ಚತುರ್ಯುಗಗಳಲ್ಲಿಯೂ
ಶ್ರೀ ಜಗದಾಚಾರ್ಯರು ಲಿಂಗೋದ್ಭವರಾಗಿಯೇ ಅವತರಿಸಿದರು. ಇವರಲ್ಲಿ ಶ್ರೀ ಜ. ರೇವಣಸಿದ್ಧೇಶ್ವರರು
ಕೊನಲುಪಾಕ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರದಿಂದ,
ಶ್ರೀ ಜಗದ್ಗುರು ಮರುಳಾರಾಧ್ಯರು ವಟಕ್ಷೇತ್ರ ಶ್ರೀ ಸಿದ್ಧೇಶ್ವರಲಿಂಗದಿಂದ, ಶ್ರೀ ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲ
ಮಲ್ಲಿಕಾರ್ಜುನ ಲಿಂಗದಿಂದ,
ಶ್ರೀ ಜಗದ್ಗುರು ಏಕೋರಾಮಾರಾಧ್ಯರು ಶ್ರೀ ಹಿಮವತ್ಕೇದಾರ ರಾಮನಾಥಲಿಂಗದಿಂದ ಶ್ರೀ ಜಗದ್ಗುರು
ವಿಶ್ವಾರಾಧ್ಯರು ಶ್ರೀ ಕಾಶೀ ವಿಶ್ವೇಶ್ವರ ಲಿಂಗದಿಂದ ಉದ್ಭವಿಸಿದ್ದಲ್ಲದೇ ಆಯಾಯ ಲಿಂಗಗಳಲ್ಲಿಯೇ ಅಡಗಿದರು.
ಪಂಚತತ್ವ ಹಾಗೂ ಪಂಚಪೀಠಗಳು.
ಭೂಮಿ, ಜಲ, ಅಗ್ನಿ, ವಾಯು, ಆಕಾಶ ಈ ಪಂಚತತ್ವಗಳಿಂದಲೇ ಮಾನವನನ್ನು ಈಶ್ವರನು ನಿರ್ಮಿಸಿರುವನು. ಮಾನವರ ಉದ್ಧಾರಕ್ಕಾಗಿ ಅವತರಿಸಿದ ಶ್ರೀ ಪಂಚಾಚಾರ್ಯರಿಗೆ ಈ ಪಂಚತತ್ವಗಳೇ ಪಂಚಪೀಠಗಳಾಗಿ ಪರಿಣಮಿಸಿದವು. ಈ ತತ್ವಗಳಲ್ಲಿ ಪೃಥ್ವಿತತ್ವವೇ ರಂಭಾಪುರೀ ವೀರಪೀಠವಾಗಿಯೂ, ಜಲತತ್ವವೇ ಉಜ್ಜಯಿನಿ ಸದ್ಧರ್ಮಪೀಠವಾಗಿಯೂ, ಅಗ್ನಿ ತತ್ವವೇ ಕೇದಾರ ವೈರಾಗ್ಯ ಪೀಠವಾಗಿಯೂ ವಾಯು ತತ್ವವೇ ಶ್ರೀಶೈಲ ಸೂರ್ಯಪೀಠವಾಗಿಯೂ, ಆಕಾಶ ತತ್ವವೇ ಕಾಶೀ ಜ್ಞಾನಪೀಠವಾಗಿಯೂ ಪರಿಣಮಿಸಿವೆ.
ಆದುದರಿಂದ ಈ ಐದು ತತ್ವಗಳು ಪೀಠಾಚಾರ್ಯರಿಗೆ ಪಂಚಪೀಠಗಳೆನಿಸಿ ಇಂದಿನವರೆಗೂ ಐದು ಭಾಗಗಳಲ್ಲಿ ಸುಶೋಭಿಸುತ್ತಿವೆ. ಇವುಗಳಲ್ಲಿ ವೀರ ಪೀಠವು ರಂಭಾಪುರಿ ಕ್ಷೇತ್ರದಲ್ಲಿಯೂ, ಸದ್ಧರ್ಮ ಪೀಠವು ಉಜ್ಜಯಿನಿ ಕ್ಷೇತ್ರದಲ್ಲಿಯೂ, ಸೂರ್ಯಪೀಠವು ಶ್ರೀಶೈಲ ಕ್ಷೇತ್ರದಲ್ಲಿಯೂ, ವೈರಾಗ್ಯ ಪೀಠವು ಕೇದಾರ ಕ್ಷೇತ್ರದಲ್ಲಿಯೂ, ಜ್ಞಾನ ಪೀಠವು ಕಾಶೀ ಕ್ಷೇತ್ರದಲ್ಲಿಯೂ ವಿರಾಜಮಾನಗಳಾಗಿವೆ.

ಐದು ಬಗೆಯ ವರ್ತನೆ
ಶ್ರೀ ಜಗದ್ಗುರು ಪಂಚಾಚಾರ್ಯರು ಇಹಪರದಲ್ಲಿ ಮನುಷ್ಯನಿಗೆ ಸುಖಶಾಂತಿಯನ್ನು
ಕೊಡುವ ಐದು ಬಗೆಯ ವರ್ತನೆಯನ್ನು ಅನುಗ್ರಹಿಸಿರುವರು. ಮಾನವನು ಈ ಐದು ಬಗೆಯ ವರ್ತನೆಗಳಿಂದಲೇ ತನ್ನ
ಕಲ್ಯಾಣವನ್ನೇ ಸಾಧಿಸುತ್ತ ಬಂದಿರುವನು.
ವೀರವೃತ್ತಿ, ಧಾರ್ಮಿಕ ವರ್ತನೆ, ವೈರಾಗ್ಯ, ಸಮದೃಷ್ಟಿ (ವಿವೇಕ), ಜ್ಞಾನ ಇವೇ ಐದು ಬಗೆಯ ವರ್ತನೆಗಳು. ಇವು ಪೀಠಾಚಾರ್ಯರಿಂದ ದೊರೆಯುವ ದಿವ್ಯ ಪ್ರಸಾದಗಳು ಮತ್ತು ಮುಕ್ತಿಯನ್ನು ಪಡೆಯುವ ಸಾಧನಗಳು.
ಸದ್ವರ್ತನೆಗೆ ವೀರವೃತ್ತಿ ಬೇಕು. ಆ ವೀರವೃತ್ತಿಯನ್ನು ರಂಭಾಪುರಿ ವೀರ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ರೇಣುಕಾಚಾರ್ಯರಿಂದಲೂ, ಆ ಸದ್ವರ್ತನೆ ನೆಲೆಗೊಳ್ಳಬೇಕಾದರೆ ಧರ್ಮವೃತ್ತಿಬೇಕು ಆ ಧಾರ್ಮಿಕ ವರ್ತನೆಯನ್ನು ಉಜ್ಜಯಿನಿ ಸದ್ಧರ್ಮ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ದಾರುಕಾಚಾರ್ಯರಿಂದಲೂ, ಕ್ಷಣಿಕ ಸುಖಭೋಗಕ್ಕೆ ಮಾರುಹೋಗದೆ ಜಗತ್ತನ್ನು ಶಿವಮಯವಾದದ್ದೆಂದು ತಿಳಿದು ಪರಮಾತ್ಮನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸಲು ವೈರಾಗ್ಯವೃತ್ತಿ ಬೇಕು. ಈ ವೈರಾಗ್ಯ ವೃತ್ತಿಯನ್ನು ಕೇದಾರ ವೈರಾಗ್ಯ ಸಿಂಹಾಸನ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರಿಂದಲೂ, ಈ ಮೂರರ ಪ್ರಭಾವದಿಂದ ವಿವೇಕವುಂಟಾಗಿ ಸೂರ್ಯನಂಥ ಸಮದೃಷ್ಟಿವುಂಟಾಗುವುದು. ಈ ಸಮದೃಷ್ಟಿಯನ್ನು ಶ್ರೀಶೈಲ ಸೂರ್ಯಸಿಂಹಾಸನ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಪಂಡಿತಾರಾಧ್ಯರಿಂದಲೂ, ಮೇಲ್ಕಂಡ ನಾಲ್ಕರ ಪ್ರಭಾವದಿಂದಲೇ ಪರಿಪೂರ್ಣ ಅರಿವು, ದಿವ್ಯ ಜ್ಞಾನವುಂಟಾಗುವುದು ಈ ಜ್ಞಾನವನ್ನು ಶ್ರೀ ಜಗದ್ಗುರು ಕಾಶೀ ಜ್ಞಾನ ಪೀಠಾಧಿಪತಿಗಳಾದ ವಿಶ್ವಾರಾಧ್ಯರಿಂದಲೂ ಪಡೆಯಬೇಕಾಗಿದೆ. ಈ ಐದುಬಗೆಯ ವರ್ತನೆಗಳು ನಮ್ಮಲ್ಲಿ ಸದಾಕಾಲವೂ ಸ್ಥಿರ ಸ್ಥಿರವಾಗಿ ನೆಲಿಸಲೆಂಬ ಸದಾಶಯದಿಂದಲೇ ಪಂಚ ಪೀಠಾಧಿಪತಿಗಳನ್ನು ಜಗದ್ಗುರುಗಳೆಂದು ನಾವು ಆರಾಧಿಸುತ್ತ ಗೌರವಿಸುತ್ತ ಬಂದಿರುವೆವು.
ಈ ಮಹಾಚಾರ್ಯರ ಗುರುಪೀಠಗಳ ಗುರುಪರಂಪರೆಯು ಕೃತಯುಗದ ಆರಂಭದಿಂದ ಇಂದಿನವರೆಗೂ ಓತಪ್ರೋತವಾಗಿ ಸಾಗಿಬಂದಿರುವುದುಸರ್ವರಿಗೂ ಪ್ರತ್ಯಕ್ಷವೇ ಇದೆ.
ಶಿವಾಜ್ಞೆಯಂತೆ, ಈ ಪೂಜ್ಯಪಾದರು ಭೂಲೋಕದಲ್ಲಿ ಅವತರಿಸಿ ಭೂಮಂಡಲವನ್ನು ಶಿವಮಯವನ್ನಾಗಿ ಮಾಡಿದವರು ಈ ಮಹಾಚಾರ್ಯರು ನಾಸ್ತಿಕ ಮತಗಳನ್ನು ಖಂಡಿಸುತ್ತ ಶಿವನೇ ಸರ್ವೋತ್ತಮನೆಂದೂ, ಶಿವನಿಗಿಂತ ಶ್ರೇಷ್ಠವಾದ ವಸ್ತು ಈ ಜಗತ್ತಿನಲ್ಲಿ ಬೇರೊಂದಿಲ್ಲವೆಂದೂ, ಈ ಆಗಾಧ ಪ್ರಪಂಚವು ಶಿವನಿಂದಲೇ ಉತ್ಪನ್ನವಾಯಿತೆಂದೂ, ಪ್ರತಿಯೊಬ್ಬರೂ ಶಿವನ ಪೂಜಾ ಧ್ಯಾನಾದಿಗಳಿಂದ ಕೈವಲ್ಯ ಪದವಿಯನ್ನು ಪಡೆಯಬೇಕೆಂದೂ ಬೋಧಿಸುತ್ತ ಜಗತ್ತಿನಲ್ಲಿ ಶಿವಭಕ್ತಿ ಬೀಜವನ್ನು ಬಿತ್ತಿದವರು. ಭರತ ಖಂಡದಲ್ಲಿರುವ ಪ್ರತಿಯೊಂದು ಗ್ರಾಮ ಪಟ್ಟಣಗಳಲ್ಲಿಯ ಶಿವಮಂದಿರಗಳೇ ಕಾಣುತ್ತಿವೆ. ಆದುದರಿಂದಲೇ ಶೃತಿಗಳೂ ಸಹ ಭಸ್ಮವಿಲ್ಲದ ಹಣೆಗೂ, ಶಿವಾಲಯವಿಲ್ಲದ ಗ್ರಾಮಕ್ಕೂ ಧಿಕ್ಕಾರವಿರಲೆಂದು ಸಾರಿರುವವು.
ಮೂ: ಶ್ರೀ ಪಂ, ವಿರೂಪಾಕ್ಷಶಾಸ್ತ್ರಿಗಳು ಆರಾಧ್ಯಮಠ. ಸುಣಕಲ್ಲಬಿದರಿ

No comments:
Post a Comment
If you have any doubts. please let me know...