December 21, 2025

ಬದುಕಿನಲ್ಲಿ ಬಾಗುವುದನ್ನು ಕಲಿ

    ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್  ಕೊಡ ಹಾಗಲ್ಲ ನೀರು ತುಂಬಿಸಲು ಪ್ರಯಾಸ ಪಡಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ, ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವದಿಲ್ಲವೊ ಅದು ಅಪೂರ್ಣವೇ. ಇದೇ ಬದುಕಿನ ಸತ್ಯವೂ ಕೂಡ. 
    ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ  ನೈವೇದ್ಯ ಮಾಡುವದಿಲ್ಲ. ಕಾರಣ..ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ.ಇದರರ್ಥ ಇಷ್ಟೇ .. ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ, ಆ ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವದನ್ನು ನಾವು ಕಲಿಯಬೇಕು. ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವದು. ಅಹಂಕಾರ ಅಧಿಕಾರ ಶಾಶ್ವತವಲ್ಲ... ನಾನು ಎಂಬ ಗರ್ವ ತನ್ನೊಡಲನ್ನೇ  ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ  ಎಲ್ಲವನ್ನೂ ನೋಡುತ್ತಿರುವ ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ... ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ. ಎಂಬ ಸತ್ಯದ ಅರಿವಾಗಬೇಕು.
    ಜಾಸ್ತಿ ಓದಿದಿನಿ ಎನ್ನುವ ಗರ್ವ ಬೇಡ.  ಓದಲು ಸಾಗರದಷ್ಟಿದೆ ಇನ್ನೂ, ನಾನೆಲ್ಲವನ್ನೂ ಬರೆಯುತ್ತೇನೆ.  ಎನ್ನುವ ಅಹಂ ಬೇಡ. ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ. ಎಲ್ಲ ಬಲ್ಲವರಿಲ್ಲ,ಬಲ್ಲವರು ಬಹಳಿಲ್ಲ,  ಮಗುವಿನಿಂದ ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವದು ತುಂಬ ಇದೆ ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ. ನೀ ಸಾಗುವ ಪಥ ಹೊಸ ಹೊಸ ಪಾಠಗಳನ್ನು ಕಲಿಸುತ್ತ ಅನುಭವಗಳನ್ನು ನೀಡುತ್ತಾ ಸಾಗುತ್ತದೆ. ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು. ಏಕೆಂದರೆ, ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.  ಆದ್ದರಿಂದ ಹೀಗಾಗಿ ಯೋಚಿಸಿ ನಡೆಯಬೇಕು.  ಆಲೋಚಿಸಿ ನುಡಿಯಬೇಕು.
    ಗುರು ಕಲಿಸಿದ ವಿದ್ಯೆ.. ತಾಯಿ ನೀಡಿದ ಮಮತೆ.. ತಂದೆ ಹೇಳಿದ ಸಲಹೆ.. ಕಿರಿಯರು ನೀಡಿದ ಪ್ರೀತಿ..  ರೈತ ಕೊಟ್ಟ ಅನ್ನ..ಯೋಧ ನೀಡಿದ ರಕ್ಷಣೆ ..ನಿನ್ನ ಹೊತ್ತ ಭೂಮಿತಾಯಿ ..ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು, ದೇಶ ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂದವ್ಯಗಳನ್ನು  ಎಂದಿಗೂ ಮರೆಯದಿರು. ಬದುಕಿನಲ್ಲಿ ಬಾಗುವದನ್ನು ಕಲಿ ಬದುಕುವದನ್ನು ಕಲಿ. 

ವಾಟ್ಸಪನಲ್ಲಿ ಬಂದಿದ್ದು. ಇದನ್ನು ಬರೆದವರಿಗೆ ಧನ್ಯವಾದಗಳು

December 20, 2025

ಯಾವ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಸರಳ ಪರಿಹಾರ

೦೧. ಅಶ್ವಿನಿ
ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಕ್ಕಿಂತ ಬುದ್ದಿಮಟ್ಟ ಜಾಸ್ತಿ , ಇವರು ಇನ್ನೊಬ್ಬರ ಸ್ನೇಹ ಬೇಗ ಸಂಪಾದಿಸುತ್ತಾರೆ... ಈ ನಕ್ಷತ್ರದಅಧಿಪತಿ ಕೇತು .... ಕುಲದೇವರ ಆರಾಧನೆ ನಿತ್ಯ ಮಾಡಿ

೦೨. ಭರಣಿ
ಭರಣಿ ನಕ್ಷತ್ರದವರಿಗೆ ನಾವು ಸಾಮಾನ್ಯ ವಾಗಿ ಹೇಳೊದು ಭರಣಿ ನಕ್ಷತ್ರ ಧರಣಿ ಆಳುತ್ತಾರೆ ಅಂತ ಇವರು ಏನೇ ಕೆಲಸ ಮಾಡಲಿ ಹತ್ತು ಸಲ ಯೊಚನೆ ಮಾಡುತ್ತಾರೆ... ಈ ನಕ್ಷತ್ರದ ಅಧಿಪತಿ ಶುಕ್ರ......‌ ದುರ್ಗಾದೇವಿ ಆರಾಧನೆ ಮಾಡಬೇಕು

೦೩. ಕೃತ್ತಿಕಾ
ಇವರು ಒಳ್ಳೆಯ ಕೆಲಸಗಾರರು ,ಯಾವದೇ ಕೆಲಸಮಾಡಲಿ ಆ ಕೆಲಸಕ್ಕೆ ನ್ಯಾಯ ಒದಗಿಸುವರು..‌ಆದರೆ ಅಹಂ ಜಾಸ್ತಿ.. ಈ ನಕ್ಷತ್ರದ ಅಧಿಪತಿ ರವಿ ....‌ ಆದಿತ್ಯ ಹೃದಯ ಪಠಣೆ ಒಳ್ಳೆಯದು

೦೪. ರೋಹಿಣಿ
ಈ ನಕ್ಷತ್ರ ದವರು ಉತ್ತಮ ಸ್ವಭಾವ , ಅತಿಥಿ ಸತ್ಕಾರ ಮನೋಭಾವದವರು , ಹಲವಾರು ಅಭಿರುಚಿ ಉಳ್ಳವರು... ಈ ನಕ್ಷತ್ರದ ಅಧಿಪತಿ ಚಂದ್ರ ...‌‌..ಶಿವನಿಗೆ ರುದ್ರಾಭಿಷೇಕ ಮಾಡುವದು ಒಳ್ಳೆಯದು

೦೫. ಮೃಗಶಿರಾ
ಇವರಿಗೆ ಒಳ್ಳೆಯ ಬುದ್ಧಿವಂತಿಕೆ ಆದರೆ ಉಪಯೋಗಿಸುವದು ಕಡಿಮೆ ಆಲಸಿಗಳು . ಭೋಗ ಪ್ರೀಯರು... ಈ ನಕ್ಷತ್ರದ ಅಧಿಪತಿ ಕುಜ ... ಗಣಪತಿ ಆರಾಧನೆ , ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದು

೦೬. ಆರ್ದ್ರಾ
ಇವರು ಗೊಂದಲ ಮನಸ್ಥಿತಿ ಇರುವವರು.. ಬೇಗನೆ ನಿರ್ದಾರ ತೆಗೆದುಕೊಳ್ಳುವದಿಲ್ಲ . ಆದರೆ ಒಂದು ಸಲ ತೆಗೆದುಕೊಂಡ ನಿರ್ದಾರಕ್ಕೆ ಬದ್ಧರಾಗಿರುತ್ತಾರೆ...‌ ಈ ನಕ್ಷತ್ರ ದ ಅಧಿಪತಿ ರಾಹು ..‌..ಸುಬ್ರಹ್ಮಣ್ಯ ಸ್ತೋತ್ರ ನಿತ್ಯಹೇಳಿ.

೦೭. ಪುನರ್ವಸು
ಒಳ್ಳೆಯ ಸ್ವಭಾವ . ದೈವ ಭಕ್ತಿ ಎಲ್ಲರೊಂದಿಗೆ ಹಂಚಿ ತಿನ್ನುವ ಪ್ರವೃತ್ತಿ ಯವರು ..‌ ಈ ನಕ್ಷತ್ರದ ಅಧಿಪತಿ ಗುರು ದತ್ತಾತ್ರೇಯ , ಗುರುಚರಿತ್ರೆ ಪಾರಾಯಣ

೦೮. ಪುಷ್ಯ
ಇವರು ರಾಜಕೀಯ ಇಷ್ಟ ಪಡುವವರು , ಜನ ಸೇವೆಯಲ್ಲಿ ಇರಲು ಇಷ್ಟಪಡುವರು . ಹಿರಿಯರಿಗೆ ಅಧಿಕ ಗೌರವ ಕೊಡುವವರು ...‌‌ ಈ ನಕ್ಷತ್ರದ ಅಧಿಪತಿ ಶನಿ ... ಹೆಚ್ಚಾಗಿ ನೀವು ಕೈಕಾಲು ಇಲ್ಲದವರಿಗೆ.ತಿನಿಸನ್ನು ಕೊಡಿಸಿ

೦೯. ಆಶ್ಲೇಷಾ
ಈ ನಕ್ಷತ್ರದವರು ಆಡಂಬರ ಪ್ರೀಯರು , ಮತ್ತು ಅಲಂಕಾರಕ್ಕೆ ಮನ ಸೋಲುವವರು . ಸೌಂದರ್ಯ ಪ್ರೀಯರು... ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

೧೦. ಮಖಾ
ಈ ನಕ್ಷತ್ರದವರು ಸ್ವಲ್ಪ ಹೆಚ್ಚೇ ಸ್ವಾಭಿಮಾನಿಗಳು , ಯಾರ ಹತ್ತಿರಾನೂ ಸಹಾಯ ಕೇಳುವದು ಕಡಿಮೆ , ಈ ನಕ್ಷತ್ರದ ಅಧಿಪತಿ ಕೇತು ಕುಲ ದೇವರ ಆರಾಧನೆ

೧೧. ಪುಬ್ಬಾ
ಈ ನಕ್ಷತ್ರದವರು ಸ್ವಭಾವತಃ ಹಾಸ್ಯ ಪ್ರೀಯರು ಸ್ವಲ್ಪ ಸಿಟ್ಟು ಕಡಿಮೆ ತಾಳ್ಮೆ ಜಾಸ್ತಿ .... ಈ ನಕ್ಷತ್ರದ ಅಧಿಪತಿ ಶುಕ್ರ ಮಹಾಲಕ್ಷಿ ಅಷ್ಟೋತ್ತರ ಪಾರಾಯಣ

೧೨. ಉತ್ತರಾ
ಈ ನಕ್ಷತ್ರದವರ ವ್ಯವಹಾರಿಕವಾಗಿ ತುಂಬಾ ಚತುರರು ..ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವವರು...‌ ಈ ನಕ್ಷತ್ರದ ಅಧಿಪತಿ ರವಿ ತಾಂಬೂಲ ದಾನ ಮಾಡುವದು ಒಳ್ಳೆಯದು

೧೩. ಹಸ್ತ
ಈ ನಕ್ಷತ್ರದವರು ವಿಲಾಸಿ ಪ್ರೀಯರು , ಸ್ವಲ್ಪ ಸಿಟ್ಟು ಜಾಸ್ತಿ . ಆದರೆ ಹೃದಯವಂತರು ..‌‌ ಈ ನಕ್ಷತ್ರದ ಅಧಿಪತಿ ಚಂದ್ರ...... ಶಿವನಿಗೆ ಬಿಲ್ವ ಪತ್ರೆ ಅರ್ಚನೆ

೧೪. ಚಿತ್ತ
ಈ ನಕ್ಷತ್ರದಲ್ಲಿ ಜನಿಸಿರುವವರು ಸಮಚಿತ್ತ ಉಳ್ಳವರು , ಕವಿಗಳು , ಸಾಹಿತ್ಯ ಅದ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು..... ಈ ನಕ್ಷತ್ರದ ಅಧಿಪತಿ ಕುಜ ಅನ್ನದಾನ ಮಾಡುವಲ್ಲಿ ಹೋಗಿ ಕೈಲಾದ ಧನ ಸಹಾಯ ಹಾಗೂ ಸಹಾಯ ಮಾಡಿ

೧೫. ಸ್ವಾತಿ
ಸ್ವಾತಿ ನಕ್ಷತ್ರದವರು ಮೃದು ಸ್ವಭಾವದವರು , ಬೇಗನೆ ಇನ್ನೊಬ್ಬರನ್ನು ನಂಬುವವರು . ಪರರಿಗೆ ಸಹಾಯ ಮಾಡುವವರು .. ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಆರಾಧನೆ

೧೬. ವಿಶಾಖ
ಈ ನಕ್ಷತ್ರದವರು ಬುದ್ದಿವಂತರು ಜೊತೆಗೆ ಹಠದ ಸ್ವಭಾವ , ಯಾವದೇ ಕೆಲಸಕ್ಕೂ ತಮ್ಮ ಶ್ರಮದ ಬಗ್ಗೆ ಯೋಚಿಸುವದಿಲ್ಲ...‌‌ ಈ ನಕ್ಷತ್ರದ ಅಧಿಪತಿ ಗುರು .. ರಾಯರ ಆರಾಧನೆ ಮಾಡಿ

೧೭. ಅನೂರಾಧ
ಈ ನಕ್ಷತ್ರದವರು ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾಗುವವರು , ಒಂದು ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವರು. ಈ ನಕ್ಷತ್ರದ ಅಧಿಪತಿ ಶನಿ 
ಬೇಳಿಗ್ಗೆ ತೈಲಾಭ್ಯಾಂಗ ಸ್ನಾನ ಮಾಡಿ

೧೮. ಜೇಷ್ಠ
ಜಗಳತನದ ಜಾಯಮಾನವಲ್ಲದವರು , ನಿರ್ಮಲ ಸ್ವಭಾವ...ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ..

೧೯. ಮೂಲಾ
ಈ ನಕ್ಷತ್ರದವರು ಕಲಾ ಪ್ರೀಯರು , ಎಲ್ಲರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವವರು ಆದರೆ ಇವರಿಗೆ ಆರೋಗ್ಯ ದ ತೊಂದರೆ ಜಾಸ್ತಿ ..‌ಈ ನಕ್ಷತ್ರದ ಅಧಿಪತಿ ಕೇತು ಸಾದ್ಯವಾದಾಗ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿ

೨೦. ಪೂರ್ವಾಷಾಢ
ವಿನಯವಂತರು ಮಿತಬಾಷಿಗಳು ಬೇರೆಯವರ ದುಃಖಕ್ಕೆ ಬೇಗ ಸ್ಪಂದಿಸುವವರು ...‌ ಈ ನಕ್ಷತ್ರದ ಅಧಿಪತಿ ಶುಕ್ರ ಲಕ್ಷೀ ಅಷ್ಟೋತ್ತರ ಪಾರಾಯಣ ಮಾಡಿ

೨೧. ಉತ್ತರಾಷಾಢ
ಸಮಯ ಚಿತ್ತದಿಂದ ನಡೆದುಕೊಳ್ಳುವವರು , ಅತೀಯಾದ ವಿನಯ ಸೌಮ್ಯ ಮಾತು .... ಈ ನಕ್ಷತ್ರದ ಅಧಿಪತಿ ರವಿ ಆದಿತ್ಯ ಹೃದಯ ಪಾರಾಯಣ ಮಾಡಿ

೨೨. ಶ್ರವಣ
ಈ ನಕ್ಷತ್ರದವರು ತಮ್ಮ ತಪ್ಪನ್ನ ಬೇಗ ಒಪ್ಪಿಕೊಳ್ಳುವ ಮನೋಭಾವ , ಇನ್ನೋಬ್ಬರಿಗೆ ನೋವಿಗೆ ಬೇಗ ಸ್ಪಂದಿಸುವ ಮತ್ತು ಪರರಿಗೆ ಉಪಕಾರಿ...‌ ಈ ನಕ್ಷತ್ರದ ಅಧಿಪತಿ ಚಂದ್ರ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.‌

೨೩. ಧನಿಷ್ಠ
ಈ ನಕ್ಷತ್ರದವರು ಸ್ವಲ್ಪ ಕಠೋರ ಮಾತು , ಮಾತಿನಲ್ಲೂ ನಿಪುಣರು..‌ ಈ ನಕ್ಷತ್ರದ ಅಧಿಪತಿ ಕುಜ ...‌ ಮಂಗಳ ಚಂಡಿಕೆ ಸ್ತೋತ್ರ ಹೇಳಿ

೨೪. ಶತಭಿಷಾ
ಈ ನಕ್ಷತ್ರದವರು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಚತುರರು....ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಸ್ತೋತ್ರ ಪಾರಾಯಣ ಮಾಡಿ

೨೫. ಪೂರ್ವಾಭಾದ್ರ
ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ ಯಾವದೇ ವಿಷಯ ಸರಿಯಾಗಿ ತಿಳಿದುಕಳ್ಳದೇ ಆಳವಾಗಿ ಅದ್ಯಯನ ಮಾಡದೇ ಒಪ್ಪಿಕೊಳ್ಳುವದಿಲ್ಲ ..ಈ ನಕ್ಷತ್ರದ ಅಧಿಪತಿ ಗುರು.... ಗುರು ಚರಿತ್ರೆ ಪಾರಾಯಣ ಮಾಡಿ

೨೬. ಉತ್ತರಾಭಾದ್ರ 
ಗತ್ತಿನ ಮಾತಿನವರು ಮಾತಿನಲ್ಲಿ ಚಾತುರ್ಯ ಉಳ್ಳವರು ಮಿತ ಬಾಷಿಗರು ..‌ಈ ನಕ್ಷತ್ರದ ಅಧಿಪತಿ ಶನಿ ಶಿವನಿಗೆ ಬುತ್ತಿ ಪೂಜೆ ಮಾಡಿಸಿ ಸಾದ್ಯವಾದಾಗ

೨೭. ರೇವತಿ
ಈ ನಕ್ಷತ್ರದವರು ಸ್ವಭಾವತಃ ಒಳ್ಳೆಯವರು , ಆದ್ಯಾತ್ಮದ ಒಲವು ಹೊಂದಿರುವವರು , ದೇವರನ್ನು ಅಪಾರ ನಂಬುವವರು ಆದರೆ ಸ್ವಲ್ಪ ಅಹಂ ಹೊಂದಿರುವವರು..‌ ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ ಮಾಡಿ , ..

ಉಡುದಾರ

ಹಿಂದಿನ ಕಾಲದಲ್ಲಿ ಮಕ್ಕಳು ಜನಿಸಿದ ಮೂರು ದಿನಗಳ ನಂತರ ಸೊಂಟಕ್ಕೆ, ಕೈಗೆ, ಕಾಲಿಗೆ ಕಪ್ಪು ದಾರ ಕಟ್ಟುತ್ತಿದ್ದರು.

ಹೆಣ್ಣು ಮಗುವಾಗಲೀ, ಗಂಡು ಮಗುವಾಗಲಿ ಮಕ್ಕಳು ಬೆಳೆದಂತೆಲ್ಲಾ ಕೈಗೆ ಬೆಳ್ಳಿ ಕಪ್ಪ, ಕಾಲಿಗೆ ಬೆಳ್ಳಿ ಚೈನು, ಸೊಂಟಕ್ಕೆ ಉಡುದಾರ ಕಟ್ಟುತ್ತಿದ್ದರು.

 ದೊಡ್ಡವರಾದ ಮೇಲೆ ಗಂಡು ಮಕ್ಕಳಿಗೆ ಎಡಗೈಗೆ ಗಡಿಯಾರ ಮತ್ತು ಬಲಗೈಗೆ ಬೆಳ್ಳಿ ಕಪ್ಪ ಮತ್ತು ಸೊಂಟಕ್ಕೆ ಕರಿದಾರ ಬಂತು.

 ಹೆಣ್ಣು ಮಕ್ಕಳಿಗೆ ಕೈಗೆ ಗಾಜಿನ ಬಳೆ, ಕಾಲಿಗೆ ಬೆಳ್ಳಿ ಚೈನು ಮತ್ತು ಸೊಂಟಕ್ಕೆ ಬೆಳ್ಳಿ ಗೆಜ್ಜೆ ಡಾಬು ಬಂತು. ಡಾಬು ಹೆಂಗಸರ ಸೊಂಟಕ್ಕೆ ಆಧಾರ ಒದಗಿಸುತ್ತದೆ ಮತ್ತು ರಕ್ತ ಸಂಚಾರವನ್ನು ನಿಯಂತ್ರಣಕ್ಕೆ ತರುತ್ತದೆ. ಸೊಂಟಕ್ಕೆ ಡಾಬು ಹಾಕಿರುವ ಹೆಂಗಸರಿಗೆ ಯಾವುದೇ ಕಾರಣಕ್ಕೂ ಸೊಂಟ ನೋವು ಬರುವುದಿಲ್ಲ.

ಹಿಂದಿನವರು ಏನೇ ಸಂಪ್ರದಾಯ ಅನುಕರಣೆ ಮಾಡಿದರೂ ಅದು ವೈಜ್ಞಾನಿಕವಾಗಿ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುತ್ತಿತ್ತು.

 ಗಂಡು ಮಕ್ಕಳಿಗೆ ದೊಡ್ಡವರಾದ ಮೇಲೂ ಉಡುದಾರ ಕಟ್ಟುಲು ಕಾರಣವೇನು ?
ಹೆಣ್ಣಾಗಲಿ, ಗಂಡಾಗಲಿ ಕುಳಿತುಕೊಳ್ಳಲು, ನಿಂತುಕೊಳ್ಳಲು , ನಡೆದಾಡಲು, ಕಷ್ಟಕರವಾದ ಕೆಲಸ ಮಾಡಲು, ಭಾರವಾದ ವಸ್ತುಗಳನ್ನು ಎತ್ತಲು, ಅದರಲ್ಲೂ 
 ಮುಖ್ಯವಾಗಿ ವಂಶಾಭಿವೃದ್ಧಿ ಮಾಡಲು ಸೊಂಟವೇ ಪ್ರಮುಖವಾದ ಅಂಗ. ಒಂದು ವೇಳೆ ಸೊಂಟ ಬಿದ್ದು ಹೋದರೆ ಈ ಮೇಲಿನ ಯಾವುದೇ ಕಾರ್ಯವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ.

ಒಂದು ಗಿಡ ನೇರವಾಗಿ ಬೆಳೆಯಲು ಒಂದು ದಾರವನ್ನೋ ಅಥವಾ ಹಗ್ಗವನ್ನೋ ಕಟ್ಟಿ ಬೆಳೆಸುತ್ತಾರೆ.

ಅದೇ ರೀತಿ ಮನುಷ್ಯನೂ ಕೂಡ ಗಟ್ಟಿಯಾಗಿ ದಷ್ಟ ಪುಷ್ಟವಾಗಿ ಬೆಳೆಯಲು ಉಡುದಾರ ಸಹಕಾರಿಯಾಗುತ್ತದೆ.
ಮನುಷ್ಯನ ದೇಹದ ರಕ್ತ ಚಲನೆಯನ್ನು ನಿಯಂತ್ರಿಸುತ್ತದೆ. 

ಇದೇ ರೀತಿ ಮಹಿಳೆಯರಿಗೂ ಕೂಡ ಬೆಳ್ಳಿಯ ಗೆಜ್ಜೆ ಡಾಬು ಅವರ ಸೊಂಟಕ್ಕೆ ಗಟ್ಟಿತನವನ್ನು ನೀಡುತ್ತದೆ.

 ಉಡುದಾರವನ್ನು ವರ್ಷಕೊಮ್ಮೆ ಬದಲಾಯಿಸಬೇಕು  ಒಮ್ಮೆ ಉಡುದಾರವನ್ನು ಕಟ್ಟಿಕೊಂಡರೆ ಅದಾಗಿ ಅದು ಕಿತ್ತು ಹೋಗುವವರೆಗೂ ನಾವು ಅದನ್ನು ಬದಲಾಯಿಸುವುದಿಲ್ಲ.
ಆದರೆ ಅದನ್ನು ವರ್ಷಕೊಮ್ಮೆ ಬದಲಾಯಿಸಬೇಕು ಎಂದು ತಿಳಿದವರು ಹೇಳುತ್ತಾರೆ.

 ಯಾವಾಗ ಬದಲಿಸಬೇಕು ?
ಉಡುದಾರವನ್ನು ಪ್ರತಿ ವರ್ಷ ಜನವರಿ ತಿಂಗಳ 14 ನೇ ತಾರೀಕಿನಂದು ಉತ್ತರಾಯಣದಲ್ಲಿ ಅಥವಾ ಜುಲೈ ತಿಂಗಳ 16 ನೇ ತಾರೀಕಿನಂದು ದಕ್ಷಿಣಾಯನದಲ್ಲಿ ಬದಲಾಯಿಸಬೇಕೆಂದು ಹೇಳಲಾಗಿದೆ.

 ಬದಲಿಸಿದ ಹಳೆಯ ಉಡುದಾರವನ್ನು ಏನು ಮಾಡಬೇಕು ?
ಹಳೆಯ ಉಡುದಾರವನ್ನು ಹಾಗೇ ಸುಮ್ಮನೆ ಬಿಸಾಕಬಾರದು. 
ಅದನ್ನು ತೆಗೆದುಕೊಂಡು ಒಮ್ಮೆ ಮೂಸಿ ನೋಡಿ, ಎರಡೂ ಕೈಗಳಿಂದ ನಮ್ಮ ಕಣ್ಣುಗಳಿಗೆ ಒತ್ತಿಕೊಂಡು ನಮಸ್ಕಾರ ಮಾಡಿ, ಇಷ್ಟು ದಿನ ನನ್ನ ಸೊಂಟಕ್ಕೆ ಚೈತನ್ಯ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಅದನ್ನು ಒಂದು ಹಸಿರು ಗಿಡಕ್ಕೆ ಕಟ್ಟಬೇಕು.

 ಕಪ್ಪು ಉಡುದಾರವನ್ನೇ ಏಕೆ ಕಟ್ಟಬೇಕು ? 
ನವ ಜಾತ ಶಿಶುಗಳಿಗೆ ಕೈಗೆ, ಕಾಲಿಗೆ ಮತ್ತು ಸೊಂಟಕ್ಕೆ ಕಪ್ಪು ದಾರ ಕಟ್ಟುತ್ತಾರೆ, ಮತ್ತು ಹಣೆಗೆ ಕಪ್ಪು ಮಸಿ ಬಳಿಯುತ್ತಾರೆ. 
ಏಕೆಂದರೆ ಕಪ್ಪು ಬಣ್ಣವು ಮನುಷ್ಯನ ಕಾಕ ದೃಷ್ಟಿಯನ್ನು ಅಂದರೆ ಕೆಟ್ಟ ದೃಷ್ಟಿಯನ್ನು 
ಹೋಗಲಾಡಿಸುತ್ತದೆ. ಅಂದರೆ ದೃಷ್ಟಿ ತಾಕುವುದನ್ನು ತಡೆಗಟ್ಟುತ್ತದೆ. ಈ ಕಾರಣಕ್ಕೆ ಕಪ್ಪು ದಾರವನ್ನು ಕಟ್ಟುತ್ತಾರೆ.
ಇದು ಸಂಗ್ರಹಿಸಿದ ಮಾಹಿತಿ.

December 10, 2025

ತಾಂಬೂಲ ವಿಚಾರ

    ಶುಭ ಸಮಾರಂಭಗಳಲ್ಲಿ, ಹಬ್ಬ, ಪೂಜೆ ವ್ರತಗಳನ್ನು ಆಚರಿಸಿದವರು ತಾಂಬೂಲ ನೀಡುವ ಆಚರಣೆ ಇದೆ. ಹೀಗೆ ತಾಂಬೂಲ ನೀಡುವಾಗ ಮೊದಲು ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಬೇಕು. ನಂತರ ತಾಂಬೂಲ ನೀಡುವಾಗ ವೀಳ್ಯದೆಲೆಯ ತೊಟ್ಟು ಹಾಗೂ ಬಾಳೆಹಣ್ಣಿನ ತೊಟ್ಟು ನಮ್ಮ ಕಡೆಯಲ್ಲಿರಬೇಕು.
    ವೀಳ್ಯೆದೆಲೆಯನ್ನು ಎರಡು ಅಥವಾ ಐದರ ಸಂಖ್ಯೆಯಲ್ಲಿ ಹಾಗೆಯೇ ಅಡಿಕೆಯನ್ನು, ಹಣ್ಣನ್ನು ಎರಡರ ಸಂಖ್ಯೆಯಲ್ಲಿಡಬೇಕು. ತಾಂಬೂಲದಲ್ಲಿ ಯಾವುದಾದರೂ ಒಂದು ಹಣ್ಣನ್ನು ನೀಡಬೇಕು. ಇನ್ನು ದೇವರಿಗೆ ನೈವೇದ್ಯ ಅರ್ಪಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು.
    ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಹೊರಗೆ ಬಿಸಾಕಬಾರದು. ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆಯನ್ನೇ ದೇವರ ನೈವೇದ್ಯಕ್ಕೆ ಮತ್ತು ತಾಂಬೂಲ ನೀಡಲು ಬಳಸಬೇಕು

        1. ವೀಳ್ಯದೆಲೆ ತಾಂಬೂಲ ಕೊಡುವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ, ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ. ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ.
    2. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ.
    3. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.
    4. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೇ ಎಲ್ಲಿಯಾದರೂ ಬಿಟ್ಟು ಬಂದರೆ. ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ, ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಕೆ ಕಡಿಮೆಯಾಗುತ್ತದೆ.
    5. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ.
    6. ತಾಂಬೂಲ ಕೊಡುವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.

ವಿವಿಧ ರೀತಿಯ ತಾಂಬೂಲಗಳು.. !
ತಾಂಬೂಲಗಳಲ್ಲಿ ಮೂರು ರೀತಿಯ ತಾಂಬೂಲಗಳಿವೆ..
೧. ಫಲ ತಾಂಬೂಲ..
೨. ಪೂರ್ಣಫಲ ತಾಂಬೂಲ..
೩. ಸಾಮೂಹಿಕ ತಾಂಬೂಲ..
" ಫಲ ತಾಂಬೂಲ" : ತಾಂಬೂಲದಲ್ಲಿ ಹಣ್ಣನ್ನು ಇಟ್ಟು ಕೊಡುವುದೇ ಫಲತಾಂಬೂಲ..
ಫಲ ತಾಂಬೂಲದಲ್ಲಿ ಎರಡು ವಿಧಗಳಿವೆ.
೧. ಫಲ ತಾಂಬೂಲ..
೨. ಪಂಚಫಲ ತಾಂಬೂಲ ..
೧. ಫಲ ತಾಂಬೂಲ :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದೇ ಜಾತಿಯ ಹಣ್ಣು(ಎರಡು)
**
೨. ಪಂಚಫಲ ತಾಂಬೂಲ ::
ಐದು ವೀಳ್ಯದೆಲೆ
ಐದು ಅಡಿಕೆ
ಯಥಾ ಶಕ್ತಿ ದಕ್ಷಿಣೆ
ಐದು ಜಾತಿಯ ಹಣ್ಣುಗಳು..
(5-5 ಬೇಕಾದರೂ ಕೊಡಬಹುದು)
***
" ಪೂರ್ಣಫಲ ತಾಂಬೂಲ "..
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದು ಪೂರ್ಣಫಲ..
**
" ಸಾಮೂಹಿಕ ತಾಂಬೂಲ " :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ತೆಂಗಿನಕಾಯಿ ಅಥವಾ ಹಣ್ಣು..!
ಉಪಯುಕ್ತ ಮಾಹಿತಿ ಇದೆ ಓದಿ
"ವೀಳ್ಯದೆಲೆ"
 ಮತ್ತು ಮಹತ್ವಗಳು..
೧. ವೀಳ್ಯದೆಲೆ ತುದಿಯಲ್ಲಿ - ಲಕ್ಷ್ಮೀವಾಸ..
೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ.. 
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,
ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..



ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..
ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..
ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..
"ತಾಂಬೂಲ ಕೊಡೋವಾಗ ಎಚ್ಚರಿಕೆ ಇರಲಿ...!
೧. ವೀಳ್ಯದೆಲೆ ತಾಂಬೂಲ ಕೊಡೊವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ.....
"ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ..
ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ ..ಹಣಕಾಸಿಗೆ ಪರದಾಟವಾಗುತ್ತದೆ...
೨. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ...
ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ.., ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ ...
೩. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ...
೪. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೆ ಎಲ್ಲಿಯಾದರೂ ಬಿಟ್ಟು ಬಂದರೆ..."ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ.., ಶುಭ ಕಾರ್ಯ ನಿಧಾನವಾಗುತ್ತದೆ...
ಮಕ್ಕಳ ಮಾನಸಿಕ ಬೆಳವಣಿಕೆ ಕಮ್ಮಿಯಾಗುತ್ತದೆ...
೫. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ ...
೬. ತಾಂಬೂಲ ಕೊಡೊವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. .ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ....ಶುಭವಾಗಲಿ..
ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು
"ಕಲಶದ ವೀಳ್ಯದೆಲೆ"ಯನ್ನು, ಪೂಜೆಯ ನಂತರ ಏನು ಮಾಡಬೇಕು?
ಕಲಶದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮಾತ್ರ ಹಾಕಿಕೊಳ್ಳಬೇಕು. ಬೇರೆಯವರು ಹಾಕಿಕೊಳ್ಳಬಾರದು. ಮಗಳು ಅಳಿಯ ಇದ್ದರೆ ಹಾಕಿಕೊಳ್ಳಬಹುದು.
ಕಲಶದ ವೀಳ್ಯದೆಲೆಯನ್ನು ಒಣಗಿಸಿದರೆ , ಅಥವಾ ಕಸದಲ್ಲಿ ಗುಡಿಸಿದರೆ ?
ಆ ಮನೆಗೆ ದಾರಿದ್ರ್ಯ ಬಂದು ಬಿಡುತ್ತದೆ. ಕಲಶದೇವಿಯ ಶಾಪವಾಗಿ ಆ ಮನೆಯಲ್ಲಿ ಸಂಪಾದಿಸಿದ ಹಣ ಬೇರೆಯವರ ಪಾಲಾಗಿ, ತುಂಬಾ ಕಷ್ಟದ ಜೀವನ ಮಾಡುತ್ತೀರಿ.
ಸಾಲದಭಾದೆ ಇಂದ ನರಳುವಿರಿ. ಶತೃಭಾಧೆ ಜಾಸ್ತಿಯಾಗುತ್ತದೆ.
ಪೂಜಿಸಿದ ಕಲಶದ ವೀಳ್ಯದೆಲೆಯನ್ನು ತುಳಸೀ ಕಟ್ಟೆಗೆ ಹಾಕಿದರೆ?
ಅವರು ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ. ಬಹಳ ತೇಜೋವಂತರೂ ಕಾಂತಿವಂತರೂ ಆಗಿ, ನೆಮ್ಮದಿಯ ಜೀವನ ಮಾಡುತ್ತಾರೆ. ಸರ್ವ ತೀರ್ಥಗಳೂ ತುಳಸಿಯಲ್ಲಿ ಇರುವುದರಿಂದ ಸರ್ವ ಶ್ರೇಷ್ಠ.
ಕಲಶದ ವೀಳ್ಯದೆಲೆಯನ್ನು ಪೂಜ್ಯ ಭಾವನೆಯಿಂದ, ಕುಲದೇವತಾ ಸ್ಮರಣೆ ಮಾಡಿ, ಹರಿಯುವ ನದಿಯಲ್ಲಿ ಬಿಟ್ಟರೆ?
ಪೂಜಿಸಿದ ದೇವರು, ಕಲಶದ ದೇವರು, ಕುಲದೇವರ ಆಶೀರ್ವಾದ ಎಂದೆಂದೂ ಇದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ. ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ.
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದು ಎಲ್ಲರೂ ಆರೋಗ್ಯವಂತರಾಗಿರುತ್ತಾರೆ.
ಕಲಶಕ್ಕೆ ಬಿಳೀ ವೀಳ್ಯದೆಲೆ ಇಟ್ಟರೆ ?
ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ. ದಟ್ಟದಾರಿದ್ಯ ಅನುಭವಿಸುತ್ತಿರಿ.
ಕಲಶಕ್ಕೆ ಇಡೋ ವೀಳ್ಯದೆಲೆ ಹಸಿರು ಬಣ್ಣದ್ದಾಗಿರಬೇಕು. ಎಳೆಯ ವೀಳ್ಯದೆಲೆ ಆಗಿರಬೇಕು. ಹಸ್ತದ ಆಕಾರ ಇರಬೇಕು. ಭಿನ್ನವಾಗಿರಬಾರದು..
ವೀಳ್ಯದೆಲೆ ಹಾರವನ್ನು "ದುರ್ಗಾದೇವಿ"ಗೆ ಹಾಕಿ ಪೂಜೆ ಮಾಡಿಸಿದರೆ ಫಲ ಏನು..?
ಯಾರು ಒಬ್ಬೊಬ್ಬರೇ ಇರುವಾಗ ತುಂಬಾ ಭಯಪಡುತ್ತಾರೆಯೋ.
ಒಬ್ಬರೇ ಮಾತಾನಾಡಿಕೊಳ್ಳುತ್ತಾರೋ ಅಥವಾ ಒಬ್ಬರೇ ನಗುತ್ತಿರುತ್ತಾರೋ..
ಸಾರ್ವಜನಿಕರಲ್ಲಿ ಮಾತನಾಡುವಾಗ ಭಯವಾದರೆ 
ಮಾತನಾಡುವಾಗ ತೊದಲುತ್ತಿದ್ದರೆ.
ಒಬ್ಬರೇ ಒಂಟಿಯಾಗಿ ಕುಳಿತು ತುಂಬಾ ಯೋಚನೆ ಮಾಡೋದು, ಮನಸ್ಸಿನೊಳಗೆ ತುಂಬಾ ದುಃಖ ಪಡೋದು ಆಗುತ್ತಿದ್ದರೆ.
ಎಲ್ಲರೂ ಇದ್ದು ಯಾರೂ ಇಲ್ಲ ಅನ್ನೋ ಒಂಟಿ ಭಾವನೆ ಬರುತ್ತಿದ್ದರೆ.
ಜೀವನ ಸಾಕು ಸತ್ತೋಗಿಬಿಡೋಣ ಅನ್ನಿಸುತ್ತಿದ್ದರೆ.
ಇಂಥವರು,  "ಶ್ರೀ ದುರ್ಗಾದೇವಿಗೆ" 7 ಮಂಗಳವಾರ "ವೀಳ್ಯದೆಲೆ "ಹಾರ ಹಾಕಿಸಿ, ಪ್ರಾರ್ಥನೆ ಮಾಡಿ, ಫಲ ಹಾಗೂ ತಾಂಬೂಲವನ್ನು ನೈವೇದ್ಯ ಮಾಡಿಸಿ, ಸುಮಂಗಲಿಯರಿಗೆ ತಾಂಬೂಲ ದಾನ ಮಾಡಿದರೆ , ಸರ್ವ ದೋಷಗಳು ನಿವಾರಣೆಯಾಗುತ್ತದೆ. ದುರ್ಗಾದೆವಿಗೆ ವೀಳ್ಯದೆಲೆ ಹಾರ ತುಂಬಾ ವಿಶೇಷವಾಗಿರುತ್ತದೆ..
ಯಾರ ಬುದ್ಧಿಯು ಮಂಕಾದರೆ
ಜ್ಞಾಪಕ ಶಕ್ತಿ, ಬುದ್ಧಿಶಕ್ತಿ ಕಡಿಮೆಯಾದರೆ
ತಲೆಯಲ್ಲಿ ನೀರು ತುಂಬಿದ್ದರೆ 
ಬಾಣಂತಿಯರಲ್ಲಿ ಸನ್ನಿಯಾದರೆ
ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ
ದೇಹದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದರೆ
ಕಣ್ಣಿನಲ್ಲಿ ನೀರು ಬರುತ್ತಿದ್ದರೆ
ದೇಹದಲ್ಲಿ fluid ಕಡಿಮೆಯಾದರೆ
ನಾಲಿಗೆ ಯಾವಾಗಲೂ ಒಣಗುತ್ತಿದ್ದರೆ
ಈ ತರಹ ದೋಷವುಳ್ಳವರು "ಶ್ರೀದುರ್ಗಾ" ದೇವಿಗೆ 9 ಮಂಗಳವಾರ ದೇವಿಗೆ "ವೀಳ್ಯದೆಲೆ" ಹಾರ ಹಾಕಿಸಿ, ಪೂಜಿಸಿ ತಾಂಬೂಲ ದಾನ ಮಾಡುತ್ತಾ ಬಂದರೆ
ಸರ್ವದೋಷ ನಿವಾರಣೆಯಾಗುತ್ತದೆ. ಆರೋಗ್ಯಭಾಗ್ಯ ಉಂಟಾಗುತ್ತದೆ ..
ಯಾವುದೇ ತರಹದ "ಶ್ರೇಯಸ್ಸಿಗಾಗಿ ದೇವಿಗೆ ಬೆಳಗ್ಗೆ "ವೀಳ್ಯದೆಲೆ " ಹಾರ ಹಾಕಿಸಿ. ಯಾವುದೇ ತರಹದ ಖಾಯಿಲೆಯಿಂದ ಗುಣವಾಗಬೇಕಾದರೆ, "ಸಾಯಂಕಾಲ" ವೀಳ್ಯದೆಲೆ ಹಾರ ಹಾಕಬೇಕು..
(22, 24, 48, 108 ,109 ಎಲೆಗಳಿದ್ದರೆ ತುಂಬಾ ಒಳ್ಳೆಯದು, ಜೋಡಿ ಇರಬೇಕು. ಆಗದಿದ್ದರೆ 5 , 7, 9, 11 ಎಲೆಗಳ ಹಾರ ಬೇಕಾದರೂ ಹಾಕಬಹುದು)
x