#ಶ್ರೀವೀರಭದ್ರನ_ಬತ್ತಿಸ್_ಆಯುಧಗಳು
(ಆಯುಧಪೂಜೆಯ ವಿಶೇಷ ಲೇಖನ)
ಸಿಂಧೂ ಸಂಸ್ಕೃತಿಯ ರುದ್ರ ಪಶುಪತಿ ಶಿರದಲ್ಲಿ ಹೆಣೆದ ಊರ್ಧ ತ್ರಿಜಟೆಗಳೇ (ಶಿರೋವೇಷ್ಟನ) ತ್ರಿಶೂಲದ ರೂಪಕ್ಕೆ ಪ್ರೇರಣೆಯಾಯಿತೆನ್ನುವುದಿದೆ. ಹಾಗೆಯೇ ಶಿರದಲ್ಲಿ ಎತ್ತಿ ಕಟ್ಟಿದ ಜಟಾಶೈಲಿಯ ಕೀರೀಟದ ರೂಪಕ್ಕೆ ಸ್ಫೂರ್ತಿ ನೀಡಿರುವಂತಿದೆ ರೂಢಿಗತವಾಗಿದ್ದ ಒಂದು ಜಟಾ ಶೈಲಿ ಅದೆನ್ನಿಸುವಂತಿದೆ. ಕೀರೀಟದ ಕೆಳಗೆ ವೀರಭದ್ರನಿಗೆ ಶಿವಲಿಂಗವನ್ನು ಶಿಲ್ಪದಲ್ಲಿ ಸೂಚಿಸುವುದಕ್ಕೂ ಕಾರಣವಿದೆ, ಅಂಗದ ಮೇಲೆ ಶಿವಲಿಂಗ ಎಂದರೆ, ಅದಕ್ಕೆ ರಕ್ಷಣೆ ವೀರಭದ್ರನ ಕಾಲಕ್ಕೆ ಜಟೆಯಲ್ಲಿ ಹಿಡಿದಿಟ್ಟುಕೊಳ್ಳುವುದೇ ಆಗಿದ್ದಿರಬೇಕು. ಅಂತಾಗಿ ಶಿಲ್ಪದಲ್ಲಿ ಶಿವಲಿಂಗವೂ ಹಾಗೆಯೇ ಮೂಡಿಬಂದಿದೆ. ಮುಂದೆ 'ಆಯಂ ಮೇ ಹಸ್ತೋ ಭಗವಾನ್' : ಸ್ವಹಸ್ತದ ಮೇಲಿಟ್ಟುಕೊಂಡು (ಲಿಂಗ) ಭಗವಂತನ ಪೂಜೆ ಸಲ್ಲಿಸುವ ರೂಢಿ ಆಯಿತು. ಅದಾಗಿ ಎಡಹಸವು ಜೀವ ಸ್ವರೂಪ; ಎಡಹಸವು ದೇವಾಂಗ ಎಂಬ ವಿಶ್ಲೇಷಣೆ ಎಂ.ಜಿ ನಂಜುಂಡಾರಾಧ್ಯರದು. (ಎಂ.ಜಿ. ನಂಜುಂಡಜಾರಾಧ್ಯ: 'ವೇದಕಾಲದ ಜಂಗಮರು, ಚಿನ್ಮೂಲಾದ್ರಿ ಚೇತನ, (ಸಂ) ಜಿ. ಶಿವಕುಮಾರ್, ಎಂ.ಎಸ್. ಕರಿಬಸವಸ್ವಾಮಿ, ಇಸ್.ಎಂ. ವೀರಭದ್ರಯ್ಯ, ಚಿತ್ರದುರ್ಗ,೧೯೮೯, ಪು ೧೪೫) ಇಷ್ಟಲಿಂಗ ಕಲ್ಪನೆಯ ವಿಕಾಸ ಆದದ್ದು ಹಾಗೆ.
ಧೀರ ಗಂಭೀರ ಪ್ರಸನ್ನ ವದನದ ಈ ಮೂರ್ತಿಯ ೩೨ ಭುಜಗಳ ಭಂಗಿ ಹಾಗು ೩೨ ಹಸ್ತಗಳು ಆಯುಧಗಳನ್ನು ಹಿಡಿದಿರುವ ರೀತಿ ಚಿತ್ತಾಕರ್ಷಕವಾಗಿದೆ; ವೈವಿಧ್ಯಮಯ ಆಯುಧಗಳ ರೂಪಗಳು ಸ್ಪಷ್ಟವಾಗಿ ಕೆತ್ತನೆಗೊಂಡಿವೆ. ಅರ್ಧಭಾಗ ಎತ್ತಿದ ತೋಳುಗಳಲ್ಲಿ ಅರ್ಧಭಾಗ ಇಳಿಬಾಗುವಿನ ತೋಳುಗಳಲ್ಲಿ ಇವು ಎದ್ದು ಕಾಣುತ್ತವೆ : (ಈ ವಿಗ್ರಹದ ಆಯುಧ ವರ್ಣನೆಗಳನ್ನು ೧೯೯೮ರ ಸುಮಾರಿನಲ್ಲಿ ನೀಡಿದವರು ದೇಗುಲದ ಅರ್ಚಕ ಶ್ರೀ ಎನ್. ಚಂದ್ರಶೇಖರಯ್ಯ ಅವರು)
೧. ಕಡತಲೆ (ಕಡಿತಲೆ!)
ಮಾದರಿ ಕಿರುಗತ್ತಿ
೨. ಪರಟು
೩. ಚಕ್ರ
೪. ತ್ರಿಶೂಲ
೫. ವಜ್ರಾಯುಧ (ಮುದ್ದರೆ!)
೬. ಬಿದಿರುಗತ್ತಿ
೭. ಬಾಚಿಗತ್ತಿ
೮. ನೀಳದಂಡ
೯. ನೀಳದಂಡ
೧೦. ವಿಠಲಗದೆ
೧೨. ಆನೆ ಅಂಕುಶ
೧೩. ಸೂರ್ಯ
೧೪. ಭರ್ಜಿ
೧೫. ಗಜದಂಡ
೧೬. ಮುಖ್ಯ ಬಲ ಮಂದೋಳು ಬಾಗಿಸಿ ಉದರಕ್ಕೆ ಅಡ್ಡಲಾಗಿ ಹಿಡಿದ ಸು. ೨ ೧/೨ ಅಡಿ ಉದ್ದದ ನೀಳಗಡಸುಗತ್ತಿ (ಸಿಡಿದಲೆ ಗತ್ತಿ!)
೧. ನೀಳನಾಗತ್ತಿ (ನಿಮಿರಿದ ಹೆಡೆ ನಾಗ ಶರೀರ)
೨. ಪಾಶ
೩. ಶಂಕ
೪. ಡಮರು
೫. ವಜ್ರ (ಜೋಡಿ-ಬೋರಲು ತ್ರಿಶೂಲರೂಪಗಳು)
೬. ಕೊಕ್ಕುಗತ್ತಿ (ಗಿಣಿಕೊಕ್ಕಿನ ರೂಪ)
೭. ಹಲಾಯುಧ (ನೇಗಿಲುಗತಿ)
೮. ಬಿಲ್ಲು
೯. ಬಾಕು
೧೦. ಮಲಚೂರಿ
೧೧. ಆನೆ ಅಂಕುಶ (೨ನೇ ಮಾದರಿ)
೧೨. ಅಗಲ ಗತ್ತಿ (ಚಪ್ಪೆಗತ್ತಿ)
೧೩. ಚಂದ್ರ
೧೪. ಉದ್ದನ ಕತ್ತಿ
೧೫. ಪರಶು (೨ನೆ ಮಾದರಿ)
೧೬. ಮುಖೈ ಇಡ ಮುಂದೋಳನ್ನು ಮೇಲ್ಬಾಗಿಸಿ ಕಟಮಟ್ಟಕ್ಕೆ ಹಿಡಿದ ಸುಮಾರು ೧ ೧/೨ ಅಡಿ ಎತ್ತರ ೪ ಅಂಗಲು ಅಗಲದ ಢಾಲು (ಚಪ್ಪೆಗುರಾಣಿ)
ಢಾಲುವಿನ ಹಿಡಿಯನ್ನು ಹಿಡಿದುಕೊಳ್ಳುವ ಬದಲು ಢಾಲುವಿನ ಮಧ್ಯ ಭಾಗವನ್ನೆ ಹಿಡಿದಿರುವ ಎಡಹಸ್ತ ಎದ್ದು ಕಾಣುತ್ತದೆ. ನೀಳಗತ್ತಿ ಹಾಗು ಢಾಲುವನ್ನು ಹಿಡಿದಿರುವ ಭಂಗಿ, ಹಾವುಗೆಗಳ ಮೇಲೆ ಎಡಮುಖಕ್ಕೆ ತಿರುಗಿರುವ ಪಾದಗಳ -ವಿನ್ಯಾಸ, ಮಂಡಿ, ಸೊಂಟಗಳ ನಿಲುವು ಮೂರ್ತಿಯ ವೀರಭಂಗಿಗೆ, ಹೆಸರಿಗೆ ಅನುಗುಣ ಶೈಲಿಯದಾಗಿವೆ.
ಸಾಮಾನ್ಯವಾಗಿ ಎಡಭುಜದಿಂದ ಬಲಸೊಂಟದವರೆಗೆ ಹಾರದಂತೆ ರುಂಡ ಮಾಲೆ ಬರುತ್ತದೆ. ಇಲ್ಲಿ ಅದು ಎಡಸೊಂಟದಿಂದ ಬಲ ತೊಡೆಯ ಮೇಲ್ಪದಿಯವರೆಗಿನ ೨೦ ರುಂಡಗಳ ಮಾಲೆ ಆಗಿದೆ. ಈ ಸಂಖ್ಯೆ ಎಲ್ಲ ಮೂರ್ತಿಗಳಲ್ಲಿ ಒಂದೇ ಆಗಿರುವುದಿಲ್ಲ. ರುಂಡಗಳ ಸ್ವರೂಪ ಇಲ್ಲಿ ಭೀಕರವೆನಿಸದೆ ವಿನಮ್ರಮೊಗಗಳ ಸುಂದರ ಬಿಡಾವಣೆಯಾಗಿದೆ. ಮಂಡಿ ಭಾಗದಲ್ಲಿ ಬಿಡಿಸಿರುವ ರುಂಡಗಳು ಎದ್ದುಕಾಣುತ್ತವೆ. ಆಯುಧಗಳ ವಿಪುಲ ಸಂಖ್ಯೆಯ ಕಾರಣ, ಶಿಲ್ಪಿಯು ರುಂಡಮಾಲೆಯನ್ನು ಸೊಂಟಭಾಗದಿಂದ ಬಿಡಿಸಿರುವುದು ಕೌಶಲ್ಯಪೂರ್ಣವಾಗಿದೆ.
ಬಹುಶಃ ಆಗಮೋಕ್ತ ವೀರಭದ್ರ ಶಿಲ್ಪದ ರುಂಡಮಾಲಾ ಲಕ್ಷಣವು ಕಾಲಾಂತರದಲ್ಲಿ ಮೂರ್ತಿಶಿಲ್ಪಗಳಲ್ಲಿ ವಜ್ರಹಾರದ ರೂಪಕ್ಕೆ ಪ್ರೇರಣೆಯಾದಂತೆ ಕಾಣುತ್ತದೆ. ಭೋಗನಂದಿದೇಗುಲದ, ತಿರುವಣ್ಣಾಮಲೆ ಇತ್ಯಾದಿ ಕಡೆಯ ವೀರಭದ್ರ ಶಿಲ್ಪಗಳು ಇದಕ್ಕೆ ಸಾಕ್ಷಿ ಇನಿಸುವಂತಿವೆ. ಪ್ರಳಯಕಾಲದ ವೀರಭದ್ರನ ಗುಡಿಯಲ್ಲಿರುವ ಹನುಮಂತನ ಶಿಲ್ಪದಲ್ಲಿ ವಜ್ರಹಾರ ಭುಜದಿಂದ ಇಳಿವ ಬದಲು ಎಡಸೊಂಟದಿಂದ ಬಲಸೊಂಟದವರೆಗೆ ದೀರ್ಘ ವೃತ್ತದಲ್ಲಿರುವುದೂ ಇದಕ್ಕೊಂದು ಸಾಕ್ಷಿ ಎನಿಸಿ, ಆ ಗುಡಿಯ ವೀರಭದ್ರನ ಶಿಲ್ಪದ, ಲಕ್ಷಣಕ್ಕೆ ಪೂರಕವೆನಿಸಿದೆ. ಈ ಪ್ರಳಯ ಕಾಲದ ವೀರಭದ್ರನ ಸ್ವರೂಪ, ನಟರಾಜನ ವಿಶ್ವವ್ಯಾಪಕತೆಯಂತೆ, ವಿರಾಟ್ ಸ್ವರೂಪ ವಿದ್ದಂತೆ, ಒಂದು ಬಗೆಯಲ್ಲಿ ವಿಶ್ವರೂಪದಶನದ ಕಲ್ಪನೆಯನ್ನೂ ನೀಡುವಂತದೆ.
ವಡಬುಗಳಲ್ಲಿ ಬರುವ ಆಯುಧದ ಬಗೆಗಳಿಗೆ ಈ ವೀರಭದ್ರ ಮೂರ್ತಿಯ ಆಯುಧಗಳು ಒಂದು ಉದಾಹರಣೆ ಎನಿಸುತ್ತವೆ. ಶಾಸ್ತ್ರದ ಚೌಕಟ್ಟಿನ ಜೊತೆಗೆ ಜಾನಪದ ಅಳವಡಿಕೆಯೂ ಇಲ್ಲಿ ಕಾಣುವಂತಿದೆ. ಆಯುಧಗಳ ಕುರಿತ ಸಾಂಸ್ಕೃತಿಕ ಆಧ್ಯಯನಕ್ಕೆ ಈ ವರ್ಣನೆ ಸಾಕ್ಷಿಯವಾಗಿ ಅನುಕೂಲವೆನಿಸುಸುತ್ತದೆ. ಒಂದು ರೀತಿ ಕಬ್ಬಿಣಯುಗದ ವಿಕಾಸವನ್ನು ನೆನಪು ತರಲೂ ಸಾಕು. ದಕ್ಷಯಜ್ಞ ನಾಶಕ್ಕೆ ಎಷ್ಟೆಲ್ಲ ಉಗ್ರರೂಪದಲ್ಲಿ ವೀರಭದ್ರನಿದ್ದ ಎಂದರೆ ದಕ್ಷನ ಪರವಿದ್ದವರ ಹಾಗು ಯಜ್ಞರಕ್ಷಣಾ ಸೈನ್ಯ ವ್ಯವಸ್ಥೆಯ ಚಿತ್ರವನ್ನು ಪರಿಭಾವಿಸಲನುಕೂಲವಾಗುತ್ತದೆ.
ಇನ್ನು ಈ ವೀರಭದ್ರನ ಶಿಲಾ ಪ್ರಭಾವಳಿಯ ನೆತ್ತಿಯಲ್ಲಿ ಸಿಂಹಲಲಾಟ, ಬಲಗಾಲು ಬದಿಗೆ, ಬಾಗಿದ ಕೋಡುಗಳ ಗಂಡು ಕುರಿದಲೆಯ ದಕ್ಷ, ಸ್ಥಾನದ ಪ್ರಣಾಮ ಭಂಗಿಯಲ್ಲಿ ನೆಟ್ಟಗೆ ನಿಂತಿದ್ದಾನೆ. ವಡಬು, ವಚನಗಳಲ್ಲಿ ಕುರಿದಲೆಯ 'ದಕ್ಷನೆಂದಿರುವಲ್ಲಿ ಪ್ರಸ್ತುತ ಶಿಲ್ಪ ಜನಪದ ಹಾಗು ಆಗಮೊಕ್ತ ಶಿಲ್ಪ ಲಕ್ಷಣವನ್ನು ಹೊಂದಿದೆ ಎಂದಾಗುತ್ತದೆ. ಇದು ಇಕ್ಕೇರಿಯ ೩೨ ಹಸ್ತಗಳ ಅಘೋರೇಶ್ವರ ಶಿಲ್ಪವನ್ನು ನೆನಪಿಗೆ ತರುತ್ತದೆ. ಹೀಗೆಯೇ ಬೀದರ್ ಜಿಲ್ಲೆ ಸಂಧಾಳ ವೀರಭದ್ರನಲ್ಲಿ ೩೨ ಭುಜಗಳ ಆಯುಧಧಾರಣೆ ಕಾಣುತ್ತದೆ. ಆದರೆ ಬಲಮುಗ್ಧ ಅಭಯ ಹಸ್ತವಾಗಿದೆ. ಆದರೆ ಅದು ಒರಟು ಶಿಲೆಯ ಕೆತ್ತನೆಯಾಗಿದೆ.
#ಮಾಹಿತಿ_ಕೃಪೆ:- ಮಹಾ ವೀರಭದ್ರ, ಡಾll ಎಂ.ಜಿ. ನಾಗರಾಜ್
No comments:
Post a Comment
If you have any doubts. please let me know...