December 21, 2025

ಬದುಕಿನಲ್ಲಿ ಬಾಗುವುದನ್ನು ಕಲಿ

    ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್  ಕೊಡ ಹಾಗಲ್ಲ ನೀರು ತುಂಬಿಸಲು ಪ್ರಯಾಸ ಪಡಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ, ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವದಿಲ್ಲವೊ ಅದು ಅಪೂರ್ಣವೇ. ಇದೇ ಬದುಕಿನ ಸತ್ಯವೂ ಕೂಡ. 
    ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ  ನೈವೇದ್ಯ ಮಾಡುವದಿಲ್ಲ. ಕಾರಣ..ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ.ಇದರರ್ಥ ಇಷ್ಟೇ .. ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ, ಆ ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವದನ್ನು ನಾವು ಕಲಿಯಬೇಕು. ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವದು. ಅಹಂಕಾರ ಅಧಿಕಾರ ಶಾಶ್ವತವಲ್ಲ... ನಾನು ಎಂಬ ಗರ್ವ ತನ್ನೊಡಲನ್ನೇ  ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ  ಎಲ್ಲವನ್ನೂ ನೋಡುತ್ತಿರುವ ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ... ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ. ಎಂಬ ಸತ್ಯದ ಅರಿವಾಗಬೇಕು.
    ಜಾಸ್ತಿ ಓದಿದಿನಿ ಎನ್ನುವ ಗರ್ವ ಬೇಡ.  ಓದಲು ಸಾಗರದಷ್ಟಿದೆ ಇನ್ನೂ, ನಾನೆಲ್ಲವನ್ನೂ ಬರೆಯುತ್ತೇನೆ.  ಎನ್ನುವ ಅಹಂ ಬೇಡ. ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ. ಎಲ್ಲ ಬಲ್ಲವರಿಲ್ಲ,ಬಲ್ಲವರು ಬಹಳಿಲ್ಲ,  ಮಗುವಿನಿಂದ ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವದು ತುಂಬ ಇದೆ ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ. ನೀ ಸಾಗುವ ಪಥ ಹೊಸ ಹೊಸ ಪಾಠಗಳನ್ನು ಕಲಿಸುತ್ತ ಅನುಭವಗಳನ್ನು ನೀಡುತ್ತಾ ಸಾಗುತ್ತದೆ. ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು. ಏಕೆಂದರೆ, ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.  ಆದ್ದರಿಂದ ಹೀಗಾಗಿ ಯೋಚಿಸಿ ನಡೆಯಬೇಕು.  ಆಲೋಚಿಸಿ ನುಡಿಯಬೇಕು.
    ಗುರು ಕಲಿಸಿದ ವಿದ್ಯೆ.. ತಾಯಿ ನೀಡಿದ ಮಮತೆ.. ತಂದೆ ಹೇಳಿದ ಸಲಹೆ.. ಕಿರಿಯರು ನೀಡಿದ ಪ್ರೀತಿ..  ರೈತ ಕೊಟ್ಟ ಅನ್ನ..ಯೋಧ ನೀಡಿದ ರಕ್ಷಣೆ ..ನಿನ್ನ ಹೊತ್ತ ಭೂಮಿತಾಯಿ ..ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು, ದೇಶ ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂದವ್ಯಗಳನ್ನು  ಎಂದಿಗೂ ಮರೆಯದಿರು. ಬದುಕಿನಲ್ಲಿ ಬಾಗುವದನ್ನು ಕಲಿ ಬದುಕುವದನ್ನು ಕಲಿ. 

ವಾಟ್ಸಪನಲ್ಲಿ ಬಂದಿದ್ದು. ಇದನ್ನು ಬರೆದವರಿಗೆ ಧನ್ಯವಾದಗಳು

December 20, 2025

ಯಾವ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಸರಳ ಪರಿಹಾರ

೦೧. ಅಶ್ವಿನಿ
ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಕ್ಕಿಂತ ಬುದ್ದಿಮಟ್ಟ ಜಾಸ್ತಿ , ಇವರು ಇನ್ನೊಬ್ಬರ ಸ್ನೇಹ ಬೇಗ ಸಂಪಾದಿಸುತ್ತಾರೆ... ಈ ನಕ್ಷತ್ರದಅಧಿಪತಿ ಕೇತು .... ಕುಲದೇವರ ಆರಾಧನೆ ನಿತ್ಯ ಮಾಡಿ

೦೨. ಭರಣಿ
ಭರಣಿ ನಕ್ಷತ್ರದವರಿಗೆ ನಾವು ಸಾಮಾನ್ಯ ವಾಗಿ ಹೇಳೊದು ಭರಣಿ ನಕ್ಷತ್ರ ಧರಣಿ ಆಳುತ್ತಾರೆ ಅಂತ ಇವರು ಏನೇ ಕೆಲಸ ಮಾಡಲಿ ಹತ್ತು ಸಲ ಯೊಚನೆ ಮಾಡುತ್ತಾರೆ... ಈ ನಕ್ಷತ್ರದ ಅಧಿಪತಿ ಶುಕ್ರ......‌ ದುರ್ಗಾದೇವಿ ಆರಾಧನೆ ಮಾಡಬೇಕು

೦೩. ಕೃತ್ತಿಕಾ
ಇವರು ಒಳ್ಳೆಯ ಕೆಲಸಗಾರರು ,ಯಾವದೇ ಕೆಲಸಮಾಡಲಿ ಆ ಕೆಲಸಕ್ಕೆ ನ್ಯಾಯ ಒದಗಿಸುವರು..‌ಆದರೆ ಅಹಂ ಜಾಸ್ತಿ.. ಈ ನಕ್ಷತ್ರದ ಅಧಿಪತಿ ರವಿ ....‌ ಆದಿತ್ಯ ಹೃದಯ ಪಠಣೆ ಒಳ್ಳೆಯದು

೦೪. ರೋಹಿಣಿ
ಈ ನಕ್ಷತ್ರ ದವರು ಉತ್ತಮ ಸ್ವಭಾವ , ಅತಿಥಿ ಸತ್ಕಾರ ಮನೋಭಾವದವರು , ಹಲವಾರು ಅಭಿರುಚಿ ಉಳ್ಳವರು... ಈ ನಕ್ಷತ್ರದ ಅಧಿಪತಿ ಚಂದ್ರ ...‌‌..ಶಿವನಿಗೆ ರುದ್ರಾಭಿಷೇಕ ಮಾಡುವದು ಒಳ್ಳೆಯದು

೦೫. ಮೃಗಶಿರಾ
ಇವರಿಗೆ ಒಳ್ಳೆಯ ಬುದ್ಧಿವಂತಿಕೆ ಆದರೆ ಉಪಯೋಗಿಸುವದು ಕಡಿಮೆ ಆಲಸಿಗಳು . ಭೋಗ ಪ್ರೀಯರು... ಈ ನಕ್ಷತ್ರದ ಅಧಿಪತಿ ಕುಜ ... ಗಣಪತಿ ಆರಾಧನೆ , ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದು

೦೬. ಆರ್ದ್ರಾ
ಇವರು ಗೊಂದಲ ಮನಸ್ಥಿತಿ ಇರುವವರು.. ಬೇಗನೆ ನಿರ್ದಾರ ತೆಗೆದುಕೊಳ್ಳುವದಿಲ್ಲ . ಆದರೆ ಒಂದು ಸಲ ತೆಗೆದುಕೊಂಡ ನಿರ್ದಾರಕ್ಕೆ ಬದ್ಧರಾಗಿರುತ್ತಾರೆ...‌ ಈ ನಕ್ಷತ್ರ ದ ಅಧಿಪತಿ ರಾಹು ..‌..ಸುಬ್ರಹ್ಮಣ್ಯ ಸ್ತೋತ್ರ ನಿತ್ಯಹೇಳಿ.

೦೭. ಪುನರ್ವಸು
ಒಳ್ಳೆಯ ಸ್ವಭಾವ . ದೈವ ಭಕ್ತಿ ಎಲ್ಲರೊಂದಿಗೆ ಹಂಚಿ ತಿನ್ನುವ ಪ್ರವೃತ್ತಿ ಯವರು ..‌ ಈ ನಕ್ಷತ್ರದ ಅಧಿಪತಿ ಗುರು ದತ್ತಾತ್ರೇಯ , ಗುರುಚರಿತ್ರೆ ಪಾರಾಯಣ

೦೮. ಪುಷ್ಯ
ಇವರು ರಾಜಕೀಯ ಇಷ್ಟ ಪಡುವವರು , ಜನ ಸೇವೆಯಲ್ಲಿ ಇರಲು ಇಷ್ಟಪಡುವರು . ಹಿರಿಯರಿಗೆ ಅಧಿಕ ಗೌರವ ಕೊಡುವವರು ...‌‌ ಈ ನಕ್ಷತ್ರದ ಅಧಿಪತಿ ಶನಿ ... ಹೆಚ್ಚಾಗಿ ನೀವು ಕೈಕಾಲು ಇಲ್ಲದವರಿಗೆ.ತಿನಿಸನ್ನು ಕೊಡಿಸಿ

೦೯. ಆಶ್ಲೇಷಾ
ಈ ನಕ್ಷತ್ರದವರು ಆಡಂಬರ ಪ್ರೀಯರು , ಮತ್ತು ಅಲಂಕಾರಕ್ಕೆ ಮನ ಸೋಲುವವರು . ಸೌಂದರ್ಯ ಪ್ರೀಯರು... ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

೧೦. ಮಖಾ
ಈ ನಕ್ಷತ್ರದವರು ಸ್ವಲ್ಪ ಹೆಚ್ಚೇ ಸ್ವಾಭಿಮಾನಿಗಳು , ಯಾರ ಹತ್ತಿರಾನೂ ಸಹಾಯ ಕೇಳುವದು ಕಡಿಮೆ , ಈ ನಕ್ಷತ್ರದ ಅಧಿಪತಿ ಕೇತು ಕುಲ ದೇವರ ಆರಾಧನೆ

೧೧. ಪುಬ್ಬಾ
ಈ ನಕ್ಷತ್ರದವರು ಸ್ವಭಾವತಃ ಹಾಸ್ಯ ಪ್ರೀಯರು ಸ್ವಲ್ಪ ಸಿಟ್ಟು ಕಡಿಮೆ ತಾಳ್ಮೆ ಜಾಸ್ತಿ .... ಈ ನಕ್ಷತ್ರದ ಅಧಿಪತಿ ಶುಕ್ರ ಮಹಾಲಕ್ಷಿ ಅಷ್ಟೋತ್ತರ ಪಾರಾಯಣ

೧೨. ಉತ್ತರಾ
ಈ ನಕ್ಷತ್ರದವರ ವ್ಯವಹಾರಿಕವಾಗಿ ತುಂಬಾ ಚತುರರು ..ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವವರು...‌ ಈ ನಕ್ಷತ್ರದ ಅಧಿಪತಿ ರವಿ ತಾಂಬೂಲ ದಾನ ಮಾಡುವದು ಒಳ್ಳೆಯದು

೧೩. ಹಸ್ತ
ಈ ನಕ್ಷತ್ರದವರು ವಿಲಾಸಿ ಪ್ರೀಯರು , ಸ್ವಲ್ಪ ಸಿಟ್ಟು ಜಾಸ್ತಿ . ಆದರೆ ಹೃದಯವಂತರು ..‌‌ ಈ ನಕ್ಷತ್ರದ ಅಧಿಪತಿ ಚಂದ್ರ...... ಶಿವನಿಗೆ ಬಿಲ್ವ ಪತ್ರೆ ಅರ್ಚನೆ

೧೪. ಚಿತ್ತ
ಈ ನಕ್ಷತ್ರದಲ್ಲಿ ಜನಿಸಿರುವವರು ಸಮಚಿತ್ತ ಉಳ್ಳವರು , ಕವಿಗಳು , ಸಾಹಿತ್ಯ ಅದ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು..... ಈ ನಕ್ಷತ್ರದ ಅಧಿಪತಿ ಕುಜ ಅನ್ನದಾನ ಮಾಡುವಲ್ಲಿ ಹೋಗಿ ಕೈಲಾದ ಧನ ಸಹಾಯ ಹಾಗೂ ಸಹಾಯ ಮಾಡಿ

೧೫. ಸ್ವಾತಿ
ಸ್ವಾತಿ ನಕ್ಷತ್ರದವರು ಮೃದು ಸ್ವಭಾವದವರು , ಬೇಗನೆ ಇನ್ನೊಬ್ಬರನ್ನು ನಂಬುವವರು . ಪರರಿಗೆ ಸಹಾಯ ಮಾಡುವವರು .. ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಆರಾಧನೆ

೧೬. ವಿಶಾಖ
ಈ ನಕ್ಷತ್ರದವರು ಬುದ್ದಿವಂತರು ಜೊತೆಗೆ ಹಠದ ಸ್ವಭಾವ , ಯಾವದೇ ಕೆಲಸಕ್ಕೂ ತಮ್ಮ ಶ್ರಮದ ಬಗ್ಗೆ ಯೋಚಿಸುವದಿಲ್ಲ...‌‌ ಈ ನಕ್ಷತ್ರದ ಅಧಿಪತಿ ಗುರು .. ರಾಯರ ಆರಾಧನೆ ಮಾಡಿ

೧೭. ಅನೂರಾಧ
ಈ ನಕ್ಷತ್ರದವರು ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾಗುವವರು , ಒಂದು ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವರು. ಈ ನಕ್ಷತ್ರದ ಅಧಿಪತಿ ಶನಿ 
ಬೇಳಿಗ್ಗೆ ತೈಲಾಭ್ಯಾಂಗ ಸ್ನಾನ ಮಾಡಿ

೧೮. ಜೇಷ್ಠ
ಜಗಳತನದ ಜಾಯಮಾನವಲ್ಲದವರು , ನಿರ್ಮಲ ಸ್ವಭಾವ...ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ..

೧೯. ಮೂಲಾ
ಈ ನಕ್ಷತ್ರದವರು ಕಲಾ ಪ್ರೀಯರು , ಎಲ್ಲರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವವರು ಆದರೆ ಇವರಿಗೆ ಆರೋಗ್ಯ ದ ತೊಂದರೆ ಜಾಸ್ತಿ ..‌ಈ ನಕ್ಷತ್ರದ ಅಧಿಪತಿ ಕೇತು ಸಾದ್ಯವಾದಾಗ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿ

೨೦. ಪೂರ್ವಾಷಾಢ
ವಿನಯವಂತರು ಮಿತಬಾಷಿಗಳು ಬೇರೆಯವರ ದುಃಖಕ್ಕೆ ಬೇಗ ಸ್ಪಂದಿಸುವವರು ...‌ ಈ ನಕ್ಷತ್ರದ ಅಧಿಪತಿ ಶುಕ್ರ ಲಕ್ಷೀ ಅಷ್ಟೋತ್ತರ ಪಾರಾಯಣ ಮಾಡಿ

೨೧. ಉತ್ತರಾಷಾಢ
ಸಮಯ ಚಿತ್ತದಿಂದ ನಡೆದುಕೊಳ್ಳುವವರು , ಅತೀಯಾದ ವಿನಯ ಸೌಮ್ಯ ಮಾತು .... ಈ ನಕ್ಷತ್ರದ ಅಧಿಪತಿ ರವಿ ಆದಿತ್ಯ ಹೃದಯ ಪಾರಾಯಣ ಮಾಡಿ

೨೨. ಶ್ರವಣ
ಈ ನಕ್ಷತ್ರದವರು ತಮ್ಮ ತಪ್ಪನ್ನ ಬೇಗ ಒಪ್ಪಿಕೊಳ್ಳುವ ಮನೋಭಾವ , ಇನ್ನೋಬ್ಬರಿಗೆ ನೋವಿಗೆ ಬೇಗ ಸ್ಪಂದಿಸುವ ಮತ್ತು ಪರರಿಗೆ ಉಪಕಾರಿ...‌ ಈ ನಕ್ಷತ್ರದ ಅಧಿಪತಿ ಚಂದ್ರ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.‌

೨೩. ಧನಿಷ್ಠ
ಈ ನಕ್ಷತ್ರದವರು ಸ್ವಲ್ಪ ಕಠೋರ ಮಾತು , ಮಾತಿನಲ್ಲೂ ನಿಪುಣರು..‌ ಈ ನಕ್ಷತ್ರದ ಅಧಿಪತಿ ಕುಜ ...‌ ಮಂಗಳ ಚಂಡಿಕೆ ಸ್ತೋತ್ರ ಹೇಳಿ

೨೪. ಶತಭಿಷಾ
ಈ ನಕ್ಷತ್ರದವರು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಚತುರರು....ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಸ್ತೋತ್ರ ಪಾರಾಯಣ ಮಾಡಿ

೨೫. ಪೂರ್ವಾಭಾದ್ರ
ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ ಯಾವದೇ ವಿಷಯ ಸರಿಯಾಗಿ ತಿಳಿದುಕಳ್ಳದೇ ಆಳವಾಗಿ ಅದ್ಯಯನ ಮಾಡದೇ ಒಪ್ಪಿಕೊಳ್ಳುವದಿಲ್ಲ ..ಈ ನಕ್ಷತ್ರದ ಅಧಿಪತಿ ಗುರು.... ಗುರು ಚರಿತ್ರೆ ಪಾರಾಯಣ ಮಾಡಿ

೨೬. ಉತ್ತರಾಭಾದ್ರ 
ಗತ್ತಿನ ಮಾತಿನವರು ಮಾತಿನಲ್ಲಿ ಚಾತುರ್ಯ ಉಳ್ಳವರು ಮಿತ ಬಾಷಿಗರು ..‌ಈ ನಕ್ಷತ್ರದ ಅಧಿಪತಿ ಶನಿ ಶಿವನಿಗೆ ಬುತ್ತಿ ಪೂಜೆ ಮಾಡಿಸಿ ಸಾದ್ಯವಾದಾಗ

೨೭. ರೇವತಿ
ಈ ನಕ್ಷತ್ರದವರು ಸ್ವಭಾವತಃ ಒಳ್ಳೆಯವರು , ಆದ್ಯಾತ್ಮದ ಒಲವು ಹೊಂದಿರುವವರು , ದೇವರನ್ನು ಅಪಾರ ನಂಬುವವರು ಆದರೆ ಸ್ವಲ್ಪ ಅಹಂ ಹೊಂದಿರುವವರು..‌ ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ ಮಾಡಿ , ..

ಉಡುದಾರ

ಹಿಂದಿನ ಕಾಲದಲ್ಲಿ ಮಕ್ಕಳು ಜನಿಸಿದ ಮೂರು ದಿನಗಳ ನಂತರ ಸೊಂಟಕ್ಕೆ, ಕೈಗೆ, ಕಾಲಿಗೆ ಕಪ್ಪು ದಾರ ಕಟ್ಟುತ್ತಿದ್ದರು.

ಹೆಣ್ಣು ಮಗುವಾಗಲೀ, ಗಂಡು ಮಗುವಾಗಲಿ ಮಕ್ಕಳು ಬೆಳೆದಂತೆಲ್ಲಾ ಕೈಗೆ ಬೆಳ್ಳಿ ಕಪ್ಪ, ಕಾಲಿಗೆ ಬೆಳ್ಳಿ ಚೈನು, ಸೊಂಟಕ್ಕೆ ಉಡುದಾರ ಕಟ್ಟುತ್ತಿದ್ದರು.

 ದೊಡ್ಡವರಾದ ಮೇಲೆ ಗಂಡು ಮಕ್ಕಳಿಗೆ ಎಡಗೈಗೆ ಗಡಿಯಾರ ಮತ್ತು ಬಲಗೈಗೆ ಬೆಳ್ಳಿ ಕಪ್ಪ ಮತ್ತು ಸೊಂಟಕ್ಕೆ ಕರಿದಾರ ಬಂತು.

 ಹೆಣ್ಣು ಮಕ್ಕಳಿಗೆ ಕೈಗೆ ಗಾಜಿನ ಬಳೆ, ಕಾಲಿಗೆ ಬೆಳ್ಳಿ ಚೈನು ಮತ್ತು ಸೊಂಟಕ್ಕೆ ಬೆಳ್ಳಿ ಗೆಜ್ಜೆ ಡಾಬು ಬಂತು. ಡಾಬು ಹೆಂಗಸರ ಸೊಂಟಕ್ಕೆ ಆಧಾರ ಒದಗಿಸುತ್ತದೆ ಮತ್ತು ರಕ್ತ ಸಂಚಾರವನ್ನು ನಿಯಂತ್ರಣಕ್ಕೆ ತರುತ್ತದೆ. ಸೊಂಟಕ್ಕೆ ಡಾಬು ಹಾಕಿರುವ ಹೆಂಗಸರಿಗೆ ಯಾವುದೇ ಕಾರಣಕ್ಕೂ ಸೊಂಟ ನೋವು ಬರುವುದಿಲ್ಲ.

ಹಿಂದಿನವರು ಏನೇ ಸಂಪ್ರದಾಯ ಅನುಕರಣೆ ಮಾಡಿದರೂ ಅದು ವೈಜ್ಞಾನಿಕವಾಗಿ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುತ್ತಿತ್ತು.

 ಗಂಡು ಮಕ್ಕಳಿಗೆ ದೊಡ್ಡವರಾದ ಮೇಲೂ ಉಡುದಾರ ಕಟ್ಟುಲು ಕಾರಣವೇನು ?
ಹೆಣ್ಣಾಗಲಿ, ಗಂಡಾಗಲಿ ಕುಳಿತುಕೊಳ್ಳಲು, ನಿಂತುಕೊಳ್ಳಲು , ನಡೆದಾಡಲು, ಕಷ್ಟಕರವಾದ ಕೆಲಸ ಮಾಡಲು, ಭಾರವಾದ ವಸ್ತುಗಳನ್ನು ಎತ್ತಲು, ಅದರಲ್ಲೂ 
 ಮುಖ್ಯವಾಗಿ ವಂಶಾಭಿವೃದ್ಧಿ ಮಾಡಲು ಸೊಂಟವೇ ಪ್ರಮುಖವಾದ ಅಂಗ. ಒಂದು ವೇಳೆ ಸೊಂಟ ಬಿದ್ದು ಹೋದರೆ ಈ ಮೇಲಿನ ಯಾವುದೇ ಕಾರ್ಯವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ.

ಒಂದು ಗಿಡ ನೇರವಾಗಿ ಬೆಳೆಯಲು ಒಂದು ದಾರವನ್ನೋ ಅಥವಾ ಹಗ್ಗವನ್ನೋ ಕಟ್ಟಿ ಬೆಳೆಸುತ್ತಾರೆ.

ಅದೇ ರೀತಿ ಮನುಷ್ಯನೂ ಕೂಡ ಗಟ್ಟಿಯಾಗಿ ದಷ್ಟ ಪುಷ್ಟವಾಗಿ ಬೆಳೆಯಲು ಉಡುದಾರ ಸಹಕಾರಿಯಾಗುತ್ತದೆ.
ಮನುಷ್ಯನ ದೇಹದ ರಕ್ತ ಚಲನೆಯನ್ನು ನಿಯಂತ್ರಿಸುತ್ತದೆ. 

ಇದೇ ರೀತಿ ಮಹಿಳೆಯರಿಗೂ ಕೂಡ ಬೆಳ್ಳಿಯ ಗೆಜ್ಜೆ ಡಾಬು ಅವರ ಸೊಂಟಕ್ಕೆ ಗಟ್ಟಿತನವನ್ನು ನೀಡುತ್ತದೆ.

 ಉಡುದಾರವನ್ನು ವರ್ಷಕೊಮ್ಮೆ ಬದಲಾಯಿಸಬೇಕು  ಒಮ್ಮೆ ಉಡುದಾರವನ್ನು ಕಟ್ಟಿಕೊಂಡರೆ ಅದಾಗಿ ಅದು ಕಿತ್ತು ಹೋಗುವವರೆಗೂ ನಾವು ಅದನ್ನು ಬದಲಾಯಿಸುವುದಿಲ್ಲ.
ಆದರೆ ಅದನ್ನು ವರ್ಷಕೊಮ್ಮೆ ಬದಲಾಯಿಸಬೇಕು ಎಂದು ತಿಳಿದವರು ಹೇಳುತ್ತಾರೆ.

 ಯಾವಾಗ ಬದಲಿಸಬೇಕು ?
ಉಡುದಾರವನ್ನು ಪ್ರತಿ ವರ್ಷ ಜನವರಿ ತಿಂಗಳ 14 ನೇ ತಾರೀಕಿನಂದು ಉತ್ತರಾಯಣದಲ್ಲಿ ಅಥವಾ ಜುಲೈ ತಿಂಗಳ 16 ನೇ ತಾರೀಕಿನಂದು ದಕ್ಷಿಣಾಯನದಲ್ಲಿ ಬದಲಾಯಿಸಬೇಕೆಂದು ಹೇಳಲಾಗಿದೆ.

 ಬದಲಿಸಿದ ಹಳೆಯ ಉಡುದಾರವನ್ನು ಏನು ಮಾಡಬೇಕು ?
ಹಳೆಯ ಉಡುದಾರವನ್ನು ಹಾಗೇ ಸುಮ್ಮನೆ ಬಿಸಾಕಬಾರದು. 
ಅದನ್ನು ತೆಗೆದುಕೊಂಡು ಒಮ್ಮೆ ಮೂಸಿ ನೋಡಿ, ಎರಡೂ ಕೈಗಳಿಂದ ನಮ್ಮ ಕಣ್ಣುಗಳಿಗೆ ಒತ್ತಿಕೊಂಡು ನಮಸ್ಕಾರ ಮಾಡಿ, ಇಷ್ಟು ದಿನ ನನ್ನ ಸೊಂಟಕ್ಕೆ ಚೈತನ್ಯ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಅದನ್ನು ಒಂದು ಹಸಿರು ಗಿಡಕ್ಕೆ ಕಟ್ಟಬೇಕು.

 ಕಪ್ಪು ಉಡುದಾರವನ್ನೇ ಏಕೆ ಕಟ್ಟಬೇಕು ? 
ನವ ಜಾತ ಶಿಶುಗಳಿಗೆ ಕೈಗೆ, ಕಾಲಿಗೆ ಮತ್ತು ಸೊಂಟಕ್ಕೆ ಕಪ್ಪು ದಾರ ಕಟ್ಟುತ್ತಾರೆ, ಮತ್ತು ಹಣೆಗೆ ಕಪ್ಪು ಮಸಿ ಬಳಿಯುತ್ತಾರೆ. 
ಏಕೆಂದರೆ ಕಪ್ಪು ಬಣ್ಣವು ಮನುಷ್ಯನ ಕಾಕ ದೃಷ್ಟಿಯನ್ನು ಅಂದರೆ ಕೆಟ್ಟ ದೃಷ್ಟಿಯನ್ನು 
ಹೋಗಲಾಡಿಸುತ್ತದೆ. ಅಂದರೆ ದೃಷ್ಟಿ ತಾಕುವುದನ್ನು ತಡೆಗಟ್ಟುತ್ತದೆ. ಈ ಕಾರಣಕ್ಕೆ ಕಪ್ಪು ದಾರವನ್ನು ಕಟ್ಟುತ್ತಾರೆ.
ಇದು ಸಂಗ್ರಹಿಸಿದ ಮಾಹಿತಿ.

December 10, 2025

ತಾಂಬೂಲ ವಿಚಾರ

    ಶುಭ ಸಮಾರಂಭಗಳಲ್ಲಿ, ಹಬ್ಬ, ಪೂಜೆ ವ್ರತಗಳನ್ನು ಆಚರಿಸಿದವರು ತಾಂಬೂಲ ನೀಡುವ ಆಚರಣೆ ಇದೆ. ಹೀಗೆ ತಾಂಬೂಲ ನೀಡುವಾಗ ಮೊದಲು ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಬೇಕು. ನಂತರ ತಾಂಬೂಲ ನೀಡುವಾಗ ವೀಳ್ಯದೆಲೆಯ ತೊಟ್ಟು ಹಾಗೂ ಬಾಳೆಹಣ್ಣಿನ ತೊಟ್ಟು ನಮ್ಮ ಕಡೆಯಲ್ಲಿರಬೇಕು.
    ವೀಳ್ಯೆದೆಲೆಯನ್ನು ಎರಡು ಅಥವಾ ಐದರ ಸಂಖ್ಯೆಯಲ್ಲಿ ಹಾಗೆಯೇ ಅಡಿಕೆಯನ್ನು, ಹಣ್ಣನ್ನು ಎರಡರ ಸಂಖ್ಯೆಯಲ್ಲಿಡಬೇಕು. ತಾಂಬೂಲದಲ್ಲಿ ಯಾವುದಾದರೂ ಒಂದು ಹಣ್ಣನ್ನು ನೀಡಬೇಕು. ಇನ್ನು ದೇವರಿಗೆ ನೈವೇದ್ಯ ಅರ್ಪಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು.
    ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಹೊರಗೆ ಬಿಸಾಕಬಾರದು. ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆಯನ್ನೇ ದೇವರ ನೈವೇದ್ಯಕ್ಕೆ ಮತ್ತು ತಾಂಬೂಲ ನೀಡಲು ಬಳಸಬೇಕು

        1. ವೀಳ್ಯದೆಲೆ ತಾಂಬೂಲ ಕೊಡುವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ, ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ. ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ.
    2. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ.
    3. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.
    4. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೇ ಎಲ್ಲಿಯಾದರೂ ಬಿಟ್ಟು ಬಂದರೆ. ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ, ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಕೆ ಕಡಿಮೆಯಾಗುತ್ತದೆ.
    5. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ.
    6. ತಾಂಬೂಲ ಕೊಡುವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.

ವಿವಿಧ ರೀತಿಯ ತಾಂಬೂಲಗಳು.. !
ತಾಂಬೂಲಗಳಲ್ಲಿ ಮೂರು ರೀತಿಯ ತಾಂಬೂಲಗಳಿವೆ..
೧. ಫಲ ತಾಂಬೂಲ..
೨. ಪೂರ್ಣಫಲ ತಾಂಬೂಲ..
೩. ಸಾಮೂಹಿಕ ತಾಂಬೂಲ..
" ಫಲ ತಾಂಬೂಲ" : ತಾಂಬೂಲದಲ್ಲಿ ಹಣ್ಣನ್ನು ಇಟ್ಟು ಕೊಡುವುದೇ ಫಲತಾಂಬೂಲ..
ಫಲ ತಾಂಬೂಲದಲ್ಲಿ ಎರಡು ವಿಧಗಳಿವೆ.
೧. ಫಲ ತಾಂಬೂಲ..
೨. ಪಂಚಫಲ ತಾಂಬೂಲ ..
೧. ಫಲ ತಾಂಬೂಲ :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದೇ ಜಾತಿಯ ಹಣ್ಣು(ಎರಡು)
**
೨. ಪಂಚಫಲ ತಾಂಬೂಲ ::
ಐದು ವೀಳ್ಯದೆಲೆ
ಐದು ಅಡಿಕೆ
ಯಥಾ ಶಕ್ತಿ ದಕ್ಷಿಣೆ
ಐದು ಜಾತಿಯ ಹಣ್ಣುಗಳು..
(5-5 ಬೇಕಾದರೂ ಕೊಡಬಹುದು)
***
" ಪೂರ್ಣಫಲ ತಾಂಬೂಲ "..
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದು ಪೂರ್ಣಫಲ..
**
" ಸಾಮೂಹಿಕ ತಾಂಬೂಲ " :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ತೆಂಗಿನಕಾಯಿ ಅಥವಾ ಹಣ್ಣು..!
ಉಪಯುಕ್ತ ಮಾಹಿತಿ ಇದೆ ಓದಿ
"ವೀಳ್ಯದೆಲೆ"
 ಮತ್ತು ಮಹತ್ವಗಳು..
೧. ವೀಳ್ಯದೆಲೆ ತುದಿಯಲ್ಲಿ - ಲಕ್ಷ್ಮೀವಾಸ..
೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ.. 
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,
ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..



ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..
ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..
ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..
"ತಾಂಬೂಲ ಕೊಡೋವಾಗ ಎಚ್ಚರಿಕೆ ಇರಲಿ...!
೧. ವೀಳ್ಯದೆಲೆ ತಾಂಬೂಲ ಕೊಡೊವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ.....
"ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ..
ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ ..ಹಣಕಾಸಿಗೆ ಪರದಾಟವಾಗುತ್ತದೆ...
೨. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ...
ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ.., ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ ...
೩. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ...
೪. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೆ ಎಲ್ಲಿಯಾದರೂ ಬಿಟ್ಟು ಬಂದರೆ..."ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ.., ಶುಭ ಕಾರ್ಯ ನಿಧಾನವಾಗುತ್ತದೆ...
ಮಕ್ಕಳ ಮಾನಸಿಕ ಬೆಳವಣಿಕೆ ಕಮ್ಮಿಯಾಗುತ್ತದೆ...
೫. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ ...
೬. ತಾಂಬೂಲ ಕೊಡೊವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. .ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ....ಶುಭವಾಗಲಿ..
ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು
"ಕಲಶದ ವೀಳ್ಯದೆಲೆ"ಯನ್ನು, ಪೂಜೆಯ ನಂತರ ಏನು ಮಾಡಬೇಕು?
ಕಲಶದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮಾತ್ರ ಹಾಕಿಕೊಳ್ಳಬೇಕು. ಬೇರೆಯವರು ಹಾಕಿಕೊಳ್ಳಬಾರದು. ಮಗಳು ಅಳಿಯ ಇದ್ದರೆ ಹಾಕಿಕೊಳ್ಳಬಹುದು.
ಕಲಶದ ವೀಳ್ಯದೆಲೆಯನ್ನು ಒಣಗಿಸಿದರೆ , ಅಥವಾ ಕಸದಲ್ಲಿ ಗುಡಿಸಿದರೆ ?
ಆ ಮನೆಗೆ ದಾರಿದ್ರ್ಯ ಬಂದು ಬಿಡುತ್ತದೆ. ಕಲಶದೇವಿಯ ಶಾಪವಾಗಿ ಆ ಮನೆಯಲ್ಲಿ ಸಂಪಾದಿಸಿದ ಹಣ ಬೇರೆಯವರ ಪಾಲಾಗಿ, ತುಂಬಾ ಕಷ್ಟದ ಜೀವನ ಮಾಡುತ್ತೀರಿ.
ಸಾಲದಭಾದೆ ಇಂದ ನರಳುವಿರಿ. ಶತೃಭಾಧೆ ಜಾಸ್ತಿಯಾಗುತ್ತದೆ.
ಪೂಜಿಸಿದ ಕಲಶದ ವೀಳ್ಯದೆಲೆಯನ್ನು ತುಳಸೀ ಕಟ್ಟೆಗೆ ಹಾಕಿದರೆ?
ಅವರು ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ. ಬಹಳ ತೇಜೋವಂತರೂ ಕಾಂತಿವಂತರೂ ಆಗಿ, ನೆಮ್ಮದಿಯ ಜೀವನ ಮಾಡುತ್ತಾರೆ. ಸರ್ವ ತೀರ್ಥಗಳೂ ತುಳಸಿಯಲ್ಲಿ ಇರುವುದರಿಂದ ಸರ್ವ ಶ್ರೇಷ್ಠ.
ಕಲಶದ ವೀಳ್ಯದೆಲೆಯನ್ನು ಪೂಜ್ಯ ಭಾವನೆಯಿಂದ, ಕುಲದೇವತಾ ಸ್ಮರಣೆ ಮಾಡಿ, ಹರಿಯುವ ನದಿಯಲ್ಲಿ ಬಿಟ್ಟರೆ?
ಪೂಜಿಸಿದ ದೇವರು, ಕಲಶದ ದೇವರು, ಕುಲದೇವರ ಆಶೀರ್ವಾದ ಎಂದೆಂದೂ ಇದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ. ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ.
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದು ಎಲ್ಲರೂ ಆರೋಗ್ಯವಂತರಾಗಿರುತ್ತಾರೆ.
ಕಲಶಕ್ಕೆ ಬಿಳೀ ವೀಳ್ಯದೆಲೆ ಇಟ್ಟರೆ ?
ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ. ದಟ್ಟದಾರಿದ್ಯ ಅನುಭವಿಸುತ್ತಿರಿ.
ಕಲಶಕ್ಕೆ ಇಡೋ ವೀಳ್ಯದೆಲೆ ಹಸಿರು ಬಣ್ಣದ್ದಾಗಿರಬೇಕು. ಎಳೆಯ ವೀಳ್ಯದೆಲೆ ಆಗಿರಬೇಕು. ಹಸ್ತದ ಆಕಾರ ಇರಬೇಕು. ಭಿನ್ನವಾಗಿರಬಾರದು..
ವೀಳ್ಯದೆಲೆ ಹಾರವನ್ನು "ದುರ್ಗಾದೇವಿ"ಗೆ ಹಾಕಿ ಪೂಜೆ ಮಾಡಿಸಿದರೆ ಫಲ ಏನು..?
ಯಾರು ಒಬ್ಬೊಬ್ಬರೇ ಇರುವಾಗ ತುಂಬಾ ಭಯಪಡುತ್ತಾರೆಯೋ.
ಒಬ್ಬರೇ ಮಾತಾನಾಡಿಕೊಳ್ಳುತ್ತಾರೋ ಅಥವಾ ಒಬ್ಬರೇ ನಗುತ್ತಿರುತ್ತಾರೋ..
ಸಾರ್ವಜನಿಕರಲ್ಲಿ ಮಾತನಾಡುವಾಗ ಭಯವಾದರೆ 
ಮಾತನಾಡುವಾಗ ತೊದಲುತ್ತಿದ್ದರೆ.
ಒಬ್ಬರೇ ಒಂಟಿಯಾಗಿ ಕುಳಿತು ತುಂಬಾ ಯೋಚನೆ ಮಾಡೋದು, ಮನಸ್ಸಿನೊಳಗೆ ತುಂಬಾ ದುಃಖ ಪಡೋದು ಆಗುತ್ತಿದ್ದರೆ.
ಎಲ್ಲರೂ ಇದ್ದು ಯಾರೂ ಇಲ್ಲ ಅನ್ನೋ ಒಂಟಿ ಭಾವನೆ ಬರುತ್ತಿದ್ದರೆ.
ಜೀವನ ಸಾಕು ಸತ್ತೋಗಿಬಿಡೋಣ ಅನ್ನಿಸುತ್ತಿದ್ದರೆ.
ಇಂಥವರು,  "ಶ್ರೀ ದುರ್ಗಾದೇವಿಗೆ" 7 ಮಂಗಳವಾರ "ವೀಳ್ಯದೆಲೆ "ಹಾರ ಹಾಕಿಸಿ, ಪ್ರಾರ್ಥನೆ ಮಾಡಿ, ಫಲ ಹಾಗೂ ತಾಂಬೂಲವನ್ನು ನೈವೇದ್ಯ ಮಾಡಿಸಿ, ಸುಮಂಗಲಿಯರಿಗೆ ತಾಂಬೂಲ ದಾನ ಮಾಡಿದರೆ , ಸರ್ವ ದೋಷಗಳು ನಿವಾರಣೆಯಾಗುತ್ತದೆ. ದುರ್ಗಾದೆವಿಗೆ ವೀಳ್ಯದೆಲೆ ಹಾರ ತುಂಬಾ ವಿಶೇಷವಾಗಿರುತ್ತದೆ..
ಯಾರ ಬುದ್ಧಿಯು ಮಂಕಾದರೆ
ಜ್ಞಾಪಕ ಶಕ್ತಿ, ಬುದ್ಧಿಶಕ್ತಿ ಕಡಿಮೆಯಾದರೆ
ತಲೆಯಲ್ಲಿ ನೀರು ತುಂಬಿದ್ದರೆ 
ಬಾಣಂತಿಯರಲ್ಲಿ ಸನ್ನಿಯಾದರೆ
ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ
ದೇಹದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದರೆ
ಕಣ್ಣಿನಲ್ಲಿ ನೀರು ಬರುತ್ತಿದ್ದರೆ
ದೇಹದಲ್ಲಿ fluid ಕಡಿಮೆಯಾದರೆ
ನಾಲಿಗೆ ಯಾವಾಗಲೂ ಒಣಗುತ್ತಿದ್ದರೆ
ಈ ತರಹ ದೋಷವುಳ್ಳವರು "ಶ್ರೀದುರ್ಗಾ" ದೇವಿಗೆ 9 ಮಂಗಳವಾರ ದೇವಿಗೆ "ವೀಳ್ಯದೆಲೆ" ಹಾರ ಹಾಕಿಸಿ, ಪೂಜಿಸಿ ತಾಂಬೂಲ ದಾನ ಮಾಡುತ್ತಾ ಬಂದರೆ
ಸರ್ವದೋಷ ನಿವಾರಣೆಯಾಗುತ್ತದೆ. ಆರೋಗ್ಯಭಾಗ್ಯ ಉಂಟಾಗುತ್ತದೆ ..
ಯಾವುದೇ ತರಹದ "ಶ್ರೇಯಸ್ಸಿಗಾಗಿ ದೇವಿಗೆ ಬೆಳಗ್ಗೆ "ವೀಳ್ಯದೆಲೆ " ಹಾರ ಹಾಕಿಸಿ. ಯಾವುದೇ ತರಹದ ಖಾಯಿಲೆಯಿಂದ ಗುಣವಾಗಬೇಕಾದರೆ, "ಸಾಯಂಕಾಲ" ವೀಳ್ಯದೆಲೆ ಹಾರ ಹಾಕಬೇಕು..
(22, 24, 48, 108 ,109 ಎಲೆಗಳಿದ್ದರೆ ತುಂಬಾ ಒಳ್ಳೆಯದು, ಜೋಡಿ ಇರಬೇಕು. ಆಗದಿದ್ದರೆ 5 , 7, 9, 11 ಎಲೆಗಳ ಹಾರ ಬೇಕಾದರೂ ಹಾಕಬಹುದು)
x

November 26, 2025

ಚಂಪಾ ಷಷ್ಠೀ ಸುಬ್ರಮಣ್ಯ ಷಷ್ಠಿ

ದಕ್ಷನ ಮಗಳಾದ ದಾಕ್ಷಾಯಿಣಿಯೇ ಪರಶಿವನ ಹೆಂಡತಿ. ಹೀಗಾಗಿ ಪರಮೇಶ್ವರನು ದಕ್ಷನಿಗೆ ಸಂಬಂಧದಲ್ಲಿ ಅಳಿಯನಾಗಬೇಕು. ಒಂದು ದಿನ ತ್ರಿವೇಣೀಸಂಗಮದಲ್ಲಿ ದೇವತೆಗಳು ಏರ್ಪಡಿಸಿದ್ದ ಜ್ಞಾನ ಸತ್ರವೊಂದು ನಡೆಯುತ್ತಿತ್ತು. ಪರಶಿವನೇ ಆ ಸಭೆಗೆ ಅಧ್ಯಕ್ಷನಾಗಿದ್ದ. ಆಗ ದಕ್ಷನು ಅಲ್ಲಿಗೆ ಬಂದ. ಆಗ ಇಡೀ ಸಭೆಯಲ್ಲಿ ಇದ್ದ ದೇವತೆಗಳು ಮುನಿಗಳು ಎಲ್ಲರೂ ಎದ್ದು ನಿಂತು ನಮಸ್ಕರಿಸಿ ಆತನಿಗೆ ಗೌರವ ಸಲ್ಲಿಸಿದರು. ಆದರೆ, ಅಧ್ಯಕ್ಷ ಪೀಠದಲ್ಲಿದ್ದ ಕಾರಣ ಪರಮೇಶ್ವರನು ಎದ್ದು ಗೌರವ ಸೂಚಿಸಲಿಲ್ಲ. ಇದರಿಂದಾಗಿ ದಕ್ಷ ಕುಪಿತನಾದ. ಅಳಿಯನು ತನ್ನನ್ನು ಅವಮಾನಿಸಿದ ಎಂದೇ ಆತ ತಿಳಿದ. ಹೀಗಾಗಿ ಆ ಸಭೆಯಲ್ಲಿ ಕುಳಿತುಕೊಳ್ಳದೇ ಎಲ್ಲರೆದುರು ಅಳಿಯನಾದ ಶಿವನನ್ನು ನಿಂದಿಸಿ ಸಭೆಯನ್ನು ಧಿಕ್ಕರಿಸಿ ಹೊರನಡೆದ. 

ತನ್ನ ಊರಿಗೆ ಹೋದವನೇ ತಾನೂ ಕೂಡಾ ಬಹಳ ವಿಜೃಂಭಣೆಯ ಒಂದು ಯಾಗವನ್ನು ಕೈಗೊಂಡ. ಅದಕ್ಕೆ ಸ್ವತಹ ತಾನೇ ಇದು “ನಿರೀಶ್ವರ ಯಾಗ” ಎಂದು ಹೆಸರಿಸಿಕೊಂಡ. ಅದರಲ್ಲಿ ಈಶ್ವರನನ್ನು ಹೊರತುಪಡಿಸಿ ಉಳಿದ ದೇವತೆಗಳೆಲ್ಲರಿಗೂ ಹವಿಸ್ಸನ್ನು ನೀಡಲು ತೀರ್ಮಾನಿಸಿದ. ಹೀಗಾಗಿ ಪರಮೇಶ್ವರನನ್ನು ಹೊರತುಪಡಿಸಿ ಉಳಿದವರಿಗೆಲ್ಲ ಆಮಂತ್ರಣ ನೀಡಿದ.

ಆದರೆ, ಆ ಯಾಗಕ್ಕೆ ಹೋಗುತ್ತಿರುವ ಬ್ರಾಹ್ಮಣರ ಮೂಲಕ ದಾಕ್ಷಾಯಿಣಿಗೆ ತನ್ನ ತಂದೆಯು ಯಾಗವೊಂದನ್ನು ಮಾಡುತ್ತಿರುವ ವಿಷಯ ತಿಳಿಯುತ್ತದೆ. ಆಕೆ ಗಂಡನಾದ ಈಶ್ವರನಲ್ಲಿ ನಾವೂ ಕೂಡಾ ಆ ಯಾಗಕ್ಕೆ ಹೋಗೋಣ ಎಂದು ವಿನಂತಿಸುತ್ತಾಳೆ. ಆಗ ಈಶ್ವರನು ಹಿಂದೆ ತ್ರಿವೇಣೀ ಸಂಗಮದಲ್ಲಿ ನಡೆದ ಸಭೆಯ ವಿಚಾರವನ್ನು ಆಕೆಗೆ ತಿಳಿಸಿ , ನಿನ್ನ ತಂದೆ ಹಗೆ ಸಾಧನೆಗಾಗಿಯೇ ಈ ರೀತಿ ಮಾಡುತ್ತಿದ್ದಾನೆ , ಆದ್ದರಿಂದ ಹೋಗುವುದು ಬೇಡ ಎನ್ನುತ್ತಾನೆ. ಆದರೆ ತವರಿನ ಮೋಹದಿಂದಾಗಿ ದಾಕ್ಷಾಯಿಣಿಯು ಗಂಡನ ಮಾತನ್ನು ತಿರಸ್ಕರಿಸಿ , ತಾನೊಬ್ಬಳೇ ತಂದೆಯ ಯಾಗಕ್ಕೆ ಹೋಗುತ್ತಾಳೆ. 

ಆದರೆ, ಯಾಗಶಾಲೆಗೆ ಹೋದ ದಾಕ್ಷಾಯಿಣಿಯನ್ನು ಅಲ್ಲಿ ಯಾರೂ ಮಾತನಾಡಿಸುವುದೇ ಇಲ್ಲ. ತಾಯಿ ಅಕ್ಕ ತಂಗಿಯರೆಲ್ಲ ಮಾತನಾಡಿಸಲು ಮುಂದಾದರೂ ಕೂಡಾ ದಕ್ಷನು ಅವರನ್ನೆಲ್ಲ ಗದರಿಸಿ ಯಾರೂ ಆಕೆಯನ್ನು ಮಾತನಾಡಿಸದಂತೆ ಮಾಡುತ್ತಾನೆ. ಆಗ ದಾಕ್ಷಾಯಿಣಿಗೆ ಗಂಡನ ಮಾತನ್ನು ಮೀರಿ ಬಂದ ತನ್ನ ತಪ್ಪಿನ ಅರಿವಾಗುತ್ತದೆ. ಆದರೂ ಸಹಿಸಿಕೊಂಡು ಯಾಗದ ಸಂಭ್ರಮವನ್ನು ನೋಡುತ್ತಾ ಇರುತ್ತಾಳೆ. ಅಲ್ಲಿ ಯಾಗ ನಡೆಸುತ್ತಿರುವ ಮುನಿಗಳು ಇಂದ್ರ , ಅಗ್ನಿ , ಯಮ , ನಿಋತಿ , ವರುಣ , ವಾಯು , ಕುಬೇರ ಎಲ್ಲರಿಗೂ ಹವಿಸ್ಸನ್ನು ಅರ್ಪಿಸಿ ಕೊನೆಯಲ್ಲಿ “ಈಶಾಯ ಸ್ವಾಹಾ” ಎಂದು ಈಶನಿಗೆ ಹವಿಸ್ಸನ್ನು ಅರ್ಪಿಸಲು ತೊಡಗಿದಾಗ , ದಕ್ಷನು ಸಿಟ್ಟಿನಿಂದ ಅವರನ್ನು ತಡೆದು “ಈಶ್ವರನಿಗೆ ಹವಿಸ್ಸನ್ನು ಕೊಡಬಾರದು ಇದು ನಿರೀಶ್ವರ ಯಾಗ” ಎಂದು ಕೂಗುತ್ತಾನೆ. ಆಗ ದಾಕ್ಷಾಯಿಣಿಗೆ ಕೋಪ ಬರುತ್ತದೆ. ಆಕೆ ದಕ್ಷನನ್ನು ಜರೆಯುತ್ತಾಳೆ. ದಕ್ಷನೂ ಕೂಡಾ ಆಕೆಯನ್ನು ಮತ್ತು ಈಶ್ವರನನ್ನು ನಿಂದಿಸುತ್ತಾನೆ. 

ಅವಮಾನ ತಾಳಲಾರದೇ ಹತಾಶಳಾದ ದಾಕ್ಷಾಯಿಯಿಣಿಯು , ತಾನೇ ಯೋಗಾಗ್ನಿಯನ್ನು ಸೃಷ್ಟಿಸಿಕೊಂಡು ಅದರಲ್ಲಿ ತನ್ನನ್ನು ತಾನೇ ಆಹುತಿ ಕೊಟ್ಟುಕೊಳ್ಳುತ್ತಾಳೆ. ದಾಕ್ಷಾಯಿಣಿಯು ಸುಟ್ಟುಹೋದಳೆಂಬ ವಾರ್ತೆ ತಿಳಿದ ಈಶ್ವರನು ಕುಪಿತನಾಗಿ ತನ್ನ ಜಡೆಯನ್ನು ನೆಲಕ್ಕೆ ಬಡಿದು ವೀರಭದ್ರನನ್ನು ಸೃಷ್ಟಿಸಿ ಅವನಿಗೆ ದಕ್ಷನನ್ನು ಕೊಲ್ಲುವಂತೆ ಅಪ್ಪಣೆ ಕೊಡುತ್ತಾನೆ. ವೀರಭದ್ರನು ದಕ್ಷನ ಯಾಗಶಾಲೆಯನ್ನೆಲ್ಲ ಧ್ವಂಸಗೊಳಿಸುತ್ತಾನೆ. ದಕ್ಷನನ್ನೂ ಅವನೊಂದಿಗೆ ಸಹಕರಿಸಿದವರೆಲ್ಲರನ್ನೂ ಕೊಲ್ಲುತ್ತಾನೆ. 

ಇತ್ತ ಹೆಂಡತಿಯನ್ನು ಕಳೆದುಕೊಂಡ ಈಶ್ವರನು ಕೈಲಾಸದಲ್ಲಿ ಒಂಟಿಯಾಗಿಯೇ ಉಳಿದು  ಧ್ಯಾನಾಸಕ್ತನಾಗಿ ಉಗ್ರವಾದ ತಪಸ್ಸಿನಲ್ಲಿ ನಿರತನಾಗುತ್ತಾನೆ. 

ಈಶ್ವರನು ಹೆಂಡತಿಯನ್ನು ಕಳೆದುಕೊಂಡ ವಿಷಯವನ್ನು ಅರಿತುಕೊಂಡ ತಾರಕಾಸುರನೆಂಬ ದೈತ್ಯನು ಉಗ್ರವಾದ ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ , ಈಶ್ವರನಿಗೆ ಇನ್ನು ಮುಂದೆ ಜನಿಸುವ ಪುತ್ರನಿಂದಲ್ಲದೇ ಅನ್ಯರಿಂದ ತನಗೆ ಮರಣ ಇಲ್ಲದಂತಹ ವರ ಪಡೆಯುತ್ತಾನೆ. ನಂತರ ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರುತ್ತಾನೆ. 

ಈಶ್ವರನಿಗೆ ಹೆಂಡತಿ ಇಲ್ಲದಿರುವುದರಿಂದ ಆತನಿಗೆ ಮಗನು ಜನಿಸುವುದು ಸಾಧ್ಯವಿಲ್ಲ , ಈಶ್ವರನಿಗೆ ಮಗನು ಜನಿಸದೇ ಹೋದರೆ ತಾರಕಾಸುರನಿಗೆ ಅಳಿವಿಲ್ಲ. ಹೀಗಾಗಿ ದೇವತೆಗಳೆಲ್ಲರೂ ಈಶ್ವರನಿಗೆ ಮರು ಮದುವೆ ಮಾಡಿಸುವ ಉಪಾಯ ಮಾಡುತ್ತಾರೆ. ದಕ್ಷಯಜ್ಞದ ಸಂದರ್ಭದಲ್ಲಿ ಉರಿದು ಹೋದ ದಾಕ್ಷಾಯಿಣಿಯು ನಂತರ ಪರ್ವತ ರಾಜನಿಗೆ ಮಗಳಾಗಿ ಪಾರ್ವತಿ (ಗಿರಿಜೆ) ಎಂಬ ಹೆಸರಿನಿಂದ ಈಶ್ವರನನ್ನೇ ಧ್ಯಾನಿಸುತ್ತಾ ಇರುತ್ತಾಳೆ. ಅವಳನ್ನೇ ಕೊಟ್ಟು ಈಶ್ವರನಿಗೆ ಮದುವೆ ಮಾಡಿಸುವುದು ಎಂದು ತೀರ್ಮಾನಿಸುತ್ತಾರೆ. 

ಆದರೆ , ಅದಕ್ಕಿಂತ ಮೊದಲು ಈಶ್ವರನನ್ನು ತಪಸ್ಸಿನಿಂದ ಎಬ್ಬಿಸಬೇಕಲ್ಲ , ಅದಕ್ಕಾಗಿ ಮನ್ಮಥನ ಮೊರೆ ಹೋಗುತ್ತಾರೆ. ಮನ್ಮಥನು ಈಶ್ವರನಿಗೆ ಪಂಚ ಬಾಣಗಳನ್ನು ಬಿಟ್ಟು ಅದರಿಂದ ಆತನ ತಪಸ್ಸನ್ನು ಕೆಡಿಸುತ್ತಾನೆ. ಇದರಿಂದ ಸಿಟ್ಟಾದ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟುಬಿಡುತ್ತಾನೆ. ಆದರೆ, ಬಳಿಕ ದೇವತೆಗಳೆಲ್ಲರೂ ಶಿವನನ್ನು ಧ್ಯಾನಿಸಿ ಆತನನ್ನು ಪ್ರಸನ್ನಗೊಳಿಸುತ್ತಾರೆ. ನಂತರ ಶಿವ ಪಾರ್ವತಿಯರ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ. 

ಮುಂದೆ ಅವರಿಬ್ಬರಿಗೆ “ಷಣ್ಮುಖ” ಎಂಬ ಮಗನು ಹುಟ್ಟುತ್ತಾನೆ. ಅವನನ್ನು ಕಾರ್ತಿಕೇಯ , ಸ್ಕಂದ , ಸುಬ್ರಹ್ಮಣ್ಯ , ಕುಮಾರಸ್ವಾಮಿ , ಮುರುಗ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ.  ತಾರಕಾಸುರನನ್ನು ವಧಿಸಿ ಲೋಕಕಲ್ಯಾಣ ಉಂಟುಮಾಡಲೆಂದೇ ಹುಟ್ಟಿದ ಷಣ್ಮುಖನು ತಾನು ಜನಿಸಿದ ಏಳನೇ ದಿನದಲ್ಲಿಯೇ ತಾರಕಾಸುರನ ಮೇಲೆ ಯುದ್ಧಕ್ಕೆ ತೆರಳುತ್ತಾನೆ. 

ದೇವತೆಗಳ ಸಮಸ್ತ ಸೇನೆಗೆ ಕುಮಾರಸ್ವಾಮಿಯೇ ಸೇನಾನಾಯಕನಾಗುತ್ತಾನೆ. ಆತನು ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠೀ ತಿಥಿಯಂದು ತಾರಕಾಸುರನನ್ನು ಕೊಲ್ಲುತ್ತಾನೆ. ಕುಮಾರಸ್ವಾಮಿಯು ತಾರಕಾಸುರನನ್ನು ಕೊಂದ ಬೆಟ್ಟದ ಸ್ಠಳಕ್ಕೆ “ಕುಮಾರಪರ್ವತ” ಎಂದು ಹೆಸರಾಗುತ್ತದೆ. ಅಲ್ಲದೇ ತಾರಕಾಸುರನನ್ನು ಕೊಂದ ನಂತರ ತನ್ನ ಆಯುಧಗಳಿಗೆ ಅಂಟಿದ ರಕ್ತವನ್ನು ಪಕ್ಕದ “ಧಾರಾ” ನದಿಯಲ್ಲಿ ಸುಬ್ರಹ್ಮಣ್ಯನು ತೊಳೆಯುತ್ತಾನೆ. ಹೀಗಾಗಿ ಧಾರಾ ನದಿಗೆ “ಕುಮಾರಧಾರಾ” ನದಿ ಎಂದು ಹೆಸರು ಬರುತ್ತದೆ.  

ತಾರಕಾಸುರನ ವಧೆಯಾದ ನಂತರ ದೇವೇಂದ್ರನು ತನ್ನ ಮಗಳಾದ ದೇವಸೇನೆ ಎಂಬವಳನ್ನು ಸುಬ್ರಹ್ಮಣ್ಯನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಆ ನಂತರ ಸುಬ್ರಹ್ಮಣ್ಯನು ಪತ್ನಿಯೊಂದಿಗೆ ಕುಮಾರಧಾರಾ ನದಿಯ ಪಕ್ಕದಲ್ಲಿಯೇ ನೆಲೆ ನಿಲ್ಲುತ್ತಾನೆ. ಆ ಸ್ಥಳವೇ “ಸುಬ್ರಹ್ಮಣ್ಯಕ್ಷೇತ್ರ” ಎಂದು  ಪ್ರಸಿದ್ಧವಾಗುತ್ತದೆ. 

ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದ ಆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠೀ ತಿಥಿಯಂದು “ಚಂಪಾ” ಎಂಬ ಒಂದು ವಿಶೇಷ ಯೋಗ ಇದ್ದಿತ್ತು. ಹೀಗಾಗಿ ಅದನ್ನು “ಚಂಪಾಷಷ್ಠೀ” ಎಂಬುದಾಗಿ ಕರೆಯುತ್ತಾರೆ. ಜನರು ಇದನ್ನೇ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠೀ” ಅಥವಾ “ಕುಕ್ಕೆ ಷಷ್ಠೀ” ಅಥವಾ “ಸುಬ್ರಹ್ಮಣ್ಯ ಷಷ್ಠೀ” ಅಥವಾ “ಸುಬ್ರಾಯನ ಷಷ್ಠಿ” ಎಂದು ಕರೆಯುತ್ತಾರೆ. 

ಹಿಂದೂಗಳ ತಿಥಿ ನಿರ್ಣಯ ಗ್ರಂಥಗಳಲ್ಲಿ “ಚಂಪಾ” ಎಂಬ ವಿಶೇಷ ಯೋಗದ ಕುರಿತು ಹೀಗೆ ಬರೆಯಲಾಗಿದೆ – “ಮಾರ್ಗಶಿರ ಅಥವಾ ಭಾದ್ರಪದ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರವಾಗಿದ್ದು ವೈಧೃತಿ ಯೋಗ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠೀ ಎನ್ನುತ್ತಾರೆ” ಅಥವಾ “ಮಂಗಳವಾರವಾಗಿದ್ದು ವಿಶಾಖಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠೀ ಎನ್ನುತ್ತಾರೆ” ಅಥವಾ  “ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರವಾಗಿದ್ದು ಶತಭಿಷಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠೀ ಎನ್ನುತ್ತಾರೆ.” 

ಹೀಗೆ “ಚಂಪಾ” ಎಂಬುದು “ಷಷ್ಠೀ” ತಿಥಿಯ ಒಂದು “ಯೋಗವಿಶೇಷ”ಕ್ಕೆ ಇಟ್ಟ ಹೆಸರಾಗಿದೆ ಮತ್ತು “ಚಂಪಾ ಷಷ್ಠೀ” ಎಂಬುದು ಷಣ್ಮುಖ ಅಂದರೆ ಸುಬ್ರಹ್ಮಣ್ಯನ ಹಬ್ಬವಾಗಿದೆ.

November 7, 2025

ದೇವಾಲಯಕ್ಕೆ ಮೂರ್ತಿ ಅಥವಾ ವಿಗ್ರಹ ದಾನ ಮಾಡಿದ ಫಲ

ಇದೊಂದು ಅತ್ಯಂತ ಪವಿತ್ರ ಮತ್ತು ಪುಣ್ಯಮಯ ಕಾರ್ಯ. ಶಾಸ್ತ್ರಗಳಲ್ಲಿ “ಪ್ರತಿಷ್ಠಿತ ವಿಗ್ರಹ ದಾನಂ ಮೋಕ್ಷಪ್ರದಂ ಸ್ಮೃತಂ” ಎಂದು ಹೇಳಲಾಗಿದೆ — ಅಂದರೆ ದೇವರ ವಿಗ್ರಹವನ್ನು ದಾನ ಮಾಡುವವರು ಪರಮ ಪುಣ್ಯವನ್ನು ಪಡೆಯುತ್ತಾರೆ ಎಂದು.
ಇಲ್ಲಿ ಮೂರ್ತಿ ದಾನದ ಫಲಗಳು ಮತ್ತು ಲಾಭಗಳು ಹೀಗಿವೆ 

ಆಧ್ಯಾತ್ಮಿಕ ಲಾಭಗಳು
ಅಖಂಡ ಪೂಜಾ ಫಲ:
ಮೂರ್ತಿ ದಾನ ಮಾಡಿದ ನಂತರ ಆ ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಪೂಜೆ, ನಿತ್ಯನೈವೇದ್ಯ, ಹೋಮ, ಅಭಿಷೇಕ, ಭಕ್ತರ ಪ್ರಾರ್ಥನೆ—ಇವುಗಳ ಫಲದ ಭಾಗ ದಾತನಿಗೂ ಸಿಗುತ್ತದೆ.

ಅನಂತ ಪುಣ್ಯ ಸಂಗ್ರಹ:
“ಮೂರ್ತಿ ದಾನಂ ಸಹಸ್ರ ಯಜ್ಞ ಫಲಪ್ರದಂ” — ಅಂದರೆ ಸಾವಿರ ಯಜ್ಞ ಮಾಡಿದಷ್ಟೂ ಪುಣ್ಯ ದೊರೆಯುತ್ತದೆ.

ಪಿತೃ ತೃಪ್ತಿ:
ವಿಗ್ರಹ ದಾನದಿಂದ ಪಿತೃಗಳಿಗೆ ಶಾಂತಿ ದೊರೆಯುತ್ತದೆ ಎಂದು ಗರುಡಪುರಾಣ ಹೇಳುತ್ತದೆ. ಇದು ಪಿತೃಗಳ ಮೋಕ್ಷಕ್ಕಾಗಿ ಅತ್ಯುತ್ತಮ ಉಪಾಯವಾಗಿದೆ.

ದೇವ-ದೇವತಾರಾಧನೆಗೆ ದಾರಿಯಾಗುವುದು:
ದೇವಾಲಯದ ಮೂಲಕ ಅನೇಕ ಜನರು ಆರಾಧನೆ ಮಾಡುತ್ತಾರೆ. ಅದರ ಮೂಲಕ ನೀವು ಅನೇಕರ ಭಕ್ತಿ ಕಾರ್ಯದಲ್ಲಿ ಭಾಗಿಯಾದಂತೆ ಆಗುತ್ತದೆ — ಇದು “ಸಂಯುಕ್ತ ಪುಣ್ಯ” ಎಂದು ಕರೆಯಲಾಗುತ್ತದೆ.

ಲೌಕಿಕ (ಪ್ರಾಪಂಚಿಕ) ಲಾಭಗಳು

ಕೀರ್ತಿ ಮತ್ತು ಗೌರವ:
ದೇವಾಲಯದ ಇತಿಹಾಸದಲ್ಲಿ ದಾನದ ಹೆಸರನ್ನು ಸದಾ ಸ್ಮರಿಸಲಾಗುತ್ತದೆ — ಇದು ನಿಮ್ಮ ಕುಟುಂಬಕ್ಕೆ ಶಾಶ್ವತ ಕೀರ್ತಿಯನ್ನು ತರುತ್ತದೆ.

ಸಂಪತ್ತು ಮತ್ತು ಸುಖ:
ದೇವರಿಗೆ ನೀಡಿದ ಸತ್ಯಸಂಕಲ್ಪದ ದಾನದಿಂದ ಮನೆಯಲ್ಲಿ ಧನ, ಧಾನ್ಯ, ಐಶ್ವರ್ಯ ಹೆಚ್ಚುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಕಷ್ಟ ನಿವಾರಣೆ:
ಮೂರ್ತಿ ದಾನ ಮಾಡಿದ ನಂತರ ಜೀವನದಲ್ಲಿ ಅಡೆತಡೆಗಳು, ನಕಾರಾತ್ಮಕ ಶಕ್ತಿಗಳು, ಅಥವಾ ಗ್ರಹದೋಷಗಳ ಪರಿಣಾಮ ಕಡಿಮೆಯಾಗುತ್ತದೆ.

ವಂಶ ಸ್ಥೈರ್ಯ:
ಭಕ್ತಿಯಿಂದ ಮಾಡಿದ ವಿಗ್ರಹ ದಾನದಿಂದ ವಂಶದಲ್ಲಿ ಸಂತಾನ ಸುಖ, ಶ್ರೇಯಸ್ಸು ಹಾಗೂ ದೀರ್ಘ ಆಯುಷ್ಯ ದೊರೆಯುತ್ತದೆ ಎಂದು ಸ್ಕಾಂದಪುರಾಣ ಹೇಳುತ್ತದೆ.

ದಾನ ಮಾಡುವಾಗ ಪಾಲಿಸಬೇಕಾದ ನಿಯಮಗಳು

ದಾನ ಶ್ರದ್ಧೆ ಮತ್ತು ಶುದ್ಧ ಹಣದಿಂದ ಮಾಡಬೇಕು (ಅನ್ಯಾಯದ ಹಣದಿಂದ ದಾನ ನಿಷೇಧ).
ಮೂರ್ತಿ ದಾನಕ್ಕೂ ಮೊದಲು ಗಣಪತಿ ಪೂಜೆ ಮತ್ತು ಸಂಕಲ್ಪ ಮಾಡಬೇಕು.
“ಈ ದಾನದಿಂದ ದೇವರ ಆರಾಧನೆ ಶಾಶ್ವತವಾಗಿ ನಡೆಯಲಿ” ಎಂಬ ಭಾವನೆ ಇರಬೇಕು.

ಸಾರಾಂಶ:
“ಮೂರ್ತಿ ದಾನಂ ಮಹಾದಾನಂ ಸರ್ವಪಾಪಪ್ರನಾಶನಂ।
ಯತ್ರ ಯತ್ರ ಸ್ಥಿತಾ ಮೂರ್ತಿರ್ದಾತೃಣಾಂ ತತ್ರ ನಿತ್ಯದೇವತಾ॥”

ಅರ್ಥ — ಮೂರ್ತಿ ದಾನ ಮಾಡಿದ ಸ್ಥಳದಲ್ಲಿ ದೇವರ ಸಾನ್ನಿಧ್ಯ ಎಂದೆಂದಿಗೂ ಇರುತ್ತದೆ; ಆ ದೇವರ ಕೃಪೆ ದಾತನ ಜೀವನದ ಪ್ರತಿಯೊಂದು ಹಂತದಲ್ಲೂ ಉಳಿಯುತ್ತದೆ.

October 29, 2025

ಶ್ರೀ ಮತ್ತು ಶ್ರೀಮತಿ

    ಭಾಷಾ ಬಳಕೆಯಲ್ಲಿ  ನಾವು  ತಿಳಿದೋ ತಿಳಿಯದೆಯೋ  ಕೆಲವೊಮ್ಮೆ  ಸೇರಿಕೊಂಡ ತಪ್ಪುಗಳನ್ನು  ನಾವು ಸರಿಪಡಿಸಿಕೊಳ್ಳದಿದ್ದರೆ ಅದರ ರಾಷ್ಟ್ರೀಯತೆಗೊ, ಸೌಂದರ್ಯಕ್ಕೋ ಅಪಚಾರ ಎಸಗಿದಂತೆ. ಇಂದು ಮುದ್ರಣಗೊಳ್ಳುವ ಆಮಂತ್ರಣ ಪತ್ರಿಕೆಗಳಲ್ಲಿ ವಿಳಾಸ ಬರೆಯುವಲ್ಲಿ ಶ್ರೀ/ಶ್ರಿಮತಿ ಅಥವಾ ಶ್ರೀಮತಿ/ಶ್ರೀ ಎಂದು ಮುದ್ರಿಸಲಾಗುತ್ತಿದೆ. ಹೀಗೆ ಮುದ್ರಿಸುವುದರ ಉದ್ದೇಶ ಪುರುಷ ಮತ್ತು ಸ್ತ್ರೀ ಗೌರವ ಸೂಚಿಸಿ ಆಮಂತ್ರಿಸುವದು. ಆದರೆ 'ಶ್ರೀ' ಅನ್ನುವದು ಸ್ತ್ರೀವಾಚಕ. ಅದನ್ನು ಪುರುಷರ ಹೆಸರಿನ ಹಿಂದೆ ಬಳಸುತ್ತೇವೆ ! ಶ್ರೀ ಗಣಪತಿ ಶಾಸ್ತ್ರಿ ಎಂದು. ಇದು ಸರಿಯಲ್ಲ. ಅಂದರೆ, ಶ್ರೀ ಮತ್ತು ಶ್ರೀಮತಿ ಅನ್ನುವ ಎರಡೂ ಸ್ತ್ರೀಯರಿಗೆ ಬಳಸಲ್ಪಡುವ ಗೌರವ ಪದ. ಅಂದರೆ ಸ್ತ್ರೀಯರ ಹೆಸರಿನ ಹಿಂದೆ  ಶ್ರೀ ಅಥವ ಶ್ರೀಮತಿ ಯಾವುದನ್ನು ಬೇಕಾದರೂ ಬಳಸಬಹುದು. ಆದರೆ ಪುರುಷರ ಹೆಸರಿನ ಹಿಂದೆ ಶ್ರೀ ಬಳಸುವುದು ಗೌರವ ಪದವಾಗುವ ಬದಲು ಅಗೌರವ ಪದ ಬಳಸಿದಂತಾಗುತ್ತದೆ. 
    ಹಾಗಿದ್ದರೆ, ಹೇಗೆ ಬಳಸುವುದು ಸರಿ?  ಶ್ರೀ ಗೌರಿ, ಶ್ರೀ ಪಾರ್ವತಿ, ಶ್ರೀ ಲಕ್ಷ್ಮಿ  ಅಥವಾ ಶ್ರೀಮತಿ ಗೌರಿ, ಶ್ರೀಮತಿ ಪಾರ್ವತಿ,  ಶ್ರೀಮತಿ ಲಕ್ಷ್ಮಿ , ಹೀಗೆ  ಬಳಸಬೇಕು. ಪುರುಷರಿಗೆ  ಶ್ರೀಯುತ ರಾಮಚಂದ್ರ, ಶ್ರೀಯುತ ಗೌರೀಶ, ಶ್ರೀಯುತ ಗಣೇಶ ಅಥವಾ ಶ್ರೀಮಾನ್ ಗೌರೀಶ, ಶ್ರೀಮಾನ್ ರಾಮಚಂದ್ರ,  ಶ್ರೀಮಾನ್ ಗಣೇಶ ಎಂದು ಬಳಸಬೇಕು.
    ಆದ್ದರಿಂದ ಆಮಂತ್ರಣಾದಿಗಳಲ್ಲಿ ಶ್ರೀ/ಶ್ರೀಯುತ ಇಲ್ಲವೇ ಶ್ರೀಯುತ/ಶ್ರೀ, ಅಥವಾ  ಶ್ರೀ/ಶ್ರೀಮಾನ್, ಶ್ರೀಮಾನ್/ಶ್ರೀ ಹೀಗೆ ಬಳಸುವದು ಸರಿಯಾದ ಕ್ರಮ. ಅದೇ ರೀತಿ 'ಸರ್ವರಿಗೂ ಸುಸ್ವಾಗತ ' ಅನ್ನುವುದು ತಪ್ಪು . "ಸರ್ವರಿಗೂ ಸ್ವಾಗತ " ಸರಿಯಾದ ಕ್ರಮ. 'ಸುಸ್ವಾಗತ ' ಅನ್ನುವುದು ಅತಿಥೇಯರು ಬಳಸುವ ಪದವೇ ಅಲ್ಲ.  ಅದು ಅತಿಥಿಗಳಾಗಿ ಬರುವವರು ಹೇಳಬೇಕಾದ 'ಸ್ವಾಗತ ಕ್ಕೆ' ಉತ್ತರ 'ಸುಸ್ವಾಗತ ' ! 

October 15, 2025

ವೇದಗಳಲ್ಲಿ ವೀರಭದ್ರ

ವೇದ ವೇದಾಂತೋಕ್ತ ವೀರಭದ್ರ
ರುದ್ರಪುತ್ರನಾದ ವೀರಭದ್ರನು ವೇದವಾಹ್ಮಯದಲ್ಲಿ ಕಾಣಿಸಿಕೊಂಡವರಲ್ಲಿ ಒಬ್ಬನು. ತನ್ನ ತಂದೆಯ ಸಾಂಸ್ಕೃತಿಕ ಕ್ರಾಂತಿಯನ್ನು ಮುಂದುವರಿಸಿಕೊಂಡು ವಿಜಯ ದತ್ತ ಸಾಗಿದಾತ, ವಿಶ್ವಮಾನವ ನಿಲವಿಗೆ ನಿಲುಕದಾತ. ಮಾನವೀಯ ಮೌಲ್ಯವನ್ನು ಮನವರಿಕೆ ಮಾಡಿಕೊಂಡು ಅದನ್ನು ಪ್ರಯೋಗದಲ್ಲಿ ತಂದಾತ, ವಿಶ್ವವಿಶಾಲ ಹೃದಯಿ ಸಕಲ ಜೀವದಯಾಮಯಿ, ಶಿವ ಪಾರಮ್ಯಕ್ಕಾಗಿ ಹೋರಾಡಿದಾತ. ಆತನ ಜೀವನ ಶಿವತ್ವಕ್ಕಾಗಿ ಶಿವನಿಗಾಗಿ ಮೀಸಲಾಗಿತ್ತು.

“ಸ ವೀರೋ ದಕ್ಷ ಸಾದನೋ ವಿಯಸ್ತಂಭ ರೋದಸೀ"
                                                 -ಋಗ್ವೇದ

ದಕ್ಷನನ್ನು ಶಿಕ್ಷಿಸಿದ ಆ ವೀರಭದ್ರನು ಭೂಮ್ಯಾಕಾಶಗಳನ್ನು ಸ್ತಂಭಿಸಿದನು.

“ ನಮಃ ಶೂರಾಯ ಚಾವಭಿಂದತೇ ಚ ”
                                     -ಯಜುರ್ವೇದ

'ದಕ್ಷಯಜ್ಞದಲ್ಲಿ ಭಾಗವಹಿಸಿದವರ ಶಿರಚ್ಛೇದನ ಮಾಡಿದ ಶೂರನಾದ ವೀರೇಶನಿಗೆ ನಮಸ್ಕಾರ!' "ಅಪಾವೃಣೋ: ಶರಭಾಯ ಋಷಿಬಂಧವೇ" ಋಷಿಬಂಧುವಾದ ಶರಭಾವತಾರವನ್ನು ಓಲೈಸುವೆ ಎಂದು ಅದೇ ಋಗ್ವೇದ ತನ್ನ ಒಲವನ್ನು ತೋರಿದೆ. ವೀರಾವತಾರ ಶರಭಾವತಾರಗಳ ನಿರೂಪಣದೊಡನೆ 'ವಿಯಸ್ತಂಭ ರೋದಸೀ' ಎಂಬುದರಿಂದ ಆತನ ವಿಶ್ವ ವಿಕ್ರಮತ್ವವನ್ನೂ ವ್ಯಾಪ್ತಿತ್ವವನ್ನೂ ಉಗ್ಗಡಿಸಲಾಗಿದೆ.

ಇವಲ್ಲದೆ ವೀರೇಶನಿಗೆ ಮೀಸಲಾದ ' ಶರಭೋಪನಿಷತ್' ಒಂದಿದೆ. ಇದು ನೂರೆಂಟು ಉಪನಿಷತ್ತುಗಳಲ್ಲಿ ಐವತ್ತೆರಡನೆಯದು. ಇದರಲ್ಲಿ ವೀರೇಶನ ವೈಶಿಷ್ಟ್ಯ ವರ್ಣನೆ ಇಂತಿದೆ:

"ಅಥ ಹೈನಂ ಪೈಪ್ಪಲಾದೋ ಬ್ರಹ್ಮಾಣಮುವಾಚ ಭೋ ಭಗವನ್
ಬ್ರಹ್ಮವಿಷ್ಣುರುದ್ರಾಣಾಂ ಮಧ್ಯೆ ಕೋ ವಾ ಅಧಿಕತರೋ
ಧೈಯಃ ಸ್ಯಾತ್ತತ್ತ್ವಮೇವ ನೋ ಬ್ರೂಹೀತಿ |
ತನ್ನೈ ಸ ಹೋವಾಚ ಪಿತಾಮಹಶ್ಚ ಹೇ ಪೈಪ್ಪಲಾದ ಶೃಣು ವಾಕ್ಯಮೇತತ್ |"

ಪೈಪ್ಪಲಾದಮುನಿ ತಾನೊಮ್ಮೆ ಬ್ರಹ್ಮನನ್ನು ಬ್ರಹ್ಮ ವಿಷ್ಣು ರುದ್ರರ ಮಧ್ಯದಲ್ಲಿ ಮುಮ್ಮಿಗಿಲಾಗಿ ಧ್ಯೇಯನು ಯಾವನೆಂದು ಕೇಳುವನು. ಅದಕ್ಕೆ ಆತನಿಗೆ ಪಿತಾಮಹನು ಹೀಗೆ ಹೇಳುವನು :

ಸ ಏಕಃ ಶ್ರೇಷ್ಠಶ್ಚ ಸರ್ವಶಾಸ್ತಾ ಸ ಏವ ವರಿಷ್ಠಶ್ಚ |
ಯೋ ಘೋರಂ ವೇಷಮಾಸ್ಥಾಯ ಶರಭಾಖ್ಯಂ ಮಹೇಶ್ವರಃ |
ನೃಸಿಂಹಂ ಲೋಕಹಂತಾರಂ ಸಂಜಘಾನ ಮಹಾಬಲಃ || ೪ ||

ಹರಿಂ ಹರಂತಂ ಪಾದಾಭ್ಯಾಮನುಯಾಂತಿ ಸುರೇಶ್ವರಾಃ | ಮಾವಧೀಃ ಪುರುಷಂ ವಿಷ್ಣುಂ ವಿಕ್ರಮಸ್ವ ಮಹಾನಸಿ || ೫ ||

ಕೃಪಯಾ ಭಗವಾನ್ವಿಷ್ಣುಂ ವಿದದಾರ ನಖ್ಯೆಃ ಖರೈಃ |
ಚರ್ಮಾಂಬರೋ ಮಹಾವೀರೋ ವೀರಭದ್ರೋ ಬಭೂವ ಹ || ೬ ||

ಸ ಏಕೋ ರುದ್ರೋ ಧೈಯಃ ಸರ್ವೇಷಾಂ ಸರ್ವಸಿದ್ಧಯೇ |
ಯೋ ಬ್ರಹ್ಮಣಃ ಪಂಚವಕ್ರಹಂತಾ ತನ್ನೈ ರುದ್ರಾಯ ನಮೋ ಅಸ್ತು || ೭ ||

ಭಯಂಕರವಾದ ವೇಷವನ್ನು ತೊಟ್ಟು ನಿಂತ ಶರಭನೆಂಬ ಮಹಾಬಲವುಳ್ಳ ಮಹೇಶ್ವರನು ಲೋಕದ ಜನರನ್ನು ಕೊಂದು ತಿನ್ನುವ ನರಸಿಂಹನನ್ನು ಕೊಲ್ಲುವನು. ನರಸಿಂಹಾವತಾರ ನಾಲ್ಕನೆಯದು. ಮತ್ಸ, ಕೂರ್ಮ, ವರಾಹಾವತಾರಗಳು ಅದರ ಹಿಂದಿನವು. ವರಾಹ ಜನ್ಮದಿಂದ ನರಸಿಂಹ ಜನ್ಮಕ್ಕೆ ಬರುವಲ್ಲಿ ಪ್ರಾಕೃತಿಕ ಸರ್ಜನ ಸಹಜಕತೆಯಿದೆಯೇನೋ ? ಈ ದೃಷ್ಟಿಯಿಂದಲೂ ಕಾಲಮಾನ ಪುರಾತನವಾಗಿಯೇ ನಿಲ್ಲುತ್ತದೆ. ನರಸಿಂಹ ಲೋಕಹಂತಾರ ಎಂಬುದನ್ನು ನೆನೆಯಬೇಕು.  ರಕ್ತಮಾಂಸಗಳನ್ನು ತಿನ್ನುವ ಚಟವುಳ್ಳ ನೃಸಿಂಹನನ್ನು ಶರಭನು ಕೊಲ್ಲುವನು. ಮತ್ತು ಆತನ ತೊಗಲನ್ನೆ ಉಡುಗೆಯನ್ನಾಗಿಸಿಕೊಳ್ಳುವನು. ಆತನೇ ಮಹಾವೀರನಾದ ವೀರಭದ್ರನು. ಆತನೊಬ್ಬನೆ ಶ್ರೇಷ್ಠನು, ವರಿಷ್ಠನು; ಸರ್ವಶಾಸಕನು. ಆತನನ್ನು 'ಶರಭರುದ್ರ'ನೆಂದು ಹೇಳುವರು, ಆತನೇ ಸರ್ವಸಿದ್ದಿಗಾಗಿ ಸರ್ವರಿಗೆ ಧ್ಯೇಯನಾಗಿದ್ದಾನೆ. ಅಹಂಕಾರಿಯಾದ ಬ್ರಹ್ಮನ ಐಯ್ದನೆಯ ಮೊಗ(ತಲೆ)ವನ್ನು ಕತ್ತರಿಸಿದಾತನು ಆತನೆ! ಆತನಿಗೆ ನಮಸ್ಕಾರ ! 

ಕೃಪೆ: ಚಿಗುರಿಟ್ಟ ಚಿಂತನ 
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ

October 11, 2025

ಕೋಪ ಬರುತ್ತಿದೆ

*“ಕೋಪ ಬರುತ್ತಿದೆ”*
ಎಂದು ಮಗ ಪ್ರತಿ ಸಲ ಹೇಳಿದಾಗ…
ಗೋಡೆಗೆ ಮೊಳೆ ಹೊಡಿ ಎನ್ನುತ್ತಾನೆ ತಂದೆ! 

*ಯಾಕೆ ಗೊತ್ತಾ?*

*ಗೋಡೆಗೆ ಹೊಡೆದ ಮೊಳೆಗಳು…*
ಅದ್ಭುತವಾದ *ಜೀವನ ಸತ್ಯ.*

ಮಗನಿಗೆ…
ತಂದೆ ಕೆಲವು ಮೊಳೆಗಳನ್ನು ಕೊಟ್ಟು…

*ನಿನಗೆ ನಿತ್ಯ ಎಷ್ಟು ಮಂದಿಯ ಮೇಲೆ ಕೋಪ* ಬರುತ್ತದೋ *ಅಷ್ಟು ಮೊಳೆ* ಗಳನ್ನು ಗೋಡೆಗೆ ಹೊಡಿ ಎಂದು ಹೇಳುತ್ತಾನೆ..!

ಮೊದಲ ದಿನ 20, ಬಳಿಕ 15, ಮೂರನೇ ದಿನ 10 ಹೀಗೆ.. 
ತನ್ನಲ್ಲಿ ಇದ್ದ ಮೊಳೆಗಳನ್ನೆಲ್ಲಾ ಗೋಡೆಗೆ ಹೊಡೆದುಬಿಟ್ಟ ಮಗ.

ಮೊಳೆಗಳು ಮುಗಿದ ಕೂಡಲೆ…

ಮಗ ತಂದೆ ಬಳಿ ಬಂದು, *"ಅಪ್ಪಾ ನೀವು ಕೊಟ್ಟ ಮೊಳೆಗಳೆಲ್ಲಾ ಮುಗಿದುಹೋದವು"* ಎಂದ.

*"ಓ… ಅಂದರೆ ನಿನಗೆ ತುಂಬಾ ಮಂದಿ ಮೇಲೆ ಕೋಪ ಬಂದಂತಿದೆ.."*
ಎನ್ನುತ್ತಾರೆ ತಂದೆ..! 
ಮತ್ತು... *"ಆ…ಆದರೆ… ನಾಳೆಯಿಂದ ನಿತ್ಯ, ಗೋಡೆಗೆ ನೀನು ಹೊಡೆದ ಕೆಲವು ಮೊಳೆಗಳನ್ನು ತೆಗೆದುಬಿಡು"* ಎಂದು ಮಗನಿಗೆ ತಂದೆ ಹೇಳುತ್ತಾನೆ…

ತಂದೆ ಹೇಳಿದಂತೆ…
ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆಯುತ್ತಾನೆ ಮಗ.. 
ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟವೂ ಪಟ್ಟ. ಅದನ್ನು ನೋಡಿ ತಂದೆ ಕೇಳಿದ, *"ಏನಾಯಿತು?"* ಎಂದು…

*"ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದುಬಿಟ್ಟೆ ಅಪ್ಪ"* ಎಂದ ಮಗ.

*" ಸರಿ, ಹಾಗಿದ್ದರೆ ಗೋಡೆ ಹೇಗಿದೆ ಈಗ? ಮೊಳೆಗಳೇನೋ ತೆಗೆದುಬಿಟ್ಟೆಯಲ್ಲ.."*, ಎಂದ ತಂದೆ.

*"ಹಾ, ತೆಗೆದೆ. ಆದರೆ ಇದರಿಂದ ಗೋಡೆಗೆ ಆದ ರಂಧ್ರಗಳು ಮಾತ್ರ ಹಾಗೆಯೇ ಇವೆ"* ಎಂದ ಮಗ.

ಆಗ ತಂದೆ… ಮಗನಿಗೆ ಹೇಳಿದ.., *“ನೋಡಿದೆಯಾ.. ಮೊಳೆಗಳನ್ನು ಹೊಡೆಯುವಾಗ ಸುಲಭವಾಗಿ ಹೊಡೆದೆ..! ತೆಗೆಯುವಾಗ ತುಂಬಾ ಕಷ್ಟಪಟ್ಟೆ. ಮೊಳೆಗಳನ್ನು ತೆಗೆದ ರಂಧ್ರಗಳೂ ಹಾಗೆಯೇ ಇವೆ.. ಅಂದರೆ ನಮಗೆ ತುಂಬಾ ಮಂದಿ ಮೇಲೆ ಕೋಪ ಬರುತ್ತದೆ, ಆ ಕೋಪದಲ್ಲಿ ಅವರ ಮನಸ್ಸಿಗೆ ಘಾಸಿ ಮಾಡುತ್ತೇವೆ.. (ಅಂದರೆ ಮೊಳೆ ಹೊಡೆಯುತ್ತೇವೆ), ಬಳಿಕ sorry ಹೇಳುತ್ತೇವೆ (ಅಂದರೆ ಹೊಡೆದ ಮೊಳೆಗಳನ್ನು ತೆಗೆಯುತ್ತೇವೆ), ಆದರೆ  sorry ಹೇಳಿಬಿಟ್ಟರೆ ಅವರ ಮನಸ್ಸಿಗೆ ಆದ ಗಾಯ (ಅಂದರೆ ರಂಧ್ರಗಳನ್ನು) ಮಾತ್ರ ಮುಚ್ಚಲು ಸಾಧ್ಯವಿಲ್ಲ. ಹಾಗಾಗಿಯೇ ಮಾತುಗಳು-ಬುಲೆಟ್‌ನಂತಹವು, ಅಳೆದು ತೂಗಿ ಮಾತನಾಡಬೇಕು, ಇತರರಿಗೆ ನೋವಾಗದಂತೆ ಮಾತನಾಡಬೇಕು –"* ಎಂದ ತಂದೆ.

 *ಪ್ರೀತಿ, ಸೌಜನ್ಯ, ಅಕ್ಕರೆ ತುಂಬಿ ಸಕ್ಕರೆ ಆಗಿರಲಿ ಮಾತು*

October 4, 2025

ನಾಗಕುಲ ರಕ್ಷಿಸಿದ ಮಾನಸಾದೇವಿ

ಶಿವ ಪಾರ್ವತಿಗೆ 3 ಜನ ಹೆಣ್ಣು ಮಕ್ಕಳು..

1 : ಮೊದಲ ಮಗಳು  "ಅಶೋಕ ಸುಂದರಿ"
2 : ಎರೆಡನೆಯವಳು  "ಜ್ಯೋತಿ"
3 :ಮೂರನೇ ಮಗಳು "ಮಾನಸ" 

ಇದರಲ್ಲಿ ಮಾನಸದೇವಿ ಪಾತ್ರವು ತುಂಬಾ ಮುಖ್ಯವಾದದ್ದು ಹಾಗೂ ಮನಸದೇವಿಯು ತುಂಬಾ ಕಷ್ಟವನ್ನು ಪಡಬೇಕಾದ ಸಂಧರ್ಭ ಕೂಡ ಇತ್ತು..

ಮಾನಸ ದೇವಿಯು 2 ಉದ್ದೇಶವನ್ನು ಪೂರ್ಣಗೊಳಿಸಲು ಜನ್ಮ ತಾಳಿದವಳು 

1) ಒಂದನೇಯ ಉದ್ದೇಶ..
 ಸಮುದ್ರ ಮಂಥನದ ಹಾಲಹಲ ವಿಷವನ್ನು ಶಿವ ಸೇವಿಸಿದಾಗ ಆ ವಿಷದ ಪ್ರಭಾವವನ್ನು ಕಡಿಮೆ ಮಾಡಲು..

2) ಎರೆಡನೆ ಉದ್ದೇಶ.. 
ದ್ವಾಪರಯುಗದ ಮಹಾಭಾರತದ ಜನಮೇಜಯನ ನಾಗಬಲಿ ಯಜ್ಞವನ್ನು ನಿಲ್ಲಿಸಿ. ಇಡಿ ನಾಗಲೋಕದ ನಾಗಗಳನ್ನು ರಕ್ಷಣೆ ಮಾಡುವ ಉದ್ದೇಶ.

ಮಾನಸದೇವಿಯ ಜನ್ಮದ ಬಗ್ಗೆ ತಿಳಿಯೋಣ ಈಗ

ಸಮುದ್ರ ಮಂಥನದಲ್ಲಿ ಬಂದಂತಹ ಭಯಂಕರ ಹಾಲಹಲ ವಿಷವು ಸ್ರಷ್ಟಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಆ ವಿಷವನ್ನು ಶಿವನು ತನ್ನೊಳೋಗೆ ಸೇವಿಸುತ್ತಾನೆ..
ಪಾರ್ವತಿ ದೇವಿಯು ಆ ವಿಷವು ಶಿವನ ಗಂಟಲಿನಲ್ಲಿ ನಿಲ್ಲುವ ಹಾಗೆ ಮಾಡುತ್ತಾಳೆ. ಆದರೂ ಕೂಡ ಆ ವಿಷವು ಶಿವನ ಮೇಲೆ ತುಂಬಾ ನೋವಿನ ಪರಿಣಾಮ ಬೀರುತ್ತಾ ಇರುತ್ತದೆ..

 "ಕಶ್ಯಪ ಋಷಿ"
ಇದನ್ನು ಅರ್ಥ ಮಾಡಿ ಕೊಂಡಂತ " ಕಶ್ಯಪ ಋಷಿ "
ಒಂದು ಯಜ್ಞವನ್ನು ಮಾಡುತ್ತಾರೆ. ಶಿವನ ಕಷ್ಟ ದೂರ ಮಾಡಬೇಕು ಎಂದು ಯಜ್ಞವನ್ನು ಮಾಡುತ್ತಾ ಮನಸ್ಸಿನಲ್ಲಿ ಮಾನಸಿಕ ಕಲ್ಪನೆಯನ್ನು ಮಾಡುತ್ತಾರೆ. ಕಶ್ಯಪ ಋಷಿಯ ಮಾನಸಿಕ ಕಲ್ಪನೆಯಿಂದ ಒಂದು ಸುಂದರವಾದ ಯುವತಿಯ ವಿಗ್ರಹವು ರಚನೆ ಆಗುತ್ತದೆ.

ಶಿವನ ತೇಜಸ್ಸಿನಿಂದ ಸುಬ್ರಹ್ಮಣ್ಯ ಸ್ವಾಮಿಯ ಜನ್ಮವಾಗುವ ಸಮಯದಲ್ಲಿ ಅದರ ಒಂದು ಭಾಗ ತೇಜಸ್ಸು ಹೋಗಿ..
ಕಶ್ಯಪ ಋಷಿಯ ಮಾನಸಿಕ ಕಲ್ಪನೆಯಿಂದ ರಚನೆಯಾದ ಆ ವಿಗ್ರಹದ ಒಳಗೆ ಆ ತೇಜಸ್ಸು ಹೋಗಿ ಸೇರಿಕೊಂಡು ಆ ವಿಗ್ರಹಕ್ಕೆ ಜೀವ ಬರುತ್ತದೆ..

ನಂತರ ಆ ಹುಡುಗಿಯು ಕಶ್ಯಪ ಋಷಿಗೆ ನಮಸ್ಕರಿಸಿ ಋಷಿವರ್ಯ ನಾನು ಯಾರು ನನ್ನ ಜನ್ಮ ಯಾವ ಉದ್ದೇಶಕ್ಕಾಗಿ ಆಗಿದೆ ತಿಳಿಸಿ ಎನ್ನುತ್ತಾಳೆ..

ದೇವಿ ನಿಮ್ಮ ಜನ್ಮವು ಶಿವನ ಕೃಪೆಯಿಂದ ಆಗಿದೆ. ಶಿವನ ತೇಜಸ್ಸಿನಿಂದ ನಿಮ್ಮ ಜನ್ಮವಾಗಿದೆ ಹಾಗಾಗಿ ನೀವು ಶಿವನ ಪುತ್ರಿ..
ಹಾಗೆ ಶಿವನ ಕೃಪೆಯಿಂದ ನೀವು ನನ್ನ ಮಾನಸಿಕ ಕಲ್ಪನೆಯ ವಿಗ್ರಹ ರೂಪದಲ್ಲಿ ರಚನೆಯಾದ ಕಾರಣ ನಿಮ್ಮ ಹೆಸರು
 " ಮಾನಸ " ಎಂದು ಕಶ್ಯಪ ಋಷಿ ಹೇಳುತ್ತಾರೆ. 

ಋಷಿವರ್ಯ ನೀವು ನನ್ನ ಹೆಸರನ್ನು ನೀಡಿದಕ್ಕೆ ತುಂಬಾ ಧನ್ಯವಾದಗಳು ಹಾಗೆ ನನ್ನ ಜನ್ಮದ ಉದ್ದೇಶವನ್ನು ಕೂಡ ತಿಳಿಸಿ ನನ್ನನ್ನು ಮಾರ್ಗದರ್ಶನ ಮಾಡಿ ಎಂದು ಮಾನಸದೇವಿಯು ಕೇಳಿ ಕೊಳ್ಳುತ್ತಾಳೆ..

ದೇವಿ ಮಾನಸ ನಿಮ್ಮ ಜೀವನದ ಉದ್ದೇಶ ಸಮಯ ಬಂದಾಗ ನಿಮಗೆ ತಿಳಿಯುತ್ತದೆ.. ತಪಸ್ಸು ನಿಮ್ಮನ್ನು ನಿಮ್ಮ ಜೀವನದ ಉದ್ದೇಶದ ಕಡೆಗೆ ಕರೆದುಕೊಂಡು ಹೋಗುತ್ತದೆ ತಪಸ್ಸನ್ನು ಆಚರಿಸಿ ಎಂದು ಋಷಿ ಕಶ್ಯಪ ಹೇಳುತ್ತಾರೆ..

ಋಷಿ ಕಶ್ಯಪರು ಹೇಳಿದ ಹಾಗೆ ಮಾನಸ ದೇವಿಯು ತಪಸ್ಸು ಮಾಡುತ್ತಾಳೆ ಆ ತಪಸ್ಸಿನ ಫಲವಾಗಿ ಶಿವನು ಪ್ರತ್ಯಕ್ಷವಾಗಿ ಮಾನಸದೇವಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಕೈಲಾಸದಲ್ಲಿ ಮನಸದೇವಿಯು ತನ್ನ ತಾಯಿಯಾದ ಪಾರ್ವತಿಯನ್ನು ಭೇಟಿ ಆಗಿ ಸಂತೋಷದಿಂದ ಇರುತ್ತಾಳೆ 

ನಂತರ ಸಮುದ್ರ ಮಂಥನದ ಸಮಯದಲ್ಲಿ ಅದರಿಂದ ಬಂದಂತ ಹಾಲಹಲವಿಷವನ್ನು ಶಿವನು ಸೇವಿಸಿದಾಗ ಆ ವಿಷವು ಶಿವನ ಮೇಲೆ ಘೋರವಾಗಿ ಕೆಟ್ಟ ಪರಿಣಾಮ ಬೀರುತ್ತಾ ಇರುತ್ತದೆ..

ಅಮ್ಮ..ಏನಿದು ವಾತಾವರಣದಲ್ಲಿ ಯಾಕಿಷ್ಟು ಬದಲಾವಣೆ ಆಗುತ್ತಿದೆ ಎಂದು ಮಾನಸದೇವಿ ಪಾರ್ವತಿಯ ಬಳಿ ಕೇಳುತ್ತಾಳೆ..
ಪುತ್ರಿ.. ನಿನ್ನ ತಂದೆ ಮಹಾದೇವನ ಗಂಟಲಿನಲ್ಲಿ ಇರುವ ಹಾಲಹಲ ವಿಷವು ಅವರಿಗೆ ತುಂಬಾ ಕಷ್ಟವನ್ನು ಕೊಡುತ್ತಿದೆ ಹಾಗಾಗಿ ವಾತಾವರಣದಲ್ಲಿಯೂ ಈ ರೀತಿ ಬದಲಾವಣೆಗಳು ಆಗುತ್ತಿವೆ ಎಂದು ಪಾರ್ವತಿ ದೇವಿ ಹೇಳುತ್ತಾಳೆ..

 ( ಮಾನಸದೇವಿಯು ಶಿವನ ವಿಷದ ಪ್ರಭಾವವನ್ನು ಕಡಿಮೆ ಮಾಡುವ ಸಂಧರ್ಭ.)

ಆಗ ಮಾನಸದೇವಿಗೆ ತನ್ನ ಜೀವನದ ಉದ್ದೇಶವು ಅರ್ಥ ವಾಗುತ್ತದೆ.. ಏಕೆಂದರೆ ಅವಳು ಋಷಿ ಕಶ್ಯಪರ ಹತ್ತಿರ ತನ್ನ ಜೀವನದ ಉದ್ದೇಶ ಕೇಳಿದಾಗ..
  ಆಗ ಅವರು " ಜಗತ್ತಿನ ಕಷ್ಟ ಹರಿಸುವವನ ಕಷ್ಟವನ್ನು ನೀನು ಹರಿಸಬೇಕು ಎಂದು ಹೇಳಿದ್ದರು "..
ಹಾಗಾಗಿ ಮಾನಸದೇವಿಗೆ ಅರ್ಥ ವಾಗುತ್ತದೆ. ಈಗ ನಾನೆ ಶಿವನ ಕಷ್ಟವನ್ನು ದೂರ ಮಾಡಬೇಕು ನನ್ನ ಜೀವನದ ಉದ್ದೇಶ ಪೂರ್ಣ ಗೊಳಿಸಬೇಕು ಎಂದು.

ಮಾನಸದೇವಿಯು ಕೂಡಲೇ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮಂಡಿಯೂರಿ ಕುಳಿತುಕೊಂಡು ಶಿವನ ಗಂಟಲಿನಲ್ಲಿ ಶಿವನಿಗೆ ನೋವನ್ನು ಕೊಡುತ್ತಿರುವ ಹಾಲಹಲದ ವಿಷದ ಪ್ರಭಾವವನ್ನು ತನ್ನೊಳೋಗೆ ಹೀರಿಕೊಳ್ಳುತ್ತಾಳೆ. ಶಿವನ ಹಾಲಹಲದ ವಿಷದ ಪ್ರಭಾವವನ್ನು ಕೇವಲ ಅವರ ಮಗಳಾದ ಮಾನಸ ದೇವಿಗೆ ಮಾತ್ರ ಸಹಿಸಿಕೊಳ್ಳಲು ಸಾಧ್ಯವಾಗಿತ್ತು ಹಾಗಾಗಿ ಅವಳು ಆ ವಿಷದ ಪ್ರಭಾವವೆಲ್ಲ ತನ್ನೊಳೋಗೆ ತೆಗೆದುಕೊಳ್ಳುತ್ತಾಳೆ.

ತಾಯಿಯರ ಕಷ್ಟವನ್ನು ದೂರ ಮಾಡುವ ಸಾಮರ್ಥ್ಯ ಕೇವಲ ಸಂತಾನಕ್ಕೆ ಮಾತ್ರ ಇರುತ್ತದೆ ಎಂದು ಶಿವ ಹಾಗೂ ಪಾರ್ವತಿ ಮಾನಸದೇವಿಯನ್ನು ತುಂಬಾ ಹೆಮ್ಮೆಯಿಂದ ಹೋಗುಳುತ್ತಾರೆ

ಬ್ರಹ್ಮದೇವ ಹಾಗೂ ವಿಷ್ಣು ದೇವ
ಮಾನಸದೇವಿಗೆ  " ವಿಷಹರಿ "  ಎಂಬ ಹೆಸರನ್ನು ಯಾಕೆ ಕೊಟ್ಟರು ಅಂತ ನೋಡಿ..

ದೇವಿ ಮಾನಸ..ಹಾಲಹಲ ವಿಷವನ್ನು ಕೇವಲ ಶಿವನು ಮಾತ್ರ ಸೇವಿಸಬಲ್ಲರು ಅಂತಹ ವಿಷವನ್ನು ನೀವು ಸೇವಿಸಿ ಶಿವನ ಕಷ್ಟವನ್ನು ದೂರ ಮಾಡಿದ್ದೀರಾ. ಹಾಗಾಗಿ ಇನ್ನುಮುಂದೆ ಇಡಿ ಜಗತ್ತು ನಿಮ್ಮನ್ನು  "ವಿಷಹರಿ" ಎಂದು ಗುರುತಿಸುತ್ತಾರೆ ಎಂದು ಬ್ರಹ್ಮದೇವನು ಮಾನಸದೇವಿಗೆ "ವಿಷಹರಿ" ಎಂಬ ಹೆಸರನ್ನು ಕೊಟ್ಟು ವರದಾನ ಕೊಡುತ್ತಾರೆ..

ದೇವಿ ಮಾನಸ..ಇನ್ನುಮುಂದೆ ಭಕ್ತರ ಮೇಲೆ ನಿಮ್ಮ ದ್ರಷ್ಟಿ ಬಿದ್ದರೆ ಆ ಭಕ್ತರು ಎಲ್ಲ ರೀತಿಯ ಭಯಂಕರ ವಿಷದಿಂದ ಮುಕ್ತಾರಾಗುತ್ತಾರೆ ಎಂದು " ವಿಷ್ಣುದೇವ" ಕೂಡ ಮಾನಸದೇವಿಗೆ ವರವನ್ನು ಕೊಡುತ್ತಾನೆ.. 

ಈ ರೀತಿ ಮಾನಸದೇವಿಯು ಶಿವನನ್ನು ಹಾಲಹಲ ವಿಷದ ಪ್ರಭಾವದಿಂದ ಮುಕ್ತಗೊಳಿಸಿ.. ತನ್ನ ಜೀವನದ ಮೊದಲ ಉದ್ದೇಶವನ್ನು ಪೂರ್ಣಗೊಳಿಸುತ್ತಾಳೆ.

ಈಗ ಮಾನಸದೇವಿ ಜೀವನದ 2 ನೇಯ ಉದ್ದೇಶ ಬಗ್ಗೆ ತಿಳಿಯೋಣ ಬನ್ನಿ..

ನಂತರ ಶಿವನು ಮಾನಸದೇವಿಯ ಹತ್ತಿರ ಮಗಳೇ ನೀನು ಈಗ ನಿನ್ನ ಜೀವನದ ಇನ್ನೊಂದು ಮಹಾನ್ ಉದ್ದೇಶವನ್ನು ಪೂರ್ಣಗೊಳಿಸಬೇಕಾಗಿದೆ..ಎಂದು ಶಿವನು ಹೇಳುತ್ತಾನೆ..

ಸರಿ ಪಿತಾಶ್ರೀ ಈಗ ನಾನು ಏನು ಮಾಡಬೇಕು ಮಾರ್ಗದರ್ಶನ ಮಾಡಿ ಎಂದು ಮಾನಸದೇವಿ ಹೇಳುತ್ತಾಳೆ. 

ಮಗಳೇ ಮಾನಸ ನಾನು ನಿನಗೆ ಕೃಷ್ಣನ ಮಂತ್ರ ಹೇಳುತ್ತೇನೆ ನೀನು ಪುಷ್ಕರಕ್ಕೆ ಹೋಗಿ ಈ ಕೃಷ್ಣ ಮಂತ್ರ ಹೇಳುತ್ತಾ ತಪಸ್ಸು ಮಾಡು. ನಿನ್ನ ಜೀವನದ 2 ನೇಯ ಉದ್ದೇಶ ನಿನಗೆ ತಿಳಿಯುತ್ತದೆ ಎಂದು ಶಿವನು ಹೇಳುತ್ತಾನೆ. 

ಮಾನಸದೇವಿಯು ಸ್ವಲ್ಪ ಕೂಡ ತಡ ಮಾಡದೆ ಪುಷ್ಕರಕ್ಕೆ ಹೋಗಿ ಕೃಷ್ಣನ ವಿಗ್ರಹಕ್ಕೆ ಹೂವನ್ನು ಅರ್ಪಿಸಿ ಕೃಷ್ಣನ ಮಂತ್ರ ಹೇಳುತ್ತಾ ತಪಸ್ಸು ಮಾಡುತ್ತಾಳೆ.

ಈಕಡೆ ಕೈಲಾಸದಲ್ಲಿ ಶಿವ ಪಾರ್ವತಿ ಇಬ್ಬರು ಮಾನಸದೇವಿಯ ಮದುವೆಯ ಬಗ್ಗೆ ಮಾತಾಡಿ ಕೊಳ್ಳುತ್ತಾರೆ. ನಮ್ಮ ಮಗಳ ವಿವಾಹಕ್ಕೆ ವರ ಯಾರು ಎಂದು ಪಾರ್ವತಿ ಕೇಳುತ್ತಾಳೆ ಆಗ ಶಿವನು ಋಷಿ "ಜರಾತ್ಕಾರುವಿನ" ಜೊತೆ ನಮ್ಮ ಮಗಳ ಜೊತೆ ಆಗುತ್ತದೆ ಪಾರ್ವತಿ..
ಮಾನಸ ಋಷಿ ಜರತ್ಕಾರುವನ್ನು ಮದುವೆ ಆದಮೇಲೆಯೆ ನಾಗಕುಲದ ರಕ್ಷಣೆ ಆಗುತ್ತದೆ ಎಂದು ಶಿವ ಹೇಳುತ್ತಾನೆ. ಮತ್ತೇಕೆ ತಡ ಸ್ವಾಮಿ. ಆದಷ್ಟು ಬೇಗ ಇಬ್ಬರಿಗೂ ಮದುವೆ ಮಾಡಿಸೋಣ ಎಂದು ಪಾರ್ವತಿ ಹೇಳುತ್ತಾಳೆ.

ಶಿವನು ಕೂಡಲೇ ತನ್ನ ಕೊರಳಿನಲ್ಲಿ ಇರುವ ನಾಗಗಳ ರಾಜನಾದ ವಾಸುಕಿ ನಾಗನ ಹತ್ತಿರ ನೀನು ಈಗ ಮಾನಸದೇವಿಗೆ ಅಣ್ಣನ ಸ್ಥಾನದಲ್ಲಿ ನಿಂತುಕೊಂಡು ಋಷಿ ಜಾರತ್ಕಾರು ಬಳಿ ಹೋಗಿ ಮದುವೆ ಪ್ರಸ್ತಾಪವನ್ನು ತಿಳಿಸಬೇಕು ಎಂದು ಹೇಳುತ್ತಾನೆ..

ನಾಗಗಳ ರಾಜನದ ವಾಸುಕಿ  ಶಿವನ ಗಣಗಳ ಜೊತೆಗೆ ಋಷಿ ಜರಾತ್ಕಾರು ಆಶ್ರಮಕ್ಕೆ ಹೋಗುತ್ತಾರೆ..
ಋಷಿ ಜರತ್ಕಾರು ನಿಮಗೆ ಪ್ರಣಾಮಗಳು. ನಾನು ಇಲ್ಲಿಗೆ ನನ್ನ ತಂಗಿ ಮಾನಸಳ ಮದುವೆ ಪ್ರಸ್ತಾಪವನ್ನು ತಂದಿದ್ದೇನೆ.. ನನ್ನ ತಂಗಿ ಮಾನಸ ಮಹಾನ್ ತಪಸ್ವಿನೀ ಹಾಗು ಶಿವ ಪಾರ್ವತಿಯ ಮಗಳು ನೀವು ಈಗ ದಯಮಾಡಿ ಈ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿ ನನ್ನ ತಂಗಿ ಮಾನಸಳನ್ನು ಮದುವೆ ಆಗಬೇಕಾಗಿದೆ ವಿನಂತಿಸುತ್ತೇವೆ ಎಂದು ವಾಸುಕಿ ನಾಗ ಕೇಳುತ್ತಾನೆ.

ನಾಗರಾಜ ವಾಸುಕಿ ದಯಮಾಡಿ ಕ್ಷಮಿಸಿ, ನಾನು ಶಿವನ ಭಕ್ತ ಕೇವಲ ಶಿವನ ಪೂಜೆ ಮಾಡುತ್ತೇನೆ ಹಾಗೂ ಸಂಸಾರ ಜೀವನದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ ಹಾಗಾಗಿ ನಾನು ಯಾರನ್ನು ಮದುವೆ ಆಗಲಾರೆ ಎಂದು ಋಷಿ ಜರತ್ಕಾರು ಹೇಳುತ್ತಾನೆ..
ಆದರೂ ಒತ್ತಾಯ ಮಾಡಿದ ಕಾರಣ ಮದುವೆಗೆ ಒಪ್ಪುತ್ತಾನೆ ಆದರೆ 3 ಷರತ್ತು ಹಾಕುತ್ತಾನೆ.
ಷರತ್ತು ಒಂದು : ನಾನು ಮದುವೆ ಆಗುವ ಹುಡುಗಿಯ ಹೆಸರು ನನ್ನ ಹೆಸರೇ ಆಗಿರಬೇಕು ಅಂದರೆ ಜರಾತ್ಕರು ಅಂತಾನೆ ಆಗಿರಬೇಕು.

ಷರತ್ತು ಎರೆಡು : ನಾನು ಮದುವೆ ಆದಮೇಲೆ ನಾನು ನನ್ನ ಪತಿಧರ್ಮವನ್ನು ನಿಭಾಯಿಸುವಿದಿಲ್ಲ ಪತ್ನಿ ಅಂತ ಅವಳನ್ನು ಪೋಷಣೆ ಮಾಡುವುದಿಲ್ಲ..

ಷರತ್ತು ಮೂರು : ನಾನು ಮದುವೆ ಆದಮೇಲೆ ನನ್ನ ಪತ್ನಿ ಆದವಳು ನನ್ನ ಎಲ್ಲ ಕೆಲಸಗಳನ್ನು ಮಾಡಬೇಕು ಒಂದು ಚೂರು ತಪ್ಪು ಆದರೂ ಕೂಡ ನಾನು ಅವಳನ್ನು ಬಿಟ್ಟು ಬಿಡುತ್ತೇನೆ ಎಂದು ಋಷಿ ಜರತ್ಕಾರು ಹೇಳುತ್ತಾನೆ..

ಇಂತಹ ಷರತ್ತುಗಳನ್ನು ಕೇಳಿ ನಾಗಗಳ ರಾಜನಾದ ವಾಸುಕಿಗೆ ತುಂಬಾ ದುಃಖ ಆಗುತ್ತದೆ. ಈ ಎಲ್ಲ ವಿಚಾರವನ್ನು ಅವನು ಮಾನಸದೇವಿಯ ಬಳಿ ಹೇಳುತ್ತಾನೆ..

ಆಗ ಮಾನಸದೇವಿಗೂ ತುಂಬಾ ಆಘಾತವಾಗುತ್ತದೆ. ಯಾವ ಗಂಡನಾದವನು ಕೂಡ ಇಂತಹ ಷರತ್ತುಗಳನ್ನು ಹಾಕುವುದಿಲ್ಲ.. ಇಂತಹ ಷರತ್ತುಗಳನ್ನು ಹಾಕುವ ಗಂಡನನ್ನು ಕೂಡ ಯಾವುದೇ ಸ್ತ್ರೀ ಮದುವೆ ಆಗುವುದಿಲ್ಲ. ನಾನು ಕೂಡ ಈ ಮದುವೆ ಆಗುವುದಿಲ್ಲ ಎಂದು ಮಾನಸದೇವಿ ಹೇಳುತ್ತಾಳೆ..

ಆಗ ಅಲ್ಲಿಗೆ ಎಲ್ಲ ದೇವತೆಗಳು ಹಾಗೂ ಋಷಿ ಕಶ್ಯಪ ಬರುತ್ತಾರೆ.. ದೇವಿ ಮಾನಸ ದಯಮಾಡಿ ನೀವು ಈ ಮದುವೆ ಆಗಲೇ ಬೇಕು. ಜನಮೇಜಯ ರಾಜನು ಇಡಿ ನಾಗಲೋಕದ ನಾಗಗಳನ್ನು ಬಲಿ ಕೊಡಲು ಯಜ್ಞವನ್ನು ಮಾಡಲು ನಿರ್ಧಾರ ಮಾಡಿದ್ದಾನೆ.. ಒಂದು ವೇಳೆ ನೀವು ಜರತ್ಕಾರುವನ್ನು ಮದುವೆ ಆಗದೆ ಹೋದರೆ.. ಎಲ್ಲ ನಾಗವಂಶವು ಜನಮೇಜಯನ ಯಜ್ಞ ಕುಂಡದ ಒಳಗೆ ಬಿದ್ದು ಸುಟ್ಟು ಭಸ್ಮವಾಗಿ  ಇಡಿ ನಾಗಕುಲ ನಾಶವಾಗುತ್ತದೆ ಎಂದು ಋಷಿ ಕಶ್ಯಪ ಹೇಳುತ್ತಾರೆ.

ಆಧಿಶೇಷ ನಾಗನು ಕೂಡ ಅಲ್ಲಿಗೆ ಬಂದು ಬೇಡಿಕೊಳ್ಳುತ್ತಾನೆ. ದೇವಿ ಮಾನಸ ನೀವು ಮದುವೆಗೆ ಒಪ್ಪದೇ ಇದ್ದರೆ ಶಿವನ ಕೊರಳಲ್ಲಿ ಇರುವ ವಾಸುಕಿಯು ಇರುವುದಿಲ್ಲ ಹಾಗೆ ವಿಷ್ಣುವಿನ ಹಾಸಿಗೆಯಾಗಿ ನಾನು ಕೂಡ ಇರುವುದಿಲ್ಲ ಒಂದೇ ಒಂದು ನಾಗಗಳು ಉಳಿಯುವುದಿಲ್ಲ ದಯಮಾಡಿ ಮದುವೆಗೆ ಒಪ್ಪಿಕೊಳ್ಳಿ ಎಂದು ಎಲ್ಲರೂ ಬೇಡಿಕೊಳ್ಳುತ್ತಾರೆ..

ಚಿಂತಿಸಬೇಡಿ ನಾಗಗಳು ನಾಶವಾಗಿ ನಾಗಲೋಕ ಅಂತ್ಯವಾಗಲು ನಾನು ಬಿಡುವುದಿಲ್ಲ. ಋಷಿ ಕಶ್ಯಪರೇ ನಿಮ್ಮ ಮಾನಸಿಕ ಕಲ್ಪನೆಯಿಂದ ನಾನು ವಿಗ್ರಹ ರೂಪದಲ್ಲಿ ಜನಿಸಿದ್ದೆ ಹಾಗಾಗಿ.. ನೀವು ಮತ್ತು ನಿಮ್ಮ ಪತ್ನಿಯಾದ ದೇವಿ ಕದ್ರು ನೀವಿಬ್ಬರು ನನಗೆ ತಂದೆ ತಾಯಿಯ ಸಮಾನ. ಹಾಗಾಗಿ ನೀವು ಮತ್ತು ಮಾತೆ ಕದ್ರು ಸೇರಿ ನನ್ನ ಕನ್ಯಾಧಾನ ಮಾಡಿಸಿ ಮದುವೆ ಮಾಡಿ ಎಂದು ಮಾನಸದೇವಿ ಹೇಳುತ್ತಾಳೆ. ನಂತರ ಅದೇ ರೀತಿ ಮಾನಸದೇವಿ ಹಾಗೂ ಋಷಿ ಜರತ್ಕಾರುವಿನ ಮದುವೆ ಅದ್ಧುರಿಯಾಗಿ ನಡಿಯುತ್ತದೆ..

ಮದುವೆ ಆದಮೇಲೆ ಮಾನಸದೇವಿ ತುಂಬಾ ಕಷ್ಟ ಪಡಬೇಕಾಗುತ್ತದೆ.. ಏಕೆಂದರೆ ಅವಳ ಗಂಡ ಜರತ್ಕಾರು ಬೇಕು ಅಂತಾನೆ ಕೆಲಸಗಳನ್ನು ಕೊಡುತ್ತಿದ್ದ ಆದರೆ ಅವನು ಅವಳಿಗೆ ನೋವು ಆಗಬೇಕು ಎಂದು ಹಾಗೆ ಮಾಡುತ್ತ ಇರಲಿಲ್ಲ ಬದಲಿಗೆ ಮಾನಸ ಏನಾದರೂ ಕೆಲಸದಲ್ಲಿ ಚಿಕ್ಕ ತಪ್ಪು ಮಾಡಲಿ ಅದೇ ನೆಪ ಇಟ್ಟುಕೊಂಡು ಸಂಸಾರ ಜೀವನ ಬಿಟ್ಟು ಹೋಗಬಹುದು ಎಂದು ಜರತ್ಕಾರುವಿನ ಯೋಚನೆ ಆಗಿತ್ತು..

ಆದರೆ ಮಾನಸದೇವಿ ಒಂದೇ ಒಂದು ತಪ್ಪು ಕೂಡ ಮಾಡುತ್ತಿರಲಿಲ್ಲ.. ಗಂಡ ಹೇಳಿದ ಎಲ್ಲ ಕೆಲಸವನ್ನು ಮಾಡುತ್ತಿದ್ದಳು.. ಜರತ್ಕಾರುವಿಗೆ ಮಾನಸದೇವಿಯ ಒಂದೇ ಒಂದು ತಪ್ಪು ಕೂಡ ಸಿಗುತ್ತಿರಲಿಲ್ಲ ಅಷ್ಟರ ಮಟ್ಟಿಗೆ ಮಾನಸದೇವಿಯು ಜರತ್ಕಾರುವಿನ ಸೇವೆ ಮಾಡುತ್ತಿದ್ದಳು 

ಹೀಗೆ ಸ್ವಲ್ಪ ದಿನಗಳು ಆದ ನಂತರ 
ಒಂದು ದಿನ ಜರಾತ್ಕಾರು ಹೇಳುತ್ತಾನೆ ದೇವಿ ಮಾನಸ ನಾನು ನಿಮ್ಮ ತೊಡೆಯ ಮೇಲೆ ನಿದ್ರೆ ಮಾಡುತ್ತೇನೆ ಎಂದು ಮಲಗುತ್ತಾನೆ..
    ಋಷಿ ಜರತ್ಕಾರುವಿಗೆ  ತಿಳಿದಿತ್ತು ನಾನು ದಿನನಿತ್ಯ ಸೂರ್ಯ ಮುಳುಗುವ ವೇಳೆ ಸಂಧ್ಯಾವಂದನೆ ಮಾಡುತ್ತೇನೆ 
ಹಾಗಾಗಿ ದೇವಿ ಮಾನಸ ಖಂಡಿತ ನನ್ನನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಅವಳು ಎಬ್ಬಿಸಿದ ಕೂಡಲೇ ನೀವು ನನ್ನ ನಿದ್ರೆ ಹಾಳು ಮಾಡಿ ನನ್ನ ಷರತ್ತು ಮುರಿದ್ದಿದ್ದೀರಾ ಎಂದು ನಾನು ಸಂಸಾರ ಜೀವನವನ್ನು ಮುರಿದುಕೊಂಡು ಬಿಟ್ಟು ಹೋಗಬಹುದು ಅಂತ ಜರಾತ್ಕಾರು ಯೋಚನೆ ಮಾಡುತ್ತಾನೆ 

ಅದೇ ಪ್ರಕಾರ ಮಾನಸ ಅವನನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಕೂಡಲೇ ಜರಾತ್ಕಾರು ಅವಳನ್ನು ಬಿಟ್ಟು ಹೊರಡಲು ಸಿದ್ದನಗುತ್ತಾನೆ ಆದರೆ ಮಾನಸದೇವಿ ಸ್ವಲ್ಪ ಕೂಡ ಬೇಸರ ಪಟ್ಟು ಕೊಳ್ಳುವುದಿಲ್ಲ ಗಂಡನ ಮಾತಿಗೆ ಎದುರು ಮಾತಾಡದೆ ಸುಮ್ಮನೆ ಆಗುತ್ತಾಳೆ ಏನನ್ನು ಪ್ರಶ್ನೆ ಮಾಡುವುದಿಲ್ಲ..

ಸ್ವಾಮಿ ನೀವು ನಿಮ್ಮ ಷರತ್ತಿನ ಪ್ರಕಾರ ನನ್ನನ್ನು ಬಿಟ್ಟು ಸಂಸಾರ ಜೀವನದಿಂದ ಮುಕ್ತರಾಗಬಹುದು ಎಂದು ಹೇಳುತ್ತಾಳೆ.. ಆಗ ಋಷಿ ಜರಾಕಾರುವಿಗೆ ತುಂಬಾ ದುಃಖ ಆಗುತ್ತದೆ ತನ್ನ ಹೆಂಡತಿ ಮಾನಸಳ ಪ್ರೀತಿ ತ್ಯಾಗ ಎಂತದ್ದು ಎಂದು ಅವನು ಅರಿತುಕೊಂಡು ಮತ್ತೆ ಮಾನಸ ದೇವಿಯ ಜೊತೆ ಸಂತೋಷದ ಜೀವನ ನಡೆಸುತ್ತಾನೆ 

 ( ಮಹಾಭಾರತದ ಜನಮೇಜಯನ ನಾಗಬಲಿ ಯಜ್ಞವನ್ನು ನಿಲ್ಲಿಸುವ ಸಮಯ..)

ಋಷಿ ಜರಾತ್ಕಾರು ಹಾಗೂ ಮಾನಸದೇವಿಗೆ ಒಬ್ಬ ಮಗ ಜನಿಸುತ್ತಾನೆ.. ಇವನಿಗೆ " ಆಸ್ತಿಕ " ಎಂದು ನಾಮಕರಣ ಮಾಡುತ್ತಾರೆ..ನಂತರ ಅವನು ದೊಡ್ಡವನಗುತ್ತಾನೆ..

ಪುತ್ರ " ಆಸ್ತಿಕ " ನೀನು ಈಗ ಜನಮೇಜಯ ರಾಜನ ನಾಗಬಲಿ ಯಜ್ಞವನ್ನು ನಿಲ್ಲಿಸಿ ನಾಗಗಳ ರಕ್ಷಣೆ ಮಾಡಬೇಕು. ನನ್ನ ಜೀವನದ ಎರೆಡನೆ ಉದ್ದೇಶವನ್ನು ಪೂರ್ಣಗೊಳಿಸು ಮಗನೆ ಎಂದು ಮಾನಸದೇವಿ ಹೇಳುತ್ತಾಳೆ..

ಅದೇ ಪ್ರಕಾರ ಆಸ್ತಿಕ ಋಷಿಯು ಜನಮೇಜಯ ರಾಜನ ಯಜ್ಞ ನಡೆಯುವ ಸ್ಥಳಕ್ಕೆ ಹೋಗಿ ರಾಜನನ್ನು ಮಾತಿನಲ್ಲಿ ಕಟ್ಟಿಹಾಕಿ ನಾಗಬಲಿ ಯಜ್ಞವನ್ನು ನಿಲ್ಲಿಸುತ್ತಾನೆ..

ಈ ರೀತಿ ಮಾನಸದೇವಿಯು ತನ್ನ ಜೀವನದ ಎರೆಡನೆ ಉದ್ದೇಶವನ್ನು ಪೂರ್ಣಗೊಳಿಸುತ್ತಾಳೆ.

ಇಡಿ ನಾಗಲೋಕವೇ ಮಾನಸದೇವಿಗೆ ತಲೆ ಭಾಗುತ್ತದೆ. ಈ ರೀತಿ ಮಾನಸದೇವಿಯು ನಾಗಲೋಕಕ್ಕು ಹಾಗೂ ಎಲ್ಲ ನಾಗಗಳಿಗೂ ಮಾತೆ ಆಗುತ್ತಾಳೆ. ಹಾಗೂ ಇವಳ ಪುತ್ರನಾದ ಆಸ್ತಿಕ ಋಷಿಯ ಹೆಸರು ಹೇಳಿದರೇ ಅಥವಾ ಆಸ್ತಿಕ ಅಂತ ಮನೆಯ ಗೋಡೆಯಲ್ಲಿ ಬರೆದರೆ ಯಾವ ವಿಷದ ಹಾವುಗಳು ಜಂತುಗಳು ಬರುವುದಿಲ್ಲ. ಹಾಗೂ ಮಾನಸ ದೇವಿಯ ನಾಮಸ್ಮರಣೆ ಮಾಡಿದರೆ ಯಾವುದೇ ವಿಷದ ಹಾವುಗಳು ಜಂತುಗಳು ತೊಂದರೆ ಕೊಡುವುದಿಲ್ಲ.

ನಾಗರ ಪಂಚಮಿ ಸಮಯದಲ್ಲಿ ಈಶಾನ್ಯ ಭಾರತದ ಕಡೆಗೆ ಹೆಚ್ಚಾಗಿ ಮಾನಸದೇವಿಯನ್ನು ಹೆಚ್ಚಾಗಿ ಪೂಜೆ ಮಾಡುತ್ತಾರೆ..

ಮಾನಸದೇವಿಯ ವಾಹನ ಬಾತುಕೋಳಿ ಅವಳು ಕೈಯಲ್ಲಿ ನಾಗಗಳನ್ನು & ಕಮಲದ ಹೂವನ್ನು ಹಿಡಿದು ಭಕ್ತರನ್ನು ಹರಸುತ್ತಾಳೆ..

ನಾಗಲೋಕ.. ಹಾಗೂ ಇಡಿ ನಾಗವಂಶವನ್ನು ರಕ್ಷಣೆ ಮಾಡಿದ ಕಾರಣ.. ಇಡಿ ನಾಗಲೋಕ ಹಾಗೂ ಎಲ್ಲ ನಾಗಗಳು ಯಾವಾಗಲು.. ಮಾನಸದೇವಿ ಹಾಗೂ ಅವಳ ಮಗನಾದ ಆಸ್ತಿಕ ಋಷಿಗೆ ಚಿರಋಣಿ ಆಗಿ ಇರುತ್ತವೆ..

ಈಗ ಮಳೆಗಾಲದಲ್ಲಿ ಹೆಚ್ಚಾಗಿ ಭಕ್ತಾದಿಗಳು ಮಾನಸದೇವಿಯನ್ನು ಪೂಜಿಸುತ್ತಾರೆ..

✍️ : ಅಶ್ವಿನಿ ಶೆಟ್ಟಿ..

October 2, 2025

ನಮಸ್ಕಾರ ‌ಮಾಡುವುದರಿಂದ ಏನು ಫಲ?

ಮಾರ್ಕಂಡೇಯ ಮುನಿಗಳು ದೀರ್ಘಾಯುಷಿ ಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.

ಮೃಕಂಡು ಮನಿಗಳ ಮಗನಿಗೆ  9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."

*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥
ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.

ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿ ಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.
ಕಾಲ ಕಳೆಯಿತು. 
ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.
ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.
ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.
ನಮಸ್ಕಾರ ಮಾಡುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಕಾಶ್ಮೀರಪುರವಾಸಿನಿ ಶಾರದಾ ದೇವಿ

ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ !!!

ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ನಿತ್ಯ ಪಠಿಸುತ್ತಿದ್ದೆವು! ನಾವೆಂದರೇನು, ಪ್ರತಿಯೊಬ್ಬ ಸನಾತನ ಭಾರತೀಯನೂ ಈ ಶ್ಲೋಕವನ್ನು ಪಠಿಸಿದವನೇ! ಕರ್ನಾಟಕವೇನು, ಭಾರತವರ್ಷದ ಉದ್ದಗಲವೆಷ್ಟೋ ಈ ಶ್ಲೋಕದ ವ್ಯಾಪ್ತಿಯಷ್ಟು!

ಹೌದು! ಕಾಶ್ಮೀರದ ಶಾರದೆಯ ವ್ಯಾಪ್ತಿ ಕಾಶ್ಮೀರಮಾತ್ರವಲ್ಲ, ಸಮಸ್ತ ಭಾರತ ದೇಶ!
ಕಾಶ್ಮೀರವಂತೂ ಶಾರದಾಮಯ! 

ಒಂದು ಕಾಲದಲ್ಲಿ ಕಾಶ್ಮೀರವನ್ನು ಶಾರದಾ ದೇಶವೆಂದೇ ಕರೆಯುತ್ತಿದ್ದರು. ಅಲ್ಲಿಯ ಲಿಪಿಯ ಹೆಸರು ಶಾರದಾ! ಶಾರದಾ ಮಂದಿರವಿರುವ ಗ್ರಾಮಕ್ಕೆ ಆಗಲೂ, ಈಗಲೂ – ಅದು ಪಾಕಿಸ್ತಾನದ ವಶವಾದ ಬಳಿಕವೂ – ಶಾರದಾಗ್ರಾಮವೆಂದೇ ಹೆಸರು! ಸಮ್ಮುಖದಲ್ಲಿರುವ ಪರ್ವತಶಿಖರವೊಂದನ್ನು ಈಗಲೂ ಶಾರದೀ ಎಂದು ಕರೆಯುತ್ತಾರೆ.

ಆ ಊರಿನಲ್ಲಿ ಈಗ ಉಳಿದುಕೊಂಡಿರುವುದು ಶತಮಾನಗಳ ಹಿಂದೆ ಮತಪರಿವರ್ತನೆಗೊಳಗಾದ ಮುಸಲ್ಮಾನರು ಮಾತ್ರ. ಆದರೆ ಇಂದಿಗೂ ಅವರು ಆಣೆ ಹಾಕುವುದು, ಪ್ರಮಾಣ ಮಾಡುವುದು ತಾಯಿ ಶಾರದೆಯ ಹೆಸರಿನಲ್ಲಿ!

ಕಾಶ್ಮೀರದ ಮೂಲ ಜನಾಂಗವನ್ನು ಕಾಶ್ಮೀರಿ ಪಂಡಿತರು ಎಂದೇ ಕರೆಯುತ್ತಾರೆ. ಪಾಂಡಿತ್ಯವು ವಿದ್ಯೆಯಿಂದ‌; ವಿದ್ಯೆಯು ಶಾರದೆಯಿಂದ. ಕಾಶ್ಮೀರಿ ಪಂಡಿತರು ಎಂಬ ಅಭಿಧಾನವು ಆ ಜನಾಂಗಕ್ಕೆ ಶಾರದಾನುಗ್ರಹ!
ನಿಮಗೆ ಗೊತ್ತೇ? ಒಂದು ಕಾಲದಲ್ಲಿ, ಒಂದಿಡೀ ಜನಾಂಗದಲ್ಲಿ ಜ್ಞಾನಿಯಲ್ಲದ ಒಬ್ಬನೇ ಒಬ್ಬ ಮನುಷ್ಯನಿರಲಿಲ್ಲ! ಆದುದರಿಂದಲೇ ಆ ಜನಾಂಗವೇ ಪಂಡಿತರು ಎಂದು ಕರೆಯಲ್ಪಟ್ಟಿತು. ಒಂದು ಕಾಲದಲ್ಲಿ, ಅಖಂಡ ಭರತಖಂಡದಲ್ಲಿ ವಿದ್ಯೆಯ ಪರಮೋಚ್ಚ ಪರೀಕ್ಷೆಯಾಗುತ್ತಿದ್ದುದು ಕಾಶ್ಮೀರದಲ್ಲಿ. ಅಲ್ಲಿ ಸೈ ಎನಿಸಿಕೊಂಡರೆ ಅವನು ನಿಜವಾದ ಪಂಡಿತ! ಅಲ್ಲಿಯವರೆಗೆ ಅವನ ಪಾಂಡಿತ್ಯ ಪೂರ್ಣವಲ್ಲ.
ವಿದ್ಯಾಸಾಮ್ರಾಜ್ಯವಾಗಿತ್ತು ಕಾಶ್ಮೀರ!

ಭಾರತವು ದೇವಸ್ಥಾನವಾದರೆ ಅದರ ಶಿಖರ ಕಾಶ್ಮೀರ.ಕಾಶ್ಮೀರವು ಭಾರತದ ಶಿಖರವಾದರೆ ಅದರ ಕಲಶವು ಶಾರದಾಪೀಠ! ನಾವು-ನೀವಿರುವ ಈ ಕಾಲದ ದೌರ್ಭಾಗ್ಯವೆಂದರೆ ಭಾರತದ ಕಲಶವೆನಿಸಿದ ಶಾರದಾಮಂದಿರಕ್ಕೆ ಇಂದು ಕಲಶವಿರಲಿ, ಛಾವಣಿಯೇ ಇಲ್ಲ! ಸಮಸ್ತ ಭಾರತೀಯರ ಹೃದಯಮಂದಿರದಲ್ಲಿ ವಿದ್ಯಾಮೂರ್ತಿಯಾಗಿ ಪೂಜಿಸಲ್ಪಡುವ ಶಾರದೆಯ ಮೂಲ ಮಂದಿರದಲ್ಲಿ ಮೂರ್ತಿಯೇ ಇಲ್ಲ! ಇನ್ನು ಪೂಜೆಯೆಲ್ಲಿ!? ಮೋಟು ಗೋಡೆಗಳ, ಮುರುಕು ಪೀಠದ, ಭಗ್ನಾವಶೇಷಗಳ ಇಂದಿನ ಶಾರದಾಪೀಠದ ದುರಂತದೃಶ್ಯವನ್ನು ನೋಡಿ, ಕರಗಿ-ಮರುಗದಿದ್ದರೆ ನೀವು ಭಾರತೀಯರೇ ಅಲ್ಲ!

ಕೇವಲ ಮಂದಿರಮಾತ್ರದಲ್ಲಲ್ಲ, ಶಾರದೆಯು ಕಾಶ್ಮೀರದ ಅಸಂಖ್ಯ ಪಂಡಿತರ ಮಸ್ತಿಷ್ಕಗಳಲ್ಲಿ, ಮುಖಗಳಲ್ಲಿ ವಿದ್ಯಾವಾಹಿನಿಯಾಗಿ ವಿರಾಜಿಸುತ್ತಿದ್ದಳು.
ಈಗ ಕಾಲ ಬದಲಾಗತೊಡಗಿದೆ. ಅಥವಾ ಕಾಶ್ಮೀರಿ ಪಂಡಿತರ ಎಡೆಬಿಡದ ಹೋರಾಟಗಳು ಕಾಲವನ್ನು ಬದಲಾಯಿಸುತ್ತಿವೆ. ಶಾರದಾಪೀಠದ ಮತ್ತು ಕಾಶ್ಮೀರಿ ಪಂಡಿತರ ದುರವಸ್ಥೆಗೆ ಪ್ರಧಾನ ಕಾರಣವಾದ ಪಾಕಿಸ್ಥಾನವು ಇತ್ತೀಚೆಗೆ ಶಾರದಾದರ್ಶನಕ್ಕೆ ಅವಕಾಶ ನೀಡುವ ಮಾತಾಡುತ್ತಿದೆ! ಮಾತ್ರವಲ್ಲ, ಯಾತ್ರಿಗಳ ಅನುಕೂಲಕ್ಕಾಗಿ, ಶಾರದಾಗ್ರಾಮದ ಪರಿಸರದಲ್ಲಿ ರಸ್ತೆಯೇ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಮಾಡುವುದಾಗಿಯೂ ಪ್ರಕಟಿಸಿದೆ. ಈಗಿನ ಜಮ್ಮು-ಕಾಶ್ಮೀರ ಸರಕಾರವು ಶಾರದಾಯಾತ್ರೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿಯೇ ಘೋಷಿಸಿದೆ.

ಇನ್ನು ಶಾರದಾ ಗ್ರಾಮದ ಮುಸಲ್ಮಾನರು; 
ಅವರೊಂದು ವಿಸ್ಮಯ!

ಶಾರದಾಪೀಠದ ಪುನರುಜ್ಜೀವನ ಅವರ ತವಕ; ಕಾಶ್ಮೀರೀ ಪಂಡಿತರ ಶಾರದಾಯಾತ್ರೆಗೆ ಅವರು ಪೂರಕ. ನಂಬಲಸಾಧ್ಯವಾದ ಸಂಗತಿಯೆಂದರೆ ಇತ್ತೀಚೆಗೆ ಶಾರದಾಮಂದಿರದಲ್ಲಿ ಬಹುಕಾಲದ ಬಳಿಕ ಪೂಜೆಯೊಂದು ನಡೆಯಿತು! ಆ ಪೂಜೆಯನ್ನು ನೆರವೇರಿಸಿದವರು ಶಾರದಾ ಗ್ರಾಮದ ಮುಸಲ್ಮಾನರು! ಅವರು ಮೊದಲು ಮೂರ್ತಿಯಿದ್ದ ಸ್ಥಳದಲ್ಲಿ ಪುಷ್ಪಗಳಿಂದ ಪೂಜೆ ನಡೆಸಿದ್ದಾರೆ; ಗರ್ಭಗುಡಿಯ ಗೋಡೆಯಲ್ಲಿ ಶಾರದಾ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿದ್ದಾರೆ; ಪುಷ್ಪಪ್ರಸಾದವನ್ನೂ ಮತ್ತು ಶಾರದಾಭೂಮಿಯ ಮಂಗಲಮಯವಾದ ಮಣ್ಣನ್ನೂ ಪಂಡಿತರುಗಳಿಗೆ ಅಂಚೆಯ ಮೂಲಕ ಕಳುಹಿಸಿದ್ದಾರೆ!

ಗಮನಿಸಿ; ಇವೆಲ್ಲವನ್ನೂ ಪರಮಪ್ರೇಮದಿಂದ ನೆರವೇರಿಸಿದವರು ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದಲ್ಲಿ ವಾಸಿಸುವ ಮುಸಲ್ಮಾನರು! ಇಂದು ಅವರ ಬದುಕು ಇಸ್ಲಾಂ ಮತದಲ್ಲಿ; ಅವರಿರುವ ಊರು ಪಾಕಿಸ್ತಾನದ ವಶದಲ್ಲಿ! 

ಸಾಕಾರ ದೇವರ ಪೂಜೆಯನ್ನು ಅತ್ಯುಗ್ರವಾಗಿ ವಿರೋಧಿಸುವ ಮುಸಲ್ಮಾನರು, ಪಾಕಿಸ್ತಾನದ ಅಂಕೆಗೊಳಪಟ್ಟ ಪ್ರದೇಶದಲ್ಲಿ, ಅದೂ ಉಗ್ರಗಾಮಿಗಳ ಹಾವಳಿಯ ನಡುವೆ ಪುಷ್ಪಗಳಿಂದ ಶಾರದಾಪೀಠಕ್ಕೆ ಪೂಜೆಗೈದು, ಪ್ರಸಾದ ಕಳುಹಿಸಿದರೆಂಬುದನ್ನು ನಂಬಲಾಗದು! 

ಆದರೆ ಸ್ವತಃ ಕಾಶ್ಮೀರಿ ಪಂಡಿತರ ನಿಯೋಗವೇ ನಮ್ಮನ್ನು ಭೇಟಿಯಾಗಿ, ಪ್ರಸಾದವಿತ್ತು, ಪುಷ್ಪಪೂಜೆಯ ಭಾವಚಿತ್ರವನ್ನೂ, ಮತ್ತು ಪಾಕಿಸ್ತಾನದಿಂದ ಪಂಡಿತರಿಗೆ ಬಂದ, ಅಲ್ಲಿಯ ಮೊಹರಿರುವ ಲಕೋಟೆಯನ್ನೂ ತೋರಿಸಿದಾಗ ನಂಬಲೇಬೇಕಾಯಿತು!

ಕಾಶ್ಮೀರದ ಶಾರದೆಯ ಪ್ರಸಾದ ಪುಷ್ಪಗಳು, ಶಾರದಾ ಗ್ರಾಮದ ಮಣ್ಣು ನಮ್ಮ ಮಠದಲ್ಲಿದೆಯೆಂಬುದು ವಿಖ್ಯಾತ-ವ್ಯಾಖ್ಯಾನಸಿಂಹಾಸನವು ನಮ್ಮಲ್ಲಿದೆಯೆಂಬಷ್ಟೇ ಹೆಮ್ಮೆ ನಮಗೆ!

ಶಂಕರರಿಗೂ ಶಾರದೆಗೂ ಅವಿನಾಭಾವದ ಸಂಬಂಧ!
ಕಾಶ್ಮೀರಪುರವಾಸಿನಿಯ ಸನ್ನಿಧಿಯಲ್ಲಿಯೇ ಅಲ್ಲವೇ ಆದಿ ಶಂಕರರು ಸರ್ವಜ್ಞಪೀಠವನ್ನೇರಿ ಜಗದ್ಗುರುವೆನಿಸಿಕೊಂಡಿದ್ದು! 

ದಕ್ಷಿಣ ದೇಶದ ಯಾರೊಬ್ಬ ಪಂಡಿತನೂ ಆವರೆಗೆ ಅರಿವಿನ ಆ ಎತ್ತರವನ್ನು ಏರದ ಕಾರಣ ಶಾರದಾ ಪೀಠದ ದಕ್ಷಿಣದ್ವಾರವೇ ಅಂದಿನವರೆಗೆ ತೆರೆದಿರಲಿಲ್ಲ! ಶಂಕರರು ತಮ್ಮ ವಿದ್ವತ್ತಿನಿಂದ ಕಾಶ್ಮೀರದ ಪಂಡಿತಮಂಡಲವನ್ನು ಮಂತ್ರಮುಗ್ಧಗೊಳಿಸಿ, ದಕ್ಷಿಣದ್ವಾರವನ್ನು ತೆರೆಯಿಸಿ, ಒಳ ಪ್ರವೇಶಿಸಿದರು! 

ಶಸ್ತ್ರದಿಂದಲ್ಲ, ಶಾಸ್ತ್ರದಿಂದ ಅವರು ಜ್ಞಾನಸಾಮ್ರಾಜ್ಯದ ಆ ಮಹಾರಾಜಧಾನಿಯನ್ನು ಗೆದ್ದು, ಸರ್ವಜ್ಞಪೀಠವನ್ನೇರಿದರು! 

ಅಷ್ಟು ಮಾತ್ರವಲ್ಲ, ಅಲ್ಲಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿ, ಶಾರದೆಗೆ ನೈಜಪೂಜೆ ಸಲ್ಲಿಸಿದರು!

ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ | 
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||

ಮೂಲ: ಶ್ರೀ ರಾಮಚಂದ್ರಾಪುರ ಮಠ

ಗಂಡನ ಎಡ ಭಾಗದಲ್ಲಿ ಹೆಂಡತಿ

ಗೃಹಸ್ಥನು ಮಾಡುವ ಸಕಲ ಸತ್ಕಾರ್ಯಗಳಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿರಬೇಕು. ದೇವರಿಗೆ ಅಭಿಷೇಕ, ಪುರಾಣ ಶ್ರವಣ, ದಾನ- ಧರ್ಮಾದಿಗಳನ್ನು ಮಾಡುವಾಗ, ದಂಪತಿ ಸ್ನಾನ ಮಾಡುವಾಗ, ಶಯನ ಸಮಯದಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿರಬೇಕು.

ಅದೇ ಕನ್ಯಾದಾನ, ದೇವ ಪ್ರತಿಷ್ಠೆ, ಯಜ್ಞ ಕಾರ್ಯಗಳಲ್ಲಿ ತೊಡಗಿದಾಗ ಹೆಂಡತಿ ಗಂಡನ ಬಲ ಭಾಗದಲ್ಲಿರಬೇಕು.

ಈಶ್ವರನು ತನ್ನ ಬಲ ಭಾಗದಿಂದ ಪುರುಷನನ್ನೂ, ಎಡ ಭಾಗದಿಂದ ಸ್ತ್ರೀಯನ್ನು ಸೃಷ್ಟಿಸಿದನು. ಪ್ರತಿ ವ್ಯಕ್ತಿಯ ದೇಹದ ಬಲ ಭಾಗದಲ್ಲಿ ಸೂರ್ಯ/ ಪಿಂಗಳ (ಗಂಡು) ನಾಡಿಯೂ, ಎಡ ಭಾಗದಲ್ಲಿ ಚಂದ್ರ/ ಇಡಾ (ಹೆಣ್ಣು), ಮಧ್ಯದಲ್ಲಿ ಆಜ್ಞಾ ಚಕ್ರದಿಂದ ಮೂಲಾಧಾರದ ವರೆಗೆ ಸುಶುಮ್ನಾ ನಾಡಿಗಳಿರುತ್ತದೆ. ಹಾಗಾಗಿ ನಾವೆಲ್ಲಾ ಅರ್ಧನಾರೀಶ್ವರರೇ. ಯಾರಿಗೆ ಯಾವ ನಾಡಿ ಹೆಚ್ಚು ಪ್ರಚೋದನೆ ಆಗಿರುವುದೋ ಅವರ ಗುಣಗಳು ಅದೇ ರೀತಿ ಇರುತ್ತದೆ. ಮನುಷ್ಯರಿಗೆ ಹೃದಯ ಎಡ ಭಾಗದಲ್ಲಿ ಇರುವುದರಿಂದ ಚಲನಶಕ್ತಿ ಅದೇ ಭಾಗದಿಂದ ಉತ್ಪನ್ನ ಆಗುವುದರಿಂದ ಎಡ ಭಾಗಕ್ಕೆ ಹಾಗೂ ಹೆಂಡತಿಗೆ ಜೀವನದಲ್ಲಿ ವಿಶೇಷ ಸ್ಥಾನವಿದೆ.

September 30, 2025

ನವರಾತ್ರಿಯಲ್ಲಿ ಕನ್ಯಾ ಪೂಜೆ ಮಾಡುವ ವಿಧಾನ

ನವರಾತ್ರಿ ಅಷ್ಟಮಿ ಅತ್ಯಂತ ಪೂಜ್ಯ ಮತ್ತು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ನವರಾತ್ರಿ ಅಷ್ಟಮಿ ದಿನವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ. 
 ‌                                         ‌         ‌                               ನವರಾತ್ರಿ ಅಷ್ಟಮಿ ಪೂಜೆ ವಿಧಾನ
- ನವರಾತ್ರಿ ಅಷ್ಟಮಿಯ ದಿನ ಭಕ್ತರು ಮುಂಜಾನೆ ಬೇಗ ಎದ್ದು ಸ್ನಾನ, ಇತ್ಯಾದಿಗಳಿಂದ ನಿವೃತ್ತರಾಗುತ್ತಾರೆ.

- ನಂತರ ಮಾತೆ ದುರ್ಗೆಗೆ ಹೂವು, ಹಣ್ಣು, ಶ್ರೀಗಂಧ, ಕುಂಕುಮ, ಧೂಪ ಇತ್ಯಾದಿಗಳನ್ನು ಅರ್ಪಿಸಿ ಪೂಜಿಸುತ್ತಾರೆ.

- ಈ ದಿನ ಭಕ್ತರು ದೇವಿ ಮಂತ್ರಗಳನ್ನು ಪಠಿಸುತ್ತಾರೆ.

- ನಂತರ ಪುರುಷರು ಮತ್ತು ಮಹಿಳೆಯರು ಇಬ್ಬರೂ ದುರ್ಗಾ ವ್ರತ ಕಥೆಯನ್ನು ಮತ್ತು ದುರ್ಗಾ ಚಾಲೀಸಾವನ್ನು ಓದುತ್ತಾರೆ.

- ಈ ದಿನ ಭಕ್ತರು ಕನ್ಯಾ ಪೂಜೆಯನ್ನೂ ಮಾಡುತ್ತಾರೆ.

- ಈ ದಿನ ಕನ್ಯೆಯರಿಗೆ ಸಿಹಿತಿಂಡಿಗಳನ್ನು ತಿನ್ನಲು ನೀಡಬೇಕು.

- ಈ ದಿನ 9 ಕನ್ಯೆಯರೊಂದಿಗೆ 1 ಚಿಕ್ಕ ಹುಡುಗನನ್ನು ಪೂಜಿಸಲಾಗುತ್ತದೆ.

ಯಾರನ್ನು ಪೂಜಿಸಬೇಕು..?
                                                                                                  ಇನ್ನೂ ಪ್ರಾಯಕ್ಕೆ ಬರದ ಹುಡುಗಿಯರನ್ನು ಈ ದಿನ ಪೂಜಿಸಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 5-9 ವರ್ಷ ವಯಸ್ಸಿನ ಹುಡುಗಿಯರನ್ನು ಹೆಚ್ಚಾಗಿ ಈ ದಿನ ಪೂಜಿಸಲಾಗುತ್ತದೆ.

ಕನ್ಯಾ ಪೂಜೆ ಮಹತ್ವ ‌      ‌      ‌     ‌                                                      
- ಒಂದು ಹುಡುಗಿಯನ್ನು ಪೂಜಿಸುವುದರಿಂದ ನಿಮಗೆ ಐಶ್ವರ್ಯ ಸಿಗುತ್ತದೆ.

- ಇಬ್ಬರು ಹುಡುಗಿಯರನ್ನು ಪೂಜಿಸುವುದು ನಿಮಗೆ ಭೋಗ ಮತ್ತು ಮೋಕ್ಷವನ್ನು ನೀಡುತ್ತದೆ

- ಮೂರು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಧರ್ಮ, ಕಾಮ, ಅರ್ಥ ದೊರೆಯುತ್ತದೆ

- ನಾಲ್ಕು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ನಿಮಗೆ ಅಧಿಕಾರ ದೊರೆಯುತ್ತದೆ.

- ಐದು ಹುಡುಗಿಯರನ್ನು ಪೂಜಿಸುವುದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆ

- ಆರು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ನಿಮಗೆ 6 ರೀತಿಯ ಸಿದ್ಧಿ ದೊರೆಯುತ್ತದೆ.

- ಏಳು ಹೆಣ್ಣುಮಕ್ಕಳನ್ನು ಪೂಜಿಸುವುದು ನಿಮಗೆ ರಾಜ್ಯವನ್ನು ಪಡೆಯಲು ಸಹಾಯ ಮಾಡುತ್ತದೆ.

- ಎಂಟು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಸಂಪತ್ತು ಸುಧಾರಿಸುತ್ತದೆ

- ಒಂಬತ್ತು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಮಾಲಿಕರಾಗುವ ಭಾಗ್ಯ ದೊರೆಯುತ್ತದೆ.

​ಕನ್ಯಾ ಪೂಜೆ ವಿಧಾನ
- ಕನ್ಯಾ ಪೂಜೆಯನ್ನು ಹೆಚ್ಚಾಗಿ ಹಗಲಿನಲ್ಲಿ ಮಾಡಲಾಗುತ್ತದೆ.

- ಮನೆಯ ಸದಸ್ಯರೆಲ್ಲರೂ ಈ ದಿನ ಬೇಗ ಎದ್ದು ಸ್ನಾನ ಮಾಡಬೇಕು. ನಂತರ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಹಲ್ವಾ, ಪೂರಿ ಮತ್ತು ಕಡಲೆಯನ್ನು ಒಳಗೊಂಡಿರುವ 'ಸಾತ್ವಿಕ ಭೋಜನವನ್ನು ತಯಾರಿಸಿ.

- ನಂತರ ಅಥಾವರಿ ಎಂದು ಕರೆಯಲ್ಪಡುವ ನೈವೇದ್ಯವನ್ನು ದುರ್ಗಾ ದೇವಿಗೆ ತಯಾರಿಸಲಾಗುತ್ತದೆ. ಇದರಲ್ಲಿ, 8 ಪೂರಿಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ. ಜೊತೆಗೆ ಕೆಲವು ಹಲ್ವಾ ಮತ್ತು ಕಡಲೆಯನ್ನು ಇಡಲಾಗುತ್ತದೆ. ಇದರೊಂದಿಗೆ ಸ್ವಲ್ಪ ಹಣವನ್ನೂ ಇಡಲಾಗುತ್ತದೆ.

- ನಂತರ ಮನೆಯ ಪುರುಷರು ಮತ್ತು ಮಹಿಳೆಯರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ ಮತ್ತು ದುರ್ಗೆಗೆ ಆರತಿಯನ್ನು ಮಾಡುತ್ತಾರೆ. ಸಿದ್ಧಪಡಿಸಿದ ಅಥಾವರಿಯನ್ನು ದೇವಿಗೆ ಅರ್ಪಿಸಲಾಗುತ್ತದೆ, ಅದನ್ನೇ ನಂತರ ಹುಡುಗಿಯರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಪೂರಿ, ಹಲ್ವಾ ಮತ್ತು ಕಡಲೆಯ ಒಂದು ಸಣ್ಣ ಭಾಗವನ್ನು ದೇವಿ ಮಾತೆಯ ಮುಂದೆ ಅಗ್ನಿಗೆ ಅರ್ಪಿಸಲಾಗುತ್ತದೆ.

- ನಂತರ ಜನರು ಚಿಕ್ಕ ಹುಡುಗಿಯರನ್ನು ಆಹ್ವಾನಿಸಿ ನೆಲದ ಮೇಲೆ ಕೂರಿಸುತ್ತಾರೆ.

- ಮನೆಯ ಗಂಡಸರು ಮತ್ತು ಹೆಂಗಸರು ಈ ಹೆಣ್ಣುಮಕ್ಕಳ ಪಾದಗಳನ್ನು ನೀರಿನಲ್ಲಿ ತೊಳೆದು ಒಣಗಿಸುತ್ತಾರೆ.

- ಕುಂಕುಮವನ್ನು ಹೆಣ್ಣು ಮಕ್ಕಳ ಹಣೆಗೆ ಹಚ್ಚಲಾಗುತ್ತದೆ ಮತ್ತು ಅವರ ಬಲಗೈಯಲ್ಲಿ ಮೌಲಿ/ಕಲವಾ ಎಂಬ ಕೆಂಪು ಬಣ್ಣದ ದಾರವನ್ನು ಕಟ್ಟಲಾಗುತ್ತದೆ.

- ನಂತರ ಅವರಿಗೆ ಪ್ರದಕ್ಷಿಣಾಕಾರವಾಗಿ ಆರತಿಯನ್ನು ಅರ್ಪಿಸಲಾಗುತ್ತದೆ.

- ಕೊನೆಗೆ ಹೆಣ್ಣು ಮಕ್ಕಳಿಗೆ ಭಕ್ತಿ, ಪ್ರೀತಿಯಿಂದ ಊಟ ಬಡಿಸಲಾಗುತ್ತದೆ.

- ಕೊನೆಯಲ್ಲಿ, ಜನರು ವಿದಾಯ ಹೇಳುವ ಮೊದಲು ಹಣ ಮತ್ತು ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಾರೆ.

ಕನ್ಯಾ ಪೂಜೆಯ ಉಡುಗೊರೆ
- ಊಟದ ಡಬ್ಬಿ
- ಸ್ಕೂಲ್ ಸ್ಟೇಷನರಿ ಕಿಟ್
- ಬಣ್ಣದ ಬಾಕ್ಸ್‌
- ಹೇರ್ ಬ್ಯಾಂಡ್‌ಗಳು, ಹೇರ್ ಕ್ಲಿಪ್‌ಗಳು, ರಬ್ಬರ್ ಬ್ಯಾಂಡ್‌ಗಳು ಮುಂತಾದ ಮೇಕಪ್‌ ವಸ್ತು.
- ಸ್ವೀಟ್ ಹ್ಯಾಂಪರ್, ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಚಿಪ್ಸ್, ಇತ್ಯಾದಿ ವಸ್ತುಗಳನ್ನು ಒಳಗೊಂಡಿರುತ್ತದೆ.
- ಗೊಂಬೆಗಳು ಮತ್ತು ಇತರ ಆಟಿಕೆಗಳು
- ಕೀ ಚೈನ್ಸ್‌
- ಮುದ್ದಾದ ಪ್ಲಾಸ್ಟಿಕ್ ಪ್ಲೇಟ್‌ಗಳು
- ಬ್ಯಾಗ್‌
- ಪುಸ್ತಕಗಳು ಅಥವಾ ಕಥೆ ಪುಸ್ತಕಗಳು
- ರೂಬಿಕ್ಸ್ ಕ್ಯೂಬ್, ಲುಡೋ, ಚೆಸ್ ಬೋರ್ಡ್, ಮುಂತಾದ ಚಿಕ್ಕ ಆಟಿಕೆಗಳು.

ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ

ನವರಾತ್ರಿಯ ಒಂಭತ್ತನೆಯ ರೂಪ ಶ್ರೀ ಸಿದ್ಧಿದಾತ್ರಿ

ಓಂ ಸಿದ್ಧಿದಾತ್ರ್ಯೈ ನಮಃ
ಓಂ ಸಿದ್ಧಾಯೈ ನಮಃ
ಓಂ ಸಿದ್ಧೇಶ್ವರ್ಯೈ ನಮಃ
ಓಂ ಸಿದ್ಧ್ಯೈ ನಮಃ
ಓಂ ಸಿದ್ಧಾಮ್ಬಾಯೈ ನಮಃ
ಓಂ ಸಿದ್ಧಮಾತೃಕಾಯೈ ನಮಃ
ಓಂ ಸಿದ್ಧಾರ್ಥದಾಯಿನ್ಯೈ ನಮಃ
ಓಂ ಸಿದ್ಧಾಢ್ಯಾಯೈ ನಮಃ
ಓಂ ಸಿದ್ಧಸಮ್ಮತಾಯೈ ನಮಃ
ಓಂ ಸ್ಥಿತ್ಯೈ ನಮಃ ll10 ll

ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
ಓಂ ಸಿತಾತಪತ್ರಾಯೈ ನಮಃ
ಓಂ ಸಿದ್ಧಿದಾಯೈ ನಮಃ
ಓಂ ಸಿದ್ಧಪೂಜಿತಾಯೈ ನಮಃ
ಓಂ ಸಿದ್ಧಾಂತಗಮ್ಯಾಯೈ ನಮಃ
ಓಂ ಸಿದ್ಧೇಶಪ್ರಿಯಾಯೈ ನಮಃ
ಓಂ ಸಿದ್ಧಜನಾರ್ಥದಾಯೈ ನಮಃ
ಓಂ ಸ್ಥಿತಿಪ್ರದಾಯೈ ನಮಃ
ಓಂ ಸ್ಥಿರಾಯೈ ನಮಃ
ಓಂ ಸಿದ್ಧಿವಿದ್ಯಾಸ್ವರೂಪಿಣ್ಯೈ ನಮಃ ll 20 ll

ಓಂ ಸುಂದರಾಲಕಾಯೈ ನಮಃ
ಓಂ ಸಮಸ್ತಾಸುರಘಾತಿನ್ಯೈ ನಮಃ 
ಓಂ ಸುಧಾಮಯ್ಯೈ ನಮಃ 
ಓಂ ಸುಧಾಮೂರ್ತ್ಯೈ ನಮಃ 
ಓಂ ಸುಧಾಯೈ ನಮಃ 
ಓಂ ಸುಖದಾಯೈ ನಮಃ 
ಓಂ ಸುರೇಶಾನ್ಯೈ ನಮಃ
ಓಂ ಸ್ವಾಹಾಯೈ ನಮಃ 
ಓಂ ಸ್ವಾಹೇಶನೇತ್ರಾಯೈ ನಮಃ 
ಓಂ ಸುಮುಖಾಯೈ ನಮಃ ll30 ll

ಓಂ ಸುಮುಖಪ್ರೀತಾಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಂಸ್ತುತಾಯೈ ನಮಃ
ಓಂ ಸ್ತುತಿಸುಪ್ರೀತಾಯೈ ನಮಃ
ಓಂ ಸತ್ಯವಾದಿನ್ಯೈ ನಮಃ
ಓಂ ಸದಾಸ್ಪದಾಯೈ ನಮಃ
ಓಂ ಸತ್ಯಾಯೈ ನಮಃ 
ಓಂ ಸತ್ಯಾಸತ್ಯಸ್ವರೂಪಿಣ್ಯೈ ನಮಃ
ಓಂ ಸುಂದರ್ಯೈ ನಮಃ
ಓಂ ಸಾಮದಾನಾಸುಖಪ್ರದಾಯೈ ನಮಃ ll 40 ll

ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಜ್ಞತ್ವಫಲಪ್ರದಾಯೈ ನಮಃ
ಓಂ ಸಂಕ್ರಮಾಯೈ ನಮಃ
ಓಂ ಸಮದಾಯೈ ನಮಃ
ಓಂ ಸೋಮ್ಯಾಯೈ ನಮಃ
ಓಂ ಸರ್ಗಾದಿಕರಣಕ್ಷಮಾಯೈ ನಮಃ
ಓಂ ಸಂಕಟಾಯೈ ನಮಃ
ಓಂ ಸಂಕಟಹರಾಯೈ ನಮಃ
ಓಂ ಸಕುಂಕುಮವಿಲೇಪನಾಯೈ ನಮಃ 
ಓಂ ಸಮಿದ್ಧಾಯೈ ನಮಃ ll 50 ll

ಓಂ ಸಾಮಿಧೇನ್ಯೈ ನಮಃ
ಓಂ ಸಾಮಾನ್ಯಾಯೈ ನಮಃ
ಓಂ ಸಾಮವೇದಿನ್ಯೈ ನಮಃ
ಓಂ ಸಮುತ್ತೀರ್ಣಾಯೈ ನಮಃ
ಓಂ ಸದಾಚಾರಾಯೈ ನಮಃ
ಓಂ ಸಂಹಾರಾಯೈ ನಮಃ
ಓಂ ಸರ್ವಪಾವನ್ಯೈ ನಮಃ
ಓಂ ಸರ್ಪಿಣ್ಯೈ ನಮಃ
ಓಂ ಸರ್ವಮಾತ್ರೇ ನಮಃ 
ಓಂ ಸತ್ಯಜ್ಞಾನಸ್ವರೂಪಿಣ್ಯೈ ನಮಃ ll 60 ll

ಓಂ ಸಂಪತ್ಕರ್ಯೈ ನಮಃ
ಓಂ ಸಮಾನಾಂಗ್ಯೈ ನಮಃ
ಓಂ ಸರ್ವಭಾವಸುಸಂಸ್ಥಿತಾಯೈ ನಮಃ
ಓಂ ಸಂಧ್ಯಾವಂದನಸುಪ್ರೀತಾಯೈ ನಮಃ
ಓಂ ಸನ್ಮಾರ್ಗಕುಲಪಾಲಿನ್ಯೈ ನಮಃ
ಓಂ ಸಂಜೀವಿನ್ಯೈ ನಮಃ
ಓಂ ಸರ್ವಮೇಧಾಯೈ ನಮಃ
ಓಂ ಸಭ್ಯಾಯೈ ನಮಃ
ಓಂ ಸಾಧುಸುಪೂಜಿತಾಯೈ ನಮಃ 
ಓಂ ಸಾಮರ್ಥ್ಯವಾಹಿನ್ಯೈ ನಮಃ ll 70 ll

ಓಂ ಸಾಂಖ್ಯಾಯೈ ನಮಃ
ಓಂ ಸಾಂದ್ರಾನಂದಪಯೋಧರಾಯೈ ನಮಃ
ಓಂ ಸಂಕೀರ್ಣಮಂದಿರಸ್ಥಾನಾಯೈ ನಮಃ
ಓಂ ಸಾಕೇತಕುಲಪಾಲಿನ್ಯೈ ನಮಃ
ಓಂ ಸಂಹಾರಿಣ್ಯೈ ನಮಃ
ಓಂ ಸುಧಾರೂಪಾಯೈ ನಮಃ
ಓಂ ಸಾಕೇತಪುರವಾಸಿನ್ಯೈ ನಮಃ
ಓಂ ಸಂಬೋಧಿನ್ಯೈ ನಮಃ
ಓಂ ಸಮಸ್ತೇಶ್ಯೈ ನಮಃ 
ಓಂ ಸಾಧ್ವ್ಯೈ ನಮಃ ll 80 ll

ಓಂ ಸರ್ವಜ್ಞಾನಪ್ರದಾಯಿನ್ಯೈ ನಮಃ
ಓಂ ಸರ್ವದಾರಿದ್ರ್ಯಶಮನ್ಯೈ ನಮಃ
ಓಂ ಸರ್ವದುಃಖವಿಮೋಚನ್ಯೈ ನಮಃ
ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಪಾಪವಿಮೋಚನ್ಯೈ ನಮಃ
ಓಂ ಸಮದೃಷ್ಟ್ಯೈ ನಮಃ
ಓಂ ಸಮಗುಣಾಯೈ ನಮಃ
ಓಂ ಸರ್ವಗೋಪ್ತ್ರ್ಯೈ ನಮಃ
ಓಂ ಸಹಾಯಿನ್ಯೈ ನಮಃ
ಓಂ ಸಹಾಯೈ ನಮಃ ll 90 ll

ಓಂ ಸಮಾರಾಧ್ಯಾಯೈ ನಮಃ
ಓಂ ಸಾಮದಾಯೈ ನಮಃ
ಓಂ ಸಿಂಧುಸೇವಿತಾಯೈ ನಮಃ
ಓಂ ಸಮ್ಮೋಹಿನ್ಯೈ ನಮಃ
ಓಂ ಸದಾಮೋಹಾಯೈ ನಮಃ
ಓಂ ಸರ್ವಮಾಂಗಲದಾಯಿನ್ಯೈ ನಮಃ
ಓಂ ಸಮಸ್ತಭುವನೇಶಾನ್ಯೈ ನಮಃ
ಓಂ ಸರ್ವಕಾಮಫಲಪ್ರದಾಯೈ ನಮಃ
ಓಂ ಸರ್ವಸಿದ್ಧಿಪ್ರದಾಯೈ ನಮಃ
ಓಂ ಸವ್ಯಸಧ್ರೀಚ್ಯೈ ನಮಃ ll 100 ll

ಓಂ ಸಹಾಯಿನ್ಯೈ ನಮಃ
ಓಂ ಸಕಲಾಯೈ ನಮಃ
ಓಂ ಸಾಗರಾಯೈ ನಮಃ
ಓಂ ಸಾರಾಯೈ ನಮಃ
ಓಂ ಸಾರ್ವಭೌಮಸ್ವರೂಪಿಣ್ಯೈ ನಮಃ
ಓಂ ಸಂತೋಷಜನನ್ಯೈ ನಮಃ
ಓಂ ಸೇವ್ಯಾಯೈ ನಮಃ
ಓಂ ಸರ್ವೇಶ್ಯೈ ನಮಃ ll108 ll

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ ll