ಪಶುಪತಿ ಅಷ್ಟಕವು ಪಶುಪತಿ ದೇವರನ್ನು ಕುರಿತು ಹೇಳುವ ಪ್ರಾರ್ಥನೆ. ನೇಪಾಳ ಮತ್ತು ದಕ್ಷಿಣ ಭಾರತದಲ್ಲಿ ಮಹಾದೇವ ಶಿವನನ್ನು ಪಶುಪತಿನಾಥನ ರೂಪದಲ್ಲಿ ಪೂಜಿಸುತ್ತಾರೆ. ನೇಪಾಳದಲ್ಲಿರುವ ಪಶುಪತಿನಾಥನ ದೇವಾಲಯ ಜಗತ್ತಿನಲ್ಲೇ ಪ್ರಸಿದ್ದವಾದ ಹಿಂದೂ ದೇವಾಲಯ. ಭಕ್ತರು ಪಶುಪತಿ ಅಷ್ಟಕವನ್ನು ತಮ್ಮ ಪಾಪವನ್ನು ನಿವಾರಿಸಿಕೋಳ್ಳಲು ಮತ್ತು ದೇವರ ಕೃಪೆಯಿಂದ ಸಂತೋಷ ಮತ್ತು ಸಂಪತ್ತನ್ನು ಪಡೆಯಲು ಪಠನ ಮಾಡುತ್ತಾರೆ.
ಪಶುಪತಿ ಅಷ್ಟಕದ ಅರ್ಥ ಮತ್ತು ವ್ಯಾಖ್ಯಾನ
ಪಶುಪತೀನ್ದುಪತಿಂ ಧರಣೀಪತಿಂ ಭುಜಗಲೋಕಪತಿಂ ಚ ಸತೀಪತಿಮ್ |
ಪ್ರಣತಭಕ್ತಜನಾರ್ತಿಹರಂ ಪರಂ ಭಜತ ರೇ ಮನುಜಾ ಗಿರಿಜಾಪತಿಮ್ ||೧||
೧. ಹೇ ಮನುಜ, ತನ್ನ ನಿಜಭಕ್ತರ ಕಷ್ಟಗಳನ್ನು ನಿವಾರಿಸುವ ಇಂದುಪತಿಯೂ,ಧರಣೀಪತಿಯೂ,ಸಕಲಲೋಕಪತಿಯೂ, ಸತಿಪತಿಯೂ, ಗಿರಿಜಾಪತಿಯೂ ಆದ ಪಶುಪತಿಯನ್ನು ಭಜಿಸು.
ನ ಜನಕೋ ಜನನೀ ನ ಚ ಸೋದರೋ ನ ತನಯೋ ನ ಚ ಭೂರಿಬಲಂ ಕುಲಮ್ |
ಅವತಿ ಕೋಽಪಿ ನ ಕಾಲವಶಂ ಗತಂ ಭಜತ ರೇ ಮನುಜಾ ಗಿರಿಜಾಪತಿಮ್ ||೨||
೨. ಹೇ ಮನುಜ, ತಂದೆ,ತಾಯಿ,ಸೋದರರು,ಮಕ್ಕಳು ಮತ್ತು ತುಂಬಿದ ಕುಟುಂಬ; ಇವರಾರೂ ನೀನು ಕಾಲವಶವಾಗುವಾಗ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಗಿರಿಜಾಪತಿಯನ್ನು ಭಜಿಸು.
ಮುರಜಡಿಣ್ಡಿಮವಾದ್ಯವಿಲಕ್ಷಣಂ ಮಧುರಪಞ್ಚಮನಾದವಿಶಾರದಮ್ |
ಪ್ರಮಥಭೂತಗಣೈರಪಿ ಸೇವಿತಂ ಭಜತ ರೇ ಮನುಜಾ ಗಿರಿಜಾಪತಿಮ್ ||೩||
೩. ಹೇ ಮನುಜ, ಮುರಜ ಡಿಂಡಿಮಗಳಂಥಾ ವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣನೂ, ಮಧುರವಾದ ಪಂಚಮ ಸ್ವರ ಹಾಡುವುದರಲ್ಲಿ ವಿಶಾರದನೂ ಪ್ರಥಮ ಗಣಗಳಿಂದ ಸೇವಿಸಲ್ಪಡುವವನೂ ಆದ ಗಿರಿಜಾಪತಿಯನ್ನು ಭಜಿಸು.
ಶರಣದಂ ಸುಖದಂ ಶರಣಾನ್ವಿತಂ ಶಿವ ಶಿವೇತಿ ಶಿವೇತಿ ನತಂ ನೃಣಾಮ್ |
ಅಭಯದಂ ಕರುಣಾವರುಣಾಲಯಂ ಭಜತ ರೇ ಮನುಜಾ ಗಿರಿಜಾಪತಿಮ್ ||೪||
೪. ಹೇ ಮನುಜ, ಶಿವ-ಶಿವ-ಶಿವ ಎಂದು ಶರಣಾರ್ಥಿಯಾಗಿ ಬಂದ ಜನರಿಗೆ ಆಶ್ರಯ ಮತ್ತು ಸುಖ-ಸಂತೊಷಗಳನ್ನು ಕೊಡುವ ರಕ್ಷಕನೂ, ದಯಾಸಾಗರನೂ ಆದ ಗಿರಿಜಾಪತಿಯನ್ನು ಭಜಿಸು.
ನರಶಿರೋರಚಿತಂ ಮಣಿಕುಣ್ಡಲಂ ಭುಜಗಹಾರಮುದಂ ವೃಷಭಧ್ವಜಮ್ |
ಚಿತಿರಜೋಧವಲೀಕೃತವಿಗ್ರಹಂ ಭಜತ ರೇ ಮನುಜಾ ಗಿರಿಜಾಪತಿಮ್ ||೫||
೫. ಹೇ ಮನುಜ, ನರ ರುಂಡಮಾಲನೂ, ಸರ್ಪ ಕುಂಡಲ ಧಾರಿಯೂ, ಸರ್ಪಹಾರ ಶೋಭಿತನೂ, ವೃಷಭದ್ವಜನೂ, ಚಿತಾಭಸ್ಮಧರನೂ ಆದ ಗಿರಿಜಾಪತಿಯನ್ನು ಸದಾ ಭಜಿಸು.
ಮಖವಿನಾಶಕರಂ ಶಿಶಿಶೇಖರಂ ಸತತಮಧ್ವರಭಾಜಿಫಲಪ್ರದಮ್ |
ಪ್ರಳಯದಗ್ಧಸುರಾಸುರಮಾನವಂ ಭಜತ ರೇ ಮನುಜಾ ಗಿರಿಜಾಪತಿಮ್ ||೬||
೬. ಹೇ ಮನುಜ,ದಕ್ಷಯಘ್ನ ವಿನಾಶಕನೂ, ಚಂದ್ರಶೇಖರನೂ, ಯಘ್ನಕರ್ತ್ರುಗಳಿಗೆ ಸದಾ ವರದಾಯಕನೂ, ಪ್ರಳಯಕಾಲದಲ್ಲಿ ಸುರ ನರ ದಾನವರನ್ನೆಲ್ಲರನ್ನೂ ದಹಿಸುವಂಥಾ ಗಿರಿಜಾಪತಿಯನ್ನು ಸದಾ ಭಜಿಸು.
ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ ಮರಣಜನ್ಮಜರಾಮಯಪೀಡಿತಮ್ |
ಜಗದುದೀಕ್ಷ್ಯ ಸಮೀಪಭಯಾಕುಲಂ ಭಜತ ರೇ ಮನುಜಾ ಗಿರಿಜಾಪತಿಮ್ ||೭||
೭. ಹೇ ಮನುಜ,ದೀರ್ಘಕಾಲ ಹ್ರದಯದೋಳಗೆ ಕುಳಿತಿದ್ದ ನಿನ್ನ ಮದವು,ಈ ಜಗತ್ತಿನಲ್ಲಾಗುವ ಹುಟ್ಟು,ಮುಪ್ಪು,ಸಾವುಗಳನ್ನು ಹತ್ತಿರದಿಂದ ನೋಡಿ ಭಯಪೀಡಿತನಾಗಿ ಓಡುವ ಸಮಯದಲ್ಲಿ ಗಿರಿಜಾಪತಿಯನ್ನು ಭಜಿಸು.
ಹರಿವಿರಞ್ಚಿಸುರಾಧಿಪಪೂಜಿತಂ ಯಮಜನೇಶಧನೇಶನಮಸ್ಕೄತಮ್ |
ತ್ರಿನಯನಂ ಭುವನತ್ರಿತಯಾಧಿಪಂ ಭಜತ ರೇ ಮನುಜಾ ಗಿರಿಜಾಪತಿಮ್ ||೮||
೮. ಹೇ ಮನುಜ, ವಿಷ್ನು, ಭ್ರಹ್ಮ, ಇಂದ್ರರಿಂದ ಪೂಜಿಸಲ್ಪಡುವ, ಯಮ, ವರುಣ, ಕುಬೇರರಿಂದ ಸ್ತುತಿಸಲ್ಪಡುವ, ತ್ರಿನೇತ್ರಗಳಿಂದ ಹತ್ತಿರದಲ್ಲಿ ಭಯಾನಕವಾಗಿ ತೊರುವ ಗಿರಿಜಾಪತಿಯನ್ನು ಸದಾ ಭಜಿಸು.
ಪಶುಪತೇರಿದಮಷ್ಟಕಮದ್ಭುತಂ ವಿರಚಿತಂ ಪೃಥಿವೀಪತಿಸೂರಿಣಾ |
ಪಠತಿ ಸಂಶ್ರೃಣುತೇ ಮನುಜಃ ಸದಾ ಶಿವಪುರೀಂ ವಸತೇ ಲಭತೇ ಮುದಮ್ ||೯||
9.ಯಾವ ಮಾನವನು ಮಹಾರಾಜ ಸೂರಿ ರಚಿತವಾದ ಈ ಅದ್ಭುತವಾದ ಪಶುಪತಿ ಅಷ್ಟಕವನ್ನು ಪಠಿಸುವನೋ ಅಥವಾ ಕೆಳುವನೋ ಅವನು, ಸದಾ ಶಿವಪುರಿಯಲ್ಲಿ ವಾಸಿಸುವ ಸೌಭಾಗ್ಯವನ್ನು ಹೊಂದುತ್ತಾನೆ.
ಇತಿ ಶ್ರೀಪಶುಪತ್ಯಷ್ಟಕಮ್ ಸಂಪೂರ್ಣಮ್
ಸಂಗ್ರಹ: ವೇ ಚನ್ನೇಶ ಶಾಸ್ತ್ರಿಗಳು
No comments:
Post a Comment
If you have any doubts. please let me know...