December 6, 2024

ಬಾಲಾರಿಷ್ಟ

ಬಾಲಾರಿಷ್ಟ ಗ್ರಹಸ್ಥಿತಿ -
1. ಲಗ್ನಾಧಿಪತಿ 8 ನೇ ಮನೆಯಲ್ಲಿರುವುದು, ಅಥವಾ 8 ರ ಅಧಿಪತಿ ಲಗ್ನದಲ್ಲಿರುವುದು ಅಥವಾ 8 ರ ಅಧಿಪತಿ ಲಗ್ನಾಧಿಪತಿಯ ಜೊತೆ ಇರುವುದು.

2. ಚಂದ್ರನು ಲಗ್ನದಿಂದ  8 ನೇ ಮನೆಯಲ್ಲಿರುವುದು, ಅಥವಾ ಲಗ್ನದಿಂದ 8 ರ ಅಧಿಪತಿ ಚಂದ್ರನ ಜೊತೆ ಇರುವುದು.

3. ಚಂದ್ರನಿಂದ 8 ನೇ ಮನೆಯ ಅಧಿಪತಿ ಲಗ್ನದಲ್ಲಿರುವುದು, ಅಥವಾ ಲಗ್ನಾಧಿಪತಿಯ ಜೊತೆ ಇರುವುದು.

4. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ರಾಹುವಿನ ಜೊತೆ ಒಂಟಿಯಾಗಿರುವುದು.

5. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ಗ್ರಹಯುದ್ಧದಲ್ಲಿ   ಒಂಟಿಯಾಗಿರುವುದು.

6. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ರವಿಯ ಜೊತೆ ಒಂದೇ ಡಿಗ್ರಿಯಲ್ಲಿರುವುದು.

7. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ಅತಿಶತ್ರುವಿನ ಮನೆಯಲ್ಲಿ ಒಂಟಿಯಾಗಿರುವುದು. 

8. ಲಗ್ನಾಧಿಪತಿ / ಅಷ್ಟಮಾಧಿಪತಿ / ಚಂದ್ರ / ಚಂದ್ರನಿಂದ 8 ರ ಅಧಿಪತಿ ಇವರು ಒಂಟಿಯಾಗಿದ್ದು, ಅತಿಶತ್ರುವಿನ ದೃಷ್ಟಿಯನ್ನು ಹೊಂದಿರುವುದು.
      ಇಂತಹ ಗ್ರಹಸ್ಥಿತಿ ಇದ್ದರೆ ಬಾಲಾರಿಷ್ಟ ದೋಷ ಇರುವುದು. ಮುಖ್ಯವಾಗಿ ಮೃತ್ಯುಂಜಯ ಜಪ / ಮೃತ್ಯುಂಜಯ ಶಾಂತಿಗಳನ್ನು ಮಾಡಿಸುವುದು ಒಳ್ಳೆಯದು. 

9. ಮೇಲೆ ತಿಳಿಸಿದ ಯಾವುದಾದರೊಂದು ಗ್ರಹಸ್ಥಿತಿ ಇದ್ದರೂ ತುಂಬ ಗಾಬರಿ ಇರುವುದಿಲ್ಲ. ಏನೂ ಆಗುವುದಿಲ್ಲ.  ಆದರೆ ಇಂತಹ ಗ್ರಹಸ್ಥಿತಿ ಇದ್ದು, ಇದರ ಜೊತೆ ಈ ಕೆಳಗಿನ ಗ್ರಹಸ್ಥಿತಿಯೂ ಇದ್ದರೆ ಮಗುವು ತುಂಬ ಕಷ್ಟಗಳನ್ನು (ಅನಾರೋಗ್ಯ) ಅನುಭವಿಸುತ್ತದೆ. ಕೆಲವೊಮ್ಮೆ ಮಗುವು ಬದುಕದೆಯೂ ಇರಬಹುದು. ಅಂದರೆ ಶಾಂತಿ ಮಾಡಿಸಿದರೂ ಉಪಯೋಗವಾಗದೇ ಇರಬಹುದು.  
a. ದಶಾಧಿಪತಿಯು ಒಂಟಿಯಾಗಿ ಅತಿಶತ್ರುವಿನ ಮನೆಯಲ್ಲಿರುವುದು. 
b. ದಶಾಧಿಪತಿಯು ಒಂಟಿಯಾಗಿ ಅತಿಶತ್ರುವಿನ ದೃಷ್ಟಿಯನ್ನು ಹೊಂದಿರುವುದು.
c. ದಶಾಧಿಪತಿಯು ಒಂಟಿಯಾಗಿ ರವಿಯ ಜೊತೆ ಒಂದೇ ಡಿಗ್ರಿಯಲ್ಲಿರುವುದು. 
d. ದಶಾಧಿಪತಿಯು ಒಂಟಿಯಾಗಿ ಯಾವುದಾದರೂ ಗ್ರಹದ ಜೊತೆ ಒಂದೇ ಡಿಗ್ರಿಯಲ್ಲಿರುವುದು. 

ಇನ್ನೂ ಹೆಚ್ಚಿನ ವಿವರವನ್ನು ಬೃಹಜ್ಜಾತಕದಲ್ಲಿ ನೋಡಿಕೊಳ್ಳಿ...

 ಸೂಚನೆ - ಮೇಲೆ ತಿಳಿಸಿರುವ ವಿಷಯಗಳನ್ನು ರಾಶಿಕುಂಡಲಿಯಲ್ಲಿ ನೋಡಿದರೆ, ಎಲ್ಲವೂ ಸುಳ್ಳು ಮತ್ತು ಮೂಢನಂಬಿಕೆಯಾಗುತ್ತದೆ. ಸರಿಯಾಗಿ ಭಾವಗಳನ್ನು ಲೆಕ್ಕಮಾಡಿಕೊಂಡರೆ ನಿಜವಾಗುತ್ತದೆ. ಆದ್ದರಿಂದ ಭಾವಗಳ ಲೆಕ್ಕ ಸರಿಯಾಗಿ ಅರ್ಥವಾಗಿರಬೇಕು. ಧನ್ಯವಾದಗಳು..... ನಮಸ್ಕಾರ...  
********

December 5, 2024

ಅಮೃತಬಳ್ಳಿ ಹಿತಮಿತವಾಗಿ ಬಳಸಿ

ಅಮೃತಬಳ್ಳಿ

ವೈಜ್ಞಾನಿಕ ಹೆಸರು- ಟಿನೊಸ್ಪೆರ ಕಾರ್ಡಿಫೋಲಿಯ (Tinospora cordifolia (Willd) Miers)

ಸಸ್ಯದ ಕುಟುಂಬ- (ಮೆನಿಸ್ಪರ್ಮೇಸಿಯೇ) Menispermaceae

ಕನ್ನಡದ ಇತರ ಹೆಸರುಗಳು- ಕಾಡುಹಾಕು ಕಾರೇ, ಗುಡೂಚಿ, ಮಧುವರ್ಣಿ, ಮಧುವರ್ಕ

ಇತರ ಭಾಷೆಯ ಹೆಸರುಗಳು-  ಸಂ -ಅಮೃತ, ಗುಡೂಚಿ, ಮಧುವರ್ಣಿ, ವತ್ಪಾದನಿ, ಛಿನ್ನರುಹಾ, ತಂತ್ರಿಕಾಮೃತ, ಜೀವಂತಿಕಾ, ಸೋಮವಲ್ಲಿ, ವಿಶಲ್ಯಾ, ಹಿಂ-ಗಿಲೊಯ,  ಗುಡಿಚ, ಗುಲಂಚ, ತ-ಅಮುದಂ, ಅಮೃತವಳ್ಳಿ, ಸಿಂದಾಲ್, ತೆ- ಗುಡುಚಿ, ಸೊಮಿಡ, ಇಂ-ಹರ್ತಾ ಲೀವ್ ಮೂನ್ ಸೀಡ್, ಗುಲಾಂಚ, ಟಿನೋಸ್ಪೊರ್.



ಪರಿಚಯ

ಅಮೃತವಳ್ಳಿಯು ಇತರೆ ಬಳ್ಳಿಗಿಡಗಳಂತೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಅವರೂವವಾಗಿ ಕಂಡುಬರುವ ಈ ಬಳ್ಳಿಯು ಉಷ್ಣವಲಯದ ಭಾಗಶಃ ನಿತ್ಯ ಹರಿದ್ವರ್ಣ ಸಸ್ಯಾವರಣ, ಬೇಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಸಸ್ಯಾವರಣ, ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಒಣ ಸನ್ಯಾವರಣ ಮತ್ತು ಕಳ್ಳಿ ಕುರುಚಲು ಗಿಡಗಳೊನ್ನೊಳಗೊಂಡ ಸಸ್ಯಾವರಣಗಳಲ್ಲಿ ಅಲ್ಲಲ್ಲಿ ವೊದಗಿಡಗಳ ಮೇಲೆ ಹಬ್ಬಿ ಬೆಳೆಯುತ್ತದೆ ಬೇಸಿಗೆಯಲ್ಲಿ ಬಳ್ಳಿಯ ಎಲೆಗಳು ಉದುರಿಹೋಗುತ್ತವೆ ಹೃದಯಾಕಾರದ ಹೊಳಪಿನ ಎಲೆಗಳು ಬಳ್ಳಿ ಕಾಂಡದ ಮೇಲೆ ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಅಂತ್ಯಾರಂಭಿ ವುಷ್ಪಮಂಜರಿಯಲ್ಲಿ ಬಿಳುವಾದ ಏಕಲಿಂಗ ಹೂಗಳಿರುತ್ತವೆ. ದುಂಡನೆಯ ಕಾಯಿಗಳು ಹಣ್ಣಾದಾಗ ಕವಲಾಗುತ್ತವೆ

ಇತ್ತೀಚೆಗೆ ಈ ಗಿಡವನ್ನು ಕೆಲವರು ಅಲಂಕಾರಿಕ ಬಳ್ಳಿ ಗಿಡವಾಗಿ ಮನೆಯಂಗಳದಲ್ಲಿ ಬೆಳೆಸುತ್ತಿದ್ದಾರೆ.

ಉಪಯೋಗಗಳು

1 ಅಮೃತಬಳ್ಳಿಯ ಘನಕ್ವಾದ (Condenced decoction) ಅಥವಾ ಕಾಷಾಯ ಸೇವನೆಯಿಂದ ಮಧುಮೇಹ ರೋಗ ಹತೋಟಿಗೆ ಬರುತ್ತದೆ.

2 ಅಮೃತ ಬಳ್ಳಿಯ ಚೂರ್ಣ, ಕಷಾಯ, ನತ್ವ ಮುಂತಾದವು ಆಯುರ್ವೇದ ಗ್ರಂಧಗಳಲ್ಲಿ ಒಂದು ಉತ್ತಮವಾದ ಕಾಯಕಲ್ಪ (Rejuvenater) ಔಷಧ ಎಂದು ವರಿಗಣಿಸಲ್ಪಟ್ಟದೆ

3 ಅಮೃತಬಳ್ಳಿ ರಸ ಸುಮಾರು 1-2 ಚಮಚ ತೂಕ ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ ದಿನವೂ ಬೆಳಿಗ್ಗೆ ಒಂದು ಹೊತ್ತಿನಂತೆ ಒಂದು ವಾರ ಕುಡಿಸುವುದರಿಂದ ಕಾಮಾಲೆ (Jaundice) ಗುಣವಾಗುತ್ತದೆ.

4 ಅಮೃತಬಳ್ಳಿಯ ರಸ ಸುಮಾರು / ತೊಲದಷ್ಟು ತೆಗೆದುಕೊಂಡು ಅದಕ್ಕ ಸ್ವಲ್ಪ ಜೇನುತುಪ್ಪ ಸೇರಿಸಿ ದಿವನಕ್ಕೆ 2-3 ಸಾರಿ ಕುಡಿಸುವುದರಿಂದ ಅತಿಯಾದ ಬಾಯಾರಿಕೆ ಗುಣವಾಗುತ್ತದೆ.

5 ಅಮೃತ ಬಳ್ಳಿಯ ಅಥವಾ ಎಲೆಯ ರಸ 1/ ತೊಲಕ್ಕ ಸ್ವಲ್ಪ ಸಕ್ಕರೆ ಬೆರಸಿ ದಿವಸಕ್ಕೆ ಎರಡು ವೇಳೆ, 3-5 ಕುಡಿಸುವುದರಿಂದ ರಕ್ತ ಪ್ರದರವು ಗುಣವಾಗುತ್ತದೆ

6 ಬಳ್ಳಿಕಾಂಡದ ಚೂರ್ಣವನ್ನು ಹಾಲಿನಲ್ಲಿ ಕಲಸಿ ಕುಡಿಯುವುದರಿಂದ ವೀರ್ಯವೃದ್ಧಿಯಾಗುತ್ತದೆ.

7 ಸಮೂಲವನ್ನು ಅರೆದು ಮೂಳೆಮುರಿದ ಕಡೆ ಕಟ್ಟುಹಾಕಿ ಕಟ್ಟುತ್ತಾರೆ.

8 ಬಳ್ಳಿಕಾಂಡದಿಂದ ಆಗತಾನೆ ತೆಗೆದ 7-14 ಮಿ ಲೀ ರಸಕ್ಕೆ ಜೇನುತುಪ್ಪ ಸೇರಿಸಿ ದಿವಸಕ್ಕೆ ಎರಡುಬಾರಿ ಕುಡಿಯುವುದರಿಂದ ಕುಷ್ಠರೋಗ ವಾಸಿಯಾಗುತ್ತದೆ.

9 ಬಳ್ಳಿಕಾಂಡದ ಕಷಾಯ ಸುಮಾರು 14-28 ಮಿ ಲೀ ನಷ್ಟು ತೆಗೆದುಕೊಂಡು ಅದಕ್ಕೆ 2 ಗ್ರಾಂ ಗುಗ್ಗುಳವನ್ನು ಸೇರಿಸಿ ದಿವಸಕ್ಕೆ ಎರಡು ಬಾರಿ ಕುಡಿಯುವುದರಿಂದ ಸಂಧಿವಾತ (Arthritis) ಗುಣವಾಗುತ್ತದೆ.

10 ಅಮೃತಬಳ್ಳಿ, ಶುಂಠಿ, ನೆಲಗುಳ್ಳವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೂರ್ಣಮಾಡಿ, 2 ಚಮಚ ಚೂರ್ಣವನ್ನು 1 ಸೇರು ನೀರಿಗೆ ಹಾಕಿ ಅಷ್ಟಾವಶೇಷ ಕಷಾಯಮಾಡಿ ಅದನ್ನು ಬೆಳಗ್ಗೆ ರಾತ್ರಿ 5-6 ದಿವಸ ಕುಡಿಯುವುದರಿಂದ ವಾತಶ್ಲೇಷ್ಮ (ಫೂ, ಇನ್ ಫೂರ್ಯಜಾ) ಜ್ವರ ವಾಸಿಯಾಗುತ್ತದೆ.

11 ಅಮೃತಬಳ್ಳಿಯ ರಸ 1 ತೊಲಕ್ಕೆ 1 ತೋಲ ಜೇನುತುಪ್ಪ ಸೇರಿಸಿ ನಿತ್ಯ ಬೆಳಿಗ್ಗೆ ರಾತ್ರಿ ಕುಡಿಯುವುದರಿಂದ ಶ್ರೇಷ್ಮ ಪರಿಹಾರವಾಗುತ್ತದೆ.

12 ಅಮೃತಬಳ್ಳಿ ಮತ್ತು ಒಂದೆಲಗವನ್ನು ಸಮಪ್ರಮಾಣ ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ಹೊತ್ತಿಗೆ 2 ತೊಲ ಚೂರ್ಣ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಕಷಾಯಕ್ಕಿಟ್ಟು ಒಂದು ಚಟಾಕಿಗಿಳಿಸಿ ನಿತ್ಯ ಎರಡು ಹೊತ್ತಿನಂತೆ 20-40 ದಿವಸ ಸೇವಿಸುವುದರಿಂದ ಉನ್ಮಾದ (Hysteria) ವು ವರಿಹಾರವಾಗುತ್ತದೆ.

13 ಅಮೃತಬಳ್ಳಿ, ಆಡುಸೋಗೆ, ಜೇಷ್ಠಮಧು ಈ ಮೂರರ ಪ್ರತಿಯೊಂದನ್ನೂ ಕಾಲು ತೊಲ ಪ್ರಮಾಣ ತೆಗೆದುಕೊಂಡು ಚತುರ್ಧಾಂಶ ಕಷಾಯ ಮಾಡಿ ಇದನ್ನು ನಿತ್ಯ ನಾಲ್ಕು ಬಾರಿಯಂತೆ 2-3 ತಿಂಗಳು ಸೇವಿಸುವುದರಿಂದ ಕ್ಷಯ ವಾಸಿಯಾಗುತ್ತದೆ.

14 ಅಮೃತಬಳ್ಳಿಯ ಎಲೆ ಅಥವಾ ಕಾಯಿಯ ರಸವನ್ನು ನಿತ್ಯ ರಾತ್ರಿ ಮುಖಕ್ಕೆ ಲೇಪಿಸಿ ಬೆಳಿಗ್ಗೆ ತೊಳೆಯುವ ವದ್ಧತಿಯನ್ನು ರೂಡಿಸಿಕೊಂಡರೆ ಮುಖದ ಕಾಂತಿ ಹೆಚ್ಚಾಗುತ್ತದೆ.

15 ಅಮೃತಬಳ್ಳಿಯ ರಸ 2-3 ಮಿ.ಲೀ.ನಷ್ಟನ್ನು ಜೇನುತುಪ್ಪದೊಡನೆ ಸೇವಿಸಿ, ಉದ್ದಿನಕಾಳಿನ ಕಟ್ಟಿನ ಸಾರು ಅನ್ನ ಊಟಮಾಡುವುದರಿಂದ ತೊನ್ನು ನಿವಾರಣೆಯಾಗುತ್ತದೆ. ಈ ಚಿಕಿತ್ಸೆಯನ್ನು ಬಿಡದೆ ಹಲವು ತಿಂಗಳು ಅನುಸರಿಸಬೇಕಾಗುತ್ತದೆ.

ಪಶುರೋಗ ಚಿಕಿತ್ಸೆಯಲ್ಲಿ

ಅಮೃತ ಬಳ್ಳಿಯ ಸಮೂಲವನ್ನು ಕುಟ್ಟಿ 1 ಲೀಟರ್ ನಷ್ಟು ರಸ ಮಾಡಿಕೊಂಡು ಹಾವು ಕಡಿದಾಗ ಸ್ವಲ್ಪ ರಸವನ್ನು ಕಡಿದ ಜಾಗದ ಮೇಲೆ ಲೇಪಿಸಿ ಉಳಿದ ರಸವನ್ನು ಕುಡಿಸುತ್ತಾರೆ.

ಕೃಪೆ- ಕರ್ನಾಟಕ ಔಷಧೀಯ ಸಸ್ಯಗಳು

October 27, 2024

ಚಂಡೀಶ್ವರ ಚಂಡಿಕೇಶ್ವರ

ಚಂಡಿಕೇಶ್ವರನಿಗೆ "ಚಿಟಿಕೆ" ಹೊಡೆಯುವುದು ಅಥವ "ಚಪ್ಪಾಳೆ ತಟ್ಟುವುದು" ಏಕೆ.?

    ಎಲ್ಲ ಶಿವಾಲಯಗಳಲ್ಲಿ, ಶಿವ, ಪಾರ್ವತಿ, ವಿನಾಯಕ , ಸುಬ್ರಹ್ಮಣ್ಯ , ನಂದಿ , ಬೃಂಗಿ ಹಾಗೂ ಚಂಡಿಕೇಶ್ವರ ಮೂರ್ತಿಗಳನ್ನು ಕಾಣುವುದು ಸಾಮಾನ್ಯ.
ಚಂಡಿಕೇಶ್ವರ
    ಶಿವಾಲಯಗಳಲ್ಲಿ ಚಂಡಿಕೇಶ್ವರನ ದರ್ಶನಕ್ಕೆ ಬಂದಾಗ ಚಿಟಿಕೆ ಹೊಡೆದು, ಚಪ್ಪಾಳೆ ತಟ್ಟಿ ಚಂಡಿಕೇಶ್ವರನ ದರ್ಶನ ಮಾಡುವುದು ವಾಡಿಕೆ.
ಬಹುತೇಕ ಭಕ್ತಾದಿಗಳಿಗೆ ಚಂಡಿಕೇಶ್ವರನಿಗೆ "ಕಿವುಡು" ಎಂಬ ಅಭಿಪ್ರಾಯ.
ಆದರೆ ಚಂಡಿಕೇಶ್ವರನಿಗೆ ಕಿವುಡು ಎಂಬ ನಮ್ಮ ಅಭಿಪ್ರಾಯ, ತಪ್ಪಾದ ತಿಳುವಳಿಕೆ.
ಈ ಚಂಡಿಕೇಶ್ವರ ಯಾರು.?
    ದಕ್ಷಿಣ ಭಾರತದ 'ಮಣಿಯಾರ್' ನದಿಯ ತಟದಲ್ಲಿನ ಒಂದು ಅಗ್ರಹಾರ. ವೇದಾಧ್ಯಯನಕ್ಕೆ ಪ್ರಖ್ಯಾತವಾದ, ಪ್ರಶಸ್ತವಾದ, ಪ್ರದೇಶ. ಅಲ್ಲಿ 'ಈಚದತ್ತ' ಎಂಬ ಪ್ರಖ್ಯಾತ ಬ್ರಾಹ್ಮಣ ಪಂಡಿತ ಇದ್ದ. ಅವನ ಮಗ ಚಂದೇಶ ಶರ್ಮ (ಚಂದ್ರೇಶ್ವರ ಶರ್ಮ). ವೇದಾಧ್ಯಯನದಲ್ಲಿ ತಂದೆಯಂತೆ ತಾನೂ ಪಾರಂಗತನು, ಆರಾಧ್ಯ ದೈವವಾದ ಪರಶಿವನ ಮಹಾ ಭಕ್ತ. ಪ್ರತಿನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನಮಾಡಿ ಹಿಂತಿರುಗಿ, ದೇವತಾರಾಧನೆ, ವೇದಾಧ್ಯಯನದಲ್ಲಿ ತೊಡಗುತ್ತಿದ್ದ.
    ಒಂದು ದಿನ ನಿತ್ಯಕರ್ಮಗಳನ್ನು ಮುಗಿಸಿ ಹಿಂತಿರುಗುವಾಗ ಒಬ್ಬ ಗೋಪಾಲಕ ತನ್ನ ಗೋವನ್ನು(ಹಸು) ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ. ಇದನ್ನು ಕಂಡ ಚಂದೇಶ ಶರ್ಮನಿಗೆ ನೋವಾಯಿತು. ಅವನಲ್ಲಿಗೆ ಹೋಗಿ...! ಎಲೈ ಗೋಪಾಲಕನೇ, ಗೋವು ದೈವ ಸಮಾನವಾದುದು. ಅದನ್ನು ಹಿಂಸಿಸುವುದು ಸರಿಯಲ್ಲ. ನಿನಗೆ ಈ ಗೋಪಾಲನೆ ಕಷ್ಟವಾದಲ್ಲಿ , ನಾನು ಅದರ ಪಾಲನೆ ಮಾಡುವುದಾಗಿ ತಿಳಿಸಿದ. ಮೊದಲೇ ಬಹಳ ಕೋಪದಲ್ಲಿದ್ದ ಗೋಪಾಲಕ, ಸರಿ, ನನ್ನ ಎಲ್ಲ ಗೋವುಗಳ ಪೋಷಣೆಯ ಜವಾಬ್ದಾರಿ ಇಂದಿನಿಂದ ನಿನ್ನದು. ಆದರೆ, ಅದರ ಮೇಲಿನ ಹಕ್ಕು‌ ಅಥವ ಅವುಗಳಿಂದ ಉತ್ಪಾದನೆ ಆಗುವ ಹಾಲಿನಲ್ಲಿ ನಿನಗೆ ಯಾವುದೇ ಪಾಲು ಸಿಗದು ಎಂದು ತಿಳಿಸಿದ.
    ಗೋಪಾಲಕನ ಷರತ್ತುಗಳಿಗೆ ಒಪ್ಪಿದ ಚಂದೇಶ ಶರ್ಮ, ಸಂತೋಷದಿಂದ ಗೋವುಗಳ ಪಾಲನೆಯ ಜೊತೆಗೆ ನದಿಯ ತಟದಲ್ಲಿ ವೇದಾಧ್ಯಯನ ಮುಂದುವರೆಸಿದ. ಇವನ ಪೋಷಣೆ, ಪ್ರೀತಿಗೆ ಗೋವುಗಳು ಸಹಾ ಸಂತೋಷದಿಂದ ಚಂದೇಶ ಶರ್ಮನನ್ನು ಪ್ರೀತಿಸತೊಡಗಿದವು. ಚಂದೇಶ ಗೋವುಗಳಿಗೆ ಆಹಾರ ನೀಡುವಸಲುವಾಗಿ, ಎಲೆಗಳು, ಗಿಡಗಳನ್ನು ಕತ್ತರಿಸಲು ಸದಾಕಾಲ ತನ್ನಲ್ಲಿ ಕೊಡಲಿಯನ್ನ ಇಟ್ಟುಕೊಳ್ಳುತ್ತಿದ್ದ. ದೇವಾಲಯಗಳಲ್ಲಿ ಚಂಡಿಕೇಶ್ವರ ಮೂರ್ತಿಯ ಕೈಯಲ್ಲಿ ಕೊಡಲಿ ಇರುವುದನ್ನು ನಾವು ಗಮನಿಸಬಹುದು.
    ಚಂದೇಶ ಶರ್ಮ ಗೋಪಾಲನೆಯ ವೇಳೆಯಲ್ಲಿ ಪಕ್ಕದ ನದಿಯಿಂದ ಮರಳು ತಂದು ಅದರಿಂದ ಒಂದು ಲಿಂಗಾಕೃತಿಯ ಶಿವಲಿಂಗವನ್ನು ತಯಾರಿಸಿ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿ ವೇದಾಧ್ಯಯನದಲ್ಲಿ ತೊಡಗುತ್ತಿದ್ದ. ಚಂದೇಶನ ಪೋಷಣೆಗೆ ಸಂತೋಷಗೊಂಡ ಗೋವುಗಳು, ಪ್ರೀತಿಯಿಂದ ತಾವಾಗಿಯೇ ಹಾಲು ಸುರಿಸಲು ಪ್ರಾಂಭಿಸಿದವು. ಗೋವುಗಳು ನೀಡಿದ ಹಾಲನ್ನು ಒಂದು ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಮರಳಿನಿಂದ ತಯಾರಿಸಿದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ.
ಒಂದು ದಿನ ಅಗ್ರಹಾರದ ಒಬ್ಬ ವ್ಯಕ್ತಿ, ಗೋವುಗಳು ತಾವಾಗಿಯೇ ಹಾಲು ನೀಡುತ್ತಿದ್ದು, ಅದನ್ನು ಚಂದೇಶನು ಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದ. ಅಗ್ರಹಾರದಲ್ಲಿದ್ದ ಗೋವುಗಳ ಮಾಲೀಕನಿಗೆ ವಿಷಯ ತಿಳಿಸಿದ. ವಿಷಯ ತಿಳಿದ ಗೋವುಗಳ ಮಾಲೀಕ, ಚಂದೇಶ ಶರ್ಮನ ತಂದೆಯ ಬಳಿ ದೂರು ನೀಡಿದ.
ಅಲ್ಲಿ ನಡೆದದ್ದು ಏನು?
    ಮಗನ ಈ ವರ್ತನೆಯಿಂದ ಕೋಪಗೊಂಡ 'ಈಚದತ್ತ' ಮರುದಿನ ಅಲ್ಲಿ ಚಂದೇಶ ಮತ್ತು ಗೋವುಗಳ ವರ್ತನೆಯನ್ನು ನೋಡಲು ಖುದ್ದಾಗಿ ತೆರಳಿದ. ಚಂದೇಶ ಇಹಲೋಕದ ಅರಿವೇ ಇಲ್ಲದೆ ಧ್ಯಾನ ಮಗ್ನನಾಗಿ ಮರಳಿನ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದ, ಗೋವುಗಳು ಸಹಾ ಇದನ್ನು ನೋಡುತ್ತಿದ್ದವು. ಈಚದತ್ತ ಮಗನನ್ನು ಕರೆದ, ಕೂಗಿದ, ಅಲುಗಾಡಿಸಲು ಪ್ರಯತ್ನಿಸಿದ. ಧಾನ್ಯದಲ್ಲಿದ್ದ ಚಂದೇಶ ಯಾವುದಕ್ಕೂ ಎಚ್ಚರ ಆಗಲಿಲ್ಲ. ಕೋಪಗೊಂಡ ಈಚದತ್ತ ಅಲ್ಲಿನ ಮಡಕೆಗಳಲ್ಲಿ ಇದ್ದ ಹಾಲನ್ನು ತನ್ನ ಕಾಲಿಂದ ಒದೆಯುತ್ತಾನೆ. ಹಾಲಿನ ಮಡಕೆ ಚೂರುಗಳು,ಮರಳಿನ ಲಿಂಗಕ್ಕೆ ತಾಗಿ ಲಿಂಗವು ಭಿನ್ನವಾಯಿತು. ತಕ್ಷಣವೇ ಕಣ್ಣು ತೆರದ ಚಂದೇಶ, ತನ್ನ ಬಳಿ ಇದ್ದ ಕೊಡಲಿಯಿಂದ ತಂದೆಯ ಕಾಲುಗಳನ್ನು ಕತ್ತರಿಸಿದ.
ಯಾವ ಕಾಲಿನಿಂದ ಶಿವನ ಧ್ಯಾನವನ್ನು ಭಂಗ ಮಾಡಿ ಶಿವನಿಗೆ ಅಪಚಾರ ಮಾಡಿದೆಯೋ, ಆ ಕಾಲುಗಳಿಗೆ ಇದೇ ತಕ್ಕ ಶಾಸ್ತಿ ಎಂದ. ರಕ್ತದ ಮಡುವಿನಲ್ಲಿ ಈಚದತ್ತ ಒದ್ದಾಡುತ್ತಿದ್ದ.
ಪ್ರತ್ಯಕ್ಷನಾದ ಪರಶಿವ
    ಚಂದೇಶ ಶರ್ಮ ತನ್ನ ಆರಾಧ್ಯದೈವವಾದ ಶಿವನ ಧ್ಯಾನಕ್ಕೆ ಅಪಚಾರ ಮಾಡಿದ ತನ್ನ ತಂದೆಯನ್ನೂ ಲೆಕ್ಕಿಸದೆ, ಕಾಲುಗಳನ್ನು ಕತ್ತರಿಸಿದ, ಚಂದೇಶನ ಪರಮ ಭಕ್ತಿಗೆ ಮೆಚ್ಚಿದ ಪರಶಿವ ಅಲ್ಲಿ ಪ್ರತ್ಯಕ್ಷನಾದ.
ಪರಶಿವನ ಕುಟುಂಬಕ್ಕೆ ಚಂದೇಶ ಶರ್ಮನ ಸೇರ್ಪಡೆ
ಪ್ರತ್ಯಕ್ಷನಾದ ಪರಶಿವ ಸಾಮಾನ್ಯ ಮಾನವನಾದ ಚಂದೇಶ ಶರ್ಮನ ಶ್ರದ್ಧೆ ಭಕ್ತಿಗೆ ಮೆಚ್ಚಿ, ಅಂದಿನಿಂದ ತನ್ನ ಕುಟುಂಬದ ಸದಸ್ಯರಾದ ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯರ (ಮುರುಗ,ಮಣಿಕಂಟ) ಜೊತಗೆ, ಚಂದೇಶನನ್ನು ತನ್ನ ಮೂರನೇ ಮಗನಾಗಿ ಸ್ವೀಕರಿಸಿದ. ಈಚದತ್ತನಿಗೆ ಕಾಲುಗಳು ಮತ್ತೆ ಬರುವಂತೆ ಅನುಗ್ರಹಿಸಿದ. ಪರಶಿವನು ಚಂದೇಶನಿಗೆ "ಚಂಡಿಕೇಶ್ವರ" ಎಂದು ಮರುನಾಮಕರಣ ಮಾಡಿದ.
ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ಏಕೆ?
    ಶಿವ ಪುರಾಣದ ಉಲ್ಲೇಖದಂತೆ, ಚಂಡಿಕೇಶ್ವರ ಸದಾಕಾಲವೂ ಪರಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಶಿವಾಲಕ್ಕೆ ತೆರಳುವ ಭಕ್ತರು, ಶಿವಾಲಯದಿಂದ ಚಂಡಿಕೇಶ್ವರನಿಗೆ ತಿಳಿಯದಂತೆ ಏನನ್ನೂ ಹೊರಗೆ ಕೊಂಡೊಯ್ಯುವಂತಿಲ್ಲ. ಅದು ದೇವರ ಪ್ರಸಾದವಾಗಲಿ, ದೇವರ ನಿರ್ಮಾಲ್ಯವಾಗಲಿ, ಧ್ಯಾನದಲ್ಲಿ ಇರುವ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಮ್ಮತ್ತ ಚಂಡಿಕೇಶ್ವರನ ಗಮನ ಸೆಳೆದು, ನಂತರ ನಾವು ಹೊರಗೆ ತೆಗೆದುಕೊಂಡು ಹೋಗಬೇಕು.
    ಹೊರಗೆ ಹೋಗುವ ನಿರ್ಮಾಲ್ಯಗಳಾದ ಬಿಲ್ವಪತ್ರೆ, ಹೂವ್ವು, ವಿಭೂತಿ ಅಥವ ಪ್ರಸಾದಗಳನ್ನು ಚಂಡಿಕೇಶ್ವರನಿಗೆ ತೋರಿಸಿಯೇ ಹೊರಗೆ ತೆಗೆದುಕೊಂಡು ಹೋಗಬೇಕೆಂಬ ನಿಯಮ ಉಂಟು. ಹಾಗಾಗಿ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಿನಗೆ ತಿಳಿಯದಂತೆ ಇಲ್ಲಿಂದ ಏನನ್ನೂ ಹೊರಗೆ ತೆಗೆದುಕೊಂಡು ಹೋಗುತ್ತಿಲ್ಲ , ಎಂಬುದನ್ನು ತಿಳಿಸಿ ಹೊರಗೆ ಕೊಂಡೊಯ್ಯುವುದು‌ ಪದ್ದತಿ.
ಇಂದಿಗೂ ಶಿವಾಲಯಗಳಲ್ಲಿ ಹಿಂದಿನ ದಿನದ ಮೂರ್ತಿಗಳ ನಿರ್ಮಾಲ್ಯಗಳನ್ನು (ಪೂಜೆ ಮಾಡಿದ ಹುವ್ವು ಪತ್ರೆಗಳು) ತೆಗೆದು, ಚಂಡಿಕೇಶ್ವರನಿಗೆ ತೋರಿಸಿದ ನಂತರವೇ ಅವುಗಳನ್ನು ವಿಸರ್ಜನೆ ಮಾಡುವ ಪದ್ದತಿ ಉಂಟು.
ಮುಖ್ಯವಾಗಿ ಬಹುತೇಕರು ತಿಳಿದಹಾಗೆ 'ಚಂಡಿಕೇಶ್ವರ"ನಿಗೆ ಕಿವಿ ಕೇಳಿಸೊಲ್ಲ, ಕಿವುಡು ಎಂಬ ತಪ್ಪು ಅಭಿಪ್ರಾಯ ಬದಿಗಿಟ್ಟು ನಿಜಾಂಶ ತಿಳಿಸುವ ಉದ್ದೇಶ.
ಶಿವಾರ್ಪಣಮಸ್ತು ........ ಸದ್ವಿಚಾರ ಸಂಗ್ರಹ

ಶಿವನ ನಾಮಾವಳಿಗಳ ಅರ್ಥ

ಶಿವನ ಅತ್ಯಂತ ಶುಭವಾದ 108 ಅಂದರೆ, ಶಿವನ ಅಷ್ಟೋತ್ತರ ನಾಮಾವಳಿಗಳನ್ನು ಅಷ್ಠೋತ್ತರದ ಜೊತೆಗೆ ಅದರ ಅರ್ಥಸಹಿತ ವಿವರಣೆ :


ಓಂ ಶಿವಾಯ ನಮಃ - ಮಹಾನ್ ದೇವ ಶಿವನಿಗೆ ನಮಸ್ಕಾರಗಳು
ಓಂ ಮಹೇಶ್ವರಾಯ ನಮಃ - ಶ್ರೇಷ್ಠ ಅಧಿಪತಿಯು ಆಗಿರುವನು
ಓಂ ಶಂಭವೇ ನಮಃ - ಮಹಾನ್ ಶಂಭುವೇ ನೀನು
ಓಂ ಪಿನಾಕಿನೇ ನಮಃ - ಪಿನಾಕಾ ಎಂಬ ಬಿಲ್ಲು ಹಿಡಿದವನು
ಓಂ ಶಶಿಶೇಖರಾಯ ನಮಃ - ಚಂದ್ರನನ್ನು ಜಟೆಯಲ್ಲಿ ಹಿಡಿದವನು
ಓಂ ವಾಮದೇವಾಯ ನಮಃ - ಆತನು ಮಹಾನ್ ದೇವಾನು ದೇವ ಆಗಿರುವನು
ಓಂ ವಿರೂಪಾಕ್ಷಾಯ ನಮಃ - ಮೂರು ಕಣ್ಣುಗಳು ಉಳ್ಳವನು
ಓಂ ಕಪರ್ದಿನೇ ನಮಃ - ಸ್ಮಶಾನವಾಸಿಯೇ ತಲೆಬುರುಡೆಗಳನ್ನು ಹಿಡಿದವನು
ಓಂ ನೀಲಲೋಹಿತಾಯ ನಮಃ - ನೀಲಿ ಬಣ್ಣದ ದೇಹ ಉಳ್ಳವನು
ಓಂ ಶಂಕರಾಯ ನಮಃ - ಶಂಕರನೇ ನಿನಗೆ ನಮೋ ನಮಃ
ಓಂ ಶೂಲಪಾಣಯೇ ನಮಃ- ತ್ರಿಶೂಲವನ್ನು ಹಿಡಿದವನಾಗಿರುವನು
ಓಂ ಖಟ್ವಾಂಗಿನೇ ನಮಃ -ಕತ್ತಿಯನ್ನು ಹಿಡಿದವನು
ಓಂ ವಿಷ್ಣುವಲ್ಲಭಾಯ ನಮಃ - ವಿಷ್ಣುವಿನ ಸ್ವರೂಪಿಯಾಗಿರುವನು
ಓಂ ಶಿಪಿವಿಷ್ಟಾಯ ನಮಃ - ಬೆಳಕಿನ ಕಿರಣದೊಂದಿಗೆ ಇರುವವನು
ಓಂ ಅಂಬಿಕಾನಾಥಾಯ ನಮಃ - ಪಾರ್ವತಿಯ ಪತಿರಾಯನಾಗಿರುವನು
ಓಂ ಶ್ರೀಕಂಠಾಯ ನಮಃ - ಕಂಠದಲ್ಲಿ ವಿಷವನ್ನೇ ಇಟ್ಟುಕೊಂಡಿರುವ ವಿಷಕಂಠನು ಆಗಿರುವನು
ಓಂ ಭಕ್ತವತ್ಸಲಾಯ ನಮಃ - ತನ್ನ ಭಕ್ತರನ್ನು ಪ್ರೀತಿಸುವವನು
ಓಂ ಭವಾಯ ನಮಃ - ಸದಾ ಭಕ್ತರ ಪಾಲಿಗೆ ಕರುಣಿಸುವವವನು
ಓಂ ಶರ್ವಾಯ ನಮಃ - ವಿನಾಶಕಾರಿ ಆಗಿರುವನು
ಓಂ ತ್ರಿಲೋಕೇಶಾಯ ನಮಃ- ಮೂರು ವಿಧದ ಕೂದಲು (ಜಟೆ) ಯನ್ನು ಹೊಂದಿರುವವನು
ಓಂ ಶಿತಿಕಂಠಾಯ ನಮಃ - ಕಪ್ಪು ಕುತ್ತಿಗೆ ಹೊಂದಿರುವವನು
ಓಂ ಶಿವಾಪ್ರಿಯಾಯ ನಮಃ - ಪಾರ್ವತಿಯಿಂದ ಇಷ್ಟಪಟ್ಟವನು
ಓಂ ಉಗ್ರಾಯ ನಮಃ - ಉಗ್ರ ಸ್ವರೂಪನು ಆಗಿರುವನು
ಓಂ ಕಪಾಲಿನೇ ನಮಃ - ರುಂಡಮಾಲಾ ಧರಿಸಿದವನು
ಓಂ ಕೌಮಾರಯೇ ನಮಃ - ಕುಮಾರನು ಆಗಿರುವನು
ಓಂ ಅಂಧಕಾಸುರ ಸೂದನಾಯ ನಮಃ - ಅಂಧಕಾಸುರನನ್ನು ಕೊಂದವನು
ಓಂ ಗಂಗಾಧರಾಯ ನಮಃ - ಗಂಗೆಯನ್ನು ಶಿರದಲ್ಲಿ ಧರಿಸಿದವನು
ಓಂ ಲಲಾಟಾಕ್ಷಾಯ ನಮಃ - ಹಣೆಯಲ್ಲಿ ಕಣ್ಣು (ಮುಕ್ಕಣ್ಣ) ಇರುವವನು
ಓಂ ಕಾಲಕಾಲಾಯ ನಮಃ - ಸಾವಿನ ದೇವರಿಗೆ ಸಾವು ಯಾರು
ಓಂ ಕೃಪಾನಿಧಯೇ ನಮಃ - ಕರುಣೆಯ ನಿಧಿಯು ಆಗಿರುವನು
ಓಂ ಭೀಮಾಯ ನಮಃ - ಪರಿಪೂರ್ಣನು ಆಗಿರುವನು
ಓಂ ಪರಶುಹಸ್ತಾಯ ನಮಃ - ಕೈಯಲ್ಲಿ ಕೊಡಲಿ ಇರುವವನು
ಓಂ ಮೃಗಪಾಣಯೇ ನಮಃ - ಕೈಯಲ್ಲಿ ಜಿಂಕೆ ಹಿಡಿದವನು
ಓಂ ಜಟಾಧರಾಯ ನಮಃ - ಜಟೆಯನ್ನು ಹೊಂದಿರುವವನು
ಓಂ ಕ್ತೆಲಾಸವಾಸಿನೇ ನಮಃ - ಕೈಲಾಸದಲ್ಲಿ ವಾಸಿಸುವವನು
ಓಂ ಕವಚಿನೇ ನಮಃ - ರಕ್ಷಾಕವಚವನ್ನು ಧರಿಸಿದವನು
ಓಂ ಕಠೋರಾಯ ನಮಃ - ತುಂಬಾ ಕಠೋರನು ಆಗಿರುವನು
ಓಂ ತ್ರಿಪುರಾಂತಕಾಯ ನಮಃ - ಮೂರು ನಗರಗಳಲ್ಲಿನ ರಾಕ್ಷಸರನ್ನು ನಾಶಪಡಿಸಿದವನು
ಓಂ ವೃಷಾಂಕಾಯ ನಮಃ - ನಂದಿಯ ಮಿತ್ರನು ಆಗಿರುವನು
ಓಂ ವೃಷಭಾರೂಢಾಯ ನಮಃ - ನಂದಿಯನ್ನು ವಾಹನವಾಗಿ ಇರಿಸಿಕೊಂಡವನು
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ - ತನ್ನ ದೇಹವನ್ನು ಬೂದಿಯಿಂದ ಶೃಂಗರಿಸಿಕೊಂಡವನು
ಓಂ ಸಾಮಪ್ರಿಯಾಯ ನಮಃ - ಸಾಮವೇದವನ್ನು ಇಷ್ಟಪಡುವವನು
ಓಂ ಸ್ವರಮಯಾಯ ನಮಃ - ಎಲ್ಲೆಡೆ ತನ್ನ ಪ್ರಭಾವ ಬೀರಿರುವವನು.
ಓಂ ತ್ರಯೀಮೂರ್ತಯೇ ನಮಃ - ತ್ರಿಮೂರ್ತಿದಾಯಕನು ಆಗಿರುವನು
ಓಂ ಅನೀಶ್ವರಾಯ ನಮಃ - ವಿನಾಶ ಮಾಡುವವನು
ಓಂ ಸರ್ವಙ್ಞಾಯ ನಮಃ - ಎಲ್ಲವನ್ನು ತಿಳಿದವನು
ಓಂ ಪರಮಾತ್ಮನೇ ನಮಃ - ದೈವಿಕ ಆತ್ಮ ಉಳ್ಳವನು
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ - ಚಂದ್ರ, ಸೂರ್ಯ ಮತ್ತು ಕೋಪವನ್ನು ತನ್ನ ಕಣ್ಣುಗಳಂತೆ ಹೊಂದಿರುವವನು
ಓಂ ಹವಿಷೇ ನಮಃ - ಅಗ್ನಿಯಿಂದ ಅರ್ಪಣೆ ಮಾಡಿಸಿಕೊಳ್ಳುವವನು
ಓಂ ಯಙ್ಞಮಯಾಯ ನಮಃ - ಬೆಂಕಿಯಂತೆ ತ್ಯಾಗದ ವ್ಯಕ್ತಿತ್ವದವನು
ಓಂ ಸೋಮಾಯ ನಮಃ - ಜಟೆಯಲ್ಲಿ ಚಂದ್ರನನ್ನು ಧರಿಸಿದವನು
ಓಂ ಪಂಚವಕ್ತ್ರಾಯ ನಮಃ - ಐದು ಕುತ್ತಿಗೆಗಳನ್ನು ಹೊಂದಿರುವವನು
ಓಂ ಸದಾಶಿವಾಯ ನಮಃ - ಸದಾ ಶಾಂತಿಯುತವಾಗಿ ಇರುವವನು
ಓಂ ವಿಶ್ವೇಶ್ವರಾಯ ನಮಃ - ಬ್ರಹ್ಮಾಂಡಕ್ಕೆ ಭಗವಂತನು ಆಗಿರುವನು
ಓಂ ವೀರಭದ್ರಾಯ ನಮಃ - ವೀರಭದ್ರನು ಆಗಿರುವನು
ಓಂ ಗಣನಾಥಾಯ ನಮಃ - ಗಣಗಳ ನಾಯಕ
ಓಂ ಪ್ರಜಾಪತಯೇ ನಮಃ - ಎಲ್ಲ ಜೀವಿಗಳ ಅಧಿಪತಿ
ಓಂ ಹಿರಣ್ಯರೇತಸೇ ನಮಃ - ದೇವರಂತೆ ಹೊಳೆಯುವವನು
ಓಂ ದುರ್ಧರ್ಷಾಯ ನಮಃ - ಅವನ್ನು ನೋಡಲು ಬಹಳ ಕಷ್ಟ
ಓಂ ಗಿರೀಶಾಯ ನಮಃ - ಪರ್ವತಗಳ ರಾಜ
ಓಂ ಗಿರಿಶಾಯ ನಮಃ - ಪರ್ವತಗಳ ಪ್ರಭು
ಓಂ ಅನಘಾಯ ನಮಃ - ದೋಷರಹಿತ
ಓಂ ಭುಜಂಗ ಭೂಷಣಾಯ ನಮಃ - ಹಾವನ್ನು ಆಭರಣವಾಗಿ ಧರಿಸಿದವನು
ಓಂ ಭರ್ಗಾಯ ನಮಃ - ಶಿವನ ಮತ್ತೊಂದು ಹೆಸರು
ಓಂ ಗಿರಿಧನ್ವನೇ ನಮಃ - ಬಿಲ್ಲಿನಂತೆ ಪರ್ವತವನ್ನು ಹೊಂದಿರುವವನು
ಓಂ ಗಿರಿಪ್ರಿಯಾಯ ನಮಃ - ಪರ್ವತಗಳನ್ನು ಪ್ರೀತಿಸುವವನು
ಓಂ ಕೃತ್ತಿವಾಸಸೇ ನಮಃ - ಮರೆಮಾಚುವವನು
ಓಂ ಪುರಾರಾತಯೇ ನಮಃ - ಎಂದೆಂದಿಗೂ ಸಂತೋಷಪಡುವವನು
ಓಂ ಭಗವತೇ ನಮಃ - ಅದ್ಭುತ ಬಿಲ್ಲುಗಾರ
ಓಂ ಪ್ರಮಧಾಧಿಪಾಯ ನಮಃ - ಅವನೇ ಬೃಹತ್ ದೀಪ
ಓಂ ಮೃತ್ಯುಂಜಯಾಯ ನಮಃ - ಸಾವನ್ನೇ ಗೆದ್ದವನು
ಓಂ ಸೂಕ್ಷ್ಮತನವೇ ನಮಃ - ಸೂಕ್ಷ್ಮ ದೇಹವನ್ನು ಹೊಂದಿರುವವನು
ಓಂ ಜಗದ್ವ್ಯಾಪಿನೇ ನಮಃ - ಪ್ರಪಂಚದಾದ್ಯಂತ ವ್ಯಾಪಿಸಿರುವವನು
ಓಂ ಜಗದ್ಗುರವೇ ನಮಃ - ಜಗತ್ತಿನ ಗುರು
ಓಂ ವ್ಯೋಮಕೇಶಾಯ ನಮಃ - ಆಕಾಶದಂಥ ಕೇಶ ರಾಶಿಯನ್ನು ಹೊಂದಿರುವವನು
ಓಂ ಮಹಾಸೇನ ಜನಕಾಯ ನಮಃ -ದೊಡ್ಡ ಸೈನ್ಯವನ್ನು ಸೃಷ್ಟಿಸಬಲ್ಲವನು
ಓಂ ಚಾರುವಿಕ್ರಮಾಯ ನಮಃ - ಸುಂದರ ಮತ್ತು ಶೂರನಾದವನು
ಓಂ ರುದ್ರಾಯ ನಮಃ - ತೀವ್ರ ಕೋಪಗೊಂಡವನು
ಓಂ ಭೂತಪತಯೇ ನಮಃ - ಭೂತ ಭಗವಂತ
ಓಂ ಸ್ಥಾಣವೇ ನಮಃ - ಸ್ಥಿರವಾದವನು
ಓಂ ಅಹಿರ್ಭುಥ್ನ್ಯಾಯ ನಮಃ - ಸರ್ಪವನ್ನು ಧರಿಸಿದವನು
ಓಂ ದಿಗಂಬರಾಯ ನಮಃ - ದಿಕ್ಕುಗಳನ್ನೇ ವಸ್ತ್ರವಾಗಿ ಧರಿಸಿದವನು
ಓಂ ಅಷ್ಟಮೂರ್ತಯೇ ನಮಃ - ಎಂಟು ರೂಪಗಳನ್ನು ಹೊಂದಿರುವವನು
ಓಂ ಅನೇಕಾತ್ಮನೇ ನಮಃ - ಹಲವಾರು ರೂಪಗಳನ್ನು ಹೊಂದಿರುವವನು
ಓಂ ಸ್ವಾತ್ತ್ವಿಕಾಯ ನಮಃ - ಸಾತ್ವಿಕ (ಶಾಂತಿಯುತ)ವಾಗಿರುವವನು
ಓಂ ಶುದ್ಧವಿಗ್ರಹಾಯ ನಮಃ - ಸ್ವಚ್ಛವಾದ ಚಿತ್ರಣವನ್ನು ಹೊಂದಿರುವವನು
ಓಂ ಶಾಶ್ವತಾಯ ನಮಃ - ದೀರ್ಘಕಾಲನು
ಓಂ ಖಂಡಪರಶವೇ ನಮಃ - ಕೊಡಲಿಯಿಂದ ಶಸ್ತ್ರಸಜ್ಜಿತನಾದವನು
ಓಂ ಅಜಾಯ ನಮಃ - ಎಂದಿಗೂ ಗೆಲ್ಲುವವನು
ಓಂ ಪಾಶವಿಮೋಚಕಾಯ ನಮಃ - ಕಷ್ಟಗಳಿಂದ ನಮ್ಮನ್ನು ಮುಕ್ತಗೊಳಿಸುವವನು
ಓಂ ಮೃಡಾಯ ನಮಃ - ಸಾವು ಇಲ್ಲದವನು
ಓಂ ಪಶುಪತಯೇ ನಮಃ - ಸಕಲ ಜೀವಿಗಳಿಗೂ ಪ್ರಭು
ಓಂ ದೇವಾಯ ನಮಃ - ದೇವಾನ್ ದೇವತೆ
ಓಂ ಮಹಾದೇವಾಯ ನಮಃ - ಮಹಾನ್ ದೇವರು
ಓಂ ಅವ್ಯಯಾಯ ನಮಃ - ಎಂದಿಗೂ ಬದಲಾಗದವನು
ಓಂ ಹರಯೇ ನಮಃ - ವಿನಾಶಕನು.
ಓಂ ಪೂಷದಂತಭಿದೇ ನಮಃ - ಪುಷ್ಪದಂತನನ್ನು ಕೊಂದವನು.
ಓಂ ಅವ್ಯಗ್ರಾಯ ನಮಃ - ಆಕ್ರೋಶಗೊಳ್ಳದವನು.
ಓಂ ದಕ್ಷಾಧ್ವರಹರಾಯ ನಮಃ - ದಕ್ಷನ ಮನೆಯನ್ನು ನಾಶಪಡಿಸಿದವನು
ಓಂ ಹರಾಯ ನಮಃ - ನಾಶ ಮಾಡುವವನು
ಓಂ ಭಗನೇತ್ರಭಿದೇ ನಮಃ - ಸೂರ್ಯ, ಚಂದ್ರ ಮತ್ತು ಬೆಂಕಿಯನ್ನು ಕಣ್ಣುಗಳಂತೆ ಹೊಂದಿರುವವನು
ಓಂ ಅವ್ಯಕ್ತಾಯ ನಮಃ - ಸ್ಪಷ್ಟವಾಗಿಲ್ಲದವನು
ಓಂ ಸಹಸ್ರಾಕ್ಷಾಯ ನಮಃ - ಸಾವಿರ ಕಣ್ಣುಗಳನ್ನು ಹೊಂದಿರುವವನು
ಓಂ ಸಹಸ್ರಪಾದೇ ನಮಃ - ಸಾವಿರ ಪಾದಗಳನ್ನು ಹೊಂದಿರುವವನು
ಓಂ ಅಪಪರ್ಗಪ್ರದಾಯ ನಮಃ - ಪೂರ್ಣಗೊಳಿಸಲು ನಮಗೆ ಸಹಾಯ ಮಾಡುವವನು
ಓಂ ಅನಂತಾಯ ನಮಃ - ಅಂತ್ಯವಿಲ್ಲದವನು.
ಓಂ ತಾರಕಾಯ ನಮಃ - ನಕ್ಷತ್ರನಿವನು
ಓಂ ಪರಮೇಶ್ವರಾಯ ನಮಃ - ದೈವಿಕ ಭಗವಂತನೇ ಈ ಶಿವನು ಆಗಿರುವನು.