July 9, 2025

ಗುರುಪೂರ್ಣಿಮ ಮಹತ್ವ

ಗುರುಪೂರ್ಣಿಮೆ ಎಂದರೇನು?
ಗುರು,ಸದ್ಗುರು,ಜಗದ್ಗುರುವನ್ನು ಸ್ಮರಿಸಿ, ಧ್ಯಾನಿಸಿ, ಪೂಜಿಸಿ ಗುರುವಂದನೆಯನ್ನು ಮಾಡುವುದೇ ಗುರುಪೂರ್ಣಿಮೆ.
ಪೂರ್ಣಿಮೆಯ ದಿವಸ (ಗ್ರೀಷ್ಮ ಋತು ಆಶಾಡ ಮಾಸದ ಶುದ್ಧ ಪೂರ್ಣಿಮೆ ದೇವಾನು ದೇವತೆಗಳು ತಮ್ಮ ಗುರುಗಳನ್ನು ಪೂಜಿಸುವ ದಿವಸ, 
ಉದಾಹರಣೆಗೆ ಶ್ರೀರಾಮನು ವಿಶ್ವಾಮಿತ್ರರನ್ನು, ಶ್ರೀಕೃಷ್ಣನು ಸಾಂದೀಪಿನಿಯವರನ್ನು, ಶ್ರೀವಿಷ್ಣುವು ಮೃಗು ಮಹರ್ಷಿಗಳನ್ನು ದೇವಾನು ದೇವತೆಗಳು ಬೃಹಸ್ಪತಿಗಳನ್ನು ಪೂಜಿಸುತ್ತಾರೆ, ಆ ದಿವಸ ವ್ಯಾಸಪೂರ್ಣಮಿ ಅಥವಾ ಗುರುಪೂರ್ಣಿಮಿ.

ಗುರುಪೂರ್ಣಿಮ ಮಹತ್ವ
ಗುರುಗಳಿಗೆ ಈ ಕೆಳಕಂಡ ರೀತಿಯಲ್ಲಿ ತಪ್ಪುಮಾಡಿದ್ದರೆ:-
1. ಗುರುಗಳನ್ನು ಬೈದಿದ್ದರೆ ಹಾಗೂ ಗುರುಗಳ ಸ್ಥಾನಮಾನ ಕೀರ್ತಿಗೆ ಕಳಂಕ ತಂದಿದ್ದರೆ,
2. ಗುರುಗಳ ಎದುರುನಿಂತು ಅಥವಾ ಬೇರೆಯವರ ಮುಂದೆ ಅವಮಾನ ಮಾಡಿದ್ದರೆ,
3. ಗುರುಗಳ ವಚನವನ್ನು ಅಗೌರವದಿಂದ ತಿರಸ್ಕಾರ ಮಾಡಿದ್ದರೆ,
4. ಗುರುಗಳ ಬಗ್ಗೆ ಅಪಪ್ರಚಾರಮಾಡಿದ್ದರೆ ಅಥವಾ ಅನುಮಾನದಿಂದ-ಸಂಶಯದಿಂದ ನೋಡಿದ್ದರೆ,
5. ಗುರುಗಳ ಬಗ್ಗೆ ಪರೀಕ್ಷೆ ನಡೆಸಿದ್ದರೆ,
6. ಗುರುಗಳ ಸ್ಥಾನಮಾನಗಳಿಗೆ ಕಳಂಕವನ್ನು ತಂದಿದ್ದರೆ,
7. ಗುರುಗಳ ವಸ್ತ್ರ, ಪುಸ್ತಕ, ಇನ್ನಿತರ ವಸ್ತುಗಳನ್ನು ಕದ್ದಿದ್ದರೆ,
8. ಗುರುಗಳ ಪತ್ನಿ, ಪುತ್ರ, ಪುತ್ರಿಯರನ್ನು ಕಾಮದೃಷ್ಠಿಯಿಂದ ನೋಡಿದ್ದರೆ, ನಿಂದಿಸಿದರೆ,
9. ಗುರುಗಳ ಮನೆಯಲ್ಲಿ ಕಳ್ಳತನಮಾಡಿದ್ದರೆ, ಅನಗತ್ಯ ತರ್ಕವನ್ನು ಮಾಡಿದ್ದರೆ,
10, ಗುರುಗಳ ಅಪ್ಪಣೆಯಿಲ್ಲದೆ ವಿದ್ಯೆ ಕಲಿಸಿದ್ದರೆ-ಮಾರಾಟ ಮಾಡಿದ್ದರೆ
11, ಗುರುಗಳಿಗೆ ದುಃಖಕ್ಕೀಡು ಮಾಡಿದ್ದರೆ,
12, ಗುರುಗಳಿಗೆ ಹೊಡೆದಿದ್ದರೆ, ರಹಸ್ಯ-ಗುಪ್ತ ವಿಚಾರಗಳನ್ನು ಬೇರೆಯವರಿಗೆ ತಿಳಿಸಿದ್ದರೆ,
13. ಗುರುಗಳಿಗೆ ಆಶ್ರಮದಿಂದ ಹೂರ ಹಾಕಿದ್ದರೆ, ಅವರ ಮೃತ್ಯುವಿಗೆ ಕಾರಣವಾಗಿದ್ದರೆ,
14. ಗುರುಗಳ ಕೈಲಿ ನಮಸ್ಕಾರ ಮಾಡಿಸಿಕೂಂಡರೆ, ಕೆಲಸ ಮಾಡಿಸಿಕೂಂಡಿದ್ದರೆ,
15.‌ ಗುರುಗಳಿಗೆ ಎಂಜಲು ತಿನ್ನಿಸಿದ್ದರೆ, ಉಗುಳಿದ್ದರೆ, ಮಾಟ ಮಂತ್ರ ಮಾಡಿಸಿ ತೊಂದರೆ ಕೊಟ್ಟಿದ್ದರೆ,
ಮೇಲ್ಕಂಡ ಯಾವುದೇ ತಪ್ಪುಗಳನ್ನು ಈ ಜನ್ಮ ಅಥವಾ ಹಿಂದಿನ ಜನ್ಮಗಳಲ್ಲಿ ಮಾಡಿದ್ದರೆ ಅಂತಹವರು ಅವಿದ್ಯಾವಂತರಾಗಿ, ಗುರು ಚಾಂಡಾಲದೋಷ  ಸಹಿತರಾಗಿ, ರಾಹು ಚಂಡಾಲ ದೋಷ ಸಹಿತರಾಗಿ ಪ್ರಾಣಿ ಜನ್ಮ ಪಡೆಯುತ್ತಾರೆಂದು ಗರ್ಗ ಸಂಹಿತೆ, ಭವಿಷ್ಯತ್ ಪುರಾಣ, ಶ್ರೀ ದತ್ತಾತ್ರೇಯ ಕಾತ್ಯವೀರ್ಯಾರ್ಜುನ ಸಂವಾದ, ಅವಧೂತ ಗೀತೆ, ಗುರುಗೀತೆ, ಸಿದ್ದನಾಗಾರ್ಜುನ ತಂತ್ರಸಾರ, ಶ್ರೀ ದತ್ತಾತ್ರೇಯ ಸಂಹಿತೆ, ಮತ್ತು ಗರುಡ ಪುರಾಣದಲ್ಲಿ ಉಲ್ಲೇಖವಿದೆ.
ಈ ಎಲ್ಲಾ ದೋಷಗಳನ್ನು ಪರಿಹರಿಸಿಕೊಳ್ಳಲು ಬರುವ ಒಂದು ವಿಶೇಷ ದಿನವೇ ಗುರುಪೂರ್ಣಿಮಿ.

ಗುರು 
ಇಂದಿನ ದಿನಗಳಲ್ಲಿ ಸಾವಿರಾರು ವಿದ್ಯೆಗಳಿವೆ ಅಂತಹ ಸಾವಿರಾರು ವಿದ್ಯೆಗಳಲ್ಲಿ ಬದುಕಲಿಕ್ಕೆ ಕೆಲವಷ್ಟು ವಿದ್ಯೆಗಳನ್ನು ಕಲಿಯಲೇಬೇಕು. ಅಂತಹ ಸಾವಿರಾರು ವಿದ್ಯೆಗಳನ್ನು ಮುಖ್ಯವಾಗಿ ೬೪ ವಿದ್ಯೆ ಎಂದು ಹೇಳುತ್ತಿದ್ದರು ‌ ಆದರೆ ಈ ೬೪ ವಿದ್ಯೆಗಳಿಂದ ಈಗ ಏನೂ ಮಾಡಲಾಗುವುದಿಲ್ಲ ..
ಇರಲಿ ಅಂತಹ ವಿದ್ಯೆಗಳಿಗಲ್ಲಿ ಪರಿಣಿತರಾದ ಗುರುಗಳು
ಉದಾ: ಧನುರ್ವಿದ್ಯೆ ಕಲಿತು ಕೊಳ್ಳುವ ವಿದ್ಯಾರ್ಥಿಗೆ ಆ ವಿದ್ಯೆಯನ್ನು ಕಲಿಸುವ ಗುರು ಅವನಿಗೆ ಸರ್ವಸ್ವ ಆ ಗುರುವೇ ಎಲ್ಲಾ, ಆದರೆ ಮಲ್ಲ ಯುದ್ಧ ಅಥವಾ ಕುದುರೆ ಸಮಾರಿ ಮಾಡಿಸುವ ಗುರು ಧನುರ್ವದ್ಯೆ ಕಲಿಯುವವನಿಗೆ  ಹೇಗೆ ಗುರುವಾದಾನು. ಅಥವಾ ವಾಹನ ಚಾಲಕ ತರಬೇತಿ ನೀಡುವ ಗುರು ಶಾಲೆಯಲ್ಲಿ ಕಲಿಯುವವರಿಗೆ ಹೇಗೆ ಗುರುವಾದಾರು.
ಆಗುವುದಿಲ್ಲ ....

ತಾವು ತರಬೇತಿ ಪಡೆದು ಅಥವಾ ಕಲಿತುಕೊಂಡು  ಇನ್ನೊಬ್ಬರಿಗೆ ತರಬೇತಿ ನೀಡುವ ಎಲ್ಲರೂ ಗೌರವಾನ್ವಿತರೆ ಆದರೂ ಅವರಿಂದ ಪ್ರತ್ಯೇಕ ವಿದ್ಯೆ ಅಥವಾ ವಿದ್ಯೆಗಳನ್ನು ಕಲಿಸುವ ಗುರು ಅಂತಹ ವಿದ್ಯೆಗಳಿಗೆ ಗುರುವಾಗುತ್ತಾರೆ.
ಉದಾ; ಸಮಾಧಿ ತೆಗೆಯುವುದಕ್ಕು ಒಂದು ಲೆಕ್ಕಾಚಾರವಿರುತ್ತದೆ ಜಾಗದ ಆಯ್ಕೆ ಅಳತೆ ಆಳ ಉದ್ದ ಇತ್ಯಾದಿ  ಇಂತಹ ವಿದ್ಯೆಗಳು ಯುವಕರು ಹಿರಿಯರಿಂದ ಹಾಗೆಯೇ ಸಹಾಯ ಮಾಡುತ್ತಾ ಕಲಿಯುತ್ತಾರೆ ..ಅಂದರೆ ಹಿರಿಯರೊಂದಿಗಿನ ಜೀವನೊಡನಾಟದಿಂದ ಬದುಕಿನ ಹಲವಾರು ವಿದ್ಯೆಗಳನ್ನು ಚಿಕ್ಕವಯಸ್ಸಿನ ಸಮಾಜ ಕಲಿಯುತ್ತದೆ. ಅದರಲ್ಲಿ ಅವಶ್ಯಕತೆ ಇದ್ದರೆ ಮಾರ್ಪಾಟು ಮಾಡಿ ಉತ್ತಮವಾಗುವಂತೆ ಮಾಡುತ್ತಾರೆ. ಅದೇ ರೀತಿ ಹೊಸ ಆವಿಷ್ಕಾರ ಮಾಡಿ ತಾವೇ ಸೃಷ್ಟಿಸುತ್ತಾರೆ.
ಉದಾ; ಈಗಿನ ವಾಹನಗಳು, ಸಂಪರ್ಕ ಸಾಧನಗಳು, ಗಣಕ ಯಂತ್ರ ಅಂತರ್ಜಾಲ ಇತ್ಯಾದಿ ...
ಇವುಗಳನ್ನೆಲ್ಲಾ ಉಪಯೋಗ ಮಾಡುವಾಗ ಪ್ರತಿಸಾರಿ ಅವರ ನೆನಪಾಗುತ್ತದೆಯೇ? ಕೆಲಸಾರಿ ನೆನಪಾಗಬಹುದು ಆದರೆ ಎಲ್ಲರೂ ನೆನಪಾಗುವುದಿಲ್ಲ ಅಲ್ಲವೆ!

 ಹೀಗೆ ನಮ್ಮ ಜೀವನದಲ್ಲಿ ಹಲವಾರು ವಿದ್ಯೆಗಳಿಗೆ ಹಲವಾರು ಗುರುಗಳು ಬರುತ್ತಾರೆ. ಅದರಲ್ಲಿ ಯಾವ ವಿದ್ಯೆಯ ಗುರು ಮುಖ್ಯ. ಇದು ಆ ವಿದ್ಯೆಯಾ ವಿದ್ಯೆಗಳನ್ನು ಕಲಿತವರಿಗೆ ಸಂಬಂಧ ಪಟ್ಟಿದ್ದು . ಉದಾ: ಹಲವಾರು ವಿದ್ಯೆಗಳನ್ನು ಕಲಿತವರು ಯಾವುದೊ ಒಂದು ವಿಷಯದಲ್ಲಿ ಅವರ ಸಾಧನೆ ಅಪರಿಮಿತ ಸಾಧನೆ ಆದರೆ ಆಗ ಆ ಸಾಧಕ ತನಗೆ ಆ ನಿರ್ದಿಷ್ಟ ವಿದ್ಯೆಯನ್ನು ಕಳಿಸಿಕೊಟ್ಟ ಗುರುವನ್ನು ಸದಾ ಕಾಲ ನೆನೆಯುತ್ತಾ ಆರಾಧಿಸಲೂ ಬಹುದು. ಇದೇ ಸಾಧಕ ಇತರೆ ಗುರುಗಳನ್ನೂ ಕೂಡ ಮೆಚ್ಚಿಕೊಳ್ಳಬಹುದು ಅದು ಅಂತಹ ವಿದ್ಯೆಯಲ್ಲಿನ ಯಶಸ್ಸನ್ನು ಅವಲಂಬಿಸಿರುತ್ತದೆ.

ಇದೆಲ್ಲಾ ಇಹ ಲೋಕದ ವಿದ್ಯೆಗಳು, ನಮ್ಮ ಜೀವನಕ್ಕೆ ಬೇಕಾದ ನಮ್ಮ ಬದುಕಿನ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕಾದ ವಿದ್ಯೆಗಳು. ಆದರೆ ಇಂತಹ ವಿದ್ಯೆಯ ಅವಕಾಶ ಎಲ್ಲರಿಗೂ ಇರುವುದಿಲ್ಲ. ಕೆಲವರು ಅಂತಹ ವಿದ್ಯೆಯನ್ನು ಕಲಿಸಲು ಹಣ ಪಡೆದು ಕಲಿಸುವರು ಇನ್ನು ಕೆಲವರು ಹಾಗೆಯೇ ಕಲಿಸುವರು. ಹೇಗೋ ಕಲಿತವರ ಜೀವನ ಉಪಯೋಗಿಸಿಕೊಂಡರೆ ಉತ್ತಮವಾಗಬಹುದು.

ಅದೇ ರೀತಿ ಋಣಾತ್ಮಕ ವಿದ್ಯೆಗಳು ಕೂಡ ಇರಬಹುದು  ಉದಾ: ಕಳ್ಳತನ, ಸುಳ್ಳು, ಕೊಲೆ ದರೋಡೆ ಇತ್ಯಾದಿ. ಇವುಗಳಿಗೂ ಗುರುಗಳಿರಬಹುದು ಅವರನ್ನು ಕೂಡ ಅವರ ಶಿಷ್ಯರು ಮೆಚ್ಚಿಕೊಳ್ಳಬಹುದು. ಇದೆಲ್ಲ ಇಹ ಲೋಕಕ್ಕೆ ಬೇಕಾದವು ಆದರೆ ಪರ ಅಂದರೆ ಆಧ್ಯಾತ್ಮಕ್ಕೆ ಅಥವಾ ಆತ್ಮೋನ್ನತಿಗೆ ಗುರು ಬೇಕು. ಹೀಗೆ ವಿದ್ಯೆಗಳು ಅಪಾರ ಹಾಗು ಹೊಸ ಹೊಸ ವಿದ್ಯೆಗಳು ಆವಿಷ್ಕಾರಗಳು ಆಗುತ್ತಿವೆ ಅದೇ ರೀತಿ ಅಪಾರ ಗುರುಗಳು ವಿದ್ಯೆಗಳಿಗೆ ತಕ್ಕಂತೆ. ಗುರುಗಳು ಯೋಗ, ಧ್ಯಾನ, ಸಿದ್ದಿಸಮಾಧಿ ಇತ್ಯಾದಿ ಇತ್ಯಾದಿಗಳನ್ನು ಕಲಿಸಲು ಹಲವಾರು ಗುರುಗಳಿರಬಹುದು ಅಥವಾ ಇವೆಲ್ಲವಕ್ಕು ಒಬ್ಬರೇ ಗುರು ಸಿಗಬಹುದು.

ಧರ್ಮಕ್ಕೊಬ್ಬ ಗುರು ಇದ್ದರೂ ಅಂತಹ ಧರ್ಮ ಗುರು ಹೇಳದ ಬೇರೆ ವಿದ್ಯೆ ಅಥವಾ ವಿದ್ಯೆಗಳನ್ನು ಬೇರೆ ಗುರುಗಳಿಂದ ಕಲಿತರೆ ಅವರೂ ಕೂಡ ಗುರು ಸ್ಥಾನದಲ್ಲಿ ಬರುವುದರಿಂದ ಯಾವುದೇ ಒಂದು ಧರ್ಮ ಅಥವಾ ಧರ್ಮ ಗುರುವಿನಿಂದ ಅಥವಾ  ಇತರೆ ಗುರುವಿನಿಂದ ಪ್ರಪಂಚದ ಎಲ್ಲಾ ವಿದ್ಯೆಗಳನ್ನು ಕಲಿಯಲು ಸಾಧ್ಯವಾಗದೇ ಇರುವುದರಿಂದ ನಾವೆಲ್ಲರೂ ಒಬ್ಬರಿಂದೊಬ್ಬರಿಗೆ ಕಲಿತು ಕಲಿಸಿರುವುದರಿಂದ, ವಿದ್ಯೆಗಳನ್ನು  ಕಲಿಯಲು ಇರುವ ಸಾಮರಸ್ಯ ಜೀವನದ ಪ್ರತಿಹಂತದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಉತ್ಸಾಹ ಸಾಮರಸ್ಯದಿಂದ ಹೋಗುವುದು. ನಾವು ಕಲಿತ ವಿದ್ಯೆಗಳು ಚಿಕ್ಕವರಿಂದ ಹಿಡಿದು ದೊಡ್ಡವರರಿಂದ ಇರಬಹುದು ಯಾವುದೇ ವರ್ಗ ವೃತ್ತಿಯವರಿಂದ ಇರಬಹುದು ಅಂತಹ ಜ್ಞಾನ ವಿದ್ಯೆಗಳನ್ನು ಕಲಿಸಿದ  ಎಲ್ಲಾ ಗುರುಗಳಿಗೆ ವಂದನೆ ಅಭಿನಂದನೆ, ಕೋಟಿ ಪ್ರಣಾಮಗಳು.

No comments:

Post a Comment

If you have any doubts. please let me know...