October 21, 2024

ವೀರಶೈವ ಪಂಚಪೀಠ ಜಗದ್ಗುರುಗಳ ಸಂಬೋಧನಾ ಸಂಖ್ಯೆ 1008 ರ ಮಹತ್ವ

ವೀರಶೈವ    ಪಂಚಪೀಠದ    ಜಗದ್ಗುರುಗಳ  ಸಂಬಂಧಿತ   ಸಂಬೋಧನಾ   ವಿಶೇಷಣದ  ಮಹತ್ವಪೂಣ೯    ಸಂಖ್ಯೆ   1008  :

1008    ಸಂಖ್ಯೆಯು     ಬಹು     ಪ್ರಮುಖ    ಹಾಗೂ        ಮಹತ್ವದ       ಅಂಶಗಳನ್ನು  ಒಳಗೊಂಡಿದ್ದು ,     ಇದನ್ನು      ಸನಾತನ    ಧರ್ಮದಲ್ಲಿ      ವಿಶೇಷವಾಗಿ      ಪಂಚಪೀಠ ಪರಂಪರೆಯ      ಜಗದ್ಗುರುಗಳಿಗೆ     ಅವರ ಸಂಭೋಧನೆಯಲ್ಲಿ       ಬಳಸುತ್ತಾರೆ.      
ಉದಾಹರಣೆ  :  ಶ್ರೀಮದ್   ಕಾಶಿ   ಜ್ಞಾನ  ಸಿಂಹಾಸನಾಧೀಶ್ವರ    ಶ್ರೀ  ಶ್ರೀ ಶ್ರೀ   1008    ಜಗದ್ಗುರು     ವಿಶ್ವಾರಾಧ್ಯರು  -.......ಇತ್ಯಾದಿ. 

ಪ್ರಮುಖವಾಗಿ     ಇದರ     ಮಹತ್ವವನ್ನು    ತಿಳಿಯಲು    ಅಥವಾ    ಅದರ    ಪೂರ್ಣ   ಸ್ವರೂಪವನ್ನು    ತಿಳಿಯಲು  ಸನಾತನ    ಧರ್ಮದ    ಮೂಲ    ಗುರು    ಪರಂಪರೆಗೆ    ಶರಣು     ಹೋಗಬೇಕಾಗಿರುತ್ತದೆ    ಹಾಗೂ     ಈ     ಸಂಖ್ಯೆಯ      ಮಹತ್ವವು    ಅಥವಾ     ವಿಸ್ತೃತ    ರೂಪವು    ಬೇರೆಡೆ     ಎಲ್ಲಿಯೂ     ಕೂಡ    ದೊರೆಯುವುದಿಲ್ಲ. 
ಸಂಖ್ಯೆ   36 ನ್ನು   28  ರಿಂದ   ಗುಣಿಸುವುದ   ರಿಂದ    ಸಂಖ್ಯೆ   1008  ( 36 x 28  = 1008 )   ಬರುತ್ತದೆ.
ಅಂದರೆ ,   ಇದು   36  ತತ್ವಗಳ   ಆಧಾರದಲ್ಲಿ   28  ಶಿವಾಗಮಗಳನ್ನು    ಸ್ಥಾಪನೆ    ಮಾಡುವ    ಮೂಲಕ   ಸನಾತನ   ಧರ್ಮ  ಸ್ಥಾಪನೆಯನ್ನು    ಮಾಡಿದ   ಜಗದ್ಗುರು    ಪಂಚ    ಆಚಾರ್ಯರ     ಪರಂಪರೆಗೆ    ನಮನಗಳು    ಎನ್ನುವ ಸ್ವರೂಪದಲ್ಲಿ    ಸಾಮಾನ್ಯವಾಗಿ    ಅದನ್ನು    ಬಳಸುವುದು     ಆಗಿರುತ್ತದೆ.    ಅದರಂತೆ ,   ಜಗದ್ಗುರು   ಪಂಚಾಚಾರ್ಯರಿಗೆ   ವಿಶೇಷಣವಾಗಿ   1008   ಸಂಖ್ಯೆಯನ್ನು   ಬಳಸುವುದನ್ನು     ಕಾಣಬಹುದಾಗಿರುತ್ತದೆ.

ಜಗದ್ಗುರು    ಪಂಚಾಚಾರ್ಯ      ಪರಂಪರೆಗೆ    ಬಳಸುವ      ಶ್ಲೋಕ  : 
ಸರ್ವಲೋಕೇಶು    ಸಂಚಾರ್ಯ    ಸ್ಥಾಪಯಿತ್ವಾ   ಶಿವಾಗಮಾನ್ |  -   ಜಗದ್ಗುರುತ್ವಂ    ಆಪನ್ನಮ್    ಜಗದ್ರಕ್ಷಣ    ಕಾರಣಂ || 
ಎಲ್ಲಾ     ಲೋಕಗಳಲ್ಲಿ     ಸಂಚರಿಸುತ್ತಾ ,      ಶಿವಾಗಮಗಳನ್ನು     ಸ್ಥಾಪಿಸುತ್ತಾ ,     ಜಗದ್ಗುರುತ್ವವನ್ನು   ಪ್ರತಿಪಾದಿಸುವ    ತನ್ಮೂಲಕ    ಜಗತ್ತನ್ನು    ರಕ್ಷಣೆ     ಮಾಡುವ    ಪರಂಪರೆ     ಎನ್ನುವುದು      ಇದರ    ಅರ್ಥವು    ಆಗಿರುತ್ತದೆ. 
ಭಾರತ    ದೇಶದಲ್ಲಿ    ವೇದಗಳೇ    ಸರ್ವ   ಶ್ರೇಷ್ಠತೆಯ    ಪ್ರಮಾಣಗಳು     ಆಗಿರುತ್ತವೆ     ಎನ್ನುವ    ಅಭಿಪ್ರಾಯವಿದ್ದರೂ    ಕೂಡ     ವೇದಗಳ     ಭಾಗಗಳಾದ    ಶ್ವೇತಾಶ್ವರ  ,   ಮುಂಡಕ     ಇನ್ನೂ    ಮುಂತಾದ   ಉಪನಿಷತ್ತುಗಳಲ್ಲಿ ,   ನಾಲ್ಕು   ವೇದಗಳು ,   ಅದರ    ಆರು   ಅಂಗಗಳು ,  108. ಉಪನಿಷತ್ತುಗಳು ,  18  ಪುರಾಣಗಳು     ಇವುಗಳನ್ನು " ಅಪರಾ  "   ವಿದ್ಯೆಗಳು    ಎಂದು     ಕರೆದು ,    ಇವೆಲ್ಲದಕ್ಕೂ    ಮಿಗಿಲಾದ     ಹಾಗೂ    ಬಹಳ ಶ್ರೇಷ್ಠವಾದ     " ಪರಾ  " ವಿದ್ಯೆಗಳು    ಇರುತ್ತವೆ    ಎಂಬ    ಸತ್ಯವು     ಪರಿಗಣಿತವಾಗಿದ್ದು ,   ಆ     ಪರಾವಿದ್ಯೆಗಳೇ    ಆಗಮ  ಶಾಸ್ತ್ರಗಳು  ( ಶಿವಾಗಮಗಳು )    ಆಗಿರುತ್ತವೆ    ಎನ್ನುವ  ಪ್ರಮುಖವಾದ     ವಿಚಾರವನ್ನು    ಹಲವಾರು     ಆಗಮಿಕರುಗಳಿಂದ    ಪ್ರತಿಪಾದಿಸಲಾಗಿರುತ್ತದೆ. 

ಪಂಡಿತ    ಕಾಶಿನಾಥ   ಶಾಸ್ತ್ರಿಗಳು    ವ್ಯಾಸರು    ಸ್ಕಂದ   ಪುರಾಣದ    ರಚನೆಯನ್ನು   ಮಾಡುವಾಗ     ಆಗಮಗಳ   ಪ್ರಮಾಣವನ್ನು    ನೀಡಿರುತ್ತಾರೆ   ಎನ್ನುವ     ವಿಚಾರಗಳ     ಸಂಬಂಧಿತ     ಶ್ಲೋಕಗಳ      ಸಂಗ್ರಹವನ್ನು      ಮಾಡಿರುತ್ತಾರೆ.
ವೇದವ್ಯಾಸರಿಂದ       ವಿರಚಿತವಾದ    ಸ್ಕಂದ   ಪುರಾಣವು    ಇತರೆ    ಎಲ್ಲಾ     ಪುರಾಣಗಳಿಗಿಂತ    ಅತ್ಯಂತ   ಬಹಳ    ಪ್ರಾಚೀನವಾಗಿರುವುದು       ಆಗಿರುತ್ತದೆ .     ಈಶ್ವರನ    ಪುತ್ರನಾದಂತಹ     ಸ್ಕಂದ        ಮತ್ತು    ಸರ್ವ   ಪ್ರಥಮ    ಮನ್ವಂತರವಾದ      ಸ್ವಯಂಭುವ     ಮನ್ವಂತರದ      ಮಹರ್ಷಿ    ಪುಲಾಸ್ತ್ಯರ    ಪುತ್ರ     ಅಗಸ್ತ್ಯರ     ನಡುವೆ    ನಡೆಯುವ     ಸಂವಾದವು    ಇದು     ಆಗಿರುತ್ತದೆ.     ಈ     ರೀತಿಯಲ್ಲಿ    ಸನಾತನ    ಧರ್ಮದ     ಮೂಲ    ಆಕರಗಳು    " ಪರಾ "     ವಿದ್ಯೆಗಳು     ಅಥವಾ    ಶಿವಾಗಮಗಳು     ಆಗಿರುತ್ತವೆ. 
ಶಿವಾಗಮಗಳಲ್ಲಿ    ಪೂರ್ವ    ಭಾಗ    ಮತ್ತು    ಉತ್ತರಭಾಗ     ಎನ್ನುವ     ಎರಡು     ಪ್ರಮುಖವಾದ    ಭಾಗಗಳಿದ್ದು ,    ಉತ್ತರ    ಭಾಗವು     ಸಂಪೂರ್ಣವಾಗಿ    ಸನಾತನ    ಧರ್ಮದ     ಮೂಲ    ಗುರು    ಪರಂಪರೆಯಾದ    ವೀರಶೈವ     ಪರಂಪರೆಗೆ     ಸೇರಿರುತ್ತದೆ    ಹಾಗೂ     ಉತ್ತರ    ಭಾಗಕ್ಕೆ   ಆಧಾರವೇ     ಸನಾತನ     ಪಂಚಪೀಠ    ಪರಂಪರೆಯು     ಆಗಿರುತ್ತದೆ. 
" ಪರತ್ಪರರಃ     ಪರಂಪರಾ "    ಎನ್ನುವ     ನಿರುಕ್ತಿಯನ್ನು     ಗಮನಿಸಿದರೆ      " ಪರಾ " ವಿದ್ಯೆಗಳಿಗೆ     ಪರಂಪರೆಯೇ   ಆಧಾರವು     ಆಗಿರುತ್ತದೆ   ಎನ್ನುವುದು    ತುಂಬಾ      ಸ್ಪಷ್ಟವಾಗಿ    ತಿಳಿದು     ಬರುತ್ತದೆ.      ಇಂತಹ    ಸನಾತನ    ಧರ್ಮದ    ಮೂಲ     ಪರಂಪರೆಗೆ    ನಮಿಸುವಾಗ    ಶ್ರೀ  ಶ್ರೀ  ಶ್ರೀ 1008    ಎಂದು    ಬಳಸುವುದು     ಸಾಮಾನ್ಯವು   ಆಗಿರುತ್ತದೆ. 
ಅದರಂತೆಯೇ ,   108 ( 36x3=108 )   ಸಂಖ್ಯೆಯು    36  ತತ್ವಗಳಿಂದ    ಸ್ಥೂಲ ,   ಸೂಕ್ಷ್ಮ    ಮತ್ತು    ಕಾರಣ     ಎಂಬ     ಮೂರು  (3)     ಶರೀರಗಳನ್ನು    ಹೊಂದಿರುವ       ಪಿಂಡಾಡ     ಅಥವಾ     ನಮ್ಮ   ಪೂರ್ಣತೆಯನ್ನು    ಪ್ರತಿಪಾದಿಸಿದರೆ ,   1008     ಸಂಖ್ಯೆಯು     ಬ್ರಹ್ಮಾಂಡವನ್ನು    ಮತ್ತು     ವಿಶ್ವದ      ಪೂರ್ಣತೆಯನ್ನು    ಪ್ರತಿಪಾದಿಸುವ     ಪರಿಪೂಣ೯     ಸಂಖ್ಯೆಯು     ಆಗಿರುತ್ತದೆ.   
ಶಿವಾಗಮಗಲ್ಲಿನ     ಹಲವು      ಆಗಮಗಳು     ಶ್ರೀಮದ್   ಉಜ್ಜೈನಿ    ಪೀಠದಲ್ಲಿ    ಸಂರಕ್ಷಿಸಲ್ಪಟ್ಟಿದ್ದು ,   ಶ್ರೀಮದ್     ಕಾಶಿ    ಜಗದ್ಗುರುಗಳ    ನೇತೃತ್ವದಲ್ಲಿ    ಕೆಲವು    ಪ್ರಕಟಗೊಂಡಿರುತ್ತವೆ    ಎಂಬ     ಮಾಹಿತಿಗಳು    ಇರುತ್ತವೆ. 
ಪಂಚಪೀಠ     ಪರಂಪರೆ   ಮತ್ತು    ಶಿವಾಗಮಗಳು    ಸನಾತನ   ಧರ್ಮದ   ಮೂಲ   ಬೇರುಗಳು     ಆಗಿರುತ್ತವೆ.   ಅದರಂತೆ ,    ಇವುಗಳನ್ನು   ಸಂರಕ್ಷಿಸುವುದು    ಪ್ರತಿಯೊಬ್ಬ ಸನಾತನ    ಧರ್ಮೀಯರ  ಆದ್ಯ   ಕರ್ತವ್ಯವೂ    ಕೂಡ ಆಗಿರುತ್ತದೆ.                                        

ಆದಿ    ಶಂಕರಾಚಾರ್ಯರು    ಶ್ರೀ   ಜಗದ್ಗುರು    ರೇವಣಸಿದ್ದರನ್ನು   *" ಕವಯೇ     ಮನೂನಾಮ್ "*    ಅಂದರೆ   14   ಮನ್ವಂತರಗಳ     ಮನುಗಳಿಗೆ     ಧರ್ಮ    ಪ್ರವಾದಿಗಳು    ಎಂದು   ಹೆಸರಿಸಿ    ಕರೆದಿರುವುದನ್ನೂ     ಕೂಡ     ಇದರಲ್ಲಿ    ಸ್ಮರಿಸಬಹುದಾಗಿರುತ್ತದೆ. 
1008   ಸಂಖ್ಯೆಯು    ನಮ್ಮ  ಬ್ರಹ್ಮಾಂಡದ   ಬ್ರಹ್ಮನಾದ  ವಿರುಂಚಿ    ಬ್ರಹ್ಮನ   ಸಂಪೂರ್ಣ     ಸೃಷ್ಟಿಯ    ಕ್ರಮದ    ಸಂಖ್ಯೆಯೂ   ಆಗಿರುತ್ತದೆ.    ಇದು    ಬ್ರಹ್ಮ   ಸೃಷ್ಟಿಯಲ್ಲಿ    ಜಗದ್ಗುರು      ಪಂಚಾಾಚಾರ್ಯರನ್ನು    ಗುರುಗಳಾಗಿ     ಉಪದೇಶವನ್ನು    ಸ್ವೀಕರಿಸಿದರು    ಎನ್ನುವುದಕ್ಕೂ    ಕೂಡ   ಸಾಕ್ಷಿಯು     ಆಗಿರುತ್ತದೆ.    ಈ    ಸಂಬಂಧಿತ    ಉಲ್ಲೇಖಿತವು     ಸಾಂಬ    ಪುರಾಣ    ಕೂಷ್ಮಾಂಡ    ರುದ್ರಾಧ್ಯಾಯದ    ಪಂಚಮೋತ್ಪತ್ತಿ     ಪ್ರಕರಣದಲ್ಲಿ    ಬರುತ್ತದೆ. 
ಚತುಮು೯ಖ     ಬ್ರಹ್ಮರು      ಜಗದ್ಗುರು ಪಂಚಾಚಾರ್ಯರಿಂದ   36 ತತ್ವಗಳ    ವಿಸ್ತಾರ     ಮಾಡಿ ನೀಡಿದ   28   ತತ್ವಗಳನ್ನು ,  ಅಂದರೆ   1008 ನ್ನು    ಸ್ವೀಕರಿಸಿದಂತೆ   14   ಮನ್ವಂತರಗಳು     ಮತ್ತು   72    ಮಹಾಯುಗಗಳ   ( ಚತುಯು೯ಗಗಳು )   1008  ರೂಪದ    ವಿಶ್ವದ     ಸೃಜನೆಯನ್ನು     ಮಾಡಿರುತ್ತಾರೆ  ಎಂಬ    ತಾಕಿ೯ಕತೆಯು  ವಿಶ್ಲೇಷಕರುಗಳಿಂದ      ಆಗಿರುತ್ತದೆ. 
ಭಾರತೀಯ     ಸಂಸ್ಕೃತಿಯ     ಅನುಸಂಧಾನದಲ್ಲಿನ    ಕಾಲಗಣನೆಯ     ಪ್ರಮುಖ   ಹಾಗೂ    ಮಹತ್ವದ      ಅಂಶಗಳಲ್ಲಿ    ಇರುವಂತೆ ,                  
ಚತುಮು೯ಖ     ಬ್ರಹ್ಮರ    ಒಂದು  (1)    ದಿನದಲ್ಲಿ  ( ಹಗಲು   -   ಜಾಗ್ರತಾವಸ್ಥೆ )    ಹದಿನಾಲ್ಕು  (14 )    ಮನ್ವಂತರಗಳು     ಇರುತ್ತದೆ ,    ಅದು     ಹದಿನಾಲ್ಕು  (14 )   ಇಂದ್ರರ     ಆಳ್ವಿಕೆಯ     ಕಾಲದ   ಅವಧಿಯು    ಆಗಿರುತ್ತದೆ ,  ಇದರ    ಒಟ್ಟಾರೆ   ಗಣನೆಯನ್ನು    ಒಂದು (1)     ಕಲ್ಪವೆಂದು     ಕರೆಯಲಾಗುತ್ತದೆ.    ಒಂದು  (1)    ಮನ್ವಂತರ    ಕಾಲವು  72    ಮಹಾಯುಗಗಳು     ಆಗಿರುತ್ತದೆ.    ಒಂದು (1)    ಮಹಾಯುಗ    ಎಂದರೆ     ಚತುಯು೯ಗಗಳ  ( 4  ಯುಗಗಳು )    ಒಟ್ಟಾರೆಯಾದ     ಕಾಲಗಣನೆಯು     ಆಗಿರುತ್ತದೆ.     ಅದರಂತೆ  ,    ಒಂದು(1)    ಬ್ರಹ್ಮದಿನವು   1008     ಮಹಾಯುಗಗಳು   ( 14 x72 = 1008 )     ಆಗಿರುತ್ತದೆ.    ಅದರಂತೆ ,    ಒಂದು(1)    ಬ್ರಹ್ಮದಿನದ     ಗಣನೆಯನ್ನು      ನಿಣ೯ಯಿಸಿ, ಅದರ  ಪರಿಗಣನೆಯು     ಆಗಿರುತ್ತದೆ.    
ಹಾಗೆಯೇ , ಅದರಷ್ಟೇ      ಕಾಲದ     ಪರಿಮಾಣದ      ಅವಧಿಯು  (1008  ಮಹಾಯುಗಗಳು )    ಒಂದು (1)    ಬ್ರಹ್ಮರಾತ್ರಿಯೂ ( ಸುಪ್ತಾವಸ್ಥೆ )      ಕೂಡ     ಆಗಿರುತ್ತದೆ     ಎಂದು      ಪರಿಗಣನೆಯು      ಆಗಿರುತ್ತದೆ.

ಜೈನ ,    ಬೌದ್ಧ   ಧಮ೯ಗಳೂ     ಕೂಡ    1008    ಸಂಖ್ಯೆಯನ್ನು      ಎರವಲು    ರೂಪದಲ್ಲಿ     ಪಡೆದಿರುತ್ತವೆ       ಹಾಗೂ     ಅದರಂತೆಯೇ ,     ಪ್ರಸ್ತುತದಲ್ಲಿ    ಹಲವರು ಗಳು   1008    ಸಂಖ್ಯೆಯನ್ನು     ಎರವಲು   ರೂಪದಲ್ಲಿ     ಪಡೆದು ,      ಜಗದ್ಗುರು     ಎನ್ನುವ       ಪದದಂತೆಯೇ      ಇದನ್ನೂ    ಒಂದು    ಸಂಖ್ಯೆಯಂತೆ     ಎಲ್ಲರೂ    ಕೂಡ     ಬಳಸುವುದನ್ನು       ಕಾಣಬಹುದಾಗಿರುತ್ತದೆ.
ಕೃಪೆ: ವಿಶ್ವ ಶೇಖರ ಜಂಗಮ( ಚಂದ್ರಶೇಖರ)

No comments:

Post a Comment

If you have any doubts. please let me know...