February 12, 2022

ಸಂಸ್ಕೃತ ವರ್ಣಮಾಲೆಯ ಎಲ್ಲಾ 33 ವ್ಯಂಜನಾಕ್ಷರಗಳನ್ನೂ ಬಳಸಿದ ಶ್ಲೋಕ

*ವಿಶ್ವದಲ್ಲೇ ಅತ್ಯಂತ ಸಮೃದ್ಧ ಭಾಷೆ ಸಂಸ್ಕೃತ*

ಇಂಗ್ಲೀಷ್ ಭಾಷೆಯಲ್ಲಿ ಒಂದು ಪ್ರಸಿದ್ಧ ವಾಕ್ಯ ಹೀಗಿದೆ :
*THE QUICK BROWN FOX JUMPS OVER A LAZY DOG*
ಈ ವಾಕ್ಯವು ಇಂಗ್ಲೀಷ್ ಭಾಷೆಯ ಎಲ್ಲಾ ಅಕ್ಷರಗಳನ್ನೂ ಒಳಗೊಂಡಿದೆ. ಇಂಗ್ಲೀಷ್ ಭಾಷೆಯಲ್ಲಿರುವುದು 26 ಅಕ್ಷರಗಳು ಮಾತ್ರ. ಆದರೆ, ಈಮೇಲಿನ ವಾಕ್ಯದಲ್ಲಿ ಒಟ್ಟು 33 ಅಕ್ಷರಗಳನ್ನು ಬಳಸಲಾಗಿದೆ. ಅಂದರೆ, ನಾಲ್ಕು ಬಾರಿ *O* ಮತ್ತು *A* *E* *U* *R* ಅಕ್ಷರಗಳನ್ನು ತಲಾ ಎರಡು ಬಾರಿ ಬಳಸಲಾಗಿದೆ. ಇಷ್ಟೇ ಅಲ್ಲ, ಈ ವಾಕ್ಯದಲ್ಲಿ ಅಕ್ಷರಗಳನ್ನು ಕ್ರಮಶಃ A ಯಿಂದ Z ವರೆಗೆ ಬಳಸಲಿಲ್ಲ. ವಾಕ್ಯವು T ಯಿಂದ ಆರಂಭಗೊಂಡು G ಯಲ್ಲಿ ಕೊನೆಗೊಳ್ಳುತ್ತದೆ.
ಈಗ ಸಂಸ್ಕೃತದ ಈ ಕೆಳಗಿನ ಶ್ಲೋಕವನ್ನು ನೋಡಿ..

*क:खगीघाङ्चिच्छौजाझाञ्ज्ञोटौठीडढण:।*
*तथोदधीन पफर्बाभीर्मयोरिल्वाशिषां सह॥*

*(ಕಃಖಗೀಘಾಙ್-ಚಿಚ್ಛೌಜಾಝಾಞ್-ಜ್ಞೋಟೌಠೀಡಢಣಃ*
*ತಥೋದಧೀನ ಪಫರ್ಬಾಭೀರ್ಮಯೋರಿಲ್ವಾಶಿಷಾಂ ಸಹ)*

ಬಹುಶಃ ಈ ಶ್ಲೋಕವನ್ನು ಉಚ್ಚರಿಸಲು ಕಷ್ಟವಾಗಬಹುದು. ಆದರೆ, ಇದು ಅರ್ಥಬದ್ಧವಾದ ಒಂದು ಶ್ಲೋಕ. ಮೊದಲು ಈ ಶ್ಲೋಕವನ್ನು ರಚಿಸಿದ ಕವಿಗೆ ಒಂದು ದೀರ್ಘ ನಮಸ್ಕಾರ.

ಅರ್ಥ – ಪಕ್ಷಿಪ್ರೇಮಿ ಎನಿಸಿಕೊಂಡ, ಶುದ್ಧಬುದ್ಧಿಯ, ಇತರರ ಬಲವನ್ನು ಅಪಹರಿಸುವುದರಲ್ಲಿ ಪಾರಂಗತನೂ, ಶತ್ರುಗಳ ಸಂಹಾರದಲ್ಲಿ ಅಗ್ರಣಿಯೂ, ನಿಶ್ಚಲ ಮನಸ್ಸನ್ನು ಹೊಂದಿರುವವನೂ ಮತ್ತು ಭಯವೇ ಇಲ್ಲದವನೂ ಹಾಗೂ ಮಹಾಸಾಗರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದವನು ಯಾರು ? ಅವನೇ *ಮಯ* ಎಂಬ ಹೆಸರಿನ ರಾಜ. ಇವನಿಗೆ ಶತ್ರುಗಳ ಆಶೀರ್ವಾದವೂ ಲಭಿಸಿದೆ ಎಂದರೆ, ಅವನ ಪರಾಕ್ರಮ ಎಷ್ಟಿರಬಹುದು..?

ಈ ಶ್ಲೋಕದಲ್ಲಿ ಸಂಸ್ಕೃತ ವರ್ಣಮಾಲೆಯ ಎಲ್ಲಾ 33 ವ್ಯಂಜನಾಕ್ಷರಗಳೂ ಇವೆ. ಅದೂ ಕ್ರಮಬದ್ಧವಾಗಿ. ಯಾವುದೇ ಅಕ್ಷರವು ಪುನರಾವರ್ತನೆಗೊಂಡಿಲ್ಲ. ಇದು ಸಂಸ್ಕೃತದಲ್ಲಿ ಮಾತ್ರವೇ ಸಾಧ್ಯ. ವಿಶ್ವದ ಯಾವ ಭಾಷೆಯಲ್ಲೂ ಇಂತಹ ರಚನೆ ಇದುವರೆಗೆ ಕಂಡುಬಂದಿಲ್ಲ.

No comments:

Post a Comment

If you have any doubts. please let me know...