ಉಪದೇಶವಿಲ್ಲದ ವಿದ್ಯೆ
ಛಾಂದೋಗ್ಯ ಉಪನಿಷತ್ತಿನ ಏಳನೆಯ ಖಂಡದಲ್ಲಿ ಒಂದು ಜಿಜ್ಞಾಸೆಗೆ ಸಂಬಂಧಿಸಿದ ಕಥೆ ಬರುತ್ತದೆ. ಅಧೀಹಿ ಭಗವಃ ಸೋಪಸಸಾದ ಸನತ್ಕುಮಾರಂ ನಾರದಸ್ತಂ | ಛಾಂದೋಗ್ಯ ಉಪನಿಷತ್ತು 7 : 1 : 1
ಒಮ್ಮೆ ನಾರದರಿಗೆ ತಾನು ಎಲ್ಲವನ್ನೂ ಕಲಿತೆ ಆದರೆ ಕಲಿತ ವಿದ್ಯೆಗಳ ಅರ್ಥದ ಉಪದೇಶವೇ ಆಗಿಲ್ಲ ನನ್ನ ನಿರಂತರ ಕಲಿಕೆಗೆ ಯಾವುದೇ ಬೆಲೆ ಇಲ್ಲ ಎನ್ನುವ ಭಾವ ಕಾಡುತ್ತದೆ. ಯಾರನ್ನು ಕೇಳಲಿ ಎಂದು ಯೋಚಿಸುತ್ತಿರುವಾಗ ಸನತ್ಕುಮಾರರ ನೆನಪಾಗುತ್ತದೆ. ಸನತ್ಕುಮಾರರ ಬಳಿ ಹೋಗಿ ತನಗೆ ತತ್ವೋಪದೇಶವಾಗಿಲ್ಲ, ತಾನು ಕಲಿತ ವಿದ್ಯೆಗಳ ಮಹತ್ವ ಇನ್ನೂ ತಿಳಿದಿಲ್ಲ ಆದುದರಿಂದ ತನಗೆ ತತ್ವಾರ್ಥ ಉಪದೇಶ ಮಾಡಿ ಎಂದು ಪ್ರಾರ್ಥಿಸುತ್ತಾರೆ. ಆಗ ಸನತ್ಕುಮಾರರು ನೀನು ಏನೆಲ್ಲಾ ಕಲಿತಿದ್ದೆ ಮತ್ತು ತಿಳಿದಿದ್ದೆ ಎನ್ನುವುದನ್ನು ಹೇಳು. ಅದಕ್ಕಿಂತಲೂ ಹೆಚ್ಚಿನದನ್ನು ಉಪದೇಶಿಸುತ್ತೇನೆ ಎನ್ನುತ್ತಾರೆ. ಆಗ ನಾರದರು ಋಗ್ವೇದಂ ಭಗವೋಧ್ಯೇಮಿ ಸಾಮವೇದಮಾಥರ್ವಣಂ ಛಾಂದೋಗ್ಯ ಉಪನಿಷತ್ತು 7 : 1 : 2
ಋಗ್ವೇದವೇ ಮೊದಲಾದ ನಾಲ್ಕು ವೇದಗಳು, ಇತಿಹಾಸ, ಪುರಾಣಗಳು, ನ್ಯಾಯ ಹೀಗೆ ಎಲ್ಲವನ್ನೂ ತಿಳಿದಿದ್ದೇನೆ ಆದರೆ ನಾನು ಆಯಾ ಶಾಸ್ತ್ರಗಳಲ್ಲಿನ ಮಂತ್ರೋಚ್ಚಾರಣೆ ಗೊತ್ತು ಆದರೆ ಅವುಗಳ ಅರ್ಥ ಗೊತ್ತಿಲ್ಲ. ಮಂತ್ರವಿದೇವಾಸ್ಮಿ ನಾತ್ಮವಿಚ್ಛ್ರುತಂ ಎನ್ನುತ್ತಾರೆ. ಆತ್ಮಜ್ಞಾನವಿಲ್ಲ ವಿದ್ಯೆಯಿಂದ ಯಾವ ಪ್ರಯೋಜನವೂ ಇಲ್ಲ. ಅದರಿಂದ ಸಂಸಾರ ಬಂಧನದಿಂದಲೂ ಮುಕ್ತಿಯಿಲ್ಲ ಎನ್ನುವುದನ್ನು ಕೇಳಿದ್ದೇನೆ ಎನ್ನುತ್ತಾರೆ. ಮುಂದೆ ನಾರದರಿಗೆ ಉಪದೇಶ ಸಿಗುತ್ತದೆ. ಆದರೆ ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕಾಗುತ್ತದೆ. ಯಾಕೆ ಅರ್ಥವಾಗುವುದಿಲ್ಲ ಎಂದರೆ ಮಂತ್ರೋಚ್ಚಾರಣೆಯ ಕ್ರಮ ಬೇರೆ ಅರ್ಥಮಾಡಿಕೊಳ್ಳುವ ಕ್ರಮವೇ ಬೇರೆ.
ಇನ್ನು ಮುಂದೆ ಉಳಿದ ವಿದ್ಯೆಗೂ ಹೇಳುತ್ತಾ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಇಚ್ಚೆ ಇದ್ದವರು ಕಲಿತರೆ ಬಹಳ ಒಳ್ಳೆಯದು. ಆದರೂ ವಿದಯೆ ಕಲಿಯಬೇಕು ಎನ್ನುತ್ತಾರೆ.
ಇನ್ನು ವಿದ್ಯೆ ಕಲಿಯುವ ವಿದ್ಯಾರ್ಥಿಯು ಹೇಗಿರಬೇಕು ಎನ್ನುವುದನ್ನು ಋಗ್ವೇದ ಒಂದನೇ ಮಂಡಲದ ೧೬೪ನೇ ಸೂಕ್ತದಲ್ಲಿ
ಅಚಿಕಿತ್ವಾಞ್ಚಿಕಿತುಷಶ್ಚಿದತ್ರ ಕವೀನ್ಪ್ರಚ್ಛಾಮಿ ವಿದ್ಮನೇ ನ ವಿದ್ವಾನ್ |
ವಿ ಯಸ್ತಸ್ತಂಭ ಷಳಿಮಾ ರಜಾಂಸ್ಯಜಸ್ಯ ರೂಪೇ ಕಿಮಪಿ ಸ್ವಿದೇಕಂ ||
ವಿನಯವಿಲ್ಲದೇ ವಿದ್ಯೆ ಬರುವುದಿಲ್ಲ ಎನ್ನುವುದಕ್ಕೆ ಈ ಋಕ್ಕು ಬಹಳ ಮುಖ್ಯವೆನ್ನಿಸುತ್ತದೆ. ಇದರಲ್ಲಿ ಮೊದಲನೆಯದಾಗಿ ಜ್ಞಾನ ವಿಹೀನನಿಗೆ ಉಪದೇಶಮಾಡಬಾರದು ಮತ್ತು ವಿದ್ಯೆಯನ್ನು ಕಲಿ ಎಂದು ಒತ್ತಾಯಿಸಬಾರದು. ಇನ್ನೊಂದು ಸ್ವ ಪ್ರಯತ್ನ ಮತ್ತು ಕಲಿಯ ಬೇಕು ಎನ್ನುವ ಉತ್ಕಟವಾದ ಅಭಿಲಾಶೆ ಇದ್ದವರಿಗೆ ಮಾತ್ರವೇ ವಿದ್ಯೆಯನ್ನು ಹೇಳಿಕೊಡಬೇಕು ಮತ್ತು ಅವರು ಕಲಿಯುತ್ತಾರೆ ಎನ್ನಲಾಗಿದೆ. ಅನಾಸಕ್ತರಿಗೆ ಜ್ಞಾನವಿಹೀನರಿಗೆ ಕಲಿಸಬಾರದು ಎನ್ನುವ ಈ ಋಕ್ಕುಗಳನ್ನು ಮುಂದೊಮ್ಮೆ ವಿವರಿಸುವೆ. ಆದರೆ ಹಿಂದೆ ಭಾರತದಲ್ಲಿ ಇದ್ದ ಶಿಕ್ಷಣ ಪದ್ಧತಿ ಅದೇ ಆಗಿತ್ತು. ಶಿಕ್ಷಣ ಕೆಲವರ ಸೊತ್ತು ಮಾತ್ರ ಎಂದು ಬೊಬ್ಬಿಡುವ ಮಂದಿ ತಾವಾಗಿ ಕಲಿಯಲು ಪ್ರಯತ್ನಿಸುವುದಿಲ್ಲ ಮತ್ತು ಕಲಿತದ್ದನ್ನು ಅರ್ಥೈಸಿಕೊಳ್ಳುವುದರಲ್ಲೂ ವಿಪರೀತಾರ್ಥ ಮಾಡುತ್ತಾರೆ. ವಿದ್ಯೆಯ ಸದುಪಯೋಗದಿಂದ ದೇಶದ ಅಭಿವೃದ್ಧಿ ಸಾಧ್ಯ.
#ಪ್ರಾಚೀನ_ಕಲಿಕೆ
ಮೂಲ: ಸದ್ಯೋಜಾತರು
No comments:
Post a Comment
If you have any doubts. please let me know...