June 30, 2022

ಮುಹೂರ್ತ ಭಾಗ, ಕುಲ-ಅಕುಲ-ಕುಲಕುಲ ಯೋಗಗಳು

*ಕುಲ ಯೋಗ*
ಸ್ವಾತಿ
ಆಶ್ಲೇಷ
ಭರಣಿ
ಹಸ್ತ
ಧನಿಷ್ಠ
ರೇವತಿ
ಅನುರಾಧ
ರೋಹಿಣಿ
ಉತ್ತರಫಾಲ್ಗುಣಿ
ಉತ್ತರಾಷಾಡ
ಉತ್ತರಭಾದ್ರಪದ
ಪುನರ್ವಸು  ನಕ್ಷತ್ರಗಳಾಗಿ

1,3,5,7,9,11,13,15ನೆ ತಿಥಿಗಳಾಗಿ

ಭಾನುವಾರ, ಸೋಮವಾರ, ಗುರುವಾರ, ಶನಿವಾರ ಗಳಾಗಿ

ಕಂಡುಬಂದರೆ

*ಫಲಿತಾಂಶ*
*ಕಾನೂನು ಪ್ರಕರಣ ಅಥವಾ ನಾಮ ನಿರ್ದೇಶನ ಪತ್ರವನ್ನು ಸಲ್ಲಿಸುವಲ್ಲಿ ಅಥವಾ ಯುದ್ದಕ್ಕೆ ಹೋಗುವಲ್ಲಿ  ಫಿರ್ಯಾದಿಯ(ಅರ್ಜಿದಾರರ) ಗೆಲುವು*
🌹🌹🌹🌹🌹🌹🌹🌹

*ಕುಲಕುಲ ಯೋಗ*
ಮೂಲ,
ಆರಿದ್ರ,
ಶತಭೀಷ,
ಅಭಿಜಿತ್ ನಕ್ಷತ್ರಗಳಾಗಿ

2,6,10ನೆ ತಿಥಿಗಳಾಗಿ

ಬುಧವಾರ ಆಗಿ ಕಂಡುಬಂದರೆ

*ಫಲಿತಾಂಶ*
ರಾಜಿ ಮಾಡಿಕೊಳ್ಳುವುದು(, compromise)

🌹🌹🌹🌹🌹🌹🌹🌹
*ಕುಲ ಯೋಗ*
ಪುನರ್ವಸು
ಪೂರ್ವಭಾದ್ರ
ಪೂರ್ವಷಾಡ
ಅಶ್ವಿನಿ
ಪುಷ್ಯ
ಮಖಾ
ಮೃಗಶಿರಾ
ಶ್ರವಣ
ಕೃತಿಕಾ
ವಿಶಾಖಾ
ಜೇಷ್ಠ
ಚಿತ್ರಾ ನಕ್ಷತ್ರ ಗಳಾಗಿ

4,8,12,14ನೆ ತಿಥಿಗಳಾಗಿ

ಮಂಗಳವಾರ ಶುಕ್ರವಾರ ಗಳಾಗಿದ್ದರೆ

*ಫಲಿತಾಂಶ*
*ಪ್ರತಿವಾದಿ ಅಥವಾ ವಿರುದ್ಧ ಪಕ್ಷದ ಗೆಲುವು*


*ಸಂಗ್ರಹಣೆ ಮತ್ತು ಬರಹ*
*ಡಾ. ತಿಲಕ್. ಬಿ. ಎಸ್*

June 21, 2022

ವಿದ್ಯೆಗೆ ಉಪದೇಶ ಮುಖ್ಯ

ಉಪದೇಶವಿಲ್ಲದ ವಿದ್ಯೆ

ಛಾಂದೋಗ್ಯ ಉಪನಿಷತ್ತಿನ ಏಳನೆಯ ಖಂಡದಲ್ಲಿ ಒಂದು ಜಿಜ್ಞಾಸೆಗೆ ಸಂಬಂಧಿಸಿದ ಕಥೆ ಬರುತ್ತದೆ. ಅಧೀಹಿ ಭಗವಃ ಸೋಪಸಸಾದ ಸನತ್ಕುಮಾರಂ ನಾರದಸ್ತಂ | ಛಾಂದೋಗ್ಯ ಉಪನಿಷತ್ತು 7 : 1 : 1
ಒಮ್ಮೆ ನಾರದರಿಗೆ ತಾನು ಎಲ್ಲವನ್ನೂ ಕಲಿತೆ ಆದರೆ ಕಲಿತ ವಿದ್ಯೆಗಳ ಅರ್ಥದ ಉಪದೇಶವೇ ಆಗಿಲ್ಲ ನನ್ನ ನಿರಂತರ ಕಲಿಕೆಗೆ ಯಾವುದೇ ಬೆಲೆ ಇಲ್ಲ ಎನ್ನುವ ಭಾವ ಕಾಡುತ್ತದೆ. ಯಾರನ್ನು ಕೇಳಲಿ ಎಂದು ಯೋಚಿಸುತ್ತಿರುವಾಗ ಸನತ್ಕುಮಾರರ ನೆನಪಾಗುತ್ತದೆ. ಸನತ್ಕುಮಾರರ ಬಳಿ ಹೋಗಿ ತನಗೆ ತತ್ವೋಪದೇಶವಾಗಿಲ್ಲ, ತಾನು ಕಲಿತ ವಿದ್ಯೆಗಳ ಮಹತ್ವ ಇನ್ನೂ ತಿಳಿದಿಲ್ಲ ಆದುದರಿಂದ ತನಗೆ ತತ್ವಾರ್ಥ ಉಪದೇಶ ಮಾಡಿ ಎಂದು ಪ್ರಾರ್ಥಿಸುತ್ತಾರೆ. ಆಗ ಸನತ್ಕುಮಾರರು ನೀನು ಏನೆಲ್ಲಾ ಕಲಿತಿದ್ದೆ ಮತ್ತು ತಿಳಿದಿದ್ದೆ ಎನ್ನುವುದನ್ನು ಹೇಳು. ಅದಕ್ಕಿಂತಲೂ ಹೆಚ್ಚಿನದನ್ನು ಉಪದೇಶಿಸುತ್ತೇನೆ ಎನ್ನುತ್ತಾರೆ. ಆಗ ನಾರದರು ಋಗ್ವೇದಂ ಭಗವೋಧ್ಯೇಮಿ ಸಾಮವೇದಮಾಥರ್ವಣಂ ಛಾಂದೋಗ್ಯ ಉಪನಿಷತ್ತು 7 : 1 : 2 
ಋಗ್ವೇದವೇ ಮೊದಲಾದ ನಾಲ್ಕು ವೇದಗಳು, ಇತಿಹಾಸ, ಪುರಾಣಗಳು, ನ್ಯಾಯ ಹೀಗೆ ಎಲ್ಲವನ್ನೂ ತಿಳಿದಿದ್ದೇನೆ ಆದರೆ ನಾನು ಆಯಾ ಶಾಸ್ತ್ರಗಳಲ್ಲಿನ ಮಂತ್ರೋಚ್ಚಾರಣೆ ಗೊತ್ತು ಆದರೆ ಅವುಗಳ ಅರ್ಥ ಗೊತ್ತಿಲ್ಲ. ಮಂತ್ರವಿದೇವಾಸ್ಮಿ ನಾತ್ಮವಿಚ್ಛ್ರುತಂ ಎನ್ನುತ್ತಾರೆ. ಆತ್ಮಜ್ಞಾನವಿಲ್ಲ ವಿದ್ಯೆಯಿಂದ ಯಾವ ಪ್ರಯೋಜನವೂ ಇಲ್ಲ. ಅದರಿಂದ ಸಂಸಾರ ಬಂಧನದಿಂದಲೂ ಮುಕ್ತಿಯಿಲ್ಲ ಎನ್ನುವುದನ್ನು ಕೇಳಿದ್ದೇನೆ ಎನ್ನುತ್ತಾರೆ. ಮುಂದೆ ನಾರದರಿಗೆ ಉಪದೇಶ ಸಿಗುತ್ತದೆ. ಆದರೆ ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕಾಗುತ್ತದೆ. ಯಾಕೆ ಅರ್ಥವಾಗುವುದಿಲ್ಲ ಎಂದರೆ ಮಂತ್ರೋಚ್ಚಾರಣೆಯ ಕ್ರಮ ಬೇರೆ ಅರ್ಥಮಾಡಿಕೊಳ್ಳುವ ಕ್ರಮವೇ ಬೇರೆ. 
ಇನ್ನು ಮುಂದೆ ಉಳಿದ ವಿದ್ಯೆಗೂ ಹೇಳುತ್ತಾ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಇಚ್ಚೆ ಇದ್ದವರು ಕಲಿತರೆ ಬಹಳ ಒಳ್ಳೆಯದು. ಆದರೂ ವಿದಯೆ ಕಲಿಯಬೇಕು ಎನ್ನುತ್ತಾರೆ.
ಇನ್ನು ವಿದ್ಯೆ ಕಲಿಯುವ ವಿದ್ಯಾರ್ಥಿಯು ಹೇಗಿರಬೇಕು ಎನ್ನುವುದನ್ನು ಋಗ್ವೇದ ಒಂದನೇ ಮಂಡಲದ ೧೬೪ನೇ ಸೂಕ್ತದಲ್ಲಿ 
ಅಚಿಕಿತ್ವಾಞ್ಚಿಕಿತುಷಶ್ಚಿದತ್ರ ಕವೀನ್ಪ್ರಚ್ಛಾಮಿ ವಿದ್ಮನೇ ನ ವಿದ್ವಾನ್ |
ವಿ ಯಸ್ತಸ್ತಂಭ ಷಳಿಮಾ ರಜಾಂಸ್ಯಜಸ್ಯ ರೂಪೇ ಕಿಮಪಿ ಸ್ವಿದೇಕಂ ||
ವಿನಯವಿಲ್ಲದೇ ವಿದ್ಯೆ ಬರುವುದಿಲ್ಲ ಎನ್ನುವುದಕ್ಕೆ ಈ ಋಕ್ಕು ಬಹಳ ಮುಖ್ಯವೆನ್ನಿಸುತ್ತದೆ. ಇದರಲ್ಲಿ ಮೊದಲನೆಯದಾಗಿ ಜ್ಞಾನ ವಿಹೀನನಿಗೆ ಉಪದೇಶಮಾಡಬಾರದು ಮತ್ತು ವಿದ್ಯೆಯನ್ನು ಕಲಿ ಎಂದು ಒತ್ತಾಯಿಸಬಾರದು. ಇನ್ನೊಂದು ಸ್ವ ಪ್ರಯತ್ನ ಮತ್ತು ಕಲಿಯ ಬೇಕು ಎನ್ನುವ ಉತ್ಕಟವಾದ ಅಭಿಲಾಶೆ ಇದ್ದವರಿಗೆ ಮಾತ್ರವೇ ವಿದ್ಯೆಯನ್ನು ಹೇಳಿಕೊಡಬೇಕು ಮತ್ತು ಅವರು ಕಲಿಯುತ್ತಾರೆ ಎನ್ನಲಾಗಿದೆ. ಅನಾಸಕ್ತರಿಗೆ ಜ್ಞಾನವಿಹೀನರಿಗೆ ಕಲಿಸಬಾರದು ಎನ್ನುವ ಈ ಋಕ್ಕುಗಳನ್ನು ಮುಂದೊಮ್ಮೆ ವಿವರಿಸುವೆ. ಆದರೆ ಹಿಂದೆ ಭಾರತದಲ್ಲಿ ಇದ್ದ ಶಿಕ್ಷಣ ಪದ್ಧತಿ ಅದೇ ಆಗಿತ್ತು. ಶಿಕ್ಷಣ ಕೆಲವರ ಸೊತ್ತು ಮಾತ್ರ ಎಂದು ಬೊಬ್ಬಿಡುವ ಮಂದಿ ತಾವಾಗಿ ಕಲಿಯಲು ಪ್ರಯತ್ನಿಸುವುದಿಲ್ಲ ಮತ್ತು ಕಲಿತದ್ದನ್ನು ಅರ್ಥೈಸಿಕೊಳ್ಳುವುದರಲ್ಲೂ ವಿಪರೀತಾರ್ಥ ಮಾಡುತ್ತಾರೆ. ವಿದ್ಯೆಯ ಸದುಪಯೋಗದಿಂದ ದೇಶದ ಅಭಿವೃದ್ಧಿ ಸಾಧ್ಯ.

#ಪ್ರಾಚೀನ_ಕಲಿಕೆ 
ಮೂಲ: ಸದ್ಯೋಜಾತರು

June 16, 2022

ನಮಸ್ಕಾರಗಳನ್ನು ಯಾವ ಸಂದರ್ಭದಲ್ಲಿ ಮಾಡಬಾರದು?

ಯಾವಯಾವ ಸಂದರ್ಭಗಳಲ್ಲಿ
ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! 
(  ಸಂಗ್ರಹಿಸಿದ್ದು )

ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣನೇ ಮೊದಲಾದ ಗುರು-ಹಿರಿಯರಿಗೆ ನಮಸ್ಕಾರ ಮಾಡಬಾರದು. ಇದು ಯಾವ ಸಂದರ್ಭದಲ್ಲಿ ಎಂದರೆ

ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |
ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ ||
ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |
ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

ಅಂದರೆ  ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರುತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪಾವಿಷ್ಟನಾಗಿರುವಾಗ ನಮಸ್ಕರಿಸಬಾರದು. 

ಅದರಲ್ಲೂ ಕೋಪಾವಿಷ್ಟನಾಗಿರುವಾಗ ಮಾತ್ರ ಅವಶ್ಯವಾಗಿ ನಮಸ್ಕರಿಸಲೇಬಾರದು. ಎಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲವೇ ದೊರಕುವ ಸಾಧ್ಯತೆಯಿರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಯಾರೇ ಇರಲಿ ನಮಸ್ಕರಿಸಬಾರದು. 

ಇಷ್ಟೇ ಅಲ್ಲದೇ!

ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |
ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಿಮ್ಮ ಗುರುಗಳಿಗೆ ನಮಸ್ಕಾರ ಮಾಡಬಾರದು. ಎಕೆಂದರೆ ಸಭೆಯಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆಯಿರುವ ನಿಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಗುರುಗಳನ್ನು, ಜ್ಞಾನಿಗಳನ್ನು ತಿರಸ್ಕರಿಸಿದಂತಾಗುತ್ತದೆ. ಆಗ ನಿಮ್ಮ ಗುರುಗಳಿಗೆ ನಮಸ್ಕರಿಸುವ ಆತುರದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು.!

ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ.

June 15, 2022

ಗೋಚರ ಮತ್ತು ಅಗೋಚರ ಶಾಪಗಳು

೧. ಮಾತಾ ಪಿತೃ ಶಾಪ :

* ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ..

* ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಸಂಸಾರ ಮಾಡುತ್ತಾರೆಯೋ..

* ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳು..
ಕೊಂಕು ಮಾತನಾಡಿ ,ತಿರಸ್ಕಾರದಿಂದ ನೋಯಿಸಿದ್ದರೂ ಬರುತ್ತದೆ.

* ತಂದೆ ತಾಯಿಗಳ ಪಾಲನೆ ಪೋಷಣೆ ಮಾಡದ ಮಕ್ಕಳು..

* ತಂದೆ ತಾಯಿಯರನ್ನು ಅಗಲಿಸಿದ ಮಕ್ಕಳು..

* ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು..

* ತಂದೆ ತಾಯಿಯರ ನಂತರ ಶ್ರಾದ್ಧ ಮಾಡದ ಮಕ್ಕಳು..
.... ಇತ್ಯಾದಿ

ಇವೆಲ್ಲವೂ ಮಾತಾಪಿತೃ ಶಾಪ ಎಂದು ಕರೆತುತ್ತೇವೆ.‌
ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ , ಮಕ್ಕಳ ಏಳಿಗೆಯಾಗುವುದಿಲ್ಲ , ಸಂತಾನ ದೋಷವೂ ಆಗಬಹುದು, ನೆಮ್ಮದಿ ಇರದ ದಾರಿದ್ರ್ಯದ ಜೀವನ, ..
ಇಂತಹ ಫಲಗಳು ಬರುತ್ತವೆ..
     ***

೨. "ಸ್ತ್ರೀ ಶಾಪ"

* ಅನ್ಯ ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದ ದೋಷಗಳು..

* ಅನ್ಯ ಸ್ತ್ರೀ ಆಭರಣ ಅಡಮಾನ ದೋಷಗಳು..

* ಸ್ತ್ರೀ ಗೆ ಮಾತು ಕೊಟ್ಟು ತಪ್ಪಿದ ದೋಷಗಳು..

* ಒಬ್ಬರು ಸ್ತ್ರೀಗೆ ಮಾತುಕೊಟ್ಟು ಅನ್ಯ ಸ್ತ್ರೀಯನ್ನು ವಿವಾಹವಾದ ದೋಷಗಳು..

* ಸ್ತ್ರೀಯರ ಹಣನುಂಗಿದ ದೋಷಗಳು.
.. ಇತ್ಯಾದಿ

* ಸ್ತ್ರೀಯರನ್ನು ನಿಂದಿಸಿ , ಕಣ್ಣೀರು ಹಾಕಿಸಿದ ದೋಷಗಳು..

ಇವೆಲ್ಲವೂ ಸ್ತ್ರೀಶಾಪಗಳಾಗುತ್ತವೆ..

ಅನಾರೋಗ್ಯ, ಕಷ್ಟದ ಜೀವನ, ಮನೆಯಲ್ಲಿ ಜಗಳಗಳು, ವಿವಾಹಕ್ಕೆ ದೋಷಗಳು, ಅಪಘಾತದ ಭಯಗಳು ಆಗುತ್ತಿರುತ್ತವೆ.
    ********

೩. "ಗುರುಶಾಪ"..

* ಗುರುವಿನಿಂದ ಮಂತ್ರದೀಕ್ಷೆ ಪಡೆದು ದಕ್ಷಿಣೆ ಕೊಡದ ದೋಷಗಳು..

* ಗುರುವಿನ ನಿಂದನೆ ಮಾಡಿದ ದೋಷಗಳು.‌

* ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದ ದೋಷಗಳು..

* ಗುರುವಿನಿಂದ ವಿದ್ಯೆ ಕಲಿತು ಗುರುವಿಗೇ ತಿರುಮಂತ್ರ ಹೇಳಿದ ದೋಷಗಳು..

* ಗುರುವನ್ನು ತಿರಸ್ಕಾರ ಮಾಡಿದ ದೋಷಗಳು.‌

* ಗುರುಗಳು ನೊಂದುಕೊಳ್ಳುವಂತೆ ಮಾಡಿದ ದೋಷಗಳು..

* ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು , ಅದನ್ನು ಕೆಟ್ಟ ಕಾರ್ಯಗಳಿಗೆ ಉಪಯೋಗಿಸಿದ ದೋಷಗಳು..
..
ಇವೆಲ್ಲವೂ ಗುರುಶಾಪಗಳಾಗುತ್ತವೆ..
ಇಂತಹವರಿಗೆ ಜೀವನದಲ್ಲಿ ಅಭಿವೃದ್ಧಿನೇ ಇರುವುದಿಲ್ಲ, ಸಂತಾನಭಾಗ್ಯ ಕಷ್ಟ, ಮಕ್ಕಳಿಗೆ ವಿದ್ಯೆ ಹತ್ತುವುದಿಲ್ಲ, ಅಗೋಚರ ಕಾಯಿಲೆಗಳಾಗುತ್ತವೆ , ವಂಶವು ಅಧಃಪತನವಾಗುವುದು..
******

೪. " ದೈವಶಾಪ"

* ದೇವರ ವಿಗ್ರಹಗಳನ್ನು ಬಿಸಾಡುವುದು, ಸರಿಯಾಗಿ ಪೂಜಿಸದೇ ಇರುವುದು..

* ದೇವರ ವಿಗ್ರಹಗಳನ್ನು ಅಡಮಾನ ಇಟ್ಟು ವ್ತವಹರಿಸುವುದು..

* ದೇವರ ಆಭರಣಗಳನ್ನು ಧರಿಸುವುದು..

* ನಿಮ್ಮ ಮನೆಯ ಪೂಜಾವಿಗ್ರಹವನ್ನು ಬೇರೆಯವರಿಗೆ ಕೊಡುವುದು..

* ದೇವರ ಆಭರಣಗಳನ್ನು ಕರಗಿಸಿದ ದೋಷಗಳು..

* ದೇವಾಲಯದಲ್ಲಿ ಮಾರುವ ಆಭರಣಗಳನ್ನು ಬೆಲೆಕಟ್ಟಿ ಕೊಂಡುಕೊಂಡರೆ..ಇವೆಲ್ಲವೂ ದೈವಶಾಪಗಳಾಗುತ್ತವೆ..
ಅಗೋಚರವಾಗಿಯೂ ಪೂಜೆಗಳಲ್ಲಿ ದೈವ ಶಾಪ ಅಥವಾ ದೈವ ಜನರ ಶಾಪ ಉಂಟಾಗುತ್ತದೆ.‌.

೧. ದೇವರನ್ನು ನಂಬಿ ಜ್ಯೋತಿಷ್ಯ ಹೇಳುವವರ ಬಳಿ , ಜ್ಯೋತಿಷ್ಯ ಕೇಳಿ ದಕ್ಷಿಣೆ ಕೊಡದೆ ಇದ್ದ ದೋಷಗಳು..
ಜ್ಯೋತಿಷ್ಯ ಕೇಳಿ, ಜಾತಕ ಕೇಳಿ , ಪರಿಹಾರ ಕೇಳಿಯೂ ದಕ್ಷಿಣೆ ಕೊಡದೆ ನಿಂದಿಸಿದ ದೋಷಗಳು..

೨. ಪುರೋಹಿತರು ಪೂಜೆಯ ಸಾಮಗ್ರಿಗಳನ್ನು ಅವರೇ ತಂದು ಪೂಜೆ ಮಾಡಿಕೊಂಡು ಹೋದ ದೋಷಗಳು..

೩.. ದೈವಜ್ಞರನ್ನು ನಿಂದಿಸಿದ ದೋಷಗಳು..
ಇತ್ಯಾದಿ

ಈ ದೈವ ಶಾಪ ಅಥವಾ ದೈವ ಜನರ ಶಾಪ ತುಂಬಾ ಇವೆ..
ಈ ದೋಷ ಇದ್ದರೆ ಅಂತಹ ಮನೆಯಲ್ಲಿ ದೇವರು ವಾಸ ಮಾಡುವುದಿಲ್ಲ..
ದೇವರ ಬಲ ಇರುವುದಿಲ್ಲ..
ಕಷ್ಟಕರವಾದ ಜೀವನ, ಮನೆಯಲ್ಲಿ ಅನಾರೋಗ್ಯದ ಭಾಗ್ತ, ಸಂಸಾರದಲ್ಲಿ ಕಷ್ಟ.. ಇತ್ಯಾದಿ , ಫಲಗಳು ಬರುತ್ತವೆ..
   *******

೫. "ಸರ್ಪದೋಷ"

* ಯಾರು ಸರ್ಪವನ್ನು ಹಿಂಸಿಸುತ್ತಾರೋ, ಹೊಡೆಯುತ್ತಾರೋ, ಸಾಯಿಸುತ್ತಾರೋ ಅವರಿಗೆಲ್ಲಾ , ಮನೆಯವರಿಗೂ ಸೇರಿ ದೋಷ ಬರುತ್ತದೆ..

* ಯಾರು ಸರ್ಪದ ವಾಸಸ್ಥಾನವನ್ನು ನಾಶ ಮಾಡುತ್ತಾರೆಯೋ, ಅಲ್ಲಿ ಮನೆಯನ್ನು ಕಟ್ಟುತ್ತಾರೆಯೋ, 

* ಯಾರು ತನಿ ಎರೆಯುವುದಿಲ್ಲವೋ, ಯಾರು ನಾಗರ ಪೂಜೆ ಮಾಡುವುದಿಲ್ಲವೋ..

* ಯಾರು ಸರ್ಪಗಳನ್ನು ದಾಟಿರುತ್ತಾರೋ, ಸರ್ಪವನ್ನು ಆಟ ಆಡಿಸುತ್ತಾರೋ..

* ಯಾರೋ ಮಾಡುವ ಸರ್ಪಸಂಸ್ಕಾರ, ನಾಗರ ಪ್ರತಿಷ್ಟೆ ನೋಡುವುದು, ಪ್ರಸಾದ ಸೇವಿಸುವುದರಿಂದಲೂ ಸರ್ಪದೋಷ ಬರುವುದು, ನೇತ್ರ ಸರ್ಪದೋಷ ವಾಗುತ್ತದೆ..
*ನಾಗರಕಲ್ಲನ್ನು ಕೆಡುವಿದ ದೋಷಗಳು, ಯಾರಿಗೋ ನಾಗರ ಹಾವನ್ನು ತೋರಿಸಿ ಒಡೆಸಿದ ದೋಷಗಳು..

ಇವೆಲ್ಲವೂ ಸರ್ಪದೋಷಗಳಾಗುತ್ತವೆ..

ಸಂತಾನ ಭಾಗ್ಯ ಕಷ್ಟ, ಅಗೋಚರ ರೋಗಗಳು, ಗಾಯಗಳು, ಕಿವಿನೋವು, ಕಣ್ಣಿನ ರೋಗಗಳು, ಮಕ್ಕಳ ಬೆಳವಣಿಗೆ ಇಲ್ಲದೇ ಇರುವುದು , ಮದುವೆಯ ದೋಷಗಳು, ಅಭಿವೃದ್ಧಿ ಆಗದೇ ಇರುವುದು  ವಿವಾಹ ದೋಷಗಳು, ವಿಚ್ಛೇದನ ದೊಷಗಳು.
..ಇತ್ಯಾದಿ ಫಲಗಳು ಬರುತ್ತವೆ..

(ಈ ಎಲ್ಲಾ ದೋಷಗಳಿಗೆ ಜಾತಕ ನೋಡಿಸಿ ಪರಿಹಾರ ಮಾಡಿಕೊಂಡಾಗ ಮಾತ್ರ ಫಲಗಳ ಪ್ರಭಾವ ಕಡಿಮೆಯಾಗುವುದು)

ಶುಭವಾಗಲಿ..

ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು

೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ
 ಮಾಡುವುದು.

೨. ದೇವರಿಗೆ ಸಂಬಂಧಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..

೩. ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.

೪. ಒಂದೇ ಹಸ್ತದಿಂದ ನಮಸ್ಕರಿಸುವುದು.

೫. ಭಗವಂತನ ಸಮುಖದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.

೬. ದೇವಾಲಯದ ಪ್ರದಕ್ಷಿಣೇ ಬರದೇ ಇರುವುದು..

೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ, ಆಸನಗಳ ಮೇಲೆ ಕುಳಿತುಕೊಳ್ಳುವುದು..

೮. ಭಗವಂತನ ಸಮ್ಮುಖ ಭೋಜನ ಮಾಡುವುದು..

೯. ದೇವಾಲಯದಲ್ಲಿ ಅನಗತ್ಯ ವಿಚಾರ ಮಾತಾಡುವುದು..

೧೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು, ಅಪಭ್ರಂಶ ಮಾತನಾಡುವುದು..

೧೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..

೧೨. ಯಾವುದಾದರೂ ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..

೧೩. ಭಗವಂತನ ಸಮ್ಮುಖ ಆಕಳಿಸುವುದು ಹಾಗೂ ಅಪಾನವಾಯು ಬಿಡುವುದು.

೧೪. ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..

೧೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..

೧೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..

೧೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.

೧೯. ಯಾವುದೇ ದೇವರನ್ನು ನಿಂದಿಸುವುದು..

೨೦. ಭಗವಂತನ ವಿಗ್ರಹಕ್ಕೆ ಬೆನ್ನು ತೋರಿಸಿ ಕೂಡುವುದು..

೨೧. ಗುರುಗಳ ಸ್ಮರಣೆ ಮಾಡದೇ ಇರುವುದು..

೨೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..         

೨೩. ದೇವಾಲಯಕ್ಕೆ ಬರಿಯ ಕೈಯಲ್ಲಿ ಹೋಗುವುದು.                                                                                ತುಂಬಾ ಅಪರಾಧಗಳು ನಮಗೆ ಗೊತ್ತಿಯೂ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..
ಎಚ್ಚರಿಕೆ ವಹಿಸಿ..
 

ಶುಭವಾಗಲಿ..

June 12, 2022

ಆರೋಗ್ಯ ಸರಿಯಿಲ್ಲದಿದ್ದಾಗ ಧರ್ಮಕಾರ್ಯಗಳು ನಿಷಿದ್ಧವೇ?

ಹತೇ ತು ರುಧಿರಂ‌ ದೃಶ್ಯಂ ವ್ಯಾಧಿಗ್ರಸ್ತಃ ಕೃಶೋ ಭವೇತ್ | ಲಾಲಾ ಭವತಿ ದಷ್ಟೇಷು ಏವಮನ್ವೇಷಣಂ ಭವೇತ್ || ಪರಾಶರ ಸ್ಮೃತಿ||

ಧರ್ಮಕಾರ್ಯಗಳನ್ನು ಮಾಡುವಾಗ ದೇಹವು ಸ್ವಸ್ಥವಾಗಿರುವುದು ಅತ್ಯಂತ ಅವಶ್ಯಕವಾದ ವಿಷಯ. ಏಕೆಂದರೆ ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬಂತೆ ಶರೀರ ಸರಿಯಾಗಿದ್ದರೆ ಎಲ್ಲಾ ಆಚರಣೆ. ಗಾಯಗಳಾದಾಗ ರಕ್ತಸ್ರಾವದಿಂದಾಗಿ ಗುರುತಿಸಿ ಉಪಚಾರ ಔಷಧ ಪಡೆಯಬೇಕು‌. ರಕ್ತಸುರಿಯುತ್ತಿದ್ದಾಗ ಯಾವ ಕಾರ್ಯವೂ ತರವಲ್ಲ.  ದೊಡ್ಡ ರೋಗದಿಂದ ಪೀಡಿತರಾದಾಗ ವ್ಯಕ್ತಿ ಕೃಶನಾಗುವನು. ಅಂತಹ ಸಮಯದಲ್ಲಿ ಯಾವ ಕರ್ಮಗಳನ್ನು ಮಾಡದೇ ವಿಶ್ರಾಂತಿ ಪಡೆದು ರೋಗಪರಿಹಾರಕ್ಕೆ ಯತ್ನಿಸಬೇಕು. ಸರ್ಪ- ಶ್ವಾನ- ಕರ್ಕಾಟಕ ಮೊದಲಾದ ದುಷ್ಟ ಜಂತುಗಳು ಕಡಿದಾಗ ಅವುಗಳ ಜೊಲ್ಲಿನಿಂದ ಗುರುತಿಸಿ ಕೂಡಲೇ ಪರಿಹಾರ ಕೈಗೊಳ್ಳಬೇಕು, ಇಲ್ಲದಿದ್ದರೆ ಅದೇ ಪ್ರಾಣಾಂತಿಕವಾಗಬಹುದು. ಹಾಗಾಗಿ  ಗಾಯವನ್ನು- ರೋಗವನ್ನು- ಕಡಿತವನ್ನು ಅನ್ವೇಷಿಸಿ ಪರಿಹಾರ ಪಡೆದು ಕರ್ಮಗಳನ್ನು ಮಾಡುವುದೇ ಶಾಸ್ತ್ರ ವಿಹಿತ. ಸುಮ್ಮನೆ ದೇಹವನ್ನು ಹಾಳುಮಾಡಿಕೊಂಡು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸದಾ ಶಾಸ್ತ್ರ ನಿಷಿದ್ಧ.
©® #channesha_shastri_Mathad