March 22, 2025

ವೀರಶೈವ ಧರ್ಮದಲ್ಲಿ ಅಂತಿಮ ಯಾತ್ರೆ

ಅಂತಿಮಯಾತ್ರೆಯಲ್ಲಿ ಆ ನಾಲ್ಕು ಜನ!
ವೀರಶೈವಧರ್ಮದಲ್ಲಿ ವೃಷಭೇಶ್ವರನಿಗೆ ಪ್ರಮುಖ ಸ್ಥಾನವಿದೆ. ವೀರಭದ್ರನಿಂದ "ವೀರಶೈವ" ಪದ ಹುಟ್ಟಿದೆಯೆಂದು, ಅವನೇ ವೀರಶೈವ ಧರ್ಮದ ಸ್ಥಾಪಕನೆಂದು ಕೆಲವರು ಹೇಳುವುದುಂಟು. ಒಂದು ವಿಧದಲ್ಲಿ ಅದು ಸರಿ ಎನಿಸಿದರೂ ವೀರಭದ್ರ ಪ್ರಮಥಗಣಗಳಲ್ಲಿ ಒಬ್ಬ; ಮೊದಲಿಗನಲ್ಲ. ವೃಷಭೇಶ್ವರನೇ ಪ್ರಮಥಗಣಗಳಲ್ಲಿ ಮೊದಲಿಗ; ಪ್ರಮಥಗಣಾಧಿಪತಿ. ಆದ್ದರಿಂದಲೇ  ವೀರಶೈವಧರ್ಮವನ್ನು "ವೃಷಭಧರ್ಮ" ಎಂಬ ಹೆಸರಿನಿಂದಲೂ ಕರೆಯುವುದುಂಟು. ಈ ವೃಷಭೇಶ್ವರನ ಕುರಿತು "ಯಾವುದು ವೀರಶೈವಧರ್ಮಧ್ವಜ?" ಎಂಬ ಶೀರ್ಷಿಕೆಯ ಅಡಿಯಲ್ಲಿ ಹಲವು ವಿಚಾರಗಳನ್ನು ಹಿಂದೊಮ್ಮೆ ತಿಳಿಸಿದ್ದೇವೆ. ಅಂದು ನಮ್ಮ ಜನನ,ಜೀವನ,ಮರಣಗಳಲ್ಲಿ ವೃಷಭನ ಪಾತ್ರ ಏನು ಎಂಬುದನ್ನು ನೋಡಿದ್ದೇವೆ. ಈಗ ಮತ್ತೊಂದು ವಿಚಾರವನ್ನು ನೋಡೋಣ. 

 ವೃಷಭನು "ಶಿವ"ವಾಹಕನಷ್ಟೇ ಅಲ್ಲ, "ಶವ"ವಾಹಕನೂ ಹೌದು. ಅದು ಹೇಗೆ? 

ನಮ್ಮ ಬದುಕು ಹೇಗಿರಬೇಕೆಂದರೆ ನಾವು ಸತ್ತಾಗ ನಮ್ಮ ದೇಹವನ್ನು ನಾಲ್ಕು ಜನ ಪ್ರೀತಿಯಿಂದ ಹೊತ್ತುಕೊಂಡು ಹೋಗುವಂತಿರಬೇಕೇ ವಿನಹ ಎತ್ತಿ ಬಿಸಾಕುವಂತಿರಬಾರದು. ಅಂತಹ ಶಿವಮಯ ಬದುಕು ನಮ್ಮದಾಗಬೇಕು. ವೀರಶೈವಧರ್ಮದಲ್ಲಿ ಲಿಂಗದೀಕ್ಷೆಯನ್ನು ಪಡೆದ ವ್ಯಕ್ತಿ ತನ್ನ ಅಂಗಗುಣಗಳನ್ನು ತ್ಯಜಿಸಿ ಲಿಂಗಗುಣಗಳನ್ನು ಅಳವಡಿಸಿಕೊಳ್ಳಬೇಕಾಗಿರುತ್ತದೆ. ಅವನು ದೇಹವನ್ನು ಕಳಚುವುದರೊಳಗೆ  "ಸರ್ವಾಂಗಲಿಂಗಿ"ಯಾಗಬೇಕು. ಅಂಗ ಲಿಂಗವಾಗಬೇಕು. ಆದ್ದರಿಂದಲೇ ಲಿಂಗವಂತನು ದೇಹ ತೊರೆದಾಗ ಆ ದೇಹಕ್ಕೆ "ಪಾರ್ಥಿವಶರೀರ"ಎಂದು ಕರೆಯುವುದಿಲ್ಲ; "ಲಿಂಗಶರೀರ"ಎಂದು ಕರೆಯುತ್ತಾರೆ. ಇಂತಹ ಲಿಂಗಶರೀರವನ್ನು ಮನೆಯಿಂದ ರುದ್ರಭೂಮಿಗೆ ಒಯ್ಯುವಾಗ  ಯಜಮಾನನು ಲಿಂಗವಂತರಾದ ನಾಲ್ಕು ಜನರನ್ನು ಕರೆದು, ಅವರಿಗೆ ವೃಷಭೇಶ್ವರನ ನಾಲ್ಕು ಹೆಸರುಗಳಿಂದ ಅರ್ಥಾತ್ ಮಹೋಕ್ಷ- ವೃಷಭ- ನಂದೀ-ನಂದಿಕೇಶ್ವರ ಎಂಬ  ಹೆಸರುಗಳಿಂದ ವರಿಸಿ, ವಿಭೂತಿವೀಳ್ಯ, ವಸ್ತ್ರಗಳನ್ನು ಕೊಟ್ಟು "ಲಿಂಗಶರೀರವನ್ನು ಹೊರಲು ಮತ್ತು ಗರ್ತವನ್ನು ಅಗಿಯಲು" ಪ್ರಾರ್ಥಿಸುವನು. ಯಜಮಾನನ ಪ್ರಾರ್ಥನೆಯಂತೆ ವೃಷಭಸ್ವರೂಪರಾದ ಆ ನಾಲ್ಕು ಜನರು "ವೃಷಭನು ಶಿವನನ್ನು ಹೊತ್ತುಕೊಂಡು ಹೋಗುವಂತೆ" ಲಿಂಗಶರೀರವನ್ನು ರುದ್ರಭೂಮಿಗೆ ಒಯ್ಯುತ್ತಾರೆ.

March 16, 2025

ಮೂರನೇ ನಂಬರ್ ಕುರಿ

ಹಾಗೇ ಸುಮ್ಮನೆ !
  ಅವರಿಬ್ಬರು ತುಂಟ ಹುಡುಗರು. ಪ್ರಾಣ ಸ್ನೇಹಿತರು ಬೇರೆ. ಹಾಗಿದ್ದ ಮೇಲೆ ತುಂಟತನಕ್ಕೆ ಕೊನೆಯಿದೆಯೇ? ಅವರಿಬ್ಬರಿಗೂ ಶಾಲೆಗೆ ಹೋಗುವುದೆಂದರೆ ಅಲರ್ಜಿ. ಒಂದು ದಿನ ಇಬ್ಬರೂ ಸೇರಿ ಒಂದು ಉಪಾಯ ಮಾಡಿದರು. ಪಕ್ಕದ ಮನೆಯ ಕೊಟ್ಟಿಗೆಯಿಂದ ಮೂರು ಕುರಿ ಮರಿಗಳನ್ನು ಕದ್ದು ತಂದು ಅವುಗಳ ಬೆನ್ನ ಮೇಲೆ 1, 2, 4 ಎಂದು ಬರೆದರು. ನಂತರ ಕುರಿಗಳನ್ನು ರಾತ್ರಿ ನಿಧಾನವಾಗಿ ತಂದು ಶಾಲೆಯ ಕಟ್ಟಡದೊಳಗೆ ಬಿಟ್ಟು ಹೋದರು. ಬೆಳಗ್ಗೆ ಶಾಲೆಗೆ ಬಂದ ಶಿಕ್ಷ ಕ ಮೂಗಿಗೆ ಏನೋ ವಾಸನೆ ಬಡಿಯಿತು. ಕಾರಿಡಾರ್‌ನ ಅಲ್ಲಲ್ಲಿ, ಮೆಟ್ಟಿಲುಗಳ ಮೇಲೆ ಕುರಿಯ ಹಿಕ್ಕೆ ಬಿದ್ದಿತ್ತು. ಮೂತ್ರ ವಾಸನೆ ಮೂಗಿಗೆ ರಾಚುತ್ತಿತ್ತು. ತಕ್ಷಣ ಕುರಿಗಳಿಗಾಗಿ ಹುಡುಕಾಟ ನಡೆಯಿತು. ಸ್ವಲ್ಪ ಹೊತ್ತಿನಲ್ಲೇ ಮೂರು ಕುರಿಗಳು ಸಿಕ್ಕಿ ಬಿದ್ದವು. ಶಾಲೆಯವರಿಗೆ ಆಶ್ಚರ್ಯ! 1,2 ಹಾಗೂ 4ನೇ ನಂಬರ್‌ನ ಕುರಿಗಳು ಸಿಕ್ಕಿವೆ. ಹಾಗಾದರೆ ಆ 3ನೇ ಕುರಿ ಎಲ್ಲಿ ತಪ್ಪಿಸಿಕೊಂಡಿದೆ ಎಂದು ತಲೆಬಿಸಿಯಾಯಿತು.

ತರಗತಿಗಳಿಗೆ ರಜಾ ಘೋಷಿಸಿದ ಶಿಕ್ಷಕರು ಆ 3ನೇ ನಂಬರ್ ಕುರಿಯ ಜಾಡು ಹಿಡಿದು ಹೊರಟರು. ಶಿಕ್ಷಕರು, ಆಯಾಗಳು ಎಲ್ಲ ಸೇರಿ ಹುಡುಕಿದರೂ 3ನೇ ಕುರಿ ಸಿಗಲೇ ಇಲ್ಲ! ಯಾಕೆ ಹೇಳಿ? ಆ ಕುರಿ ಇದ್ದರೆ ತಾನೆ ಸಿಗುವುದು? ಇಲ್ಲದಿದ್ದನ್ನು ಹುಡುಕಿದರೆ ಹೇಗೆ ಸಿಗುತ್ತದೆ? ಆ ಇಬ್ಬರು ಮಾಡಿದ ತುಂಟಾಟಿಕೆಯಿಂದ ಶಾಲೆಯವರಿಗೆ ಸುಸ್ತಾಯಿತಷ್ಟೇ ವಿನಾ ಬೇರೇನೂ ಸಿಗಲಿಲ್ಲ. ಹಾಗಾದರೆ ನಮ್ಮಲ್ಲಿಯೂ ಎಷ್ಟೋ ಜನ ‘ಆ 3ನೇ ನಂಬರ್ ಕುರಿ’ಗಾಗಿ ಹುಡುಕಾಡುತ್ತಿರುವವರಿದ್ದಾರೆ ಅಲ್ಲವೇ? ಬದುಕಿನಲ್ಲಿ ಎಲ್ಲ ಇದ್ದರೂ, ಏನೋ ಇಲ್ಲವೆಂದು ಕೊರಗುತ್ತಾ ಸುಮ್ಮನೆ ಹುಚ್ಚರಂತೆ ಹುಡುಕಾಡುತ್ತಿರುತ್ತಾರೆ. ತಾವೇ ನನ್ನು ಹುಡುಕುತ್ತಿದ್ದೇವೆ ಎಂದೂ ಕೆಲವರಿಗೆ ತಿಳಿದಿರುವುದಿಲ್ಲ. An absence of something is always larger than the presence of many other things. ಅಂದರೆ ಯಾವುದೋ ಒಂದು ‘ಇಲ್ಲ’ ಎಂಬುದು ನಮ್ಮ ಅವೆಷ್ಟೋ ‘ಇದೆ’ಗಳ ಖುಷಿಯನ್ನು ಹಾಳುಗಡೆವಿ ಬಿಡುತ್ತದೆ.

ಹಾಗಾದರೆ ಇನ್ನು ಮುಂದೆ ನಾವು ‘3ನೆ ನಂಬರ್ ಕುರಿ’ಯ ಹಿಂದೆ ಅಲೆಯುವುದನ್ನು ಬಿಟ್ಟು ಜೀವನವನ್ನು ಹಿಡಿ ಹಿಡಿಯಾಗಿ ಅನುಭವಿಸೋಣವಲ್ಲವೆ?

ಕಾರ್ ಗೆ ಬ್ರೇಕ್ ಏಕೆ ಇರುತ್ತದೆ ?

ಕಾರ್‌ಗೆ ಬ್ರೇಕ್ ಯಾಕಿರುತ್ತದೆ?
ಎಂದು ಕೇಳಿದರೆ ಏನು ಉತ್ತರ ಕೊಡುತ್ತೀರಿ. ‘ಕಾರನ್ನು ನಿಲ್ಲಿಸಲು’. ‘ಕಾರಿನ ವೇಗವನ್ನು ಕಡಿಮೆ ಮಾಡಲು’. ‘ಅಪಘಾತವನ್ನು ತಡೆಯಲು’…..ಇತ್ಯಾದಿ ಉತ್ತರಗಳನ್ನು ನಿರೀಕ್ಷಿಸಬಹುದು. ಆದರೆ, ಅತ್ಯುತ್ತಮ ಉತ್ತರ ಯಾವುದು ಗೊತ್ತೇ? ‘ಕಾರು ವೇಗವಾಗಿ ಚಲಿಸುವಂತೆ ಮಾಡಲು!’ ಆಶ್ಚರ್ಯವಾಗುತ್ತದೆ ಅಲ್ಲವೆ? ಯೋಚಿಸಿ ನೋಡಿ. ಬ್ರೇಕ್ ಇದೆ ಎಂಬ ಧೈರ್ಯದಿಂದ ತಾನೇ ನಾವು ಕಾರಿನ ವೇಗವನ್ನು ಹೆಚ್ಚಿಸಿ ಬೇಕಾದಲ್ಲಿಗೆ ಹೋಗುತ್ತೇವೆ. ಜೀವನದ ವಿವಿಧ ಹಂತಗಳಲ್ಲಿ ನಾವು ಹೆತ್ತವರು, ಶಿಕ್ಷಕರು, ಗುರುಗಳು, ಸಂಗಾತಿ, ಸ್ನೇಹಿತರು ನಮ್ಮ ಹಾದಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ನಮ್ಮ ಬೆಳವಣಿಗೆಗೆ-ಆಸೆಗೆ ತಡೆ ಹಿಡಿಯುತ್ತಿದ್ದಾರೆ, ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ನಮ್ಮಿಷ್ಟ ಬಂದಂತೆ ಬದುಕಲು ಬಿಡುತ್ತಿಲ್ಲ ಎಂದೆಲ್ಲ ಭಾವಿಸುತ್ತೇವಲ್ಲವೇ? ಅವರು ನಮ್ಮ ಸಾಧನೆಗೆ ‘ಬ್ರೇಕ್’ ಹಾಕುತ್ತಿದ್ದಾರೆ ಎಂದು ಶಪಿಸಿಕೊಳ್ಳುತ್ತೇವಲ್ಲವೆ? ಆದರೆ ಆ ‘ಬ್ರೇಕ್’ಗಳಿಂದಲೇ ನೀವು ಇಂದು ಯಾವ ಸ್ಥಾನದಲ್ಲಿದ್ದೀರೋ ಅಲ್ಲಿಗೆ ತಲುಪಲು ಸಾಧ್ಯವಾಗಿದ್ದು. ‘ಬ್ರೇಕ್’ಗಳಿಲ್ಲದಿದ್ದರೆ ನೀವು ಬೀಳುತ್ತಿದ್ದಿರೇನೋ, ದಾರಿ ತಪ್ಪುತ್ತಿದ್ದಿರೇನೋ ಅಥವಾ ಯಾವುದೋ ದೊಡ್ಡ ಅವಘಡಕ್ಕೆ ಸಿಕ್ಕಿಬಿಡುತ್ತಿದ್ದಿರೇನೋ ಅಲ್ಲವೆ? ನಿಮ್ಮ ಜೀವನದಲ್ಲಿ ‘ಬ್ರೇಕ್’ಗಳಿರುವುದಕ್ಕೆ ಸಂತೋಷ ಪಡಿ. ಅವುಗಳನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳಿ. ನಿಮ್ಮ ಜೀವನದ ಪ್ರಯಾಣ ಸುಖಕರವಾಗಿರಲಿ.
*****"***"****"*****""**********

March 11, 2025

ಅಮೂಲ್ಯ ನಾಣ್ಯ

ರವಿ ಆವತ್ತು‌ ಕೆಲಸಕ್ಕೆ ಹೊರಡುವ ವೇಳೆಯಲ್ಲಿ ಜೇಬಿನಿಂದ ರೂಪಾಯಿಯ ಬಿಲ್ಲೆಯೊಂದು ನೆಲಕ್ಕೆ ಬಿದ್ದು ಠಣ್ಣನೆ ಸದ್ದು ಮಾಡಿ ಚಪ್ಪಲಿ ಸ್ಟಾಂಡಿನ ಅಡಿಗೆ ಸೇರಿಕೊಂಡಿತು . ಜೇಬಿನಲ್ಲಿ ನೋಟುಗಳ ಕಂತೆ ಇದ್ದುದರಿಂದ ಅದಕ್ಕಾಗಿ ಹುಡುಕಾಡುವುದು ತುರ್ತಿನ ಕೆಲಸವಲ್ಲ ಎಂದು ಭಾವಿಸಿ ಬೈಕು ಹತ್ತಿದ. 

ಕೆಲವೊಮ್ಮೆ ಬಿಲ್ಲೆಗಳು ಜೇಬಿಗೆ ಭಾರವೆನಿಸಿದಾಗ ಅವುಗಳನ್ನು  ಮೇಜಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಪುಸ್ತಕಗಳು , ನ್ಯೂಸ್ ಪೇಪರುಗಳ ನಡುವೆ ಸುರಿದು ಎಂದಿನಂತೆ ಕೆಲಸಕ್ಕೆ  ಹೊರಟುಬಿಡುತ್ತಿದ್ದ‌ .

ಕೆಲವು ಬಿಲ್ಲೆಗಳು ಟೀವಿ ಸ್ಟಾಂಡಿನ ಅಡಿಯಲ್ಲಿ , ಮಂಚದ ಕೆಳಗೆ , ಸೋಫಾದ ಸಂದಿಯಲ್ಲಿ ಬೆಳಕಿನ ಭಾಗ್ಯ ಕಾಣದೇ ತಿಂಗಳುಗಟ್ಟಲೆ ಜೀವ ಹಿಡಿದುಕೊಂಡಿರುತ್ತಿದ್ದವು .

ಹೀಗೆ ಕೊಠಡಿಯ ಹಲವೆಡೆಗಳಲ್ಲಿ ಎಷ್ಟೋ ನಾಣ್ಯಗಳು ರವಿಯ ಸ್ಪರ್ಶಕ್ಕಾಗಿ ಪರಿತಪಿಸುತ್ತಾ ಧೂಳು ತಿನ್ನುತ್ತಾ ಬಿದ್ದಿರುತ್ತಿದ್ದವು . ಆದರೆ ರವಿ ಅವುಗಳನ್ನು ಮರೆತು ಶತಮಾನಗಳಾಯಿತೇನೋ ಎಂಬಂತೆ ವರ್ತಿಸುತ್ತಿದ್ದ . ಗಾಳಿಗೆ  ಹಾರಿ ಹೋಗುವ ವಸ್ತುಗಳಂತೂ ಅಲ್ಲ , ಕೈಕಾಲುಗಳಂತೂ ಇಲ್ಲ . ಅವು ಯಾವತ್ತಿದ್ದರೂ ತನ್ನವೇ ಎಂಬ ಭಾವನೆ ರವಿಗೆ . ಕೈಯಲ್ಲಿ ದುಡ್ಡು ಯಾವತ್ತೂ ಓಡಾಡುತ್ತಿದ್ದರಿಂದ ಆ ಬಿಲ್ಲೆಗಳ ಅವಶ್ಯಕತೆಯೂ ಅವನಿಗೆ ಬಂದಿರಲಿಲ್ಲ .

ಆದರೆ ಎಲ್ಲಾ ವಾರವೂ ಶುಕ್ರವಾರ ಅಲ್ವಲ್ಲ . ಆವತ್ತು ರವಿಗೆ ಆಘಾತ ಕಾದಿತ್ತು . ಹಿಂದಿನ ರಾತ್ರಿ ಸಿನೆಮಾ ಹಾಲಿನ ನೂಕುನುಗ್ಗಲಿನಲ್ಲಿ ಯಾರೋ ಪರ್ಸ್ ಎಗರಿಸಿಬಿಟ್ಟಿದ್ದರು . ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಎನ್ನುವ ಹಾಗೆ ಏಟಿಎಮ್ ಕಾರ್ಡ್ , ಕ್ರೆಡಿಟ್ ಕಾರ್ಡುಗಳೆಲ್ಲ ಪರ್ಸಿನ ಜೊತೆ ಹೋಗಿಬಿಟ್ಟಿದ್ದವು . ಅಂಗಿಯ ಜೇಬಿನಲ್ಲಿ ನಯಾಪೈಸೆಯಿರಲಿಲ್ಲ ‌ . ತಿಂಗಳ ಸಂಬಳವೂ ಅಕೌಂಟಿಗೆ ಬಿದ್ದಿರಲಿಲ್ಲ . 

ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು . ಹಸಿವಿಗಿಂತ ದೊಡ್ಡ ಗುರು ಇನ್ನೊಂದಿಲ್ಲ . ನಿಜದ ಗುರು ಬೆತ್ತದಲ್ಲಿ ಬಡಿದು ಅರಿವು ಮೂಡಿಸಿದರೆ ಹಸಿವು  ಆತ್ಮವನ್ನೇ ಬಡಿದು ಮಂಡಿಯೂರಿಸುತ್ತದೆ . ಅಹಮ್ಮನ್ನು ಮಟ್ಟು ಮಾಡುತ್ತದೆ . ರವಿಗೂ ಹಾಗೆಯೇ ಆಯಿತು . 

ಬಿಸಾಡಿ ಮರೆತಿದ್ದ ನಾಣ್ಯಗಳೆಲ್ಲ ಒಮ್ಮೆಗೇ ನೆನಪಾದವು . 
ಯಾವ್ಯಾವುದೋ ಸಂದಿಗೆ ಸೇರಿಕೊಂಡಿದ್ದ ನಾಣ್ಯಗಳನ್ನು ಧಾವಂತದಿಂದ ಹೆಕ್ಕತೊಡಗಿದ . ಪ್ರತಿ ನಾಣ್ಯ ಸಿಕ್ಕಾಗಲೂ ಅವನ ಕಣ್ಣುಗಳು ವಜ್ರದ ನಿಧಿಯೇ ಸಿಕ್ಕಂತೆ ಪ್ರಜ್ವಲಿಸುತ್ತಿದ್ದವು ‌. ಕೊನೆಗೆ ಚಪ್ಪಲಿಗಳ ಸಂದಿಗೆ ಸೇರಿಕೊಂಡಿದ್ದ ನಾಣ್ಯವನ್ನೂ ಬಿಡದೇ ಹೆಕ್ಕಿ ಕಣ್ಣಿಗೊತ್ತಿ ಅಂಗೈ ಮುಷ್ಟಿಗೆ ಸೇರಿಸಿಕೊಂಡ . 

ನೋಡನೋಡುತ್ತಿದ್ದಂತೆಯೇ ಒಂದು ತೆಂಗಿನ ಹೋಳಿಗೆ ತುಂಬುವಷ್ಟು ನಾಣ್ಯಗಳನ್ನು ಗಣಿಗಾರಿಕೆ ಮಾಡಿದ.
ಅವನ ಹೊಟ್ಟೆಗೆ ಮಾತ್ರವಲ್ಲ , ಬೈಕಿನ ಹೊಟ್ಟೆಗೂ ಸಾಕಾಗುವಷ್ಟು ಬಿಲ್ಲೆಗಳು ಸಿಕ್ಕಿದವು . ಅರಿವಿಲ್ಲದಂತೆ ಆನಂದಭಾಷ್ಪ ಜಿನುಗಿತು . 

ನಾಣ್ಯಗಳನ್ನು ರವಿ ನಿರ್ಲಕ್ಷಿಸಿರೂ ಅವು ಅವನಿಂದ ದೂರಾಗಲಿಲ್ಲ , ಹತ್ತಿರವಿದ್ದುಕೊಂಡೇ ವಿಷಮ ಸ್ಥಿತಿಯಲ್ಲಿ ಅವನ ಕೈ ಹಿಡಿದವು .. ವಾಸ್ತವದಲ್ಲೂ ಅಷ್ಟೇ .. ನಾವು ಅಂತಸ್ತಿನ ಅಹಮ್ಮಿನಿಂದ , ಸ್ಥಾನಮಾನದ ಬಿಗುಮಾನದಿಂದ ದೂರವಿಡುವ ಅತಿ ಸಾಮಾನ್ಯ ಜನರೇ ನಮಗೆ ಕಷ್ಟ ಕಾಲದಲ್ಲಿ ಆಸರೆಯಾಗುವವರು ಅನ್ನಿಸಿತು . ಒಂದು ದೊಡ್ಡ ಪಾಠವನ್ನೇ ಕಲಿತಂತಾಯಿತು.

March 10, 2025

ರೈಲು ಹಳಿ ಮತ್ತು ಹುಡುಗರು

ಓದುವಾಗ ಖಂಡಿತ ನಿಮ್ಮ ಮನ ಸೆಳೆಯುವದು !!!

ಎರಡು ರೈಲು ಹಳಿಗಳು ಅಕ್ಕಪಕ್ಕದಲ್ಲಿವೆ ಒಂದು ರೈಲು ಸಂಚಾರವಿಲ್ಲದ್ದು, ಇನ್ನೊಂದು ರೈಲು ಸಂಚಾರವಿರುವುದು.

 ರೈಲು ಸಂಚಾರವಿಲ್ಲದ ಹಳಿಯಲ್ಲಿ ಒಂದು ಮಗು ಆಟವಾಡುತ್ತಿದೆ, 

ರೈಲು ಸಂಚಾರವಿರುವ ಹಳಿಯಲ್ಲಿ ಹತ್ತು ಮಕ್ಕಳು ಒಟ್ಟಿಗೆ ಆಟವಾಡುತ್ತಿದ್ದಾರೆ.

 ಕೆಲವೇ ನಿಮಿಷಗಳಲ್ಲಿ ರೈಲು ಬಂದು ಬಿಡುತ್ತದೆ ಹಳಿ ಬದಲಿಸಿ ಸಂಚರಿಸಲು ಸಾಧ್ಯವಿರುವ ನೀವು !

ಇದನ್ನು ನೋಡುತ್ತೀರಿ

 ನೀವು ಯಾವ ಹಳಿ ಮೇಲೆ ರೈಲನ್ನು ಓಡಿಸುವಿರಿ?
 
ಪ್ರಾಕ್ಟಿಕಲಾಗಿ ಯೋಚಿಸಿ, ನಾವ್ಯಾರೂ ಸೂಪರ್ ಮ್ಯಾನ್ ಅಲ್ಲ..

ಹೀಗೊಂದು ಪ್ರಶ್ನೆಯನ್ನು ಒಬ್ಬರು ಒಂದು ವ್ಯಕ್ತಿಯೊಂದಿಗೆ ಕೇಳಿದರು.

ನಿಜವಾಗಿಯೂ ನಾವು ಏನು ಮಾಡುವೆವು?

 ಒಂದು ಮಗು 'ಕುಳಿತು ಆಟವಾಡುತ್ತಿರುವ ಹಳಿಯ ಕಡೆಗೆ ನಾವು ರೈಲನ್ನು ತಿರುಗಿಸುವೆವು.

ಏಕೆಂದರೆ, 'ಹತ್ತು ಮಕ್ಕಳನ್ನು' ರಕ್ಷಿಸಬಹುದು ಅನ್ನುವ ವಾಸ್ತವ!

ಸಮಾಜ ಇರುವುದೇ ಹೀಗೆ,

ರೈಲು ಬರುವುದೆಂದು ಗೊತ್ತಿದ್ದೂ ಹಳಿ ಮೇಲೆ ಆಟವಾಡಿ ತಪ್ಪು ಮಾಡಿದ ಮಕ್ಕಳು ರಕ್ಷಿಸಲ್ಪಡುವರು.
ರೈಲು ಬಾರದ ಸ್ಥಳದಲ್ಲಿ ಯಾರಿಗೂ ತೊಂದರೆಯಿಲ್ಲದೆ ಆಟವಾಡಿ ತಪ್ಪು ಮಾಡದ ಮಗು ಶಿಕ್ಷಿಸಲ್ಪಡುವುದು.

ಈ ಪ್ರಪಂಚದಲ್ಲಿ ನಮ್ಮ ಜೀವನವೂ

 ನಾಡೂ ಹೀಗೇ ಆಗಿದೆ.

Fault makers are majority, even they protected in most situations.

ಒಂಟಿಯಾಗಿ ಒಳಿತನ್ನು ಮಾಡಿದವನು ಶಿಕ್ಷಿಸಲ್ಪಡುತ್ತಾನೆ.
ಗುಂಪಾಗಿ ಕೆಡುಕನ್ನು ಮಾಡಿದವರು ರಕ್ಷಿಸಲ್ಪಡತ್ತಾರೆ.

A feel that never ends

ಸನಾತನ ಹಿಂದೂ ಧರ್ಮದಲ್ಲಿ ಹೆಣ್ಣಿನ ಸ್ಥಾನ

ಹೆಣ್ಣಿನ ಬಗ್ಗೆ ಅತೀ ಅದ್ಬುತ ಲೇಖನ. ಒಮ್ಮೆ ಓದಲೇಬೇಕು.

ದಶರಥ ಮಹಾರಾಜರು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ - ಸಪರಿವಾರ ಸಮೇತ,ಅದ್ದೂರಿಯ ಮದುವೆಯ ದಿಬ್ಬಣದದೊಂದಿಗೆ  ಜನಕ ಮಹಾರಾಜರ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾರೆ. 
ಆಗ ಜನಕ ಮಹಾರಾಜರು ತನ್ನ ಪರಿವಾರದ ಜೊತೆ ಎದುರಿಗೆ ಬಂದು ರಘುರಾಮನ ಮದುವೆ ಮೆರವಣಿಗೆಗೆ ಸ್ವಾಗತಕೋರುತ್ತಾರೆ.

ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜರ ಹತ್ತಿರ ಹೋಗಿ ಅವರ ಪಾದಗಳಿಗೆ ನಮಸ್ಕಾರ ಮಾಡುತ್ತಾರೆ. ಗಲಿಬಿಲಿಗೊಂಡ ಜನಕನು ದಶರಥ ಮಹಾರಾಜರನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ "ಮಹಾರಾಜ ನೀವು ದೊಡ್ಡವರು,ಮೇಲಾಗಿ ವರನ ಕಡೆಯವರು,ಹೀಗೆ ನನಗೆ ಪಾದಾಭಿವಂದನೆ ಮಾಡುವದು ಸರಿಯಲ್ಲ. ಗಂಗೆಯು ಹಿಂದಕ್ಕೆ ಹರಿಯುತ್ತಿರುವವಳೇ? ಎಂಬ ಸಂಶಯ ಮೂಡುತ್ತಿದೆ!"ಎಂದರು.

ಅದಕ್ಕೆ ಮಹಾರಾಜ ದಶರಥ ಮಹಾರಾಜರು ಅದ್ಭುತವಾದ ಉತ್ತರವನ್ನು ಕೊಡುತ್ತಾರೆ.
"ಜನಕ ರಾಜರೇ ನೀವು ದಾನ ನೀಡುವವವರು.ಇನ್ನೂ ಸ್ವಲ್ಪ ಹೊತ್ತಿಗೆ ಕನ್ಯಾದಾನ ಮಾಡುತ್ತಿರುವವರು.
ನಾನು ಯಾಚಕ.
ನಿಮ್ಮಿಂದ ಮಗನಿಗಾಗಿ ಕನ್ಯೆಯನ್ನು ಬೇಡಲು ಬಂದಿರುವವನು.
ಈಗ ನೀವೇ ಹೇಳಿರಿ, ದಾನ ಮಾಡುವವನು  ದೊಡ್ಡವರೋ?
ಇಲ್ಲಾ ದಾನ ಬೇಡುವವರು ದೊಡ್ಡವರೋ! 
ನಮ್ಮಿಬ್ಬರಲ್ಲಿ ಶ್ರೇಷ್ಠನಾರೆಂದು  ನಿಮಗೆ ಗೊತ್ತು"ಎಂದರು. 

ದಶರಥ ಮಹಾರಾಜರ ಮಾತು ಕೇಳಿದ ಜನಕನಿಗೆ ಕಣ್ಣೀರು & ಆನಂದಭಾಷ್ಪಗಳು ಒಮ್ಮೆಲೆ ಉಂಟಾದವು.
ಉದ್ವೇಗದಿಂದ ತನ್ನಲ್ಲಿಯೇ ಅಂದುಕೊಳ್ಳುತ್ತಾನೆ 
"ಹೌದು ಯಾರ ಮನೆಯಲ್ಲಿ ಮಗಳಿರುತ್ತಾಳೋ ಅವರೇ ಭಾಗ್ಯವಂತರು!"

ಪ್ರತಿ ಮಗಳ ಭಾಗ್ಯದಲ್ಲಿ ಅಥವಾ  ಅದೃಷ್ಟದಲ್ಲಿ ತಂದೆ ಇದ್ದೇ ಇರುತ್ತಾನೆ! 
ಆದರೆ 
ಪ್ರತಿ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!
ಇದು ಭಾರತೀಯರ ಮನಸ್ಸಿನಲ್ಲಿ ಮಗಳಿಗಿರುವ ಮಹತ್ವ!

ಸನಾತನ ಹಿಂದೂ ಧರ್ಮದಲ್ಲಿ ಹೆಣ್ಣಿನ‌ ಸ್ಥಾನಮಾನ;

ರಾಮನಿಗೆ.  ಸೀತೆ
ಕೃಷ್ಣನಿಗೆ➖ರುಕ್ಮಿಣಿ
ಶಿವನಿಗೆ➖ಪಾರ್ವತಿ
ನಾರಾಯಣನಿಗೆ➖ಲಕ್ಷ್ಮೀ
ಮಂತ್ರ ಪಠಣದಲ್ಲಿ➖ಗಾಯತ್ರೀ
ಗ್ರಂಥ ಪಠಣದಲ್ಲಿ➖ಗೀತಾ
ದೇವರೆದುರಿಗೆ. ವಂದನಾ, ಅರ್ಚನಾ, ಪೂಜಾ, ಆರತಿ, ಆರಾಧನಾ.. 
🔹 ನಮ್ಮ ದಿನಚರಿಯಲ್ಲಿ
ಉದಯಕ್ಕೆ➖ಉಷಾ.. 
ಸಂಜೆಗೆ ➖ ಸಂಧ್ಯಾ
ರಾತ್ರಿಗೆ➖ನಿಶಾ,  
ಬೆಳಕಿಗೆ➖ಜ್ಯೋತಿ,  ದೀಪಾ,
ಬೆಳದಿಂಗಳಿಗೆ. ರಜನೀ,
ಸೂರ್ಯಕಿರಣಕ್ಕೆ➖ರಶ್ಮಿ, 
ಚಂದಿರನಿಗೆ➖ಶಶಿ, ಶಶಿಕಲಾ,
ಹೆಸರಾಗುವುದಕ್ಕೆ➖ಕೀರ್ತಿ
ಕನಸಿಗೆ➖ಸ್ವಪ್ನಾ
ನೋಟಕ್ಕೆ➖ನಯನಾ,
ಕೇಳುವುದಕ್ಕೆ➖ಶ್ರಾವ್ಯ,
ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣೀ,
ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರೀ,
ಹಸು, ಆಕಳಿಗೆ➖ನಂದಿನೀ,
ಜಗತ್ತಿಗೆ➖ಜಗದೀಶ್ವರೀ, ಜಗದಂಬಾ,
ದೇಶಕ್ಕೆ➖ಭಾರತೀ,
ಕನ್ನಡ ನಾಡಿಗೆ➖ಭುವನೇಶ್ವರೀ,
ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ,
ಸಮರ್ಪಣೆಗೆ➖ಅರ್ಪಣಾ
ಆಹಾರಕ್ಕೆ➖ಅನ್ನಪೂರ್ಣಾ,
ನಡೆಯುವುದಕ್ಕೆ➖ಹಂಸಗಮನಾ,
ನಗುವಿಗೆ➖ಸುಹಾಸಿನೀ.
ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ,
ಸುವಾಸನೆಗೆ➖ಚಂದನ, ಪರಿಮಳಾ,
ಒಳ್ಳೆಯ ನುಡಿಗೆ➖ಸುಭಾಷಿಣೀ,
ತೇಜಸ್ಸಿಗೆ➖ತೇಜಸ್ವಿನೀ,
ಚುಕ್ಕಿಗೆ➖ಬಿಂದು, ನಕ್ಷತ್ರ,
ಗೆರೆಗೆ➖ರೇಖಾ, ಶಶಿರೇಖಾ,
ಮುತ್ತಿಗೆ➖ಸ್ವಾತಿ,
ಹರಳಿಗೆ➖ರತ್ನ,
ಮಾದರಿಗೆ➖ಸ್ಫೂರ್ತಿ, ಪ್ರೇರಣಾ,
ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ,
ಕೆಲಸಕ್ಕೆ➖ಕೃತಿ, ಕೃತಿಕಾ,
ಇಷ್ಟಕ್ಕೆ➖ಪ್ರೀತಿ,
ನೀರಿಗೆ➖ಗಂಗಾ,
ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ,
ಬೆಳ್ಳಿಗೆ➖ರಜತ, ರಂಜಿತ,
ಚಿತ್ತಾರಕ್ಕೆ➖ಚಿತ್ರ,
ಊಹೆಗೆ➖ಕಲ್ಪನಾ,
ನಿಜ ಸಂಗತಿಗೆ➖ಸತ್ಯವತೀ,
ಶುದ್ಧತೆಗೆ➖ನಿರ್ಮಲಾ, ಪವಿತ್ರಾ,
ಆಲೋಚನೆಗೆ➖ಭಾವನಾ,
ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣಕ್ಕೆ➖ವಿದ್ಯಾ,
ಬುದ್ಧಿಗೆ, ಚತುರತೆಗೆ➖ಪ್ರತಿಭಾ,
ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ,
ಕೋಪಕ್ಕೆ➖ಭೈರವಿ, ಕಾಳಿ,
ಧೈರ್ಯಕ್ಕೆ➖ದುರ್ಗೆ,
ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ,
ಹೆಸರಾಗುವುದಕ್ಕೆ➖ಕೀರ್ತಿ,
ಹಾಡಿಗೆ➖ಸಂಗೀತ,
ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ,
ನಾಟ್ಯ➖ಮಯೂರಿ,
ಸಾಹಿತ್ಯ➖ಕವಿತಾ, ಕಾವ್ಯ, ಕವನ, ಪಲ್ಲವಿ.
ನಿಸರ್ಗಕ್ಕೆ➖ಪ್ರಕೃತಿ,
ರಕ್ಷಣೆಗೆ➖ರಕ್ಷಾ, ಸುರಕ್ಷಾ,
ವಿದ್ಯಾಭ್ಯಾಸಕ್ಕೆ➖ವಿದ್ಯಾ,
ಸಂಪಾದನೆಗೆ➖ಲಕ್ಷ್ಮೀ,
ಸ್ಫೂರ್ತಿಗೆ➖ಪ್ರೇರಣಾ,
ಮೌನಕ್ಕೆ➖ಶಾಂತಿ,
ಮಧುರತೆಗೆ➖ಮಾಧುರಿ, ಮಂಜುಳ,
ಕನಿಕರಕ್ಕೆ➖ಕರುಣಾ,
ಆಕ್ರೋಶಕ್ಕೆ➖ಕಾಳಿ ,
ವಾತ್ಸಲ್ಯಕ್ಕೆ➖ಮಮತಾ,
ಆಯುಷ್ಯಕ್ಕೆ➖ಜೀವಿತಾ,
ಮೋಡಗಳಿಗೆ➖ಮೇಘ, ಮೇಘನಾ,
ಚಿಮುಕಿಸುವಿಕೆಗೆ➖ಸಿಂಚನಾ,
ಬಿಳುಪಿಗೆ➖ಶ್ವೇತಾ, ಗೌರೀ,
ಕಪ್ಪಿಗೆ➖ಕೃಷ್ಣೆ,
ವಾಸನೆಗೆ➖ಪರಿಮಳಾ,
ಹೂವಿಗೆ➖ಪುಷ್ಪ, ಸುಮ,, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..
ಬಳ್ಳಿಗೆ➖ಲತಾ, 
ಹಾರಕ್ಕೆ➖ಮಾಲಾ, ಮಾಲಿನಿ,
ಶುಭಕರ➖ಮಂಗಳ,  ಸುಮಂಗಳ, ಶುಭಾಂಗಿ
ಒಳ್ಳೆಯ ಮನಸ್ಸಿಗೆ➖ಸುಮನ
ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ,
ವಿಸ್ತಾರಕ್ಕೆ➖ವಿಶಾಲ, ವೈಶಾಲಿ,
ಜೇನಿಗೆ➖ಮಧು,
ಬಯಕೆಗೆ➖ಆಶಾ, ಅಪೇಕ್ಷಾ,
ತೀರ್ಮಾನಕ್ಕೆ➖ನಿಶ್ಚಿತ,
ಬರಹಕ್ಕೆ➖ಲಿಖಿತ,
ನೆರಳಿಗೆ➖ಛಾಯಾ,
ನಿಧಾನಕ್ಕೆ➖ಮಂದಾಕಿನಿ,
ಹೂ ಗೊಂಚಲಿಗೆ➖ಮಂಜರಿ,
ಕಲೆಗೆ➖ಕಲಾ,
ಗೌರವಕ್ಕೆ➖ಮಾನ್ಯ, ಮಾನ್ಯತಾ,
ನದಿಗಳಿಗೆ➖ಗಂಗಾ, ಯಮುನಾ, ಸರಸ್ವತೀ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ, 

ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ  ಹೆಣ್ಣು ಇರುವಳು
ತಾಯಿಯಾಗಿ
ಪ್ರೇಯಸಿಯಾಗಿ
ಮಗಳಾಗಿ
ಸೊಸೆಯಾಗಿ
ಹೀಗೆ‌ ಮುಂದುವರೆಯುವುದು.

March 5, 2025

ಸೊಂಟಕ್ಕೆ ಉಡದಾರ ಕಟ್ಟುವ ಉದ್ದೇಶ

ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಆಚರಣೆಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ನಾವು ಧರಿಸುವ ಪ್ರತಿಯೊಂದು ವಸ್ತುವೂ ನಮಗೆ ಆರೋಗ್ಯದ ಜೊತೆಗೆ ವಿಕಾಸವನ್ನು ನೀಡುತ್ತದೆ. ಅದರಲ್ಲಿ ಒಂದು ಗಂಡು ಮಕ್ಕಳು ಸೊಂಟಕ್ಕೆ ಕಟ್ಟಿಕೊಳ್ಳುವ ಉಡದಾರ ಸಹ ಒಂದು.
ಉಡದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಇದು ಹಿಂದೂಗಳಲ್ಲಿ ಪ್ರತಿ ಪುರುಷನಿಗೆ ಇರುತ್ತದೆ. ಚಿಕ್ಕ ಮಕ್ಕಳಿಗೆ ಉಡದಾರ ಕಟ್ಟಿದರೆ ಅವರ ಬೆಳವಣಿಗೆಯ ಸಮಯದಲ್ಲಿ ಮೂಳೆಗಳು, ಖಂಡಗಳು ಸರಿಯಾದ ಪದ್ದತಿಯಲ್ಲಿ ವೃದ್ಧಿಯಾಗುತ್ತವೆಯಂತೆ. ಮುಖ್ಯವಾಗಿ ಗಂಡು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪುರುಷಾಂಗ ಯಾವುದೇ ರೀತಿಯ ಅಸಮತೋಲನೆಗೆ ಗುರಿಯಾಗದೇ ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗಲು ಉಡದಾರ ಕಟ್ಟುತ್ತಾರಂತೆ.

    ಉಡದಾರ ಧರಿಸಿದರೆ ರಕ್ತ ಪ್ರಸರಣ ಕೂಡ ಉತ್ತಮಗೊಳ್ಳುತ್ತದೆ. ಗಂಡಸರಿಗೆ ಹೆರ್ನಿಯಾ ಬರದಂತೆ ಉಡದಾರ ಕಾಪಾಡುತ್ತದೆಯಂತೆ. ಇದನ್ನು ಕೆಲವು ವಿಜ್ಞಾನಿಗಳು ಸಹ ನಿರೂಪಿಸಿದ್ದಾರಂತೆ‌. ನಮ್ಮಲ್ಲಿ ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ತಾಮ್ರದಲ್ಲಿ ಮಾಡಿದ ಉಡದಾರವನ್ನು ಕಟ್ಟುತ್ತಾರೆ. ಅಂದರೆ ಯಾವುದೇ ರೀತಿಯ ಉಡುದಾರ ಧರಿಸಿದರೂ ಅದರಿಂದ ಉಪಯೋಗ ಮಾತ್ರ ಖಂಡಿತ ಇರುತ್ತದೆ.

March 3, 2025

ದ್ರೌಪದಿ ಹಾಗೂ ಐದು ಜನ ಪಾಂಡವರು

ಪುರಾಣದ ಕತೆಯಿಂದ ಸಂಗ್ರಹಿಸಿದ್ದು...ಓದಿ ನಿಮ್ಮ ಅಭಿಪ್ರಾಯ ತಿಳಿಸಿ.ಸ್ನೇಹಿತರೆ
ದ್ರೌಪದಿ ಐದು ಜನ ಪಾಂಡವರನ್ನು   ಮದುವೆಯಾಗಿ ಐವರೊಡನೆ ಹೇಗೆ ಸಂಸಾರ ಮಾಡಿದಳು ? ಎಂಬ ವಿಚಾರ ಹಲವರಿಗೆ ಸಂಶಯ... ಅದಕೆಂದೆ ಇಂಥಾ ಕೀಳುಮಟ್ಟದ ಮೆಸೇಜ್ಗಳು ಆಗಾಗ  ಹರಿದಾಡುತ್ತಿರುತ್ತವೆ.. 

ಮೊದಲು ಎಲ್ಲರೂ ತಿಳಿಯಬೇಕಾದ ಸಂಗತಿಯೆಂದರೆ, ಭಗವಂತ ಕೃಷ್ಣನಾಗಿ ಭೂಮಿಗೆ ಬಂದಾಗ ಪಾಂಡವರು, ದ್ರೌಪದಿ, ಭೀಷ್ಮ, ದ್ರೋಣ ಹೀಗೆ ಅನೇಕಾನೇಕ  ದೇವತೆಗಳು ಅವತಾರವೆತ್ತಿ ಭೂಮಿಗೆ ಬಂದರು ಎಂಬ ಮಾತನ್ನು ಮಹಾಭಾರತವೇ ಸ್ಪಷ್ಟವಾಗಿ ಹೇಳುತ್ತದೆ.... 

ಮಹಾಭಾರತವೇ ಹೇಳುವಂತೆ ದೂರ್ವಾಸರಿತ್ತ ಮಂತ್ರಶಕ್ತಿಯನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಈ ಪಂಚ ಪಾಂಡವರನ್ನು ಪಡೆದದ್ದು... ಆಯಾ ಮಂತ್ರದಿಂದ ಕರೆದ ದೇವತೆಯೇ ಕುಂತಿಯಲ್ಲಿ - ಯಮ, ವಾಯು, ಇಂದ್ರ ಮತ್ತು ಮಾದ್ರಿಯಲ್ಲಿ - ಅಶ್ವಿದೇವತೆಗಳು ಮಕ್ಕಳಾಗಿ ಹುಟ್ಟಿ ಬಂದರು..‌. 

ಯಮರಾಜನೆ "ಧರ್ಮರಾಜ"ನಾಗಿ ಬಂದ..
ವಾಯುದೇವ "ಭೀಮಸೇನ"ನಾಗಿ ಬಂದ...
ದೇವತೆಗಳ ಒಡೆಯನಾದ ಇಂದ್ರ "ಅರ್ಜುನ"ನಾಗಿ ಬಂದ...
ಅಶ್ವಿದೇವತೆಗಳೇ ನಕುಲ-ಸಹದೇವರಾಗಿ ಈ ಭೂಮಿಗೆ ಬಂದರು... 

ಈ ಎಲ್ಲ ದೇವತೆಗಳಿಗೂ ಮೂಲರೂಪದಲ್ಲಿ ಪತ್ನಿಯರಿದ್ದಾರೆ... ಗಂಡಂದಿರು ಭೂಮಿಗೆ ಹೋದಾಗ ಅವರೂ ಬರಬೇಡವೇ,.. ಹಾಗೆ ಇಳೆಗೆ ಬರುವಾಗ ಇವರೆಲ್ಲರ ಪತ್ನಿಯರೂ ದ್ರೌಪದಿಯಲ್ಲಿ ಸನ್ನಿಹಿತರಾದರು... 

ದ್ರೌಪದಿಯಲ್ಲಿ, ಯಮನ ಪತ್ನಿ ಶ್ಯಾಮಳಾ ಇದ್ದಾಳೆ. ಇವಳೇ ಧರ್ಮರಾಜನ ಪತ್ನಿಯಾಗಿ ದ್ರೌಪದಿ ರೂಪದಿಂದ  ಸಂಸಾರ ಮಾಡುತ್ತಾಳೆ...

ವಾಯುದೇವರ ಪತ್ನಿ ಭಾರತೀದೇವಿ ದ್ರೌಪದಿಯಲ್ಲಿ ಇದ್ದಾಳೆ... ದ್ರೌಪದಿ ಭೀಮನೊಟ್ಟಿಗಿದ್ದಾಗ ಒಳಗಿನಿಂದ ಭಾರತಿದೇವಿ ದ್ರೌಪದಿಯ ರೂಪದಲಿದ್ದು ಭೀಮನೊಟ್ಟಿಗೆ ಸಂಸಾರ ಮಾಡಿದಳು... 

ಇಂದ್ರ ಪತ್ನಿಯಾದ ಶಚೀದೇವಿ ದ್ರೌಪದಿ ರೂಪದಲ್ಲಿದ್ದು ಅರ್ಜುನನೊಡನೆ ಸಂಸಾರ ಮಾಡಿದಳು... 

ಹಾಗೆಯೇ ಅಶ್ವಿದೇವತೆಗಳ ಪತ್ನಿ ಉಷಸ್ ದೇವತೆ ದ್ರೌಪದಿಯಲ್ಲಿದ್ದು ನಕುಲ ಮತ್ತು ಸಹದೇವರೊಟ್ಟಿಗೆ ದ್ರೌಪದಿ ರೂಪದಿಂದ ಸಂಸಾರ ಮಾಡಿದರು.. 

ಇದಾವುದರ ಅರಿವೂ ಇಲ್ಲದೆ ನಮ್ಮ ಧರ್ಮಗ್ರಂಥಗಳ, ಇತಿಹಾಸ ಗ್ರಂಥಗಳ ಬಗೆಗೆ ಅವಹೇಳನಕಾರಿ ಸಂದೇಶಗಳನ್ನು ರವಾನಿಸುವುದು ತಪ್ಪಲ್ಲವೇ ???

ಇನ್ನಾದರೂ ನಮ್ಮ ಸಂಸ್ಕೃತಿಯ ಬಗೆಗೆ ಅವಹೇಳನಕಾರಿಯಾಗಿ ಬಿಂಬಿಸುವವರ ವಿರುದ್ಧ ಧ್ವನಿ ಎತ್ತೋಣ..

ನ್ಯಾಯ ದೇವತೆ ಶನೈಶ್ಚರ

ನ್ಯಾಯ ದೇವತೆಯ ಉಪಾಧಿ :
ಭಗವಾನ್ ಶನಿಗೆ ಸಿಕ್ಕ ನ್ಯಾಯ ದೇವತೆಯ ಉಪಾದಿ. ಹಿಂದೂ ಧರ್ಮದಲ್ಲಿ ಶನಿ ದೇವರ ಸ್ಥಾನ ಬಹಳ ಮಹತ್ವಪೂರ್ಣವಾಗಿದೆ. ಶನಿ ದೇವರು ಸಾಕ್ಷಾತ್ ರುದ್ರ ಆಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಶನಿ ದೇವರು ನ್ಯಾಯದ ದೇವತೆ ಎಂದು ಹೇಳಿದ್ದಾರೆ. ಈ ಸಮಸ್ತ ದೇವತೆಗಳಲ್ಲಿ ಶನಿ ದೇವರಿಗೆ ಪ್ರೇಮ ಭಕ್ತಿಯಿಂದ ಅಲ್ಲ, ಭಯದಿಂದ ಪೂಜಿಸಲಾಗುತ್ತದೆ. ಶನಿ ದೇವನಿಗೆ ನ್ಯಾಯ ದೇವತೆಯ ಉಪಾಧಿ ಪ್ರಾಪ್ತವಾಗಿದೆ ಎಂಬ ಕಾರಣವೂ ಇದೆ. ಮಾನ್ಯವಿದೆ, ಶನಿ ದೇವರು ಕರ್ಮದ ಆಧಾರದ ಮೇಲೆ ಜಾತಕಗಳಿಗೆ ಫಲ ಪ್ರಧಾನ ಮಾಡುತ್ತಾರೆ.   ಯಾವ ಜಾತಕದಲ್ಲಿ ಒಳ್ಳೆ ಕರ್ಮಗಳು ಇವೆಯೋ ಅವುಗಳ ಮೇಲೆ ಶನಿಯ ಕೃಪೆ ಇರುತ್ತದೆ. ಕೆಟ್ಟ ಕರ್ಮಗಳಲ್ಲಿ ನಿರತನಾದವನಿಗೆ ಅವರ ಮೇಲೆ ಶನಿಯ ಪ್ರಕೋಪ ಹೆಚ್ಚಾಗಿರುತ್ತದೆ. ಶನಿ ದೇವರು ಯಾರು..? ಅವರ ಜನ್ಮದ ಕಥೆ ಏನು..? ಹೇಗೆ ಅವರು ನ್ಯಾಯಾಧೀಶರಾದರು..? ಇದು ತಿಳಿಯುವುದು ಮುಖ್ಯವಾಗಿದೆ.

 ಶನಿ ದೇವರು ಯಾರು..
ಶಾಸ್ತ್ರದ ಅನುಸಾರ ಭಗವಾನ್ ಸೂರ್ಯ ಮತ್ತು ದೇವಿ ಛಾಯಾ ಇವರ ಪುತ್ರನಾಗಿದ್ದಾನೆ. ಈತನಿಗೆ ಕ್ರೂರ ಗ್ರಹದ ಶಾಪವೂ ತನ್ನ ಪತ್ನಿಯಿಂದ ಪ್ರಾಪ್ತವಾಗಿರುತ್ತದೆ. ಈತನ ವರ್ಣವ ಕಪ್ಪು, ವಾಹನ ಕಾಗೆ. ಪೌರಾಣಿಕ ಕಥೆಯ ಅನುಸಾರ ಶನಿ ದೇವರು ಕೃಷ್ಣನ ಭಕ್ತನಾಗಿದ್ದ.  ಬಾಲ್ಯಾವಸ್ಥೆಯಿಂದಲೇ ಕೃಷ್ಣನನ್ನು ಪೂಜಿಸುತ್ತಿದ್ದ. ತಾರುಣ್ಯದಲ್ಲಿ ಇವರ ತಂದೆ ಇವರ ವಿವಾಹವನ್ನು ಚಿತ್ರರತನ ಕನ್ಯೆಯೊಂದಿಗೆ ಮಾಡಿದರು. ಒಂದು ದಿನ ಅವರಯು ಪುತ್ರಪ್ರಾಪ್ತಿಯ ಆಸೆ ಹೊತ್ತು ಅವರ ಬಳಿಗೆ ಬಂದಳು. ಆಗ ನ್ಯಾಯ ದೇವತೆ ಶನಿಯು ಭಗವಾನ್ ಶ್ರೀ ಕೃಷ್ಣನ ಧ್ಯಾನದಲ್ಲಿ  ಕುಳಿತಿದ್ದರು. ಅವರು ಸಂಸಾರ ಬಂಧನದಿಂದ ಪೂರ್ತಿಯಾಗಿ ಕಳಚಿಕೊಂಡಿದ್ದರು. ಅವರು ಎಚ್ಚೆತ್ತುಕೊಳ್ಳುವ ಪ್ರತಿಕ್ಷ ಮಾಡಿ ಅವರ ಪತ್ನಿಯು ಸೋತು ಹೋದಳು. ಆಗ ಅವಳು ಕ್ರೋಧಗೊಂಡು ಶನಿ ದೇವರಿಗೆ ಶಾಪ ಕೊಟ್ಟಳು. ಅವರು ಯಾರಿಗೆ ನೋಡಿದರು ಅದು ಅವರ 'ಕು' ದೃಷ್ಟಿಯಾಗುವುದು, ನಷ್ಟವಾಗುವುದು. 
ಧ್ಯಾನದಿಂದ ಎಚ್ಚರವಾದ ಮೇಲೆ ಶನಿ ದೇವರು ತನ್ನ ಪತ್ನಿಗೆ ಬಹಳ ಒಲಿಸಿಕೊಳ್ಳಲು ಪ್ರಯತ್ನಿಸಿದ,  ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿದ. ಅವರ ಪತ್ನಿಗೆ ಕೂಡ ತನ್ನ ತಪ್ಪಿನ ಅರಿವಾಯಿತು. ಆದರೆ ಶಾಪವನ್ನು ಹಿಂದಕ್ಕೆ ಪಡೆಯುವ ಶಕ್ತಿ ಅವಳಲ್ಲಿ ಇರಲಿಲ್ಲ. ಈ ಕಾರಣದಿಂದ  ಶನಿ ದೇವರು ತನ್ನ ತಲೆ ತಗ್ಗಿಸಿಕೊಂಡು ಇರಬೇಕಾಯಿತು. ಕಾರಣ, ತನ್ನಿಂದ ಯಾರಿಗೂ ಹಾನಿ ಉಂಟಾಗದಿರಲಿ ಎಂದು. ಆದ್ದರಿಂದ ಶನಿಯು ರೋಹಿಣಿಗೆ ಪ್ರವೇಶಿಸಿದರೆ ಭೂಮಿಯ ಮೇಲೆ 12 ವರ್ಷಗಳ ಕಾಲ ಭೀಕರ ಬರಗಾಲವಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಪ್ರಾಣಿಗಳು ಬದುಕುವುದು ಕಷ್ಟವಾಗುತ್ತದೆ.

ಶನಿಗೆ ನ್ಯಾಯಾಧೀಶರ ಉಪಾದಿ ಹೇಗೆ ಸಿಕ್ಕಿತು..?
ದಂತಕಥೆಗಳ ಪ್ರಕಾರ, ಭಗವಾನ್ ಸೂರ್ಯ ತನ್ನ ಹೆಂಡತಿ ಛಾಯಾಳ ಬಳಿಗೆ ಬಂದಾಗ, ಅವನ ಹೆಂಡತಿ ಛಾಯಾ ಸೂರ್ಯನ ಬೆಳಕಿನಿಂದ ಕಣ್ಣುಗಳ ರೂಪವನ್ನು ಪಡೆದಳು. ಈ ಕಾರಣದಿಂದ ಶನಿದೇವನ ಬಣ್ಣ ಶ್ಯಾಮ ಅಂದರೆ ಕಪ್ಪಾಯಿತು. ಇದರಿಂದ ಶನಿದೇವ ತನ್ನ ತಂದೆಯ ಮೇಲೆಯೇ ಕೋಪಗೊಂಡನು. ಶನಿ ದೇವನು ಮುಂದೆ ಶಂಕರನ ಕುರಿತು ತೀವ್ರ ತಪಸ್ಸು ಮಾಡಿದನು ಮತ್ತು ಈ ತಪಸ್ಸಿನಿಂದ ಅವನು ತನ್ನ ದೇಹವನ್ನು ಸಂಪೂರ್ಣವಾಗಿ ಸುಟ್ಟುಹಾಕಿದನು. ಶಿವನು ಶನಿಯ ಭಕ್ತಿಯನ್ನು ನೋಡಿ ಬಹಳ ಸಂತೋಷಪಟ್ಟನು ಮತ್ತು ವರವನ್ನು ಕೇಳಲು ಕೇಳಿದನು. ಶನಿ ದೇವನು ತನ್ನ ತಂದೆಯ ಆರಾಧನೆಗಿಂತ ಹೆಚ್ಚಾಗಿ ತನ್ನ ಆರಾಧನೆಯನ್ನು ಬಯಸಬೇಕೆಂದು ವರವಾಗಿ ಕೇಳಿದನು, ಇದರಿಂದ ಸೂರ್ಯ ದೇವರ ಅಹಂಕಾರವು ಅವನ ಬೆಳಕಿನಲ್ಲಿ ಮುರಿಯುತ್ತದೆ. ಭಗವಾನ್ ಶಿವನು ಶನಿದೇವನಿಗೆ ವರವನ್ನು ನೀಡಿದನು, ನೀವು ಒಂಬತ್ತು ಗ್ರಹಗಳಲ್ಲಿ ಅತ್ಯುತ್ತಮರಾಗುತ್ತೀರಿ ಮತ್ತು ಭೂಮಿಯ ಮೇಲೆ ನ್ಯಾಯಾಧೀಶರಾಗಿ, ನೀವು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತೀರಿ. ಆದ್ದರಿಂದ ಇಂದಿಗೂ ಶನಿ ದೇವರನ್ನು ನ್ಯಾಯಾಧೀಶನಾಗಿ ಪೂಜಿಸಲಾಗುತ್ತದೆ ಮತ್ತು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಹೊಂದಿದೆ.

ಜ್ಯೋತಿಷ್ಯದಲ್ಲಿ ಶನಿ ಗ್ರಹದ ಪ್ರಾಮುಖ್ಯತೆ ಏನು?
ಜ್ಯೋತಿಷ್ಯದಲ್ಲಿ ಶನಿಯು ಅಶುಭ ಗ್ರಹಗಳಲ್ಲಿ ಎಣಿಸಲ್ಪಟ್ಟಿದೆ ಮತ್ತು ಒಂಬತ್ತು ಗ್ರಹಗಳಲ್ಲಿ ಏಳನೇ ಸ್ಥಾನದಲ್ಲಿ ಬರುತ್ತದೆ ಎಂದು ಹೇಳಲಾಗುತ್ತದೆ. ಅವರು 30 ತಿಂಗಳ ಕಾಲ ಒಂದೇ ರಾಶಿಯಲ್ಲಿ ವಾಸಿಸುತ್ತಾರೆ ಮತ್ತು ಮಕರ ಸಂಕ್ರಾಂತಿ ಮತ್ತು ಅಕ್ವೇರಿಯಸ್ ಅನ್ನು ಆಳುವ ಗ್ರಹವಾಗಿದೆ. ಶನಿಯ ಮಹಾದಶಾ 19 ವರ್ಷಗಳವರೆಗೆ ಇರುತ್ತದೆ. ಅದೇ ಸಮಯದಲ್ಲಿ, ಶನಿಯ ಗುರುತ್ವಾಕರ್ಷಣೆಯ ಬಲದಿಂದ, ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳು ಶನಿಯನ್ನು ತಲುಪುತ್ತವೆ, ಇದರಿಂದಾಗಿ ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳು ಸಿಗುತ್ತವೆ. ಆದ್ದರಿಂದ, ಯಾವುದೇ ರೀತಿಯ ಕೆಟ್ಟ ಕರ್ಮದಲ್ಲಿ ಪಾಲ್ಗೊಳ್ಳದವರು ಶನಿದೇವನಿಗೆ ಭಯಪಡುವ ಅಗತ್ಯವಿಲ್ಲ. ಅವನ ಆರಾಧನೆಯಿಂದ ಶನಿದೇವನು ಸುಲಭವಾಗಿ ಪ್ರಸನ್ನನಾಗುತ್ತಾನೆ.