January 23, 2022

ನಮ್ಮವರೇ ನಮಗೆ ಶತೃಗಳೇ

ನಮ್ಮವರೇ ನಮಗೆ ಶತೃಗಳೇ...!!! 
ದಯವಿಟ್ಟು ಗಮನಿಸಿ.

ಒಮ್ಮೆ ನಾಯಿ ಮತ್ತು ಕತ್ತೆಯಾ ನಡುವೆ ಓಟದ ಸ್ಪರ್ಧೆ ನಡಿತಾಯಿತ್ತು.!

ನಾಯಿಯು ತನ್ನ ಮನಸ್ಸಿನಲ್ಲಿ ಸಂತೋಷ ಪಡುತ್ತ ಕತ್ತೆ ಜೋತೆನ ನನ್ನ ಸ್ಪರ್ಧೆ ಎಂದು ಮುಗುಳ್ ನಗುತ್ತ, ಬಹಳ ಅಂತರದಿಂದ ಗೆಲ್ಲುವೆ ಎಂಬ ಆತ್ಮ ವಿಶ್ವಾಸದಿಂದ ಸ್ಪರ್ಧೆಗೆ ಇಳಿದಿತ್ತು.!
ಓಟ ಪ್ರಾರಂಭವಾಯಿತು, ನಾಯಿಯು ತನ್ನ ಸಂಪೂರ್ಣ ಬಲವನ್ನ ಉಪಯೋಗಿಸಿ ಕತ್ತೆಗಿಂತ ಮುಂದೆ ಓಡತೊಡಗಿತು.!
ಒಂದು ಓಣಿಯಿಂದ ಇನ್ನೋಂದು ಓಣಿಗೆ ಹೋಗುತ್ತಲೇ ಶುರುವಾಯಿತು ನೋಡಿ ಎದುರಾಳಿಗಳ ಕಾಟ, ಎದುರಾಳಿಗಳು ಯಾರಂತಿರಾ? ತನ್ನ ಕುಲಭಾಂದವರೇ, ತಾನು ಓಡುವುದನ್ನ ನೋಡಿ ಆ ಓಣಿಯಾ ನಾಯಿಗಳು ಅದನ್ನ ತಡೆಯಲು ಪ್ರಾರಂಭಿಸಿದವು,ಜಗಳಕ್ಕೆ ನಿಂತವು.
ಆಗ ಅದು ತನ್ನೆಲ್ಲ ಬಲವನ್ನು ಉಪಯೋಗಿಸಿ ಅಲ್ಲಿಂದ  ಮುಂದೆ ಸಾಗಿತು, ಮುoದೆ ಸಾಗಿದಂತೆ ಮತ್ತೊಂದು ಓಣಿ ಹೊಕ್ಕಿತು. ಅಲ್ಲಿ ಹಿಂದಿನ ಓಣಿಕ್ಕಿಂತ ಹೆಚ್ಚು ನಾಯಿಗಳು ಎದುರು ನಿಂತವು, ಇದನ್ನ ಮುಂದೆ ಹೊಗದಂತ್ತೆ ತಡೆದು ಅದರ ಮೇಲೆ ಹರಿಹೈದವು, ಕಾಲುಯಳೆಯಲು ಪ್ರಾರಂಭಿಸಿದವು. ತಾನು ತನ್ನ ಕುಲಭಾಂದವರಿಂದ ತಪ್ಪಿಸಿ ಕೊಂಡು ಓಡಿ ತನ್ನ ಗುರಿತಲುಪವ ಹೊತ್ತಿಗೇ ಆ ಕತ್ತೆ ಯಾವುದೇ ಅಡೆ ತಡೆಯಿಲ್ಲದೆ ವಿಜಯವನ್ನು ಸಾಧಿಸಿ ಬಿಟ್ಟಿತ್ತು.

ಅದನ್ನ ಕಂಡ ನಾಯಿ ತನ್ನ ಮನಸ್ಸಿನಲ್ಲೆ ನನ್ನವರೇ ನನಗೆ ಶತ್ರುಗಳಾದರಲ್ಲ ಎಂದು ಮರಗಿ, ಸೋತು ಸಣ್ಣಗಾಯಿತು..!
ಗೆಳೆಯರೇ ಈ ರೀತಿಯಾ ಸನ್ನಿವೆಶಗಳು ನಮ್ಮ ಬಹು ಜನರ ಬಾಳಿನಲ್ಲಿ ನಡಿತ್ತಾನೇ ಬಂದಿವೆ. 
ನಮ್ಮನಮ್ಮಲ್ಲಿ ಹೊಡೆದಾಡುವುದು, ಕಾಲೆಳೆಯುವುದು ನಮ್ಮ ಸಮಾಜದಲ್ಲಿ ಕಂಡು ಬರುತ್ತದೆ. ಎಲ್ಲಿಯವರೆಗೆ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ಶತ್ರುಗಳು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಾರೆ.

ಇದು ಸದ್ಯದ ಮಟ್ಟಿಗೆ ನಮ್ಮಲ್ಲೇ ನಡೆಯುತ್ತಿರುವ ನಿದರ್ಶನ. ...

ಜ್ಯೋತಿಷ್ಯ ಪರಿಹಾರಗಳು

ಕೆಲವೊಂದು ಪರಿಹಾರಗಳು.
(ನಾಡೀ ಗ್ರಂಥದಿಂದ ಸಂಗ್ರಹಿಸಿದ್ದು).

ಲಗ್ನಕ್ಕೆ 7ರಲ್ಲಿ------
ರವಿ.....ಅರ್ಕ ವಿವಾಹ ಮಾಡಬೇಕು.
ಕುಜ.....ಕುಜ ಶಾಂತಿ, ಮಾಂಗಲ್ಯ ಶಾಂತಿ
ಶನಿ.... ಕುಂಭ ವಿವಾಹ, ಶನಿ ಶಾಂತಿ.
ರಾಹು.... ಸರ್ಪ ವಿವಾಹ ಶಾಂತಿ.
ಕೇತು.... ಸರ್ಪ ಶಾಂತಿ, ಮಾಂಗಲ್ಯ ಶಾಂತಿ.
...........
ಲಗ್ನಕ್ಕೆ7ರಲ್ಲಿ------------
ಕುಜ, ಶನಿ ಇದ್ದರೆ.......
ಕುಜಶಾಂತಿ,ಶನಿಶಾಂತಿ

ಚಂದ್ರ, ಶುಕ್ರ,ಕುಜ---
ಲಕ್ಷ್ಮೀ ನಾರಾಯಣ ಶಾಂತಿ.

ರವಿ, ಚಂದ್ರ, ಶನಿ,.....
ಸೀತಾ ಕಲ್ಯಾಣ.

ಶುಕ್ರ, ಚಂದ್ರ,ಕುಜ.....
ಗಿರಿಜಾ ಕಲ್ಯಾಣ.

ಗುರು, ಶುಕ್ರ, ಕುಜ......
ಶಚಿ ಪುರಂದರ ಕಲ್ಯಾಣ.

ರಾಹು,ಕುಜ, ಶುಕ್ರ.....
ಪಾರ್ವತಿ ಕಲ್ಯಾಣ.

ಚಂದ್ರ, ಕುಜ, ಬುಧ....
ಲಕ್ಷ್ಮೀ ನರಸಿಂಹ ಕಲ್ಯಾಣ.

ಗುರು, ಬುಧ,ಕುಜ.....
ರಾಧಾ ಕಲ್ಯಾಣ.

ರವಿ, ರಾಹು, ಶನಿ......
ಛಾಯಾದೇವಿ ಕಲ್ಯಾಣ.

ಶನಿ,ಕುಜ, ಶುಕ್ರ.....
ಭವಾನಿ ಕಲ್ಯಾಣ.

ರಾಹು, ಗುರು, ಕುಜ....
ಸುಬ್ರಹ್ಮಣ್ಯ ಕಲ್ಯಾಣ.

ಕೇತು,ಚಂದ್ರ, ಕುಜ....
ಗ್ರಾಮದೇವತಾ ಕಲ್ಯಾಣ.

ರವಿ, ಶುಕ್ರ, ಕೇತು.....
ದೇವತಾ ಕಲ್ಯಾಣ.

ರವಿ, ಶುಕ್ರ..........
ಶ್ರೀನಿವಾಸ ಕಲ್ಯಾಣ.

ಶನಿ, ರವಿ, ಕೇತು......
ವೀರಭದ್ರ ಕಲ್ಯಾಣ.

ರಾಹು,ಕುಜ,ಶನಿ, ಬುಧ...............
ವರದರಾಜ ಕಲ್ಯಾಣ.

ಲಗ್ನಕ್ಕೆ7ರಲ್ಲಿ------------
ಗುರು ಇದ್ದು ಕುಜ, ಶನಿ
ನೋಡಿದರೆ.............
ಮಾಂಗಲ್ಯ ದಾನ.

ಬುಧ ಇದ್ದು ಕುಜ, ಶನಿ ನೋಡಿದರೆ..............
ಕಲ್ಯಾಣೋತ್ಸವ; ವಿಷ್ಣುಪಾದ,ಫಲಗಳು ತಾಂಬೂಲ,ವಸ್ತ್ರ ದಾನ.

ಚಂದ್ರನಿದ್ದು ಕುಜ,ಶನಿ ನೋಡಿದರೆ..............
ಗೌರೀ ಕಲ್ಯಾಣ, ಮಾಂಗಲ್ಯದಾನ,ಮರ ದ ಬಾಗಿನದಾನ,
ಚಂಡಿ ಹೋಮ.

ಶುಕ್ರನಿದ್ದು ಕುಜ, ಶನಿ
ನೋಡಿದರೆ.............
ಲಲಿತಾ ಸಹಸ್ರನಾಮ ಪಾರಾಯಣ,ಲಲಿತಾ
ಹೋಮ, ಶಿವಲಿಂಗಕ್ಕೆ ಮಹಾನ್ಯಾಸಪೂರ್ವಕ
ಅಭಿಷೇಕ.

ಲಗ್ನಕ್ಕೆ 8ರಲ್ಲಿ----------
ರವಿ ಇದ್ದರೆ............
 ಮಾಂಗಲ್ಯಶಾಂತಿ,
ರವಿ ಶಾಂತಿ.ದೇವರಿಗೆ
ಪ್ರಾಕಾರೋತ್ಸವ.

ಚಂದ್ರ ಇದ್ದರೆ..........
ದೇವರಿಗೆ ಅಲಂಕಾರ ಸೇವೆ.

 ಕುಜ ಇದ್ದರೆ.............
ಕುಜ ಶಾಂತಿ,ದೇವರಿಗೆ
ಕಿರೀಟ ಧಾರಣೆ.

ಬುಧ ಇದ್ದರೆ.............
ತಿರುಪಾವೈ,ಶಾತ್ತುಮೊರೈ ಸೇವೆ.

ಗುರು ಇದ್ದರೆ.............
ಪುಸ್ತಕದಾನ,ಜಪಸರದಾನ,ಕಮಂಡಲು,  ಜಿಂಕೆ ಚರ್ಮದಾನ, ದೇವರಿಗೆ ಕ್ಷೀರಾಭಿಷೇಕ.

ಶುಕ್ರ ಇದ್ದರೆ.............. ದೇವರಿಗೆ ಡೋಲೋತ್ಸವ, ಕಲ್ಯಾಣೋತ್ಸವ, ನೃತ್ಯ ಸಂಗೀತೋತ್ಸವ,
ಪ್ರಸಾದ ವಿತರಣೆ.

ಶನಿ ಇದ್ದರೆ...............
ಗರುಡೋತ್ಸವ, ಶನಿ ಶಾಂತಿ, ದೇವರಿಗೆ ಭಜನೆ,ಇರುಮುಡಿ
ಕಟ್ಟುವುದು,ವೃದ್ಧರಿಗೆ
ಅನ್ನ ನೀರು ಕೊಟ್ಟು
ಕಾಪಾಡುವುದು.ಅಕ್ಕ
ತಂಗಿಯರಿಗೆ ಸಹಾಯ ಮಾಡುವುದು, ಎಳ್ಳೆಣ್ಣೆ ಅಭಿಷೇಕ,
ಅನ್ನದಾನ-ತಾನು ಉಪವಾಸವಿರುವುದು

ರಾಹು ಇದ್ದರೆ............
ಅರಳಿ ಕಟ್ಟೆ ಕಟ್ಟಿಸಿ
ಬೇವಿನಮರ,
ಅರಳಿ ಮರ,
ಅತ್ತಿಮರ,
ಬನ್ನಿಮರ ಪ್ರತಿಷ್ಟೆ
ಮಾಡುವುದು. ದೇವರಿಗೆ ಅಲಂಕಾರ,
ಹುತ್ತಗಳನ್ನು ಕಾಪಾ
ಡುವುದು. ಇರುವ ಹುತ್ತಕ್ಕೆ ಸುತ್ತಲೂ
ರಕ್ಷಣೆ ಮಾಡುವುದು.
ಸರ್ಪ ಶಾಂತಿ, ದುರ್ಗಾ
ದೇವಿಗೆ ಕುಂಕುಮಾರ್ಚನೆ.

ಕೇತು ಇದ್ದರೆ.............
ಗಣಪತಿ ಪಂಚಾಯತನಪೂಜೆ,
ಅಷ್ಟದ್ರವ್ಯ ಸಹಿತ ಗಣ
ಹೋಮ,ಸಹಸ್ರ ಮೋದಕ ಹೋಮ, ನೀಚ ಜನರಿಗೆ ಅನ್ನದಾನ, ಯಾತ್ರಾ
ಮಾಡುವುದು, ತೀರ್ಥ ಕ್ಷೇತ್ರದಲ್ಲಿ ಒಂದು ಸಸಿ
ನೆಡುವುದು, ದೇವರಿಗೆ ವೃಷಬೋತ್ಸವ,
ಗರುಡೋತ್ಸವ,ಪ್ರಾಕಾರೋತ್ಸವ,ಪಾನಕವಿತರಣೆ,ರಸಾಯನ, ಎಳನೀರು ವಿತರಣೆ, ದೇವರನ್ನು ತಲೆಮೇಲೆ ಎತ್ತಿಕೊಂಡು ತಿರುಗು
ವುದು,ಕರಗಹೊರುವುದು,ತಲೆಗೆ ಜಟೆಬಿಡು
ವುದು, ಡಮರುಗ,
ಬುಡು ಬುಡುಕೆ ಆಡಿ
ಸಾಗುವುದು, ಗ್ರಾಮದೇವತೆಯನ್ನು
ಆರಾಧಿಸಿ ಅನ್ನದಾನ
ಮಾಡಿ ಭಜನೆ ಮಾಡು
ವುದು

ಲಗ್ನದಲ್ಲಿ ಕುಜ, ಶನಿ, ರಾಹು,ಕೇತು ಇದ್ದರೆ
ಕುಜ ಶಾಂತಿ, ಮಾಂಗಲ್ಯ ಶಾಂತಿ,
ಶನಿ ಶಾಂತಿ ಮಾಡಿಸಬೇಕು.

-----ಹೀಗೆ ಯಾವ  ಗ್ರಹವು ನಮಗೆ ದೋಷವಾಗಿರುವುದೋ ಆ ಗ್ರಹಕ್ಕೆ ತಕ್ಕಂತೆ ಶಾಂತಿ,ದಾನ ಪರಿಹಾರಗಳನ್ನು ಮಾಡಬೇಕು, ಮತ್ತು ಹಿರಿಯರ ಹೆಸರಲ್ಲಿ ಧಾರ್ಮಿಕ ಕಾರ್ಯಮಾಡಿ,ದಾನ,ಧರ್ಮ ಮಾಡಿ ಪ್ರಾಯಶ್ಚಿತ್ತ,ಹವನ ಹೋಮ ಮಾಡಿಸಿಕೊಂಡರೆ ಮುಂದೆ ದಾಂಪತ್ಯ
ಜೀವನನೆಮ್ಮದಿಯಾಗಿ,ಸಂತಾನವಂತರಾಗಿ ಬಾಳುವರು.

.........  ಹೀಗೆ ಗ್ರಹ ಕಾರಕತ್ವವನ್ನು ನಾಡೀ
ಗ್ರಂಥದಲ್ಲಿ ಹೇಳಿದೆ .

January 21, 2022

ಮಾರ್ಕಂಡೇಯಪುರಾಣ ಯಾವ ಕಾಲದ್ದು ?


    ದಧೀಚಿ ಈ ಹೆಸರು ಅತ್ಯಂತ ಪ್ರಸಿದ್ಧ. ಈಗಿನ ಎಲ್ಲಾ ವಿದ್ಯೆಗಳಿಗೂ ಮೂಲ ಪುರುಷ ಇದೇ ದಧೀಚಿ. ಈ ದಧೀಚಿಯಿಂದಲೇ ಅಶ್ವಿನೀ ದೇವತೆಗಳಿಗೆ ಮಧುವಿದ್ಯೆ ಪಾಪ್ತವಾಗುತ್ತದೆ. ಈ ಮಧು ವಿದ್ಯೆ ಉಪದೇಶಿಸಿದ್ದಕ್ಕಾಗಿ ಶಿಕ್ಷೆಯಾಗಿ ಅವನ ತಲೆ ಹೋಗುತ್ತದೆ. ಎನ್ನುವ ಕಥೆ ಪ್ರಚಲಿತವಿದೆ. ಕುದುರೆಯ ತಲೆ ಶರ್ಯಣ್ಯಾವತಿಯಲ್ಲಿ ತೇಲುತ್ತಿರುತ್ತದೆ. ಅದೇ ಶರ್ಯಣ್ಯಾವತಿ ಇರುವುದು ಈಗ ನಾನು ಹೇಳುವ ಪ್ರಸ್ತುತ ಪ್ರದೇಶಕ್ಕೆ ಬಹಳ ದೂರದ್ದಲ್ಲ.
    ಅದು ಮರುಭೂಮಿ. ಬಿಸಿಲಿನ ಝಳ ಅನುಭವಿಸಿಯೇ ತಿಳಿಯಬೇಕು. ರಾಜಸ್ಥಾನದ ನಾಗೌರಿ ಜಿಲ್ಲೆಯ ಜಯಲ್ ತಹಸೀಲ್ ನ ಗೋಥ್ ಮತ್ತು ಮಂಗ್ಲೋಡ್ ಎನ್ನುವ ಗ್ರಾಮದಲ್ಲಿರುವ ದೇವೀ ದೇವಾಲಯವೇ ದಧಿಮತಿ ಅಥವಾ ದಾಧಿಮತಿ ಮಂದಿರ. ಇದರ ಕುರಿತು ಬರೆಯುತ್ತಿರುವೆ. ಸುಮಾರು ನಾಲ್ಕನೇ ಶತಮಾನಕ್ಕೂ ಪೂರ್ವದಲ್ಲಿಯೇ ಕಾಣಿಸಿಕೊಳ್ಳುವ ಈ ದೇವಾಲಯ ಆನಂತರದಲ್ಲಿ ಜೀರ್ಣಾವಸ್ಥೆಗೆ ತಲುಪಿದಾಗ ಅದನ್ನು ಪುನರ್ನಿಮಿಸಲಾಯಿತು. ಇದು ಭಾರತದ ೫೨ ಶಕ್ತಿಪೀಠಗಳಲ್ಲಿ ಪ್ರಮುಖವಾದದ್ದು ಎಂದು ಹೇಳಲಾಗುತ್ತದೆ. ಈ ದೇವಾಲಯದ ಪ್ರಮುಖ ಭಕ್ತರಲ್ಲಿ ದಾಧೀಚ್ ಅಥವಾ ದಾಹಿಮಾ ಎಂದು ಕರೆಸಿಕೊಳ್ಳುವ ಬ್ರಾಹ್ಮಣರು ಮತ್ತು ರಜಪೂತರು ಹೆಚ್ಚು.
    ವೇದ ಮತ್ತು ಪುರಾಣಗಳಲ್ಲಿ ವರ್ಣಿತರಾಗಿರುವ ದಧೀಚಿ ಎನ್ನುವ ಮಹರ್ಷಿಯ ತಂಗಿಯು ಮಾಘ ಶುಕ್ಲ ಸಪ್ತಮಿಯ ದಿನ ಅಂದರೆ ರಥ ಸಪ್ತಮಿಯ ದಿನ ಆಕಾಶದ ಮಂಥನ ನಡೆಯುತ್ತದೆ ಆ ಸಂದರ್ಭದಲ್ಲಿ ಜನ್ಮ ಪಡೆದಳು ಎಂದು ಐತಿಹ್ಯ. ಮತ್ತು ಅದೇ ಮಾಘಮಾಸದ ಅಷ್ಟಮೀ ದಿನ ವಿಕಟಾಸುರ ಎನ್ನುವ ಅಸುರನ ಸಂಹಾರ ಮಾಡುತ್ತಾಳೆ. ಆದುದರಿಂದ ಮಾಘ ಶುಕ್ಲ ಅಷ್ಟಮಿಯ ದಿನವನ್ನು ಜಯಾಷ್ಟಮಿ ಎಂದು ಕರೆಯಲಾಗುತ್ತದೆ ಎನ್ನುವುದು ಇಲ್ಲಿನ ಪ್ರತೀತಿ. ಆಕೆಯೇ ಶ್ರೀಲಕ್ಷ್ಮಿ ಎನ್ನುವ ನಂಬಿಕೆ ಇದೆ. ಅದೇ ದಧಿಮತಿ, ದಧೀಮಾತಿ ಎನ್ನುವ ದೇವಿಯಾಗಿ ನೆಲೆಸಿದ್ದಾಳೆ ಎನ್ನುವುದು ಅಲ್ಲಿನವರ ನಂಬುಗೆ.
    ಈ ಶಾಸನದ ಅಭಿಪ್ರಾಯದಂತೆ ದಾಧೀಚ್ ಬ್ರಾಹ್ಮಣರು ಇದೇ ದೇವಾಲಯ ಸಮುಚ್ಚಯದಲ್ಲಿಯೇ ಆಶ್ರಯ ಪಡೆದಿದ್ದರಂತೆ. ಇದರ ಅಕ್ಷರವನ್ನು ಗಮನಿಸಿದರೆ ಬಹಳ ಆಶ್ಚರ್ಯವಾಗುತ್ತದೆ. ಹಳಗನ್ನಡ ಲಿಪಿಯ ಶೈಲಿಯೂ ಕೆಲವೊಮ್ಮೆ ಇಣುಕುತ್ತದೆ ಆ ಕಡೆಯಿಂದ ನಾಗರಿಯನ್ನು ಸಂಪುರ್ಣವಾಗಿ ಬಳಸಿಕೊಂಡಂತೆ ಇಲ್ಲ. ಈ ಶಾಸನದ ಕೊನೆಯ ಸಾಲಿನಲ್ಲಿ ಶಾಸನದ ವರ್ಷವನ್ನು ಉಲ್ಲೇಖಿಸಿದ್ದು ಅದು ’ಸಂವಚ್ಛರ ಶೇ(ಶ)ತೇಶು ೨೦೦ ೮೦ ೯ ಶ್ರಾವಣ ಬ ೧೦ ೩ ಅಂದರೆ ಇದು ವಿಕ್ರಮ ಸಂವತ್ಸರದ ೨೮೯ನೇ ವರ್ಷ. ಈ ಶಾಸನ ಬಹಳ ಆಶ್ಚರ್ಯವಾಗಿದ್ದು ನನಗೆ ಮಾರ್ಕಂಡೇಯಪುರಾಣದ ೮೮ನೇ ಅಧ್ಯಾಯದ ದೇವೀಮಹಾತ್ಮೆಯ ನಾರಾಯಣೀ ಸ್ತುತಿಯಲ್ಲಿನ ಅಥವಾ ಸಪ್ತಶತಿಯ ಹನ್ನೊಂದನೇ ಅಧ್ಯಾಯದ ೧೦ನೇ ಶ್ಲೋಕ ಮತ್ತು ಸಪ್ತಶತಿಯ ೫೮೫ನೇ ಶ್ಲೋಕ.
ಸರ್ವಮಙ್ಗಲಮಾಙ್ಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ || ೧೦ ||
ಹೇ ನಾರಾಯಣಿ! ನೀನು ಸಮಸ್ತ ಪ್ರಕಾರವಾದ ಮಂಗಲಗಳನ್ನು ಉಂಟುಮಾಡುವ ಮಂಗಲಮಯಿಯಾಗಿರುವೆ. ಕಲ್ಯಾಣವನ್ನುಂಟು ಮಾಡುವ ‘ಶಿವೆ’ಯೂ ನೀನೇ. ನಿನ್ನಿಂದಲೇ ಸಕಲಾಭೀಷ್ಟಗಳೂ ಸಿದ್ಧಿಸುತ್ತವೆ. ನೀನು ಶರಣಾಗತ ವತ್ಸಲಳೂ, ತ್ರಿನೇತ್ರಳೂ ಹಾಗೂ ಗೌರಿಯೂ ಆಗಿರುವೆ. ನಿನಗೆ ನಮಸ್ಕಾರಗಳು ಎನ್ನುವ ಅರ್ಥವನ್ನು ಈ ಸ್ತುತಿ ನೀಡುತ್ತದೆ.

    ಈ ಸಾಲುಗಳು ಶಾಸನದ ೧೧ ಮತ್ತು ೧೨ನೇ ಸಾಲಿನಲ್ಲಿ ಬಂದಿವೆ. ಇದು ಆಶ್ಚರ್ಯವನ್ನುಂಟು ಮಾಡುತ್ತದೆ. ಮಾರ್ಕಂಡೇಯ ಪುರಾಣದ ಕಾಲವನ್ನು ಸುಮಾರು ೭ನೇ ಶತಮಾನಕ್ಕೆ ತಂದು ನಿಲ್ಲಿಸುವ ನಮ್ಮ ಸಂಶೋಧಕರಿಗೆ ಈ ಶಾಸನದಲ್ಲಿನ ಈ ಶ್ಲೋಕ ಯಾವಕಾಲದ್ದಾಗಿರಬಹುದು. ಶಾಸನದ ಕಾಲವನ್ನು ಶಾಸನದ ಅಂತ್ಯದಲ್ಲಿ ಹೇಳಲಾಗಿದೆ. ಇದರ ಆರಂಭದಲ್ಲಿಯೂ ಸರಸ್ವತಿಯನ್ನು ಧ್ಯಾನಿಸುವುದು ಕಾಣ ಸಿಗುತ್ತದೆ. ದಾಧೀಚ್ ಬ್ರಾಹ್ಮಣರ ಗೋತ್ರಗಳೂ ಈ ಶಾಸನದಲ್ಲಿವೆ. ಅಂದರೆ ಒಂದೋ ಪುರಾಣದ ರಚನೆಯ ಕಾಲವನ್ನು ಎಳೆದು ತಂದು ಈಚೆ ನಿಲ್ಲಿಸಲಾಗಿದೆ.
#ದಧೀಚಿಗೆ_ಜ್ಞಾನದ_ಕೊರತೆಯಿಲ್ಲ
ಮೂಲ: ಸದ್ಯೋಜಾತ ಭಟ್ಟ



January 16, 2022

ರಕ್ತದಾನದ ಮಹತ್ವ

ರಕ್ತದಾನ ಮಾಡುವ  ಅಭ್ಯಾಸ ಇದೆಯೇ? ಇದರ ಹಿಂದಿನ ಆರೋಗ್ಯ 
ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ.

1818 ರಲ್ಲಿ ಬ್ರಿಟಿಷ್ ಪ್ರಸೂತಿ ತಜ್ಞ ಜೇಮ್ಸ್ ಬ್ಲಂಡೆಲ್ ಪ್ರಸವಾನಂತರದ ರಕ್ತಸ್ರಾವದ ಚಿಕಿತ್ಸೆಗಾಗಿ ರೋಗಿಗೆ ರಕ್ತವನ್ನು ವರ್ಗಾವಣೆ ಮಾಡಿ ಮಾನವನ ಮೊದಲ ಯಶಸ್ವಿ ರಕ್ತ ವರ್ಗಾವಣೆಗೆ ಮುನ್ನುಡಿ ಬರೆದರು.
ಮಾನವನ ಜೀವನದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ.




ಅದರಲ್ಲಿ ರಕ್ತದಾನ ಕೂಡ ಒಂದು. ಒಬ್ಬರು ತಮ್ಮ ರಕ್ತವನ್ನು ನೀಡಿ ಇನ್ನೊಬ್ಬರ ಜೀವ ಉಳಿಸುವ ಪ್ರಕ್ರಿಯೆ ಇದಾಗಿದೆ. ಮಾನವ ದೇಹದಲ್ಲಿ ರಕ್ತವು ಒಂದು ನಿರ್ದಿಷ್ಟ ರೀತಿಯಲ್ಲಿ ಪರಿಚಲನೆಯಾಗುತ್ತದೆ. 3 ಪ್ರಾಥಮಿಕ ರಕ್ತ ಗುಂಪುಗಳಿದ್ದು, ಆರ್​ಹೆಚ್ ಅಂಶಗಳು ರಕ್ತದಾನಕ್ಕೆ (blood donation) ಹೊಂದಿಕೊಳ್ಳಲು 1665 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಯಶಸ್ವಿ ರಕ್ತ ವರ್ಗಾವಣೆ ಮಾಡಲಾಗಿದೆ. ವೈದ್ಯ ರಿಚರ್ಡ್ ಲೋವರ್ ಇತರ ನಾಯಿಗಳಿಂದ (Dog) ರಕ್ತವನ್ನು ತೆಗೆದು, ಅಗತ್ಯವಿರುವ ನಾಯಿಗೆ ವರ್ಗಾವಣೆ ಮಾಡುವ ಮೂಲಕ ನಾಯಿಯ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರು. 1818 ರಲ್ಲಿ ಬ್ರಿಟಿಷ್ ಪ್ರಸೂತಿ ತಜ್ಞ ಜೇಮ್ಸ್ ಬ್ಲಂಡೆಲ್ ಪ್ರಸವಾನಂತರದ ರಕ್ತಸ್ರಾವದ ಚಿಕಿತ್ಸೆಗಾಗಿ (Treatment) ರೋಗಿಗೆ ರಕ್ತವನ್ನು ವರ್ಗಾವಣೆ ಮಾಡಿ ಮಾನವನ ಮೊದಲ ಯಶಸ್ವಿ ರಕ್ತ ವರ್ಗಾವಣೆಗೆ ಮುನ್ನುಡಿ ಬರೆದರು.

ಅಂದಿನಿಂದ ರಕ್ತದಾನ ಪ್ರಕ್ರಿಯೆ ಆರಂಭವಾಗಿದ್ದು, ಇದನ್ನು ರೆಡ್ ಕ್ರಾಸ್ ಸೊಸೈಟಿಯು ಮುಂದಕ್ಕೆ ಕೊಂಡೊಯ್ಯಿತು. ಪ್ರತಿ ವರ್ಷ ಲಕ್ಷಾಂತರ ಜನರು ರಕ್ತದಾನ ಮಾಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಜನರಿಗೆ ರಕ್ತ ವರ್ಗಾವಣೆಯ ಅಗತ್ಯವಿದೆ. ಆದರೆ ಇನ್ನು ಕೂಡ ರಕ್ತದಾನ ಮಾಡಲು ಅನೇಕರು ಹಿಂಜರಿಯುತ್ತಾರೆ. ಆದರೆ ನೆನಪಿಡಿ ರಕ್ತ ಸ್ವಿಕರಿಸಿದವರಿಗೆ ಮಾತ್ರ ಅಲ್ಲ. ರಕ್ತದಾನ ಮಾಡುವವರಿಗೂ ಇದರಿಂದ ಅನೇಕ ಆರೋಗ್ಯಕರ ಪ್ರಯೋಜನವಿದೆ.

ರಕ್ತದಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ನಿಮಗೆ ತಿಳಿದಿದೆಯೇ?

ಉಚಿತ ಆರೋಗ್ಯ ತಪಾಸಣೆ
ನೀವು ರಕ್ತದಾನ ಮಾಡಲು ಬಯಸಿದಾಗ ಅಗತ್ಯವಿರುವ ರೋಗಿಗಳಿಗೆ ಜೀವರಕ್ಷಕವನ್ನು ಒದಗಿಸಲು ನೀವು ಸಹಾಯ ಮಾಡುತ್ತೀರಿ. ಆದರೆ ನೀವು ಉಚಿತ ಆರೋಗ್ಯ ಪರೀಕ್ಷೆಯ ಹೆಚ್ಚುವರಿ ಪ್ರಯೋಜನವನ್ನು ಸಹ ಪಡೆಯುತ್ತೀರಿ. ರಕ್ತದಾನದ ಮೊದಲು ನಿಮ್ಮ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿಮಿಡಿತವನ್ನು ಪರಿಶೀಲಿಸಲಾಗುತ್ತದೆ. ಅಲ್ಲದೇ ರೆಡ್​ ಕ್ರಾಸ್​ ರಕ್ರದಾನ ಕೇಂದ್ರವು ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿಡುತ್ತದೆ. ಆ ಮೂಲಕ ನೀವು ರಕ್ತದ ಗುಣಮಟ್ಟವನ್ನು ಸಾಂದರ್ಭಿಕವಾಗಿ ಪರಿಶೀಲಿಸಬಹುದು.

ಆನ್‌ಲೈನ್‌ನಲ್ಲಿ ಸಿಗಲಿದೆ ನಿಮ್ಮ ಆರೋಗ್ಯ ಮಾಹಿತಿ
ನೀವು ಈ ಹಿಂದೆ ರಕ್ತದಾನ ಮಾಡಿದ್ದರೆ ನಿಮ್ಮ ಎಲ್ಲಾ ಮಾಹಿತಿ ಅಂದರೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳು ಆನ್​ಲೈನ್​ನಲ್ಲಿ ಲಭ್ಯವಿರುತ್ತದೆ. ಅಲ್ಲದೇ ಮುಂದೆ ನಿಮ್ಮ ರಕ್ತದ ಅವಶ್ಯಕತೆ ಇದ್ದಾಗಲು ಇತರರಿಗೆ ಸುಲಭವಾಗಿ ರಕ್ತದ ಲಭ್ಯತೆ ಬಗ್ಗೆ ಮಾಹಿತಿ ಸಿಗುತ್ತದೆ.

ಇತರರ ಜೀವ ಉಳಿಸಲು ಸಹಾಯ
ನೀವು ರಕ್ತದಾನ ಮಾಡಿದ ನಂತರ, ನಿಮ್ಮ ರಕ್ತವನ್ನು ಸಂಸ್ಕರಿಸಲಾಗುತ್ತದೆ ಮತ್ತು ಅದನ್ನು ಕೆಲವು ಪ್ರಮುಖ ಘಟಕಗಳಾಗಿ ಬೇರ್ಪಡಿಸಲಾಗುತ್ತದೆ. ಅಂದರೆ ಕೆಂಪು ರಕ್ತ ಕಣಗಳು, ಪ್ಲೇಟ್‌ಲೆಟ್‌ಗಳು ಮತ್ತು ಪ್ಲಾಸ್ಮಾ. ಆಸ್ಪತ್ರೆಯಲ್ಲಿ ಅಪಘಾತ ಅಥವಾ ಇನ್ನಿತರ ಸಂದರ್ಭದಲ್ಲಿ ಯಾರಿಗೆ ರಕ್ತದ ಅವಶ್ಯಕತೆ ಇರುತ್ತದೆ ಅಂತವರಿಗೆ ಇದನ್ನು ನೀಡುತ್ತಾರೆ. ಆ ಮೂಲಕ ನಿಮ್ಮ ರಕ್ತವು ಇತರರ ಪ್ರಾಣ ಉಳಿಸುತ್ತದೆ.

ಕಬ್ಬಿಣಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ
ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಇದು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಲವು ಜನರು ಕಬ್ಬಿಣದ ಅಪಾಯಕಾರಿ ಸಂಗ್ರಹವನ್ನು ಹೊಂದಬಹುದು. ಏಕೆಂದರೆ ಅವರು ಕಬ್ಬಿಣಾಂಶಬರಿತ ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ರಕ್ತವನ್ನು ನೀಡುವ ಮೂಲಕ ನಿಮ್ಮ ದೇಹದ ಕಬ್ಬಿಣದ ಮಟ್ಟವನ್ನು ನೀವು ಕಡಿಮೆಗೊಳಿಸುತ್ತೀರಿ ಮತ್ತು ಉತ್ತಮ ರಕ್ತಪರಿಚಲನೆಗೆ ಅವಕಾಶ ಮಾಡಿಕೊಡುತ್ತೀರಿ.

ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ
ಇತ್ತೀಚಿನ ಸಂಶೋಧನೆಯ ಪ್ರಕಾರ ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುವುದರಿಂದ ಆ ವ್ಯಕ್ತಿಯು ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಬಹುದು. ನಿಯಮಿತ ಕ್ರಮದಲ್ಲಿ ರಕ್ತದಾನ ಮಾಡುವುದರಿಂದ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಬಹುದು. ಇನ್ನು ರಕ್ತದಾನದಿಂದ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಹೃದಯಾಘಾತದ ಅಪಾಯವು ಕಡಿಮೆಯಾಗುತ್ತದೆ.

ಯಕೃತ್ತಿನ ಆರೋಗ್ಯಕ್ಕೆ ಉತ್ತಮ
ಲಿವರ್ ಡಿಸೀಸ್ (NAFLD) ಕಡಿಮೆ ಮಾಡಲು ರಕ್ತದಾನ ಸಹಾಯಕವಾಗಿದೆ ಎಂದು ರಾಸ್‌ಮುಸ್ಸೆನ್ ವಿಶ್ವವಿದ್ಯಾಲಯದ ವರದಿಯು ಹೇಳುತ್ತದೆ. ಅಂದರೆ ರಕ್ತದಾನವು ಯಕೃತ್ತಿನ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ದೂರ ಇಡುತ್ತದೆ.

ರಕ್ತದ ಕೊರತೆ
ಪ್ರಪಂಚದಾದ್ಯಂತ ರಕ್ತದ ಕೊರತೆಯಿದೆ. ಅಮೇರಿಕನ್ ರೆಡ್‌ಕ್ರಾಸ್ ವೆಬ್‌ಸೈಟ್ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಒಂದು ದಶಕದಲ್ಲಿ ರಕ್ತ ದಾನಿಗಳು ಇಲ್ಲದೇ ಅಥವಾ ರಕ್ತ ಅವಶ್ಯಕತೆ ಇದ್ದಾಗ ರಕ್ತ ಸಿಗದೆ ಸಾಕಷ್ಟು ತೊಂದರೆಯಾಗಿದೆ. ವಿಶೇಷವಾಗಿ ಮಾರ್ಚ್ 2020 ರಿಂದ ವುಹಾನ್ (ಚೀನಾ) ನಲ್ಲಿ ಪ್ರಾರಂಭವಾದ ಕೊವಿಡ್​ 19 ಸೋಂಕು ಪ್ರಪಂಚದಾದ್ಯಂತ ಉಲ್ಬಣಗೊಂಡಾಗ ನಮ್ಮಲ್ಲಿ ಯಾರು ರಕ್ತದಾನಕ್ಕೆ ಮುಂದಾಗಲಿಲ್ಲ.

January 11, 2022

ಜ್ಯೇಷ್ಠಾ ಸುನಕ್ಷತ್ರ


ನಮ್ಮ ಪ್ರತಿಯೊಂದು ಆಗುಹೋಗುಗಳು ಗಣಿತಾಧಾರಿತ. ಅದು ಸನಾತನ ಭಾರತೀಯ ಪರಂಪರೆ. ನಾವು ಗಣಿತವನ್ನೇ ಇಂದು ದೇವರೆಂದು ಆರಾಧಿಸುವುದು ಲೆಕ್ಕ ಮಾಡಿದರೆ ಅದರಲ್ಲಿ ತಪ್ಪು ಸಾಧ್ಯವಿಲ್ಲ. ಲೆಕ್ಕವೇ ಸಾದೃಷ್ಯ. ಅದೇ ಅಲ್ಲವೇ ಖಗೋಲ ವಿಜ್ಞಾನ. ಅದುವೇ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯದಲ್ಲೂ ಗಣನೆಯೇ ಮುಖ್ಯ. ಅಲ್ಲಿ ಸಂದೇಹವೂ ಇಲ್ಲ. ಅನುಮಾನಗಳೂ ಇಲ್ಲ. ಹೀಗಾಗಬಹುದು ಎನ್ನುವುದಿಲ್ಲ. ಹೀಗೇ ಆಗುತ್ತದೆ ಎನ್ನುವುದೇ ಜ್ಯೋತಿಷ್ಯ. ಅದನ್ನೇ ನಾವು ದೇವರೆನ್ನುವುದು. ಸಾಕಾರಕ್ಕಿಂತ ನಿರಾಕಾರವಾದ ನಿತ್ಯಸತ್ಯವಾದ ಶುದ್ಧ ವಾಣಿಯೂ ದೇವರೇ ಅಲ್ವಾ. ಅದನ್ನೇ ಸ್ವಲ್ಪ ಗಮನಿಸೋಣ.

ಪುಣ್ಯಂ ಪೂರ್ವಾ ಫಲ್ಗುನ್ಯೌ ಚಾತ್ರ ಹಸ್ತಶ್ಚಿತ್ರಾ ಶಿವಾ ಸ್ವಾತಿ ಸುಖೋ ಮೇ ಅಸ್ತು |
ರಾಧೇ ವಿಶಾಖೇ ಸುಹವಾನುರಾಧಾ ಜ್ಯೇಷ್ಠಾ ಸುನಕ್ಷತ್ರಮರಿಷ್ಠ ಮೂಲಮ್ || ಅಥರ್ವ ೧೯:೭:೩
ಈ ಜಗತ್ತಿನಲ್ಲಿ ಪೂರ್ವಫಲ್ಗುಣೀ ಮತ್ತು ಉತ್ತರಫಲ್ಗುಣೀ (ಹುಬ್ಬಾ ಮತ್ತು ಉತ್ತರಾ)ನಕ್ಷತ್ರಗಳೆರಡರ ಸಮೂಹ ಇವೆ. ಈ ಎರಡೂ ನಕ್ಷತ್ರಗಳು ಪುಣ್ಯ ಸಂಪಾದಿಸಿ ಕೊಡುತ್ತವೆ. ಹಸ್ತಾ ಮತ್ತು ಚಿತ್ರಾ ನಕ್ಷತ್ರಗಳು ಮನಸ್ಸಿಗೆ ಶಾಂತಿ ಕೊಡುತ್ತವೆ. ಸ್ವಾತಿ ನಕ್ಷತ್ರ ಸಂತೋಷವನ್ನು ನೀಡುತ್ತದೆ. ವಿಶಾಖಾ ಅಭಿವೃದ್ಧಿಯನ್ನು (ಯಶಸ್ಸು) ಕೊಡುತ್ತದೆ. ಸಂಪರ್ಕ ಅಥವಾ ಸಂವಹನಕ್ಕೆ ನೆರವಾಗುವುದು ಅನುರಾಧಾ ನಕ್ಷತ್ರದಿಂದ. ಜ್ಯೇಷ್ಠಾ ನನಗೆ ಅನೇಕ ಜನರ ಜೊತೆಗೆ ಬೆರೆಯುವ ಅಥವಾ (ನಕ್ಷತ್ರಪುಂಜಗಳ) ಜೊತೆಗೆ ಸೇರುವಂತೆ ಮಾಡುತ್ತದೆ. ಮೂಲಾ ನಕ್ಷತ್ರ ಅರಿಷ್ಠ ಕಾರಕವಾಗಿದ್ದು, ಅತಿಮಾನುಷ ಅಥವಾ ಅಮಾನವೀಯ ಗುಣದೊಂದಿಗೆ ರೋಗವನ್ನು ತರಬಲ್ಲದ್ದು ಎಂದು ಹೇಳಲ್ಪಟ್ಟಿದೆ. ಆದರೂ ಈ ಮೂಲಾ ನಕ್ಷತ್ರದ ಕೊನೆಯ ಪಾದ ಬಹಳ ಒಳ್ಳೆಯ ಫಲವನ್ನೇ ಕೊಡುತ್ತದೆ. ಇದಕ್ಕೆ ವ್ತತಿರಿಕ್ತವಾದದ್ದು ಆಶ್ಲೇಷಾ ನಕ್ಷತ್ರ ಎನ್ನುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿ ಜ್ಯೇಷ್ಠಾ ನಕ್ಷತ್ರ ಕಳೆದು ಮೂಲ ನಕ್ಷತ್ರ ಬಂದಾಗ ಸರಸ್ವತಿಯ ಆರಾಧನೆಗೆ ಪ್ರಶಸ್ತವಾದ ದಿನ ಮತ್ತು ಅದು ಪವಿತ್ರವೂ ಹೌದು. ಆದಿನ ಶಾರದಾ ಪೂಜೆಗೆ ಸೂಕ್ತವಾದ ದಿನ. 

ಸಾಮಾನ್ಯವಾಗಿ ನವರಾತ್ರಿಯಲ್ಲಿ ಮೂಲಾನಕ್ಷತ್ರದ ದಿನದಿಂದ ಅಥವಾ ಮೂಲಾ ನಕ್ಷತ್ರದಲ್ಲಿ ಸರಸ್ವತೀ ಪೂಜೆಯನ್ನು ಮಾಡಲಾಗುತ್ತದೆ. ಸರಸ್ವತೀ ವಾಗಾಭಿಮಾನಿ ದೇವತೆ. ನಮ್ಮ ಮಾತಿಗೆಲ್ಲ ಮೂಲವಾಗಿರುವ ಈ ದೇವತೆ ವಿದ್ಯೆಯನ್ನೂ ಕೊಡುವವಳು. ಪುರಾಣಗಳಲ್ಲಿ ಈ ದೇವತೆಯನ್ನು ಹೊಗಳಿದಷ್ಟು ವೇದದಲ್ಲಿ ಹೊಗಳಿಲ್ಲ. ಇಲ್ಲಿ ನದೀ ದೇವತೆಯಾಗಿ ನದಿಯ ಅಭಿಮಾನಿದೇವತೆಯಾಗಿಯೇ ಹೆಚ್ಚು ಗುರುತಿಸಲ್ಪಟ್ಟಿದ್ದಾಳೆ. ಸೃ ಎನ್ನುವ ಧಾತುವಿನಿಂದ ಹುಟ್ಟಿದ ಸರಸ್ವತೀ ಎನ್ನುವುದರ ಮೂಲ ಸರಃ ಎನ್ನುವ ಶಬ್ದಕ್ಕೆ ಸೃ, ಸರಿ, ಸಂಚರಿಸು ಮುಂತಾದ ಅರ್ಥವಿದೆ. ತೇಜಸ್ಸಿನ ರೂಪದಿಂದ ಎಲ್ಲಾ ಕಡೆ ಪ್ರಕಾಶಿಸುವವಳಾದುದರಿಂದ ಆಕೆ ಸರಸ್ವತೀ.

ಇನ್ನು ಪ್ರಾತರ್ವಾಚಾಂ ಪ್ರವರ್ತಿಕಾ. . .ರಾತ್ರಿ ಕಾಲದಲ್ಲಿ ನಿಸ್ತೇಜವಾಗಿ ಸುಪ್ತವಾಗಿ ಮಲಗಿರುವ ಜೀವಿಗಳೆಲ್ಲ ಉಷಕಾಲವಾದೊಡನೆಯೇ ತಮ್ಮ ತಮ್ಮ ನಿತ್ಯಕರ್ಮಗಳಲ್ಲಿ ತೊಡಗಿ ತೇಜಸ್ಸಿನೀಮದ ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ ಪ್ರಜ್ಞೆಯಿಂದ ವ್ಯವಹರಿಸುವುದನ್ನು ಮಾಡುವವಳು ವಾಗಾಭಿಮಾನಿ ದೇವತೆಯಾಗಿರುವುದರಿಂದ ಆಕೆ ಯನ್ನು ಸರಸ್ವತೀ ಎನ್ನುವ ಹೆಸರಿನಿಂದ ಗುರುತಿಸಿ ಸ್ತುತಿಸುತ್ತೇವೆ. ಅಂದರೆ ಪ್ರಾಪಂಚಿಕ ವ್ಯವಹಾರಗಳ ಪರಿವರ್ತನೆಗೆ ಕಾರಣೀಭೂತಳು. ಸೂನೃತಾ, ಸೂನೃತಾವರೀ, ಸೂನೃತಾವತಿ ಮುಂತಾದ ಶಬ್ದಗಳ ಜೊತೆಗೆ ವಾಗ್ದೇವಿಯನ್ನು ಸೇರಿಸಿಕೊಳ್ಳುವುದರಿಂದ ಸರಸ್ವತೀ ದೇವಿಯು ಉಷೋದೇವತೆಯೂ ಹೌದು.

ಚೋದಯಿತ್ರೀ ಸೂನೃತಾನಾಂ ಚೇತಂತೀ ಸುಮತೀನಾಂ |
ಯಜ್ಞಂ ದಧೇ ಸರಸ್ವತೀ || ಎನ್ನುವ ಋಗ್ವೇದ ಒಂದನೇ ಮಂಡಲದ ಮೂರನೇ ಸೂಕ್ತದಲ್ಲಿ ಸರಸ್ವತಿಯನ್ನು ವಾಗ್ದೇವಿಯಾಗಿ ಉಷಸ್ಸುಗಳ ಜೊತೆಯಾಗಿ ಸ್ತುತಿಸಿರುವುದು ವಿಶ್ವಾಮಿತ್ರ ವಂಶೀಯನಾದ ಮಧುಚ್ಛಂದ ಮಹರ್ಷಿ. ಈ ಋಕ್ಕನ್ನು ವಾಗ್ದೇವತೆಯನ್ನೇ ಕುರಿತಾಗಿ ಹೇಳಲಾಗಿದೆ ಎಂದು ಸಾಯಣಾಚಾರ್ಯರು ತಮ್ಮ ಭಾಷ್ಯದಲ್ಲಿ ಹೇಳಿದ್ದಾರೆ. ’ಸೂನೃತಾನಾಂ ಪ್ರಿಯಾಣಾಂ ಸತ್ಯವಾಕ್ಯಂ ಚೋದಯಿತ್ರೀ ಪ್ರೇರಯಿತ್ರೀ ಎನ್ನುತ್ತಾ ಇದು ಮನುಷ್ಯರನ್ನು ಪ್ರಿಯವಾದ ಮತ್ತು ಸತ್ಯವಾದ ಮಾತುಗಳಿಂದ ಪ್ರೇರೇಪಿಸುವವಳು, ಸತ್ಯವಾದ ಮಾತುಗಳನ್ನಾಡುವ ಜನರಿಗೆ ಒಳ್ಳೆಯ ಕೆಲಸ ಮಾಡುವಂತೆಯೂ ಪರೇರಣೆ ನೀಡುವವಳು ಎನ್ನುವುದು ಈ ಋಕ್ಕಿನ ಅರ್ಥ ಎಂದಿದ್ದಾರೆ.

#ಜ್ಯೇಷ್ಠಾನಕ್ಷತ್ರದ_ಚಿಂತನೆ 
Sadyojath