September 27, 2020

ರೇಣುಕಾಕವಚಂ

 ರೇಣುಕಾಕವಚಂ ಭೈರವರುದ್ರಯಾಮಾಲೇ


ಶ್ರೀ ದೇವ್ಯುವಾಚ .

ಜಮದಗ್ನಿಪ್ರಿಯಾಂ ದೇವೀಂ ರೇಣುಕಾಮೇಕಮಾತರಂ
ಸರ್ವಾರಂಭೇ ಪ್ರಸೀದ ತ್ವಂ ನಮಾಮಿ ಕುಲದೇವತಾಂ .
ಅಶಕ್ತಾನಾಂ ಪ್ರಕಾರೋ ವೈ ಕಥ್ಯತಾಂ ಮಮ ಶಂಕರ 
ಪುರಶ್ಚರಣಕಾಲೇಷು ಕಾ ವಾ ಕಾರ್ಯಾ ಕ್ರಿಯಾಪರಾ ..

ಶ್ರೀ ಶಂಕರ ಉವಾಚ .

ವಿನಾ ಜಪಂ ವಿನಾ ದಾನಂ ವಿನಾ ಹೋಮಂ ಮಹೇಶ್ವರಿ .
ರೇಣುಕಾ ಮಂತ್ರಸಿದ್ಧಿಸ್ಯಾನ್ನಿತ್ಯಂ ಕವಚಪಾಠತಃ ..

ತ್ರೈಲೋಕ್ಯವಿಜಯಂ ನಾಮ ಕವಚಂ ಪರಮಾದ್ಭುತಂ .
ಸರ್ವಸಿದ್ಧಿಕರಂ ಲೋಕೇ ಸರ್ವರಾಜವಶಂಕರಂ ..

ಡಾಕಿನೀ-ಭೂತವೇತಾಲ-ಬ್ರಹ್ಮರಾಕ್ಷಸ-ನಾಶನಂ .
ಪುರಾ ದೇವಾಸುರೇ ಯುಧ್ದೇ ಮಾಹಿಷೇ ಲೋಕೇ ವಿಗ್ರಹೇ ..

ಬ್ರಹ್ಮಣಾ ನಿರ್ಮಿತಾ ರಕ್ಷಾ ಸಾಧಕಾನಾಂ ಸುಖಾಯ ಚ .
ಮಂತ್ರವೀರ್ಯಂ ಸಮೋಪೇತಂ ಭೂತಾಪಸ್ಮಾರ-ನಾಶನಂ ..

ದೇವೈರ್ದೇವಸ್ಯ ವಿಜಯೇ ಸಿದ್ಧೇಃ ಖೇಚರ-ಸಿಧ್ದಯೇ .
ದಿವಾ ರಾತ್ರಮಧೀತಂ ಸ್ಯಾತ್ ರೇಣುಕಾ ಕವಚಂ ಪ್ರಿಯೇ ..

ವನೇ ರಾಜಗೃಹೇ ಯುದ್ಧೇ ಬ್ರಹ್ಮರಾಕ್ಷಸಸಂಕುಲೇ .
ಬಂಧನೇ ಗಮನೇ ಚೈವ ಕರ್ಮಣಿ ರಾಜಸಂಕಟೇ ..

ಕವಚಸ್ಮರಣಾದೇವ ಸರ್ವಂ ಕಲ್ಯಾಣಮಶ್ನುತೇ .
ರೇಣುಕಾಯಾಃ ಮಹಾದೇವ್ಯಾಃ ಕವಚಂ ಶೃಣು ಪಾರ್ವತಿ ..

ಯಸ್ಯ ಸ್ಮರಣಮಾತ್ರೇಣ ಧರ್ಮಕಾಮಾರ್ಥಭಾಜನಂ .
ರೇಣುಕಾ-ಕವಚಸ್ಯಾಸ್ಯ ಋಷಿರ್ಬ್ರಹ್ಮಾ ವಿಧೀಯತೇ ..

ಛಂದಶ್ಚಿತ್ರಾಹ್ವಯಂ ಪ್ರೋಕ್ತಂ ದೇವತಾ ರೇಣುಕಾ ಸ್ಮೃತಾ .
ಪೃಥ್ವೀ ಬೀಜಂ ರಮಾ ಶಕ್ತಿಃ ಪುರುಷಾರ್ಥ-ಚತುಷ್ಟಯಂ ..

ವಿನಿಯೋಗೋ ಮಹೇಶಾನಿ ತದಾಕಾಲೇ ಪ್ರಕೀರ್ತ್ತಿತಃ ( ಪ್ರಕೀರ್ತಿತಃ ).
ಧ್ಯಾತ್ವಾ ದೇವೀಂ ಮಹಾಮಾಯಾಂ ಜಗನ್ಮಾತರಮಂಬಿಕಾಂ ..

ಪೂರ್ಣಕುಂಭಸಮಾಯುಕ್ತಾಂ ಮುಕ್ತಾಹಾರವಿರಾಜಿತಾಂ .
ಸ್ವರ್ಣಾಲಂಕಾರಸಂಯುಕ್ತಾಂ ಸ್ವರ್ಣಸಿಂಹಾಸನಸ್ಥಿತಾಂ ..

ಮಸ್ತಕೇ ಗುರುಪಾದಾಬ್ಜಂ ಪ್ರಣಮ್ಯ ಕವಚಂ ಪಠೇತ್ .
ಇಂದ್ರೋ ಮಾಂ ರಕ್ಷತು ಪ್ರಾಚ್ಯಾಂ ವಹ್ನೌ ವಹ್ನಿಃ ಸುರೇಶ್ವರಿ ..

ಯಾಮ್ಯಾಂ ಯಮಃ ಸದಾ ಪಾತು ನೈರೃತ್ಯಾಂ ನಿರೃತಿಸ್ತಥಾ .
ಪಶ್ಚಿಮೇ ವರುಣಃ ಪಾತು ವಾಯವ್ಯೇ ವಾಯುದೇವತಾ ..

ಧನಶ್ಚೋತ್ತರೇ ಪಾತು ಈಶಾನ್ಯಾಮೀಶ್ವರೋ ವಿಭುಃ .
ಊರ್ಧ್ವಂ ಬ್ರಹ್ಮಾ ಸದಾ ಪಾತು ಅನಂತೋಽಧಃ ಸದಾಽವತು ..

ಪಂಚಾಂತಕೋ ಮಹೇಂದ್ರಶ್ಚ ವಾಮಕರ್ಣೇಂದುಭೂಷಿತಃ .
ಪ್ರಣವಂ ಪುಟಿತಂ ಕೃತ್ವಾ ತತ್ಕೃತ್ವಾ ಪ್ರಣವಂ ಪುನಃ ..

ಸಮುಚ್ಚಾರ್ಯ ತತೋ ದೇವೀಕವಚಂ ಪ್ರಪಠೇ ತಥಾ .
ಬ್ರಹ್ಮಾಣೀ ಮೇ ಶಿರಃ ಪಾತು ನೇತ್ರೇ ಪಾತು ಮಹೇಶ್ವರೀ ..

ವೈಷ್ಣವೀ ನಾಸಿಕಾಯುಗ್ಮಂ ಕರ್ಣಯೋಃ ಕರ್ಣವಾಸಿನೀ .
ಕಂಠಂ ಮಾತು ಮಹಾಲಕ್ಷ್ಮೀರ್ಹೃದಯಂ ಚಂಡಭೈರವೀ ..

ಬಾಹೂ ಮೇ ಬಗಲಾ ಪಾತು ಕರೌ ಮಹಿಷಮರ್ದಿನೀ .
ಕರಾಂಗುಲಿಷು ಕೇಶೇಷು ನಾಭಿಂ ಮೇ ಚರ್ಚಿಕಾಽವತು ..

ಗುಹ್ಯಂ ಗುಹ್ಯೇಶ್ವರೀ ಪಾತು ಊರೂ ಪಾತು ಮಹಾಮತಿಃ .
ಜಾನುನೀ ಜನನೀ ರಾಮಾ ಗುಲ್ಫಯೋರ್ನಾರಸಿಂಹಿಕಾ ..

ವಸುಂಧರಾ ಸದಾ ಪಾದೌ ಪಾಯಾತ್ಪಾದಾಂಗುಲೀಷು ಚ .
ರೋಮಕೂಪೇ ಮೇದಮಜ್ಜಾ ರಕ್ತ-ಮಾಂಸಾಸ್ಥಿಖಂಡಿಕೇ ..

ರೇಣುಕಾ ಜನನೀ ಪಾತು ಮಹಾಪುರನಿವಾಸಿನೀ  .
ರಕ್ಷಾಹೀನಂ ತು ಯತ್ಸ್ಥಾನಂ ವರ್ಜಿತಂ ಕವಚೇನ ತು ..

ಪೂರ್ವಂ ಬೀಜಂ ಸಮುಚ್ಚಾರ್ಯ ಸಂಪುಟಕ್ರಮಯೋಗತಃ .
ಮುದ್ರಾಂ ವಧ್ವಾ ಮಹೇಶಾನಿ ಗೋಲಂ ನ್ಯಾಸಂ ಸಮಾಚರೇತ್ ..

ಅಸ್ಯ ಶ್ರೀರೇಣುಕಾ-ಕವಚಮಂತ್ರಸ್ಯ ಬ್ರಹ್ಮಾ ಋಷಿಃ ಅನುಷ್ಟುಪ್ ಛಂದಃ ರೇಣುಕಾ ದೇವತಾ
ಲಂ ಬೀಜಂ ರೇಣುಕಾ ಪ್ರೀತ್ಯರ್ಥೇ ಗೋಲನ್ಯಾಸೇ ವಿನಿಯೋಗಃ .

ಓಂ ರಾಂ ಅಂಗುಷ್ಠಾಭ್ಯಾಂ ನಮಃ .
ಓಂ ರೀಂ ತರ್ಜನೀಭ್ಯಾಂ ನಮಃ .
ಓಂ ರೂಂ ಮಧ್ಯಮಾಭ್ಯಾಂ ನಮಃ .
ಓಂ ರೈಂ ಅನಾಮಿಕಾಭ್ಯಾಂ ನಮಃ .
ಓಂ ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ರಃ ಕರತಲಕರಪೃಷ್ಠಾಭ್ಯಾಂ ನಮಃ .

ಏವಂ ಹೃದಯಾದಿನ್ಯಾಸಃ .

ಓಂ ಪಂ ನಮಃ ಮೂರ್ಧ್ನಿ .
ಓಂ ಫಂ ನಮಃ ದಕ್ಷಿಣನೇತ್ರೇ .
ಓಂ ಬಂ ನಮಃ ವಾಮನೇತ್ರೇ .
ಓಂ ಭಂ ನಮಃ ದಕ್ಷಿಣನಾಸಾಪುಟೇ .
ಓಂ ಮಂ ನಮಃ ವಾಮನಾಸಾಪುಟೇ .
ಓಂ ಯಂ ನಮಃ ದಕ್ಷಿಣಕರ್ಣೇ .
ಓಂ ರಂ ನಮಃ ವಾಮಕರ್ಣೇ .
ಓಂ ಲಂ ನಮಃ ಮುಖೇ .
ಓಂ ವಂ ನಮಃ ಗುದೇ .

ಬ್ರಹ್ಮಾಣೀ ಬ್ರಹ್ಮಭಾಗೇ ಚ ಶಿರೋ ಧರಣಿ ಧಾರಿಣೀ .
ರಕ್ಷ ರಕ್ಷ ಮಹೇಶಾನಿ ಸದಾ ಮಾಂ ಪಾಹಿ ಪಾರ್ವತೀ ..

ಭೈರವೀ ತ್ರಿಪುರಾ ಬಾಲಾ ವಜ್ರಾ ಮೇ ತಾರಿಣೀ ಪಱಾ .
ರಕ್ಷ ರಕ್ಷ ಮಹೇಶಾನಿ ಸದಾ ಮಾಂ ಪಾಹಿ ಪಾರ್ವತೀ ..

ಏಷಾ ಮೇಽಙ್ಗಂ ಸದಾ ಪಾತು ಪಾರ್ವತೀ ಹರವಲ್ಲಭಾ .
ಮಹಿಷಾಸುರಸಂಹರ್ತ್ರೀ ವಿಧಾತೃವರದಾಯಿನೀ ..

ಮಸ್ತಕೇ ಪಾತು ಮೇ ನಿತ್ಯಂ ಮಹಾಕಾಲೀ ಪ್ರಸೀದತು .
ಆಕಾಶೇ ತಾಡಕಾ ಪಾತು ಪಾತಾಲೇ ವಹ್ನಿವಾಸಿನೀ ..

ವಾಮದಕ್ಷಿಣಯೋಶ್ಚಾಪಿ ಕಾಲಿಕಾ ಚ ಕರಾಲಿಕಾ .
ಧನುರ್ಬಾಣಧರಾ ಚೈವ ಖಡ್ಗ-ಖಟ್ವಾಂಗ-ಧಾರಿಣೀ ..

ಸರ್ವಾಂಗಂ ಮೇ ಸದಾ ಪಾತು ರೇಣುಕಾ ವರದಾಯಿನೀ .
ರಾಂ ರಾಂ ರಾಂ ರೇಣುಕೇ ಮಾತರ್ಭಾರ್ಗವೋದ್ಧಾರಕಾರಿಣೀ ..

ರಾಜರಾಜಕುಲೋದ್ಭೂತೇ ಸಂಗ್ರಾಮೇ ಶತ್ರುಸಂಕಟೇ .
ಜಲಾಪ್ನಾವ್ಯೇ ವ್ಯಾಘ್ರಭಯೇ ತಥಾ ರಾಜಭಯೇಽಪಿ ಚ .
ಶ್ಮಶಾನೇ ಸಂಕಟೇ ಘೋರೇ ಪಾಹಿ ಮಾಂ ಪರಮೇಶ್ವರಿ ..

ರೂಪಂ ದೇಹಿ ಯಶೋ ದೇಹಿ ದ್ವಿಷತಾಂ ನಾಶಮೇವ ಚ .
ಪ್ರಸಾದಃ ಸ್ಯಾಚ್ಛುಭೋ ಮಾತರ್ವರದಾ ರೇಣುಕೇ ಭವ ..

ಐಂ ಮಹೇಶಿ ಮಹೇಶ್ವರಿ ಚಂಡಿಮೇ
       ಭುಜಂಗಧಾರಿಣಿ ಶಂಖಕಪಾಲಿಕೇ .
ಕನಕ-ಕುಂಡಲ-ಮಂಡಲ-ಭಾಜನೇ 
       ವಪುರಿದಂಚ ಪುನೀಹಿ ಮಹೇಶ್ವರಿ ..

ಇದಂ ಶ್ರೀಕವಚಂ ದೇವ್ಯಾಃ ರೇಣುಕಾಯಾ ಮಹೇಶ್ವರಿ .
ತ್ರಿಕಾಲಂ ಯಃ ಪಠೇನ್ನಿತ್ಯಂ ತಸ್ಯ ಸಿದ್ಧಿಃ ಪ್ರಜಾಯತೇ ..

ಗ್ರಹಣೇಽರ್ಕಸ್ಯ ಚಂದ್ರಸ್ಯ ಶುಚಿಃ ಪೂರ್ವಮುಪೋಷಿತಃ .
ಶತತ್ರಯಾವೃತ್ತಿಪಾಠಾದ್ಮಂತ್ರಸಿದ್ಧಿಃ ಪ್ರಜಾಯತೇ ..

ನದೀಸಂಗಮಮಾಸಾದ್ಯ ನಾಭಿಮಾತ್ರೋದಕಸ್ಥಿತಃ .
ರವಿಮಂಡಲಮುದ್ವೀಕ್ಷ್ಯ ಜಲೇ ತತ್ರ ಸ್ಥಿತಾಂ ಶಿವಾಂ ..

ವಿಚಿಂತ್ಯ ಮಂಡಲೇ ದೇವೀ ಕಾರ್ಯೇ ಸಿದ್ಧಿರ್ಭವೇದ್ಧ್ರುವಂ .
ಘಟಂ ತವ ಪ್ರತಿಷ್ಠಾಪ್ಯ ವಿಭೂತಿಸ್ತತ್ರ ವೇಶಯೇತ್ .
ದೀಪಂ ಸರ್ಷಪತೈಲೇನ ಕವಚಂ ತ್ರಿಃ ಪಠೇತ್ತದಾ ..

ಭೂತಪ್ರೇತ-ಪಿಶಾಚಾಶ್ಚ ಡಾಕಿನ್ಯೋ ಯಾತುಧಾನಿಕಾ .
ಸರ್ವ ತೇ ನಾಶಮಾಯಾಂತಿ ಕವಚಸ್ಮರಣಾತ್ಪ್ರಿಯೇ ..

ಧನಂ ಧಾನ್ಯಂ ಯಶೋ ಮೇಧಾಂ ಯತ್ಕಿಂಚಿನ್ಮನಸೇಪ್ಸಿತಂ .
ಕವಚಸ್ಮರಣಾದೇವ ಸರ್ವಮಾಪ್ನೋತಿ ನಿತ್ಯಶಃ ..

ಇತಿ ಶ್ರೀ ಮಾತೃಸಂಸ್ಥಾನೇ ಭೈರವರುದ್ರಯಾಮಲೇ ರೇಣುಕಾಕಲ್ಪೇ
ಪಂಚಮಂ ಪಟಲಂ ಸಂಪೂರ್ಣಂ ..
 ಮೂಲ: ಭೈರವರುದ್ರಯಾಮಲ ರೇಣುಕಾ ಕಲ್ಪದ ಐದನೇ ಪಟಲ
 ಸಂಗ್ರಹ:ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ ಹೊಸಹಳ್ಳಿ ಹಿರೇಕೆರೂರ 9986175616

ಕಾರ್ಯಸಿದ್ಧಿಯನ್ನು ಹೊಂದಲು ಶಕ್ತಿವಂತವಾದ ಆಂಜನೇಯ ಸ್ವಾಮಿಯ ಶ್ಲೋಕಗಳು



🌺🌺🌺  ಕಾರ್ಯಸಿದ್ಧಿಯನ್ನು ಹೊಂದಲು ಶಕ್ತಿವಂತವಾದ ಆಂಜನೇಯ ಸ್ವಾಮಿಯ ಶ್ಲೋಕಗಳು.🌺🌺🌺


*ಹನುಮಂತನು ಕಾರ್ಯಸಾಧಕನು, ಭಕ್ತಿಯಿಂದ ಹನುಮಂತನ್ನು ಆರಾಧನೆ ಮಾಡುವವರಿಗೆ ಅವರ ಕೋರಿಕೆಗಳು ಖಂಡಿತವಾಗಿ ನೆರವೇರಿತ್ತವೆ. ಭಕ್ತರ ಕೋರಿಕೆಯನ್ನು ಅನುಸರಿಸಿ ಆಂಜನೇಯ ಸ್ವಾಮಿಯ ಶ್ಲೋಕಗಳನ್ನು ಭಕ್ತಿಯಿಂದ ಪಠಿಸುವುದರಿಂದ ತಮ್ಮ ತಮ್ಮ ಕಾರ್ಯ ಸಿದ್ಧಿಯನ್ನು ಸಾಧಿಸಬಹುದು*


 1.-  *ವಿದ್ಯಾ ಪ್ರಾಪ್ತಿಗೆ*


ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |

ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||


 2. :- *ಉದೋಗ ಪ್ರಾಪ್ತಿಗೆ*


ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |

ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ ||


 3.  :- *ಕಾರ್ಯ ಸಾಧನೆಗೆ*


ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |

ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||


 *4.  :- *ಗ್ರಹದೋಷ ನಿವಾರಣೆ*


ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |

ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||


 5. :- *ಆರೋಗ್ಯ* 


ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |

ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||


 6. - *ಸಂತಾನ ಪ್ರಾಪ್ತಿಗೆ* 


ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |

ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||


 7. :- *ವ್ಯಾಪಾರಾಭಿವೃದ್ಧಿಗೆ* 


ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|

ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||


 8. :- *ವಿವಾಹ ಪ್ರಾಪ್ತಿಗೆ* 


ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |

ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||

ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು 

ಪಂಚಪ್ರಾಣಗಳು

 ನಿಮಗಿದು ತಿಳಿದಿರಲಿ 

ಪಂಚಪ್ರಾಣ - ಬಹುಷಃ ನೀವು ಆಗಾಗ ನಿಮ್ಮ ಆತ್ಮೀಯರಿಗೆ ಹೇಳಿರಬಹುದು ನೀವೆಂದರೆ ನನಗೆ ಪಂಚ ಪ್ರಾಣ ವೆಂದು .‌ ಪಂಚಪ್ರಾಣ ಅಂದರೆ ಐದು ಪ್ರಾಣ ಅಂತಲಾ ? ಪ್ರಾಣ ಅಂದರೆ ವಾಯು , ವಾಯು ಇದ್ದರೇನೇ ಈ ಭೌತಿಕ ದೇಹ ಉಸಿರಾಡುವುದು ಅಲ್ವಾ .  ಪಂಚಪ್ರಾಣವೆಂದರೆ ಪಂಚ ವಾಯುಗಳು . 


ಪಂಚ‌ಪ್ರಾಣಗಳು ಎಂದರೇನು ಮತ್ತು ಅದರ ಮಹತ್ವ 


ಮೊದಲು ಪ್ರಾಣಾಅಂದರೆ ಏನು ಅನ್ನುವುದನ್ನು ತಿಳಿಯೋಣ  . 

#ಪ್ರಾಣ ಎಂದರೆ ವಾಯು (ಗಾಳಿ , ಉಸಿರು ), ವಾಯುವೇ ಪ್ರಾಣ ಎಂದು . 


ಈ ವಾಯುವು ಮಾನವನ ದೇಹದಲ್ಲಿ ಐದು ಮುಖ್ಯ ವಾಯುಗಳಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆ ಐದು ಮುಖ್ಯ ಕಾರ್ಯಗಳನ್ನು ಪಂಚ ಪ್ರಾಣಗಳು ಎಂದು ಕರೆಯುತ್ತೇವೆ.


ಪಂಚ ಅಂದರೆ ಐದು

ಪ್ರಾಣ ಎಂದರೆ ವಾಯು

ಜೀವಿಗಳ ದೇಹದಲ್ಲಿ ಇರುವ ಐದು ವಾಯುಗಳೇ ಪಂಚ ಪ್ರಾಣಗಳು . 


1. ಪ್ರಾಣ, 2. ಅಪಾನ, 3. ವ್ಯಾನ, 4. ಉದಾನ, 5. ಸಮಾನ 


1. #ಪ್ರಾಣ ವಾಯುವು  - ಮೂಗಿನ ಮುಖಾಂತರ ಹೃದಯವನ್ನು ಪ್ರವೇಶಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೂ ಇದು ರವಾನೆಯಾಗುತ್ತದೆ. ಅದಕ್ಕೆ ಇದನ್ನು ಪ್ರಾಣ ವಾಯು ಎಂದು ಮತ್ತು ಪಂಚ ಪ್ರಾಣಗಳಲ್ಲಿ ಇದು ಮೊದಲಿನದು.


2. #ಅಪಾನ ವಾಯುವು  - ಇದು ಪಂಚ ಪ್ರಾಣಗಳಲ್ಲಿ ಎರಡೆನೆಯದು. ಶ್ವಾಸಕೋಶ ಮತ್ತು ಇತರೆ ಕೆಲವು ಭಾಗಗಳಲ್ಲಿ ಇರುತ್ತದೆ ಮಲ ಮೂತ್ರಗಳ ವಿಸರ್ಜನೆಗೆ, ಈ ವಾಯುವು ಸಹಾಯವಾಗುತ್ತದೆ. ಇದು ಒಂದು ರೀತಿಯ ತಳ್ಳುವಿಕೆಯ (pushing) ರೀತಿಯಲ್ಲಿ ಸಹಾಯ ಆಗುತ್ತದೆ.ಅಪಾನ ವಾಯುವು  ಕರುಳುಗಳ ಮೂಲಕ ವ್ಯರ್ಜ್ಯವಾದ ಮಲವನ್ನು ಹೊರಕ್ಕೆ ತಳ್ಳುತ್ತದೆ ಅದಕ್ಕೆ ವಾಯು ಆಗಾಗ ಹೊರಬರುವುದು ಮಲ ವಿಸರ್ಜನೆ ಮಾಡುವಾಗ . 


3.#ವ್ಯಾನ ವಾಯುವು - ಇದು ಮೂರನೇ ವಾಯು. ಇದು ಕೈಕಾಲುಗಳ, ದೇಹದ ಭಾಗಗಳು ಅಂದರೆ ದೇಹದ ಭಾಗಗಳ ಸಂಕೋಚನೆ ವ್ಯಾಕೋಚನಗಳಿಗೆ ಸಹಾಯ ಆಗುತ್ತದೆ. 


4. #ಉದಾನ ವಾಯುವು  - ಇದು ನಾಲ್ಕನೇ ವಾಯು. ಇದು ವಾಕ್ಕಿಗೆ ಸಹಕಾರಿಯಾದ ವಾಯುವು. ಹಾಡು ಹಾಡುವಾಗ ಮಾತನಾಡುವುದು ಉದಾನವಾಯುವಿನ ಸಹಾಯದಿಂದ .‌


5. #ಸಮಾನ ವಾಯು - ಇದು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಯಾಗುತ್ತದೆ. ತಿಂದ ಆಹಾರ ಜೀರ್ಣವಾಗಲು ಸಹಾಯಕಾರಿ.


ಇವು ಐದು ರೀತಿಯ ಪ್ರಾಣಗಳು ಅಥವಾ ಪ್ರಾಣಯಾವುಗಳು...

ಇವುಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡವನು ಮಹಾನ್ ಯೋಗಿಯಾಗುತ್ತಾನೆ... ಮತ್ತು ಅತ್ಯಂತ ಆರೋಗ್ಯವಂತ ಮನುಷ್ಯನಾಗಿ ಇರುತ್ತಾನೆ .‌

ಜಂಗಮಾಮೃತ

ಬ್ರಾಹ್ಮಣನೇಕೆ ಮಾಂಸಾಹಾರಿ ?

ವಿದರ್ಭರಾಜನ ಮಗಳಾದ ಲೋಪಮುದ್ರೆಯನ್ನು ವಿವಾಹವಾಗಿ ಹಣದ ಅವಶ್ಯಕತೆ ಉಂಟಾಗಿ ಶ್ರುತರ್ವಾಣ, ಬ್ರಧ್ನಶ್ವ ಮತ್ತು ತ್ರಸದಸ್ಯುವನ್ನು ಕೇಳಿಕೊಳ್ಳುತ್ತಾರೆ. ಆದರೆ ಅವರಲ್ಲಿ ಸಿಗದಾಗ ಅವರೆಲ್ಲರನ್ನೂ ಕೂಡಿಕೊಂಡು ಮಹರ್ಷಿಗಳಾದ ಅಗಸ್ತ್ಯರು ಇಲ್ವಲನ ಬಳಿ ಹೋಗುತ್ತಾರೆ. ಅಗಸ್ತ್ಯರ ಆಗಮನದ ವಿಷಯ ಇಲ್ವಲನಿಗೆ ಗೊತ್ತಾಗಿ, ತನ್ನ ರಾಜಧಾನಿಯ ಕಡೆಗೇ ಬರುತ್ತಿರುವರೆಂಬ ವಾರ್ತೆಯನ್ನು ಕೇಳಿ ಇಲ್ವಲನು ತನ್ನ ಮಂತ್ರಿಗಳನ್ನು ಕೂಡಿಕೊಂಡು ತನ್ನ ರಾಜಧಾನಿಯ ಎಲ್ಲೆಯ ಬಳಿಗೆ ಹೋಗಿ, ಮಹರ್ಷಿಗಳಿಗೂ ರಾಜರಿಗೂ ಆದರದ ಸ್ವಾಗತವನ್ನಿತ್ತು ರಥದಲ್ಲಿ ಕುಳ್ಳಿರಿಸಿ ತನ್ನ ಅರಮನೆಗೆ ಕರೆದುಕೊಂಡು ಬಂದು, ಅತಿಥಿಗಳನ್ನು ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ, ಸುಖಾಸನದಲ್ಲಿ ಕುಳ್ಳಿರಿಸಿದನು. ಯಥಾಪೂರ್ವವಾಗಿ ವಾತಾಪಿಯು ಆಡಾಗಿ ಪರಿವರ್ತಿತನಾದನು. ಆಡಾಗಿದ್ದ ವಾತಾಪಿಯನ್ನು ಕತ್ತರಿಸಿ ಇಲ್ವಲನು ಅದರ ಮಾಂಸವನ್ನು ರಾಜರ ಮತ್ತು ಅಗಸ್ತ್ಯರ ಭೋಜನಕ್ಕೆ ಸಿದ್ಧಪಡಿಸಿದನು. ಆ ಭೋಜನದ ರಹಸ್ಯವನ್ನು ಮೊದಲೇ ತಿಳಿದಿದ್ದರೂ ಅಗಸ್ತ್ಯರನ್ನೂ ತಮ್ಮನ್ನೂ ಇಲ್ವಲನು ಬೇರೆಯವರಂತೆಯೇ ಕೊಲ್ಲಲು ಯತ್ನಿಸುವನೆಂದು ರಾಜರು ಭಾವಿಸಿರಲಿಲ್ಲ. ಆದುದರಿಂದ ಇಲ್ವಲನ ಪ್ರಯತ್ನವನ್ನು ಗಮನಿಸಿದ ಆ ರಾಜರು ಬೇಸರಗೊಳ್ಳುತ್ತಾರೆ. ತಮ್ಮ ಸಾವು ಸನ್ನಿಹಿತವಾಯಿತೆಂದೇ ಭಾವಿಸುತ್ತಾರೆ. ಅವರ ಮುಖಭಾವಗಳಿಂದಲೇ ಅವರ ಹೃದಯಗಳಲ್ಲಿದ್ದ ಸಂಕಟವನ್ನು ತಿಳಿದು, ಅಗಸ್ತ್ಯರು ಹೇಳಿದರು. “ರಾಜರೇ! ನೀವು ದುಃಖಪಡುವ ಕಾರಣವಿಲ್ಲ. ಆಡಿನ ರೂಪನಾದ ವಾತಾಪಿಯ ಮಾಂಸವೆಲ್ಲವನ್ನೂ ನಾನೊಬ್ಬನೇ ತಿನ್ನುತ್ತೇನೆ. ಆದುದರಿಂದ ನೀವು ಈ ವಿಷಯದಲ್ಲಿ ಸ್ವಲ್ಪವೂ ಭೀತರಾಗಬೇಡಿ” ಎನ್ನುತ್ತಾರೆ. ಅನಂತರದಲ್ಲಿ ಅಗಸ್ತ್ಯರಿಗೆ ಇಲ್ವಲನು ನಗು ನಗುತ್ತಾ ಪಕ್ವಮಾಡಿದ ಮಾಂಸವನ್ನು ಬಡಿಸುತ್ತಾನೆ.
ಬಡಿಸಿದ ಮಾಂಸವೆಲ್ಲವನ್ನೂ ಅಗಸ್ತ್ಯರೊಬ್ಬರೇ ತಿಂದುಬಿಟ್ಟರು. ಅಗಸ್ತ್ಯರ ಭೋಜನವು ಮುಗಿದನಂತರ ಇಲ್ವಲನು ಯಥಾಪೂರ್ವವಾಗಿ ‘ವಾತಾಪೇ! ಅತ್ರಾಗಚ್ಛ!’ ಎಂದು ಗಟ್ಟಿಯಾಗಿ ಕೂಗಿದನು. ಇಲ್ವಲನು ಹೀಗೆ ಹೇಳಿದೊಡನೆಯೇ ಅಗಸ್ತ್ಯರು ‘ವಾತಾಪೇ! ಜೀರ್ಣೋಭವ’ ಎಂದು ಹೇಳುತ್ತಾ ಹೊರಗೆ ಬಿಟ್ಟ ಅಪಾನವಾಯುವಿನ ಶಬ್ದವು ಗುಡುಗಿನ ಶಬ್ದವನ್ನೂ ಮೀರಿಸುವುದಾಗಿದ್ದಿತು. ತನ್ನ ತಮ್ಮನು ಎಷ್ಟು ಹೊತ್ತಾದರೂ ಅಗಸ್ತ್ಯರ ಹೊಟ್ಟೆಯನ್ನು ಸೀಳಿ ಹೊರಗೆ ಬಾರದಿರಲು ಇಲ್ವಲನು ಪುನಃ ಪುನಃ ‘ವಾತಾಪೇ! ಅತ್ರಾಗಚ್ಛ!’ ಎಂದು ಕೂಗಿಕೊಂಡನು. ಅವನ ಕೂಗನ್ನು ಕೇಳಿ ಅಗಸ್ತ್ಯರು ಒಮ್ಮೆ ಗಟ್ಟಿಯಾಗಿ ನಕ್ಕು ಹೇಳಿದರು “ಇಲ್ವಲ! ವಾತಾಪಿಯು ಹೇಗೆ ಹೊರಗೆ ಬಂದಾನು? ನಾನಾಗಲೇ ಅವನನ್ನು ಜೀರ್ಣಿಸಿಕೊಂಡಿದ್ದೇನೆ!”
ಇದರ ಮುಂದಿನಭಾಗ ನನಗೆ ಬೇಡ. ಆದರೆ ವೃಥಾ ಇದೊಂದು ಪುರಾಣದಲ್ಲಿ ಬರುವ ಉಪಕಥೆಯನ್ನು ಹಿಡಿದುಕೊಂಡು ಹಿಂದಿನ ಬ್ರಾಹ್ಮಣರು ಮುನಿಗಳೆಲ್ಲರೂ ಮಾಂಸಾಹಾರಿಗಳಾಗಿದ್ದರು ಜೈನ ಮತ್ತು ಬೌದ್ಧ ಮತ ಪ್ರಾಬಲ್ಯಕ್ಕೆ ಬಂದು ಆಮೇಲೆ ಮಾಂಸಾಹಾರ ವರ್ಜ್ಯವಾಯಿತೆಂದು ಬೊಬ್ಬಿಡುವವರಿಗೆ ಈ ಮುಂದಿನ ಇದೇ ಕಥೆ ಉತ್ತರಿಸಬಲ್ಲದು.

ಇದು ಋಗ್ವೇದದ ಒಂದನೇ ಮಂಡಲದಲ್ಲಿನ ೧೮೭ನೇ ಸೂಕ್ತದ ವಿಷಯ.
ಅಗಸ್ತ್ಯ ಮಹರ್ಷಿ ವಿದರ್ಭದ ರಾಜಕುಮಾರಿಯನ್ನು ಮದುವೆಯಾಗುತ್ತಾರೆ. ಆಗ ಅವರಿಗೆ ಹಣದ ಅವಶ್ಯಕತೆ ಉಂಟಾಗುತ್ತದೆ. ಆಗ ಆತ ಸುದಾಸನೇ ಮೊದಲಾದವರಲ್ಲಿ ಹೋದ ನಂತರ ಇಲ್ವಲನಲ್ಲಿ ಹೋಗುತ್ತಾರೆ. ಇಲ್ವಲ ಮೃತ ಸಂಜೀವಿನಿ ವಿದ್ಯೆ ಪಡೆದವನಾಗಿದ್ದ. ಮೊದಲೆಲ್ಲಾ ಧಾರ್ಮಿಕನೂ ಆಗಿದ್ದ. ಆದರೆ ಸಂಜೀವಿನಿ ವಿದ್ಯೆ ಸಿಕ್ಕಿದ ನಂತರ ಅಹಂಕಾರದಿಂದ ಮೆರೆಯುತ್ತಿದ್ದ. ಈ ಇಲ್ವಲನನ್ನು ಸರಿದಾರಿಗೆ ತರುವುದು ಅಗಸ್ತ್ಯರ ಉದ್ದೇಶವಾಗಿತ್ತು. ಇಲ್ವಲನಿಗೆ ವಾತಾಪಿ ಎನ್ನುವ ತಮ್ಮನಿದ್ದ. ಅಗಸ್ತ್ಯರು ಇಲ್ವಲನ ಅರಮನೆಗೆ ಬಂದಾಗ ಇಲ್ವಲ ಬರಮಾಡಿಕೊಳ್ಳುತ್ತಾನೆ. ಹೇಗಾದರೂ ಅಗಸ್ತ್ಯರನ್ನು ಮುಗಿಸಬೇಕೆನ್ನುವುದು ಆತನ ಹವಣಿಕೆಯಾಗಿತ್ತು. ಇಲ್ವಲ ಅಗಸ್ತ್ಯರಲ್ಲಿ ಇಂದು ತನ್ನ ಮನೆಯಲ್ಲಿ ಶ್ರಾದ್ಧ ಆದುದರಿಂದ ಪಿತೃಸ್ಥಾನದಲ್ಲಿದ್ದು ನಮ್ಮನ್ನು ಅನುಗ್ರಹಿಸಿ ಎನ್ನುತ್ತಾನೆ. ಅಗಸ್ತ್ಯರು ಕೆಲವು ಷರತ್ತು ವಿಧಿಸುತ್ತಾರೆ. ಶ್ರಾದ್ಧದಲ್ಲಿ ತಾನು ಏನು ಬಯಸುತ್ತೇನೆಯೋ ಅದನ್ನು ತನಗೆ ತೃಪ್ತಿಯಾಗುವ ತನಕ ಬಡಿಸಬೇಕು ಎನ್ನುತ್ತಾರೆ ಅದಕ್ಕೆ ಇಲ್ವಲ ಒಪ್ಪಿಕೊಂಡು ತನ್ನ ಷರತ್ತು ಮುಂದಿಡುತ್ತಾನೆ. ಶ್ರಾದ್ಧದಲ್ಲಿ ತಮ್ಮ ಹಿಂದಿನವರ ನಿಯಮದಂತೆ ತಾನು ಮಾಂಸಾಹಾರ ಮಾಡಿಸುತ್ತೇನೆ ತಾವು ತಿನ್ನಬೇಕು ಎನ್ನುತ್ತಾನೆ. ಎಲ್ಲವಕ್ಕೂ ಒಪ್ಪಿಕೊಂಡು ಅಗಸ್ತ್ಯರು ಸ್ನಾನಕ್ಕೆ ತೆರಳುತ್ತಾರೆ. ಇತ್ತ ಇಲ್ವಲ ವಾತಾಪಿಯನ್ನು ಕಡಿದು ಕೊಂದು (ವಾತಾಪಿಯನ್ನು ಆಡಿನ ರೂಪತಳೆಯುವಂತೆ ಪರಿವರ್ತಿಸಿ ಅದರಿಂದ ಬೇಯಿಸಲಾಗುತ್ತಿತ್ತು) ಅವನ ಮಾಂಸದಿಂದ ಅಡುಗೆ ತಯಾರಾಗುತ್ತದೆ. ಅಗಸ್ತ್ಯರು ಊಟಕ್ಕೆ ಬಂದಾಗ ಅವರ ಪರಿವಾರವೂ ಊಟಕ್ಕೆ ಬರುತ್ತದೆ. ಊಟಕ್ಕೆ ಕುಳಿತಾಗ ಅವರ ಎದುರು ವಾತಾಪಿಯನ್ನು ಕಡಿದು ಮಾಡಿದ ಮಾಂಸದ ಭಕ್ಷ್ಯವನ್ನು ಇಡುತ್ತಾನೆ. ಆಗ ಅಗಸ್ತ್ಯರು ಅದನ್ನು ಬೇರೊಂದು ಉಪಾಯದಿಂದ ತಿಳಿದು ನರಮಾಂಸ ವಾತಾಪಿಯದ್ದೇ ಎಂದು ತಿಳಿಯುತ್ತಲೇ ಇದನ್ನು ಬೇರೆಯವರು ತಿನ್ನುವಂತಿಲ್ಲ ತಾನು ಮಾತ್ರವೇ ತಿನ್ನುತ್ತೇನೆ ಅನ್ನುತ್ತಾರೆ. ಅದಕ್ಕೆ ಇಲ್ವಲ ಆಕ್ಷೇಪಿಸಿದಾಗ ತಾನು ಆಪೋಷನ ತೆಗೆದುಕೊಂಡು ಏಳುತ್ತೇನೆ ಎನ್ನುತ್ತಾರೆ. ಅಂತೂ ಇಲ್ವಲ ಒಪ್ಪಿಕೊಳ್ಳುತ್ತಾನೆ. ಆಗ ಅಗಸ್ತ್ಯರು

ಯದದೋ ಪಿತೋ ಅಜಗನ್ವಿವಸ್ವ ಪರ್ವತಾನಾಂ |
ಅತ್ರಾಚಿನ್ನೋ ಮಧೋ ಪಿತೋ ರಂ ಭಕ್ಷಾಯ ಗಮ್ಯಾಃ || ಮಾಧುರ್ಯೋಪೇತವಾದ ಎಲೈ ಅನ್ನವೇ ನಮಗೆ ಪುಷ್ಕಲವಾದ ಭೋಜನಕ್ಕೆ ಯೋಗ್ಯವಾಗಿರುವಂತೆ ಮಾಡು ಎಂದು ಬೇಡಿಕೊಳ್ಳುತ್ತಾರೆ. ಆಗ ಮಾಂಸವಿದ್ದದ್ದು ಮಾಷವಾಗಿ ಅದು ಉದ್ದಿನ ವಡೆಯಾಗುತ್ತದೆ. ಯಥೇಷ್ಟವಾಗಿ ಒಂದೂ ಬಿಡದೇ ತಿನ್ನುತ್ತಾರೆ. ಹೀಗೆ ಮಾಂಸವನ್ನು ತಿನ್ನದೇ ಶುದ್ಧ ಶಾಖಾಹಾರಿ ಭೋಜವಾಗಿಯೇ ಎಲ್ಲವೂ ಪರಿವರ್ತಿತವಾಗುತ್ತವೆ. ಎಲ್ಲರ ಭೋಜನವಾದ ಮೇಲೆ ಇಲ್ವಲನಲ್ಲಿ ವಾತಾಪಿಯನ್ನು ಕರೆ ಮಂತ್ರಾಕ್ಷತೆಯನ್ನು ಕೊಡುತ್ತೇನೆ ಎಂದರೆ ವಾತಾಪಿ ಬರಲು ಇವನಲ್ಲಿ ಸಂಜೀವಿನೀ ವಿದ್ಯೆ ಮರೆತಿರುತ್ತದೆ. ಮಾಂಸವೂ ಮಾಷವಾಗಿ ದೇಹ ಸೇರಿದೆ. ಆಗ ಅಗಸ್ತ್ಯರು ಹೇಳುವ ಮಂತ್ರ ಈಗ ನಾನು ಬರೆಯುತ್ತಿರುವ ವಿಷಯಕ್ಕೆ ಅತಿಮುಖ್ಯದ್ದು. . . .

ಯದಪಾಮೋಷಧೀನಾಂ ಪರಿಂಶ ಮಾರಿಷಾಮಹೇ |
ವಾತಾಪೇ ಪೀವ ಇದ್ಭವ ||
ಎಲೈ ಶರೀರವೇ ನೀರು ಮತ್ತು ಸಸ್ಯಗಳಿಗೂ ಸಂಬಂಧಿಸಿದ ಅನ್ನ (ಆಹಾರ) ಸಂಪೂರ್ಣವಾಗಿ ಸುಖವನ್ನು ಕೊಡತಕ್ಕದ್ದು ಇಂತಹ ಅನ್ನವು ನನ್ನ ಜಠರದಲ್ಲಿ ಪಚನವಾಗಿ ನನ್ನ ಆರೋಗ್ಯವನ್ನು ಸುಸ್ಥಿರವಾಗಿಡು ಎನ್ನುವುದು ಭಾವಾರ್ಥ. ತಿಂದ ಆಹಾರಗಳು ಪಚನವಾಗಿ ಜೀರ್ಣವಾಗಲಿ ಎನ್ನುವರು. ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಅಗಸ್ತ್ಯರು ಮಾಂಸಾಹಾರ ಮಾಡಿಲ್ಲ ಎನ್ನುವುದು.
ಯದಪಾಮೋಷಧೀನಾಂ - ಯತ್ ಅಪಾಂ ಓಷಧೀನಾಂ ಓಷಧಿಗಳು ಎಂದರೆ ಸಸ್ಯಗಳು. ಸಸ್ಯಗಳು ಬೆಳೆಯಲು ನೀರಿನ ಅವಶ್ಯಕತೆ ಇರುವುದು ನೀರು ಮತ್ತು ಸಸ್ಯಗಳಿಂದ ನಮ್ಮ ಅನ್ನ ಆಹಾರ ಬೆಳೆಯುತ್ತದೆ.

ವಾತಾಪೇ ಎಂದರೆ ವಾತೇನ ಪ್ರಾಣೇನಾಪ್ನೋತಿ ಸ್ವನಿರ್ವಾಹಮಿತಿ ವಾತೇನಾಪ್ಯಾಯತ ಇತಿ ವಾ ವಾತಾಪಿ ಶರೀರಂ.
ಎಂದರೆ ಪ್ರಾಣವಾಯುವಿನಿಂದ ನಮ್ಮ ಇಡೀ ಶರೀರದ ಸಮತೋಲನ ನಿರ್ವಹಿಸಲ್ಪಡುವುದರಿಂದ ವಾತಾಪಿ ಎಂದರೆ ಶರೀರ ಎನ್ನುವ ಅರ್ಥ ಕೊಡುತ್ತದೆ.
ಪೀವ ಎನ್ನುವುದನ್ನು ಸಾಯಣರು ತೃಪ್ತಿಹೊಂದಿದ ಅನ್ನುವಂತೆ ಹೇಳಿದ್ದಾರೆ, ಪೀವ ಎನ್ನುವುದು ಸ್ಥೂಲಕಾಯವನ್ನೂ ಹೇಳುವುದರಿಂದ ಎರಡೂ ಸಮಂಜಸವೇ. ಆಹಾರ ತಿಂದ ಬಳಿಕ ಸ್ಥೂಲ ಶರೀರವಾಗುವುದು ಅನ್ನುವುದೂ ಅರ್ಥವಾಗುತ್ತದೆ. ಆಮೇಲಿನ ಎರಡು ಋಕ್ಕುಗಳೂ ವಾತಾಪೇ ಪೀವ ಇದ್ಭವ ಎನ್ನುತ್ತವೆ ಅಂದರೆ ವಾತ ಸಂಬಂಧಿ (ವಾಯುವಿಗೆ ಸಂಬಂಧಿಸಿದ) ಎಲ್ಲಾ ತೊಂದರೆಗಳಿಂದ ಪಾರುಮಾಡಿ ನನ್ನ ದೇಹ ಪುಷ್ಟಿಯಾಗುವಂತೆ ಮಾಡು ಎನ್ನುವುದು ಅರ್ಥ. ಹಾಗದರೆ ಬ್ರಾಹ್ಮಣ ಮಾಂಸಾಹಾರ ಮಾಡಿದ ಎನ್ನುವುದು ಎಲ್ಲಿಂದ ? ಯಾಕಾಗಿ ? ಮಾಷ ಎನ್ನುವುದು ಮಾಂಸಾಹಾರವಾಗಿರಬಹುದಲ್ಲವೇ ಪುರಾಣದ ಕಥೆಗಳಿಂದ ಎಲ್ಲೆಲ್ಲಿಯೋ ಏನೇನೋ ಆಗಿರಬಹುದಲ್ಲ.

#ವಾತಾಪಿ_ಇಲ್ವಲ_ಪುನಃ
ಸದ್ಯೋಜಾತ ಭಟ್

पदमा गाय

 


जिसका दूध बाल कृष्ण पिया करते थे

पदमा गाय का बड़ा महत्व है पदमा गाय किसे कहते है पहले तो हम ये जानते है – एक लाख देशी गौ के दूध को 

०,००० गौ को पिलाया जाता है,उन १० ,००० गौ के दूध को १०० गौ को पिलाया जाता है अब उन १०० गायों के दूध को १० गौ को पिलाया जाता है अब उन १० गौ का दूध काढकर १ गौ को पिलाया जाता है. और जिसे पिलाया जाता है, उस गौ के जो "बछड़ा" 'बछड़ी" होता है उसे "पदमा गाय"कहतेहै.

ऐसी गौ का बछड़ा जहाँ जिस भूमि पर मूत्र त्याग करता है उसका इतना महत्व है कि यदि कोई बंध्या स्त्री उस जगह को सूँघ भी लेती है तो उसे निश्चित ही पुत्र की प्राप्ति हो जाती है.

ऐसी एक लाख गाये नन्द भवन में महल में थी जिनका दूध नन्द बाबा यशोदा जी और बाल कृष्ण पिया करते थे, तभी नन्द बाबा और यशोदा के बाल सफ़ेद नहीं थे सभी चिकने और एकदम काले थे चेहरे पर एक भी झुर्री नहीं थी, शरीर अत्यंत पुष्ट थी.

ऐसी गौ का दूध पीने से चेहरे कि चमक में कोई अंतर नहीं आता, आँखे कमजोर नहीं होती, कोई आधी-व्याधि नहीं आती.इसलिए नंद बाबा के लिए सभी कहते थे ‘साठा सो पाठा” अर्थात ६० वर्ष के नंद बाबा थे जब बाला कृष्ण का प्राकट्य हुआ था पर फिर भी जबान कि तरह दिखते थे.

_____श्री राधा विजयते नमः

जब गोपियों ने पदमा गौ के मूत्र से बाल कृष्ण का अभिषेक किया

जब पूतना का मोक्ष भगवान ने किया उसके बाद पूर्णमासी, रोहिणी, यशोदा और अन्य गोपियाँ बाल कृष्ण की शुद्धि के लिए उन्हें पदमा गौ कि गौशाला में लेकर गई. रोहिणी जी पदमा गौ को कुजली करने लगी अर्थात प्यार से सहलाने लगी,

यशोदा जी ने गौ शाला में ही गोद में बाल कृष्ण को लेकर बैठ गई और पूर्णमासी उस गौ की पूंछ से, भगवान के ही दिव्य नामो से झाडा (नजर उतारने) देने लगी. 

उसी पदमा गौ के मूत्र से बाल कृष्ण को स्नान कराया, गौ के चरणों से रज लेकर लाला के सारे अंगों में लगायी. और गौ माता से प्रार्थना करने लगी की हमारे लाल को बुरी नजर से बचाना.

गऊ सेवा करो मेरी राधे जू के प्यारो अनंत कृपा बरसेगी

जय जय गैया मैया।

जय-जय श्री राधे कृष्णा जी|

ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಹೊಸಹಳ್ಳಿ ಹಿರೇಕೆರೂರ

September 21, 2020

ವ್ಯಕ್ತಿತ್ವ ವಿಕಸನಕ್ಕೆ ( Personality Development ) ಅತ್ಯುತ್ತಮ ಮಾರ್ಗದರ್ಶನ ವೆಂದರೆ ಭಗವದ್ಗೀತೆ

 ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ಭಗವದ್ಗೀತೆ.


 “ ಭಗವದ್ಗೀತೆ ಭಾರತದ ಪವಿತ್ರ ಗ್ರಂಥ . ಸಾವಿರಾರು ವರ್ಷಗಳ ಹಿಂದೆಯೇ ಬೆಳಕಿಗೆ ಬಂದ ಕೃತಿ . ದೇಶ ವಿದೇಶಗಳ ತಾರ್ಕಿಕರು , ಪರೀಕ್ಷಕರು , ವಿಜ್ಞಾನಿಗಳು , ಆತ್ಮಜ್ಞಾನಿಗಳು ಅದನ್ನು ಮನಸಾರೆ ಕೊಂಡಾಡಿದ್ದಾರೆ . ಸಾಮಾನ್ಯನಿಗೂ ತಿಳಿಯು ವಂತಹ ಸುಲಭ ಸಂಸ್ಕೃತ ಭಾಷೆ ಯಾವುದೇ ಮತ ಪಂಥಗಳಿಗೆ ಅಂಟಿಕೊಳ್ಳದ ಅಪರೂಪದ ತತ್ವಗಳನ್ನು ಅಹಂಭಾವವಿಲ್ಲದೆ ಆತ್ಮೀಯವಾಗಿ ಹೇಳುವ ಮಮತೆಯ ಮಾತೆಯ ರೀತಿ ” -ಇವೆಲ್ಲವುಗಳಿಂದ ಗ್ರಂಥವು ವಿಶ್ವಮಾನ್ಯವಾಗಿದೆ .


 ವ್ಯಕ್ತಿತ್ವ ವಿಕಸನಕ್ಕೆ ( Personality Development ) ಅತ್ಯುತ್ತಮ ಮಾರ್ಗದರ್ಶನ ವೆಂದರೆ ಭಗವದ್ಗೀತೆ , ಇದನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನೇ ಪ್ರಪಂಚ ಕಂಡ ಮೊಟ್ಟಮೊದಲ ವ್ಯಕ್ತಿವಿಕಸನ ತರಬೇತುದಾರ ( HRD- Programmer ) . ತನ್ನ ಆತ್ಮೀಯ ಗೆಳೆಯ ಅರ್ಜುನನಿಗೆ ಗೀತೋಪದೇಶ ಮಾಡುವುದರ ಮೂಲಕ ಶ್ರೀಕೃಷ್ಣ ಮನುಕುಲಕ್ಕೆ ' ಬದುಕುವ ಕಲೆ'ಯ ಸಂದೇಶವನ್ನು ಸಾರಿದ್ದಾನೆ . ಗಾಂಧೀಜಿಯವರು ಒಂದೆಡೆ “ ಭಗವದ್ಗೀತೆ ನನ್ನ ತಾಯಿ : ನಾನು ಏಕಾಂಗಿ ಯಾದಾಗ , ನಿರಾಶೆ ನನ್ನನ್ನು ಮುತ್ತಿಕೊಂಡಾಗ , ಬೆಳಕಿನ ಕಿರಣ ಕಾಣದಾದಾಗ ನಾನು ಗೀತೆಯ ಮೊರೆ ಹೋಗುತ್ತೇನೆ ” ಎಂದು ಹೇಳಿರುವುದು ಮಹತ್ತರವಾದ ವಿಷಯ .


 ಭಗವದ್ಗೀತೆಯನ್ನು ಕೇವಲ ಧಾರ್ಮಿಕ ದೃಷ್ಟಿಯಲ್ಲಿ ನೋಡುವ ಬದಲಾಗಿ ಅದನ್ನು ದಾರ್ಶನಿಕ , ಅಧ್ಯಾತ್ಮಿಕ ಚಿಂತನೆಯ ನೆಲೆಗಳಲ್ಲಿ ವಿವೇಚಿಸಿದಾಗ ಅದು ಮನುಕುಲದ ಸಾರ್ವಕಾಲಿಕ ದಾರಿದೀಪ ಎಂಬ ಸತ್ಯ ಸ್ಪಷ್ಟವಾಗುತ್ತದೆ . ಈ ಹಿನ್ನೆಲೆಯಲ್ಲಿಯೇ ಪ್ರಪಂಚದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲಾಗಿದೆ . ವ್ಯವಹಾರ ನಿರ್ವಹಣಾ ಕೌಶಲ್ಯ ( Business Man agement Skil ) ಆಡಳಿತ ಪದಎಗಳಲ್ಲಿ ಗೀತೆಯಲ್ಲಿ ಬರುವ ವ್ಯಕ್ತಿವಿಕಸನದ ಹಲವು ವಿಚಾರಗಳನ್ನು ವಿಶೇಷವಾಗಿ ಬೋಧಿಸಲಾಗುತ್ತಿದೆ . “ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜಲ ಶಲಾಕಯ ' ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಕಳೆಯಲು ಜ್ಞಾನದ ಬೆಳಕನ್ನು ಹುಡುಕಿಕೊಳ್ಳಬೇಕು ಎಂಬುದು ಗೀತೆಯ ಬಹುಮುಖ್ಯ ಸಂದೇಶ . ನಿಜವಾದ ಅರಿವಿನ ದರ್ಶನವಾಗಬೇಕಾದರೆ , ಅಹಂಕಾರ ಎಂಬ ಪೊರೆ ಕಳಚಬೇಕು ಎಂಬ ವ್ಯಕ್ತಿ ವಿಕಸನದ ಮೂಲತತ್ವವನ್ನು ಗೀತೆ ಬೋಧಿಸುತ್ತದೆ . ಯಾರಲ್ಲಿ ಆತ್ಮಜ್ಞಾನದ ಪ್ರಕಾಶ ಬೆಳಗುತ್ತದೆಯೋ ಅಂಥವರಿಗೆ ಕಲ್ಲು , ಮಣ್ಣು , ಚಿನ್ನಗಳಲ್ಲಿ ವ್ಯತ್ಯಾಸ ಕಾಣಿಸುವುದಿಲ್ಲ . ಹಾಗೆಯೇ ಸುಖ-ದುಃಖಗಳನ್ನೂ ಸಮನಾಗಿ ನೋಡುವ ಸ್ಥಿತಪ್ರಜ್ಞತ್ವ ' ಲಭಿಸುತ್ತದೆ . 


ವ್ಯಕ್ತಿವಿಕಸನದ ಪ್ರಮುಖ ಅಗತ್ಯವಾದ ಸಮಚಿತ್ತವನ್ನು ಗೀತೆ ಪ್ರಮುಖವಾಗಿ ತಿಳಿಸುತ್ತದೆ ( ಸಮತ್ವಂ ಯೋಗಮುಚ್ಯತೇ -ಭ.ಗೀ .೨ : ೪೮ ) . 


ನಾವೇ ನಮ್ಮ ಭವಿಷ್ಯದ ಶಿಲ್ಪಿಗಳು ಧನಾತ್ಮಕವಾಗಿ ಯೋಚಿಸಿ ( Positive thinking ) ಪ್ರಯತ್ನಶೀಲರಾದರೆ ಯಶಸ್ಸು ಸದಾ ನಮ್ಮದಾಗುತ್ತದೆ . ವ್ಯಕ್ತಿತ್ವ ಎಂಬ ಅಂತರಂಗದ ಶಕ್ತಿ ವಿಕಸಿತವಾಗುವುದು ಕ್ರಿಯಾಶೀಲತೆಯಿಂದ . ಗೀತೆಯಲ್ಲಿ ಕ್ರಿಯಾಶೀಲತೆ ಜಡತ್ವಕ್ಕಿಂತ ( ನಿಶ್ಚಲಕ್ಕಿಂತ ) ಸದಾಶ್ರೇಷ್ಠ , ಜೀವನ ಕರ್ತವ್ಯದ ಸರಿಯಾದ ನಿರ್ವಹಣೆಯೇ ಕ್ರಿಯಾಶೀಲತೆ ಎಂದು ಹೇಳಲಾಗಿದೆ . “ ಸದಾ ಸಂಶಯಗ್ರಸ್ತನಿಗೆ ಸಂತೋಷವೆಂಬುದಿಲ್ಲ ” ( ಸಂಶಯಾತ್ಮಾ ವಿನಶ್ಯತಿಃ -ಭ.ಗೀ , ೪:೪೦ ) ಎಂಬ ಗೀತೆಯ ಹೇಳಿಕೆ ಎಂದೆಂದಿಗೂ ಸತ್ಯ . 


ಇಂದಿನ ಸಮಾಜದಲ್ಲಿ ಒಬ್ಬರನ್ನೊಬ್ಬರು ನಂಬದಂಥ ಸ್ಥಿತಿ ಉಂಟಾಗಿದೆ . “ ನಂಬಿಯೂ ನಂಬದಿಹ ಇರ್ಬಂದಿ ನೀನು ” ಎಂದು ಡಿ.ವಿ.ಜಿ. ಅವರು ಹೇಳಿರುವುದು ಇದನ್ನೇ .


 “ ನಂಬರು ನೆಚ್ಚರು ಬರಿದೆ ಕರೆವರು , ನಂಬಿ ಕರೆದೊಡೆ ಓ ಎನ್ನನೇ ಶಿವಾ ” ಎಂದು ಅಣ್ಣ ಬಸವಣ್ಣನವರು ಹೇಳಿದ್ದಾರೆ . 


“ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ , ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ” ಎಂಬ ಕವಿ ಜಿ.ಎಸ್.ಶಿವರುದ್ರಪ್ಪನವರ ಮಾತಿನಂತೆ ಇಂದು ನಮ್ಮನ್ನು ನಾವೇ ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ .


 ಹೀಗಿದ್ದರೆ ಮನಶ್ಯಾಂತಿ ಹೇಗೆ ಉಂಟಾದೀತು ! ಬದುಕಿನಲ್ಲಿ ನಂಬಿಕೆ ಭರವಸೆಗಳಿದ್ದಾಗ ಬದುಕು ಆನಂದಮಯವಾಗುತ್ತದೆ . “ ಮನಸ್ಸೇ ಮನುಷ್ಯನ ಆತ್ಮೀಯ ಸ್ನೇಹಿತ ಹಾಗೂ ಕೆಟ್ಟ ಶತ್ತು ” ಎಂಬ ಗೀತೆಯ ಮಾತು ಸ್ವಯಂ ನಿರ್ವಹಣೆಗೆ ಹಿಡಿದ ಕನ್ನಡಿ . ಜ್ಞಾನಿಯಾದವನು ಮನಸ್ಸನ್ನು ನಿಯಂತ್ರಿಸುತ್ತಾನೆ . ಜೊತೆಗೆ ಸಹನೆ , ನಿರಂತರ ಪ್ರಯತ್ನಗಳಿಂದ ತನ್ನೊಳಗಿನ ಅರಿವಿನ ಬೆಳಕನ್ನು ಕಂಡುಕೊಳ್ಳುತ್ತಾನೆ ಎಂಬುದೇ ಗೀತಾದರ್ಶನ . 


ತಾನು ಯಾರು ? ಎಲ್ಲಿಂದ ಬಂದಿದ್ದೇನೆ ? ಬದುಕಿನ ಉದ್ದೇಶವೇನು ? ಸತ್ತ ನಂತರ ಎಲ್ಲಿಗೆ ಹೋಗುತ್ತೇನೆ ? ಎಂಬ ಜಿಜ್ಞಾಸೆಯ ಪ್ರಶ್ನೆಗಳು ಮನಸ್ಸಿನಲ್ಲಿ ಜಾಗೃತಗೊಂಡಾಗ ಭಗವದ್ಗೀತೆಯನ್ನು ಗ್ರಹಿಸುವ ಶಕ್ತಿ ಲಭಿಸುತ್ತದೆ . ಅದು ಆಗ ಹೆಚ್ಚು ಅರ್ಥಪೂರ್ಣವಾಗುತ್ತದೆ .


ವ್ಯಕ್ತಿ ವಿಕಸನದ ಮೊದಲ ಹಂತವೇ ಅರ್ಥಬದ್ಧವಾದ ಪ್ರಶ್ನೆಗಳನ್ನು ಕೇಳುವ ಸ್ವಭಾವ . ಭಗವದ್ಗೀತೆ ಒಟ್ಟಾರೆಯಾಗಿ ಐದು ಮೂಲಸತ್ಯಗಳನ್ನು ( Universal Truths ) ವಿವರಿಸುತ್ತದೆ . ಪರಮ ನಿಯಾಮಕನಾದ ಈಶ್ವರ . ಅವನ ಅಂಶವೇ ಆದ ಜೀವಿ , ಜೀವಿಸುವ ಪ್ರಕೃತಿ , ಸದಾ ಚಲನೆಯಲ್ಲಿರುವ ಕಾಲ ಹಾಗೂ ಜೀವಿ ತೊಡಗಿರುವ ಕರ್ಮ - ಇವೇ ಆ ಐದು ಸತ್ಯಗಳು .