December 6, 2024

ಬಾಲಾರಿಷ್ಟ

ಬಾಲಾರಿಷ್ಟ ಗ್ರಹಸ್ಥಿತಿ -
1. ಲಗ್ನಾಧಿಪತಿ 8 ನೇ ಮನೆಯಲ್ಲಿರುವುದು, ಅಥವಾ 8 ರ ಅಧಿಪತಿ ಲಗ್ನದಲ್ಲಿರುವುದು ಅಥವಾ 8 ರ ಅಧಿಪತಿ ಲಗ್ನಾಧಿಪತಿಯ ಜೊತೆ ಇರುವುದು.

2. ಚಂದ್ರನು ಲಗ್ನದಿಂದ  8 ನೇ ಮನೆಯಲ್ಲಿರುವುದು, ಅಥವಾ ಲಗ್ನದಿಂದ 8 ರ ಅಧಿಪತಿ ಚಂದ್ರನ ಜೊತೆ ಇರುವುದು.

3. ಚಂದ್ರನಿಂದ 8 ನೇ ಮನೆಯ ಅಧಿಪತಿ ಲಗ್ನದಲ್ಲಿರುವುದು, ಅಥವಾ ಲಗ್ನಾಧಿಪತಿಯ ಜೊತೆ ಇರುವುದು.

4. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ರಾಹುವಿನ ಜೊತೆ ಒಂಟಿಯಾಗಿರುವುದು.

5. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ಗ್ರಹಯುದ್ಧದಲ್ಲಿ   ಒಂಟಿಯಾಗಿರುವುದು.

6. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ರವಿಯ ಜೊತೆ ಒಂದೇ ಡಿಗ್ರಿಯಲ್ಲಿರುವುದು.

7. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ಅತಿಶತ್ರುವಿನ ಮನೆಯಲ್ಲಿ ಒಂಟಿಯಾಗಿರುವುದು. 

8. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ಒಂಟಿಯಾಗಿದ್ದು, ಅತಿಶತ್ರುವಿನ ದೃಷ್ಟಿಯನ್ನು ಹೊಂದಿರುವುದು.
      ಇಂತಹ ಗ್ರಹಸ್ಥಿತಿ ಇದ್ದರೆ ಬಾಲಾರಿಷ್ಟ ದೋಷ ಇರುವುದು. ಮುಖ್ಯವಾಗಿ ಮೃತ್ಯುಂಜಯ ಜಪ / ಮೃತ್ಯುಂಜಯ ಶಾಂತಿಗಳನ್ನು ಮಾಡಿಸುವುದು ಒಳ್ಳೆಯದು. 

9. ಮೇಲೆ ತಿಳಿಸಿದ ಯಾವುದಾದರೊಂದು ಗ್ರಹಸ್ಥಿತಿ ಇದ್ದರೂ ತುಂಬ ಗಾಬರಿ ಇರುವುದಿಲ್ಲ. ಏನೂ ಆಗುವುದಿಲ್ಲ.  ಆದರೆ ಇಂತಹ ಗ್ರಹಸ್ಥಿತಿ ಇದ್ದು, ಇದರ ಜೊತೆ ಈ ಕೆಳಗಿನ ಗ್ರಹಸ್ಥಿತಿಯೂ ಇದ್ದರೆ ಮಗುವು ತುಂಬ ಕಷ್ಟಗಳನ್ನು (ಅನಾರೋಗ್ಯ) ಅನುಭವಿಸುತ್ತದೆ. ಕೆಲವೊಮ್ಮೆ ಮಗುವು ಬದುಕದೆಯೂ ಇರಬಹುದು. ಅಂದರೆ ಶಾಂತಿ ಮಾಡಿಸಿದರೂ ಉಪಯೋಗವಾಗದೇ ಇರಬಹುದು.  
a. ದಶಾಧಿಪತಿಯು ಒಂಟಿಯಾಗಿ ಅತಿಶತ್ರುವಿನ ಮನೆಯಲ್ಲಿರುವುದು. 
b. ದಶಾಧಿಪತಿಯು ಒಂಟಿಯಾಗಿ ಅತಿಶತ್ರುವಿನ ದೃಷ್ಟಿಯನ್ನು ಹೊಂದಿರುವುದು.
c. ದಶಾಧಿಪತಿಯು ಒಂಟಿಯಾಗಿ ರವಿಯ ಜೊತೆ ಒಂದೇ ಡಿಗ್ರಿಯಲ್ಲಿರುವುದು. 
d. ದಶಾಧಿಪತಿಯು ಒಂಟಿಯಾಗಿ ಯಾವುದಾದರೂ ಗ್ರಹದ ಜೊತೆ ಒಂದೇ ಡಿಗ್ರಿಯಲ್ಲಿರುವುದು. 

ಇನ್ನೂ ಹೆಚ್ಚಿನ ವಿವರವನ್ನು ಬೃಹಜ್ಜಾತಕದಲ್ಲಿ ನೋಡಿಕೊಳ್ಳಿ...

 ಸೂಚನೆ - ಮೇಲೆ ತಿಳಿಸಿರುವ ವಿಷಯಗಳನ್ನು ರಾಶಿಕುಂಡಲಿಯಲ್ಲಿ ನೋಡಿದರೆ, ಎಲ್ಲವೂ ಸುಳ್ಳು ಮತ್ತು ಮೂಢನಂಬಿಕೆಯಾಗುತ್ತದೆ. ಸರಿಯಾಗಿ ಭಾವಗಳನ್ನು ಲೆಕ್ಕಮಾಡಿಕೊಂಡರೆ ನಿಜವಾಗುತ್ತದೆ. ಆದ್ದರಿಂದ ಭಾವಗಳ ಲೆಕ್ಕ ಸರಿಯಾಗಿ ಅರ್ಥವಾಗಿರಬೇಕು. ಧನ್ಯವಾದಗಳು..... ನಮಸ್ಕಾರ...  
********

December 5, 2024

ಅಮೃತಬಳ್ಳಿ ಹಿತಮಿತವಾಗಿ ಬಳಸಿ

ಅಮೃತಬಳ್ಳಿ

ವೈಜ್ಞಾನಿಕ ಹೆಸರು- ಟಿನೊಸ್ಪೆರ ಕಾರ್ಡಿಫೋಲಿಯ (Tinospora cordifolia (Willd) Miers)

ಸಸ್ಯದ ಕುಟುಂಬ- (ಮೆನಿಸ್ಪರ್ಮೇಸಿಯೇ) Menispermaceae

ಕನ್ನಡದ ಇತರ ಹೆಸರುಗಳು- ಕಾಡುಹಾಕು ಕಾರೇ, ಗುಡೂಚಿ, ಮಧುವರ್ಣಿ, ಮಧುವರ್ಕ

ಇತರ ಭಾಷೆಯ ಹೆಸರುಗಳು-  ಸಂ -ಅಮೃತ, ಗುಡೂಚಿ, ಮಧುವರ್ಣಿ, ವತ್ಪಾದನಿ, ಛಿನ್ನರುಹಾ, ತಂತ್ರಿಕಾಮೃತ, ಜೀವಂತಿಕಾ, ಸೋಮವಲ್ಲಿ, ವಿಶಲ್ಯಾ, ಹಿಂ-ಗಿಲೊಯ,  ಗುಡಿಚ, ಗುಲಂಚ, ತ-ಅಮುದಂ, ಅಮೃತವಳ್ಳಿ, ಸಿಂದಾಲ್, ತೆ- ಗುಡುಚಿ, ಸೊಮಿಡ, ಇಂ-ಹರ್ತಾ ಲೀವ್ ಮೂನ್ ಸೀಡ್, ಗುಲಾಂಚ, ಟಿನೋಸ್ಪೊರ್.



ಪರಿಚಯ

ಅಮೃತವಳ್ಳಿಯು ಇತರೆ ಬಳ್ಳಿಗಿಡಗಳಂತೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಅವರೂವವಾಗಿ ಕಂಡುಬರುವ ಈ ಬಳ್ಳಿಯು ಉಷ್ಣವಲಯದ ಭಾಗಶಃ ನಿತ್ಯ ಹರಿದ್ವರ್ಣ ಸಸ್ಯಾವರಣ, ಬೇಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಸಸ್ಯಾವರಣ, ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಒಣ ಸನ್ಯಾವರಣ ಮತ್ತು ಕಳ್ಳಿ ಕುರುಚಲು ಗಿಡಗಳೊನ್ನೊಳಗೊಂಡ ಸಸ್ಯಾವರಣಗಳಲ್ಲಿ ಅಲ್ಲಲ್ಲಿ ವೊದಗಿಡಗಳ ಮೇಲೆ ಹಬ್ಬಿ ಬೆಳೆಯುತ್ತದೆ ಬೇಸಿಗೆಯಲ್ಲಿ ಬಳ್ಳಿಯ ಎಲೆಗಳು ಉದುರಿಹೋಗುತ್ತವೆ ಹೃದಯಾಕಾರದ ಹೊಳಪಿನ ಎಲೆಗಳು ಬಳ್ಳಿ ಕಾಂಡದ ಮೇಲೆ ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಅಂತ್ಯಾರಂಭಿ ವುಷ್ಪಮಂಜರಿಯಲ್ಲಿ ಬಿಳುವಾದ ಏಕಲಿಂಗ ಹೂಗಳಿರುತ್ತವೆ. ದುಂಡನೆಯ ಕಾಯಿಗಳು ಹಣ್ಣಾದಾಗ ಕವಲಾಗುತ್ತವೆ

ಇತ್ತೀಚೆಗೆ ಈ ಗಿಡವನ್ನು ಕೆಲವರು ಅಲಂಕಾರಿಕ ಬಳ್ಳಿ ಗಿಡವಾಗಿ ಮನೆಯಂಗಳದಲ್ಲಿ ಬೆಳೆಸುತ್ತಿದ್ದಾರೆ.

ಉಪಯೋಗಗಳು

1 ಅಮೃತಬಳ್ಳಿಯ ಘನಕ್ವಾದ (Condenced decoction) ಅಥವಾ ಕಾಷಾಯ ಸೇವನೆಯಿಂದ ಮಧುಮೇಹ ರೋಗ ಹತೋಟಿಗೆ ಬರುತ್ತದೆ.

2 ಅಮೃತ ಬಳ್ಳಿಯ ಚೂರ್ಣ, ಕಷಾಯ, ನತ್ವ ಮುಂತಾದವು ಆಯುರ್ವೇದ ಗ್ರಂಧಗಳಲ್ಲಿ ಒಂದು ಉತ್ತಮವಾದ ಕಾಯಕಲ್ಪ (Rejuvenater) ಔಷಧ ಎಂದು ವರಿಗಣಿಸಲ್ಪಟ್ಟದೆ

3 ಅಮೃತಬಳ್ಳಿ ರಸ ಸುಮಾರು 1-2 ಚಮಚ ತೂಕ ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ ದಿನವೂ ಬೆಳಿಗ್ಗೆ ಒಂದು ಹೊತ್ತಿನಂತೆ ಒಂದು ವಾರ ಕುಡಿಸುವುದರಿಂದ ಕಾಮಾಲೆ (Jaundice) ಗುಣವಾಗುತ್ತದೆ.

4 ಅಮೃತಬಳ್ಳಿಯ ರಸ ಸುಮಾರು / ತೊಲದಷ್ಟು ತೆಗೆದುಕೊಂಡು ಅದಕ್ಕ ಸ್ವಲ್ಪ ಜೇನುತುಪ್ಪ ಸೇರಿಸಿ ದಿವನಕ್ಕೆ 2-3 ಸಾರಿ ಕುಡಿಸುವುದರಿಂದ ಅತಿಯಾದ ಬಾಯಾರಿಕೆ ಗುಣವಾಗುತ್ತದೆ.

5 ಅಮೃತ ಬಳ್ಳಿಯ ಅಥವಾ ಎಲೆಯ ರಸ 1/ ತೊಲಕ್ಕ ಸ್ವಲ್ಪ ಸಕ್ಕರೆ ಬೆರಸಿ ದಿವಸಕ್ಕೆ ಎರಡು ವೇಳೆ, 3-5 ಕುಡಿಸುವುದರಿಂದ ರಕ್ತ ಪ್ರದರವು ಗುಣವಾಗುತ್ತದೆ

6 ಬಳ್ಳಿಕಾಂಡದ ಚೂರ್ಣವನ್ನು ಹಾಲಿನಲ್ಲಿ ಕಲಸಿ ಕುಡಿಯುವುದರಿಂದ ವೀರ್ಯವೃದ್ಧಿಯಾಗುತ್ತದೆ.

7 ಸಮೂಲವನ್ನು ಅರೆದು ಮೂಳೆಮುರಿದ ಕಡೆ ಕಟ್ಟುಹಾಕಿ ಕಟ್ಟುತ್ತಾರೆ.

8 ಬಳ್ಳಿಕಾಂಡದಿಂದ ಆಗತಾನೆ ತೆಗೆದ 7-14 ಮಿ ಲೀ ರಸಕ್ಕೆ ಜೇನುತುಪ್ಪ ಸೇರಿಸಿ ದಿವಸಕ್ಕೆ ಎರಡುಬಾರಿ ಕುಡಿಯುವುದರಿಂದ ಕುಷ್ಠರೋಗ ವಾಸಿಯಾಗುತ್ತದೆ.

9 ಬಳ್ಳಿಕಾಂಡದ ಕಷಾಯ ಸುಮಾರು 14-28 ಮಿ ಲೀ ನಷ್ಟು ತೆಗೆದುಕೊಂಡು ಅದಕ್ಕೆ 2 ಗ್ರಾಂ ಗುಗ್ಗುಳವನ್ನು ಸೇರಿಸಿ ದಿವಸಕ್ಕೆ ಎರಡು ಬಾರಿ ಕುಡಿಯುವುದರಿಂದ ಸಂಧಿವಾತ (Arthritis) ಗುಣವಾಗುತ್ತದೆ.

10 ಅಮೃತಬಳ್ಳಿ, ಶುಂಠಿ, ನೆಲಗುಳ್ಳವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೂರ್ಣಮಾಡಿ, 2 ಚಮಚ ಚೂರ್ಣವನ್ನು 1 ಸೇರು ನೀರಿಗೆ ಹಾಕಿ ಅಷ್ಟಾವಶೇಷ ಕಷಾಯಮಾಡಿ ಅದನ್ನು ಬೆಳಗ್ಗೆ ರಾತ್ರಿ 5-6 ದಿವಸ ಕುಡಿಯುವುದರಿಂದ ವಾತಶ್ಲೇಷ್ಮ (ಫೂ, ಇನ್ ಫೂರ್ಯಜಾ) ಜ್ವರ ವಾಸಿಯಾಗುತ್ತದೆ.

11 ಅಮೃತಬಳ್ಳಿಯ ರಸ 1 ತೊಲಕ್ಕೆ 1 ತೋಲ ಜೇನುತುಪ್ಪ ಸೇರಿಸಿ ನಿತ್ಯ ಬೆಳಿಗ್ಗೆ ರಾತ್ರಿ ಕುಡಿಯುವುದರಿಂದ ಶ್ರೇಷ್ಮ ಪರಿಹಾರವಾಗುತ್ತದೆ.

12 ಅಮೃತಬಳ್ಳಿ ಮತ್ತು ಒಂದೆಲಗವನ್ನು ಸಮಪ್ರಮಾಣ ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ಹೊತ್ತಿಗೆ 2 ತೊಲ ಚೂರ್ಣ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಕಷಾಯಕ್ಕಿಟ್ಟು ಒಂದು ಚಟಾಕಿಗಿಳಿಸಿ ನಿತ್ಯ ಎರಡು ಹೊತ್ತಿನಂತೆ 20-40 ದಿವಸ ಸೇವಿಸುವುದರಿಂದ ಉನ್ಮಾದ (Hysteria) ವು ವರಿಹಾರವಾಗುತ್ತದೆ.

13 ಅಮೃತಬಳ್ಳಿ, ಆಡುಸೋಗೆ, ಜೇಷ್ಠಮಧು ಈ ಮೂರರ ಪ್ರತಿಯೊಂದನ್ನೂ ಕಾಲು ತೊಲ ಪ್ರಮಾಣ ತೆಗೆದುಕೊಂಡು ಚತುರ್ಧಾಂಶ ಕಷಾಯ ಮಾಡಿ ಇದನ್ನು ನಿತ್ಯ ನಾಲ್ಕು ಬಾರಿಯಂತೆ 2-3 ತಿಂಗಳು ಸೇವಿಸುವುದರಿಂದ ಕ್ಷಯ ವಾಸಿಯಾಗುತ್ತದೆ.

14 ಅಮೃತಬಳ್ಳಿಯ ಎಲೆ ಅಥವಾ ಕಾಯಿಯ ರಸವನ್ನು ನಿತ್ಯ ರಾತ್ರಿ ಮುಖಕ್ಕೆ ಲೇಪಿಸಿ ಬೆಳಿಗ್ಗೆ ತೊಳೆಯುವ ವದ್ಧತಿಯನ್ನು ರೂಡಿಸಿಕೊಂಡರೆ ಮುಖದ ಕಾಂತಿ ಹೆಚ್ಚಾಗುತ್ತದೆ.

15 ಅಮೃತಬಳ್ಳಿಯ ರಸ 2-3 ಮಿ.ಲೀ.ನಷ್ಟನ್ನು ಜೇನುತುಪ್ಪದೊಡನೆ ಸೇವಿಸಿ, ಉದ್ದಿನಕಾಳಿನ ಕಟ್ಟಿನ ಸಾರು ಅನ್ನ ಊಟಮಾಡುವುದರಿಂದ ತೊನ್ನು ನಿವಾರಣೆಯಾಗುತ್ತದೆ. ಈ ಚಿಕಿತ್ಸೆಯನ್ನು ಬಿಡದೆ ಹಲವು ತಿಂಗಳು ಅನುಸರಿಸಬೇಕಾಗುತ್ತದೆ.

ಪಶುರೋಗ ಚಿಕಿತ್ಸೆಯಲ್ಲಿ

ಅಮೃತ ಬಳ್ಳಿಯ ಸಮೂಲವನ್ನು ಕುಟ್ಟಿ 1 ಲೀಟರ್ ನಷ್ಟು ರಸ ಮಾಡಿಕೊಂಡು ಹಾವು ಕಡಿದಾಗ ಸ್ವಲ್ಪ ರಸವನ್ನು ಕಡಿದ ಜಾಗದ ಮೇಲೆ ಲೇಪಿಸಿ ಉಳಿದ ರಸವನ್ನು ಕುಡಿಸುತ್ತಾರೆ.

ಕೃಪೆ- ಕರ್ನಾಟಕ ಔಷಧೀಯ ಸಸ್ಯಗಳು