಸವನ್ನು ತಿನ್ನುವವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು.

ಅಥರ್ವಣ ವೇದ ೬.೧೪೦.೨

ಓ ಹಲ್ಲುಗಳೆ, ನೀವು ಅನ್ನವನ್ನು ತಿನ್ನಿ, ಗೋಧಿಯನ್ನು ತಿನ್ನಿ ಹಾಗು ಎಳ್ಳನ್ನು ತಿನ್ನಿ. ಈ ಧವಸಧಾನ್ಯಗಳು ನಿಮ್ಮ ಸೇವನೆಗೆಂದೇ ಇರುವುದು. ತಂದೆ ಅಥವ ತಾಯಿಯಾಗಲು ಶಕ್ತವಿರುವವರನ್ನು ಎಂದಿಗು ಕೊಲ್ಲಬೇಡಿ.

ಅಥರ್ವಣ ವೇದ ೮.೬.೨೩

ಹಸಿ ಮಾಂಸವಾಗಲಿ ಅಥವ ಬೇಯಿಸಿದ ಮಾಂಸವಾಗಲಿ, ಮಾಂಸ ತಿನ್ನುವುದನ್ನು ನಾಶಪಡಿಸಬೇಕು. ಮಾಂಸವೆಂದರೆ ಗಂಡಾಗಲಿ, ಹೆಣ್ಣಾಗಲಿ, ಭ್ರೂಣವಾಗಲಿ ಅಥವ ಮೊಟ್ಟೆಯಾಗಲಿ ನಾಶಪಡಿಸುವುದನ್ನು ನಿಲ್ಲಿಸಬೇಕು.

ಅಥರ್ವಣ ವೇದ ೧೦.೧.೨೯

ಅಮಾಯಕರನ್ನು ಕೊಲ್ಲುವುದು ಮಹಾಪಾಪ. ಹಸು, ಕುದುರೆ ಅಥವ ಮನುಷ್ಯರನ್ನು ಎಂದಿಗು ಕೊಲ್ಲಬೇಡಿ.

ವೇದಗಳು, ಪ್ರಾಣಿಹಿಂಸೆ ಮಾಡುವುದು ನಿಷೇಧಿಸಲಾಗಿದೆ ಎಂದು ಇಷ್ಟು ಪರಿಪಕ್ವವಾಗಿ ಹೇಳಿದರೂ ಸಹ ಗೋವು ಮತ್ತು ಇತರ ಪ್ರಾಣಿಗಳನ್ನು ಕೊಲ್ಲಿ ಎಂದು ಹೇಳುವುದು ಎಷ್ಟು ನ್ಯಾಯಯುತವಾಗಿದೆ? ಇದು ನಂಬುವಂತಹ ವಿಷಯವಲ್ಲ.

ಯಜುರ್ವೇದ ೧.೧

“ಓ ಮಾನವನೆ! ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿ ಅಲ್ಲ, ಪ್ರಾಣಿಗಳನ್ನು ರಕ್ಷಿಸು”

ಯಜುರ್ವೇದ ೬.೧೧

ಪ್ರಾಣಿಗಳನ್ನು ರಕ್ಷಿಸು

ಯಜುರ್ವೇದ ೧೪.೮

ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು

ಕ್ರವಿದ – ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು

ಪಿಶಾಚ – ಪಿಸಿತ (ಮಾಂಸ) + ಅಶ (ತಿನ್ನುವವನು) = ಮಾಂಸ ತಿನ್ನುವವನು

ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು) = ಇನ್ನೊಂದು ಜೀವಿಯನ್ನು ಆಹಾರಕ್ಕೆಂದು ಬಳಸುವವನು

ಗರ್ಭದ ಮತ್ತು ಅಂಡದ – ಗರ್ಭವನ್ನು ಅಥವ ಮೊಟ್ಟೆಯನ್ನು ತಿನ್ನುವವನು

ವೇದ ಲಿಪಿಗಳಲ್ಲಿ ಮಾಂಸ ತಿನ್ನುವವರನ್ನು ಯಾವಾಗಲು ನೀಚ ದೃಷ್ಟಿಯಿಂದ ನೋಡಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಷಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಹೊರಗಿಡಿಸಲಾಗಿದೆ.

ಯಜುರ್ವೇದ ೧೧.೮೩

ಎಲ್ಲಾ ದ್ವಿಪಾದಿಗಳು ಹಾಗು ಚತುಷ್ಪಾದಿಗಳು ಶಕ್ತಿಗೊಂಡು ಬೆಳೆಯಲಿ

ಈ ಮೇಲಿನ ಮಂತ್ರವನ್ನು ಹಿಂದುಗಳು ಪ್ರತಿ ಊಟದ ಮೂದಲು ಪಟಿಸುತ್ತಾರೆ. ಯಾವ ತತ್ವಶಾಸ್ತ್ರವು ಪ್ರತಿ ಆತ್ಮದ ಸೌಖ್ಯಕ್ಕಾಗಿ ಪ್ರಾರ್ಥಿಸುತ್ತದೊ ಅಂತಹ ತತ್ವಶಾಸ್ತ್ರವು ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲು ಹೇಗೆ ಸಾಧ್ಯ?



ಭಾಗ – ೨ ಯಜ್ಞಗಳಲ್ಲಿ ಹಿಂಸೆ ಸಲ್ಲದು

ಜನಪ್ರಿಯವಾಗಿ ತಿಳಿದಿರುವಂತೆ, ಯಜ್ಞಗಳಲ್ಲಿ ಪ್ರಾಣಿ ಬಲಿಯಾಗುವುದಿಲ್ಲ. ವೇದಗಳಲ್ಲಿ ಯಜ್ಞಗಳೆಂದರೆ ಶ್ರೇಷ್ಟ ಕಾರ್ಯ ಅಥವ ಉನ್ನತವಾಗಿ ಶುದ್ಧಿಕರಿಸುವ ಕಾರ್ಯ.

ಯಾಸ್ಕ ಆಚಾರ್ಯರು ಹೇಳಿರುವಂತೆ ವೇದಗಳ ಭಾಷಾಶಾಸ್ತ್ರ ಅಥವ ನಿರುಕ್ತದ ಪ್ರಕಾರ ಯಜ್ಞದ ಇನ್ನೊಂದು ಅರ್ಥವೇ ಅಧ್ವಾರ. ಧ್ವಾರ ಎಂದರೆ ಹಿಂಸೆ ಅಥವ ದೌರ್ಜನ್ಯದ ಕೃತ್ಯ. ಅಧ್ವಾರ ಎಂದರೆ ಹಿಂಸೆ ಅಥವ ದೌರ್ಜನ್ಯವಿಲ್ಲದ ಕೆಲಸ. ವೇದಗಳಲ್ಲಿ ಅಧ್ವಾರ ಎಂಬ ಪದದ ಬಳಕೆ ಬಹಳಾ ಉಪಯೋಗಿಸಲಾಗಿದೆ.

ಮಹಾಭಾರತ ನಂತರದ ಕಾಲದಲ್ಲಿ ವೇದಗಳನ್ನು ಅಪವ್ಯಾಖ್ಯಾನಿಸಲಾಗಿದೆ, ಹಾಗು ಮೂಲ ಗ್ರಂಥಕ್ಕೆ ಹೊಸ ವಿಚಾರಗಳನ್ನು ಸೇರಿಸಿ ಅಪಮೌಲ್ಯಗೊಳಿಸಲಾಗಿದೆ. ಶಂಕರಾಚಾರ್ಯರು ವೇದದ ಮೌಲ್ಯಗಳನ್ನು ಮರುಸ್ಥಾಪಿಸಲು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ.

ಆಧುನಿಕ ಭಾರತದ ಪಿತಾಮಹ ಎಂದೇ ಪ್ರಖ್ಯಾತರಾದಂತಹ ಸ್ವಾಮಿ ದಯಾನಂದ ಸರಸ್ವತಿಯವರು, ಅಧಿಕೃತ ಸಾಕ್ಷಾಧಾರಗಳನಿಟ್ಟುಕೊಂಡು ಸರಿಯಾದ ಭಾಷಾ ವಿಧಿ ವಿಧಾನಗಳೊಂದಿಗೆ ವೇದಗಳನ್ನು ವ್ಯಾಖ್ಯಾನಿಸಿದ್ದಾರೆ. ಇವರ ಸಾಹಿತ್ಯದಲ್ಲಿ ವೇದಗಳ ವಿವರಣೆ, ಸತ್ಯರ್ಥ್ ಪ್ರಕಾಶ್ ರವರು ಶಿಥಿಲವಾಗಿ ಭಾಷಾಂತರಿಸಿದ “ಸತ್ಯದ ಬೆಳಕು”(Light of truth), ವೇದಗಳ ಪರಿಚಯ ಮತ್ತು ಇತರೆ ಪಠ್ಯಗಳು ಜನಪ್ರಿಯಗೊಂಡು ವೇದ ತತ್ವಶಾಸ್ತ್ರದ ಅನ್ವಯ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗು ಅದಕ್ಕೆ ಅಂಟಿದ್ದಂತಹ ಕಳಂಕವನ್ನು ಗಮನಾರ್ಹವಾಗಿ ಹೋಗಲಾಡಿಸಲು ಸಾಧ್ಯವಾಯಿತು.

ಈ ಭಾಗದಲ್ಲಿ ನಮ್ಮ ಪವಿತ್ರ ವೇದಗಳು ಯಜ್ಞದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೊಣ.

ಋಗ್ವೇದ: ೧.೧.೪

ಓ ಕಾಂತಿಯುತವಾದ ದೇವರೆ! ನೀನು ಆಜ್ಞಾಪಿಸುವಂತಹ, ಎಲ್ಲಾ ಕಡೆಗಳಿಂದಲೂ ಮಾಡುವಂತಹ ಅಹಿಂಸೆಯ ಈ ಯಜ್ಞವು ಎಲ್ಲಾರಿಗೂ ಬಹಳ ಉಪಯೋಗಕಾರಿಯಾಗಿದೆ ಮತ್ತು ಈ ಯಜ್ಞವು ಆಧ್ಯಾತ್ಮ ತ್ರೈರಾಶಿಯನ್ನು ಹಾಗು ಕೀರ್ತಿವಂತ ಆತ್ಮಗಳನ್ನು ಮುಟ್ಟುತ್ತದೆ.

ಋಗ್ವೇದವು, ಮೊದಲಿನಿಂದಲು ಕೊನೆಯವರೆಗೂ ಯಜ್ಞವನ್ನು ಅಧ್ವಾರ ಅಥವ ಅಹಿಂಸೆ ಎಂದು ವರ್ಣಿಸಲಾಗಿದೆ, ಅಷ್ಟೇ ಅಲ್ಲದೆ ಎಲ್ಲಾ ವೇದಗಳಲ್ಲೂ ಸಹ ಪ್ರಾಣಿ ಹಿಂಸೆಯನ್ನು ವಿರೋಧಿಸಲಾಗಿದೆ. ಹೀಗಿರುವಾಗ ಹಿಂಸೆಯಾನ್ನಾಗಲಿ ಅಥವ ಪ್ರಾಣಿ ಬಲಿಯನ್ನಾಗಲಿ ವೇದಗಳು ನೇರವಾಗಿ ಅಥವ ಪರೋಕ್ಷವಾಗಿ ಸಮ್ಮತಿಸಲು ಹೇಗೆ ತಾನೆ ಸಾಧ್ಯ? ಹಲವಾರು ದುಶ್ಟರ ಪ್ರಯತ್ನದಿಂದ ವೇದಗಳನ್ನು ತಿರುಚಲು ಪ್ರಯತ್ನಿಸಿ, ವೇದಗಳ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದರೆ.

ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಜ್ಞ, ಗೋಮೇಧ ಯಜ್ಞ ಹಾಗು ನರಮೇಧ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೆ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ.

ಯಜುರ್ವೇದವು ಕುದುರೆಗಳ ಬಗ್ಗೆ ಏನು ಹೇಳುವುದೆಂದು ತಿಳಿಯುವುದು ಮುಖ್ಯ

ಯಜುರ್ವೇದ ೧೩.೪೮

ಈ ಗೊರಸುಳ್ಳ, ಹೇಷಾರವ ಮಾದುತ್ತಾ ಇತರೆ ಪ್ರಾಣಿಗಳಿಗಿಂತಲು ವೇಗವಾಗಿ ಚಲಿಸುವಂತ ಪ್ರಾಣಿಯನ್ನು ಸಂಹಾರ ಮಾಡಬೇಡಿ.

ಅಶ್ವಮೇಧ ಯಜ್ಞ ಎಂದರೆ ಕುದುರೆಯನ್ನು ಬಲಿಕೊಡುವುದಲ್ಲ. ಯಜುರ್ವೇದವು ಕುದುರೆ ಬಲಿಯನ್ನು ಮಾಡಲೇಬಾರದೆಂದು ಸ್ಪಷ್ಟವಾಗಿ ಹೇಳಿದೆ.

ಶಥಪಥದಲ್ಲಿ ಅಶ್ವ ಎಂದರೆ ದೇಶ ಅಥವ ಸಾಮ್ರಾಜ್ಯ ಎಂದರ್ಥ.

ಮೇಧ ಎಂಬ ಪದದ ಅರ್ಥ ಸಂಹಾರ ಎಂದಲ್ಲ. ಅದರ ಮೂಲಾರ್ಥದಲ್ಲಿ ಮೇಧ ಎಂದರೆ ವಿವೇಕದಿಂದ ಮಾಡಿದಂತಹ ಕೆಲಸ ಒಟ್ಟು ಗೂಡುಸುವಿಕೆ.

ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಸತ್ಯದ ಬೆಳಕಿನಲ್ಲಿ ಹೀಗೆ ಬರೆಯುತ್ತಾರೆ “ಅಶ್ವಮೇಧ ಯಜ್ಞವು ರಾಷ್ಟ್ರದ, ದೇಶದ ಅಥವ ಒಂದು ಸಾಮ್ರಾಜ್ಯದ ವೈಭವ, ಸುಖ – ನೆಮ್ಮದಿ ಹಾಗು ಸಮೃದ್ಧಿಗೆ ಅರ್ಪಿಸಲಾಗುತ್ತದೆ.

ಗೋಮೇಧ ಯಜ್ಞ ಎಂದರೆ ನಮ್ಮ ಆಹಾರವನ್ನು ಶುಚಿಯಾಗಿಡಲಿ ಅಥವ ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಡಲು / ಸ್ಥಿತ ಪ್ರಜ್ಞರಾಗಲು ಅಥವ ಆಹಾರವನ್ನು ಶುಚಿಮಾಡಲು ಅಥವ ಸೂರ್ಯನ ಕಿರಣಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಥವ ಭೂಮಿಯನ್ನು ಮಲಿನತೆ ಇಂದ ಕಾಪಾಡಿಕೊಳ್ಳುವುದು. ಗೋ ಪದದ ಇನ್ನೊಂದು ಅರ್ಥ ಭೂಮಿ ಎಂದು ಹಾಗು ಭೂಮಿಯನ್ನು ಶುಚಿಯಾಗಿಡಲು ಮಾಡುವ ಯಜ್ಞವೇ ಗೋಮೇಧ ಯಜ್ಞ.

ನರಮೇಧ ಯಜ್ಞ ಎಂದರೆ, ಸತ್ತ ಮನುಷ್ಯನ ದೇಹವನ್ನು ವೇದಗಳ ವಿಧಿ – ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವುದು.



ಭಾಗ – ೩ ವೇದಗಳಲ್ಲಿ ಗೋಮಾಂಸ ಸೇವನೆ ಇಲ್ಲ.

ವೇದಗಳು ಪ್ರಾಣಿಸಂಹಾರವನ್ನು ವಿರೋಧಿಸುತ್ತದೆ, ಅದರಲ್ಲಿಯೊ ಗೋ ಸಂಹಾರವನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಗೋಸಂಹಾರವನ್ನು ನಿಷೇಧಿಸಿದೆ.

ಯಜುರ್ವೇದ ೧೩.೪೯

ರಕ್ಷಣೆಗೆ ಅರ್ಹರಾಗಿರುವಂತಹ ಹಸು ಹಾಗು ಎತ್ತುಗಳನ್ನು ಕೊಲ್ಲಬೇಡಿ

ಋಗ್ವೇದ ೭.೫೬.೧೭

ಋಗ್ವೇದದಲ್ಲಂತೂ ಗೋ ಹತ್ಯೆಯನ್ನು ಮಾನವಹತ್ಯೆಗೆ ಸಮವೆಂದು ಘೋಷಿಸಲ್ಪಟ್ಟಿದೆ. ಇಂತಹ ಹೀನ ಕೃತ್ಯ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳುತ್ತದೆ.

ಋಗ್ವೇದ ೧.೧೬೪.೪೦, ಅಥರ್ವಣ ವೇದ೭.೭೩.೧೧, ಅಥರ್ವಣ ವೇದ ೯.೧೦.೨೦

ಪಾವಿತ್ರ್ಯತೆ, ಜ್ಞಾನ ಹಾಗು ಐಶ್ವರ್‍ಯವನ್ನು ಏತೇಚ್ಛವಾಗಿ ಪಡೆಯಲು ಆಜ್ಞ – ಅಂದರೆ ಹಸುಗಳನ್ನು ಕೊಲ್ಲದೆ ಅವುಗಳಿಗೆ ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ನೀಡಿ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ರಕ್ಷಿಸತಕ್ಕದ್ದು. ವೇದಗಳ ಶಬ್ದಕೋಶದಲ್ಲಿ ಅಥವ ನಿಘಂಟಿನಲ್ಲಿ ಗೋ ಅಥವ ಹಸುವಿಗೆ ಸಮಾನಾರ್ಥಕವಾಗಿ ಆಜ್ಞ, ಅಹಿ ಮತ್ತು ಅದಿತಿ ಎಂದಿ ಬಳಸಲಾಗಿದೆ.

ಯಾವುದನ್ನು ಕೊಲ್ಲಬಾರದೊ ಅದನ್ನು ಆಜ್ಞ ಎನ್ನುತ್ತಾರೆ

ಯಾವುದನ್ನು ಸಂಹಾರಮಾಡಬಾರದೊ ಅದನ್ನು ಅಹಿ ಎನ್ನುತ್ತಾರೆ

ಯಾವುದನ್ನು ತುಂಡುತುಂಡಾಗಿ ಕತ್ತರಿಸಬಾರದೊ ಅದನ್ನು ಅದಿತಿ ಎನುತ್ತಾರೆ

ಈ ಮೂರು ಪದಗಳು ಹಸುಗಳನ್ನು ಯಾವುದೇ ರೀತಿಯಲ್ಲಿ ಹಿಂಸಿಸುವಂತಿಲ್ಲ ಎಂದು ಅರ್ಥೈಸುತ್ತದೆ. ಹಸುಗಳಿಗೆ ಸಂಬಂಧಿಸಿದಂತೆ ವೇದಗಳಲ್ಲಿ ಈ ಪದಗಳು ಎತೇಚ್ಛವಾಗಿ ಬಳಸಲಾಗಿದೆ.

ಋಗ್ವೇದ ೧.೧೬೪.೨೭

ಗೋ – ಆಜ್ಞ – ಆರೋಗ್ಯ ಮತ್ತು ಐಶ್ವರ್‍ಯವನ್ನು ತರುವುದು

ಋಗ್ವೇದ ೫.೮೩.೮

ಆಜ್ಞ – ಗೋವುಗಳಿಗೆ ಶುದ್ಧ ನೀರನ್ನು ಪೂರೈಸಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸಬೇಕು.

ಋಗ್ವೇದ ೧೦.೮೭.೧೬

ಯಾರು ಮಾನವರನ್ನು, ಕುದುರೆಗಳನ್ನು ಅಥವ ಇತರೆ ಪ್ರಾಣಿಗಳ ಮಾಂಸವನ್ನು ಆಹಾರಕ್ಕೆಂದು ಬಳಸುತ್ತಾರೊ ಹಾಗು ಹಾಲು ಕೊಡುವ ಆಜ್ಞ ಹಸುಗಳನ್ನು ನಾಶ ಪಡಿಸುತ್ತಾರೊ ಅವರನ್ನು ತೀವ್ರವಾಗಿ ಶಿಕ್ಷಿಸಬೇಕು.

ಋಗ್ವೇದ ೮.೧೦೧.೧೫

ಗೋವುಗಳನ್ನು ಕೊಲ್ಲಬೇಡಿ. ಗೋವು ಬಹಳಾ ಮುಗ್ಧ ಪ್ರಾಣಿ. ಅವುಗಳನ್ನು ತುಂಡುತುಂಡಾಗಿ ಕತ್ತರಿಸಬೇಡಿ.

ಯಜುರ್ವೇದ ೧೨.೭೩

ಆಜ್ಞ ಹಸುಗಳು ಹಾಗು ಎತ್ತುಗಳು ಸಮೃದ್ಧಿತರುತ್ತದೆ.

ಯಜುರ್ವೇದ ೩೦,೧೮

ಗೋವುಗಳನ್ನು ಕೊಲ್ಲುವವರನ್ನು ನಾಶ ಮಾಡು

ಅಥರ್ವಣ ವೇದ ೧.೧೬.೪

ಯಾರಾದರೊ ಹಸುಗಳನ್ನು, ಕುದುರೆಗಳನ್ನು ಅಥವ ಮನುಷ್ಯರನ್ನು ನಾಶಪಡಿಸಿದರೆ ಅವರನ್ನು ಸೀಸದ ಗುಂಡಿನಿಂದ ಕೊಲ್ಲಬೇಕು.

ಅಥರ್ವಣ ವೇದ ೩.೩೦.೧

ಆಜ್ಞ – ಕೊಲ್ಲಬಾರದಂತಹ ಗೋವು ಹೇಗೆ ತನ್ನ ಕರುವನ್ನು ಪ್ರೀತಿಸುತ್ತದೋ ಹಾಗೆಯೇ ಒಬ್ಬರನ್ನೊಬ್ಬರು ಪ್ರೀತಿಸಿ.

ಅಥರ್ವಣ ವೇದ ೧೧.೧.೩೪

ಹಸುವು ಎಲ್ಲಾ ದಯೆಯ ಉಗಮಸ್ಥಾನ.

ಋಗ್ವೇದದ, ಆರನೆಯ ಮಂಡಲದ, ೨೮ನೆಯ ಎಲ್ಲಾ ಸೂಕ್ತಗಳು ಅಥವ ಸ್ತೂತ್ರಗಳು ಗೋವಿನ ಕೀರ್ತಿ ಮಹಿಮೆಯನ್ನು ಹಾಡಿಹೊಗಳುತ್ತದೆ.

೧. ಹಸುಗಳನ್ನು ಆರೋಗ್ಯಕರ ರೀತಿಯಲ್ಲಿದಯೇ, ಅವುಗಳು ತೊಂದರೆಗಳಿಂದ ದೂರವಿದಯೇ, ಅವುಗಳು ಸುಭದ್ರವಾಗಿದಯೇ ಎಂದು ನೊಡಿಕೊಳ್ಳುತ್ತಿರಬೇಕು.

೨. ಹಸುಗಳ ಬಗ್ಗೆ ಕಾಳಜಿ ವಹಿಸುವವರನ್ನು ದೇವರು ಆಶೀರ್ವದಿಸುತ್ತದೆ.

೩. ಶತ್ರುಗಳು ಸಹ ಹಸುಗಳ ಮೇಲೆ ಅಸ್ತ್ರಗಳನ್ನು ಪ್ರಯೋಗಿಸಬಾರದು.

೪. ಯಾರೊಬ್ಬರು ಹಸುಗಳನ್ನು ಹತ್ಯೆಮಾಡಬಾರದು.

೫. ಹಸುವು ಸಮೃದ್ಧಿ ಹಾಗು ಶಕ್ತಿಯನ್ನು ತರುತ್ತದೆ.

೬.ಹಸುಗಳು ಖುಶಿಯಾಗಿ ಹಾಗು ಆರೋಗ್ಯಕರ ರೀತಿಯಲ್ಲಿ ಇಟ್ಟಲ್ಲಿ ಗಂಡಸರು ಹಾಗು ಹೆಂಗಸರು ರೋಗ ರುಜಿನಗಳಿಂದ ದೂರವಿದ್ದು ಅಭಿವೃದ್ಧಿ ಹೊಂದುತ್ತಾರೆ.

೭. ಹಸುವು ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ಸೇವಿಸಲು ಅವುಗಳನ್ನು ಯಾರು ಕೊಲ್ಲದೆ ನಮಗೆ ಸಮೃದ್ಧಿಯನ್ನು ನೀಡಲಿ

ವೇದಗಳಲ್ಲಿ ಕೇವಲ ಹಸುಗಳನಲ್ಲದೆ ಸಕಲ ಜೀವಜಂತುಗಳನ್ನು ಉತ್ತಮವಾಗಿ ಪ್ರಶಂಸಿಸಲಾಗಿದೆ ಹಾಗು ಪ್ರಾಣಿ ಹಿಂಸೆಯನ್ನು ಖಂಡಿಸಲಾಗಿದೆ ಎಂದು ಸಾಬೀತು ಪಡಿಸಲು ಯಾರಿಗಾದರೊ ಇದಕ್ಕಿಂತ ಹೆಚ್ಚಿನ ಸಾಕ್ಷಾಧಾರಗಳನ್ನು ನೀಡಬೇಕೆ?

ಯಾವುದೇ ಅಮಾನವೀಯ ಕೃತ್ಯಗಳಿಗೆ ವೇದಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಈ ಎಲ್ಲಾ ಸಾಕ್ಷಾಧಾರಗಳು ಧೃಢಪಡಿಸುತ್ತದೆ. ಅದರಲ್ಲೂ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ಬಗ್ಗೆ ವೇದಗಳ ಪೂರ್ಣ ವಿರ್‍ಓಧವಿದೆ. ಆದ್ದರಿಂದ ವಿದ್ಯಾವಂತ ಓದುಗರೆ, ವೇದಗಳಲ್ಲಿ ಪ್ರಾಣಿ ಹಿಂಸೆ ಇದಯೇ? ಅಥವ ಇಲ್ಲವೇ? ಎಂಬುದನ್ನು ನೀವೇ ನಿರ್ಧರಿಸಿ.

೧೪ನೇ ಎಪ್ರಿಲ್ ೨೦೧೦ – ಹೆಚ್ಚೋಲೆ

ಈ ಲೇಖನ ಪ್ರಕಟವಾದ ನಂತರ, ವೇದಗಳ ಪಾವಿತ್ರ್ಯತೆಯನ್ನು ಹಾಗು ನಮ್ಮ ಪುರಾತನ ಸಂಸ್ಕೃತಿಯನ್ನು ಸಹಿಸದ ಕೆಲವರು ನಾನಾ ಕಡೆಗಳಿಂದ ತೀವ್ರವಾದ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಈ ನಮ್ಮ ಲೇಖನವು ತಪ್ಪೆಂದು ತೋರಿಸಲು ಹೆಚ್ಚಿನ ಆಧಾರಗಳನ್ನು ನೀಡಿ ನಮಗೆ ಹಲವಾರು ಅಂಚೆಗಳು ಬಂದಿವೆ. ಇದರಲ್ಲಿ ಮುಖ್ಯವಾಗಿ ಋಗ್ವೇದದ ೨ ಮಂತ್ರಗಳು, ಮನುಸ್ಮೃತಿಯ ಕೆಲವು ಶ್ಲೋಕಗಳು ಹಾಗು ಇತರೆ ಮೂಲಗಳು.

ನಾವು ನಿಮ್ಮ ಸಂಶಯಗಳನ್ನು ಬಗೆಹರಿಸಲು ಈ ಕೆಳಗಂಡಂತೆ ಹೆಚ್ಚಿನೆ ವಿವರಣೆ ನೀಡುತ್ತಿದ್ದೇವೆ.

೧. ಈ ಲೇಖನವು ಮನುಸ್ಮೃತಿಯ ಆಧಾರವನ್ನು ಉಲ್ಲೇಖಿಸಿದೆ. ಅದರಂತೆ ಯಾರಾದರು ಕೊಲ್ಲಲು ಅನುಮತಿ ಕೊಟ್ಟರೂ ಅವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು. ಆದ್ದರಿಂದ ಈ ಹಿಂದೆಯೇ ಹೇಳಿದಂತೆ ಎಷ್ಟೊ ಶ್ಲೋಕಗಳು ಹಾಗು ವಿಷಯಗಳನ್ನು ಹೊಸದಾಗಿ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಈ ನಿಮ್ಮ ಸಂಶಯವು ಕಲಬೆರಕೆ ಮನುಸ್ಮೃತಿಯನ್ನೋ ಅಥವ ತಪ್ಪು ವ್ಯಾಖ್ಯಾನ ಮಾಡಿದಂತಹ ಕೃತಿಯಿಂದಲೋ ಬಂದಂತಾಗಿದೆ. ಮೊಟ್ಟಮೊದಲಾಗಿ ಮನುಸ್ಮೃತಿಯಲ್ಲಿ ಪ್ರಾಣಿಹಿಂಸೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ.

೨.ಇಲ್ಲಿ ಕೆಲವರು ಗೋಮಾಂಸ ಸೇವನೆಯು ವೇದಗಳಲ್ಲಿ ಅಥವ ಸನಾತನ ಪಠ್ಯಗಳಲ್ಲಿ ಉದಾಹರಣೆಗಳನ್ನು ತೋರಿಸಲೇಬೇಕೆಂಬ ಹುಚ್ಚು ಹಠವಾದಿಗಳು ಮಾನ್ಸ ವನ್ನು ಮಾಂಸ ಎಂದು ಅರ್ಥೈಸಿಕೊಂಡಿದ್ದಾರೆ. ನೈಜತೆಯಲ್ಲಿ ಮಾನ್ಸ ಎಂಬ ಪದವು ಮೆತ್ತಗಿರುವ ತಿರುಳು ಎಂದರ್ಥ. ಈ ಮೆತ್ತಗಿರುವ ತಿರುಳು ಹಣ್ಣಿನದಾಗಿರಬಹುದು, ತರಕಾರಿಯದಾಗಿರಬಹುದು ಅಥವ ಮಾಂಸದಾದರೊ ಆಗಿರಬಹುದು. ವೇದಗಳಲ್ಲಿ ಪ್ರಾಣಿ ಹಿಂಸೆಯನ್ನು ಅಷ್ಟು ತೀವ್ರವಾಗಿ ವಿರೋಧಿಸಿರುವುದರಿಂದ, ಈ ಮಾನ್ಸ ಎಂಬ ಪದಾದ ಅರ್ಥ ಖಂಡಿತ ಮಾಂಸವಾಗಿರಲು ಸಾಧ್ಯವೇ ಇಲ್ಲ.

೩. ಇನ್ನು ಕೆಲವರು ಸತ್ಯಕ್ಕೆ ದೂರವಿರುವಂತಹ, ಪ್ರಮಾಣವಲ್ಲದ ಪಠ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅದೇ ಉತ್ತಮ ಸಾಕ್ಷಿಗಳೆಂದು ಬಣ್ಣಿಸಿದ್ದಾರೆ. ಇವರು ಮಾಡುವಂತಹ ಕೆಲಸ ಬಹಳಾ ಸುಲಭ. ಯಾವುದಾದರೋ ಸಂಸ್ಕೃತದಲ್ಲಿ ಬರೆದಂತಹ ಪಠ್ಯಗಳನ್ನೊ, ವಾಕ್ಯಗಳನ್ನೊ ಧರ್ಮವೆಂದೇ ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಭಾಷಾಂತರಿಸಿ ನಮ್ಮ ಈ ಸನಾತನ ಧರ್ಮವೇ ತಪ್ಪೆಂದು ಧೃಡಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ನಮ್ಮನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತಿರುಚಿದ ಸಾಕ್ಷಾಧಾರಗಳನ್ನು ತೋರಿಸಿ ಮೂರ್ಖರನ್ನಾಗಿ ಮಾಡುತಿದ್ದಾರೆ.

೪. ಇವರು ಹೇಳುವಂತಹಾ ೨ ಋಗ್ವೇದದ ಮಂತ್ರಗಳನ್ನು ವಿಶ್ಲೇಶಿಸೋಣ;

ಪ್ರತಿಪಾದನೆ : ಋಗ್ವೇದ ೧೦.೮೫.೧೩

ಮಗಳ ಮದುವೆಯ ಸಮಾರಂಭದಲ್ಲಿ ಎತ್ತುಗಳನ್ನು ಹಾಗು ಹಸುಗಳನ್ನು ಬಲಿಕೊಡುತ್ತಾರೆ.

ಸತ್ಯಾಂಶ: ಋಗ್ವೇದದ ಈ ಮಂತ್ರದಲ್ಲಿ ” ಸೊರ್ಯನಕಿರಣವು ಚಳಿಗಾಲದಲ್ಲಿ ಬಲಹೀನಗೊಂಡು, ವಸಂತ ಋತುವಿನಲ್ಲಿ ಮತ್ತೆ ಬಲಶಾಲಿಯಾಗುತ್ತದೆ” ಎಂದು.

ಹಸುವನ್ನು ಸಹಾ ಗೋ ಎಂದು ಕರೆಯಲಾಗುವುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಬದಲಾಗಿ ಗೋವು ಎಂದೇ ಮಂತ್ರದಲ್ಲಿ ಭಾಷಾಂತರಿಸಿದ್ದಾರೆ. ಈ ಮಂತ್ರದಲ್ಲಿ ಬಲಹೀನ ಎಂಬುದಕ್ಕೆ ಸಂಸ್ಕೃತದಲ್ಲಿ ಹನ್ಯತೆ ಎಂಬ ಪದ ಉಪಯೋಗಿಸಲಾಗಿದೆ. ಇದರ ಇನ್ನೊಂದರ್ಥ ಕೊಲ್ಲುವುದು ಎಂದು. ಕೆಲವರು ಬೇಕೆಂದಲೆ ಈ ಮಂತ್ರವನ್ನು ಸಂಪೂರ್ಣವಾಗಿ ಹೇಳದೆ, ಅವರಿಗೆ ಬೇಕೆಂದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ಇಂತಹ ಅಜ್ಞಾನಿ ಮೋಸಗಾರರಿಗೆ ಕೇಳುವುದಿಷ್ಟೇ, ಚಳಿಗಾಲದಲ್ಲಿ ಕೊಂದಂತಹ ಹಸುವು ಪುನಃ ವಸಂತ ಋತುವಿನಲ್ಲಿ ಬಲಶಾಲಿಯಾಗಲು ಹೇಗೆ ತಾನೆ ಸಾಧ್ಯ?

೫. ಪ್ರತಿಪಾದನೆ : ಋಗ್ವೇದ ೬.೧೭.೧

ಇಂದ್ರನು ಹಸು, ಕುರಿ, ಕುದುರೆ ಹಾಗು ಎಮ್ಮೆಗಳ ಮಾಂಸವನ್ನು ತಿನ್ನುತ್ತಿದ್ದ.

ಸತ್ಯಾಂಶ : ಋಗ್ವೇದದ ಈ ಮಂತ್ರವು “ಹೇಗೆ ಮರದ ಸೌದೆಯು ಯಜ್ಞದ ಬೆಂಕಿಯನ್ನು ಹೆಚ್ಚಿಸುತ್ತದೊ ಹಾಗೆಯೇ ಉತ್ತಮ ವಿಧ್ವಾಂಸರು ಪ್ರಪಂಚವನ್ನು ಪ್ರಾಕಾಶಿಸುತ್ತಾರೆ” ಎಂದು ಹೇಳುತ್ತದೆ.

ಈ ಮಂತ್ರದಲ್ಲಿ ಅದು ಹೇಗೆ ಇಂದ್ರ, ಹಸು, ಕುರಿ, ಕುದುರೆ ಹಾಗು ಎಮ್ಮೆಗಳು ಬಂದವೊ ಇವರ ದಡ್ಡತಲೆಗಳಿಗೆ ಮಾತ್ರ ತಿಳಿದಿರುವಂತದ್ದು.

ಕೊನೆಯದಾಗಿ ನಾನು ಎಲ್ಲಾರಿಗೂ ಸವಾಲು ಹಾಕುತ್ತೇನೆ, ವೇದಗಳ ಯಾವುದಾದರೋ ಮಂತ್ರಗಳಲ್ಲಿ ಗೋಮಾಂಸ ಸೇವನೆಯನ್ನು ಪರೋಕ್ಷವಾಗಾದರೋ ಸಮ್ಮತಿಸಿದ್ದು ಅದು ಧೃಡಪಟ್ಟಲ್ಲಿ ಅವರು ಹೇಳಿದಂತಹ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ, ಇಲ್ಲವಾದಲ್ಲಿ ಅವರು ವೇದಗಳ ನಿಜಸಾರವನ್ನು ಬೆಂಬಲಿಸಲು ಒಪ್ಪಿಕೊಂಡು ವೇದಗಳ ಅನುಯಾಯಿಯಾಗಬೇಕು.
BY AGNIVEER
-December 23, 2011

November 20, 2021

ಸ್ತ್ರೀ ಅಂದರೆ ಬರೀ ಅವಶ್ಯಕತೆ ಅಲ್ಲ.

*ಶಿವನಿಗೆ➖ಪಾರ್ವತಿ*

*ರಾಮನಿಗೆ➖ಸೀತೆ*

*ಕೃಷ್ಣನಿಗೆ➖ರಾಧೆ*

*ನಾರಾಯಣನಿಗೆ➖ಲಕ್ಷ್ಮೀ*

*ಮಂತ್ರ ಪಠಣದಲ್ಲಿ➖ಗಾಯತ್ರಿ*

*ಗ್ರಂಥ ಪಠಣದಲ್ಲಿ➖ಗೀತಾ*

*ದೇವರೆದುರಿಗೆ➖ವಂದನ,*

 *ಅರ್ಚನ, ಪೂಜಾ, ಆರತಿ,*

 *ಆರಾಧನಾ.. ಇವರ ಜೊತೆಗೆ ಶ್ರದ್ಧಾ.*

🔹 ನಮ್ಮ ದಿನಚರಿಯಲ್ಲಿ
ಉದಯಕ್ಕೆ➖ಉಷಾ.. ಅರುಣ
ಸಂಜೆಗೆ ➖ ಸಂಧ್ಯಾ
ರಾತ್ರಿಗೆ➖ನಿಶಾ,  
ಬೆಳಕಿಗೆ➖ಜ್ಯೋತಿ, ದೀಪ, ದೀಪಿಕಾ, ಪ್ರಭಾ..
ಬೆಳದಿಂಗಳಿಗೆ➖ರಜನಿ
ಸೂರ್ಯಕಿರಣಕ್ಕೆ➖ರಶ್ಮಿ, ಕಿರಣ
ಚಂದಿರನಿಗೆ➖ಶಶಿ, ಶಶಿಕಲಾ, ಚಂದ್ರಕಲಾ
ಹೆಸರಾಗುವುದಕ್ಕೆ➖ಕೀರ್ತಿ
ಕನಸಿಗೆ➖ಸ್ವಪ್ನ
ನೋಟಕ್ಕೆ➖ನಯನಾ, ನೇತ್ರ..
ಕೇಳುವುದಕ್ಕೆ➖ಶ್ರಾವ್ಯ, ಶ್ರಾವಣಿ,
ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣಿ
ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ
ಹಸು, ಆಕಳಿಗೆ➖ನಂದಿನಿ
ಜಗತ್ತಿಗೆ➖ಜಗದೀಶ್ವರಿ, ಜಗದಾಂಬೆ
ದೇಶಕ್ಕೆ➖ಭಾರತಿ, ಭಾರತಾಂಬೆ
ಕನ್ನಡ ನಾಡಿಗೆ➖ಭುವನೇಶ್ವರಿ
ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ
ಸಮರ್ಪಣೆಗೆ➖ಅರ್ಪಣಾ
ಆಹಾರಕ್ಕೆ➖ಅನ್ನಪೂರ್ಣ
ನಡೆಯುವುದಕ್ಕೆ➖ಹಂಸಾ
ನಗುವಿಗೆ➖ಸುಹಾಸಿನಿ..
ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ
ಸುವಾಸನೆಗೆ➖ಚಂದನ, ಪರಿಮಳ
ಒಳ್ಳೆಯ ನುಡಿಗೆ➖ಸುಭಾಷಿಣಿ
ತೇಜಸ್ಸಿಗೆ➖ತೇಜಸ್ವಿನಿ
ಚುಕ್ಕಿಗೆ➖ಬಿಂದು, ನಕ್ಷತ್ರ
ಗೆರೆಗೆ➖ರೇಖಾ, ಶಶಿರೇಖಾ
ಮುತ್ತಿಗೆ➖ಸ್ವಾತಿ
ಹರಳಿಗೆ➖ರತ್ನ
ಮಾದರಿಗೆ➖ಸ್ಪೂರ್ತಿ, ಪ್ರೇರಣಾ
ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ
ಕೆಲಸಕ್ಕೆ➖ಕೃತಿ, ಕೃತಿಕ
ಇಷ್ಟಕ್ಕೆ➖ಪ್ರೀತಿ
ನೀರಿಗೆ➖ಗಂಗಾ
ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ
ಬೆಳ್ಳಿಗೆ➖ರಜತ, ರಂಜಿತ
ಚಿತ್ತಾರಕ್ಕೆ➖ಚಿತ್ರ
ಊಹೆಗೆ➖ಕಲ್ಪನಾ
ನಿಜ ಸಂಗತಿಗೆ➖ಸತ್ಯವತಿ..
ಶುದ್ಧತೆಗೆ➖ನಿರ್ಮಲ, ಪವಿತ್ರ
ಆಲೋಚನೆಗೆ➖ಭಾವನಾ
ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣಕ್ಕೆ➖ವಿದ್ಯಾ
ಬುದ್ಧಿಗೆ, ಚತುರತೆಗೆ➖ಪ್ರತಿಭಾ
ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ
ಕೋಪಕ್ಕೆ➖ಭೈರವಿ, ಕಾಳಿ
ಧೈರ್ಯಕ್ಕೆ➖ದುರ್ಗೆ
ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ
ಹೆಸರಾಗುವುದಕ್ಕೆ➖ಕೀರ್ತಿ
ಹಾಡಿಗೆ➖ಸಂಗೀತ
ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ
ನಾಟ್ಯ➖ಮಯೂರಿ
ಸಾಹಿತ್ಯ➖ಕವಿತಾ, ಕಾವ್ಯ
ನಿಸರ್ಗಕ್ಕೆ➖ಪ್ರಕೃತಿ
ರಕ್ಷಣೆಗೆ➖ಸುರಕ್ಷಾ
ವಿದ್ಯಾಭ್ಯಾಸಕ್ಕೆ➖ವಿದ್ಯಾ
ಸಂಪಾದನೆಗೆ➖ಲಕ್ಷ್ಮೀ
ಸ್ಪೂರ್ತಿಗೆ➖ಪ್ರೇರಣಾ
ಮೌನಕ್ಕೆ➖ಶಾಂತಿ
ಮಧುರತೆಗೆ➖ಮಾಧುರಿ, ಮಂಜುಳ
ಕನಿಕರಕ್ಕೆ➖ಕರುಣಾ
ಆಕ್ರೋಶಕ್ಕೆ➖ಕಾಳಿ 
ವಾತ್ಸಲ್ಯಕ್ಕೆ➖ಮಮತಾ
ಆಯುಷ್ಯಕ್ಕೆ➖ಜೀವಿತಾ
ಮೋಡಗಳಿಗೆ➖ಮೇಘ, ಮೇಘನಾ
ಚಿಮುಕಿಸುವಿಕೆಗೆ➖ಸಿಂಚನಾ
ಬಿಳುಪಿಗೆ➖ಶ್ವೇತಾ, ಗೌರಿ
ಕಪ್ಪಿಗೆ➖ಕೃಷ್ಣೆ
ವಾಸನೆಗೆ➖ಪರಿಮಳ
ಹೂವಿಗೆ➖ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..
ಬಳ್ಳಿಗೆ➖ಲತಾ, 
ಶುಭಕರ➖ಮಂಗಳ,  ಸುಮಂಗಳ, ಶುಭಾಂಗಿನಿ
ಒಳ್ಳೆಯ ಮನಸ್ಸಿಗೆ➖ಸುಮನ
ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ
ವಿಸ್ತಾರಕ್ಕೆ➖ವಿಶಾಲ, ವೈಶಾಲಿ
ಜೇನಿಗೆ➖ಮಧು
ಬಯಕೆಗೆ➖ಆಶಾ, ಅಪೇಕ್ಷಾ
ತೀರ್ಮಾನಕ್ಕೆ➖ನಿಶ್ಚಿತ
ಬರಹಕ್ಕೆ➖ಲಿಖಿತ
ನೆರಳಿಗೆ➖ಛಾಯಾ
ನಿಧಾನಕ್ಕೆ➖ಮಂದಾಕಿನಿ
ಹೂ ಗೊಂಚಲಿಗೆ➖ಮಂಜರಿ
ಗೌರವಕ್ಕೆ➖ಮಾನ್ಯ, ಮಾನ್ಯತಾ

ನದಿಗಳಿಗೆ➖ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ, 

     *ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು ,   ಆಕೆಗೆ ಒಂದು..ನಮನಗಳು.*


 *ಯತ್ರ ನಾರ್ಯಸ್ತು ಪೂಜ್ಯತೇ ,*
*ರಮಂತೇ ತತ್ರ ದೇವತಾಃ.*


*ಅಂದರೆ :- ಎಲ್ಲಿ‌ ನಾರಿಯರು (ಹೆಣ್ಣು ಮಕ್ಕಳು)  ಫೂಜಿಸಿ , ಗೌರವಿಸಲ್ಪಡುತ್ತಾರೂ , ಅಲ್ಲಿ ದೇವತೆಗಳು ನೆಲೆಸುತ್ತಾರೆ.*

*ಅಂದರೆ :- ಎಲ್ಲಿ  ಹೆಣ್ಣು ಮಕ್ಕಳು    ಸುಖವಾಗಿ  ಸಂತೋಷವಾಗಿ  ಇರುತ್ತಾರೋ ,  ಅಲ್ಲಿ‌ ಸದಾಕಾಲ ಶಾಂತಿ  ಸಮೃದ್ಧಿ , ಸಂಪತ್ತು , ಐಶ್ವರ್ಯ ಮೊದಲಾದ ಸುಖ ಜೀವನವು ಪ್ರಾಪ್ತಿಯಾಗುತ್ತದೆ.*

November 18, 2021

33 ಕೋಟಿ ದೇವತೆಗಳು

 ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ.. 
ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ.

ಅಸಲಿಗೆ ಈ *ಕೋಟಿ* ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಮೆಖಾಲೆ,ಮುಲ್ಲರ್ ನಂತವರು ತಮಗೆ ಬೇಕಾದ ಒಂದು ಮತ-ಧರ್ಮದವರಿಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು...
ಹಿಂದೂಗಳು ಅಂತಹ ಇತಿಹಾಸವನ್ನು ಓದಿ ಪೆದ್ದರೆನಿಸಿಕೊಂಡರು.
ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು ಮತ್ತು ಅವರ ಹೆಸರು ಮತ್ತು
 ಹಿಂದೂ ಧಾರ್ಮಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ 33 ಕೋಟಿ ದೇವತೆಗಳು ಯಾರು, ಅವರ ಹೆಸರುಗಳೇನು ಗೊತ್ತೇ!?
ಹಿಂದೂ ಧರ್ಮ – ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಬಹುತೇಕ ಜನರು ಇಲ್ಲಿ ‘ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ. 
ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ. ವಾಸ್ತವದಲ್ಲಿ, ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ. 
ಸಂಸ್ಕೃತದಲ್ಲಿ *‘ಕೋಟಿ’* ಅಂದರೆ *‘ವಿಧ’, ‘ವರ್ಗ’* (type) ಎಂಬ ಅರ್ಥವೂ ಇದೆ.
ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು. ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು. 
ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು. 
ಯಜುರ್ವೇದ, ಅಥರ್ವ ವೇದ, ಶತಪಥ ಬ್ರಾಹ್ಮಣ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ. ಇವರೇ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು. ಹಿಂದೂ ಗ್ರಂಥಗಳು ಮಾತ್ರವಲ್ಲ, ಬೌದ್ಧ, ಪಾರಸಿ ಮೊದಲಾದವು ಕೂಡಾ 33 ದೇವವರ್ಗಗಳ ಕುರಿತು ಹೇಳುತ್ತವೆ. ಬೌದ್ಧರ ದಿವ್ಯ ವಾದನ ಮತ್ತು ಸುವರ್ಣ ಪ್ರಭಾಸ ಸೂತ್ರಗಳಲ್ಲಿ ಇದರ ಉಲ್ಲೇಖವಿದೆ.
ಈಗ ದೇವತೆಗಳ ಈ 33 ವರ್ಗಗಳನ್ನೂ, ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ :
12 ಆದಿತ್ಯರು (ದ್ವಾದಶಾದಿತ್ಯರು) : 1. ತ್ವಷ್ಟ  2. ಪೂಷ  3. ವಿವಸ್ವಾನ್  4. ಮಿತ್ರ  5. ಧಾತಾ  6. ವಿಷ್ಣು  7. ಭಗ  8. ವರುಣ  9. ಸವಿತೃ 10. ಶಕ್ರ  11. ಅಂಶ  12. ಅರ್ಯಮ

11 ರುದ್ರರು (ಏಕಾದಶರುದ್ರಾಃ) : 1. ಮನ್ಯು  2. ಮನು  3. ಮಹಿನಸ  4. ಮಹಾನ್  5. ಶಿವ  6. ಋತಧ್ವಜ  7. ಉಗ್ರರೇತಾ  8. ಭವ  9. ಕಾಲ  10. ವಾಮದೇವ  11. ಧೃತವೃತ
8 ವಸುಗಳು (ಆಷ್ಟವಸವಃ) : 1.ಧರಾ 2.ಪಾವಕ 3.ಅನಿಲ 4.ಅಪ 5.ಪ್ರತ್ಯುಷ 6.ಪ್ರಭಾಸ 7.ಸೋಮ 8.ಧ್ರುವ
ಮತ್ತಿಬ್ಬರು : 1. ಇಂದ್ರ 2.ಪ್ರಜಾಪತಿ
ತ್ರಯತ್ರಿಂಶತಿ (33) ಕೋಟಿ ದೇವತೆಗಳು ಯಾರೆಲ್ಲ ಎಂದು ತಿಳಿಯಿತಲ್ಲ? ಈ ಹೆಸರುಗಳನ್ನು ಬಾಯಿಪಾಠ ಮಾಡುವುದು ಬಹಳ ಸುಲಭ. ಯಾರಾದರೂ ಇನ್ನು 33 ಕೋಟಿ ದೇವತೆಗಳ ಹೆಸರು ಹೇಳಿ ಎಂದರೆ ಹಿಂದೆ ಮುಂದೆ ನೋಡುವ ಅಗತ್ಯವೇ ಇಲ್ಲ! ಅಲ್ಲವೆ?
 (ಸಂಗ್ರಹ ಮಾಹಿತಿ)

November 16, 2021

ಮುಹೂರ್ತ

ಮುಹೂರ್ತವಿಟ್ಟಂತೆ   

ಇಂದಿನ ಸಟ್ಲೇಜ್ ಎನ್ನುವುದು ಹಿಂದೆ ಶತದ್ರು ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅಂದರೆ ನೂರು ಕವಲುಗಳು ಸೇರಿ 
ಒಂದಾಗಿ ಹರಿಯುವ ನದಿ ಅದು. ಅಥವಾ ಅನೇಕ ಕವಲುಗಳು ಸೇರಿ ಹರಿಯುವ ನದಿ. 

’ಶತಧಾ ವಿದ್ರುತಾ ಯಸ್ಮಾಚ್ಛತದ್ರುರಿತಿ ವಿಶ್ರುತಾ’ ಎಂದು ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಅಂದರೆ ನೂರನ್ನು ಅನೇಕ ಎಂದು ತೆಗೆದುಕೊಂಡು ಅನೇಕ ಧಾರೆಗಳಾಗಿ ಪ್ರವಹಿಸುವುದರಿಂದ ಶತದ್ರು ಎಂದು ಪ್ರಸಿದ್ಧವಾಗಿದೆ ಎನ್ನಲಾಗಿದೆ. ಅದಕ್ಕಾಗಿಯೇ ಶತ-ದ್ರು. ಶುತುದ್ರು ಎಂತ ಸಹ ಕರೆದಿರುವುದು ಇದೆ. ಹಿಂದಿನ ವಿಪಾಶಾ ಎನ್ನುವ ನದಿಯನ್ನು ಇಂದು ಬಿಯಾಸ್ ಎಂದು ಕರೆಯಲಾಗುತ್ತಿತ್ತು. ವಿಪಾಶಾ ಮತ್ತು ಶತದ್ರು ಎನ್ನುವ ಈ ಎರಡು ನದಿಗಳ ಸಂಗಮದ ಹತ್ತಿರ ವಿಶ್ವಾಮಿತ್ರ ಮಹರ್ಷಿ ಬರುತ್ತಾರೆ. ಅಲ್ಲಿ ವಿಶ್ವಾಮಿತ್ರ ಮತ್ತು ನದಿಯ ನಡುವೆ ಸಂವಾದ ಏರ್ಪಡುತ್ತದೆ. ಇದು ಋಗ್ವೇದದ 3ನೇ ಮಂಡಲದ 33ನೇ ಸೂಕ್ತದಲ್ಲಿ ಬರುತ್ತದೆ. ವಿಶ್ವಾಮಿತ್ರ ಮತ್ತು ನದಿಗಳೇ ದೃಷ್ಟಾರರಾಗಿಯೂ, ನದೀ ವಿಶ್ವಾಮಿತ್ರ ಮತ್ತು ಇಂದ್ರನೇ ದೇವತೆಗಳಾಗಿರುವ ಸೂಕ್ತ ಇದು.
ಪಿಜವನ ಎನ್ನುವವನ ಮಗನಾದ ಸುದಾಸನಿಗೆ ವಿಶ್ವಾಮಿತ್ರ ಮಹರ್ಷಿಗಳು ಪುರೋಹಿತರಾಗಿದ್ದರು. ಒಮ್ಮೆ ಸುದಾಸ ಒಂದು ಯಾಗವನ್ನು ಮಾಡಿಸುತ್ತಾನೆ. ಯಾಗದ ಪೌರೋಹಿತ್ಯದ ನಿಮಿತ್ತವಾಗಿ ದಕ್ಷಿಣೆಯ ರೂಪವಾಗಿ ಸಂಪತ್ತನ್ನು ವಿಶ್ವಾಮಿತ್ರರಿಗೆ ಕೊಡುತ್ತಾನೆ. ಆ ಸಂಪತ್ತನ್ನು ತೆಗೆದುಕೊಂಡು ತನ್ನ ಆಶ್ರಮಕ್ಕೆ ಹೋಗುವಾಗ ಕಳ್ಳರು ಸಂಪತ್ತನ್ನು ಅಪಹರಿಸುವ ಸಲುವಾಗಿ ಹಿಂದೆಯೇ ಬರುತ್ತಾರೆ. ವಿಶ್ವಾಮಿತ್ರ ಮಹರ್ಷಿಗಳು ವೇಗವಾಗಿ ನದೀ ಸಂಗಮದ ಸ್ಥಳಕ್ಕೆ ಬಂದಾಗ ನದಿ ಉಕ್ಕಿ ಹರಿಯುತ್ತಿತ್ತು. ಅಪಹರಣಕಾರರಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಮಹರ್ಷಿಗಳಿಗಿತ್ತು. ಆಗ ನದಿಯನ್ನು ಪ್ರಾರ್ಥಿಸುತ್ತಾರೆ. ಅದೇ ಇಲ್ಲಿ ಸಂವಾದದ ರೂಪದಲ್ಲಿ ಬಂದಿದೆ. ಅದನ್ನು ನಾನಿಲ್ಲಿ ಬರೆಯುತ್ತಿಲ್ಲ. ಆದರೆ ಈ ಸೂಕ್ತದಲ್ಲಿ ಬರುವ ಒಂದು ಶಬ್ದವನ್ನು ಗಮನಿಸುವೆ. 

ಅಲ್ಲಿ ಸೂಕ್ತದಲ್ಲಿ ’ರಮಧ್ವಂ ಮೇ ವಚಸೇ ಸೋಮ್ಯಾಯ ಋತಾವರೀರುಪಮುಹೂರ್ತಮೇವೈಃ’ ಎನ್ನುವುದಾಗಿ ಬರುತ್ತದೆ. ಇಲ್ಲಿ ’ಮುಹೂರ್ತಮೇವೈಃ’ ಎನ್ನುವಲ್ಲಿನ ಮುಹೂರ್ತ ಎನ್ನುವುದನ್ನು ಗಮನಿಸಿದರೆ ಈ ಶಬ್ದವು ಋಗ್ವೇದದಲ್ಲಿ ಎರಡು ಸಲ ಮಾತ್ರವೇ ಬಂದಿದೆ. ತುಂಬಿ ಹರಿಯುತ್ತಿರುವ ಪುಣ್ಯವಾಹಿನಿಗಳಾದ ನದಿಗಳೇ ನಿಮ್ಮ ಪ್ರವಾಹವನ್ನು ಕ್ಷಣಕಾಲ ನಿಲ್ಲಿಸಿ ನಾನು ಕುಶಿಕನ ಮಗನಾದ ವಿಶ್ವಾಮಿತ್ರನಾಗಿದ್ದೇನೆ. ನನ್ನ ಆತ್ಮರಕ್ಷಣೆಗಾಗಿ ನಾನು ನಿಮ್ಮನ್ನು ಸ್ತುತಿಸುತ್ತಿದ್ದೇನೆ ಎನ್ನುವ ಪ್ರಾರ್ಥನೆ ಇದೆ. ಅಂದರೆ ಇಲ್ಲಿ ಮುಹೂರ್ತ ಎನ್ನುವುದು ಕಾಲದ ಸೂಚಕವಾದರೂ ಅದು ಕಾಲದ ಅತ್ಯಂತ ಚಿಕ್ಕ ಅವಧಿ ಎನ್ನುವುದು ತಿಳಿಯುತ್ತದೆ. 

ಇನ್ನು ಇಂದ್ರಾಪರ್ವತ ಎನ್ನುವ ಇದೇ ಮಂಡಲದ ೫೩ನೇ ಸೂಕ್ತದಲ್ಲಿ ಇದೇ ವಿಶ್ವಾಮಿತ್ರ ಮಹರ್ಷಿ ಇಂದ್ರಾಪರ್ವತೌ ಎನ್ನುವ ದೇವತೆಯನ್ನು ಸ್ತುತಿಸುವ ಮಂತ್ರದಲ್ಲಿ ತ್ರಿರ್ಯದ್ದಿವಃ ಪರಿ ಮುಹೂರ್ತ ಮಾಗಾತ್ ಎನ್ನುವಲ್ಲಿ ಸಹ ಇಂದ್ರನು ಒಂದೇ ಕಾಲದಲ್ಲಿ ನಡೆಯುವ ಯಜ್ಞಗಳಲ್ಲಿ ಭಾಗಿಯಾಗುತ್ತಾನೆ ಎನ್ನುವ ಅರ್ಥ. ಅಂದರೆ ಇರುವ ಒಂದೇ ಮುಹೂರ್ತದಲ್ಲಿ ಅನೇಕ ಕಡೆ ಇರುತ್ತಾನೆ ಎನ್ನುವುದು. ಈ ಋಕ್ಕನ್ನು ಸೂಕ್ಷ್ಮವಾಗಿ ಗಮನಿಸಿದರೆ. ಇಲ್ಲಿ ಇಂದ್ರ ಒಂದೇ ವಸ್ತುವನ್ನು ಒಡೆದು ವಿಭಾಗಿಸಿ ಅನೇಕವನ್ನಾಗಿ ಮಾಡುತ್ತಾನೆ. ಅದನ್ನೇ ನಾನಾವಿಧವಾದ ಶಕ್ತಿಗಳನ್ನಾಗಿ ಪರಿವರ್ತಿಸುತ್ತಾನೆ ಎನ್ನುವುದನ್ನು ನೋಡಿದರೆ ಅಣುವೊಂದನ್ನು ವಿಭಾಗಿಸಿ ಅನೇಕವನ್ನಾಗಿ ಮಾಡಿ ಪರಮಾಣುಗಳಿಂದ ನಾವು ಶಕ್ತಿಯನ್ನು ಪಡೆಯಬಹುದು ಎನ್ನುವುದಕ್ಕೆ ಹತ್ತಿರವಾಗುತ್ತದೆ. ಇಲ್ಲಿಯೂ ಸಹ ಮುಹೂರ್ತ ಎನ್ನುವುದು ಅತ್ಯಂತ ಚಿಕ್ಕ ಅವಧಿ ಎನ್ನುವುದು ತಿಳಿಯುತ್ತದೆ. ಇನ್ನು ಮುಹೂರ್ತದ ಕುರಿತು ನಿರುಕ್ತದಲ್ಲಿ ೨:೨೫ರಲ್ಲಿ ಮುಹೂರ್ತಮ್ ಏವೈಃ ಅಯನೈಃ ಅವನೈರ್ವಾ | ಮುಹೂರ್ತಃ ಮುಹುಃ ಋತುಃ| ಋತುಃ ಅರ್ತೇಃ ಗತಿಕರ್ಮಣಃ| ಮುಹುಃ ಮೂಢಃ ಇವ ಕಾಲಃ | ಮೂಹೂರ್ತ ಎನ್ನುವುದರ ಅರ್ಥ ಸ್ವಲ್ಪ ಕಾಲ ಅಥವಾ ಕ್ಷಣಕಾಲ. ಮುಹುಃ ಮತ್ತು ಋತುಃ ಎನ್ನುವ ಶಬ್ದಗಳಿಗಿರುವ ಅರ್ಥವೇ ಬೇಗ ಕಳೆಯುವ ಕಾಲ ಎಂದು ಅರ್ಥ.

’ಮುಹೂರ್ತ’ ಶಬ್ದದ ಈ ಅರ್ಥವು ಶತಪಥ ಬ್ರಾಹ್ಮಣದಲ್ಲಿ 1:8:3:17ರಲ್ಲಿ ’ತನ್ ಮುಹೂರ್ತಂ ಧಾರಯಿತ್ವಾ’ ಮತ್ತು 2, 3. 2. 5 ’ಅಥ ಪ್ರಾತಃ ಅನಶಿತ್ವಾ ಮುಹೂರ್ತ ಸಭಾಯಾಮಾಶಿತ್ವಾಪಿ’ ಇತ್ಯಾದಿಗಳಲ್ಲಿಯೂ ಕಾಳಿದಾಸನ ರಘುವಂಶ 5.58ರಲ್ಲಿ ಅಲಂ ಹ್ರಿಯಾ ಯನ್ಮುಹೂರ್ತಂ ದಯಾಪರೋ ಭೂಃ ಪ್ರಹರನ್ನಪಿ ತ್ವಂ ಎಂದು ಮುಹೂರ್ತದ ಕುರಿತಾಗಿ ಹೇಳುವ  ಅಭಿಜಾತ ಸಂಸ್ಕೃತ ಸಾಹಿತ್ಯ ಗ್ರಂಥಗಳಲ್ಲಿಯೂ ಕಾಣಬರುತ್ತದೆ. 

ಶತಪಥ ಬ್ರಾಹ್ಮಣದ 10. 4. 2. 18 ಮತ್ತು 12, 3, 2, 5ರಲ್ಲಿ ’ಮುಹೂರ್ತ’ ಶಬ್ದದ ಇನ್ನೊಂದು ಅರ್ಥವಿದೆ; ಹಗಲು15 ಮುಹೂರ್ತಗಳೂ ರಾತ್ರಿ 15 ಮುಹೂರ್ತಗಳಾಗುತ್ತವೆ ಇವೆರಡೂ ಒಟ್ಟೂ ಸೇರಿದರೆ ಒಂದು ಅಹೋರಾತ್ರದಲ್ಲಿ 30 ಮುಹೂರ್ತ ಗಳಾಗುತ್ತವೆ ಎಂದು ಅಲ್ಲಿ ಹೇಳಲಾಗಿದೆ; ಒಂದು ಸಂವತ್ಸರದಲ್ಲಿ 10800 ಮುಹೂರ್ತಗಳಿರುತ್ತವೆ. 30ಕ್ಕೆ 360ನ್ನು ಗುಣಿಸಿದರೆ ಸಿಗುವುದೇ 10800. ಇಲ್ಲಿ ’ಮುಹೂರ್ತ’ವೆಂದರೆ ಹಗಲಿನ ಹದಿನೈದರಲ್ಲಿ ಒಂದು ಅಂಶ. ಎಂದರೆ ಸಾಧಾರಣವಾಗಿ ಎರಡು ನಾಡಿಕಾ ಅಥವಾ ಗಳಿಗೆಗಳಷ್ಟು. ಮುಹೂರ್ತದ ಕುರಿತು ಬೇಕಷ್ಟು ಬರೆಯಬಹುದು ಆದರೆ ಪ್ರಾಚೀನತೆಯನ್ನು ಗಮನಿಸಿದೆ. ಕಾಲದ ಅತ್ಯಂತ ಚಿಕ್ಕ ಅವಧಿ ಮುಹೂರ್ತ ಎಂದು ತೆಗೆದುಕೊಂಡಿರುವುದಂತೂ ಸ್ಪಷ್ಟ. ನಮ್ಮಲ್ಲಿ ಸಾಮಾನ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಹೂರ್ತ ಎಂದರೆ ಅದು ಒಂದೇ ಅವಧಿಯನ್ನು ಶುಭ ಸಮಾರಂಭಗಳಿಗೆ ಇಟ್ಟಿರುತ್ತಾರೆ. ಅಂದರೆ10 ರಿಂದ ಹತ್ತೂವರೆಯ ಮಹೂರ್ತದಲ್ಲಿ ಎಂದು ಹೇಳುವುದಿಲ್ಲ ಹತ್ತುಗಂಟೆಯ ಮುಹೂರ್ತ ಎಂದು ಹೇಳುತ್ತಾರೆ. ಅದೇನೇ ಇರಲಿ 48 ನಿಮಿಷಗಳ ಒಂದು ಅವಧಿಯನ್ನೂ ಮುಹೂರ್ತ ಎಂದು ಹೇಳಲಾಗುತ್ತದೆ. ಇದು ಮುಹೂರ್ತದ ಆರಂಭ. 

#ಮುಹೂರ್ತ_ಕ್ಷಣಿಕ 
Sadyoojath

November 12, 2021

ನಾವಾಡುವ ಭಾಷೆಯಲ್ಲಿ ಮೃದುತ್ವ ತುಂಬಿರಬೇಕು

ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ. 

ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು. ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು. 

ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ.

ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ. 

ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ.

ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು. 

ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು. 

ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ. 

ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ...

November 5, 2021

ಗೋವು ಮತ್ತು ಗೋವಧೆ

ಗೋವನ್ನು ಪ್ರೀತಿಸದವರಾರು ? 

ಗೋವಧೆಯನ್ನು ವಾಜಸನೇಯ ಸಂಹಿತೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಖಂಡಿಸಿದ್ದು ಸಿಗುತ್ತದೆ. ಅಘ್ನಾ ಎಂದು ಕರೆದು(ಅಘ್ನಾ ಎಂದರೆ ಗೋವು ಎಂದು ಹೇಳಬಹುದು ಅಥವಾ ಗೋವನ್ನು ವಧಿಸಿ ಕಾನೂನು ಉಲ್ಲಘಿಂಸಿದವನ್ನೂ ಹೇಳಬಹುದು.) ಗೋವನ್ನು ವಧಿಸುವುದು ನಿಷೇಧ ಎಂದು ಹೇಳಿರುವುದಲ್ಲದೇ, ಗೋವನ್ನು ವಧಿಸಿ ತಿಂದರೆ ಆತ ಸಮಾಜದಲ್ಲಿ ಬಹಿಷ್ಕಾರಕ್ಕೆ ಒಳಗಾಗುತ್ತಾನೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲ ಗೋವಧೆಯು ಮಹಾಪಾಪ ಎಂದು ಹೇಳಿದ್ದಲ್ಲದೇ ವಧಾಕಾರರೇ ಅಸುರರು ಎಂದಿರುವುದು ಸಿಗುತ್ತದೆ. ಇನ್ನು ಅಥರ್ವವೇದದ ೧೨ನೇ ಕಾಂಡದ ನಾಲ್ಕನೇ ಸೂಕ್ತ ಕಶ್ಯಪನು ದೃಷ್ಟಾರನಾಗಿರುವ ವಶಾ ಗೋ ಸೂಕ್ತದಲ್ಲಿ ಗೋವಿನಿಂದ ಸಿಗುವ ವಿವಿಧ ಬಗೆಯ ಔಷಧೀಯ ಉಪಯೋಗವನ್ನು ತಿಳಿಸುತ್ತ, ಗೋವನ್ನು ವಧಿಸುವುದು ಪರಮಪಾಪ ಮತ್ತು ಪವಿತ್ರವಾದ ಪ್ರಾಣಿ ಪೂಜಾರ್ಹವಾದುದು ಎಂದಿರುವುದು ತಿಳಿಯುತ್ತದೆ. ಗೋವಧೆ ಎನ್ನುವುದು ವೇದಮತ ಅಥವಾ ವೈದಿಕ ಧರ್ಮಕ್ಕೆ ಅನುಸರಣೀಯ ಮಾರ್ಗವಲ್ಲ. ವೈದಿಕ ಧರ್ಮವನ್ನೇ ಆಚರಿಸುವ ಹಿಂದು ಧರ್ಮಕ್ಕೂ ನಿಷಿದ್ಧವೇ ಸರಿ. ಹಾಗೆ ನೋಡಿದರೆ, ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಗೋವನ್ನು ಸಾಕುತ್ತಾರೆ. ಎಲ್ಲಾ ಕಡೆಯೂ ಅದರ ವಿವಿಧ ಉಪಯೋಗವನ್ನು ಕಂಡುಕೊಂಡಿದ್ದರೂ ಹಾಲು ಮತ್ತು ತುಪ್ಪ ಬೆಣ್ಣೆಗಳು ಹೆಚ್ಚು ಉಪಯೋಗವಾಗುತ್ತವೆ. 
ಸೂರ್ಯೋದಯದ ಕಾಲದಲ್ಲಿ ಬರುವ ಹೊಂಗಿರಣವನ್ನು ಮತ್ತು ಉಷೋದೇವತೆಯ ರಥವನ್ನು ಗೋವುಗಳು ಎಳೆದೊಯ್ಯುತ್ತವೆ ಎನ್ನುವುದು ಋಗ್ವೇದ ಮತ್ತು ಯಜುರ್ವೇದದಲ್ಲಿ ಉಲ್ಲೇಖಿಸಿದ್ದು ನೋಡಬಹುದು. ಮಳೆಯನ್ನು ಸುರಿಸುವ ಮೋಡವನ್ನೂ ಸಹ ಗೋವುಗಳೆಂದು ಕರೆಯುವುದು ರೂಢಿಯಲ್ಲಿತ್ತು. ಆ ಮೋಡದಿಂದ ಉಂಟಾಗುವ ಸಿಡಿಲು ಕರು ಋಗ್ವೇದದಲ್ಲಿ ಹೇಳಿದೆ. ಮಳೆಯೇ ಆ ಗೋವಿನ ಹಾಲು. ಈ ಗೋವಿಗೆ ಪ್ರಶ್ನಿ ಎಂದು ಸಹ ಕರೆಯಲಾಗಿದೆ. ಈ ಭೂಮಿಯನ್ನೇ ಗೋಮಾತೆ ಎಂದು ನಾವು ನಂಬಿರುವುದೂ ಇದೆ. 

ಕಕ್ಷೀವಾನ್ ಮಹರ್ಷಿಯ ವಂಶದ ಶಬರ ಎನ್ನುವ ಮಹರ್ಷಿ ಗೋವುಗಳಿಗಾಗಿಯೇ ಸೂಕ್ತವನ್ನು ಕಂಡುಕೊಂಡದ್ದು ಋಗ್ವೇದದ ಹತ್ತನೇ ಮಂಡಲದಲ್ಲಿ ಸಿಗುತ್ತದೆ. ಈ ಭೂಮಿಯ ಮೇಲಿರುವ ನಿರುಪದ್ರವಿ ಜೀವಿಗಳಲ್ಲಿ ಗೋವು ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎನ್ನುವುದು ಋಷಿಯ ಅಭಿಪ್ರಾಯ. ಗೋವು ಯಾರಿಗೂ ತೊಂದರೆ ಕೊಡುವುದಿಲ್ಲ ಮತ್ತು ಗೋವಿನ ಕಣಕಣವೂ ಪರೋಪಕಾರಕ್ಕೆ ಮೀಸಲಾಗಿದೆ ಎನ್ನುವುದು ಶಬರನ ಅಭಿಪ್ರಾಯ. ಗೋವಿನ ಹಾಲು, ಮೊಸರು ಮತ್ತು ತುಪ್ಪಗಳು ಅತ್ಯುತ್ಕೃಷ್ಟ ಎನ್ನುತ್ತಾನೆ. ನಾವು ಇಂದು ಪಂಚಾಮೃತಗಳ ಸಾಲಿಗೆ ಸೇರಿಸಿದ್ದೇವೆ. ಪಂಚಗವ್ಯಗಳೂ ಅಷ್ಟೇ ಪವಿತ್ರ ಎನ್ನುವುದು ಋಷಿಯ ಅಭಿಪ್ರಾಯ. ಜೊತೆಗೆ ಈತನೇ ಗೋ ಹತ್ಯೆಯನ್ನು ಅತ್ಯಂತ ಪ್ರಬಲವಾಗಿ ಖಂಡಿಸಿದ್ದಾನೆ. ಇನ್ನು ಶಬರ ಮಹರ್ಷಿ ಗೋವಿನ ಕುರಿತಾಗಿಯೇ ಅಧ್ಯಯನ ಮಾಡಿ ಈ ರೀತಿಯಾಗಿ ಸ್ತುತಿಸಿದ್ದಾನೆ.

ಯಾಃ ಸರೂಪಾ ವಿರೂಪಾ ಏಕರೂಪಾ ಯಾ ಸಾಮಗ್ನಿರಿಷ್ಟ್ಯಾ ನಾಮಾನಿ ವೇದ |
ಯಾ ಅಂಗಿರಸಸ್ತಪಸೇಹ ಚಕ್ರುಸ್ತಾಭ್ಯಃ ಪರ್ಜನ್ಯ ಮಹಿ ಶರ್ಮ ಯಚ್ಛ || 
ಗೋವುಗಳು ಎಲ್ಲವೂ ಒಂದೇ ರೂಪದಲ್ಲಿ ಇರುವುದಿಲ್ಲ. ಅವುಗಳ ಆಕಾರದಲ್ಲಿಯೂ ಸಹ ಸಮಾನತೆ ಇಲ್ಲ. ಕೆಲವು ಚಿಕ್ಕವಾಗಿದ್ದರೆ ಇನ್ನು ಕೆಲವು ದೊಡ್ಡದಾಗಿರುತ್ತವೆ. ಇನ್ನು ಕೆಲವು ದೇಹದಲ್ಲಿ ಬಡಕಲಾಗಿರುತ್ತವೆ. ಇನ್ನು ಕೆಲವು ಗೋವುಗಳು ಒಂದು ಬಣ್ಣದಲ್ಲಿದ್ದರೆ ಇನ್ನು ಕೆಲವು ಬೇರೆ ಬೇರೆ ಬಣ್ಣದ್ದಾಗಿರುತ್ತವೆ. ಆದರೆ ಯಾವುವು ಆಕಾರದಲ್ಲಿಯೂ ದೇಹದಲ್ಲಿಯೂ ಮತ್ತು ಬಣ್ಣದಲ್ಲಿಯೂ ಒಂದೇ ರೀತಿಯಾಗಿರುತ್ತವೆಯೋ ಅವಗಳ ಗುಣದರ್ಮಗಳು ಸಹ ಒಂದೇ ರೀತಿಯಾಗಿರುವ ಸಾಧ್ಯತೆ ಜಾಸ್ತಿ ಇರುತ್ತದೆ ಎನ್ನುತ್ತಾನೆ. ಅಂಥವುಗಳನ್ನು ಅಗ್ನಿಯು ಗುರುತಿಸುತ್ತಾನೆ ಎಂದು ಶಬರ ಮಹರ್ಷಿ ಹೇಳುವುದು ತಿಳಿಯುತ್ತದೆ. ಅಗ್ನಿ ಮತ್ತು ಅಂಗಿರಸರು ಹತ್ತಿರದವರು. ಈ ಅಂಗಿರಸರು ತಮ್ಮ ತಪಸ್ಸಾಧನೆ ಮತ್ತು ಸಾಮರ್ಥ್ಯದಿಂದ ಗೋವುಗಳ ಹುಟ್ಟಿಗೆ ಕಾರಣರಾದರೆ, ಎಲ್ಲಾ ಗೋವಿನ ಸಂತತಿಗೆ ಪರ್ಜನ್ಯನೇ ಸುಖ ನೆಮ್ಮದಿಯನ್ನು ನೀಡುತ್ತಾನೆ ಎನ್ನುವುದು ಈ ಋಕ್ಕಿನ ಅಭಿಪ್ರಾಯ. 

ಮಯೋಭೂರ್ವಾತೋ ಅಭಿ ವಾತೂಸ್ರಾ ಊರ್ಜಸ್ವತೀರೋಷಧೀರಾ ರಿಶಂತಾಂ |
ಪೀವಸ್ವತೀರ್ಜೀವಧನ್ಯಾಃ ಪಿಬಂತ್ವವಸಾಯ ಪದ್ವತೇ ರುದ್ರ ಮೃಳ ||
ರುದ್ರನನ್ನು ಕುರಿತು ಸ್ತುತಿಸುತ್ತಾ, ಗೋವುಗಳಿರುವಲ್ಲಿ ವಾಯುವು ಹಿತಕರವಾಗಿ ಬೀಸಲಿ, ರಸಭರಿತವಾದ ಮತ್ತು ಶಕ್ತಿಯನ್ನು ಒದಗಿಸುವಂತಹ ಹುಲ್ಲುಗಳು ಗೋವುಗಳಿಗೆ ಸಿಗುವಂತಾಗಲಿ. ಗೋವುಗಳಿಗೆ ನೀರು ಅತ್ಯವಶ್ಯ. ನೀರು ಯಥೇಚ್ಚವಾಗಿ ಸಿಗಲಿ. ನಮಗೆ ಹಾಲಿನ ರೂಪದಲ್ಲಿ ಸಿಗುವ ಅಹಾರವನ್ನು ಅ ರುದ್ರನು ಒದಗಿಸಲಿ. ಗೋವುಗಳಿಗೆ ಯಾವುದೇ ತೊಂದರೆಯಾಗದಂತೆ ಸುಖವನ್ನು ಒದಗಿಸು ಎನ್ನುವ ಪ್ರಾರ್ಥನೆ ಇಲ್ಲಿ ದೊರಕುತ್ತಿದೆ. 

ಶಿವಾಃ ಸತೀರುಪ ನೋ ಗೋಷ್ಠಮಾಕಸ್ತಾಸಾಂ ಎನ್ನುವಲ್ಲಿ ಈ ಗೋವುಗಳೆಲ್ಲ ನಮಗೆ ಸುಖ ಸಂತೋಷಗಳಲ್ಲದೇ ನಮ್ಮ ದೇಹಕ್ಕೆ ಆರೋಗ್ಯವನ್ನು ಕರುಣಿಸಿ ನಮಗೆ ಮಂಗಳವನ್ನುಂಟುಮಾಡಬಲ್ಲವು. ಅಂತಹ ಗೋವುಗಳನ್ನು ನಮ್ಮ ಕೊಟ್ಟಿಗೆಯ ಸಮೀಪಕ್ಕೆ ತಂದು ಕೊಡು ಎನ್ನುವದಾಗಿ ಇಂದ್ರನನ್ನು ಪ್ರಾರ್ಥಿಸುವುದು ಕಾಣುತ್ತದೆ. ಹೀಗೇ ಋಗ್ವೇದವಿರಲಿ ಮಿಕ್ಕ ವೇದಗಳಿರಲಿ ಗೋವನ್ನು ಮಾತೆಯ ಸ್ಥಾನದಲ್ಲಿಟ್ಟು ಪೂಜಿಸಿವೆಯೇ ಹೊರತು ಅದೊಂದು ವಧಾರ್ಹ ಪ್ರಾಣಿಯಾಗಲ್ಲ. ಗೋವಿನಷ್ಟು ಸಾಧು ಪ್ರಾಣಿ ವಿರಳಾತಿವಿರಳ.

ಸದ್ಯೋಜಾತರು

November 2, 2021

ಹಾಲಿನಿಂದ ಬೆಳಕಾಗುವ ಪರಿ..!

ಇದೇನಿದು ಹಾಲಿನಿಂದ ಬೆಳಕೇ?
ಸಂಸ್ಕೃತದಲ್ಲಿ ಒಂದು ಕಥೆ ಇದೆ..
ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ.. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ..
ಆಗ ಹಾಲು ಹೇಳಿತಂತೆ..' ದೇವರೇ.. ನಾನು ಹಾಲು ಆಕಳು.. ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ... ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.. ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ..
ಆಗ ದೇವರು ನಕ್ಕು.
' ಎಲೈ .. ಹಾಲೇ ಇಲ್ಲಿ ಕೇಳು.. ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು..
ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ.. ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ.. ಮೊಸರಾಗಿ ಕಡೆದರೆ.. ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ.. ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ... ಬೆಣ್ಣೆಯನ್ನು ಹದವಾಗಿ ಕಾಯಿಸಿ.. ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ.. ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ.
ಈಗ ಹೇಳು ಒಂದು ದಿನ ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ..
ಅಥವಾ ಕ್ಷಣ ಕ್ಷಣವೂ.. ಅನುದಿನವೂ .. ದಿನ ದಿನವೂ.. ಬೆಳೆದು.. ರೂಪಾಂತರ ಪಡೆದು .. ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ...
ದೇವರ ಮಾತಿಗೆ..
ಹಾಲು ಮೂಕವಾಯಿತು..
ಶರಣಾಯಿತು..
ತನ್ನ ಮನದ ಅಂಧಕಾರ.. ಮದದಿಂದ ಹೊರಬಂತು..
ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು..
ನಾವು ಹಾಗೇ ಅಲ್ವಾ.. ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ.. ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ..

ಕತ್ತರಿ ಮತ್ತು ಸೂಜಿ

ಬಟ್ಟೆ ಹೊಲಿಯುವವರ ಬಳಿ ಅತಿ ಮುಖ್ಯವಾದ ಎರಡು ಉಪಕರಣಗಳಿರಲೇಬೇಕು.ಒಂದು ಸೂಜಿ ಇನ್ನೊಂದು ಕತ್ತರಿ.ಇವೆರಡೂ ಜೊತೆಯಲ್ಲೇ ಇರುವುದಾದರೂ ಇವೆರಡರ ಸ್ವಭಾವ ಮಾತ್ರ ವಿರುದ್ಧ.ಕತ್ತರಿ ಬಟ್ಟೆಯನ್ನು ಕತ್ತರಿಸಿ ತುಂಡು ತುಂಡು ಮಾಡುತ್ತದೆ. ಆದರೆ ಸೂಜಿ ಆ ತುಂಡುಗಳನ್ನು ಜೋಡಿಸಿ ಒಂದುಗೂಡಿಸುತ್ತದೆ.ಕತ್ತರಿಗೆ ಹೋಲಿಸಿದರೆ ಸೂಜಿ ಅತಿ ಚಿಕ್ಕ ವಸ್ತು.
ಸಾಮಾಜಿಕವಾಗಿ ಇದರಿಂದ ಒಂದು ನೀತಿ ಸಿಕ್ಕುತ್ತದೆ.ಕೆಲವರು ಕತ್ತರಿಯಂತೆ ತಮಗೆ ಬೇಡವಾದುದನ್ನು ಕತ್ತರಿಸಿ ವಿಭಜಿಸುತ್ತಾರೆ.ಅದು ಸಮಾಜವಾಗಬಹುದು.ಸಂಸ್ಥೆಯಾಗಬಹುದು.ಸಂಸಾರವೇ ಆಗಬಹುದು.ಸ್ನೇಹವೂ ಆಗಬಹುದು.ಕತ್ತರಿಯ ಹರಿತಕ್ಕೆ ಒಳಗಾದವರು ದುಃಖಿಸುತ್ತಲೇ ಮತ್ತೆ ಮತ್ತೆ ತುಂಡಾಗುತ್ತಲೇ ಇರುತ್ತಾರೆ. ಆದರೆ ಸೂಜಿ ಚಿಕ್ಕದಾದರೂ ಕೆಲಸ ನಿಧಾನವಾದರೂ ತುಂಡಾದುದನ್ನು ಹೊಲಿದು ಜೋಡಿಸುವಂತೆ ಸಜ್ಜನರು ವಿಭಜಿತರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.ಆದುದರಿಂದ ನಾವು ಸೂಜಿಯಂತಾಗಬೇಕು.ಕತ್ತರಿಯಂತಾಗಬಾರದು.ಇದೇ ಸಾಮಾಜಿಕ ನೀತಿ. 

ಇದನ್ನು ತಿಳಿದು ಬದುಕೋಣ
ಮನುಷ್ಯನದು ಸ್ವಂತದ್ದು ಏನಿದೆ?
ಜನ್ಮ ಬೇರೆಯವರು ನೀಡಿದ್ದಾರೆ ..!
ಹೆಸರು ಬೇರೆಯವರು ಇಟ್ಟಿದ್ದಾರೆ.
ಶಿಕ್ಷಣ ಬೇರೆಯವರು ಕಲಿಸಿದ್ದಾರೆ..
ಕೆಲಸವು ಬೇರೆಯವರು ಕೊಟ್ಟಿದ್ದಾರೆ..
ನಾಳೆ ಸ್ಮಶಾನಕ್ಕೆ ಬೇರೆಯವರೇ ಹೊತ್ತುಕೊಂಡು ಹೋಗುತ್ತಾರೆ..!
ಹಾಗಾದರೆ,
ವ್ಯರ್ಥ ಅಹಂಕಾರ ಏಕೆ..?
ಯಾವಾಗಲೂ ಒಳ್ಳೆಯ ಕರ್ಮದ ಬಗ್ಗೆ ಯೋಚಿಸಬೇಕಲ್ಲವೇ...?

ಸತ್ಯಕಾಮನ ಸತ್ಯಸಂದತೆ ಗುರುವಾಗಿದ್ದು

ಉಪನಿಷತ್ತಿನಲ್ಲಿ ಬರುವ ಕಥೆಗಳು
"ಸತ್ಯಕಾಮನ ಸತ್ಯಸಂದತೆ"

ಛಾಂದೋಗ್ಯ ಉಪನಿಷತ್ತಿನ ಒಂದು ಸತ್ಯಕಥೆ. 
ಯೋಗ ಭ್ರಷ್ಟನಾದವನು ತಾನು ಪ್ರಾರಂಭಿಸಿದ ಆಧ್ಯಾತ್ಮ ಯೋಗವನ್ನು ಮುಗಿಸಿ ಆತ್ಮ ಸಾಕ್ಷಾತ್ಕಾರ ಪಡೆಯಲು ಪವಿತ್ರರಾದ ಭಾಗ್ಯವಂತರಾದ ಯಾವುದಕ್ಕೂ ಕೊರತೆಯಿಲ್ಲದವರ ಮನೆಯಲ್ಲಿ ಹುಟ್ಟಿ ಬಹುಜಾಗ್ರತೆ ಜ್ಞಾನಯೋಗದಲ್ಲಿ ನಿಷ್ಣಾತನಾಗಿ ಮುಕ್ತಿ ಪಡೆಯುತ್ತಾನೆಂದು ಗೀತಾ 6-14ರಲ್ಲಿ ಹೇಳಿದೆ. ಸತ್ಯಕಾಮನು ಅಂದರೆ ಸತ್ಯವೇ ಮೂರ್ತಿವೆತ್ತಂತವನು. ತನ್ನ ತಾಯಿ ಜಾಬಾಲೆಯನ್ನು ‘ಅಮ್ಮಾ ನಾನು ಶಿಕ್ಷಣ ಪಡೆಯುವುದಕ್ಕೆ ಶ್ರೀ ಗುರುಗಳಲ್ಲಿ ಹೋಗಬೇಕು. ಆದ್ದರಿಂದ ತನ್ನ ತಂದೆಯ ಗೋತ್ರ ಸೂತ್ರ ಹೇಳಮ್ಮ’ ಎಂದು ಕೇಳಿದ. ತಾಯಿಗೆ ಬಹಳ ಸಂತೋಷವಾಯಿತು. ನಾನು ಮತ್ತೊಬ್ಬರ ಮನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದವಳು. ಚಿಕ್ಕ ವಯಸ್ಸಿನಲ್ಲಿ ನಿನ್ನ ತಂದೆ ತೀರಿ ಹೋದರು. ಆಗ ನಾನು ಅವರ ಗೋತ್ರ ಇತ್ಯಾದಿ ಕೇಳಲಿಲ್ಲ. ನಾನು ಜಾಬಾಲಿ ನೀನು ಸತ್ಯಕಾಮ ಇಷ್ಟೆ ನನಗೆ ಗೊತ್ತಿರುವುದು ಎಂದು ಹೇಳಿದಳು. ಆ ಕಾಲದಲ್ಲಿ ಗೌತಮ ಋಷಿಗಳು ಪ್ರಸಿದ್ಧರಾದ ವಿದ್ಯಾಭಿಮಾನಿಗಳು. ಅವರಲ್ಲಿ ಹೋಗಿ ತಾನು ವಿದ್ಯಾ ಕಲಿಯುವ ತನ್ನ ಅಪೇಕ್ಷೆಯನ್ನು ಅವರಿಗೆ ನಮಸ್ಕರಿಸಿ ವಿನಯ ವಿಧೇಯತೆಯಿಂದ ವಿದ್ಯಾರ್ಥಿಯಾಗಿರಲು ಪ್ರಾರ್ಥಿಸಿಕೊಂಡ. ಹಾಗಾದರೆ ನಿನ್ನ ಗೋತ್ರ ಇತ್ಯಾದಿ ವಿಷಯಗಳು ಬೇಕು. ಸ್ವಾಮಿ ನನ್ನ ತಂದೆ ಚಿಕ್ಕ ವಯಸ್ಸಿನಲ್ಲಿ ತೀರಿದರು. ಆಗ ಗೋತ್ರ ಸೂತ್ರ ಕೇಳಲು ನಮ್ಮ ತಾಯಿ ಮತ್ತೊಬ್ಬರ ಮನೆಯಲ್ಲಿ ಆಳಾಗಿ ಕೆಲಸ ಮಾಡಿ ಜೀವನ ಮಾಡುತ್ತಿರುವುದರಿಂದ ನಮ್ಮ ಗೋತ್ರಾದಿಗಳನ್ನು ಕೇಳಲಿಲ್ಲ. ನಮ್ಮ ತಾಯಿ ನನಗೆ ಇಷ್ಟೇ ಹೇಳಿದಳು.
‘ನಾನು ಜಾಬಾಲಿ. ನೀನು ಸತ್ಯಕಾಮ ಇಷ್ಟೆ ಹೇಳಿದಳು’ ಎಂದ. ಆಗ ಗೌತಮರು ‘ನೀನು ಸತ್ಯವನ್ನೇ ಹೇಳಿರುವುದರಿಂದ ನೀನು ಬ್ರಾಹ್ಮಣನೇ ಇದ್ದೀಯ’ ಎಂದು ಶಾಲೆಗೆ ಸೇರಿಸಿಕೊಂಡರು. ನೋಡಿ ಸತ್ಯದಲ್ಲಿ ಎಷ್ಟು ಪ್ರಭಾವವಿದೆ! ಅವನಿಗೆ ಬಡಕಲಾಗಿರುವ 400 ಹಸುಗಳನ್ನು ಕೊಟ್ಟು ‘ಇವು ಸಾವಿರ ಆಗುವವರೆಗೆ ಅರಣ್ಯದಲ್ಲಿದ್ದು ಇವುಗಳನ್ನು ಚೆನ್ನಾಗಿ ಮೇಯಿಸಿಕೊಂಡು ಬಾ’ ಎಂದು ಅರಣ್ಯಕ್ಕೆ ಕಳಿಸಿದರು. ಸಹಸ್ರ ಆಗುವವರೆಗೆ ಹಿಂದಿರುಗುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ. ಚೆನ್ನಾಗಿ ಹುಲ್ಲು ನೀರಿರುವ ಕಡೆ ಹೋಗಿ ಹಸುಗಳನ್ನು ಬಿಟ್ಟ. ಅವು ಚೆನ್ನಾಗಿ ಬೆಳೆದು ಮೇದು ಸಾವಿರ ಆದವು. ಆಗ ಕೊನೆ ಕರು ‘ನಾವು ಸಾವಿರ ಆಗಿದ್ದೇವೆ ಸತ್ಯಕಾಮ’ ಎಂದು ಕೂಗಿತು. ಸತ್ಯಕಾಮನು ‘ಭಗವಂತ!’ ಎಂದು ಭಕ್ತಿಯಿಂದ ಹೇಳಿದ. ಸತ್ಯಕಾಮನು ಗುರುಗಳು ಕೊಟ್ಟ 400 ಹಸುಗಳನ್ನು ಗುರುರೂಪದಿಂದ ಪೂಜ್ಯಭಾವದಿಂದ ನೋಡುತ್ತಿದ್ದ. ಆಗ ಆ ಹೋರಿ ‘ನಿನಗೆ ಪರಬ್ರಹ್ಮನ ಒಂದು ಪಾದವನ್ನು ಬೋಧಿಸುತ್ತೇನೆ’ ಎಂದಿತು. ‘ಆಗಲಿ’ ಎಂದು ಆ ಉಪದೇಶ ಕೇಳಿದ.
ಮಾರನೆದಿನ ಅಗ್ನಿಯು ಬ್ರಹ್ಮನ ಮತ್ತೊಂದು ಪಾದವನ್ನು ಉಪದೇಶಿಸಿತು. ಇನ್ನು ಮೂರನೇ ದಿವಸ ಅಗ್ನಿರೂಪದಿಂದ ಹೋರಿಯು ಉಪದೇಶಿಸಿತು, ಹೀಗೆ ಬ್ರಹ್ಮಜ್ಞಾನವನ್ನು ನಾಲ್ಕನೆ ದಿವಸ ಹಂಸರೂಪದಿಂದ ಹೋರಿಯು ಉಪದೇಶಿಸಿತು. ಹೀಗೆ ಬ್ರಹ್ಮನ ಉಪದೇಶ ಹೊಂದಿ ಗುರುಗಳ ಹತ್ತಿರ ಹೋಗುತ್ತಾನೆ. ಸತ್ಯಕಾಮ ನಿನ್ನ ಮುಖವನ್ನು ನೋಡಿದರೆ ನಿನಗೆ ಉಪದೇಶವಾಗಿರುವುದಾಗಿ ತಿಳಿದುಬರುತ್ತದೆ. ನಿನಗೆ ಯಾರು ಉಪದೇಶಿಸಿದರು? ನೀನು ಬ್ರಹ್ಮಜ್ಞಾನಿಯಂತೆ ಕಾಣುತ್ತೀಯ.
1. ಬ್ರಹ್ಮಜ್ಞಾನಿಯಂತೆ ನಿನ್ನ ಇಂದ್ರಿಯಗಳು ಪ್ರಸನ್ನವಾಗಿದೆ.
2. ನಗು ಮುಖದವನಾಗಿದ್ದೀಯ.
3. ನಿಶ್ಚಿಂತನಾಗಿದ್ದೀಯ
4. ಕೃತಾರ್ಥನಾಗಿರುತ್ತೀಯ. ಆದ್ದರಿಂದ ನಿನಗೆ ಯಾರು ಉಪದೇಶಿಸಿದರು.
‘ಸ್ವಾಮಿ ಗುರುದೇವ, ಪೂಜ್ಯರಾದ ನಿಮ್ಮ ಶಿಷ್ಯನಾದ ನನಗೆ ಮನುಷ್ಯನಾಗಿರುವ ನನಗೆ ಮತ್ತಾರು ಉಪದೇಶ ಮಾಡಿಯಾರು? ನಿಮ್ಮ ವಿನಃ ನನಗೆ ಹೇಳಿಕೊಡುವ ಎದೆಗಾರಿಕೆ ಹೇಗೆ ಬರುತ್ತದೆ? ನನಗೆ ನೀವು ಉಪದೇಶಿಸಬೇಕು. ಆಚಾರ್ಯನಿಂದ ಅರಿತುಕೊಂಡ ವಿದ್ಯೆಯು ಸಾಧಿಷ್ಟವನ್ನು ಹೊಂದುತ್ತದೆ. ಆಗ ಆಚಾರ್ಯನು ಹೇಳಿಕೊಟ್ಟರು. ಇದೇ ಷೋಡಶ ಕಲಾ ವಿದ್ಯೆ! ಸತ್ಯಕಾಮನು ಮುಂದೆ *ಗುರು* ಆದನು.

ಸಂಗ್ರಹ: ವೇ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ.

ದರ್ಗಾ_ಹಜ್ರತ್

 ದರ್ಗಾ ಅಂದರೆ ಏನು?

ಹೇಗೆ  ಪದವೀಪರೀಕ್ಷೆ ಉತ್ತೀರ್ಣರಾದವರಿಗೆ ಡಿಗ್ರೀ ಪಟ್ಟಾ ನೀಡುತ್ತಾರೋ, ಹಾಗೆಯೇ,
ನಮ್ಮ ದೇಶವನ್ನು  ನೂರಾರು ವರ್ಷಗಳು ಮುಸ್ಲಿಮರು ಆಳುತ್ತಿದ್ದ ಕಾಲದಲ್ಲಿ ಯಾರೇ ಮುಸ್ಲಿಂ ಸೈನಿಕ ಅಥವ ಸೇನಾಧಿಕಾರಿ ಕನಿಷ್ಟ ನೂರು ಅಥವ ಅದಕ್ಕಿಂತ ಹೆಚ್ಚು ಹಿಂದೂಗಳನ್ನು  ಕೊಂದಿದ್ದರೆ ಅಂಥಾ ಸಿಪಾಯಿ ಯಾ ಅಧಿಕಾರಿಗಳನ್ನ  ಆ ಮುಸ್ಲಿಂ ರಾಜರು "ಹಜ್ರತ್" ಅನ್ನೋ ಬಿರುದು ನೀಡಿ ಸತ್ಕರಿಸಿ ಆ ರಾಜನ ಅಧೀನದಲ್ಲಿದ್ದ ಒಂದು ಪ್ರಾಂತದ 'ಮ್ಯಾಜಿಸ್ಟ್ರೇಟ್' ಥರದ ಹುದ್ದೆಯೊಂದಿಗೆ ಕಪ್ಪ ವಸೂಲಿ, ಅಲ್ಲಿಯ ಜನರನ್ನು ಆಳುವದಕ್ಕೆ ನಿಯೋಗಿಸುತ್ತಿದ್ದರು.

ನೋಡಿ ನಿಮಗಲ್ಲಾದರು 'ದರ್ಗಾ' ಕಂಡರೆ ಅಲ್ಲಿ ಅಂಥವರ ಹೆಸರಿಗೆ ಮುಂದೆ "ಹಜ್ರತ್" ಎಂದಿರುತ್ತೆ. ಉದಾ: ಹಜ್ರತ್ ಸಯ್ಯದ್,  ಹಜ್ರತ್ ಹುಸ್ಸೇನಿ ಆಲಂ...ಇತ್ಯಾದಿ

 ಈ ಹಜ್ರತ್ ಗಳು ಅವರ ಅಧೀನದಲ್ಲಿದ್ದ ಹಿಂದೂ ಹೆಣ್ಣು ಮಕ್ಕಳನ್ನು ಸ್ವೇಚ್ಛೆಯಾಗಿ ಅತ್ಯಾಚಾರವೆಸಗಿ ಕೊಲ್ಲುತ್ತಿದ್ದರು. ....ಮನೆಗಳಿಗೆ ನುಗ್ಗಿ ಕುಟುಂಬಸ್ಥರ ಎದುರೇ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗುತ್ತಿದ್ದರು.... ಇವರ ಕಣ್ಣಿಗೆ ಬಿದ್ದ ಹೆಣ್ಣನ್ನು ಕರೆದರೆ ಸುಮ್ಮನೆ ಹಿಂದೆ ಹೋಗುತ್ತಿರಬೇಕು ಅಷ್ಟೆ...

ಇಂಥಾ ಅನೈತಿಕ ಅತ್ಯಾಚಾರಗಳಲ್ಲದೆ ಆ ಪ್ರಾಂತದಲ್ಲಿ ಬೇಕಾದಾಗಲೆಲ್ಲ ಅವರು ಮನಸೋ ಇಚ್ಛೆ ಜನರನ್ನು ದೋಚುವುದು,  ಸುಲಿಗೆ ಮಾಡುವುದು ನಡೀತಿತ್ತು.

ಅಂಥಾ ಒಬ್ಬ 'ಹಜ್ರತ್,'  ಮರಣಿಸಿದಾಗ ಆ ಪ್ರಾಂತದಲ್ಲಿ ಅವನ ಸಮಾಧಿ ಕಟ್ಟಿ ಅವನ ಹೆಸರ ಮುಂದೆ  "ಹಜ್ರತ್" ಸೇರಿಸುತ್ತಿದ್ದರು  ("ಹಜ್ರತ್ ಸೈಯದ್ ದರ್ಗಾ' ಇತ್ಯಾದಿ). ....

ಹೀಗೆ ಮುಸ್ಲಿಂ "ದರ್ಗಾ" ಗಳು ಆಗಿದ್ದು.

ಆ ಪ್ರಾಂತದ ಜನರು ಆ ದರ್ಗಾ ಗಳಿಗೆ ಹೋಗಿ ಕಾಣಿಕೆ,ಪೂಜಾದಿಗಳು ಭಯ ಭಕ್ತಿಯಿಂದ ಮಾಡಿ ಬರುತ್ತಿದ್ದರು. ಇಂದಿಗೂ ಈ ಪದ್ಧತಿ ನಮ್ಮ ದೇಶದಲ್ಲಿ ನಡೆಯುತ್ತಿದೆ. ನವ ದಂಪತಿಗಳು ಏನಾದರು ಹರಸಿಕೊಂಡು ದರ್ಗಾ ಗೆ ಹೋಗಿ ಬಂದರೆ  ಅವರ ಹರಕೆ ಈಡೇರುವುದೆಂದು ನಂಬುತ್ತಾರೆ.

ಆದ್ದರಿಂದ ಈ ದರ್ಗಾ ಗಳಿಗೆ ಹೋಗುವುದು ಗುಲಾಮಗಿರಿಯ ಸಂಕೆತ. ಹಜ್ರತ್ ಗಳೆಂದರೆ ನಮ್ಮ ಪೂರ್ವಿಕರ ಹತ್ಯೆ, ಮಾನಭಂಗ ಮಾಡಿದ್ದ ರಾಕ್ಷಸರು!

ಇನ್ನೂ  'ಸೆಕ್ಯುಲರ್ ಮಸುಗಿನಲ್ಲಿ' ನಮ್ಮನ್ನು ಮೋಸ ಮಾಡುವವರಿಂದ ನಾವು ಎಚ್ಚೆತ್ತುಕೊಳ್ಳದೇ ಮೋಸ ಹೋಗುತ್ತಲೇ ಇದ್ದರೆ ಆ ಭಗವಂತನೂ ಕಾಪಾಡಲು ಸಾಧ್ಯವಿಲ್ಲ.   "ದೇವೋ ದುರ್ಬಲ ಘಾತುಕಃ"


ಜೈಹಿಂದ್ 🚩🚩 ➖ ವಂದೇ ಮಾತರಂ ✊️

ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮವಳಿಃ

 ಓಂ .. ಶ್ರೀಂ ಹ್ರೀಂ ಕ್ಲೀಂ ಮಹಾಲಕ್ಷ್ಮ್ಯೈ ನಮಃ 

ಮಂತ್ರಲಕ್ಷ್ಮ್ಯೈ ನಮಃ ಮಾಯಾಲಕ್ಷ್ಮ್ಯೈ ನಮಃ ಮತಿಪ್ರದಾಯೈ ನಮಃ ಮೇಧಾಲಕ್ಷ್ಮ್ಯೈ ನಮಃ ಮೋಕ್ಷಲಕ್ಷ್ಮ್ಯೈ ನಮಃ ಮಹೀಪ್ರದಾಯೈ ನಮಃ ವಿತ್ತಲಕ್ಷ್ಮ್ಯೈ ನಮಃ ಮಿತ್ರಲಕ್ಷ್ಮ್ಯೈ ನಮಃ ಮಧುಲಕ್ಷ್ಮ್ಯೈ ನಮಃ ಕಾಂತಿಲಕ್ಷ್ಮ್ಯೈ ನಮಃ ಕಾರ್ಯಲಕ್ಷ್ಮ್ಯೈ ನಮಃ ಕೀರ್ತಿಲಕ್ಷ್ಮ್ಯೈ ನಮಃ ಕರಪ್ರದಾಯೈ ನಮಃ ಕನ್ಯಾಲಕ್ಷ್ಮ್ಯೈ ನಮಃ ಕೋಶಲಕ್ಷ್ಮ್ಯೈ ನಮಃ ಕಾವ್ಯಲಕ್ಷ್ಮ್ಯೈ ನಮಃ ಕಲಾಪ್ರದಾಯೈ ನಮಃ ಗಜಲಕ್ಷ್ಮ್ಯೈ ನಮಃ ಗಂಧಲಕ್ಷ್ಮ್ಯೈ ನಮಃ ಗೃಹಲಕ್ಷ್ಮ್ಯೈ ನಮಃ ಗುಣಪ್ರದಾಯೈ ನಮಃ ಜಯಲಕ್ಷ್ಮ್ಯೈ ನಮಃ ಜೀವಲಕ್ಷ್ಮ್ಯೈ ನಮಃ ಜಯಪ್ರದಾಯೈ ನಮಃ ದಾನಲಕ್ಷ್ಮ್ಯೈ ನಮಃ ದಿವ್ಯಲಕ್ಷ್ಮ್ಯೈ ನಮಃ ದ್ವೀಪಲಕ್ಷ್ಮ್ಯೈ ನಮಃ ದಯಾಪ್ರದಾಯೈ ನಮಃ ಧನಲಕ್ಷ್ಮ್ಯೈ ನಮಃ ಧೇನುಲಕ್ಷ್ಮ್ಯೈ ನಮಃ ಧನಪ್ರದಾಯೈ ನಮಃ ಧರ್ಮಲಕ್ಷ್ಮ್ಯೈ ನಮಃ ಧೈರ್ಯಲಕ್ಷ್ಮ್ಯೈ ನಮಃ ದ್ರವ್ಯಲಕ್ಷ್ಮ್ಯೈ ನಮಃ ಧೃತಿಪ್ರದಾಯೈ ನಮಃ ನಭೋಲಕ್ಷ್ಮ್ಯೈ ನಮಃ ನಾದಲಕ್ಷ್ಮ್ಯೈ ನಮಃ ನೇತ್ರಲಕ್ಷ್ಮ್ಯೈ ನಮಃ ನಯಪ್ರದಾಯೈ ನಮಃ ನಾಟ್ಯಲಕ್ಷ್ಮ್ಯೈ ನಮಃ ನೀತಿಲಕ್ಷ್ಮ್ಯೈ ನಮಃ ನಿತ್ಯಲಕ್ಷ್ಮ್ಯೈ ನಮಃ ನಿಧಿಪ್ರದಾಯೈ ನಮಃ ಪೂರ್ಣಲಕ್ಷ್ಮ್ಯೈ ನಮಃ ಪುಷ್ಪಲಕ್ಷ್ಮ್ಯೈ ನಮಃ ಪಶುಪ್ರದಾಯೈ ನಮಃ ಪುಷ್ಟಿಲಕ್ಷ್ಮ್ಯೈ ನಮಃ ಪದ್ಮಲಕ್ಷ್ಮ್ಯೈ ನಮಃ ಪೂತಲಕ್ಷ್ಮ್ಯೈ ನಮಃ ಪ್ರಜಾಪ್ರದಾಯೈ ನಮಃ ಪ್ರಾಣಲಕ್ಷ್ಮ್ಯೈ ನಮಃ ಪ್ರಭಾಲಕ್ಷ್ಮ್ಯೈ ನಮಃ ಪ್ರಜ್ಞಾಲಕ್ಷ್ಮ್ಯೈ ನಮಃ ಫಲಪ್ರದಾಯೈ ನಮಃ ಬುಧಲಕ್ಷ್ಮ್ಯೈ ನಮಃ ಬುದ್ಧಿಲಕ್ಷ್ಮ್ಯೈ ನಮಃ ಬಲಲಕ್ಷ್ಮ್ಯೈ ನಮಃ ಬಹುಪ್ರದಾಯೈ ನಮಃ ಭಾಗ್ಯಲಕ್ಷ್ಮ್ಯೈ ನಮಃ ಭೋಗಲಕ್ಷ್ಮ್ಯೈ ನಮಃ ಭುಜಲಕ್ಷ್ಮ್ಯೈ ನಮಃ ಭಕ್ತಿಪ್ರದಾಯೈ ನಮಃ ಭಾವಲಕ್ಷ್ಮ್ಯೈ ನಮಃ ಭೀಮಲಕ್ಷ್ಮ್ಯೈ ನಮಃ ಭೂರ್ಲಕ್ಷ್ಮ್ಯೈ ನಮಃ ಭೂಷಣಪ್ರದಾಯೈ ನಮಃ ರೂಪಲಕ್ಷ್ಮ್ಯೈ ನಮಃ ರಾಜ್ಯಲಕ್ಷ್ಮ್ಯೈ ನಮಃ ರಾಜಲಕ್ಷ್ಮ್ಯೈ ನಮಃ ರಮಾಪ್ರದಾಯೈ ನಮಃ ವೀರಲಕ್ಷ್ಮ್ಯೈ ನಮಃ ವಾರ್ಧಿಕಲಕ್ಷ್ಮ್ಯೈ ನಮಃ ವಿದ್ಯಾಲಕ್ಷ್ಮ್ಯೈ ನಮಃ ವರಲಕ್ಷ್ಮ್ಯೈ ನಮಃ ವರ್ಷಲಕ್ಷ್ಮ್ಯೈ ನಮಃ ವನಲಕ್ಷ್ಮ್ಯೈ ನಮಃ ವಧೂಪ್ರದಾಯೈ ನಮಃ ವರ್ಣಲಕ್ಷ್ಮ್ಯೈ ನಮಃ ವಶ್ಯಲಕ್ಷ್ಮ್ಯೈ ನಮಃ ವಾಗ್ಲಕ್ಷ್ಮ್ಯೈ ನಮಃ ವೈಭವಪ್ರದಾಯೈ ನಮಃ ಶೌರ್ಯಲಕ್ಷ್ಮ್ಯೈ ನಮಃ ಶಾಂತಿಲಕ್ಷ್ಮ್ಯೈ ನಮಃ ಶಕ್ತಿಲಕ್ಷ್ಮ್ಯೈ ನಮಃ ಶುಭಪ್ರದಾಯೈ ನಮಃ ಶ್ರುತಿಲಕ್ಷ್ಮ್ಯೈ ನಮಃ ಶಾಸ್ತ್ರಲಕ್ಷ್ಮ್ಯೈ ನಮಃ ಶ್ರೀಲಕ್ಷ್ಮ್ಯೈ ನಮಃ ಶೋಭನಪ್ರದಾಯೈ ನಮಃ ಸ್ಥಿರಲಕ್ಷ್ಮ್ಯೈ ನಮಃ ಸಿದ್ಧಿಲಕ್ಷ್ಮ್ಯೈ ನಮಃ ಸತ್ಯಲಕ್ಷ್ಮ್ಯೈ ನಮಃ ಸುಧಾಪ್ರದಾಯೈ ನಮಃ ಸೈನ್ಯಲಕ್ಷ್ಮ್ಯೈ ನಮಃ ಸಾಮಲಕ್ಷ್ಮ್ಯೈ ನಮಃ ಸಸ್ಯಲಕ್ಷ್ಮ್ಯೈ ನಮಃ ಸುತಪ್ರದಾಯೈ ನಮಃ ಸಾಮ್ರಾಜ್ಯಲಕ್ಷ್ಮ್ಯೈ ನಮಃ ಸಲ್ಲಕ್ಷ್ಮ್ಯೈ ನಮಃ ಹ್ರೀಲಕ್ಷ್ಮ್ಯೈ ನಮಃ ಆಢ್ಯಲಕ್ಷ್ಮ್ಯೈ ನಮಃ ಆಯುರ್ಲಕ್ಷ್ಮ್ಯೈ ನಮಃ ಆರೋಗ್ಯದಾಯೈ ನಮಃ ಶ್ರೀ ಮಹಾಲಕ್ಷ್ಮ್ಯೈ ನಮಃ .. ಓಂ .. ನಮಃ ಸರ್ವ ಸ್ವರೂಪೇ ಚ ನಮೋ ಕಲ್ಯಾಣದಾಯಿಕೇ . ಮಹಾಸಂಪತ್ಪ್ರದೇ ದೇವಿ ಧನದಾಯೈ ನಮೋಽಸ್ತುತೇ .. ಮಹಾಭೋಗಪ್ರದೇ ದೇವಿ ಮಹಾಕಾಮಪ್ರಪೂರಿತೇ . ಸುಖಮೋಕ್ಷಪ್ರದೇ ದೇವಿ ಧನದಾಯೈ ನಮೋಽಸ್ತುತೇ .. ಬ್ರಹ್ಮರೂಪೇ ಸದಾನಂದೇ ಸಚ್ಚಿದಾನಂದರೂಪಿಣೀ . ಧೃತಸಿದ್ಧಿಪ್ರದೇ ದೇವಿ ಧನದಾಯೈ ನಮೋಽಸ್ತುತೇ .. ಉದ್ಯತ್ಸೂರ್ಯಪ್ರಕಾಶಾಭೇ ಉದ್ಯದಾದಿತ್ಯಮಂಡಲೇ . ಶಿವತತ್ವಪ್ರದೇ ದೇವಿ ಧನದಾಯೈ ನಮೋಽಸ್ತುತೇ .. ಶಿವರೂಪೇ ಶಿವಾನಂದೇ ಕಾರಣಾನಂದವಿಗ್ರಹೇ . ವಿಶ್ವಸಂಹಾರರೂಪೇ ಚ ಧನದಾಯೈ ನಮೋಽಸ್ತುತೇ .. ಪಂಚತತ್ವಸ್ವರೂಪೇ ಚ ಪಂಚಾಚಾರಸದಾರತೇ . ಸಾಧಕಾಭೀಷ್ಟದೇ ದೇವಿ ಧನದಾಯೈ ನಮೋಽಸ್ತುತೇ .. 

ಶ್ರೀಅಷ್ಟಲಕ್ಷ್ಮೀ ಅಷ್ಟೋತ್ತರ ಶತನಾಮಾವಲಿಃ



1 ಶ್ರೀ ಆದಿಲಕ್ಷ್ಮೀ ನಾಮಾವಲಿಃ .. ಓಂ ಶ್ರೀಂ 
2 ಶ್ರೀ ಧಾನ್ಯಲಕ್ಷ್ಮೀ ನಾಮಾವಲಿಃ .. ಓಂ ಶ್ರೀಂ ಕ್ಲೀಂ
3 ಶ್ರೀ ಧೈರ್ಯಲಕ್ಷ್ಮೀ ನಾಮಾವಲಿಃ .. ಓಂ ಶ್ರೀಂ ಹ್ರೀಂ ಕ್ಲೀಂ 
4 ಶ್ರೀ ಗಜಲಕ್ಷ್ಮೀ ನಾಮಾವಲಿಃ .. ಓಂ ಶ್ರೀಂ ಹ್ರೀಂ ಕ್ಲೀಂ 
5 ಶ್ರೀ ಸಂತಾನಲಕ್ಷ್ಮೀ ನಾಮಾವಲಿಃ .. ಓಂ ಹ್ರೀಂ ಶ್ರೀಂ ಕ್ಲೀಂ 
6 ಶ್ರೀ ವಿಜಯಲಕ್ಷ್ಮೀ ನಾಮಾವಲಿಃ .. ಓಂ ಕ್ಲೀಂ ಓಂ 
7 ಶ್ರೀ ವಿದ್ಯಾಲಕ್ಷ್ಮೀ ನಾಮಾವಲಿಃ .. ಓಂ ಐಂ ಓಂ 
8 ಶ್ರೀ ಐಶ್ವರ್ಯಲಕ್ಷ್ಮೀ ನಾಮಾವಲಿಃ .. ಓಂ ಶ್ರೀಂ ಶ್ರೀಂ ಶ್ರೀಂ ಓಂ 

ಓಂ ಶ್ರೀಂ ಆದಿಲಕ್ಷ್ಮ್ಯೈ ನಮಃ 
ಅಕಾರಾಯೈ ನಮಃ ಅವ್ಯಯಾಯೈ ನಮಃ ಅಚ್ಯುತಾಯೈ ನಮಃ ಆನಂದಾಯೈ ನಮಃ ಅರ್ಚಿತಾಯೈ ನಮಃ ಅನುಗ್ರಹಾಯೈ ನಮಃ ಅಮೃತಾಯೈ ನಮಃ ಅನಂತಾಯೈ ನಮಃ ಇಷ್ಟಪ್ರಾಪ್ತ್ಯೈ ನಮಃ ಈಶ್ವರ್ಯೈ ನಮಃ ಕರ್ತ್ರ್ಯೈ ನಮಃ ಕಾಂತಾಯೈ ನಮಃ ಕಲಾಯೈ ನಮಃ ಕಲ್ಯಾಣ್ಯೈ ನಮಃ ಕಪರ್ದಿನೇ ನಮಃ ಕಮಲಾಯೈ ನಮಃ ಕಾಂತಿವರ್ಧಿನ್ಯೈ ನಮಃ ಕುಮಾರ್ಯೈ ನಮಃ ಕಾಮಾಕ್ಷ್ಯೈ ನಮಃ ಕೀರ್ತಿಲಕ್ಷ್ಮ್ಯೈ ನಮಃ ಗಂಧಿನ್ಯೈ ನಮಃ ಗಜಾರೂಢಾಯೈ ನಮಃ ಗಂಭೀರವದನಾಯೈ ನಮಃ ಚಕ್ರಹಾಸಿನ್ಯೈ ನಮಃ ಚಕ್ರಾಯೈ ನಮಃ ಜ್ಯೋತಿಲಕ್ಷ್ಮ್ಯೈ ನಮಃ ಜಯಲಕ್ಷ್ಮ್ಯೈ ನಮಃ ಜ್ಯೇಷ್ಠಾಯೈ ನಮಃ ಜಗಜ್ಜನನ್ಯೈ ನಮಃ ಜಾಗೃತಾಯೈ ನಮಃ ತ್ರಿಗುಣಾಯೈ ನಮಃ ತ್ರ್ಯೈಲೋಕ್ಯಮೋಹಿನ್ಯೈ ನಮಃ ತ್ರ್ಯೈಲೋಕ್ಯಪೂಜಿತಾಯೈ ನಮಃ ನಾನಾರೂಪಿಣ್ಯೈ ನಮಃ ನಿಖಿಲಾಯೈ ನಮಃ ನಾರಾಯಣ್ಯೈ ನಮಃ ಪದ್ಮಾಕ್ಷ್ಯೈ ನಮಃ ಪರಮಾಯೈ ನಮಃ ಪ್ರಾಣಾಯೈ ನಮಃ ಪ್ರಧಾನಾಯೈ ನಮಃ ಪ್ರಾಣಶಕ್ತ್ಯೈ ನಮಃ ಬ್ರಹ್ಮಾಣ್ಯೈ ನಮಃ ಭಾಗ್ಯಲಕ್ಷ್ಮ್ಯೈ ನಮಃ ಭೂದೇವ್ಯೈ ನಮಃ ಬಹುರೂಪಾಯೈ ನಮಃ ಭದ್ರಕಾಲ್ಯೈ ನಮಃ ಭೀಮಾಯೈ ನಮಃ ಭೈರವ್ಯೈ ನಮಃ ಭೋಗಲಕ್ಷ್ಮ್ಯೈ ನಮಃ ಭೂಲಕ್ಷ್ಮ್ಯೈ ನಮಃ ಮಹಾಶ್ರಿಯೈ ನಮಃ ಮಾಧವ್ಯೈ ನಮಃ ಮಾತ್ರೇ ನಮಃ ಮಹಾಲಕ್ಷ್ಮ್ಯೈ ನಮಃ ಮಹಾವೀರಾಯೈ ನಮಃ ಮಹಾಶಕ್ತ್ಯೈ ನಮಃ ಮಾಲಾಶ್ರಿಯೈ ನಮಃ ರಾಜ್ಞ್ಯೈ ನಮಃ ರಮಾಯೈ ನಮಃ ರಾಜ್ಯಲಕ್ಷ್ಮ್ಯೈ ನಮಃ ರಮಣೀಯಾಯೈ ನಮಃ ಲಕ್ಷ್ಮ್ಯೈ ನಮಃ ಲಾಕ್ಷಿತಾಯೈ ನಮಃ ಲೇಖಿನ್ಯೈ ನಮಃ ವಿಜಯಲಕ್ಷ್ಮ್ಯೈ ನಮಃ ವಿಶ್ವರೂಪಿಣ್ಯೈ ನಮಃ ವಿಶ್ವಾಶ್ರಯಾಯೈ ನಮಃ ವಿಶಾಲಾಕ್ಷ್ಯೈ ನಮಃ ವ್ಯಾಪಿನ್ಯೈ ನಮಃ ವೇದಿನ್ಯೈ ನಮಃ ವಾರಿಧಯೇ ನಮಃ ವ್ಯಾಘ್ರ್ಯೈ ನಮಃ ವಾರಾಹ್ಯೈ ನಮಃ ವೈನಾಯಕ್ಯೈ ನಮಃ ವರಾರೋಹಾಯೈ ನಮಃ ವೈಶಾರದ್ಯೈ ನಮಃ ಶುಭಾಯೈ ನಮಃ ಶಾಕಂಭರ್ಯೈ ನಮಃ ಶ್ರೀಕಾಂತಾಯೈ ನಮಃ ಕಾಲಾಯೈ ನಮಃ ಶರಣ್ಯೈ ನಮಃ ಶ್ರುತಯೇ ನಮಃ ಸ್ವಪ್ನದುರ್ಗಾಯೈ ನಮಃ ಸುರ್ಯಚಂದ್ರಾಗ್ನಿನೇತ್ರತ್ರಯಾಯೈ ನಮಃ ಸಿಮ್ಹಗಾಯೈ ನಮಃ ಸರ್ವದೀಪಿಕಾಯೈ ನಮಃ ಸ್ಥಿರಾಯೈ ನಮಃ ಸರ್ವಸಂಪತ್ತಿರೂಪಿಣ್ಯೈ ನಮಃ ಸ್ವಾಮಿನ್ಯೈ ನಮಃ ಸಿತಾಯೈ ನಮಃ ಸೂಕ್ಷ್ಮಾಯೈ ನಮಃ ಸರ್ವಸಂಪನ್ನಾಯೈ ನಮಃ ಹಂಸಿನ್ಯೈ ನಮಃ ಹರ್ಷಪ್ರದಾಯೈ ನಮಃ ಹಂಸಗಾಯೈ ನಮಃ ಹರಿಸೂತಾಯೈ ನಮಃ ಹರ್ಷಪ್ರಾಧಾನ್ಯೈ ನಮಃ ಹರಿತ್ಪತಯೇ ನಮಃ ಸರ್ವಜ್ಞಾನಾಯೈ ನಮಃ ಸರ್ವಜನನ್ಯೈ ನಮಃ ಮುಖಫಲಪ್ರದಾಯೈ ನಮಃ ಮಹಾರೂಪಾಯೈ ನಮಃ ಶ್ರೀಕರ್ಯೈ ನಮಃ ಶ್ರೇಯಸೇ ನಮಃ ಶ್ರೀಚಕ್ರಮಧ್ಯಗಾಯೈ ನಮಃ ಶ್ರೀಕಾರಿಣ್ಯೈ ನಮಃ ಕ್ಷಮಾಯೈ ನಮಃ .. ಓಂ .. 

ಓಂ ಶ್ರೀಂ ಕ್ಲೀಂ ಧಾನ್ಯಲಕ್ಷ್ಮ್ಯೈ ನಮಃ 
ಆನಂದಾಕೃತ್ಯೈ ನಮಃ ಅನಿಂದಿತಾಯೈ ನಮಃ ಆದ್ಯಾಯೈ ನಮಃ ಆಚಾರ್ಯಾಯೈ ನಮಃ ಅಭಯಾಯೈ ನಮಃ ಅಶಕ್ಯಾಯೈ ನಮಃ ಅಜಯಾಯೈ ನಮಃ ಅಜೇಯಾಯೈ ನಮಃ ಅಮಲಾಯೈ ನಮಃ ಅಮೃತಾಯೈ ನಮಃ ಅಮರಾಯೈ ನಮಃ ಇಂದ್ರಾಣೀವರದಾಯೈ ನಮಃ ಇಂದೀವರೇಶ್ವರ್ಯೈ ನಮಃ ಉರಗೇಂದ್ರಶಯನಾಯೈ ನಮಃ ಉತ್ಕೇಲ್ಯೈ ನಮಃ ಕಾಶ್ಮೀರವಾಸಿನ್ಯೈ ನಮಃ ಕಾದಂಬರ್ಯೈ ನಮಃ ಕಲರವಾಯೈ ನಮಃ ಕುಚಮಂಡಲಮಂಡಿತಾಯೈ ನಮಃ ಕೌಶಿಕ್ಯೈ ನಮಃ ಕೃತಮಾಲಾಯೈ ನಮಃ ಕೌಶಾಂಬ್ಯೈ ನಮಃ ಕೋಶವರ್ಧಿನ್ಯೈ ನಮಃ ಖಡ್ಗಧರಾಯೈ ನಮಃ ಖನಯೇ ನಮಃ ಖಸ್ಥಾಯೈ ನಮಃ ಗೀತಾಯೈ ನಮಃ ಗೀತಪ್ರಿಯಾಯೈ ನಮಃ ಗೀತ್ಯೈ ನಮಃ ಗಾಯತ್ರ್ಯೈ ನಮಃ ಗೌತಮ್ಯೈ ನಮಃ ಚಿತ್ರಾಭರಣಭೂಷಿತಾಯೈ ನಮಃ ಚಾಣೂರ್ಮದಿನ್ಯೈ ನಮಃ ಚಂಡಾಯೈ ನಮಃ ಚಂಡಹಂತ್ರ್ಯೈ ನಮಃ ಚಂಡಿಕಾಯೈ ನಮಃ ಗಂಡಕ್ಯೈ ನಮಃ ಗೋಮತ್ಯೈ ನಮಃ ಗಾಥಾಯೈ ನಮಃ ತಮೋಹಂತ್ರ್ಯೈ ನಮಃ ತ್ರಿಶಕ್ತಿಧೃತೇನಮಃ ತಪಸ್ವಿನ್ಯೈ ನಮಃ ಜಾತವತ್ಸಲಾಯೈ ನಮಃ ಜಗತ್ಯೈ ನಮಃ ಜಂಗಮಾಯೈ ನಮಃ ಜ್ಯೇಷ್ಠಾಯೈ ನಮಃ ಜನ್ಮದಾಯೈ ನಮಃ ಜ್ವಲಿತದ್ಯುತ್ಯೈ ನಮಃ ಜಗಜ್ಜೀವಾಯೈ ನಮಃ ಜಗದ್ವಂದ್ಯಾಯೈ ನಮಃ ಧರ್ಮಿಷ್ಠಾಯೈ ನಮಃ ಧರ್ಮಫಲದಾಯೈ ನಮಃ ಧ್ಯಾನಗಮ್ಯಾಯೈ ನಮಃ ಧಾರಣಾಯೈ ನಮಃ ಧರಣ್ಯೈ ನಮಃ ಧವಲಾಯೈ ನಮಃ ಧರ್ಮಾಧಾರಾಯೈ ನಮಃ ಧನಾಯೈ ನಮಃ ಧಾರಾಯೈ ನಮಃ ಧನುರ್ಧರ್ಯೈ ನಮಃ ನಾಭಸಾಯೈ ನಮಃ ನಾಸಾಯೈ ನಮಃ ನೂತನಾಂಗಾಯೈ ನಮಃ ನರಕಘ್ನ್ಯೈ ನಮಃ ನುತ್ಯೈ ನಮಃ ನಾಗಪಾಶಧರಾಯೈ ನಮಃ ನಿತ್ಯಾಯೈ ನಮಃ ಪರ್ವತನಂದಿನ್ಯೈ ನಮಃ ಪತಿವ್ರತಾಯೈ ನಮಃ ಪತಿಮಯ್ಯೈ ನಮಃ ಪ್ರಿಯಾಯೈ ನಮಃ ಪ್ರೀತಿಮಂಜರ್ಯೈ ನಮಃ ಪಾತಾಲವಾಸಿನ್ಯೈ ನಮಃ ಪೂರ್ತ್ಯೈ ನಮಃ ಪಾಂಚಾಲ್ಯೈ ನಮಃ ಪ್ರಾಣಿನಾಂ ಪ್ರಸವೇ ನಮಃ ಪರಾಶಕ್ತ್ಯೈ ನಮಃ ಬಲಿಮಾತ್ರೇ ನಮಃ ಬೃಹದ್ಧಾಮ್ನ್ಯೈ ನಮಃ ಬಾದರಾಯಣಸಂಸ್ತುತಾಯೈ ನಮಃ ಭಯಘ್ನ್ಯೈ ನಮಃ ಭೀಮರೂಪಾಯೈ ನಮಃ ಬಿಲ್ವಾಯೈ ನಮಃ ಭೂತಸ್ಥಾಯೈ ನಮಃ ಮಖಾಯೈ ನಮಃ ಮಾತಾಮಹ್ಯೈ ನಮಃ ಮಹಾಮಾತ್ರೇ ನಮಃ ಮಧ್ಯಮಾಯೈ ನಮಃ ಮಾನಸ್ಯೈ ನಮಃ ಮನವೇ ನಮಃ ಮೇನಕಾಯೈ ನಮಃ ಮುದಾಯೈ ನಮಃ ಯತ್ತತ್ಪದನಿಬಂಧಿನ್ಯೈ ನಮಃ ಯಶೋದಾಯೈ ನಮಃ ಯಾದವಾಯೈ ನಮಃ ಯೂತ್ಯೈ ನಮಃ ರಕ್ತದಂತಿಕಾಯೈ ನಮಃ ರತಿಪ್ರಿಯಾಯೈ ನಮಃ ರತಿಕರ್ಯೈ ನಮಃ ರಕ್ತಕೇಶ್ಯೈ ನಮಃ ರಣಪ್ರಿಯಾಯೈ ನಮಃ ಲಂಕಾಯೈ ನಮಃ ಲವಣೋದಧಯೇ ನಮಃ ಲಂಕೇಶಹಂತ್ರ್ಯೈ ನಮಃ ಲೇಖಾಯೈ ನಮಃ ವರಪ್ರದಾಯೈ ನಮಃ ವಾಮನಾಯೈ ನಮಃ ವೈದಿಕ್ಯೈ ನಮಃ ವಿದ್ಯುತೇ ನಮಃ ವಾರಹ್ಯೈ ನಮಃ ಸುಪ್ರಭಾಯೈ ನಮಃ ಸಮಿಧೇ ನಮಃ .. ಓಂ .. 

ಓಂ ಶ್ರೀಂ ಹ್ರೀಂ ಕ್ಲೀಂ ಧೈರ್ಯಲಕ್ಷ್ಮ್ಯೈ ನಮಃ 
ಅಪೂರ್ವಾಯೈ ನಮಃ ಅನಾದ್ಯಾಯೈ ನಮಃ ಅದಿರೀಶ್ವರ್ಯೈ ನಮಃ ಅಭೀಷ್ಟಾಯೈ ನಮಃ ಆತ್ಮರೂಪಿಣ್ಯೈ ನಮಃ ಅಪ್ರಮೇಯಾಯೈ ನಮಃ ಅರುಣಾಯೈ ನಮಃ ಅಲಕ್ಷ್ಯಾಯೈ ನಮಃ ಅದ್ವೈತಾಯೈ ನಮಃ ಆದಿಲಕ್ಷ್ಮ್ಯೈ ನಮಃ ಈಶಾನವರದಾಯೈ ನಮಃ ಇಂದಿರಾಯೈ ನಮಃ ಉನ್ನತಾಕಾರಾಯೈ ನಮಃ ಉದ್ಧಟಮದಾಪಹಾಯೈ ನಮಃ ಕ್ರುದ್ಧಾಯೈ ನಮಃ ಕೃಶಾಂಗ್ಯೈ ನಮಃ ಕಾಯವರ್ಜಿತಾಯೈ ನಮಃ ಕಾಮಿನ್ಯೈ ನಮಃ ಕುಂತಹಸ್ತಾಯೈ ನಮಃ ಕುಲವಿದ್ಯಾಯೈ ನಮಃ ಕೌಲಿಕ್ಯೈ ನಮಃ ಕಾವ್ಯಶಕ್ತ್ಯೈ ನಮಃ ಕಲಾತ್ಮಿಕಾಯೈ ನಮಃ ಖೇಚರ್ಯೈ ನಮಃ ಖೇಟಕಾಮದಾಯೈ ನಮಃ ಗೋಪ್ತ್ರ್ಯೈ ನಮಃ ಗುಣಾಢ್ಯಾಯೈ ನಮಃ ಗವೇ ನಮಃ ಚಂದ್ರಾಯೈ ನಮಃ ಚಾರವೇ ನಮಃ ಚಂದ್ರಪ್ರಭಾಯೈ ನಮಃ ಚಂಚವೇ ನಮಃ ಚತುರಾಶ್ರಮಪೂಜಿತಾಯೈ ನಮಃ ಚಿತ್ಯೈ ನಮಃ ಗೋಸ್ವರೂಪಾಯೈ ನಮಃ ಗೌತಮಾಖ್ಯಮುನಿಸ್ತುತಾಯೈ ನಮಃ ಗಾನಪ್ರಿಯಾಯೈ ನಮಃ ಛದ್ಮದೈತ್ಯವಿನಾಶಿನ್ಯೈ ನಮಃ ಜಯಾಯೈ ನಮಃ ಜಯಂತ್ಯೈ ನಮಃ ಜಯದಾಯೈ ನಮಃ ಜಗತ್ತ್ರಯಹಿತೈಷಿಣ್ಯೈ ನಮಃ ಜಾತರೂಪಾಯೈ ನಮಃ ಜ್ಯೋತ್ಸ್ನಾಯೈ ನಮಃ ಜನತಾಯೈ ನಮಃ ತಾರಾಯೈ ನಮಃ ತ್ರಿಪದಾಯೈ ನಮಃ ತೋಮರಾಯೈ ನಮಃ ತುಷ್ಟ್ಯೈ ನಮಃ ಧನುರ್ಧರಾಯೈ ನಮಃ ಧೇನುಕಾಯೈ ನಮಃ ಧ್ವಜಿನ್ಯೈ ನಮಃ ಧೀರಾಯೈ ನಮಃ ಧೂಲಿಧ್ವಾಂತಹರಾಯೈ ನಮಃ ಧ್ವನಯೇ ನಮಃ ಧ್ಯೇಯಾಯೈ ನಮಃ ಧನ್ಯಾಯೈ ನಮಃ ನೌಕಾಯೈ ನಮಃ ನೀಲಮೇಘಸಮಪ್ರಭಾಯೈ ನಮಃ ನವ್ಯಾಯೈ ನಮಃ ನೀಲಾಂಬರಾಯೈ ನಮಃ ನಖಜ್ವಾಲಾಯೈ ನಮಃ ನಲಿನ್ಯೈ ನಮಃ ಪರಾತ್ಮಿಕಾಯೈ ನಮಃ ಪರಾಪವಾದಸಂಹರ್ತ್ರ್ಯೈ ನಮಃ ಪನ್ನಗೇಂದ್ರಶಯನಾಯೈ ನಮಃ ಪತಗೇಂದ್ರಕೃತಾಸನಾಯೈ ನಮಃ ಪಾಕಶಾಸನಾಯೈ ನಮಃ ಪರಶುಪ್ರಿಯಾಯೈ ನಮಃ ಬಲಿಪ್ರಿಯಾಯೈ ನಮಃ ಬಲದಾಯೈ ನಮಃ ಬಾಲಿಕಾಯೈ ನಮಃ ಬಾಲಾಯೈ ನಮಃ ಬದರ್ಯೈ ನಮಃ ಬಲಶಾಲಿನ್ಯೈ ನಮಃ ಬಲಭದ್ರಪ್ರಿಯಾಯೈ ನಮಃ ಬುದ್ಧ್ಯೈ ನಮಃ ಬಾಹುದಾಯೈ ನಮಃ ಮುಖ್ಯಾಯೈ ನಮಃ ಮೋಕ್ಷದಾಯೈ ನಮಃ ಮೀನರೂಪಿಣ್ಯೈ ನಮಃ ಯಜ್ಞಾಯೈ ನಮಃ ಯಜ್ಞಾಂಗಾಯೈ ನಮಃ ಯಜ್ಞಕಾಮದಾಯೈ ನಮಃ ಯಜ್ಞರೂಪಾಯೈ ನಮಃ ಯಜ್ಞಕರ್ತ್ರ್ಯೈ ನಮಃ ರಮಣ್ಯೈ ನಮಃ ರಾಮಮೂರ್ತ್ಯೈ ನಮಃ ರಾಗಿಣ್ಯೈ ನಮಃ ರಾಗಜ್ಞಾಯೈ ನಮಃ ರಾಗವಲ್ಲಭಾಯೈ ನಮಃ ರತ್ನಗರ್ಭಾಯೈ ನಮಃ ರತ್ನಖನ್ಯೈ ನಮಃ ರಾಕ್ಷಸ್ಯೈ ನಮಃ ಲಕ್ಷಣಾಢ್ಯಾಯೈ ನಮಃ ಲೋಲಾರ್ಕಪರಿಪೂಜಿತಾಯೈ ನಮಃ ವೇತ್ರವತ್ಯೈ ನಮಃ ವಿಶ್ವೇಶಾಯೈ ನಮಃ ವೀರಮಾತ್ರೇ ನಮಃ ವೀರಶ್ರಿಯೈ ನಮಃ ವೈಷ್ಣವ್ಯೈ ನಮಃ ಶುಚ್ಯೈ ನಮಃ ಶ್ರದ್ಧಾಯೈ ನಮಃ ಶೋಣಾಕ್ಷ್ಯೈ ನಮಃ ಶೇಷವಂದಿತಾಯೈ ನಮಃ ಶತಾಕ್ಷಯೈ ನಮಃ ಹತದಾನವಾಯೈ ನಮಃ ಹಯಗ್ರೀವತನವೇ ನಮಃ .. ಓಂ .. 

 ಓಂ ಶ್ರೀಂ ಹ್ರೀಂ ಕ್ಲೀಂ ಗಜಲಕ್ಷ್ಮ್ಯೈ ನಮಃ 
ಅನಂತಶಕ್ತ್ಯೈ ನಮಃ ಅಜ್ಞೇಯಾಯೈ ನಮಃ ಅಣುರೂಪಾಯೈ ನಮಃ ಅರುಣಾಕೃತ್ಯೈ ನಮಃ ಅವಾಚ್ಯಾಯೈ ನಮಃ ಅನಂತರೂಪಾಯೈ ನಮಃ ಅಂಬುದಾಯೈ ನಮಃ ಅಂಬರಸಂಸ್ಥಾಂಕಾಯೈ ನಮಃ ಅಶೇಷಸ್ವರಭೂಷಿತಾಯೈ ನಮಃ ಇಚ್ಛಾಯೈ ನಮಃ ಇಂದೀವರಪ್ರಭಾಯೈ ನಮಃ ಉಮಾಯೈ ನಮಃ ಊರ್ವಶ್ಯೈ ನಮಃ ಉದಯಪ್ರದಾಯೈ ನಮಃ ಕುಶಾವರ್ತಾಯೈ ನಮಃ ಕಾಮಧೇನವೇ ನಮಃ ಕಪಿಲಾಯೈ ನಮಃ ಕುಲೋದ್ಭವಾಯೈ ನಮಃ ಕುಂಕುಮಾಂಕಿತದೇಹಾಯೈ ನಮಃ ಕುಮಾರ್ಯೈ ನಮಃ ಕುಂಕುಮಾರುಣಾಯೈ ನಮಃ ಕಾಶಪುಷ್ಪಪ್ರತೀಕಾಶಾಯೈ ನಮಃ ಖಲಾಪಹಾಯೈ ನಮಃ ಖಗಮಾತ್ರೇ ನಮಃ ಖಗಾಕೃತ್ಯೈ ನಮಃ ಗಾಂಧರ್ವಗೀತಕೀರ್ತ್ಯೈ ನಮಃ ಗೇಯವಿದ್ಯಾವಿಶಾರದಾಯೈ ನಮಃ ಗಂಭೀರನಾಭ್ಯೈ ನಮಃ ಗರಿಮಾಯೈ ನಮಃ ಚಾಮರ್ಯೈ ನಮಃ ಚತುರಾನನಾಯೈ ನಮಃ ಚತುಃಷಷ್ಟಿಶ್ರೀತಂತ್ರಪೂಜನೀಯಾಯೈ ನಮಃ ಚಿತ್ಸುಖಾಯೈ ನಮಃ ಚಿಂತ್ಯಾಯೈ ನಮಃ ಗಂಭೀರಾಯೈ ನಮಃ ಗೇಯಾಯೈ ನಮಃ ಗಂಧರ್ವಸೇವಿತಾಯೈ ನಮಃ ಜರಾಮೃತ್ಯುವಿನಾಶಿನ್ಯೈ ನಮಃ ಜೈತ್ರ್ಯೈ ನಮಃ ಜೀಮೂತಸಂಕಾಶಾಯೈ ನಮಃ ಜೀವನಾಯೈ ನಮಃ ಜೀವನಪ್ರದಾಯೈ ನಮಃ ಜಿತಶ್ವಾಸಾಯೈ ನಮಃ ಜಿತಾರಾತಯೇ ನಮಃ ಜನಿತ್ರ್ಯೈ ನಮಃ ತೃಪ್ತ್ಯೈ ನಮಃ ತ್ರಪಾಯೈ ನಮಃ ತೃಷಾಯೈ ನಮಃ ದಕ್ಷಪೂಜಿತಾಯೈ ನಮಃ ದೀರ್ಘಕೇಶ್ಯೈ ನಮಃ ದಯಾಲವೇ ನಮಃ ದನುಜಾಪಹಾಯೈ ನಮಃ ದಾರಿದ್ರ್ಯನಾಶಿನ್ಯೈ ನಮಃ ದ್ರವಾಯೈ ನಮಃ ನೀತಿನಿಷ್ಠಾಯೈ ನಮಃ ನಾಕಗತಿಪ್ರದಾಯೈ ನಮಃ ನಾಗರೂಪಾಯೈ ನಮಃ ನಾಗವಲ್ಲ್ಯೈ ನಮಃ ಪ್ರತಿಷ್ಠಾಯೈ ನಮಃ ಪೀತಾಂಬರಾಯೈ ನಮಃ ಪರಾಯೈ ನಮಃ ಪುಣ್ಯಪ್ರಜ್ಞಾಯೈ ನಮಃ ಪಯೋಷ್ಣ್ಯೈ ನಮಃ ಪಂಪಾಯೈ ನಮಃ ಪದ್ಮಪಯಸ್ವಿನ್ಯೈ ನಮಃ ಪೀವರಾಯೈ ನಮಃ ಭೀಮಾಯೈ ನಮಃ ಭವಭಯಾಪಹಾಯೈ ನಮಃ ಭೀಷ್ಮಾಯೈ ನಮಃ ಭ್ರಾಜನ್ಮಣಿಗ್ರೀವಾಯೈ ನಮಃ ಭ್ರಾತೃಪೂಜ್ಯಾಯೈ ನಮಃ ಭಾರ್ಗವ್ಯೈ ನಮಃ ಭ್ರಾಜಿಷ್ಣವೇ ನಮಃ ಭಾನುಕೋಟಿಸಮಪ್ರಭಾಯೈ ನಮಃ ಮಾತಂಗ್ಯೈ ನಮಃ ಮಾನದಾಯೈ ನಮಃ ಮಾತ್ರೇ ನಮಃ ಮಾತೃಮಂಡಲವಾಸಿನ್ಯೈ ನಮಃ ಮಾಯಾಯೈ ನಮಃ ಮಾಯಾಪುರ್ಯೈ ನಮಃ ಯಶಸ್ವಿನ್ಯೈ ನಮಃ ಯೋಗಗಮ್ಯಾಯೈ ನಮಃ ಯೋಗ್ಯಾಯೈ ನಮಃ ರತ್ನಕೇಯೂರವಲಯಾಯೈ ನಮಃ ರತಿರಾಗವಿವರ್ಧಿನ್ಯೈ ನಮಃ ರೋಲಂಬಪೂರ್ಣಮಾಲಾಯೈ ನಮಃ ರಮಣೀಯಾಯೈ ನಮಃ ರಮಾಪತ್ಯೈ ನಮಃ ಲೇಖ್ಯಾಯೈ ನಮಃ ಲಾವಣ್ಯಭುವೇ ನಮಃ ಲಿಪ್ಯೈ ನಮಃ ಲಕ್ಷ್ಮಣಾಯೈ ನಮಃ ವೇದಮಾತ್ರೇ ನಮಃ ವಹ್ನಿಸ್ವರೂಪಧೃಷೇ ನಮಃ ವಾಗುರಾಯೈ ನಮಃ ವಧುರೂಪಾಯೈ ನಮಃ ವಾಲಿಹಂತ್ರ್ಯೈ ನಮಃ ವರಾಪ್ಸರಸ್ಯೈ ನಮಃ ಶಾಂಬರ್ಯೈ ನಮಃ ಶಮನ್ಯೈ ನಮಃ ಶಾಂತ್ಯೈ ನಮಃ ಸುಂದರ್ಯೈ ನಮಃ ಸೀತಾಯೈ ನಮಃ ಸುಭದ್ರಾಯೈ ನಮಃ ಕ್ಷೇಮಂಕರ್ಯೈ ನಮಃ ಕ್ಷಿತ್ಯೈ ನಮಃ .. ಓಂ .. 

ಓಂ ಹ್ರೀಂ ಶ್ರೀಂ ಕ್ಲೀಂ ಸಂತಾನಲಕ್ಷ್ಮ್ಯೈ ನಮಃ 
ಅಸುರಘ್ನ್ಯೈ ನಮಃ ಅರ್ಚಿತಾಯೈ ನಮಃ ಅಮೃತಪ್ರಸವೇ ನಮಃ ಅಕಾರರೂಪಾಯೈ ನಮಃ ಅಯೋಧ್ಯಾಯೈ ನಮಃ ಅಶ್ವಿನ್ಯೈ ನಮಃ ಅಮರವಲ್ಲಭಾಯೈ ನಮಃ ಅಖಂಡಿತಾಯುಷೇ ನಮಃ ಇಂದುನಿಭಾನನಾಯೈ ನಮಃ ಇಜ್ಯಾಯೈ ನಮಃ ಇಂದ್ರಾದಿಸ್ತುತಾಯೈ ನಮಃ ಉತ್ತಮಾಯೈ ನಮಃ ಉತ್ಕೃಷ್ಟವರ್ಣಾಯೈ ನಮಃ ಉರ್ವ್ಯೈ ನಮಃ ಕಮಲಸ್ರಗ್ಧರಾಯೈ ನಮಃ ಕಾಮವರದಾಯೈ ನಮಃ ಕಮಠಾಕೃತ್ಯೈ ನಮಃ ಕಾಂಚೀಕಲಾಪರಮ್ಯಾಯೈ ನಮಃ ಕಮಲಾಸನಸಂಸ್ತುತಾಯೈ ನಮಃ ಕಂಬೀಜಾಯೈ ನಮಃ ಕೌತ್ಸವರದಾಯೈ ನಮಃ ಕಾಮರೂಪನಿವಾಸಿನ್ಯೈ ನಮಃ ಖಡ್ಗಿನ್ಯೈ ನಮಃ ಗುಣರೂಪಾಯೈ ನಮಃ ಗುಣೋದ್ಧತಾಯೈ ನಮಃ ಗೋಪಾಲರೂಪಿಣ್ಯೈ ನಮಃ ಗೋಪ್ತ್ರ್ಯೈ ನಮಃ ಗಹನಾಯೈ ನಮಃ ಗೋಧನಪ್ರದಾಯೈ ನಮಃ ಚಿತ್ಸ್ವರೂಪಾಯೈ ನಮಃ ಚರಾಚರಾಯೈ ನಮಃ ಚಿತ್ರಿಣ್ಯೈ ನಮಃ ಚಿತ್ರಾಯೈ ನಮಃ ಗುರುತಮಾಯೈ ನಮಃ ಗಮ್ಯಾಯೈ ನಮಃ ಗೋದಾಯೈ ನಮಃ ಗುರುಸುತಪ್ರದಾಯೈ ನಮಃ ತಾಮ್ರಪರ್ಣ್ಯೈ ನಮಃ ತೀರ್ಥಮಯ್ಯೈ ನಮಃ ತಾಪಸ್ಯೈ ನಮಃ ತಾಪಸಪ್ರಿಯಾಯೈ ನಮಃ ತ್ರ್ಯೈಲೋಕ್ಯಪೂಜಿತಾಯೈ ನಮಃ ಜನಮೋಹಿನ್ಯೈ ನಮಃ ಜಲಮೂರ್ತ್ಯೈ ನಮಃ ಜಗದ್ಬೀಜಾಯೈ ನಮಃ ಜನನ್ಯೈ ನಮಃ ಜನ್ಮನಾಶಿನ್ಯೈ ನಮಃ ಜಗದ್ಧಾತ್ರ್ಯೈ ನಮಃ ಜಿತೇಂದ್ರಿಯಾಯೈ ನಮಃ ಜ್ಯೋತಿರ್ಜಾಯಾಯೈ ನಮಃ ದ್ರೌಪದ್ಯೈ ನಮಃ ದೇವಮಾತ್ರೇ ನಮಃ ದುರ್ಧರ್ಷಾಯೈ ನಮಃ ದೀಧಿತಿಪ್ರದಾಯೈ ನಮಃ ದಶಾನನಹರಾಯೈ ನಮಃ ಡೋಲಾಯೈ ನಮಃ ದ್ಯುತ್ಯೈ ನಮಃ ದೀಪ್ತಾಯೈ ನಮಃ ನುತ್ಯೈ ನಮಃ ನಿಷುಂಭಘ್ನ್ಯೈ ನಮಃ ನರ್ಮದಾಯೈ ನಮಃ ನಕ್ಷತ್ರಾಖ್ಯಾಯೈ ನಮಃ ನಂದಿನ್ಯೈ ನಮಃ ಪದ್ಮಿನ್ಯೈ ನಮಃ ಪದ್ಮಕೋಶಾಕ್ಷ್ಯೈ ನಮಃ ಪುಂಡಲೀಕವರಪ್ರದಾಯೈ ನಮಃ ಪುರಾಣಪರಮಾಯೈ ನಮಃ ಪ್ರೀತ್ಯೈ ನಮಃ ಭಾಲನೇತ್ರಾಯೈ ನಮಃ ಭೈರವ್ಯೈ ನಮಃ ಭೂತಿದಾಯೈ ನಮಃ ಭ್ರಾಮರ್ಯೈ ನಮಃ ಭ್ರಮಾಯೈ ನಮಃ ಭೂರ್ಭುವಸ್ವಃ ಸ್ವರೂಪಿಣ್ಯೈ ನಮಃ ಮಾಯಾಯೈ ನಮಃ ಮೃಗಾಕ್ಷ್ಯೈ ನಮಃ ಮೋಹಹಂತ್ರ್ಯೈ ನಮಃ ಮನಸ್ವಿನ್ಯೈ ನಮಃ ಮಹೇಪ್ಸಿತಪ್ರದಾಯೈ ನಮಃ ಮಾತ್ರಮದಹೃತಾಯೈ ನಮಃ ಮದಿರೇಕ್ಷಣಾಯೈ ನಮಃ ಯುದ್ಧಜ್ಞಾಯೈ ನಮಃ ಯದುವಂಶಜಾಯೈ ನಮಃ ಯಾದವಾರ್ತಿಹರಾಯೈ ನಮಃ ಯುಕ್ತಾಯೈ ನಮಃ ಯಕ್ಷಿಣ್ಯೈ ನಮಃ ಯವನಾರ್ದಿನ್ಯೈ ನಮಃ ಲಕ್ಷ್ಮ್ಯೈ ನಮಃ ಲಾವಣ್ಯರೂಪಾಯೈ ನಮಃ ಲಲಿತಾಯೈ ನಮಃ ಲೋಲಲೋಚನಾಯೈ ನಮಃ ಲೀಲಾವತ್ಯೈ ನಮಃ ಲಕ್ಷರೂಪಾಯೈ ನಮಃ ವಿಮಲಾಯೈ ನಮಃ ವಸವೇ ನಮಃ ವ್ಯಾಲರೂಪಾಯೈ ನಮಃ ವೈದ್ಯವಿದ್ಯಾಯೈ ನಮಃ ವಾಸಿಷ್ಠ್ಯೈ ನಮಃ ವೀರ್ಯದಾಯಿನ್ಯೈ ನಮಃ ಶಬಲಾಯೈ ನಮಃ ಶಾಂತಾಯೈ ನಮಃ ಶಕ್ತಾಯೈ ನಮಃ ಶೋಕವಿನಾಶಿನ್ಯೈ ನಮಃ ಶತ್ರುಮಾರ್ಯೈ ನಮಃ ಶತ್ರುರೂಪಾಯೈ ನಮಃ ಸರಸ್ವತ್ಯೈ ನಮಃ ಸುಶ್ರೋಣ್ಯೈ ನಮಃ ಸುಮುಖ್ಯೈ ನಮಃ ಹಾವಭೂಮ್ಯೈ ನಮಃ ಹಾಸ್ಯಪ್ರಿಯಾಯೈ ನಮಃ .. ಓಂ .. 

ಓಂ ಕ್ಲೀಂ ಓಂ ವಿಜಯಲಕ್ಷ್ಮ್ಯೈ ನಮಃ 
ಅಂಬಿಕಾಯೈ ನಮಃ ಅಂಬಾಲಿಕಾಯೈ ನಮಃ ಅಂಬುಧಿಶಯನಾಯೈ ನಮಃ ಅಂಬುಧಯೇ ನಮಃ ಅಂತಕಘ್ನ್ಯೈ ನಮಃ ಅಂತಕರ್ತ್ರ್ಯೈ ನಮಃ ಅಂತಿಮಾಯೈ ನಮಃ ಅಂತಕರೂಪಿಣ್ಯೈ ನಮಃ ಈಡ್ಯಾಯೈ ನಮಃ ಇಭಾಸ್ಯನುತಾಯೈ ನಮಃ ಈಶಾನಪ್ರಿಯಾಯೈ ನಮಃ ಊತ್ಯೈ ನಮಃ ಉದ್ಯದ್ಭಾನುಕೋಟಿಪ್ರಭಾಯೈ ನಮಃ ಉದಾರಾಂಗಾಯೈ ನಮಃ ಕೇಲಿಪರಾಯೈ ನಮಃ ಕಲಹಾಯೈ ನಮಃ ಕಾಂತಲೋಚನಾಯೈ ನಮಃ ಕಾಂಚ್ಯೈ ನಮಃ ಕನಕಧಾರಾಯೈ ನಮಃ ಕಲ್ಯೈ ನಮಃ ಕನಕಕುಂಡಲಾಯೈ ನಮಃ ಖಡ್ಗಹಸ್ತಾಯೈ ನಮಃ ಖಟ್ವಾಂಗವರಧಾರಿಣ್ಯೈ ನಮಃ ಖೇಟಹಸ್ತಾಯೈ ನಮಃ ಗಂಧಪ್ರಿಯಾಯೈ ನಮಃ ಗೋಪಸಖ್ಯೈ ನಮಃ ಗಾರುಡ್ಯೈ ನಮಃ ಗತ್ಯೈ ನಮಃ ಗೋಹಿತಾಯೈ ನಮಃ ಗೋಪ್ಯಾಯೈ ನಮಃ ಚಿದಾತ್ಮಿಕಾಯೈ ನಮಃ ಚತುರ್ವರ್ಗಫಲಪ್ರದಾಯೈ ನಮಃ ಚತುರಾಕೃತ್ಯೈ ನಮಃ ಚಕೋರಾಕ್ಷ್ಯೈ ನಮಃ ಚಾರುಹಾಸಾಯೈ ನಮಃ ಗೋವರ್ಧನಧರಾಯೈ ನಮಃ ಗುರ್ವ್ಯೈ ನಮಃ ಗೋಕುಲಾಭಯದಾಯಿನ್ಯೈ ನಮಃ ತಪೋಯುಕ್ತಾಯೈ ನಮಃ ತಪಸ್ವಿಕುಲವಂದಿತಾಯೈ ನಮಃ ತಾಪಹಾರಿಣ್ಯೈ ನಮಃ ತಾರ್ಕ್ಷಮಾತ್ರೇ ನಮಃ ಜಯಾಯೈ ನಮಃ ಜಪ್ಯಾಯೈ ನಮಃ ಜರಾಯವೇ ನಮಃ ಜವನಾಯೈ ನಮಃ ಜನನ್ಯೈ ನಮಃ ಜಾಂಬೂನದವಿಭೂಷಾಯೈ ನಮಃ ದಯಾನಿಧ್ಯೈ ನಮಃ ಜ್ವಾಲಾಯೈ ನಮಃ ಜಂಭವಧೋದ್ಯತಾಯೈ ನಮಃ ದುಃಖಹಂತ್ರ್ಯೈ ನಮಃ ದಾಂತಾಯೈ ನಮಃ ದ್ರುತೇಷ್ಟದಾಯೈ ನಮಃ ದಾತ್ರ್ಯೈ ನಮಃ ದೀನರ್ತಿಶಮನಾಯೈ ನಮಃ ನೀಲಾಯೈ ನಮಃ ನಾಗೇಂದ್ರಪೂಜಿತಾಯೈ ನಮಃ ನಾರಸಿಮ್ಹ್ಯೈ ನಮಃ ನಂದಿನಂದಾಯೈ ನಮಃ ನಂದ್ಯಾವರ್ತಪ್ರಿಯಾಯೈ ನಮಃ ನಿಧಯೇ ನಮಃ ಪರಮಾನಂದಾಯೈ ನಮಃ ಪದ್ಮಹಸ್ತಾಯೈ ನಮಃ ಪಿಕಸ್ವರಾಯೈ ನಮಃ ಪುರುಷಾರ್ಥಪ್ರದಾಯೈ ನಮಃ ಪ್ರೌಢಾಯೈ ನಮಃ ಪ್ರಾಪ್ತ್ಯೈ ನಮಃ ಬಲಿಸಂಸ್ತುತಾಯೈ ನಮಃ ಬಾಲೇಂದುಶೇಖರಾಯೈ ನಮಃ ಬಂದ್ಯೈ ನಮಃ ಬಾಲಗ್ರಹವಿನಾಶನ್ಯೈ ನಮಃ ಬ್ರಾಹ್ಮ್ಯೈ ನಮಃ ಬೃಹತ್ತಮಾಯೈ ನಮಃ ಬಾಣಾಯೈ ನಮಃ ಬ್ರಾಹ್ಮಣ್ಯೈ ನಮಃ ಮಧುಸ್ರವಾಯೈ ನಮಃ ಮತ್ಯೈ ನಮಃ ಮೇಧಾಯೈ ನಮಃ ಮನೀಷಾಯೈ ನಮಃ ಮೃತ್ಯುಮಾರಿಕಾಯೈ ನಮಃ ಮೃಗತ್ವಚೇ ನಮಃ ಯೋಗಿಜನಪ್ರಿಯಾಯೈ ನಮಃ ಯೋಗಾಂಗಧ್ಯಾನಶೀಲಾಯೈ ನಮಃ ಯಜ್ಞಭುವೇ ನಮಃ ಯಜ್ಞವರ್ಧಿನ್ಯೈ ನಮಃ ರಾಕಾಯೈ ನಮಃ ರಾಕೇಂದುವದನಾಯೈ ನಮಃ ರಮ್ಯಾಯೈ ನಮಃ ರಣಿತನೂಪುರಾಯೈ ನಮಃ ರಕ್ಷೋಘ್ನ್ಯೈ ನಮಃ ರತಿದಾತ್ರ್ಯೈ ನಮಃ ಲತಾಯೈ ನಮಃ ಲೀಲಾಯೈ ನಮಃ ಲೀಲಾನರವಪುಷೇ ನಮಃ ಲೋಲಾಯೈ ನಮಃ ವರೇಣ್ಯಾಯೈ ನಮಃ ವಸುಧಾಯೈ ನಮಃ ವೀರಾಯೈ ನಮಃ ವರಿಷ್ಠಾಯೈ ನಮಃ ಶಾತಕುಂಭಮಯ್ಯೈ ನಮಃ ಶಕ್ತ್ಯೈ ನಮಃ ಶ್ಯಾಮಾಯೈ ನಮಃ ಶೀಲವತ್ಯೈ ನಮಃ ಶಿವಾಯೈ ನಮಃ ಹೋರಾಯೈ ನಮಃ ಹಯಗಾಯೈ ನಮಃ .. 

ಓಂ .. ಐಂ ಓಂ ವಿದ್ಯಾಲಕ್ಷ್ಮ್ಯೈ ನಮಃ 
ವಾಗ್ದೇವ್ಯೈ ನಮಃ ಪರದೇವ್ಯೈ ನಮಃ ನಿರವದ್ಯಾಯೈ ನಮಃ ಪುಸ್ತಕಹಸ್ತಾಯೈ ನಮಃ ಜ್ಞಾನಮುದ್ರಾಯೈ ನಮಃ ಶ್ರೀವಿದ್ಯಾಯೈ ನಮಃ ವಿದ್ಯಾರೂಪಾಯೈ ನಮಃ ಶಾಸ್ತ್ರನಿರೂಪಿಣ್ಯೈ ನಮಃ ತ್ರಿಕಾಲಜ್ಞಾನಾಯೈ ನಮಃ ಸರಸ್ವತ್ಯೈ ನಮಃ ಮಹಾವಿದ್ಯಾಯೈ ನಮಃ ವಾಣಿಶ್ರಿಯೈ ನಮಃ ಯಶಸ್ವಿನ್ಯೈ ನಮಃ ವಿಜಯಾಯೈ ನಮಃ ಅಕ್ಷರಾಯೈ ನಮಃ ವರ್ಣಾಯೈ ನಮಃ ಪರಾವಿದ್ಯಾಯೈ ನಮಃ ಕವಿತಾಯೈ ನಮಃ ನಿತ್ಯಬುದ್ಧಾಯೈ ನಮಃ ನಿರ್ವಿಕಲ್ಪಾಯೈ ನಮಃ ನಿಗಮಾತೀತಾಯೈ ನಮಃ ನಿರ್ಗುಣರೂಪಾಯೈ ನಮಃ ನಿಷ್ಕಲರೂಪಾಯೈ ನಮಃ ನಿರ್ಮಲಾಯೈ ನಮಃ ನಿರ್ಮಲರೂಪಾಯೈ ನಮಃ ನಿರಾಕಾರಾಯೈ ನಮಃ ನಿರ್ವಿಕಾರಾಯೈ ನಮಃ ನಿತ್ಯಶುದ್ಧಾಯೈ ನಮಃ ಬುದ್ಧ್ಯೈ ನಮಃ ಮುಕ್ತ್ಯೈ ನಮಃ ನಿತ್ಯಾಯೈ ನಮಃ ನಿರಹಂಕಾರಾಯೈ ನಮಃ ನಿರಾತಂಕಾಯೈ ನಮಃ ನಿಷ್ಕಲಂಕಾಯೈ ನಮಃ ನಿಷ್ಕಾರಿಣ್ಯೈ ನಮಃ ನಿಖಿಲಕಾರಣಾಯೈ ನಮಃ ನಿರೀಶ್ವರಾಯೈ ನಮಃ ನಿತ್ಯಜ್ಞಾನಾಯೈ ನಮಃ ನಿಖಿಲಾಂಡೇಶ್ವರ್ಯೈ ನಮಃ ನಿಖಿಲವೇದ್ಯಾಯೈ ನಮಃ ಗುಣದೇವ್ಯೈ ನಮಃ ಸುಗುಣದೇವ್ಯೈ ನಮಃ ಸರ್ವಸಾಕ್ಷಿಣ್ಯೈ ನಮಃ ಸಚ್ಚಿದಾನಂದಾಯೈ ನಮಃ ಸಜ್ಜನಪೂಜಿತಾಯೈ ನಮಃ ಸಕಲದೇವ್ಯೈ ನಮಃ ಮೋಹಿನ್ಯೈ ನಮಃ ಮೋಹವರ್ಜಿತಾಯೈ ನಮಃ ಮೋಹನಾಶಿನ್ಯೈ ನಮಃ ಶೋಕಾಯೈ ನಮಃ ಶೋಕನಾಶಿನ್ಯೈ ನಮಃ ಕಾಲಾಯೈ ನಮಃ ಕಾಲಾತೀತಾಯೈ ನಮಃ ಕಾಲಪ್ರತೀತಾಯೈ ನಮಃ ಅಖಿಲಾಯೈ ನಮಃ ಅಖಿಲನಿದಾನಾಯೈ ನಮಃ ಅಜರಾಮರಾಯೈ ನಮಃ ಅಜಹಿತಕಾರಿಣ್ಯೈ ನಮಃ ತ್ರಿಗುಣಾಯೈ ನಮಃ ತ್ರಿಮೂರ್ತ್ಯೈ ನಮಃ ಭೇದವಿಹೀನಾಯೈ ನಮಃ ಭೇದಕಾರಣಾಯೈ ನಮಃ ಶಬ್ದಾಯೈ ನಮಃ ಶಬ್ದಭಂಡಾರಾಯೈ ನಮಃ ಶಬ್ದಕಾರಿಣ್ಯೈ ನಮಃ ಸ್ಪರ್ಶಾಯೈ ನಮಃ ಸ್ಪರ್ಶವಿಹೀನಾಯೈ ನಮಃ ರೂಪಾಯೈ ನಮಃ ರೂಪವಿಹೀನಾಯೈ ನಮಃ ರೂಪಕಾರಣಾಯೈ ನಮಃ ರಸಗಂಧಿನ್ಯೈ ನಮಃ ರಸವಿಹೀನಾಯೈ ನಮಃ ಸರ್ವವ್ಯಾಪಿನ್ಯೈ ನಮಃ ಮಾಯಾರೂಪಿಣ್ಯೈ ನಮಃ ಪ್ರಣವಲಕ್ಷ್ಮ್ಯೈ ನಮಃ ಮಾತ್ರೇ ನಮಃ ಮಾತೃಸ್ವರೂಪಿಣ್ಯೈ ನಮಃ ಹ್ರೀಂಕಾರ್ಯೈ ಓಂಕಾರ್ಯೈ ನಮಃ ಶಬ್ದಶರೀರಾಯೈ ನಮಃ ಭಾಷಾಯೈ ನಮಃ ಭಾಷಾರೂಪಾಯೈ ನಮಃ ಗಾಯತ್ರ್ಯೈ ನಮಃ ವಿಶ್ವಾಯೈ ನಮಃ ವಿಶ್ವರೂಪಾಯೈ ನಮಃ ತೈಜಸೇ ನಮಃ ಪ್ರಾಜ್ಞಾಯೈ ನಮಃ ಸರ್ವಶಕ್ತ್ಯೈ ನಮಃ ವಿದ್ಯಾವಿದ್ಯಾಯೈ ನಮಃ ವಿದುಷಾಯೈ ನಮಃ ಮುನಿಗಣಾರ್ಚಿತಾಯೈ ನಮಃ ಧ್ಯಾನಾಯೈ ನಮಃ ಹಂಸವಾಹಿನ್ಯೈ ನಮಃ ಹಸಿತವದನಾಯೈ ನಮಃ ಮಂದಸ್ಮಿತಾಯೈ ನಮಃ ಅಂಬುಜವಾಸಿನ್ಯೈ ನಮಃ ಮಯೂರಾಯೈ ನಮಃ ಪದ್ಮಹಸ್ತಾಯೈ ನಮಃ ಗುರುಜನವಂದಿತಾಯೈ ನಮಃ ಸುಹಾಸಿನ್ಯೈ ನಮಃ ಮಂಗಲಾಯೈ ನಮಃ ವೀಣಾಪುಸ್ತಕಧಾರಿಣ್ಯೈ ನಮಃ .. 

ಓಂ .. ಶ್ರೀಂ ಶ್ರೀಂ ಶ್ರೀಂ ಓಂ ಐಶ್ವರ್ಯಲಕ್ಷ್ಮ್ಯೈ ನಮಃ 
ಅನಘಾಯೈ ನಮಃ ಅಲಿರಾಜ್ಯೈ ನಮಃ ಅಹಸ್ಕರಾಯೈ ನಮಃ ಅಮಯಘ್ನ್ಯೈ ನಮಃ ಅಲಕಾಯೈ ನಮಃ ಅನೇಕಾಯೈ ನಮಃ ಅಹಲ್ಯಾಯೈ ನಮಃ ಆದಿರಕ್ಷಣಾಯೈ ನಮಃ ಇಷ್ಟೇಷ್ಟದಾಯೈ ನಮಃ ಇಂದ್ರಾಣ್ಯೈ ನಮಃ ಈಶೇಶಾನ್ಯೈ ನಮಃ ಇಂದ್ರಮೋಹಿನ್ಯೈ ನಮಃ ಉರುಶಕ್ತ್ಯೈ ನಮಃ ಉರುಪ್ರದಾಯೈ ನಮಃ ಊರ್ಧ್ವಕೇಶ್ಯೈ ನಮಃ ಕಾಲಮಾರ್ಯೈ ನಮಃ ಕಾಲಿಕಾಯೈ ನಮಃ ಕಿರಣಾಯೈ ನಮಃ ಕಲ್ಪಲತಿಕಾಯೈ ನಮಃ ಕಲ್ಪಸ್ಂಖ್ಯಾಯೈ ನಮಃ ಕುಮುದ್ವತ್ಯೈ ನಮಃ ಕಾಶ್ಯಪ್ಯೈ ನಮಃ ಕುತುಕಾಯೈ ನಮಃ ಖರದೂಷಣಹಂತ್ರ್ಯೈ ನಮಃ ಖಗರೂಪಿಣ್ಯೈ ನಮಃ ಗುರವೇ ನಮಃ ಗುಣಾಧ್ಯಕ್ಷಾಯೈ ನಮಃ ಗುಣವತ್ಯೈ ನಮಃ ಗೋಪೀಚಂದನಚರ್ಚಿತಾಯೈ ನಮಃ ಹಂಗಾಯೈ ನಮಃ ಚಕ್ಷುಷೇ ನಮಃ ಚಂದ್ರಭಾಗಾಯೈ ನಮಃ ಚಪಲಾಯೈ ನಮಃ ಚಲತ್ಕುಂಡಲಾಯೈ ನಮಃ ಚತುಃಷಷ್ಟಿಕಲಾಜ್ಞಾನದಾಯಿನ್ಯೈ ನಮಃ ಚಾಕ್ಷುಷೀ ಮನವೇ ನಮಃ ಚರ್ಮಣ್ವತ್ಯೈ ನಮಃ ಚಂದ್ರಿಕಾಯೈ ನಮಃ ಗಿರಯೇ ನಮಃ ಗೋಪಿಕಾಯೈ ನಮಃ ಜನೇಷ್ಟದಾಯೈ ನಮಃ ಜೀರ್ಣಾಯೈ ನಮಃ ಜಿನಮಾತ್ರೇ ನಮಃ ಜನ್ಯಾಯೈ ನಮಃ ಜನಕನಂದಿನ್ಯೈ ನಮಃ ಜಾಲಂಧರಹರಾಯೈ ನಮಃ ತಪಃಸಿದ್ಧ್ಯೈ ನಮಃ ತಪೋನಿಷ್ಠಾಯೈ ನಮಃ ತೃಪ್ತಾಯೈ ನಮಃ ತಾಪಿತದಾನವಾಯೈ ನಮಃ ದರಪಾಣಯೇ ನಮಃ ದ್ರಗ್ದಿವ್ಯಾಯೈ ನಮಃ ದಿಶಾಯೈ ನಮಃ ದಮಿತೇಂದ್ರಿಯಾಯೈ ನಮಃ ದೃಕಾಯೈ ನಮಃ ದಕ್ಷಿಣಾಯೈ ನಮಃ ದೀಕ್ಷಿತಾಯೈ ನಮಃ ನಿಧಿಪುರಸ್ಥಾಯೈ ನಮಃ ನ್ಯಾಯಶ್ರಿಯೈ ನಮಃ ನ್ಯಾಯಕೋವಿದಾಯೈ ನಮಃ ನಾಭಿಸ್ತುತಾಯೈ ನಮಃ ನಯವತ್ಯೈ ನಮಃ ನರಕಾರ್ತಿಹರಾಯೈ ನಮಃ ಫಣಿಮಾತ್ರೇ ನಮಃ ಫಲದಾಯೈ ನಮಃ ಫಲಭುಜೇ ನಮಃ ಫೇನದೈತ್ಯಹೃತೇ ನಮಃ ಫುಲಾಂಬುಜಾಸನಾಯೈ ನಮಃ ಫುಲ್ಲಾಯೈ ನಮಃ ಫುಲ್ಲಪದ್ಮಕರಾಯೈ ನಮಃ ಭೀಮನಂದಿನ್ಯೈ ನಮಃ ಭೂತ್ಯೈ ನಮಃ ಭವಾನ್ಯೈ ನಮಃ ಭಯದಾಯೈ ನಮಃ ಭೀಷಣಾಯೈ ನಮಃ ಭವಭೀಷಣಾಯೈ ನಮಃ ಭೂಪತಿಸ್ತುತಾಯೈ ನಮಃ ಶ್ರೀಪತಿಸ್ತುತಾಯೈ ನಮಃ ಭೂಧರಧರಾಯೈ ನಮಃ ಭುತಾವೇಶನಿವಾಸಿನ್ಯೈ ನಮಃ ಮಧುಘ್ನ್ಯೈ ನಮಃ ಮಧುರಾಯೈ ನಮಃ ಮಾಧವ್ಯೈ ನಮಃ ಯೋಗಿನ್ಯೈ ನಮಃ ಯಾಮಲಾಯೈ ನಮಃ ಯತಯೇ ನಮಃ ಯಂತ್ರೋದ್ಧಾರವತ್ಯೈ ನಮಃ ರಜನೀಪ್ರಿಯಾಯೈ ನಮಃ ರಾತ್ರ್ಯೈ ನಮಃ ರಾಜೀವನೇತ್ರಾಯೈ ನಮಃ ರಣಭೂಮ್ಯೈ ನಮಃ ರಣಸ್ಥಿರಾಯೈ ನಮಃ ವಷಟ್ಕೃತ್ಯೈ ನಮಃ ವನಮಾಲಾಧರಾಯೈ ನಮಃ ವ್ಯಾಪ್ತ್ಯೈ ನಮಃ ವಿಖ್ಯಾತಾಯೈ ನಮಃ ಶರಧನ್ವಧರಾಯೈ ನಮಃ ಶ್ರಿತಯೇ ನಮಃ ಶರದಿಂದುಪ್ರಭಾಯೈ ನಮಃ ಶಿಕ್ಷಾಯೈ ನಮಃ ಶತಘ್ನ್ಯೈ ನಮಃ ಶಾಂತಿದಾಯಿನ್ಯೈ ನಮಃ ಹ್ರೀಂ ಬೀಜಾಯೈ ನಮಃ ಹರವಂದಿತಾಯೈ ನಮಃ ಹಾಲಾಹಲಧರಾಯೈ ನಮಃ ಹಯಘ್ನ್ಯೈ ನಮಃ ಹಂಸವಾಹಿನ್ಯೈ ನಮಃ 

October 30, 2021

ಸುಖವೆಂಬುದು ನಮ್ಮಲ್ಲೇ ಇದೆ

 ಸಾಧುವೊಬ್ಬನ ಭೇಟಿಗಾಗಿ ಕಾಡನ್ನು ಪ್ರವೇಶಿಸಿದವನೊಬ್ಬ ಅವನಿಗೆ ಕೇಳುತ್ತಾನೆ; " ನಿನ್ನಲ್ಲೊಂದು ಅದ್ಭುತ ಜಾದೂ ನಾಣ್ಯವೊಂದಿದೆಯೆಂದು ಜನ ಹೇಳುತ್ತಾರೆ. ಅದನ್ನಿಟ್ಟುಕೊಂಡವನಗೆ ಅತೃಪ್ತಿ ಎಂಬುದೇ ಇರಲಾರದಂತೆ , ಹೌದೆ?"
        ಆ ಸಾಧು ನಗುತ್ತ ಆ ನಾಣ್ಯವನ್ನು ತೋರಿಸಿದ.
       " ಅದನ್ನು ನನಗೆ ಕೊಡು, ಅದರ ಹಣ ಎಷ್ಟಾಗುತ್ತೋ ಅಷ್ಟನ್ನು ನಾನು ಕೊಡುತ್ತೇನೆ " ಎಂದು ವ್ಯಕ್ತಿ ಕೇಳಿದಾಗ ಸಾಧುವು, "ಅದು ಮಾರುವ ವಸ್ತುವಲ್ಲ" ಎಂದು ನಯವಾಗಿಯೇ ಹೇಳಿದ. 
         ಕತ್ತಲಾಗುತ್ತ ಬಂದಂತೆ ಕಾಡಿನಲ್ಲಿ ರಾತ್ರಿ ಓಡಾಟ ಭಯಾನಕವೂ ಆಗಿರುವುದರಿಂದ,  ಸಾಧುವು ತನ್ನ ಗುಡಿಸಲಲ್ಲೇ ಅವನಿಗೂ ಮಲಗುವ ಅವಕಾಶವೊದಗಿಸಿದ. ಆದರೆ ಈತನಿಗೆ ಹೇಗಾದರೂ ಮಾಡಿ ಆ ನಾಣ್ಯ ಪಡೆಯಬೇಕೆಂಬ ಆಸೆಯಿಂದ ನಿದ್ರೆಯೇ ಬರಲಿಲ್ಲ. ಸಾಧುಗೆ ನಿದ್ರೆ ಬಂದಾಕ್ಷಣ ಎದ್ದು ಇಡೀ ಗುಡಿಸಲನ್ನೇ ತಡಕಾಡಿದ.ಸಿಗಲಿಲ್ಲ. ಬೆಳಗಿನ ಜಾವದಲ್ಲಿ ಸಾಧು ಎದ್ದು ತನ್ನ ಬೆಳಗಿನ ಕ್ರಿಯೆಗಳಿಗೆಂದು ಹೊರ ಹೋದಾಗ, ಅವನ ಹಾಸಿಗೆ, ಬಟ್ಟೆ ಇತ್ಯಾದಿಗಳನ್ನೂ ಹುಡುಕಾಡಿದ. ನಾಣ್ಯದ ಕುರುಹೇ ಇಲ್ಲ. 
         
ಕೊನೆಗೆ ಕಳ್ಳ ತನ್ನ ನಡವಳಿಕೆಗೆ ತಾನೇ ನಾಚಿಕೆ ಪಟ್ಟುಕೊಂಡು ಸಾಧುವಿನಲ್ಲಿ ಕ್ಷಮೆಯಾಚಿಸಿ, ಕುತೂಹಲ ತಡೆಯಲಾರದೇ ನಾಣ್ಯ ಇದ್ದುದೆಲ್ಲಿ ಎಂದು ಹೇಳುವಂತೆ ಕೇಳಿಕೊಂಡ. ಸಾಧು ನಸುನಗುತ್ತ, ಆ ವ್ಯಕ್ತಿ ತಲೆ ಇಟ್ಟು ಮಲಗಿದ್ದ ದಿಂಬನ್ನೆಳೆದ. ಆಶ್ಚರ್ಯವೆಂಬಂತೆ ಅಲ್ಲಿ ಆ ನಾಣ್ಯವಿತ್ತು.
         " ಇಲ್ಲೊಂದು ಕಡೆಯ ಹೊರತಾಗಿ ಬೇರೆಲ್ಲೆಡೆಗೂ ನೀನು ಹುಡುಕಾಡಿದೆ" ಎಂದು ಆ ಸಾಧು ಸ್ತಂಭೀಭೂತನಾಗಿ ನಿಂತಿದ್ದ ಈ ವ್ಯಕ್ತಿಗೆ ಹೇಳುತ್ತಾನೆ. 
" ಸುಖವಂಬುದು ಯಾವಾಗಲೂ ನಿನ್ನ ದಿಂಬಿನಡಿಯಲ್ಲಿಯೇ ಇರುತ್ತದೆ. ನೆಮ್ಮದಿಗಾಗಿ ಜನ ಎಲ್ಲೆಲ್ಲೋ ಹುಡುಕಾಡುತ್ತಾರೆ. ತಮ್ಮ ತಲೆಯಲ್ಲಿಯೇ ಅದು ನೆಲೆಸಿರುತ್ತದೆಂಬ ಸತ್ಯ ಅವರಿಗೆ ತಿಳಿದಿರಲಾರದು."

ಸದ್ವಿಚಾರ ಸಂಗ್ರಹ

October 19, 2021

ಪರಶಿವನ ಜನನ ವೃತ್ತಾಂತ

*ಸರ್ವಾಂತರ್ಯಾಮಿಯಾದ ಪರಶಿವನ ಜನನದ ಕುರಿತಾದ ಕಥೆ ಕೇಳಿದ್ದೀರಾ?*

ಜಗತ್ಪಾಲನೆಗಾಗಿ ಅವತರಿಸಿದ ಶಿವನ ಲೀಲೆಯ ಬಗ್ಗೆ ಅನೇಕ ಕಥೆ ಹಾಗೂ ಉಪ ಕಥೆಗಳು ಇರುವುದನ್ನು ಕೇಳಿರಬಹುದು. ಆದರೆ ಶಿವನ ಜನನ ಹೇಗಾಯಿತು? ಶಿವನ ತಂದೆ ಯಾರು ಎನ್ನುವುದಕ್ಕೆ ಉತ್ತರಗಳಲಿಲ್ಲ. ಆದಿ ಹಾಗೂ ಅಂತ್ಯವಿಲ್ಲದ ಪರಶಿವನ ಜನನದ ಕುರಿತಾದ ಪುರಾಣ ಕಥೆಗಳು ಇಲ್ಲಿದೆ..

ದೇವಾದಿ ದೇವ ಎಂದು ಕರೆಯಲ್ಪಡುವ ಶಿವನು ಸೃಷ್ಟಿಯ ಲಯ ಕರ್ತ. ತ್ರಿಲೋಕದ ಕಲ್ಯಾಣಕ್ಕಾಗಿಯೇ ಶಿವನು ಹುಟ್ಟಿ ಬಂದ ಎಂದು ಹೇಳಲಾಗುವುದು. ಸೃಷ್ಟಿಯ ಒಳಿತಿಗಾಗಿ ಇರುವ ತ್ರಿಮೂರ್ತಿಗಳಲ್ಲಿ ಶಿವನು ಅತ್ಯಂತ ಸರಳ ಹಾಗೂ ಶಕ್ತಿಶಾಲಿ. ಸದಾ ಕಾಲ ದೀರ್ಘ ತಪಸ್ಸಿನ ಮೂಲಕ ಜಗತ್ತಿನ ಒಳಿತು ಮತ್ತು ಕೆಡುಕನ್ನು ನಿರ್ಧರಿಸುವ ದೇವ. ಹಾಗಾಗಿ ಶಿವ ಎಂದರೆ ಹಿಮ ಪರ್ವತದಲ್ಲಿ ಧ್ಯಾನಿಸುತ್ತಾ ಕುಳಿತಿರುವ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. 

ಜಗತ್ಪಾಲನೆಗಾಗಿ ಅವತರಿಸಿದ ಶಿವನ ಲೀಲೆಯ ಬಗ್ಗೆ ಅನೇಕ ಕಥೆ ಹಾಗೂ ಉಪ ಕಥೆಗಳು ಇರುವುದನ್ನು ಕೇಳಿರಬಹುದು. ಆದರೆ ಶಿವನ ಜನನ ಹೇಗಾಯಿತು? ಶಿವನ ತಂದೆ ಯಾರು ಎನ್ನುವುದಕ್ಕೆ ನಿರ್ದಿಷ್ಟ ಉತ್ತರಗಳಿಲ್ಲ. ಆದಿ ಹಾಗೂ ಅಂತ್ಯವಿಲ್ಲದ ಪರಶಿವನ ಜನನದ ಕುರಿತಾದ ಪುರಾಣ ಕಥೆಗಳು ಇಲ್ಲಿದೆ ಓದಿ.

ವಿಶೇಷ ಶಕ್ತಿಗಳ ಆದೇಶದ ಮೇರೆಗೆ ಬ್ರಹ್ಮನು ಸ್ವಯಂ ವಂಚನೆ, ಸಾವಿನ ಪ್ರಜ್ಞೆ, ಹತಾಶೆಯ ನಂತರ ಕೋಪ, ಸುಳ್ಳು, ಮಾಲಿಕತ್ವದ ಪ್ರಜ್ಞೆ, ಭ್ರಾಂತಿ, ದೈಹಿಕ ಪರಿಕಲ್ಪನೆ, ಒಬ್ಬರ ನೈಜ ಗುರುತನ್ನು ಮರೆಯುವಂತಹ ಗುಣಗಳನ್ನು ಸೃಷ್ಟಿ ಮಾಡಿದನು. ಕಾಳಿಯ ಯುಗದಲ್ಲಿ ಈ ಗುಣಗಳು ನಿಯಮಾಧೀನ ಆತ್ಮಗಳ ಮೇಲೆ ಸಕ್ರಿಯವಾಗಿ ಪ್ರಭಾವ ಬೀರಿದವು. ಆಗ ಇವೆಲ್ಲವೂ ತಪ್ಪು ಎನ್ನುವ ಮನೋಭಾವನೆ ಉಂಟಾಯಿತು. ಈ ಗುಣಗಳನ್ನು ಸೃಷ್ಟಿ ಮಾಡಿದ ಬ್ರಹ್ಮನು ತಪ್ಪಿತಸ್ಥ ಎಂದು ಪರಿಗಣಿಸಿದರು.

ಬ್ರಹ್ಮನ ಮೇಲೆ ಬಂದ ಅಪವಾದದಿಂದ ಬ್ರಹ್ಮನು ಸಾಕಷ್ಟು ಅಸಮಾಧಾನಕ್ಕೆ ಒಳಗಾದನು. ಈ ಅಸಮಾಧಾನಗಳನ್ನು ತೊಡೆದು ಹಾಕಿ ಶುದ್ಧೀಕರಿಸಿಕೊಳ್ಳುವ ಸಲುವಾಗಿ ಪರಮಾತ್ಮನ ಮೇಲೆ ಏಕಾಗ್ರತೆಯನ್ನು ಕೇಂದ್ರೀಕರಿಸಿದನು. ನಂತರ ತನ್ನ ಪುತ್ರರಾದ ಸನಕ, ಸನಂದ, ಸನಾತನ ಮತ್ತು ಸನತ್ ಕುಮಾರರಂತೆ ನಾಲ್ಕು ಮಹಾನ್ ಋಷಿಮುನಿಗಳನ್ನು ಸೃಷ್ಟಿಸಿದನು. ಆ ಋಷಿಗಳಿಗೆ ತಮ್ಮ ಸಂತತಿಯನ್ನು ಹೆಚ್ಚಿಸಬೇಕು ಅಥವಾ ವಿಶ್ವದಲ್ಲೆಲ್ಲಾ ತಮ್ಮ ಸಂತತಿ ಇರಬೇಕು ಎನ್ನುವ ಯಾವುದೇ ಆಸೆಗಳಿರಲಿಲ್ಲ. ಅವರು ತಮ್ಮ ತಂದೆಗೆ ಅತ್ಯಂತ ಅವಿಧೇಯರಾಗಿ ಇದ್ದರು.ಇದರಿಂದಾಗಿ ಬ್ರಹ್ಮನ ನಾಲ್ಕೂ ಶಿರಗಳಲ್ಲಿ ಅತಿಯಾದ ಕೋಪ ಹುಟ್ಟಿತು. ಅವನ ಕೋಪವನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆ ಅತಿಯಾದ ಕೋಪದಿಂದಾಗಿ ಹುಬ್ಬುಗಳ ನಡುವೆ ಕೆಂಪು ಮತ್ತು ನೀಲಿ ಬಣ್ಣದ ಮಗು ಸೃಷ್ಟಿಯಾಯಿತು.

*ಕೋಪದಲ್ಲಿ ಹುಟ್ಟಿದ ಮಗು*
ಕೋಪದಿಂದ ಹುಟ್ಟಿದ ಆ ಮಗು ಆತಂಕದಿಂದ ಅಳುತ್ತಿತ್ತು. ಆಗ ಬ್ರಹ್ಮ ದೇವನು ಆ ಮಗುವನ್ನು ರುದ್ರ ಎಂದು ಕರೆದನು. ನಂತರ ಆ ಮಗುವಿಗೆ ಬ್ರಹ್ಮನು "ನೀನು ನನ್ನ ಪ್ರೀತಿಯ ಹುಡುಗ. ನಿನ್ನ ವಿಕಾಸಕ್ಕಾಗಿ ಕೆಲವು ವಿಶೇಷ ಸ್ಥಳಗಳನ್ನು ಆಯ್ಕೆ ಮಾಡಿದ್ದೇನೆ. ಅದುವೇ ಹೃದಯ, ಇಂದ್ರೀಯಗಳು, ಜೀವನದ ಗಾಳಿ, ಆಕಾಶ, ಬೆಂಕಿ, ನೀರು, ಭೂಮಿ, ಸೂರ್ಯ, ಚಂದ್ರ ಮತ್ತು ಸಂಯಮಗಳು. ನಿನಗೆ ಸೃಷ್ಟಿಯಲ್ಲಿ ಮಾನ್ಯು, ಮನು, ಮಹಿನಾಸ, ಮಹಾನ್, ಶಿವ, ಶಧ್ವಜಾ, ಉಗ್ರರೇತಾ, ಭಾವ, ಕಲಾ, ಮಹಾದೇವ, ದೃತವೃತ ಎಂದು ಕರೆಯುವರು ಎಂದನು. ನಂತರ ನಿನ್ನ ಮಡದಿಯಾಗಿ ಧಿ, ಧರ್ತಿ, ರಾಸಲಾ, ಉಮಾ, ನಿಯುತ್, ಸರ್ಪಿ, ಇಳಾ, ಅಂಬಿಕಾ, ಐರಾವತಿ, ಸ್ವಧಾ ಮತ್ತು ದೀಕ್ಷಾ ಎನ್ನುವವರು ಇರುತ್ತಾರೆ ಎಂದು ಹೇಳಿದನು.

ಈ ರೀತಿಯಾಗಿ ಹುಟ್ಟಿಬಂದ ಶಿವನು ತನ್ನ ಅಸ್ತಿತ್ವವನ್ನು ಪಡೆದುಕೊಂಡನು. ನಂತರ ತ್ರಿಲೋಕದಲ್ಲಿ ನಾಶ ಮಾಡುವ ಮತ್ತು ಸರ್ವನಾಶವನ್ನು ನಿರ್ಧರಿಸುವ ಉಸ್ತುವಾರಿಯನ್ನು ಪಡೆದುಕೊಂಡನು. ಸೃಷ್ಟಿಯಲ್ಲಿ ಯಾವುದು ಒಳಿತು? ಯಾವುದು ಕೆಟ್ಟದ್ದು? ಎನ್ನುವುದನ್ನು ಅರಿತು ಲಯದ ಕೆಲಸವನ್ನು ನಿರ್ವಹಿಸಿದನು. ಹಾಗಾಗಿಯೇ ಮಹಾನ್ ದೇವನಿಗೆ ಲಯ ಕರ್ತ ಎಂದು ಕರೆಯಲಾಯಿತು. 

ಶಿವನ ಜನನದ ಇನ್ನೊಂದು ಕಥೆ
ಶಿವನ ಲೀಲೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಇರುವುದನ್ನು ಕಾಣಬಹುದು. ಅಂತೆಯೇ ಶಿವನ ಹುಟ್ಟಿಗೆ ಸಂಬಂಧಿಸಿದಂತೆಯೇ ಇನ್ನೊಂದು ಪುರಾಣದ ಕಥೆಯಿದೆ. ಆ ಕಥೆಯ ಪ್ರಕಾರ ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು? ಎನ್ನುವ ಚರ್ಚೆ ನಡೆಯಿತು. ಆ ಸಮಯದಲ್ಲಿ ಒಂದು ಪ್ರಕಾಶಮಾನವಾದ ಕಂಬವೊಂದು ಪ್ರತ್ಯಕ್ಷವಾಯಿತು. ಅದು ಮರದ ರೂಪದಲ್ಲಿ ತೋರಿತು. ಅದರ ಬೇರುಗಳು ಪಾತಾಳದ ಒಳಗೆ ಹಾಗೂ ಮರದ ತುದಿಯು ಆಕಾಶಕ್ಕಿಂತಲೂ ಎತ್ತರಕ್ಕೆ ವ್ಯಾಪಿಸಿತು. ಈ ಮರದ ಆಳ ಮತ್ತು ಎತ್ತರವನ್ನು ತಿಳಿಯಬೇಕು ಎಂದು ಬ್ರಹ್ಮ ಮತ್ತು ವಿಷ್ಣು ನಿರ್ಧರಿಸಿದರು. 

ಅಂತೆಯೇ ಬ್ರಹ್ಮ ಹಂಸ ಪಕ್ಷಿಯ ಅವತಾರ ತಳೆದು, ಮರದ ತುದಿಯನ್ನು ತಿಳಿಯಲು ಮೇಲೆ ಹಾರಿ ಹೋದನು. ವಿಷ್ಣು ಮರದ ಬೇರಿನ ಆಳ ತಿಳಿಯಲು ಹಂದಿ ರೂಪ ತಳೆದು, ಭೂಮಿಯನ್ನು ಕೊರೆಯುತ್ತಾ ಪಾತಾಳಕ್ಕೆ ಹೋದನು. ಆದರೂ ಇಬ್ಬರಿಗೂ ಅದರ ಬುಡ ಮತ್ತು ತುದಿಯನ್ನು ನಿರ್ಧರಿಸಲು ಸಾಧ್ಯವಾಗದೆ ಭೂಮಿಗೆ ಮರುಳಿದರು. ಆಗ ಕಂಬ ಒಡೆದು ಶಿವನು ಹೊರ ಬಂದನು. ಅಪಾರ ಶಕ್ತಿಯನ್ನು ಹೊಂದಿರುವ ಶಿವನನ್ನು ಕಂಡು ಇವನು ನಮಗಿಂತಲೂ ಶಕ್ತಿ ಶಾಲಿ ಎಂದು ಭಾವಿಸಿದರು. ನಂತರ ತಮ್ಮ ಜೊತೆಗೆ ಶಿವನನ್ನು ಸೇರಿಸಿಕೊಂಡು, ಜಗತ್ತಿನ ಸೃಷ್ಟಿ, ಪಾಲನೆ ಹಾಗೂ ಲಯದ ಕರ್ತವ್ಯಗಳನ್ನು ಹಂಚಿಕೊಂಡರು ಎಂದು ಹೇಳಲಾಗುವುದು. ಈ ರೀತಿಯಲ್ಲಿ ಶಿವನ ಜನನವಾಯಿತು ಎಂದು ಅನೇಕ ಕಥೆ ಪುರಾಣಗಳು ವಿವರಿಸುತ್ತವೆ.

ಶಿವ ಮತ್ತು ಭಕ್ತ ನಂದಿ

 ಶಿವನ ಪರಮ ಭಕ್ತ ನಂದಿ ಎಂದು ಎಲ್ಲರಿಗೂ ತಿಳಿದಿದೆ. ನಂದಿಯು ಶಿವ ಭಕ್ತನಾಗುವುದರ ಹಿಂದೆ ಒಂದು ಕಥೆಯಿದೆ.

 'ಶಿಲಾಧರ' ಎಂಬ ಋಷಿ ಇದ್ದರು. ಈತನು ಶಿವನ ಪರಮ ಭಕ್ತನಾಗಿದ್ದರು. ಶೀಲಾಧರನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅವರು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಬಹಳ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದರು. ಅವರ ತಪಸ್ಸಿಗೆ ಪ್ರಸನ್ನಗೊಂಡ ಶಿವನು ದರ್ಶನ ಕೊಟ್ಟು, ನಿನ್ನ ತಪಸ್ಸಿನಿಂದ ನಾನು ಪ್ರಸನ್ನಗೊಂಡಿದ್ದೇನೆ. ನಿನಗೆ ಏನು ವರ ಬೇಕು ಕೇಳಿಕೋ? ಎಂದನು. 'ಶಿಲಾಧರನು' ತನಗೆ ಪುತ್ರನು ಬೇಕೆಂದು ಕೇಳಿದರು. ಆಯಿತು ನಿನಗೆ ಪುತ್ರಪ್ರಾಪ್ತಿಯಾಗುವುದು ಎಂದು ವರ ನೀಡಿ ಶಿವ ಅದೃಶನಾದನು. ಶೀಲಾಧರನು ಸಂತೋಷದಿಂದ ಮನೆಗೆ ಬಂದರು. ಕೆಲವು ದಿನಗಳ ನಂತರ ನಿತ್ಯ ಕ್ರಮದಂತೆ, ಹೊಲದ ಬದಿ ನಡೆದು ಹೋಗುತ್ತಿರುವಾಗ, ಬೇಲಿ ಬದಿಯಲ್ಲಿ ಅವರಿಗೆ ನವಜಾತ ಶಿಶುವೂಂದು ಕಂಡಿತು. ಆ ಮಗುವಿನ ಸುತ್ತಲೂ ಸೂರ್ಯನಂತೆ ತೇಜಸ್ಸನ್ನು ಹರಡಿತ್ತು. 

 ಋಷಿಯು ಆ ಮಗುವನ್ನು ಮನೆಗೆ ತೆಗೆದುಕೊಂಡು ಬಂದರು. ಮಗುವಿಗೆ 'ನಂದಿ' ಎಂದು ನಾಮಕರಣ ಮಾಡಿದರು. ಅವರು ಆ ಮಗುವನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡಿ ಬೆಳೆಸುತ್ತಿದ್ದರು. ನಂದಿಯು ನೋಡಲು ಬಹಳ ಮುದ್ದಾಗಿದ್ದು, ತುಂಬಾ ಬುದ್ಧಿವಂತ ನಾಗಿದ್ದನು. ಋಷಿಯು ತನ್ನ ಮಗ ನಂದಿಯ ಕುರಿತು ಒಂದು ಥರ ಗರ್ವಪಡುತ್ತಿದ್ದರು. ನಂದಿಯು ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಅವರ ಮನೆಗೆ 'ಮಿತ್ರ ಮತ್ತು ವರುಣ'ಎಂಬ ಇಬ್ಬರು ಮಹಾನ್ ತಪಸ್ವಿಗಳು ಬಂದರು. ಆ ಋಷಿಗಳು ಅವರ ಮನೆಯಲ್ಲಿ ಸ್ವಲ್ಪ ಕಾಲ ತಂಗುವುದಾಗಿ ತಿಳಿಸಿದರು. ಶಿಲಾಧರನು ಸಂತೋಷದಿಂದ ಒಪ್ಪಿದನು. ಋಷಿಗಳಿಗೆ ಬೇಕಾದುದನೆಲ್ಲವ ಒದಗಿಸಿ, ಅವರ ಅನುಷ್ಠಾನಗಳಿಗೆ ತೊಂದರೆಯಾಗದಂತೆ ಅವುಗಳನ್ನು ಒದಗಿಸಿ, ಅತಿಥಿ ಸತ್ಕಾರಮಾಡಿ ನೋಡಿಕೊಳ್ಳುವಂತೆ ನಂದಿಗೆ ಹೇಳಿದನು. ನಂದಿಯು ತಂದೆಯ ಮಾತಿನಂತೆ ಋಷಿಗಳ ಸೇವೆಯನ್ನು ತುಂಬಾ ಶ್ರದ್ಧಾಭಕ್ತಿಯಿಂದ ಮಾಡಿದನು. ನಂತರ ಋಷಿಗಳು ಹೊರಟರು. ಹೊರಡುವ ಮುನ್ನ, ಶಿಲಾಧರನು ತನಗೂ ತನ್ನ ಮಗನಿಗೂ ಆಶೀರ್ವಾದ ಮಾಡುವಂತೆ ಬೇಡಿದನು. ಆಗ ಇಬ್ಬರು ಋಷಿಗಳು. ಶೀಲಾಧರನಿಗೆ, ನೀನು ಸುಖ, ಸಂತೋಷವಾಗಿ ದೀರ್ಘಾಯುಷ್ಯವಂತನಾಗಿ ಬಾಳು ಎಂದು ಹರಸಿದರು. 

 ನಂದಿಯು ತಪಸ್ವಿಗಳ ಆಶೀರ್ವಾದ ಪಡೆಯಲು ಅವರಿಗೆ ನಮಸ್ಕಾರ ಮಾಡಿಲು ಬಗ್ಗಿದಾಗ, ಋಷಿಗಳು ಸ್ವಲ್ಪಕಾಲ ಮೌನವಾಗಿದ್ದು ನಂತರ, ಗಂಭೀರವದನರಾಗಿ, "ನಂದಿ, ನೀನು ನಿನ್ನ ತಂದೆಯನ್ನು ಹಾಗೂ ಗುರುವನ್ನು, ಚೆನ್ನಾಗಿ ಪ್ರೀತಿಯಿಂದ ನೋಡಿಕೋ ಮತ್ತು ಅವರ ಬಗ್ಗೆ ಹೆಚ್ಚಿನ ಶ್ರದ್ಧೆವಹಿಸು" ತನ್ನ ಮಗನಿಗೆ ಈ ತರಹ ಆಶೀರ್ವದಿಸಿದಾಗ ಶೀಲಾಧರನು ವ್ಯಾಕುಲಗೊಂಡು, ಮಗನಿಗೆ ಗೊತ್ತಾಗದಂತೆ ಋಷಿಗಳ ಜೊತೆ ಮನೆಯಿಂದ ಸ್ವಲ್ಪ ಹೊರಗೆ ಬಂದು, "ಮಹರ್ಷಿಗಳೇ ಏನಾಯಿತು? ನನ್ನ ಮಗ ನಂದಿಗೆ ಆಶೀರ್ವಾದ ಮಾಡುವಾಗ ನೀವು ಬಹಳ ಗಂಭೀರವಾಗಿ, ಉತ್ಸಾಹ ಕಳೆದುಕೊಂಡವರಂತೆ ಇದ್ದೀರಿ,ನನ್ನ ಮಗನು ನಿಮ್ಮ ಸೇವೆ ಮಾಡುವಲ್ಲಿ. 

 ಅಚಾತುರ್ಯದಿಂದ ನಿಮಗೇನಾದರೂ ಲೋಪ ಮಾಡಿದನೇ? ಹೇಳಿ ಎಂದು ಹೆದರಿ ಕೇಳಿದನು. ಆಗ ಋಷಿಗಳು, ಹಾಗೆಲ್ಲ ನಂದಿ ತಪ್ಪು ಮಾಡುವನಲ್ಲ. ಅವರು ಶಿವನ ವರಪ್ರಸಾದದಿಂದ ದೊರೆತವನು. ಆದರೆ ನಾವು ನಿನ್ನ ಮಗನಿಗೆ ಧೀರ್ಘಾಯುಷ್ಯವಂತನಾಗು ಎಂದು ಆಶೀರ್ವಾದ ಮಾಡಲಾಗುವುದಿಲ್ಲ. ಏನು ಮಾಡುವುದು. ನಮಗೆ ಈ ವಿಷಯವನ್ನು ಹೇಳಲು ಮನಸ್ಸಿಗೆ ನೋವಾಗುತ್ತಿದೆ. ಬಾಲಕನ ಆಯಸ್ಸು ತುಂಬಾ ಕಡಿಮೆ ಇದೆ ಎಂದು ಹೇಳಿ ಅವರು ಹೊರಟೇಬಿಟ್ಟರು. 

 ಶಿಲಾಧರನು ಆತಂಕ ಹಾಗೂ ನಿರುತ್ಸಾಹಗೊಂಡವನಾಗಿ ಮನೆಯೊಳಗೆ ಬಂದನು. ತಂದೆಯ ಮ್ಲಾನ ಮುಖವನ್ನು ನೋಡಿ ನಂದಿಯು ಏನಾಯಿತು? ಎಂದು ಕೇಳಿದನು. ಇದಕ್ಕೆ ಉತ್ತರವನ್ನು ಕೊಡಲು ತಂದೆಗೆ ಏನೂ ಇಷ್ಟವಿರಲಿಲ್ಲ. ಆದರೆ ನಂದಿಯು ಹಟಮಾಡಿ ಕೇಳಿದಾಗ ಹೇಳದೆ ವಿಧಿ ಇರಲಿಲ್ಲ ಹೀಗಾಗಿ ಶಿಲಾಧರನು ಋಷಿಗಳು ಹೇಳಿದ ವಿಷಯವನ್ನು ಹೇಳಿದನು. ಇದನ್ನು ಕೇಳಿದ ಬಾಲಕ ನಂದಿಯು ಜೋರಾಗಿ ನಗುತ್ತಾ ಹೀಗೆ ಹೇಳಿದನು. "ಅಯ್ಯೋ ಅಪ್ಪ ಆ ಪರಮೇಶ್ವರನೇ ನಿನಗೆ ಪ್ರತ್ಯಕ್ಷವಾಗಿ ದರ್ಶನ ಕೊಟ್ಟಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇನೆ. ನಮ್ಮ ಜೊತೆ ಶಂಕರನೇ ಇರುವಾಗ ನೀನೇಕೆ ಹೆದರುತ್ತಿಯಾ? ನಾನು ಭಕ್ತಿಯಿಂದ ಶಿವನನ್ನು ಆರಾಧಿಸುತ್ತೇನೆ. ನನ್ನ ಪ್ರಾರ್ಥನೆಗೆ ಅವರು ಒಲಿಯುತ್ತಾರೆ. ಶಿವನು ಬಹಳ ಶಕ್ತಿಶಾಲಿ. ಅವರಿಗೆ ಅಸಾಧ್ಯವಾದುದು ಯಾವುದು ಇಲ್ಲ. 

 ಶಿವನು ನನ್ನ ವಿಧಿಯನ್ನು ಖಂಡಿತ ಬದಲಾಯಿಸುತ್ತಾರೆ. ನಾನು ಶಂಕರನನ್ನು ಪ್ರಾರ್ತಿಸುತ್ತೇನೆ. ನೀವು ನನ್ನ ಸಂಕಲ್ಪ ಸಫಲವಾಗಲಿ ಎಂದು ನನಗೆ ಆಶೀರ್ವಾದವನ್ನು ಮಾಡಿರಿ" ಎಂದನು. ಶೀಲಾಧರನು ಸಮಾಧಾನಗೊಂಡು ಮಗನಿಗೆ ಆಶೀರ್ವಾದ ಮಾಡಿದನು. ನಂದಿಯು ಪರ್ವತಕ್ಕೆ ಹೋಗಿ ಸ್ವಲಕಾಲ ನೀರಿನೊಳಗೆ ಇದ್ದು, ನಂತರ ನದಿಯ ದಡದಲ್ಲಿ ಕುಳಿತು ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು. ನಂದಿಯ ಕಠೋರ ತಪಸ್ಸಿಗೆ ಭಗವಂತನು ಮೆಚ್ಚಿದನು. ಮತ್ತು ಅವರ ಮುಂದೆ ಪ್ರತ್ಯಕ್ಷನಾದನು. ನಂದಿಯು ತನ್ನ ಮುಂದೆ ನಿಂತ ಶಿವನನ್ನು ಮತ್ತು ಶಿವನ ಸೌಂದರ್ಯವನ್ನು ನೋಡಿ ಮೈಮರೆತನು. ಶಿವನನ್ನು ನೋಡುತ್ತಾ ಮೈಮರೆತ ನಂದಿಗೆ ಅವರ ಬಾಯಿಂದ 'ವರ' ಕೇಳುವುದು ಮರೆತುಹೋಗಿ ಬಾಯಿಂದ ಯಾವ ಶಬ್ದವು ಹೊರಡಲಿಲ್ಲ. ನಂದಿಯು ಮನಸ್ಸಿನಲ್ಲಿ, ಆಹಾ ನಾನು ಶಿವನ ವಾಹನವಾಗುವುದಾದರೆ ಎಷ್ಟು ಚೆನ್ನಾಗಿರುತ್ತದೆ. 

 ಶಿವನ ವಾಹನವಾದರೆ ಯಾವಾಗಲೂ ಅವರ ಜೊತೆಯಲ್ಲೇ ಇರಬಹುದು, ಮತ್ತು ಶಿವನನ್ನು ಸದಾಕಾಲವೂ ನೋಡುತ್ತಿರಬಹುದು ಅಲ್ಲವೇ? ಎಂದು ಮನಸ್ಸಿನಲ್ಲಿ ಅಂದುಕೊಂಡನು. ಹಾಗೂ ಇದನ್ನೇ ಕುರಿತು ಚಿಂತಿಸಿದನು. ಶಿವನಿಗೆ ನಂದಿಯ ಮನಸ್ಸಿನಲ್ಲಿ ಅಂದುಕೊಂಡ ಮಾತುಗಳು ಕೇಳಿದವು. ಶಿವನು ನಗುತ್ತಾ, ಆಯ್ತು ನಂದಿ ನಿನ್ನ ಮನದಿಚ್ಛೆ ಯಂತೆ ಆಗಲಿ, ಎಂದು ವರ ನೀಡಿದನು. ಮತ್ತು ಇಂದಿನಿಂದ ನಿನ್ನ ಮುಖ ವೃಷಭನಂತೆ ಆಗಲಿ ಎಂದು ನಂದಿಗೆ ಹರಸಿ, ನೀನು ಎಂದಿಗೂ ನನಗೆ ಪ್ರೀತಿಯ ವಾಹನವಾಗಿ ಇರುವೆ ಎಂದು ಹೇಳಿದನು. ಅಂದಿನಿಂದ ನಂದಿಯು ಶಿವನ ಪ್ರಮುಖ ವಾಹನವಾದನು ಹಾಗೂ ಶಿವನ ಎಲ್ಲಾ ಗಣಗಳಿಗೂ ನಾಯಕನಾದನು. ಈಶ್ವರನ ದೇವಸ್ಥಾನಕ್ಕೆ ಹೋದಾಗ ಶಿವನ ದರ್ಶನದೊಂದಿಗೆ, ನಂದಿಯ ಬಲಕಿವಿಯಲ್ಲಿ ಯಾರಿಗೆ ಕೇಳದಂತೆ ಪಿಸುಮಾತಿನಲ್ಲಿ ಮನದ ಇಷ್ಟಾರ್ಥವನ್ನು ಬೇಡಿಕೊಂಡರೆ, ನಂದಿಯ ಮೂಲಕ ಶಿವನಿಗೆ ತಲುಪಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ.