*ಗೋ ಭಸ್ಮ ಸಿಗದೇ ಇದ್ದ ಕಾಲದಲ್ಲಿ ಏನು ಮಾಡಬೇಕು?*
ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ
ಅಂಗಡಿಯಲ್ಲಿ ದೊರೆಯುವಂತಹ ಭಸ್ಮವನ್ನೇ ತೆಗೆದುಕೊಂಡುಬಂದು ಅದನ್ನು ಸಣ್ಣಗೆ ಪುಡಿಮಾಡಿ ಬಟ್ಟೆಯಿಂದ ಸೋಸಿ ನಂತರ ಗೋಮೂತ್ರದಿಂದ ಅಂದರೆ ಕರುವು ಹಾಲುಕುಡಿಯುತ್ತಿರುವಾಗ ದೊರೆಯುವ ಗೋಮೂತ್ರದಿಂದ ಅದನ್ನು ಕಲಿಸಿ ಉಂಡೆಗಳನ್ನಾಗಿ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಅಘೋರಮಂತ್ರದಿಂದ ಸುಟ್ಟು ಈಶಾನಮಂತ್ರದಿಂದ ಸಂಗ್ರಹಿಸಬೇಕು. ಅನಿವಾರ್ಯವಾಗಿ ಗೋಭಸ್ಮ ಲಭ್ಯವಾಗದ ಸ್ಥಿತಿಯಲ್ಲಿ ಈ ತರಹ ಮಾಡಿಕೊಂಡ ಭಸ್ಮವನ್ನು ಬಳಸಬಹುದು. ಈ ತರಹದ ಭಸ್ಮಕ್ಕೆ ಉಪಕಲ್ಪಭಸ್ಮ (ಸಿ ಶಿ, ೭.೧೬-೧೭) ಎಂದು ಕರೆಯುವರು. ಉತ್ಕೃಷ್ಟವಾದ ಗೋಮಯದಿಂದ ತಯಾರಾದ ಭಸ್ಮವನ್ನೇ ಬಳಸಬೇಕು. ಅದು ದೊರೆಯದಿದ್ದಾಗ ಈ ತರಹ ಭಸ್ಮ ತಯಾರಿಸಿಕೊಂಡು ಬಳಸಬಹುದು.
*ಯೇಷಾಂ ವಪುರ್ಮನುಷ್ಯಾಣಾಂ ತ್ರಿಪುಂಡ್ರೇಣ ವಿನಾ ಸ್ಥಿತಮ್। ಸ್ಮಶಾನಸದೃಶಂ ತಸ್ಮಾನ್ನ ಪ್ರೇಕ್ಷ್ಯಂ ಪುಣ್ಯಕೃಜ್ಜನೈಃ॥ ದಿಗ್ ಭಸ್ಮರಹಿತಂ ಭಾಲಂ ದಿಗ್ ಗ್ರಾಮಮಶಿವಾಲಯಮ್॥* ಅಂದರೆ ಯಾರ ಶರೀರವು ತ್ರಿಪುಂಡ್ರವಿಲ್ಲದೇ ಇರುತ್ತದೆಯೋ ಅವನ ಶರೀರವು ಸ್ಮಶಾನ ಸದೃಶವಾಗಿರುವದು. ಅಂತವರನ್ನು ನೋಡಬಾರದು. ಭಸ್ಮವಿಲ್ಲದಾ ಹಣೆ ಹಾಗೂ ಶಿವನ ದೇವಾಲಯಗಳಿಲ್ಲದ ಊರುಗಳು ಇವುಗಳಿಗೆ ಧಿಕ್ಕಾರ ಎಂದು ಕ್ರಿಯಾಸಾರ ಭಾಗ ೨. ಪುಟ ೮೪ರಲ್ಲಿ ಉಕ್ತವಾಗಿದೆ.
ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ (ಹೊಸಹಳ್ಳಿ)
No comments:
Post a Comment
If you have any doubts. please let me know...