ಒಬ್ಬ ಯುವಕ ಕಾಲ್ನಡಿಗೆ ಮೂಲಕ ಇನ್ನೊಂದು ಊರಿಗೆ ತೆರಳುತ್ತಿದ್ದ. ಅಂದಿನ ಕಾಲದಲ್ಲಿ ಸಾರಿಗೆ ಸೌಲಭ್ಯ ಇರಲಿಲ್ಲ. ಸಂಜೆ ಆಯಿತು ಅಭಯಾರಣ್ಯ ತಲುಪುವಷ್ಟರಲ್ಲಿ ಕತ್ತಲೆ ಆಯಿತು. ಆ ಕಾಡು ದಾಟಿದಾಗ ಅವನು ಸೇರಬೇಕಿದ್ದ ಊರು ತಲುಪುತಿದ್ದ. ಆ ಕಾಡು ಪ್ರವೇಶ ಮಾಡಬೇಕು ಅನ್ನುವಷ್ಟರಲ್ಲಿ ಋಷಿಯೊಬ್ಬ ಆ ಯುವಕನನ್ನು ತಡೆದು. ಇದು ಅರಣ್ಯ.ಕಾಡು ಮೃಗ ಗಳಿರುತ್ತವೆ ಬೆಳಗ್ಗೆ ಹೋಗು.ರಾತ್ರಿ ನನ್ನ ಆಶ್ರಮದಲಿ ಮಲಗು ಎಂದ. ಆದರೆ ಯುವಕ ಹೋಗಲೇಬೇಕು ಎಂದು ಹಠ ಮಾಡಿದ. ಎಷ್ಟು ಹೇಳಿದರೂ ಕೇಳದ ಯುವಕನಿಗೆ ಒಂದು ಸಲಹೆ ನೀಡಿದರು ಋಷಿ.
ನಾನು ಎರಡು ವಸ್ತು ನೀಡುವೆ. ಅವೆರಡು ಮುಗಿವಷ್ಟರಲ್ಲಿ ನೀನು ಕಾಡು ದಾಟಬೇಕು. ಸಮಯ ಹಾಳು ಮಾಡಿದರೆ ಭಯಾನಕ ಮೃಗಗಳು ನಿನ್ನ ಮೇಲೆ ಆಕ್ರಮಣ ಮಾಡುತ್ತವೆ ಎಂದು ಹೇಳಿ. ಒಂದು ದೀವಟಿಗೆ ಮತ್ತು ಒಂದು ಎಣ್ಣೆ ತುಂಬಿದ ಡಬ್ಬಿ(ಕ್ಯಾನ್) ನೀಡಿದ. ಯುವಕ ಆ ದಿವಟಿಗೆ ಬೆಳಕಲ್ಲಿ ಕಾಡಿನಲ್ಲಿ ಸಾಗಿದ. ದೂರದಲ್ಲಿ ಒಂದು ಮಿಂಚಿನ ಬೆಳಕು ಕಂಡಿತು ಏನಿರಬಹುದು ದು ಕುತೂಹಲದಿಂದ ಅತ್ತ ನಡೆದಯುವಕ. ಅಲ್ಲಿ ಚಿನ್ನದ ನಾಣ್ಯಗಳಿದ್ದವು. ಸಂತೋಷದಿಂದ ಎಣಿಸತೊಡಗಿದ. 97 ನಾಣ್ಯಗಳಿದ್ದವು. ತಪ್ಪಾಗಿ ಎಣಿಸಿರಬಹುದು ಎಂದು ಮತ್ತೆ ಎಣಿಸಿದ 98 ಇದ್ದವು ಆದರೂ ಮತ್ತೆ ಎಣಿಸತೊಡಗಿದ ಆಗ 99 ಆದವು .ಮತ್ತೆ ಎಣಿಸಿದ ಸರಿಯಾಗಿ ನೂರು ನಾಣ್ಯಗಳಿದ್ದವು. ಅಷ್ಟರಲಿ ಡಬ್ಬಿಯಲ್ಲಿ ಎಣ್ಣೆ ಮುಗಿದಿತ್ತು. ದೀಪ ನಂದಿತು. ಕಾಡು ಪ್ರಾಣಿಗಳು ಆಕ್ರಮಣ ಮಾಡಿದವು.
ನಮ್ಮ ಜೀವನವು ಹಾಗೆ ಭಗವಂತ ನೀಡಿರುವ ದೇಹ. ಜೀವನದ ಸದುಪಯೋಗ ಮಾಡಿಕೊಳ್ಳಬೇಕು. ಜೀವನ ಎಂಬ ಎಣ್ಣೆ ಮತ್ತು ಜ್ಞಾನ ಎಂಬ ಬೆಳಕು ಇವೆರಡು ಇರುವ ವರೆಗೂ ಸಂಸಾರ ಎಂಬ ಅಭಯಾರಣ್ಯ ದಾಟಬೇಕು. ಚಿನ್ನ ಎಂಬ ದುರಾಸೆ ಎಣಿಸುತ್ತ ಜೀವನ ಹಾಳು ಮಾಡಿಕೊಳ್ಳುವಷ್ಟರಲ್ಲಿ ಮೃತ್ಯುವಿಗೆ ತುತ್ತಾಗುತ್ತೇವೆ.
ಋಷಿ ಎಂದರೆ ಸನ್ಮಾರ್ಗ ತೋರುವ ಗುರುಗಳು. ದೀವಟಿಗೆ ಎಂದರೆ ಜ್ಞಾನ. ಎಣ್ಣೆ ಎಂದರೆ ಜೀವನ. ಋಷಿಗಳ ಮಾತು ಮೀರಿದ ಆ ವ್ಯಕ್ತಿ ಪ್ರಾಣಿಗಳಿಗೆ ತುತ್ತಾದಂತೆ. ಇಲ್ಲಿ ನಾವು ಗುರುಗಳು ತೋರಿದ ಸನ್ಮಾರ್ಗ. ಮರೆತು ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆಸೆ, ಗುರಿ ಜೀವನಕ್ಕೆಬೇಕೆ ಬೇಕು. ಆಸೆ,ಗುರಿ ಇಲ್ಲದ ವ್ಯಕ್ತಿ ಜೀವನದಲಿ ಏನನ್ನೂ ಸಾಧಿಸಲಾಗದು. ಆ ಜ್ಞಾನದ ಬೆಳಕಲ್ಲಿ ಕಾಡು ದಾಟಬೇಕು ಎಂಬ ಆಸೆ ಪಟ್ಟಿದ್ದರೆ ಸುಂದರ ಜೀವನ ಅವನದ್ದಾಗುತ್ತಿತ್ತು. ಆದರೆ ಚಿನ್ನದ ವ್ಯಾಮೊಹ ಎಂಬ ದುರಾಸೆ ಅವನಲಿ ಬಂದಿರುವುದರಿಂದ ಜೀವನ ಹಾಳು ಮಾಡಿಕೊಂಡ.
ಪ್ರತಿಯೊಬ್ಬರಲ್ಲಿ ಆಸೆ ಇರಬೇಕು. ಆದರೆ ದುರಾಸೆ ಇರಬಾರದು ಎಂಬುದು ಈ ಕಥೆಯ ತಾತ್ಪರ್ಯ.
ಮಾನವ ಜನ್ಮ ದೊಡ್ಡದು|
ಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ|
No comments:
Post a Comment
If you have any doubts. please let me know...