September 30, 2025

ನವರಾತ್ರಿಯಲ್ಲಿ ಕನ್ಯಾ ಪೂಜೆ ಮಾಡುವ ವಿಧಾನ

ನವರಾತ್ರಿ ಅಷ್ಟಮಿ ಅತ್ಯಂತ ಪೂಜ್ಯ ಮತ್ತು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ನವರಾತ್ರಿ ಅಷ್ಟಮಿ ದಿನವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ. 
 ‌                                         ‌         ‌                               ನವರಾತ್ರಿ ಅಷ್ಟಮಿ ಪೂಜೆ ವಿಧಾನ
- ನವರಾತ್ರಿ ಅಷ್ಟಮಿಯ ದಿನ ಭಕ್ತರು ಮುಂಜಾನೆ ಬೇಗ ಎದ್ದು ಸ್ನಾನ, ಇತ್ಯಾದಿಗಳಿಂದ ನಿವೃತ್ತರಾಗುತ್ತಾರೆ.

- ನಂತರ ಮಾತೆ ದುರ್ಗೆಗೆ ಹೂವು, ಹಣ್ಣು, ಶ್ರೀಗಂಧ, ಕುಂಕುಮ, ಧೂಪ ಇತ್ಯಾದಿಗಳನ್ನು ಅರ್ಪಿಸಿ ಪೂಜಿಸುತ್ತಾರೆ.

- ಈ ದಿನ ಭಕ್ತರು ದೇವಿ ಮಂತ್ರಗಳನ್ನು ಪಠಿಸುತ್ತಾರೆ.

- ನಂತರ ಪುರುಷರು ಮತ್ತು ಮಹಿಳೆಯರು ಇಬ್ಬರೂ ದುರ್ಗಾ ವ್ರತ ಕಥೆಯನ್ನು ಮತ್ತು ದುರ್ಗಾ ಚಾಲೀಸಾವನ್ನು ಓದುತ್ತಾರೆ.

- ಈ ದಿನ ಭಕ್ತರು ಕನ್ಯಾ ಪೂಜೆಯನ್ನೂ ಮಾಡುತ್ತಾರೆ.

- ಈ ದಿನ ಕನ್ಯೆಯರಿಗೆ ಸಿಹಿತಿಂಡಿಗಳನ್ನು ತಿನ್ನಲು ನೀಡಬೇಕು.

- ಈ ದಿನ 9 ಕನ್ಯೆಯರೊಂದಿಗೆ 1 ಚಿಕ್ಕ ಹುಡುಗನನ್ನು ಪೂಜಿಸಲಾಗುತ್ತದೆ.

ಯಾರನ್ನು ಪೂಜಿಸಬೇಕು..?
                                                                                                  ಇನ್ನೂ ಪ್ರಾಯಕ್ಕೆ ಬರದ ಹುಡುಗಿಯರನ್ನು ಈ ದಿನ ಪೂಜಿಸಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 5-9 ವರ್ಷ ವಯಸ್ಸಿನ ಹುಡುಗಿಯರನ್ನು ಹೆಚ್ಚಾಗಿ ಈ ದಿನ ಪೂಜಿಸಲಾಗುತ್ತದೆ.

ಕನ್ಯಾ ಪೂಜೆ ಮಹತ್ವ ‌      ‌      ‌     ‌                                                      
- ಒಂದು ಹುಡುಗಿಯನ್ನು ಪೂಜಿಸುವುದರಿಂದ ನಿಮಗೆ ಐಶ್ವರ್ಯ ಸಿಗುತ್ತದೆ.

- ಇಬ್ಬರು ಹುಡುಗಿಯರನ್ನು ಪೂಜಿಸುವುದು ನಿಮಗೆ ಭೋಗ ಮತ್ತು ಮೋಕ್ಷವನ್ನು ನೀಡುತ್ತದೆ

- ಮೂರು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಧರ್ಮ, ಕಾಮ, ಅರ್ಥ ದೊರೆಯುತ್ತದೆ

- ನಾಲ್ಕು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ನಿಮಗೆ ಅಧಿಕಾರ ದೊರೆಯುತ್ತದೆ.

- ಐದು ಹುಡುಗಿಯರನ್ನು ಪೂಜಿಸುವುದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆ

- ಆರು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ನಿಮಗೆ 6 ರೀತಿಯ ಸಿದ್ಧಿ ದೊರೆಯುತ್ತದೆ.

- ಏಳು ಹೆಣ್ಣುಮಕ್ಕಳನ್ನು ಪೂಜಿಸುವುದು ನಿಮಗೆ ರಾಜ್ಯವನ್ನು ಪಡೆಯಲು ಸಹಾಯ ಮಾಡುತ್ತದೆ.

- ಎಂಟು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಸಂಪತ್ತು ಸುಧಾರಿಸುತ್ತದೆ

- ಒಂಬತ್ತು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಮಾಲಿಕರಾಗುವ ಭಾಗ್ಯ ದೊರೆಯುತ್ತದೆ.

​ಕನ್ಯಾ ಪೂಜೆ ವಿಧಾನ
- ಕನ್ಯಾ ಪೂಜೆಯನ್ನು ಹೆಚ್ಚಾಗಿ ಹಗಲಿನಲ್ಲಿ ಮಾಡಲಾಗುತ್ತದೆ.

- ಮನೆಯ ಸದಸ್ಯರೆಲ್ಲರೂ ಈ ದಿನ ಬೇಗ ಎದ್ದು ಸ್ನಾನ ಮಾಡಬೇಕು. ನಂತರ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಹಲ್ವಾ, ಪೂರಿ ಮತ್ತು ಕಡಲೆಯನ್ನು ಒಳಗೊಂಡಿರುವ 'ಸಾತ್ವಿಕ ಭೋಜನವನ್ನು ತಯಾರಿಸಿ.

- ನಂತರ ಅಥಾವರಿ ಎಂದು ಕರೆಯಲ್ಪಡುವ ನೈವೇದ್ಯವನ್ನು ದುರ್ಗಾ ದೇವಿಗೆ ತಯಾರಿಸಲಾಗುತ್ತದೆ. ಇದರಲ್ಲಿ, 8 ಪೂರಿಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ. ಜೊತೆಗೆ ಕೆಲವು ಹಲ್ವಾ ಮತ್ತು ಕಡಲೆಯನ್ನು ಇಡಲಾಗುತ್ತದೆ. ಇದರೊಂದಿಗೆ ಸ್ವಲ್ಪ ಹಣವನ್ನೂ ಇಡಲಾಗುತ್ತದೆ.

- ನಂತರ ಮನೆಯ ಪುರುಷರು ಮತ್ತು ಮಹಿಳೆಯರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ ಮತ್ತು ದುರ್ಗೆಗೆ ಆರತಿಯನ್ನು ಮಾಡುತ್ತಾರೆ. ಸಿದ್ಧಪಡಿಸಿದ ಅಥಾವರಿಯನ್ನು ದೇವಿಗೆ ಅರ್ಪಿಸಲಾಗುತ್ತದೆ, ಅದನ್ನೇ ನಂತರ ಹುಡುಗಿಯರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಪೂರಿ, ಹಲ್ವಾ ಮತ್ತು ಕಡಲೆಯ ಒಂದು ಸಣ್ಣ ಭಾಗವನ್ನು ದೇವಿ ಮಾತೆಯ ಮುಂದೆ ಅಗ್ನಿಗೆ ಅರ್ಪಿಸಲಾಗುತ್ತದೆ.

- ನಂತರ ಜನರು ಚಿಕ್ಕ ಹುಡುಗಿಯರನ್ನು ಆಹ್ವಾನಿಸಿ ನೆಲದ ಮೇಲೆ ಕೂರಿಸುತ್ತಾರೆ.

- ಮನೆಯ ಗಂಡಸರು ಮತ್ತು ಹೆಂಗಸರು ಈ ಹೆಣ್ಣುಮಕ್ಕಳ ಪಾದಗಳನ್ನು ನೀರಿನಲ್ಲಿ ತೊಳೆದು ಒಣಗಿಸುತ್ತಾರೆ.

- ಕುಂಕುಮವನ್ನು ಹೆಣ್ಣು ಮಕ್ಕಳ ಹಣೆಗೆ ಹಚ್ಚಲಾಗುತ್ತದೆ ಮತ್ತು ಅವರ ಬಲಗೈಯಲ್ಲಿ ಮೌಲಿ/ಕಲವಾ ಎಂಬ ಕೆಂಪು ಬಣ್ಣದ ದಾರವನ್ನು ಕಟ್ಟಲಾಗುತ್ತದೆ.

- ನಂತರ ಅವರಿಗೆ ಪ್ರದಕ್ಷಿಣಾಕಾರವಾಗಿ ಆರತಿಯನ್ನು ಅರ್ಪಿಸಲಾಗುತ್ತದೆ.

- ಕೊನೆಗೆ ಹೆಣ್ಣು ಮಕ್ಕಳಿಗೆ ಭಕ್ತಿ, ಪ್ರೀತಿಯಿಂದ ಊಟ ಬಡಿಸಲಾಗುತ್ತದೆ.

- ಕೊನೆಯಲ್ಲಿ, ಜನರು ವಿದಾಯ ಹೇಳುವ ಮೊದಲು ಹಣ ಮತ್ತು ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಾರೆ.

ಕನ್ಯಾ ಪೂಜೆಯ ಉಡುಗೊರೆ
- ಊಟದ ಡಬ್ಬಿ
- ಸ್ಕೂಲ್ ಸ್ಟೇಷನರಿ ಕಿಟ್
- ಬಣ್ಣದ ಬಾಕ್ಸ್‌
- ಹೇರ್ ಬ್ಯಾಂಡ್‌ಗಳು, ಹೇರ್ ಕ್ಲಿಪ್‌ಗಳು, ರಬ್ಬರ್ ಬ್ಯಾಂಡ್‌ಗಳು ಮುಂತಾದ ಮೇಕಪ್‌ ವಸ್ತು.
- ಸ್ವೀಟ್ ಹ್ಯಾಂಪರ್, ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಚಿಪ್ಸ್, ಇತ್ಯಾದಿ ವಸ್ತುಗಳನ್ನು ಒಳಗೊಂಡಿರುತ್ತದೆ.
- ಗೊಂಬೆಗಳು ಮತ್ತು ಇತರ ಆಟಿಕೆಗಳು
- ಕೀ ಚೈನ್ಸ್‌
- ಮುದ್ದಾದ ಪ್ಲಾಸ್ಟಿಕ್ ಪ್ಲೇಟ್‌ಗಳು
- ಬ್ಯಾಗ್‌
- ಪುಸ್ತಕಗಳು ಅಥವಾ ಕಥೆ ಪುಸ್ತಕಗಳು
- ರೂಬಿಕ್ಸ್ ಕ್ಯೂಬ್, ಲುಡೋ, ಚೆಸ್ ಬೋರ್ಡ್, ಮುಂತಾದ ಚಿಕ್ಕ ಆಟಿಕೆಗಳು.

No comments:

Post a Comment

If you have any doubts. please let me know...