July 21, 2025

ಋಗ್ವೇದ ಪಾರಾಯಣ ಋಗ್ವೇದ ಮಂಡಲ - ೨ ಸೂಕ್ತ- ೧

ಋಗ್ವೇದ ಮಂಡಲ - ೨
ಸೂಕ್ತ- ೧
(1-16) ಷೋಡಶರ್ಚಸ್ಯಾಸ್ಯ ಸೂಕ್ತಸ್ಯ ಶೌನಕೋ ಗೃತ್ಸಮದ ಋಷಿಃ ಅಗ್ನಿರ್ದೇವತಾ,ಜಗತೀ ಛಂದಃ

ತ್ವಮ॑ಗ್ನೇ॒ ದ್ಯುಭಿ॒ಸ್ತ್ವಮಾ᳚ಶುಶು॒ಕ್ಷಣಿ॒ಸ್ತ್ವಮ॒ದ್ಭ್ಯಸ್ತ್ವಮಶ್ಮ॑ನ॒ಸ್ಪರಿ॑ |
ತ್ವಂ ವನೇ᳚ಭ್ಯ॒ಸ್ತ್ವಮೋಷ॑ಧೀಭ್ಯ॒ಸ್ತ್ವಂ ನೃ॒ಣಾಂ ನೃ॑ಪತೇ ಜಾಯಸೇ॒ ಶುಚಿಃ॑ || 2.1.1
ತವಾ᳚ಗ್ನೇ ಹೋ॒ತ್ರಂ ತವ॑ ಪೋ॒ತ್ರಮೃ॒ತ್ವಿಯಂ॒ ತವ॑ ನೇ॒ಷ್ಟ್ರಂ ತ್ವಮ॒ಗ್ನಿದೃ॑ತಾಯ॒ತಃ |
ತವ॑ ಪ್ರಶಾ॒ಸ್ತ್ರಂ ತ್ವಮ॑ಧ್ವರೀಯಸಿ ಬ್ರ॒ಹ್ಮಾ ಚಾಸಿ॑ ಗೃ॒ಹಪ॑ತಿಶ್ಚ ನೋ॒ ದಮೇ᳚ || 2.1.2
ತ್ವಮ॑ಗ್ನ॒ ಇಂದ್ರೋ᳚ ವೃಷ॒ಭಃ ಸ॒ತಾಮ॑ಸಿ॒ ತ್ವಂ ವಿಷ್ಣು॑ರುರುಗಾ॒ಯೋ ನ॑ಮ॒ಸ್ಯಃ॑ |
ತ್ವಂ ಬ್ರ॒ಹ್ಮಾ ರ॑ಯಿ॒ವಿದ್ಬ್ರ᳚ಹ್ಮಣಸ್ಪತೇ॒ ತ್ವಂ ವಿ॑ಧರ್ತಃ ಸಚಸೇ॒ ಪುರಂ᳚ಧ್ಯಾ || 2.1.3
ತ್ವಮ॑ಗ್ನೇ॒ ರಾಜಾ॒ ವರು॑ಣೋ ಧೃ॒ತವ್ರ॑ತ॒ಸ್ತ್ವಂ ಮಿ॒ತ್ರೋ ಭ॑ವಸಿ ದ॒ಸ್ಮ ಈಡ್ಯಃ॑ |
ತ್ವಮ᳚ರ್ಯ॒ಮಾ ಸತ್ಪ॑ತಿ॒ರ್ಯಸ್ಯ॑ ಸಂ॒ಭುಜಂ॒ ತ್ವಮಂಶೋ᳚ ವಿ॒ದಥೇ᳚ ದೇವ ಭಾಜ॒ಯುಃ || 2.1.4
ತ್ವಮ॑ಗ್ನೇ॒ ತ್ವಷ್ಟಾ᳚ ವಿಧ॒ತೇ ಸು॒ವೀರ್ಯಂ॒ ತವ॒ ಗ್ನಾವೋ᳚ ಮಿತ್ರಮಹಃ ಸಜಾ॒ತ್ಯ‌ಮ್᳚ |
ತ್ವಮಾ᳚ಶು॒ಹೇಮಾ᳚ ರರಿಷೇ॒ ಸ್ವಶ್ವ್ಯಂ॒ ತ್ವಂ ನ॒ರಾಂ ಶರ್ಧೋ᳚ ಅಸಿ ಪುರೂ॒ವಸುಃ॑ || 2.1.5
ತ್ವಮ॑ಗ್ನೇ ರು॒ದ್ರೋ ಅಸು॑ರೋ ಮ॒ಹೋ ದಿ॒ವಸ್ತ್ವಂ ಶರ್ಧೋ॒ ಮಾರು॑ತಂ ಪೃ॒ಕ್ಷ ಈ᳚ಶಿಷೇ |
ತ್ವಂ ವಾತೈ᳚ರರು॒ಣೈರ್ಯಾ᳚ಸಿ ಶಂಗ॒ಯಸ್ತ್ವಂ ಪೂ॒ಷಾ ವಿ॑ಧ॒ತಃ ಪಾ᳚ಸಿ॒ ನು ತ್ಮನಾ᳚ || 2.1.6
ತ್ವಮ॑ಗ್ನೇ ದ್ರವಿಣೋ॒ದಾ ಅ॑ರಂ॒ಕೃತೇ॒ ತ್ವಂ ದೇ॒ವಃ ಸ॑ವಿ॒ತಾ ರ॑ತ್ನ॒ಧಾ ಅ॑ಸಿ |
ತ್ವಂ ಭಗೋ᳚ ನೃಪತೇ॒ ವಸ್ವ॑ ಈಶಿಷೇ॒ ತ್ವಂ ಪಾ॒ಯುರ್ದಮೇ॒ ಯಸ್ತೇಽವಿ॑ಧತ್ || 2.1.7
ತ್ವಾಮ॑ಗ್ನೇ॒ ದಮ॒ ಆ ವಿ॒ಶ್ಪತಿಂ॒ ವಿಶ॒ಸ್ತ್ವಾಂ ರಾಜಾ᳚ನಂ ಸುವಿ॒ದತ್ರ॑ಮೃಂಜತೇ |
ತ್ವಂ ವಿಶ್ವಾ᳚ನಿ ಸ್ವನೀಕ ಪತ್ಯಸೇ॒ ತ್ವಂ ಸ॒ಹಸ್ರಾ᳚ಣಿ ಶ॒ತಾ ದಶ॒ ಪ್ರತಿ॑ || 2.1.8
ತ್ವಾಮ॑ಗ್ನೇ ಪಿ॒ತರ॑ಮಿ॒ಷ್ಟಿಭಿ॒ರ್ನರ॒ಸ್ತ್ವಾಂ ಭ್ರಾ॒ತ್ರಾಯ॒ ಶಮ್ಯಾ᳚ ತನೂ॒ರುಚ‌ಮ್᳚ |
ತ್ವಂ ಪು॒ತ್ರೋ ಭ॑ವಸಿ॒ ಯಸ್ತೇಽವಿ॑ಧ॒ತ್ತ್ವಂ ಸಖಾ᳚ ಸು॒ಶೇವಃ॑ ಪಾಸ್ಯಾ॒ಧೃಷಃ॑ || 2.1.9
ತ್ವಮ॑ಗ್ನ ಋ॒ಭುರಾ॒ಕೇ ನ॑ಮ॒ಸ್ಯ1॒॑ಸ್ತ್ವಂ ವಾಜ॑ಸ್ಯ ಕ್ಷು॒ಮತೋ᳚ ರಾ॒ಯ ಈ᳚ಶಿಷೇ |
ತ್ವಂ ವಿ ಭಾ॒ಸ್ಯನು॑ ದಕ್ಷಿ ದಾ॒ವನೇ॒ ತ್ವಂ ವಿ॒ಶಿಕ್ಷು॑ರಸಿ ಯ॒ಜ್ಞಮಾ॒ತನಿಃ॑ || 2.1.10
ತ್ವಮ॑ಗ್ನೇ॒ ಅದಿ॑ತಿರ್ದೇವ ದಾ॒ಶುಷೇ॒ ತ್ವಂ ಹೋತ್ರಾ॒ ಭಾರ॑ತೀ ವರ್ಧಸೇ ಗಿ॒ರಾ |
ತ್ವಮಿಳಾ᳚ ಶ॒ತಹಿ॑ಮಾಸಿ॒ ದಕ್ಷ॑ಸೇ॒ ತ್ವಂ ವೃ॑ತ್ರ॒ಹಾ ವ॑ಸುಪತೇ॒ ಸರ॑ಸ್ವತೀ || 2.1.11
ತ್ವಮ॑ಗ್ನೇ॒ ಸುಭೃ॑ತ ಉತ್ತ॒ಮಂ ವಯ॒ಸ್ತವ॑ ಸ್ಪಾ॒ರ್ಹೇ ವರ್ಣ॒ ಆ ಸಂ॒ದೃಶಿ॒ ಶ್ರಿಯಃ॑ |
ತ್ವಂ ವಾಜಃ॑ ಪ್ರ॒ತರ॑ಣೋ ಬೃ॒ಹನ್ನ॑ಸಿ॒ ತ್ವಂ ರ॒ಯಿರ್ಬ॑ಹು॒ಲೋ ವಿ॒ಶ್ವತ॑ಸ್ಪೃ॒ಥುಃ || 2.1.12
ತ್ವಾಮ॑ಗ್ನ ಆದಿ॒ತ್ಯಾಸ॑ ಆ॒ಸ್ಯಂ1॒॑ ತ್ವಾಂ ಜಿ॒ಹ್ವಾಂ ಶುಚ॑ಯಶ್ಚಕ್ರಿರೇ ಕವೇ |
ತ್ವಾಂ ರಾ᳚ತಿ॒ಷಾಚೋ᳚ ಅಧ್ವ॒ರೇಷು॑ ಸಶ್ಚಿರೇ॒ ತ್ವೇ ದೇ॒ವಾ ಹ॒ವಿರ॑ದ॒‌ನ್ತ್ಯಾಹು॑ತ‌ಮ್ || 2.1.13
ತ್ವೇ ಅ॑ಗ್ನೇ॒ ವಿಶ್ವೇ᳚ ಅ॒ಮೃತಾ᳚ಸೋ ಅ॒ದ್ರುಹ॑ ಆ॒ಸಾ ದೇ॒ವಾ ಹ॒ವಿರ॑ದ॒‌ನ್ತ್ಯಾಹು॑ತ‌ಮ್ |
ತ್ವಯಾ॒ ಮರ್ತಾ᳚ಸಃ ಸ್ವದ‌ನ್ತ ಆಸು॒ತಿಂ ತ್ವಂ ಗರ್ಭೋ᳚ ವೀ॒ರುಧಾಂ᳚ ಜಜ್ಞಿಷೇ॒ ಶುಚಿಃ॑ || 2.1.14
ತ್ವಂ ತಾ‌‌ನ್ತ್ಸಂ ಚ॒ ಪ್ರತಿ॑ ಚಾಸಿ ಮ॒ಜ್ಮನಾಗ್ನೇ᳚ ಸುಜಾತ॒ ಪ್ರ ಚ॑ ದೇವ ರಿಚ್ಯಸೇ |
ಪೃ॒ಕ್ಷೋ ಯದತ್ರ॑ ಮಹಿ॒ನಾ ವಿ ತೇ॒ ಭುವ॒ದನು॒ ದ್ಯಾವಾ᳚ಪೃಥಿ॒ವೀ ರೋದ॑ಸೀ ಉ॒ಭೇ || 2.1.15
ಯೇ ಸ್ತೋ॒ತೃಭ್ಯೋ॒ ಗೋಅ॑ಗ್ರಾ॒ಮಶ್ವ॑ಪೇಶಸ॒ಮಗ್ನೇ᳚ ರಾ॒ತಿಮು॑ಪಸೃ॒ಜ‌ನ್ತಿ॑ ಸೂ॒ರಯಃ॑ |
ಅ॒ಸ್ಮಾಂಚ॒ ತಾಁಶ್ಚ॒ ಪ್ರ ಹಿ ನೇಷಿ॒ ವಸ್ಯ॒ ಆ ಬೃ॒ಹದ್ವ॑ದೇಮ ವಿ॒ದಥೇ᳚ ಸು॒ವೀರಾಃ᳚ || 
🙏 ಜಂಗಮಾಮೃತ

July 11, 2025

Bloodstone Bracelet

Bloodstone
A bloodstone bracelet is a piece of jewelry crafted with beads made from bloodstone, also known as heliotrope. This striking gemstone features a dark green base with vibrant red spots that are said to resemble drops of blood. Bloodstone has been valued for centuries for its unique beauty and its reputed metaphysical properties.

Here's a breakdown of its key aspects:

CharacteristicsAppearance: Deep green with red speckles, variations can occur with dark blue or brown undertones.
Composition: A variety of chalcedony, a cryptocrystalline form of quartz, with red inclusions of hematite (iron oxide).
Hardness: 6.5–7 on the Mohs scale, making it relatively durable.
Luster: Vitreous or waxy.
Transparency: Typically opaque.

Meaning and symbolismAncient Significance:
 Valued by ancient civilizations like the Babylonians, Greeks, and Romans, who used it in talismans and amulets for protection and healing.
"Martyr's Stone": In medieval Europe, the red spots were associated with the blood of Christ, giving it religious significance.
Symbol of Courage & Vitality: Linked to courage, strength, and vitality, it's considered a grounding and balancing stone.
Zodiac Association: Traditionally associated with the zodiac sign Aries.
Planetary Influence: Associated with the planet Mars, known for energy, strength, and courage.

Purported benefits
Many believe that wearing a bloodstone bracelet offers various benefits:

Physical
Bloodstone is believed to help with blood purification and circulation, boost the immune system, and increase vitality and endurance.

Emotional and mental
It may promote emotional balance, reduce stress, and instill courage and strength. Some also believe it enhances focus and decision-making.

Spiritual
Bloodstone is associated with grounding and protection. It is also linked to the Root and Heart Chakras and may enhance intuition and creativity. It is sometimes used as a protective talisman.

Usage
Bloodstone bracelets can be worn for their purported energizing, healing, and grounding properties, sometimes with specific hands recommended for absorbing or integrating energies. It can also be used in meditation to connect with the Root Chakra or combined with affirmations. Placing bloodstone in a space is thought to promote protection and grounding.

Care
To cleanse bloodstone, you can rinse it under water or place it in salt water or soil. It can be recharged by placing it under moonlight or sunlight, or on a Selenite plate or crystal cluster.
It's important to remember that many of these benefits are based on anecdotal evidence and traditional beliefs. Individual experiences with crystals can vary, and it's essential to approach them with an open mind.



July 9, 2025

ಗುರುಪೂರ್ಣಿಮ ಮಹತ್ವ

ಗುರುಪೂರ್ಣಿಮೆ ಎಂದರೇನು?
ಗುರು,ಸದ್ಗುರು,ಜಗದ್ಗುರುವನ್ನು ಸ್ಮರಿಸಿ, ಧ್ಯಾನಿಸಿ, ಪೂಜಿಸಿ ಗುರುವಂದನೆಯನ್ನು ಮಾಡುವುದೇ ಗುರುಪೂರ್ಣಿಮೆ.
ಪೂರ್ಣಿಮೆಯ ದಿವಸ (ಗ್ರೀಷ್ಮ ಋತು ಆಶಾಡ ಮಾಸದ ಶುದ್ಧ ಪೂರ್ಣಿಮೆ ದೇವಾನು ದೇವತೆಗಳು ತಮ್ಮ ಗುರುಗಳನ್ನು ಪೂಜಿಸುವ ದಿವಸ, 
ಉದಾಹರಣೆಗೆ ಶ್ರೀರಾಮನು ವಿಶ್ವಾಮಿತ್ರರನ್ನು, ಶ್ರೀಕೃಷ್ಣನು ಸಾಂದೀಪಿನಿಯವರನ್ನು, ಶ್ರೀವಿಷ್ಣುವು ಮೃಗು ಮಹರ್ಷಿಗಳನ್ನು ದೇವಾನು ದೇವತೆಗಳು ಬೃಹಸ್ಪತಿಗಳನ್ನು ಪೂಜಿಸುತ್ತಾರೆ, ಆ ದಿವಸ ವ್ಯಾಸಪೂರ್ಣಮಿ ಅಥವಾ ಗುರುಪೂರ್ಣಿಮಿ.

ಗುರುಪೂರ್ಣಿಮ ಮಹತ್ವ
ಗುರುಗಳಿಗೆ ಈ ಕೆಳಕಂಡ ರೀತಿಯಲ್ಲಿ ತಪ್ಪುಮಾಡಿದ್ದರೆ:-
1. ಗುರುಗಳನ್ನು ಬೈದಿದ್ದರೆ ಹಾಗೂ ಗುರುಗಳ ಸ್ಥಾನಮಾನ ಕೀರ್ತಿಗೆ ಕಳಂಕ ತಂದಿದ್ದರೆ,
2. ಗುರುಗಳ ಎದುರುನಿಂತು ಅಥವಾ ಬೇರೆಯವರ ಮುಂದೆ ಅವಮಾನ ಮಾಡಿದ್ದರೆ,
3. ಗುರುಗಳ ವಚನವನ್ನು ಅಗೌರವದಿಂದ ತಿರಸ್ಕಾರ ಮಾಡಿದ್ದರೆ,
4. ಗುರುಗಳ ಬಗ್ಗೆ ಅಪಪ್ರಚಾರಮಾಡಿದ್ದರೆ ಅಥವಾ ಅನುಮಾನದಿಂದ-ಸಂಶಯದಿಂದ ನೋಡಿದ್ದರೆ,
5. ಗುರುಗಳ ಬಗ್ಗೆ ಪರೀಕ್ಷೆ ನಡೆಸಿದ್ದರೆ,
6. ಗುರುಗಳ ಸ್ಥಾನಮಾನಗಳಿಗೆ ಕಳಂಕವನ್ನು ತಂದಿದ್ದರೆ,
7. ಗುರುಗಳ ವಸ್ತ್ರ, ಪುಸ್ತಕ, ಇನ್ನಿತರ ವಸ್ತುಗಳನ್ನು ಕದ್ದಿದ್ದರೆ,
8. ಗುರುಗಳ ಪತ್ನಿ, ಪುತ್ರ, ಪುತ್ರಿಯರನ್ನು ಕಾಮದೃಷ್ಠಿಯಿಂದ ನೋಡಿದ್ದರೆ, ನಿಂದಿಸಿದರೆ,
9. ಗುರುಗಳ ಮನೆಯಲ್ಲಿ ಕಳ್ಳತನಮಾಡಿದ್ದರೆ, ಅನಗತ್ಯ ತರ್ಕವನ್ನು ಮಾಡಿದ್ದರೆ,
10, ಗುರುಗಳ ಅಪ್ಪಣೆಯಿಲ್ಲದೆ ವಿದ್ಯೆ ಕಲಿಸಿದ್ದರೆ-ಮಾರಾಟ ಮಾಡಿದ್ದರೆ
11, ಗುರುಗಳಿಗೆ ದುಃಖಕ್ಕೀಡು ಮಾಡಿದ್ದರೆ,
12, ಗುರುಗಳಿಗೆ ಹೊಡೆದಿದ್ದರೆ, ರಹಸ್ಯ-ಗುಪ್ತ ವಿಚಾರಗಳನ್ನು ಬೇರೆಯವರಿಗೆ ತಿಳಿಸಿದ್ದರೆ,
13. ಗುರುಗಳಿಗೆ ಆಶ್ರಮದಿಂದ ಹೂರ ಹಾಕಿದ್ದರೆ, ಅವರ ಮೃತ್ಯುವಿಗೆ ಕಾರಣವಾಗಿದ್ದರೆ,
14. ಗುರುಗಳ ಕೈಲಿ ನಮಸ್ಕಾರ ಮಾಡಿಸಿಕೂಂಡರೆ, ಕೆಲಸ ಮಾಡಿಸಿಕೂಂಡಿದ್ದರೆ,
15.‌ ಗುರುಗಳಿಗೆ ಎಂಜಲು ತಿನ್ನಿಸಿದ್ದರೆ, ಉಗುಳಿದ್ದರೆ, ಮಾಟ ಮಂತ್ರ ಮಾಡಿಸಿ ತೊಂದರೆ ಕೊಟ್ಟಿದ್ದರೆ,
ಮೇಲ್ಕಂಡ ಯಾವುದೇ ತಪ್ಪುಗಳನ್ನು ಈ ಜನ್ಮ ಅಥವಾ ಹಿಂದಿನ ಜನ್ಮಗಳಲ್ಲಿ ಮಾಡಿದ್ದರೆ ಅಂತಹವರು ಅವಿದ್ಯಾವಂತರಾಗಿ, ಗುರು ಚಾಂಡಾಲದೋಷ  ಸಹಿತರಾಗಿ, ರಾಹು ಚಂಡಾಲ ದೋಷ ಸಹಿತರಾಗಿ ಪ್ರಾಣಿ ಜನ್ಮ ಪಡೆಯುತ್ತಾರೆಂದು ಗರ್ಗ ಸಂಹಿತೆ, ಭವಿಷ್ಯತ್ ಪುರಾಣ, ಶ್ರೀ ದತ್ತಾತ್ರೇಯ ಕಾತ್ಯವೀರ್ಯಾರ್ಜುನ ಸಂವಾದ, ಅವಧೂತ ಗೀತೆ, ಗುರುಗೀತೆ, ಸಿದ್ದನಾಗಾರ್ಜುನ ತಂತ್ರಸಾರ, ಶ್ರೀ ದತ್ತಾತ್ರೇಯ ಸಂಹಿತೆ, ಮತ್ತು ಗರುಡ ಪುರಾಣದಲ್ಲಿ ಉಲ್ಲೇಖವಿದೆ.
ಈ ಎಲ್ಲಾ ದೋಷಗಳನ್ನು ಪರಿಹರಿಸಿಕೊಳ್ಳಲು ಬರುವ ಒಂದು ವಿಶೇಷ ದಿನವೇ ಗುರುಪೂರ್ಣಿಮಿ.

ಗುರು 
ಇಂದಿನ ದಿನಗಳಲ್ಲಿ ಸಾವಿರಾರು ವಿದ್ಯೆಗಳಿವೆ ಅಂತಹ ಸಾವಿರಾರು ವಿದ್ಯೆಗಳಲ್ಲಿ ಬದುಕಲಿಕ್ಕೆ ಕೆಲವಷ್ಟು ವಿದ್ಯೆಗಳನ್ನು ಕಲಿಯಲೇಬೇಕು. ಅಂತಹ ಸಾವಿರಾರು ವಿದ್ಯೆಗಳನ್ನು ಮುಖ್ಯವಾಗಿ ೬೪ ವಿದ್ಯೆ ಎಂದು ಹೇಳುತ್ತಿದ್ದರು ‌ ಆದರೆ ಈ ೬೪ ವಿದ್ಯೆಗಳಿಂದ ಈಗ ಏನೂ ಮಾಡಲಾಗುವುದಿಲ್ಲ ..
ಇರಲಿ ಅಂತಹ ವಿದ್ಯೆಗಳಿಗಲ್ಲಿ ಪರಿಣಿತರಾದ ಗುರುಗಳು
ಉದಾ: ಧನುರ್ವಿದ್ಯೆ ಕಲಿತು ಕೊಳ್ಳುವ ವಿದ್ಯಾರ್ಥಿಗೆ ಆ ವಿದ್ಯೆಯನ್ನು ಕಲಿಸುವ ಗುರು ಅವನಿಗೆ ಸರ್ವಸ್ವ ಆ ಗುರುವೇ ಎಲ್ಲಾ, ಆದರೆ ಮಲ್ಲ ಯುದ್ಧ ಅಥವಾ ಕುದುರೆ ಸಮಾರಿ ಮಾಡಿಸುವ ಗುರು ಧನುರ್ವದ್ಯೆ ಕಲಿಯುವವನಿಗೆ  ಹೇಗೆ ಗುರುವಾದಾನು. ಅಥವಾ ವಾಹನ ಚಾಲಕ ತರಬೇತಿ ನೀಡುವ ಗುರು ಶಾಲೆಯಲ್ಲಿ ಕಲಿಯುವವರಿಗೆ ಹೇಗೆ ಗುರುವಾದಾರು.
ಆಗುವುದಿಲ್ಲ ....

ತಾವು ತರಬೇತಿ ಪಡೆದು ಅಥವಾ ಕಲಿತುಕೊಂಡು  ಇನ್ನೊಬ್ಬರಿಗೆ ತರಬೇತಿ ನೀಡುವ ಎಲ್ಲರೂ ಗೌರವಾನ್ವಿತರೆ ಆದರೂ ಅವರಿಂದ ಪ್ರತ್ಯೇಕ ವಿದ್ಯೆ ಅಥವಾ ವಿದ್ಯೆಗಳನ್ನು ಕಲಿಸುವ ಗುರು ಅಂತಹ ವಿದ್ಯೆಗಳಿಗೆ ಗುರುವಾಗುತ್ತಾರೆ.
ಉದಾ; ಸಮಾಧಿ ತೆಗೆಯುವುದಕ್ಕು ಒಂದು ಲೆಕ್ಕಾಚಾರವಿರುತ್ತದೆ ಜಾಗದ ಆಯ್ಕೆ ಅಳತೆ ಆಳ ಉದ್ದ ಇತ್ಯಾದಿ  ಇಂತಹ ವಿದ್ಯೆಗಳು ಯುವಕರು ಹಿರಿಯರಿಂದ ಹಾಗೆಯೇ ಸಹಾಯ ಮಾಡುತ್ತಾ ಕಲಿಯುತ್ತಾರೆ ..ಅಂದರೆ ಹಿರಿಯರೊಂದಿಗಿನ ಜೀವನೊಡನಾಟದಿಂದ ಬದುಕಿನ ಹಲವಾರು ವಿದ್ಯೆಗಳನ್ನು ಚಿಕ್ಕವಯಸ್ಸಿನ ಸಮಾಜ ಕಲಿಯುತ್ತದೆ. ಅದರಲ್ಲಿ ಅವಶ್ಯಕತೆ ಇದ್ದರೆ ಮಾರ್ಪಾಟು ಮಾಡಿ ಉತ್ತಮವಾಗುವಂತೆ ಮಾಡುತ್ತಾರೆ. ಅದೇ ರೀತಿ ಹೊಸ ಆವಿಷ್ಕಾರ ಮಾಡಿ ತಾವೇ ಸೃಷ್ಟಿಸುತ್ತಾರೆ.
ಉದಾ; ಈಗಿನ ವಾಹನಗಳು, ಸಂಪರ್ಕ ಸಾಧನಗಳು, ಗಣಕ ಯಂತ್ರ ಅಂತರ್ಜಾಲ ಇತ್ಯಾದಿ ...
ಇವುಗಳನ್ನೆಲ್ಲಾ ಉಪಯೋಗ ಮಾಡುವಾಗ ಪ್ರತಿಸಾರಿ ಅವರ ನೆನಪಾಗುತ್ತದೆಯೇ? ಕೆಲಸಾರಿ ನೆನಪಾಗಬಹುದು ಆದರೆ ಎಲ್ಲರೂ ನೆನಪಾಗುವುದಿಲ್ಲ ಅಲ್ಲವೆ!

 ಹೀಗೆ ನಮ್ಮ ಜೀವನದಲ್ಲಿ ಹಲವಾರು ವಿದ್ಯೆಗಳಿಗೆ ಹಲವಾರು ಗುರುಗಳು ಬರುತ್ತಾರೆ. ಅದರಲ್ಲಿ ಯಾವ ವಿದ್ಯೆಯ ಗುರು ಮುಖ್ಯ. ಇದು ಆ ವಿದ್ಯೆಯಾ ವಿದ್ಯೆಗಳನ್ನು ಕಲಿತವರಿಗೆ ಸಂಬಂಧ ಪಟ್ಟಿದ್ದು . ಉದಾ: ಹಲವಾರು ವಿದ್ಯೆಗಳನ್ನು ಕಲಿತವರು ಯಾವುದೊ ಒಂದು ವಿಷಯದಲ್ಲಿ ಅವರ ಸಾಧನೆ ಅಪರಿಮಿತ ಸಾಧನೆ ಆದರೆ ಆಗ ಆ ಸಾಧಕ ತನಗೆ ಆ ನಿರ್ದಿಷ್ಟ ವಿದ್ಯೆಯನ್ನು ಕಳಿಸಿಕೊಟ್ಟ ಗುರುವನ್ನು ಸದಾ ಕಾಲ ನೆನೆಯುತ್ತಾ ಆರಾಧಿಸಲೂ ಬಹುದು. ಇದೇ ಸಾಧಕ ಇತರೆ ಗುರುಗಳನ್ನೂ ಕೂಡ ಮೆಚ್ಚಿಕೊಳ್ಳಬಹುದು ಅದು ಅಂತಹ ವಿದ್ಯೆಯಲ್ಲಿನ ಯಶಸ್ಸನ್ನು ಅವಲಂಬಿಸಿರುತ್ತದೆ.

ಇದೆಲ್ಲಾ ಇಹ ಲೋಕದ ವಿದ್ಯೆಗಳು, ನಮ್ಮ ಜೀವನಕ್ಕೆ ಬೇಕಾದ ನಮ್ಮ ಬದುಕಿನ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕಾದ ವಿದ್ಯೆಗಳು. ಆದರೆ ಇಂತಹ ವಿದ್ಯೆಯ ಅವಕಾಶ ಎಲ್ಲರಿಗೂ ಇರುವುದಿಲ್ಲ. ಕೆಲವರು ಅಂತಹ ವಿದ್ಯೆಯನ್ನು ಕಲಿಸಲು ಹಣ ಪಡೆದು ಕಲಿಸುವರು ಇನ್ನು ಕೆಲವರು ಹಾಗೆಯೇ ಕಲಿಸುವರು. ಹೇಗೋ ಕಲಿತವರ ಜೀವನ ಉಪಯೋಗಿಸಿಕೊಂಡರೆ ಉತ್ತಮವಾಗಬಹುದು.

ಅದೇ ರೀತಿ ಋಣಾತ್ಮಕ ವಿದ್ಯೆಗಳು ಕೂಡ ಇರಬಹುದು  ಉದಾ: ಕಳ್ಳತನ, ಸುಳ್ಳು, ಕೊಲೆ ದರೋಡೆ ಇತ್ಯಾದಿ. ಇವುಗಳಿಗೂ ಗುರುಗಳಿರಬಹುದು ಅವರನ್ನು ಕೂಡ ಅವರ ಶಿಷ್ಯರು ಮೆಚ್ಚಿಕೊಳ್ಳಬಹುದು. ಇದೆಲ್ಲ ಇಹ ಲೋಕಕ್ಕೆ ಬೇಕಾದವು ಆದರೆ ಪರ ಅಂದರೆ ಆಧ್ಯಾತ್ಮಕ್ಕೆ ಅಥವಾ ಆತ್ಮೋನ್ನತಿಗೆ ಗುರು ಬೇಕು. ಹೀಗೆ ವಿದ್ಯೆಗಳು ಅಪಾರ ಹಾಗು ಹೊಸ ಹೊಸ ವಿದ್ಯೆಗಳು ಆವಿಷ್ಕಾರಗಳು ಆಗುತ್ತಿವೆ ಅದೇ ರೀತಿ ಅಪಾರ ಗುರುಗಳು ವಿದ್ಯೆಗಳಿಗೆ ತಕ್ಕಂತೆ. ಗುರುಗಳು ಯೋಗ, ಧ್ಯಾನ, ಸಿದ್ದಿಸಮಾಧಿ ಇತ್ಯಾದಿ ಇತ್ಯಾದಿಗಳನ್ನು ಕಲಿಸಲು ಹಲವಾರು ಗುರುಗಳಿರಬಹುದು ಅಥವಾ ಇವೆಲ್ಲವಕ್ಕು ಒಬ್ಬರೇ ಗುರು ಸಿಗಬಹುದು.

ಧರ್ಮಕ್ಕೊಬ್ಬ ಗುರು ಇದ್ದರೂ ಅಂತಹ ಧರ್ಮ ಗುರು ಹೇಳದ ಬೇರೆ ವಿದ್ಯೆ ಅಥವಾ ವಿದ್ಯೆಗಳನ್ನು ಬೇರೆ ಗುರುಗಳಿಂದ ಕಲಿತರೆ ಅವರೂ ಕೂಡ ಗುರು ಸ್ಥಾನದಲ್ಲಿ ಬರುವುದರಿಂದ ಯಾವುದೇ ಒಂದು ಧರ್ಮ ಅಥವಾ ಧರ್ಮ ಗುರುವಿನಿಂದ ಅಥವಾ  ಇತರೆ ಗುರುವಿನಿಂದ ಪ್ರಪಂಚದ ಎಲ್ಲಾ ವಿದ್ಯೆಗಳನ್ನು ಕಲಿಯಲು ಸಾಧ್ಯವಾಗದೇ ಇರುವುದರಿಂದ ನಾವೆಲ್ಲರೂ ಒಬ್ಬರಿಂದೊಬ್ಬರಿಗೆ ಕಲಿತು ಕಲಿಸಿರುವುದರಿಂದ, ವಿದ್ಯೆಗಳನ್ನು  ಕಲಿಯಲು ಇರುವ ಸಾಮರಸ್ಯ ಜೀವನದ ಪ್ರತಿಹಂತದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಉತ್ಸಾಹ ಸಾಮರಸ್ಯದಿಂದ ಹೋಗುವುದು. ನಾವು ಕಲಿತ ವಿದ್ಯೆಗಳು ಚಿಕ್ಕವರಿಂದ ಹಿಡಿದು ದೊಡ್ಡವರರಿಂದ ಇರಬಹುದು ಯಾವುದೇ ವರ್ಗ ವೃತ್ತಿಯವರಿಂದ ಇರಬಹುದು ಅಂತಹ ಜ್ಞಾನ ವಿದ್ಯೆಗಳನ್ನು ಕಲಿಸಿದ  ಎಲ್ಲಾ ಗುರುಗಳಿಗೆ ವಂದನೆ ಅಭಿನಂದನೆ, ಕೋಟಿ ಪ್ರಣಾಮಗಳು.

July 8, 2025

ವರ್ತಿಕಾ - ಕಲವಿಂಕ - ಗುಬ್ಬಿ

 ಸಂಜೆಯ ಇಳಿ ಹೊತ್ತಿನಲ್ಲಿ ಕೇಳುವ ಹಕ್ಕಿಗಳ ಕಲರವವನ್ನು ಕೇಳಿದೊಡನೆ ಹಿಂದಿನ ಜೀವನಕ್ಕೆ ಕೊಂಡೊಯ್ಯುವುದು ಮಾತ್ರವಲ್ಲ ಪಶು ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು ಕಾಣುವುದೇ ಆನಂದವನ್ನುಂಟು ಮಾಡುತ್ತದೆ. ನನಗೆ ಅತ್ಯಂತ ಪ್ರೀತಿಯ, ಹಾಗೂ ಮಾನವನ ಜೊತೆಗೇ ಜೀವನ ಕಟ್ಟಿಕೊಳ್ಳಲು ಹಂಬಲಿಸುವ ಒಂದು ಪುಟ್ಟ ಹಕ್ಕಿಯ ಕುರಿತಾಗಿ ಈ ಹಿಂದೆ ಬರೆದಿದ್ದರೂ ಪುನಃ ಈ ಸಂದರ್ಭದಲ್ಲಿ ಮೆಲುಕು ಹಾಕುವೆ. . . .

ಗುಬ್ಬಿ ಅತ್ಯಂತ ಪ್ರಾಚೀನ ಪಕ್ಷಿ ಪ್ರಬೇಧ ಎನ್ನಿಸಿಕೊಳ್ಳುತ್ತದೆ. ಗುಬ್ಬಿಯನ್ನು ಇಷ್ಟಪಡದ ಮನುಷ್ಯ ಇಲ್ಲವೇ ಇಲ್ಲವೇನೋ. ಅಷ್ಟು ಮುದ್ದಾದ ಚಿಕ್ಕ ಹಕ್ಕಿ. ಇದು ಒಮ್ಮೆ ಒಂದು ಮನೆಗೆ ಬಂತು ಅಂದರೆ ಅಲ್ಲಿಗೆ ಪುನಃ ಪುನಃ ಬರುವುದು ಅದರ ಗುಣಗಳಲ್ಲೊಂದು. ಇದರ ಪ್ರಾಚೀನತೆಯನ್ನು ಮೊದಲು ಗಮನಿಸೋಣ.
ಋಗ್ವೇದ ೧ನೇ ಮಂಡಲದ ೧೧೬ನೇ ಸೂಕ್ತದಲ್ಲಿ ಇದನ್ನು ವರ್ತಿಕಾ ಎಂದು ಕರೆಯಲಾಗಿದೆ.
ಆಸ್ನೋ ವೃಕಸ್ಯ ವರ್ತಿಕಾಮಭೀಕೇ ಯುವಂ ನರಾ ನಾಸತ್ಯಾ ಮುಮುಕ್ತಂ |
ಉತೋ ಕವಿಂ ಪುರುಭುಜಾ ಯುವಂ ಹ ಕೃಪಮಾಣಮಕೃಣು ತಂ ವಿಚಕ್ಷೇ ||
ಕಣ್ಣುಗಳಾದ ನಾಸತ್ಯರೇ ನೀವಿಬ್ಬರೂ ವೃಕ ವರ್ತಿಕಗಳ ಕಾಳಗದಲ್ಲಿ ವೃಕದ ಬಾಯಿಯಿಂದ ವರ್ತಿಕಾ ಎನ್ನುವ ಹಕ್ಕಿಯನ್ನು ಬಿಡಿಸಿದಿರಿ, ಮತ್ತು ಮಹಾಬಾಹುಗಳಾದ ನೀವೇ ಸ್ತುತಿಸುತ್ತಿರುವ ಕವಿ ಎನ್ನುವ ಅಂಧ ಋಷಿಗೆ ಚೆನ್ನಾಗಿ ನೋಡುವಂತಾಗಲು ಅನುಗ್ರಹಿಸಿದಿರಿ ಎಂದು ಈ ಋಕ್ಕಿನ ಅರ್ಥ.
’ವರ್ತಿಕಾಮಭೀಕೇ’ ಎಂದು ಋಕ್ಕಿನಲ್ಲಿ ಉಕ್ತವಾಗಿದೆ ಇಲ್ಲಿ ಅಭೀಕ ಎನ್ನುವುದು ಸಂಗ್ರಾಮಗಳಲ್ಲಿ ಒಂದನ್ನು ನಿರ್ದೇಶಿಸುತ್ತದೆ. ’ವಿಕರ್ತಕಸ್ಯ ವೃಕಃ’ ಎಂದಾದಾಗ ಅದು ಹಿಂಸಾ ಪ್ರವೃತ್ತಿಯ ನಾಯಿ ಎಂದು ಅರ್ಥೈಸಲಾಗಿದೆ. ’ವಿವಿಧಮಸೌ ಕೃಂತತಿ ತಸ್ಮಾದ್ವೃಕಃ’ ಎಂದು ತನಗೆ ಸಿಕ್ಕಿದ ಆಹಾರವನ್ನು ಕಚ್ಚಿ ಕಚ್ಚಿ ತುಂಡು ತುಂಡು ಮಾಡಿ ತಿನ್ನುವುದರಿಂದ ’ವೃಕ’ ಎಂದರೆ(ವಾಸ್ತವದಲ್ಲಿ ತೋಳ ಎಂದು ಹೇಳಬಹುದಾದರೂ) ಇಲ್ಲಿ ನಾಯಿಯ ಕುರಿತಾಗಿ ಹೇಳಲಾಗಿದೆ.
ಒಂದು ಅರಣ್ಯದಲ್ಲಿ ಒಮ್ಮೆ ನಾಯಿಗೂ ಗುಬ್ಬಚ್ಚಿಗೂ ಜಗಳವಾಗುತ್ತದೆ. ಆಗ ನಾಯಿಯು ಗುಬ್ಬಚ್ಚಿಗಿಂತಲೂ ಬಲಿಷ್ಠನಾಗಿದ್ದರಿಂದ ಗುಬ್ಬಚ್ಚಿಯನ್ನು ತನ್ನ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಇದನ್ನರಿತ ಅಶ್ವಿನೀ ದೇವತೆಗಳು ಗುಬ್ಬಚ್ಚಿಯನ್ನು ನಾಯಿಯ ಬಾಯಿಯಿಂದ ಬಿಡಿಸುತ್ತಾರೆ ಎನ್ನುವುದಾಗಿ ಹೇಳಲಾಗಿದೆ. ಇಲ್ಲಿ ಬೇರೆ ಬೇರೆ ಅರ್ಥವನ್ನು ಹೀಗೂ ಆಗುತ್ತದೆ ಎಂದು ಕೊಟ್ಟಿದ್ದರೂ ಸಹ ಮುಂದಿನ ಋಕ್ಕುಗಳಲ್ಲಿ ಇದೇ ಅರ್ಥವನ್ನು ಗ್ರಹಿಸಿರುವುದರಿಂದ ಇದನ್ನೇ ಆಯ್ದುಕೊಳ್ಳಲಾಗಿದೆ. ’ಪುನಃ ಪುನಃ ವರ್ತತೇ’ ಎಂದರೆ ಒಮ್ಮೆ ಗುಬ್ಬಿ ಬಂದರೆ ಪುನಃ ಪುನಃ ಅದೇ ಜಾಗದಲ್ಲಿ ಕಾಳುಗಳನ್ನು ಹುಡುಕಲು ಬರುತ್ತದೆ ಎನ್ನುವ ಅರ್ಥವೂ ಸಹ ನೀಡಲಾಗಿದೆ.
ನಾನಿಲ್ಲಿ ಗುಬ್ಬಚ್ಚಿಯನ್ನೇ ಇಟ್ಟುಕೊಂಡಿದ್ದೇನೆ. ಅಂದರೆ ಯಾವುದೋ ಒಂದು ಕಾಲದಿಂದ ಇಂದಿನ ತನಕ ತನ್ನ ಸ್ವಭಾವದಲ್ಲಿ ಕಿಂಚಿತ್ತೂ ಬದಲಾಯಿಸಿಕೊಳ್ಳದೇ ಬಂದ ಚಿಕ್ಕ ಸಾಧುಸ್ವಭಾವದ ಸುಂದರ ಹಕ್ಕಿ ಗುಬ್ಬಚ್ಚಿ.
೧. ಗುಬ್ಬಚ್ಚಿಗಳಿಗೆ ಮತ್ತು ಧಾನ್ಯಗಳನ್ನು ತಿಂದು ಜೀವಿಸುವ ಪಕ್ಷಿಗಳಿಗೆ ಆಕಾಶದಲ್ಲಿ ಮೊದಲನೆಯ ಮಾರ್ಗವಿದೆ.
೨. ಕಾಗೆಗಳಿಗೆ ಮತ್ತು ಹಣ್ಣು-ಹಂಪಲುಗಳನ್ನು ತಿಂದು ಜೀವಿಸುವ ಪಕ್ಷಿ ಗಳಿಗೆ ಆಕಾಶದಲ್ಲಿ ಎರಡನೆಯ ಮಾರ್ಗವಿದೆ.
೩. ಭಾಸಪಕ್ಷಿಗಳು, ನೀರುಕೊಕ್ಕರೆಗಳು, ಕಡಲಹದ್ದುಗಳು?ಕಾಗೆಯೇ ಮುಂತಾದುವು ಹೋಗುವ ಮಾರ್ಗ ಕ್ಕಿಂತಲೂ ಮೇಲಿನ ಮೂರನೆಯದಾದ ಆಕಾಶಮಾರ್ಗದಲ್ಲಿ ಹಾರಾಡಬಲ್ಲುವು.
೪. ಭಾಸ ಕ್ರೌಂಚಗಳೇ ಮೊದಲಾದ ಪಕ್ಷಿಗಳು ಹಾರುವ ಮಾರ್ಗಕ್ಕಿಂತಲೂ ಮೇಲಿನ ನಾಲ್ಕನೆಯದಾದ ಆಕಾಶಮಾರ್ಗದಲ್ಲಿ ಗಿಡಗಗಳು ಹಾರಾಡಬಲ್ಲುವು.
೫. ಅದಕ್ಕಿಂತಲೂ ಎತ್ತರವಾದ ಐದನೆಯ ಆಕಾಶಮಾರ್ಗದಲ್ಲಿ ಹದ್ದುಗಳು ಹಾರಾಡಬಲ್ಲುವು.
೬. ಬಲ ವೀರ್ಯಗಳಿಂದಲೂ ರೂಪ ಯೌವನಗಳಿಂದಲೂ ಕೂಡಿರುವ ಹಂಸಪಕ್ಷಿಗಳದ್ದು?ಹದ್ದುಗಳು ಸಂಚರಿಸುವ ಐದನೆಯ ಆಕಾಶ ಮಾರ್ಗಕ್ಕಿಂತಲೂ ಮೇಲಿನ ಆರನೆಯದಾದ ಆಕಾಶಮಾರ್ಗವಾಗಿರುತ್ತದೆ.
೭. ಗರುಡಪಕ್ಷಿಗಳ ಮಾರ್ಗವು ಹಂಸಪಕ್ಷಿಗಳ ಮಾರ್ಗಕ್ಕಿಂತಲೂ ಮೇಲಿನದು. ಎಲ್ಲ ಪಕ್ಷಿಗಳಿಗಿಂತಲೂ ಗರುಡಪಕ್ಷಿಗಳು ಹೆಚ್ಚು ಎತ್ತರದಲ್ಲಿ ಹಾರಾಡಬಲ್ಲುವು. ವಾನರಶ್ರೇಷ್ಠರೇ ನಾವೆಲ್ಲರೂ ಗರುಡ ಮತ್ತು ಅರುಣರ ವಂಶಜರು. ಹೆಚ್ಚು ಎತ್ತರದಲ್ಲಿರುವ ಏಳನೆಯ ಆಕಾಶಮಾರ್ಗದಲ್ಲಿ ಹಾರುವ ಸಾಮರ್ಥ್ಯವಿರುವವರು. ಅಷ್ಟು ಎತ್ತರಕ್ಕೆ ಹಾರಬಲ್ಲ ನಾವು ಬಹಳ ದೂರದೃಷ್ಟಿಯುಳ್ಳವರೂ ಆಗಿದ್ದೇವೆ. ಎನ್ನುವ ಈ ರೀತಿಯ ವರ್ಗೀಕರಣದಲ್ಲಿ ಗುಬ್ಬಚ್ಚಿಗಳು ಅತ್ಯಂತ ಕೆಳಗೆ ಹಾರಾಡಬಲ್ಲವು ಅನ್ನುವುದನ್ನು ಹೇಳಲಾಗಿದೆ. ಎನ್ನುವುದು ಸುಂದರ ಕಾಂಡದ ವಿವರಣೆ.
ಈ ಗುಬ್ಬಿಗಳನ್ನು ಅಮರಕೋಶದಲ್ಲಿ ಕಲವಿಂಕಃ ಎನ್ನುವುದಾಗಿ ಕರೆಯಲಾಗಿದೆ. ಧಾನ್ಯಗಳನ್ನು ಚಟ್ ಎಂದು ಒಡೆದು ತಿನ್ನುವುದರಿಂದ ಇದನ್ನು ಚಟಕ ಎನ್ನುವುದಾಗಿ ಕರೆಯಲಾಗುತ್ತದೆ ಎನ್ನುವುದು ವಾಚಸ್ಪತ್ಯದ ಅಭಿಪ್ರಾಯ. ಇನ್ನು ಕನ್ನಡ ಸಾಹಿತ್ಯದಲ್ಲಿಯಂತೂ ಗುಬ್ಬಚ್ಚಿಗಳು ಹಾಸುಹೊಕ್ಕಾಗಿವೆ.
ಗುಬ್ಬಚ್ಚಿಗಳ ದೇಹಕ್ಕೆ ಸರಿಯಾದ ಕಾಲುಗಳಿಲ್ಲ. ಕಾಲುಗಳಲ್ಲಿ ದೇಹವನ್ನು ಹೊತ್ತು ಓಡಲಿಕ್ಕೆ ಸಾಮರ್ಥ್ಯ ಸಾಲದು ಆದುದರಿಂದಲೆ ಅವು ನೆಗೆಯುತ್ತಲೇ ಕಾಳುಗಳನ್ನು ತಿನ್ನುತ್ತವೆ. ಒಮ್ಮೆ ಒಂದು ಕಡೆ ಬಂತೆಂದರೆ ಆಗಾಗ ಅಲ್ಲಿ ಬರುವುದು ಅವುಗಳ ಅಭ್ಯಾಸ. ಗುಬ್ಬಚ್ಚಿ ಒಂದೇ ಎಲ್ಲಿಯೂ ಇರುವುದಿಲ್ಲ ಎರಡೆರಡು ಇರುತ್ತವೆ ಗುಬ್ಬಚ್ಚಿ ಮೊಟ್ಟೆ ಇಟ್ಟಾಗ ಗಂಡು ಗುಬ್ಬಿ ಕಾವಲುಗಾರನಾಗಿ ಹೊರಗೆ ಕುಳಿತಿರುತ್ತದೆ. ಇದು ಜನರ ಮಧ್ಯೆ ವಾಸಿಸಬಯಸುತ್ತದೆ.
ಇಂತಹ ಗುಬ್ಬಿ ಅದೆಷ್ಟೋ ಸಹಸ್ರ ವರ್ಷಗಳಷ್ಟು ಹಿಂದೆಯೂ ವರ್ತಿಕ ಎನ್ನುವ ಹೆಸರಿನಿಂದ ಕಲವಿಂಕವಾಗಿತ್ತು ಎಂದರೆ ಆಶ್ಚರ್ಯ ಮತ್ತು ಅದನ್ನು ಉಳಿಸಿಕೊಂಡರೆ ಅದೇ ನಮ್ಮ ಭಾಗ್ಯ.
ಮೂಲ: ಸದ್ಯೋಜಾತ ಭಟ್

ಗುರುಪೂರ್ಣಿಮೆಯಂದೇ ಶಿಕ್ಷಕರ ದಿನವನ್ನು ಆಚರಿಸಿದರೆ...

ವಾಸ್ತವದಲ್ಲಿ ಶಿಕ್ಷಕರ ದಿನವನ್ನು ಗುರುಪೂರ್ಣಿಮೆಯಂದೇ ಆಚರಿಸಬೇಕಿತ್ತು. ಆದರೆ ಹಾಗಾಗಲೇ ಇಲ್ಲ !

ಹಿಂದೆ ಚೇದಿ ಎನ್ನುವ ಹೆಸರಿನ ರಾಜನೊಬ್ಬನಿದ್ದ. ಆತನಿಗೆ ಕುಶು ಅಥವಾ ಕಶು ಎನ್ನುವ ಮಗನಿದ್ದ. ಚೇದಿ ತನ್ನ ಕಾಲದಲ್ಲಿ ಧಾರ್ಮಿಕನಾಗಿ ಅನೇಕ ಯಾಗಗಳನ್ನು ಮಾಡಿ ಪ್ರಸಿದ್ಧನಾಗಿದ್ದ. ಆತನ ಮಗನೂ ಸಹ ತಂದೆಯಂತೆಯೇ ಧಾರ್ಮಿಕ ಮನೋಭಾವದವನಾಗಿ ಯಜ್ಞವೊಂದನ್ನು ನೆರವೇರಿಸುವ ಸಲುವಾಗಿ ಕಾಣ್ವ ಗೋತ್ರದ ಬ್ರಹ್ಮಾತಿಥಿ ಎನ್ನುವ ಮಹರ್ಷಿಯನ್ನು ಸಂಪರ್ಕಿಸಿ ಯಜ್ಞವನ್ನು ನೆರವೇರಿಸಿಕೊಡಲು ಕೇಳಿಕೊಳ್ಳುತ್ತಾನೆ. ಬ್ರಹ್ಮಾತಿಥಿ ಅದಕ್ಕೆ ಸಮ್ಮತಿಸಿ ರಾಜನಲ್ಲಿ ಬಂದಾಗ, ರಾಜನಲ್ಲಿ ಸಂಪತ್ತುಗಳ ಕೊರತೆ ಕಾಣಿಸುತ್ತದೆ. ಸಂಪತ್ತಿಲ್ಲದೇ ಯಾಗ ಮಾಡಲು ಸಾಧ್ಯವಿಲ್ಲ. ಆಲೋಚಿಸುತ್ತಾನೆ. ಆದರೆ, ರಾಜನಿಗೆ ಧಾರ್ಮಿಕವಾದ ಹುಮ್ಮಸ್ಸು ಮತ್ತು ಮನಸ್ಸಿದೆ. ಆಗ ಬ್ರಹ್ಮಾತಿಥಿ ಇಂದ್ರನನ್ನು ಸ್ತುತಿಸಿ ಕೆಲವು ಋಕ್ಕುಗಳನ್ನು ಸಾಕ್ಷಾತ್ಕರಿಸಿಕೊಂಡು ಇಂದ್ರನಿಂದ ಗೋ ಸಂಪತ್ತನ್ನು ಪಡೆದು ರಾಜನಿಗೆ ಕೊಡುತ್ತಾನೆ. ಯಜ್ಞ ಸಂದರ್ಭದಲ್ಲಿ ದಾನಕ್ಕಾಗಿ ಅಶ್ವಿನೀ ದೇವತೆಗಳನ್ನು ದಾನ ಸ್ವೀಕರಿಸಲು ಬರಬೇಕೆಂದು ಕೇಳಿಕೊಳ್ಳುವ ಭಾಗದಲ್ಲಿ ಅಂದರೆ ಋಗ್ವೇದದ ಎಂಟನೇ ಮಂಡಲದ ೫ನೇ ಸೂಕ್ತದಲ್ಲಿ ಈ ಋಕ್ಕನ್ನು ಮನುಷ್ಯನ ತಿಳುವಳಿಕೆಯ ಸಲುವಾಗಿಯೇ ಹೇಳುತ್ತಾನೆ.
ತಾ ಮೇ ಅಶ್ವಿನಾ ಸನೀನಾಂ ವಿದ್ಯಾತಂ ನವಾನಾಂ |
ಅಂದರೆ ಇಲ್ಲಿ ’ವಿದ್ಯಾತಂ’ ಎನ್ನುವುದು ತಿಳುವಳಿಕೆ ಅಥವಾ ಜ್ಞಾನದ ಕುರಿತಾಗಿ ಹೇಳಿರುವುದು. ವಿದ್ಯೆ ಎನ್ನುವುದು ನಮಗೆ ಕೊಡುವ ಜ್ಞಾನ. ಈ ಜ್ಞಾನವನ್ನು ಕೊಡುವ ವ್ಯವಸ್ಥೆಯೇ ಶಿಕ್ಷಣ. ಈ ಶಿಕ್ಷಣದ ಕುರಿತಾಗಿ ಗಮನಿಸುತ್ತಾ ಸಾಗಿದರೆ ನಮಗೆ ಸಿಗುವುದು ಶಿಷ್ಟ ಎನ್ನುವ ಮೂಲ ಪದ. ನಿಗದಿತವಾದ ಕ್ರಮದಲ್ಲಿ ನಾವು ಏನನ್ನು ಗುರುವಿನಿಂದ ಸ್ವೀಕರಿಸಿ ಕಲಿಯುತ್ತೇವೆಯೋ ಅದು ಶಿಕ್ಷಣ. ಅದು ಒಂದು ಕ್ರಮಬದ್ಧವಾದ ವ್ಯವಸ್ಥೆ. ಅಲ್ಲಿ ಯಾರು ನಮ್ಮ ಜ್ಞಾನದ ಅಭಿವೃದ್ಧಿಗೆ ಕಾರಣರಾಗುತ್ತಾರೋ ಅವರು ಗುರು ಅಥವಾ ನಿರ್ದೇಶಕ ಎನ್ನಿಸಿಕೊಳ್ಳುತ್ತಾರ. ಹೀಗೆ ಶಿಕ್ಷಣ ಎನ್ನುವುದು ಜ್ಞಾನದ ವ್ಯವಸ್ಥಿತವಾದ ಜೋಡಣೆಯಾಗಿದೆ. ಇದೊಂದು ವ್ಯವಸ್ಥೆ ಅಥವಾ ಪದ್ಧತಿ ಅಂತ ಸಹ ಹೇಳಬಹುದು.
ಅದೇನೇ ಇರಲಿ, ಶಿಕ್ಷಣ ಪದ್ಧತಿಯು ಪ್ರಾಚೀನಕಾಲದಿಂದ ಬದಲಾಗುತ್ತ ಬಂದಿದೆ. ಮೊದಲಿಗೆ ಮೌಖಿಕ ಪಾಠಗಳಿದ್ದವು ಗುರುಕುಲದಲ್ಲಿದ್ದು ಸ್ನಾತಕನಾಗಿ ತಾನು ಸಮಾವರ್ತನವನ್ನು ಪೂರೈಸುವ ಹೊತ್ತಿಗೆ ಅಗಾಧವಾದ ಜ್ಞಾನ ಸಂಪಾದನೆ ಮಾಡಿರುತ್ತಿದ್ದ ಎನ್ನುವುದು ಋಗ್ವೇದದ ಹತ್ತನೇ ಮಂಡಲದಿಂದ ತಿಳಿದು ಬರುತ್ತದೆ.
ಇನ್ನು ಪುರಾಣಕ್ಕೆ ಬಂದಾಗ ಗುರುವಿನ ಪ್ರತಿಬಿಂಬದೆದುರು ಅಭ್ಯಾಸ ಮಾಡಿದ ಏಕಲವ್ಯನ ಕಥೆ ಸ್ಪಷ್ಟವಾಗಿ ಗುರುವಿನ ಅವಶ್ಯಕತೆ ಮತ್ತು ಶಿಸ್ತುಬದ್ಧ ಶಿಕ್ಷಣಬೇಕು ಅನ್ನುವುದನ್ನು ತೊರಿಸಿಕೊಡುತ್ತದೆ. ಮಹಾಭಾರತದಲ್ಲಿ ಬರುವ ದೌಮ್ಯರ ಪ್ರಸಂಗದಲ್ಲಿ ಅವರು ಮೂವರು ಶಿಷ್ಯರನ್ನು ಪರೀಕ್ಷಿಸಿ ಅವರಿಗೆ ವಿದ್ಯೆಯನ್ನು ಕೊಡುವುದು ಗಮನಿಸಿದರೆ ಇಂದು ಅನೇಕ ವಿದ್ಯಾ ಸಂಸ್ಥೆಗಳಲ್ಲಿರುವ ಪ್ರವೇಶ ಪರೀಕ್ಷೆ ನೆನಪಿಗೆ ಬರುತ್ತದೆ. ದೌಮ್ಯರಲ್ಲಿದ್ದ ಒಬ್ಬ ಬಾಲಕ ನೀರಿನ ಬದುವನ್ನು ಕಟ್ಟಿ ನೀರಾವರಿ ವ್ಯವಸ್ಥೆಗೆ ಕಾಯಕಲ್ಪ ಮಾಡಿದ. ಆತನೇ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಟ್ಟ ಮೊದಲಿಗನಾಗಿದ್ದರಿಂದ ಅವನಿಗೆ ಉದ್ದಾಲಕ ಎನ್ನುವ ಹೆಸರು ಹಾಗೇ ಸ್ಥಾಯಿಯಾಗುತ್ತದೆ. ಹೀಗೇ ಋಷಿಗಳೆಲ್ಲ ಹಿಂದೆ ಸ್ವಾಧ್ಯಾಯ ಮತ್ತು ಅಧ್ಯಾಪನಗಳೆರಡರಲ್ಲೂ ತೊಡಗಿಸಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಯನದ ಅವಶ್ಯಕತೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಶಿಕ್ಷಣವೆಂದರೆ ಜೀವನ ಧರ್ಮ ತಿಳಿಸಿಕೊಡುವುದಾಗಿತ್ತು. ಇವೆಲ್ಲವೂ ಪುರಾಣ ಮತ್ತು ವೇದಗಳ ವಿಷಯವಾದರೆ ಇನ್ನು ಇತಿಹಾಸಕ್ಕೆ ಬಂದರೆ . . . . .
ನಾಲಂದಾ ಮತ್ತು ತಕ್ಷಶಿಲಾ ಹೆಸರನ್ನು ಮಾತ್ರ ಉಳಿಸಿಕೊಂಡಿದೆ. ಆದರೆ ಕಾಶಿ ಮತ್ತು ಉಜ್ಜಯಿನಿ ಇಂದಿಗೂ ಜ್ಞಾನ ಮತ್ತು ಶ್ರದ್ಧೆಯ ಕೇಂದ್ರವಾಗಿವೆ. ಇದೆಲ್ಲವನ್ನೂ ಗಮನಿಸಿದರೆ ನಾವು ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕಿತ್ತು !!!
ತಸ್ಮೈ ಶ್ರೀ_ಗುರವೇ ನಮಃ
ಮೂಲ: ಸದ್ಯೋಜಾತ ಭಟ್