December 27, 2022

ಹಿರಣ್ಯ ಗರ್ಭ

ಕಸ್ಮೈ ದೇವಾಯ ಹವಿಷಾ ವಿಧೇಮ

ಹಿರಣ್ಯಗರ್ಭ ಸೂಕ್ತ ಎಂದೇ ಪ್ರಸಿದ್ಧಿ ಪಡೆದ ಈ ಸೂಕ್ತದ ದ್ರಷ್ಟಾರ ಮಹರ್ಷಿ ಪ್ರಜಾಪತಿಯ ಮಗನಾದ ಹಿರಣ್ಯಗರ್ಭನು. ಇದು ಋಗ್ವೇದದ ಹತ್ತನೇ ಮಂಡಲದ 121ನೇ ಸೂಕ್ತ. 

ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ ||

ಈ ಬ್ರಹ್ಮಾಂಡದ ಸೃಷ್ಟಿಯ ಆದಿಯಲ್ಲಿ ಹಿರಣ್ಯಗರ್ಭ ಎನ್ನುವ ಹೆಸರನ್ನು ಪಡೆದಿದ್ದ ಪ್ರಜಾಪತಿಯು ಒಬ್ಬನೇ ಇದ್ದನು. ಈತನಿಂದಲೇ ಬ್ರಹ್ಮಾಂಡದ ಎಲ್ಲವೂ ಜನ್ಮ ತಳೆದವು. ಈ ಹಿರಣ್ಯಗರ್ಭನು ವಿಶಾಲವಾದ ಭೂಮ್ಯಂತರಿಕ್ಷಗಳೆಲ್ಲವನ್ನೂ ತಾನು ಹೊಂದಿದ್ದಾನೆ. ಅಂದರೆ ಇವನೇ ಎಲ್ಲವಕ್ಕೂ ಮೂಲ. ಇವನ ಮುಖ್ಯ ಗುಣವೇ ಉದಾರತೆ ಅಥವಾ ದಾನ. ಅಂತಹ ಪ್ರಜಾಪತಿಗೆ ಹವಿಸ್ಸುಗಳನ್ನು ಕೊಡೋಣ. ಇಲ್ಲಿ ಕಸ್ಮೈ ಎನ್ನುವುದು ಪ್ರಜಾಪತಿಯನ್ನು ಕುರಿತಾಗಿ.
"ಪ್ರಜಾಪತಿರ್ವೈ ಹಿರಣ್ಯ ಗರ್ಭಃ" ಇದು ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಬರುವ ಮಂತ್ರ. ಈ ಬ್ರಹ್ಮಾಂಡದ ರಚನೆಯ ಆರಂಭದಲ್ಲಿ ಜಗತ್ತು ಒಂದು ಮೊಟ್ಟೆಯ ಆಕಾರದಲ್ಲಿತ್ತು. ಅದೂ ಸಹ ಪ್ರಜಾಪತಿಯ ಹೊಟ್ಟೆಯಲ್ಲಿತ್ತು. ಅದು ಅಲ್ಲಿ ಚಿನ್ನದಂತೆ ಹೊಳೆಯುತ್ತಾ ಪ್ರಕಾಶಮಾನವಾಗಿತ್ತು. ಅಂತಹ ಪ್ರಕಾಶಮಾನವಾದ ಹಿರಣ್ಯಾಂಡವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡದ್ದಕ್ಕಾಗಿ ಪ್ರಜಾಪತಿಯನ್ನು ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ. ಈ ಜಗತ್ತು ಮೊದಲು ಅವ್ಯಕ್ತವಾಗಿತ್ತು, ಅತ್ಯಂತ ಸೂಕ್ಷವಾದ ಕಣವೊಂದರಿಂದ ಆಮೇಲೆ ವ್ಯಕ್ತವಾಯಿತು ಎನ್ನುವ ಅತ್ಯಂತ ದೊಡ್ದ ಅರ್ಥವನ್ನು ಕೊಡುತ್ತದೆ. “ಸೋ ಕಾಮಯತ ಬಹುಸ್ಯಾಂ ಪ್ರಜಾಯಾಯೇತಿ” ಎನ್ನುವ ತೈತ್ತಿರೀಯ ಉಪನಿಷತ್ತಿನ ವಾಕ್ಯವೂ ಸಹ ಇದನ್ನೇ ಹೇಳುತ್ತದೆ. ಪ್ರಜಾಪತಿಯ ಗರ್ಭದಲ್ಲಿ ಅವ್ಯಕ್ತ ಸ್ವರೂಪದಲ್ಲಿದ್ದು, ಚಿನ್ನದಂತೆ ಪ್ರಕಾಶಮಾನವಾಗಿ ಕಾಣಿಸಿಕೊಂಡಿರುವುದು ಈ ಜಗತ್ತು ಆದುದರಿಂದ ಪ್ರಜಾಪತಿಯನ್ನು ಮತ್ತು ಈ ಜಗತ್ತನ್ನು ಹಿರಣ್ಯಗರ್ಭ ಎನ್ನುವುದಾಗಿ ಹೇಳಲಾಗುತ್ತದೆ. ಹೌದು ಇಲ್ಲಿ ಇನ್ನೊಂದು ಜಿಜ್ಞಾಸೆ ನಮ್ಮನ್ನು ಕಾಡುತ್ತದೆ. ಈ ಮೇಲಿನ ಋಕ್ಕಿನ ಮುಂದಿನ ಭಾಗದಲ್ಲಿ ಭೂತಸ್ಯ ಜಾತಃ ಪತಿರೇಕ ಆಸೀತ್’ ಎನ್ನುತ್ತದೆ. ಪತಿ ಎನ್ನುವುದು ಒಡೆಯನಿಗೆ. ವ್ಯಕ್ತವಲ್ಲದ ಸ್ಥಿತಿಯಲ್ಲಿದ್ದ ಜಗತ್ತಿನಲ್ಲಿ ಪ್ರಜಾಪತಿಯೊಬ್ಬನಿದ್ದಾಗ ಆತ ಒಡೆಯನಾಗಲು ಸಾಧ್ಯವೇ ? ಅಂದರೆ ಈ ಹಿರಣ್ಯಗರ್ಭನ ಉದರದಲ್ಲಿ ಬ್ರಹ್ಮಾಂಡದ ಸಕಲ ಚರಾಚರಗಳು ಕುಳಿತಿದ್ದವು ಅವುಗಳನ್ನು ನಿಯಂತ್ರಿಸಿಕೊಂಡಿದ್ದವ ಪ್ರಜಾಪತಿ ಅಥವಾ ಹಿರಣ್ಯಗರ್ಭ. ಆದುದರಿಂದ “ಭೂತಸ್ಯ ಜಾತಃ ಪತಿರೇಕಃ” ‘ಸ ದಾಧಾರ ಪೃಥಿವೀಂ ದ್ಯಾಮುತೇಮಾಂ’ ಈ ಹಿರಣ್ಯಗರ್ಭನಿಂದಲೇ ಅಸ್ತಿತ್ವವನ್ನು ಪಡೆದ ಈ ಭೂಮಿ ಅಂತರಿಕ್ಷ ಮತ್ತು ದೇವಲೋಕಗಳಿಗೆ ಇವನೇ ಆಧಾರವಾಗಿ ಇರುವುದರಿಂದ ಇವನನ್ನೇ ಹಿರಣ್ಯಗರ್ಭ ಎನ್ನುವುದಾಗಿ ಕರೆಯಲಾಗಿದೆ. 
___________________________________________________________________
ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ| ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ| ಪೃಥಿವ್ಯಾ ಓಷಧಯಃ| ಓಷಧೀಭ್ಯೋ ಅನ್ನಃ| ಅನ್ನಾತ್ ಪುರುಷಃ|| ತೈತ್ತಿರೀಯ ಉಪನಿಷದ್|| 2:1:2
ಮೂಲ: ಸದ್ಯೋಜಾತರು
#ಕಸ್ಮೈ_ದೇವಾಯ

ಲಲಿತ ದೇವಿಯ ಕಥೆ

ಲಲಿತ ಸಹಸ್ರ ನಾಮ ಪಠಿಸುವ ಉದ್ದೇಶ
ಬ್ರಹ್ಮಾಂಡಪುರಾಣದಲ್ಲಿ ಹಯಗ್ರೀವ ಮುನಿಯು ಅಗಸ್ತ್ಯರಿವವವಲಲಗೆ ಶ್ರೀಲಲಿತೋಪಾಖ್ಯಾನವನ್ನು ಹೇಳಿ ಲಲಿತಾ ಸಹಸ್ರ ನಾಮದಿಂದ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ.

ಲಲಿತಾಸಹಸ್ರನಾಮಕ್ಕೂ ಮುನ್ನ ಬರುವ ಲಲಿತಾಂಬೆಯ ಕಥೆ ಈ ರೀತಿ ಇದೆ :

    ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಪ್ರವೇಶ ವಾಯಿತು,
ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು.
    ರುದ್ರನ ಕೆಂಗಣ್ಣಿನಿಂದ ಸುಡಲ್ಪಟ್ಟ ಬೂದಿಯಿಂದ ಹುಟ್ಟಿದ ಭಂಡನು ರೌದ್ರ ಸ್ವಭಾವವನ್ನ ಹೊಂದಿದ್ದನು, ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವತೆಗಳಿಗೆ ನಾನಾವಿಧವಾದ ತೊಂದರೆಗಳನ್ನು ನೀಡುತ್ತಿದ್ದನು, ನಾರದರ ಉಪದೇಶದಂತೆ ಇಂದ್ರನು ಸಮಸ್ತ ದೇವತೆಗಳೊಂದಿಗೆ ಹಿಮಗಿರಿಯ ತಪ್ಪಲಿಗೆ ಬಂದು ಭಾಗೀರಥೀ ತೀರದಲ್ಲಿ ಪರಾಶಕ್ತಿಯ ಪೂಜೆಯನ್ನು ಯಾಗ ವಿಧಾನದಿಂದ ಮಾಡಿದನು.
    ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರು ವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.

ಲಲಿತಾ ಸಹಸ್ರನಾಮದ ಹಿನ್ನೆಲೆ.

ಯ ಏಕೋsವರ್ಣೋ ಬಹುಧಾಶಕ್ತಿಯೋಗಾದ್ ವರ್ಣಾನನೇಕಾನ್ಹ ನಿಹಿತಾರ್ಥೋ ದಧಾತಿ (ಶ್ವೇತಾಶ್ವತರೋಪನಿಷತ್), ಪರತತ್ತ್ವಕ್ಕೆ ನಾಮರೂಪಗಳಾಗಲಿ ಇಲ್ಲ ಹೀಗಿದ್ದರೂ ವರ್ಣರಹಿತವಾದ ಒಂದೇ ತತ್ತ್ವವು ಶಕ್ತಿ ಯೋಗದಿಂದ ವಿವಿಧ ವರ್ಣಗಳನ್ನುಂಟು ಮಾಡುತ್ತದೆ.
    ಇರುವ ಒಂದೇ ಶಕ್ತಿ ನಾನಾ ರೂಪ ನಾಮ ಗಳಿಂದ ಭಕ್ತರಿಂದ ಉಪಾಸ್ಯವಾಗಿರುವುದೇಕೆ? : ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ (ಭಗವದ್ಗೀತಾ), ಯಾರು ನನ್ನನ್ನು ಹೇಗೆ ಆಶ್ರಯಿಸುವರೋ ಹಾಗೆಯೇ ಅವರನ್ನು ಅನುಗ್ರಹಿಸುತ್ತೇನೆ, ಅದಕ್ಕಾಗಿ ಭಕ್ತರ ಭಾವದಂತೆ ನಾನಾ ನಾಮಗಳಿಂದ, ರೂಪಗಳಿಂದ ಉಪಾಸ್ಯನಾಗಿರುವುದು.
    ಶಬ್ದಾರ್ಥಗಳು ಪರಮಾತ್ಮ ಶಕ್ತಿಯ ಅಭಿವ್ಯಕ್ತಿಯ ರೂಪ, ಪರಮಾತ್ಮ ಶರೀರಿಯಾದರೆ(ಆತ್ಮ), ಶಬ್ದಾರ್ಥಗಳು ಶರೀರವಾಗಿವೆ, ವರ್ಣಗಳಿಂದ ಶಬ್ದಗಳಾಗಿರುವುದರಿಂದ ಪ್ರತಿಯೊಂದು ವರ್ಣದಲ್ಲಿಯೂ ಶಕ್ತಿಯು ಅಂತರ್ಗತವಾಗಿರುವುದು. ಪ್ರತಿಯೊಂದು ವರ್ಣವೂ ಪರಮಾತ್ಮ ಶಕ್ತಿಯ ಪ್ರತೀಕವಾಗಿದೆ, ವರ್ಣಸಮೂಹವಾದ ನಾಮಗಳೆಲ್ಲ ದೇವತಾ ಸ್ವರೂಪವೇ ಆಗಿದೆ ಆದ್ದರಿಂದಲೇ ವೇದಗಳಲ್ಲಿ ದೈವತ್ವವನ್ನು ಕಾಣುವುದು, ನಾಮಪೂಜೆಗೆ ವೈಶಿಷ್ಟ್ಯವಿರುವುದು ಇದರಲ್ಲೆ.
    ಉಪಾಸನೆಯಲ್ಲಿ 1.ದ್ವಾದಶ, 2.ಅಷ್ಟೋತ್ತರ, 3.ತ್ರಿಶತಿ ಹಾಗೂ 4. ಸಹಸ್ರನಾಮ ಪೂಜೆಗಳು ಮಹತ್ವವನ್ನು ಪಡೆದಿವೆ.
ಮಾನವನು ಪರತತ್ತ್ವವನ್ನು ರೂಪ ಗುಣಗಳಿಂದ ಕೂಡಿದುದಾಗಿ ಉಪಾಸಿಸ ಬೇಕಾದರೆ ಮಾತೃಭಾವ ಕ್ಕಿಂತ ಉದಾತ್ತವೂ ಉದಾರವೂ ಹೃದಯಂಗಮವೂ ಆದ ಬೇರೆ ಇನ್ನಾವ ಕಲ್ಪನೆಯಿರುವುದು? ಆದ ಕಾರಣ ಯೋಗಿಗಳೂ ಉಪಾಸಕರೂ ಮಾತೃ ಭಾವದಿಂದಲೆ ಪರಮಾತ್ಮನನ್ನು ಕಾಣುತ್ತಾರೆ, ಆ ಮಾತೃಭಾವವೇ ಶ್ರೀಮಾತಾ ಶ್ರೀಮಹಾರಾಜ್ಞಿಯೆಂದು, ಲಲಿತಾಂಬೆಯೆಂದು ಉಪಾಸಿಸಿರು,
    ಅದಕ್ಕಾಗಿ ಲಲಿತಾ ಸಹಸ್ರನಾಮವನ್ನು ಅರ್ಥಸಹಿತವಾಗಿ ನೀಡುವ ಪ್ರಯತ್ನ ನಮ್ಮದು, ಅರ್ಥಾನುಸಂಧಾನ ಸಹಿತವಾಗಿ ಮಂತ್ರಗಳ ಅನುಷ್ಠಾನ ನಡೆಯುವಂತಾಗಬೇಕು, ನಮ್ಮೀ ಪ್ರಯತ್ನಕ್ಕೆ ಲಲಿತಾಂಬೆಯ ಆಶಿರ್ವಾದವೂ ಲಭಿಸಲೆಂದು ಪ್ರಾರ್ಥಿಸೋಣ.

ಲಲಿತಾ ಸಹಸ್ರನಾಮದ ಹಿನ್ನೆಲೆ – 2 : ಯಜ್ಞಕುಂಡದಲ್ಲಿ ಉತ್ಪನ್ನವಾದ ಚಕ್ರಾಕಾರದ ಮಧ್ಯೆ ಅವತರಿಸಿದ ದೇವಿಯು ದೇವತೆಗಳ ಪ್ರಾರ್ಥನೆಯಂತೆ ಭಂಡಾಸುರನ ನಾಶಕ್ಕೆ ಸಮ್ಮತಿಸಿದಳು, ಶಿವನನ್ನು ವರಿಸಿ ಮಹಾರಾಜ್ಞಿಯಾದಳು. ಅನಂತರ ಪರಬ್ರಹ್ಮ ಸ್ವರೂಪಿಣಿಯು ಭಂಡಾಸುರನನ್ನು ಇತರ ದೈತ್ಯರನ್ನು ಕೊಂದು ಶೋಣಿತಪುರವನ್ನು ನಾಶ ಮಾಡಿದಳು.
    ದೇವತೆಗಳು ದೇವಿಯನ್ನು ಸ್ತುತಿಸಿ ಪತಿ ಮೃತ್ಯುವಿನಿಂದ ನೊಂದಿರುವ ರತಿಯನ್ನು ಅನುಗ್ರಹಿಸ ಬೇಕೆಂದು ಬೇಡಿಕೊಂಡರು, ಕರುಣಾಮಯಿಯಾದ ದೇವಿಯು ರತಿಯ ದುಃಖವನ್ನ ಸಹಿಸಲಾರದೆ ತನ್ನ ಕೃಪಾಕಟಾಕ್ಷದಿಂದ ಮನ್ಮಥನನ್ನು ಪುನಃ ಬದುಕಿಸಿದಳು,
    ಅನಂತರ ವಿಶ್ವಕರ್ಮನು ಮತ್ತು ಮಯನು ಮೇರುಪರ್ವತದ ಮಧ್ಯಶಿಖರದಲ್ಲಿ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿದರು, ಶ್ರೀಪುರದಲ್ಲಿ ಚಿಂತಾಮಣಿಗೃಹ ವೆಂಬ ಅರಮನೆಯಿರುವುದು, ಇದರ ಮಧ್ಯದಲ್ಲಿ ಬಿಂದು ಪೀಠವೆಂದು ಪ್ರಸಿದ್ಧವಾದ ದೇವಿಯ ಪೀಠವಿದೆ.
    ಆ ಮಹಾಪೀಠದಲ್ಲಿ ಶ್ರೀದೇವಿಯ ಮಂಚರತ್ನವು ವಿರಾಜಿಸುತ್ತಿರುವುದು, ಬ್ರಹ್ಮ-ವಿಷ್ಣು-ಈಶ್ವರ-ಮಹೇಶ್ವರರೇ ಇದರ ನಾಲ್ಕು ಕಾಲುಗಳು, ಸದಾಶಿವನೇ ಈ ಮಂಚದ ಹಲಗೆ, ಇದರ ಮೇಲೆ ಪೂರ್ವ ದಿಙ್ಮುಖನಾಗಿ ಭಗವಂತನಾದ ಕಾಮೇಶ್ವರ ನು ಕುಳಿತಿರುವನು, ಆ ಕಾಮೇಶ್ವರನ ಅಂಕದ ಮೇಲೆ ಸದಾ ಷೋಡಶ ವರ್ಷದವಳಾದ ಶ್ರೀಲಲಿತಾಂಬಿಕೆಯು ಕುಳಿತಿರುವಳು.
    ಶ್ರೀಚಕ್ರವು ರೇಖಾಕೃತಿಯಿಂದ ಶ್ರೀಪುರವನ್ನು ರೂಪಿಸಿದೆ, (ಸೌಂದರ್ಯಲಹರಿಯಲ್ಲಿ ಇದೆ ರೀತಿ ಶಂಕರಾಚಾರ್ಯರು ವರ್ಣಿಸಿದ್ದಾರೆ), ಶ್ರೀ ಶಂಕರಾಚಾರ್ಯರು, ಭಗವತಿಯ ಕರುಣಾ ಮೃತವನ್ನು ವರ್ಣಿಸುತ್ತಾ, ಭಕ್ತಿಯಿಂದ ಅಮ್ಮಾ ಎಂದರೆ ಸಾಕು, ಕರುಣೆಯ ವರ್ಷಧಾರೆಯನ್ನು ಸುರಿಸಲು ಭಗವತಿ ಲಲಿತಾ ಮಹಾತ್ರಿಪುರ ಸಂದರಿ ಕಾಯುತ್ತಾ ಇರುತ್ತಾಳಂತೆ, ಶ್ರೀದೇವಿಯ ಅನುಗ್ರಹ ಎಂತಹದ್ದೆಂದರೇ, ಏಕ ಕಾಲದಲ್ಲಿಯೇ ಭೋಗವನ್ನೂ – ಮೋಕ್ಷವನ್ನೂ ಎರಡನ್ನೂ ಕರುಣಿಸುವವಳು.
    ಇಂತಹ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಇರುವ ಮಾರ್ಗಗಳಲ್ಲಿ, ಶ್ರೀವಿದ್ಯಾ ಉಪದೇಶದ ಮೂಲಕ, ಶ್ರೀಚಕ್ರ ವನ್ನು ಅರ್ಚಿಸುವುದು ಒಂದಾದರೆ, ಸೌಂದರ್ಯ ಲಹರೀ ಮತ್ತು ಲಲಿತಾ ಸಹಸ್ರ ನಾಮ ಪಠಿಸುವುದು ಅತ್ಯಂತ ಸುಲಭವೂ ಉತ್ಕೃಷ್ಟವೂ ಆದದ್ದು, ಇಂತಹ ಘನವಾದ ಲಲಿತಾ ಸಹಸ್ರ ನಾಮವನ್ನು ಅರ್ಥಸಹಿತ ತಿಳಿದು ಭಗವತಿಯ ಅನುಗ್ರಹಕ್ಕೆ ಪಾತ್ರರಾಗೋಣ.

ಲಲಿತಾಸಹಸ್ರನಾಮದ ಸಹಸ್ರನಾಮ ಮಹಿಮೆ

    ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ. ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡ ಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾ ತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು.
    ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ.
ಪ್ರತಿದಿನ ಸಹಸ್ರನಾಮದಿಂದ ಮಂತ್ರಿತವಾದ ಬೆಣ್ಣೆಯನ್ನು ಬಂಜೆಯು ಭಕ್ಷಿಸಿದರೆ ಪುತ್ರವತಿಯಾಗುವಳು.

ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||

ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ.

ಮುಹ್ಯನ್ತಿ ಕಾಮವಶಗಾ ಮೃಗಾಕ್ಷ್ಯಸ್ತಸ್ಯ ವೀಕ್ಷಣಾತ್ ।
ಯಃ ಪಠೇನ್ನಾಮಸಾಹಸ್ರಂ ಜನ್ಮಮಧ್ಯೇ ಸಕೃನ್ನರಃ

ಯಾರು ಒಂದು ಪಕ್ಷ ಪಠಿಸುವರೋ ಅಂತಹವರ ವೀಕ್ಷಣಮಾತ್ರದಿಂದ ಮೃಗಾಕ್ಷಿಯರು ವಶರಾಗುತ್ತಾರೆ ಅಂದರೆ ದಾಂಪತ್ಯದಲ್ಲಿ ಅನ್ಯೋನ್ಯತೆಯಿರುತ್ತದೆ.

ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |
ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ.

ಶ್ರೀ ಲಲಿತಾ ಸಹಸ್ರನಾಮ ಮಹಿಮೇ .. 23

ಅಯಮಾಯುಷ್ಕರೋ ನಾಮ ಪ್ರಯೋಗಃ ಕಲ್ಪಚೋದಿತಃ ।
ಜ್ವರಾರ್ತಂ ಶಿರಸಿ ಸ್ಪೃಷ್ಟ್ವಾ ಪಠೇನ್ನಾಮಸಹಸ್ರಕಮ್ ॥ 23॥

ಆಯುಷ್ಕರವೆಂಬ ಹೆಸರುಳ್ಳ ಈ ಪ್ರಯೋಗವು ಕಲ್ಪಗಳಲ್ಲಿ (ಪರಶುರಾಮಕಲ್ಪ) ಹೇಳಲ್ಪಟ್ಟಿದ್ದೇ. ಜ್ವರದಿಂದ ಪೀಡಿತನಾದವನ ತಲೆಯನ್ನು ಮುಟ್ಟಿ ಸಹಸ್ರನಾಮವನ್ನು ಪಠಿಸಬೇಕು.

ತತ್ಕ್ಷಣಾತ್ಪ್ರಶಮಂ ಯಾತಿ ಶಿರಸ್ತೋದೋ ಜ್ವರೋಽಪಿ ಚ ।
ಸರ್ವವ್ಯಾಧಿನಿವೃತ್ತ್ಯರ್ಥಂ ಸ್ಪೃಷ್ಟ್ವಾ ಭಸ್ಮ ಜಪೇದಿದಮ್ ॥ 24॥

ತಕ್ಷಣವೇ ತಲೆನೋವು ಮತ್ತು ಜ್ವರವು ಹೋಗುವುದು. ಸರ್ವವ್ಯಾದಿನಾಶಕ್ಕಾಗಿ ಭಸ್ಮವನ್ನು ಮುತ್ತಿಹೇಳಿ ಹಚ್ಚ ಬೇಕು ಹಣೆಗೆ.

ತಸ್ಯ ಯೇ ಶತ್ರವಸ್ತೇಷಾಂ ನಿಹನ್ತಾ ಶರಭೇಶ್ವರಃ ।
ಯೋ ವಾಽಭಿಚಾರ ಕುರುತೇ ನಾಮಸಾಹಸ್ರಪಾಠಕಮ್ ॥ 34॥

ಸಹಸ್ರನಾಮಪಾಠಕನನ್ನು ಯಾರು ಕ್ರೂಟದೃಷ್ಟಿಯಿಂದ ನೋಡುವರೋ, ಅಂಥವರನ್ನು ಮಾರ್ತಾಂಡಭೈರವನು ಕುರುಡರನ್ನಾಗಿ ಮಾಡುತ್ತಾನೆ. 
ಲಲಿತಾಸಹಸ್ರನಾಮ ಪಠಿಸುವವರ ಮೇಲೆ ವಾಮಾಚಾರದ ಆಟ ನಡೆಯುವದಿಲ್ಲ.

ಶ್ರೇಷ್ಠತೆ

ಬ್ರಹ್ಮಾದಿಗಳ ಇಚ್ಛೆಯಂತೆ ಲಾವಣ್ಯವತಿಯಾದ ದೇವಿಯು ಕಾಮೇಶ್ವರನ ರೂಪದಲ್ಲಿದ್ದು ಶಿವನನ್ನು ವರಿಸಿ ಶಿವ ಕಾಮೇಶ್ವರಾಂಕ ಸ್ಥಾಯಿಯಾದಳು. ಬ್ರಹ್ಮನೇ ಮಾತೆಗೆ ಕಾಮಾಕ್ಷಿಯೆಂದೂ, ಕಾಮೇಶ್ವರಿಯೆಂದೂ ಬಿರುದುಗಳನ್ನು ಸಮರ್ಪಿಸಿದನು.

ಪುರಾಣಾಂ ಶ್ರೀಪುರಮಿವ ಶಕ್ತೀನಾಂ ಲಲಿತಾ ಯಥಾ |
ಶ್ರೀವಿದ್ಯೋಪಾಸಕಾನಾಂ ಚ ಯಥಾ ದೇವೋ ವರಃ ಶಿವಃ ||
ತಥಾ ನಾಮಸಹಸ್ರೇಷು ವರಮೇತತ್ ಪ್ರಕೀರ್ತಿತಮ್ |

ಪುರಗಳಲ್ಲಿ ಶ್ರೀಪುರವು ಹೇಗೆ ಶ್ರೇಷ್ಠವೋ, ಶಕ್ತಿಗಳಲ್ಲಿ ಶ್ರೀ ಲಲಿತಾಂಬಿಕೆಯು ಹೇಗೋ, ಶ್ರೀವಿದ್ಯೋಪಾಸಕರಲ್ಲಿ ಪರಶಿವನು ಹೇಗೋ, ಹಾಗೆಯೇ ಸಹಸ್ರನಾಮಗಳಲ್ಲಿ ಲಲಿತಾಸಹಸ್ರನಾಮವು ಶ್ರೇಷ್ಠ, ಅಷ್ಟೇ ಅಲ್ಲ ಹರಗ್ರೀವರು ಇನ್ನೂ ಮುಂದುವರೆದು ಹೇಳುತ್ತಾರೆ.

ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |
ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ. ಹೀಗಿರುವಾಗ ಶ್ರೀ ಲಲಿತಾಸಹಸ್ರನಾಮದ ಹಿರಿಮೆ ಮತ್ತು ಗರಿಮೆಯ ಬಗ್ಗೆ ಹೇಳುವದೇನಿದೆ?
ಅಂತಹ ಮಾತೆಯು 'ಸಮಾನಾಧಿಕ ವರ್ಜಿತ'ಳಾಗಿರವದು ಯುಕ್ತವಾಗಿಯೇ ಇದೆ.

    ಪ್ರಪಂಚಕ್ಕೂ, ಶ್ರೀದೇವಿಗೂ ಇರುವ ಸಂಬಂಧ, ಸಮಯಾಚಾರ, ಭಕ್ತಿ, ಆತ್ಮವಿದ್ಯೆ, ಮಹಾವಿದ್ಯೆ, ಚಂದ್ರವಿದ್ಯೆ, ಶ್ರೀವಿದ್ಯೆ, ಷೋಡಶಾಕ್ಷರೀವಿದ್ಯೆ, ಮಂತ್ರವಿದ್ಯೆ, ನಂದಿವಿದ್ಯೆ, ಯಂತ್ರವಿದ್ಯೆ, ತಂತ್ರವಿದ್ಯೆ, ಕುಂಡಲಿನೀಯೋಗ ಷಟ್ಟಿಕ್ರಗಳಲ್ಲಿ ಶ್ರೀ ದೇವಿಯ ಆವಾಸ, ನಾದ ಬ್ರಹ್ಮನ ವಿಚಾರ, ನಾಲ್ಕು ವಿಧ ವಾಕ್ಕು, ಅಂತರ್ಯಾಗ, ಮುದ್ರೆಗಳು, ಜೀವನ್ಮುಕ್ತಿ ವಿಚಾರ, ಪ್ರಳಲ, ಶ್ರೀ ಗಾಯಿತ್ರೀ, ಸಂಧ್ಯಾ, ದುರ್ಗಾ, ಲಕ್ಷ್ಮೀ, ಸಾವಿತ್ರೀ, ಸರಸ್ವತೀ, ಭೂದೇವಿ, ದಕ್ಷಿಣಾಮೂರ್ತಿ, ನಟೇಶ್ವರಿ, ಮಹಾಕಾಳಿ ಮತ್ತು ಶ್ರೀ ಬಾಲಾಂಬಿಕೆಯರ ಮಹಿಮೆಗಳು ವರ್ಣಿತವಾಗಿವೆ.

ಶ್ರೀಮಾತಾ ಎಂದು ಆರಂಭವಾಗುವ ಶ್ರೀ ಲಲಿತಾಸಹಸ್ರನಾಮವು ಲಲಿತಾಂಬಿಕಾ - ಎಂದು ಮುಕ್ತಾಯವಾಗುತ್ತದೆ.
ಎರಡನ್ನೂ ಸೇರಿಸಿದರೆ ಶ್ರೀ ಮಾತಾ ಲಲಿತಾಂಬಿಕಾ ಎಂದಾಗುತ್ತದೆ. ಜಗಜ್ಜನನಿ ಎಂದರೆ ಶ್ರೀ ಲಲಿತಾಮಾತೆಯೇ.

ಲಿಲಿತಾ ಎಂಬ ಶಬ್ದಕ್ಕೆ ಲೋಕಾನತೀತ್ಯ ಲಲಿತೆ ಲಲಿತಾ ಅಂದರೆ ಸಕಲಲೋಕಗಳನ್ನೂ ಅತಿಕ್ರಮಿಸಿ ಲೀಲಾಮಾತ್ರಳಾಗಿರುವವಳು ಎಂದು ಪದ್ಮಪುರಾಣದಲ್ಲಿ ಹೇಳಿದೆ.

ಇನ್ನು ಕಡೆಯದಾಗಿ ಫಲಶ್ರುತಿಯ ಕಡೆಗೆ ಸಾಗೋಣ. ಇದು 87 ಶ್ಲೋಕಗಳಿಂದ ಕೂಡಿದ 'ಶ್ರೀ ಲಲಿತಾ ಸಹಸ್ರನಾಮ ಫಲನಿರೂಪಣಮ್' ಎಂಬ ಅಧ್ಯಾಯ

ಫಲ ಶ್ರುತಿ .. 01

ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||

ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ.

ಸರ್ವಾಪಮೃತ್ಯುಶಮನಂ ಕಾಲಮೃತ್ಯುನಿವಾರಣಮ್ ।
ಸರ್ವಜ್ವರಾರ್ತಿಶಮನಂ ದೀರ್ಘಾಯುಷ್ಯಪ್ರದಾಯಕಮ್ ॥ 3॥

ಇದು ಅಪಮೃತ್ಯುವನ್ನು ತಪ್ಪಿಸುವುದು, ಕಾಲ ಮೃತ್ಯುವನ್ನು ನಿವಾರಿಸುವುದು, ಸರ್ವ ಜ್ವರ ವೇದನೆಯನ್ನು ಉಪಶಮನ ಮಾಡುವುದು ಮತ್ತು ದೀರ್ಘಯುಷ್ಯವನ್ನು ಕೊಡುವುದು.

ಪುತ್ರಪ್ರದಮಪುತ್ರಾಣಾಂ ಪುರುಷಾರ್ಥಪ್ರದಾಯಕಮ್ ।
ಇದಂ ವಿಶೇಷಾಚ್ಛ್ರೀದೇವ್ಯಾಃ ಸ್ತೋತ್ರಂ ಪ್ರೀತಿವಿಧಾಯಕಮ್ ॥ 4॥

ಇದು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡುವುದು ಮತ್ತು ಪುರುಷಾರ್ಥವನ್ನು ಕೊಡುವುದು. ಈ ಸ್ತೋತ್ರವು ಶ್ರೀ ದೇವಿಗೆ ವಿಶೇಷವಾಗಿ ಪ್ರೀತಿದಾಯಕ ವಾಗಿರುವುದು.

ಜಪೇನ್ನಿತ್ಯಂ ಪ್ರಯತ್ನೇನ ಲಲಿತೋಪಾಸ್ತಿತತ್ಪರಃ ।
ಪ್ರಾತಃ ಸ್ನಾತ್ವಾ ವಿಧಾನೇನ ಕ್ತ್ವಯಾಕರ್ಮ ಸಮಾಪ್ಯ ಚ ॥ 5॥

ಲಲಿತೋಪಾಸಕರು ಇದನ್ನು ನಿತ್ಯವೂ ಯತ್ನದಿಂದ ಜಪಿಸಬೇಕು. ಪ್ರಾತಃ ಕಾಲದಲ್ಲಿ ಸ್ನಾನವನ್ನು ಮಾಡಿ ಸಂದ್ಯಾಕರ್ಮವನ್ನು ವಿಧಿ ಪ್ರಕಾರ ಮುಗಿಸಬೇಕು.

ಪೂಜಾಗೃಹಂ ತತೋ ಗತ್ವಾ ಚಕ್ರರಾಜಂ ಸಮರ್ಚಯೇತ್ ।
ವಿದ್ಯಾಂ ಜಪೇತ್ ಸಹಸ್ರಂ ವಾ ತ್ರಿಶತಂ ಶತಮೇವ ವಾ ॥ 6

ಪೂಜಾಗೃಹವನ್ನು ಅನಂತರ ಪವೇಶಿಸಿ ಶ್ರೀ ಚಕ್ರವನ್ನು ಪೂಜಿಸಬೇಕು. ಅನಂತರ ಅವನು ಪಂಚದಶೀ ಅಥವಾ ಷೋಡಶಿ ವಿದ್ಯೆಯನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ, ಅಥವಾ ನೂರು ಸಲವಾಗಲಿ ಜಪಿಸಬೇಕು.

ರಹಸ್ಯನಾಮಸಾಹಸ್ರಮಿದಂ ಪಶ್ಚಾತ್ಪಠೇನ್ನರಃ ।
ಜನ್ಮಮಧ್ಯೇ ಸಕೃಚ್ಚಾಪಿ ಯ ಏತತ್ಪಠತೇ ಸುಧೀಃ ॥ 7॥

ರಹಸ್ಯವಾದ ಈ ಸಹಸ್ರ ನಾಮವನ್ನು ಯಾವ ಜ್ಞಾನಿಯು ತನ್ನ ಜೀವನಕಾಲ ದಲ್ಲಿ ಒಂದು ಸಲವಾದರೂ ಪಠಿಸುವರೊ.

ತಸ್ಯ ಪುಣ್ಯಫಲಂ ವಕ್ಷ್ಯೇ ಶೃಣು ತ್ವಂ ಕುಮ್ಭಸಮ್ಭವ ।
ಗಂಗಾದಿ ಸರ್ವತೀರ್ಥೇಷು ಯಃ ಸ್ನಾಯಾತ್ಕೋಟಿಜನ್ಮಸು ॥ 8॥

ಉಪಾಸಕರಿಗೆ ಉಂಟಾಗುವ ಫಲವು ಅಗಸ್ತ್ಯನೆ ಕೇಳು, ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡಿದ ಫಲ.

ಕೋಟಿಲಿಂಗಪ್ರತಿಷ್ಠಾಂ ಚ ಯಃ ಕುರ್ಯಾದವಿಮುಕ್ತಕೇ ।
ಕುರುಕ್ಷೇತ್ರೇ ತು ಯೋ ದದ್ಯಾತ್ಕೋಟಿವಾರಂ ರವಿಗ್ರಹೇ ॥ 9

ಕೋಟಿಂ ಸೌವರ್ಣಭಾರಾಣಾಂ ಶ್ರೋತ್ರಿಯೇಷು ದ್ವಿಜನ್ಮಸು
ಯಃ ಕೋಟಿಂ ಹಯಮೇಧಾನಾಮಾಹರೇದ್ ಗಾತ್ರರೋಧಸಿ ॥ 10॥

ಅವಿಮುಕ್ತಕ್ಷೇತ್ರದಲ್ಲಿ ಕೋಟಿಲಿಂಗ ಪ್ರತಿಷ್ಠೆಯನ್ನು ಮಾಡಿದರೆ, ಕುರು ಕ್ಷೇತ್ರದಲ್ಲಿ ಶ್ರೋತ್ರಿಯರಾದ ಬ್ರಾಹ್ಮಣರಿಗೆ ಕೋಟಿಸಲ ಸುವರ್ಣ ಭಾರಗಳನ್ನು ದಾನಮಾಡಿದರೆ, ಗಂಗಾತಿರದಲ್ಲಿ ಕೋಟಿ ಸಲ ಅಶ್ವಮೇಧಗಳನ್ನು ಮಾಡಿದ ಪುಣ್ಯ ದೊರೆಯುವುದು.

ಆಚರೇತ್ಕೂಪಕೋಟೀರ್ಯೋ ನಿರ್ಜಲೇ ಮರುಭೂತಲೇ ।
ದುರ್ಭಿಕ್ಷೇ ಯಃ ಪ್ರತಿದಿನಂ ಕೋಟಿಬ್ರಾಹ್ಮಣಭೋಜನಮ್ ॥ 11॥

ನೀರಿಲ್ಲದ ಮರುಭೂಮಿಯಲ್ಲಿ ಅನೇಕ ಕೊಳಗಳನ್ನು ತೊಡಿಸಿದರೆ, ದುರ್ಭಿಕ್ಷದಲ್ಲಿ ಕೋಟಿ ಬ್ರಾಹ್ಮಣರಿಗೆ ಪ್ರತಿದಿನ ಭೋಜನ ಹಾಕಿದ ಫಲ.

ಶ್ರದ್ಧಯಾ ಪರಯಾ ಕುರ್ಯಾತ್ಸಹಸ್ರಪರಿವತ್ಸರಾನ್ ।
ತತ್ಪುಣ್ಯಂ ಕೋಟಿಗುಣಿತಂ ಲಭೇತ್ಪುಣ್ಯಮನುತ್ತಮಮ್ ॥ 12॥

ರಹಸ್ಯನಾಮಸಾಹಸ್ರೇ ನಾಮ್ರೋಽಪ್ಯೇಕಸ್ಯ ಕೀರ್ತನಾತ್ ।
ರಹಸ್ಯನಾಮಸಾಹಸ್ರೇ ನಾಮೈಕಮಪಿ ಯಃ ಪಠೇತ್ ॥ 13

ತಸ್ಯ ಪಾಪಾನಿ ನಶ್ಯನ್ತಿ ಮಹಾನ್ತ್ಯಪಿ ನ ಸಂಶಯಃ ।
ನಿತ್ಯಕರ್ಮಾನನುಷ್ಠಾನಾನ್ನಿಷಿದ್ಧಕರಣಾದಪಿ ॥ 14॥

ಈ ಹಿಂದೆ ಹೇಳಿದ ಪುಣ್ಯ ಕಾರ್ಯಗಳನ್ನು ಒಂದು ಸಾವಿರ ವರ್ಷ ಮಾಡಿದರೆ ಉಂಟಾಗುವ ಪುಣ್ಯವನ್ನು ಉಂಟಾಗುವ ಅಣುಮತ್ತಮ ಪುಣ್ಯಕ್ಕೆ ಸಮವಾಗಿರುವುದು. ಯಾರು ತಮ್ಮ ಜೀವನದಲ್ಲಿ ರಹಸ್ಯ ಸಹಸ್ರ ನಾಮದ ಒಂದು ನಾಮವನ್ನಾದ್ರೂ ಪಠಿಸುತ್ತಾನೋ ಅವರ ಮಹಾ ಪಾಪಗಳು ಕೂಡಾ ನಾಶವಾಗುವುವು.

ಫಲಶ್ರುತಿ ಅಥವಾ ಉತ್ತರಭಾಗ

    ಹೀಗೆ ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ ಹಯಗ್ರೀವನು ಅಗಸ್ತ್ಯನನ್ನು ಸಂಬೋಧಿಸುಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ ಮತ್ತು ಇದರಲ್ಲಿ ಯಾವುದೇ ನಾಮವು ಪುನರಾವೃತವಾಗಿಲ್ಲ.

    (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅದರಲ್ಲಿ ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ ಸಹಸ್ರನಾಮವು ಅತ್ಯಂತ ನಿಗೂಢವಾಗಿದ್ದು ಲಲಿತಾಂಬಿಕೆಯು ಈ ಸಹಸ್ರನಾಮದ ಕುರಿತು ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ. ಯಾವುದೇ ಮಂತ್ರವನ್ನು ರಹಸ್ಯಾತ್ಮಕವಾದದ್ದು ಎಂದು ಪರಿಗಣಿಸಲಾಗುತ್ತದೆ; ಅದರೊಳಗೆ ಅಡಕವಾಗಿರುವ ಬೀಜಾಕ್ಷರಗಳಿಂದಾಗಿ. ಲಲಿತಾ ಸಹಸ್ರನಾಮದ ಪ್ರತಿಯೊಂದು ನಾಮದಲ್ಲೂ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ ಎಂದು ಹೇಳಲಾಗುವುದರಿಂದ ಸಂಪೂರ್ಣ ಸಹಸ್ರನಾಮವು ಮಂತ್ರದ ಸ್ಥಾನವನ್ನು ಪಡೆಯುತ್ತದೆ.

ಲಲಿತಾ ಸಹಸ್ರನಾಮವನ್ನು ಉಚ್ಛರಿಸುವುದರಿಂದ ಕೆಳಗಿನ ಫಲಗಳು ದೊರೆಯುತ್ತವೆ:
೧) ಇದು ಸರ್ವರೋಗಗಳನ್ನು ನಾಶ ಮಾಡವುದು ಮತ್ತು ಸರ್ವವಿಧ ಸಂಪತ್ತನ್ನು ಹೆಚ್ಚಿಸುವುದು,
೨) ಇದು ಅಪಮೃತ್ಯುಗಳನ್ನು ತಪ್ಪಿಸುವುದು, ಅಪಘಾತಗಳನ್ನು ನಿವಾರಿಸುವುದು, ಸರ್ವ ಜ್ವರವೇದನೆಯನ್ನು ಉಪಶಮನ ಮಾಡವುದು.
೩) ಇದು ಮಕ್ಕಳಿಲ್ಲದವರಿಗೆ ಉತ್ತಮ ಸಂತಾನವನ್ನು ಕರುಣಿಸುತ್ತದೆ ಮತ್ತು ಪುರುಷಾರ್ಥವನ್ನು ಕೊಡುವುದು.

ವಾಚನದ ವಿಧಾನ:
    ಲಲಿತೋಪಾಸಕನು ಇದನ್ನು ನಿತ್ಯವೂ ಪ್ರಯತ್ನಪೂರ್ವಕವಾಗಿ ಮಾಡಬೇಕು. ಪ್ರಾತಃಕಾಲದಲ್ಲಿ ಸ್ನಾನವನ್ನು ಮಾಡಿ ಸಂಧ್ಯಾದಿಕರ್ಮಗಳನ್ನು ವಿಧಿಪ್ರಕಾರ ಮುಗಿಸಿ, ಶ್ರೀ ಚಕ್ರದ ಅರ್ಚನೆಯನ್ನು ಮಾಡಬೇಕು. ಶ್ರೀ ಚಕ್ರವನ್ನು ಪೂಜಿಸಿದ ನಂತರ ಒಬ್ಬನು ಪಂಚದಶೀ (ಷೋಡಶೀ) ಮಂತ್ರಗಳನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ ಅಥವಾ ನೂರು ಸಲವಾಗಲಿ ಜಪಿಸಬೇಕು. ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಒಬ್ಬನು ಈ ಸಹಸ್ರನಾಮವನ್ನು ಪಠಿಸಬೇಕು. ಸಹಸ್ರನಾಮವು ಸಂಪೂರ್ಣಗೊಂಡ ಮೇಲೆ ಒ‌ಬ್ಬನು ಲಲಿತಾಂಬಿಕೆಗೆ ಪುಷ್ಪಗಳನ್ನು ಸಮರ್ಪಿಸಬೇಕು. ಒಂದು ವೇಳೆ ಒಬ್ಬನು ಮಂತ್ರ ಜಪ ಅಥವಾ ಶ್ರೀ ಚಕ್ರೋಪಾಸನೆಯ ದೀಕ್ಷೆಯನ್ನು ಪಡೆಯದಿದ್ದಲ್ಲಿ ಅವನು ಕೇವಲ ಈ ಸಹಸ್ರನಾಮವೊಂದನ್ನೇ ಪಠಿಸಬಹುದು.

ಒಬ್ಬನು ಜೀವಿತಕಾಲದಲ್ಲಿ ಒಂದೇ ಒಂದು ಬಾರಿ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ಹೀಗಿವೆ:
  1. ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡುವುದರಿಂದ ದೊರೆಯುವ ಫಲಕ್ಕಿಂತ ಅಧಿಕ ಫಲವನ್ನು ಪಡೆಯುತ್ತಾನೆ.
  2. ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾನೆ.
  3. ಕುರುಕ್ಷೇತ್ರದಲ್ಲಿ ಸೂರ್ಯ ಗ್ರಹಣದ ಸಮಯದಲ್ಲಿ ಶ್ರೋತ್ರೀಯರಾದ ಬ್ರಾಹ್ಮಣರಿಗೆ ಕೋಟಿ ಸಲ ಕೋಟಿ ಸುವರ್ಣ ಭಾರಗಳನ್ನು ದಾನ ಮಾಡಿ ಲಭಿಸುವ ಪುಣ್ಯಕ್ಕಿಂತ ಅಧಿಕವಾದ ಪುಣ್ಯವು ದೊರೆಯು‌ತ್ತದೆ.
  4. ಗಂಗೆಯ ತಟದಲ್ಲಿ ಮಾಡುವ ಕೋಟಿ ಅಶ್ವಮೇಧಯಾಗಕ್ಕಿಂತ ಅಧಿಕವಾದ ಪುಣ್ಯವು ಲಭಿಸುತ್ತದೆ.
  5. ಸಹಸ್ರನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಛರಿಸಿದರೂ ಸಹ ಅವನ ಮಹಾಪಾಪಗಳು ನಾಶವಾಗುವುವು.
  6. ಸಹಸ್ರನಾಮದ ಒಂದು ನಾಮಕ್ಕೆ ಪಾತಕ ನಾಶಮಾಡಲು ಇರುವ ಶಕ್ತಿಯನ್ನು ಹದಿನಾಲ್ಕು ಲೋಕಗಳ ಸಮಸ್ತ ಜೀವರಾಶಿಗಳೂ ತಮ್ಮ ಪಾಪಾಚರಣೆಯಿಂದ ನಿವಾರಿಸಲಾರವು.
  7. ಯಾವನು ಪಾಪನಾಶವನ್ನು ಮಾಡಿಕೊಳ್ಳಲು ಸಹಸ್ರನಾಮವನ್ನು ಬಿಟ್ಟು ಇತರೇ ಪ್ರಾಯಶ್ಚಿತ್ತ ಕರ್ಮಗಳನ್ನು ಆಶ್ರಯಿಸುವನೋ ಅವನು ಶೀತವನ್ನು ಹೋಗಲಾಡಿಸಿಕೊಳ್ಳಲು ಹಿಮಾಲಯವನ್ನು ಆಶ್ರಯಿಸಿದ ಮನುಷ್ಯನಂತೆ.
  8. ಒಬ್ಬನು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಿದ್ದರೆ ಲಲಿತಾಂಬಿಕೆಯು ಅವನ ಬಗೆಗೆ ಅತೀವ ಸಂತೋಷವನ್ನು ಹೊಂದಿ ಅವನ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಈ ಸಹಸ್ರನಾಮವನ್ನು ಒಬ್ಬನು ನಿತ್ಯವೂ ಪಠಿಸದೇ ಇದ್ದರೆ ಅವನನ್ನು ಭಕ್ತನೆಂದು ಪರಿಗಣಿಸಲಾಗದು ಎಂದು ಹೇಳಲಾಗುತ್ತದೆ. ಒಬ್ಬನು ಭಕ್ತನೆನಿಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗೆಗೆ ಅವನಿಗೆ ಎಣೆಯಿಲ್ಲದಷ್ಟು ಪ್ರೀತಿ ಇರಬೇಕು. ಈ ಸಹಸ್ರನಾಮವನ್ನು ನಿತ್ಯವೂ ಸಂಪೂರ್ಣವಾಗಿ ಪಠಿಸಿದರೆ ಮಾತ್ರ ಲಲಿತಾಂಬಿಕೆಯು ಅಂತಹ ಭಕ್ತಿಯನ್ನು ಹುಟ್ಟುಹಾಕುತ್ತಾಳೆ.
  9. ಒಬ್ಬನಿಗೆ ಇದನ್ನು ನಿತ್ಯವೂ ಪಠಿಸಲು ಆಗದಿದ್ದರೆ ಅವನು ಇದನ್ನು ಕಡೇಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು. ಮುಖ್ಯವಾದ ದಿವಸಗಳೆಂದರೆ, ಸಂಕ್ರಾಂತಿ ಅಥವಾ ವಿಷುವತ್ಸಂಕ್ರಾಂತಿಯಲ್ಲಿ, ಉತ್ತಾರಾಯಣ ಹಾಗು ದಕ್ಷಿಣಾಯನ ಪುಣ್ಯಕಾಲ, ಮೊದಲಾದವುಗಳು. ಸಹಸ್ರನಾಮವನ್ನು ಪಠಿಸಲು ಇತರೇ ಶುಭದಿನಗಳೆಂದರೆ ಅಷ್ಟಮೀ, ನವಮೀ ಮತ್ತು ಚತುರ್ದಶೀ ತಿಥಿಗಳು ಮತ್ತು ಶುಕ್ರವಾರಗಳು.
  10. ಎಲ್ಲದಕ್ಕಿಂತ ಹೆಚ್ಚು ಪ್ರಶಸ್ತವಾದ ಸಮಯವು ಹುಣ್ಣಿಮೆಯಾಗಿದೆ. ಪೂರ್ಣ ಚಂದ್ರನ ದರ್ಶನವನ್ನು ಪಡೆದ ನಂತರ ಒಬ್ಬರು ಲಲಿತಾಂಬಿಕೆಯನ್ನು ಚಂದ್ರಬಿಂಬದಲ್ಲಿ ಧ್ಯಾನಿಸಿ ಪಂಚೋಪಚಾರಗಳಿಂದ (ಗಂಧ, ಪುಷ್ಪ, ದೀಪ, ಧೂಪ, ನೈವೇದ್ಯ) ಶ್ರೀ ಚಕ್ರವನ್ನು ಪೂಜಿಸಿ ಈ ಸಹಸ್ರನಾಮವನ್ನು ಪಠಿಸಿದಲ್ಲಿ ಅವರ ಸರ್ವರೋಗಗಳು ಪರಿಹಾರವಾಗಿ ಅವರು ದೀರ್ಘಾಯು‌ಷ್ಯವನ್ನು ಪಡೆಯುತ್ತಾರೆ.
  11. ತನ್ನ ಹಾಗು ತನ್ನ ಸಂಗಾತಿಯ ಮತ್ತು ಮಕ್ಕಳ ಜನ್ಮ ನಕ್ಷತ್ರಗಳಿರುವ ದಿನಗಳೂ ಸಹ ಲಲಿತಾ ಸಹಸ್ರನಾಮ ಪಠಣಕ್ಕೆ ಅತ್ಯಂತ ಪ್ರಶಸ್ತ ದಿನಗಳೆಂದು ಪರಿಗಣಿತವಾಗಿವೆ.

ಇತರೇ ಒಳಿತುಗಳು:
  • ಪರಶುರಾಮಕಲ್ಪದಲ್ಲಿ ಹೇಳಿರುವಂತೆ ಸರ್ವರೋಗನಾಶಕ್ಕಾಗಿ ಮತ್ತು ದೀರ್ಘಾಯುಸ್ಸಿಗಾಗಿ ಆಯಷ್ಕರವೆಂಬ ಪೂಜಾ ಪದ್ಧತಿಯಂತೆ, ಜ್ವರದ ತಾಪದಿಂದ ಬಳಲುತ್ತಿರುವವರ ತಲೆಯ ಮೇಲೆ ಕೈಯಿರಿಸಿ ಲಲಿತಾ ಸಹಸ್ರನಾಮದ ಪಠಣವನ್ನು ಕೈಗೊಂಡಲ್ಲಿ ಅವರ ದೇಹದ ಉಷ್ಣತೆಯು ಶಮನಗೊಂಡು ಇತರೇ ವಿಧವಾದ ಬಾಧೆಗಳು ನಾಶವಾಗುತ್ತವೆ.
  • ಭಸ್ಮದ ಮೇಲೆ ಕೈಯಿರಿಸಿ ಈ ಸಹಸ್ರನಾಮವನ್ನು ಪಠಿಸಿದ ನಂತರ ಆ ಪವಿತ್ರ ಭಸ್ಮವನ್ನು ಯಾತನೆಯಿಂದ ನರಳುತ್ತಿರುವವರ ದೇಹಕ್ಕೆ ಲೇಪಿಸಿದಲ್ಲಿ ಅವರ ಯಾತನೆಗಳು ಕಡಿಮೆಯಾಗುತ್ತವೆ.
  • ಒಂದು ವೇಳೆ ಒಬ್ಬನು ಗ್ರಹದೋಷಗಳಿಂದ ಪೀಡಿತನಾಗಿದ್ದರೆ, ಕುಂಭದಲ್ಲಿ ನೀರನ್ನು ಸಹಸ್ರನಾಮದಿಂದ ಸಂಮಂತ್ರಿಸಿ ಪ್ರೋಕ್ಷಿಸಿದಲ್ಲಿ ಬಾಲಗ್ರಹ, ದುಷ್ಟಸ್ಥಾನದಲ್ಲಿರುವ ನವಗ್ರಹಗಳ ದೋಷಗಳು, ಪಿಶಾಚಪೀಡೆಗಳು ದೂರವಾಗುತ್ತವೆ.
  • ಮಕ್ಕಳಿಲ್ಲದವರಿಗೆ, ಈ ಸಹಸ್ರನಾಮದಿಂದ ಪವಿತ್ರಗೊಂಡ ನವನೀತವನ್ನು (ಬೆಣ್ಣೆ) ತಿನ್ನಲು ಕೊಟ್ಟರೆ ಅವರಿಗೆ ಪುತ್ರಲಾಭವಾಗುವುದು.
  • ಭಗವಾನ್ ಶರಭೇಶ್ವರನು, ಯಾರು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಾರೆಯೋ ಅವರ ಶತ್ರುಗಳನ್ನು ಸರ್ವನಾಶ ಮಾಡುತ್ತಾನೆ.
  • ಈ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಉಂಟಾಗುವ ದುಷ್ಟ ಶಕ್ತಿಗಳ ಪೀಡನೆಯನ್ನು ‘ಪ್ರತ್ಯಂಗಿರಾ ದೇವಿ’ಯು ನಾಶಮಾಡುತ್ತಾಳೆ. ಪ್ರತ್ಯಂಗಿರಾ ದೇವಿಯು ಶರಭೇಶ್ವರನ ಸಂಗಾತಿಯಾಗಿದ್ದಾಳೆ.
  • ಈ ಸಹಸ್ರನಾಮವನ್ನು ಪಠಿಸುವವರನ್ನು ಕ್ರೂರದೃಷ್ಟಿಯಿಂದ ನೋಡಿದವರನ್ನು ಮಾರ್ತಾಂಡ ಭೈರವನು (ನಾಮ ೭೮೫) ಕುರುಡನನ್ನಾಗಿಸುತ್ತಾನೆ.
  • ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರ ಸಂಪತ್ತನ್ನು ಯಾರಾದರೂ ಅಪಹರಿಸುವುದಾಗಲಿ ಅಥವಾ ಇತರೇ ವಿಧಾನಗಳ ಮೂಲಕ ಹಾನಿಯುಂಟು ಮಾಡಿದರೆ ಅವರನ್ನು ಕ್ಷೇತ್ರಪಾಲನು (ನಾಮ ೩೪೪) ಸಂಹರಿಸುತ್ತಾನೆ.
  • ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರೊಂದಿಗೆ ಯಾರಾದರೂ ಅನಗತ್ಯವಾದ ವಾದವಿವಾದಕ್ಕಿಳಿದರೆ ನಕುಲೀಶ್ವರೀ ದೇವಿಯು ಅಂತಹ ವ್ಯಕ್ತಿಯ ವಾಕ್ಕನ್ನು (ಮಾತನ್ನು) ನಿಷ್ಪ್ರಯೋಜನಗೊಳಿಸುತ್ತಾಳೆ. ನಕುಲೀಶ್ವರೀ ದೇವಿಯನ್ನು ನವಾವರಣದಲ್ಲೂ ಪೂಜಿಸಲಾಗುತ್ತದೆ ಮತ್ತು ಈಕೆಯು ಮಂತ್ರಿಣೀ ದೇವಿ ಎಂದು ಕರೆಯಲ್ಪಡುವ ಶ್ಯಾಮಲಾ ದೇವಿಯ (ನಾಮ ೬೯, ೭೫) ಸಹಾಯಕಿಯಾಗಿದ್ದಾಳೆ.
  • ಈ ಲಲಿತಾ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಶತ್ರುತ್ವವನ್ನು ಒಬ್ಬ ರಾಜನೇ ತೆಳೆದಿದ್ದರೂ ಸಹ ಅವನ ಸೈನ್ಯವನ್ನು ಲಲಿತಾಂಬಿಕೆಯ ಸೇನಾ ಪ್ರಮುಖಳಾಗಿರುವ ದಂಡಿನೀ ದೇವಿಯೇ (ವಾರಾಹೀ - ನಾಮ ೭೦, ೭೬) ಸ್ವಯಂ ನಾಶಪಡಿಸುತ್ತಾಳೆ; ಈ ವಿಷಯವಾಗಿ ಅವಳಲ್ಲಿ ಭಕ್ತನು ಬೇಡದಿದ್ದರೂ ಸಹ ಮತ್ತು ಅದಕ್ಕೆ ಲಲಿತಾಂಬಿಕೆಯ ಆಜ್ಞೆಯಿಲ್ಲದಿದ್ದರೂ ಸಹ.
  • ಯಾರು ಈ ಸಹಸ್ರನಾಮವನ್ನು ಕನಿಷ್ಠ ಆರು ತಿಂಗಳ ಕಾಲ ನಿತ್ಯವೂ ಪಠಿಸುತ್ತಾರೆಯೋ ಅವರ ಮನೆಯಲ್ಲಿ ಲಕ್ಷ್ಮೀದೇವಿಯು ಚಾಂಚಲ್ಯರಹಿತಳಾಗಿ ಸ್ಥಿರವಾಗಿ ನಿಲ್ಲುತ್ತಾಳೆ.
  • ಯಾರು ಈ ಲಲಿತಾ ಸಹಸ್ರನಾಮವನ್ನು ಒಂದು ತಿಂಗಳ ಕಾಲ ತ್ರಿಕಾಲವೂ ಪಠಿಸುತ್ತಾರೋ ಅಂತಹವರ ನಾಲಿಗೆಯ ಮೇಲೆ ವಾಗ್ದೇವಿಯಾದ ಸರಸ್ವತಿಯು ನಲಿಯುತ್ತಾಳೆ.
  • ಯಾರು ಈ ಸಹಸ್ರನಾಮವನ್ನು ಹದಿನೈದು ರಾತ್ರಿಗಳು ಜಾಗರೂಕರಾಗಿ ಪಠಿಸುತ್ತಾರೋ ಅವರು ಇತರೇ ಲಿಂಗದ ವ್ಯಕ್ತಿಗಳನ್ನು ಮೋಹಪರವಶಗೊಳಿಸುವ ವ್ಯಕ್ತಿತ್ವವನ್ನು ಪಡೆಯುತ್ತಾರೆ.
  • ಈ ಸಹಸ್ರನಾಮವನ್ನು ಒಂದೇ ಒಂದು ಬಾರಿ ಪಠಿಸಿದವರ ದರ್ಶನವನ್ನು ಯಾರು ಮಾಡುತ್ತಾರೋ ಅವರು ಪಾಪಗಳಿಂದ ಮುಕ್ತರಾಗುತ್ತಾರೆ.
  • ಯಾರು ಈ ಸಹಸ್ರನಾಮವನ್ನು ಅರ್ಥಮಾಡಿಕೊಂಡಿರುತ್ತಾರೋ ಅವರಿಗೆ ಕಾಣಿಕೆ ಮತ್ತು ದಾನಗಳನ್ನು ಕೊಡುವುದರಿಂದ ಲಲಿತಾಂಬಿಕೆಯು ಸಂತುಷ್ಟಗೊಳ್ಳುತ್ತಾಳೆ. ಯೋಗ್ಯ ವ್ಯಕ್ತಿಗಳಿಗೆ ದಾನವನ್ನು ಕೊಡುವುದೂ ಸಹ ಒಬ್ಬನ ಪ್ರಮುಖ ಕರ್ತವ್ಯವಾಗಿದೆ. ಅಪಾತ್ರರಿಗೆ ಮಾಡಿದ ದಾನವು ಅಧಿಕವಾದ ಪಾಪಕರ್ಮವನ್ನುಂಟು ಮಾಡುತ್ತದೆ. ದಾನಕ್ಕಿಂತ ದಾನವನ್ನು ಕೊಡಲು ಯೋಗ್ಯ ವ್ಯಕ್ತಿಯನ್ನು ಆರಿಸುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.
  • ಯಾರು ಶ್ರೀ ವಿದ್ಯಾ ದೀಕ್ಷೆಯನ್ನು ಪಡೆದು ಶ್ರೀ ಚಕ್ರದ ಪೂಜೆಯನ್ನು ಕೈಗೊಂಡು ಲಲಿತಾ ಸಹಸ್ರನಾಮದ ಪಠಣವನ್ನು ಮಾಡುತ್ತಾರೋ ಅಂತಹವರು ಅತ್ಯಂತ ಪೂಜನೀಯರು ಎಂದು ಪರಿಗಣಿಸಲ್ಪಡುತ್ತಾರೆ. ಮೂಲ ಶ್ಲೋಕದಲ್ಲಿ ಶ್ರೀ ವಿದ್ಯೆಯನ್ನು ಸೂಚಿಸಲು ’ಮಂತ್ರರಾಜಂ’ ಶಬ್ದವನ್ನು ಬಳಸಲಾಗಿದೆ. (ಲಕ್ಷ್ಮೀನರಸಿಂಹ ಮಂತ್ರವನ್ನೂ ಸಹ ‘ಮಂತ್ರರಾಜಂ’ ಹೆಸರಿನಿಂದ ಕರೆಯುತ್ತಾರೆ).
  • ಈ ಸಹಸ್ರನಾಮದ ಅರ್ಥವನ್ನು ತಿಳಿಯದೇ ಪಠಿಸಿದಲ್ಲಿ ಅದು ಆರಿದ ಬೆಂಕಿಯಲ್ಲಿ ಕಟ್ಟಿಗೆಯ ಕೊರಡನ್ನಿಡುವುದಕ್ಕೆ ಸಮನಾದುದು. ಆದರೆ ನಾಮಗಳ ಅರ್ಥಗಳನ್ನು ತಿಳಿಯದವರೂ ಸಹ ಲಲಿತಾಸಹಸ್ರನಾಮವನ್ನು ಪಠಿಸಬಹುದೆಂದು ಹೇಳಲಾಗಿದೆ. ಇದರ ಒಟ್ಟಾರೆ ಉದ್ದೇಶವೇನೆಂದರೆ ಯಾರು ಸಹಸ್ರನಾಮದ ಅರ್ಥಗಳನ್ನು ತಿಳಿಯಲು ಶಕ್ಯರಾಗಿದ್ದಾರೋ ಅವರು ಅದರ ಅರ್ಥಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾರಿಗೆ ಇದರ ಅರ್ಥಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲವೋ ಅವರಿಗೆ ಮಾತ್ರ ಇದರಿಂದ ವಿನಾಯತಿಯನ್ನು ಕೊಡಲಾಗಿದೆ. ಅವರಿಗೆ ಇದನ್ನು ಅರಿಯಲು ಬೇಕಾಗಿರುವ ಅವಶ್ಯವಾದ ಜ್ಞಾನವು ಮುಂದಿನ ಜನ್ಮದಲ್ಲಿ ದೊರೆಯುತ್ತದೆ.
  • ಯಾರು ಜೀವಿತಕಾಲದಲ್ಲಿ ಒಮ್ಮೆ ಶ್ರೀ ಚಕ್ರದ ಪೂಜೆಯನ್ನು ಸಹಸ್ರನಾಮಪೂರ್ವಕವಾಗಿ ಸುವಾಸನೆಯುಳ್ಳ ಪುಷ್ಟಗಳಿಂದ ಪೂಜಿಸುವರೋ ಅವರಿಗೆ ಉಂಟಾಗುವ ಪುಣ್ಯಫಲವನ್ನು ಶಿವನಿಂದಲೂ ಸಹ ವಿವರಿಸಲು ಸಾಧ್ಯವಿಲ್ಲ. ಇದನ್ನೇ ಅರ್ಚನೆ ಎಂದು ಕರೆಯುತ್ತಾರೆ. ಪ್ರತಿಯೊಂದು ನಾಮದ ಕೊನೆಯಲ್ಲಿ ನಮಃ ಶಬ್ದವನ್ನು ಹೇಳಬೇಕು. ಪದ್ಮ, ತುಲಸೀಪುಷ್ಪ, ಕಲ್ಹಾರ, ಕದಂಬ, ಚಂಪಕ, ಜಾಜಿ, ಮಲ್ಲಿಕಾ, ಕರವೀರ, ಉತ್ಪಲ, ಬಿಲ್ವಪತ್ರ, ಕುಂದ, ಕೇಸರ, ಪಾಟಲ, ಕೇತಕೀ ಮತ್ತು ಮಾಧವೀ ಎಂದು ಹದಿನೈದು ವಿಧವಾದ ಪುಷ್ಟಗಳನ್ನು ಹೆಸರಿಸಲಾಗಿದೆ, ಆದರೆ ಯಾವುದೇ ವಿಧವಾದ ಪರಿಮಳಭರಿತ ಹೂವುಗಳನ್ನು ಅರ್ಚನೆಗೆ ಬಳಸಬಹುದು. ಆದರೆ, ಎಲ್ಲಕ್ಕಿಂತ ಶ್ರೇಷ್ಠವಾದ ಪುಷ್ಪವೆಂದರೆ ಕೇಸರೀ ಹೂವು. (ತುಳಸೀ ಗಿಡದ ಹೂಗುಚ್ಛವನ್ನು ಬಳಸಬೇಕು ದಳಗಳನ್ನಲ್ಲ).
  • ಅರ್ಚನೆ ಎಂದರೆ ಪ್ರತಿ ನಾಮಕ್ಕೂ ‘ಓಂ-ಐಂ-ಹ್ರೀಂ-ಶ್ರೀಂ’ ಮಂತ್ರವನ್ನು ಪೂರ್ವಪ್ರತ್ಯಯವಾಗಿ ಮತ್ತು ’ನಮಃ’ ಎನ್ನುವುದನ್ನು ಉತ್ತರ ಪ್ರತ್ಯಯವಾಗಿ ಜೋಡಿಸಬೇಕು. ಉದಾಹರಣೆಗೆ ಮೊದಲನೇ ನಾಮವನ್ನು ‘ಓಂ-ಐಂ-ಹ್ರೀಂ-ಶ್ರೀಂ-ಶ್ರೀ ಮಾತ್ರೇ ನಮಃ’ ಎಂದು ಉಚ್ಛರಿಸಬೇಕು.
  • ಅರ್ಚನೆಯನ್ನು ಕೈಗೊಳ್ಳುವ ಮುನ್ನ ಒಬ್ಬರು ಸಂಕಲ್ಪವನ್ನು ಮಾಡಬೇಕು, ಅದನ್ನನುಸರಿಸಿ ನ್ಯಾಸ, ಅರ್ಚನೆ ಮತ್ತು ಪುನಃ ‘ಓಂ’ ಎಂದು ಕಡೆಯ ನಾಮದ ಅರ್ಚನೆಯಲ್ಲಿ ಹೇಳಬೇಕು
  • (‘ಓಂ-ಐಂ-ಹ್ರೀಂ-ಶ್ರೀಂ-ಲಲಿತಾಂಬಿಕಾಯೈ ನಮಃ ಓಂ’). ನಾವು ಹೂವುಗಳನ್ನು ಇರಿಸುವ ಕ್ರಮಕ್ಕೂ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಹೂವುಗಳು ಅರಳುವ ವಿಧಾನದಲ್ಲಿಯೇ ಅವುಗಳನ್ನು ಶ್ರೀ ಚಕ್ರದ ಮೇಲೆ ಇರಿಸಬೇಕು, ಅವುಗಳ ದಳಗಳು ಮೇಲ್ಮುಖವಾಗಿರಬೇಕು.
  • ಯಾರು ಮೇಲೆ ತಿಳಿಸಿದ ಪ್ರಕಾರ ಪೂಜೆಯನ್ನು ಹುಣ್ಣಿಮೆಯಂದು ಮಾಡುತ್ತಾರೋ ಅವರು ಲಲಿತಾಂಬಿಕೆಯ ಸ್ವರೂಪವನ್ನು ಪಡೆಯುತ್ತಾರೆ ಒಂದು ವೇಳೆ ಅಂತಹ ವ್ಯಕ್ತಿಗಳನ್ನು ಯಾರು ಲಲಿತಾಂಬಿಕೆಯ ಸ್ವರೂಪವೆಂದು ಭಾವಿಸುವುದಿಲ್ಲವೋ ಅವರು ಪಾಪ ಪೀಡಿತರಾಗುತ್ತಾರೆ.
  • ಯಾರು ಮೇಲೆ ತಿಳಿಸಿದ ಪೂಜೆಯನ್ನು ದಸರೆಯ ಒಂಬತ್ತನೇ ದಿನವಾದ ಮಹಾನವಮಿಯಂದು ಕೈಗೊಳ್ಳುತ್ತಾರೋ ಅವರು ಮುಕ್ತಿಯನ್ನು ಹೊಂದುತ್ತಾರೆ.
  • ಮಹಾನವಮಿಯು ಶಿವ ಮತ್ತು ಶಕ್ತಿಯರ ಸಾಮರಸ್ಯರೂಪವಾಗಿದೆ. ಅಷ್ಟಮಿಯು ರುದ್ರನಿಗೆ ಮತ್ತು ನವಮಿಯು ಶಕ್ತಿಗೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
  • ಇವೆರಡೂ ದಿನಗಳ ಸಂಧಿಕಾಲವಾದ ಮಹಾನವಮಿಯು ಲಲಿತಾಂಬಿಕೆಯನ್ನು ಪೂಜಿಸಲು ಅತ್ಯಂತ ಪ್ರಶಸ್ತ ಸಮಯವೆಂದು ಪರಿಗಣಿಸಲ್ಪಟ್ಟಿದ್ದು ಅಂದು ಪೂಜಿಸಿದವರ ಬೇಡಿಕೆಗಳು ಇಡೇರುತ್ತವೆ. ಅವರು ಸಕಲ ಸೌಭಾಗ್ಯಗಳನ್ನು ಪಡೆದು ಪುತ್ರ-ಪೌತ್ರಾದಿಗಳೊಂದಿಗೆ ಬಹುಕಾಲ ಜೀವಿಸಿ, ಅಂತಿಮವಾಗಿ ಲಲಿತಾಂಬಿಕೆಯ ಪದತಲದಲ್ಲಿ ಸ್ಥಾನ ಪಡೆಯುತ್ತಾರೆ (ನಾಮ ೯೧೨).
  • ಯಾರು ಇಂತಹ ಆಚರಣೆಗಳನ್ನು ಪ್ರತಿ ಶುಕ್ರವಾರಗಳಂದು ಕೈಗೊಳ್ಳುತ್ತಾರೆಯೋ ಅಂತಹವರು ಶ್ರೀ ವಿದ್ಯಾ ಉಪಾಸನೆಯಲ್ಲಿ ಪರಿಣಿತರಾದವರಿಗೆ ಪಾಯಸ-ಅಪೂಷ-ಷಡ್ರಸೋಪೇತವಾದ ಭೋಜನವನ್ನು ಉಣಬಡಿಸಬೇಕು.
  • ಹೀಗೆ ಮಾಡಿದಲ್ಲಿ ಲಲಿತಾಂಬಿಕೆಯು ಅತ್ಯಂತ ಸಂತುಷ್ಟಳಾಗಿ ಅವರು ಬೇಡಿದ ವರಗಳನ್ನೆಲ್ಲಾ ದಯಪಾಲಿಸುತ್ತಾಳೆ. ಅವರು ಸ್ವಯಂ ಲಲಿತಾಂಬಿಕೆಯ ಶಕ್ತಿಗಳನ್ನೇ ಪಡೆಯುವರೆಂದು ಹೇಳಲಾಗುತ್ತದೆ. (ಇದಕ್ಕೆ ಸಂಬಂಧಿಸಿದ ಅನುಷ್ಠಾನ ವಿಧಿಗಳು ಬಹಳ ದೀರ್ಘವಾಗಿವೆ).
  • ಯಾರು ಈ ಲಲಿತಾ ಸಹಸ್ರನಾಮವನ್ನು ಯಾವುದೇ ವಿಧವಾದ ಬಯಕೆಗಳಿಲ್ಲದೆ ಪಠಿಸುತ್ತಾರೋ ಅವರು ಸಂಸಾರ ಬಂಧನದಿಂದ ಮುಕ್ತರಾಗಿ ಅಂತಿಮವಾಗಿ ಆಕೆಯಲ್ಲಿ ಐಕ್ಯರಾಗುತ್ತಾರೆ.
  • ಈ ಸಹಸ್ರನಾಮವು ಭುಕ್ತಿ-ಮುಕ್ತಿ ಪ್ರದಾಯಕವಾಗಿದೆ.
  • ಒಬ್ಬನಿಗೆ ಶ್ರೀ ವಿದ್ಯಾ ದೀಕ್ಷೆಯು ಅವನ ಅಂತಿಮ ಜನ್ಮದಲ್ಲಿ ಕೊಡಮಾಡಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಅವಕಾಶವು ದೊರೆಯಲು ಅವನು ಪೂರ್ವ ಜನ್ಮಗಳಲ್ಲಿ ಅನೇಕ ದೇವ-ದೇವಿಯರನ್ನು ಪೂಜಿಸಿ ಪುಣ್ಯವನ್ನು ಸಂಪಾದಿಸಿರಬೇಕು.
  • ಒಬ್ಬನಿಗೆ ಸಹಸ್ರನಾಮದ ಉಪದೇಶವನ್ನು ಶ್ರೀ ವಿದ್ಯಾ ದೀಕ್ಷೆಯ ಮೊದಲೇ ಕೊಟ್ಟರೆ, ಅವನಿಗೆ ದೀಕ್ಷೆಯನ್ನು ಕೊಟ್ಟವರು ಮತ್ತು ದೀಕ್ಷೆಯನ್ನು ಪಡೆದುಕೊಂಡವರು ಇಬ್ಬರೂ ದೋಷಗ್ರಸ್ತರಾಗುತ್ತಾರೆ. ಅದೇ ವಿಧವಾಗಿ ಯಾರ ಮನಸ್ಸು ಪರಿಶುದ್ಧವಾಗಿಲ್ಲವೋ ಅಂತಹವರಿಗೆ ಶ್ರೀ ವಿದ್ಯಾ ದೀಕ್ಷೆಯನ್ನು ಕೊಟ್ಟರೆ ಆಗಲೂ ಸಹ ಇಬ್ಬರಿಗೂ ದೋಷವುಂಟಾಗುವುದು.
  • ಅಂತಿಮವಾಗಿ ಹಯಗ್ರೀವನು ಈ ರಹಸ್ಯವನ್ನು ಅಗಸ್ತ್ಯನೊಂದಿಗೆ ಹಂಚಿಕೊಂಡದ್ದು ಲಲಿತಾಂಬಿಕೆಯ ಆಜ್ಞೆಯ ಮೇರೆಗೆ ಎಂದು ಹೇಳುತ್ತಾನೆ. ಹಯಗ್ರೀವನು ಅಗಸ್ತ್ಯನಿಗೆ ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವಂತೆ ಹೇಳಿ, ಅದರ ಮೂಲಕ ಅವನು ಬೇಡಿದ್ದನ್ನು ದೇವಿಯು ಕರುಣಿಸುತ್ತಾಳೆ ಎಂದು ತಿಳಿಸುತ್ತಾನೆ.

ಲಲಿತಾ ಸಹಸ್ರಾನಾಮ ದೇವಿ ಲಲಿತಾಂಬಿಕೆಯು ಸರ್ವರಿಗೂ ಮಂಗಳವನ್ನುಂಟು ಮಾಡಲಿ.

ದಾನಗಳು ಮತ್ತು ಫಲಗಳು..

ಅರಿಸಿನ ದಾನ : ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ.
ಕುಂಕುಮ ದಾನ : ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ.. ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ. ದೃಷ್ಟಿದೋಷ ನಿವಾರಣೆ ಆಗುತ್ತದೆ. ಕೋಪ, ಹಠ,ಕಮ್ಮಿ ಆಗುತ್ತದೆ.
ಸಿಂಧೂರ ದಾನ ; ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ. ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ಈ ಕಾರಣಕ್ಕೆ ಶ್ರೀ ಆಂಜನೇಯ ಸ್ವಾಮಿಗೆ ಕೇಸರಿ ಅಲಂಕಾರ ಮಾಡುತ್ತಾರೆ.
ಕನ್ನಡಿ ದಾನ : ಕನ್ನಡಿಗೆ ಸಂಸ್ಕೃತದಲ್ಲಿ "ದರ್ಪಣ" ಎನ್ನುತ್ತಾರೆ. ಇದನ್ನು ಯಾರು ಪ್ರತಿದಿನ ನೋಡುತ್ತಾರೆಯೋ ಅವರಿಗೆ ಅಪಮೃತ್ಯು ಬರುವುದಿಲ್ಲ. ಮನೆಯಲ್ಲಿ ಕನ್ನಡಿ, ದೇವರ photo, ಹಿರಿಯರು ಉಪಯೋಗಿಸುವ ಬೆತ್ತ (walking stick) , ಪಡೆಯಬಾರದು. ಒಡೆದರೆ ಮನೆಗೇ ಆಪತ್ತು ಬಂದು ಬಿಡುತ್ತದೆ. ಕನ್ನಡಿ ದಾನ ಮಾಡುವುದರಿಂದ ಚರ್ಮವ್ಯಾಧಿ ಬರುವುದಿಲ್ಲ.., ದೇವರಿಗೆ, ದೇವಾಲಯಗಳಲ್ಲಿ ದರ್ಪಣ ಸೇವೆ ಮಾಡಿಸಿದರೆ, ನಿಮ್ಮ ಸಮಸ್ತ ಪಾಪಗಳೂ ನಿವಾರಣೆಯಾಗುತ್ತದೆ. ಮನೆಯಲ್ಲಿ ಮುಸುಕಾದ, ಒಡೆದ ಕನ್ನಡಿಯನ್ನು ಬಳಸಿದರೆ, ದಾರಿದ್ರ್ಯ ಹಾಗೂ ಬಡತನ ಬರುತ್ತದೆ.
ಬಾಚಣಿಗೆ ದಾನ : ಬಾಚಣಿಗೆ ದಾನ ಮಾಡೋದರಿಂದ, ಮುಖದಲ್ಲಿ ತೇಜಸ್ಸು ಹೆಚ್ಚಾಗಿ, ಮನೆಯಲ್ಲಿ ಅಲಂಕಾರದ ವಸ್ತುಗಳು ಜಾಸ್ತಿಯಾಗುತ್ತದೆ.
ಕಾಡಿಗೆ : ಕಾಡಿಗೆ ದಾನ ಮಾಡೋದ್ರಿಂದ ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತದೆ,  ಮನೆಯ ಮೇಲೆ ಆಗಿರುವ, ಅಥವ ದಂಪತಿಗಳ ಮೇಲೆ ಆಗಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
ಅಕ್ಕಿ : ಅಕ್ಕಿ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಅನ್ನಪೂರ್ಣೇಶ್ವರೀ ದೇವಿ ತೃಪ್ತಳಾಗುತ್ತಾಳೆ. ಧನಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮನೆಯಲ್ಲಿ ಶಾಂತ ವಾತಾವರಣ ಇದ್ದು, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ...
ತೊಗರಿಬೇಳೆ : ತೊಗರಿಬೇಳೆ ದಾನ ಮಾಡೋದ್ರಿಂದ ಕುಜದೋಷ ನಿವಾರಣೆಯಾಗುತ್ತದೆ. ಪ್ರತಿದಿವಸ ತೊಗರಿಬೇಳೆಯನ್ನು ಯಾರು ತಿನ್ನುತ್ತಾರೋ ಅವರಿಗೆ ಧೈರ್ಯ ಜಾಸ್ತಿ ಇರುತ್ತದೆ.., ಈ ಕಾರಣಕ್ಕೆ ಹುಳಿ ಮತ್ತು ಸಾಂಬಾರ್ ಲಿ ತೊಗರಿಬೇಳೆ ಜಾಸ್ತಿ ಉಪಯೋಗಿಸುವುದು. ತೊಗರಿಬೇಳೆ ದಾನದಿಂದ ಸತಿಪತಿ ಕಲಹ ನಿವಾರಣೆಯಾಗುತ್ತದೆ, ದೇಹದಲ್ಲಿರುವ fatness ಹೊರಟುಹೋಗುತ್ತದೆ. ಅಧಿಕ ರಕ್ತದ ಒತ್ತಡ ಇರುವವರು ೯ ಮಂಗಳವಾರ ತೊಗರಿಬೇಳೆ ದಾನವನ್ನು ಮಾಡಿದರೆ, ಆರೋಗ್ಯವಂತರಾಗಿ, ಧೃಡಕಾಯ ಶರೀರ ಪಡೆಯುತ್ತಾರೆ...
ಉದ್ದಿನ ಬೇಳೆ : ಪ್ರತೀ ತಿಂಗಳು, ಪ್ರತೀ ವರ್ಷ, ಮಹಾಲಯ ಅಮಾವಾಸ್ಯೆ, ತರ್ಪಣ ಕೊಡದೇ ಇದ್ದರೆ, ವೈಧಿಕ ಮಾಡುವಾಗ ದೋಷಗಳಾಗಿದ್ದರೆ, ಜಾತಕದಲ್ಲಿ ಪಿತೃಶಾಪ ಇದ್ದರೆ, ಮಕ್ಕಳು ಕೆಟ್ಟದಾರಿಯಲ್ಲಿ ನಡೆಯುತ್ತಿದ್ದರೆ, ಶತೃಗಳ ಕಾಟ ಜಾಸ್ತಿ ಆಗಿದ್ದರೆ, ಉದ್ದಿನ ಬೇಳೆ ದಾನ ಮಾಡೋದ್ರಿಂದ ಈ ದೋಷಗಳೆಲ್ಲಾ ನಿವಾರಣೆಯಾಗುತ್ತದೆ .
ತೆಂಗಿನಕಾಯಿ : ತೆಂಗಿನಕಾಯಿಗೆ ಅಧಿದೇವತೆ ಸಂತಾನ ಲಕ್ಷ್ಮಿ, ಇಷ್ಟಾರ್ಥ ಪ್ರದಾಯಿನಿ ಅಂತನೂ ಕರೆಯುತ್ತಾರೆ .. ಮಕ್ಕಳಾಗಿಲ್ಲ, ಸಂತಾನ ಸಮಸ್ಯೆ ಇರೋವ್ರು ತೆಂಗಿನಕಾಯಿ ದಾನ ಮಾಡುತ್ತಾ ಬಂದರೆ ಸಂತಾನವಾಗುತ್ತದೆ. ನಮ್ಮ ಕಾರ್ಯಗಳು ಶೀಘ್ರವಾಗಿ ಮತ್ತು ನಿರ್ವಿಘ್ನವಾಗಿ, ಲಾಭವಾಗಿ ನಡೆಯಲಿ ಅನ್ನೋ ಕಾರಣಕ್ಕೆ " ಪೂರ್ಣಫಲ" ಇಟ್ಟು ನೈವೇದ್ಯ ಮಾಡಬೇಕು. ತಾಂಬೂಲದ ಜೊತೆ ತೆಂಗಿನಕಾಯಿ ದಾನ ಮಾಡೋದ್ರಿಂದ "ಅಶ್ವಮೇಧಯಾಗದ " ಫಲ ಬರುತ್ತದೆ. Gastric,  kidney problems solve ಆಗುತ್ತೆ. ಸಕಲ ಕಷ್ಟಗಳೂ ನಿವಾರಣೆಯಾಗುತ್ತದೆ ...
ವೀಳ್ಯದೆಲೆ : ವೀಳ್ಯದೆಲೆಗೆ ದೇವತೆ ಧನಲಕ್ಷ್ಮೀ. ವೀಳ್ಯದೆಲೆ ತಾಂಬೂಲ ದಾನ ಮಾಡುವುದರಿಂದ ಅಧಿಕವಾದ ಧನ ಪ್ರಾಪ್ತಿಯಾಗುತ್ತದೆ.., ಮಹಾಲಕ್ಷ್ಮಿಯು ಅಂತಹ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ.., ಗಂಗಾದೇವಿ ಪ್ರಸನ್ನಳಾಗುತ್ತಾಳೆ. ಮನೆಯ ಮುಂದೆ ವೀಳ್ಯದೆಲೆ ಬಳ್ಳಿ ಬೆಳೆದರೆ, ಆ ಮನೆಯ ಸರ್ವ ದೋಷವೂ, ವಾಸ್ತು ದೋಷವೂ ನಿವಾರಣೆಯಾಗುತ್ತದೆ .
ಅಡಿಕೆ : ಅಡಿಕೆಗೆ ಸಂಸ್ಕೃತದಲ್ಲಿ ಪೂಗೀಫಲ ಎನ್ನುತ್ತಾರೆ. ಯಾರು ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಬಹಳ ಬೇಗ ಬಯಕೆಗಳು ಈಡೇರುತ್ತವೆ. ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾದೋಷ ಬರುತ್ತದೆ.
ಫಲದಾನ : ಫಲದಾನಕ್ಕೆ ಜ್ಞಾನಲಕ್ಷ್ಮಿ ಅಧಿಪತಿ. ಫಲದಾನ ಮಾಡುವುದರಿಂದ ನಿಮ್ಮ ಕಾರ್ಯಗಳು ಸುಸೂತ್ರವಾಗಿ, ಸುಗಮವಾಗಿ ನಡೆಯುತ್ತದೆ, ಹಾಗೂ ಲಾಭದಾಯಕವಾಗುತ್ತದೆ. ಸ್ತ್ರೀ ಶಾಪ ನಿವಾರಣೆಯಾಗುತ್ತದೆ, ಗುರು ಪೂಜೆ ಮಾಡಿ ಹಣ್ಣು ದಾನ ಮಾಡಿದರೆ ಗುರುದೋಷಗಳು ನಿವಾರಣೆಯಾಗುತ್ತದೆ. ಅಮಾವಾಸ್ಯೆ ಅಥವ ವೈಧಿಕದ ದಿನ ಹಣ್ಣುದಾನ ಮಾಡಿದರೆ ಸಕಲ ಪಿತೃದೋಷ ನಿವಾರಣೆಯಾಗುತ್ತದೆ.
ಬೆಲ್ಲದಾನ : ಬೆಲ್ಲದಲ್ಲಿ ಬ್ರಹ್ಮದೇವರು, ಶ್ರೀ ಮಹಾಲಕ್ಷ್ಮಿಯು, ಶ್ರೀ ಮಹಾ ಗಣಪತೀ ದೇವರ ಸಾನಿಧ್ಯ ಇರುತ್ತದೆ. ಬೆಲ್ಲವನ್ನು ದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ, ನಿತ್ಯದಾರಿದ್ರ್ಯ ಅನುಭವಿಸುವವರು ಬೆಲ್ಲಕ್ಕೆ ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾ ಬಂದರೆ ದಾರಿದ್ರ್ಯ ಹಾಗೂ ಬಡತನ ನಿವಾರಣೆಯಾಗುತ್ತದೆ. ಗಣಪತಿಗೆ ಬೆಲ್ಲ ಮತ್ತು ಮಹಾಲಕ್ಷ್ಮಿಗೆ ಬೆಲ್ಲದನ್ನ ನೈವೇದ್ಯ ಮಾಡಿದರೆ ತುಂಬಾ ವಿಶೇಷ, ಧನ ಧಾನ್ಯ ಸಮೃದ್ಧಿಯಾಗುತ್ತದೆ.
ವಸ್ತ್ರದಾನ : ವಸ್ತ್ರದಾನ ಮಾಡುವುದರಿಂದ ಕುಲದೇವತೆ ತೃಪ್ತಿಯಾಗುತ್ತಾರೆ, ಸುಮಂಗಲೀ ದೋಷ ನಿವಾರಣೆಯಾಗುತ್ತದೆ. ಸ್ತ್ರೀ ದೋಷ ಮತ್ತು ಶಾಪಗಳು ನಿವಾರಣೆಯಾಗುತ್ತದೆ, ಸಕಲ ದೇವತೆಗಳು ತೃಪ್ತರಾಗುತ್ತಾರೆ.., ಆರೋಗ್ಯಭಾಗ್ಯವಾಗುತ್ತದೆ. ದಾನವನ್ನು ತೆಗೆದುಕೊಂಡ ವಸ್ತ್ರಗಳನ್ನು ದಾನ ಮಾಡಬಾರದು . ಸುಮಂಗಲಿಯರು ಪ್ರತ್ಯಕ್ಷ ಸ್ತ್ರೀ ದೇವತೆಗಳ ಸ್ವರೂಪ, ಹಾಗೂ ಕುಲದೇವತಾ ಸ್ವರೂಪ. ಸುಮಂಗಲಿಯರಿಗೆ ಸೀರೆ ಸಮೇತ ವಸ್ತ್ರದಾನ ಮಾಡಿದರೆ, ಮನೆಯ ದಾರಿದ್ರ್ಯ ನಿವಾರಣೆಯಾಗುತ್ತದೆ ..
ಹೆಸರುಬೇಳೆ : ವಿದ್ಯಾಲಕ್ಷ್ಮಿ ಅನುಗ್ರಹವಾಗುತ್ತದೆ, ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಾರೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಹೆಸರುಬೇಳೆ ದಾನದಿಂದ ಸಕಲ ದೇವಿಗಳೂ ತೃಪ್ತರಾಗುತ್ತಾರೆ. ಮಾಟ ಮಂತ್ರ ಮನೆಯ ಮೇಲೆ ಕೆಲಸ ಮಾಡುವುದಿಲ್ಲ. ಹೆಂಗಸರ ಗರ್ಭಕೋಶದ ಸಮಸ್ಯೆ ನಿವಾರಣೆಯಾಗುತ್ತದೆ..

ಬಂದುಗಳೇ ಯಾವ ದೋಷಗಳೂ ನಮಗೇ ಬರದೇ ಇರಲಿ, ಸಕಲ ದೋಷಗಳೂ ನಿವಾರಣೆಯಾಗಲಿ, ಗಂಡಹೆಂಡತಿ ಅನ್ಯೋನ್ಯವಾಗಿ ಬಾಳಲಿ ಅಂತ ಈ ಬಾಗಿನದಲ್ಲಿ ಇಷ್ಟು ವಸ್ತುಗಳು ದಾನ ಮಾಡಬೇಕು. ಇಂತಹ ಅತೀ ಸುಲಭ ದಾರಿಯನ್ನು ತೋರಿಸಿಕೊಟ್ಟ ನಮ್ಮ ಹಿರಿಯರು ಹಾಗೂ ಗುರುಗಳಿಗೆ ನಾವು ಸದಾ ಚಿರಋಣಿಯಾಗಿರಬೇಕು ಅಲ್ಲವಾ..? ಧನ್ಯವಾದಗಳು ಅವರಿಗೆ..

December 26, 2022

ತಾಯಿ ಋಣ

ತಾಯಿ ಋಣ - ತೀರಿಸಲಾಗದ್ದು

ಒಬ್ಬ ಯುವಕ ತಾಯಿ ಋಣ ತೀರಿಸಬೇಕೆಂಬ ಆಸೆಯಿಂದ ಒಂದು ಲಕ್ಷ ಬಂಗಾರು ನಾಣ್ಯಗಳ ಚೀಲವನ್ನು ತಾಯಿಗೆ ನೀಡುತ್ತಾ, " ಅಮ್ಮಾ, ಈ ನಾಣ್ಯಗಳನ್ನ ತಗೊಂಡು ನಿನಗಿಷ್ಟ ಬಂದಂತೆ ಬಳಸಿಕೋ. ಅದರಿಂದ ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತೆ." ಎಂದ.

ತಾಯಿ ನಕ್ಕು ಸುಮ್ಮನಾದಳು. ಆದರೆ ಆ ಯುವಕ ಅದೇ ಮಾತುಗಳನ್ನು ಮತ್ತೆ ಮತ್ತೆ ಹೇಳಿದಾಗ, ತಾಯಿ ಹೀಗೆಂದಳು .. 'ಮಗು, ನನ್ನ ಋಣ ತೀರಿಸಲು ಈ ಹಣದ ಅವಶ್ಯಕತೆಯಿಲ್ಲ. ನೀನು ಒಂದು ರಾತ್ರಿ ಹಸುಕಂದನಾಗಿ ನನ್ನ ಬಳಿ ಮಲಗು' ಎಂದಳು. ಆ ಮಗ ಸರಿಯೆಂದು ತಾಯಿ ಮಂಚದ ಮೇಲೆ ಅವಳ ಪಕ್ಕದಲ್ಲೇ ಮಲಗಿದ.

ಅವನಿಗೆ ನಿದ್ರೆ ಹತ್ತುತ್ತಿದ್ದಂತೆಯೇ ತಾಯಿ ಎಬ್ಬಿಸಿ, ' ಆಪ್ಪಾ, ದಾಹವಾಗುತ್ತಿದೆ. ನೀರು ಕುಡಿಸು,' ಎಂದಳು. ಮಗ ಸಂತೋಷದಿಂದ ಎದ್ದು ಒಂದು ಲೋಟದಲ್ಲಿ ನೀರಿತ್ತ. ಎರಡು ಗುಟುಕು ಕುಡಿದು, ಲೋಟವನ್ನು ಬೀಳಿಸಿದಳು. ನೀರು ಬಿದ್ದು ಹಾಸಿಗೆ ಒದ್ದೆಯಾಗಿದ್ದನ್ನು ನೋಡಿ, ಏನಮ್ಮಾ, ಇದು?' ಎಂದ ಮಗ. ' ತಪ್ಪಾಗಿಬಿಡ್ತು, ಮಗು,' ಎಂದಳು ತಾಯಿ. ಮಗ ಮೌನವಾಗಿ ಮಲಗಿದ.

ಅವನಿಗೆ ಸ್ವಲ್ಪ ನಿದ್ದೆ ಬರುತ್ತಿದ್ದಂತೆಯೇ, ತಾಯಿ ಮತ್ತೆ ಎಬ್ಬಿಸಿ, ' ಮಗು ಬಾಯಾರಿಕೆ ಆಗ್ತಿದೆ, ನೀರು ಕೊಡು,' ಎಂದಳು. ' ಈಗ ತಾನೇ ಕುಡಿದೆಯಲ್ಲಾ, ಮತ್ತೆ ಬಾಯಾರಿಕೇನಾ? ಹತ್ತಿ ಬೀಜಗಳನ್ನೇನಾದರೂ ತಿಂದೆಯಾ?' ಎಂದು ಅಸಹನೆಯಿಂದೆದ್ದು ನೀರು ಕೊಟ್ಟ. 

ತಾಯಿ ಮೊದಲು ಮಾಡಿದಂತೆಯೇ ಒಂದೆರಡು ಗುಟುಕು ನೀರು ಕುಡಿದು ಉಳಿದಿದ್ದನ್ನು ಹಾಸಿಗೆಯ ಮೇಲೆ ಬೀಳಿಸಿದಳು. ಮಗ ಕೋಪದಿಂದ, ' ಅಮ್ಮಾ, ಏನಿದು ನೀರು ಚೆಲ್ಲಿದೆ. ಹಾಸಿಗೆಯೆಲ್ಲಾ ಒದ್ದೆಯಾಯ್ತು. ಕಣ್ಣು ಕಾಣಿಸೋಲ್ವಾ?' ಎಂದು ಕೇಳಿದ. ' ಅಪ್ಪಾ, ಕತ್ತಲೇಲಿ ಗೊತ್ತಾಗದೆ, ಲೋಟ ಬಿದ್ಹೋಯ್ತು.' ಎಂದಳು. ಅದನ್ನು ಕೇಳಿ ಕೋಪ ತೆಗೆದುಕೊಂಡು ಮಗ ಮತ್ತೆ ನಿದ್ರೆಗೆ ಜಾರಿದ. ಅಷ್ಟರಲ್ಲಿ ತಾಯಿ ಎದ್ದು ಮತ್ತೆ ನೀರು ಕೇಳಿದಾಗ ಕೋಪ ತಡೆದುಕೊಳ್ಳಲಾರದೇ ಹೋದ. ' ಅಮ್ಮಾ, ಏನಿದು, ದಾಹ, ದಾಹ ನನ್ನ ತಲೆ ತಿಂತಾ ಇದೀಯಾ. ನನ್ನನ್ನು ನಿದ್ದೆ ಮಾಡಕ್ಬಿಡ್ತೀಯಾ, ಇಲ್ವಾ?' ಎಂದು ಕೂಗಿ, ನೀರು ತಂದಿತ್ತು, ' ಕುಡಿದು ಸಾಯಿ!' ಎಂದ.

ತಾಯಿ ಪ್ರತಿಸಲದಂತೆ ಒಂದು ಗುಟುಕು ಕುಡಿದು ಮತ್ತೆ ಉಳಿದ ನೀರಿನಿಂದ ಹಾಸಿಗೆ ಒದ್ದೆ ಮಾಡಿದಳು. ಇದನ್ನು ನೋಡಿ ಮಗ, ಇನ್ನು ತಡೆದುಕೊಳ್ಳಲಾಗದೇ, ' ಅಮ್ಮಾ, ಬುದ್ದಿ ಇದೆಯಾ, ಇಲ್ವಾ? ಹೀಗೆ ನನ್ನ ಸತಾಯಿಸಕ್ಕಾಗಿಯೇ ನನ್ನನ್ನು ನಿನ್ನ ಮಂಚದ ಮೇಲೆ ಮಲಗು ಅಂದ್ಯಾ? ಈ ಒದ್ದೆ ಬಟ್ಟೆ ಮೇಲೆ ಹೇಗೆ ಮಲಗೋದು?ನೋಡ್ತಿದ್ರೇ ನಿನಗೆ ತಲೆ ಪೂರ್ತಿ ಕೆಟ್ಟಿರೋ ಹಾಗಿದೆ, ಅದಕ್ಕೇ ಹೀಗೆ ಸಾಯಿಸಿಕೊಂಡು ತಿಂತಿದೀಯ' ಎಂದು ಸಿಟ್ಟಿನಿಂದ ಕೂಗಾಡಿದ.

ಆಗ ತಾಯಿ, ' ಕೂಗೋದನ್ನ ನಿಲ್ಸು, ಮಗು. ನನ್ನ ಋಣ ತೀರಿಸ್ತೀನಿ ಅಂತೀಯಾ, ತಾಯಿ ಋಣ ತೀರಿಸಬಲ್ಲೆಯಾ? ನಿನ್ನ ತಲೇಲಿ ಎಷ್ಟು ಕೂದಲಿದೆಯೋ ಅಷ್ಟು ಜನ್ಮ ತಾಳಿ, ನಿರಂತರ ಸೇವೆ ಮಾಡಿದರೂ ತಾಯಿ ಋಣದಿಂದ ವಿಮುಕ್ತಿ ಹೊಂದಲಾರೆ. ಯಾಕೇಂತೀಯಾ... ನೀನು ಹಸುಕಂದನಾಗಿದ್ದಾಗ ದಿನವೂ ಹಾಸಿಗೆ ಮೇಲೇ ಮಲಮೂತ್ರ ಮಾಡ್ತಿದ್ದೆ.'

' ನಿನ್ನ ಒದ್ದೆ ಬಟ್ಟೆಗಳನ್ನು ಬಿಚ್ಚಿ, ನನ್ನ ಸೆರಗನ್ನು ನಿನಗೆ ಹೊದಿಸುತ್ತಿದ್ದೆ. ಹಾಸಿಗೆಯನ್ನು ನೀನು ಒದ್ದೆ ಮಾಡಿದ ಕಡೆ, ನಾನು ಮಲಗಿ, ಒಣಗಿರೋ ಕಡೆ ನಿನ್ನನೆಮಲಗಿಸಿ ನಿದ್ದೆ ಮಾಡಿಸ್ತಿದ್ದೆ. ಹೀಗೇ, ಒಕದಿನ ಅಲ್ಲ, ಒಂದ್ವಾರ ಅಲ್ಲ, ನೀನೊಬ್ಬನೇ ಬೇರೆ ಮಲಗಲು ಸಾಧ್ಯವಾಗುವವರೆಗೂ ಹಲವಾರು ವರ್ಷಗಳವರೆಗೆ ನಾನು ಪ್ರೀತಿಯಿಂದ ನೋಡ್ಕೊಳ್ತಿದ್ದೆ. ಆದರೆ ನೀನೀಗ ಒಂದೆರಡು ಸಲ ನೀರುರುಳಿಸಿ ಹಾಸಿಗೆ ಒದ್ದೆ ಮಾಡಿದ್ದಕ್ಕೇ ಸಿಟ್ಟು ಮಾಡ್ಕೊಂಡು ಕೂಗಾಡ್ತಿದೀಯಾ. ಒಂದು ರಾತ್ರಿ ನಿದ್ದೆ ಮಾಡದೇ ಇರೋದಕ್ಕೇ ರಂಪ ಮಾಡ್ತಿದೀಯ,' ಎಂದಳು ತಾಯಿ.

ಆ ಮಗ ನಾಚಿಕೆಯಿಂದ ತಾಯಿ ಕಾಲಿಗೆ ಬಿದ್ದು , 
' ಅಮ್ಮಾ, ನನ್ನ ಕಣ್ಣು ತೆರೀತು. ಮಕ್ಕಳನ್ನು ಹೊತ್ತು, ಹೆತ್ತು, ಸಾಕೋದಕ್ಕೆ ತಾಯಿ ಪಡುವ ಶ್ರಮಕ್ಕೆ, ಮಾಡುವ ಸೇವೆಗೆ, ಪಡೋ ಕಷ್ಟಕ್ಕೆ, ಸಹನೆಗೆ, ಬದಲು ಪಾವತಿಸಲು ನೂರಾರು ವರ್ಷಗಳು ಸೇವೆ ಮಾಡಿದರೂ ಅದು ನಡೆಯೋ ಕೆಲಸ ಅಲ್ಲ. ನಿನ್ನ ಋಣ ತೀರಿಸೋದು ಅಸಂಭವ. ನಾನೇ ಅಲ್ಲ, ಜಗತ್ತಿನಲ್ಲಿ ಯಾರೂ ಯಾವಾಗಲೂ ತಾಯಿ ಋಣ ತೀರಿಸಲಾರರು.' ಎಂದ.

ಅದಕ್ಕೆಂದೇ ತಾಯಿಯನ್ನು 'ಮಾತೃದೇವೋಭವ' ಎಂದರು. ತಾಯಿ ದೇವತೆ. ತಾಯಿ ಋಣ ತೀರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಒಂಬತ್ತು ತಿಂಗಳು ತನ್ನ ಮಗುವನ್ನು ಹೊತ್ತು, ಎಷ್ಟೋ ನೋವುಗಳನ್ನು ಸಹಿಸಿಕೊಂಡು, ಮಗುವಿಗೆ ಜನ್ಮ ಕೊಡ್ತಾಳೆ. ಆ ತಾಯಿಗದು ಪುನರ್ಜನ್ಮವೇ!

ದಯವಿಟ್ಟು ತಮ್ಮ ಮಕ್ಕಳಿಗೆ ಇದನ್ನು ಓದಿ ಕೇಳಿಸಿ.

ಮಾರ್ಜಾಲ ಕಿಶೋರ ನ್ಯಾಯ

ದೇವರನ್ನು ಆಶ್ರಯಿಸುವ ವಿಧಾನ:
ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸಬಹುದು.

1.ಮಾರ್ಜಾಲ ಕಿಶೋರ ನ್ಯಾಯ.
2.ಮರ್ಕಟ ಕಿಶೋರ ನ್ಯಾಯ.
3.ಮತ್ಸ್ಯ ಕಿಶೋರ ನ್ಯಾಯ.

ಮಾರ್ಜಾಲ ಕಿಶೋರ ನ್ಯಾಯ ---- ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದವರಿಗೆ ಕರ್ಮಗಳನ್ನು ಕಳೆಯುತ್ತಾನೆ. ಆಗ ಮನುಷ್ಯ ಕಷ್ಟಗಳಲ್ಲಿ ತೊಳಲಾಡುತ್ತಾನೆ. ಅದರಿಂದ ಭಗವಂತ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ.

ಮರ್ಕಟ ಕಿಶೋರ ನ್ಯಾಯ --- ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾವುದೇ ಪರಿಸ್ಥಿತಿಯೂ ಅವನ ನಂಬಿಕೆಯನ್ನು ಕದಲಿಸಲಾರದು. ಇದು ಅತ್ಯಂತ ಕಠಿಣ, ಅಷ್ಟೇ ಶ್ರೇಷ್ಠವಾದುದು.

ಮತ್ಸ್ಯ ಕಿಶೋರ ನ್ಯಾಯ --- ಮೀನಿನ ಮರಿ ಕೋಟ್ಯಾಂತರ ಮೈಲಿ ದೂರದಲ್ಲಿದ್ದರೂ ಅದು ತಾಯಿಯನ್ನು ನೆನೆದರೆ ಸಾಕು ಮರುಕ್ಷಣ ತಾಯಿ ಕಣ್ಣಮುಂದೆ ಇರುತ್ತದೆ. ಹಾಗೆ ಭಗವಂತನನ್ನು ಸರಿಯಾಗಿ ನೆನೆಸಿ ಕೊಳ್ಳುವ ಕಲೆ ಗೊತ್ತಿದ್ದರೆ ನಮ್ಮ ಮನಸು ಸದಾ ಅವನಲ್ಲಿಲ್ಲದಿದ್ದರೂ ಕರೆದೊಡನೆ ಬರುತ್ತಾನೆ.

ಸರ್ವೇ ಜನಾ ಸುಖಿನೋ ಭವಂತು|
ಸಮಸ್ತ ಸನ್ಮಂಗಳಾನಿ ಭವಂತು ||

December 13, 2022

ವೇದಗಳಲ್ಲಿ ಗ್ರಾಮದ ಪರಿಕಲ್ಪನೆ

ವಿಶ್ವಂ ಪುಷ್ಟಂ ಗ್ರಾಮೇ 

ನಮ್ಮಲ್ಲಿ ಎಲ್ಲವಕ್ಕೂ ತಪ್ಪು ಹುಡುಕುವ ಅಥವಾ ಎಲ್ಲದರಲ್ಲಿಯೂ ಆಧುನಿಕತೆಯನ್ನು ಹುಡುಕುವ ಪರಿಪಾಠವಿದೆ. ಬಹು ಮುಖ್ಯವಾಗಿ ಪ್ರಾಚೀನತೆ, ನಮಗದು ಅಸಹ್ಯ. ನಾವು ಅಡ್ವಾನ್ಸ್‌ಡ್ ಆಗಬೇಕು. ಅದಕ್ಕಾಗಿ ನಾವು ಹೇಳಿಕೊಳ್ಳುವುದು ಈ ದೇಶದಲ್ಲಿ ಆಡಳಿತ ವ್ಯವಸ್ಥೆ ಆರಂಭವಾದದ್ದೇ ಬ್ರಾಹ್ಮಣಗಳು ಬಂದನಂತರ ಎನ್ನುವುದಾಗಿ. ಜನಪದವಿರಲಿ, ಮಹಾಜನಪದವಿರಲಿ ಅವೆಲ್ಲವೂ ಆಮೇಲಿನ ಅನ್ಯ ದೇಶೀಯರನ್ನು ನೋಡಿ ನಾವು ಕಲಿತದ್ದು ಎನ್ನುವಂತಹ ಧೋರಣೆ ನಮ್ಮಲ್ಲಿದೆ. ಆದರೆ ಗ್ರಾಮ ವ್ಯವಸ್ಥೆ, ಅರಣ್ಯ ರಕ್ಷಣೆ, ಆಡಳಿತವ್ಯವಸ್ಥೆ, ಆರ್ಥಿಕನಿರ್ವಹಣೆ, ರಾಜನಿಗೆ ಹೇಗೆ ಪಟ್ಟಾಭಿಷೇಕ ಮಾಡಬೇಕು ಎನ್ನುವಂಥಹ ವಿಷಯಗಳನ್ನು ನಾವು ಕಂಡು ಕೇಳರಿಯದಷ್ಟು ಪ್ರಾಚೀನದಲ್ಲಿಯೇ ಈ ನೆಲ ರೂಢಿಸಿಕೊಂಡಿತ್ತು. ಸಿಂಧೂ ಸರಸ್ವತೀ ನಾಗರೀಕತೆಯ ಜನ ಸುಸಜ್ಜಿತ ನಗರ ವ್ಯವಸ್ಥೆ ಮಾಡಿಕೊಂಡಿದ್ದರು ಅನ್ನುವುದಕ್ಕೂ ಮೊದಲೇ ಆ ಸುಸಜ್ಜಿತ ವ್ಯವಸ್ಥೆ ನಮ್ಮಲ್ಲಿ ಇತ್ತು. ಆದರೆ ಇತ್ತು ಎನ್ನುವುದನ್ನು ಒಪ್ಪುವ ಮನಸ್ಸು ಬರಡಾಗಿತ್ತು.

ಹಿಂದೆ ಗೃತ್ಸಮದ ಎನ್ನುವ ಋಷಿಯು ಗ್ರಾಮದ ಸ್ವರೂಪವನ್ನು ಮೊದಲಿಗೆ ಕಟ್ಟಿ ಕೊಡುತ್ತಾನೆ. ‘ಯಸ್ಯ ಗಾವೋ ಯಸ್ಯ ಗ್ರಾಮಾ ಯಸ್ಯ ವಿಶ್ವೇ ರಥಾಸಃ’ ಎನ್ನುವುದನ್ನು ಈ ಋಷಿಯು ಇಂದ್ರನನ್ನು ಕುರಿತಾಗಿ ಹೇಳುತ್ತಾ, ಈ ಕುದುರೆಗಳು, ಜನರು, ಗೋವುಗಳು ಮತ್ತು ಗ್ರಾಮಗಳು ನಿನ್ನ ಅಧೀನಕ್ಕೆ ಒಳಪಟ್ಟು ನೀನು ಶಾಸನಕ್ಕೊಳಪಡಿಸಿರುವೆ ಎನ್ನುವುದನ್ನು ಗಮನಿಸಿದರೆ ನಮ್ಮ ಆಡಳಿತ ವ್ಯವಸ್ಥೆಯ ಆರಂಭವಾಗಿದ್ದು ಅತ್ಯಂತ ಪ್ರಾಚೀನ ಕಾಲದಲ್ಲಿ ಎನ್ನುವುದು ನಿಶ್ಚಯ. ಅಂದರೆ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಜನಪದ ಮತ್ತು ಮಹಾಜನಪದಗಳಿರುತ್ತವೆ. ಅವುಗಳಲ್ಲಿ ಗ್ರಾಮ ಸಹ ಮುಖ್ಯವಾಗುತ್ತದೆ. ಗ್ರಾಮಗಳು ಜನವಸತಿ ಮತ್ತು ಕೃಷಿಯೇ ಮುಂತಾದ ಚಟುವಟಿಕೆಯ ಕೇಂದ್ರ ಎನ್ನುವುದು ಋಷಿಯ ಅಭಿಪ್ರಾಯವಾಗಿದ್ದು, ಗ್ರಾಮವೂ ಸಹ ಆಡಳಿತಕ್ಕೆ ಮತ್ತು ರಾಜನ ಅಧೀನದಲ್ಲಿಯೇ ಇರುತ್ತವೆ ಎನ್ನುವುದು ಗೃತ್ಸಮದನ ಅಭಿಪ್ರಾಯ.
ಇನ್ನು ಅಥರ್ವವೇದದ ೪:೭ನೇ ಸೂಕ್ತದಲ್ಲಿ ’ಪರಿಗ್ರಾಮಮಿವಾಚಿತಂ’ ಎಂದು ಜನಸಮೂಹ ಒಟ್ಟಾಗಿ ಜೀವಿಸುವ ಪ್ರದೇಶವನ್ನು ಗ್ರಾಮ ಎಂದು ಕರೆಯಬೇಕು ಎನ್ನುವುದನ್ನು ಹೇಳಲಾಗಿದೆ. ಇನ್ನು ಆಂಗಿರಸ ವಂಶದ ಕುತ್ಸನು ರುದ್ರನನ್ನು ಕುರಿತು ’ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಂ’ ಎನ್ನುವಲ್ಲಿ ಹೇ ರುದ್ರದೇವನೇ ನಾವು ವಾಸಿಸುವ ಗ್ರಾಮದಲ್ಲಿ ಇರುವಂತಹ ಸಮಸ್ತ ಪ್ರಾಣಿಗಳು, ಮನುಷ್ಯರೂ ಸಹ ಯಾವುದೇ ರೋಗಬಾಧೆಯಿಂದ ಬಾಧಿಸಲ್ಪಡದಿರಲಿ ಎನ್ನುವುದು ಋಗ್ವೇದದ 1:114ನೇ ಸೂಕ್ತದಲ್ಲಿ ಇದ್ದರೆ, ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ 1:2:1:1 ರಲ್ಲಿ ಇದೇ ಮಂತ್ರವಿದ್ದು ಅಲ್ಲಿಯೂ ಸಹ ರೋಗದಿಂದ ಮುಕ್ತರನ್ನಾಗಿ ಗ್ರಾಮದಲ್ಲಿರುವ ಸಕಲ ಜೀವಿಗಳನ್ನು ರಕ್ಷಿಸು ಎನ್ನಲಾಗಿದೆ.
ಹಿಂದೆ ಇರಂಮದ ಎನ್ನುವ ಮಹರ್ಷಿಯೊಬ್ಬನಿದ್ದ. ಆತನಿಗೆ ದೇವಮುನಿ ಎನ್ನುವ ಮಗನೊಬ್ಬ ಇದ್ದ. ಈತ ಮಹಾ ತಪಸ್ವಿ ಹಾಗೂ ಮಂತ್ರ ದೃಷ್ಟಾರನಾಗಿದ್ದ. ಯಾಗ ಯಜ್ಞಗಳನ್ನು ನೆರವೇರಿಸಿಕೊಂಡು ಸನ್ಯಾಸ ಜೀವನ ನಡೆಸುತ್ತಿದ್ದ. ಒಮ್ಮೆ ಈತ ಏಕಾಂಗಿಯಾಗಿ ಹೊರಡುತ್ತಾನೆ. ನಡೆಯುತ್ತಾ ನಡೆಯುತ್ತಾ ಒಂದು ಅರಣ್ಯವನ್ನು ಪ್ರವೇಶಿಸಿತ್ತಾನೆ. ಗಹನವಾದ ಅರಣ್ಯದಲ್ಲಿ ಆತ ಅನೇಕ ವಿಧವಾದ ನೈಸರ್ಗಿಕ ವಿಸ್ಮಯಗಳನ್ನು ನೋಡುತ್ತಾನೆ. ಆಗ ಆತ ಕಂಡುಕೊಂಡ ಸ್ತುತಿಯೇ ಋಗ್ವೇದದಲ್ಲಿ ಬರುವ ಪ್ರಸಿದ್ಧವಾದ ಅರಣ್ಯಸೂಕ್ತ. ಈ ಅರಣ್ಯ ಸೂಕ್ತದಲ್ಲಿ ಬರುವ ಇತರೇ ವಿಷಯಗಳ ಕುರಿತಾಗಿ ನಾನು ಇಲ್ಲಿ ಬರೆಯುತ್ತಿಲ್ಲ. ಇಲ್ಲಿ ಆತ ಅರಣ್ಯದ ಭೀಕರ ಸನ್ನಿವೇಶವನ್ನು ನೀರವ ಮೌನವನ್ನು ಹೇಳಿ ಅದರ ಕಲ್ಪನೆಯನ್ನು ಜಾಗ್ರತಗೊಳಿಸುತ್ತಾನೆ. ಕೆಲವು ಸಮೀಕರಣಗಳನ್ನು ಮಾಡುತ್ತಾ ಪಶು, ಪಕ್ಷಿಗಳ ನಿವಾಸ ಸ್ಥಳ ಮತ್ತು ಅವುಗಳ ಕೂಗನ್ನು ಹೇಳುತ್ತಾ ಸಂಗೀತದ ಉಪಕರಣವೊಂದನ್ನು ಋಗ್ವೇದದ 10:146:1ನೇ ಋಕ್ಕಿನಲ್ಲಿ ಹೇಳುತ್ತಾನೆ. ‘ಕಥಾ ಗ್ರಾಮಂ ನ ಪೃಚ್ಛಸಿ’ ಎನ್ನುತ್ತಾ ಅರಣ್ಯಕ್ಕೆ ಅತೀ ಸಮೀಪದಲ್ಲಿರುವುದು ಗ್ರಾಮ ಮತ್ತು ಆ ಗ್ರಾಮಕ್ಕೆ ಹೋಗುವುದು ಹೇಗೆ ಎನ್ನುತ್ತಾನೆ. ಇಡೀ ಸೂಕ್ತದಲ್ಲಿ ಗ್ರಾಮದ ಪರಿಸರ ಮತ್ತು ಅರಣ್ಯದ ಸುಂದರ ವಾತಾವರಣವನ್ನು ಹೇಳುತ್ತನೆ. ಇನ್ನು ‘ಗಾವ ಇವ ಗ್ರಾಮಂ’ ಎಂದು ಅದೇ ಮಂಡಲದ ೧೪೯ನೇ ಸೂಕ್ತದಲ್ಲಿ ಬಂದಿದೆ. ಅಂದರೆ ಸಾಯಣಾಚಾರ್ಯರು ಅದನ್ನು ’ಗಾವ ಇವ ಯಥಾರಣ್ಯೇ ಸಂಚರಂತೋ ಗಾವೋ ಗ್ರಾಮಂ ಶೀಘ್ರಮಭಿಗಚ್ಛಂತಿ’ ಎನ್ನುತ್ತಾರೆ. ಎಂದರೆ ಅರಣ್ಯದಲ್ಲಿ ಮೇಯಲಿಕ್ಕಾಗಿ ಹೋದ ಗೋವುಗಳು ಅರಣ್ಯದಿಂದ ಊರಿಗೆ ಶೀಘ್ರವಾಗಿ ಹಿಂದಿರುಗುವಂತೆ ಎಂದಿರುವುದನ್ನು ಗಮನಿಸಿದರೆ ಅಲ್ಲಿ ಗ್ರಾಮದ ವ್ಯವಸ್ಥೆ ಪ್ರಧಾನವಾಗಿ ಕೃಷಿಯೇ ಮೊದಲಾದ ಚಟುವಟಿಕೆಗಳಿಗೆ ಕಾರಣವಾಗಿದ್ದು ಅಲ್ಲಿ ದೇಶದ ಆರ್ಥಿಕತೆ ನಿಗದಿಯಗುತ್ತಿತ್ತು. ಹೇಗೆ ನಗರದ ನಿರ್ಮಾಣವಾಗಿ ಅಲ್ಲಿ ಗ್ರಾಮ ರಕ್ಷಣೆಗೆ ಮತ್ತು ಸುಸಜ್ಜಿತ ಜೀವನಕ್ಕೆ ಅನುವಾಗುವಂತಹ ಕಾನೂನು ಮತ್ತು ರಕ್ಷಣೆ ನಡೆಯುತ್ತಿತ್ತೋ ಗ್ರಾಮಗಳು ಸಹ ಅದೇ ರೀತಿಯ ವ್ಯವಸ್ಥೆಯನ್ನು ರೂಪಿಸಿಕೊಂಡದ್ದು ತಿಳಿಯುತ್ತದೆ. ಶತಪಥ ಬ್ರಾಹ್ಮಣ 13:2:4:2, ವಾಜಸನೇಯಿ ಸಂಹಿತಾ 3:45, ಐತರೇಯ ಬ್ರಾಹ್ಮಣ 3:44; ಛಾಂದೋಗ್ಯ ಉಪನಿಷತ್ತಿನ 8:6:2ರಲ್ಲಿ ಗ್ರಾಮಗಳ ವ್ಯವಸ್ಥೆಯ ಕುರಿತಾಗಿ ಬಂದಿವೆ.
‘ವಾಯವ್ಯಾನ್ ಅರಣ್ಯಾನ್ ಗ್ರಾಮ್ಯಾಶ್ಚ ಯೇ’ ಎನ್ನುವ ಪುರುಷ ಸೂಕ್ತದಲ್ಲಿ ವಿರಾಟ್ ಪುರುಷನು ಸೃಷ್ಟಿಯ ಆರಂಭದಲ್ಲಿ ಅರಣ್ಯವನ್ನು, ಗಾಳಿಯಲ್ಲಿ ಹಾರಾಡಲು ಸಾಧ್ಯವಾಗುವ ಪಕ್ಷಿಗಳನ್ನು ಮತ್ತು ಗ್ರಾಮಗಳನ್ನು ಸೃಷ್ಟಿಸಿದನು ಅಥವಾ ವ್ಯವಸ್ಥೆಗೊಳಿಸಿದನು ಎಂದಿರುವಲ್ಲಿ ಗ್ರಾಮದ ಕಲ್ಪನೆ ಅದೆಷ್ಟು ಪ್ರಾಚೀನ. 

ಇನ್ನು ಅಥರ್ವವೇದದ 4:22:2 ರ ಅಮಿತ್ರಕ್ಷಯನ ಸೂಕ್ತದಲ್ಲಿ ’ಏಮಂ ಭಜ ಗ್ರಾಮೇ’ ಎನ್ನುವಲ್ಲಿ ಗ್ರಾಮದಲ್ಲಿ ಉಳಿಯಲು ಯೋಗ್ಯವಾದ ಸಾಕುಪ್ರಾಣಿ ಪಕ್ಷಿಗಳನ್ನು ಹೇಳಲಾಗಿದೆ. ಇನ್ನು ಬ್ರಹದಾರಣ್ಯಕ ಉಪನಿಷತ್ತಿನ 6:3:13ರಲ್ಲಿ ಗ್ರಾಮಗಳಲ್ಲಿ ಬೆಳೆದ ಬೆಳೆಗಳನ್ನು ಹೇಗೆ ಸಂಗ್ರಹಿಸಿಡಬೇಕು ಎನ್ನುವುದು ತಿಳಿಸಿಕೊಡಲಾಗಿದೆ. ಇನ್ನು ಗ್ರಾಮ ಎನ್ನುವುದು ಯಾವತ್ತೂ ಮುಕ್ತವಾಗಿರುವುದರಿಂದ ಇದು ಸಾರ್ವಜನಿಕರಿಗೆ ಅನುಕೂಲವಾಗಿಯೇ ಇರುತ್ತಿತ್ತು. ಜೈಮಿನೀಯ ಉಪನಿಷತ್ ಬ್ರಾಹ್ಮಣದಲ್ಲಿ 3:13:4 ರಲ್ಲಿ ಮಹಾಗ್ರಾಮ ಎನ್ನುವ ಉಲ್ಲೇಖ ಸಿಗುತ್ತದೆ. ಹೀಗೇ ಗ್ರಾಮ, ನಗರ ಮತ್ತು ಕೋಟೆಗಳು ಅತ್ಯಂತ ಪ್ರಾಚೀನವಾಗಿದ್ದು ಅಲ್ಲಿ ಜನ ಅವರವರ ಕಸುಬನ್ನು ವ್ಯವಸ್ಥಿತ ರೂಪದಲ್ಲಿ ಮಾಡಿಕೊಂಡು ಬಂದಿದ್ದಾರೆ. ಬಹಳಷ್ಟು ಉದಾಹರಣೆಗಳೊಂದಿಗೆ ಪ್ರಾಚೀನ ಜನರು ನಾಗರೀಕತೆ ಕಟ್ಟಿಕೊಂಡು ಅದನ್ನು ಉಳಿಸಿಕೊಂಡು ಸುವ್ಯವಸ್ಥಿತರಾಗಿ ಬದುಕಿ ಆದರ್ಶ ಮೆರೆದು ’ಕೀರ್ತಿಯಸ್ಯ ಸ ಜೀವತಿ’ ಎಂದವರು. 

#ಅರಣ್ಯಾನ್_ಗ್ರಾಮ್ಯಾಶ್ಚ_ಯೇ
ಸದ್ಯೋಜಾತರು

November 26, 2022

ಅಪ್ಪನೆಂದರೆ!

ಭಾರ್ಗವ ವಂಶದಲ್ಲಿ ಸೋಮಾಹುತಿ ಎನ್ನುವ ಮಹರ್ಷಿ ಇದ್ದದ್ದು ಋಗ್ವೇದದ ಎರಡನೇ ಮಂಡಲದ 5ನೇ ಸೂಕ್ತದಿಂದ ತಿಳಿದು ಬರುತ್ತದೆ. ಈ ಮಹರ್ಷಿ ಸೂಕ್ತದೃಷ್ಟಾರನಾಗಿದ್ದ. ಮರಣದ ನಂತರದ ಪ್ರಜ್ಞಾವಸ್ಥೆಯಿಂದ ಸುಪ್ತಾವಸ್ಥೆಗೆ ಸೇರಿದ ನಂತರದ ಬದುಕಿನ ಕುರಿತು ಈ ಮಹರ್ಷಿ ಸ್ವಲ್ಪ, ಸ್ತುತಿಗಳಲ್ಲಿ ವ್ಯಕ್ತ ಪಡಿಸಿರುವುದು ಸಿಗುತ್ತವೆ. ಸೋಮಾಹುತಿಯ ಸೂಕ್ತವನ್ನು ಗಮನಿಸಿದರೆ ಆತ ತನ್ನ ಅಭಿವೃದ್ಧಿಗೆ, ಅಭ್ಯುದಯಕ್ಕೆ ಪ್ರೇರಕನಾದ ಅಪ್ಪನನ್ನು ಸ್ಮರಿಸುವುದು ಕಾಣಿಸುತ್ತದೆ. . . . 
ಹೋತಾ ಜನಿಷ್ಟ ಚೇತನಃ ಪಿತಾ ಪಿತೃಭ್ಯ ಊತಯೇ |. . . . . ವಾಜಿನೋ ಯಮಂ || ಎನ್ನುತ್ತಾರೆ. 

ಇಲ್ಲಿ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದು ಯಜ್ಞ ಕರ್ಮವಾಗಿರಲಿ ಅಥವಾ ಇನ್ನಾವುದೇ ಇರಲಿ ಅವುಗಳಿಗೆಲ್ಲಾ ಪ್ರೇರಣಾದಾಯಿಯಾಗಿರುವವನು ನಮ್ಮ ಯಜಮಾನ. ಅಂದರೆ ಅದು ತಂದೆಯೂ ಆಗಿರಬಹುದು ಅಥವಾ ನಮ್ಮ ರಾಜನಿರಬಹುದು ದೇವನಿರಬಹುದು ಅವನೇ ಚೇತನ. ಚೇತನವೇ ಪ್ರೇರಣೆ ಕೊಡುವುದು.
ಮುಂದಿನದ್ದು ಪಿತಾ ಪಿತೃಭ್ಯಃ, ಯಾರು ನಮ್ಮನ್ನು ಪಾಲಿಸುತ್ತಾರೋ, ಯಾರು ನಮ್ಮನ್ನು ರಕ್ಷಿಸಿ ಅಭಿವೃದ್ಧಿಯನ್ನು ಬಯಸುತ್ತಾರೋ ಅವನೇ ಅಪ್ಪ ಅಥವಾ ತಂದೆ. ಈ ತಂದೆ ಬದುಕಿದ್ದಾಗ ಚೈತನ್ಯವನ್ನು ತುಂಬುವವನಾಗಿದ್ದರೆ ಬದುಕಿನಾಚೆಗೆ ಸಹ ಅಭ್ಯುದಯವನ್ನೇ ಮಾಡುತ್ತಾನೆ. ಇನ್ನು ಬದುಕಿದ್ದ ಅಪ್ಪ ಪಿತುವಾಗಿದ್ದು ನಮಗೆ ಮಾರ್ಗದರ್ಶಕನಾಗಿ ಇರುತ್ತಾನೆ. ಅದೇ ಅಪ್ಪ ಸತ್ತ ನಂತರ ಪಿತೃವಾಗಬೇಕು ಎನ್ನುವ ಬಯಕೆ ಮಕ್ಕಳಿಗೆ ಇರಬೇಕು. ಅಂದರೆ ಬದುಕಿದ್ದಾಗ ಮಾಡಿದ ಪುಣ್ಯ ಕಾರ್ಯಗಳಿಂದ, ಸತ್ತ ನಂತರ ಪಿತೃವಾಗಿ ಸ್ವರ್ಗದ ಪ್ರವೇಶ ಪಡೆದುಕೊಳ್ಳುತ್ತಾರೆ. ಹೀಗೇ ಬದುಕಿದ್ದಾಗ, ಮನುಷ್ಯ ತಾನು ಬದುಕಬೇಕು ಮತ್ತು ಮಿಕ್ಕವರನ್ನು ಬದುಕಲು ಬಿಡಬೇಕು. ಅಂತಹ ಬಾಳು ಬಾಳಿದರೆ ಪಿತೃವಾಗಿ ಪಿತೃಲೋಕ ಸೇರಿ ಪಿತೃ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.

’ಪಿತರಃ ಆಯುಷ್ಮಂತರಃ’ ಎನ್ನುವ ಯಜುರ್ವೇದದ ಮಂತ್ರದಲ್ಲಿ ಮಕ್ಕಳ ಆಯುಷ್ಯವನ್ನು ತಂದೆ ಬಯಸುತ್ತಾ ತನಗಿಂತಲೂ ಉತ್ತಮನಾಗಲಿ ಎನ್ನುವ ಸದಭಿಲಾಷೆ ಹೊಂದಿರುತ್ತಾನೆ ಎಂದಿರುವುದು ಗಮನಿಸಿದರೆ ತಂದೆಗೆ ಮಗನ ಮೇಲಿರುವ ಕಾಳಜಿಯೋ ಮಮತೆಯೋ ಗೊತ್ತಾಗುತ್ತದೆ.
ಯಾರೇ ಆದರೂ ತಮ್ಮ ಪೂರ್ವಜರನ್ನು ಗುರುತಿಸುವುದು ನಮಗಿಂತ ಮೇಲಿರುವ ಆಕಾಶದಿಂದ. ಅಂದರೆ ಆಕಾಶದಲ್ಲಿ ಮಿನುಗುವ ನಕ್ಷತ್ರಗಳಲ್ಲಿ. ವೇದ ಮಂತ್ರಗಳಲ್ಲಿಯೂ ಹೇಳುವುದು ಸತ್ತ ನಂತರ ಸ್ವರ್ಗಕ್ಕೆ ಸೇರುವುದು ಸೂರ್ಯನ ಸಮೀಪಕ್ಕೆ ಎನ್ನುವಾಗ ನಕ್ಷತ್ರವೇ ಆಗಿರುತ್ತದೆ. ಅದಕ್ಕಾಗಿಯೇ ದಿನಕ್ಕೊಮ್ಮೆ ನಕ್ಷತ್ರ ನೋಡದಿದ್ದರೆ ಯಾಕೋ ಅಸಮಾಧಾನ.

ನನ್ನ ದಿನಚರಿಯಲ್ಲಿ ಅಪ್ಪ ಕಣ್ಮರೆಯಾದ ದಿನದಿಂದ ಇದೊಂದು ಸೇರಿಕೊಂಡಿತು. . . . ಆಕಾಶದಲ್ಲಿನ ನಕ್ಷತ್ರ ನೋಡುವುದು!
ಪಿತುಂ ನು ಸ್ತೋಷಂ ಮಹಾ ಧರ್ಮಾಣಂ ತವಿಷೀಂ | ಎನ್ನುವ ಋಗ್ವೇದದ 1ನೇ ಮಂಡಲದ 187ನೇ ಸೂಕ್ತದ ಋಕ್ಕಿನಲ್ಲಿ ಅಪ್ಪ ಹೇಗಿರುತ್ತಾನೆ, ಮತ್ತು ಏನು ಬಯಸುತ್ತಾನೆ ಎಂದು ಸಿಗುತ್ತದೆ. ಇಲ್ಲಿ ಪಿತುಂ ಎನ್ನುವ ಶಬ್ದದ ವಿವರಣೆ ಸಿಗುತ್ತದೆ. ಪಿತು ಅಥವಾ ತಂದೆಯಾದವನು ನಮ್ಮ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸುವವನು ಎನ್ನುತ್ತದೆ. ’ಪಿತುಂ ಪಾಲಕಮನ್ನಂ’ ಎನ್ನುವಲ್ಲಿ ಹಸಿವಿನ ಬಾಧೆಯನ್ನು ಪರಿಹರಿಸುವವನು ಎಂದರ್ಥವು. ಈ ಪಿತು ಎನ್ನುವ ಶಬ್ದಕ್ಕೆ ಅನೇಕ ಅರ್ಥಗಳಿದ್ದರೂ ಸಹ ಹೆಚ್ಚಿನ ಅರ್ಥವನ್ನು ಕೊಡುವುದು ತನ್ನ ಮುಂದಿನ ಜನಾಂಗಕ್ಕೆ ಅಥವಾ ತನ್ನ ಮಕ್ಕಳಿಗೆ ಉತ್ತರೋತ್ತರ ಅಭಿವೃದ್ಧಿಯಾಗಲೆಂದು ಬಯಸುವವನು ತಂದೆ. "ಪಿತುರಿತ್ಯನ್ನನಾಮ ಪಾತೇರ್ವಾ" ಎನ್ನುವ ನಿರುಕ್ತದ ಅರ್ಥದಲ್ಲಿ ಪಾತೇರ್ವಾ ಎನ್ನುವುದನ್ನು ಹಸಿವಿನಿಂದ ಕಾಪಾಡುವವನು ಎಂದು ಹೇಳಲಾಗಿದೆ. ನಮ್ಮ ಎಲ್ಲಾ ಬಗೆಯ ಹಸಿವೆಗಳಿಂದ ಕಾಪಾಡುವವನು ಪಿತು ಆದುದರಿಂದ ನಮ್ಮ ತಂದೆ ಆ ಎಲ್ಲಾ ಅಭಿವೃದ್ಧಿಗಳನ್ನು ಬಯಸುವವನು. ಇದು ನಮ್ಮ ಭಾರತೀಯ ಚಿಂತನೆಯೂ ಹೌದು. ನಮ್ಮ ಸಂಸ್ಕೃತಿಯೂ ಹೌದು. ಹೌದು ನಮಗೆ ಉದಾತ್ತವಾದ ಸಂಸ್ಕಾರವನ್ನು ಕೊಟ್ಟ ತಂದೆಯ ನೆನಪು ಆಗಾಗ ಬಾಧಿಸುತ್ತದೆ.

#ಪಿತೃ_ನಕ್ಷತ್ರ 
Sadyojath Bhat

November 23, 2022

ದೇಶ ಹಾಳಾಗಿದ್ದು ತುಪ್ಪ ತಿನ್ನುವರಿಂದ ದೇಶ ಹಾಳು ಮಾಡಿದ್ದೇ ಬ್ರಾಹ್ಮಣರು !

ದೇಶ ಹಾಳಾಗಿದ್ದು ,ತುಪ್ಪ ತಿನ್ನುವರಿಂದ. ದೇಶ ಹಾಳು ಮಾಡಿದ್ದೇ ಬ್ರಾಹ್ಮಣರು,
 ಈ ದೇಶಕ್ಕೆ ಅವರ ಕೊಡುಗೆ ಏನು,
ಪುಳ್ಚಾರ್ಗಳು,
ತಟ್ಟೆ ಕಾಸು ಎಂದು ಹೀಯಾಳಿಸುವವರಿಗೆ...
ಇಲ್ಲಿರುವ ಎಷ್ಟೋ ಸಾಧಕರು
ಬ್ರಾಹ್ಮಣರು ಎಂದೇ ತಿಳಿದಿರಲಿಲ್ಲ.
ಬ್ರಾಹ್ಮಣರು ಸೈನ್ಯದಲ್ಲಿ ಇದ್ದಾರಾ ಸ್ವಾತಂತ್ರ್ಯ ಹೋರಾಟದಲ್ಲಿ  ಇದ್ರಾ? ಅಲ್ಲಿದ್ದಾರಾ? ಇಲ್ಲಿದ್ದಾರಾ?ಎಂದಾಗ ಅನಿವಾರ್ಯವಾಗಿ ಸೈನ್ಯದಲ್ಲೂ,ಸ್ವತಂತ್ರ ಸೇನಾನಿಗಳ ಜಾತಿ ಹುಡುಕುವಂತೆ ಮಾಡಿದ ಜಾತಿವಾದಿಗಳಿಗೆ ಈ ಪಟ್ಟಿ ಅರ್ಪಣೆ.

ಬ್ರಾಹ್ಮಣರು ದೇಶಕ್ಕೆ
ನೀಡಿದ ಕೊಡುಗೆಯೇನು..?” ಎಂಬುದನ್ನು  ಸಂಕ್ಷಿಪ್ತವಾಗಿ ಬರೆಯಲು ಪ್ರಯತ್ನಿಸಿದ್ದೇನೆ . 
ವಿ.ಸೂ.ಇಲ್ಲಿರುವ ಸಾಧಕರಲ್ಲಿ ಕೆಲವರನ್ನು "ಇಲ್ಲ ಇವರು ನಮ್ಮ ಜಾತಿ" ಎಂದು ಅವರ ಜಾತಿಯಲ್ಲಿ ಗುರುತಿಸಿಕೊಂಡರೂ  ಸಂತೋಷವೇ,ಅವರೂ ನಮ್ಮವರೇ ಭಾರತೀಯರೇ...
ಶೂನ್ಯ(ZERO )
ಚಾಣಕ್ಯನ ನೀತಿಶಾಸ್ತ್ರ, ಆರ್ಯಭಟನಂತಹ
ಖಗೋಳಶಾಸ್ತ್ರಜ್ಞ, 
(ದೇಶದ ಮೊದಲ ಉಪಗ್ರಹದ ಹೆಸರು
ಆರ್ಯಭಟ.)
ಭಾಸ್ಕರಾಚಾರ್ಯ
ಆದಿಕವಿ ಪಂಪನ ಮೂಲ ವಂಶ ಬ್ರಾಹ್ಮಣ (ತಂದೆ ಬ್ರಾಹ್ಮಣ)
ಬಸವಣ್ಣನವರು.
19, 20 ಹಾಗೂ 21ನೇ ಶತಮಾನದ ಬ್ರಾಹ್ಮಣರ ಸಾಧನೆ ಒಮ್ಮೆ ನೋಡಿ
ನಮ್ಮ ದೇಶಕ್ಕೆ ರಾಷ್ಟಗೀತೆ ಕೊಟ್ಟ ರವೀಂದ್ರನಾಥ ಟ್ಯಾಗೋರ್,
ಪಿಂಗಾಳಿ ವೆಂಕಯ್ಯ( ರಾಷ್ಟ ಧ್ವಜದ ವಿನ್ಯಾಸಕಾರಲ್ಲಿ ಒಬ್ಬರು)
ಬಕಿಮ್ ಚಂದ್ರ ಚಟರ್ಜಿ (ವಂದೇ ಮಾತರಂ)
ಮ.ರಾಮಮೂರ್ತಿ ( ಕನ್ನಡ ಬಾವುಟ ರಚನೆ ಹಾಗೂ ವಿನ್ಯಾಸಗಾರ)
ಅದ್ಭುತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್(ಪ್ರತಿ ವರ್ಷ  ರಾಮಾನುಜನ್ ನೆನಪಿನಲ್ಲಿ ಡಿಸೆಂಬರ್ 22 'ರಾಷ್ಟ್ರೀಯ ಗಣಿತ ದಿನ'ವಾಗಿ ಆಚರಿಸಲಾಗುತ್ತದೆ.)
ಜಗದೀಶ್ ಚಂದ್ರ ಬೋಸ್.
ಭಾರತದ ಮೊಟ್ಟಮೊದಲ
ಇಂಜಿನಿಯರ್
ಸರ್.ಎಂ. ವಿಶ್ವೇಶ್ವರಯ್ಯನವರು.
( ಪ್ರತಿವರ್ಷ ಇವರ ನೆನಪಿನಲ್ಲಿ ಸೆಪ್ಟೆಂಬರ್ 15 ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ)
ಮೊಟ್ಟ ಮೊದಲ ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರಲ್ಲಿ ಒಬ್ಬರಾದ
ಮಂಗಲ್ ಪಾಂಡೆ,
ಝಾನ್ಸಿ ಲಕ್ಷ್ಮಿ ಬಾಯಿ,
ಸತಿ ಪದ್ದತಿ ವಿರುದ್ಧ ಹೊರಾಡಿದ ರಾಜಾ ರಾಮ್ ಮೋಹನ್ ರಾಯ್
ರಾಮಕೃಷ್ಣ ಪರಮಹಂಸರು,
ಶಾರದ ಮಾತೆ
ಸ್ವಾತಂತ್ರ್ಯ ಹೋರಾಟಗಾರರಾದ
ಬಾಲಗಂಗಾಧರ ತಿಲಕರು,
ಚಂದ್ರಶೇಖರ ಆಜಾದ್,
ಭಗತ್ ಸಿಂಗ್ ಜೊತೆ ನೇಣಿಗೇರಿದ ಸುಖದೇವ್ ಹಾಗೂ ರಾಜಗುರು.
ಅಂಬೇಡ್ಕರ್ ಅವರಿಗಿಂತ ಮೊದಲೇ
ದಲಿತರ ಏಳಿಗೆಗೋಸ್ಕರ ಜೀವನ ಮುಡಿಪಾಗಿಟ್ಟಿದ್ದ
ಮಂಗಳೂರಿನ ಸಮಾಜ ಸುಧಾರಕ #ಕುದ್ಮಲ್_ರಂಗರಾವ್.
ವಿಜಯಪುರದ ಕಾಕ ಕಾರ್ಖಾನಿಸ್(ಗಣಪತ ರಾವ್) ಸ್ವಾತಂತ್ರ ಪೂರ್ವದಲ್ಲಿ ದಲಿತರ ಹೆಣ್ಣು ಮಕ್ಕಳ ದೇವಾದಾಸಿ ಪದ್ಧತಿ ತಪ್ಪಿಸಲು ಹರಿಜನ ಕನ್ಯಾ ಮಂದಿರ ನಿರ್ಮಿಸಿದ ಮಹನೀಯರು.
ಪದ್ಮಶ್ರೀ ಪ್ರಶಸ್ತಿ  ಪುರಸ್ಕೃತರು.
ಗುರು ಗೋವಿಂದ ಭಟ್ಟರು,ಮೈಸೂರು ಸುಬ್ಬಣ್ಣ ಹೀಗೆ ಹಲವಾರು ಮಹನೀಯರ ಬಗ್ಗೆ ದಲಿತರಿಗೂ ಸೇರಿದಂತೆ ಈಗಿನ ತಲೆಮಾರಿನ ಜನರ‌್ಯಾರಿಗೂ ಇವರ ಪರಿಚಯವಿರಲು ಸಾಧ್ಯವೇ ಇಲ್ಲ.
ಇಂತಹ ಇತಿಹಾಸ ಬಹಳಷ್ಟು ಕಾಲ ಗರ್ಭದಲ್ಲಿ  ಹೂತು ಹೋಗಿವೆ. 
ಮತ್ತು ಈಗ ಸುಧಾ ಮೂರ್ತಿ.
ಎಲ್ಲರಿಗೂ ಇವರು ದಾರಾಳವಾಗಿ ದಾನ ಧರ್ಮ ಮಾಡುವ ದಾನಿ ಎಂದಷ್ಟೇ ಗೊತ್ತು.
ಆದರೆ ಇವರು ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಲು ಪ್ರಯತ್ನವನ್ನೂ ಪಟ್ಟು ಅದೇ ದೇವದಾಸಿಯರಿಂದ ಕೊಳೆತ ಮೊಟ್ಟೆ ಚಪ್ಪಲಿಯೇಟು ಸಹ ತಿಂದದ್ದು ಎಷ್ಟು ಜನರಿಗೆ ತಿಳಿದಿದೆ.
ಆದರೂ ಕಳೆದ18 ವರ್ಷಗಳಲ್ಲಿ 3000 ಕ್ಕೂ ಹೆಚ್ಚು ದೇವದಾಸಿ ಮಹಿಳೆಯರ ಮನವೊಲಿಸಿ ಅವರನ್ನು ಈ ಪದ್ಧತಿಯಿಂದ ಆಚೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸೈನ್ಯದಲ್ಲಿ ದೇಶದ ಮೊದಲ ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ಪಡೆದ ಮೇಜರ್ ಸೋಮನಾಥ್ ಶರ್ಮಾ,
ಇಸ್ರೋದಲ್ಲಿ 
ಕಸ್ತೂರಿ ರಂಗನ್,
UR.ರಾವ್,
ರಾಜಾ ರಾಮಣ್ಣ ,
CNR. ರಾವ್ ,
#ಸಂಗೀತದಲ್ಲಿ
ಹಿಂದುಸ್ತಾನಿ  ಸಂಗೀತದಲ್ಲಿ 
ಪಂಡಿತ್ ಭೀಮಸೇನ್ ಜೋಷಿ
ಪಂಡಿತ್ ರವಿಶಂಕರ್ (ಸಿತಾರ್)
ಕರ್ನಾಟಕ ಸಂಗೀತಕ್ಕೆ MS. ಸುಬ್ಬಲಕ್ಷ್ಮಿ
ಬಾಲ ಮುರಳಿ ಕೃಷ್ಣ,
#ಕ್ರೀಡೆಯಲ್ಲಿ, ವರ್ಲ್ಡ್ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್
ವಿಶ್ವದ ಅಗ್ರಗಣ್ಯ ಬ್ಯಾಟ್ಸ್‌ಮನ್‌ ಸಚಿನ್ ತೆಂಡೂಲ್ಕರ್
ಸಿನಿಮಾ ರಂಗದಲ್ಲಿ;
ಭಾರತದ ಕೋಗಿಲೆ ಲತಾ ಮಂಗೇಶ್ಕರ್,
ಕಿಶೋರ್ ಕುಮಾರ್,
ದಕ್ಷಿಣ ಭಾರತದ ಕೋಗಿಲೆ ಎಸ್ ಜಾನಕಿ,ಬಾಲಸುಬ್ರಮಣ್ಯಂ, ಪಿ ಬಿ ಶ್ರೀನಿವಾಸ್,
ಇಂತಹ ಸಾಧಕರು,ಮಹನೀಯರು ಕಾಣುವುದಿಲ್ಲವೇ?
ದೇಶಕ್ಕೆ ಬ್ರಾಹ್ಮಣರು ನೀಡಿದ,ನೀಡುತ್ತಿರುವ ಕೊಡುಗೆ
ಶೂನ್ಯವೇ..?

ಹತ್ತೊಂಬತ್ತು,ಇಪ್ಪತ್ತು, ಇಪ್ಪತ್ತೊಂದನೇ ಶತಮಾನದಲ್ಲಿ
ಶ್ರೀನಿವಾಸನ್ ರಾಮಾನುಜಮ್(ಅದ್ಭುತ ಗಣಿತ ಶಾಸ್ತ್ರಜ್ಞ)
ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾದ
ಭಾರತದ ಮೊಟ್ಟಮೊದಲ ಇಂಜಿನಿಯರ್ 
ಮತ್ತು ಅಗ್ರಗಣ್ಯ ಮಹಾನುಭಾವರಲ್ಲಿ ನಿಲ್ಲುವ ಕರ್ನಾಟಕದ ಪುತ್ರ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು

ಭಾರತದ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಹಾಗೂ ರಸಾಯನಶಾಸ್ತ್ರ ಉದ್ಯಮದ 
ಸ್ಥಾಪಕ ಶ್ರೀ  ಪ್ರಫುಲ್ಲ ಚಂದ್ರರಾಯ್
ಖ್ಯಾತ ನೀರಾವರಿ ತಜ್ಞ 
MS. ಸ್ವಾಮಿನಾಥನ್
ಭಾರತದ ಮೊದಲ ಮಹಿಳಾ ಡಾಕ್ಟರ್ ಹಾಗೂ ಮೊದಲ ಇಂಜಿನಿಯರ್ ವಿಜ್ಞಾನಿ ಬ್ರಾಹ್ಮಣ ಮಹಿಳೆಯರು.
ಇಸ್ರೋದಲ್ಲಿ ವಿಜ್ಞಾನಿಗಳು  
ಸಿ.ವಿ ರಾಮನ್
ಕಸ್ತೂರಿ ರಂಗನ್
UR.ರಾವ್ (ಮಾಜಿ ಇಸ್ರೋ ಅಧ್ಯಕ್ಷ ಮತ್ತು ಭಾರತೀಯ ಉಪಗ್ರಹ ಅಭಿವೃದ್ಧಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರು ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಅಭಿವೃದ್ಧಿಪಡಿಸಿದವರು).
ರಾಜಾ ರಾಮಣ್ಣ 
CNR.ರಾವ್(ಭಾರತ ರತ್ನ ಪುರಸ್ಕೃತರು)
ವೆಂಕಿ ರಾಮಕೃಷ್ಣನ್, ನೊಬೆಲ್ ಪ್ರಶಸ್ತಿ ವಿಜೇತ, ರಚನಾತ್ಮಕ ಜೀವಶಾಸ್ತ್ರಜ್ಞರು
S. R. ಶ್ರೀನಿವಾಸ ವರದನ್, ಗಣಿತಶಾಸ್ತ್ರಜ್ಞ ಮತ್ತು Abel ಪ್ರಶಸ್ತಿ ಪುರಸ್ಕೃತರು
ನಂಬಿ ನಾರಾಯಣನ್, ಭಾರತೀಯ ಏರೋಸ್ಪೇಸ್ ಎಂಜಿನಿಯರ್
ಸುಬ್ರಹ್ಮಣ್ಯ ಚಂದ್ರಶೇಖರ್ (ನೊಬೆಲ್ ಪ್ರಶಸ್ತಿ ಪುರಸ್ಕೃತರು)
ಸಿ.ಎಸ್. ಶೇಷಾದ್ರಿ ಗಣಿತಶಾಸ್ತ್ರಜ್ಞ.
ಎಸ್. ಶ್ರೀನಿವಾಸನ್, ಭಾರತೀಯ ಏರೋನಾಟಿಕಲ್ ಎಂಜಿನಿಯರ್
 U. V. ಸ್ವಾಮಿನಾಥ ಅಯ್ಯರ್, ತಮಿಳು ವಿದ್ವಾಂಸ ಮತ್ತು ಸಂಶೋಧಕ,
ಬಯೋಮೆಡಿಕಲ್ ವಿಜ್ಞಾನಿ, U.S.
ಇ.ಶ್ರೀಧರನ್ (ಪದ್ಮ ವಿಭೂಷಣ,ಪದ್ಮಶ್ರೀ ಪುರಸ್ಕೃತರು)ದೆಹಲಿ ಮೆಟ್ರೋ ಹಾಗೂ
ಕೊಂಕಣ ರೈಲ್ವೆ  ರೂವಾರಿ.
ರಾಜಗೋಪಾಲನ್ ವಾಸುದೇವನ್
ಪ್ಲಾಸ್ಟಿಕ್ ರಸ್ತೆ ರೂವಾರಿ.

#ಮಿಲಿಟರಿಯಲ್ಲಿ:
#ದೇಶದ_ಮೊದಲ_ಪರಮ_ವೀರ_ಚಕ್ರ #ಶೌರ್ಯ_ಪ್ರಶಸ್ತಿ_ಪಡೆದವರು:
#ಮೇಜರ್_ಸೋಮನಾಥ್_ಶರ್ಮಾ -
 4 ನೇ ಕುಮಾವೂನ್ ಮತ್ತು ಕ್ಯಾಪ್ಟನ್ ಮನೋಜ್ ಪಾಂಡೆ 1/11 ಗೂರ್ಖಾ
 ಭಾರತೀಯ ಸೇನೆಯ ಹಲವಾರು ಮುಖ್ಯಸ್ಥರು ಬ್ರಾಹ್ಮಣರಾಗಿದ್ದಾರೆ, ಜನರಲ್ ಕೃಷ್ಣಸ್ವಾಮಿ ಸುಂದರ್ಜಿ, ಜನರಲ್ ಟಿ.ಎನ್.  ರೈನಾ, ಜನರಲ್ ಬಿಪಿನ್ ಚಂದ್ರ ಜೋಶಿ, ಜನರಲ್ ಸುಂದರರಾಜನ್ ಪದ್ಮನಾಭನ್, ​​ಜನರಲ್ ವಿ.ಎನ್. ಶರ್ಮ.
ಭಾರತೀಯ ವಾಯುಸೇನೆಯಲ್ಲಿಯೂ ಬ್ರಾಹ್ಮಣರು ವಾಯು ಮುಖ್ಯಸ್ಥರ ಉನ್ನತ ಸ್ಥಾನವನ್ನು ತಲುಪಿದ್ದಾರೆ.  ಇವರಲ್ಲಿ ಏರ್ ಮಾರ್ಷಲ್ ಸುಬ್ರೋತೋ ಮುಖರ್ಜಿ, ಏರ್ ಚೀಫ್ ಮಾರ್ಷಲ್ ಸ್ವರೂಪ್ ಕ್ರಿಶನ್ ಕೌಲ್, ಏರ್ ಚೀಫ್ ಮಾರ್ಷಲ್ ಶ್ರೀನಿವಾಸಪುರಂ ಕೃಷ್ಣಸ್ವಾಮಿ, 
ಏರ್ ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ.
ಭಾರತದ ಮೊದಲ ಮತ್ತು ಏಕೈಕ #ಗಗನಯಾತ್ರಿ, ವಿಂಗ್ ಕಮಾಂಡರ್ #ರಾಕೇಶ್ ಶರ್ಮಾ .
 ಭಾರತೀಯ ನೌಕಾಪಡೆಯ,
 ಅಡ್ಮಿರಲ್ ಎ.ಕೆ.ಚಟರ್ಜಿ, ಮತ್ತು ಅಡ್ಮಿರಲ್ ಜೆ.ಜಿ.ನಾಡ್ಕರ್ಣಿ.ಕಾಶ್ಮೀರಿ ಪಂಡಿತ್, ಐಎನ್ಎಸ್ ಖುಕ್ರಿ ಕಮಾಂಡರ್ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಅವರು 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮಹಾ ವೀರ ಚಕ್ರವನ್ನು ಪಡೆದರು,
ಸ್ಥಿತಿವಂತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕರ್ನಾಡು ಸದಾಶಿವರಾಯರ ಸಕಲ ಆಸ್ತಿಗಳನ್ನು ಬ್ರಿಟಿಷರು ಮುಟ್ಟುಗೋಲು ಹಾಕಿತ್ತು, ಕೊನೆಗೆ ಅನಾಥರಂತೆ ಅವರ ಅಂತ್ಯಸಂಸ್ಕಾರ ಮುಂಬೈ ಯಲ್ಲಿ ನಾರಿಮನ್ ಅನ್ನುವ ಅಧಿಕಾರಿ ಮಾಡಿದ್ದರು. ದುರಂತವೆಂದರೆ  ಬೆಂಗಳೂರಿನ ಇವರದೇ ಹೆಸರಿನ ಸದಾಶಿವನಗರ ಭ್ರಷ್ಟ ರಾಜಕಾರಣಿಗಳ ಬೀಡಾಗಿದೆ.
ಹೀಗೆ ಎಷ್ಟೋ ಜನ
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಪ್ರಾತಃಸ್ಮರಣೀಯರು. ಯಾವ ಪ್ರಸಿದ್ಧಿಯನ್ನು ಬಯಸದೆ, ತೆರೆ ಮರೆಯ ಕಾಯಿಯಂತೆ ಜೀವನ ಸಾಗಿಸಿದ್ದಾರೆ.)

ಸ್ವಾತಂತ್ರ್ಯ ಹೋರಾಟದಲ್ಲಿ
ಬ್ರಾಹ್ಮಣರು…
ಮಂಗಲ್ ಪಾಂಡೆ
ಚಂದ್ರಶೇಖರ ಆಜಾದ್
ಸುಖದೇವ್ ಹಾಗೂ
ರಾಜಗುರು(ಭಗತ್ ಸಿಂಗ್ ಜೊತೆ ನೇಣು ಗಂಬವೇರಿದವರು)
ವಿನಾಯಕ ದಾಮೋದರ ಸಾವರ್ಕರ್
ಬಾಲ ಗಂಗಾಧರ ತಿಲಕ್
ಕರ್ನಾಡ್ ಸದಾಶಿವರಾವ್
ಝಾನ್ಸಿ ರಾಣಿ ಲಕ್ಷ್ಮೀಬಾಯಿ
ಡಾ.ರಾಜೇಂದ್ರ ಪ್ರಸಾದ್
ಪಂಡಿತ್ ರಾಮಪ್ರಸಾದ್ ಬಿಸ್ಮಿಲ್
ಲಾಲಾ ಲಾಜಪತ್ ರಾಯ್
ಡಾ.ರಾಜೀವ ದೀಕ್ಷಿತ್
ವಾಸುದೇವ ಬಲವಂತ ಫಡ್ಕೆ
ವಿನೋಬಾ ಭಾವೆ
ಗೋಪಾಲಕೃಷ್ಣ ಗೋಖಲೆ
ಕರ್ನಲ್ ಲಕ್ಷ್ಮೀ ಸಹಗಲ್
ಪಂಡಿತ್ ಮದನಮೋಹನ ಮಾಲವೀಯ
ಡಾ.ಶಂಕರ್ ದಯಾಳ್ ಶರ್ಮಾ
ರವಿಶಂಕರ್ ವ್ಯಾಸ್
ಮೋಹನಲಾಲ ಪಾಂಡ್ಯಾ
ಮಹಾದೇವ ಗೋವಿಂದ ರಾನಡೆ
ತಾತ್ಯಾ ಟೋಪೆ
ತ್ರೈಲೋಕ್ಯನಾಥ್ ಚಕ್ರವರ್ತಿ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಗರಿಷ್ಠ 30 ವರ್ಷ ಜೈಲು ಶಿಕ್ಷೆ ಅನುಭವಿಸಿದವರು)
ಚಕ್ರವರ್ತಿ ರಾಜಗೋಪಾಲಾಚಾರಿ
ವಿಪಿನ್ ಚಂದ್ರ ಪಾಲ್
ನರಹರಿ ಪಾರೀಖ್
ಹರಗೋವಿಂದ ಪಂತ್
ಗೋವಿಂದ ವಲ್ಲಭ ಪಂತ್,
ಬದರಿ ದತ್ತ ಪಾಂಡೆ,
ಪ್ರೇಮವಲ್ಲಭ ಪಾಂಡೆ,
ಲಕ್ಷ್ಮೀದತ್ತ ಶಾಸ್ತ್ರಿ,
ಮೋರಾರ್ಜಿ ದೇಸಾಯಿ,
ಮಹಾವೀರತ್ಯಾಗೀ,
ಬಾಬಾ ರಾಘವದಾಸ್,
ಮುಂಡರಗಿ ಭೀಮರಾವ್,
ನರಗುಂದ ಬಾಬಾ ಸಾಹೇಬ್,
N.S.ಹರ್ಡೇಕರ್,
ಬಾಲಚಂದ್ರ ಘಾಣೇಕರ,
ಕೃಷ್ಣ ಗೋಪಾಲ ಜೋಶಿ(KG. ಜೋಶಿ),
ವಾಂಚಿನಾಥನ್ ಐಯ್ಯರ್,
ಸುಬ್ರಹ್ಮಣ್ಯ ಭಾರತಿ.

ಪ್ರಾಚೀನ ಭಾರತದಲ್ಲಿ:
ಶುಶ್ರುತ  (ವೈದ್ಯಕೀಯ)
ಚರಕ (ವೈದ್ಯಕೀಯ)
ಬ್ರಹ್ಮ ಗುಪ್ತ (ಗಣಿತ ತಜ್ಞ) 
ಚಾಣಕ್ಯ ( ಗುರು, ತತ್ವ ಶಾಸ್ತ್ರ,ಜ್ಞ, ಅರ್ಥಶಾಸ್ತ್ರಜ್ಞ)
ಆರ್ಯಭಟ ( ಗಣಿತ ತಜ್ಞ ,ಖಗೋಳಶಾಸ್ತ್ರಜ್ಞ)
ಭಾಸ್ಕರಾಚಾರ್ಯ
ಕಲ್ಹಣ(ಕಾಶ್ಮೀರಿ ಪಂಡಿತ)
ಶಂಕರಾಚಾರ್ಯರು
ಮಧ್ವಾಚಾರ್ಯರು ರಾಮಾನುಜಾಚಾರ್ಯರು
ರಾಘವೇಂದ್ರ ಸ್ವಾಮಿಗಳು
ಮಹರ್ಷಿ ವಿದ್ಯಾನಂದರು( ವಿಜಯನಗರ ಸಾಮ್ರಾಜ್ಯದ ಹಕ್ಕ ಬುಕ್ಕರ ಗುರುಗಳು)
ತಿಮ್ಮರಸು (ಕೃಷ್ಣ ದೇವರಾಯನ ಮಂತ್ರಿ)
ತೆನಾಲಿ ರಾಮಕೃಷ್ಣ (ವಿಕಟ ಕವಿ) 
ದಿವಾನ್ ಪೂರ್ಣಯ್ಯ.

ರಾಷ್ಟ್ರ ಗೀತೆ :ಬ್ರಾಹ್ಮಣ
ರಾಷ್ಟ್ರ ಧ್ವಜ :ಬ್ರಾಹ್ಮಣ
ಕನ್ನಡ ಧ್ವಜ:  ಬ್ರಾಹ್ಮಣ
ವಂದೇ ಮಾತರಂ: ಬ್ರಾಹ್ಮಣ
ಕೆನರಾ ಬ್ಯಾಂಕ್:ಬ್ರಾಹ್ಮಣ
ಕರ್ನಾಟಕ ಬ್ಯಾಂಕ್ :ಬ್ರಾಹ್ಮಣ
ಕಿರ್ಲೋಸ್ಕರ್:ಬ್ರಾಹ್ಮಣ
ಇನ್ಫೋಸಿಸ್:ಬ್ರಾಹ್ಮಣ
ಟಿವಿಎಸ್ ಗ್ರೂಪ್:ಬ್ರಾಹ್ಮಣ
ಟಿಟಿಕೆ ಪ್ರೆಸ್ಟೀಜ್ ಗ್ರೂಪ್:ಬ್ರಾಹ್ಮಣ
ಮಣಿಪಾಲ್ ಸಮೂಹ:ಬ್ರಾಹ್ಮಣ
ಉದಯವಾಣಿ:ಬ್ರಾಹ್ಮಣ
ಸಂಯುಕ್ತ ಕರ್ನಾಟಕ:ಬ್ರಾಹ್ಮಣ

ದೇಶದ ಮೊದಲ ಆಕಾಶವಾಣಿಯ ಕೊಡುಗೆ
M.V.ಗೋಪಾಲಸ್ವಾಮಿ:ಬ್ರಾಹ್ಮಣ
MTR, ಮೈಯಾಸ್,ಬ್ರಾಹ್ಮಣ
ಕಾಮತ್ ಹೋಟೆಲ್ ಗ್ರೂಪ್:ಬ್ರಾಹ್ಮಣ
ಜನತಾ ಹೋಟೆಲ್ ಗ್ರೂಪ್:ಬ್ರಾಹ್ಮಣ
ಅಡಿಗಾಸ್ ಹೋಟೆಲ್ ಗ್ರೂಪ್:ಬ್ರಾಹ್ಮಣ

ಅತಿ ಹೆಚ್ಚು ಭಾರತರತ್ನ ಪ್ರಶಸ್ತಿ ವಿಜೇತರು
ಬ್ರಾಹ್ಮಣರೇ...
ಸಿವಿ ರಾಮನ್(1954),
ಸಿ.ರಾಜಗೋಪಾಲಾಚಾರಿ(1954),
ಸರ್ವಪಲ್ಲಿ ರಾಧಾಕೃಷ್ಣನ್(1954),
ಸರ್.ಎಂ.ವಿಶ್ವೇಶ್ವರಯ್ಯ(1955),
ಧೋಂಡೋ ಕೇಶವ ಕಾರ್ವೇ(1957),
ಪಾಂಡುರಂಗ ವಾಮನ ಕಾಣೆ(1963),
ವಿನೋಬಾ ಭಾವೆ(1983),
ಗೋವಿಂದ ವಲ್ಲಭ ಪಂತ್(1957),
ವಿವಿ ಗಿರಿ(1975),
ಮೊರಾರ್ಜಿ ದೇಸಾಯಿ(1991),
ಸಿ ಸುಬ್ರಹ್ಮಣ್ಯಂ(1998),
ಎಂಎಸ್ ಸುಬ್ಬಲಕ್ಷ್ಮಿ(1998),
ಪಂಡಿತ್ ರವಿಶಂಕರ್(1999),
ಲತಾ ಮಂಗೇಶ್ಕರ್(2001),
ಭೀಮ್ ಸೇನ್ ಜೋಶಿ (2008),
ಸಿ.ಎನ್.ಆರ್.ರಾವ್(2013),
ಅಟಲ್ ಬಿಹಾರಿ ವಾಜಪೇಯಿ(2014),
ಮದನ್ ಮೋಹನ್ ಮಾಳವೀಯ(2014),
ಸಚಿನ್ ತೆಂಡೂಲ್ಕರ್(2014),
ನಾನಾಜಿ ದೇಶಮುಖ್(2019),
ಪ್ರಣವ್ ಮುಖರ್ಜಿ (2019)

ಭಾರತದ 9 
ನೋಬೆಲ್ ಪ್ರಶಸ್ತಿ ವಿಜೇತರಲ್ಲಿ 7 ಮಂದಿ ಬ್ರಾಹ್ಮಣರೇ...
1. ರವೀಂದ್ರನಾಥ ಟ್ಯಾಗೋರ್ (1913)
 2. ಸಿವಿ ರಾಮನ್ (1930)
 3.ಸುಬ್ರಮಣ್ಯ ಚಂದ್ರಶೇಖರ್ (1983)
 4. ಅಮರ್ತ್ಯ ಸೇನ್ (1998)
 5. ವೆಂಕಟರಾಮನ್ ರಾಮಕೃಷ್ಣನ್ (2009)
 6. ಕೈಲಾಶ್ ಸತ್ಯಾರ್ಥಿ (2014)
 7. ಅಭಿಜಿತ್ ಬ್ಯಾನರ್ಜಿ (2019)

ಕನ್ನಡಕ್ಕಾಗಿ ದುಡಿದವರು:
ಮ.ರಾಮಮೂರ್ತಿ ( ಕನ್ನಡ ಬಾವುಟ ರಚನೆ ಹಾಗೂ ವಿನ್ಯಾಸಕಾರ)
ಹನುಮಂತ ದೇಶಪಾಂಡೆ
("ಸಿರಿ ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ")

#ಕನ್ನಡ_ಸಾಹಿತಿಗಳು
ಶಿವರಾಮ ಕಾರಂತ, (ಜ್ಞಾನಪೀಠ ಪುರಸ್ಕೃತರು)
ಬೇಂದ್ರೆ, (ಜ್ಞಾನಪೀಠ ಪುರಸ್ಕೃತರು)
ಮಾಸ್ತಿ ವೆಂಕಟೇಶ ಅಯ್ಯಂಗಾರ್
(ಜ್ಞಾನಪೀಠ ಪುರಸ್ಕೃತರು)
ವಿ.ಕೆ ಗೋಕಾಕ್(ಜ್ಞಾನಪೀಠ ಪುರಸ್ಕೃತರು)
ಗೋವಿಂದ ಪೈ
ಆಲೂರು ವೆಂಕಟರಾಯರು
(ಸಾಹಿತಿಗಳು, ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಾರರು,)
ವಿ.ಸೀತಾರಾಮಯ್ಯ
ಟಿಪಿ ಕೈಲಾಸಂ
ಜಿ.ಪಿ ರಾಜರತ್ನಂ
ಡಿವಿಜಿ.( ವೆಂಕಟರಮಣಯ್ಯ ಗುಂಡಪ್ಪ)
ಅ.ನ.ಕೃ( ನರಸಿಂಗ ಕೃಷ್ಣರಾಯರು)
ಬಿ.ಎಮ್.ಶ್ರೀ( ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ)
ತೀನಂಶ್ರೀ( ನಂಜುಂಡಯ್ಯ ಶ್ರೀಕಂಠಯ್ಯ)
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪು.ತಿ. ನರಸಿಂಹಾಚಾರ್
ಡಿ.ಎಲ್ ನರಸಿಂಹಾಚಾರ್
ಕೆ.ಎಸ್ ನರಸಿಂಹಸ್ವಾಮಿ
ಡಾ.ಎ.ಆರ್.ಕೃಷ್ಣ ಶಾಸ್ತ್ರೀ(ವಚನ ಭಾರತ)
ಬೆಟಗೇರಿ ಕೃಷ್ಣಶರ್ಮ ( ಆನಂದಕಂದ),
ರಸಿಕರಂಗ( ರಂಗನಾಥ ಶ್ರೀನಿವಾಸ ಮುಗಳಿ),
ಶ್ರೀರಂಗ,
ಶಂ.ಭಾ ಜೋಷಿ,
ತರಾಸು,
ದೇವುಡು ನರಸಿಂಹಶಾಸ್ತ್ರಿ 
ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟ,
ವರದರಾಜ ಹುಯಿಲಗೋಳರು,
ಟಿಪಿ ಕೈಲಾಸಂ,
ಜಿ.ಪಿ ರಾಜರತ್ನಂ( ಭ್ರಮರ),
ಡಿವಿಜಿ,
ಶ್ರೀ ರಂಗ( ಆದ್ಯರಂಗಾಚಾರ್ಯ ವಾಸುದೇವಾಚಾರ್ಯ,
ಜಿ.ಬಿ ಜೋಶಿ( ಜಡಭರತ),
ವೆಂಕಟಾದ್ರಿ ಅಯ್ಯರ್( ಸಂಸ),
ವೆಂಕಟಾದ್ರಿ ಅಯ್ಯರ್,
ನಾ.ಕಸ್ತೂರಿ( ಕಸ್ತೂರಿ ರಂಗನಾಥ ನಾರಾಯಣ ಶರ್ಮ),
ತರಾಸು( ತಳಕು ರಾಮಸ್ವಾಮಯ್ಯ ಸುಬ್ಬರಾವ್),
TK.ರಾಮರಾವ್,
ಪಾವೆಂ.ಆಚಾರ್ಯ (ಪಾಡಿಗಾರು ವೆಂಕಟರಮಣ ಆಚಾರ್ಯ),
ಪಂಚೆ ಮಂಗೇಶರಾಯರು,
ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟ,
ವೈ.ನಾರಾಯಣ ಮೂರ್ತಿ, ಕೃಷ್ಣರಾವ್ ಕುಲಕರ್ಣಿ(ವೈಎನ್ಕೆ)
ದೊಡ್ಡಬೆಲೆ ನರಸಿಂಹಾಚಾರ್(ಡಿ.ಎಲ್.ಎನ್),
ಗಳಗನಾಥರು(ವೆಂಕಟೇಶ್ ಕುಲಕರ್ಣಿ),
ಎಸ್ ಎಲ್ ಭೈರಪ್ಪ,
ಅನಂತ ಮೂರ್ತಿ,
ಗಿರೀಶ್ ಕಾರ್ನಾಡ್,
K.S. ನಾರಾಯಣಾಚಾರ್ಯ

#ಮಹಿಳಾ_ಸಾಹಿತಿಗಳು
MK. ಇಂದಿರಾ
ತ್ರಿವೇಣಿ( ಅನಸೂಯ ಶಂಕರ)
ಆರ್ಯಾಂಬ ಪಟ್ಟಾಬಿ
ವಾಣಿ
ಅನುಪಮಾ ನಿರಂಜನ
ವೈದೇಹಿ
ಟಿ.ಸುನಂದಮ್ಮ.

ಕಲೆ,ನಾಟ್ಯ,ಸಂಗೀತ:
ಪಂಡಿತ್ ಭೀಮಸೇನ್ ಜೋಷಿ
ಪಂಡಿತ್ ರವಿಶಂಕರ್ (ಸಿತಾರ್)
MS. ಸುಬ್ಬಲಕ್ಷ್ಮಿ
ಬಾಲ ಮುರಳಿ ಕೃಷ್ಣ,
ಪ್ರಖ್ಯಾತ ಪಿಟೀಲು ವಾದಕರು
ಕುನ್ನಕುಡಿ ವೈದ್ಯನಾಥನ್,
ಲಾಲ್ಗುಡಿ ಜಯರಾಮನ್,
ಎಲ್. ಸುಬ್ರಮಣಿಯನ್,
ಎಂಎಸ್. ಗೋಪಾಲಕೃಷ್ಣನ್,
ಎನ್. ರಾಜಮ್,
ಟಿಎನ್ ಕೃಷ್ಣನ್
ಘಟ ವಾದಕರು
ಟಿ.ಎಚ್.ವಿನಾಯಕರಾಮ್,
ಇಎಂ. ಸುಬ್ರಮಣ್ಯಂ,
ಗಿರಿಧರ್ ಉಡುಪ,
ಪ್ರಖ್ಯಾತ ಕೊಳಲು ವಾದಕರು
ಎನ್ ರಮಣಿ
ಟಿ.ಆರ್.ಮಹಾಲಿಂಗಂ
ಪ್ರವೀಣ್ ಗೋಡ್ಕಿಂಡಿ
ವೀಣೆ ಶೇಷಣ್ಣ ,
ವೀಣೆ ದೊರೆಸ್ವಾಮಿ ಅಯ್ಯಂಗಾರ್,
ಶ್ಯಾಮಲಾ ಗೋಪಾಲನ್, 
ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಭಾರತೀಯ ಕರ್ನಾಟಕ ಗಾಯಕ
ರುಕ್ಮಿಣಿ ದೇವಿ ಅರುಂಡೇಲ್, ಶಾಸ್ತ್ರೀಯ ಭರತ ನಾಟ್ಯ ನೃತ್ಯಗಾರ್ತಿ, ಥಿಯೊಸೊಫಿಸ್ಟ್, ನೃತ್ಯ ಸಂಯೋಜಕಿ ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತೆ.
ಪದ್ಮಾ ಸುಬ್ರಹ್ಮಣ್ಯಂ, ಶಾಸ್ತ್ರೀಯ ಭರತ ನಾಟ್ಯ ನರ್ತಕಿ
ಸೀತಾ ದೊರೈಸ್ವಾಮಿ, ಕರ್ನಾಟಕ ಬಹು-ವಾದ್ಯಗಾರ್ತಿ
ಶಿಶಿರಕಣ ಧಾರ್ ಚೌಧರಿ ಪಿಟೀಲು ವಾದಕಿ.
ತಬಲಾ ಮಾಸ್ಟರ್
ಪಂ.ಸಪ್ನ ಚೌಧರಿ 

ಕ್ರೀಡಾ ಕ್ಷೇತ್ರದಲ್ಲಿ ಬ್ರಾಹ್ಮಣರು:
#ಕ್ರಿಕೆಟ್
 ಸಚಿನ್ ತೆಂಡೂಲ್ಕರ್
ಸುನೀಲ್ ಗವಾಸ್ಕರ್
ಅನಿಲ್ ಕುಂಬ್ಳೆ
ರಾಹುಲ್ ದ್ರಾವಿಡ್
ಸೌರವ್ ಗಂಗೂಲಿ
V.V.S ಲಕ್ಷ್ಮಣ್
ಸಂಜಯ್ ಮಂಜ್ರೇಕರ್
ವಿಜಯ್ ಮಂಜ್ರೇಕರ್
ರವಿಚಂದ್ರನ್ ಅಶ್ವಿನ್
ರೋಹಿತ್ ಶರ್ಮಾ
ಶ್ರೇಯಸ್ ಅಯ್ಯರ್
ವೃಷಭ್ ಪಂತ್
ಮುರಳಿ ವಿಜಯ್
ದಿನೇಶ್ ಕಾರ್ತಿಕ್
ಮನೀಶ್ ಪಾಂಡೆ
ಹಾರ್ದಿಕ್ ಪಾಂಡ್ಯ
ಸುರೇಶ್ ರೈನಾ
ಇಶಾಂತ್ ಶರ್ಮ
ಜಾವಗಲ್ ಶ್ರೀನಾಥ್
ವೆಂಕಟೇಶ್ ಪ್ರಸಾದ್
ಸುನೀಲ್ ಜೋಶಿ
ರಘುರಾಮ್ ಭಟ್
ಕೃಷ್ಣಮಾಚಾರಿ ಶ್ರೀಕಾಂತ್
ಎಲ್ .ಶಿವರಾಮ ಕೃಷ್ಣನ್
ಅಜಿತ್ ಅಗರ್ಕರ್
ಲಾಲಾ ಅಮರ್ ನಾಥ್
ML.ಜಯಸಿಂಹ
ಮೊಹಿಂದರ್ ಅಮರ್‌ನಾಥ್
ಸುರೀಂದರ್ ಅಮರ್ ನಾಥ್
ಜೋಗಿಂದರ್ ಶರ್ಮ.
ಮುರಳಿ ಕಾರ್ತಿಕ್
ಸೌರಬ್ ತಿವಾರಿ
ಮನೋಜ್ ತಿವಾರಿ
ಚೇತನ್ ಶರ್ಮ
ದಿಲೀಪ್ ವೆಂಗ್ಸರ್ಕಾರ್
ಗುಂಡಪ್ಪ ವಿಶ್ವನಾಥ್
EAS.ಪ್ರಸನ್ನ
BS. ಚಂದ್ರಶೇಖರ್
ಎಸ್.ವೆಂಕಟ ರಾಘವನ್ 
ವಿನೂ ಮಂಕಡ್
ಬಾಪು ನಾಡಕರ್ಣಿ
DB.ದೇವಧರ್‌
ಮನೋಜ್ ಪ್ರಭಾಕರ್
ಯಶ್ ಪಾಲ್ ಶರ್ಮ
ಕೀರ್ತಿ ಆಜಾದ್
ಸದಾನಂದ ವಿಶ್ವನಾಥ್ ( ವಿಕೆಟ್ ಕೀಪರ್)
ರಾಜೂ ಕುಲಕರ್ಣಿ
ನೀಲೇಶ್ ಕುಲಕರ್ಣಿ
ಧವಳ್ ಕುಲಕರ್ಣಿ
ಬಿ.ಎನ್ ಕೃಷ್ಣ ರಾವ್
ಅವಸರಳ‌ ರಾವ್
ಜೂಲಿಯನ್ ಗೋಸ್ವಾಮಿ(ವುಮೆನ್ ಕ್ರಿಕೆಟರ್)
#ಚೆಸ್
ವಿಶ್ವನಾಥನ್ ಆನಂದ್ (ವಿಶ್ವ ಚಾಂಪಿಯನ್)
ಪ್ರವೀನ್ ತಿಪ್ಸೆ(ಚೆಸ್ ಗ್ರ್ಯಾಂಡ್ ಮಾಸ್ಟರ್)
ಶ್ರೀವತ್ಸ ಮುಟುಕುಲ
#ಟೆನಿಸ್
ರಾಮನಾಥನ್ ಕೃಷ್ಣನ್
ರಮೇಶ್‌ ಕೃಷ್ಣನ್‌
ಜೈದೀಪ್ ಮುಕ್ರೇರ್ಜಾ
ನಿರುಪಮಾ ವೈದ್ಯನಾಥನ್
ಗೌರವ್ ನಾಟೆಕರ್
ರಶ್ಮಿ ಚಕ್ರವರ್ತಿ
ಬ್ಯಾಡ್ಮಿಂಟನ್
ಪ್ರಕಾಶ್ ಪಡುಕೋಣೆ
ನಂದೂ ನಾಟೇಕರ್
ಹೃಷಿಕೇಶ್ ಕಾನಿಟ್ಕರ್
ದೀಪಂಕರ್ ಭಟ್ಟಾಚಾರ್ಯ
ಪರುಪಲ್ಲಿ ಕಶ್ಯಪ್
ಆರ್ಚರಿ
ಡೋಲಾ ಬ್ಯಾನರ್ಜಿ
ಅಥ್ಲೆಟಿಕ್ಸ್
ವಂದನಾ ಶಾನ್ ಬಾಗ್
ಶ್ರೀಲೇಖಾ ಮುಟುಕುಲ(#ಸ್ವಿಮ್ಮಿಂಗ್ #ಚಾಂಪಿಯನ್)
ಜಾಗತಿಕ;
ಸುಂದರ್ ಪಿಚೈ( ಗೂಗಲ್ ಸಿಇಓ)
ಸತ್ಯ ನಾದೆಲ್ಲಾ( ಮೈಕ್ರೋಸಾಫ್ಟ್ CEO)
ಇಂದಿರಾ ನೂಯಿ (ಮಾಜಿ ಪೆಪ್ಸಿ CEO)
ಯಕ್ಷಗಾನ; ಕಾಳಿಂಗ ನಾವಡ(ಭಾಗವತರು)

#ಚಲನಚಿತ್ರ_ಗಾಯಕ/#ಗಾಯಕಿಯರು
ಭಾರತದ ಕೋಗಿಲೆ 
ಲತಾ ಮಂಗೇಶ್ಕರ್ ,ಆಶಾ ಬೋಸ್ಲೆ, ಕಿಶೋರ್ ಕುಮಾರ್,ಕುಮಾರ್ ಸಾನು,
ದಕ್ಷಿಣ ಭಾರತದ ಕೋಗಿಲೆ ಎಸ್ ಜಾನಕಿ,
ಪಿ.ಸುಶೀಲಾ,ಬಿ.ಕೆ.ಸುಮಿತ್ರಾ,
ರತ್ನಮಾಲಾ ಪ್ರಕಾಶ್,
ಮಂಜುಳಾ ಗುರುರಾಜ್,
ಸಂಗೀತಾ ಕಟ್ಟಿ, ಬಿ.ಆರ್ ಛಾಯಾ,ಎಂಡಿ.ಪಲ್ಲವಿ
SP.ಬಾಲಸುಬ್ರಹ್ಮಣ್ಯಂ, 
ಪಿ.ಬಿ. ಶ್ರೀನಿವಾಸ್,ಘಂಟಸಾಲ,
ಪಿ. ಕಾಳಿಂಗರಾವ್
ಶಿವಮೊಗ್ಗ ಸುಬ್ಬಣ್ಣ 
ಹರಿಹರನ್ ,ಶಂಕರ್ ಮಹದೇವನ್,
ರಾಜೇಶ್ ಕೃಷ್ಣನ್
ವಿಜಯ್ ಪ್ರಕಾಶ್.
ಜಿವಿ.ಅತ್ರಿ,
LN.ಶಾಸ್ತ್ರಿ
ರಂಗಭೂಮಿಯಲ್ಲಿ;
ಕೆ. ಹಿರಣ್ಣಯ್ಯ ,ಮಾಸ್ಟರ್ ಹಿರಣ್ಣಯ್ಯ.
 ಎ.ವಿ. ವರದಾಚಾರ್ಯರು (ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ.)(೧೯೨೧)
#ಚಿತ್ರ_ನಿರ್ದೇಶರು
ಮಣಿರತ್ನಂ, ಪುಟ್ಟಣ್ಣ ಕಣಗಾಲ್, 
ಕೆ. ಬಾಲಚಂದರ್,
ಗಿರೀಶ್ ಕಾಸರವಳ್ಳಿ (4 ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತರು)
ಸುನಿಲ್ ಕುಮಾರ್ ದೇಸಾಯಿ,
ಯೋಗ ರಾಜ್ ಭಟ್ , 
ಆರ್.ನಾಗೇಂದ್ರರಾವ್ ಹಾಗೂ ಅವರ ಮಕ್ಕಳಾದ, ಆರ್ ಎನ್ ಜಯಗೋಪಾಲ್ ,ಆರ್ ಎನ್. ಸುದರ್ಶನ್, ಆರ್ ಎನ್ ಕೃಷ್ಣಪ್ರಸಾದ್,
ಪಂತುಲು,
HLN ಸಿಂಹ(ಬೇಡರ ಕಣ್ಣಪ್ಪ ಚಿತ್ರದ ನಿರ್ದೇಶಕ)
ಹುಣಸೂರು ಕೃಷ್ಣಮೂರ್ತಿ,
ಜಿ.ವಿ ಅಯ್ಯರ್,
ವೈವಿ.ರಾವ್,
ವೈ.ಆರ್ ಸ್ವಾಮಿ
ಬಿ.ಎಸ್.ರಂಗ,
ಎಮ್.ಆರ್ ವಿಠ್ಠಲ್,
ದೊರೈ-ಭಗವಾನ್ ,
ಬಿ.ವಿ ಕಾರಂತ್,
ಎನ್.ಲಕ್ಷ್ಮಿ ನಾರಾಯಣ್.
ಕೆ.ಎಸ್.ಎಲ್.ಸ್ವಾಮಿ(ರವಿ), 
ಭಾರ್ಗವ, ಪಣಿರಾಮಚಂದ್ರ,
 ಕ್ಯಾಮರಾ ಮನ್
ದೊರೆ
ಗೌರಿಶಂಕರ್
ಎಸ್.ರಾಮಚಂದ್ರ
ಚಲನಚಿತ್ರ_ಸಾಹಿತಿಗಳು.
ಚಿ.ಸದಾಶಿವಯ್ಯ,ಚಿ.ಉದಯ್ ಶಂಕರ್, ಕಣಗಾಲ್ ಪ್ರಭಾಕರ ಶಾಸ್ತ್ರಿ,
ಕು.ರಾ.ಸೀತಾರಾಮ ಶಾಸ್ತ್ರಿ
ಕುಣಿಗಲ್ ನಾಗಭೂಷಣ್, 
ಜಯಂತ ಕಾಯ್ಕಿಣಿ.
ಸಂಗೀತ ನಿರ್ದೇಶಕರು 
ಜಿ ಕೆ ವೆಂಕಟೇಶ್.ಸತ್ಯಂ,
ಉಪೇಂದ್ರ ಕುಮಾರ್,
ಮನೋಮೂರ್ತಿ(ಮುಂಗಾರು ಮಳೆ)
V.ಮನೋಹರ್(ಜನುಮದ ಜೋಡಿ)

ಕಿರುತೆರೆ
 TN.ಸೀತಾರಾಮ್,
S.N.ಸೇತುರಾಮ್
ಪ್ರಕಾಶ್ ಬೆಳವಾಡಿ,ಪಿ.ಶೇಷಾದ್ರಿ,ಕೌಶಿಕ್,
ಸಿಹಿ ಕಹಿ ಚಂದ್ರು

ದಕ್ಷಿಣ ಭಾರತ ನಟ ನಟಿಯರು
ಉದಯ್ ಕುಮಾರ್
ಕಲ್ಯಾಣ್ ಕುಮಾರ್
ಸಾಹಸ ಸಿಂಹ ವಿಷ್ಣುವರ್ಧನ್,
ಸಂಪತ್,
ಅಶ್ವಥ್,
ವಾದಿರಾಜ್,
ಮುಸುರಿ ಕೃಷ್ಣ ಮೂರ್ತಿ,
ಸಿಆರ್ ಸಿಂಹ,
ಶ್ರೀನಾಥ್,
ಅನಂತ್ ನಾಗ್ ,
ಶಂಕರ್ ನಾಗ್,
ರಮೇಶ್ ಅರವಿಂದ್,
ಕಾಶಿನಾಥ್,
ಉಪೇಂದ್ರ,
ದ್ವಾರಕೀಶ್,
ಶ್ರೀಧರ್ ,
ರಾಮಕೃಷ್ಣ,
ರಮೇಶ್ ಭಟ್,
ಅವಿನಾಶ್,
ಕುಣಿಗಲ್ ರಾಮನಾಥ್,
ಎಂಎಸ್ ಕಾರಂತ್,
ಮಾಸ್ಟರ್ ಮಂಜುನಾಥ್( ಮಾಲ್ಗುಡಿ ಡೇಸ್)
ಮಾಸ್ಟರ್ ಆನಂದ್
ಪಂಡರಿಬಾಯಿ,ಮೈನಾವತಿ,ಹರಿಣಿ ,
ಆರತಿ ,ಕಲ್ಪನಾ,ಲಕ್ಷ್ಮಿ,ಸುಹಾಸಿನಿ, ,ಸೌಂದರ್ಯ, ಸುಧಾ ರಾಣಿ, ಮಾಳವಿಕ ಅವಿನಾಶ್,ರಕ್ಷಿತಾ,
ರಾಧಿಕಾ ಪಂಡಿತ್
ಮಧು ಬಾಲಾಜಿ, 
ಜೆಮಿನಿ ಗಣೇಶನ್,
ಮಾಧವನ್,
ಚಾರುಹಾಸನ್,
ಕೋಕಿಲ ಮೋಹನ್, 
#ಬಾಲಿವುಡ್ನಲ್ಲಿ
ಸುನೀಲ್ ದತ್ ಸಂಜೀವ್ ಕುಮಾರ್,
ಮಿಥುನ್ ಚಕ್ರವರ್ತಿ, ಅಶೋಕ್ ಕುಮಾರ್, ವೈಜಂತಿ ಮಾಲ, ಬಾಲಿ,ರೇಖಾ,
ಗುರುದತ್, ಮನೋಜ್ ಬಾಜಪೇಯಿ,
ಅಜಯ್ ದೇವಗನ್, ಮಾಧುರಿ ದೀಕ್ಷಿತ್, ಮೀನಾಕ್ಷಿ ಶೇಷಾದ್ರಿ,
ದೀಪಿಕಾ ಪಡುಕೋಣೆ, ಅನುಪಮ್ ಖೇರ್.

ಪ್ರಾಮಾಣಿಕ ರಾಜಕಾರಣಿಗಳು:
ಮೊರಾರ್ಜಿ ದೇಸಾಯಿ,
ಅಟಲ್ ಬಿಹಾರಿ ವಾಜಪೇಯಿ, 
ಸುಷ್ಮಾ ಸ್ವರಾಜ್ ,
ಮನೋಹರ್ ಪಾರಿಕ್ಕರ್, 
ಸುರೇಶ್ ಪ್ರಭು, 
ರಾಮಕೃಷ್ಣ ಹೆಗಡೆ,
ಪಿವಿ ನರಸಿಂಹ ರಾವ್ ರಾವ್,
ಪ್ರಣವ್ ಮುಖರ್ಜಿ,
ಸುಬ್ರಮಣಿಯನ್ ಸ್ವಾಮಿ,
(ಅರ್ಥಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ),
ಪ್ರಮೋದ್ ಮಹಾಜನ್.

ಗಮನಾರ್ಹ ವ್ಯಕ್ತಿಗಳು:

ಸಂವಿಧಾನ ಕರಡು ಪ್ರತಿಯ ಕರ್ತೃ
ಬೆನಗಲ್ ನರಸಿಂಹ ರಾವ್,
ಅಳಸಿಂಗ ಪೆರುಮಾಳ್,
ಸಿವಿ ರಂಗಾಚಾರ್ಲು
(ಮೈಸೂರು ದಿವಾನರಾಗಿದ್ದರು), BKS.ಅಯ್ಯಂಗಾರ್(ಯೋಗ ಗುರು),
ಆರ್ ಕೆ ನಾರಾಯಣ್,
ಖ್ಯಾತ ಕಾದಂಬರಿಕಾರರು (ಮಾಲ್ಗುಡಿ ಡೇಸ್),
ಆರ್.ಕೆ ಲಕ್ಷ್ಮಣ್(ಖ್ಯಾತ ವ್ಯಂಗ್ಯಚಿತ್ರಕಾರ),
ಕರ್ಪೂರ ಶ್ರೀನಿವಾಸ ರಾಯರು,
ತಿರುಮಲೈ ಕೃಷ್ಣಾಚಾರ್ಯ (ಯೋಗ),
ಟಿ ಎನ್ ಶೇಷನ್ (ಮಾಜಿ ಚುನಾವಣಾ ಆಯುಕ್ತ ),
ಛೋ ರಾಮಸ್ವಾಮಿ (ಪತ್ರಕರ್ತರು)
ಶಕುಂತಲಾ ದೇವಿ.(ನಡೆದಾಡುವ ಕಂಪ್ಯೂಟರ್ ಎಂದೇ ಹೆಸರಾಗಿದ್ದವರು),
ಟಿ ಎನ್ ಶೇಷನ್ (ಮಾಜಿ ಚುನಾವಣಾ ಆಯುಕ್ತ ),
ನಾರಾಯಣಮೂರ್ತಿ (ಇನ್ಫೋಸಿಸ್),
ನಂದನ್ ನಿಲೇಕಣಿ,
ಕ್ಯಾಪ್ಟನ್ ಗೋಪಿನಾಥ್,
ಗುರುರಾಜ ಕರ್ಜಗಿ.

ನನಗೆ ಗೊತ್ತಿರುವ ಸಾಧಕರ ಹೆಸರುಗಳನ್ನು ಮಾತ್ರ ಇಲ್ಲಿ ಪಟ್ಟಿ ಮಾಡಿದ್ದೇನೆ.
ನನಗೆ ಖಂಡಿತವಾಗಿ ಗೊತ್ತು ಬ್ರಾಹ್ಮಣ ಸಾಧಕರು ಇನ್ನೂ ಅಪಾರ ಸಂಖ್ಯೆಯಲ್ಲಿದ್ದಾರೆ ಎಂದು.
ನಿಮಗೆ ಗೊತ್ತಿರುವ ಬ್ರಾಹ್ಮಣ ಸಾಧಕರನ್ನು ಈ ಪಟ್ಟಿಗೆ  ಸೇರಿಸಿ.
🚩🚩🚩🚩🚩👌🌹🌹🌹🌹🌹👍💐🏋️‍♂️🏋️‍♂️🏋️‍♂️🏋️‍♂️🏋️‍♂️. ಬ್ರಾಹ್ಮಣ ಸರ್ವತ್ರ ಪೂಜ್ಯತೆ 🌹ಬ್ರಾಹ್ಮಣ ಸರ್ವರಿಗೂ ಒಳಿತನ್ನು ಬಯಸುವವರು. ನಮ್ಮ ಹಿಂದೂ ಧರ್ಮ ವಿರೋಧಿಗಳು ಬ್ರಾಹ್ಮಣರನ್ನು ಹೀಯಾಳಿಸಿ ನಮ್ಮ ಇತರೆ ಹಿಂದುಗಳನ್ನು ನಮ್ಮ ಧರ್ಮದ ವಿರುದ್ದ ಎತ್ತಿಕಟ್ಟುವ  ಹುನ್ನಾರವೇ ಬ್ರಾಹ್ಮಣರನ್ನು ಅವಹೇಳನ ಮಾಡುವುದು.🚩🚩🚩🚩🚩🚩🚩🚩🕉️🕉️🕉️🕉️🙏🙏🙏🙏🙏 ಫೇಸ್ಬುಕ್ ಕೃಪೆಯಿಂದ

November 8, 2022

ಗುರು-ಶಿಷ್ಯ ಸಂಬಂಧ

ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡುಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.

November 6, 2022

ಮಂಗಳಾರತಿ ಮತ್ತು ತೀರ್ಥ....

ಪ್ರಸಾದ ಇಲ್ವೆ....?!! ಎಂದು ಮಾತ್ರ ಕೇಳ್ಬೇಡಿ....... ಇಲ್ಲಿ ಮೇಲಿನೆರೆಡು ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ.....

ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ಸುಮ್ಮನೆ ಕೈನೀಡಿ ತೆಗೆದುಕೊಳ್ಳುವವರೂ ಇದ್ದೇವೆ. ಹಾಗಾದರೆ ಅವುಗಳನ್ನೇಕೆ ತೆಗೆದುಕೊಳ್ಳಬೇಕು? ಮಂಗಳಾರತಿಯೇ ಮೊದಲೇಕೆ ? ತೀರ್ಥ ನಂತರವೇಕೆ ? ಈ ಪ್ರಶ್ನೆಗಳಿಗೆ ಇಲ್ಲಿದೆ ನನ್ನದೊಂದು ವಿಚಾರ...

ದೇವರ ಶಿಲಾ ಮೂರ್ತಿಗೆ (ಅಥವಾ ಲಿಂಗಕ್ಕೆ) ಜಲಾಭಿಷೇಕ ಮಾಡುವುದು ನಿತ್ಯವಿಧಿಗಳಲ್ಲಿ ಒಂದು. ಅಂತಹ ದೇವರ ಮೂರ್ತಿ ಅಥವಾ ಲಿಂಗವನ್ನು ನಿರ್ದಿಷ್ಟ ಶಿಲೆಗಳಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ’ಸಾಲಿಗ್ರಾಮ ಶಿಲೆ’ , ’ಕೃಷ್ಣ ಶಿಲೆ’ ಹಾಗೂ ’ನವರತ್ನ ಶಿಲೆ’ ಗಳಿಂದ ಕೆತ್ತಲ್ಪಟ್ಟ ಮೂರ್ತಿಗಳಿರುತ್ತವೆ. (ಗ್ರಾನೈಟ್, ಬಳಪದ ಕಲ್ಲು, ಇನ್ನಿತರ ಶಿಲೆಗಳು ಶಾಸ್ತ್ರೋಕ್ತ ರೀತಿ ಪೂಜಾರ್ಹವಲ್ಲ!.) ಈ ಶಿಲೆಗಳು ಅಪೂರ್ವವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಶಿಲೆಯ ಮೇಲೆ ಬಿದ್ದ ನೀರು ತನ್ನ ಜೊತೆ ಎಲ್ಲಾ ಸತ್ವಗುಣಗಳನ್ನು ತಂದಿರುತ್ತದೆ. ಅಂತಹ ನೀರನ್ನು ಒಂದು ಪಾತ್ರೆಯಲ್ಲಿ ಹಿಡಿದಿಡಲಾಗುತ್ತದೆ. (ಇಲ್ಲಿ ಹಾಲು, ಮೊಸರು, ಇತ್ಯಾದಿಗಳಿಂದ ಕೂಡಿದ ಪಂಚಾಮೃತವನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅದು ಶುಧ್ಧ ತೀರ್ಥವೇ ಅಲ್ಲ!) ನಂತರ ಅಭಿಷೇಕ ಹಾಗೂ ಮಂಗಳಾರತಿ ಸಮಯಗಳಲ್ಲಿ ಜೋರಾಗಿ ಘಂಟಾನಾದವನ್ನು ಮಾಡಲಾಗುತಿರುತ್ತದೆ. ಆ ನಾದದ ಮಾರ್ದನಿಯೊಂದಿಗೆ ಅದರಿಂದ ’ಅಯಾನಿಕ್’ ತರಂಗಗಳೂ ( Ionic waves ) ಸಹ ಉತ್ಪತ್ತಿಯಾಗುತ್ತದೆ. ಇಂತಹ ಅಯಾನ್ ಗಳು ಗರ್ಭಾಂಗಣದ ತುಂಬೆಲ್ಲಾ ಪ್ರವೇಶಿಸಿ ಹಿಡಿದಿಟ್ಟ ತೀರ್ಥದಲ್ಲೂ ವಿಲೀನವಾಗುತ್ತವೆ. "ಅಯಾನ್" ಗಳಿಗೆ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಶಕ್ತಿಯು ಇದ್ದು ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಸತ್ವಗಳನ್ನು ಒದಗಿಸುತ್ತದೆ. ಇಂತಹ ಅಯಾನ್ ಯುಕ್ತ ಅಥವಾ ಖನಿಜಯುಕ್ತ ತೀರ್ಥಕ್ಕೆ ಅಂತಿಮವಾಗಿ ತುಳಸಿಯನ್ನು ಸೇರಿಸಲಾಗುತ್ತದೆ. ತುಳಸಿಗೆ ಆಯುರ್ವೇದದಲ್ಲಿ ಎಂತಹ ಪ್ರಮುಖ ಸ್ಥಾನವಿದೆ ಎಂಬುದು ತಿಳಿದಿರುವ ವಿಚಾರವೇ. ಇವುಗಳೆಲ್ಲದರಿಂದ ಕೂಡಿದ ಜಲ ಕೇವಲ ಜಲವಾಗದೇ ಔಷಧೀಯ ಗುಣಗಳುಳ್ಳ ತೀರ್ಥವಾಗುತ್ತದೆ. (ಇನ್ನು ಪಚ್ಚಕರ್ಪೂರ, ಕೇಸರಿ ಮುಂತಾದವುಗಳನ್ನು ತೀರ್ಥಕ್ಕೆ ಬೆರೆಸುತ್ತಾರೆ. ಅದೇನು ಅಷ್ಟು ಉಚಿತವಲ್ಲ. ಇಂದು ಉತ್ತಮ ಪಚ್ಚಕರ್ಪೂರ, ಕೇಸರಿ ದೊರೆಯುವುದೇ ದುರ್ಲಭವಾಗಿದೆಯಲ್ಲಾ!).

ಇನ್ನು ಮಂಗಳಾರತಿಯ ವಿಷಯಕ್ಕೆ ಬಂದರೆ ತುಪ್ಪದಲ್ಲಿ ಅದ್ದಿದ(ನೆನೆಸಿದ) ಹತ್ತಿಯಿಂದ ಮಾಡಿದ (ನಿರ್ಧಿಷ್ಟವಾಗಿ ಹೇಳಿದ್ದೇನೆ....ಗಮನಿಸಿ... ’ಕರ್ಪೂರ’ ಇಂದು ಇಂಗಾಲ ಮತ್ತು ವ್ಯಾಕ್ಸ್ ಮಯವಾಗಿಹೋಗಿದೆ.) ಬತ್ತಿಯನ್ನು ಹಚ್ಚಿ ಬೆಳಗುವುದರಿಂದ...... ಆರತಿ ಮಾಡುವುದನ್ನು ನೋಡುವುದರಿಂದ ಏಕಾಗ್ರತೆ ಸಿಧ್ದಿಸುವುದಲ್ಲದೆ ಅಂತಹ ಆರತಿಯ ಮೇಲೆ ನಮ್ಮ ಬಲ ಅಂಗೈಯನ್ನು ಸ್ವಲ್ಪಹೊತ್ತು ಹಿಡಿದರೆ ಶಾಖ ಅಂಗೈ ಮೂಲಕ ಪ್ರವೇಶವಾಗಿ ’ನರವ್ಯೂಹ’ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ. ಈ ರೀತಿ ಶುಧ್ದ ಅಂಗೈನಿಂದ ಮೇಲೆ ಹೇಳಿದ ತೀರ್ಥವನ್ನು ತೆಗೆದುಕೊಂಡು ಕುಡಿದರೆ ನಮ್ಮ ದೇಹಕ್ಕೆ ಆರೋಗ್ಯ ಲಭಿಸುತ್ತದೆಯಲ್ಲವೆ!!? ಇನ್ನು ಮೂರು ಬಾರಿ ತೆಗೆದುಕೊಳ್ಳುವುದು ಒಂದು ಬಾರಿ ತೆಗೆದುಕೊಳ್ಳುವುದೆಲ್ಲಾ ಶಾಸ್ತ್ರಾಧಾರಿತ ವಿಚಾರ. ’ಅಕಾಲ ಮೃತ್ಯುಹರಣಂ’ ಎಂಬ ಸೂಕ್ತ ಹೇಳಿ ತೆಗೆದುಕೊಳ್ಳಲೂ ಬಹುದು. ಸೂಕ್ತ ಹೇಳಿದಾಕ್ಷಣ ಅಕಾಲ ಮೃತ್ಯು ಪರಿಹಾರವಾಗುತ್ತದೆಯೆ? ಆತ್ಮಶುಧ್ದಿಯಿರಬೇಕಷ್ಟೆ !! . ಆದ್ದರಿಂದ ಮೊದಲು ಆರತಿ ನಂತರ ತೀರ್ಥ ಸರಿಯಾದ ಕ್ರಮ. ಇಂದಿನ ದೇವಾಲಯಗಳು ಹೈಟೆಕ್ ( ಟೈಲ್ಸ್, ಎಗ್ಸಾಸ್ಟ್ ಫ಼್ಯಾನ್ , ಇತ್ಯಾದಿ ..!) ವ್ಯವಸ್ಥೆಗಳನ್ನು ಹೊಂದಿರುವುದರಿಂದ ಮೇಲಿನ ಪಾವಿತ್ರ್ಯತೆಯನ್ನು ನೀರಿಕ್ಷಿಸಿವುದು ತಪ್ಪಾಗಬಹುದು....
ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು