ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ಭಗವದ್ಗೀತೆ.
“ ಭಗವದ್ಗೀತೆ ಭಾರತದ ಪವಿತ್ರ ಗ್ರಂಥ . ಸಾವಿರಾರು ವರ್ಷಗಳ ಹಿಂದೆಯೇ ಬೆಳಕಿಗೆ ಬಂದ ಕೃತಿ . ದೇಶ ವಿದೇಶಗಳ ತಾರ್ಕಿಕರು , ಪರೀಕ್ಷಕರು , ವಿಜ್ಞಾನಿಗಳು , ಆತ್ಮಜ್ಞಾನಿಗಳು ಅದನ್ನು ಮನಸಾರೆ ಕೊಂಡಾಡಿದ್ದಾರೆ . ಸಾಮಾನ್ಯನಿಗೂ ತಿಳಿಯು ವಂತಹ ಸುಲಭ ಸಂಸ್ಕೃತ ಭಾಷೆ ಯಾವುದೇ ಮತ ಪಂಥಗಳಿಗೆ ಅಂಟಿಕೊಳ್ಳದ ಅಪರೂಪದ ತತ್ವಗಳನ್ನು ಅಹಂಭಾವವಿಲ್ಲದೆ ಆತ್ಮೀಯವಾಗಿ ಹೇಳುವ ಮಮತೆಯ ಮಾತೆಯ ರೀತಿ ” -ಇವೆಲ್ಲವುಗಳಿಂದ ಗ್ರಂಥವು ವಿಶ್ವಮಾನ್ಯವಾಗಿದೆ .
ವ್ಯಕ್ತಿತ್ವ ವಿಕಸನಕ್ಕೆ ( Personality Development ) ಅತ್ಯುತ್ತಮ ಮಾರ್ಗದರ್ಶನ ವೆಂದರೆ ಭಗವದ್ಗೀತೆ , ಇದನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನೇ ಪ್ರಪಂಚ ಕಂಡ ಮೊಟ್ಟಮೊದಲ ವ್ಯಕ್ತಿವಿಕಸನ ತರಬೇತುದಾರ ( HRD- Programmer ) . ತನ್ನ ಆತ್ಮೀಯ ಗೆಳೆಯ ಅರ್ಜುನನಿಗೆ ಗೀತೋಪದೇಶ ಮಾಡುವುದರ ಮೂಲಕ ಶ್ರೀಕೃಷ್ಣ ಮನುಕುಲಕ್ಕೆ ' ಬದುಕುವ ಕಲೆ'ಯ ಸಂದೇಶವನ್ನು ಸಾರಿದ್ದಾನೆ . ಗಾಂಧೀಜಿಯವರು ಒಂದೆಡೆ “ ಭಗವದ್ಗೀತೆ ನನ್ನ ತಾಯಿ : ನಾನು ಏಕಾಂಗಿ ಯಾದಾಗ , ನಿರಾಶೆ ನನ್ನನ್ನು ಮುತ್ತಿಕೊಂಡಾಗ , ಬೆಳಕಿನ ಕಿರಣ ಕಾಣದಾದಾಗ ನಾನು ಗೀತೆಯ ಮೊರೆ ಹೋಗುತ್ತೇನೆ ” ಎಂದು ಹೇಳಿರುವುದು ಮಹತ್ತರವಾದ ವಿಷಯ .
ಭಗವದ್ಗೀತೆಯನ್ನು ಕೇವಲ ಧಾರ್ಮಿಕ ದೃಷ್ಟಿಯಲ್ಲಿ ನೋಡುವ ಬದಲಾಗಿ ಅದನ್ನು ದಾರ್ಶನಿಕ , ಅಧ್ಯಾತ್ಮಿಕ ಚಿಂತನೆಯ ನೆಲೆಗಳಲ್ಲಿ ವಿವೇಚಿಸಿದಾಗ ಅದು ಮನುಕುಲದ ಸಾರ್ವಕಾಲಿಕ ದಾರಿದೀಪ ಎಂಬ ಸತ್ಯ ಸ್ಪಷ್ಟವಾಗುತ್ತದೆ . ಈ ಹಿನ್ನೆಲೆಯಲ್ಲಿಯೇ ಪ್ರಪಂಚದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲಾಗಿದೆ . ವ್ಯವಹಾರ ನಿರ್ವಹಣಾ ಕೌಶಲ್ಯ ( Business Man agement Skil ) ಆಡಳಿತ ಪದಎಗಳಲ್ಲಿ ಗೀತೆಯಲ್ಲಿ ಬರುವ ವ್ಯಕ್ತಿವಿಕಸನದ ಹಲವು ವಿಚಾರಗಳನ್ನು ವಿಶೇಷವಾಗಿ ಬೋಧಿಸಲಾಗುತ್ತಿದೆ . “ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜಲ ಶಲಾಕಯ ' ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಕಳೆಯಲು ಜ್ಞಾನದ ಬೆಳಕನ್ನು ಹುಡುಕಿಕೊಳ್ಳಬೇಕು ಎಂಬುದು ಗೀತೆಯ ಬಹುಮುಖ್ಯ ಸಂದೇಶ . ನಿಜವಾದ ಅರಿವಿನ ದರ್ಶನವಾಗಬೇಕಾದರೆ , ಅಹಂಕಾರ ಎಂಬ ಪೊರೆ ಕಳಚಬೇಕು ಎಂಬ ವ್ಯಕ್ತಿ ವಿಕಸನದ ಮೂಲತತ್ವವನ್ನು ಗೀತೆ ಬೋಧಿಸುತ್ತದೆ . ಯಾರಲ್ಲಿ ಆತ್ಮಜ್ಞಾನದ ಪ್ರಕಾಶ ಬೆಳಗುತ್ತದೆಯೋ ಅಂಥವರಿಗೆ ಕಲ್ಲು , ಮಣ್ಣು , ಚಿನ್ನಗಳಲ್ಲಿ ವ್ಯತ್ಯಾಸ ಕಾಣಿಸುವುದಿಲ್ಲ . ಹಾಗೆಯೇ ಸುಖ-ದುಃಖಗಳನ್ನೂ ಸಮನಾಗಿ ನೋಡುವ ಸ್ಥಿತಪ್ರಜ್ಞತ್ವ ' ಲಭಿಸುತ್ತದೆ .
ವ್ಯಕ್ತಿವಿಕಸನದ ಪ್ರಮುಖ ಅಗತ್ಯವಾದ ಸಮಚಿತ್ತವನ್ನು ಗೀತೆ ಪ್ರಮುಖವಾಗಿ ತಿಳಿಸುತ್ತದೆ ( ಸಮತ್ವಂ ಯೋಗಮುಚ್ಯತೇ -ಭ.ಗೀ .೨ : ೪೮ ) .
ನಾವೇ ನಮ್ಮ ಭವಿಷ್ಯದ ಶಿಲ್ಪಿಗಳು ಧನಾತ್ಮಕವಾಗಿ ಯೋಚಿಸಿ ( Positive thinking ) ಪ್ರಯತ್ನಶೀಲರಾದರೆ ಯಶಸ್ಸು ಸದಾ ನಮ್ಮದಾಗುತ್ತದೆ . ವ್ಯಕ್ತಿತ್ವ ಎಂಬ ಅಂತರಂಗದ ಶಕ್ತಿ ವಿಕಸಿತವಾಗುವುದು ಕ್ರಿಯಾಶೀಲತೆಯಿಂದ . ಗೀತೆಯಲ್ಲಿ ಕ್ರಿಯಾಶೀಲತೆ ಜಡತ್ವಕ್ಕಿಂತ ( ನಿಶ್ಚಲಕ್ಕಿಂತ ) ಸದಾಶ್ರೇಷ್ಠ , ಜೀವನ ಕರ್ತವ್ಯದ ಸರಿಯಾದ ನಿರ್ವಹಣೆಯೇ ಕ್ರಿಯಾಶೀಲತೆ ಎಂದು ಹೇಳಲಾಗಿದೆ . “ ಸದಾ ಸಂಶಯಗ್ರಸ್ತನಿಗೆ ಸಂತೋಷವೆಂಬುದಿಲ್ಲ ” ( ಸಂಶಯಾತ್ಮಾ ವಿನಶ್ಯತಿಃ -ಭ.ಗೀ , ೪:೪೦ ) ಎಂಬ ಗೀತೆಯ ಹೇಳಿಕೆ ಎಂದೆಂದಿಗೂ ಸತ್ಯ .
ಇಂದಿನ ಸಮಾಜದಲ್ಲಿ ಒಬ್ಬರನ್ನೊಬ್ಬರು ನಂಬದಂಥ ಸ್ಥಿತಿ ಉಂಟಾಗಿದೆ . “ ನಂಬಿಯೂ ನಂಬದಿಹ ಇರ್ಬಂದಿ ನೀನು ” ಎಂದು ಡಿ.ವಿ.ಜಿ. ಅವರು ಹೇಳಿರುವುದು ಇದನ್ನೇ .
“ ನಂಬರು ನೆಚ್ಚರು ಬರಿದೆ ಕರೆವರು , ನಂಬಿ ಕರೆದೊಡೆ ಓ ಎನ್ನನೇ ಶಿವಾ ” ಎಂದು ಅಣ್ಣ ಬಸವಣ್ಣನವರು ಹೇಳಿದ್ದಾರೆ .
“ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ , ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ” ಎಂಬ ಕವಿ ಜಿ.ಎಸ್.ಶಿವರುದ್ರಪ್ಪನವರ ಮಾತಿನಂತೆ ಇಂದು ನಮ್ಮನ್ನು ನಾವೇ ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ .
ಹೀಗಿದ್ದರೆ ಮನಶ್ಯಾಂತಿ ಹೇಗೆ ಉಂಟಾದೀತು ! ಬದುಕಿನಲ್ಲಿ ನಂಬಿಕೆ ಭರವಸೆಗಳಿದ್ದಾಗ ಬದುಕು ಆನಂದಮಯವಾಗುತ್ತದೆ . “ ಮನಸ್ಸೇ ಮನುಷ್ಯನ ಆತ್ಮೀಯ ಸ್ನೇಹಿತ ಹಾಗೂ ಕೆಟ್ಟ ಶತ್ತು ” ಎಂಬ ಗೀತೆಯ ಮಾತು ಸ್ವಯಂ ನಿರ್ವಹಣೆಗೆ ಹಿಡಿದ ಕನ್ನಡಿ . ಜ್ಞಾನಿಯಾದವನು ಮನಸ್ಸನ್ನು ನಿಯಂತ್ರಿಸುತ್ತಾನೆ . ಜೊತೆಗೆ ಸಹನೆ , ನಿರಂತರ ಪ್ರಯತ್ನಗಳಿಂದ ತನ್ನೊಳಗಿನ ಅರಿವಿನ ಬೆಳಕನ್ನು ಕಂಡುಕೊಳ್ಳುತ್ತಾನೆ ಎಂಬುದೇ ಗೀತಾದರ್ಶನ .
ತಾನು ಯಾರು ? ಎಲ್ಲಿಂದ ಬಂದಿದ್ದೇನೆ ? ಬದುಕಿನ ಉದ್ದೇಶವೇನು ? ಸತ್ತ ನಂತರ ಎಲ್ಲಿಗೆ ಹೋಗುತ್ತೇನೆ ? ಎಂಬ ಜಿಜ್ಞಾಸೆಯ ಪ್ರಶ್ನೆಗಳು ಮನಸ್ಸಿನಲ್ಲಿ ಜಾಗೃತಗೊಂಡಾಗ ಭಗವದ್ಗೀತೆಯನ್ನು ಗ್ರಹಿಸುವ ಶಕ್ತಿ ಲಭಿಸುತ್ತದೆ . ಅದು ಆಗ ಹೆಚ್ಚು ಅರ್ಥಪೂರ್ಣವಾಗುತ್ತದೆ .
ವ್ಯಕ್ತಿ ವಿಕಸನದ ಮೊದಲ ಹಂತವೇ ಅರ್ಥಬದ್ಧವಾದ ಪ್ರಶ್ನೆಗಳನ್ನು ಕೇಳುವ ಸ್ವಭಾವ . ಭಗವದ್ಗೀತೆ ಒಟ್ಟಾರೆಯಾಗಿ ಐದು ಮೂಲಸತ್ಯಗಳನ್ನು ( Universal Truths ) ವಿವರಿಸುತ್ತದೆ . ಪರಮ ನಿಯಾಮಕನಾದ ಈಶ್ವರ . ಅವನ ಅಂಶವೇ ಆದ ಜೀವಿ , ಜೀವಿಸುವ ಪ್ರಕೃತಿ , ಸದಾ ಚಲನೆಯಲ್ಲಿರುವ ಕಾಲ ಹಾಗೂ ಜೀವಿ ತೊಡಗಿರುವ ಕರ್ಮ - ಇವೇ ಆ ಐದು ಸತ್ಯಗಳು .
No comments:
Post a Comment
If you have any doubts. please let me know...