April 29, 2022

ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ

ಸುಭಾಷಿತಮ್
🔹🔹🔹🔹🔹
*ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ*
*ಮಾತಾಸಮಂ ‌ನಾಸ್ತಿ ಶರೀರಪೋಷಣಂ |* 
*ನಿದ್ರಾಸಮಂ ನಾಸ್ತಿ ಶರೀರತೋಷಣಂ*
*ಚಿಂತಾಸಮಂ ನಾಸ್ತಿ ಶರೀರಶೋಷಣಮ್ ||*

*ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ* : ಭೂಷಣ ಅಂದರೆ "ಅಲಂಕಾರ".... ಒಬ್ಬ ವ್ಯಕ್ತಿಗೆ ನಿಜವಾಗಿ ಯಾವುದು "ಅಲಂಕಾರ" ? ಅದಕ್ಕಂದರು ವಿದ್ಯೆಗೆ ಸಮನಾದ ಅಲಂಕಾರ ಮತ್ತೊಂದಿಲ್ಲ...‌ *"ವಾಗ್ಭೂಷಣಂ ಭೂಷಣಂ"* ಈ ಭೂಮಿಯ ಮೇಲೆ ಬದುಕುವ ಜೀವಿಗಳಲ್ಲಿ, ಭಗವಂತ ಮನುಷ್ಯನಿಗೆ ಮಾತ್ರ ಮಾತನಾಡುವ ಬಾಯಿ ಕೊಟ್ಟ... ಮಿಕ್ಕೆಲ್ಲ ಪ್ರಾಣಿಗಳಲ್ಲಿ ಅದು ಕೇವಲ ಆಹಾರ ಸ್ವೀಕರಿಸುವ ಕರ್ಮೇಂದ್ರಿಯವಾಗಿ ಮಾತ್ರ ಉಳಿದಿದೆ... ಅಂತಹ‌ *"ವಾಕ್"* ಮಾತನಾಡುವ ಕಲೆ ಬರುವುದು ವಿದ್ಯೆಯಿಂದ/ಜ್ಞಾನದಿಂದ... ಅದರಿಂದ ಈ ಶರೀರದಲ್ಲಿರುವ ವ್ಯಕ್ತಿ ಗುರುತಿಸಲ್ಪಡುವುದು ವಿದ್ಯೆಯಿಂದ/ಜ್ಞಾನದಿಂದ...

*ಮಾತಾಸಮಂ ‌ನಾಸ್ತಿ ಶರೀರಪೋಷಣಂ* : ನಮ್ಮ ಈ ಶರೀರದ ಪೋಷಣೆ ಆಹಾರದಿಂದ... ತಾಯಿಗೆ ಮಾತ್ರ ಗೊತ್ತು ತನ್ನ ಮಗವಿಗೆ ಹಸಿವಾಗದಂತೆ ನೋಡಿಕೊಂಡು ಮಕ್ಕಳನ್ನು ಬೆಳೆಸುವ ಕಲೆ..‌. ಅದರಿಂದ ಈ ಶರೀರ ಪೋಷಣೆಯಲ್ಲಿ ತಾಯಿಗೆ ಸಮನಾದ ವ್ಯಕ್ತಿ ಮತ್ತೊಬ್ಬರಿಲ್ಲ... 

*ನಿದ್ರಾಸಮಂ ನಾಸ್ತಿ ಶರೀರತೋಷಣಂ* - ಈ ಶರೀರದ ಸೌಖ್ಯಕ್ಕೆ ಮೂಲ ಕಾರಣವೇ *ನಿದ್ರೆ*... ನಮಗಿರುವ ಅವಸ್ಥೆಗಳು ಮೂರು... ಅವೇ *"ಎಚ್ಚರ-ಕನಸು-ನಿದ್ರೆ"* ಹಗಲಿನಲ್ಲಿ ನಾವು ಎಚ್ಚರವಾಗಿರುತ್ತೇವೆ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ...  ಹಗಲೆಲ್ಲಾ ನಿರಂತರ ದುಡಿದು ದಣಿದ ಶರೀರಕ್ಕೆ ಆಯಾಸವಾಯಿತು. ರಾತ್ರಿಯಾಯಿತು.  ಮನುಷ್ಯ ಮಲಗಿ ನಿದ್ರಿಸಿದ. ಕನಸಿನ ಪ್ರಪಂಚ ತೆರೆದುಕೊಂಡಿತು. ಕನಸಿನಲ್ಲೂ ಸುಖ-ದುಃಖಗಳ ಅನುಭವವಾಯಿತು... ನಂತರ ಪೂರ್ಣನಿದ್ರೆಗೆ ಜಾರಿದ... Deep Sleep / Sound Sleep...  ಗಾಢನಿದ್ರೆಯಲ್ಲಿ ಯಾವ ಎಚ್ಚರವೂ ಇಲ್ಲ *"ಕೇವಲ‌ ಆನಂದ"*.. ಅದೂ ಕೂಡ ದುಃಖದ ಸ್ಪರ್ಶವೇ ಇಲ್ಲದ ಆನಂದ.. ಯಾರಿಗೂ ನಿದ್ರೆಯಲ್ಲಿ ದುಃಖವಾದ ದಾಖಲೆಯೇ ಇಲ್ಲ..‌.  ಅಂತಹ ಆನಂದ ನಿದ್ರೆಯಲ್ಲಿ ಇತ್ತು. Ofcourse, ಆನಂದ ಇತ್ತು ಅಂತ ಗೊತ್ತಾಗುವುದು ನಮಗೆ ಎಚ್ಚರವಾದ ಮೇಲೆಯೇ... *"ಆನಂದವಾಗಿ ನಿದ್ರೆ ಮಾಡಿದೆ ಅಂತೀವಿ"* ...‌ ಅದರಿಂದ ಶರೀರ ತೋಷಣೆಯಲ್ಲಿ ( ಶರೀರ ಸೌಖ್ಯದಲ್ಲಿ) ನಿದ್ರೆಗೆ ಸಮನಾದ ಸಂಗತಿಯೇ ಮತ್ತೊಂದಿಲ್ಲ... Ofcourse *"ಭಾರ್ಯಾ ಸಮಂ ನಾಸ್ತಿ ಶರೀರತೋಷಣಂ"* ಅಂತಲೂ ಇದೆ... ಅಂದರೆ ಹೆಂಡತಿಯಿಂದ ಪಡೆಯುವ ಆನಂದಕ್ಕೆ ಸಮನಾದ ಶರೀರ ತೋಷಣೆ ಮತ್ತೊಂದಿಲ್ಲ ಅಂತ. ಅದೂ ನಿಜವೇ. ಆದರೆ ಅದು ಕೇವಲ ಗೃಹಸ್ಥರಿಗೆ ಸಂಬಂಧಪಟ್ಟ ವಿಷಯ... ಅದು ಒಂದು ಮುಖದ ಸುಖ. ಆ ಸುಖದ ನಂತರವೂ ನಿದ್ರೆಯಿಂದಲೇ ಪೂರ್ಣ ಸುಖ...  In General ನಿದ್ರೆಗೆ ಸಮನಾದ ಶರೀರಸುಖ ಮತ್ತೊಂದಿಲ್ಲ... ‌
*ಚಿಂತಾಸಮಂ ನಾಸ್ತಿ ಶರೀರಶೋಷಣಮ್* - ಭಗವಂತ ಕೊಟ್ಟ ಈ ಶರೀರವನ್ನು ಹಾಳುಮಾಡಿಕೊಳ್ಳಬೇಕಾದರೆ ಚಿಂತೆ (ಕೊರಗು) ಒಂದೇ ಸಾಕು...‌ ಮನುಷ್ಯ ಚಿಂತೆಗೆ ಸಿಲುಕಿದನೆಂದರೆ, ಅವನ ಅವನತಿ‌ಯ ಕಾಲ ಹತ್ತಿರ ಬಂತು ಅಂತಲೇ ಅರ್ಥ...‌ ಚಿಂತೆ ಮಾಡಿ ಮಾಡಿ ಶರೀರ ಕೃಶವಾಗಿ ಹೋಗುತ್ತದೆ... ‌ಚಿಂತೆ ನಮ್ಮನ್ನು ಹೇಗೆ ಹಾಳು ಮಾಡುತ್ತೆ ಅನ್ನುವುದಕ್ಕೆ ಮತ್ತೊಂದು ಸುಭಾಷಿತವೇ ಇದೆ. ಅದು ಹೀಗಿದೆ : 
*ಚಿತಾಯಾಶ್ಚ ಚಿಂತಾಯಾಶ್ಚ*
*ಬಿಂದು ಮಾತ್ರಂ ವಿಶೇಷತಃ |*
*ಚಿತಾ ದಹತಿ ನಿರ್ಜೀವಂ*
*ಚಿಂತಾ ದಹತಿ ಜೀವಿತಮ್ ||*

*ಚಿತೆಗೂ ಚಿಂತೆಗೂ* ಇರುವ ವ್ಯತ್ಯಾಸ ಕೇವಲ ಒಂದು‌ ಸೊನ್ನೆ ಮಾತ್ರ... ಚಿತೆ ಶರೀರವನ್ನು ಸುಟ್ಟರೆ... ಚಿಂತೆ ಬದುಕಿರುವವರ ಶರೀರವನ್ನೇ ಸುಟ್ಟು ಬಿಡುತ್ತದೆ... ‌

ಅದರಿಂದ ಶರೀರ ಶೋಷಣೆಯಲ್ಲಿ ಚಿಂತೆಗೆ ಸಮನಾದ ಸಂಗತಿಯೇ ಇಲ್ಲ ಅನ್ನುತ್ತದೆ ಈ ಸುಭಾಷಿತ... 

April 21, 2022

ತಿನ್ನುವ ಆಹಾರದಿಂದ ಗುಣದಲ್ಲಿ ಬದಲಾವಣೆ

*ಸಿಕ್ಕಲ್ಲಿ ಸಿಕ್ಕಿದ್ದನ್ನು ತಿಂದರೆ ಏನು ತೊಂದರೆ ತಿಳಿಯಬೇಕಾ ? ಈ ಪೌರಾಣಿಕ ದೃಷ್ಟಾಂತ ಓದಿ*


ಸಿಕ್ಕಲ್ಲಿ ಸಿಕ್ಕಿದ್ದನ್ನು ತಿಂದರೆ ಏನು ತೊಂದರೆ ಎಂಬುದನ್ನು ಮಹಾಭಾರತದ ಈ ದೃಷ್ಟಾಂತದ ಮುಖಾಂತರ ನಾವು ತಿಳಿದುಕೊಳ್ಳಬಹುದು.  ‌           ‌          ‌                                                                                                  ಮಹಾಭಾರತದ ಯುದ್ಧ ಮುಗಿದಿದೆ. ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಉತ್ತರಾಯಣಕ್ಕಾಗಿ ನಿರೀಕ್ಷಿಸುತ್ತಿದ್ದರು. ಧರ್ಮರಾಜನ ಮನಃಶಾಂತಿಗಾಗಿ ಭೀಷ್ಮರು ಬೇರೆ ಬೇರೆ ಧರ್ಮಗಳನ್ನು ವಿಸ್ತಾರವಾಗಿ ಬೋಧಿಸುತ್ತಿದ್ದರು.

ಇದನ್ನು ಕೇಳಿದ ದ್ರೌಪದಿ ಭೀಷ್ಮರನ್ನು ಪ್ರಶ್ನಿಸುವಳು: "ಧರ್ಮದ ಬಗ್ಗೆ ಧಾರಾಳವಾಗಿ ಉಪದೇಶ ಮಾಡುವ ತಾವು ನನ್ನ ಮಾನಹರಣದಲ್ಲಿ ದುರ್ಯೋಧನಾದಿಗಳು ತೊಡಗಿದಾಗ ಆ ಅನ್ಯಾಯವನ್ನು ಪ್ರತಿಭಟಿಸದೆ ಯಾಕೆ ಸುಮ್ಮನಿದ್ದಿರಿ? ಆಗ ಧರ್ಮಪ್ರಜ್ಞೆ ಯಾಕೆ ಜಾಗೃತವಾಗಲಿಲ್ಲ?"

ಇದಕ್ಕೆ ಭೀಷ್ಮರು ಕೊಟ್ಟ ಉತ್ತರವಿದು- "ದೌಪದಿ! ಅಂದು ನಾನು ದುರ್ಯೊಧನ ನೀಡುತ್ತಿದ್ದ ಅನ್ನವನ್ನು ಸ್ವೀಕರಿಸುತ್ತಿದ್ದೆ. ಆ ಪಾಪದ ಅನ್ನವನ್ನು ಉಂಡು ಕೊಬ್ಬಿದ್ದ ಈ ದೇಹದಲ್ಲಿ ಧರ್ಮ ಪ್ರಜ್ಞೆಯ ಸುಳಿವೇ ಇರಲಿಲ್ಲ. ದುಷ್ಟ ಆಹಾರದ ಪರಿಣಾಮವಾದ ತಾಮಸ ವೃತ್ತಿಯ ಅಬ್ಬರದಲ್ಲಿ ಧರ್ಮದ ದನಿಯೇ ಆಗ ಕೇಳಿಸದಂತಿತ್ತು. ಆದರೆ ಮಹಾಭಾರತ ಯುದ್ಧದಲ್ಲಿ ಅರ್ಜುನನ ಬಾಣ ವರ್ಷಗಳಿಂದ ನನ್ನ ಶರೀರದಿಂದ ರಕ್ತಧಾರೆಯೆಲ್ಲ ಹೊರಗೆ ಹರಿದಿದೆ, ದುರ್ಯೋಧನನು ನೀಡಿದ ಆಹಾರವನ್ನು ಸೇವಿಸಿ ಸಿದ್ಧವಾದ ರಕ್ತಧಾರೆ ಹರಿದು ಹೋಗಿ ಅಸ್ಥಿ ಮಾತ್ರವಾದ ನನ್ನ ಶರೀರವು ಈಗ ಪರಿಶುದ್ಧವಿದೆ. ಆ ದುಷ್ಟ ಆಹಾರದ ಪರಿಣಾಮ ವಿಕೃತಿಗಳಾವೂ ಈಗ ನನ್ನಲ್ಲಿ ಕಂಡುಬರುವುದಿಲ್ಲ. ಆದುದರಿಂದ ನನ್ನಲ್ಲಿ ಸ್ವಾಭಾವಿಕವಾಗಿ ಧರ್ಮಪ್ರಜ್ಞೆ ಜಾಗೃತವಾಗಿದೆ. ಈ ವಿಸ್ತಾರವಾದ ಧರ್ಮೋಪದೇಶವನ್ನು ನಾನು ನೀಡುವಂತಾಗಿದೆ."
 
ನಾವು ಸ್ವೀಕರಿಸುವ ಆಹಾರ ನಮ್ಮ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರಬಲ್ಲದೆಂಬುದಕ್ಕೆ ಜ್ಞಾಪಕವಾಗಿ ಇದೊಂದು ಪ್ರಚಲಿತವಿರುವ ಮನೋಜ್ಞ ಕಥೆ. ತಿನ್ನುವುದೆಲ್ಲವೂ ಆಹಾರವಲ್ಲ. ಸಾತ್ವಿಕ ಆಹಾರ, ರಾಜಸ ಆಹಾರ, ತಾಮಸ ಆಹಾರ: ಹೀಗೆ ಆಹಾರದಿಂದ ಹೇಗೆ ವ್ಯಕ್ತಿಯನ್ನು ಗುರುತಿಸಬಹುದು ಎನ್ನುವ ವಿಧಾನವನ್ನು ವಿವರಿಸಿದ ಕೃಷ್ಣ, ಮುಂದೆ ನಮ್ಮ ಆಚಾರದಿಂದ (ಯಜ್ಞ, ತಪಸ್ಸು, ದಾನ) ವ್ಯಕ್ತಿಯ ಸ್ವಭಾವವನ್ನು ಅರಿಯುವ ವಿಧಾನವನ್ನು ವಿವರಿಸುತ್ತಾನೆ.

ಮಹಾಭಾರತದ ಯುದ್ಧಕ್ಕೆ ಮೊದಲು ಸಂಧಾನಕ್ಕೆ ಬಂದಿದ್ದ ಶ್ರೀಕೃಷ್ಣನಿಗೂ ಕೂಡ ದುರ್ಯೋಧನಾದಿಗಳು ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಿದಾಗ ಶ್ರೀಕೃಷ್ಣನು ಹೇಳಿದ ಮಾತು: “ಇನ್ನೊಬ್ಬರ ಮನೆಯಲ್ಲಿ ಊಟ ಮಾಡಬೇಕಾದರೆ ಎರಡು ಕಾರಣದಿಂದ. ಒಂದು ಪ್ರೀತಿ, ಇನ್ನೊಂದು ಹಸಿವಿಂದ ಪ್ರಾಣರಕ್ಷಣೆ. ಇದ್ಯಾವುದು ನನಗಿಲ್ಲ” ಎಂದು!

ನಾವು ತಿಂದ ಅನ್ನ ಮೂರು ಭಾಗವಾಗುತ್ತದೆ. ಒಂದು ರಕ್ತಮಾಂಸವಾದರೆ, ಸ್ಥೂಲಭಾಗ ಕಶ್ಮಲವಾಗಿ ಹೋಗುತ್ತದೆ. ಸೂಕ್ಷ್ಮ ಭಾಗ ನಮ್ಮ ಮನಸ್ಸಾಗಿ ಪರಿಣಮಿಸುತ್ತದೆ. ಅನ್ನ ನೀಡುವವರ ಗುಣವು ಅದರಲ್ಲಿ ಸೇರಿರುತ್ತದೆ.

ಸಜ್ಜನರೇ ದುಷ್ಟ ಅನ್ನಕ್ಕೆ ಮರುಳಾಗಿ ಬಂಗಾರದಂತಹ ಬದುಕನ್ನೇ ನಾಶಮಾಡಬೇಡಿ. *ಆಹಾರದ ಶುದ್ಧಿಯೇ ನಮ್ಮ ಸತ್ತ್ವ ಶುದ್ಧಿಗೆ ನಾಂದಿ ಎಂದು ಮರೆಯದಿರಿ*!!

ಎಲ್ಲಾ ಅವನೇ ಕೊಟ್ಟಿದ್ದು, ಆದರೆ ನಮಗೆ ಉಪನಿಷತ್ತಿನ ಎಚ್ಚರಿಕೆ “ತೇನ ತ್ಯಕ್ತೇನ ಭುಂಜೀತಾಃ” ಇದರರ್ಥವು ಭಗವಂತನು ಕೊಟ್ಟಿದ್ದನ್ನು ತಿನ್ನಿ ಎಂದು. ತಿನ್ನುವ ಮೊದಲು ಸಾತ್ವಿಕ ಆಹಾರವನ್ನು ತಯಾರಿಸಿ ಎಲ್ಲಾ ಪದಾರ್ಥಗಳಲ್ಲೂ ಅವನ ವಿಭೂತಿರೂಪಗಳನ್ನು ಸ್ಮರಿಸಿ ಅವನಿಗೆ ಅರ್ಪಿಸಿ, ನಂತರ ಪ್ರಸಾದವೆಂದು ನಾವು ಸ್ವೀಕರಿಸಬೇಕು.

ನಮ್ಮ ಮನಸ್ಸು, ನಮ್ಮ ವರ್ತನೆ, ಕಾರ್ಯ ಎಲ್ಲವೂ ಆಹಾರದಿಂದಲೇ ಆಗುತ್ತದೆ. ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳುತ್ತಾ ಹೋದರೆ ಅರಿವಿಗೆ ಬರುತ್ತದೆ. ಎಂತಹ ಅನ್ನವೋ ಅಂತಹ ಬುದ್ದಿ ಎಂದು. ತಿಂದ ಆಹಾರ ನಮ್ಮ ದೈಹಿಕ ಭಾಷೆಯಾಗಿ ಬಿಂಬಿಸುತ್ತದೆ.

*ನಾವು ತಿನ್ನುವ ಆಹಾರದಿಂದ ನಮ್ಮ ಗುಣದಲ್ಲೂ, ವ್ಯಕ್ತಿತ್ವದಲ್ಲೂ ಬದಲಾವಣೆಯಾಗುತ್ತದೆ* ಎನ್ನುವುದಕ್ಕೆ ಶ್ರೀ ರಾಮಕೃಷ್ಣರು ಕಥೆಯೊಂದನ್ನು ಹೇಳುತ್ತಿದ್ದರಂತೆ. ಸನ್ಯಾಸಿಯೊಬ್ಬರು ಒಬ್ಬ ಧನಿಕನ ಆಹ್ವಾನದ ಮೇರೆಗೆ ಭಿಕ್ಷೆಗೆ ಹೋದರಂತೆ. ಆಹಾರವನ್ನು ಸ್ವೀಕರಿಸಿ ಬರುವಾಗ ಊಟ ಬಡಿಸಿದ್ದ ಬೆಳ್ಳಿಯ ಬಟ್ಟಲನ್ನು ಜೋಳಿಗೆಗೆ ಹಾಕಿಕೊಂಡು ಬಂದರಂತೆ. ನಂತರ ಆ ಧನಿಕ ಬಂದು ಬೆಳ್ಳಿಯ ಬಟ್ಟಲನ್ನು ಹಿಂತಿರುಗಿಸುವಂತೆ ಕೇಳಿ ಕೊಂಡನಂತೆ. ಸನ್ಯಾಸಿಗೆ ಆಶ್ಚರ್ಯ ! ತನ್ನೊಂದಿಗೆ ಹೇಗೆ ಈ ಬಟ್ಟಲನ್ನು ತಂದೆ ? ನನ್ನಲ್ಲೇ ಏನೋ ಆಗಿರಬೇಕು ಇಲ್ಲಾಂದ್ರೆ ಅವನು ನೀಡಿರುವ ಆಹಾರ ಸರಿಯಾದುದಲ್ಲವೆಂದು. ನಂತರ ಅವನಲ್ಲೇ ನಿನ್ನ ಸಂಪಾದನೆಯ ಹಾದಿ ಯಾವುದು? ಎಂದು ಪ್ರಶ್ನಿಸಿದರು. ಅವನು ತನ್ನ ಗಳಿಕೆಯ ಮಾರ್ಗವನ್ನು ತಿಳಿಸಿದನಂತೆ. ಸನ್ಯಾಸಿಗೆ ಇವನದ್ದು ಕಳ್ಳಮಾರ್ಗದಲ್ಲಿ ಶೇಖರಿಸಿದ ಸಂಪತ್ತು. ಇವನು ನೀಡಿದ್ದ ಅನ್ನವು ಕಳ್ಳ ಅನ್ನವೇ. ಅದಕ್ಕಾಗಿಯೇ ತಾನೂ ಆ ಅನ್ನವನ್ನು ತಿಂದದ್ದರಿಂದ ನನಗೂ ಕಳ್ಳ ಬುದ್ದಿ ಬಂತು ಎಂದು; ಪ್ರಾಯಶ್ಚಿತ ಮಾಡಿಕೊಂಡರಂತೆ. ಆಹಾರವೇ ಎಲ್ಲದಕ್ಕೂ ಕಾರಣ ಎನ್ನುವುದಕ್ಕೆ ಇದೊಂದು ನಿದರ್ಶನ.

*ಹಾಗಾದರೆ ಆಹಾರ ಹೇಗಿರಬೇಕು?*                                                             ಒಳ್ಳೆಯ ಮನಸ್ಸು, ಒಳ್ಳೆಯ ಹೃದಯ ಬೇಕಾದರೆ ಸಾತ್ವಿಕ ಆಹಾರವನ್ನು ಸ್ವೀಕರಿಸಬೇಕು. ಅತ್ಯಂತ ಕಹಿ, ಹುಳಿ, ಉಪ್ಪು, ಬಿಸಿ, ಖಾರ, ಒಣಗಿದುದು, ಬಾಯಾರಿಕೆಯನ್ನು ಉಂಟು ಮಾಡುವ ಆಹಾರಗಳು. ದುಃಖ, ಶೋಕ, ಕೋಪ, ಸಿಟ್ಟು, ಚಿಂತೆ ಎಲ್ಲವನ್ನು ತಂದೊಡ್ಡುತ್ತದೆ. ಎಲ್ಲವೂ ಹಿತಮಿತವಾಗಿರಬೇಕು.

April 19, 2022

ಆದರ್ಶ ವ್ಯಕ್ತಿ

ಆದರ್ಶ ವ್ಯಕ್ತಿಯ ಹಾದಿ.

ಈ ಪ್ರಪಂಚದಲ್ಲಿ ಅನೇಕ ತರಹದ ಜನರಿರುತ್ತಾರೆ. ಹೇಗಾದರೂ ಮಾಡಿ ಇತರರನ್ನು ಮೆಚ್ಚಿಸಬೇಕೆಂದು ಬಯಸುತ್ತಾರೆ. ಆದರೆ ಈ ರೀತಿಯಲ್ಲಿ ಮೆಚ್ಚಿಸುವುದರಿಂದ ದೊರೆಯುವ ಪ್ರತಿಫಲ ಏನೆಂಬುದನ್ನು ಗಮನಿಸುವುದಿಲ್ಲ. ಅಂಥವರ ಕಣ್ತೆರೆಯಿಸಿ, ಸೂಕ್ತ ಮಾರ್ಗದರ್ಶನ ನೀಡುವಂತಹ ಒಂದು ಪ್ರಸಂಗ ಅತ್ಯಂತ ಹೃದಯಸ್ಪರ್ಶಿಯಾಗಿದೆ.

ನೇಪಾಳದ ಮಹಾರಾಜನಿಗೆ ಒಮ್ಮೆ ಒಬ್ಬ ನೌಕರನ ಅಗತ್ಯ ಉಂಟಾಯಿತು. ಅದಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆ ಮಾಡಬೇಕಾಗಿತ್ತು. ಆದರೆ ಅನೇಕ ಉಮೇದುವಾರರು ಹಾಜರಾದರು. ಅವರ ಪೈಕಿ ಮೂವರನ್ನು ಅಂತಿಮ ಪರೀಕ್ಷೆಗೆ ಆಯ್ಕೆ ಮಾಡಲಾಯಿತು. ಮೂವರೂ ಯೋಗ್ಯತಾವಂತರೇ. ಮೂವರನ್ನೂ ಅವರ ಪ್ರತಿಭೆಯನ್ನು ಪರಿಶೀಲಿಸಿಯೇ ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಲಾಗಿತ್ತು. ಅದರೆ ನೌಕರಿ ಇರುವುದು ಒಂದೇ ತಾನೆ. ಈಗ ಒಬ್ಬನನ್ನು ಆರಿಸುವ ಸವಾಲು.

ಆ ಮೂವರಿಗೆ ಮಹಾರಾಜನು ಒಂದು ಪ್ರಶ್ನೆಯನ್ನು ಹಾಕಿದನು- ''ನೋಡಿರಿ, ನನ್ನ ಗಡ್ಡ ಮತ್ತು ನಿಮ್ಮ ಗಡ್ಡ- ಎರಡಕ್ಕೂ ಏಕಕಾಲದಲ್ಲಿ ಬೆಂಕಿಯ ಜ್ವಾಲೆ ತಗುಲಿ, ಉರಿಯತೊಡಗಿದರೆ ನೀವೇನು ಮಾಡುತ್ತೀರಿ?'' ಮೊದಲನೆಯ ವ್ಯಕ್ತಿ ಉತ್ತರಿಸಿದನು- ''ಮಹಾರಾಜರೇ, ತಕ್ಷ ಣವೇ ಮೊದಲು ನಿಮ್ಮ ಗಡ್ಡದ ಬೆಂಕಿಯನ್ನು ಆರಿಸಿಬಿಡುತ್ತೇನೆ. ನನ್ನ ಗಡ್ಡದ ಬೆಂಕಿಯ ಚಿಂತೆ ಮಾಡಲಾರೆ''. ಎರಡನೆಯ ವ್ಯಕ್ತಿ ಹೇಳಿದನು- ''ಮಹಾಸ್ವಾಮಿ, ನಾನು ಮೊದಲಿಗೆ ನನ್ನ ಗಡ್ಡದ ಬೆಂಕಿಯನ್ನು ಆರಿಸಿಬಿಡುವೆನು. ಆ ಬಳಿಕ ನಿಮ್ಮ ಗಡ್ಡದ ಚಿಂತೆ ಮಾಡುವೆನು''. ಮೂರನೆಯ ವ್ಯಕ್ತಿ ಹೇಳಿದನು- ''ಮಹಾರಾಜರೇ, ನಾನು ಒಂದು ಕೈಯಿಂದ ನಿಮ್ಮ ಗಡ್ಡದ ಬೆಂಕಿ ಆರಿಸುತ್ತೇನೆ. ಇನ್ನೊಂದು ಕೈಯಿಂದ ನನ್ನ ಗಡ್ಡದ ಬೆಂಕಿ ಆರಿಸುತ್ತೇನೆ'' ಎಂದನು.

ಮೂರು ಜನರ ಉತ್ತರ ಕೇಳಿ ಮಹಾರಾಜನು ಹೇಳಿದನು- ''ಮೊದಲ ವ್ಯಕ್ತಿಯ ಉತ್ತರವು ಅವ್ಯಾವಹಾರಿಕವಾಗಿದೆ. ಈ ಜಗತ್ತಿನಲ್ಲಿ ಕಷ್ಟ ಬಂದಾಗ ತನ್ನ ಬಗ್ಗೆ ಚಿಂತಿಸದೆ, ಇತರರ ಬಗ್ಗೆ ಚಿಂತಿಸುವಾತ ಅವ್ಯಾವಹಾರಿಕನಾಗಿದ್ದಾನೆ. ಅವ್ಯಾವಹಾರಿಕನು ಕೆಲವೊಮ್ಮೆ ಅತಿ ಒಳ್ಳೆಯತನದಿಂದ ತನಗೂ ತನ್ನವರಿಗೂ ಅನ್ಯಾಯ ಮೋಸಗಳನ್ನು ಮಾಡಿಕೊಳ್ಳುತ್ತಾನೆ. ಅಥವಾ ಈತ ನನ್ನನ್ನು ಮೆಚ್ಚಿಸಲೆಂದು ಸುಳ್ಳು ಹೇಳುತ್ತಿರಲೂ ಬಹುದು. ಆದ್ದರಿಂದ ನಾನು ಈತನನ್ನು ಆರಿಸಲಾರೆ. ಎರಡನೇ ವ್ಯಕ್ತಿಯು ಸ್ವಾರ್ಥಿಯಾಗಿದ್ದಾನೆ. ತನ್ನ ಕುರಿತೇ ಚಿಂತಿಸುವಾತ ಇತರರ ದೃಷ್ಟಿಯಿಂದ ಯೋಚಿಸಿದಾಗ ಅಪಾಯಕಾರಿ. ಆಯಕಟ್ಟಿನ ಸಮಯದಲ್ಲಿ ಈತ ಸಹಾಯಕ್ಕೆ ಒದಗದೆ ತನ್ನ ಸ್ವಾರ್ಥವನ್ನಷ್ಟೇ ನೋಡಿಕೊಂಡು ಪಾರಾಗಿಬಿಡಬಹುದು. ಆದ್ದರಿಂದ ನಾನು ಉದ್ಯೋಗಕ್ಕೆ ಈತನನ್ನೂ ಆರಿಸಲಾರೆ. ಮೂರನೇ ವ್ಯಕ್ತಿ ವ್ಯವಹಾರ ಪ್ರಜ್ಞೆಯುಳ್ಳವನು. ಅವನು ಸ್ವಾರ್ಥಿಯೂ ಅಲ್ಲ, ಅವ್ಯಾವಹಾರಿಕನೂ ಅಲ್ಲ. ತನ್ನ ಹಾಗೂ ಪರರ ಒಳಿತನ್ನು ಮಾಡಬಲ್ಲನು ಎಂದು ತೋರುತ್ತದೆ. ಮಾತ್ರವಲ್ಲ ಈತ ಸಕಾಲದಲ್ಲಿ ಬುದ್ಧಿವಂತಿಕೆಯನ್ನು ಬಳಸಿಕೊಂಡು, ಚಾತುರ‍್ಯದಿಂದ ಸಮಸ್ಯೆಯನ್ನು ಪರಿಹರಿಸಬಲ್ಲನು. ಆದ್ದರಿಂದ ಈತನನ್ನು ಆರಿಸುತ್ತೇನೆ'' ಎಂದು ಮೂರನೇ ವ್ಯಕ್ತಿಯನ್ನು ಆಯ್ಕೆ ಮಾಡಿದನು.

ಹೀಗೆ ಪ್ರಪಂಚದಲ್ಲಿ ತನ್ನ ಹಿತ ಮತ್ತು ಅನ್ಯರ ಹಿತಗಳೆರಡನ್ನೂ ಗಮನಿಸಿ, ವ್ಯವಹರಿಸಲು ಕುರಿತವನೇ ಆದರ್ಶ ವ್ಯಕ್ತಿಯೆನಿಸುತ್ತಾನೆ. ಸರ್ವರ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎಂದು ತಿಳಿದವನು ಉತ್ತಮನು. ಈ ರೀತಿಯಲ್ಲಿ ಇಡೀ ಜಗತ್ತಿನ ಜನರೆಲ್ಲರೂ ಆದರ್ಶ ವ್ಯಕ್ತಿಗಳಾದಾಗ ಇಡೀ ಭೂಲೋಕವೇ ಸುಖಮಯ ಸ್ವರ್ಗ ಸದೃಶವಾಗಬಲ್ಲುದು.

April 18, 2022

ಸಂಸ್ಕೃತ ಸ೦ಬ೦ಧಿತ ವೆಬ್‌ಸೈಟ್‌ಗಳು


ಇತರ ಸ೦ಸ್ಕೃತ ವಿದ್ಯಾಸ೦ಸ್ಥೆಗಳು

1)ಸ೦ಸ್ಕೃತ ಭಾರತಿ-http://samskritabharati.in/

2)ಸ೦ಸ್ಕೃತ ಹೆರಿಟೇಜ್ ಜಾಲತಾಣ- http://sanskrit.inria.fr/

3)ಸ೦ಸ್ಕೃತ ಇಲಾಖೆ,ಹೈದರಾಬಾದ್ ವಿಶ್ವವಿದ್ಯಾಲಯ- http://sanskrit.uohyd.ernet.in/

4)ಸ೦ಸ್ಕೃತ ಅಧ್ಯಯನ ಕೇ೦ದ್ರ, ಜೆ.ಎನ್.ಯು-http://sanskrit.jnu.ac.in/index.jsp

5)ಪೂರ್ಣಪ್ರಜ್ಞಾ ಸ೦ಶೋಧನಾ ಮ೦ದಿರ, ಬೆ೦ಗಳೂರು-http://www.poornaprajna.com/

6)ಸ೦ಸ್ಕೃತ ಅಕಾಡಮಿ, ಒಸ್ಮಾನಿಯಾ ವಿಶ್ವವಿದ್ಯಾಲಯ-http://www.osmania.ac.in/sanskritacademy/

ಜಾಲತಾಣದಲ್ಲಿ ಸ೦ಸ್ಕೃತ ಸ೦ಪನ್ಮೂಲಗಳು

1)ಸ೦ಸ್ಕೃತ ದಾಖಲೆಗಳ ಜಾಲತಾಣ -http://sanskritdocuments.org/

2)ಸ೦ಸ್ಕೃತ ವೀಕಿಬುಕ್ಸ್-http://sa.wikibooks.org/wiki/%E0%A4%AE%E0%A5%81%E0%A4%96%E0%A5%8D%E0%A4%AF%E0%A4%AA%E0%A5%83%E0%A4%B7%E0%A5%8D%E0%A4%A0%E0%A4%AE%E0%A5%8D

3)ಸ೦ಸ್ಕೃತ ಲಿಪಿಗಳು ಮತ್ತು ಸ೦ಸ್ಕೃತ ಪಠ್ಯಗಳು -http://sanskritweb.net/

4)ಸ೦ಸ್ಕೃತ ಈ-ಪುಸ್ತಕಗಳು -http://sanskritebooks.org/

5)ಸ೦ಸ್ಕೃತ ಶಾಸ್ತ್ರಗಳ ಅನುವಾದಗಳು -http://www.giirvaani.net/

6)ಸ೦ಸ್ಕೃತ ಪಠ್ಯಗಳು ಮತ್ತು ಸ್ತೋತ್ರಗಳು -http://sanskrit.safire.com/

7)ಸ೦ಸ್ಕೃತ ವಿಕಿಪೀಡಿಯ - http://sa.wikipedia.org/wiki/%E0%A4%AE%E0%A5%81%E0%A4%96%E0%A5%8D%E0%A4%AF%E0%A4%AA%E0%A5%83%E0%A4%B7%E0%A5%8D%E0%A4%A0%E0%A4%AE%E0%A5%8D

8)ಮನೆಯಿ೦ದ ಸ೦ಸ್ಕೃತ ಕಲಿಯಿರಿ -http://www.sanskritfromhome.in/

9)ಸುಧರ್ಮ,ಸ೦ಸ್ಕೃತ ದಿನಪತ್ರಿಕೆ -http://sudharma.epapertoday.com/

10)ಸ೦ಭಾಷಣಾ ಸ೦ದೇಶ ಸ೦ಸ್ಕೃತ ಮಾಸಪತ್ರಿಕೆ -http://samskritam.in/

11)ಮೊನಿಯರ್ ವಿಲಿಯಮ್ಸ್ ಆನ್ಲೈನ್ ಶಬ್ದಕೋಶ -http://www.sanskrit-lexicon.uni-koeln.de/monier/

12)ಆಪ್ಟೆ ಸ೦ಸ್ಕೃತ ಶಬ್ದಕೋಶ -http://www.aa.tufs.ac.jp/~tjun/sktdic/

13)ಸ೦ಸ್ಕೃತ ಮಾತನಾಡಲು ಸ೦ಸ್ಕೃತ ಶಬ್ದಕೋಶ -http://spokensanskrit.de/

ಸ೦ಸ್ಕೃತ ಗು೦ಪುಗಳು,ಸಮುದಾಯಗಳು ಮತ್ತು ಬ್ಲಾಗ್ಸ್.

1)ಭಾರತೀಯ ವಿದ್ವತ್ ಪರಿಷತ್ -http://groups.google.com/group/bvparishat/

2)ಪಾಣಿನಿ ಗು೦ಪು -http://groups.google.com/group/panini2008/

3)ಸ೦ಸ್ಕೃತ ಗು೦ಪು -http://groups.google.com/group/samskrita/

4)ಸ೦ಸ್ಕೃತ ಬ್ಲಾಗ್ -http://samskrtam.wordpress.com/

5)ಗೂಗಲ್ ಗ್ರೂಪ್ಸ್ – ಭಾರತೀಯ ವಿದ್ವತ್ಪರಿಷತ್ -http://groups.google.com/group/bvparishat/

ಸ೦ಸ್ಕೃತ ವಿಶ್ವವಿದ್ಯಾಲಯಗಳು

1)ರಾಷ್ಟ್ರೀಯ ಸ೦ಸ್ಕೃತ ಸ೦ಸ್ಥಾನ, ನವದೆಹಲಿ -http://www.sanskrit.nic.in/

2)ಸ೦ಪೂರ್ಣಾನ೦ದ ಸ೦ಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ -http://ssvv.up.nic.in/

3)ಜಗದ್ಗುರು ರಾಮಚ೦ದ್ರಾಚಾರ್ಯ ರಾಜಸ್ಥಾನ ಸ೦ಸ್ಕೃತ ವಿಶ್ವವಿದ್ಯಾಲಯ,ಜೈಪುರ -http://www.slbsrsv.ac.in/home.asp

4)ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸ೦ಸ್ಕೃತ ವಿದ್ಯಾಪೀಠ, ನವದೆಹಲಿ -http://www.slbsrsv.ac.in/home.asp

5)ಉತ್ತರಾಖ೦ಡ ಸ೦ಸ್ಕೃತ ವಿಶ್ವವಿದ್ಯಾಲಯ,ಹರಿದ್ವಾರ -http://www.usvv.org/

6)ಮಹರ್ಷಿ ಪಾಣಿನಿ ಸ೦ಸ್ಕೃತ ಮತ್ತು ವೇದಿಕ್ ವಿಶ್ವವಿದ್ಯಾಲಯ, ಉಜ್ಜಯಿನಿ -http://www.mpsvvujjain.org/Index.html

7)ಮಹರ್ಷಿ ಮಹೇಶ್ ಯೋಗಿ ವೇದಿಕ್ ವಿಶ್ವವಿದ್ಯಾಲಯ, ಜಬಲ್ ಪುರ -http://www.mmyvv.com/index.jsp

8)ಶ್ರೀ ಸೋಮನಾಥ ಸ೦ಸ್ಕೃತ ವಿಶ್ವವಿದ್ಯಾಲಯ, ಗಾ೦ಧಿನಗರ -http://www.shreesomnathsanskrituniversity.info/

9)ಕವಿಕುಲಗುರು ಕಾಳಿದಾಸ ಸ೦ಸ್ಕೃತ ವಿಶ್ವವಿದ್ಯಾಲಯ, ನಾಗಪುರ -http://www.sanskrituni.net/

10)ಕಾಮೇಶ್ವರ ಸಿ೦ಗ್ ದರ್ಭ೦ಗ ಸ೦ಸ್ಕೃತ ವಿಶ್ವವಿದ್ಯಾಲಯ,ದರ್ಭ೦ಗ -http://www.ksdsu.edu.in/

11)ರಾಷ್ಟ್ರೀಯ ಸ೦ಸ್ಕೃತ ವಿದ್ಯಾಪೀಠ, ತಿರುಪತಿ -http://www.rsvidyapeetha.ac.in/

12)ಶ್ರೀ ಶ೦ಕರಾಚಾರ್ಯ ಸ೦ಸ್ಕೃತ ವಿಶ್ವವಿದ್ಯಾಲಯ, ಕಲದಿ -http://www.ssus.ac.in/
🌝🙏�🌚

ದರ್ಬೆ ಪವಿತ್ರ ಏಕೆ ?

ಧರ್ಬೆ ಯ ಮಹತ್ವ 

ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಏಕೆ ಹರಡುತ್ತಾರೆ? 

ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ? 
ಬನ್ನಿ ತಿಳಿಯೋಣ. 

ಗರುಡ ರಾಜನು ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ನಾಗ ಕುಲದ ಕುದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತರುತ್ತಾನೆ

 ಆಗ ಆ ಕಳಶವನ್ನು ದರ್ಭೆ  ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ ಕದ್ರುವು
ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ದುನು

ಹಾಗೆ ಕಳಸವನ್ನು ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ  ಹುಲ್ಲಿನ ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು .

ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ  ದ್ವಿಜಿಹ (ಎರಡು )ಎಂಬ ಹೆಸರನ್ನು ಪಡೆದವು

ಅಮೃತ ಬಿಂದುಗಳು ತುಳುಕಿ ಈ ರೀತಿ ಧರ್ಭೆಗಳ ಮೇಲೆ ಬಿದ್ದಾಗ ಅವು ಅಮೃತತ್ವವನ್ನು ಪಡೆದು ಪವಿತ್ರಿ ಎಂಬ ಹೆಸರನ್ನು ಪಡೆದು ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು ಹಿಂದೂಗಳಿಗೆ ಪರಮ ಪವಿತ್ರವಾಗಿವೆ

 ಇವುಗಳಲ್ಲಿ ಅನೇಕ ವಿಧಗಳಿವೆ ದರ್ಭೆ .ಕುಶ. ಕಾಶವೆಂಬ ವಿಶ್ವಾಮಿತ್ರ ದರ್ಭೆ . ಯಮವೆಂಬ ಧ್ಯಾನದ ಎಲೆ, ಭತ್ತದ ಗರಿ, ಜೊಂಡು, ಬಿಳಿ ಕಮಲ ಮುಂತಾದವುಗಳು.

ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ  ಇಲ್ಲದೆ ಮಾಡುವಂತಿಲ್ಲ ಅಲ್ಲದೆ ಈ ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು

ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಹರಡುತ್ತಾರೆ ದರ್ಬೆಯ ಆಗ್ರದಲ್ಲಿ ಶಿವನು ಮಧ್ಯದಲ್ಲಿ ವಿಷ್ಣುವು  ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ಎಂದು ನಂಬಲಾಗಿದೆ.

ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು  ಮಾಡಿದರು ಆಗ ದೈತ್ಯರು ಈ ದಾನಗಳ ಫಲವನ್ನು ತಾವೇ ಪಡೆದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು.

ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ  ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು.

ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ  ಬರಲಾಗುವುದಿಲ್ಲ ಈ ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು ಸೃಷ್ಟಿಸಿದನು.

ಧರ್ಭೆಗಳ ಸೃಷ್ಟಿಯ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ. ವಿಷ್ಣುವು ವರಾಹ ಅವತಾರ ತಾಳಿದಾಗ ಅವನು ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೊಡವಿದಾಗ ಅವನ ಶರೀರದ ಕೆಲವು ರೋಮಗಳು ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ. ರೋಮಗಳು ಬಿದ್ದ ಸ್ಥಳವು ಬಹ್ಮಿಷ್ಮತಿ ( ದರ್ಭೆಗಳ ಪ್ರದೇಶ ) ಎಂದು ಖ್ಯಾತವಾಯಿತು ಅಲ್ಲದೆ ಅದು ಸ್ವಾಯಂಭುವ ಮನುವಿನ ರಾಜಧಾನಿಯಾಗಿತು, 
ಈಗ ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ಅನ್ನೋದನ್ನು ನೋಡೋಣ.

ದರ್ಭೆಯನ್ನು ವೇದಗಳ ಕಾಲದಿಂದಲೂ ದೇವರ ಆಸನ ಗ್ರಹಣಕ್ಕೆ ಮುನ್ನ ಆ ಜಾಗದಲ್ಲಿ ಇರಿಸಲಾಗುತ್ತಿತ್ತು. ಸ್ವಯಂ ಶ್ರೀ ಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯಲ್ಲಿ ದರ್ಭೆಯನ್ನು ಧ್ಯಾನಾಸನಗಳ ಭಾಗವಾಗಿದೆ ಎಂದು ಉಪದೇಶಿಸಲಾಗಿದೆ. ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.‍ ಹೋಮ ಹವನಾದಿಗಳಲ್ಲಿ ದರ್ಭೆಯನ್ನು ಹೋಮ ಕುಂಡದ ಸುತ್ತಲೂ 4 ಬದಿಯಲ್ಲೂ ಹಾಕಲಾಗುವುದು. ಇದನ್ನು ಪರಿಸ್ಥರಣ ಅನ್ನುತ್ತಾರೆ.
ಅಂದರೆ ಇದು ದೇವರ ಆಸನವಾಗಿದೆ. 

    ಹಿಂದೆ ಸಮುದ್ರ ಮಥನದ ಸಂದರ್ಭದಲ್ಲಿ ಮಹಾವಿಷ್ಣು ಮಂದರ ಪರ್ವತಕ್ಕೆ ಆಸರೆಯಾಗಲು ಕೂರ್ಮಾವತಾರ ತಾಳಿದಾಗ ಆಮೆಯ ಮೈಯ ಕೆಲವು ರೋಮಗಳು ಮಂಥನದ ಘರ್ಷಣೆಯಿಂದ ಉದುರಿ ಸಮುದ್ರದಲ್ಲಿ ಬೀಳುತ್ತವಂತೆ. ಇವುಗಳೇ ಕ್ರಮೇಣ ಕುಶ ಆಗಿ ಕರೆಯಲ್ಪಡುತ್ತವೆ.

    ದರ್ಭೆಯಿಂದ ಮಾಡುವ ಪವಿತ್ರವನ್ನು ಪುರುಷನು ತನ್ನ ಬಲಕೈಯ ಉಂಗುರದ ಬೆರಳಿಗೆ ಧರಿಸುತ್ತಾನೆ. ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ, ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ, ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ.
    ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲಿಗೆ “ಪುಣ್ಯಾಹವಾಚನ”ಎಂಬುದಾಗಿ ಮಾಡುತ್ತಾರೆ; ಅಂದರೆ ಕಾರ್ಯಕ್ರಮ ನಡೆಯುವ ಜಾಗದ ಶುದ್ದೀಕರಣ. ಇಲ್ಲಿ ದರ್ಭೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲ ಪೂಜಾ ಸಾಮಗ್ರಿಗಳ ಮೇಲೂ, ಆ ಜಾಗದ ಪ್ರತೀ ಮೂಲೆಗಳಲ್ಲೂ, ಹಾಗೂ ಅಲ್ಲಿರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ.
ದರ್ಭೆಯ ತುದಿಯಲ್ಲಿ ಧ್ವನಿ ಸಂವೇದನಾ ಕಂಪನಗಳನ್ನುಂಟು ಮಾಡುವ ಶಕ್ತಿಯು ಇದೆ ಎಂದು ಹೇಳಲಾಗುತ್ತದೆ. ದರ್ಭೆಯಲ್ಲಿರುವ ಕಂಪನಾ ಶಕ್ತಿಯನ್ನು ಪಾತ್ರದಲ್ಲಿರುವ ನೀರು ಹೀರಿಕೊಳ್ಳುತ್ತದೆ.ಈ ನೀರು ಎಲ್ಲೆಲ್ಲಿ ಪ್ರೋಕ್ಷಣೆಯಾಗುತ್ತೋ ಅಲ್ಲಲ್ಲಿ ಶಕ್ತಿಯ ಸಂಚಲನ ಉಂಟಾಗುತ್ತದೆ ಎಂದು ಅದಕ್ಕಾಗಿ ಅನಾದಿ ಕಾಲದಿಂದಲೂ ನಮ್ಮ ಹಿಂದೂ ಧರ್ಮದಲ್ಲಿ ಈ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ.
ಹೀಗಾಗಿ ತುದಿಗಳಿಲ್ಲದ ದರ್ಭೆಯನ್ನು ಉಪಯೋಗಿಸುವಂತಿಲ್ಲ, ಯಾಕಂದ್ರೆ ಇದರಲ್ಲಿ ಪ್ರವಹನಾ ಶಕ್ತಿಯು ನಷ್ಟವಾಗಿರುತ್ತದೆ.
ಧಾರ್ಮಿಕ ಪರಂಪರೆಯ ಪ್ರಕಾರ ದರ್ಭೆಯನ್ನು ಎಲ್ಲ ದಿನಗಳಲ್ಲೂ ಕೀಳುವಂತಿಲ್ಲ ಹಾಗೂ ತುಂಡರಿಸುವಂತಿಲ್ಲ.ಇದನ್ನು ಕೇವಲ ಹುಣ್ಣಿಮೆಯ ಮರುದಿನ ಬರುವ ಕೃಷ್ಣ ಪಕ್ಷದ ಪಾಡ್ಯದಂದು ಮಾತ್ರ ಕೀಳಲಾಗುತ್ತದೆ.
ಕೆಲವೊಂದು ಸಂಶೋಧನೆ ಯಿಂದ
 ಈ ದರ್ಭೆಯನ್ನು ಅಂಗೈಯಲ್ಲಿಟ್ಟು ‍ಎಕ್ಸ್ ರೇ ಸಹಾಯದೊಂದಿಗೆ ಪರೀಕ್ಷಿಸಿದಾಗ ಇದು ಎಕ್ಸ್ ರೇಯ 60% ಕಿರಣವನ್ನು ಹೀರಿಕೊಳ್ಳುತ್ತದೆ ಎಂದು ತಿಳಿದುಬಂತು.ಇಂತಹ ಪ್ರಭಾವಶಾಲಿ ಎಕ್ಸ್ ರೇ ಕಿರಣಗಳನ್ನೆ ಈ ದರ್ಭೆಯು ಹೀರಿಕೊಳ್ಳುವಾಗ ಪ್ರಕೃತಿಯಲ್ಲಿನ ಕೆಟ್ಟ ನಕಾರತ್ಮಕ ವ್ಯಾಧಿಗ್ರಸ್ಥ ಕಿರಣಗಳನ್ನು ಇವು ಹೀರಲಾರವೆ?
ಅನೇಕ ವರುಷಗಳಿಂದಲೂ ಮನೆಯ ಹಿರಿಯರು ಚಂದ್ರ ಹಾಗೂ ಸೂರ್ಯ ಗ್ರಹಣದ ಸಂದರ್ಭದಲ್ಲಿ ಗ್ರಹಣದಿಂದ ಬರುವ ಅಲ್ಟ್ರ ವೈಲೆಟ್ ಕಿರಣಗಳಿಂದ ನೀರು ಹಾಗೂ ಆಹಾರ ಸಾಮಾಗ್ರಿಗಳನ್ನು ರಕ್ಷಿಸಲು ಇವುಗಳ ಮೇಲೆ ಈ ದರ್ಭೆಯನ್ನು ಇಡುತ್ತಿದ್ದರು. ಇಂದಿಗೂ ಈ ಪ್ರತೀತಿ ಜಾರಿಯಲ್ಲಿದೆ.
ಅಯುರ್ವೇದದಲ್ಲಿ ಇದಕ್ಕೆ ತನ್ನದೇ ಆದ ಮಹತ್ವ ಇದೆ. ಅನೇಕ ಸಂದರ್ಭಗಳಲ್ಲಿ ವಿಶೇಷವಾಗಿ ಭೇದಿ, ಋತುಸ್ರಾವ ಹಾಗೂ ಮೂತ್ರ ಸಂಬಂಧಿ ದೋಷ ಮೊದಲಾದವುಗಳಲ್ಲಿ ಇವು ಚಿಕಿತ್ಸಾತ್ಮಕ ಶಕ್ತಿಯಾಗಿಯೂ ಪರಿಣಮಿಸುತ್ತದೆ.
ಹಿಂದೆ ಭಗವಂತನು ದೇವತೆಗಳಿಗೆ ಹಾಗೂ ಮನುಷ್ಯರಿಗೆ ಮಾಧ್ಯಮವಾಗಿ ಯಜ್ಞವನ್ನು ಸೃಷ್ಟಿಸಿದನು.
ಆದರೆ ಆ ಯಜ್ಞದ ಆಹುತಿ ದೇವತೆಗಳಿಗೆ ತಲುಪುತ್ತಿರಲಿಲ್ಲ. ಅದರಂತೆ ಮನುಷ್ಯನು ಮಾಡಿದ ಶ್ರಾದ್ಧವೂ ಪಿತೃದೇವತೆಗಳಿಗೆ ತಲುಪುತ್ತಿರಲಿಲ್ಲ. ಯಾಕೆಂದರೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ರಾಕ್ಷಸರು ಮುಟ್ಟಿ ಅದನ್ನು ಅಶುಚಿ ಮಾಡುತ್ತಿದ್ದರು. ಆಗ ದೇವತೆಗಳು ಮತ್ತು ಪಿತೃಗಳು ಭಗವಂತನನ್ನು ಪ್ರಾರ್ಥಿಸಲು ಭಗವಂತನು ವರಾಹ ರೂಪಿಯಾಗಿ ಬಂದು ತನ್ನ ರೋಮದಿಂದ ದರ್ಭೆಯನ್ನು ಸೃಷ್ಟಿಸಿ ಅದನ್ನು ಯಜ್ಞ ಹಾಗೂ ಶ್ರಾದ್ಧದ ರಕ್ಷಣೆಗೆ ನೀಡಿದನು. ಅಂದಿನಿಂದ ದರ್ಭೆಯ ಸ್ಪರ್ಶವಾದರೆ ದೈತ್ಯರು ಓಡಿಹೋಗುತ್ತಾರೆ. ಆದ್ದರಿಂದ ದರ್ಭೆಯಿಲ್ಲದೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ಮಾಡಲೇಬಾರದು.

"ಕುಶಮೂಲೇ ಸ್ಥಿತೋ ಬ್ರಹ್ಮಾ ಕುಶಮಧ್ಯೇ ತು ಕೇಶವಃ
ಕುಶಾಗ್ರೇ ಶಂಕರಂ ವಿದ್ಯಾತ್ ಸರ್ವದೇವಾಃ ಸಮಂತತಃ।। (ದೇವಲ)

ದರ್ಭೆಗಳು ಏಳು ವಿಧವಾಗಿದೆ.

ವಿಶ್ವಾಮಿತ್ರಾಃಕುಶಾಃಕಾಶಾಃದೂರ್ವಾ ವ್ರೀಹಯ ಏವ ಚ
ಬಲ್ವಲಾಶ್ಚ ಯವಾಶ್ಚೈವ ಸಪ್ತದರ್ಭಾಃ ಪ್ರಕೀರ್ತಿತಾಃ।।

ಇದರಲ್ಲಿ ರುದ್ರಸಂಬಂಧ ಹಾಗೂ ಆಭಿಚಾರ ಕೃತ್ಯದಲ್ಲಿ ಕಾಶ ಎಂಬ ದರ್ಭೆಯನ್ನು, ಶ್ರೌತ ಸ್ಮಾರ್ತ ಕರ್ಮಗಳಲ್ಲಿ ಕುಶವನ್ನೂ, ಋಷಿ ಪೂಜಾಗಳಲ್ಲಿ ದೂರ್ವಾವನ್ನೂ, ವೈಷ್ಣವ ಸಂಬಂಧಿ ಕಾರ್ಯದಲ್ಲಿ ವಿಶ್ವಾಮಿತ್ರ ದರ್ಭೆಯನ್ನು ಉಪಯೋಗಿಸಬೇಕೆಂದು ಶಾಸ್ತ್ರವು ತಿಳಿಸುತ್ತದೆ. ‌

"ಕಾಶಂ ತು ರೌದ್ರಂಮಾಖ್ಯಾತಂ ಕುಶಂ ಬ್ರಾಹ್ಮಂ ತಥಾ ಸ್ಮೃತಮ್
ದೂರ್ವಾತ್ವಾರ್ಷಂ ಸಮಾಖ್ಯಾತಂ ವಿಶ್ವಾಮಿತ್ರಂ ತು ವೈಷ್ಣವಮ್ ।। (ಹಾರೀತ)

ಕುಶಂ ತು ಸರ್ವಕಾರ್ಯೇಷು ಪವಿತ್ರಂ ಸ್ಮೃತಮ್

ಎಂಬ ವಾಕ್ಯದಂತೆ ಇದು ಯಾವುದೇ ಇಲ್ಲದಿದ್ದರೆ ಕುಶ ಎಂಬ ದರ್ಭೆಯನ್ನು ಎಲ್ಲಾ ಕಾರ್ಯಗಳಲ್ಲಿಯೂ ಉಪಯೋಗಿಸಬಹುದು.

‌ದರ್ಭೆಯನ್ನು ಯಾವಾಗ ಆಹರಣ ಮಾಡಬೇಕು ?

"ಮಾಸೇ ನಭಸ್ಯಮಾವಾಸ್ಯಾ ತಸ್ಯಾಂ ದರ್ಭೋಚ್ಚಯೋ ಮತಃ
ಅಯಾತಯಾಮಾಸ್ತೇ ದರ್ಭಾಃ ನಿಯೋಜ್ಯಾಃ ಸ್ಯುಃ ಪುನಃ ಪುನಃ ।।(ಹಾರೀತ)

  • ಶ್ರಾವಣ ಮಾಸದ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯು ಯಾತಯಾಮವಾಗದೇ ಯಾವತ್ತೂ ಕಾರ್ಯಗಳಿಗೆ ಬಳಸಬಹುದು.

  • ಬೇರೆ ಅಮಾವಾಸ್ಯೆಯಂದು ತಂದ ದರ್ಭೆಯನ್ನು ಒಂದು ತಿಂಗಳು ಮಾತ್ರ ಬಳಸಬೇಕು.

  • ಹುಣ್ಣಿಮೆಯಂದು ತಂದ ದರ್ಭೆಯು 15 ದಿನಗಳ ಕಾಲ ಶುದ್ಧ.

  • ಮಹಾಲಯ ಅಮಾವಾಸ್ಯೆಯಂದು ತಂದ ದರ್ಭೆಯು 6 ತಿಂಗಳು ಶುದ್ಧ.

  • ಭಾನುವಾರ ತಂದರೆ 1 ವಾರ. 
  • ಆಯಾಯ ದಿನ ತಂದರೆ ಆಯಾಯ ದಿನ ಮಾತ್ರ ಶುದ್ಧ. ‌ ಶ್ರಾವಣ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯ ಜೊತೆಗೆ ಉಳಿದದ್ದನ್ನು ಸೇರಿಸಿದರೆ ಎಲ್ಲವೂ ಶುದ್ಧವಾಗಿ ಯಾವಾಗಲೂ ಬಳಸಬಹುದು.

‌ ದರ್ಭೆಯ ಬಗ್ಗೆ ಇನ್ನೂ ಕೆಲವು ಚಿಂತನೆಗಳು

"ಅಗ್ರಸ್ಥೂಲಂ ಭವೇನ್ನಾರೀ ಮೂಲಸ್ಥೂಲಂ ನಪುಂಸಕಂ
ಮೂಲಾದಗ್ರಸಮಂ ಪುಂಸಾಂ ದರ್ಭಾಣಾಂ ಚೈವ ಲಕ್ಷಣಮ್ ।। "

ಹೀಗೆ ದರ್ಭೆಯಲ್ಲಿ ಸ್ತ್ರೀ, ಪುಂ, ನಪುಂಸಕ ಎಂದು ಮೂರು ವಿಧವಾಗಿದೆ.

ಯಾವ ಯಾವ ಕಾರ್ಯಗಳಿಗೆ ಯಾವ ಯಾವ ದರ್ಭೆಯನ್ನು ಬಳಸಬೇಕು?

ವಿವಾಹೇ ಚೈವ ಪುಂದರ್ಭಾಃ ಸ್ತ್ರೀದರ್ಭಾಃ ಚೈವ ಪುಂಸುವೇ
ಅನ್ಯಕರ್ಮಸು ಷಂಡಾಃಸ್ಯುಃ ದರ್ಭಾಣಾಂ ಚೈವ ಲಕ್ಷಣಮ್ ।।

ವಿವಾಹಾದಿ ಪುರುಷ ಸಂಸ್ಕಾರದಲ್ಲಿ ಪುಂದರ್ಭೆಯನ್ನೂ, ಪುಂಸವನಾದಿ ಸ್ತ್ರೀಸಂಸ್ಕಾರಗಳಲ್ಲಿ ಸ್ತ್ರೀದರ್ಭೆಯನ್ನೂ, ಇತರ ಕರ್ಮಗಳಿಗೆ ನಪುಂಸಕ ದರ್ಭೆಯನ್ನು ಬಳಸಬೇಕು.

ಪ್ರಾದೇಶಮಾತ್ರದ ಎರಡು ದರ್ಭೆಯು ಪವಿತ್ರ ಎನಿಸಿಕೊಳ್ಳುತ್ತದೆ. (ಅನಖಚ್ಛೇದಿತ, ಸಮೌ, ಸಾಗ್ರೌ, ತುಲ್ಯೌ ಪವಿತ್ರಾರ್ಥಂ ಗೃಹೀತ್ವಾ ಎಂದು ಅಗ್ನಿಮುಖದಲ್ಲಿ ಹೇಳಿದ ಪವಿತ್ರ ಇದೇ)

"ವಿಚ್ಛಿನ್ನಾಗ್ರಂ ತೃಣಂ ಪ್ರೋಕ್ತಂ ಅವಿಚ್ಛಿನ್ನಂ ಪವಿತ್ರಕಮ್
ಪ್ರಾದೇಶಮಾತ್ರಂ ದರ್ಭಾಶ್ಚ..........


ದರ್ಬೆ ಹುಲ್ಲಿನ ಉಂಗುರದ ಮಹತ್ವ

ಈ ಪವಿತ್ರ ಉಂಗುರ ದರಿಸುವುದು, ಯಾವುದೇ ಪೂಜಾ, ಯಜ್ಞ, ಹೋಮ, ಹವನಗಳಲ್ಲಿ ನಡೆದುಕೊಂಡು ಬಂದ ಒಂದು ಸುಂದರ ಪುರಾತನ ಸಂಪ್ರದಾಯ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಶ್ರೀವೈಷ್ಣವರು ನಿರ್ದಿಷ್ಟವಾಗಿ ಮಂಗಳಕರವಾಗಿರಲಿ ಅಥವಾ ಅಶುಭ ಕಾರ್ಯಕ್ರಮಗಳಗಳನ್ನು ನಿರ್ವಹಿಸುವ ವ್ಯಕ್ತಿ ದರ್ಬೆ ಹುಲ್ಲನ್ನು ನಿರ್ದಿಷ್ಟವಾದ ರೀತಿಯಲ್ಲಿ ಉಂಗುರ ಮಾಡಿ ಬಲ ಕೈಯ ಉಂಗುರ ಬೆರಳಿಗೆ ಹಾಕುತ್ತಾರೆ.

ನಾವು ಯಾವ ವೃತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ದರ್ಭೆಯನ್ನು ಬಳಸುತ್ತೇವೆ. ಈ ಧರ್ಭೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ.

ಬ್ರಹ್ಮ ದೇವನು ಸೃಷ್ಠಿಯನ್ನು ಮಾಡುವವನು, ವಿಷ್ಣುವು ಸ್ಥಿತಿಕರ್ತನು, ಶಿವನು ಲಯಕರ್ತನು. ಒಮ್ಮೆ ಶಿವನಿಗೆ ತಾನೇ ಎಲ್ಲರಿಗೂ ಮೇಲೆಂದು ಅಹಂಕಾರ ಬಂದಿತು. ಆ ಕಡೆ ಸೃಷ್ಠಿಕರ್ತ ಬ್ರಹ್ಮನಿಗೂ ತಾನೇ ಮೇಲೆಂದು ಅಹಂಕಾರ ಬಂದಾಗ ಇಬ್ಬರ ವಾದ-ವಿವಾದದಲ್ಲಿ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ತನ್ನ ಕೈಯಿಂದ ಕಿತ್ತು ತೆಗೆದಾಗ ಬ್ರಹ್ಮಹತ್ಯಾ ದೋಷ ಬಂದಿತು ಹಾಗೂ ಜಗತ್ತೂ ದೋಷಯುಕ್ತವಾಯಿತು.

ಯಜ್ಞ-ಯಾಗಾದಿಗಳನ್ನು ಮಾಡುವುದು ಕಠಿಣವಾಯಿತು. ಆಗ ಎಲ್ಲಾ ದೇವತೆಗಳು ಮತ್ತು ಋಷಿಮುನಿಗಳು ಸೇರಿ ಈ ಎಲ್ಲಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಭೆಯ ಮಹತ್ವ.

ಸಾಮಾನ್ಯ ಎಲ್ಲಾ ಕಾರ್ಯಗಳಲ್ಲಿ ೨ ಅಥವಾ ೪ ದರ್ಭೆಯಿಂದ ಮಾಡಿದ ಪವಿತ್ರವನ್ನು ಯಾಗಾದಿಗಳಲ್ಲಿ ೫ ದರ್ಭೆಯಿಂದ ಮಾಡಿದ ಪವಿತ್ರವನ್ನು ಪಿತೃಕಾರ್ಯಗಳಲ್ಲಿ ೩ ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸಬೇಕು.

ದರ್ಬೆ ಹುಲ್ಲು ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು . ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ.
ಎಲ್ಲರಿಗೂ ಧನ್ಯವಾದಗಳು . (ಸಂಗ್ರಹಿತ ಮಾಹಿತಿ)
ಸರ್ವೇ ಜನಾಃ ಸುಖಿನೋಭವಂತು||

April 12, 2022

ದೇವರ ವಾಹನಗಳು

1) ವಿಷ್ಣು - ಗರುಡ
2) ಲಕ್ಷ್ಮೀದೇವಿ - ಗುಡ್ಲಾ ಗೂಬೆ
3) ರತಿ ಮನ್ಮದುಲು =  ಗಿಳಿ
4) ಹನುಮಾನ್ = ಒಂಟೆ
5) ಶಿವ = ವೃಷಭ
6) ಪಾರ್ವತಿ ದೇವಿ = ಸಿಂಹ
7) ಗಣೇಶ = ಇಲಿ
8) ಕುಮಾರಸ್ವಾಮಿ = ನವಿಲು
9) ಭೈರವುಡು = ನಾಯಿ
10) ಬ್ರಹ್ಮ = ಹಂಸ
11) ಸರಸ್ವತಿ = ಹಂಸ
12) ಕುದುರೆಗಳು = ಕತ್ತೆಗಳು
13) ರಾವಣ = ಕತ್ತೆಗಳು.
14) ಲಲಿತಾದೇವಿ = ವರಾಹಂ 
15) ಶೀತಲಾ ದೇವಿ = ಕತ್ತೆ
16) ಗಂಗಾದೇವಿ = ಮಕರ
17) ಯಮುನಾದೇವಿ = ಕೂರ್ಮ 
18) ಅಯ್ಯಪಸ್ವಾಮಿ =ಕುದುರೆ
19) ಕಲುನುಕಿ = ಮಹಿಷ
20) ನಮುಚಿ = ಉಚ್ಚೈಶ್ರವ
೨೧) ಅಲಮೇಲುಮಂಗ ಅಮ್ಮನವರು = ಚಾಟಕಂ
22) ವಾಸ್ತುಶಿಲ್ಪಿ = ಗಂಡಭೇರುಂಡಂ
23) ಕಲ್ಕಿ = ಕುದುರೆ
24) ಚಂಡಿ = ಹಂದಿ
25) ಚಾಮುಂಡಿ = ಗೂಬೆ
26) ವಿಶ್ವಕರ್ಮ = ನರಿ
27) ಮಾನಸಾ ದೇವಿ = ಸರ್ಪ
28) ಇಂದ್ರ = ಐರಾವತ
29) ಬೆಂಕಿ = ಮೇಷ / ಕುರಿಮರಿ
30) ಯಮುದಿಕಿ = ಮಹಿಷಮ್
31) ನೈಋತ್ಯ = ಶವದ ವಾಹನ
32) ವರುಣ = ಮಕರ
33) ಅನಿಲ = ಕಪ್ಪು ಮೃಗ
34) ಕುಬೇರದು = ನರ ವಾಹನ
35) ಈಶಾನ = ವೃಷಭ
36) ಸೂರ್ಯ = ಸಪ್ತ ಎಂಬ ಕುದುರೆ
37) ಚಂದ್ರ = ಜಿಂಕೆ / 10 ಬಿಳಿ ಕುದುರೆಗಳು
38) ಮಂಗಳ = ಮೇಷ
39) ಬುಧ = ಕುದುರೆ
40) ಗುರು = ಆನೆ
41) ಶುಕ್ರ = ಕುದುರೆ 
42) ಶನಿ = ಕಾಗೆ
43) ರಾಹು = ಹುಲಿ
44) ಕೇತು = ಮೀನು

April 1, 2022

ಸೃಷ್ಠಿಯ ಕಾಲಚಕ್ರ

ಸೃಷ್ಟಿ ಹೇಗಾಯಿತು...?
ಸೃಷ್ಟಿಯ ಕಾಲ ಚಕ್ರ ಹೇಗೆ ನಡೆಯಿತು?.

3. ಮಾನವನಲ್ಲಿ ಇರೋ ಸೃಷ್ಟಿಯ ತತ್ವಗಳು  ಎಷ್ಟಿದೆ.

1. ಮೊದಲು ಪರಾತ್ಪರವು ಹುಟ್ಟಿ, ಇದರಿಂದ ಶಿವ ಹುಟ್ಟಿದ್ದು.
2. ಶಿವನಿಂದ ಶಕ್ತಿ.
3. ಶಕ್ತಿಯಿಂದ ನಾದ.
4. ನಾದದಿಂದ ಬಿಂದು.
5. ಬಿಂದುವಿನಿಂದ ಸದಾಶಿವಂ
6. ಸದಿಶಿವಂನಿಂದ ಮಹೇಶ್ವರ.
7. ಮಹೇಶ್ವರನಿಂದ ಈಶ್ವರಂ.
8. ಈಶ್ವರನಿಂದ ರುದ್ರ.
9. ರುದ್ರನಿಂದ ವಿಷ್ಣು.
10. ವಿಷ್ಣುವಿನಿಂದ ಬ್ರಹ್ಮ.
11. ಬ್ರಹ್ಮಾನಿಂದ ಆತ್ಮ.
12. ಆತ್ಮನಿಂದ ದಹರಾಕಾಶ.
13. ದಹರಾಕಾಶದಿಂದ ವಾಯು.
14. ವಾಯುವಿನಿಂದ ಅಗ್ನಿ.
15. ಅಗ್ನಿಯಿಂದ ಜಲ.
16. ಜಲದಿಂದ ಪೃಥ್ವಿಯಿಂದ ಓಷಧಗಳು.
17. ಓಷಧಗಳಿಂದ ಆಹಾರ.
18. ಇದರಿಂದಾಗಿ ನರ,ಮೃಗ, ಪಶು, ಪಕ್ಷಿ,ಸ್ಥಾವರ,ಜಂಗಮಗಳು ಹುಟ್ಟಿದವು.

ಸೃಷ್ಟಿಯ ಕಾಲ ಚಕ್ರ.

ಪರಾಶಕ್ತಿ ಆದಿಯಲ್ಲಿ ನಡೆದಿದೆ.
ಇದುವರೆಗೂ 50 ಶಿವ, ವಿಷ್ಣು, ಬ್ರಹ್ಮರು ಬಂದಿದ್ದಾರೆ . ಈಗ 51ನೇ ಬಾರಿ ನಡೀತಾ ಇದೆ.
1. ಕೃತಯುಗ.
2. ತ್ರೇತಾಯುಗ.
3. ದ್ವಾಪರಯುಗ.
4. ಕಲಿಯುಗ.

ನಾಲ್ಕು ಯುಗಕ್ಕೆ ಒಂದು ಮಹಾಯುಗ.

71ಮಹಾಯುಗಕ್ಕೆ ಒಂದು ಮನ್ವಂತರ.
14 ಮನ್ವಂತರ ಕ್ಕೆ ಒಂದು ಸೃಷ್ಟಿ, ಒಂದು ಕಲ್ಪ.
15 ಸಂಧಿಗೆ ಒಂದು ಪ್ರಳಯ, ಒಂದು ಕಲ್ಪ.
1000 ಯುಗ ಆದ್ರೆ ಬ್ರಹ್ಮನಿಗೆ ಒಂದು ಹಗಲು ಸೃಷ್ಟಿ.
1000 ಯುಗ ಆದ್ರೆ ಒಂದು ರಾತ್ರಿ ಪ್ರಳಯ.
2000 ಯುಗಕ್ಕೆ ಒಂದು ದಿನ.
ಬ್ರಹ್ಮನ ವಯಸ್ಸು 51 ಸಂವತ್ಸರ.
ಇದುವರೆಗೂ 27 ಮಹಾಯುಗಗಳು ಕಳೆದಿವೆ.
1 ಕಲ್ಪಕ್ಕೆ ಒಂದು ಹಗಲು 432 ಕೋಟಿ ಸಂವತ್ಸರಗಳು.
7200 ಕಲ್ಪಗಳಿಗೆ , ಬ್ರಹ್ಮನಿಗೆ 100 ಸಂವತ್ಸರಗಳು.
14 ಜನ ಮನುಗಳು.

ಈಗ ವೈವಸ್ವತ ಮನ್ವಂತರದ ಶ್ವೇತವಾರಹ ಯುಗದಲ್ಲಿ ಇದ್ದೇವೆ.
5 ಗುರು ಭಾಗದ ಕಾಲಕ್ಕೆ 60 ಸಂವತ್ಸರ.
1ಗುರು ಭಾಗದ ಕಾಲಕ್ಕೆ 12ಸಂವತ್ಸರ.
1 ಸಂವತ್ಸರ ಕ್ಕೆ 6 ಋತುಗಳು
1 ಸಂವತ್ಸರ ಕ್ಕೆ 3 ಕಾಲಗಳು.
1ದಿನಕ್ಕೆ 2 ಭಾಗದ ಹಗಲು ರಾತ್ರಿ.
1 ಸಂವತ್ಸರ ಕ್ಕೆ 12 ಮಾಸಗಳು.
1 ಸಂವತ್ಸರ ಕ್ಕೆ 2 ಆಯನಗಳು.
1ಸಂವತ್ಸರ ಕ್ಕೆ 27 ಕಾರ್ತಿಕ ಗಳು.
1ಮಾಸಕ್ಕೆ 30 ತಿಥಿ,27 ನಕ್ಷತ್ರಗಳು, ವಿವರಣೆ.
12ರಾಶಿ
9 ಗ್ರಹ
8 ದಿಕ್ಕು
108 ಪಾದಗಳು.
1ವಾರಕ್ಕೆ 7ದಿನ, ಪಂಚಾಂಗದಲ್ಲಿ 1ತಿಥಿ,2ವಾರ,
3 ನಕ್ಷತ್ರ 4 ಕರಣ,5 ಯೋಗ 
ಸೃಷ್ಟಿ ಯಾವತ್ತೂ ತ್ರಿಗುಣಗಳಿಂದನೆ ಇರುತ್ತೆ.

*ದೇವತೆಗಳು, ಜೀವಿಗಳು* *ಚರಾಚರ ವಸ್ತುಗಳು ಎಲ್ಲಾ ಈ ಮೂರು ಗುಣಗಳಿಂದ ಕೂಡಿದೆ.*
1ಸತ್ವಗುಣ
2 ರಜೋಗುಣ.
3ತಮೋಗುಣ.

*ಪಂಚಭೂತಗಳ ಅವಿರ್ಭಾವ.*
1ಆತ್ಮನಿಂದ ಆಕಾಶ.
2 ಆಕಾಶದಿಂದ ವಾಯು.
3 ವಾಯುವಿನಿಂದ ಅಗ್ನಿ.
4 ಅಗ್ನಿ ಯಿಂದ ಜಲ.
5 ಜಲದಿಂದ ಭೂಮಿ 
ಅವಿರ್ಭವಿಸಿದೆ.

5 ಜ್ಞಾನೇಂದ್ರಿಯಗಳು
5 ಪಂಚಪ್ರಾಣ ಗಳು
5 ಪಂಚತನ್ಮಾತ್ರಗಳು
5 ಅಂತರ ಇಂದ್ರಿಯಗಳು.
5 ಕರ್ಮೇಂದ್ರಿಯ,25 ತತ್ವಗಳು.

*1 ಆಕಾಶ ಹೇಗೆ ವಿಭಜಿಸಿದೆ.*
ಆಕಾಶವು ಆಕಾಶದಲ್ಲಿ ಲೀನವಾದಲ್ಲಿ ಜ್ಞಾನ.
ಆಕಾಶವು ವಾಯುವಿನಲ್ಲಿ ಲೀನವಾದಲ್ಲಿ ಮನಸ್ಸು.
ಆಕಾಶವು ಅಗ್ನಿಯಲ್ಲಿ ಲೀನವಾದರೆ ಬುದ್ಧಿ.
ಆಕಾಶವು ಜಲದಲ್ಲಿ ಲೀನವಾದರೆ ಚಿತ್ತ.
ಆಕಾಶವು ಭೂಮಿಯಲ್ಲಿ ಲೀನವಾದರೆ ಅಹಂಕಾರ ಹುಟ್ಟುತ್ತಿದ್ದಾವೆ.

*ವಾಯುವಿನ ವಿಭಜಿಕರಣ.*
ವಾಯುವು ವಾಯುವಿನಲ್ಲಿ ಸೇರಿದರೆ ವ್ಯಾನ.
ವಾಯುವು ಆಕಾಶದಲ್ಲಿ ಸೇರಿದರೆ ಸಮಾನ.
ವಾಯುವು ಅಗ್ನಿ ಜೊತೆಗೆ ಸೇರಿದರೆ ಉದಾನ.
ವಾಯುವು ಜಲದಲ್ಲಿ ಸೇರಿದರೆ ಪ್ರಾಣ.
ವಾಯುವು ಭೂಮಿಯ ಜೊತೆಗೆ ಸೇರಿದರೆ ಅಪಾನವಾಯು ಹುಟ್ಟುತ್ತೆ.

*ಅಗ್ನಿಯ ವಿಭಜನೆ*
ಅಗ್ನಿ,ಆಕಾಶದ ಜೊತೆಗೆ ಸೇರಿದರೆ ಶ್ರೊತ್ರಂ.
ಅಗ್ನಿ ವಾಯುವಿನಲ್ಲಿ ಸೇರಿದರೆ ವಾಕ್ಕು.
ಅಗ್ನಿ , ಅಗ್ನಿ ಜೊತೆಗೆ ಸೇರಿದರೆ ಚಕ್ಷುವು.
ಅಗ್ನಿ, ಜಲದ ಜೊತೆಗೆ ಸೇರಿದರೆ ಜೀವ್ಹಾ.
ಅಗ್ನಿ, ಭೂಮಿಯ ಜೊತೆಗೆ ಸೇರಿದರೆ ಘ್ರಾಣಂ ಹುಟ್ಟಿದೆ.

*ಜಲದ ವಿಭಜನೆ*
ಜಲವು ಆಕಾಶದಲ್ಲಿ ಸೇರಿದರೆ ಶಬ್ದ.
ಜಲ ವಾಯುವಿನಲ್ಲಿ ಸೇರಿದರೆ ಸ್ಪರ್ಶ.
ಜಲ ಅಗ್ನಿ ಯಲ್ಲಿ ಸೇರಿದರೆ ರೂಪ.
ಜಲ ಜಲದಲ್ಲಿ ಸೇರಿದರೆ ರಸ.
ಜಲ, ಭೂಮಿಯಲ್ಲಿ ಸೇರಿದರೆ ಗಂಧವು ಹುಟ್ಟಿದೆ.

*ಭೂಮಿಯ ವಿಭಜನೆ.*
ಭೂಮಿ, ಆಕಾಶದಲ್ಲಿ ಸೇರಿದರೆ ವಾಕ್ಕು.
ಭೂಮಿ ವಾಯುವಿನಲ್ಲಿ ಸೇರಿದರೆ ಪಾಣಿ.
ಭೂಮಿ, ಅಗ್ನಿ ಜೊತೆಗೆ ಸೇರಿದರೆ ಪಾದ.
ಭೂಮಿ, ಜಲದೊಂದಿಗೆ ಸೇರಿದರೆ ಗೂಹ್ಯಂ.
ಭೂಮಿ, ಭೂಮಿಯ ಜೊತೆಗೆ ಸೇರಿದರೆ ಗುದಂ ಹುಟ್ಟಿದೆ.

*ಮಾನವ ದೇಹ ತತ್ವಗಳು.*
1ಶಬ್ದ
2ಸ್ಪರ್ಷ
3ರೂಪ
4ರಸ
5ಗಂಧ.

*5. ಪಂಚಕರ್ಮೆಂದ್ರಿಯಗಳು*
1ಕಿವಿ.
2ಚರ್ಮ.
3ಕಣ್ಣು.
4 ನಾಲಿಗೆ.
5 ಮೂಗು.

*ಪಂಚ ಪ್ರಾಣೇಂದ್ರಿಯಗಳು.*
1. ಅಪಾನ
2 ಸಮಾನ
3 ಪ್ರಾಣ
4 ಉದಾನ
5 ವ್ಯಾನ.

*5. ಅಂತರ್ಇಂದ್ರಿಯಗಳು.*
1 ಮನಸ್ಸು
2 ಬುದ್ದಿ
3 ಚಿತ್ತ
4 ಜ್ಞಾನ

*5ಅಹಂಕಾರ.*
1 ವಾಕ್ಕು
2 ಪಾಣಿ
3 ಪಾದಂ
4 ಗುಹ್ಯಾಂ.
5 ಗುದಂ.

*6 ಅರಿಷ್ಡವರ್ಗಗಳು*
1 ಕಾಮ
2 ಕ್ರೋಧ
3 ಮೋಹ
4 ಲೋಭ
5 ಮದ
6 ಮಾತ್ಸರ್ಯ.

*3 ಶರೀರದಲ್ಲಿ*
1 ಸ್ಥೂಲ
2 ಸೂಕ್ಷ್ಮ
3 ಕಾರಣ.

*ಅವಸ್ಥೆಗಳು.*
1 ಜಾಗ್ರತ
2 ಸ್ವಪ್ನ
3 ಸುಷುಪ್ತಿ.

*6 ಷಡ್ಭಾವ ವಿಕಾರಗಳು.*
1 ಇರುವುದು.
2 ಹುಟ್ಟುವುದು
3 ಬೆಳೆಯುವುದು
4 ಪರಿಣಮಿಸುವುದು
5 ಕ್ಷೀಣಿಸುವುದು
6 ನಶಿಸುವುದು.

*6 ಷಡ್ಕರ್ಮಗಳು*
1 ಹಸಿವು
2 ಬಾಯಾರಿಕೆ
3 ಶೋಕ
4 ಮೋಹ
5 ಜರ
6 ಮರಣ.

*7 ಸಪ್ತ ಧಾತುಗಳು.*
1 ಚರ್ಮ
2 ರಕ್ತ
3 ಮಾಂಸ
4 ಮೇದಸ್ಸು
5 ಮಜ್ಜೆ
6ಮೂಳೆ
7 ಶುಕ್ಲಂ.

*3 ಜೀವಿಗಳು*
1 ವಿಶ್ವ
2 ತೇಜ
3 ಪ್ರಜ್ಞಾ.

*3 ತ್ರಿಕರ್ಮಗಳು*
1 ಪ್ರಾರಬ್ಧ
2 ಆಗಾಮಿ
3 ಸಂಚಿತ.

*5 ಕರ್ಮಗಳು*
1 ಪಚನ
2 ಆದಾನ
3 ಗಮನ
4 ವಿಸ್ತರ
5 ಆನಂದ 

*3 ಗುಣಗಳು*
1ಸತ್ವ
2 ರಜೋ
3 ತಮೋ 

*9 ಅನುಷ್ಠಾನಗಳು.*
1 ಸಂಕಲ್ಪ
2 ಅಧ್ಯಾಸಾಯ
3 ಅಭಿಮಾನ
4 ಅವಧರಣ
5 ಮುದಿತ
6 ಕರುಣೆ
7 ಮೈತ್ರಿ
8 ಉಪೇಕ್ಷ
9 ತಿತಿಕ್ಷ

*10 ಪಂಚಭೂತಗಳಲ್ಲಿ ಲೀನ ಆಗದೇ ಇರುವುದು, ಮತ್ತು ಪಂಚಭೂತಗಳಲ್ಲಿ ಲೀನ ಆಗುವಂತಹುದು.*
1 ಆಕಾಶ 
2 ವಾಯ 
3 ಅಗ್ನಿ
4 ಜಲ
5 ಪೃಥ್ವಿ

*14 ಅವಸ್ಥಾದೇವತೆ ಗಳು.*
1 ದಿಕ್ಕು
2 ವಾಯುವು
3 ಸೂರ್ಯ
4 ವರುಣ 
5 ಅಶ್ವಿನಿ ದೇವತೆಗಳು
6 ಅಗ್ನಿ
7 ಇಂದ್ರ
8 ಉಪೇಂದ್ರ
9 ಮೃತ್ಯು
10 ಚಂದ್ರ
11ಚರ್ವಾಕ
12 ರುದ್ರ
13 ಕ್ಷೇತ್ರ ಪಾಲಕ
14 ಇಶಾನ್ಯ.

*10 ನಾಡಿ,1 ಬ್ರಹ್ಮನಾಡಿ.*
1ಇಡಾ
2 ಪಿಂಗಳ
3 ಸುಷುಮ್ನಾ
4 ಗಾಧಾಂರಿ
5 ಪಮಶ್ವನಿ
6 ಪೂಷ
7 ಅಲಂಬನ
8 ಹಸ್ತಿ
9 ಶಂಖಿನಿ
10 ಕೂಹೋ
11 ಬ್ರಹ್ಮಾನಾಡಿ
10 ವಾಯು ಗಳು
1 ಅಪಾನ
2 ಸಮಾನ
3 ಪ್ರೋಣ
4 ಉದಾನ
5 ವ್ಯಾನ
6 ಕೂರ್ಮ
7 ಕೃಕರ
8 ನಾಗ್
9 ದೇವದತ್ತ
10 ಧನಂಜಯ
7 ಷಟ್ ಚಕ್ರಗಳು
1 ಮೂಲಾಧಾರ
2 ಸ್ವಾಧಿಷ್ಠಾನ
3 ಮಣಿಪೂರಕ
4 ಅನಾಹಾತ
5 ವಿಶುದ್ದಿ
6 ಆಜ್ಞಾ
7 ಸಹಸ್ರಾರು
ಮನುಷ್ಯನ ಪ್ರಾಣಗಳು
96 ಅಂಗುಳದಲ್ಲಿ
8 ದವಡೆ ಮೂಳೆ
4 ದವಡೆ ವಲಯ
33 ಕೋಟಿ ರೋಮ್
66 ಮೂಳೆ ಗಳು
72 ಸಾವಿರ ನಾಡಿ
62 ಕೀಲು
37 ನೂರು ಪಿರ್ರೆ 
1 ಸೇರು ಹೃದಯ ಅರ್ದಾ ಸೇರು ರುಧಿರ
4 ಸೇರು ಮಾಂಸ
1 ಸೇರು ಪಿತ್ಥ ಅರ್ದಾ ಸೇರು ಶ್ಲೇಷಂ.

*ಮಾನವ ದೇಹದಲ್ಲಿರೋ ಹದಿನಾಲ್ಕು ಲೋಕಗಳು.* 
*7 ಮೇಲಿನ ಲೋಕಗಳು*
1 ಭೂಲೋಕ , ಪಾದದಲ್ಲಿ
2 ಭೂವರ್ಲ ಲೋಕ ಹೃದಯದಲ್ಲಿ
3 ಸುವರ್ಲ ಲೋಕ ನಾಭಿಯಲ್ಲಿ
4 ಮಹರ್ಲಲೋಕ ಮರ್ಮಾಂಗ ದಲ್ಲಿ
5 ಜನ ಲೋಕ ಕಂಠದಲ್ಲಿ
6 ತಪೋ ಲೋಕ ಭೃಮದ್ಯದಲ್ಲಿ
7 ಸತ್ಯ ಲೋಕ ಲಲಾಟದಲ್ಲಿ

*ಅಧೋಲೋಕಗಳು*
1 ಅತಲ ,ಹಿಮ್ಮಡಿಯಲ್ಲಿ
2 ವಿತಳ, ಉಗುರಿನಲ್ಲಿ
3 ಸುತಲ , ಮೀನಖಂಡ
4 ತಲಾತಲಂ, ಪಿರ್ರೆ
5 ರಸಾತಲ, ಮೊಣಕಾಲಿನಲ್ಲಿ
6 ಮಹಾತಲ ತೊಡೆ ಯಲ್ಲಿ
7 ಪಾತಾಳಂ ,ಪಾದದ ಅಂಗಳದಲ್ಲಿ.

*ಮಾನವ ದೇಹದಲ್ಲಿರೋ ಸಪ್ತ ಸಮುದ್ರಗಳು.*
1 ಲವಣ ಸಮುದ್ರ , ಮೂತ್ರ
2 ಇಕ್ಷಿ ಸಮುದ್ರ , ಬೆವರು
3 ಸೂರ ಸಮುದ್ರ, ಇಂದ್ರಿಯ
4 ಸರ್ಪ ಸಮುದ್ರ, ದೋಷಗಳು
5 ದದಿ ಸಮುದ್ರ, ಶ್ಲೇಷಂ
6 ಕ್ಷೀರ ಸಮುದ್ರ, ಜೊಲ್ಲು
7 ಶುದ್ದೋದಕ ಸಮುದ್ರ, ಕಣ್ಣೀರು.

*ಪಂಚಾಗ್ನಿ*
1 ಕಾಲಾಗ್ನಿ, ಪಾದಗಳಲ್ಲಿ
2 ಕ್ಷುದಾಗ್ನಿ, ಪಾಳಿಯಲ್ಲಿ
3 ಶೀತಾಗ್ನಿ , ಹೃದಯದಲ್ಲಿ
4 ಕೋಪಾಗ್ನಿ,ನೇತ್ರದಲ್ಲಿ
5 ಜ್ಞಾನಾಗ್ನಿ, ಆತ್ಮದಲ್ಲಿ.

*ಮಾನವ ದೇಹದಲ್ಲಿ*
*ಸಪ್ತದ್ವೀಪಗಳು* 
1 ಜಂಬೂದ್ವೀಪ, ತಲೆಯಲ್ಲಿ
2 ಪ್ಲಕ್ಷ ದ್ವೀಪ,ಅಸ್ತಿಯಲ್ಲಿ
3 ಶಾಕ ದ್ವೀಪ, ಶಿರಸ್ಸಿನಲ್ಲಿ
4 ಶಾಲ್ಮಲ ದ್ವೀಪ, ಚರ್ಮದಲ್ಲಿ
5 ಪೂಷ್ಕಾರ ದ್ವೀಪ, ಕುತ್ತಿಗೆ ಯಲ್ಲಿ
6 ಕೂಶ ದ್ವೀಪ, ಮಾಂಸದಲ್ಲಿ
7 ಕೌಂಚ ದ್ವೀಪ, ಕೂದಲಿನಲ್ಲಿ.

*10 ನಾಧಗಳು*
1 ಲಾಲಾದಿ ಘೋಷ, ನಾಧಂ
2 ಭೇರಿ
3 ಛಣಿ
4 ಮೃದಂಗ
5 ಘಂಟಾ
6 ಕಿಲಕಿಣಿ
7 ಕಳಾ
8 ವೇಣು
9 ಬ್ರಮಣ
10 ಪ್ರಣವ....