*“ಕೋಪ ಬರುತ್ತಿದೆ”*
ಎಂದು ಮಗ ಪ್ರತಿ ಸಲ ಹೇಳಿದಾಗ…
ಗೋಡೆಗೆ ಮೊಳೆ ಹೊಡಿ ಎನ್ನುತ್ತಾನೆ ತಂದೆ!
*ಯಾಕೆ ಗೊತ್ತಾ?*
*ಗೋಡೆಗೆ ಹೊಡೆದ ಮೊಳೆಗಳು…*
ಅದ್ಭುತವಾದ *ಜೀವನ ಸತ್ಯ.*
ಮಗನಿಗೆ…
ತಂದೆ ಕೆಲವು ಮೊಳೆಗಳನ್ನು ಕೊಟ್ಟು…
*ನಿನಗೆ ನಿತ್ಯ ಎಷ್ಟು ಮಂದಿಯ ಮೇಲೆ ಕೋಪ* ಬರುತ್ತದೋ *ಅಷ್ಟು ಮೊಳೆ* ಗಳನ್ನು ಗೋಡೆಗೆ ಹೊಡಿ ಎಂದು ಹೇಳುತ್ತಾನೆ..!
ಮೊದಲ ದಿನ 20, ಬಳಿಕ 15, ಮೂರನೇ ದಿನ 10 ಹೀಗೆ..
ತನ್ನಲ್ಲಿ ಇದ್ದ ಮೊಳೆಗಳನ್ನೆಲ್ಲಾ ಗೋಡೆಗೆ ಹೊಡೆದುಬಿಟ್ಟ ಮಗ.
ಮೊಳೆಗಳು ಮುಗಿದ ಕೂಡಲೆ…
ಮಗ ತಂದೆ ಬಳಿ ಬಂದು, *"ಅಪ್ಪಾ ನೀವು ಕೊಟ್ಟ ಮೊಳೆಗಳೆಲ್ಲಾ ಮುಗಿದುಹೋದವು"* ಎಂದ.
*"ಓ… ಅಂದರೆ ನಿನಗೆ ತುಂಬಾ ಮಂದಿ ಮೇಲೆ ಕೋಪ ಬಂದಂತಿದೆ.."*
ಎನ್ನುತ್ತಾರೆ ತಂದೆ..!
ಮತ್ತು... *"ಆ…ಆದರೆ… ನಾಳೆಯಿಂದ ನಿತ್ಯ, ಗೋಡೆಗೆ ನೀನು ಹೊಡೆದ ಕೆಲವು ಮೊಳೆಗಳನ್ನು ತೆಗೆದುಬಿಡು"* ಎಂದು ಮಗನಿಗೆ ತಂದೆ ಹೇಳುತ್ತಾನೆ…
ತಂದೆ ಹೇಳಿದಂತೆ…
ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆಯುತ್ತಾನೆ ಮಗ..
ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟವೂ ಪಟ್ಟ. ಅದನ್ನು ನೋಡಿ ತಂದೆ ಕೇಳಿದ, *"ಏನಾಯಿತು?"* ಎಂದು…
*"ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದುಬಿಟ್ಟೆ ಅಪ್ಪ"* ಎಂದ ಮಗ.
*" ಸರಿ, ಹಾಗಿದ್ದರೆ ಗೋಡೆ ಹೇಗಿದೆ ಈಗ? ಮೊಳೆಗಳೇನೋ ತೆಗೆದುಬಿಟ್ಟೆಯಲ್ಲ.."*, ಎಂದ ತಂದೆ.
*"ಹಾ, ತೆಗೆದೆ. ಆದರೆ ಇದರಿಂದ ಗೋಡೆಗೆ ಆದ ರಂಧ್ರಗಳು ಮಾತ್ರ ಹಾಗೆಯೇ ಇವೆ"* ಎಂದ ಮಗ.
ಆಗ ತಂದೆ… ಮಗನಿಗೆ ಹೇಳಿದ.., *“ನೋಡಿದೆಯಾ.. ಮೊಳೆಗಳನ್ನು ಹೊಡೆಯುವಾಗ ಸುಲಭವಾಗಿ ಹೊಡೆದೆ..! ತೆಗೆಯುವಾಗ ತುಂಬಾ ಕಷ್ಟಪಟ್ಟೆ. ಮೊಳೆಗಳನ್ನು ತೆಗೆದ ರಂಧ್ರಗಳೂ ಹಾಗೆಯೇ ಇವೆ.. ಅಂದರೆ ನಮಗೆ ತುಂಬಾ ಮಂದಿ ಮೇಲೆ ಕೋಪ ಬರುತ್ತದೆ, ಆ ಕೋಪದಲ್ಲಿ ಅವರ ಮನಸ್ಸಿಗೆ ಘಾಸಿ ಮಾಡುತ್ತೇವೆ.. (ಅಂದರೆ ಮೊಳೆ ಹೊಡೆಯುತ್ತೇವೆ), ಬಳಿಕ sorry ಹೇಳುತ್ತೇವೆ (ಅಂದರೆ ಹೊಡೆದ ಮೊಳೆಗಳನ್ನು ತೆಗೆಯುತ್ತೇವೆ), ಆದರೆ sorry ಹೇಳಿಬಿಟ್ಟರೆ ಅವರ ಮನಸ್ಸಿಗೆ ಆದ ಗಾಯ (ಅಂದರೆ ರಂಧ್ರಗಳನ್ನು) ಮಾತ್ರ ಮುಚ್ಚಲು ಸಾಧ್ಯವಿಲ್ಲ. ಹಾಗಾಗಿಯೇ ಮಾತುಗಳು-ಬುಲೆಟ್‌ನಂತಹವು, ಅಳೆದು ತೂಗಿ ಮಾತನಾಡಬೇಕು, ಇತರರಿಗೆ ನೋವಾಗದಂತೆ ಮಾತನಾಡಬೇಕು –"* ಎಂದ ತಂದೆ.
*ಪ್ರೀತಿ, ಸೌಜನ್ಯ, ಅಕ್ಕರೆ ತುಂಬಿ ಸಕ್ಕರೆ ಆಗಿರಲಿ ಮಾತು*
No comments:
Post a Comment
If you have any doubts. please let me know...