October 30, 2021

ಸುಖವೆಂಬುದು ನಮ್ಮಲ್ಲೇ ಇದೆ

 ಸಾಧುವೊಬ್ಬನ ಭೇಟಿಗಾಗಿ ಕಾಡನ್ನು ಪ್ರವೇಶಿಸಿದವನೊಬ್ಬ ಅವನಿಗೆ ಕೇಳುತ್ತಾನೆ; " ನಿನ್ನಲ್ಲೊಂದು ಅದ್ಭುತ ಜಾದೂ ನಾಣ್ಯವೊಂದಿದೆಯೆಂದು ಜನ ಹೇಳುತ್ತಾರೆ. ಅದನ್ನಿಟ್ಟುಕೊಂಡವನಗೆ ಅತೃಪ್ತಿ ಎಂಬುದೇ ಇರಲಾರದಂತೆ , ಹೌದೆ?"
        ಆ ಸಾಧು ನಗುತ್ತ ಆ ನಾಣ್ಯವನ್ನು ತೋರಿಸಿದ.
       " ಅದನ್ನು ನನಗೆ ಕೊಡು, ಅದರ ಹಣ ಎಷ್ಟಾಗುತ್ತೋ ಅಷ್ಟನ್ನು ನಾನು ಕೊಡುತ್ತೇನೆ " ಎಂದು ವ್ಯಕ್ತಿ ಕೇಳಿದಾಗ ಸಾಧುವು, "ಅದು ಮಾರುವ ವಸ್ತುವಲ್ಲ" ಎಂದು ನಯವಾಗಿಯೇ ಹೇಳಿದ. 
         ಕತ್ತಲಾಗುತ್ತ ಬಂದಂತೆ ಕಾಡಿನಲ್ಲಿ ರಾತ್ರಿ ಓಡಾಟ ಭಯಾನಕವೂ ಆಗಿರುವುದರಿಂದ,  ಸಾಧುವು ತನ್ನ ಗುಡಿಸಲಲ್ಲೇ ಅವನಿಗೂ ಮಲಗುವ ಅವಕಾಶವೊದಗಿಸಿದ. ಆದರೆ ಈತನಿಗೆ ಹೇಗಾದರೂ ಮಾಡಿ ಆ ನಾಣ್ಯ ಪಡೆಯಬೇಕೆಂಬ ಆಸೆಯಿಂದ ನಿದ್ರೆಯೇ ಬರಲಿಲ್ಲ. ಸಾಧುಗೆ ನಿದ್ರೆ ಬಂದಾಕ್ಷಣ ಎದ್ದು ಇಡೀ ಗುಡಿಸಲನ್ನೇ ತಡಕಾಡಿದ.ಸಿಗಲಿಲ್ಲ. ಬೆಳಗಿನ ಜಾವದಲ್ಲಿ ಸಾಧು ಎದ್ದು ತನ್ನ ಬೆಳಗಿನ ಕ್ರಿಯೆಗಳಿಗೆಂದು ಹೊರ ಹೋದಾಗ, ಅವನ ಹಾಸಿಗೆ, ಬಟ್ಟೆ ಇತ್ಯಾದಿಗಳನ್ನೂ ಹುಡುಕಾಡಿದ. ನಾಣ್ಯದ ಕುರುಹೇ ಇಲ್ಲ. 
         
ಕೊನೆಗೆ ಕಳ್ಳ ತನ್ನ ನಡವಳಿಕೆಗೆ ತಾನೇ ನಾಚಿಕೆ ಪಟ್ಟುಕೊಂಡು ಸಾಧುವಿನಲ್ಲಿ ಕ್ಷಮೆಯಾಚಿಸಿ, ಕುತೂಹಲ ತಡೆಯಲಾರದೇ ನಾಣ್ಯ ಇದ್ದುದೆಲ್ಲಿ ಎಂದು ಹೇಳುವಂತೆ ಕೇಳಿಕೊಂಡ. ಸಾಧು ನಸುನಗುತ್ತ, ಆ ವ್ಯಕ್ತಿ ತಲೆ ಇಟ್ಟು ಮಲಗಿದ್ದ ದಿಂಬನ್ನೆಳೆದ. ಆಶ್ಚರ್ಯವೆಂಬಂತೆ ಅಲ್ಲಿ ಆ ನಾಣ್ಯವಿತ್ತು.
         " ಇಲ್ಲೊಂದು ಕಡೆಯ ಹೊರತಾಗಿ ಬೇರೆಲ್ಲೆಡೆಗೂ ನೀನು ಹುಡುಕಾಡಿದೆ" ಎಂದು ಆ ಸಾಧು ಸ್ತಂಭೀಭೂತನಾಗಿ ನಿಂತಿದ್ದ ಈ ವ್ಯಕ್ತಿಗೆ ಹೇಳುತ್ತಾನೆ. 
" ಸುಖವಂಬುದು ಯಾವಾಗಲೂ ನಿನ್ನ ದಿಂಬಿನಡಿಯಲ್ಲಿಯೇ ಇರುತ್ತದೆ. ನೆಮ್ಮದಿಗಾಗಿ ಜನ ಎಲ್ಲೆಲ್ಲೋ ಹುಡುಕಾಡುತ್ತಾರೆ. ತಮ್ಮ ತಲೆಯಲ್ಲಿಯೇ ಅದು ನೆಲೆಸಿರುತ್ತದೆಂಬ ಸತ್ಯ ಅವರಿಗೆ ತಿಳಿದಿರಲಾರದು."

ಸದ್ವಿಚಾರ ಸಂಗ್ರಹ

October 19, 2021

ಪರಶಿವನ ಜನನ ವೃತ್ತಾಂತ

*ಸರ್ವಾಂತರ್ಯಾಮಿಯಾದ ಪರಶಿವನ ಜನನದ ಕುರಿತಾದ ಕಥೆ ಕೇಳಿದ್ದೀರಾ?*

ಜಗತ್ಪಾಲನೆಗಾಗಿ ಅವತರಿಸಿದ ಶಿವನ ಲೀಲೆಯ ಬಗ್ಗೆ ಅನೇಕ ಕಥೆ ಹಾಗೂ ಉಪ ಕಥೆಗಳು ಇರುವುದನ್ನು ಕೇಳಿರಬಹುದು. ಆದರೆ ಶಿವನ ಜನನ ಹೇಗಾಯಿತು? ಶಿವನ ತಂದೆ ಯಾರು ಎನ್ನುವುದಕ್ಕೆ ಉತ್ತರಗಳಲಿಲ್ಲ. ಆದಿ ಹಾಗೂ ಅಂತ್ಯವಿಲ್ಲದ ಪರಶಿವನ ಜನನದ ಕುರಿತಾದ ಪುರಾಣ ಕಥೆಗಳು ಇಲ್ಲಿದೆ..

ದೇವಾದಿ ದೇವ ಎಂದು ಕರೆಯಲ್ಪಡುವ ಶಿವನು ಸೃಷ್ಟಿಯ ಲಯ ಕರ್ತ. ತ್ರಿಲೋಕದ ಕಲ್ಯಾಣಕ್ಕಾಗಿಯೇ ಶಿವನು ಹುಟ್ಟಿ ಬಂದ ಎಂದು ಹೇಳಲಾಗುವುದು. ಸೃಷ್ಟಿಯ ಒಳಿತಿಗಾಗಿ ಇರುವ ತ್ರಿಮೂರ್ತಿಗಳಲ್ಲಿ ಶಿವನು ಅತ್ಯಂತ ಸರಳ ಹಾಗೂ ಶಕ್ತಿಶಾಲಿ. ಸದಾ ಕಾಲ ದೀರ್ಘ ತಪಸ್ಸಿನ ಮೂಲಕ ಜಗತ್ತಿನ ಒಳಿತು ಮತ್ತು ಕೆಡುಕನ್ನು ನಿರ್ಧರಿಸುವ ದೇವ. ಹಾಗಾಗಿ ಶಿವ ಎಂದರೆ ಹಿಮ ಪರ್ವತದಲ್ಲಿ ಧ್ಯಾನಿಸುತ್ತಾ ಕುಳಿತಿರುವ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. 

ಜಗತ್ಪಾಲನೆಗಾಗಿ ಅವತರಿಸಿದ ಶಿವನ ಲೀಲೆಯ ಬಗ್ಗೆ ಅನೇಕ ಕಥೆ ಹಾಗೂ ಉಪ ಕಥೆಗಳು ಇರುವುದನ್ನು ಕೇಳಿರಬಹುದು. ಆದರೆ ಶಿವನ ಜನನ ಹೇಗಾಯಿತು? ಶಿವನ ತಂದೆ ಯಾರು ಎನ್ನುವುದಕ್ಕೆ ನಿರ್ದಿಷ್ಟ ಉತ್ತರಗಳಿಲ್ಲ. ಆದಿ ಹಾಗೂ ಅಂತ್ಯವಿಲ್ಲದ ಪರಶಿವನ ಜನನದ ಕುರಿತಾದ ಪುರಾಣ ಕಥೆಗಳು ಇಲ್ಲಿದೆ ಓದಿ.

ವಿಶೇಷ ಶಕ್ತಿಗಳ ಆದೇಶದ ಮೇರೆಗೆ ಬ್ರಹ್ಮನು ಸ್ವಯಂ ವಂಚನೆ, ಸಾವಿನ ಪ್ರಜ್ಞೆ, ಹತಾಶೆಯ ನಂತರ ಕೋಪ, ಸುಳ್ಳು, ಮಾಲಿಕತ್ವದ ಪ್ರಜ್ಞೆ, ಭ್ರಾಂತಿ, ದೈಹಿಕ ಪರಿಕಲ್ಪನೆ, ಒಬ್ಬರ ನೈಜ ಗುರುತನ್ನು ಮರೆಯುವಂತಹ ಗುಣಗಳನ್ನು ಸೃಷ್ಟಿ ಮಾಡಿದನು. ಕಾಳಿಯ ಯುಗದಲ್ಲಿ ಈ ಗುಣಗಳು ನಿಯಮಾಧೀನ ಆತ್ಮಗಳ ಮೇಲೆ ಸಕ್ರಿಯವಾಗಿ ಪ್ರಭಾವ ಬೀರಿದವು. ಆಗ ಇವೆಲ್ಲವೂ ತಪ್ಪು ಎನ್ನುವ ಮನೋಭಾವನೆ ಉಂಟಾಯಿತು. ಈ ಗುಣಗಳನ್ನು ಸೃಷ್ಟಿ ಮಾಡಿದ ಬ್ರಹ್ಮನು ತಪ್ಪಿತಸ್ಥ ಎಂದು ಪರಿಗಣಿಸಿದರು.

ಬ್ರಹ್ಮನ ಮೇಲೆ ಬಂದ ಅಪವಾದದಿಂದ ಬ್ರಹ್ಮನು ಸಾಕಷ್ಟು ಅಸಮಾಧಾನಕ್ಕೆ ಒಳಗಾದನು. ಈ ಅಸಮಾಧಾನಗಳನ್ನು ತೊಡೆದು ಹಾಕಿ ಶುದ್ಧೀಕರಿಸಿಕೊಳ್ಳುವ ಸಲುವಾಗಿ ಪರಮಾತ್ಮನ ಮೇಲೆ ಏಕಾಗ್ರತೆಯನ್ನು ಕೇಂದ್ರೀಕರಿಸಿದನು. ನಂತರ ತನ್ನ ಪುತ್ರರಾದ ಸನಕ, ಸನಂದ, ಸನಾತನ ಮತ್ತು ಸನತ್ ಕುಮಾರರಂತೆ ನಾಲ್ಕು ಮಹಾನ್ ಋಷಿಮುನಿಗಳನ್ನು ಸೃಷ್ಟಿಸಿದನು. ಆ ಋಷಿಗಳಿಗೆ ತಮ್ಮ ಸಂತತಿಯನ್ನು ಹೆಚ್ಚಿಸಬೇಕು ಅಥವಾ ವಿಶ್ವದಲ್ಲೆಲ್ಲಾ ತಮ್ಮ ಸಂತತಿ ಇರಬೇಕು ಎನ್ನುವ ಯಾವುದೇ ಆಸೆಗಳಿರಲಿಲ್ಲ. ಅವರು ತಮ್ಮ ತಂದೆಗೆ ಅತ್ಯಂತ ಅವಿಧೇಯರಾಗಿ ಇದ್ದರು.ಇದರಿಂದಾಗಿ ಬ್ರಹ್ಮನ ನಾಲ್ಕೂ ಶಿರಗಳಲ್ಲಿ ಅತಿಯಾದ ಕೋಪ ಹುಟ್ಟಿತು. ಅವನ ಕೋಪವನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆ ಅತಿಯಾದ ಕೋಪದಿಂದಾಗಿ ಹುಬ್ಬುಗಳ ನಡುವೆ ಕೆಂಪು ಮತ್ತು ನೀಲಿ ಬಣ್ಣದ ಮಗು ಸೃಷ್ಟಿಯಾಯಿತು.

*ಕೋಪದಲ್ಲಿ ಹುಟ್ಟಿದ ಮಗು*
ಕೋಪದಿಂದ ಹುಟ್ಟಿದ ಆ ಮಗು ಆತಂಕದಿಂದ ಅಳುತ್ತಿತ್ತು. ಆಗ ಬ್ರಹ್ಮ ದೇವನು ಆ ಮಗುವನ್ನು ರುದ್ರ ಎಂದು ಕರೆದನು. ನಂತರ ಆ ಮಗುವಿಗೆ ಬ್ರಹ್ಮನು "ನೀನು ನನ್ನ ಪ್ರೀತಿಯ ಹುಡುಗ. ನಿನ್ನ ವಿಕಾಸಕ್ಕಾಗಿ ಕೆಲವು ವಿಶೇಷ ಸ್ಥಳಗಳನ್ನು ಆಯ್ಕೆ ಮಾಡಿದ್ದೇನೆ. ಅದುವೇ ಹೃದಯ, ಇಂದ್ರೀಯಗಳು, ಜೀವನದ ಗಾಳಿ, ಆಕಾಶ, ಬೆಂಕಿ, ನೀರು, ಭೂಮಿ, ಸೂರ್ಯ, ಚಂದ್ರ ಮತ್ತು ಸಂಯಮಗಳು. ನಿನಗೆ ಸೃಷ್ಟಿಯಲ್ಲಿ ಮಾನ್ಯು, ಮನು, ಮಹಿನಾಸ, ಮಹಾನ್, ಶಿವ, ಶಧ್ವಜಾ, ಉಗ್ರರೇತಾ, ಭಾವ, ಕಲಾ, ಮಹಾದೇವ, ದೃತವೃತ ಎಂದು ಕರೆಯುವರು ಎಂದನು. ನಂತರ ನಿನ್ನ ಮಡದಿಯಾಗಿ ಧಿ, ಧರ್ತಿ, ರಾಸಲಾ, ಉಮಾ, ನಿಯುತ್, ಸರ್ಪಿ, ಇಳಾ, ಅಂಬಿಕಾ, ಐರಾವತಿ, ಸ್ವಧಾ ಮತ್ತು ದೀಕ್ಷಾ ಎನ್ನುವವರು ಇರುತ್ತಾರೆ ಎಂದು ಹೇಳಿದನು.

ಈ ರೀತಿಯಾಗಿ ಹುಟ್ಟಿಬಂದ ಶಿವನು ತನ್ನ ಅಸ್ತಿತ್ವವನ್ನು ಪಡೆದುಕೊಂಡನು. ನಂತರ ತ್ರಿಲೋಕದಲ್ಲಿ ನಾಶ ಮಾಡುವ ಮತ್ತು ಸರ್ವನಾಶವನ್ನು ನಿರ್ಧರಿಸುವ ಉಸ್ತುವಾರಿಯನ್ನು ಪಡೆದುಕೊಂಡನು. ಸೃಷ್ಟಿಯಲ್ಲಿ ಯಾವುದು ಒಳಿತು? ಯಾವುದು ಕೆಟ್ಟದ್ದು? ಎನ್ನುವುದನ್ನು ಅರಿತು ಲಯದ ಕೆಲಸವನ್ನು ನಿರ್ವಹಿಸಿದನು. ಹಾಗಾಗಿಯೇ ಮಹಾನ್ ದೇವನಿಗೆ ಲಯ ಕರ್ತ ಎಂದು ಕರೆಯಲಾಯಿತು. 

ಶಿವನ ಜನನದ ಇನ್ನೊಂದು ಕಥೆ
ಶಿವನ ಲೀಲೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಇರುವುದನ್ನು ಕಾಣಬಹುದು. ಅಂತೆಯೇ ಶಿವನ ಹುಟ್ಟಿಗೆ ಸಂಬಂಧಿಸಿದಂತೆಯೇ ಇನ್ನೊಂದು ಪುರಾಣದ ಕಥೆಯಿದೆ. ಆ ಕಥೆಯ ಪ್ರಕಾರ ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು? ಎನ್ನುವ ಚರ್ಚೆ ನಡೆಯಿತು. ಆ ಸಮಯದಲ್ಲಿ ಒಂದು ಪ್ರಕಾಶಮಾನವಾದ ಕಂಬವೊಂದು ಪ್ರತ್ಯಕ್ಷವಾಯಿತು. ಅದು ಮರದ ರೂಪದಲ್ಲಿ ತೋರಿತು. ಅದರ ಬೇರುಗಳು ಪಾತಾಳದ ಒಳಗೆ ಹಾಗೂ ಮರದ ತುದಿಯು ಆಕಾಶಕ್ಕಿಂತಲೂ ಎತ್ತರಕ್ಕೆ ವ್ಯಾಪಿಸಿತು. ಈ ಮರದ ಆಳ ಮತ್ತು ಎತ್ತರವನ್ನು ತಿಳಿಯಬೇಕು ಎಂದು ಬ್ರಹ್ಮ ಮತ್ತು ವಿಷ್ಣು ನಿರ್ಧರಿಸಿದರು. 

ಅಂತೆಯೇ ಬ್ರಹ್ಮ ಹಂಸ ಪಕ್ಷಿಯ ಅವತಾರ ತಳೆದು, ಮರದ ತುದಿಯನ್ನು ತಿಳಿಯಲು ಮೇಲೆ ಹಾರಿ ಹೋದನು. ವಿಷ್ಣು ಮರದ ಬೇರಿನ ಆಳ ತಿಳಿಯಲು ಹಂದಿ ರೂಪ ತಳೆದು, ಭೂಮಿಯನ್ನು ಕೊರೆಯುತ್ತಾ ಪಾತಾಳಕ್ಕೆ ಹೋದನು. ಆದರೂ ಇಬ್ಬರಿಗೂ ಅದರ ಬುಡ ಮತ್ತು ತುದಿಯನ್ನು ನಿರ್ಧರಿಸಲು ಸಾಧ್ಯವಾಗದೆ ಭೂಮಿಗೆ ಮರುಳಿದರು. ಆಗ ಕಂಬ ಒಡೆದು ಶಿವನು ಹೊರ ಬಂದನು. ಅಪಾರ ಶಕ್ತಿಯನ್ನು ಹೊಂದಿರುವ ಶಿವನನ್ನು ಕಂಡು ಇವನು ನಮಗಿಂತಲೂ ಶಕ್ತಿ ಶಾಲಿ ಎಂದು ಭಾವಿಸಿದರು. ನಂತರ ತಮ್ಮ ಜೊತೆಗೆ ಶಿವನನ್ನು ಸೇರಿಸಿಕೊಂಡು, ಜಗತ್ತಿನ ಸೃಷ್ಟಿ, ಪಾಲನೆ ಹಾಗೂ ಲಯದ ಕರ್ತವ್ಯಗಳನ್ನು ಹಂಚಿಕೊಂಡರು ಎಂದು ಹೇಳಲಾಗುವುದು. ಈ ರೀತಿಯಲ್ಲಿ ಶಿವನ ಜನನವಾಯಿತು ಎಂದು ಅನೇಕ ಕಥೆ ಪುರಾಣಗಳು ವಿವರಿಸುತ್ತವೆ.

ಶಿವ ಮತ್ತು ಭಕ್ತ ನಂದಿ

 ಶಿವನ ಪರಮ ಭಕ್ತ ನಂದಿ ಎಂದು ಎಲ್ಲರಿಗೂ ತಿಳಿದಿದೆ. ನಂದಿಯು ಶಿವ ಭಕ್ತನಾಗುವುದರ ಹಿಂದೆ ಒಂದು ಕಥೆಯಿದೆ.

 'ಶಿಲಾಧರ' ಎಂಬ ಋಷಿ ಇದ್ದರು. ಈತನು ಶಿವನ ಪರಮ ಭಕ್ತನಾಗಿದ್ದರು. ಶೀಲಾಧರನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅವರು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಬಹಳ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದರು. ಅವರ ತಪಸ್ಸಿಗೆ ಪ್ರಸನ್ನಗೊಂಡ ಶಿವನು ದರ್ಶನ ಕೊಟ್ಟು, ನಿನ್ನ ತಪಸ್ಸಿನಿಂದ ನಾನು ಪ್ರಸನ್ನಗೊಂಡಿದ್ದೇನೆ. ನಿನಗೆ ಏನು ವರ ಬೇಕು ಕೇಳಿಕೋ? ಎಂದನು. 'ಶಿಲಾಧರನು' ತನಗೆ ಪುತ್ರನು ಬೇಕೆಂದು ಕೇಳಿದರು. ಆಯಿತು ನಿನಗೆ ಪುತ್ರಪ್ರಾಪ್ತಿಯಾಗುವುದು ಎಂದು ವರ ನೀಡಿ ಶಿವ ಅದೃಶನಾದನು. ಶೀಲಾಧರನು ಸಂತೋಷದಿಂದ ಮನೆಗೆ ಬಂದರು. ಕೆಲವು ದಿನಗಳ ನಂತರ ನಿತ್ಯ ಕ್ರಮದಂತೆ, ಹೊಲದ ಬದಿ ನಡೆದು ಹೋಗುತ್ತಿರುವಾಗ, ಬೇಲಿ ಬದಿಯಲ್ಲಿ ಅವರಿಗೆ ನವಜಾತ ಶಿಶುವೂಂದು ಕಂಡಿತು. ಆ ಮಗುವಿನ ಸುತ್ತಲೂ ಸೂರ್ಯನಂತೆ ತೇಜಸ್ಸನ್ನು ಹರಡಿತ್ತು. 

 ಋಷಿಯು ಆ ಮಗುವನ್ನು ಮನೆಗೆ ತೆಗೆದುಕೊಂಡು ಬಂದರು. ಮಗುವಿಗೆ 'ನಂದಿ' ಎಂದು ನಾಮಕರಣ ಮಾಡಿದರು. ಅವರು ಆ ಮಗುವನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡಿ ಬೆಳೆಸುತ್ತಿದ್ದರು. ನಂದಿಯು ನೋಡಲು ಬಹಳ ಮುದ್ದಾಗಿದ್ದು, ತುಂಬಾ ಬುದ್ಧಿವಂತ ನಾಗಿದ್ದನು. ಋಷಿಯು ತನ್ನ ಮಗ ನಂದಿಯ ಕುರಿತು ಒಂದು ಥರ ಗರ್ವಪಡುತ್ತಿದ್ದರು. ನಂದಿಯು ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಅವರ ಮನೆಗೆ 'ಮಿತ್ರ ಮತ್ತು ವರುಣ'ಎಂಬ ಇಬ್ಬರು ಮಹಾನ್ ತಪಸ್ವಿಗಳು ಬಂದರು. ಆ ಋಷಿಗಳು ಅವರ ಮನೆಯಲ್ಲಿ ಸ್ವಲ್ಪ ಕಾಲ ತಂಗುವುದಾಗಿ ತಿಳಿಸಿದರು. ಶಿಲಾಧರನು ಸಂತೋಷದಿಂದ ಒಪ್ಪಿದನು. ಋಷಿಗಳಿಗೆ ಬೇಕಾದುದನೆಲ್ಲವ ಒದಗಿಸಿ, ಅವರ ಅನುಷ್ಠಾನಗಳಿಗೆ ತೊಂದರೆಯಾಗದಂತೆ ಅವುಗಳನ್ನು ಒದಗಿಸಿ, ಅತಿಥಿ ಸತ್ಕಾರಮಾಡಿ ನೋಡಿಕೊಳ್ಳುವಂತೆ ನಂದಿಗೆ ಹೇಳಿದನು. ನಂದಿಯು ತಂದೆಯ ಮಾತಿನಂತೆ ಋಷಿಗಳ ಸೇವೆಯನ್ನು ತುಂಬಾ ಶ್ರದ್ಧಾಭಕ್ತಿಯಿಂದ ಮಾಡಿದನು. ನಂತರ ಋಷಿಗಳು ಹೊರಟರು. ಹೊರಡುವ ಮುನ್ನ, ಶಿಲಾಧರನು ತನಗೂ ತನ್ನ ಮಗನಿಗೂ ಆಶೀರ್ವಾದ ಮಾಡುವಂತೆ ಬೇಡಿದನು. ಆಗ ಇಬ್ಬರು ಋಷಿಗಳು. ಶೀಲಾಧರನಿಗೆ, ನೀನು ಸುಖ, ಸಂತೋಷವಾಗಿ ದೀರ್ಘಾಯುಷ್ಯವಂತನಾಗಿ ಬಾಳು ಎಂದು ಹರಸಿದರು. 

 ನಂದಿಯು ತಪಸ್ವಿಗಳ ಆಶೀರ್ವಾದ ಪಡೆಯಲು ಅವರಿಗೆ ನಮಸ್ಕಾರ ಮಾಡಿಲು ಬಗ್ಗಿದಾಗ, ಋಷಿಗಳು ಸ್ವಲ್ಪಕಾಲ ಮೌನವಾಗಿದ್ದು ನಂತರ, ಗಂಭೀರವದನರಾಗಿ, "ನಂದಿ, ನೀನು ನಿನ್ನ ತಂದೆಯನ್ನು ಹಾಗೂ ಗುರುವನ್ನು, ಚೆನ್ನಾಗಿ ಪ್ರೀತಿಯಿಂದ ನೋಡಿಕೋ ಮತ್ತು ಅವರ ಬಗ್ಗೆ ಹೆಚ್ಚಿನ ಶ್ರದ್ಧೆವಹಿಸು" ತನ್ನ ಮಗನಿಗೆ ಈ ತರಹ ಆಶೀರ್ವದಿಸಿದಾಗ ಶೀಲಾಧರನು ವ್ಯಾಕುಲಗೊಂಡು, ಮಗನಿಗೆ ಗೊತ್ತಾಗದಂತೆ ಋಷಿಗಳ ಜೊತೆ ಮನೆಯಿಂದ ಸ್ವಲ್ಪ ಹೊರಗೆ ಬಂದು, "ಮಹರ್ಷಿಗಳೇ ಏನಾಯಿತು? ನನ್ನ ಮಗ ನಂದಿಗೆ ಆಶೀರ್ವಾದ ಮಾಡುವಾಗ ನೀವು ಬಹಳ ಗಂಭೀರವಾಗಿ, ಉತ್ಸಾಹ ಕಳೆದುಕೊಂಡವರಂತೆ ಇದ್ದೀರಿ,ನನ್ನ ಮಗನು ನಿಮ್ಮ ಸೇವೆ ಮಾಡುವಲ್ಲಿ. 

 ಅಚಾತುರ್ಯದಿಂದ ನಿಮಗೇನಾದರೂ ಲೋಪ ಮಾಡಿದನೇ? ಹೇಳಿ ಎಂದು ಹೆದರಿ ಕೇಳಿದನು. ಆಗ ಋಷಿಗಳು, ಹಾಗೆಲ್ಲ ನಂದಿ ತಪ್ಪು ಮಾಡುವನಲ್ಲ. ಅವರು ಶಿವನ ವರಪ್ರಸಾದದಿಂದ ದೊರೆತವನು. ಆದರೆ ನಾವು ನಿನ್ನ ಮಗನಿಗೆ ಧೀರ್ಘಾಯುಷ್ಯವಂತನಾಗು ಎಂದು ಆಶೀರ್ವಾದ ಮಾಡಲಾಗುವುದಿಲ್ಲ. ಏನು ಮಾಡುವುದು. ನಮಗೆ ಈ ವಿಷಯವನ್ನು ಹೇಳಲು ಮನಸ್ಸಿಗೆ ನೋವಾಗುತ್ತಿದೆ. ಬಾಲಕನ ಆಯಸ್ಸು ತುಂಬಾ ಕಡಿಮೆ ಇದೆ ಎಂದು ಹೇಳಿ ಅವರು ಹೊರಟೇಬಿಟ್ಟರು. 

 ಶಿಲಾಧರನು ಆತಂಕ ಹಾಗೂ ನಿರುತ್ಸಾಹಗೊಂಡವನಾಗಿ ಮನೆಯೊಳಗೆ ಬಂದನು. ತಂದೆಯ ಮ್ಲಾನ ಮುಖವನ್ನು ನೋಡಿ ನಂದಿಯು ಏನಾಯಿತು? ಎಂದು ಕೇಳಿದನು. ಇದಕ್ಕೆ ಉತ್ತರವನ್ನು ಕೊಡಲು ತಂದೆಗೆ ಏನೂ ಇಷ್ಟವಿರಲಿಲ್ಲ. ಆದರೆ ನಂದಿಯು ಹಟಮಾಡಿ ಕೇಳಿದಾಗ ಹೇಳದೆ ವಿಧಿ ಇರಲಿಲ್ಲ ಹೀಗಾಗಿ ಶಿಲಾಧರನು ಋಷಿಗಳು ಹೇಳಿದ ವಿಷಯವನ್ನು ಹೇಳಿದನು. ಇದನ್ನು ಕೇಳಿದ ಬಾಲಕ ನಂದಿಯು ಜೋರಾಗಿ ನಗುತ್ತಾ ಹೀಗೆ ಹೇಳಿದನು. "ಅಯ್ಯೋ ಅಪ್ಪ ಆ ಪರಮೇಶ್ವರನೇ ನಿನಗೆ ಪ್ರತ್ಯಕ್ಷವಾಗಿ ದರ್ಶನ ಕೊಟ್ಟಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇನೆ. ನಮ್ಮ ಜೊತೆ ಶಂಕರನೇ ಇರುವಾಗ ನೀನೇಕೆ ಹೆದರುತ್ತಿಯಾ? ನಾನು ಭಕ್ತಿಯಿಂದ ಶಿವನನ್ನು ಆರಾಧಿಸುತ್ತೇನೆ. ನನ್ನ ಪ್ರಾರ್ಥನೆಗೆ ಅವರು ಒಲಿಯುತ್ತಾರೆ. ಶಿವನು ಬಹಳ ಶಕ್ತಿಶಾಲಿ. ಅವರಿಗೆ ಅಸಾಧ್ಯವಾದುದು ಯಾವುದು ಇಲ್ಲ. 

 ಶಿವನು ನನ್ನ ವಿಧಿಯನ್ನು ಖಂಡಿತ ಬದಲಾಯಿಸುತ್ತಾರೆ. ನಾನು ಶಂಕರನನ್ನು ಪ್ರಾರ್ತಿಸುತ್ತೇನೆ. ನೀವು ನನ್ನ ಸಂಕಲ್ಪ ಸಫಲವಾಗಲಿ ಎಂದು ನನಗೆ ಆಶೀರ್ವಾದವನ್ನು ಮಾಡಿರಿ" ಎಂದನು. ಶೀಲಾಧರನು ಸಮಾಧಾನಗೊಂಡು ಮಗನಿಗೆ ಆಶೀರ್ವಾದ ಮಾಡಿದನು. ನಂದಿಯು ಪರ್ವತಕ್ಕೆ ಹೋಗಿ ಸ್ವಲಕಾಲ ನೀರಿನೊಳಗೆ ಇದ್ದು, ನಂತರ ನದಿಯ ದಡದಲ್ಲಿ ಕುಳಿತು ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು. ನಂದಿಯ ಕಠೋರ ತಪಸ್ಸಿಗೆ ಭಗವಂತನು ಮೆಚ್ಚಿದನು. ಮತ್ತು ಅವರ ಮುಂದೆ ಪ್ರತ್ಯಕ್ಷನಾದನು. ನಂದಿಯು ತನ್ನ ಮುಂದೆ ನಿಂತ ಶಿವನನ್ನು ಮತ್ತು ಶಿವನ ಸೌಂದರ್ಯವನ್ನು ನೋಡಿ ಮೈಮರೆತನು. ಶಿವನನ್ನು ನೋಡುತ್ತಾ ಮೈಮರೆತ ನಂದಿಗೆ ಅವರ ಬಾಯಿಂದ 'ವರ' ಕೇಳುವುದು ಮರೆತುಹೋಗಿ ಬಾಯಿಂದ ಯಾವ ಶಬ್ದವು ಹೊರಡಲಿಲ್ಲ. ನಂದಿಯು ಮನಸ್ಸಿನಲ್ಲಿ, ಆಹಾ ನಾನು ಶಿವನ ವಾಹನವಾಗುವುದಾದರೆ ಎಷ್ಟು ಚೆನ್ನಾಗಿರುತ್ತದೆ. 

 ಶಿವನ ವಾಹನವಾದರೆ ಯಾವಾಗಲೂ ಅವರ ಜೊತೆಯಲ್ಲೇ ಇರಬಹುದು, ಮತ್ತು ಶಿವನನ್ನು ಸದಾಕಾಲವೂ ನೋಡುತ್ತಿರಬಹುದು ಅಲ್ಲವೇ? ಎಂದು ಮನಸ್ಸಿನಲ್ಲಿ ಅಂದುಕೊಂಡನು. ಹಾಗೂ ಇದನ್ನೇ ಕುರಿತು ಚಿಂತಿಸಿದನು. ಶಿವನಿಗೆ ನಂದಿಯ ಮನಸ್ಸಿನಲ್ಲಿ ಅಂದುಕೊಂಡ ಮಾತುಗಳು ಕೇಳಿದವು. ಶಿವನು ನಗುತ್ತಾ, ಆಯ್ತು ನಂದಿ ನಿನ್ನ ಮನದಿಚ್ಛೆ ಯಂತೆ ಆಗಲಿ, ಎಂದು ವರ ನೀಡಿದನು. ಮತ್ತು ಇಂದಿನಿಂದ ನಿನ್ನ ಮುಖ ವೃಷಭನಂತೆ ಆಗಲಿ ಎಂದು ನಂದಿಗೆ ಹರಸಿ, ನೀನು ಎಂದಿಗೂ ನನಗೆ ಪ್ರೀತಿಯ ವಾಹನವಾಗಿ ಇರುವೆ ಎಂದು ಹೇಳಿದನು. ಅಂದಿನಿಂದ ನಂದಿಯು ಶಿವನ ಪ್ರಮುಖ ವಾಹನವಾದನು ಹಾಗೂ ಶಿವನ ಎಲ್ಲಾ ಗಣಗಳಿಗೂ ನಾಯಕನಾದನು. ಈಶ್ವರನ ದೇವಸ್ಥಾನಕ್ಕೆ ಹೋದಾಗ ಶಿವನ ದರ್ಶನದೊಂದಿಗೆ, ನಂದಿಯ ಬಲಕಿವಿಯಲ್ಲಿ ಯಾರಿಗೆ ಕೇಳದಂತೆ ಪಿಸುಮಾತಿನಲ್ಲಿ ಮನದ ಇಷ್ಟಾರ್ಥವನ್ನು ಬೇಡಿಕೊಂಡರೆ, ನಂದಿಯ ಮೂಲಕ ಶಿವನಿಗೆ ತಲುಪಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 

October 18, 2021

ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ

ನಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ|
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ||1||

ತಾಯೇ, ನನಗೆ ನಿನ್ನ ಮಂತ್ರವಾಗಲೀ, ಯಂತ್ರವಾಗಲೀ, ಸ್ತುತಿಯಾಗಲೀ ಗೊತ್ತಿಲ್ಲ;ನಿನ್ನ ಆಹ್ವಾನವನ್ನಾಗಲೀ, ಧ್ಯಾನವನ್ನಾಗಲೀ, ಸ್ತುತಿಕಥೆಯನ್ನಾಗಲೀ ನಾನರಿಯೆ; ನಿನ್ನ ಮುದ್ರೆಯೂ ನನಗೆ ತಿಳಿದಿಲ್ಲ; ನಿನ್ನ ಮು೦ದೆ ಮೊರೆಯಿಡುವುದನ್ನೂ ನಾನರಿಯೆ; ಆದರೆ, ಅಮ್ಮಾ ನನಗೆ ಇಷ್ಟು ಮಾತ್ರ ಗೊತ್ತು-ನಿನ್ನನ್ನು ಅನುಸರಿಸಿದರೆ ಸ೦ಕಟವೆಲ್ಲವೂ ನಾಶವಾಗುತ್ತದೆ.

ವಿಧೇರಜ್ಞಾನೇನ ದ್ರವಿಣ ವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ |
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||2||

ಹೇ ಜನನಿ, ವಿಧಿ ವಿಲಾಸದಿಂದಲೂ, ನನ್ನ ದಾರಿದ್ರ್ಯದಿ೦ದಲೂ, ಆಲಸ್ಯದಿ೦ದಲೂ ಮತ್ತು ನಿನಗೆ ವಿಧೇಯನಾಗಿರಲು ಅಶಕ್ಯನಾದುದರಿಂದಲೂ ನಿನ್ನ ಅಡಿದಾವರೆಗಳಿಂದ ಚ್ಯುತನಾದೆನು. ಹೇ ಸಕಲೋದ್ಧಾರಿಣಿ ಶಿವೇ, ನೀನು ನನ್ನ ಸಕಲ ಲೋಪದೋಷಗಳನ್ನೂ ಕ್ಷಮಿಸು. ಲೋಕದಲ್ಲಿ ಕುಪುತ್ರ ಹುಟ್ಟಿದರೂ ಹುಟ್ಟಬಹುದು, ಆದರೆ ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸಂತಿ ಸರಲಾಃ
ಪರಂ ತೇಷಾಂ ಮಧ್ಯೇ ವಿರಲತರಲೋಹಂ ತವ ಸುತಃ |
ಮದೀಯೋಯಂ ತ್ಯಾಗಃ ಸಮುಪಚಿತಮಿದಂ ನೋ ತವ ಶಿವೇ
ಕುಪುತ್ರೋಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||3||

ಅಮ್ಮಾ, ಈ ಜಗತ್ತಿನಲ್ಲಿ ನಿನಗೆ ಪುಣ್ಯಪುರುಷರಾದ ಎಷ್ಟೋಮಕ್ಕಳಿದ್ದಾರೆ. ಅವರ ಮಧ್ಯದಲ್ಲಿ ಈ ನಿನ್ನ ಮಗನಾದ ನಾನು ಕೇವಲ ಅತ್ಯಲ್ಪನಾದವನು; ಹೇ ಮಂಗಳದಾಯಕಿ, ನಾನು ನಿನ್ನನ್ನು ಬಿಟ್ಟಿರುವುದು ಉಚಿತವಾಗಿರಬಹುದು; ಆದರೆ ನೀನು ನನ್ನನ್ನು ಬಿಟ್ಟಿರುವುದು ಉಚಿತವಲ್ಲ; ಏಕೆಂದರೆ, ಕುಪುತ್ರ ಹುಟ್ಟಿದರೂ ಹುಟ್ಟಬಹುದು, ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.

ಜಗನ್ಮಾತರ್ಮಾತಸ್ತವ ಚರಣ ಸೇವಾ ನ ರಚಿತಾ 
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಪಿ ತ್ವಂ ಸ್ನೇಹಂಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||4||

ಹೇ ಜಗನ್ಮಾತೆ, ಅಮ್ಮಾ, ಎಂದೂ ನಾನು ನಿನ್ನ ಚರಣ ಸೇವೆಯನ್ನು ಮಾಡಿದವನಲ್ಲ; ಅಥವಾ ನಿನ್ನ ಹೆಸರಿನಲ್ಲಿ ಬೇಕಾದಷ್ಟು ಐಶ್ವರ್ಯವನ್ನು ದಾನಮಾಡಿದವನಲ್ಲ; ಆದರೂ ನಿನಗೆ ನನ್ನಲ್ಲಿರುವ ಪ್ರೇಮ ಅನುಪಮವಾದುದು; ಏಕೆಂದರೆ ಕುಪುತ್ರ ಹುಟ್ಟಿದರೂ ಹುಟ್ಟಬಹುದು,ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.

ಪರಿತ್ಯಕ್ತ್ವಾ ದೇವಾನ್ ವಿವಿಧವಿಧಸೇವಾಕುಲತಯಾ
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ |
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್ ||5||

ಹೇ ಗಣೇಶಮಾತೆ, ಪೂಜೆಯ ವಿಧಿವಿಧಾನಗಳನ್ನು ನಾನು ಅರಿಯೆನಾದ್ದರಿ೦ದ ಇತರ ದೇವತೆಗಳ ಪೂಜೆಯನ್ನು ನಾನು ಪರಿತ್ಯಜಿಸಿದ್ದೇನೆ; ನನಗಾಗಲೇ ಎಂಭತ್ತೈದಕ್ಕಿಂತಲೂ ಹೆಚ್ಚು ವಯಸ್ಸಾಗಿದೆ; ಅಮ್ಮಾ,ಈಗಲಾದರೂ ನನ್ನಲಿ ಕೃಪೆತೋರದಿದ್ದರೆ ನಿರಾಶ್ರಿತನಾದ ನಾನು ಯಾರನ್ನು ಶರಣುಹೋಗಲಿ?

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನಃಕೋ ಜಾನೀತೇ ಜನನಿ ಜಪನೀಯಂ ಜಪವಿಧೌ ||6||

ಚಂಡಾಲನು ಮಧುಪಾಕಸದೃಶವಾದ ಮಾತುಗಳನ್ನಾಡುವನು; ದಟ್ಟದರಿದ್ರನಾದವನು ಕೋಟಿಸುವರ್ಣಾಧಿಕಾರಿಯಾಗಿ ಯಾವ ಆತ೦ಕವೂ ಇಲ್ಲದೆ ಬಹುಕಾಲ ವಿಹರಿಸುವನು; ಹೇ ಅಪರ್ಣೇ,ಇದು ನಿನ್ನ ಮ೦ತ್ರವರ್ಣ ಕಿವಿಯಲ್ಲಿ ಬಿದ್ದ ಫಲ. ಹೀಗಿರುವಾಗ ಹೇ ತಾಯಿ, ವಿಧಿಪ್ರಕಾರ ಜಪಿಸುವವನಿಗೆ ಎಂಥಾ ಫಲ ದೊರೆಯಬಹುದೆ೦ದು ಯಾರು ಹೇಳಬಲ್ಲರು?

ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರಿ ಕಂಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್ಪಾಣಿಗ್ರಹಣಪರಿಪಾಟೀಫಲಮಿದಂ ||7||

ವಿಷವನ್ನು ಕುಡಿದು, ಚಿತೆಯಭಸ್ಮವನ್ನು ಮೈಗೆಲ್ಲ ಬಳಿದುಕೊ೦ಡು ದಿಕ್ಕುಗಳನ್ನೇ ಬಟ್ಟೆಯಾಗಿ ಉಟ್ಟು, ಜಟೆಯನ್ನು ಧರಿಸಿ, ಕ೦ಠದಲ್ಲಿ ಹಾವನ್ನು ಹಾರವಾಗಿ ಹಾಕಿಕೊಂಡು, ತಲೆಯೋಡನ್ನು ಭಿಕ್ಷಾಪಾತ್ರೆಯಾಗಿ ಕೈಯಲ್ಲಿ ಹಿಡಿದು, ಭೂತಗಳ ಮಧ್ಯೆ ವಾಸಿಸುವ ಪಶುಪತಿಯಾದ ಶಿವನು ಅದ್ವಿತೀಯವಾದ ಜಗದೀಶ್ವರನ ಪದವಿಯನ್ನು ಹೊಂದಿದನು-
ಭವಾನಿ, ಇದು ನಿನ್ನ ಪಾಣಿಗ್ರಹಣದ ಫಲವೇ!

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವ ವಾಂಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸಖೇಚ್ಛಾಪಿ ನ ಪುನಃ |
ಅತಸ್ತ್ವಾಂಸಂಯಾಚೇ ಜನನಿ ಜನನಂ ಯಾತು ಮಮವೈ
ಮೃಡಾನೀ ರುದ್ರಾನೀ ಶಿವ ಶಿವ ಭವಾನೀತಿ ಜಪತಃ ||8||

ಹೇ ಚಂದ್ರಮುಖಿ, ನನಗೆ ಮೋಕ್ಷದ ಅಪೇಕ್ಷೆಯಿಲ್ಲ; ಧನಸಂಪತ್ತುಗಳ ಇಚ್ಛೆಯಿಲ್ಲ;ಜ್ಞಾನದ ಅಪೇಕ್ಷೆಯಿಲ್ಲ; ಸುಖದ ಇಚ್ಛೆಯೂ ಇಲ್ಲ; ಹೇ ತಾಯಿ, ನಿನ್ನಮು೦ದೆ ಇಷ್ಟು ಮಾತ್ರ ಯಾಚಿಸುತ್ತೇನೆ-ಮೃಡಾಣಿ, ರುದ್ರಾಣಿ, ಶಿವ, ಶಿವ, ಭವಾನಿ ಎಂದು ಜಪಿಸುತ್ತಾ ನನ್ನ ಜನ್ಮವೆಲ್ಲವೂ ಕಳೆದು ಹೋಗಲಿ!

ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿಂ ರುಕ್ಷಚಿಂತನಪರೈರ್ನ ಕೃತಂ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ ||9||

ವಿಧಿಪೂರ್ವಕವಾದ ವಿವಿಧೋಪಚಾರಗಳಿಂದ ನಾನು ಎಂದೂ ನಿನ್ನನ್ನು ಪೂಜಿಸಲಿಲ್ಲ; ಶುಶ್ಕಚಿಂತಾಪರವಾದ ಹರಟೆಗಳಿಂದ ಕಾಲವನ್ನು ಕಳೆದು ನಾನು ಯಾವ ತಪ್ಪನ್ನುತಾನೇ ಮಾಡಿಲ್ಲ! ಆದರೂ ಶ್ಯಾಮೇ,ಅನಾಥನಾದ ನನ್ನಲ್ಲಿ ಸ್ವಲ್ಪ ಕೃಪೆಯನ್ನು ತೋರುವೆಯಾದರೆ ಅದು ನಿನಗೆ ಉಚಿತವೇ ಆಗಿರುವುದು.!

ಆಪತ್ಸುಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛರತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ ||10||

ಹೇ ದುರ್ಗೆ, ಕರುಣಾರ್ಣೇಶ್ವರೀ, ಆಪತ್ತಿನಲ್ಲಿಮುಳುಗಿ ನಿನ್ನನ್ನು ಸ್ಮರಿಸುತ್ತೇನೆ; ಇದನ್ನು ಮೋಸವೆಂದು ತಿಳಿಯಬೇಡ; ಏಕೆಂದರೆ ಹಸಿವೆಯಾದಾಗ, ಬಾಯಾರಿಕೆಯಾದಾಗ ಮಕ್ಕಳು ತಾಯಿಯನ್ನು ಸ್ಮರಿಸಿಕೊಳ್ಳುತ್ತಾರೆ.

ಜಗದಂಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧಪರಂಪರಾ ಪರಂ ನ ಹಿ ಮಾತಾ ಸಮುಪಪೇಕ್ಷತೇ ಸುತಂ ||11||
ಹೇ ಲೋಕಮಾತೇ, ನೀನು ನನ್ನಲ್ಲಿ ಸಂಪೂರ್ಣ ಕರುಣಾಮಯಿಯಾಗಿದ್ದರೆ ಅದರಲ್ಲಿ ಆಶ್ಚರ್ಯವೇನು? ಏಕೆಂದರೆ ಸಾವಿರಾರು ಅಪರಾಧಗಳನ್ನು ಮಾಡಿದ್ದರೂ ತಾಯಿ ಮಗನನ್ನು ಉಪೇಕ್ಷಿಸುವುದಿಲ್ಲ.

ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾಕುರು ||

ನನ್ನಂತಹ ಪಾತಕಿಯೂ ಇಲ್ಲ,ನಿನ್ನಂತಹ ಪಾಪನಾಶಕಳೂ ಇಲ್ಲ;ಹೇ ದೇವಿ,ಇದನ್ನು ಅರಿತು ಯಾವುದು ಉಚಿತವೋ ಅದನ್ನು ಮಾಡು.

ಪುರುಷ ಸೂಕ್ತದ ಬಗ್ಗೆ ಕೇಳಿದ್ದೀರಾ?

*ಪುರುಷ ಸೂಕ್ತ*

*ಪುರುಷ ಸೂಕ್ತ* ದ ಬಗ್ಗೆ ಕೇಳಿದ್ದೀರಾ? ಆಲಿಸಿದ್ದೀರಾ...? 
ನಿಮ್ಮ ಉತ್ತರ "ಹೌದು" ಎಂದಾದರೆ ನಿಮಗೆ ನನ್ನ ಪ್ರಥಮ ನಮಸ್ಕಾರ. ಮುಂದಿನ ಪ್ರಶ್ನೆ, ಪುರುಷ ಸೂಕ್ತದ ಬಗ್ಗೆ ನಿಮಗೆ ತಿಳಿದಿದೆಯೇ?
ಇಲ್ಲ ಅಂದರೂ ತಪ್ಪಾಗಲಾರದು. "ಹೌದು" ಎಂದರೆ ಮಾತ್ರ "ನಿಮಗೆ ತಿಳಿದಿದ್ದೇನು?" ಎಂಬ ಕುತೂಹಲ ನನಗೂ ಇದೆ. ಪುರುಷ ಸೂಕ್ತ ಆಲಿಸಲು, ಎಷ್ಟು ಹಿತ ಅಲ್ಲವೇ?  ಅದರಲ್ಲಿನ ಶ್ಲೋಕಗಳ ಉಚ್ಚಾರಣೆಯೇ ಹಾಗೆ. ಯಾವುದೋ ಲೋಕದಿಂದ ಬಂದಂತಹ ದನಿ ಇದ್ದಂತೆ ಅನ್ನಿಸುತ್ತದೆ. ಸರಿ..ಈಗ ಕಿವಿ ನಿಮಿರಿಸಿ, ಕಣ್ಣು ಅಗಲಿಸಿ ಮುಂದೆ ಹೇಳುವುದನ್ನು ಗಮನಿಸಿ. 
ಸನಾತನ ಲೋಕದ ನಮ್ಮ *ಪುರುಷ ಸೂಕ್ತ* ವಿಜ್ಞಾನದೊಂದಿಗೆ ನೇರ ಸಂಪರ್ಕ ಹೊಂದಿದೆ... ಬೆರಗಾಗದಿರಿ.

ಆವತ್ತು ಅಂದರೆ ಸುಮಾರು ಇಪ್ಪತ್ತು ವರುಷದ ಹಿಂದೆ, ಒಬ್ಬ ಸಾಮಾನ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಸಮುದ್ರದ ತೀರದಲ್ಲಿ ಮಲಗಿಕೊಂಡು ಆಕಾಶವನ್ನು ನೋಡುತ್ತಾ ನಕ್ಷತ್ರಗಳನ್ನು ಎಣಿಸುತ್ತಿದ್ದರು. ಅವರಿಗೆ ಆಗ ಇದ್ದ ಯೋಚನೆ ಒಂದೇ. 
*ವೇದ, ಉಪನಿಷತ್ತಿನಲ್ಲಿ ಹೇಳುವುದೆಲ್ಲ ನಿಜವೇ.?*

ನೋಡಿ, ಈ ಜಗತ್ತಿನಲ್ಲಿ  ಮಕ್ಕಳು ಕೆಲವು ಬಾರಿ ಕೇಳುವ ಪ್ರಶ್ನೆಗೆ  ಉತ್ತರ ಕೊಟ್ಟರೆ ಏನಾಗುತ್ತದೆ, ಕೊಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ?. ಹೋಗಲಿ ಬಿಡಿ. ಮುಂದಿನದನ್ನು ನೋಡೋಣ.

ಅದೇ ರೀತಿ ಆ ಸಮಯಕ್ಕೆ 
ಆ ಇಂಜಿನಿಯರ್ಗೆ ಕಾಡುತ್ತಿದ್ದ ವಿಚಾರ..."ನಾವು ತಿಳಿದಿರುವಂತಹ ವೇದ ಮತ್ತಿತರ ಸಂಪ್ರದಾಯಗಳು ನಿಜವೇ ಅಥವಾ ಸುಳ್ಳೇ?
ಇದು ಅತಿ ದೊಡ್ಡ ಜಿಜ್ಞಾಸೆ. ಯಾರೂ ಉತ್ತರ ಕೊಡಲು ಸಿದ್ದರಿಲ್ಲ. ಹಾರಿಕೆಯ ಉತ್ತರ ಯಾರೂ ಕೂಡ ಕೊಟ್ಟಾರು...!
ಮೈಯೆಲ್ಲ  ಝುಮ್ ಅನ್ನಿಸುತ್ತೆ. ಮುಂದೆ ಅವರ ಮನಸ್ಸನ್ನು ಕೊರೆಯುತ್ತಿದ್ದಿದ್ದು ಒಂದೇ. ಅದು ಏನೆಂದರೆ ನಾವು ಪುರುಷಸೂಕ್ತ ಪಠಿಸುವಾಗ ಬರುವ ಎರಡು ಶ್ಲೋಕಗಳು ಮತ್ತು ಅವುಗಳ ಮರ್ಮವೇನು?. ಅವರೆಡರಲ್ಲಿ ಒಂದು..
"ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||"

ಅದರ ಸರಳ ಅರ್ಥ ಯಾವುದೇ ನಿಘಂಟು ತಗೊಂಡು ನೋಡಿದರೆ, ನಾರಾಯಣನ ಮುಖದಿಂದ ಬ್ರಾಹ್ಮಣ ಬಂದ ಅಂತ ಪ್ರಾರಂಭವಾಗುತ್ತದೆ.
ಇವರಿಗೆ ಆಶ್ಚರ್ಯ ಆಗೋಯ್ತು.
ನಾರಾಯಣನ ಮುಖದಿಂದ ಬ್ರಾಹ್ಮಣನೇ?. ನಮಗೆ ಗೊತ್ತಿರುವ ಪ್ರಕಾರ  ಮುಖದಿಂದ ಮನುಷ್ಯ
ಬರಲು ಸಾಧ್ಯವೇ?. *ಸಾಧ್ಯವೇ ಇಲ್ಲ*.
ಇದರಲ್ಲಿ ಏನೋ ಮರ್ಮ ಆಡಗಿರ ಬೇಕು ಎಂದು ಅವರ ಒಳ ಮನಸ್ಸು ಹೇಳುತ್ತಿತ್ತು. ಹಾಗಾಗಿ ಅವರು ಈ ಅನರ್ಥವನ್ನು ಒಪ್ಪಿ ಕೊಳ್ಳಲಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನ ಅವರದಲ್ಲ.  ಬೇಕಾದಷ್ಟು ಜನ ಸಂಸ್ಕೃತ ಪಂಡಿತರನ್ನು ಭೇಟಿಯಾದರು. ಆದರೆ ಸಮಾಧಾನಕರ ಉತ್ತರ ಸಿಗಲಿಲ್ಲ. ಆಗ  ಇನ್ನೊಂದು ಶ್ಲೋಕದ ಬಗ್ಗೆ ಕೂಡಾ ಯೋಚನೆ  ಶುರು ಮಾಡಿದರು. ಏನದು? ಏನದರ ಅರ್ಥ?. "ದೇವತೆಗಳು ನಾರಾಯಣನ ಪ್ರೀತಿಗೋಸ್ಕರ ಒಂದು ಹೋಮ ಮಾಡಿದರು. ಆಗ ಆ ನಾರಾಯಣನನ್ನು ಒಂದು ಪಶುವಂತೆ ಒಂದು ಕಂಬಕ್ಕೆ ಕಟ್ಟಿ ತುಂಡು ತುಂಡು ಮಾಡಿ ಯಜ್ಞಕ್ಕೆ ಸಮರ್ಪಿಸುವುದು" ಅಂತ. ಇವರ ಯೋಚನೆಗೆ ಅನ್ನಿಸಿದ್ದು.. "ಹಾಗೆ ಮಾಡಿದರೆ ಅದು ಪ್ರೀತಿ ಆಗಲು ಸಾಧ್ಯವೇ ಇಲ್ಲ. ಇದರಲ್ಲಿ ಕೂಡಾ ಏನೋ ಮರ್ಮವಿದೆ" ಎಂದು  ಭಾವಿಸಿದರು.  ಸತತವಾಗಿ ಅವರು ಇದರ ಗೂಢಾರ್ಥದ  ಬಗ್ಗೆಯೇ ಯೋಚಿಸುತ್ತಾ, ತಲೆ ಕೆಡಿಸಿಕೊಂಡು ಹಿಮಾಲಯಕ್ಕೂ ಹೋದರು. ಅಲ್ಲಿ ಹಲವಾರು ಋಷಿ ಮುನಿಗಳು ಸಿಕ್ಕಿದರು.  ಆದರೆ ಅಲ್ಲಿ ಕೂಡ ಅವರಿಗೆ  ಸರಿಯಾದ ಉತ್ತರ ಯಾರಿಂದಲೂ
ಲಭಿಸಲಿಲ್ಲ. ಆದರೂ ಅವರು ಧೃತಿ ಗೆಡಲಿಲ್ಲ. ಮುಂದೆ ಅಲ್ಲಿಂದ ಅವರು ಉತ್ತರ ಅರಸುತ್ತಾ ಕಾಶಿಗೆ ಬಂದರು. ಅಲ್ಲಿ ಒಬ್ಬ ಗುರುವನ್ನು ಭೇಟಿಯಾದರು. ಗುರುಗಳು ಇವರನ್ನು ಉದ್ದೇಶಿಸಿ ಹೇಳಿದರು "ಮಗೂ.. ನಿನ್ನ ಪ್ರಶ್ನೆ ಸರಿಯಾಗಿದೆ".  ಆಮೇಲೆ ಮುಂದುವರೆದು ಹೇಳಿದರು "ನಿನಗೆ ನನ್ನ ಆಶೀರ್ವಾದ ಇದೆ. ನೀನು ನಿನ್ನ ಜಿಜ್ಞಾಸೆಯ ಮೇಲೆ ಹೆಚ್ಚಿನ ಕೆಲಸ ಮಾಡು" ಎಂದು ಅವರ ತಲೆಯ ಮೇಲೆ ಕೈ ಇಟ್ಟರು. ಅಷ್ಟೇ...ಪ್ರಪಂಚಕ್ಕೆ ಹೊಸ ಆವಿಷ್ಕಾರದ ಬಗ್ಗೆ ಯೋಚನೆಗಳು ಪುಂಖಾನು ಪುಂಖವಾಗಿ ಅನಾವರಣ ಗೊಂಡವು. ಅಂದ ಹಾಗೆ ಈ ಇಂಜಿನಿಯರ್ ಯಾರು ತಿಳಿಯಿತೇ.. 
*ಪ್ರೊ. ಸತೀಶ್ಚಂದ್ರ* ಅಂತ ಅವರ ಹೆಸರು.

ಪುರುಷಸೂಕ್ತದಲ್ಲಿ  ಒಟ್ಟು ಇಪ್ಪತ್ತನಾಲ್ಕು ಶ್ಲೋಕಗಳು ಕಾಣಿಸುತ್ತದೆ. ಮೊದಲನೆಯ 16 ಲೋಕಗಳಿಗೆ ಪೂರ್ವ ನಾರಾಯಣ ಅಂತಲೂ ಮುಂದಿನ ಎಂಟು ಶ್ಲೋಕಗಳು ಉತ್ತರ ನಾರಾಯಣ ಎಂದು ಗುರುತಿಸಲ್ಪಡುತ್ತವೆ. ಪೂರ್ವ ನಾರಾಯಣದ 16 ಶ್ಲೋಕಗಳಿಗೆ ವಿವರಣೆ ಕೊಟ್ಟು ಪ್ರೊ.ಸತೀಶ್ಚಂದ್ರ ಅವರು
ಭಾಷಾಂತರಿಸಿ ಇಟ್ಟಿದ್ದಾರೆ. ಇದು ಏನೆಂದರೆ *Coded word for Generation of Electricity from Purusha Sukta*.
ಇದು encrypted technology.  ಹತ್ತು ಸಾವಿರ ವರುಷಗಳ ಹಿಂದೆ ಮಹಾಮುನಿಗಳು code ಮಾಡಿ encrypt ಮಾಡಿರುವಂತಹ ಮಹಾ ಶ್ಲೋಕಗಳು.  ಆ technology ಯನ್ನು decode ಮಾಡ ಬೇಕಿದ್ದರೆ ಪಂಚೇಂದ್ರಿಯಗಳನ್ನು ಗಟ್ಟಿಯಾಗಿ ಹಿಡಿದು ಕೊಳ್ಳ ಬೇಕಾಗುತ್ತದೆ. ಅದಕ್ಕೆ ಪೂರ್ವ ತಯಾರಿಯಾಗಿ "ಧ್ಯಾನ" ಮಾಡಬೇಕು. "ಛಲ ಬಿಡದ ತ್ರಿವಿಕ್ರಮರಾದ ಪ್ರೊ. ಸತೀಶ್ಚಂದ್ರ" ರಿಗೆ ಆ ಕಾರ್ಯ ಸಿದ್ಧಿ ಆಯಿತು. ಆ ಸಿಧ್ಧಿಯ ಫಲವೇ ಅವರು ಕಂಡು ಹಿಡಿದ 2 ಯಂತ್ರಗಳು.  ಕಂಡುಹಿಡಿದ ಆ ಎರಡು ಯಂತ್ರಗಳಿಗೆ  ಮೂಲಾಧಾರ  *ಪುರುಷಸೂಕ್ತ*. ಅದು ವಿದ್ಯುತ್ ಎಂದರೆ ಕೇಳರಿಯದ ಕಾಲದಲ್ಲಿ ಬರೆದಿಟ್ಟ ಶ್ಲೋಕ ರೂಪದ ಟೆಕ್ನಾಲಜಿ.
ಯಾವ  ಇಂಧನವೂ ಇಲ್ಲದೆ ವಿದ್ಯುತ್ ಶಕ್ತಿ ತಯಾರಿಸಲು ಸಾಧ್ಯವೇ ಅಂತ ಎಲ್ಲರೂ ಪ್ರಶ್ನಿಸಿದರು.  ಇನ್ನು ಕೆಲವರು ಇವರನ್ನು ಹುಚ್ಚ ಅಂತಾನೂ ಹೇಳಿದರು. ಆಗ ಅವರ ತಾಯಿ ಹೇಳಿದರು.. "ನೀನು ಯೋಚನೆ ಮಾಡುವ ದಾರಿ ಸರಿಯಾದ ಪಥದಲ್ಲಿದೆ". ಅದಕ್ಕೇ, ನಾವು ಯಾವಾಗಲೂ ಹೇಳುತ್ತೇವೆ "ತಾಯಿ ಸರಿಯಾದ ದಾರಿಯೇ ತೋರಿಸುತ್ತಾಳೆ" ಎಂದು. ಮುಂದೆ ಅವರು ಒಂದು ಯಂತ್ರವನ್ನು ಕಂಡು ಹಿಡಿದರು. ಆಶ್ಚರ್ಯ ಕಣ್ರೀ...
ಯಂತ್ರದ ಪ್ರತಿಯೊಂದು nut, bolt ಅಥವಾ ಯಾವುದೇ part,  ಪುರುಷಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ, ಅವರು ಆರ್ಥೈಸಿ ಕೊಂಡಂತೆಯೇ ಮಾಡಿದರು. ಇನ್ನೂ ಆಶ್ಚರ್ಯ...! 
ಪುರುಷ ಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ  ಯಂತ್ರದ ಒಂದೊಂದು ಭಾಗದ size, spacing ನ ವಿವರಗಳು ಕೂಡಾ ಡಿಕೋಡಿಂಗ್ ಮಾಡಿಯೇ ತಯಾರಿಸಿದ್ದು. ಈ ಯಂತ್ರವನ್ನು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಬಹುಮಾನವಾಗಿ ಕೊಟ್ಟರು. ಆದರೆ ಕೇಂದ್ರ ಸರಕಾರ ಇದನ್ನು ಒಪ್ಪಲಿಲ್ಲ. 
ವಿಶೇಷ ಏನೆಂದರೆ ಅದೇ ಸಮಯಕ್ಕೆ ನಾಸಾದಿಂದ  ಬಂದ 21 ಎಂಜಿನಿಯರ್ಗಳು ಈ ಯಂತ್ರವನ್ನು ನೋಡಿ ಅವಾಕ್ಕಾದರು. 21 ಜನ ಎಂಜಿನಿಯರ್ಸ್ ಇವರ ಮುಂದೆ ಆಸಕ್ತಿಯಿಂದ ಬಂದು ಕುಳಿತುಕೊಂಡರು. ಒಂದೊಂದು ಚಿಕ್ಕ ಚಿಕ್ಕ ಮಾತನ್ನು ಕೂಡ  ಆಲಿಸಿದರು...ಒಂದಲ್ಲ, ಎರಡಲ್ಲ ಬರೋಬ್ಬರಿ ಇಪ್ಪತ್ತು ದಿನ ಗಮನವಿಟ್ಟು  ಆಲಿಸಿದರು. ಪ್ರಶ್ನೆ ಸುರಿದು ಉತ್ತರ ಪಡೆದು ಕೊಂಡರು. ಆಶ್ಚರ್ಯವಲ್ಲವೇ?  ಈವತ್ತು ಇದು *ಜಾಯಿಂಟ್ ಟೆಕ್ನಾಲಜಿ ಹಾಗೆಯೇ ಪೇಟೆಂಟ್* ರೂಪದಲ್ಲಿ ಹೊರಗೆ ಬಂದಿದೆ. ಅದಕ್ಕೆ Power Generation from Purusha Sukta ಎಂಬ ಹೆಸರು ಕೂಡ ಬಂತು. ಇದರ ಬಗ್ಗೆ ಕುತೂಹಲಗೊಂಡು ಈ ಟೆಕ್ನಾಲಜಿ ಬಗ್ಗೆ ಪೂರ್ತಿ ತಿಳಿಯಲು ಒಬ್ಬ ಸೈಂಟಿಸ್ಟ್ ಮುಂದೆ ಬಂದರು. ಅವರು ಮೇಡಂ ಕ್ಯೂರಿ ಅವರ ಮೊಮ್ಮಗಳು ಸೋಫಿ ಹಾರ್ಬರ್ರ್. ಈ ಟೆಕ್ನಾಲಜಿ ಪರಿವೀಕ್ಷಣೆ ಮಾಡಿದಾಗ ಆಕೆಗೆ ತುಂಬಾ ಆಶ್ಚರ್ಯ ಕಾದಿತ್ತು. ಆಕೆ ಹುಟ್ಟಾ ಕ್ರಿಶ್ಚಿಯನ್. ಆದರೆ ನಮ್ಮ ಪುರುಷ ಸೂಕ್ತವನ್ನು ಅದ್ಭುತವಾಗಿ ಗಟ ಗಟ ಅಂತ ನೀರು ಕುಡಿದಂತೆ ಮನದಟ್ಟು ಮಾಡಿಕೊಂಡಿದ್ದರು. ಅವರು ಅದರ ಬಗ್ಗೆ 24 ಗಂಟೆ ಬೇಕಾದರೂ ಉಪನ್ಯಾಸ ಕೊಡುವಷ್ಟು ಜ್ಞಾನ ಅರ್ಜಿಸಿದ್ದರು. ಅದು ನಮ್ಮ ಧರ್ಮದ ವೈಶಿಷ್ಟತೆ. ಅದು ನಮ್ಮ ಧರ್ಮದ ಬಗ್ಗೆ ಇರತಕ್ಕಂತ ಅನನ್ಯ ಪ್ರೀತಿ.

ಇದನ್ನು ಶ್ರೀ ನರೇಂದ್ರ ಮೋದಿಯವರಿಗೆ ಅದೊಮ್ಮೆ ವಿವರಿಸಿದಾಗ ಅವರು ಭಕ್ತಿಯಿಂದ ದೊಡ್ಡ ನಮಸ್ಕಾರ ಹಾಕಿದರು. ಅಲ್ಲದೆ  ಕೂಡಲೇ ಗುಜರಾತಿನಲ್ಲಿ ಇಂತಹ ಒಂದು ಪವರ್ ಜನರೇಶನ್ ಪ್ಲಾಂಟ್ ಮಾಡಬೇಕು ಎಂದು ಸೂಚಿಸಿ,  ನಿಮಗೆ ದುಡ್ಡು ಅಥವಾ ಇನ್ನೇನು ಬೇಕು ಅಂತ ಕೇಳಿದರು. ಆದರೆ ಆ ಮಹಾನ್  ಎಂಜಿನಿಯರ್  ಸತೀಶ್ಚಂದ್ರರವರು ನಮಗೆ ಬರೀ ಒಪ್ಪಿಗೆ ಕೊಟ್ಟರೆ ಸಾಕು ಎಂದರಷ್ಟೇ. ಮೋದಿಯವರು ತಕ್ಷಣ ಸಹಿ ಹಾಕಿ ಒಪ್ಪಿಗೆ ಪತ್ರ ಕೊಟ್ಟರು. ಈಗ  ಗುಜರಾತಿನಲ್ಲಿ  ಪುರುಷ ಸೂಕ್ತದ ಪ್ರಕಾರ decoded version ಆದ ಪವರ್ ಜನರೇಶನ್ ಘಟಕ ಪ್ರಾರಂಭವಾಗಿದೆ. ಸತೀಶ್ಚಂದ್ರರವರು  ಹೇಳಿ ಕೊಳ್ಳುತ್ತಾರೆ, ನಮ್ಮ ಬಳಿ ನಿಜವಾಗಿಯೂ  ದುಡ್ಡಿರಲಿಲ್ಲ. 

ನೋಡಿ...ಈ ಟೆಕ್ನಾಲಜಿ ಆವಿಷ್ಕಾರ ಮಾಡಿದ್ದು ಬ್ರಾಹ್ಮಣ, ಇದನ್ನು ಪೂರ್ತಿಯಾಗಿ  ಅನುಭವಿಸಿ ಮೆಚ್ಚಿದ್ದು ಒಬ್ಬ ಕ್ರಿಶ್ಚಿಯನ್, ಆದರೆ ಇದಕ್ಕೆ ಬಂಡವಾಳ ಸುರಿಯುತ್ತಿರುವವ ಮಲೇಷ್ಯಾದ ರಾಜ. ಅದೂ ಎಷ್ಟು ಗೊತ್ತೇ..ಬರೋಬ್ಬರಿ  ಒಂದು ಬಿಲಿಯನ್ ಡಾಲರ್,  ಬಡ್ಡಿರಹಿತ ಹಣ. ಇದನ್ನು ನೋಡಿ ಅಮೆರಿಕದ ವಿಜ್ಞಾನಿಗಳಿಗೆ ಹುಚ್ಚು ಹಿಡಿದು ಬಿಡ್ತು. ಈ ಟೆಕ್ನಾಲಜಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಿ
ಅವರು ಬಂದು ಹೇಳುತ್ತಾರೆ.. "ಇದನ್ನು ಪೂರ್ತಿಯಾಗಿ ನಾವು ಅನಲೈಸ್ ಮಾಡಿದ್ದೇವೆ. ಅದರಂತೆ ಇದರಲ್ಲಿ ಲೋವೆಸ್ಟ್ ವೋಲ್ಟೇಜ್ ಎಷ್ಟು, ಹಾಗೆಯೇ ಹೈಯೆಸ್ಟ್ ವೋಲ್ಟೇಜ್ ಎಷ್ಟು ಅಂತ ನಾವು ಸಂಶೋಧನೆ ಮಾಡಿದ್ದೇವೆ" ಎನ್ನುತ್ತಾರೆ. ಈಗ ಪ್ರೊಫೆಸರ್ ಸತೀಶ್ಚಂದ್ ಗೊಳ್ ಅಂತ ನಕ್ಕುಬಿಟ್ಟರು. ರೀ.. ಗಂಟೆಗಟ್ಟಲೆ ಸೂಪರ್ ಕಂಪ್ಯೂಟರ್ ಇಟ್ಟುಕೊಂಡು ಲೆಕ್ಕ ಮಾಡಬೇಕಾಗಿಲ್ಲ ಇದೆಲ್ಲ. ಎಲ್ಲವೂ ಇಲ್ಲಿ "ನಮ್ಮ ಪುರುಷಸೂಕ್ತದಲ್ಲಿ" ಸಿಧ್ಧವಾಗಿಯೇ ಇದೆ. ಮುಂದೆ.. ಎಷ್ಟನೇ ಶ್ಲೋಕದಲ್ಲಿ  ನಿಮ್ಮ ಪ್ರಶ್ನೆಗೆ ಉತ್ತರವಿದೆ ಎಂದು ಕರಾರುವಕ್ಕಾಗಿ ಹೇಳುತ್ತಾರೆ. ಅದರಂತೆ 
ಸಪ್ತಾಸ್ಯಾ'ಸನ್-ಪರಿಧಯಃ' | ತ್ರಿಃ ಸಪ್ತ ಸಮಿಧಃ' ಕೃತಾಃ |

ಅದರ ಅರ್ಥ ಏನು ಅಂದರೆ
7x7x7 (seven cube) ಅಂದರೆ ಎಷ್ಟು 343 ಅಲ್ವೇ?. ಅದೇ ಲೋವೆಸ್ಟ್ ವೋಲ್ಟೇಜ್. ನೋಡಿ, ನಮ್ಮ ಹಿಂದಿನ ಕಾಲದವರು ಎಲ್ಲ ಬರೆದಿಟ್ಟಿದ್ದಾರೆ. ಅದೇ ರೀತಿ  ಹೈಯೆಸ್ಟ್  ವೋಲ್ಟೇಜ್ 3x7 into the power of 21 ಬರ್ಕೊಳ್ಳಿ 1400 ಅಂದ್ರು. ಲೆಕ್ಕ ಹಾಕಿಕೊಳ್ಳಿ ಏನು calculation.? ಏನು precision?. ಮತ್ತೆ ಅಂದ್ರು ಈ ಶ್ಲೋಕದಲ್ಲಿ  ವಿದ್ಯುತ್ ಶಕ್ತಿ  ತಯಾರಿಕೆ ಸಮಯದಲ್ಲಿ ಇರಬೇಕಾದ step up ಮತ್ತು step down ಅಂತ ಏನು ಹೇಳ್ತಾರೆ ಅದು ಕೂಡ ಸೇರಿದೆ ಅಂತಾರೆ.  ಎಲ್ಲರಿಗೂ ಹುಚ್ಚು ಹಿಡಿದು ಬಿಡ್ತು. ಪ್ರೊ.ಸತೀಶ್ಚಂದ್ರರವರು ಏನು ಹೇಳುತ್ತಿದ್ದಾರೆ ಅಂತ ಎಲ್ಲರೂ ಹುಬ್ಬು ಎಗರಿಸಿ ಕೇಳಿಸಿ ಕೊಳ್ಳುತ್ತಿದ್ದರು..

ಈಗ, ಪುನಃ  ಸ್ವಲ್ಪ ಹಿಂದೆ ಹೋಗೋಣ..
ಆವಾಗಲೇ ಪುರುಷ ಸೂಕ್ತದ ಈ ಕೆಳಗಿನ ಶ್ಲೋಕದ ಬಗ್ಗೆ ಜಿಜ್ಞಾಸೆ ನಡೆದಿತ್ತು.
"ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||
ಇಲ್ಲೇ ಕಸಿವಿಸಿ ಆಗುವುದು. ಯಾಕೆಂದರೆ ಇದು ಉತ್ತರ. ಇದರ ಪ್ರಶ್ನೆ ಬೇಕಾದರೆ ಈ ಶ್ಲೋಕದ ಹಿಂದಿನ ಶ್ಲೋಕ ಗಮನಿಸಬೇಕು. ಯಾಕೆಂದರೆ ಈಗ ನೋಡಿದ್ದು ಅಪೂರ್ಣ ಮತ್ತು ಈಗಾಗಲೇ ಹೇಳಿದಂತೆ ಅದು ಉತ್ತರ ಮಾತ್ರ. ಹಾಗಾದರೆ ಪ್ರಶ್ನೆ ಯಾವುದು? ಹಿಂದಿನ ಶ್ಲೋಕ ಗಮನಿಸೋಣ. 

ಮುಖಂ ಕಿಮ'ಸ್ಯ ಕೌ ಬಾಹೂ | ಕಾವೂರೂ ಪಾದಾ'ವುಚ್ಯೇತೇ ||

ಅದರ ಅರ್ಥ..
ಮುಖಂ ಕಿಮ'ಸ್ಯ  ಅಂದರೆ ಇಲ್ಲಿ ಮುಖ್ಯ ಹುದ್ದೆ ಯಾರೂ ನಿಭಾಯಿಸ ಬೇಕು ಅಂತ. ಅದರ ಉತ್ತರ.. *ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್*
ಅಂದರೆ ಬ್ರಾಹ್ಮಣ ಇದರ ಮುಖ್ಯ ಹೊಣೆ ಹೊರಬೇಕು. ಆದರೆ ಜಾತಿಯಲ್ಲಿ ಬ್ರಾಹ್ಮಣ ಆಗಬೇಕಿಲ್ಲ. ಪಂಡಿತ, ಜ್ಞಾನಿ ಬುದ್ಧಿವಂತ ಆಗಿರಬೇಕು ಎಂದು ಅರ್ಥ. 
ಹಾಗೆಯೇ *ಕೌ ಬಾಹೂ*..
ಬಾಹು ಅಂದರೆ ಶಕ್ತಿವಂತ ಇನ್ನೊಂದರ್ಥ  ಕ್ಷತ್ರಿಯ ಅಂತ. ಹಾಗಾದರೆ ವ್ಯವಸ್ಥಾಪಕನಾಗಿ ಕ್ಷತ್ರಿಯ, ಸಾಮರ್ಥ್ಯ ಉಳ್ಳವನು, ಸೇನಾಧಿಪತಿಯ ತರಹ  ಇರ ಬೇಕಾದವನು ಎಂದು ಅರ್ಥ.
ಮುಂದೆ..
*ಊರೂ ತದ'ಸ್ಯ ಯದ್ವೈಶ್ಯಃ*
ವೈಶ್ಯ ಅಂದರೆ,  ವ್ಯವಹಾರ ತಜ್ಞ. ಅಂದರೆ ವ್ಯವಹಾರ ನೋಡಿ ಕೊಳ್ಳಲು ವೈಶ್ಯ ಬೇಕು ಎಂದರ್ಥ.
*'ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||*
ಶೂದ್ರೋ ಅ'ಜಾಯತಃ..
ಇಲ್ಲಿ ಶೂದ್ರ ಅಂದರೆ ಈಗಿನ ಕಾಲದ ವಿಂಗಡಣೆಯಂತೆ
ಎಸ್ಸಿ ಎಸ್ಟಿಅಲ್ಲ. ಬದಲಿಗೆ ಕೆಳ ಸ್ತರದಲ್ಲಿ ಕೆಲಸ ಮಾಡುವವರು ಅನ್ನುವ ಅರ್ಥ. ಹಾಗಾಗಿ ಕೆಳಸ್ತರದ ಕೆಲಸಕ್ಕೆ (ಕಾರ್ಮಿಕರು), ಯಾರು ಸೂಕ್ತ ಅಂತ ಅನ್ನುವುದನ್ನು ಹೇಳುತ್ತೆ.
ಹೀಗೆ ಪ್ರತಿಯೊಂದು  ವಿಷಯವೂ ಕೂಲಂಕಷವಾಗಿ ಪುರುಷ ಸೂಕ್ತದಲ್ಲಿ ನಮೂದಾಗಿದೆ. 
*ಉಸ್ಸಪ್ಪಾ* ಅನ್ನಿಸಿತೆ..?
ಪ್ರಾಯೋಗಿಕವಾಗಿ
ಬೆಂಗಳೂರಿನ ಸ್ಯಾಟಲೈಟ್ ಟೌನ್ ನ 50 ಎಕರೆ ಜಾಗದಲ್ಲಿ 
ಪರೀಕ್ಷಾ ಪ್ಲಾಂಟ್
ವಿರಾಜಮಾನವಾಗಿದೆ. ಇಲ್ಲಿ 4000 MW ವಿಧ್ಯುತ್ ಶಕ್ತಿ ತಯಾರಿಸುವ ಉದ್ದೇಶ ಹೊಂದಿದೆ. ಇದೇ ರೀತಿ ಗುಜರಾತ್ ನಲ್ಲಿ ಪ್ರಾರಂಭವಾದ ಪ್ಲಾಂಟ್ ನ ಹೆಸರು  Agragami Bharatiya Power Pvt.Ltd., (ABPPL). No ಇದನ್ನು ಪೋಲೆಂಡ್, ಜರ್ಮನಿ, ಕೆನಡಾ ಮತ್ತು ಯುಕೆ, ಹೀಗೆ ನಾಲ್ಕು ದೇಶದಲ್ಲಿ ಒಂದೇ ಬಾರಿಗೆ ಆರಂಭಿಸುತ್ತಿದ್ದಾರೆ.
ಶಾಕ್ ಆಯ್ತೇ..? 
*ಆಗಬೇಕು ಅಂತಲೇ ಬರೆದಿದ್ದು.*
 ವಾಟ್ಸಪ್ ಸಂಗ್ರಹ

ಸಪ್ತಶತೀ ದೇವೀಮಾಹಾತ್ಮ್ಯೆ - ರಹಸ್ಯತ್ರಯಗಳು

" "ಸಪ್ತಶತೀ ಪಾರಾಯಣ ಮಾಡುವವರಲ್ಲಿ ಹೆಚ್ಚಿನವರು ೧೩ ಅಧ್ಯಾಯಗಳನ್ನು ಪಠಿಸುತ್ತಾರೆ."ರಹಸ್ಯತ್ರಯ" ಎಂಬ ಮೂರು ಅಧ್ಯಾಯಗಳನ್ನು ಪಠಿಸುವವರು ಬಹಳ ಕಡಿಮೆ.ಸಪ್ತಶತಿಯೊಂದಿಗೆ ರಹಸ್ಯತ್ರಯಗಳನ್ನೂ ಪಾರಾಯಣ ಮಾಡಿದರೆ ಫಲ ಹೆಚ್ಚು.ಹೆಸರೇ ಸೂಚಿಸುವಂತೆ ಇದು ರಹಸ್ಯ.ಸುಲಭದಲ್ಲಿ ಅರ್ಥವಾಗುವಂತಿಲ್ಲ.ಸ್ತ್ರೀ ಯಿಂದಲೇ ಪುರುಷ,ಪುರುಷನಿಂದಲೇ ಸ್ತ್ರೀ ಸೃಷ್ಟಿ,ಇದು ಹೇಗೆ? ಎಂಬ ಗೊಂದಲ,ದ್ವಂದ್ವದಲ್ಲಿ ಸಿಲುಕಿ ನಮ್ಮನ್ನು ನಾವೇ ಸಂದೇಹಿಸಿಕೊಳ್ಳುವಂತಾಗುತ್ತದೆ.ಇದು ರಹಸ್ಯವಾದುದರಿಂದ ಉಚ್ಚಸ್ವರದಲ್ಲಿ ಪಠಿಸದೆ ಬಹಳ ಮೆಲ್ಲನೆಯ ದನಿಯಲ್ಲಿ ಪಾರಾಯಣ ಮಾಡಬೇಕು.       " ಪ್ರಾಧಾನಿಕ ರಹಸ್ಯ "ರಾಜ ಸುರಥನು,ಕ್ರೌಷ್ಟುಕಿ ಮುನಿಯನ್ನು ಚಂಡಿಯ ಮಾಹಾತ್ಮ್ಯೆಯನ್ನು ಹೇಳಿದಿರಿ.ಚಂಡಿಯ ಈ ಅವತಾರಗಳ ಸ್ವಭಾವವನ್ನು ತಿಳಿಸಿ,ಯಾವ ಸ್ವರೂಪವನ್ನು,ಯಾವರೀತಿಯಿಂದ ಆರಾಧಿಸಬೇಕು? ಎಂಬುದನ್ನು ಹೇಳಿರಿ" ಎಂದು ಪ್ರಾರ್ಥಿಸಿದನು.ಕ್ರೌಷ್ಟುಕಿ ಋಷಿಯು,"ಎಲೈ ರಾಜನೇ,ಇದು ಬಹಳ ರಹಸ್ಯ,ಗೋಪ್ಯವಾದುದು.ಬೇರೆಯವರಿಗೆ ಹೇಳಬಾರದು ಎಂಬ ನಿಯಮವಿದೆ.ಆದರೆ ನೀನು ದೇವಿಯ ಪರಮಭಕ್ತ.ನನಗೂ ಭಕ್ತನೇ ಆದುದರಿಂದ ಹೇಳಲು ತೊಂದರೆ ಇಲ್ಲ.ಶ್ರೀಮಹಾಲಕ್ಷ್ಮಿಯೇ ಎಲ್ಲಕ್ಕೂ ಮೂಲಳು.ದೃಶ್ಯ,ಅದೃಶ್ಯ ರೂಪದಲ್ಲಿ ಅವಳೇ ವಿಶ್ವವನ್ನು ವ್ಯಾಪಿಸಿದ್ದಾಳೆ.ಚಿನ್ನದ ಮೈಕಾಂತಿ,ಚತುರ್ಭುಜಗಳಲ್ಲಿ ಮಾತುಲಿಂಗ,ಗದೆ,ಗುರಾಣಿ, ಮತ್ತು ಪಾನಪಾತ್ರೆಯನ್ನು,ಶಿರದಲ್ಲಿ ನಾಗ,ಲಿಂಗ,ಯೋನಿಯನ್ನು ಧರಿಸಿ,ದಿವ್ಯಾಭರಣ ಭೂಷಿತೆಯಾಗಿ,ತನ್ನ ತೇಜಸ್ಸಿನಿಂದ ಶೂನ್ಯವಾದ ಜಗತ್ತನ್ನು ಪರಿಪೂರ್ಣವಾಗಿಸಲು,ತನ್ನ ತಮೋಗುಣ ರೂಪದ ಉಪಾಧಿಯಿಂದ ಬೇರೊಂದು ಉತ್ಕೃಷ್ಟ ನಾರಿಯ ರೂಪದಲ್ಲಿ ಪ್ರಕಟವಾದಳು.ಆ ತಾಮಸೀ ರೂಪದ, ತೆಳುಸೊಂಟದ ನಾರಿಗೆ ನಾಲ್ಕು ಭುಜಗಳಿದ್ದು,ಕೈಗಳಲ್ಲಿಗುರಾಣಿ,ಪಾನಪಾತ್ರೆ,ಖಡ್ಗ,ರುಂಡ,ವಕ್ಷದಲ್ಲಿ ಕಬಂಧಮಾಲೆ,ಮಸ್ತಕದಲ್ಲಿ ಮುಂಡಮಾಲೆಯನ್ನು ಧರಿಸಿದ್ದಳು.ಶರೀರದ ಬಣ್ಣ ಕಪ್ಪಾಗಿದ್ದು,ಕಣ್ಣುಗಳು ದೊಡ್ಡದಾಗಿದ್ದವು.ಅವಳು ಮಹಾಲಕ್ಷ್ಮಿಗೆ ನಮಸ್ಕರಿಸಿ,"ಮಾತೆ! ನನ್ನ ಹೆಸರು,ಮಾಡಬೇಕಾದ ಕಾರ್ಯವೇನೆಂದು ತಿಳಿಸು" ಎಂದು ಕೇಳಿದಳು."ಮಹಾಮಾಯಾ,ಮಹಾಕಾಲೀ,ಮಹಾಮಾರೀ,ಕ್ಷುಧಾ,ತೃಷಾ,ನಿದ್ರಾ,ತೃಷ್ಣಾ,ಏಕವೀರಾ,ಕಾಲರಾತ್ರಿ ಮತ್ತು ದುರತ್ಯಯಾ ಇವು ನಿನ್ನ ಹೆಸರುಗಳು.ಇವು ನೀನು ಸಂದರ್ಭಕ್ಕನುಗುಣವಾಗಿ ಮಾಡುವ ಕೆಲಸಗಳಂತೆ ಕರೆಯಲ್ಪಡುತ್ತವೆ.ಇದನ್ನರಿತು ಆರಾಧಿಸುವವನು ಸುಖವನ್ನು ಅನುಭವಿಸುತ್ತಾನೆ" ಎಂದು ಮಹಾಕಾಳಿಗೆ ಮಹಾಲಕ್ಷ್ಮಿಯು ತಿಳಿಸಿದಳು.ಅನಂತರ ಮಹಾಲಕ್ಷ್ಮಿಯು ತನ್ನ ದೇಹದಿಂದ,ಶುದ್ಧಸತ್ವಗುಣದ,ಅಂಕುಶ,ಅಕ್ಷಮಾಲೆ,ವೀಣೆ,ಪುಸ್ತಕಗಳನ್ನು ಚತುರ್ಭುಜಗಳಲ್ಲಿ ಧರಿಸಿದ್ದ ಎರಡನೆಯ ರೂಪವನ್ನು ಪ್ರಕಟಿಸಿ, ಅವಳಿಗೆ, ಮಹಾವಿದ್ಯಾ, ಮಹಾವಾಣೀ, ಭಾರತೀ, ವಾಕ್, ಸರಸ್ವತೀ, ಆರ್ಯಾ, ಬ್ರಾಹ್ಮೀ, ಕಾಮಧೇನು, ವೇದಗರ್ಭಾ, ಮತ್ತು ಧೀಶ್ವರೀ ಎಂದು ಹೆಸರಿಟ್ಟಳು.ನಂತರ ಮಹಾಲಕ್ಷ್ಮಿಯು, ಮಹಾಕಾಲಿ ಮತ್ತು ಮಹಾಸರಸ್ವತಿಯರಿಗೆ,"ದೇವಿಯರೇ,ಈಗ ನೀವಿಬ್ಬರೂ ನಿಮ್ಮ ನಿಮ್ಮ ಸ್ವಭಾವ,ಗುಣಗಳಿಗೆ ಯೋಗ್ಯವಾದ ಸ್ತ್ರೀ-ಪುರುಷರ ಜೋಡಿಯನ್ನು ಸೃಷ್ಟಿಮಾಡಿರಿ" ಎಂದು ಹೇಳಿ,ಸ್ವತಃ ಮಹಾಲಕ್ಷ್ಮಿಯು,ಹಿರಣ್ಯಗರ್ಭರೂ,ಸುಂದರಾಂಗರೂ,ಕಮಲಾಸನದ ಮೇಲೆ ವಿರಾಜಮಾನರಾಗಿದ್ದ, ಸ್ತ್ರೀ-ಪುರುಷರ ಜೋಡಿಯನ್ನು ಉತ್ಪಾದಿಸಿ,ಪುರುಷನನ್ನು ಬ್ರಹ್ಮ,ವಿಧಿ,ವಿರಿಂಚ,ಧಾತೃಎಂದೂ,ಸ್ತ್ರೀಯನ್ನು ಶ್ರೀ,ಪದ್ಮಾ,ಕಮಲಾ,ಲಕ್ಷ್ಮೀಎಂದು ಹೆಸರಿಟ್ಟು ಕರೆದಳು. ಮಹಾಕಾಲೀ,ಮಹಾಸರಸ್ವತಿಯರೂ ತಮ್ಮ ದೇಹದಿಂದ ಒಂದೊಂದು ಜೋಡಿಯನ್ನು ಸೃಷ್ಟಿಸಿದರು. ಮಹಾಕಾಳಿಯು, ನೀಲಕಂಠ, ಕೆಂಪುಭುಜ, ಬಿಳಿಯಶರೀರ, ಮಸ್ತಕದಲ್ಲಿ ಚಂದ್ರನನ್ನು ಮುಕುಟವಾಗಿ ಧರಿಸಿದ್ದ ಸ್ತ್ರೀ-ಪುರುಷರನ್ನು ಸೃಷ್ಟಿಸಿದಳು.ಪುರುಷನಿಗೆ ರುದ್ರ,ಕಪರ್ದಿ, ಶಂಕರ, ಸ್ಥಾಣು, ತ್ರಿಲೋಚನ, ಸ್ತ್ರೀಗೆ ತ್ರಯೀವಿದ್ಯಾ, ಕಾಮಧೇನು, ಭಾಷಾ, ಮತ್ತು ಸ್ವರಾ ಎಂದು ಹೆಸರಿಸಿದಳು. ಮಹಾಸರಸ್ವತಿಯು, ಶ್ವೇತವರ್ಣದ ಸ್ತ್ರೀಯನ್ನು,ಶ್ಯಾಮವರ್ಣದ ಪುರುಷನನ್ನು ಸೃಷ್ಟಿಸಿ,ಸ್ತ್ರೀಗೆ ಉಮಾ, ಗೌರೀ, ಸತೀ, ಚಂಡೀ, ಸುಂದರೀ, ಸುಭಗಾ, ಶಿವಾ ಎಂದೂ,ಪುರುಷನಿಗೆ ವಿಷ್ಣು, ಕೃಷ್ಣ, ಹೃಷೀಕೇಶ, ವಾಸುದೇವ, ಜನಾರ್ದನ ಎಂದು ಹೆಸರಿಟ್ಟು ಕರೆದಳು.ನಂತರ ಮೂವರು ದೇವಿಯರೂ ಪುರುಷ ರೂಪವನ್ನು ಪಡೆದರು.ಇದನ್ನು ಜ್ಞಾನಿಗಳಾದ,ಜ್ಞಾನಚಕ್ಷುವಿರುವರು ಮಾತ್ರ ತಿಳಿಯಬಲ್ಲರೇ ವಿನಃ ಅಜ್ಞಾನಿಗಳು ಅರಿಯಲಾರರು.ಮಹಾಲಕ್ಷ್ಮಿಯು ಸರಸ್ವತಿಯನ್ನು ಬ್ರಹ್ಮನಿಗೆ,ಉಮೆಯನ್ನು ಶಂಕರನಿಗೆ,ಲಕ್ಷ್ಮಿಯನ್ನು ವಾಸುದೇವನಿಗೆ ಕೊಟ್ಟಳು.ಬ್ರಹ್ಮನು ಸರಸ್ವತಿಯೊಂದಿಗೆ ಬ್ರಹ್ಮಾಂಡವನ್ನು ಸೃಷ್ಟಿಸಿದನು.ವಿಷ್ಣುವು ಲಕ್ಷ್ಮಿಯೊಡನೆ ಬ್ರಹ್ಮಾಂಡ ಸೃಷ್ಟಿಯನ್ನು ಪೋಷಿಸಿದನು.ಶಂಕರನು ಉಮೆಯೊಂದಿಗೆ ಪ್ರಳಯಕಾಲದಲ್ಲಿ ಅದನ್ನು ಭೇದಿಸಿದನು.ಹೀಗೆ ಮಹತ್ತತ್ವವೇ ಪ್ರಧಾನವಾವಾದ,ಪಂಚಭೂತಾತ್ಮಕವಾದ,ಸಮಸ್ತ ಸ್ಥಾವರ,ಜಂಗಮಗಳ ಜಗತ್ತಿನ ಸೃಷ್ಟಿಯಾಯಿತು.ಮಹಾಲಕ್ಷ್ಮಿಯೇ,ಸತ್ಯ,ಜ್ಞಾನ,ಚಿತ್,ಮಹಾಮಾಯಾ,ಮೊದಲಾದ,ಸಾಕಾರ,ನಿರಾಕಾರ ರೂಪದ,ಅನೇಕ ಹೆಸರುಗಳಿಂದ ಜಗದ್ರಕ್ಷಕಳಾಗಿರುವಳು,ಎಂದು ಮಾರ್ಕಂಡೇಯ ಮಹಾಮುನಿಯು ಕ್ರೌಷ್ಟುಕಿ ಋಷಿಗೆ ಪ್ರಾಧಾನಿಕ ರಹಸ್ಯವನ್ನು ಉಪದೇಶಿಸಿದನು.ಇಲ್ಲಿಗೆ "ಪ್ರಾಧಾನಿಕ ರಹಸ್ಯ" ಮುಗಿಯಿತು.*-*-*-*-*-*-*-*-*-*" ವೈಕೃತಿಕರಹಸ್ಯ "ಕ್ರೌಷ್ಟುಕಿ ಋಷಿಯು ರಾಜ ಸುರಥನಿಗೆ,ಮಹಾಕಾಳೀ,ಮಹಾಲಕ್ಷ್ಮೀ,ಮಹಾಸರಸ್ವತಿಯರ ಸ್ವರೂಪವನ್ನು ಹೇಳುತ್ತೇನೆ ಕೇಳು ಎಂದು..."ಸತ್ತ್ವಪ್ರಧಾನಳಾದ ಮಹಾಲಕ್ಷ್ಮಿಯ ತಾಮಸೀ ಭೇದದ ಸ್ವರೂಪಗಳಾದ,ಶರ್ವಾ,ಚಂಡಿಕಾ,ದುರ್ಗಾ,ಭದ್ರಾ,ಭಗವತೀ ಇತ್ಯಾದಿ ಹೆಸರುಗಳಿಂದ ಪೂಜಿಸಲ್ಪಡುತ್ತಾಳೆ.ತಮೋಗುಣದಿಂದ ಪ್ರಕಟಳಾದ ಮಹಾಕಾಳಿಯು,ಭಗವಾನ್ ವಿಷ್ಣುವಿನ "ಯೋಗನಿದ್ರೆ" ಯಾಗಿದ್ದು,ದಶಮುಖ,ದಶಭುಜ,ದಶಕಾಲುಗಳು ಮೂವತ್ತು ಕಣ್ಣುಗಳುಳ್ಳ ಮೈ ಬಣ್ಣ ಕಪ್ಪು,ಕೈಗಳಲ್ಲಿ ಖಡ್ಗ,ಬಾಣ,ಗದೆ,ಶೂಲ,ಚಕ್ರ,ಶಂಖ,ಭುಶುಂಡಿ,ಪರಿಘ,ಧನುಸ್ಸು,ಮತ್ತು ರಕ್ತ ತೊಟ್ಟಿಕ್ಕುತ್ತಿರುವ ರುಂಡವನ್ನು ಧರಿಸಿದ್ದಾಳೆ.ಇವಳು ರೂಪ,ಸೌಭಾಗ್ಯ,ಕಾಂತಿ ಮತ್ತು ಮಹೈಶ್ವರ್ಯಕ್ಕೆ ಅಧಿಷ್ಠಾತ್ರಿಯಾಗಿದ್ದಾಳೆ.ಮಧುಕೈಟಭರ ವಧೆಗಾಗಿ ಬ್ರಹ್ಮನು ಇವಳನ್ನು ಸ್ತೋತ್ರ ಮಾಡಿದ್ದನು.ಇವಳನ್ನು ಆರಾಧಿಸಿದರೆ,ಚರಾಚರ ಜಗತ್ತನ್ನು ಉಪಾಸಕನ ಅಧೀನವಾಗಿಸುತ್ತಾಳೆ.ಎಲ್ಲ ದೆವತೆಗಳ ಅಂಗಗಳಿಂದ ಪ್ರಾದುರ್ಭವಿಸಿದ,ತ್ರಿಗುಣಮಯೀ ಆದ ಮಹಾಲಕ್ಷ್ಮಿಯ ಮುಖ ಶ್ವೇತವರ್ಣ,ಭುಜಗಳು ಶ್ಯಾಮಲವರ್ಣ,ಸ್ತನಗಳು ಹಾಲಿನಂತೆ ಬಿಳುಪು,ಕಟಿ ಮತ್ತು ಚರಣಗಳು ಕೆಂಪು,ತೊಡೆ ಮಿನಖಂಡಗಳು ನೀಲಿಬಣ್ಣದಿಂದ ಕೂಡಿದ್ದು,ಸುಂದರ ವಸ್ತ್ರಾಭೂಷಣಗಳಿಂದ ಅಲಂಕೃತಳಾದ ರೂಪದಲ್ಲಿ ಉನ್ಮತ್ತಳಂತೆ ಶೋಭಿಸುತ್ತಾಳೆ.ಅಸಂಖ್ಯ ಭುಜಗಳಿದ್ದರೂ ಅಷ್ಟಾದಶ (೧೮) ಭುಜದವಳೆಂದೇ ಇವಳನ್ನು ಪೂಜಿಸಬೇಕು.ಕೈಗಳಲ್ಲಿಅಕ್ಷಮಾಲೆ,ಕಮಲ,ಬಾಣ,ಖಡ್ಗ,ವಜ್ರ,ಗದೆ,ಚಕ್ರ,ತ್ರಿಶೂಲ,ಪರಶು,ಶಂಖ,ಗಂಟೆ,ಪಾಶ,ಶಕ್ತಿ,ದಂಡ,ಚರ್ಮ,ಧನುಸ್ಸು,ಪಾನಪಾತ್ರೆ,ಮತ್ತು ಕಮಂಡಲುಗಳನ್ನು ಧರಿಸಿ ಪದ್ಮದ ಮೇಲೆ ಕುಳಿತಿದ್ದಾಳೆ.ಮಹಿಷಾಸುರನ ವಧೆ ಇವಳಿಂದ (ಮಹಾಲಕ್ಷ್ಮಿ) ಆಯಿತು.ಸತ್ತ್ವಗುಣಪ್ರಧಾನವಾದ ಪಾರ್ವತಿಯಿಂದ ಪ್ರಕಟವಾದ,ಮಹಾಸರಸ್ವತಿಗೆ,ಎಂಟು ಭುಜಗಳಿದ್ದು, ಬಾಣ,ಒನಕೆ,ಶೂಲ,ಚಕ್ರ,ಶಂಖ,ಗಂಟೆ,ನೇಗಿಲು ಮತ್ತು ಧನುಸ್ಸನ್ನು ಆಯುಧಗಳಾಗಿ ಧರಿಸಿದ್ದಾಳೆ.ಶುಂಭ-ನಿಶುಂಭರನ್ನು ಇವಳು ಸಂಹರಿಸಿದವಳು," ಎಂದು ತ್ರಿಶಕ್ತ್ಯಾತ್ಮಿಕ ದೇವಿಯರ ಸ್ವರೂಪವನ್ನುವರ್ಣಿಸಿ,ಕ್ರೌಷ್ಟುಕಿ ಋಷಿಯು,ಅವರ ಉಪಾಸನಾ ವಿಧಿಯನ್ನು ಹೇಳಲಾರಂಭಿಸಿದನು.ಹದಿನೆಂಟು ಭುಜಗಳ ಮಹಾಲಕ್ಷ್ಮಿಯನ್ನು ಪೂಜಿಸುವಾಗ,ಅವಳ ಎಡಕ್ಕೆ ಹತ್ತು ಮುಖಗಳ ಮಹಾಕಾಳಿ,ಬಲಕ್ಕೆ ಅಷ್ಟಭುಜಗಳ ಮಹಾಸರಸ್ವತಿಯರನ್ನು,ಅವರ ಹಿಂದುಗಡೆ ಶಂಕರ,ಮಹಾವಿಷ್ಣು,ಮತ್ತು ಬ್ರಹ್ಮರನ್ನು ಆವಾಹಿಸಿ  ಪೂಜೆ ಸಲ್ಲಿಸಬೇಕು.ಅರಿಷ್ಟ ಶಾಂತಿಗಾಗಿ,ಬಲಪಾರ್ಶ್ವದಲ್ಲಿ ಕಾಲನನ್ನು,ಎಡಪಾರ್ಶ್ವದಲ್ಲಿ ಮೃತ್ಯುವನ್ನು,ದೇವಿಯ ನವಶಕ್ತಿಗಳಾದ ಬ್ರಾಹ್ಮೀ,ಮಾಹೇಶ್ವರಿ,ಕೌಮಾರೀ,ವೈಷ್ಣವೀ,ವಾರಾಹೀ,ನಾರಸಿಂಹೀ,ಐಂದ್ರೀ,ಶಿವದೂತೀ ಮತ್ತು ಚಾಮುಂಡಾ ಇವರಿಗೂ ಪೂಜೆ ಸಲ್ಲಿಸಲೇಬೇಕು.ಪೂಜೆಯಲ್ಲಿ ಆಯಾಯಾ ಅವತಾರಕ್ಕೆ ಸಂಬಂಧಿಸಿದ ಸ್ತೋತ್ರ,ಮಂತ್ರಗಳನ್ನೇ ಹೇಳಬೇಕು.ಎಲ್ಲ ರೂಪಗಳೂ ಪ್ರಕಟವಾದುದು ಮಹಾಲಕ್ಷ್ಮಿಯಿಂದಲೇ.ಮಹಿಷಾಸುರ ಮರ್ದಿನಿಯಾದ ಅವಳೇ ಪ್ರಧಾನವಾಗಿ ಪೂಜನೀಯಳು.ಷೋಡಶೋಪಚಾರ ಪೂರ್ವಕವಾಗಿ ದೇವಿಯನ್ನು ಆರಾಧಿಸಿ,ಮಾಂಸಾಹಾರಿ ಆರಾಧಕರು ಮದ್ಯ,ಮಾಂಸ,ರಕ್ತಸಿಂಚಿತ ಬಲಿಯನ್ನು,ಸಸ್ಯಾಹಾರಿಗಳು ಪಂಚಭಕ್ಷ, ಪರಮಾನ್ನ,ಪಂಚಫಲಗಳನ್ನು ನೈವೇದ್ಯವಾಗಿ ಅರ್ಪಿಸಿ,ಮಹಾಮಂಗಳಾರತಿ ಮಾಡಿ ದೇವಿಯನ್ನು ನಾನಾ ಸ್ತೋತ್ರಗಳಿಂದ,ರಹಸ್ಯತ್ರಯಗಳಿಂದ ಸ್ತುತಿಸಿ ಪ್ರಾರ್ಥಿಸಬೇಕು.ನಂತರ ದೇವಿಯಿಂದಲೇ ಹತನಾದ ಮಹಿಷಾಸುರನನ್ನೂ,ದೇವಿಯ ವಾಹನವನ್ನೂ ಪೂಜಿಸಬೇಕು.ಕೊನೆಯಲ್ಲಿ "ಅಪರಾಧಕ್ಷಮಾಪಣಾ ಸ್ತೋತ್ರ"ದಿಂದ ಸ್ತುತಿಸಿ ಕ್ಷಮಾ ಪ್ರಾರ್ಥನೆಯನ್ನು ಮಾಡವುದು ಅವಶ್ಯಕ.ಶಕ್ತಿ ಇದ್ದವರು ಸಪ್ತಶತೀ ಪಾರಾಯಣ ಮಾಡಿ,ಪ್ರತಿಯೊಂದು ಶ್ಲೋಕಕ್ಕೂ,ಎಳ್ಳು,ತುಪ್ಪದಿಂದ ಕೂಡಿದ ಆಹುತಿಯನ್ನು ಕೊಟ್ಟು ಚಂಡೀಹೋಮವನ್ನು ಮಾಡಿ,ಸುವಾಸಿನೀ ಪೂಜೆ,ಅನ್ನದಾನ,ಮಾಡುವುದರಿಂದ ದೇವಿಯು ಪ್ರಸನ್ನಳಾಗಿ,ಭಕ್ತನ ಮನೋವಾಂಛಿತ ಫಲಗಳನ್ನು ಕೊಟ್ಟು ದೇಹಾಂತ್ಯದಲ್ಲಿ ತನ್ನಲ್ಲಿಯೇ ಐಕ್ಯಮಾಡಿಕೊಳ್ಳುತ್ತಾಳೆ" ಆದ್ದರಿಂದ ರಾಜನೇ ನೀನೂ ಸಹ ಭಕ್ತಿಯಿಂದ ಶಾಸ್ತ್ರೋಕ್ತ ವಿಧಿಯಿಂದ ಚಂಡಿಕೆಯನ್ನು ಪೂಜಿಸು.ಅವಳು ನಿನಗೆ ಸಕಲ ಸೌಭಾಗ್ಯ, ಸುಖವನ್ನು ಅನುಗ್ರಹಿಸುವಳು,ಎಂದು ಕ್ರೌಷ್ಟುಕಿ ಮುನಿಯು ಸುರಥರಾಜನಿಗೆ ಹೇಳಿದನು.ಇಲ್ಲಿಗೆ ರಹಸ್ಯತ್ರಯದ ಎರಡನೆಯ "ವೈಕೃತಿಕ ರಹಸ್ಯ,ಸಂಪನ್ನವಾಯಿತು.ಆಸಕ್ತರಿಗಾಗಿ...*ಅಪರಾಧ ಕ್ಷಮಾಪಣಾ ಸ್ತೋತ್ರ*ಅಪರಾಧ ಸಹಸ್ರಾಣಿಕ್ರಿಯಂತೇsಹರ್ನಿಶಂ ಮಯಾ |ದಾಸೋsಯಮಿತಿ ಮಾಂ ಮತ್ವಾಕ್ಷಮಸ್ವ ಪರಮೇಶ್ವರಿ ||೧||ಆವಾಹನಂ ನ ಜಾನಾಮಿನ ಜಾನಾಮಿ ವಿಸರ್ಜನಮ್ ||ಪೂಜಾಂ ಚೈವ ನ ಜಾನಾಮಿಕ್ಷಮ್ಯತಾಂ ಪರಮೆಶ್ವರಿ ||೨||ಮಂತ್ರಹೀನಂ ಕ್ರಿಯಾಹೀನಂಭಕ್ತಿಹೀನಂ ಸುರೇಶ್ವರಿ |ಯತ್ಪೂಜಿತಂ ಮಯಾದೇವಿಪರಿಪೂರ್ಣಂ ತದಸ್ತು ಮೇ ||೩||ಅಪರಾಧಶತಂ ಕೃತ್ವಾಜಗದಂಬೇತಿ ಚೋಚ್ಚರೇತ್ |ಯಾಂ ಗತಿಂ ಸಮವಾಪ್ನೋತಿನ ತಾಂ ಬ್ರಹ್ಮಾದಯಃ ಸುರಾಃ ||೪||ಸಾಪರಾಧೋsಸ್ಮಿ ಶರಣಂಪ್ರಾಪ್ತಸ್ತ್ವಾಂ ಜಗದಂಬಿಕೇ |ಇದಾನೀಮನುಕಂಪ್ಯೋsಹಂಯಥೇಚ್ಛಸಿ ತಥಾ ಕುರು ||೫||ಅಜ್ಞಾನಾದ್ವಿಸ್ಮೃತೇರ್ಭ್ರಾಂತ್ಯಾಯನ್ನ್ಯೂನಮಧಿಕಂ ಕೃತಮ್ |ತತ್ಸರ್ವಂ ಕ್ಷಮ್ಯತಾಂ ದೇವಿಪ್ರಸೀದ ಪರಮೇಶ್ವರಿ ||೬||ಕಾಮೇಶ್ವರಿ ಜಗನ್ಮಾತಃಸಚ್ಚಿದಾನಂದ ವಿಗ್ರಹೇ |ಗೃಹಾಣಾರ್ಚಾಮಿಮಾಂ ಪ್ರೀತ್ಯಾಪ್ರಸೀದ ಪರಮೇಶ್ವರಿ ||೭||ಗುಹ್ಯಾತಿಗುಹ್ಯಗೋಪ್ತ್ರೀ ತ್ವಂಗೃಹಾಣಾಸ್ಮತ್ಕೃತಂ ಜಪಮ್ |ಸಿದ್ಧಿರ್ಭವತು ಮೇ ದೇವಿತ್ವತ್ಪ್ರಸಾದಾತ್ಸುರೇಶ್ವರಿ ||೮||*-*-*-*-*-*-*-*-*-  "ಮೂರ್ತಿ ರಹಸ್ಯ."ಕ್ರೌಷ್ಟುಕಿ ಋಷಿಯು ರಾಜ ಸುರಥನಿಗೆ ಹೇಳಿದನು...ನಂದನ ಮಗಳಾಗಿ ಜನಿಸುವ ನಂದಾದೇವಿಯು ಕನಕಕಾಂತಿಯ ದೇಹ,ದಿವ್ಯ ವಸ್ತ್ರ,ಆಭರಣಗಳನ್ನು ತೊಟ್ಟು,ಕಮಲ,ಅಂಕುಶ,ಪಾಶ,ಶಂಖವನ್ನು ನಾಲ್ಕು ಕೈಗಳಲ್ಲಿ ಧರಿಸಿ,ಇಂದಿರಾ,ಲಕ್ಷ್ಮೀ,ಶ್ರೀ,ರುಕ್ಮಾಂಬುಜಾಸನಾ,ಮುಂತಾದ ಹೆಸರುಗಳಿಂದಕರೆಯಲ್ಪಡುತ್ತಾಳೆ.ಅವಳನ್ನು ಆರಾಧಿಸಿದರೆ,ಮೂರುಲೋಕಗಳನ್ನೂ ಆರಾಧಕನಿಗೆ ಅಧೀನವಾಗಿಸುವಳು.ಮೊದಲು ತಿಳಿಸಿದ್ದ ರಕ್ತದಂತಿಕಾ ದೇವಿಯು,ವಿಶಾಲವಾದ ಕೆಂಪು ಬಣ್ಣದ ದೇಹ,ಆಕರ್ಷಿಸುವಂತಹ,ಮನೋಹರವಾದ ಸ್ತನದ್ವಯಗಳು,ಕೆಂಪು ವಸ್ತ್ರ,ಕೆಂಪು ರತ್ನಗಳ ಆಭರಣ,ಹೀಗೆ ದಂತವೂ ಸೇರಿ ಅವಳ ಸರ್ವಾಂಗವೂ ಕೆಂಪು ಬಣ್ಣದಲ್ಲಿದ್ದುದರಿಂದ, "ರಕ್ತದಂತಿಕಾ" ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾಳೆ.ಅವಳು ಚತುರ್ಭಜದಲ್ಲಿ ಖಡ್ಗ,ಪಾನಪಾತ್ರೆ,ಒನಕೆ,ಮತ್ತು ನೇಗಿಲನ್ನು ಆಯುಧಗಳಾಗಿ ಧರಿಸಿರುವಳು.ಪ್ರತಿದಿನವೂ ಅವಳನ್ನು ಸ್ತುತಿಸಿದರೆ, ತನ್ನಂತೆಯೇ ತನ್ನ ಆರಾಧಕನನ್ನೂ ಚರಾಚರ ಜಗತ್ತಿಗೆ ವ್ಯಾಪಿಸುವಂತೆ ಮಾಡಿ,ಭಕ್ತನ ರಕ್ಷಣೆ ಮಾಡುವಳು.ಶಾಕಂಭರೀದೇವಿಯು,ಶೋಕರಹಿತಳು,ದುಷ್ಟರನ್ನು ನಿಗ್ರಹಿಸುವವಳು,ಪಾಪ-ವಿಪತ್ತುಗಳನ್ನು ನಾಶಮಾಡುವವಳಾಗಿದ್ದಾಳೆ.ಶಾಕಂಭರಿಯು ನೀಲವರ್ಣದವಳಾಗಿದ್ದು,ಕಣ್ಣುಗಳು ನೀಲಕಮಲದಂತಿವೆ.ತ್ರಿವಲಿಯಿಂದ ಕೂಡಿದ ಸೂಕ್ಷ್ಮವಾದ ಉದರ,ತೆಳುವಾದ ಸೊಂಟ,ಎತ್ತರವಾದ ಉಬ್ಬಿದ, ಒಂದಕ್ಕೊಂದು ಅಂಟಿಕೊಂಡಂತಹ ಗೋಲಾಕಾರದ ಸ್ತನಗಳಿದ್ದು  ಕಮಲವಾಸಿನಿಯಾಗಿದ್ದಾಳೆ.ಕೈಗಳಲ್ಲಿ  ಮುಷ್ಟಿಯ ತುಂಬ ಬಾಣಗಳು,ಕಮಲಪುಷ್ಪ,ಹೂವು,ಸೊಪ್ಪು,ಗೆಡ್ಡೆ,ಗೆಣಸು,ಹಣ್ಣುಗಳಿಂದ ಕೂಡಿದ ಶಾಕಗುಚ್ಛ (ತರಕಾರಿಯ ಕಟ್ಟು) ಮತ್ತು ಹೊಳೆಯುವ ಧನುಸ್ಸನ್ನು ಧರಿಸಿ,ಭಕ್ತರ ಹಸಿವು,ಬಾಯಾರಿಕೆ,ಮೃತ್ಯುಭಯವನ್ನು ನಿವಾರಿಸುವವಳಾಗಿದ್ದು,ಶಾಕಂಭರೀ,ಶತಾಕ್ಷೀ,ದುರ್ಗಾ,ಉಮಾ,ಗೌರೀ,ಸತೀ,ಚಂಡೀ,ಕಾಲಿಕಾ,ಪಾರ್ವತೀ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಾಳೆ.ಶಾಕಂಭರಿಯನ್ನು ಆರಾಧಿಸುವವನಿಗೆ ಕ್ಷಾಮ-ಡಾಮರದ,ರೋಗ-ರುಜಿನಗಳ,ಹಸಿವು-ದಾಹಗಳ ಬಾಧೆಯಿಲ್ಲದಂತೆ ಅನ್ನಪಾನೀಯಗಳೆಂಬ ಅಕ್ಷಯಫಲವನ್ನು ಅನುಗ್ರಹಿಸಿ ರಕ್ಷಿಸುತ್ತಾಳೆ.ಭೀಮಾದೇವಿಯು ನೀಲವರ್ಣದ ಶರೀರ,ದೊಡ್ಡದಾದ ನಯನ ಮತ್ತು ಕುಚದ್ವಯಗಳು,ಕೈಗಳಲ್ಲಿ ಚಂದ್ರಹಾಸವೆಂಬ ಖಡ್ಗ, ಡಮರು,ಮಸ್ತಕ,ಪಾನಪಾತ್ರೆಗಳನ್ನು ಧರಿಸಿದ್ದಾಳೆ.ಅವಳ ರೂಪ ಭಯಂಕರವಾಗಿದ್ದರೂ,ಭಕ್ತಾಭೀಷ್ಟದಾಯಕಳಾಗಿ,ಏಕವೀರಾ,ಕಾಲರಾತ್ರಿ,ಕಾಮದಾ ಎಂಬ ಹೆಸರಿನಿಂದ ಭಕ್ತರಿಂದ ಪೂಜೆಗೊಳ್ಳುತ್ತಾಳೆ.ಭ್ರಾಮರೀದೇವಿಯ ಕಾಂತಿಯು ಅನೇಕಬಣ್ಣಗಳಿಂದ ಕೂಡಿದ್ದು,ಸುಗಂಧದ್ರವ್ಯಗಳಿಂದ ಲೇಪಿತವಾದ ದೇಹ,ತನ್ನ ತೇಜೋಮಂಡಲದ ಪ್ರಭೆಯಿಂದಾಗಿ ನೋಡಲು ಸಾಧ್ಯವಾಗದಷ್ಟು ಪ್ರಕಾಶಮಾನಳಾಗಿದ್ದು,ಚಿತ್ರಭ್ರಮರವಾಣಿ,ಮಹಾಮಾರೀ ಮೊದಲಾದ ಹೆಸರುಗಳಿಂದ ಆರಾಧಿಸಲ್ಪಡುತ್ತಾಳೆ"ಸುರಥರಾಜನೇ!ಇವು ಚಂಡಿಕಾದೇವಿಯ ವಿವಿಧ ಮೂರ್ತಿಗಳ ಸ್ವರೂಪ,ಹೆಸರುಗಳು.ಈ ದೇವಿಯರ ಕೀರ್ತನೆಯನ್ನು ಮಾಡಿದರೆ,ದೇವಿಯು ಕಾಮಧೇನುವಿನಂತೆ,ಆರಾಧಕನ ಎಲ್ಲ ಮನೋಕಾಮನೆಗಳನ್ನು ಈಡೇರಿಸುವಳು ಎಂಬುದರಲ್ಲಿ ಸಂಶಯವೇ ಇಲ್ಲ.ರಾಜನೇ,ಇದು ಪರಮ ಗೊಪ್ಯವಾದ ರಹಸ್ಯ.ಇದನ್ನು ನೀನು ಬೇರೆ ಯಾರಿಗೂ ಹೇಳಕೂಡದೆಂಬುದು ಸದಾ ನಿನ್ನ ಜ್ಞಾನದಲ್ಲಿರಲಿ.ಮೈಮರೆತು ಹೇಳಿದರೆ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.ದೇವಿಯ ದಿವ್ಯ ಮೂರ್ತಿಗಳ ಆಖ್ಯಾನ,ಆರಾಧನೆ ಮನೋವಾಂಛಿತ ಫಲವನ್ನು ಕೊಡುವಂತಹುದಾಗಿದೆ.ಆದ್ದರಿಂದ ನೀನು ಪೂರ್ಣ ಪ್ರಯತ್ನದಿಂದ ಏಕಾಗ್ರಚಿತ್ತನಾಗಿ,ದೇವಿಯ ಜಪಾರಾಧನೆಯನ್ನು ನಿರಂತರವಾಗಿ ಮಾಡು.ಸಪ್ತಶತಿಯ ಮಂತ್ರಗಳ ಪಠನ ಮಾತ್ರದಿಂದ ಮನುಷ್ಯನು ಏಳು ಜನ್ಮಗಳಲ್ಲಿ ಸಂಪಾದಿಸಿದ ಬ್ರಹ್ಮಹತ್ಯಾದಿ ಘೋರಪಾತಕಗಳಿಂದ,ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ.ಆದ್ದರಿಂದಲೇ ನಿನಗೆ ದೇವಿಯ ಗೋಪ್ಯಕ್ಕಿಂತಲೂ ಗೋಪ್ಯವಾದಂತಹ ಎಲ್ಲವನ್ನೂ,ಎಲ್ಲರಹಸ್ಯಗಳನ್ನೂ,ಧ್ಯಾನ,ಆರಾಧನಾ ಕ್ರಮವನ್ನು ಸಾದ್ಯಂತವಾಗಿ ವಿವರಿಸಿದ್ದೇನೆ.ಆ ಮಹಾದೇವಿಯ ಅನುಗ್ರಹದಿಂದ ನೀನು ಸರ್ವಲೋಕ ಮಾನ್ಯನಾಗುವೆ.ಸರ್ವಜಗದ್ವ್ಯಾಪಿನಿಯೂ ಸರ್ವರೂಪಮಯಿಯೂ ವಿಶ್ವರೂಪಳೂ ಆದ ಮಹಾದೇವಿ,ಪರಮೇಶ್ವರಿಗೆ ಭಕ್ತಿಯಿಂದ ನಮಸ್ಕರಿಸುತ್ತೇನೆ"ಎಂದು ಹೇಳಿ ಕ್ರೌಷ್ಟುಕಿ ಋಷಿಯು ವಿಶ್ರಮಿಸಿದನು.ಇಲ್ಲಿಗೆ ರಹಸ್ಯತ್ರಯಗಳು"  ಮುಕ್ತಾಯವಾಯಿತು.ನಮಸ್ತಸ್ಯೈ ನಮಸ್ತಸ್ಯೈನಮಸ್ತಸ್ಯೈ ನಮೋನಮಃ ||ಶ್ರೀಜಗದಂಬಾರ್ಪಣಮಸ್ತು.

October 16, 2021

ನವಗ್ರಹ ಕವಚ ಮತ್ತು ಕಾರ್ಯ ಸಿದ್ಧಿ ಗಣಪತಿ ಸ್ತೋತ್ರ

ನವಗ್ರಹ ಕವಚ ಮತ್ತು ಕಾರ್ಯ ಸಿದ್ಧಿ ಗಣಪತಿ ಸ್ತೋತ್ರ........‌‌..

ಮನುಷ್ಯನಿಗೆ ಸುಖ ದುಃಖಗಳು  ಗ್ರಹಗಳಿಂದಲೇ ಬರುವವು . 

ನಮಗೆ ಯಾವುದಾದರೂ ಗ್ರಹದೋಷಗಳು ಇದ್ದರೆ ಅರ್ಹತೆ ಇದ್ದರೂ  ಉನ್ನತ ಸ್ಥಾನ ಸಿಗುವದಿಲ್ಲ , 

ಉದ್ಯೋಗ ದಲ್ಲಿ ಕಿರಕಿರಿ , ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ  ಪ್ರಶಂಸೆ ಸಿಗುವದಿಲ್ಲ , 

ಅಷ್ಟೇ ಅಲ್ಲ ಮನೆಯಲ್ಲಿ  ಹಣದ ತೊಂದರೆ ಇಲ್ಲದಿದ್ದರೂ  ಅಸಮಾಧಾನ ಪರಿಸ್ಥಿತಿ , ಆರೋಗ್ಯ ತೊಂದರೆ. 

ಯಾವದೇ ಕಾರ್ಯಗಳು ಕೈಗೂಡದೇ ಇರುವದು...‌ ಕೆಲವು ಸಲ ಹತಾಶೆ ಬಾವನೆ ಮನದಲ್ಲಿ ಮೂಡುವದು  ಈ ತರಹದ ಸಮಸ್ಯೆ ಗಳಿಗೆ ಪ್ರತಿದಿನ ಜಾತಕ  ತೊರಿಸುತ್ತಾ ಕೂಡಲು ಆಗುವದಿಲ್ಲ. 

ಅಕಸ್ಮಾತ್ ತೋರಿಸಿದಾಗ ಅವರು ಆಗಿನ ಸಮಯದ ಗ್ರಹ ದೋಷ ಪರಿಹಾರ ಹೇಳುತ್ತಾರೆ . ಗ್ರಹಗಳ ಚಲನೆ ಇದ್ದೇ ಇರುತ್ತೆ   

ಅದಕ್ಕಾಗಿ ನವಗ್ರಹಗಳ ಆರಾಧನೆ ಮಾಡಿಧಾಗ   ನಮಗೆ ಗ್ರಹಗಳ ದೋಷದಿಂದ ಪರಿಹಾರ ಸಿಗುತ್ತೆ . ಇದು ನವಗ್ರಹ ಕವಚ , 

ಸ್ತೋತ್ರಗಳಲ್ಲಿ  ಕವಚಗಳು  ಶ್ರೇಷ್ಠ ಮತ್ತು ಬೇಗ ಫಲವನ್ನು ಕೊಡುತ್ತವೆ. ಈ ಕವಚ ಪ್ರತಿ ದಿನ   ಒಂಬತ್ತು ಸಾರೆ  ಪಠಣದಿಂದ  ಆರೋಗ್ಯ ,  ಸಂಪತ್ತು ಮತ್ತು ಕಾರ್ಯ ಸಿದ್ಧಿ  ಫಲಗಳು  ಲಭಿಸುತ್ತವೆ....  

ನವಗ್ರಹ ಕವಚ ...

ಶಿರೋ ಮೇ ಪಾತು ಮಾರ್ತಂಡಃ ಕಪಾಲಂ ರೋಹಿಣಿ ಪತಿಃ l
ಮುಖ ಮಂಗಾರಕಃ ಪಾತು ಕಂಠಂ ಚ ಶಶಿನಂದನಃ ll
ಬುದ್ಧಿಂ ಜೀವಃ ಸದಾ ಪಾತು ಹೃದಯಂ ಭೃಗುನಂದನಃ l
ಜಠರಂ ಚ ಶನಿಃ ಪಾತು ಜಿಹ್ವಾಂ ಮೇ ದಿತಿ ನಂದನಃ ll
ಪಾದೌ ಕೇತುಃ  ಸದಾ ಪಾತು ವಾರಾಃ ಸರ್ವಾಂಗಮೇವಚ l
ತಿಥಯೋಅಷ್ಟೌ  ದಿಶಃ ಪಾಂತು  ನಕ್ಷತ್ರಾಣಿ ವಪುಃ ಸದಾ ll
ಅಂಸೌ ರಾಶಿಃ  ಸದಾ ಪಾತು ಯೋಗಶ್ಚಸ್ಥೈರ್ಯಮೇವಚ l
 ಸ ಚಿರಾಯು ಸುಖೀ ಪುತ್ರೀ  ಯುದ್ಧೇ ಚ ವಿಜಯೀ ಭವೇತ್ l
ರೋಗಾತ ಪ್ರಮುಚ್ಯತೇ ರೋಗಿ ಬಂಧೋ ಮುಚ್ಯೇತ ಬಂಧನಾತ ll
ಶ್ರೀಯಂ ಚ ಲಭತೇ ನಿತ್ಯಂ ರಿಷ್ಟಿಸ್ತಸ್ಯ ನ ಜಾಯತೇ ll
ಯಃ ಕರೇ ಧಾರಯೇನಿತ್ಯಂ  ತಸ್ಯ ರಿಸ್ಟಿರ್ನ ಜಾತತೇ l
 ಪಠನಾತ್ ಕವಚಸ್ಯಾಸ್ಯ ಸರ್ವ ಪಾಪಾತ ಪ್ರಮುಚ್ಯತೇ ll
ಜೀವವತ್ಸಾ  ಪುತ್ರವತೀ  ಭವತ್ಯೇವ ನಸಂಶಯಃ ll

 ಈ ನವಗ್ರಹ ಕವಚ ಅನ್ನುವಕ್ಕಿಂತ ಮೊದಲು 
ಕಾರ್ಯಸಿದ್ಧಿ ಗಣಪತಿ ಸ್ತೋತ್ರ ವನ್ನು ಇಪ್ಪತ್ತೊಂದು ಸಲ ಹೇಳಿ  ಮತ್ತು ಪ್ರತೀ ಮಂಗಳವಾರ  ಇಪ್ಪತ್ತೊಂದು  ನೆನೆದ ಕಡಲೆ ಹಾರವನ್ನು   ಗಣಪತಿಗೆ ಇಷ್ಟಾರ್ಥ ಬೇಡಿಕೊಂಡು  ಮನೆಯಲ್ಲಿ ಇರುವ ಗಣಪತಿ ಪೂಜೆಮಾಡಿ ಹಾರ ಹಾಕಿ ಬೇಗ ಇಷ್ಟಾರ್ಥ ಸಿದ್ಧಿಯಾಗುತ್ತವೆ...

ಕಾರ್ಯ ಸಿದ್ಧಿಗಣಪತಿ ಸ್ತೋತ್ರ

ಸಮುಖಶ್ಟೈಕ ದಂತಶ್ಚ  ಕಫಿಲೋ ಗಜಕರ್ಣಕಃ l
ಲಂಭೋಧರಶ್ಚ ವಿಕಟೋ  ವಿಘ್ನನಾಶೋ ಗಣಾದಿಪಃ ll
ಧೂಮ್ರಕೇತು ರ್ಗಣಾದ್ಯಕ್ಷೋ  ಬಾಲಚಂದ್ರೋ ಗಜಾನನಃ l
ವಕ್ರತುಂಡಃ ಶೂರ್ಪಕರ್ಣೋ ಹೇರಂಬಃ ಸ್ಕಂದ ಪೂರ್ವಜಃll
✍️✍️✍️✍️
ಮುಖಪುಟದಲ್ಲಿ ಸಿಕ್ಕಿದ್ದು...

October 14, 2021

|| ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ ||

*******************************
ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ನುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ: |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ||೧||

ಭಾವಾರ್ಥ:-ಅಮ್ಮಾ! ನನಗೆ ನಿನ್ನ ಮಂತ್ರವಾಗಲೀ ಯಂತ್ರವಾಗಲೀ ಸ್ತುತಿಯಾಗಲೀ ತಿಳಿದಿಲ್ಲ. ತಾಯೀ, ನನಗೆ ನಿನ್ನನ್ನು ಆಹ್ವಾನಿಸಲಾಗಲೀ ಧ್ಯಾನಿಸಲಾಗಲೀ ಸ್ತುತಿಕಥೆಗಳಾಗಲೀ ಗೊತ್ತಿರುವುದಿಲ್ಲ. ನಿನ್ನ ಮುದ್ರೆಯನ್ನೂ ನಾನರಿಯೆನು. ನಿನ್ನ ಎದುರು ಮೊರೆಯಿಡಲೂ ನಾನರಿಯೆ. ಆದರೆ ಅಮ್ಮಾ, ನನಗೆ ಇಷ್ಟು ಮಾತ್ರಾ ಅರಿವಿದೆ; ನಿನ್ನನ್ನು ಹಿಂಬಾಲಿಸಿದರೆ ನನ್ನ ಸಂಕಟಗಳೆಲ್ಲವೂ ನಾಶವಾಗುತ್ತವೆ.

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  ||೨||

ಭಾವಾರ್ಥ:-ಹೇ! ತಾಯೀ; ವಿಧಿಯ ಆಟದಿಂದಲೂ, ನನ್ನ ಬಡತನದಿಂದಲೂ ಜಡತ್ವದಿಂದಲೂ, ಹಾಗೇಯೇ, ನಿನಗೆ ವಿಧೇಯನಾಗಿರಲು ಶಕ್ಯನಾಗದಿರುವುದರಿಂದಲೂ, ನಿನ್ನ ಅಡಿದಾವರೆಗಳ ಸೇವೆಯಿಂದ ಹೊರದೂಡಲ್ಪಟ್ಟಿರುವೆನು; ಹೇ ಅಮ್ಮಾ ; ಸಕಲೋದ್ಧಾರಿಣಿ ತಾಯಿ ಶಿವೇ,ನೀನು ನನ್ನ ಸರ್ವಾಪರಾಧಗಳನ್ನು ಕ್ಷಮಿಸು. ಅಮ್ಮಾ; ಲೋಕದಲ್ಲಿ ದುಷ್ಟ ಮಗನು ಹುಟ್ಟಬಹುದು, ಆದರೆ ದುಷ್ಟ ತಾಯಿಯು ಎಲ್ಲಿಯೂ ಕಾಣಲು ಸಿಗಲಾರದು.

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವ: ಸಂತಿ ಸರಲಾ:
ಪರಂ ತೇಷಾಂ ಮಧ್ಯೇ ವಿರಲತರಲೋsಹಂ ತವ ಸುತ: |
ಮದೀಯೋ??ಯಂ ತ್ಯಾಗ: ಸುಮುಚಿತಮಿದಂ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  ||೩||

ಭಾವಾರ್ಥ:- ಅಮ್ಮಾ! ಈ ಭೂಮಂಡಲದಲ್ಲಿ ಪುಣ್ಯ ಪುರುಷರೆನಿಸಿದ ಅದೆಷ್ಟೋ ಮಕ್ಕಳು ನಿನಗಿರುವರು. ಅವರುಗಳ ನಡುವೆ ಈ ನಿನ್ನ ಮಗನಾಗಿರುವ ನಾನು ಕೇವಲ ಅತ್ಯಲ್ಪನೆನಿಸಿದವನು. ಹೇ! ಶುಭದಾಯಕಿಯಾಗಿರುವ ಶಿವೇ; ನಿನ್ನ ಬಿಟ್ಟು ನಾನಿರುವದು ಸರಿಯೆನಿಸಬಹುದು. ಆದರೆ ನನ್ನನ್ನು ನೀನು ತ್ಯಜಿಸಿರುವುದು ಉಚಿತವಲ್ಲ. ಏಕೆಂದರೆ ಜಗತ್ತಿನಲ್ಲಿ ಕೆಟ್ಟ ಮಗನು ಹುಟ್ಟಲೂ ಬಹುದು. ಆದರೆ ಕಿಂಚಿತ್ತಾದರೂ ಕೆಟ್ಟವಳಾಗಿರುವ ತಾಯಿಯು ಎಲ್ಲಿಯೂ ಕಾಣಸಿಗಲಾರಳು. 

ಜಗನ್ಮಾತರ್ಮಾತಸ್ತವ ಚರಣ ಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾ??ಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  ||೪||

ಭಾವಾರ್ಥ:-ಹೇ! ಜಗದಂಬೆಯೇ; ಅಮ್ಮಾ! ನಾನು ಎಂದೂ  ನಿನ್ನ ಚರಣ ಸೇವೆ ಗೈದವನಲ್ಲ. ಅಥವಾ ನಿನಗಾಗಿ ಬಹಳಷ್ಟು ಸಂಪತ್ತನ್ನು ದಾನ ಮಾಡಿದವನೂ ಅಲ್ಲ. ಆದಾಗ್ಯೂ ನಿನಗೆ ನನ್ನಲ್ಲಿ ಇರುವ ಸರಿಸಾಟಿಯಿಲ್ಲದ ಪ್ರೇಮವದು ಅನುಪಮವಾದುದು.  ಏಕೆಂದರೆ ಜಗತ್ತಿನಲ್ಲಿ ಕೆಟ್ಟ ಮಗನು ಹುಟ್ಟಲೂ ಬಹುದು. ಆದರೆ ಕಿಂಚಿತ್ತಾದರೂ ಕೆಟ್ಟವಳಾಗಿರುವ ತಾಯಿಯು ಎಲ್ಲಿಯೂ ಕಾಣಸಿಗಲಾರಳು. 

ಪರಿತ್ಯಕ್ತ್ವಾ ದೇವಾನ್ ವಿವಿಧವಿಧಿಸೇವಾಕುಲತಯಾ
ಮಯಾಪಂಚಾಶೀತೇರಧಿಕಮಪನೀತೇತು ವಯಸಿ |
ಇದಾನೀಂ ಮೇ ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್  ||೫||

ಭಾವಾರ್ಥ:- ಎಲೈ ಗಜಮುಖನ ಮಾತೆಯೇ! ಪೂಜಾದಿಗಳ ವಿಧಿ ನಿಯಮಗಳ ನಾನರಿಯೆ. ಆದ ಕಾರಣ ವಿವಿಧ ದೇವತೆಗಳ ಅರ್ಚನೆಯನ್ನು ನಾನು ಪರಿತ್ಯಜಿಸಿರುವೆ. ನಗೀಗಾಗಲೇ ಇಪ್ಪತ್ತೈದಕ್ಕೂ ಅಧಿಕ ವಯಸ್ಸು ಕಳೆಯಿತು. ಅಮ್ಮಾ; ತಾಯಿಯೇ; ಇನ್ನಾದರೂ ನೀನು ನನ್ನಲ್ಲಿ ಕರುಣೆದೋರದಿದ್ದರೆ ನಿರಾಶ್ರಿತನಾದ ನಾನು ಆರಲ್ಲಿ ಮೊರೆಯಿಟ್ಟು ಶರಣಾಗಲಿ?

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈ: |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನ: ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ  ||೬||

ಭಾವಾರ್ಥ:-ಅಮ್ಮಾ ಅಪರ್ಣೇ! ನಿನ್ನ ಅಮೃತಮಯ ಸುಮಧುರ ಮಂತ್ರಾಕ್ಷರಗಳು ಕಿವಿಯೊಳಗೆ ಹೊಕ್ಕ ಮಾತ್ರದಲ್ಲಿ ಚಂಡಾಲನು ಕೂಡಾ ಜೇನಿನಂತಹಾ ಸುಮಧುರ ವಾಣಿಗಳನು ಹೊಂದುವನು. ದಟ್ಟ ದರಿದ್ರನೂ ಕುಭೇರ ಸದೃಶನಾಗಿ ಯಾವುದೇ ಆತಂಕಗಳ ಗೊಡವೆಯಿಲ್ಲದೆ ಬಹುಕಾಲ ಸಂಚರಿಸುವನು. ಹೀಗಿರುವಾಗ ಅಮ್ಮಾ, ವಿಧಿವತ್ತಾಗಿ ನಿನ್ನ ಜಪಾನುಷ್ಠಾನ ನಿರತನಿಗೆ ಎಂಥಾ ಫಲ ದೊರಕಬಹುದು ಎಂಬುದನ್ನಾರು ಹೇಳಲು ಸಾಧ್ಯ?

ಚಿತಾಭಸ್ಮಾ ಲೇಪೋ ಗರಲಮಶನಂ ದಿಕ್ಪಟಧರೋ 
ಜಟಾಧಾರೀಕಂಠೇ ಭುಜಗಪತಿಹಾರೀ ಪಶುಪತಿ: |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್ ಪಾಣಿಗ್ರಹಣಪರಿಪಾಟೀ ಫಲಮಿದಮ್  ||೭||

ಭಾವಾರ್ಥ:- ಚಿತಾಗಾರದ ಭಸ್ಮವನ್ನು ಶರೀರಕ್ಕೆ ಲೇಪಿಸಿಕೊಂಡವನೂ, ವಿಷವನ್ನೇ ಕುಡಿದವನೂ, ಬೆತ್ತಲೆಯ ಮೈಯವನೂ, ಜಟೆಯನ್ನು ಧರಿಸಿಕೊಂಡವನೂ,ಕಂಠದಲ್ಲಿ ಉರಗವನ್ನು ಹಾರವಾಗಿ ಧರಿಸಿದವನೂ, ಹಸ್ತದಲ್ಲಿ ತಲೆ ಬುರುಡೆಯನ್ನು ಹಿಡಿದು ಕೊಂಡಿರುವವನೂ, ಪಶುಗಳ ಒಡೆಯನೂ ಆಗಿರುವ ಭೂತಾದಿಗಳ ಮಧ್ಯ ವಾಸಿಸುವ ಶಿವನು ಅದ್ವೀತೀಯವಾಗಿರುವಂತಹಾ ಜಗದೀಶ್ವರನ ಪದವಿಯನ್ನು ಹೊಂದಿರುವುದು ನಿನ್ನ ಪಾಣಿಗ್ರಹಣದ ಫಲದಿಂದ ಸಾಧ್ಯವಾಯಿತು.

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವವಾಂಛಾsಪಿ ಚ ನ ಮೇ 
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾsಪಿ ನ ಪುನ: |
ಅತಸ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತ:  ||೮||

ಭಾವಾರ್ಥ:- ಹೇ ಮಾತೆ ಚಂದ್ರವದನೇ! ನನಗೆ ಮೋಕ್ಷದ ಆಶೆಯಿಲ್ಲ. ಧನ ಸಂಪತ್ತುಗಳ ಬಯಕೆಯಿಲ್ಲ. ಸಂಸಾರ ವೈಭವದ ಇಚ್ಛೆಯಿಲ್ಲ. ಜ್ಞಾನಾಪೇಕ್ಷೆಯಾಗಲೀ ಸುಖದ ಅಭಿಲಾಷೆಯಾಗಲೀ ಇಲ್ಲ. ಆದ್ದರಿಂದ ಹೇ ತಾಯಿಯೇ; ನಾನು ನಿನ್ನನ್ನು ಬೇಡಿಕೊಳ್ಳುವುದಿಷ್ಟೇ; ಮೃಡಾನಿ.ರುದ್ರಾಣಿ,ಶಿವ,ಶಿವಾ, ಭವಾನೀ, ಎಂದು ಜಪಿಸುತ್ತಾ ನನ್ನ ಜನ್ಮವೆಲ್ಲವೂ ಕಳೆದುಹೋಗಲಿ.

ನಾರಾಧಿತಾsಸಿ ವಿಧಿನಾ ವಿವಿಧೋಪಚಾರೈ:
ಕಿಂ ರುಕ್ಷ ಚಿಂತನಪರೈರ್ನ ಕೃತಂ ವಚೋಭಿ: |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ  ||೯||

ಭಾವಾರ್ಥ:- ಹೇ ಮಾತೇಯೇ! ನಾನೆಂದೂ ವಿಧ ವಿಧವಾದ ಉಪಚಾರಗಳಿಂದ ನಿನ್ನನ್ನು ಅರ್ಚಿಸಿಲ್ಲ. ನೀರಸವಾದ ಚಿಂತನೆಗಳಲ್ಲಿ ತತ್ಪರನಾಗಿ ಕಾಲವನ್ನು ಕಳೆದು ಸಲ್ಲದ ಕರ್ಮಗಳನ್ನು ಮಾಡಿದೆನು. ಆದಾಗ್ಯೂ ದಿಕ್ಕಿಲ್ಲದ ನನ್ನಲ್ಲಿ ನೀನು ಇನಿತಾದರೂ ಕೃಪೆ ಮಾಡಿರುವೆ. ಅದು ನಿನಗೆ ತಕ್ಕದ್ದೇ ಆಗಿದೆ ಏಕೆಂದರೆ ನೀನು ನನ್ನ ಪೊರೆಯುವ ತಾಯಿಯಾಗಿರುವೆ.

ಆಪತ್ಸು ಮಗ್ನ: ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛಠತ್ವಂ ಮಮ ಭಾವಯೇಥಾ:
ಕ್ಷುಧಾತೃಷಾರ್ತಾ ಜನನೀ ಸ್ಮರಂತಿ  ||೧೦||

ಭಾವಾರ್ಥ:- ಅಮ್ಮಾ ದುರ್ಗಾಮಾತೆಯೇ! ಕರುಣಾಪೂರ್ಣೇಯೇ; ಈಶ್ವರೀ, ಆಪತ್ತಿನಲ್ಲಿ ಮುಳುಗಿ ನಿನ್ನನ್ನು ಸ್ಮರಿಸುತ್ತಿದ್ದೇನೆ. ಇದನ್ನು ಸಟೆಯೆಂದಾಗಲೀ, ಮೋಸವೆಂದಾಗಲೀ ಭಾವಿಸದಿರು ಅಮ್ಮಾ! ಏಕೆಂದರೆ ಹಸಿವು ಬಾಯಾರಿದಾಗ ಮಾತ್ರಾ ಮಕ್ಕಳು ತಾಯಿಗಾಗಿ ಹಂಬಲಿಸುತ್ತಾರೆಯಲ್ಲವೇ?

ಜಗದಂಬ ವಿಚಿತ್ರಮತ್ರ ಕಿಂ 
ಪರಿಪೂರ್ಣಾ ಕರುಣಾsಸ್ತಿ ಚೇನ್ಮಯಿ |
ಅಪರಾಧಪರಂಪರಾವೃತಂ ನ ಹಿ
ಮಾತಾ ಸಮುಪೇಕ್ಷತೇ ಸುತಮ್  ||೧೧||

ಭಾವಾರ್ಥ:- ಹೇ! ಜಗಜ್ಜನನಿ ತಾಯಿಯೇ; ನೀನು ನನ್ನ ಬಗ್ಗೆ ಸಂಪೂರ್ಣ ಕರುಣಾಪೂರ್ಣೆಯಾಗಿದ್ದಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಸಹಸ್ರಾಪರಾಧಗಳನ್ನು ಮಾಡಿದರೂ ಮಾತೆಯು ಎಂದಿಗೂ ಮಗನನ್ನು ಉಪೇಕ್ಷಿಸುವುದಿಲ್ಲ. 

ಮತ್ಸಮ: ಪಾತಕೀ ನಾಸ್ತಿ
ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ
ಯಥಾ ಯೋಗ್ಯಂ ತಥಾ ಕುರು  ||೧೨|| 

ಭಾವಾರ್ಥ:-ಹೇ! ಜಗದೋದ್ಧಾರಿಣಿ ತಾಯೇ! ಮಹಾದೇವೀ; ನನ್ನಂತಹಾ ಪಾಪಿಷ್ಟ ಇನ್ನೊಬ್ಬನಿಲ್ಲ. ನಿನ್ನಂತಹಾ ಪಾಪನಾಶಕಳೂ ಬೇರೊಬ್ಬರಿಲ್ಲ. ಆದ ಕಾರಣ ಅಮ್ಮಾ; ತಾಯೀ; ಇದನ್ನು ಅರಿತವಳಾಗಿರುವ ನೀನು ಯಾವುದು ಉಚಿತವೆನಿಸುವುದೋ ಅದನ್ನೇ ನನಗೆ ಅನುಗ್ರಹಿಸು.
*******************************************************************************************
||ಇತಿ ಶ್ರೀ ಮತ್ಪರಮಹಂಸಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಾಚಾರ್ಯ ವಿರಚಿತಂ ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ ||

||ಈ ತೆರನಾಗಿ ಪರಮಪೂಜ್ಯ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಾಚಾರ್ಯ  ಭಗವತ್ಪಾದರಿಂದ ರಚಿತವಾಗಿರುವ ದೇವ್ಯಪರಾಧ ಕ್ಷಮಾಪನಾ ಸ್ತೋತ್ರಗಳ ಭಾವಾರ್ಥವಾಗಿದೆ. ||
***********************************************************************************************

ಹಿರಣ್ಯಪಾತ್ರಮ್

ಹಿರಣ್ಯಪಾತ್ರಮ್…

ಹಿರಣ್ಯಪಾತ್ರಂ ಮಧೋಃ ಪೂರ್ಣಂ ದದಾತಿ ಮಧವ್ಯೋऽಸಾನೀತಿ | (ತೈ.ಸಂ.೫|೭|೧|೩)

ಇಲ್ಲಿ ದಕ್ಷಿಣಾಕಾಲದಲ್ಲಿ (ಋತ್ವಿಜರಿಗೆ) ನೀಡಬೇಕಾದ ದಾನವನ್ನು ಹೇಳಲಾಗಿದೆ (ಆಪಸ್ತಂಬಶ್ರೌತಸೂತ್ರ ೧೭|೨೩|೫, ಸಾಯಣ-ವೇದಾರ್ಥಪ್ರಕಾಶ / ವೇದಭಾಷ್ಯ). “ಪರಲೋಕದಲ್ಲಿ ಮಧುರವಾದ ಭೋಗ್ಯದ್ರವ್ಯಯುಕ್ತನಾಗುವೆನು” ಎಂದು ಅಭಿಪ್ರಾಯಪಟ್ಟು, ಜೇನಿನಿಂದ ತುಂಬಿದ ಚಿನ್ನದ ಪಾತ್ರೆಯನ್ನು ಪ್ರದಾನಮಾಡಬೇಕು._

ಏಕಧಾ ಬ್ರಹ್ಮಣ ಉಪ ಹರತ್ಯೇಕಧೈವ ಯಜಮಾನ ಆಯುರ್ದಧಾತಿ | (ತೈ.ಸಂ. ೨|೩|೨|೨)

_ಕಾಮ್ಯೇಷ್ಟಿವಿಧಾನದಲ್ಲಿ, ಮೃತ್ಯುಭೀತನಾದವನಿಗೆ ಆಯುಸ್ಸಿಗಾಗಿ ಶತಕೃಷ್ಣಲಾ / ನೂರು ಗುಲಗುಂಜಿಗಳನ್ನು ಯಜ್ಞಮುಖೇನ ಪ್ರದಾನಮಾಡಬೇಕೆಂದಿದೆ. ಅವುಗಳಲ್ಲಿ ನಾಲ್ಕು ನಾಲ್ಕರ ಕಟ್ಟನ್ನು ಪ್ರತ್ಯೇಕ ಪ್ರತ್ಯೇಕವಾಗಿ ದೇವತೆಗಳಿಗೆ ಸಮರ್ಪಿಸಿ, ಕೊನೆಗೆ ಉಳಿದವುಗಳನ್ನು ಒಟ್ಟಿಗೆ ಹಿಡಿದು(ಏಕಧಾ), ಬ್ರಹ್ಮನಿಗೆ(ಬ್ರಹ್ಮಣೇ) ಸಮರ್ಪಿಸಲಾಗುತ್ತದೆ (ಉಪಹರತಿ). ಇದರಿಂದ ಬ್ರಹ್ಮನು (ಯಜಮಾನೇ) ಯಜ್ಞ ಮಾಡುವ ಕರ್ತೃವಿಗೆ, (ಏಕಧಾ ಏವ ಆಯುಃ ದಧಾತಿ) ಉಳಿಕೆ ಆಯುಷ್ಯವನ್ನೆಲ್ಲ ಸೇರಿಸಿ ಪೂರ್ಣಪ್ರಮಾಣದಲ್ಲಿ ಅನುಗ್ರಹಿಸುತ್ತಾನೆ._

ಏಕಧೈವ ಯಜಮಾನೇ ವೀರ್ಯಂ ದಧಾತಿ | (ತೈ.ಸಂ. ೫|೨|೧|೬, ೫|೨|೪|೪)

ಒಮ್ಮೆಲೇ ಒಟ್ಟುಗೂಡಿಸಿದ ವೀರ್ಯ, ಪರಾಕ್ರಮ, ಶೌರ್ಯಾದಿಗಳನ್ನು ಯಜಮಾನನಿಗೆ ದೇವತೆಯು ಉಂಟುಮಾಡುತ್ತಾನೆ. [ಕಾನ್ಯಕುಬ್ಜದೇಶದ ನೃಪಶ್ರೇಷ್ಠನಾದ ಭಲಂದನನ ಪುತ್ರ ವತ್ಸಪ್ರೀಃ— ಯ ಕುರಿತಾದ ತೈ.ಸಂ. ೪|೨|೨ರ “ದಿವಸ್ಪರಿ” ಯೆಂಬ  ೧೧ ಋಕ್ಕುಗಳ ಸೂಕ್ತದ (ಏಕಾದಶರ್ಚ— ೧೧ ಋಚ) ಕುರಿತು “ಏತೇನ ವೈ” ಮುಂತಾಗಿ ಇಲ್ಲಿ* ವಿವರಿಸಲಾಗಿದೆ.]
ಸಂಗ್ರಹಿಸಿದ್ದು ಮೂಲ- Dr. Krishna Moorthy D

ಕಳ್ಳರಿದ್ದಾರೆ ಎಚ್ಚರಿಕೆ

ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ..............

 ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ......

 ಭಾರತೀಯ ಸಂಸ್ಕೃತಿ, ಸಂಪ್ರದಾಯ, ಭಕ್ತಿ, ನಂಬಿಕೆ ಬಗ್ಗೆ ಅಪಾರ ಅಭಿಮಾನವಿರುವ ಆತ ರಾತ್ರಿಯೆಲ್ಲ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಗಿನ ಹೊತ್ತಿಗೆ ಮೆಜಸ್ಟಿಕ್ ನ ಗಿಜಿಗುಡುವ  ಬಸ್ ನಿಲ್ದಾಣದಲ್ಲಿ ಇಳಿಯುತ್ತಾನೆ......

 ನಗರ ಜೀವನದ ಬಗ್ಗೆ ಅಷ್ಟೇನೂ ಅರಿವಿರದ ಆತ ದಟ್ಟ ಜನಸಂದಣಿಗೆ ಸ್ವಲ್ಪ ಬೆಚ್ಚುತ್ತಾನೆ.........

 ಜನರ ನೂಕಾಟ ತಳ್ಳಾಟಗಳ ನಡುವೆ ತಲೆ ಎತ್ತಿ ನೋಡುತ್ತಾನೆ. ಅಲ್ಲಿ ಒಂದು ದೊಡ್ಡ ಬೋರ್ಡ (ಫಲಕ) ......

 # ಕಳ್ಳರಿದ್ದಾರೆ ಎಚ್ಚರಿಕೆ # ......

ಆ ಯುವಕನಿಗೆ ಶಾಕ್. ರಾಜ್ಯದ ರಾಜಧಾನಿ ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣದಲ್ಲಿ ಈ ಅಸಹ್ಯಕರವಾದ ಫಲಕ.......

 ಛೆ,.. ಇರಲಾರದು, ಏನೋ ತಪ್ಪಾಗಿರಬೇಕು, ಬಸ್ ನಿಲ್ದಾಣದಲ್ಲಿ ಕಳ್ಳರೇ ! ಎಂದು ಭಾವಿಸಿ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಅದರ ಬಗ್ಗೆ ಕೇಳುತ್ತಾನೆ.........

 ಆ ವ್ಯಕ್ತಿ
 "ಹೌದು ಸಾರ್ ಇಲ್ಲಿ ಕಳ್ಳರು - ಪಿಕ್ ಪಾಕೆಟರ್ಸ್ ಜಾಸ್ತಿ. ಕಣ್ಣುಮುಚ್ಚಿ ತಗೆಯೋದರೊಳಗೆ ಚಕ್ ಅಂತ ಎಗರಿಸಿಬಿಡುತ್ತಾರೆ. ನೀವ್ಯಾರೊ ಹೊಸಬರು ಇರಬೇಕು, ಹುಷಾರು, ಯಾಮಾರಿದ್ರೆ ನಿಮ್ ಚಡ್ಡೀನು 
ಇರಲ್ಲ " ..........

ಇದನ್ನು ಕೇಳಿ ಆ ಯುವಕನಿಗೆ ತಲೆತಿರುಗಿದಂತಾಯಿತು. 
 ಸತ್ಯ, ಅಹಿಂಸೆ, ಪ್ರಾಮಾಣಿಕತೆ, ನಂಬಿಕೆ, ದೇವರು, ಧರ್ಮ ಅಂತ ಇಡೀ ವಿಶ್ವಕ್ಕೇ ಆಧ್ಯಾತ್ಮಿಕ ಚಿಂತನೆ ಕೊಟ್ಟ ಜನ ನಾವು ಅಂತ ಹಿರಿಯರು ಹೇಳುತ್ತಾರೆ. ಪವಿತ್ರ ಗ್ರಂಥವೂ ಹೇಳುತ್ತೆ, ಆದರೆ ವಾಸ್ತವ ಬೇರೇನೆ ಇದೆ ಎಂದು ಯೋಚಿಸುತ್ತಾ, ಅಲ್ಲಿಯೇ ಇದ್ದ ಹೋಟೆಲ್ ಗೆ ತಿಂಡಿ ತಿನ್ನಲು ಹೋಗುತ್ತಾನೆ..........

 ಖಾಲಿ ಇದ್ದ ಒಂದು ಟೇಬಲ್ಲಿನ ಮೇಲೆ ಕುಳಿತು ಬ್ಯಾಗ್ ಪಕ್ಕಕ್ಕಿರಿಸಿ ತಲೆ ಎತ್ತುತ್ತಾನೆ, ಅಲ್ಲಿ ಮತ್ತೊಂದು ಫಲಕ,.....

* ಎಚ್ಚರಿಕೆ, ನಿಮ್ಮ ವಸ್ತುಗಳಿಗೆ ನಾವು ಜವಾಬ್ದಾರರಲ್ಲ...... * 

ಅರೆ, ನಾನು ಈ ಹೋಟಿಲ್ ನ ಅತಿಥಿ, ಗ್ರಾಹಕ, ನನ್ನ ವಸ್ತುಗಳಿಗೆ ಈ ಹೋಟೆಲ್ ಒಳಗಡೆ ಇವರು ಜವಾಬ್ದಾರರಾಗದೆ ಮತ್ಯಾರು ಆಗಬೇಕು. ಕನಿಷ್ಠ ಸೌಜನ್ಯ ಬೇಡವೇ, ನಮ್ಮ ವಸ್ತುಗಳು ಸೇಪ್ ಇರದ ಜಾಗದಲ್ಲಿ ಹೋಟೆಲ್ ಇದೆಯೇ?......

ಯೋಚಿಸುತ್ತಿರಬೇಕಾದರೆ,
 ಏನು ತಿಂಡಿ ಬೇಕು ಎಂದು ಕೇಳಲು ಬಂದ ಮಾಣಿಯನ್ನೇ ಈ ಬಗ್ಗೆ ಕೇಳಿದ......

 ಮಾಣಿ
 "ಅಯ್ಯೋ ಸಾರ್ ಇಲ್ಲಿ ಕಳ್ಳರ ಕಾಟ ಜಾಸ್ತಿ. ಯಾರನ್ನೂ ನಂಬೋಹಾಗಿಲ್ಲ. ನೀವು ಸ್ವಲ್ಪ ಪಕ್ಕಕ್ಕೆ ತಿರುಗಿದರೆ ಸಾಕು ನಿಮ್ಮ ವಸ್ತು ಮಂಗ ಮಾಯ. ಎಲ್ಲಾ ಕಳ್ಳರೆ,  ಅದಕ್ಕೆ ನಮಗ್ಯಾಕೆ ತಲೆ ನೋವು ಅಂತ ನಮ್ಮ ಹೋಟೆಲ್ ಯಜಮಾನರು ಬೋರ್ಡ್ ಹಾಕಿದ್ದಾರೆ .ಇದು ಇಲ್ಲೆಲ್ಲ ಕಾಮನ್ ಸಾರ್......... " 

ಯುವಕ ಕುಸಿದು ಬೀಳುವ ಹಂತ ತಲುಪುತ್ತಾನೆ..........

ಇಡ್ಲಿಗೆ ಆರ್ಡರ್ ಮಾಡಿ ಕೈ ತೊಳೆಯಲು ವಾಷ್ ಬೇಸಿನ್ ಬಳಿ ಬರುತ್ತಾನೆ, ಅಲ್ಲಿ ಇನ್ನೊಂದು ಬೋರ್ಡ.......

 " ತಟ್ಟೆ, ಪ್ಲೇಟುಗಳಲ್ಲಿ ಕೈ ತೊಳೆಯಬೇಡಿ "

 ಯುವಕನಿಗೆ ಮತ್ತಷ್ಟು ಆಶ್ಚರ್ಯ,
 ತಿಂಡಿ ಕೊಡಲು ಬಂದ ಮಾಣಿಯನ್ನು ಕೇಳುತ್ತಾನೆ, 
 ವಾಷ್ ಬೇಸಿನ್ ಇದ್ದರೂ ಈ ಫಲಕ ಯಾಕೆ ?......... 

ಮಾಣಿ 
" ಅಯ್ಯೋ ನಮ್ಮ ಜನಕ್ಕೆ ಬುದ್ಧಿ ಇಲ್ಲ ಸಾರ್, ಎದ್ದೋಗಕ್ಕೂ ಸೋಮಾರಿತನ , ತಟ್ಟೆಯಲ್ಲಿ ಕೈ ತೊಳೆಯೋದು ಇರಲಿ ಅಲ್ಲೇ ಉಗಿದು ಬಿಡ್ತಾರೆ, ಥೂ ಏನ್ ಜನ. ಸಪ್ಲೈಯರ್ ಗಳೂ ಮನುಷ್ಯರು ಅಂತ. ತಿಳ್ಕೊಳಲ್ಲ, ಅದಕ್ಕೆ ಬೋರ್ಡ್......... "

ಯುವಕ ತಿಂಡಿ ತಿಂದು ಬಿಲ್ ಕೊಡಲು ಕ್ಯಾಷ್ ಕೌಂಟರ್ ಬಳಿ ಬರುತ್ತಾನೆ, ಅಲ್ಲಿ ಮಗದೊಂದು ಬೋರ್ಡ್.........

 " ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ." 

 ಈ ಭಾರಿ ಆತ ಯಾರನ್ನೂ ಪ್ರಶ್ನಿಸುವುದಿಲ್ಲ. ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾನೆ......

 ಮಾನವ ಅನಾಗರಿಕತೆಯಿಂದ ನಾಗರಿಕತೆಯತ್ತ ಎಂದು ನಾವು ಭಾವಿಸಿದ್ದೇವೆ, ಆದರೆ ವಾಸ್ತವದಲ್ಲಿ ನಾವು ಸಾಗುತ್ತಿರುವುದು ನಾಗರಿಕತೆಯಿಂದ ಅನಾಗರಿಕತೆಯತ್ತ............

 ಇಂತಹ ಕಳ್ಳರ ಸಂತೆಯಲ್ಲಿ ನನಗೇನು ಕೆಲಸ. ಈ ಊರಿನ ಸಹವಾಸವೇ ಬೇಡ ಎಂದು ಆತ ವಾಪಸ್ ಆಗಲು ತಕ್ಷಣ ಬಸ್ ಹತ್ತುತ್ತಾನೆ.......

ಅನಿವಾರ್ಯವಾಗಿ ನಾವು ಮಾತ್ರ ಇಲ್ಲಿಯೇ, ಇಂತಹ ವಾತಾವರಣದಲ್ಲಿಯೇ ಸಹಿಸಿಕೊಂಡು ಬದುಕುತ್ತಿದ್ದೇವೆ.......

ಬದಲಾವಣೆಯ ಅವಶ್ಯಕತೆ ತುಂಬಾ ಇದೆ,
ನಮ್ಮ ಮಕ್ಕಳ ಭವಿಷ್ಯಕ್ಕಾಗಿ.....

October 12, 2021

ಹಲ್ಲು ಮತ್ತು ನಾಲಗೆಯ ಕಥೆ

ಒಮ್ಮೆ ಹಲ್ಲು ಮತ್ತು ನಾಲಗೆಗೆ ವಿಪರೀತ ಜಗಳವಾಯಿತಂತೆ. ಹಲ್ಲುಗಳು ನಾಲಗೆಗೆ ಹೇಳಿದವು "ನಾವು 32 ಜನ ಇದೀವಿ. ನಮ್ಮ ಮಧ್ಯೆ ಒಬ್ಬಂಟಿಯಾಗಿರೋ ನಿನ್ನನ್ನು ಇರೋದಕ್ಕೆ ಬಿಟ್ಟಿರೋದೇ ದೊಡ್ಡ ಮಾತು. ಯಾಕೆಂದ್ರೆ ನಮ್ಮ ದಾರಿಗೆ ಅಡ್ಡ ಬಂದಾಗ ನಿನ್ನನ್ನು ಕಚಕ್ ಅಂತಾ ಕಚ್ಚಿ ಬಿಸಾಡಿದ್ರೆ ಬಿಡಿಸ್ಕಳಕ್ಕೆ ಯಾರಿದಾರೆ? ಅಂತ ಹೇಳಿ ಹಲ್ಲುಗಳು ನಾಲಿಗೆಗೆ ಜೋರ್ ಜೋರ್ ಮಾಡಿದವು.  ಒಂದು ಹಲ್ಲು ಪ್ರತಾಪ ಕೊಚ್ಚಿ ಕೊಂಡಿತು: "ಎಷ್ಟೇ ಕಟುಕಲು ರೊಟ್ಟಿ ಚಕ್ಕುಲಿ ಆಗಿರಲಿ, ಕಟಂ ಅಂತಾ ಕಟಾರಿಸಿ ಅಗಿದು ತಿಂತೇವೆ! ನಿನಕೈಲಿ ಏನಾದೀತು!" ಹೀಗೆ ಹಲ್ಲುಗಳು ನಾಲಗೆಯನ್ನು ಹಂಗಿಸಿ ಹೀಯಾಳಿಸಿದವು.  ನಾಲಿಗೆಯು ಎಲ್ಲಾ ಹಲ್ಲುಗಳ  ಮಾತುಗಳನ್ನು ಕೇಳಿಸ್ಕೊಂಡು ನಿಧಾನವಾಗಿ ಹೇಳಿತು...  "ತಮ್ಮಗಳಿರಾ..  ನಿಮ್ಮನ್ನು ತಮ್ಮಗಳಿರಾ ಅಂತೀನಿ. ಯಾಕೆ  ಅಂದರೆ  ನೀವೆಲ್ಲರೂ ನಾನು ಹುಟ್ಟೋದಕ್ಕಿಂತ ಮುಂಚೆ ಏನ್ ಹುಟ್ಟಿದವರಲ್ಲ; ನಾನು ಹುಟ್ಟಿದ ಒಂದೆರಡು ವರ್ಷ ಆದ್ಮೇಲೆ ಹುಟ್ಟಿದ್ದೀರಿ. ಅಷ್ಟೇ ಆಲ್ಲ,  ನಾನ್ ಬದುಕಿರುವಷ್ಟು ಕಾಲ ನೀವೇನ್ ಬದುಕಿರಲ್ಲ. ನನ್ ಕಣ್ಮುಂದೆ ಎಲ್ಲರೂ ಬಿದ್ ಹೋಗ್ತೀರಿ.  ನಾನೇ ಕೊನೆ ತನಕ ಇರೋನು!  ಇನ್ನೊಂದ್ ಮಾತು ನಾನು ಒಳ್ಳೆಯವನಾಗಿದ್ದರೆ ಮಾತ್ರ ನಿಮಗೆ ಆಯಸ್ಸು ಗಟ್ಟಿ. ನಾನೇನಾದ್ರೂ ಕೆಟ್ಟವನಾದರೆ ನಿಮ್ಮ ಆಯಸ್ಸು  ಮುಗಿಯಿತು. ನಾನು ಯಾರಿಗಾದ್ರೂ ಕೆಟ್ ಮಾತಾಡ್ದೆ, ಬೈದೆ ಅಂದ್ರೆ ಆ ಕಡೆ ಕೆನ್ನೆಗೆ ನಾಲ್ಕು, ಈ ಕಡೆ ಕೆನ್ನೆಗೆ ನಾಲ್ಕು ಬಿಗೀತಾರೆ. ನೀವೆಲ್ಲರೂ ನನ್ನ ಕಣ್ಮುಂದೆ ಉದುರಿ ನೆಲಕ್ಕೆ ಬೀಳ್ತೀರಿ.. ಹುಷಾರ್!"  

ಈ ಕಥೆಯ ನೀತಿ ಏನು?   ನಾಲಗೆ  ಚೆನ್ನಾಗಿದ್ರೆ ಹಲ್ಲುಗಳು ಕ್ಷೇಮ!

ನಾಲಗೆ ಮಾಡೋ ತಪ್ಪು ನಿಜವಾಗಿ ನಾಲಿಗೇದಾ?  ನಾಲಗೆ ಏನ್ ಮಾತಾಡಿದ್ರೂ ಕೂಡ ಆದರೆ ಹಿಂದೆ ಇರೋದೇನು? ನಮ್ಮ ಮನಸ್ಸು! ನಮ್ಮ ಮನಸ್ಸು ಸರಿಯಾದ ದಿಕ್ಕಿನಲ್ಲಿ ಆಲೋಚನೆ ಮಾಡಿದರೆ ನಾಲಗೆ ಖಂಡಿತ ಕೆಟ್ಟ ಮಾತಾಡಲಾರದು! ಆದ್ದರಿಂದ ನಾವು ಆಡುವ ಮಾತು  ನಾಲಿಗೆಯ ಸ್ವಂತದ್ದಲ್ಲ. ಅದು ಮನಸ್ಸಿನದು. ಮನಸ್ಸಿನಲ್ಲಿ ನಡೆದಂಥ ಮಂಥನವೇ ನಾಲಗೆಯ ಮೂಲಕ ಮಾತಾಗಿ ಬರುತ್ತದೆ.  ಆದ್ದರಿಂದ ತಪ್ಪು ನಾಲಿಗೆಯದಂತೂ ಅಲ್ಲ. ಮನಸ್ಸು ಮಾಡಿದ ತಪ್ಪಿಗೆ ಶಿಕ್ಷೆ ಕೊಡೋಕೆ ಮನಸ್ಸು ಕೈಗೆ ಸಿಗುತ್ತದೆಯೆ? ಮನಸ್ಸು ಮಾಡುವ ತಪ್ಪಿಗೆ ಶಿಕ್ಷೆ ಸಿಗುವುದು ಏನೂ ತಪ್ಪು ಮಾಡದ ಹಲ್ಲುಗಳಿಗೋ ಕೈಗಳಿಗೋ ಕಾಲುಗಳಿಗೋ  ತಲೆಗೋ  ಕಣ್ಣುಗಳಿಗೋ! 

ನಮ್ಮ ಮನಸ್ಸು ಶುದ್ಧವಾಗಿದ್ದರೆ ನಾಲಗೆ ಶುದ್ಧವಾಗಿರುತ್ತದೆ. ಮಾತು ಶುಚಿಯಾಗಿರುತ್ತದೆ. 

ಮನಸ್ಸು ಮತ್ತು ಮನಸ್ಸಿನ ಶುದ್ಧತೆ ಬಹಳ ಮುಖ್ಯ.

ನಮ್ಮ ಮನಸ್ಸಿನಲ್ಲೇ ಇರುವಂತಹ ಶತ್ರುಗಳ ಮೇಲೆ - ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳ ಮೇಲೆ  ದಿಗ್ವಿಜಯ ಮಾಡೋಣ. ಇಂಥ ದಿಗ್ವಿಜಯ ಮಾಡುವ ಸಂದರ್ಭಕ್ಕೆ ನಾವೆಲ್ಲಾ ಅಣಿಯಾಗೋಣ.  (ಸಂಗ್ರಹ )

October 11, 2021

ಆಗಿದ್ದು, ಆಗುತ್ತಿರುವುದು & ಆಗೋದೆಲ್ಲಾ ಒಳ್ಳೆಯದಕ್ಕೆ

*ತಪ್ಪದೆ ಓದಿ ನಿಮ್ಮ ವ್ಯಕ್ತಿತ್ವ ವಿಕಾಸನಕ್ಕಾಗಿ*

*ಆಗಿದ್ದು, ಆಗುತ್ತಿರುವುದು & ಆಗೋದೆಲ್ಲಾ ಒಳ್ಳೆಯದಕ್ಕೆ:~*
(ವ್ಯಕ್ತಿತ್ವ ವಿಕಸನಕ್ಕಾಗಿ) 

ಒಬ್ಬ ರಾಜ ಮತ್ತು ಮಂತ್ರಿ ಕಾಡಿನಲ್ಲಿ ಬೇಟೆಗೆಂದು ಹೋಗ್ತಾ ಇರ್ತಾರೆ.

ಮಾರ್ಗ ಮದ್ಯೆ ರಾಜ ಎಡವಿ ಬೀಳ್ತಾನೆ.ಎಡಗಾಲಿನ ಹೆಬ್ಬೆರಳ ಉಗುರು ಕಿತ್ತು ರಕ್ತ ಸುರಿಯೋಕೆ ಶುರುವಾಗುತ್ತೆ .

ರಾಜ ಮಂತ್ರಿಯನ್ನು ಕರೆದು ನೋವಿನಿಂದ
ತನಗಾದ ಸ್ಥಿತಿಯನ್ನು ತೋರಿಸುತ್ತಾನೆ.

ಮಂತ್ರಿ ಏನು ಆಗಿಯೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸುತ್ತ

ಬನ್ನಿ  ಪ್ರಭುಗಳೇ  "ಆಗೋದೆಲ್ಲ ಒಳ್ಳೆಯದಕ್ಕೆ" ಅಂತ ಹೇಳ್ತಾನೆ.!!

ರಾಜ ಕೆಂಡಾಮಂಡಲನಾಗಿ ..
ನಾನು ರಾಜ
ನನ್ನ ಕಾಲು  ಕಿತ್ತು
ರಕ್ತ ಸುರಿದರೆ,
ಒಳ್ಳೆಯದಕ್ಕೆ ಅಂತಿಯಾ? ನನ್ನ ಅನ್ನ ತಿಂದು.

ನಿನ್ನಂತ ಮಂತ್ರಿಯ ಅವಶ್ಯಕತೆ ನನಗಿಲ್ಲ ಎಂದು ಅಲ್ಲೇ ಪಕ್ಕದಲ್ಲ್ಲಿದ್ದ ಹಾಳು ಬಾವಿಗೆ  ಆತನನ್ನು ತಳ್ಳಿ ಮುಂದಕ್ಕೆ ಸಾಗುತ್ತಾನೆ.!!

ಕೆಲವೇ ಪರ್ಲಾಂಗು ತಲುಪುವಷ್ಟರಲ್ಲಿ ಕಾಡಿನ ಜನರ ಗುಂಪೊಂದು  ರಾಜನನ್ನು  ಸುತ್ತುವರೆದು ಹೊತ್ತೊಯ್ಯುತ್ತಾರೆ.

ಆ ದಿನ ಕಾಡಿನ ದೇವಿಯ ಉತ್ಸವ ಇದ್ದು ದೇವಿಗೆ ನರಬಲಿ ಕೊಡಲು ಮನುಷ್ಯರನ್ನು ಹುಡುಕಿಕೊಂಡು ಬಂದಿದ್ದ ಕಾಡಿನ ಜನಗಳ ಕೈಗೆ ಒಂಟಿಯಾಗಿದ್ದ ರಾಜ ಅನಾಯಾಸವಾಗಿ ಸಿಕ್ಕಿ ಬಿಟ್ಟಿದ್ದ .!!

ಸರಿ
ಬಲಿ ಪೂಜೆ ಮಾಡಿ ಇನ್ನೇನು ರಾಜನನ್ನು ಕಡಿಯಬೇಕು
ಕತ್ತಿ  ಎತ್ತಿದವನಿಗೆ ರಾಜನ ಕಾಲ ಬೆರಳಲ್ಲಿ ರಕ್ತ ಒಸರುವುದು ಕಂಡಿತು .ಅವರ ಸಂಪ್ರದಾಯದ ಪ್ರಕಾರ ಅದಾಗಲೇ  ಊನವಾಗಿರುವ ಅಥವಾ ರಕ್ತ ಸ್ರಾವ ಆಗುತ್ತಿರುವ ಪ್ರಾಣಿ ಬಲಿ ನೀಡುವಂತಿಲ್ಲ .ಬೇಸರದಿಂದ ರಾಜನನ್ನು ಬಿಟ್ಟು ಕಳುಹಿಸುತ್ತಾರೆ .

ಖುಷಿ ಇಂದ ಬದುಕಿದೆಯಾ ಬಡ ಜೀವವೇ ಎಂದು ಹಿಂತಿರುಗಿ ಬರುವಾಗ ಮಂತ್ರಿ ಹೇಳಿದ ಮಾತು ನೆನಪಾಗುತ್ತೆ.

ಹೌದು ಗಾಯ ಆಗಿದ್ದು ಒಳ್ಳೆಯದೇ ಆಯಿತು
ಇಲ್ಲ ಅಂದಿದ್ರೆ ನನ್ನನ್ನು  ಕತ್ತರಿಸಿ ಬಿಡುತ್ತಿದ್ದರು. ಎಂದು ತಿಳಿದು ಮಂತ್ರಿಯ ರಕ್ಷಣೆಗೆ ಧಾವಿಸುತ್ತಾನೆ.ಮತ್ತು ಮಂತ್ರಿಯನ್ನು ಹಾಳು ಬಾವಿಯಿಂದ ಮೇಲಕ್ಕೆತ್ತಿ ನಡೆದ ಘಟನೆ ವಿವರಿಸಿ  ದಯವಿಟ್ಟು ನನ್ನನ್ನು ಕ್ಷಮಿಸಿ ಮಂತ್ರಿಗಳೇ ಎಂದು ವಿನಮ್ರವಾಗಿ ಕ್ಷಮೆ ಯಾಚಿಸುತ್ತಾನೆ .

ಮಂತ್ರಿ ಸಮಾಧಾನ ಚಿತ್ತದಿಂದ ಅಯ್ಯೋ ಅದಕ್ಕೇಕೆ ಕ್ಷಮೆ ಪ್ರಭುಗಳೇ "ಆಗೋದೆಲ್ಲ ಒಳ್ಳೇದಕ್ಕೆ" ನೀವು ನನ್ನನ್ನು ಹಾಳು ಬಾವಿಗೆ ತಳ್ಳಿದ್ದು ಕೂಡ ಒಳ್ಳೆಯದಕ್ಕೆ ಎನ್ನುತ್ತಾನೆ .

ರಾಜ ಆಶ್ಚರ್ಯದಿಂದ ಮಂತ್ರಿ ಕಡೆ ನೋಡುತ್ತಾನೆ .

ಮಂತ್ರಿ ಮಾತು ಮುಂದುವರೆಸಿ 
" ಪ್ರಭುಗಳೇ  ನೀವು ನನ್ನನ್ನು ಇಲ್ಲಿ ತಳ್ಳಿದ್ದಕ್ಕೆ ನಾನು ನಿಮ್ಮ ಜೊತೆ ಬರಲಾಗಲಿಲ್ಲ 
ನಾನು ನಿಮ್ಮ ಜೊತೆ ಬಂದಿದ್ದರೆ  ಗಾಯವಾದ ನಿಮ್ಮನ್ನು ಬಿಟ್ಟು ಏನು ಆಗದ ನನ್ನನ್ನು ಬಲಿ ಕೊಡುತ್ತಿದ್ದರು ."

ನಾನು ಸಂತೋಷವಾಗಿದ್ದೇನೆ,  ಹಾಗೆಯೇ ಇರುತ್ತೇನೆ ಕಾರಣ  
ನಾನು ಪ್ರತಿ ಕ್ಷಣ
ಪ್ರತಿ ಸೋಲು
ಪ್ರತಿ ಅಪಘಾತ
ಪ್ರತಿ ಎಡವು
ಪ್ರತಿ ಅವಮಾನ
ಪ್ರತಿ ಆಘಾತಗಳಲ್ಲಿಯೂ ಯೋಚಿಸುವುದು ಇದನ್ನೇ .
ಎಲ್ಲಿಯೋ ಮುಂದಾಗಬಹುದಿದ್ದ ದೊಡ್ಡ ಅಪಘಾತ ತಡೆಯಲು ಇದಾಗಿರಬಹುದು ಎಂದು .....ಮಿಕ್ಕಿದ್ದು ನಿಮ್ಮಿಚ್ಚೆ.

ಧನಾತ್ಮಕ ಮನೋಭಾವನೆ ಎಂದರೆ ಇದೇ ಅಲ್ವಾ?

ಬನ್ನಿ ಸ್ನೇಹಿತರೆ,
ಧನಾತ್ಮಕತೆಯ ಧನಿಕರಾಗೋಣ.

ಮಹಾಲಕ್ಷ್ಮಿ ವಾಹನ ಗೂಬೆ

*ಎಲ್ಲರೂ ಪೂಜಿಸುವ ದೇವಿ ಲಕ್ಷ್ಮಿಗೆ ಗೂಬೆಯನ್ನೇಕೆ ವಾಹನ ಮಾಡಿಕೊಂಡಳು?*
         
*ಹಾಗೇ ಇತರ ದೇವತೆಗಳ ಪ್ರಾಣಿಗಳ ಅರ್ಥ ಗೊತ್ತಾ?*
    
ಪ್ರತಿಯೊಬ್ಬ ದೇವರಿಗೂ ಒಂದಲ್ಲ ಒಂದು ಪ್ರಾಣಿಯನ್ನು ದೇವತೆಯನ್ನಾಗಿ ಚಿತ್ರಿಸಲಾಗಿದೆ. ಹಾಗೇ ಲಕ್ಷ್ಮದೇವಿಗೆ ವಾಹನ ಗೂಬೆ. ಗೂಬೆಯೇ ಯಾಕೆ ಈಕೆಯ ವಾಹನ ಗೊತ್ತೆ?

ಗೂಬೆ ಕತ್ತಲಲ್ಲಿ ಇರುತ್ತದೆ. ಹಗಲಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕತ್ತಲಲ್ಲೇ ಸಂಚರಿಸುತ್ತದೆ. ಹೀಗಾಗಿ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವಾಗ, ಹೇಗೆ ಹೋಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಲಕ್ಷ್ಮಿಗೆ ಬೇಕಾದದ್ದು ಇದೇ ವಾಹನ. ಈಕೆ ಕೂಡ ಹಾಗೆಯೇ. ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಾಳೋ ಗೊತ್ತೇ ಆಗುವುದಿಲ್ಲ. ಲಕ್ಷ್ಮಿ ಅನಿರೀಕ್ಷಿತೆ. ಇಂದು ಇದ್ದಲ್ಲಿ ನಾಳೆ ಇರುತ್ತಾಳೆ ಎನ್ನಲಾಗುವುದಿಲ್ಲ. ಹೀಗಾಗಿ ಲಕ್ಷ್ಮಿಗೆ ಗೂಬೆ ವಾಹನ. ಜೊತೆಗೆ, ಗೂಬೆಯ ದೊಡ್ಡ ಉರುಟಾದ ಕಣ್ಣುಗಳು, ಚಿನ್ನದ ಉರುಟಾದ ನಾಣ್ಯಗಳನ್ನು ನೆನಪಿಸುತ್ತದಲ್ಲವೇ?

ತುಂಬ ಹಿಂದಿನ ಕಾಲ. ಆಗಿನ್ನೂ ಪ್ರಾಣಿಗಳ ಸೃಷ್ಟಿ ಆಗಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ನಡೆದೇ ಹೋಗಬೇಕಿತ್ತು. ಆಗ ದೇವತೆಗಳು ಕಡುನೊಂದು ಬ್ರಹ್ಮನ ಬಳಿಗೆ ಹೋದರು. ನಡೆದೇ ಹೋಗಬೇಕಾದ ತಮ್ಮ ಬವಣೆಯನ್ನು ವಿವರಿಸಿದರು. ಏನು ಮಾಡುವುದು ಎಂದು ಬ್ರಹ್ಮನಿಗೂ ಗೊತ್ತಾಗಲಿಲ್ಲ. ಏನು ಮಾಡೋಣ ದೇವೀ ಎಂದು ಶಾರದೆಯನ್ನು ಕೇಳಿದ.

ಜ್ಞಾನದ ಅಧಿದೇವತೆಯಾದ ಆಕೆ ಹೇಳಿದಳು- ನೀನು ಪ್ರಾಣಿಗಳನ್ನು ಸೃಷ್ಟಿಸು. ಅವುಗಳು ವಾಹನಗಳಾಗಲಿ. ಹಾಗೇ ಮುದ್ದು ಮಾಡುವುದಕ್ಕೂ ಅವು ಒದಗುವಂತಿರಲಿ.
ಹಾಗೇ ಬ್ರಹ್ಮ ಪ್ರಾಣಿಗಳನ್ನು ಸೃಷ್ಟಿಸಿದ. ಅವುಗಳಲ್ಲಿ ಒಂದೊಂದೂ, ಒಂದೊಂದು ದೇವತೆಯ ವಾಹನಗಳಾದವು. ಹೀಗೆ ಲಕ್ಷ್ಮಿಗೆ ಬಂದದ್ದು ಗೂಬೆ, ಬ್ರಹ್ಮನಿಗೆ ಹಂಸ, ಮಹಾವಿಷ್ಣುವಿಗೆ ಗರುಡ, ಯಮನಿಗೆ ಮಹಿಷ, ಗಣಪತಿಗೆ ಇಲಿ, ಶಿವನಿಗೆ ನಂದಿ, ಪಾರ್ವತಿಗೆ ಸಿಂಹ, ಷಣ್ಮುಖನಿಗೆ ನವಿಲು, ಶನಿಗೆ ಕಾಗೆ ಇತ್ಯಾದಿ.

ಬ್ರಹ್ಮನಿಗೆ ಯಾಕೆ ಹಂಸ? ಹಂಸಕ್ಕೊಂದು ವಿಶೇಷ ಶಕ್ತಿಯಿದೆ ಎನ್ನುತ್ತಾರೆ. ಅದು ಹಾಲು ನೋಡಿದರೆ, ಹಾಲನ್ನೂ ನೀರನ್ನೂ ಪ್ರತ್ಯೇಕಿಸಬಲ್ಲದು. ಹಾಲು ಎಂದರೆ ಜ್ಞಾನ, ನೀರು ಅಜ್ಞಾನ, ಜ್ಞಾನದಿಂದ ಅಜ್ಞಾನವನ್ನು ಪ್ರತ್ಯೇಕಿಸಬಲ್ಲ ಗುಣ ಸೃಷ್ಟಿಕರ್ತನಿಗೆ ಅಗತ್ಯ ಬೇಕು. ಅದಕ್ಕಾಗಿ ಆತನಿಗೆ ಹಂಸ ವಾಹನ. 

ಪ್ರತಿಯೊಬ್ಬ ದೇವರಿಗೂ ಒಂದಲ್ಲ ಒಂದು ಪ್ರಾಣಿಯನ್ನು ದೇವತೆಯನ್ನಾಗಿ ಚಿತ್ರಿಸಲಾಗಿದೆ. ಹಾಗೇ ಲಕ್ಷ್ಮದೇವಿಗೆ ವಾಹನ ಗೂಬೆ. ಗೂಬೆಯೇ ಯಾಕೆ ಈಕೆಯ ವಾಹನ ಗೊತ್ತೆ?

ಗೂಬೆ ಕತ್ತಲಲ್ಲಿ ಇರುತ್ತದೆ. ಹಗಲಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕತ್ತಲಲ್ಲೇ ಸಂಚರಿಸುತ್ತದೆ. ಹೀಗಾಗಿ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವಾಗ, ಹೇಗೆ ಹೋಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಲಕ್ಷ್ಮಿಗೆ ಬೇಕಾದದ್ದು ಇದೇ ವಾಹನ. ಈಕೆ ಕೂಡ ಹಾಗೆಯೇ. ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಾಳೋ ಗೊತ್ತೇ ಆಗುವುದಿಲ್ಲ. ಲಕ್ಷ್ಮಿ ಅನಿರೀಕ್ಷಿತೆ. ಇಂದು ಇದ್ದಲ್ಲಿ ನಾಳೆ ಇರುತ್ತಾಳೆ ಎನ್ನಲಾಗುವುದಿಲ್ಲ. ಹೀಗಾಗಿ ಲಕ್ಷ್ಮಿಗೆ ಗೂಬೆ ವಾಹನ. ಜೊತೆಗೆ, ಗೂಬೆಯ ದೊಡ್ಡ ಉರುಟಾದ ಕಣ್ಣುಗಳು, ಚಿನ್ನದ ಉರುಟಾದ ನಾಣ್ಯಗಳನ್ನು ನೆನಪಿಸುತ್ತದಲ್ಲವೇ?

ತುಂಬ ಹಿಂದಿನ ಕಾಲ. ಆಗಿನ್ನೂ ಪ್ರಾಣಿಗಳ ಸೃಷ್ಟಿ ಆಗಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ನಡೆದೇ ಹೋಗಬೇಕಿತ್ತು. ಆಗ ದೇವತೆಗಳು ಕಡುನೊಂದು ಬ್ರಹ್ಮನ ಬಳಿಗೆ ಹೋದರು. ನಡೆದೇ ಹೋಗಬೇಕಾದ ತಮ್ಮ ಬವಣೆಯನ್ನು ವಿವರಿಸಿದರು. ಏನು ಮಾಡುವುದು ಎಂದು ಬ್ರಹ್ಮನಿಗೂ ಗೊತ್ತಾಗಲಿಲ್ಲ. ಏನು ಮಾಡೋಣ ದೇವೀ ಎಂದು ಶಾರದೆಯನ್ನು ಕೇಳಿದ.

ಜ್ಞಾನದ ಅಧಿದೇವತೆಯಾದ ಆಕೆ ಹೇಳಿದಳು- ನೀನು ಪ್ರಾಣಿಗಳನ್ನು ಸೃಷ್ಟಿಸು. ಅವುಗಳು ವಾಹನಗಳಾಗಲಿ. ಹಾಗೇ ಮುದ್ದು ಮಾಡುವುದಕ್ಕೂ ಅವು ಒದಗುವಂತಿರಲಿ.
ಹಾಗೇ ಬ್ರಹ್ಮ ಪ್ರಾಣಿಗಳನ್ನು ಸೃಷ್ಟಿಸಿದ. ಅವುಗಳಲ್ಲಿ ಒಂದೊಂದೂ, ಒಂದೊಂದು ದೇವತೆಯ ವಾಹನಗಳಾದವು. ಹೀಗೆ ಲಕ್ಷ್ಮಿಗೆ ಬಂದದ್ದು ಗೂಬೆ, ಬ್ರಹ್ಮನಿಗೆ ಹಂಸ, ಮಹಾವಿಷ್ಣುವಿಗೆ ಗರುಡ, ಯಮನಿಗೆ ಮಹಿಷ, ಗಣಪತಿಗೆ ಇಲಿ, ಶಿವನಿಗೆ ನಂದಿ, ಪಾರ್ವತಿಗೆ ಸಿಂಹ, ಷಣ್ಮುಖನಿಗೆ ನವಿಲು, ಶನಿಗೆ ಕಾಗೆ ಇತ್ಯಾದಿ.

ಬ್ರಹ್ಮನಿಗೆ ಯಾಕೆ ಹಂಸ? ಹಂಸಕ್ಕೊಂದು ವಿಶೇಷ ಶಕ್ತಿಯಿದೆ ಎನ್ನುತ್ತಾರೆ. ಅದು ಹಾಲು ನೋಡಿದರೆ, ಹಾಲನ್ನೂ ನೀರನ್ನೂ ಪ್ರತ್ಯೇಕಿಸಬಲ್ಲದು. ಹಾಲು ಎಂದರೆ ಜ್ಞಾನ, ನೀರು ಅಜ್ಞಾನ, ಜ್ಞಾನದಿಂದ ಅಜ್ಞಾನವನ್ನು ಪ್ರತ್ಯೇಕಿಸಬಲ್ಲ ಗುಣ ಸೃಷ್ಟಿಕರ್ತನಿಗೆ ಅಗತ್ಯ ಬೇಕು. ಅದಕ್ಕಾಗಿ ಆತನಿಗೆ ಹಂಸ ವಾಹನ. 

ಗರುಡ ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿದ್ದರೂ, ಕೆಳಗೆ ಲೋಕದಲ್ಲಿ ನಡೆಯುತ್ತಿರುವುದನ್ನೆಲ್ಲಾ ಸೂಕ್ಷ್ಮವಾದ ಕಣ್ಣಿನಿಂದ ನೋಡಬಲ್ಲದು. ಹಾಗೇ ವೇಗವಾಗಿ ಲೋಕವನ್ನೆಲ್ಲ ಸುತ್ತು ಹಾಕಬಲ್ಲದು. ಮಹಾವಿಷ್ಣು ಸ್ಥಿತಿ ಪಾಲಕ. ಲೋಕದ ಸ್ಥಿತಿಗತಿಯನ್ನು ನೋಡಿಕೊಳ್ಳುವವನು. ಹೀಗಾಗಿ ಅವನಿಗೆ ಗರುಡ ವಾಹನ.

October 10, 2021

ಬಿಲ್ವಪತ್ರೆ ಮಹತ್ವ

  ಸಾಮಾನ್ಯವಾಗಿ ಶಿವರಾತ್ರಿ ಹಬ್ಬ
ಬಂದರಂತೂ ಇದರ ಮಹತ್ವ ಇನ್ನೂ ಹೆಚ್ಚುತ್ತದೆ. ಅಂದು ಈಶ್ವರನ
ದೇವಸ್ಥಾನಗಳಲ್ಲಿ ಬಿಲ್ವಪತ್ರೆಯಿಂದ ಪೂಜಾರಾಧನೆ ಮಾಡುವುದು
ವಾಡಿಕೆ. ಈಶ್ವರನಿಗೆ ಪ್ರತಿ ದಿನವೂ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ
ತುಂಬಾ ಶ್ರೇಷ್ಠ. ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ.
ಸಾಮಾನ್ಯವಾಗಿ ಈಶ್ವರನ ದೇವಾಲಯ ಇರುವ ಕಡೆ ಬಿಲ್ವಪತ್ರೆ ಮರವು
ಇದ್ದೇ ಇರುತ್ತದೆ. ಈ ಬಿಲ್ವ ಪತ್ರೆ ಮರದಲ್ಲಿ ಮುಳ್ಳು ಏನಿದೆ ಅದು ಶಕ್ತಿ
ಮಾತೆಯನ್ನು ಗಿಡದ ಕೊಂಬೆಗಳು. ವೇದಗಳನ್ನು ಮರದ ಬೇರುಗಳು
ಈಶ್ವರನನ್ನು ಸೂಚಿಸುತ್ತದೆ. ಬಿಲ್ವಪತ್ರೆಯ ಮೂರು ದಳಗಳಿಂದ ಕೂಡಿ
ಒಂದೊಂದು ದಳವು ಕೂಡಾ ಒಂದೊಂದು ಗುಣಗಳನ್ನು
ಹೊಂದಿದೆ. ಅವು ಸತ್ವ, ರಜೋ, ತಮಾ ಗುಣಗಳನ್ನು ಸೂಚಿಸುತ್ತದೆ.
ಈ ಮೂರು ದಳಗಳನ್ನು ಈಶ್ವರನ ಮೂರು ಕಣ್ಣುಗಳು ಎಂಬ ನಂಬಿಕೆ
ಇದೆ.
'ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ,
ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ' ಎಂಬ ಸ್ತೋತ್ರ
ಇದೆ. ಅಂದರೆ ಮೂರು ದಳ, ಮೂರು ಆಕಾರ, ಮೂರು ಕಣ್ಣು ಹಾಗೂ
ಮೂರು ಆಯುಧವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು
ಭಕ್ತಿಯಿಂದ ಈಶ್ವರನಿಗೆ ಸರ್ಮಪಿಸಿದರೆ ಮೂರು ಜನ್ಮದ ಪಾಪವು
ಪರಿಹಾರವಾಗುತ್ತದೆ ಎಂದರ್ಥ.
ಬಿಲ್ವಪತ್ರೆಯನ್ನು ಹಿಂದೂ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠ ಹಾಗೂ
ಪರಮ ಪವಿತ್ರ ಎನ್ನಲಾಗುತ್ತದೆ. ಧರ್ಮಗ್ರಂಥಗಳಲ್ಲಿಯೂ ಬಿಲ್ವಪತ್ರೆಯ
ಬಗ್ಗೆ ತಿಳಿಸಲಾಗಿದೆ. ಬಹುಕಾಲದವರೆಗೂ ಗಂಡ ಹೆಂಡತಿಗೆ ಸಂತಾನ
ಪ್ರಾಪ್ತಿಯಾಗದೆ ಇದ್ದಾಗ ಒಂದು ಮಂಡಲ ಅಂದರೆ 48 ದಿನ
ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿದರೆ ಮಕ್ಕಳ ಫಲ ದೊರಕುವುದೆಂದು
ಕೆಲವು ಗ್ರಂಥಗಳಲ್ಲಿ ತಿಳಿಸಲಾಗಿದೆ. ಮರಕ್ಕೆ ಪೂಜೆ ಸಲ್ಲಿಸಿ ಪತ್ರೆಯನ್ನು
ಸೇವಿಸಿದರೆ ಶುಭವಾಗುತ್ತದೆ ಎನ್ನುವುದೂ ಸಹಾ ಒಂದು ನಂಬಿಕೆ. ಈ
ಬಿಲ್ವಪತ್ರೆಯ ಮರಕ್ಕೆ ಶಿವದ್ರುಮ ಎಂಬ ಮತ್ತೊಂದು ಹೆಸರಿದೆ. ಶ್ರೀ
ಮಹಾವಿಷ್ಣು ಅಲಂಕಾರ ಹಾಗೂ ತುಳಸಿ ಪ್ರಿಯನಾದರೆ ಈಶ್ವರನು
ಜಲಪ್ರಿಯ ಹಾಗೂ ಬಿಲ್ವಪ್ರಿಯ. ಮಾನವನು ಮಾಡಿದ ಪಾಪ ಕರ್ಮಗಳು
ಈ ಬಿಲ್ವಪತ್ರೆಯನ್ನು ಈಶ್ವರನಿಗೆ ಅರ್ಪಿಸುವುದರಿಂದ ನಾಶವಾಗುತ್ತದೆ
ಎಂಬುದು ನಂಬಿಕೆ.
ಬಿಲ್ವಪತ್ರೆಯ ಮರವು ಶ್ರೀ ಮಹಾಲಕ್ಷ್ಮಿಯ ಬಲದ ಕೈಕಮಲದಿಂದ
ಹುಟ್ಟಿದೆ ಎಂದು ಪುರಾಣಗಳು ತಿಳಿಸುತ್ತವೆ. ಈ ಮರಕ್ಕೆ ಶ್ರೀ ವೃಕ್ಷ
ಎಂದೂ ಕರೆಯುತ್ತಾರೆ. ಹೋಮದ ಸಮಯದಲ್ಲಿ ಈ ಮರದ ಕಡ್ಡಿಗಳನ್ನು
ಉಪಯೋಗಿಸಿದರೆ ಶುಭ ಫಲ ದೊರೆಯುತ್ತದೆ.
ಬಿಲ್ವಪತ್ರೆಯನ್ನು ಕ್ರಮವಾಗಿ ಸೇವಿಸಿದರೆ ಮಧುಮೇಹ
ನಿಯಂತ್ರಣದಲ್ಲಿರುತ್ತದೆ. ಕಾರಣ ಬಿಲ್ವಪತ್ರೆಯ ಔಷಧಿ ಗುಣದಿಂದ ಕೂಡಿದೆ
ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆಯ ಔಷಧಿಗುಣದಿಂದ ಕೂಡಿದ್ದು
ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆ ಸೇವನೆಯಿಂದ ವಾಸಿಯಾಗಿದೆ.
ಬಿಲ್ವಪತ್ರೆಯ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ತಿಸಾರ,
ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ
ಎಂದೂ ಪರಿಗಣಿಸಲಾಗುತ್ತದೆ.
ಶುಕ್ರವಾರದಂದು ಈ ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿ ಇಟ್ಟರೆ ಆರ್ಥಿಕ
ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳು
ಅಭಿವೃದ್ಧಿಯಾಗುತ್ತದೆ. ಆಯುರ್ವೇದದಲ್ಲಿ ಈ ಮರದ ಪ್ರತಿಯೊಂದು
ಭಾಗವು ಔಷಧಿಯ ಗುಣದಿಂದ ಕೂಡಿದೆ ಎಂದು ಇದನ್ನು ಬೆಳೆಸುತ್ತಾರೆ.
ಒಟ್ಟಿನಲ್ಲಿ ಎಲೆಯಿಂದ ಹಿಡಿದು ಪ್ರತಿಯೊಂದು ಭಾಗವು ಮಾನವನಿಗೆ
ವರದಾನವಾಗಿ ದೊರಕಿದೆ.
ಸಂಗ್ರಹ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು

October 6, 2021

ನವರಾತ್ರಿ ೯ ನೇ ದಿನದ ಅಪರಾಜಿತಾ ಪೂಜೆಗೆ*(ಸಿದ್ಧಿರಾತ್ರಿ)*

ನವರಾತ್ರಿ ೯ ನೇ ದಿನದ ಅಪರಾಜಿತಾ ಪೂಜೆಗೆ
*(ಸಿದ್ಧಿರಾತ್ರಿ)*

*ಅಪರಾಜಿತಾಸ್ತೋತ್ರಮ್*

ಶ್ರೀತ್ರೈಲೋಕ್ಯವಿಜಯಾ ಅಪರಾಜಿತಾಸ್ತೋತ್ರಮ್ ।

ಓಂ ನಮೋಽಪರಾಜಿತಾಯೈ ।
ಓಂ ಅಸ್ಯಾ ವೈಷ್ಣವ್ಯಾಃ ಪರಾಯಾ ಅಜಿತಾಯಾ ಮಹಾವಿದ್ಯಾಯಾಃ

ವಾಮದೇವ-ಬೃಹಸ್ಪತಿ-ಮಾರ್ಕಂಡೇಯಾ ಋಷಯಃ ।
ಗಾಯತ್ರ್ಯುಷ್ಣಿಗನುಷ್ಟುಬ್ಬೃಹತೀ ಛನ್ದಾಂಸಿ ।
ಲಕ್ಷ್ಮೀನೃಸಿಂಹೋ ದೇವತಾ ।
ಓಂ ಕ್ಲೀಂ ಶ್ರೀಂ ಹ್ರೀಂ ಬೀಜಮ್ ।
ಹುಂ ಶಕ್ತಿಃ ।
ಸಕಲಕಾಮನಾಸಿದ್ಧ್ಯರ್ಥಂ ಅಪರಾಜಿತವಿದ್ಯಾಮನ್ತ್ರಪಾಠೇ ವಿನಿಯೋಗಃ ।
ಓಂ ನೀಲೋತ್ಪಲದಲಶ್ಯಾಮಾಂ ಭುಜಂಗಾಭರಣಾನ್ವಿತಾಮ್ ।
ಶುದ್ಧಸ್ಫಟಿಕಸಂಕಾಶಾಂ ಚನ್ದ್ರಕೋಟಿನಿಭಾನನಾಮ್ ॥ 1॥

ಶಂಖಚಕ್ರಧರಾಂ ದೇವೀ ವೈಷ್ಣ್ವೀಮಪರಾಜಿತಾಮ್
ಬಾಲೇನ್ದುಶೇಖರಾಂ ದೇವೀಂ ವರದಾಭಯದಾಯಿನೀಮ್ ॥ 2॥

ನಮಸ್ಕೃತ್ಯ ಪಪಾಠೈನಾಂ ಮಾರ್ಕಂಡೇಯೋ ಮಹಾತಪಾಃ ॥ 3॥

ಮಾರ್ಕಂಡೇಯ ಉವಾಚ -
ಶೃಣುಷ್ವಂ ಮುನಯಃ ಸರ್ವೇ ಸರ್ವಕಾಮಾರ್ಥಸಿದ್ಧಿದಾಮ್ ।
ಅಸಿದ್ಧಸಾಧನೀಂ ದೇವೀಂ ವೈಷ್ಣವೀಮಪರಾಜಿತಾಮ್ ॥ 4॥

ಓಂ ನಮೋ ನಾರಾಯಣಾಯ, ನಮೋ ಭಗವತೇ ವಾಸುದೇವಾಯ,
ನಮೋಽಸ್ತ್ವನನ್ತಾಯ ಸಹಸ್ರಶೀರ್ಷಾಯಣೇ, ಕ್ಷೀರೋದಾರ್ಣವಶಾಯಿನೇ,
ಶೇಷಭೋಗಪರ್ಯ್ಯಂಕಾಯ, ಗರುಡವಾಹನಾಯ, ಅಮೋಘಾಯ
ಅಜಾಯ ಅಜಿತಾಯ ಪೀತವಾಸಸೇ,

ಓಂ ವಾಸುದೇವ ಸಂಕರ್ಷಣ ಪ್ರದ್ಯುಮ್ನ, ಅನಿರುದ್ಧ,
ಹಯಗ್ರೀವ, ಮತ್ಸ್ಯ ಕೂರ್ಮ್ಮ, ವಾರಾಹ ನೃಸಿಂಹ, ಅಚ್ಯುತ,
ವಾಮನ, ತ್ರಿವಿಕ್ರಮ, ಶ್ರೀಧರ ರಾಮ ರಾಮ ರಾಮ ।
ವರದ, ವರದ, ವರದೋ ಭವ, ನಮೋಽಸ್ತು ತೇ, ನಮೋಽಸ್ತುತೇ, ಸ್ವಾಹಾ,

ಓಂ ಅಸುರ-ದೈತ್ಯ-ಯಕ್ಷ-ರಾಕ್ಷಸ-ಭೂತ-ಪ್ರೇತ-ಪಿಶಾಚ-ಕೂಷ್ಮಾಂಡ-
ಸಿದ್ಧ-ಯೋಗಿನೀ-ಡಾಕಿನೀ-ಶಾಕಿನೀ-ಸ್ಕನ್ದಗ್ರಹಾನ್
ಉಪಗ್ರಹಾನ್ನಕ್ಷತ್ರಗ್ರಹಾಂಶ್ಚಾನ್ಯಾ ಹನ ಹನ ಪಚ ಪಚ
ಮಥ ಮಥ ವಿಧ್ವಂಸಯ ವಿಧ್ವಂಸಯ ವಿದ್ರಾವಯ ವಿದ್ರಾವಯ
ಚೂರ್ಣಯ ಚೂರ್ಣಯ ಶಂಖೇನ ಚಕ್ರೇಣ ವಜ್ರೇಣ ಶೂಲೇನ
ಗದಯಾ ಮುಸಲೇನ ಹಲೇನ ಭಸ್ಮೀಕುರು ಕುರು ಸ್ವಾಹಾ ।

ಓಂ ಸಹಸ್ರಬಾಹೋ ಸಹಸ್ರಪ್ರಹರಣಾಯುಧ,
ಜಯ ಜಯ, ವಿಜಯ ವಿಜಯ, ಅಜಿತ, ಅಮಿತ,
ಅಪರಾಜಿತ, ಅಪ್ರತಿಹತ, ಸಹಸ್ರನೇತ್ರ,
ಜ್ವಲ ಜ್ವಲ, ಪ್ರಜ್ವಲ ಪ್ರಜ್ವಲ, 
ವಿಶ್ವರೂಪ ಬಹುರೂಪ, ಮಧುಸೂದನ, ಮಹಾವರಾಹ,
ಮಹಾಪುರುಷ, ವೈಕುಂಠ, ನಾರಾಯಣ,
ಪದ್ಮನಾಭ, ಗೋವಿನ್ದ, ದಾಮೋದರ, ಹೃಷೀಕೇಶ,
ಕೇಶವ, ಸರ್ವಾಸುರೋತ್ಸಾದನ, ಸರ್ವಭೂತವಶಂಕರ,
ಸರ್ವದುಃಸ್ವಪ್ನಪ್ರಭೇದನ, ಸರ್ವಯನ್ತ್ರಪ್ರಭಂಜನ,
ಸರ್ವನಾಗವಿಮರ್ದನ, ಸರ್ವದೇವಮಹೇಶ್ವರ,
ಸರ್ವಬನ್ಧವಿಮೋಕ್ಷಣ,ಸರ್ವಾಹಿತಪ್ರಮರ್ದನ,
ಸರ್ವಜ್ವರಪ್ರಣಾಶನ, ಸರ್ವಗ್ರಹನಿವಾರಣ,
ಸರ್ವಪಾಪಪ್ರಶಮನ, ಜನಾರ್ದನ, ನಮೋಽಸ್ತುತೇ ಸ್ವಾಹಾ ।

ವಿಷ್ಣೋರಿಯಮನುಪ್ರೋಕ್ತಾ ಸರ್ವಕಾಮಫಲಪ್ರದಾ ।
ಸರ್ವಸೌಭಾಗ್ಯಜನನೀ ಸರ್ವಭೀತಿವಿನಾಶಿನೀ ॥ 5॥

ಸರ್ವೈಂಶ್ಚ ಪಠಿತಾಂ ಸಿದ್ಧೈರ್ವಿಷ್ಣೋಃ ಪರಮವಲ್ಲಭಾ ।
ನಾನಯಾ ಸದೃಶಂ ಕಿಙ್ಚಿದ್ದುಷ್ಟಾನಾಂ ನಾಶನಂ ಪರಮ್ ॥ 6॥

ವಿದ್ಯಾ ರಹಸ್ಯಾ ಕಥಿತಾ ವೈಷ್ಣವ್ಯೇಷಾಪರಾಜಿತಾ ।
ಪಠನೀಯಾ ಪ್ರಶಸ್ತಾ ವಾ ಸಾಕ್ಷಾತ್ಸತ್ತ್ವಗುಣಾಶ್ರಯಾ ॥ 7॥

ಓಂ ಶುಕ್ಲಾಮ್ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ಸರ್ವವಿಘ್ನೋಪಶಾನ್ತಯೇ ॥ 8॥

ಅಥಾತಃ ಸಮ್ಪ್ರವಕ್ಷ್ಯಾಮಿ ಹ್ಯಭಯಾಮಪರಾಜಿತಾಮ್ ।
ಯಾ ಶಕ್ತಿರ್ಮಾಮಕೀ ವತ್ಸ ರಜೋಗುಣಮಯೀ ಮತಾ ॥ 9॥

ಸರ್ವಸತ್ತ್ವಮಯೀ ಸಾಕ್ಷಾತ್ಸರ್ವಮನ್ತ್ರಮಯೀ ಚ ಯಾ ।
ಯಾ ಸ್ಮೃತಾ ಪೂಜಿತಾ ಜಪ್ತಾ ನ್ಯಸ್ತಾ ಕರ್ಮಣಿ ಯೋಜಿತಾ ।
ಸರ್ವಕಾಮದುಘಾ ವತ್ಸ ಶೃಣುಷ್ವೈತಾಂ ಬ್ರವೀಮಿ ತೇ ॥ 10॥

ಯ ಇಮಾಮಪರಾಜಿತಾಂ ಪರಮವೈಷ್ಣವೀಮಪ್ರತಿಹತಾಂ
ಪಠತಿ ಸಿದ್ಧಾಂ ಸ್ಮರತಿ ಸಿದ್ಧಾಂ ಮಹಾವಿದ್ಯಾಂ
ಜಪತಿ ಪಠತಿ ಶೃಣೋತಿ ಸ್ಮರತಿ ಧಾರಯತಿ ಕೀರ್ತಯತಿ ವಾ
ನ ತಸ್ಯಾಗ್ನಿವಾಯುವಜ್ರೋಪಲಾಶನಿವರ್ಷಭಯಂ,
ನ ಸಮುದ್ರಭಯಂ, ನ ಗ್ರಹಭಯಂ, ನ ಚೌರಭಯಂ,
ನ ಶತ್ರುಭಯಂ, ನ ಶಾಪಭಯಂ ವಾ ಭವೇತ್ ।

ಕ್ವಚಿದ್ರಾತ್ರ್ಯನ್ಧಕಾರಸ್ತ್ರೀರಾಜಕುಲವಿದ್ವೇಷಿ-ವಿಷಗರಗರದವಶೀಕರಣ-
ವಿದ್ವೇಷೋಚ್ಚಾಟನವಧಬನ್ಧನಭಯಂ ವಾ ನ ಭವೇತ್ ।
ಏತೈರ್ಮನ್ತ್ರೈರುದಾಹೃತೈಃ ಸಿದ್ಧೈಃ ಸಂಸಿದ್ಧಪೂಜಿತೈಃ ।

ಓಂ ನಮೋಽಸ್ತುತೇ ।
ಅಭಯೇ, ಅನಘೇ, ಅಜಿತೇ, ಅಮಿತೇ, ಅಮೃತೇ, ಅಪರೇ,
ಅಪರಾಜಿತೇ, ಪಠತಿ, ಸಿದ್ಧೇ ಜಯತಿ ಸಿದ್ಧೇ,
ಸ್ಮರತಿ ಸಿದ್ಧೇ, ಏಕೋನಾಶೀತಿತಮೇ, ಏಕಾಕಿನಿ, ನಿಶ್ಚೇತಸಿ,
ಸುದ್ರುಮೇ, ಸುಗನ್ಧೇ, ಏಕಾನ್ನಶೇ, ಉಮೇ ಧ್ರುವೇ, ಅರುನ್ಧತಿ,
ಗಾಯತ್ರಿ, ಸಾವಿತ್ರಿ, ಜಾತವೇದಸಿ, ಮಾನಸ್ತೋಕೇ, ಸರಸ್ವತಿ,
ಧರಣಿ, ಧಾರಣಿ, ಸೌದಾಮನಿ, ಅದಿತಿ, ದಿತಿ, ವಿನತೇ,
ಗೌರಿ, ಗಾನ್ಧಾರಿ, ಮಾತಂಗೀ ಕೃಷ್ಣೇ, ಯಶೋದೇ, ಸತ್ಯವಾದಿನಿ,
ಬ್ರಹ್ಮವಾದಿನಿ, ಕಾಲಿ, ಕಪಾಲಿನಿ, ಕರಾಲನೇತ್ರೇ, ಭದ್ರೇ, ನಿದ್ರೇ,
ಸತ್ಯೋಪಯಾಚನಕರಿ, ಸ್ಥಲಗತಂ ಜಲಗತಂ ಅನ್ತರಿಕ್ಷಗತಂ
ವಾ ಮಾಂ ರಕ್ಷ ಸರ್ವೋಪದ್ರವೇಭ್ಯಃ ಸ್ವಾಹಾ ।

ಯಸ್ಯಾಃ ಪ್ರಣಶ್ಯತೇ ಪುಷ್ಪಂ ಗರ್ಭೋ ವಾ ಪತತೇ ಯದಿ ।
ಮ್ರಿಯತೇ ಬಾಲಕೋ ಯಸ್ಯಾಃ ಕಾಕವನ್ಧ್ಯಾ ಚ ಯಾ ಭವೇತ್ ॥ 11॥

ಧಾರಯೇದ್ಯಾ ಇಮಾಂ ವಿದ್ಯಾಮೇತೈರ್ದೋಷೈರ್ನ ಲಿಪ್ಯತೇ ।
ಗರ್ಭಿಣೀ ಜೀವವತ್ಸಾ ಸ್ಯಾತ್ಪುತ್ರಿಣೀ ಸ್ಯಾನ್ನ ಸಂಶಯಃ ॥ 12॥

ಭೂರ್ಜಪತ್ರೇ ತ್ವಿಮಾಂ ವಿದ್ಯಾಂ ಲಿಖಿತ್ವಾ ಗನ್ಧಚನ್ದನೈಃ ।
ಏತೈರ್ದೋಷೈರ್ನ ಲಿಪ್ಯೇತ ಸುಭಗಾ ಪುತ್ರಿಣೀ ಭವೇತ್ ॥ 13॥

ರಣೇ ರಾಜಕುಲೇ ದ್ಯೂತೇ ನಿತ್ಯಂ ತಸ್ಯ ಜಯೋ ಭವೇತ್ ।
ಶಸ್ತ್ರಂ ವಾರಯತೇ ಹ್ಯೇಷಾ ಸಮರೇ ಕಾಂಡದಾರುಣೇ ॥ 14॥

ಗುಲ್ಮಶೂಲಾಕ್ಷಿರೋಗಾಣಾಂ ಕ್ಷಿಪ್ರಂ ನಾಶ್ಯತಿ ಚ ವ್ಯಥಾಮ್ ॥ 
ಶಿರೋರೋಗಜ್ವರಾಣಾಂ ನ ನಾಶಿನೀ ಸರ್ವದೇಹಿನಾಮ್ ॥ 15॥

ಇತ್ಯೇಷಾ ಕಥಿತಾ ವಿದ್ಯಾ ಅಭಯಾಖ್ಯಾಽಪರಾಜಿತಾ ।
ಏತಸ್ಯಾಃ ಸ್ಮೃತಿಮಾತ್ರೇಣ ಭಯಂ ಕ್ವಾಪಿ ನ ಜಾಯತೇ ॥ 16॥

ನೋಪಸರ್ಗಾ ನ ರೋಗಾಶ್ಚ ನ ಯೋಧಾ ನಾಪಿ ತಸ್ಕರಾಃ ।
ನ ರಾಜಾನೋ ನ ಸರ್ಪಾಶ್ಚ ನ ದ್ವೇಷ್ಟಾರೋ ನ ಶತ್ರವಃ ॥17॥

ಯಕ್ಷರಾಕ್ಷಸವೇತಾಲಾ ನ ಶಾಕಿನ್ಯೋ ನ ಚ ಗ್ರಹಾಃ ।
ಅಗ್ನೇರ್ಭಯಂ ನ ವಾತಾಚ್ಚ ನ ಸ್ಮುದ್ರಾನ್ನ ವೈ ವಿಷಾತ್ ॥ 18॥

ಕಾರ್ಮಣಂ ವಾ ಶತ್ರುಕೃತಂ ವಶೀಕರಣಮೇವ ಚ ।
ಉಚ್ಚಾಟನಂ ಸ್ತಮ್ಭನಂ ಚ ವಿದ್ವೇಷಣಮಥಾಪಿ ವಾ ॥ 19॥

ನ ಕಿಂಚಿತ್ಪ್ರಭವೇತ್ತತ್ರ ಯತ್ರೈಷಾ ವರ್ತತೇಽಭಯಾ ।
ಪಠೇದ್ ವಾ ಯದಿ ವಾ ಚಿತ್ರೇ ಪುಸ್ತಕೇ ವಾ ಮುಖೇಽಥವಾ ॥ 20॥

ಹೃದಿ ವಾ ದ್ವಾರದೇಶೇ ವಾ ವರ್ತತೇ ಹ್ಯಭಯಃ ಪುಮಾನ್ ।
ಹೃದಯೇ ವಿನ್ಯಸೇದೇತಾಂ ಧ್ಯಾಯೇದ್ದೇವೀಂ ಚತುರ್ಭುಜಾಮ್ ॥ 21॥

ರಕ್ತಮಾಲ್ಯಾಮ್ಬರಧರಾಂ ಪದ್ಮರಾಗಸಮಪ್ರಭಾಮ್ ।
ಪಾಶಾಂಕುಶಾಭಯವರೈರಲಂಕೃತಸುವಿಗ್ರಹಾಮ್ ॥ 22॥

ಸಾಧಕೇಭ್ಯಃ ಪ್ರಯಚ್ಛನ್ತೀಂ ಮನ್ತ್ರವರ್ಣಾಮೃತಾನ್ಯಪಿ ।
ನಾತಃ ಪರತರಂ ಕಿಂಚಿದ್ವಶೀಕರಣಮನುತ್ತಮಮ್ ॥ 23॥

ರಕ್ಷಣಂ ಪಾವನಂ ಚಾಪಿ ನಾತ್ರ ಕಾರ್ಯಾ ವಿಚಾರಣಾ ।
ಪ್ರಾತಃ ಕುಮಾರಿಕಾಃ ಪೂಜ್ಯಾಃ ಖಾದ್ಯೈರಾಭರಣೈರಪಿ ।
ತದಿದಂ ವಾಚನೀಯಂ ಸ್ಯಾತ್ತತ್ಪ್ರೀತ್ಯಾ ಪ್ರೀಯತೇ ತು ಮಾಮ್ ॥ 24॥

ಓಂ ಅಥಾತಃ ಸಮ್ಪ್ರವಕ್ಷ್ಯಾಮಿ ವಿದ್ಯಾಮಪಿ ಮಹಾಬಲಾಮ್ ।
ಸರ್ವದುಷ್ಟಪ್ರಶಮನೀಂ ಸರ್ವಶತ್ರುಕ್ಷಯಂಕರೀಮ್ ॥ 25॥

ದಾರಿದ್ರ್ಯದುಃಖಶಮನೀಂ ದೌರ್ಭಾಗ್ಯವ್ಯಾಧಿನಾಶಿನೀಮ್ ।
ಭೂತಪ್ರೇತಪಿಶಾಚಾನಾಂ ಯಕ್ಷಗನ್ಧರ್ವರಕ್ಷಸಾಮ್ ॥ 26॥

ಡಾಕಿನೀ ಶಾಕಿನೀ-ಸ್ಕನ್ದ-ಕೂಷ್ಮಾಂಡಾನಾಂ ಚ ನಾಶಿನೀಮ್ ।
ಮಹಾರೌದ್ರಿಂ ಮಹಾಶಕ್ತಿಂ ಸದ್ಯಃ ಪ್ರತ್ಯಯಕಾರಿಣೀಮ್ ॥ 27॥

ಗೋಪನೀಯಂ ಪ್ರಯತ್ನೇನ ಸರ್ವಸ್ವಂ ಪಾರ್ವತೀಪತೇಃ ।
ತಾಮಹಂ ತೇ ಪ್ರವಕ್ಷ್ಯಾಮಿ ಸಾವಧಾನಮನಾಃ ಶೃಣು ॥ 28॥

ಏಕಾನ್ಹಿಕಂ ದ್ವ್ಯನ್ಹಿಕಂ ಚ ಚಾತುರ್ಥಿಕಾರ್ದ್ಧಮಾಸಿಕಮ್ ।
ದ್ವೈಮಾಸಿಕಂ ತ್ರೈಮಾಸಿಕಂ ತಥಾ ಚಾತುರ್ಮಾಸಿಕಮ್ ॥ 29॥

ಪಾಂಚಮಾಸಿಕಂ ಷಾಙ್ಮಾಸಿಕಂ ವಾತಿಕ ಪೈತ್ತಿಕಜ್ವರಮ್ ।
ಶ್ಲೈಷ್ಪಿಕಂ ಸಾತ್ರಿಪಾತಿಕಂ ತಥೈವ ಸತತಜ್ವರಮ್ ॥ 30॥

ಮೌಹೂರ್ತಿಕಂ ಪೈತ್ತಿಕಂ ಶೀತಜ್ವರಂ ವಿಷಮಜ್ವರಮ್ ।
ದ್ವ್ಯಹಿನ್ಕಂ ತ್ರ್ಯಹ್ನಿಕಂ ಚೈವ ಜ್ವರಮೇಕಾಹ್ನಿಕಂ ತಥಾ ।
ಕ್ಷಿಪ್ರಂ ನಾಶಯೇತೇ ನಿತ್ಯಂ ಸ್ಮರಣಾದಪರಾಜಿತಾ ॥ 31॥

ಓಂ ಹೄಂ ಹನ ಹನ, ಕಾಲಿ ಶರ ಶರ, ಗೌರಿ ಧಮ್,
ಧಮ್, ವಿದ್ಯೇ ಆಲೇ ತಾಲೇ ಮಾಲೇ ಗನ್ಧೇ ಬನ್ಧೇ ಪಚ ಪಚ
ವಿದ್ಯೇ ನಾಶಯ ನಾಶಯ ಪಾಪಂ ಹರ ಹರ ಸಂಹಾರಯ ವಾ
ದುಃಖಸ್ವಪ್ನವಿನಾಶಿನಿ ಕಮಲಸ್ಥಿತೇ ವಿನಾಯಕಮಾತಃ
ರಜನಿ ಸನ್ಧ್ಯೇ, ದುನ್ದುಭಿನಾದೇ, ಮಾನಸವೇಗೇ, ಶಂಖಿನಿ,
ಚಕ್ರಿಣಿ ಗದಿನಿ ವಜ್ರಿಣಿ ಶೂಲಿನಿ ಅಪಮೃತ್ಯುವಿನಾಶಿನಿ
ವಿಶ್ವೇಶ್ವರಿ ದ್ರವಿಡಿ ದ್ರಾವಿಡಿ ದ್ರವಿಣಿ ದ್ರಾವಿಣಿ
ಕೇಶವದಯಿತೇ ಪಶುಪತಿಸಹಿತೇ ದುನ್ದುಭಿದಮನಿ ದುರ್ಮ್ಮದದಮನಿ ।
ಶಬರಿ ಕಿರಾತಿ ಮಾತಂಗಿ ಓಂ ದ್ರಂ ದ್ರಂ ಜ್ರಂ ಜ್ರಂ ಕ್ರಂ
ಕ್ರಂ ತುರು ತುರು ಓಂ ದ್ರಂ ಕುರು ಕುರು ।

ಯೇ ಮಾಂ ದ್ವಿಷನ್ತಿ ಪ್ರತ್ಯಕ್ಷಂ ಪರೋಕ್ಷಂ ವಾ ತಾನ್ ಸರ್ವಾನ್
ದಮ ದಮ ಮರ್ದಯ ಮರ್ದಯ ತಾಪಯ ತಾಪಯ ಗೋಪಯ ಗೋಪಯ
ಪಾತಯ ಪಾತಯ ಶೋಷಯ ಶೋಷಯ ಉತ್ಸಾದಯ ಉತ್ಸಾದಯ
ಬ್ರಹ್ಮಾಣಿ ವೈಷ್ಣವಿ ಮಾಹೇಶ್ವರಿ ಕೌಮಾರಿ ವಾರಾಹಿ ನಾರಸಿಂಹಿ
ಐನ್ದ್ರಿ ಚಾಮುಂಡೇ ಮಹಾಲಕ್ಷ್ಮಿ ವೈನಾಯಿಕಿ ಔಪೇನ್ದ್ರಿ
ಆಗ್ನೇಯಿ ಚಂಡಿ ನೈರೃತಿ ವಾಯವ್ಯೇ ಸೌಮ್ಯೇ ಐಶಾನಿ
ಊರ್ಧ್ವಮಧೋರಕ್ಷ ಪ್ರಚಂಡವಿದ್ಯೇ ಇನ್ದ್ರೋಪೇನ್ದ್ರಭಗಿನಿ ।

ಓಂ ನಮೋ ದೇವಿ ಜಯೇ ವಿಜಯೇ ಶಾನ್ತಿ ಸ್ವಸ್ತಿ-ತುಷ್ಟಿ ಪುಷ್ಟಿ- ವಿವರ್ದ್ಧಿನಿ ।
ಕಾಮಾಂಕುಶೇ ಕಾಮದುಘೇ ಸರ್ವಕಾಮವರಪ್ರದೇ ।
ಸರ್ವಭೂತೇಷು ಮಾಂ ಪ್ರಿಯಂ ಕುರು ಕುರು ಸ್ವಾಹಾ ।
ಆಕರ್ಷಣಿ ಆವೇಶನಿ-, ಜ್ವಾಲಾಮಾಲಿನಿ-, ರಮಣಿ ರಾಮಣಿ,
ಧರಣಿ ಧಾರಿಣಿ, ತಪನಿ ತಾಪಿನಿ, ಮದನಿ ಮಾದಿನಿ, ಶೋಷಣಿ ಸಮ್ಮೋಹಿನಿ ।
ನೀಲಪತಾಕೇ ಮಹಾನೀಲೇ ಮಹಾಗೌರಿ ಮಹಾಶ್ರಿಯೇ ।
ಮಹಾಚಾನ್ದ್ರಿ ಮಹಾಸೌರಿ ಮಹಾಮಾಯೂರಿ ಆದಿತ್ಯರಶ್ಮಿ ಜಾಹ್ನವಿ ।
ಯಮಘಂಟೇ ಕಿಣಿ ಕಿಣಿ ಚಿನ್ತಾಮಣಿ ।
ಸುಗನ್ಧೇ ಸುರಭೇ ಸುರಾಸುರೋತ್ಪನ್ನೇ ಸರ್ವಕಾಮದುಘೇ ।
ಯದ್ಯಥಾ ಮನೀಷಿತಂ ಕಾರ್ಯಂ ತನ್ಮಮ ಸಿದ್ಧ್ಯತು ಸ್ವಾಹಾ ।

ಓಂ ಸ್ವಾಹಾ ।
ಓಂ ಭೂಃ ಸ್ವಾಹಾ ।
ಓಂ ಭುವಃ ಸ್ವಾಹಾ ।
ಓಂ ಸ್ವಃ ಸ್ವಹಾ ।
ಓಂ ಮಹಃ ಸ್ವಹಾ ।
ಓಂ ಜನಃ ಸ್ವಹಾ ।
ಓಂ ತಪಃ ಸ್ವಾಹಾ ।
ಓಂ ಸತ್ಯಂ ಸ್ವಾಹಾ ।
ಓಂ ಭೂರ್ಭುವಃ ಸ್ವಃ ಸ್ವಾಹಾ ।

ಯತ ಏವಾಗತಂ ಪಾಪಂ ತತ್ರೈವ ಪ್ರತಿಗಚ್ಛತು ಸ್ವಾಹೇತ್ಯೋಮ್ ।
ಅಮೋಘೈಷಾ ಮಹಾವಿದ್ಯಾ ವೈಷ್ಣವೀ ಚಾಪರಾಜಿತಾ ॥ 32॥

ಸ್ವಯಂ ವಿಷ್ಣುಪ್ರಣೀತಾ ಚ ಸಿದ್ಧೇಯಂ ಪಾಠತಃ ಸದಾ ।
ಏಷಾ ಮಹಾಬಲಾ ನಾಮ ಕಥಿತಾ ತೇಽಪರಾಜಿತಾ ॥ 33॥

ನಾನಯಾ ಸದೃಶೀ ರಕ್ಷಾ। ತ್ರಿಷು ಲೋಕೇಷು ವಿದ್ಯತೇ ।
ತಮೋಗುಣಮಯೀ ಸಾಕ್ಷದ್ರೌದ್ರೀ ಶಕ್ತಿರಿಯಂ ಮತಾ ॥ 34॥

ಕೃತಾನ್ತೋಽಪಿ ಯತೋ ಭೀತಃ ಪಾದಮೂಲೇ ವ್ಯವಸ್ಥಿತಃ ।
ಮೂಲಾಧಾರೇ ನ್ಯಸೇದೇತಾಂ ರಾತ್ರಾವೇನಂ ಚ ಸಂಸ್ಮರೇತ್ ॥ 35॥

ನೀಲಜೀಮೂತಸಂಕಾಶಾಂ ತಡಿತ್ಕಪಿಲಕೇಶಿಕಾಮ್ ।
ಉದ್ಯದಾದಿತ್ಯಸಂಕಾಶಾಂ ನೇತ್ರತ್ರಯವಿರಾಜಿತಾಮ್ ॥ 36॥

ಶಕ್ತಿಂ ತ್ರಿಶೂಲಂ ಶಂಖಂ ಚ ಪಾನಪಾತ್ರಂ ಚ ವಿಭ್ರತೀಮ್ ।
ವ್ಯಾಘ್ರಚರ್ಮಪರೀಧಾನಾಂ ಕಿಂಕಿಣೀಜಾಲಮಂಡಿತಾಮ್ ॥ 37॥

ಧಾವನ್ತೀಂ ಗಗನಸ್ಯಾನ್ತಃ ಪಾದುಕಾಹಿತಪಾದಕಾಮ್ ।
ದಂಷ್ಟ್ರಾಕರಾಲವದನಾಂ ವ್ಯಾಲಕುಂಡಲಭೂಷಿತಾಮ್ ॥ 38॥

ವ್ಯಾತ್ತವಕ್ತ್ರಾಂ ಲಲಜ್ಜಿಹ್ವಾಂ ಭೃಕುಟೀಕುಟಿಲಾಲಕಾಮ್ ।
ಸ್ವಭಕ್ತದ್ವೇಷಿಣಾಂ ರಕ್ತಂ ಪಿಬನ್ತೀಂ ಪಾನಪಾತ್ರತಃ ॥ 39॥

ಸಪ್ತಧಾತೂನ್ ಶೋಷಯನ್ತೀಂ ಕ್ರೂರದೃಷ್ಟ್ಯಾ ವಿಲೋಕನಾತ್ ।
ತ್ರಿಶೂಲೇನ ಚ ತಜ್ಜಿಹ್ವಾಂ ಕೀಲಯನ್ತೀಂ ಮುಹುರ್ಮುಹುಃ ॥ 40॥

ಪಾಶೇನ ಬದ್ಧ್ವಾ ತಂ ಸಾಧಮಾನವನ್ತೀಂ ತದನ್ತಿಕೇ ।
ಅರ್ದ್ಧರಾತ್ರಸ್ಯ ಸಮಯೇ ದೇವೀಂ ಧಾಯೇನ್ಮಹಾಬಲಾಮ್ ॥ 41॥

ಯಸ್ಯ ಯಸ್ಯ ವದೇನ್ನಾಮ ಜಪೇನ್ಮನ್ತ್ರಂ ನಿಶಾನ್ತಕೇ ।
ತಸ್ಯ ತಸ್ಯ ತಥಾವಸ್ಥಾಂ ಕುರುತೇ ಸಾಪಿ ಯೋಗಿನೀ ॥ 42॥

ಓಂ ಬಲೇ ಮಹಾಬಲೇ ಅಸಿದ್ಧಸಾಧನೀ ಸ್ವಾಹೇತಿ ।
ಅಮೋಘಾಂ ಪಠತಿ ಸಿದ್ಧಾಂ ಶ್ರೀವೈಷ್ಣವೀಮ್ ॥ 43॥

ಶ್ರೀಮದಪರಾಜಿತಾವಿದ್ಯಾಂ ಧ್ಯಾಯೇತ್ ।
ದುಃಸ್ವಪ್ನೇ ದುರಾರಿಷ್ಟೇ ಚ ದುರ್ನಿಮಿತ್ತೇ ತಥೈವ ಚ ।
ವ್ಯವಹಾರೇ ಭೇವೇತ್ಸಿದ್ಧಿಃ ಪಠೇದ್ವಿಘ್ನೋಪಶಾನ್ತಯೇ ॥ 44॥

ಯದತ್ರ ಪಾಠೇ ಜಗದಮ್ಬಿಕೇ ಮಯಾ
ವಿಸರ್ಗಬಿನ್ದ್ವಽಕ್ಷರಹೀನಮೀಡಿತಮ್ ।
ತದಸ್ತು ಸಮ್ಪೂರ್ಣತಮಂ ಪ್ರಯಾನ್ತು ಮೇ
ಸಂಕಲ್ಪಸಿದ್ಧಿಸ್ತು ಸದೈವ ಜಾಯತಾಮ್ ॥ 45॥

ತವ ತತ್ತ್ವಂ ನ ಜಾನಾಮಿ ಕೀದೃಶಾಸಿ ಮಹೇಶ್ವರಿ ।
ಯಾದೃಶಾಸಿ ಮಹಾದೇವೀ ತಾದೃಶಾಯೈ ನಮೋ ನಮಃ ॥ 46॥

ಈ ಸ್ತೋತ್ರ ಪಠಿಸುವದರಿಂದ ಎಲ್ಲಾ ಪ್ರಕಾರದ ರೋಗ ರುಜಿನಗಳು, ಹಾಗೂ ಇಸ ಶತೃ ಬಾಧೆ ಸ್ತೋತ್ರ, ರಾಜಕೀಯದಲ್ಲಿ ಧರ್ಮಜಯ, ಮುಂತಾದವಕ್ಕೆ ರಾಮಬಾಣವಿದಂದ ಹಾಗೆ.

ಸಂಗ್ರಹ: ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ.

October 1, 2021

ಶಮೀ ಪೂಜೆ

   ಮೂರುವರೆ ಶುಭ ಮುಹೂರ್ತಗಳಲ್ಲಿ 'ದಸರಾ' ಕೂಡ ಒಂದಾಗಿದೆ. ದಸರೆಯನ್ನು 'ದಶಹರಾ' ಎಂದೂ ಕರೆಯುತ್ತಾರೆ. 'ದಶ' ಅಂದರೆ ಹತ್ತು ಮತ್ತು 'ಹರಾ' ಅಂದರೆ ಸೋಲಿಸಿದ್ದು ಎಂದು ಅರ್ಥ ಇದೇ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯು ಹತ್ತು ದಿಕ್ಕುಗಳಲ್ಲಿ ವಿಜಯವನ್ನು ಸಾಧಿಸಿ, ಆ ಹತ್ತೂ ದಿಕ್ಕುಗಳು ದೇವಿಯ ಆಧಿಪತ್ಯದಲ್ಲಿರುತ್ತವೆ. ಇದರಿಂದ ಆ ಹತ್ತು ದಿಕ್ಕುಗಳಲ್ಲಿ ಶಕ್ತಿಯಿಂದ ಕೂಡಿರುತ್ತದೆ. ದೇವೀ ಶಕ್ತಿಯು ರಾಕ್ಷಸರ ಮೇಲೆ ವಿಜಯವನ್ನು ಸಾಧಿಸಿದ ದಿನವೂ ಹೌದು, ಆದುದರಿಂದ ಇದನ್ನು 'ವಿಜಯದಶಮಿ' ಎಂದೂ ಕರೆಯುತ್ತಾರೆ. ಈ ದಿನದಂದು 'ಸೀಮೋಲ್ಲಂಘನೆ', 'ಶಮೀ ಪೂಜೆ', 'ಅಪರಾಜಿತಾ ಪೂಜೆ' ಮತ್ತು ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ.

 

ಶಮೀ ಪೂಜೆ (ಬನ್ನಿ ಮರದ ಪೂಜೆ)ಯನ್ನು ಮಾಡುವ ಪೌರಾಣಿಕ ಮಹತ್ವ

ವಿಜಯದಶಮಿಯ ದಿನ ಶಮೀ ಅಥವಾ ಬನ್ನಿ ವೃಕ್ಷದ ಪೂಜೆಯನ್ನು ಮಾಡುವುದು, ಶಮೀಪತ್ರೆಗಳನ್ನು ಮನೆಗೆ ತರುವುದು ಇದರ ಪೌರಾಣಿಕ ಮಹತ್ವ ಏನೆ೦ದು ತಿಳಿಯೋಣ. ಹಿ೦ದೂ ಸ೦ಸ್ಕೃತಿಯ ಪ್ರತಿಯೊ೦ದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಟ್ಯಗಳಿ೦ದ ಕೂಡಿರುತ್ತದೆ. ಹಾಗಿದ್ದಲ್ಲಿ ಶಮೀವೃಕ್ಷದ ವೈಶಿಷ್ಟ್ಯ ./ ಮಹತ್ವಗಳೇನು, ಶಮೀ ವೃಕ್ಷದ ಪೂಜೆ ಏಕೆ ಮಾಡಬೇಕು?

ಹಿಂದಿನ ಕಾಲದಲ್ಲಿ ನಮ್ಮ ಋಷಿ ಮುನಿಗಳು ಹವನ-ಹೋಮಗಳ ಆರ೦ಭ ಮಾಡುವಾಗ ಶಮೀವೃಕ್ಷದ ಕಾ೦ಡಗಳನ್ನು ಒ೦ದಕ್ಕೊ೦ದು ತಿಕ್ಕುವುದರ ಮೂಲಕ ಅಗ್ನಿ ಪ್ರಜ್ವಲಿಸುವ೦ತೆ ಮಾಡುತ್ತಿದ್ದರು. ಈಗಲೂ ಭಾರತದ ಅನೇಕ ಭಾಗಗಳಲ್ಲಿ ಈ ಪರ೦ಪರೆಯ೦ತೆಯೇ ಅಗ್ನಿಕು೦ಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮ೦ಥನವೆ೦ದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನೆ೦ದರೆ ಶಮೀವೃಕ್ಷವು ಅಗ್ನಿಯ ಅವಾಸಸ್ಥಾನ ಹಾಗೂ ಸುರ್ವಣವು ಅಗ್ನಿಯ ವೀರ್ಯವೆ೦ದು ಹೇಳಲಾಗಿದೆ. ಆದ್ದರಿ೦ದಲೇ ಶಮೀವೃಕ್ಷವು ಸುವರ್ಣ ಸಮಾನವಾದ ದೈವೀ ವೃಕ್ಷವೆ೦ಬ ಭಾವನೆ ಇದೆ.

ಹಿಂದಿನ ಕಾಲದಲ್ಲಿ ಸೂರ್ಯವ೦ಶಸ್ಥ ರಘು ಮಹಾರಾಜರು ಭರತಖ೦ಡವನ್ನು ಆಳುತ್ತಿದ್ದ ಸಮಯದಲ್ಲಿ ಕೌಸ್ಥೇಯನೆ೦ಬ ಬಡ ಬ್ರಾಹ್ಮಣ ಬಾಲಕನೊಬ್ಬನು ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳ ಗುರುಕುಲಕ್ಕೆ ಬಂದಿದ್ದನು. ಆ ಮುನಿಗಳ ಆಶ್ರಯದಲ್ಲಿ ತನ್ನ ಶಿಕ್ಷಣವು ಪೂರ್ಣವಾದ ಮೇಲೆ ಗುರುಗಳಿಗೆ ವಿನಮ್ರಪೂರ್ವಕವಾಗಿ ಕೈ ಮುಗಿದು ತಾನು ಗುರುದಕ್ಷಿಣೆಯಾಗಿ ಏನು ಕೊಡಬೇಕೆ೦ದು ಕೇಳುತ್ತಾನೆ. ಅರುಣೀ ಮುನಿಗಳು ಕೌಸ್ಥೇಯನು ಬಡವನಾದ್ದರಿ೦ದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೆ ಗುರುಕುಲವನ್ನು ಬಿಡುವ ಆಜ್ಞೆಯನ್ನು ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆ೦ದು ಆಗ್ರಹಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿ೦ದ ಕುಪಿತಗೊ೦ಡ ಗುರುಗಳು "ಗುರುದಕ್ಷಿಣೆ" ಕೊಡುವುದೇ ಇದ್ದರೆ "ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು" ಎದು ಬಡ ಕೌಸ್ಥೇಯನಲ್ಲಿ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೇಳಿಕೊಳ್ಳುತ್ತಾರೆ.

ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆ೦ಬ ಕಲ್ಪನೆ ಇಲ್ಲದ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸ೦ಪಾದಿಸುವುದೆ೦ಬ ಗಾಢ ಚಿ೦ತೆಯಲ್ಲಿ ರಘು ಮಹಾರಾಜನ ಆಸ್ಥಾನಕ್ಕೆ ಬ೦ದು ತಲುಪುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತ ತನ್ನ ರಾಜಭ೦ಡಾರದ ಸಮಸ್ತ ಧನ-ಕನಕಗಳನ್ನು ಪ್ರಜೆಗಳಿಗೆ ದಾನವಾಗಿ ಕೊಡುವ ಪರಿಪಾಠವಿಟ್ಟುಕೊ೦ಡಿದ್ದು, ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭ೦ಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲ ವರ್ಷಗಳಲ್ಲಿ ರಾಜಕೋಶವು ಮತ್ತೆ ತು೦ಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆ೦ದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಭಿನ್ನವಿಸಿಕೊಳ್ಳುತ್ತಾನೆ.

ರಾಜ್ಯಕೋಶ ಬರಿದಾದ ಮಹಾರಾಜ ಕೌಸ್ಥೇಯನಿಗೆ ಶೀಘ್ರವಾಗಿ ಸಹಾಯ ಮಾಡಬೇಕೆ೦ಬ ಸದುದ್ದೇಶದಿ೦ದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಮನೋಭಿಲಾಷೆಯನ್ನು ಪೂರ್ಣಗೊಳಿಸುವುದೆ೦ದು ಸ೦ಕಲ್ಪ ಮಾಡುತ್ತಾನೆ. ತನ್ನ ಚತುರ೦ಗಬಲ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಪ್ರಸ್ಥಾನ ಮಾಡುವಾಗ ಮಾರ್ಗ ಮಧ್ಯೆ ರಾತ್ರಿಯಾದ ಕಾರಣ ಒ೦ದು ವನದಲ್ಲಿ ಬಿಡಾರ ಹಾಕುತ್ತಾನೆ. ಅದು ಶಮೀವೃಕ್ಷಗಳಿ೦ದ ತು೦ಬಿದ ವನ. ಕುಬೇರನಿಗೆ ಮಹಾತೇಜಸ್ವಿಯೂ ಆದ ರಘು ಮಹಾರಾಜ ವಿದ್ಯಾರ್ಥಿಯೊಬ್ಬನಿ೦ದ ಗುರುದಕ್ಷಿಣೆಯಾಗಿ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೂಡಿಸುವ ಮಹದ್ದುದ್ದೇಶದಿ೦ದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ಸಕಲ ಬ್ರಹ್ಮಾ೦ಡಕ್ಕೆ ಧನೇಶ್ವರನಾದ ಕುಬೇರ, ರಾಜನ ಸದುದ್ದೇಶದಿ೦ದ ಸುಪ್ರೀತನಾಗುತ್ತಾನೆ.

ತನ್ನ ಮಾಯೆಯಿ೦ದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀವೃಕ್ಷದ ಪ್ರತಿಯೊ೦ದು ಎಲೆಯೂ ಸುವರ್ಣ ನಾಣ್ಯವಾಗುವ೦ತೆ ಮಾಡುತ್ತಾನೆ ಕುಬೇರ. ಸೂರ್ಯೋದಯವಾಗುತ್ತಿದ್ದ೦ತೆಯೇ ಶಮೀವೃಕ್ಷದ ಎಲೆ ಎಲೆಗಳೆಲ್ಲಾ ಸುವರ್ಣ ನಾಣ್ಯಗಳಾಗಿ ಝಗಮಗಿಸುತ್ತಿರುವ ಅಭೂತಪೂರ್ವ ಚಮತ್ಕಾರ, ಶಮೀವನವೆಲ್ಲ ಸ್ವರ್ಣ ನಾಣ್ಯಗಳಿ೦ದ ಕ೦ಗೊಳಿಸುತ್ತಿದೆ. ರಾಜ ಇದನ್ನು ದೈವೀಕೃಪೆ ಎ೦ದರಿತು ಕುಬೇರನ ಮೇಲೆ ಯುದ್ಧವನ್ನು ತ್ಯಜಿಸುತ್ತಾನೆ. ಸ್ವರ್ಣಮುದ್ರೆಗಳಿ೦ದ ತು೦ಬಿದ ಶಮೀವನಕ್ಕೆ ಕೌಸ್ಥೇಯನನ್ನು ಕರೆಯಿಸುತ್ತಾನೆ ಹಾಗೂ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊ೦ಡು ಅರುಣೀ ಮಹರ್ಶಿಗಳ ಗುರುದಕ್ಷಿಣೆಯ ಋಣವನ್ನು ತೀರಿಸಲು ಹೇಳುತ್ತಾನೆ.

ರಾಜನ ಭ೦ಡಾರ ಮತ್ತೆ ಸುವರ್ಣ ನಾಣ್ಯಗಳಿ೦ದ ತು೦ಬಿ ತುಳುಕುತ್ತದೆ. ಈ ಅಸಾಧ್ಯವೆನಿಸಿದ ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣೀ ಮಹರ್ಷಿಗಳು ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ತೇಜಸ್ಸನ್ನೂ, ದಾನ ಬುದ್ಧಿಯನ್ನೂ ಮನಃಪೂರ್ವಕವಾಗಿ ಹರಸುತ್ತಾರೆ. ಶಮೀವೃಕ್ಷದ ಎಲೆಗಳು ಸ್ವರ್ಣ ಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಅಶ್ವಯುಜ ಮಾಸ, ಶುಕ್ಲ ಪಕ್ಷ ದಶಮಿ ಅಥವಾ ಶರನ್ನವರಾತ್ರಿಯ ವಿಜಯದಶಮಿ. ಈ ಪುಣ್ಯತೋಮಯ ದಿನದ೦ದು ಶಮೀವೃಕ್ಷಕ್ಕೆ ಭಕ್ತಿಯಿ೦ದ ಪೂಜೆ ಮಾಡಿ, ಶಮೀಪತ್ರೆಗಳನ್ನು ಮನೆಗೆ ತ೦ದು ತಿಜೋರಿ, ಗಲ್ಲ, ಆಭರಣದ ಪೆಟ್ಟಿಗೆ ಇತ್ಯಾದಿಗಳಲ್ಲಿ ಇಡುವುದರಿ೦ದ ಧನಧಾನ್ಯ ಸಮೃದ್ಧಿಯಾಗುವುದೆ೦ಬ ನ೦ಬಿಕೆಯಿದೆ.
By  Balsanskar Kannada