September 27, 2020

ಪಂಚಪ್ರಾಣಗಳು

 ನಿಮಗಿದು ತಿಳಿದಿರಲಿ 

ಪಂಚಪ್ರಾಣ - ಬಹುಷಃ ನೀವು ಆಗಾಗ ನಿಮ್ಮ ಆತ್ಮೀಯರಿಗೆ ಹೇಳಿರಬಹುದು ನೀವೆಂದರೆ ನನಗೆ ಪಂಚ ಪ್ರಾಣ ವೆಂದು .‌ ಪಂಚಪ್ರಾಣ ಅಂದರೆ ಐದು ಪ್ರಾಣ ಅಂತಲಾ ? ಪ್ರಾಣ ಅಂದರೆ ವಾಯು , ವಾಯು ಇದ್ದರೇನೇ ಈ ಭೌತಿಕ ದೇಹ ಉಸಿರಾಡುವುದು ಅಲ್ವಾ .  ಪಂಚಪ್ರಾಣವೆಂದರೆ ಪಂಚ ವಾಯುಗಳು . 


ಪಂಚ‌ಪ್ರಾಣಗಳು ಎಂದರೇನು ಮತ್ತು ಅದರ ಮಹತ್ವ 


ಮೊದಲು ಪ್ರಾಣಾಅಂದರೆ ಏನು ಅನ್ನುವುದನ್ನು ತಿಳಿಯೋಣ  . 

#ಪ್ರಾಣ ಎಂದರೆ ವಾಯು (ಗಾಳಿ , ಉಸಿರು ), ವಾಯುವೇ ಪ್ರಾಣ ಎಂದು . 


ಈ ವಾಯುವು ಮಾನವನ ದೇಹದಲ್ಲಿ ಐದು ಮುಖ್ಯ ವಾಯುಗಳಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆ ಐದು ಮುಖ್ಯ ಕಾರ್ಯಗಳನ್ನು ಪಂಚ ಪ್ರಾಣಗಳು ಎಂದು ಕರೆಯುತ್ತೇವೆ.


ಪಂಚ ಅಂದರೆ ಐದು

ಪ್ರಾಣ ಎಂದರೆ ವಾಯು

ಜೀವಿಗಳ ದೇಹದಲ್ಲಿ ಇರುವ ಐದು ವಾಯುಗಳೇ ಪಂಚ ಪ್ರಾಣಗಳು . 


1. ಪ್ರಾಣ, 2. ಅಪಾನ, 3. ವ್ಯಾನ, 4. ಉದಾನ, 5. ಸಮಾನ 


1. #ಪ್ರಾಣ ವಾಯುವು  - ಮೂಗಿನ ಮುಖಾಂತರ ಹೃದಯವನ್ನು ಪ್ರವೇಶಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೂ ಇದು ರವಾನೆಯಾಗುತ್ತದೆ. ಅದಕ್ಕೆ ಇದನ್ನು ಪ್ರಾಣ ವಾಯು ಎಂದು ಮತ್ತು ಪಂಚ ಪ್ರಾಣಗಳಲ್ಲಿ ಇದು ಮೊದಲಿನದು.


2. #ಅಪಾನ ವಾಯುವು  - ಇದು ಪಂಚ ಪ್ರಾಣಗಳಲ್ಲಿ ಎರಡೆನೆಯದು. ಶ್ವಾಸಕೋಶ ಮತ್ತು ಇತರೆ ಕೆಲವು ಭಾಗಗಳಲ್ಲಿ ಇರುತ್ತದೆ ಮಲ ಮೂತ್ರಗಳ ವಿಸರ್ಜನೆಗೆ, ಈ ವಾಯುವು ಸಹಾಯವಾಗುತ್ತದೆ. ಇದು ಒಂದು ರೀತಿಯ ತಳ್ಳುವಿಕೆಯ (pushing) ರೀತಿಯಲ್ಲಿ ಸಹಾಯ ಆಗುತ್ತದೆ.ಅಪಾನ ವಾಯುವು  ಕರುಳುಗಳ ಮೂಲಕ ವ್ಯರ್ಜ್ಯವಾದ ಮಲವನ್ನು ಹೊರಕ್ಕೆ ತಳ್ಳುತ್ತದೆ ಅದಕ್ಕೆ ವಾಯು ಆಗಾಗ ಹೊರಬರುವುದು ಮಲ ವಿಸರ್ಜನೆ ಮಾಡುವಾಗ . 


3.#ವ್ಯಾನ ವಾಯುವು - ಇದು ಮೂರನೇ ವಾಯು. ಇದು ಕೈಕಾಲುಗಳ, ದೇಹದ ಭಾಗಗಳು ಅಂದರೆ ದೇಹದ ಭಾಗಗಳ ಸಂಕೋಚನೆ ವ್ಯಾಕೋಚನಗಳಿಗೆ ಸಹಾಯ ಆಗುತ್ತದೆ. 


4. #ಉದಾನ ವಾಯುವು  - ಇದು ನಾಲ್ಕನೇ ವಾಯು. ಇದು ವಾಕ್ಕಿಗೆ ಸಹಕಾರಿಯಾದ ವಾಯುವು. ಹಾಡು ಹಾಡುವಾಗ ಮಾತನಾಡುವುದು ಉದಾನವಾಯುವಿನ ಸಹಾಯದಿಂದ .‌


5. #ಸಮಾನ ವಾಯು - ಇದು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಯಾಗುತ್ತದೆ. ತಿಂದ ಆಹಾರ ಜೀರ್ಣವಾಗಲು ಸಹಾಯಕಾರಿ.


ಇವು ಐದು ರೀತಿಯ ಪ್ರಾಣಗಳು ಅಥವಾ ಪ್ರಾಣಯಾವುಗಳು...

ಇವುಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡವನು ಮಹಾನ್ ಯೋಗಿಯಾಗುತ್ತಾನೆ... ಮತ್ತು ಅತ್ಯಂತ ಆರೋಗ್ಯವಂತ ಮನುಷ್ಯನಾಗಿ ಇರುತ್ತಾನೆ .‌

ಜಂಗಮಾಮೃತ

No comments:

Post a Comment

If you have any doubts. please let me know...