ನಿರ್ಣಯಸಾಗರ ಪ್ರಕಾಶನದಿಂದ ಪ್ರಕಟವಾದ ದುರ್ಗಾಸಪ್ತಶತಿಯಲ್ಲಿ ಚಂಡೀಹೋಮ ವಿಧಾನದಲ್ಲಿ/ ಹಿರಣ್ಯಕೇಶೀಯ ಮತ್ತು ಋಗ್ವೇದೀಯ ಬ್ರಹ್ಮಕರ್ಮಸಮುಚ್ಚಯದಲ್ಲಿ ತರ್ಪಣ ಕುರಿತು ಹೀಗೆ ಹೇಳಿದೆ.
ಪ್ರಣೀತಾವಿಮೋಕಾದಿ ಕರ್ಮಶೇಷಂ ಸಮಾಪ್ಯ ಮೂಲಮಂತ್ರೇಣ ಹೋಮದಶಾಂಶೇನ ದುಗ್ಧೇನ ಜಲೇನ ವಾ ತರ್ಪಣಂ ಕೃತ್ವಾ ತೇನೈವ ಮಂತ್ರೇಣ ತದ್ದಶಾಂಶೇನ ಮಾರ್ಜಯೇತ್ ||
ಪ್ರಣೀತಾವಿಮೋಕಾದಿ ಹೋಮಕರ್ಮಶೇಷವು ಮುಗಿದ ಮೇಲೆ ಮೂಲಮಂತ್ರ ಅಂದರೆ ನವಾರ್ಣಮಂತ್ರದಿಂದ ಆಹುತಿ ಸಂಖ್ಯಾದಶಾಂಶ ಹಾಲಿನಿಂದ ಅಥವಾ ನೀರಿನಿಂದ ತರ್ಪಣ ಕೊಡಬೇಕು. ಅದೇ ನವಾರ್ಣಮಂತ್ರದಿಂದ ತರ್ಪಣ ದಶಾಂಶ ಮಾರ್ಜನ ಮಾಡಬೇಕು. (ಹೋಮಕಾಲದಲ್ಲಿ ತರ್ಪಣ ಹೇಳಿಲ್ಲ)
ದುರ್ಗೋಪಾಸನ ಕಲ್ಪದ್ರುಮದಲ್ಲಿಯೂ ಹೀಗೆಯೇ ಹೇಳಿದೆ.
ಕರ್ಮಶೇಷಂ ಸಮಾಪ್ಯ ಮೂಲಮಂತ್ರೇಣ ಹೋಮದಶಾಂಶೇನ ದುಗ್ಧೇನ ಜಲೇನ ವಾ ತರ್ಪಣಂ ಕೃತ್ವಾ ತದ್ದಶಾಂಶೇನ ಮಾರ್ಜಯೇತ್ ||
ಚಂಡಿಕೋಪಾಸ್ತಿ ದೀಪಿಕಾದಲ್ಲಿ ತರ್ಪಣ ವಿಧಿ.
.....ಸರ್ಪಿಸ್ತಿಲಮಿಶ್ರಪಾಯಸೇನ ಯಥಾವಿಧಿ ಹೋಮಂ ಸಂಪಾದ್ಯ ಸತಿ ಕಾಮೇ ಹೋಮದಶಾಂಶತಸ್ತರ್ಪಣಂ ತದ್ದಶಾಂಶತೋ ಮಾರ್ಜನಂ ಕುರ್ಯಾತ್ | ತೇ ಚ ಸ್ವಸಂಖ್ಯಾಪೇಕ್ಷಯಾ ದೇವೀಮಾಹಾತ್ಮ್ಯಮಂತ್ರಾಣಾಂ ಬಹ್ವಾಧಿಕ್ಯೇನ ತೈಃ ಕರ್ತುಮಶಕ್ಯತ್ವಾತ್ ನವಾರ್ಣಮಂತ್ರೇಣ ವಾ ನಮೋ ದೇವ್ಯೈ ಇತಿ ಶ್ಲೋಕಮಂತ್ರೇಣ ವಾ ಸ್ವಸ್ವಸಂಖ್ಯಯಾ ಕಾರ್ಯೇ ತತ್ರಾಚಮ್ಯ ಪ್ರಾಣಾಯಾಮ ದೇಶ ಕಾಲಸಂಕೀರ್ತನಾದಿ ಕೃತ್ವಾ | ಮಯಾಕೃತಸ್ಯ ಸಹೋಮಸ್ಯ ಸಪ್ತಶತೀಪುರಶ್ಚರಣಜಪಸ್ಯ ಯಥಾವತ್ ಫಲಪ್ರಾಪ್ತ್ಯರ್ಥಂ ಹೋಮದಶಾಂಶತಸ್ತರ್ಪಣಂ ಕರಿಷ್ಯೇ ಇತಿ ಸಂಕಲ್ಪ್ಯ | ನವಾರ್ಣೇನ ಕರಣಪಕ್ಷೇ ತಸ್ಯ ಋಷ್ಯಾದಿ ಸ್ಮೃತ್ವಾ ಮಹಾಲಕ್ಷ್ಮೀತರ್ಪಣೇ ವಿನಿಯೋಗಃ | ಇತ್ಯುಕ್ತ್ವಾ ಋಷ್ಯಾದಿನ್ಯಾಸಮೂಲಮಂತ್ರನ್ಯಾಸ ಧ್ಯಾನಮಾನಸಪೂಜನಾನಿ ಕೃತ್ವಾ ಮೂಲಮಂತ್ರಾಂತೇ ಮಹಾಲಕ್ಷ್ಮೀಂ ತರ್ಪಯಾಮೀತಿ ದುಗ್ಧೇನ ಜಲೇನ ವಾ ಹೋಮದಶಾಂಶತಸ್ತರ್ಪಯಿತ್ವಾ | ನಮೋ ದೇವ್ಯೈ ಇತಿ ಮಂತ್ರೇಣ ಕರಣಪಕ್ಷೇ ನಮೋ ದೇವ್ಯೈ ಇತಿ ಮಂತ್ರಸ್ಯ ದೇವಾಋಷಯಃ , ಅನುಷ್ಟುಪ್ ಛಂದಃ , ಆದಿಶಕ್ತಿರ್ಮಹಾಲಕ್ಷ್ಮೀರ್ದೇವತಾ , ತರ್ಪಣೇ ವಿನಿಯೋಗಃ | ಇತ್ಯುಕ್ತ್ವಾ ಹ್ರೀಂ ಬೀಜೇನ ಷಡಂಗಂ ಕೃತ್ವಾ ಸರ್ವಸ್ಯಾದ್ಯಾ ಮಹಾಲಕ್ಷ್ಮೀರಿತಿ ಶ್ಲೋಕತ್ರಯೇಣ ಧ್ಯಾತ್ವಾ ಮಾನಸೋಪಚಾರೈಃ ಸಂಪೂಜ್ಯೋಕ್ತಶ್ಲೋಕೇನ ಪೂರ್ವವನ್ಮಹಾಲಕ್ಷ್ಮೀಂ ತರ್ಪಯೇತ್ | ಇತಿ ತರ್ಪಣಮ್ ಅಥ ಮಾರ್ಜನಮ್| ಪ್ರಾಗ್ವದಾಚಮನಾದಿ ವಿಧಾಯ ತರ್ಪಣದಶಾಂಶೇನ ಮಾರ್ಜನಸಂಕಲ್ಪಂ ಕೃತ್ವಾ ಮಂತ್ರಸ್ಯ ಪ್ರಾಗ್ವದೃಷ್ಯಾದಿಸ್ಮರಣಾದಿಕಂ ವಿಧಾಯ ಮೂಲಮಂತ್ರಾಂತೇ ನಮೋ ದೇವ್ಯೈ ಇತಿ ಮಂತ್ರಾಂತೇ ವಾ ಆತ್ಮಾನಮಭಿಷಿಂಚಾಮೀತಿ ತರ್ಪಣ ದಶಮಾಂಶತೋ ಮಾರ್ಜಯೇತ್ ||
ಯಥಾವಿಧಿ ಹೋಮವು ಸಂಪನ್ನವಾದ ಮೇಲೆ ಕಾಮನೆ ಇದ್ದಲ್ಲಿ ಹೋಮದಶಾಂಶ ತರ್ಪಣ, ತದ್ದಶಾಂಶ ಮಾರ್ಜನ ಮಾಡಬೇಕು. ದೇವೀಮಹಾತ್ಮೆಯ ಮಂತ್ರಗಳು ಬಹುಅಧಿಕ ಇರುವುದರಿಂದ ಆ ಮಂತ್ರಗಳ ಪುನರುಚ್ಚಾರದಿಂದ ತರ್ಪಣವು ಅಶಕ್ಯವಾದ್ದರಿಂದ ನವಾರ್ಣಮಂತ್ರದಿಂದ ಅಥವಾ ನಮೋ ದೇವ್ಯೈ.... ಈ ಶ್ಲೋಕಮಂತ್ರದಿಂದ ದಶಾಂಶ ತರ್ಪಣ ಕೊಡಬೇಕು. ಆಚಮನ ಪ್ರಾಣಾಯಾಮ ದೇಶಕಾಲಸಂಕೀರ್ತನ ಸಂಕಲ್ಪ ಋಷ್ಯಾದಿನ್ಯಾಸಧ್ಯಾನ ಸಹಿತ ತರ್ಪಣ ಮತ್ತು ಮಾರ್ಜನವನ್ನು ವಿಧಿಸಿದೆ. ಹಾಲಿನಿಂದ ಅಥವಾ ನೀರಿನಿಂದ ತರ್ಪಣ.
ಪ್ರಾಯಶಃ ಎಲ್ಲ ಗ್ರಂಥಗಳಲ್ಲಿಯೂ ಚಂಡೀಹೋಮ ಮುಗಿದ ಮೇಲೆಯೇ ತರ್ಪಣ ಹೇಳಿದೆ. ಹೋಮಕಾಲದಲ್ಲಿ ತರ್ಪಣ ಹೇಳಿಲ್ಲ. ಇದು ವಿಧ್ಯುಕ್ತವಲ್ಲ. ಹೋಮಕಾಲದಲ್ಲಿಯೇ ತರ್ಪಣ ಬಹುಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ. ಇದು ಸಾಂಪ್ರದಾಯಿಕವಾಗಿ ಬಂದಿದೆ. ಒಂದು ಭಟ್ಟರು ಖಾಲಿ ಕೂರುವ ಬದಲು ತರ್ಪಣಕರ್ಮ ಕೊಟ್ಟಂತಾಯಿತು, ಸಪ್ತಶತೀ ಶ್ಲೋಕಮಂತ್ರಗಳಿಂದಲೇ ತರ್ಪಣ ಆಗುತ್ತದೆ ಎಂದು ರೂಢಿಗೆ ಬಂದಿರಬಹುದು. ಪುರಶ್ಚರಣದ ಒಂದು ಅಂಗವು ನಡೆಯುತ್ತಿರುವಾಗ ಇನ್ನೊಂದು ಅಂಗದ ಆಚರಣೆ ವಿಹಿತವಲ್ಲ.
ಹಾಲಿನಿಂದ ಇಲ್ಲವೇ ನೀರಿನಿಂದ ತರ್ಪಣ ಹೇಳಿದ್ದು ದೇವತೀರ್ಥದಿಂದ ತರ್ಪಣ ಕೊಡಬೇಕು. ಹಾಲಿಗೆ ಉತ್ತುತ್ತೆ/ಕಲ್ಲುಸಕ್ಕರೆ/ಒಣದ್ರಾಕ್ಷಿ/ಲವಂಗ/ಏಲಕ್ಕಿ/ಜ್ಯೇಷ್ಠಮಧು/ಮಧು /ಜಾಯಿಕಾಯಿ ಇತ್ಯಾದಿ ಸೇರಿಸುವುದು ಕೂಡಾ ಸಾಂಪ್ರದಾಯಿಕವಾಗಿ ಬಂದಿದೆ. ಮುಂದೆ ತೀರ್ಥ ಸೇವಿಸುವುದಕ್ಕೆ ರುಚಿಯಾಗಿರಲೆಂದು ಕಂಡುಕೊಂಡ ಮಾರ್ಗ. ತರ್ಪಣವಾಗಿ ಬಿಟ್ಟಿದ್ದನ್ನು ತೀರ್ಥವೆಂದು ಪ್ರಾಶನ ಮಾಡುವುದು ಸಲ್ಲದು. ತರ್ಪಣಾವಶಿಷ್ಟ ತೀರ್ಥವೆಂದು ಸ್ವೀಕರಿಸಬಹುದು. ಇದೂ ವಿಧ್ಯುಕ್ತವಲ್ಲ. ಕೆಲವು ವೈದಿಕರು ಪಾತ್ರೆಯಲ್ಲಿರುವ ತರ್ಪಣ ದ್ರವ್ಯವನ್ನು ಸೌಟಿನಲ್ಲಿ ಎತ್ತಿ ಅದರಲ್ಲೇ ಬಿಡುತ್ತಾರೆ. ಕೇಳಿದರೆ ಜಲಮಧ್ಯೇ ಜಲಂ ಕ್ಷಿಪೇತ್ ಎಂದು ಸೂತ್ರ ಹೇಳಿಬಿಡುತ್ತಾರೆ. ಅರ್ಘ್ಯ ಪ್ರದಾನದ ಸೂತ್ರವನ್ನು ಇಲ್ಲಿಗೆ ಅನ್ವಯಿಸಿಕೊಂಡುಬಿಡುತ್ತಾರೆ!! ಬೇರೆಯದೇ ಪಾತ್ರೆಯಲ್ಲಿ ದೇವತೀರ್ಥದಿಂದ ತರ್ಪಣ ಕೊಡಬೇಕೆಂದು ನಿಯಮ.
ತರ್ಪಣ ಆದ ಕೂಡಲೇ ಮಾರ್ಜನ. ಇದು ಕಲಶವಿಸರ್ಜನಾನಂತರ ಮಾಡುವ ಪ್ರೋಕ್ಷಣೆ ಅಲ್ಲ. ಶುದ್ಧಜಲದಿಂದ ಯಜಮಾನನು ನವಾರ್ಣಮಂತ್ರ ಅಥವಾ ನಮೋ ದೇವ್ಯೈ... ಈ ಶ್ಲೋಕಮಂತ್ರದಿಂದ ತರ್ಪಣದಶಾಂಶ ಮಾರ್ಜನಮಾಡಿಕೊಳ್ಳಬೇಕು ಅಥವಾ ವೈದಿಕರು ಯಜಮಾನನಿಗೆ ಮಾರ್ಜನ ಮಾಡಬೇಕು.
ಒಟ್ಟಿನಲ್ಲಿ ಚಂಡೀಹೋಮವು ಸಂಪನ್ನವಾದ ಮೇಲೆ ನವಾರ್ಣಮಂತ್ರದಿಂದ ಅಥವಾ ನಮೋ ದೇವ್ಯೈ ಶ್ಲೋಕಮಂತ್ರದಿಂದ ತರ್ಪಣ ಮತ್ತು ಮಾರ್ಜನವು ಚಂಡೀಪುರಶ್ಚರಣದ ನಿಯಮವಾಗಿದೆ.
🖎ರವೀಂದ್ರ ಶರ್ಮಾ ಕೋಣನಕಟ್ಟೆ.
No comments:
Post a Comment
If you have any doubts. please let me know...