ನಮ್ಮವರೇ ನಮಗೆ ಶತೃಗಳೇ...!!!
ದಯವಿಟ್ಟು ಗಮನಿಸಿ.
ಒಮ್ಮೆ ನಾಯಿ ಮತ್ತು ಕತ್ತೆಯಾ ನಡುವೆ ಓಟದ ಸ್ಪರ್ಧೆ ನಡಿತಾಯಿತ್ತು.!
ನಾಯಿಯು ತನ್ನ ಮನಸ್ಸಿನಲ್ಲಿ ಸಂತೋಷ ಪಡುತ್ತ ಕತ್ತೆ ಜೋತೆನ ನನ್ನ ಸ್ಪರ್ಧೆ ಎಂದು ಮುಗುಳ್ ನಗುತ್ತ, ಬಹಳ ಅಂತರದಿಂದ ಗೆಲ್ಲುವೆ ಎಂಬ ಆತ್ಮ ವಿಶ್ವಾಸದಿಂದ ಸ್ಪರ್ಧೆಗೆ ಇಳಿದಿತ್ತು.!
ಓಟ ಪ್ರಾರಂಭವಾಯಿತು, ನಾಯಿಯು ತನ್ನ ಸಂಪೂರ್ಣ ಬಲವನ್ನ ಉಪಯೋಗಿಸಿ ಕತ್ತೆಗಿಂತ ಮುಂದೆ ಓಡತೊಡಗಿತು.!
ಒಂದು ಓಣಿಯಿಂದ ಇನ್ನೋಂದು ಓಣಿಗೆ ಹೋಗುತ್ತಲೇ ಶುರುವಾಯಿತು ನೋಡಿ ಎದುರಾಳಿಗಳ ಕಾಟ, ಎದುರಾಳಿಗಳು ಯಾರಂತಿರಾ? ತನ್ನ ಕುಲಭಾಂದವರೇ, ತಾನು ಓಡುವುದನ್ನ ನೋಡಿ ಆ ಓಣಿಯಾ ನಾಯಿಗಳು ಅದನ್ನ ತಡೆಯಲು ಪ್ರಾರಂಭಿಸಿದವು,ಜಗಳಕ್ಕೆ ನಿಂತವು.
ಆಗ ಅದು ತನ್ನೆಲ್ಲ ಬಲವನ್ನು ಉಪಯೋಗಿಸಿ ಅಲ್ಲಿಂದ ಮುಂದೆ ಸಾಗಿತು, ಮುoದೆ ಸಾಗಿದಂತೆ ಮತ್ತೊಂದು ಓಣಿ ಹೊಕ್ಕಿತು. ಅಲ್ಲಿ ಹಿಂದಿನ ಓಣಿಕ್ಕಿಂತ ಹೆಚ್ಚು ನಾಯಿಗಳು ಎದುರು ನಿಂತವು, ಇದನ್ನ ಮುಂದೆ ಹೊಗದಂತ್ತೆ ತಡೆದು ಅದರ ಮೇಲೆ ಹರಿಹೈದವು, ಕಾಲುಯಳೆಯಲು ಪ್ರಾರಂಭಿಸಿದವು. ತಾನು ತನ್ನ ಕುಲಭಾಂದವರಿಂದ ತಪ್ಪಿಸಿ ಕೊಂಡು ಓಡಿ ತನ್ನ ಗುರಿತಲುಪವ ಹೊತ್ತಿಗೇ ಆ ಕತ್ತೆ ಯಾವುದೇ ಅಡೆ ತಡೆಯಿಲ್ಲದೆ ವಿಜಯವನ್ನು ಸಾಧಿಸಿ ಬಿಟ್ಟಿತ್ತು.
ಅದನ್ನ ಕಂಡ ನಾಯಿ ತನ್ನ ಮನಸ್ಸಿನಲ್ಲೆ ನನ್ನವರೇ ನನಗೆ ಶತ್ರುಗಳಾದರಲ್ಲ ಎಂದು ಮರಗಿ, ಸೋತು ಸಣ್ಣಗಾಯಿತು..!
ಗೆಳೆಯರೇ ಈ ರೀತಿಯಾ ಸನ್ನಿವೆಶಗಳು ನಮ್ಮ ಬಹು ಜನರ ಬಾಳಿನಲ್ಲಿ ನಡಿತ್ತಾನೇ ಬಂದಿವೆ.
ನಮ್ಮನಮ್ಮಲ್ಲಿ ಹೊಡೆದಾಡುವುದು, ಕಾಲೆಳೆಯುವುದು ನಮ್ಮ ಸಮಾಜದಲ್ಲಿ ಕಂಡು ಬರುತ್ತದೆ. ಎಲ್ಲಿಯವರೆಗೆ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ಶತ್ರುಗಳು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಾರೆ.
ಇದು ಸದ್ಯದ ಮಟ್ಟಿಗೆ ನಮ್ಮಲ್ಲೇ ನಡೆಯುತ್ತಿರುವ ನಿದರ್ಶನ. ...
No comments:
Post a Comment
If you have any doubts. please let me know...