July 17, 2020

ಶ್ರೀ ಗಣೇಶ ಚತುರ್ಥಿ


ಪ್ರಾಚೀನ ವ್ರತ  ರತ್ನಮಾಲ  ಪುಸ್ತಕದಿಂದ ಸಂಗ್ರಹ

೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ..,
ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..

೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ...

೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ ವ್ರತಾರಂಭ ಮಾಡಿ..

೪. ಗಣಪತಿಯು ರಕ್ತಾಂಭರದಾರಿ ಎನಿಸುವುದರಿಂದ, ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿದ, ವಸ್ತ್ರದ್ವಯವನ್ನೇ ಅರ್ಪಿಸಬೇಕು..!.
ಅರಿಸಿನದ್ದು ಅರ್ಪಿಸಬಹುದು

೫. ಗಣಪತಿಗೆ ತುಲಸೀ ಪೂಜೆ ಮಾಡಬಾರದು, ಎಂಬ ನಿಯಮ ಇದೆ..
ಆದರೆ ವ್ರತಗಳಲ್ಲಿ ಖಂಡಿತಾ ಮಾಡಬಹುದು, ನಿಷೇಧ ಇಲ್ಲ....

೬. ವಾಯನದಾನಕ್ಕೆ ಎರಡು ತೆಂಗಿನಕಾಯಿ, ಐದು ವೀಳ್ಯದೆಲೆ, ಐದು ಅಡಿಕೆ, ಅರ್ಧ ಸೇರು ಅಕ್ಕಿ, ಹಣ್ಣು ಮತ್ತು ಭಕ್ಷ್ಯಗಳ ಜೊತೆಗೆ ಇಟ್ಟು, ಎರಡು ಬಾಳೆ ಎಲೆ ಮುಚ್ಚಿ, ಬ್ರಾಹ್ಮಣರನ್ನು ಪೂರ್ವಕ್ಕೆ ಕೂಡಿಸಿ, ದಾನಿಯು ಉತ್ತರಕ್ಕೆ ಮುಖ ಮಾಡಿ, ಸಂಕಲ್ಪ ಮಾಡಿ ದಾನ ಮಾಡಬೇಕು ...

೭. ಆಚಮನವನ್ನು ಮಾಡುವಾಗ ಪ್ರತಿಯೊಂದು ಸಾರಿಯೂ ಒಂದೊಂದು ನಾಮಕ್ಕೂ, ನಮ್ಮ ದೇಹದ ವಿವಿಧ ಅಂಗವನ್ನು ಸ್ಪರ್ಶಿಸಬೇಕು.., ನಮ್ಮ ಶರೀರದ ಪ್ರತಿಯೊಂದು ಅಂಗಾಂಗದಲ್ಲೂ ಪರಮಾತ್ಮನು ನೆಲೆಸಿದ್ದಾನೆ ಎಂದು ಸೂಚಿಸುವ ಉದಾತ್ತ ತತ್ವವೇ ಆಚಮನ...
ಕೆಲವರು ವ್ರತ ಪ್ರಾರಂಭದಲ್ಲಿ ಮಾತ್ರ ಮಾಡಿ, ನಂತರ ಸುಮ್ಮನೆ ಮಂತ್ರ ಹೇಳಿಕೊಳ್ಳುತ್ತಾರೆ, ಇದು ತಪ್ಪು....

೮. ಮನೆಯಲ್ಲಿ ವ್ರತದ ದಿನ, ಹಗಲಿನಲ್ಲಿ ಮಲಗಬಾರದು, (ಅನಾರೋಗ್ಯಸ್ಥರೂ ಮತ್ತು ವಯಸ್ಸಾದವರು ಮಲಗಬಹುದು)..

೯. ಹಸೀ ಹಾಲನ್ನೇ ಪೂಜೆಗೆ ಬಳಸಬೇಕು..

೧೦. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಳ್ಳಿ...

೧೧. ಗಣಪತಿಗೆ

ಬೆಲ್ಲದ ಅಚ್ಚು / ಪಂಚಕಜ್ಜಾಯ/ ಮೋದಕ/ ಲಾಡು / ಕರಿಗಡುಬು/
ನೇರಳೆಹಣ್ಣು, ಬೇಲದ ಹಣ್ಣು, ಸೀಬೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಚಿಗಳಿ, ತೆಂಬಿಟ್ಟು, ಕಜ್ಜಾಯ, .....
...... ಇತ್ಯಾದಿ ..
ತುಂಬಾ ಇಷ್ಟ ಮತ್ತು ಶ್ರೇಷ್ಠ..!

೧೨.ಬೆಳ್ಳಿಗಣಪತಿಯನ್ನು ಮೊದಲು ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಿ...

೧೩. ೨೧ ಗರಿಕೆಯ, ೨೧ ಕಟ್ಟುಗಳುಳ್ಳ, ಹರಿಸಿನ ಅಥವ ಗಂಧ ಹಚ್ಚಿದ ದಾರದಿಂದ, ಹಾರ ಮಾಡಿ, ಹಾಕಿದರೆ ತುಂಬಾ ವಿಶೇಷ ಫಲ..
ಸಾಧ್ಯವಾಗದವರು ೩೩ ಗರಿಕೆಗಳನ್ನು ಕೈಯಲ್ಲಿ ಹಿಡಿದು..
ಶುಕ್ಲಾಂಭರದರಂ.....................
.................
..............ವಿಘ್ನೋಪ ಶಾಂತಯೇ||
ಈ ಶ್ಲೋಕ ೩೩ ಸಾರಿ ಹೇಳಿ ಗಣಪತಿಗೆ ಅರ್ಪಿಸಿ, ತುಂಬಾ ವಿಶೇಷ...

೧೪. ಪತ್ರೆಗಳು

a. ಗರಿಕೆ : ಇಷ್ಟಾರ್ಥ ಸಿದ್ಧಿ, ಪೂಜೆಯ ನಂತರ ಗರಿಕೆಯನ್ನು ಹಣವಿಡುವ ಜಾಗದಲ್ಲಿ ಇಡಿ, ಮತ್ತು 9 ಗರಿಕೆಯನ್ನು ಕುಡಿಯೋ ನೀರಿಗೆ ಹಾಕಿ...
ಶನೇಶ್ವರ ದೋಷ, ಸಾಡೇಸಾತ್ ನಡೆಯುತ್ತಿರೋರು, ಗರಿಕೆಯಿಂದ ಪೂಜೆ ಮಾಡಿ..
೨. ದವನ ಪತ್ರೆ : ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ ..
೩. ಬಿಲ್ವಪತ್ರೆ : ಋಣಭಾದೆ ರೋಗಭಾದೆ ನಿವಾರಣೆಯಾಗುತ್ತದೆ ..
೪. ಶಮೀ ಪತ್ರೆ : ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತದೆ ..
೫. ಅರಳೀ ಪತ್ರೆ : ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..,
೬. ಉತ್ತರಾಣಿ ಪತ್ರೆ : ವಿದ್ಯಾರ್ಥಿಗಳಿಗೆ ಅತ್ಯಂತ ಶುಭ, ಸಕಲ ವಿದ್ಯಾ ಬುದ್ದಿ ಯೋಗ..
೭. ದರ್ಬೆ : ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ ..
......... ಇತ್ಯಾದಿ.

೧೭. ಹೂವುಗಳು

ಬಿಳಿ ಎಕ್ಕದ ಹೂವು : ಸಮಸ್ತ ರೋಗ ನಿವಾರಣೆ, ಆರೋಗ್ಯ ಭಾಗ್ಯ..
ದ್ರೋಣ ಪುಷ್ಪ : ಶತ್ರು ನಾಷ ಮತ್ತು ನೆಮ್ಮದಿ..
ತುಂಬೆ ಹೂವು : ದೈವಭಲ ಜಾಸ್ತಿಯಾಗುತ್ತದೆ, ಭಕ್ತಿ ಜಾಸ್ತಿ..
ಮಲ್ಲಿಗೆ ಹೂವು : ಸಮಸ್ತವಾದ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ...
ಪಾರಿಜಾತ : ಸರ್ಪದೋಷ ನಿವಾರಣೆ ಮಾಡುತ್ತೆ..
ರುದ್ರಾಕ್ಷಿ ಹೂವು : ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತೆ..
ಕಣಗಲೆ ಹೂವು : ಭಯ ಭೀತಿ ನಿವಾರಣೆ, ಮಾಂತ್ರಿಕ ಭಾದೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿ..
ಸೂರ್ಯಕಾಂತಿ : ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ ಭಾಧೆ ನಿವಾರಣೆ..
..... ಇತ್ಯಾದಿ..

ಹಣ್ಣುಗಳು

ಬಾಳೆಹಣ್ಣು : ಇಷ್ಟಾರ್ಥ ಸಿದ್ಧಿ,
ಯಾಲಕ್ಕಿ ಬಾಳೆಹಣ್ಣು : ನಿಂತು ಹೋದ ಕಾರ್ಯಗಳು ಮುಂದುವರಿಯುತ್ತದೆ, ಶೀಘ್ರವಾಗಿ ನೆರವೇರುತ್ತದೆ ...
ಬಾಳೆಹಣ್ಣು ರಸಾಯನ : ಸಾಲದ ಭಾದೆ ನಿವಾರಣೆ, ಬರಬೇಕಾದ ಹಣ ಬರುತ್ತದೆ,
ಶುಭ ಕಾರ್ಯಕ್ಕೆ ಬೇಕಾದ ಹಣ ಮಂಜೂರ್ ಆಗಿ ಸಿಗುತ್ತದೆ ..
ಪೂರ್ಣಫಲ/ ತೆಂಗಿನಕಾಯಿ : ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆಯೇ ನೆರವೇರುತ್ತದೆ.., ಬಹಳ ಸುಲಭವಾಗಿ ಆಗುತ್ತದೆ, ಸಕಲ ಕಾರ್ಯ ದಿಗ್ವಿಜಯವಾಗುತ್ತದೆ..
೫. ಅಂಜೂರ : ಆರೋಗ್ಯಭಾಗ್ಯ, B.P, ನಾರ್ಮಲ್ ಆಗುತ್ತದೆ..,
ನೇರಳೆ ಹಣ್ಣು ; ಬೆನ್ನು ನೋವು, ಮಂಡೀ ನೋವು, ಸೊಂಟದ ನೋವು ವಾಸಿಯಾಗುತ್ತದೆ, ಶನಿಕಾಟ ನಿವಾರಣೆಯಾಗುತ್ತದೆ ..
ಸೀಬೆಹಣ್ಣು : ಎಲ್ಲರಿಂದಲೂ ರಾಜಗೌರವ, ಸತ್ಕಾರ ಸಿಗುತ್ತದೆ, ಉದರವ್ಯಾಧಿ ನಿವಾರಣೆಯಾಗುತ್ತದೆ ..
ವಿವಾಹ ಭಾಗ್ಯವಾಗುತ್ತದೆ..,
ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವಾಗುತ್ತದೆ ...
.......ಇತ್ಯಾದಿ ..

ಭಕ್ಷ್ಯಗಳು 

ಮೋದಕ : ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ.., ಜಾತಕ ದೋಷಗಳು ನಿವಾರಣೆಯಾಗುತ್ತದೆ.

ಲಾಡು : ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ, ವಿವಾಹ ಭಾಗ್ಯವಾಗುತ್ತದೆ ...
ಕರಿಗಡುಬು : ಸರ್ವರಿಗೂ ಆರೋಗ್ಯ ಭಾಗ್ಯ , ಮತ್ತು ಲಕ್ಷ್ಮೀ ಪ್ರಾಪ್ತಿ..
ಅಪ್ಪಂ ಅಥವಾ ಕಜ್ಜಾಯ : ಹಿರಿಯರ ಶಾಪ ನಿವಾರಣೆ,
ಒಬ್ಬಟ್ಟು : ಕುಜದೋಷ ನಿವಾರಣೆಯಾಗುತ್ತದೆ, ವಿವಾಹದ ದೋಷಗಳು ನಿವಾರಣೆಯಾಗುತ್ತದೆ ...
ಬೆಲ್ಲದ ಅಚ್ಚು ; ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಶುಗರ್ control, ಆಗುತ್ತೆ, ಅಧಿಕ ಲಾಭವಾಗುತ್ತೆ, ಅಪಮೃತ್ಯು ನಿವಾರಣೆಯಾಗುತ್ತದೆ ..
ಪಂಚಕಜ್ಜಾಯ : ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ,
ಇಷ್ಟಾರ್ಥ ಸಿದ್ಧಿ,
ಶನಿ ದೋಷ, ರಾಹು ದೋಷ ನಿವಾರಣೆ, .. ಸರ್ವತಾ ಅಭಿವೃದ್ಧಿ..






ಗಣಪತಿಗೆ 21 ನಮಸ್ಕಾರಗಳು ಏಕೆ ಮಾಡಬೇಕು. 

ನಮ್ಮ ದೇಹದಲ್ಲಿರುವ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವುಗಳು ವೃದ್ಧಿಯಾಗಲು ಮಾಡುತ್ತೇವೆ. ಎಡಗೈಯಿಂದ ಬಲ ಕಿವಿ, ಬಲಗೈಯಿಂದ ಎಡ ಕಿವಿ ಹಿಡಿದುಕೊಂಡು ದೇಹ ನೇರವಾಗಿ ಕುಳಿತು ಹೇಳಬೇಕು.
5 ಪಂಚ ಭೂತಗಳು (ಭೂಮಿ, ನೀರು, ಅಗ್ನಿ, ವಾಯು, ಆಕಾಶ)

5 ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ)
5 ಕರ್ಮೇಂದ್ರಿಯಗಳು (ಕೈ, ಕಾಲು, ಬಾಯಿ, ಗುದ, ಗುಹ್ಯ)
5 ಪಂಚ ತನ್ಮ0ತೃಗಳು ( ರೂಪ, ಶಬ್ಧ, ಗಂಧ, ರಸ, ಸ್ಪರ್ಶ) 

1 ಮನಸು.
14ವರ್ಷದ ಮಕ್ಕುಳು 14 ನಮಸ್ಕಾರ, 14ಕ್ಕೆ ಮೇಲ್ಪಟ್ಟುವರು 21 ನಮಸ್ಕಾರ ಮಾಡಿದರೆ ಒಳ್ಳೇದು. ಮದುವೆ ಆದಂತಹವರು ಉತ್ತರ ದಿಕ್ಕಿಗೆ ಮುಖಮಾಡಿ ಹಾಗೂ ವಯಸ್ಕರು ಮತ್ತು ಮಕ್ಕಳು ಪೂರ್ವದಿಕ್ಕೆಗೆ ಮುಖ ಮಾಡಿ ಗಣೇಶ ನಮಸ್ಕಾರ ಮಾಡಿದರೆ ಒಳ್ಳೇದು.

*********

ಗರಿಕೆಯ ಹಿನ್ನೆಲೆ ಮತ್ತು ಮಹತ್ವ

ಗರಿಕೆ ಹುಲ್ಲಿಗೆ ಪೂಜೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ನೀಡಲಾಗುತ್ತದೆ. ಗರಿಕೆಯು ದೇವರಾದ ಶಿವ, ದೇವಿ ಶಕ್ತಿ ಮತ್ತು ಗಣೇಶ ದೇವರನ್ನು ಒಟ್ಟಾಗಿ ಸೇರಿಸುತ್ತದೆ. 
ಹಿಂದೂ ಧರ್ಮದಲ್ಲಿ ಗರಿಕೆಯಿಲ್ಲದೆ ಯಾವ ಪೂಜೆಯು ಸಂಪೂರ್ಣವಾಗುವುದಿಲ್ಲ. ಪವಿತ್ರವಾದ ಗರಿಕೆಯನ್ನು ಮೊದಲು ಪೂಜಿತನಾದ ಗಣೇಶನಿಗೆ ಅರ್ಪಿಸಲೇಬೇಕು. ಪೂಜೆಯಲ್ಲಿ ಪವಿತ್ರವಾದ ಸ್ಥಾನವನ್ನು ಮೊದಲು ತುಳಸಿ ಗಿಡಕ್ಕೆ ನೀಡಲಾಗಿದೆ. ತುಳಸಿಯ ನಂತರ ಗರಿಕೆ ಹುಲ್ಲಿಗೆ ಎರಡನೇ ಸ್ಥಾನ ನೀಡಲಾಗಿದೆ. ತುಳಸಿ ಮತ್ತು ಗರಿಕೆ ಎರಡೂ ಸಹ ಪವಿತ್ರವೆಂದು ಭಾವಿಸಲಾಗಿದೆ. ಗಣೇಶನ ಪೂಜೆಯಲ್ಲಿ ಗರಿಕೆಯು ವಿಶೇಷ ಸ್ಥಾನವನ್ನು ಪಡೆದಿದೆ.
ಗರಿಕೆಯು ಎಲೆಗಳು ಮೂರು ಕತ್ತಿಗಳ ಆಕಾರದ ರೀತಿಯಲ್ಲಿ ಮೊದಲು ಚಿಗುರೊಡೆಯುತ್ತವೆ. ಆ ಮೂರು ಗರಿಕೆಯ ಎಲೆಗಳು ಸಹ ಮೂರು ದೇವ ತತ್ವಗಳಾದ ಶಿವ, ಶಕ್ತಿ,ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ.
ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ ಹಾಗೆ ದೇವರ ತತ್ವಗಳನ್ನು ನೀರಿನ ಹನಿಗಳ ಮೂಲಕ ಗರಿಕೆಯ ಎಲೆಗಳಿಗೆ ಹೀರಿಕೊಳ್ಳುವ ಸಾಮರ್ಥ್ಯ ಇದೆ. 21 ಗರಿಕೆಯನ್ನು ಗಣೇಶ ದೇವನಿಗೆ ಪೂಜೆ ಮಾಡುವಾಗ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟವನ್ನು ಹೊತ್ತು ತರುವುದು ಎಂದು ನಂಬಲಾಗಿದೆ.

ಗರಿಕೆಯ ಗಿಡವನ್ನು ಗುರುತಿಸುವುದು ಹೇಗೆ ?

ಗರಿಕೆಯು ಒಂದೇ ಬೇರಿನಲ್ಲಿ ಮೊದಲು ಮೂರು ಉದ್ದನೆಯ ಎಲೆಗಳಾಗಿ ಬೆಳೆದು ನಂತರ ಮೂರ್ನಾಲ್ಕು ಗಂಟುಳಾಗಿ ಅಲ್ಲಿಂದ ಎಲೆಗಳು ಚಿಗುರೊಡೆದು ಮತ್ತೆ ಉದ್ದಕ್ಕೆ ಬೆಳೆಯುತ್ತವೆ. ಗರಿಕೆಯ ಎಲೆಯನ್ನು ನೀವು ಒಂದು ವೇಳೆ ಪೂಜೆಗೆ ಕಿತ್ತರೂ ಸಹ ಅದು ಬೇಗ ಬೇಗನೇ ಚಿಗುರೊಡೆದು ಮರುಹುಟ್ಟು ಪಡೆದು ಪುನರ್ಜೀವ ಪಡೆಯುವುದು.

ಎಂತಹ ಗರಿಕೆಯನ್ನು ಗಣೇಶನಿಗೆ ಅರ್ಪಿಸಬಾರದು ?



ಗಣೇಶನಿಗೆ ಹೂವು ಹೊಡೆದ ಗರಿಕೆಯನ್ನು ಅರ್ಪಿಸಬಾರದು. ಯಾಕೆಂದರೆ ಎಲೆಗಳು ಹಣ್ಣಾಗಿ ಹೋಗಿರುತ್ತವೆ ಬಣ್ಣವೂ ಸ್ವಲ್ಪ ಬದಲಾಗುತ್ತದೆ. ಆದ್ದರಿಂದ ಅಂತಹ ಹಣ್ಣಾಗಿ ಹೂವು ಬಿಟ್ಟ ಗರಿಕೆಯ ಹುಲ್ಲನ್ನು ಪೂಜೆಗೆ ಬಳಸಬಾರದು. ಗರಿಕೆಯಲ್ಲಿರುವ ಜೀವಶಕ್ತಿಯ ಉಲ್ಲಾಸ ಕೂಡ ಕಡಿಮೆಯಾಗಿರುತ್ತದೆ. ಗರಿಕೆಯಲ್ಲಿರುವ ದೇವತೆಗಳನ್ನು ಆಕರ್ಷಿಸುವ ಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಆಗಿರುವುದು. ಆದ್ದರಿಂದ ಹೂವು ಹೊಡೆದ ಗರಿಕೆಯು ಪೂಜೆಗೆ ಬಳಸಬಾರದು.

********

ತುಳಸಿಯನ್ನು ನೇರವಾಗಿ ಗಣಪತಿಗೆ ಅರ್ಪಿಸಬಾರದು. 
ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. 
ಬ್ರಹ್ಮ ವೈವರ್ತ ಪುರಾಣದಲ್ಲಿ ಹೀಗೊಂದು ಕಥೆಯಿದೆ. ತುಳಸಿಯು ಗಣಪತಿಯನ್ನು ನೋಡಿ ಬಹಳ ಮೋಹಿತಳಾಗುತ್ತಾಳೆ. ಆದರೆ ಗಣಪತಿಯು ಪರಮ ವೈರಾಗ್ಯ ಮೂರ್ತಿಯಾಗಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆಗ ತುಳಸಿಯು ಅವನನ್ನು ಒಲಿಸಿಕೊಳ್ಳಲು ಬಹಳ ಪ್ರಯತ್ನವನ್ನು ಪಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೆ ಇದ್ದಾಗ ತುಳಸಿಯು ಕಾಮನ ಸಹಾಯವನ್ನು ಕೇಳುತ್ತಾಳೆ. ಆಗ ಕಾಮನೂ ಗಣಪತಿಯ ವೈರಾಗ್ಯವನ್ನು ಹಾಳು ಮಾಡಲು ಪರಿಪರಿಯಾಗಿ ಪ್ರಯತ್ನಿಸುತ್ತಾನೆ. ಆದರೆ ಗಣಪತಿಯು ಕಾಮನ ಯಾವುದೇ ಬಾಣಗಳಿಗೆ ಸೋಲುವುದಿಲ್ಲ. ಆಗ ಸೋತ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗೆ ಗಣಪತಿಯು ಇಕ್ಷುಚಾಪನಾದ ಕಾಮನನ್ನು ಗೆಲಿದವನು. ಮುಂದೆ ಸಿಟ್ಟಾದ ತುಳಸಿ ಗಣಪತಿಗೆ ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿದ್ದೀ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ನಡೆಯುವ ಯುದ್ಧದಲ್ಲಿ ನಾಶವಾಗಲಿ ಎಂದು ಶಾಪವನ್ನು ಕೊಡುತ್ತಾಳೆ. ಆಗ ಸಿಟ್ಟಾದ ಗಣಪತಿಯು ನೀನು ವೃಕ್ಷವಾಗಿ ಹುಟ್ಟು ಎಂದು ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯನ್ನು ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ವೃಕ್ಷವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿ ಹಾಕಬಾರದು ಎಂದು ಸಂಪ್ರದಾಯ ಬಂದಿದೆ. ವಾದಿರಾಜರೂ ತಮ್ಮ ಲಕ್ಷ್ಮೀಶೋಭಾನೆಯಲ್ಲಿ ಲಕ್ಷ್ಮಿಯು ಹಿಡಿದ ಹಾರದಲ್ಲಿ ತುಳಸಿಯು ಇರುವುದರಿಂದ ಇದು ಗಣಪತಿಗೆ ಯೋಗ್ಯವಲ್ಲ ಎಂದು ಯೋಚಿಸುತ್ತಾಳೆ ಎಂದು ಹೇಳಿದ್ದಾರೆ. (ಬಹಳ ಹಿಂದೆ ಇಲ್ಲಿ ಗಣಪತಿಗೆ ತುಳಸಿ ಯಾಕೆ ಹಾಕಬಾರದು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೇರಿ ಈ ಲೇಖನ) ಅನೇಕ ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. ಆದರೆ ನೇರವಾಗಿ ಅರ್ಪಿಸಬಾರದು.

ಸಂಗ್ರಹ -ಶ್ರೀಪ್ರಸನ್ನ
*********

ಗಣಪತಿ ಬಪ್ಪಾ ಮೋರ್ಯ - ಇದರ ಅರ್ಥ

ಗಣಪತಿ ಅಂದ್ರೆ ಗಣೇಶ, ಬಪ್ಪ ಅಂದ್ರೆ ದೊಡ್ಡಣ್ಣ(ದೊಡ್ಡವ)
ಮೊರ್ಯ?
ಮೋರ್ಯ ಅನ್ನೋದು ಮಹಾರಾಷ್ಟ್ರದ ಪುಣೆಯ ಸಮೀಪ ಚಿಂಚಾವಾಡ ದ ಹತ್ತಿರ 12ನೆ ಶತಮಾನದಲ್ಲಿ ಬದುಕಿದ್ದ ಮೋರ್ಯ_ಗೋಸಾವಿ ಎಂಬ ಶ್ರೇಷ್ಠ ಸಂತನ ಹೆಸರು . ಅವನೊಬ್ಬ ಶ್ರೇಷ್ಠ ಗಣೇಶನ ಭಕ್ತನಾಗಿದ್ದ. ಅವನ ಮರಣಾನಂತರ ಅವನ ಹೆಸರಿನ ಮೋರ್ಯ ಎಂಬ ಪದ ಗಣಪತಿ ಬಪ್ಪ ಮೋರ್ಯ ಅಂತ ಉಳಿಯಿತು..

ಗಣಪತಿ ಬಪ್ಪಾ ಮೋರ್ಯ

ಮೋರಯಾ ಅಂದರೆ ಸಮೋರ ಯಾ ಅಂದರೆ ಮುಂದೆ ಬಾ ಅಂತ ಸಮೋರ ಶಬ್ದ ದ ತದ್ಭವ ಮೋರ ಯಾ ಮುಂದೆ ಬಂದು ಆಶೀರ್ವದಿಸು


ಹರಿ ಓಂ
********

ಗಣೇಶ ಚತುರ್ಥಿ 

ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ.ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ,ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಗಣಪತಿ ಪೂಜೆ (ಕೆಲವು ಮಾಹಿತಿಗಳು)

ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ |

ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ: ಸೀದ ಸಾಧನಂ || (ಯಜುರ್ವೇದ ಸಂಹಿತೆ)

ತ್ವಮೇವ ಕೇವಲಂ ಕರ್ತಾಸಿ ತ್ವಮೇವ ಕೇವಲಂ ಧರ್ತಾಸಿ ತ್ವಮೇವ ಕೇವಲಂ ಹರ್ತಾಸಿ ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ತ್ವಂ ಸಾಕ್ಷಾದಾತ್ಮಾಸಿ ಆತ್ಮಂ ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್. ಗಣೇಶಾಥರ್ವಶೀರ್ಷದಲ್ಲಿ ಹೀಗೆ ಆತನನ್ನು ವರ್ಣಿಸಿದೆ.

ಗಣೇಶನು ಶಿವನ ಗಣಗಳ ಅಧಿಪತಿ. ಸ್ವರ್ಣಗೌರಿಯ ಪ್ರೀತಿಯ ಪುತ್ರ. ವಿಘ್ನ ವಿನಾಶಕ ವಿನಾಯಕ.

ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗುದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು.

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಇದರ ಬಗೆಗಿನ ಕಥೆ ಎಲ್ಲರಿಗೂ ತಿಳಿದಿರುವುದೇ.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ,ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದ ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.

ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

*********

" ಶ್ರೀ ಗಣೇಶ ಕಥಾ "

ಗಣಪತಿಯು ಪರಮಾತ್ಮನ ಮಹಾಭಕ್ತನಾಗಿದ್ದು; ಭಕ್ತರ ಸಕಲೇಷ್ಟಗಳನ್ನು ಪೂರೈಸುವವನಾಗಿದ್ದಾನೆ. ಗಣಪತಿಗೆ ಪ್ರಿಯವಾದ ತಿಥಿಯು ಚತುರ್ಥಿಯು. ಅದರಲ್ಲಿಯೂ ಭಾದ್ರಪದ ಶುಕ್ಲ ಚತುರ್ಥಿಯು ಅತ್ಯಂತ ಪ್ರಿಯವಾದುದು. ಅಂದು ಯಾರು ಭಕ್ತಿಯಿಂದ ಗಣಪತಿಯ ಅಂತರ್ಯಾಮಿಯಾದ ಶ್ರೀ ವಿಶ್ವನಾಮಕ ಜಾಗ್ರದಾವಸ್ಥಾ ಪ್ರೇರಕನನ್ನು ಪೂಜಿಸುವರೋ ಅವರಿಗೆ ಅಂತರ್ಯಾಮಿ ಸಕಲೇಷ್ಟಗಳನ್ನೂ ಕೊಡುತ್ತಾನೆ.

ಈ ಚತುರ್ಥಿಯಂದು ಶುದ್ಧರಾಗಿ ಬೆಳ್ಳಿ ಅಥವಾ ಮಣ್ಣಿನ ಪ್ರತಿಮೆಯನ್ನಾಗಲೀ ಮಾಡಿಸಿ ಆ ಪ್ರತಿಮೆಯಲ್ಲಿ ಗಣಪತಿಯ ಅಂತರ್ಯಾಮಿಯಾದ ವಿಶ್ವನನ್ನು ಪೀಠ ಪೂಜಾ ಪೂರ್ವಕವಾಗಿ ಆವಾಯಿಸಿ ಪೂಜಿಸಿದರೆ ಸಮಸ್ತ ಸಂಕಷ್ಟಗಳಿಂದ ಮುಕ್ತರಾಗುವರು. ಈ ವ್ರತಾಚರಣೆಯಿಂದ ಅಪವಾದಗಳನ್ನು ಪರಿಹರಿಸಿಕೊಳ್ಳಬಹುದು.

ಚತುರ್ಥ್ಯಾಂ ಶುಕ್ಲ ಪಕ್ಷೇ ತು ಕಾರ್ಯ೦ ಗಾಣೇಶ್ವರಂ ವೃತಮ್ ।
ಅಪವಾದ ಹರಂ ಚೈವ ಸರ್ವ ಸಂಕಷ್ಟ ನಾಶನಮ್ ।।

ಈ ವ್ರತವನ್ನು ಯಾರು ಮೊದಲು ಆಚರಿಸಿದರು?

ಈ ವ್ರತದ ಆಚರಣೆಯಿಂದ ಅಪವಾದವು ಹೇಗೆ ಪರಿಹಾರ ಹೊಂದುವುದು?

ತಿಳಿಸಿ ಎಂದು ಶ್ರೀ ಶೌನಕರು, ಶ್ರೀ ಸೂತ ಪುರಾಣಿಕರನ್ನು ಕೇಳಿದರು.

ಕೇನ ಚಾದೌ ಪುರಾ ಚೀರ್ಣ೦ ಮರ್ತ್ಯಲೋಕೇ ಕಥ೦ ಗತಮ್ ।।

ಶ್ರೀ ಸೂತ ಪುರಾಣಿಕರು ಹೀಗೆಂದರು...

ಈ ವ್ರತವನ್ನು ಮೊದಲು ಶ್ರೀ ಕೃಷ್ಣ ಪರಮಾತ್ಮನೇ ಆಚರಿಸಿ ತನಗೆ ಬಂದ ಅಪವಾದನ್ನು ಪರಿಹರಿಸಿ ಕೊಂಡಿರುವನು.

ಚಕ್ರೇ ವ್ರತಂ ಜಗನ್ನಾಥೋ ವಾಸುದೇವಃ ಪ್ರತಾಪವಾನ್ ।
ಆದಿಷ್ಟೋ ನಾರದೇನೈವ ವೃಥಾಲಾಂಛನ ಮುಕ್ತಯೇ ।।

ಶ್ರೀ ಶೌನಕರು..

ಜಗನ್ನಾಥನಾದ ಶ್ರೀ ಕೃಷ್ಣನಿಗೆ ಅಪವಾದ ಬಂದದ್ದಾದರೂ ಹೇಗೆ? ಎಂದು ಕೇಳಿದರು. ಅದಕ್ಕೆ ಶ್ರೀ ಸೂತ ಪುರಾಣಿಕರು...

ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನ ಮಾಡಿದ್ದರಿಂದ " ಮಣಿಗಳ್ಳ " ನೆಂಬ ಅಪವಾದಕ್ಕೆ ಗುರಿಯಾದನು.

ಭಾದ್ರಪದ ಶುಕ್ಲ ಚತುರ್ಥಿಯಂದು ಯಾರು ಚಂದ್ರನನ್ನು ನೋಡುವರೋ ಅವರು ಮಿಥ್ಯಾಪವಾಡದಿಂದ ದೂಷಿತರಾಗಲಿ ಎಂದು ಗಣಪತಿಯ ಶಾಪವಿರುತ್ತದೆ. ಆದುದರಿಂದ ಆ ದಿನವೂ ಚಂದ್ರ ದರ್ಶನ ನಿಷಿದ್ಧವಾಗಿದೆ.

ಕನ್ಯಾದಿತೇ ಚತುರ್ಥ್ಯಾಂ ತು ಶುಕ್ಲ ಚಂದ್ರಸ್ಯ ದರ್ಶನಮ್ ।
ಮಿಥ್ಯಾ ದೂಷಣಂ ಕುರ್ಯಾತ್ ತಸ್ಮಾತ್ ಪಶ್ಯೇನ್ನ ತ ತದಾ ।।

ಶ್ರೀ ಶೌನಕರು..

ಚಂದ್ರನಿಗೆ ಗಣಪತಿಯು ಶಾಪ ಕೊಡಲು ಕಾರಣವೇನೆಂಬುದನ್ನು ಸವಿಸ್ತಾರವಾಗಿ ತಿಳಿಸಿರಿ ಎಂದು ಕೇಳಿದರು.

ಕಿಮರ್ಥಂ ಗಣನಾಥೇನ ಶಪ್ತಶ್ಚಂದ್ರ: ಸುಧಾಮಯಃ ।
ಏತದಾಖ್ಯಾನಕಂ ಶ್ರೇಷ್ಠ೦ ಯಥಾವದ್ವಕ್ತುಮರ್ಹಸಿ ।।

ಹಿಂದೆ ಶ್ರೀ ರುದ್ರದೇವರು ಮತ್ತು ಶ್ರೀ ಚತುರ್ಮುಖ ಬ್ರಹ್ಮದೇವರು ಗಣಪತಿಗೆ ಮಹಿಮಾ ಮೊದಲಾದ ಅಷ್ಟ ಸಿದ್ಧಿಗಳನ್ನು ಅನುಗ್ರಹಿಸಿದರು. ಹಾಗೆಯೇ ಶ್ರೀ ಚತುರ್ಮುಖ ಬ್ರಹ್ಮದೇವರು ಲೋಕ ಶಿಕ್ಷಣಾರ್ಥವಾಗಿ ಸ್ತುತಿಸಿದರು.

ಶ್ರೀ ಚತುರ್ಮುಖ ಬ್ರಹ್ಮದೇವರು ಮಾಡಿದ ಗಣಪತಿಯ ಸ್ತುತಿಯು ಮಿಶ್ರ ಸ್ತುತಿಯಾಗಿದ್ದೂ; ಮುಖ್ಯವಾಗಿ ಗಣಪತಿ ಅಂತರ್ಯಾಮಿಯಾದ ಶ್ರೀ ವಿಶ್ವ೦ಭರ ಸ್ತೋತ್ರವಾಗಿದೆ. ಈ ಸ್ತೋತ್ರದಿಂದ ಸಂತುಷ್ಟನಾದ ಗಣಪತಿಯು ಶ್ರೀ ಚತುರ್ಮುಖ ಬ್ರಹ್ಮದೇವರಿಗೆ ಸೃಷ್ಠಿ ಮಾಡುವಾಗ ಯಾವುದೇ ವಿಘ್ನ ಉಂಟಾಗದಿರಲಿ ಎಂದು ಅನುಗ್ರಹಿಸಿದನು.

ಇದರರ್ಥವು ಜನರು ಯಾವುದೇ ಕಾರ್ಯವನ್ನು ಪ್ರಾರಂಭಿಸುವಾಗ ಗಣಪತಿಯನ್ನು ಪೂಜಿಸಿದರೆ ನಿರ್ವಿಘ್ನತೆ ಉಂಟಾಗುತ್ತದೆ.

ಹೀಗೆ ವರವನ್ನು ನೀಡಿ ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಚಂದ್ರನಿಗೆ ನಾನೇ ಸುಂದರನೆಂಬ ಮಡವೂ ಈ ಅಪಹಾಸ್ಯಕ್ಕೆ ಕಾರಣವಾಗಿದ್ದಿತು!

ಚಂದ್ರಲೋಕಂ ಸಮಾಸಾದ್ಯ ಸ್ಖಲಿತೋ ಗಣನಾಯಕಃ ।
ಉಪಹಾಸಂ ಸಮಾಚಕ್ರೇ ಸೋಮೋ ರೂಪ ಮದಾನ್ವಿತಃ ।।

ಚಂದ್ರನ ಉಪಹಾಸದಿಂದ ಕೋಪಗೊಂಡ ಗಣಪತಿಯು ಹೀಗೆ ಶಾಪವಿತ್ತನು...

ನೀನು ಅತ್ಯಂತ ಸುಂದರನೆಂದು ಅಹಂಕಾರಿಯಾಗಿರುವೆ. ಆದ್ದರಿಂದ ಅವಮಾನವನ್ನು ಮಾಡಿರುವೆ. ಇದಕ್ಕಾಗಿ ನಿನ್ನನ್ನು ಶಪಿಸುವೆ. ಇಂದಿನಿಂದ ಜನರು ನಿನ್ನನ್ನು ನೋಡುವುದೇ ಬೇಡ! ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲೀ ಎಂದ!

ಆದ್ಯ ಪ್ರಭೃತಿ ಲೋಕಸ್ಥಾ೦ ನ ಹಿ ಪಶ್ಯತಿ ಪಾಪಿನಂ ।
ಯೇ ಪಶ್ಯಂತಿ ಪ್ರಮಾದೇನ ತ್ವಾ೦ ನಾರಾ ಮೃಗಲಾಂಚನಮ್ ।।
ಮಿಥ್ಯಾಭಿಶಾಪ ಸಂಯುಕ್ತಾ: ಭವಿಷ್ಯಂತಿ ಹಿ ತೇ ಧ್ರುವಮ್ ।।

ಈ ಶಾಪದಿಂದ ಚಂದ್ರನು ದುಃಖಿತನಾದನು. ನನ್ನ ಸೌಂದರ್ಯವನ್ನು ಜನರು ನೋಡದೆ ಇದ್ದರೆ ಆ ಸೌಂದರ್ಯವಿದ್ದೂ ವ್ಯರ್ಥವೇ ಸರಿ ಎಂದು ತಿಳಿದು ಗಣಪತಿಯನ್ನು ಶಾಪ ನಿವೃತ್ತಿಗಾಗಿ ಭಕ್ತಿಯಿಂದ ಸ್ತೋತ್ರ ಮಾಡಿದನು.

ಪ್ರಸೀದ ದೇವೇಶ ಜಗನ್ನಿವಾಸ ಗಣೇಶ ಲಂಬೋದರ ವಕ್ರತುಂಡ ।
...... ಪೂಜ್ಯಮಾನ ಕ್ಷಮಸ್ವ ಮೇ ಗರ್ವ ಕೃತಂ ಚ ಹಾಸ್ಯ೦ ।।

ಇದೆ ಮೊದಲಾದ ಸ್ತೋತ್ರಗಳಿಂದ ಸಂತುಷ್ಟನಾದ ಗಣಪತಿಯು ಹೀಗೆ ಶಾಪವನ್ನು ಸಂಕೋಚಗೊಳಿಸಿದನು.

" ಭಾದ್ರಪದ ಶುದ್ಧ ಚತುರ್ಥಿಯಂದು ಯಾರು ನಿನ್ನನ್ನು ನೋಡುವರೋ ಅವರಿಗೆ ಮಾತ್ರ ಮಿಥ್ಯಾಪವಾದ ಉಂಟಾಗುತ್ತದೆ. ಬೇರೇ ಸಮಯದಲ್ಲಿ ನೋಡಲಡ್ಡಿಯಿಲ್ಲ " ಎಂದ.

ಶುಕ್ಲ ಪಕ್ಷೇ ಚತುರ್ಥ್ಯಾಂ ತು ಯೇ ಪಶ್ಯಂತಿ ಸದೈವ ಹಿ ।
ಮಿಥ್ಯಾಪವಾದಂ ಮಾಸಾಂತೇ ಪ್ರಾಪ್ಯಂತೇsತ್ರ ನ ಸಂಶಯಃ ।।

ಭಾದ್ರಪದ ಶುಕ್ಲ ಚತುರ್ಥಿಯಂದು ಯಾರು ತಿಳಿದೋ - ತಿಳಿಯದೋ ಚಂದ್ರನ ದರ್ಶನ ಮಾಡಿದರೆ ತಿಂಗಳು ಕಳೆಯುವುದರೊಳಗಾಗಿ ಮಿಥ್ಯಾಪವಾದಕ್ಕೆ ಗುರಿಯಾಗುತ್ತಾರೆ. ಈ ವಿಷಯದಲ್ಲಿ ಸಂಶಯವಿಲ್ಲ!

ಮಾಸಾದೌ ಪೂರ್ವಮೇವ ತ್ವಾ ದೃಷ್ಟ್ವಾ ಪಶ್ಯಂತಿ ಮಾನವಾ: ।
ಚತುರ್ಥ್ಯಾಂ ಶುಕ್ಲ ಪಕ್ಷೇ ತು ತೇಷಾ೦ ದೋಷೋ ನ ವಿದ್ಯತೇ ।।

ಭಾದ್ರಪದ ಮಾಸದ ಶುಕ್ಲ ಪಕ್ಷ ದ್ವಿತೀಯಾ ಚಂದ್ರನನ್ನು ನೋಡಿದವರಿಗೆ ಚತುರ್ಥಿ ಚಂದ್ರನ ದರ್ಶನವಾದರೂ ಮಿಥ್ಯಾಪವಾದ ಬರುವುದಿಲ್ಲ!

ಸ್ಯಮಂತಕೋಪಾಖ್ಯಾನವು ಭಗವಂತನ ಮಹಿಮಾ ಪ್ರದರ್ಶನ ಪೂರ್ವಕ ಜಾಂಬವತೀ ಹಾಗೂ ಸತ್ಯಭಾಮಾದೇವಿಯರ ಮಂಗಳ ವಿವಾಹವನ್ನು ವರ್ಣಿಸುವುದರಿಂದ ಆ ದೋಷವು ಪರಿಹಾರವಾಗುವುದು.

ಸ್ಯಮಂತಕೋಪಾಖ್ಯಾನವನ್ನು ಶ್ರವಣ ಮಾಡಲು ಅನುಕೂಲವಿಲ್ಲದಿದ್ದಾಗ ಭಗವಂತನಿಂದ ಹೇಳಲ್ಪಟ್ಟ ಸ್ಯಮಂತಕೋಪಾಖ್ಯಾನ ಸಂಗ್ರಹಾತ್ಮಕವಾದ ಈ ಶ್ಲೋಕವನ್ನಾದರೂ ಜಪಿಸಬೇಕು.

ಸಿಂಹಃ ಪ್ರಸೀನಮವಧೀತ್ ಸಿಂಹೋ ಜಾಂಬವತಾ ಹತಃ ।
ಸುಕುಮಾರಕಮಾರೋಧೀಸ್ತವಹ್ಯೇಷಃ ಸ್ಯಮಂತಕಃ ।।

********


"ಸ್ಯಮಂತಕೋಪಾಖ್ಯಾನ" –

ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: ||
ನೈಮಿಷಾರಣ್ಯದಲ್ಲಿ ಒಮ್ಮೆ ಸೂತಪುರಾಣಿಕರನ್ನು ಶೌನಕಾದಿಗಳು ಗಣಪತಿಯ ಕಥೆಯನ್ನು ಹೇಳಿದಾಗ, ಅವರು ಹೇಳಿದರು – ಪೂರ್ವದಲ್ಲಿ ಶ್ರೀಕೃಷ್ಣ ಪರಮಾತ್ಮನೇ ತನಗೆ ಬಂದ ಅಪವಾದವನ್ನು ಪರಿಹರಿಸಿಕೊಳ್ಳಲು ಈ ವ್ರತವನ್ನು ಮಾಡಿದನೆಂದರು.
ಆಗ ಶೌನಕರು ಪ್ರಶ್ನಿಸುತ್ತಾರೆ – ಜಗನ್ನಿಯಾಮಕನಾದ ಶ್ರೀಕೃಷ್ಣನಿಗೆ ಅಪವಾದವೇ? ಅದು ಹೇಗೆ ಸಾಧ್ಯ? ಅದನ್ನು ವಿವರಿಸಿ ಹೇಳಲು ಬಯಸಿದಾಗ ಸೂತರು ಹೇಳುತ್ತಾರೆ –
ಭಾದ್ರಪದ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನವನ್ನು ಮಾಡಿದ್ದರಿಂದ ಸ್ಯಮಂತಕ ಮಣಿ ಕಳ್ಳನೆಂಬ ಅಪಖ್ಯಾತಿಗೆ ಗುರಿಯಾದನು. (ಕೃಷ್ಣನಿಗೆ ಅಪವಾದವೇ? ಇಲ್ಲಿ ಕೃಷ್ಣ ಇದರ ಮಹತ್ವ ತಿಳಿಸಲು ಆದರೆ ಅಪವಾದವನ್ನು ಸ್ವೀಕರಿಸಿದನೇ ಹೊರತು ಅವನಿಗೆ ಯಾವುದೇ ದೋಷವಿಲ್ಲ)
ಒಮ್ಮೆ ಬ್ರಹ್ಮದೇವರು ಗಣಪತಿಗೆ ಅಣಿಮಾದಿ ಅಷ್ಟಸಿದ್ಧಿ ಗಳನ್ನೂ ಅನುಗ್ರಹಿಸಿದರು. ಹೀಗೆ ಅನುಗ್ರಹೀತನಾದ ಗಣಪತಿಯು ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿದ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಈ ಸಂದರ್ಭದಲ್ಲಿ ಚಂದ್ರನಿಗೆ ತಾನೇ ಅತಿ ಸುಂದರನೆಂಬ ಅಹಂಕಾರವೂ ಕಾರಣವಾಗಿತ್ತು. ಈ ಅಪಹಾಸ್ಯವನ್ನು ನೋಡಿದ ಗಣಪತಿಯು ಕುಪಿತನಾಗಿ ಚಂದ್ರನಿಗೆ ಶಾಪ ವಿತ್ತನು “ನೀನು ಅತ್ಯಂತ ಸುಂದರ ನೆಂಬ ಅಹಂಕಾರ ದಿಂದ ನನಗೆ ಅಪಹಾಸ್ಯ ಮಾಡಿರುವೆ. ಇಂದಿನಿಂದ ನಿನ್ನನ್ನು ಜನರು ನೋಡುವುದೇ ಬೇಡ, ಅಕಸ್ಮಾತ್ ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಎಂದು. ಆಗ ತನ್ನ ತಪ್ಪಿಗೆ ಪಶ್ಚಾತಾಪಗೊಂಡ ಚಂದ್ರನು ಗಣಪತಿಯನ್ನು ಸ್ತುತಿಸಿದನು –
ಪ್ರಸೀದ ದೇವೇಶ ಜಗನ್ನಿವಾಸ
ಗಣೇಶ ಲಂಬೋದರ ವಕ್ರತುಂಡ |
ವಿರಿಂಚಿ ನಾರಾಯಣ ಪೂಜ್ಯಮಾನ
ಕ್ಷಮಸ್ವ ಮೇ ಗರ್ವಕೃತಂ ಚ ಹಾಸ್ಯಂ |
ಆಗ ಸಂತುಷ್ಟನಾದ ಗಣಪತಿಯು ತನ್ನ ಶಾಪವನ್ನು ಸಂಕುಚಿತಗೊಳಿಸಿದನು – “ಯಾರು ಚಂದ್ರನನ್ನು ಗಣಪತಿಯ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ನೋಡುತ್ತಾರೋ ಅವರಿಗೆ ಮಿಥ್ಯಾಪವಾದ ಬರಲಿ. ಬೇರೆ ದಿನ ನೋಡಲು ಅಡ್ಡಿಯಿಲ್ಲ”.
ಅಥವಾ ಭಾದ್ರಪದ ಶುದ್ಧ ದ್ವಿತೀಯದಂದು ಬಿದಿಗೆ ಚಂದ್ರನನ್ನು ನೋಡಿದರೂ ಕೂಡ ಆ ಅಪವಾದದಿಂದ ಮುಕ್ತಿಯಿದೆ.
ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪದು. ಆದ್ದರಿಂದ ಅಕಸ್ಮಾತ್ ಚಂದ್ರನನ್ನು ನೋಡಿದರೆ, ಅದರ ಪರಿಹಾರಾರ್ಥವಾಗಿ ಈ ಶ್ಲೋಕವನ್ನು ಪಠಿಸಿದರೆ , ಅಪವಾದದಿಂದ ಪರಿಹಾರವಾಗುವುದೆಂದು ವರವಿದೆ.
ಪರಮಾತ್ಮನ ಭಕ್ತನಾದ ಸತ್ರಾಜಿತನು ಒಮ್ಮೆ ಸೂರ್ಯ ಮಂಡಲಾಂತರ್ಗತನಾದ ಸೂರ್ಯನಾರಾಯಣನನ್ನು ತಪಿಸಿ, ಅವನಿಂದ ಸ್ಯಮಂತಕಮಣಿಯನ್ನು ಪಡೆದನು. ಸೂರ್ಯನು ಆ ಮಣಿಯನ್ನು ಸತ್ರಾಜಿತನಿಗೆ ಕರುಣಿಸು ವಾಗ ಅಶುಚಿಯಲ್ಲಿ ಇದನ್ನು ಧರಿಸಿದರೆ ಅದು ಒಲಿಯ
ದೆಂದು ಹೇಳಿದ್ದನು. ಸತ್ರಾಜಿತನು ವಿಷ್ಣುಭಕ್ತ. ಆದರೂ ಕೂಡ ಲೋಭತನವನ್ನು ಬಿಟ್ಟಿರಲಿಲ್ಲ. ಅವನ ಲೋಭ ತನವನ್ನು ಹೋಗಲಾಡಿಸಲೆಂದೇ ಶ್ರೀ ಕೃಷ್ಣನು ತನಗೆ ಆ ಸ್ಯಮಂತಕ ಮಣಿ ಬೇಕೆಂದು ಸತ್ರಾಜಿತನಲ್ಲಿ ಕೇಳಿದಾಗ, ಅವನು ಅದನ್ನು ಕೊಡದೆ ತನ್ನ ಸಹೋದರನಾದ ಪ್ರಸೇನನಿಗೆ ನೀಡಿದ್ದನು. ಪ್ರಸೇನನಾದರೋ ತಾನು ಭೇಟೆಯಾಡಲು ಹೋದಾಗ ಅಶುಚಿಯಾಗಿದ್ದಾಗ ಅದನ್ನು ಧರಿಸಿದ್ದನು. ಆಗ ಒಂದು ಸಿಂಹವು ಪ್ರಸೇನ ನನ್ನು ಕೊಂದು ಸ್ಯಮಂತಕಮಣಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಆಗ ದಾರಿಯಲ್ಲಿ ಜಾಂಬವಂತ ನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಗುಹೆಯಲ್ಲಿ ಮಗಳ ಉಯ್ಯಾಲೆಯಲ್ಲಿ ಕಟ್ಟಿದನು.
ಅಷ್ಟರಲ್ಲಿ ಸತ್ರಾಜಿತನಾದರೋ ತನ್ನ ತಮ್ಮನು ವಾಪಸ್ಸು ಬರದಿರುವುದನ್ನು ನೋಡಿ, ಹಿಂದೆ ಕೃಷ್ಣನು ಸ್ಯಮಂತಕ ಮಣಿಯನ್ನು ಕೇಳಿದ್ದುದರಿಂದ ಅವನೇ ಈಗ ತನ್ನ ತಮ್ಮನನ್ನು ಕೊಂದು ಅಪಹರಿಸಿದ್ದಾನೆಂದೆ ಎಲ್ಲಾ ಕಡೆ ಪ್ರಚಾರ ಮಾಡಿದನು. ಕೃಷ್ಣನಾದರೋ ಒಮ್ಮೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರದರ್ಶನ ಮಾಡಿದ್ದನು. ಸರ್ವದೋಷ ದೂರನಾದ, ಸಕಲರಿಗೂ ನಿಯಾಮಕನಾದ ಪರಮಾತ್ಮನಿಗೆ ಅಪವಾದವೇ?ಇಲ್ಲ. ಗಣಪತಿಯ ಮಾತನ್ನು ಸತ್ಯವಾಗಿಸಲು, ಜಗನ್ನಾಟಕ ಸೂತ್ರದಾರಿಯಾದ ತಾನೇ ಲೋಕ ಶಿಕ್ಷನಾರ್ಥ ಅಪವಾದವನ್ನು ಸ್ವೀಕರಿಸಿದನು. ಮತ್ತು ಅದರ ಪರಿಹಾರಕ್ಕಾಗಿ ಸ್ಯಮಂತಕವನ್ನು ಹುಡುಕಿಕೊಂಡು ಹೊರಟನು. ಕಾಡಿನಲ್ಲಿ ಸಿಂಹದಿಂದ ಹತನಾದ ಪ್ರಸೇನನನ್ನೂ, ಕರಡಿಯಿಂದ ಹತವಾದ ಸಿಂಹವನ್ನೂ ನೋಡಿ, ಕರಡಿಯ ಹೆಜ್ಜೆ ಗುರುತು ಹಿಡಿದು ಗುಹೆ ಯೊಳಗೆ ಪ್ರವೇಶಿಸಿದನು. ಗುಹೆಯಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು ಆ ತೊಟ್ಟಿಲಲ್ಲಿದ್ದ ಮಗುವಿಗೆ ಹೇಳುತ್ತಿದ್ದಳು –
ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: |

ಅರ್ಥ – ಸಿಂಹವು ಪ್ರಸೇನನನ್ನು ಕೊಂದಿತು, ಸಿಂಹ ವನ್ನು ಜಾಂಬವಂತನೆಂಬ ಕರಡಿಯು ಸಂಹರಿಸಿತು. ಹೇ ಸುಕುಮಾರ ಅಳಬೇಡ, ಈ ಸ್ಯಮಂಟಕಮಣಿಯು ನಿನಗಾಗಿ ಜಾಂಬವಂತನಿಂದ ತರಲ್ಪಟ್ಟಿದೆ ಎಂದು ಹಾಡುತ್ತಿದ್ದಳು. ಆಗ ಗುಹಾ ಪ್ರವೇಶಿಸಿದ ಕೃಷ್ಣನನ್ನು ನೋಡಿದ ಜಾಂಬವತಿಯು ಜೋರಾಗಿ ಕಿರುಚಿದಳು. ಆಗ ಅಲ್ಲಿಗೆ ಬಂದ ಜಾಂಬವಂತನು ಕೃಷ್ನನೊಂದಿಗೆ ೨೮ ದಿನಗಳ ಕಾಲ ಯುದ್ಧಮಾಡಿದನು. (ತಾನೇ ಹಿಂದೆ ರಾಮಾವತಾರ ಕಾಲದಲ್ಲಿ ಶ್ರೀರಾಮನೊಂದಿಗೆ ಪ್ರಾರ್ಥಸಿ ಯುದ್ಧ ಭಿಕ್ಷೆಯನ್ನು ನೀಡಬೇಕೆಂದು ಕೇಳಿದ್ದನು. ಅದನ್ನು ಶ್ರೀಹರಿಯು ಕೃಷ್ಣಾವತಾರ ಕಾಲದಲ್ಲಿ ಅನುಗ್ರಹಿಸುವೆ ಎಂದಿದ್ದನು). ಕೃಷ್ಣನೊಂದಿಗೆ ಅಷ್ಟು ದೀರ್ಘಕಾಲ ಯುದ್ಧ ಮಾಡಿ ಸೋತು ನಿಷ್ಚೇತಿತನಾದಾಗ ತನ್ನನ್ನು ಸೋಲಿಸಲು ಯಾರಿಗೂ ಸಾಮರ್ಥ್ಯವಿಲ್ಲದಿರುವಾಗ, ಬಹುಶ: ಇವನು ರಾಮಚಂದ್ರನೋ ಎಂಬ ಅನುಮಾನ ಬಂದು, ರಾಮಸ್ಮರಣೆ ಮಾಡಲು, ಆಗ ಕೃಷ್ಣನು ರಾಮಚಂದ್ರನ ರೂಪದಲ್ಲಿ ಕಂಡಾಗ ರಾಮನನ್ನು ಕಂಡು, ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ತನ್ನ ಮಗಳಾದ ಜಾಂಬವತೀದೇವಿಯನ್ನು ಮತ್ತು ಸ್ಯಮಂತಕಮಣಿಯನ್ನೂ ಕೊಟ್ಟು ಕಳಿಸಿದನು.

ಶ್ರೀಕೃಷ್ಣನು ಹಿಂತಿರುಗಿ, ನಂತರ ಯಾದವರ ಸಭೆಯಲ್ಲಿ ಸತ್ರಾಜಿತನಿಗೆ ನಡೆದ ಸಕಲ ವೃತ್ತಾಂತವನ್ನೂ ತಿಳಿಸಿ, ಸ್ಯಮಂತಕಮಣಿಯನ್ನೂ ಹಿಂತಿರುಗಿಸಿದನು. ವೃಥಾ ಅಪವಾದವನ್ನು ಶ್ರೀಕೃಷ್ಣನ ಮೇಲೆ ಮಾಡಿದ್ದರಿಂದ ನೊಂದು, ತನ್ನ ಪಾಪವನ್ನು ಕಳೆಯುವ ಸಲುವಾಗಿ ತನ್ನ ಪುತ್ರಿಯಾದ, ಸಾಕ್ಷಾತ್ ಭೂದೇವಿಯ ಅವತಾರಳಾದ ಸತ್ಯಭಾಮೆಯನ್ನು ಕೊಟ್ಟು ಮದುವೆ ಮಾಡಿದನು.

********



ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ

ಎಲ್ಲರ ರಾಶಿಗೆ ಪ್ರವೇಶ ಪಡೆದು
ಕಷ್ಟ ಸುಖಗಳನ್ನು  ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.?

ಓದಿ ಈ ಪೌರಾಣಿಕ ಕಥೆ.

🔸ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ. ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ. * ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ. ಈತನಿಗೆ ಸಿಗಲೇಬಾರದು ಎಂದು ಕೊಂಡು ಅಲ್ಲಿಂದ ಓಡತೊಡಗಿದ.

🔸ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು. ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.

🔸ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ. ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು. ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.

🔸ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನೂ ತಿಂದುಬಿಟ್ಟಿತು. ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು. ಎತ್ತಹೋಗುವುದೆಂದು ತಿಳಿಯದೆ "ಹಸುವಿನ ಸಗಣಿಯ ರೂಪದಲ್ಲಿ ಆಚೆ ಬಂದ". ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.

🔸ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.

🔸ಆದ್ದರಿಂದ ಎಲ್ಲಾ ಶುಭ ಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಥಮ ಪೂಜೆ ಗಣಪನಿಗೇ ಸಲ್ಲಿಸುತ್ತಾರೆ. ಇದು ಸಗಣಿಯ ಮಹತ್ವ ತಿಳಿಸುವ ಒಂದು ಪೌರಾಣಿಕ ಕಥೆ.

**********

ಗಣಪತಿಯ ಬಗೆಗೆ ವೇದಗಳಲ್ಲಿ,ಪುರಾಣಗಳಲ್ಲಿ ಬೇರೆ ಬೇರೆ ಸಂಪ್ರದಾಯಗಳಲ್ಲಿ ಏನು ಹೇಳಿದ್ದಾರೆ ತಿಳಿಯ ಬೇಕೇ ? ಹಾಗಾದರೆ ಪುರಾಣ ಹಾಗೂ ವೇದಮಂತ್ರಗಳ ಅರ್ಥವನ್ನು ಯಥಾವತ್ತಾಗಿ ಬಲ್ಲ ಬಹುಶ್ರುತ ವಿದ್ವಾಂಸರೆನಿಸಿದ ನಮ್ಮ ನಾಡಿನವರೇ ಆದ ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಏನು ಹೇಳುತ್ತಾರೆ... ಈ ಲೇಖನವನ್ನೊಮ್ಮೆ ಓದಿ :-
ಘನಪಾಠಿಗಳಿಗೂ ದಕ್ಕದ ಗಣಪತಿ
ಲೇಖನ : ಡಾ.ಬನ್ನ೦ಜೆ ಗೋವಿ೦ದಾಚಾಯ೯
ಶಿವ-ಪಾರ್ವತಿಯರ ಮಗನೆಂದು ಶೈವರಿಗೆ-ಶಾಕ್ತರಿಗೆ ಗಣಪತಿ ಪ್ರಿಯನಾದ.
ಅಷ್ಟೇ ಅಲ್ಲ, ಇದೇ ಗಣಪತಿ ಕೃಷ್ಣ-ರುಕ್ಮಿಣಿಯರ ಮಗನಾಗಿ ಚಾರುದೇಷ್ಣನಾದ. ಅದರಿಂದ ವೈಷ್ಣವರಿಗೂ ಪ್ರಿಯ.

ಅವನು ಕ್ಷಿಪ್ರಪ್ರಸಾದ.

ಪೂಜಿಸಿದವರಿಗೆ ಉಳಿದ ದೇವತೆಗಳಿಗಿಂತ ಬೇಗ ಫಲಕೊಡುವವನು. ಅದರಿಂದಲೂ ಅವನು ಎಲ್ಲರಿಗೂ ಇಷ್ಟದೇವತೆಯಾದ.

ಋಗ್ವೇದದಲ್ಲಿ ಒಂದು ಗಣಪತಿ ಮಂತ್ರ ಇದೆ -

ನಿಷು ಸೀದ ಗಣಪತೇ ಗಣೇಷು
ತ್ವಾಮಾಹುರ್ವಿಪ್ರತಮಂ ಕವೀನಾಮ್
ನ ಋತೇ ತ್ವತ್ ಕ್ರಿಯತೇ ಕಿಂಚನಾರೇ
ಮಹಾಮರ್ಕಂ ಮಘವನ್ ಚಿತ್ರಮರ್ಚ
(10.112.9)

ಈ ಮಂತ್ರದ ಋಷಿ ವಿರೂಪನ ಮಗ ನಭಃಪ್ರಭೇದನ. ಇದು ಗಣಪತಿಯ ಸ್ತುತಿಯಲ್ಲ. ಇಂದ್ರನ ಸ್ತುತಿ ಎನ್ನುತ್ತಾರೆ ಸಂಪ್ರದಾಯಜ್ಞರು. ಇಲ್ಲಿ ಬಂದ ಗಣಪತಿ ಎಂದರೆ ಆನೆಯ ಮೋರೆಯ, ಸೊಟ್ಟ ಸೊಂಡಿಲಿನ ಗಣಪತಿ ಅಲ್ಲ. ಇಂದ್ರನೆಂದರೆ ಸಗ್ಗದೊಡೆಯ, ಶಚೀಪತಿ ಇಂದ್ರನೂ ಅಲ್ಲ. ವೈದಿಕ ಪರಿಭಾಷೆಯಲ್ಲಿ ಮುಖ್ಯವಾಗಿ ಇಂದ್ರ ಎಂದರೆ ಇಡಿಯ ವಿಶ್ವವನ್ನು ನಿಯಂತ್ರಿಸುವ ಪರತತ್ವ. ಪರಮಪುರುಷ. ಪುರುಷೋತ್ತಮ.

ಈ ಮಂತ್ರದಲ್ಲಿ ನಭಃಪ್ರಭೇದನ ಕಂಡ ಅರ್ಥ- 'ಓ ಜೀವಗಣಗಳ ಒಡೆಯನಾದ ಪರಮಾತ್ಮನೆ, ಪೀಠದಲ್ಲಿ ಬಂದು ಕೂಡು. ಜ್ಞಾನಿಗಳ ತಂಡದಲ್ಲೆ ನೀನು ಎಲ್ಲರಿಗಿಂತ ಮಿಗಿಲಾದ ಜ್ಞಾನಿ, ಸರ್ವಜ್ಞ ಎನ್ನುತ್ತಾರೆ. ನಿನ್ನ ನೆರವಿಲ್ಲದೆ ಎಲ್ಲೂ ಯಾರೂ ಏನೂ ಮಾಡಲಾರರು. ಓ ಯಜ್ಞಾರಾಧ್ಯನೆ, ಪೂಜೆಕೊಳ್ಳುವವರಲ್ಲಿ ಮೊದಲಿಗ ನೀನು. ಜ್ಞಾನಾನಂದಗಳ ಅಚ್ಚರಿಯ ಮೂರ್ತಿ ನೀನು. ನನ್ನ ಮೂಲಕ ನೀನೇ ನಿನ್ನ ಪೂಜೆಯನ್ನು ಮಾಡಿಸಿಕೋ...’

ಇಲ್ಲಿ ಗಜಾನನನ ಸುಳಿವೇ ಇಲ್ಲ. ಜಗನ್ನಿಯಾಮಕನಾದ ಭಗವಂತನ ಪ್ರಾರ್ಥನೆ ಇದು.

ಪ್ರಾಯಃ ಈ ಮಂತ್ರದ ಪ್ರಭಾವದಿಂದಲೇ ಒಂದು ಹೊಸ ಪಂಥ ಹುಟ್ಟಿಕೊಂಡಿತು. ಗಣಪತಿಯೇ ಸರ್ವಶಕ್ತ, ಗಣಪತಿಯೇ ಪರತತ್ವ ಎನ್ನುವ ಪಂಥ. ಇದರ ಅನುಯಾಯಿಗಳನ್ನು ಗಾಣಪತ್ಯರು ಅಥವಾ ಗಾಣಪತರು ಎಂದು ಕರೆಯುತ್ತಿದ್ದರು.

ಈಗ ಈ ಪಂಥ ಬಳಕೆಯಲ್ಲಿಲ್ಲ. ಅದು ಶಾಕ್ತರಲ್ಲಿ ಶೈವರಲ್ಲಿ ಅಂತರ್ಭಾವಗೊಂಡಿದೆ. ಪರಿಣಾಮವಾಗಿ ಪಂಚಾಯತನ ಪೂಜೆಯಲ್ಲಿ ಶಿವಪಾರ್ವತಿಯರ ಜತೆಗೆ ಗಣಪತಿಯೂ ಸೇರಿಕೊಂಡ. ಆದರೆ ವಾಸ್ತವವಾಗಿ ಈ ಮಂತ್ರದಲ್ಲಿ ಗಾಣಪತ್ಯರು ಪೂಜಿಸುವ ಗಣಪತಿಯ ಸುದ್ದಿಯೇ ಇಲ್ಲ.


ಬ್ರಹ್ಮಣಸ್ಪತಿಯಾದ ಗಣಪತಿ :
ಋಗ್ವೇದದಲ್ಲಿ ಇನ್ನೊಂದು ಮಂತ್ರವಿದೆ -
ಗಣಾನಾಂ ತ್ವಾ ಗಣಪತಿಂ ಹವಾಮಹೇ...
(2.23.1)

ಈ ಮಂತ್ರದ ಋಷಿ ಗೃತ್ಯಮದ ಅಥವಾ ಶೌನಕ. ಇದರ ದೇವತೆ ಬೃಹಸ್ಪತಿ ಮತ್ತು ಬ್ಲೇಖನ ಬಹುಶಃ ಪೂರ್ಣವಾಗಿಲ್ಲವೆನಿಸುತ್ತದೆ

ಗಣಪತಿಯ ಬಗೆಬಗೆಯ ಅವತಾರಗಳು

ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

ಬಾಲ ಗಣಪತಿ

ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

ತರುಣ ಗಣಪತಿ

ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

ಭಕ್ತಿ ಗಣಪತಿ

ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.

ವೀರ ಗಣಪತಿ

ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

ಶಕ್ತಿ ಗಣಪತಿ

ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

ದ್ವಿಜ ಗಣಪತಿ

"ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

ಸಿದ್ಧಿ ಗಣಪತಿ

ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

* ಉಚ್ಚಿಷ್ಟ ಗಣಪತಿ*

ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.

ವಿಘ್ನ ಗಣಪತಿ

ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.

ಕ್ಷಿಪ್ರ ಗಣಪತಿ

ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

ಹೇರಂಬ ಗಣಪತಿ

ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.

ಲಕ್ಷ್ಮೀ ಗಣಪತಿ

ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

ಮಹಾಗಣಪತಿ

"ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

ವಿಜಯ ಗಣಪತಿ

ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.

ನೃತ್ಯ ಗಣಪತಿ

ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?

ಊರ್ಧ್ವ ಗಣಪತಿ

ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.

ಏಕಾಕ್ಷರ ಗಣಪತಿ

"ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

ವರದ ಗಣಪತಿ

ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

ತ್ರಯಾಕ್ಷರ ಗಣಪತಿ

ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

ಕ್ಷಿಪ್ರ ಪ್ರಸಾದ ಗಣಪತಿ

ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.

ಹರಿದ್ರ ಗಣಪತಿ

ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

ಏಕದಂತ ಗಣಪತಿ

ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.

ಸೃಷ್ಟಿ ಗಣಪತಿ

ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.

ಉದ್ಧಂಡ ಗಣಪತಿ

ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

ಋಣಮೋಚನ ಗಣಪತಿ

ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

ದುಂಧಿ ಗಣಪತಿ

ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

ಮೊದಲಿನ ಎರಡು ವಿವರಣೆಗಳನ್ನು ನೋಡಿದಾಗ ಬೃಹಸ್ಪತಿ – ಮರುದ್ಗಣ ದೇವತೆಗಳೇ ಗಣಪತಿಯಾಗಿ ರೂಪಪರಿವರ್ತನೆ ಹೊಂದಿರುವವರು ಎಂದು ಎನಿಸದೆ ಇರದು. ಇದರಲ್ಲಿ ಅಚ್ಚರಿಯೇನಿಲ್ಲ. ಅದರಲ್ಲೂ ಆ ನಂತರ ಬಂದ ಹಿಂದೂ ಬಹುದೇವತೆಗಳ ನಡುವೆ ವೇದಗಳ ಅನೇಕ ದೇವತೆಗಳು ಒಂದಾಗಿ ಹೋಗಿರುವರು ಎಂಬುದನ್ನು ಗಮನಿಸಿದಾಗ. ಒಂದೊಮ್ಮೆ ಅತ್ಯಂತ ಮುಖ್ಯನೂ ಅತಿಶಯ ಶೂರನೂ ಆಗಿದ್ದ ಇಂದ್ರನನ್ನು ಕೇವಲ ಒಂದು ಭಾಗದ ಆಳ್ವಿಕೆ ಮಾತ್ರ ಇರುವ ಒಬ್ಬ ಕಿರಿಯ ದೇವತೆಯ ಮಟ್ಟಕ್ಕೆ ಇಳಿಸಲಾಯಿತು. ಅವನ ಅನುಚರನಾಗಿದ್ದ ವಿಷ್ಣುವನ್ನು ತ್ರಿಮೂರ್ತಿಗಳ ಮಧ್ಯದವನನ್ನಾಗಿ ಮೇಲಕ್ಕೇರಿಸಲಾಯಿತು. ಭಯಂಕರನಾಗಿದ್ದ ರುದ್ರನು ಪವಿತ್ರತಮನಾದ ಶಿವನಾದನು. ದ್ಯೌಸ್, ಅರ್ಯಮನ್ ಮತ್ತು ಪ್ಯೂಷನ್ ರಂಥ ಇನ್ನಿತರ ದೇವತೆಗಳು ಶೂನ್ಯದಲ್ಲಿ ಲೀನವಾಗಿ ಹೋದರು. ಗಣಪತಿಯು ಅತಿಶಯವಾಗಿ ಆರಾಧಿಸಲ್ಪಡುವ ಅತ್ಯಂತ ಮುಖ್ಯನಾದ ದೇವತೆಯಾಗಿದ್ದರೂ, ಇತರರಿಗೆ ಒಮ್ಮೊಮ್ಮೆ ಅವನ ತಲೆ ಒಂದು ದೊಡ್ಡ ನಿಗೂಢವೆನಿಸುತ್ತದೆ. ಪುರಾಣಗಳೇನೋ ತಮ್ಮದೇ ಆದ ರೀತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಿವೆಯಾದರೂ ಇದು ಶ್ರೀಸಾಮಾನ್ಯನಿಗೇ ಆಗಲಿ ವಿದ್ವಾಂಸರಿಗೇ ಆಗಲಿ ತೃಪ್ತಿಯಾಗುವಂತಿಲ್ಲ. ಈ ಅಚ್ಚರಿಯ ದೇವತೆಯ ಮೂಲದ ಬಗೆಗೆ ಲಭ್ಯವಿರುವ ಕಥೆಗಳೆಲ್ಲವನ್ನೂ ಸಂಕ್ಷಿಪ್ತವಾಗಿ ಒಗ್ಗೂಡಿಸಿದರೆ ತುಂಬ ಕುತೂಹಲವೆನ್ನಿಸಬಹುದು. ತಮ್ಮ ಕಾರ್ಯ ಸಫಲವಾಗುವುದಕ್ಕೆ ರಬಹುದಾದ ಎಲ್ಲ ಅಡೆತಡೆಗಳನ್ನೂ ನಿವಾರಿಸುವ ಸಾಮರ್ಥ್ಯವುಳ್ಳ ಒಬ್ಬ ದೇವನು ಬೇಕೆಂಬ ದೇವತೆಗಳ ಕೋರಿಕೆಯಂತೆ ಸಾಕ್ಷಾತ್ ಶಿವನೇ ಪಾರ್ವತಿಯ ಗರ್ಭದಲ್ಲಿ ಗಜಾನನನಾಗಿ ಹುಟ್ಟಿದನು. ಒಂದು ಸಲ ಪಾರ್ವತಿಯು ತಮಾಷೆಗಾಗಿ ತಾನು ಮೈಮೇಲೆ ಸವರಿಕೊಂಡಿದ್ದ ಲೇಪನದಿಂದ ಒಂದು ಆನೆಯ ತಲೆಯ ಆಕೃತಿಯನ್ನು ಮಾಡಿ ಅದನ್ನು ಗಂಗೆಗೆ ಎಸೆದಳು. ಅದು ಜೀವಂತವಾಯಿತು. ಪಾರ್ವತಿ ಮತ್ತು ಗಂಗೆ ಇಬ್ಬರೂ ಆ ಬಾಲಕನನ್ನು ತಮ್ಮ ಮಗನೆಂದು ಕರೆದರು. ಹೀಗಾಗಿ, ಅವನಿಗೆ ದ್ವೈಮಾತುರ (ಇಬ್ಬರು ತಾಯಂದಿರನ್ನು ಉಳ್ಳವನು) ಎಂಬ ಹೆಸರು ಬಂತು.