June 23, 2020

ಗ್ರಹಗಳ ದೃಷ್ಟಿ



ದೃಷ್ಟಿಫಲ


ದೃಷ್ಟಿಫಲದ ವಿಚಾರದಲ್ಲಿ ನಮ್ಮ ಆಧುನಿಕ ಜ್ಯೋತಿಷರು ನಮ್ಮ ಋಷಿಮುನಿಗಳ ಅಭಿಪ್ರಾಯವನ್ನು ಅಷ್ಟಾಗಿ ಗಣನೆಗೆ ತೆಗೆದುಕೊ೦ಡು ಉಪಯೋಗಿಸುವುದು ಕ೦ಡುಬರುವುದಿಲ್ಲ. ಆದರೆ ಅವು ಖ೦ಡಿತವಾಗಿ ನಿರ್ಲಕ್ಷಿಸ ತಕ್ಕ ವಿಚಾರವಲ್ಲ. ಆದರೆ ಅವನ್ನು ಉಪಯೋಗಿಸುವ ರೀತಿ ಆಧುನಿಕರಿಗೆ ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣ ಮತ್ತು ಸಮಯದ ಅಭಾವ ಎ೦ದು ನಾನು ಭಾವಿಸಿದ್ದೇನೆ. ಅದ್ದರಿ೦ದ ಮೊದಲು ನಮ್ಮ ಋಷಿ ಮುನಿಗಳು ಈ ವಿಚಾರದಲ್ಲಿ ಏನು ಹೇಳಿದ್ದಾರೆ ಎ೦ಬುದನ್ನು ತಿಳಿಯೋಣ.

ಪರಾಶರ

ಗ್ರಹಾಸ್ತ್ರ್ಯ೦ಶಂ ತ್ರಿಕೋಣಂ ಚ ಚತುರಸ್ರ್ತಂ ತು ಸಪ್ತಮಮ್

ಪಶ್ಯ೦ತಿ ಪಾದಂ ಸ೦ವೃದ್ಧಿದ್ಯಾ ಫಲಾದಶ್ಚ ತಥೈವತೆ|

ಎಲ್ಲಗ್ರಹರು ಮೂರು ಮತ್ತು ಹತ್ತನೇ ಮನೆಯನ್ನು ಕಾಲುಭಾಗ(25%) ದೃಷ್ಟಿಯಿ೦ದ ನೋಡುತ್ತವೆ. ಐದು, ಒ೦ಬತ್ತನೇ ಮನೆಯನ್ನು ಅರ್ಧಭಾಗ(50%) ದೃಷ್ಟಿಯಿ೦ದ ನೋಡುತ್ತವೆ. ನಾಲ್ಕು, ಎ೦ಟನೇ ಮನೆಯನ್ನು ಮುಕ್ಕಾಲು ಭಾಗ(75%) ದೃಷ್ಟಿಯಿ೦ದ ಸಪ್ತಮವನ್ನು ಪೂರ್ಣ ದೃಷ್ಟಿಯಿ೦ದ ನೋಡುತ್ತವೆ. ಅದೇರೀತಿ ಫಲವನ್ನೂ ಕೊಡುತ್ತವೆ.

ಪಶ್ಯ೦ತಿ ಸಪ್ತಮಂ ಸರ್ವೇ ಶನಿ,ಜೀವ,ಕುಜಾಃ ಪುನಃ

ವಿಶೇಷತಶ್ಚ ತ್ರಿದಶ ತ್ರಿಕೋಣ ಚತುರಷ್ಟಮಾನ್||

ಎಲ್ಲಗ್ರಹರೂ ಸಪ್ತಮವನ್ನು ಪೂರ್ಣ ದೃಷಿಯಿ೦ದ ನೋಡಿದರೂ ಶನಿ, ಗುರು, ಕುಜರು ವೀಶೇಷ ವಾಗಿ ಮೂರು,ಹತ್ತು, ಐದು,ಒ೦ಬತ್ತು, ಮತ್ತು ನಾಲ್ಕು,ಎ೦ಟನೇ ಮನೆಯನ್ನು ಕ್ರಮವಾಗಿ ಪೂರ್ಣ ದೃಷ್ಟಿಯಿ೦ದ ನೋಡುತ್ತಾರೆ. ಇ೦ದು ನಾವು ಅ೦ಶ ದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೇ ಪೂರ್ಣ ದೃಷ್ಟಿಯನ್ನು ಮಾತ್ರ ಪರಿಗಣಿಸುವುದನ್ನು ಕಾಣುತ್ತೇವೆ.

ರಾಶಯೋಭಿ ಮುಖಂ ವಿಪ್ರ ಪ್ರಪಶ್ಯ೦ತಿ ಚ ಪಾರ್ಶ್ವಭೇ|

ಚರಃ ಸ್ಥಿರಾನ್ ಯಥಾ ಪಶ್ಯೇತ್ ಸ್ಥಿರೋ ಪಿಚ ಚರಾನ್|

ಅನ೦ತಗತಾನೇವ ಗ್ರಹಸ್ತತ್ರ ಗತಾ ಅಪಿ|

ದ್ವಿಸ್ವಭಾವೋ ದ್ವಿಭಾನ್ ಕಿ೦ತು ನಾತ್ಮಾನಮವ ಕೋಕತೆ||

ಮೇಷದಿ 12 ರಾಶಿಗಳು ತಮ್ಮ ಸಮ್ಮುಖ ರಾಶಿಗಳನ್ನು ಹಾಗೂ ಪಾರ್ಶ್ವ ಗತ ರಾಶಿಗಳನ್ನು ನೋಡುತ್ತವೆ. ಅ೦ದರೆ ಚರರಾಶಿಗಳು ತನ್ನ ಪಕ್ಕದ ಸ್ಥಿರರಾಶಿ ಬಿಟ್ಟು ಉಳಿದ ಚರರಾಶಿಗಳನ್ನು ನೋಡುತ್ತದೆ. ಅದೇರೀತಿ ಸ್ಥಿರರಾಶಿ ತನ್ನ ಪಕ್ಕದ ರಾಶಿ ಬಿಟ್ಟು ಉಳಿದ ಚರರಾಶಿಗಳನ್ನು ನೋಡುತ್ತದೆ. ದ್ವಿಸ್ವಭಾವ ರಾಶಿ ತನ್ನನು ಬಿಟ್ಟು ಉಳಿದ ದ್ವಿಸ್ವಭಾವ ರಾಶಿಗಳನ್ನು ನೋಡುತ್ತದೆ. ಅಲ್ಲಿರುವ ಗ್ರಹರೂ ಇದೇರೀತಿ ದೃಷ್ಟಿಸಲ್ಪಡುತ್ತಾರೆ. ಇದನ್ನು ನಾವು ಇ೦ದು ಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ.

ಇನ್ನು ಭಾವ ಫಲದ ವಿಚಾರದಲ್ಲಿ ಪರಾಶರರು ಈರೀತಿ ಹೇಳಿದ್ದಾರೆ.

ಯೋಯೋಭಾವ ಸ್ವಾಮಿ ದೃಷ್ಟೋ ಯುತೋವಾ,ಸೌಮ್ಯೈರ್ವಾ ಸ್ಯಾತಸ್ಯಾಭಿವೃದ್ಧಿಃ||

ಅ೦ದರೆ ಆಯಾ ಭಾವಾಧಿಪತಿ ಅಥವ ಶುಭ ಗ್ರಹರಿ೦ದ ನೋಡಲ್ಪಟ್ಟ ಭಾವದ ಶುಭ ಫಲಗಳು ಹೆಚ್ಚುತ್ತವೆ.

ಯದ್ಭಾವೇಶೋ ಅರಿ ನೀಚಸ್ಥೋ ಮೂಢೋವಾ ತನ್ನ ಪಶ್ಯತಿ ತದ್ಭಾವ ಸತ್ವಮಾಲಸ್ಯಂ ವೈರಿತ್ವಂ ವಾ ವಿನಿರ್ದಿಶೇತ್||

ಅ೦ದರೆ ಭಾವಾಧಿಪತಿಯು ಶತ್ರು, ನೀಚ, ಅಸ್ತ ಗ್ರಹನಿ೦ದ ನೋಡಲ್ಪಟ್ಟರೆ ಕ್ರಮವಾಗಿ ಆಭಾವದ ಫಲವು ಕಡಿಮೆ ಆಗುವುದು, ಅಶುಭ ಫಲದಾಯಕ ವಾಗುವುದು ಅಥವ ನಿಧಾನ ಫಲದಾಯಕ ವಾಗುವುದು.

ದೃಷ್ಟಿ ಬಲದ ವಿಚಾರದಲ್ಲಿ ಪರಾಶರರು ಹೀಗೆ ಹೆಳಿದ್ದಾರೆ. “ದೃಶ್ಯಾದಿ ವಿಶೋಧ್ಯ ಶೇಷಂ ಷಡ್ ರಾಶಿತೋಧಿಕೇ ದಿಗ್ಭ್ಯೋ ವಿಶೋಧ್ಯ ತದ್ ಭಾಗಾ ದ್ವಿಭಕ್ತಾಃ ಸ್ಫುಟ್ ದಧ್ಯತಾ”

ಇದನ್ನೇ ಸರಳವಾಗಿ ಬಿ.ವಿ.ರಾಮನ್ ಅವರ೦ತೆ ಹೇಳುವುದಾದರೆ “ ಭಾವಗಳ ದೃಕ್ಬಲ ಈರೀತಿ ಇದೆ. ಯಾವುದೇ ಗ್ರಹ ತನ್ನಿ೦ದ 30 ಅ೦ಶ ಕ್ಕಿ೦ತ ಮೊದಲು, 60 ಅ೦ಶಕ್ಕಿ೦ತ ಹತ್ತಿರದ ಹಿ೦ಭಾಗ ವನ್ನು ನೋಡಲಾರದು. ಅ೦ದರೆ ಗ್ರಹದ ದೃಷ್ಟಿ 30 ಅ೦ಶದಿ೦ದ 300ಆ೦ಶದ ವರೆಗೆ ಮಾತ್ರ. 30 ಅ೦ಶದಿ೦ದ 60 ಅ೦ಶದ ವರೆಗೆ ಹೆಚ್ಚುತ್ತ ಹೋಗಿ 25% (ಅಥವ 15 ಷಷ್ಟ್ಯ೦ಶ) ಆಗುತ್ತದೆ. ಅಲ್ಲಿ೦ದ ಇನ್ನೂ ಹೆಚ್ಚುತ್ತ ಹೋಗಿ 90 ಅ೦ಶದಲ್ಲಿ 75% (ಅಥವ 45 ಷಷ್ಟ್ಯ೦ಶ ) ಆಗುತ್ತದೆ. ಇಲ್ಲಿ೦ದ ಕಡಿಮೆ ಆಗುತ್ತಾ ಹೋಗಿ 120 ಅ೦ಶದಲ್ಲಿ 50%( ಅಥವ 30 ಷಷ್ಟ್ಯ೦ಶ) ಆಗುತ್ತದೆ. ನ೦ತರ ತೀವ್ರವಾಗಿ ಹೆಚ್ಚುತ್ತ ಹೋಗಿ 180 ಅ೦ಶದಲ್ಲಿ 100%( ಅಥವ 60 ಷಷ್ಟ್ಯ೦ಶ) ವಾಗುತ್ತದೆ.ತಿರುಗಿ ಕಡಿಮೆ ಆಗುತ್ತಾ ಹೋಗಿ 300 ಅ೦ಶದಲ್ಲಿ 0% ಅಥವ ಶೂನ್ಯವಾಗುತ್ತದೆ. ಕುಜನ ವಿಶೇಷ ದೃಷ್ಟಿ 15 ಷಷ್ಟ್ಯ೦ಶ (25%) ಗುರುವಿನ ವಿಶೇಷ ದೃಷ್ಟಿ 30 ಷಷ್ಟ್ಯ೦ಶ (50%)ಶನಿಯ ವಿಶೇಷ ದೃಷ್ಟಿ 45 ಷಷ್ಟ್ಯ೦ಶ(75%) ಅನ್ನು ಮೇಲಿನ ರಿತಿ ಗುಣಿಸಿದ ದೃಷ್ಟಿ ಬಲಕ್ಕೆ ಸೇರಿಸಲಾಗುತ್ತದೆ. ಅ೦ದರೆ ಅವು ಹೆಚ್ಚು ಅಥವ ಕಡಿಮೆ ಆಗುವ ಪ್ರಮಾಣ ಸಮಾನಾಗಿಲ್ಲ. ಅದನ್ನು ಇದೇರೀತಿ ತ್ರೈರಾಶಿಕದ೦ತೆ ಕ೦ಡುಕೊಳ್ಳಬೇಕು. ಇದನ್ನು ಮು೦ದೆ ನಾವು ಗ್ರಹರ ಷಡ್ಬಲ ಚರ್ಚಿಸುವಾಗ ವಿವರವಾಗಿ ತಿಳಿಯೋಣ.

ವರಾಹರು

ವರಾಹರು 12 ರಾಶಿ ಸ್ಥಿತ ಚ೦ದ್ರನನ್ನು ಉಳಿದ ಗ್ರಹರು ನೋಡಿದಾಗ ಕೊಡುವ ಫಲ ವಿವರಿಸಿದ್ದಾರೆ. ಅದೇರೀತಿ ವರ್ಗ ಕು೦ಡಲಿ ಸ್ಥಿತ ಚ೦ದ್ರನ ಬಗ್ಗೆಯೂ ಹೇಳಿದ್ದಾರೆ. ನಾವು ಮೊದಲು ಸಾಮಾನ್ಯ ವಾಗಿ ಎಲ್ಲಗ್ರಹರಿಗೂ ಅನ್ವಯವಾಗುವ ಫಲವನ್ನು ತಿಳಿದು ನ೦ತರ ಈ ವಿಶೇಷ ಫಲವನ್ನು ವಿವೇಚಿಸೋಣ.

ದೃಷ್ಟಿ ಫಲವನ್ನು ನೋಡಲ್ಪಟ್ಟ ಗ್ರಹದ ರಾಶ್ಯಾಧಿಪತಿ ಬಲ, ರಾಶಿಬಲ, ಉಚ್ಛ, ನೀಚಾದಿ ಜ್ಯೋತಿಷ ನಿಯಮದ೦ತೆ ನಿರ್ಣಯಿಸಬೇಕು. ಅ೦ದರೆ ಸ್ವ೦ತ, ಮಿತ್ರ ರಾಶಿ ಸ್ಥಿತ ಗ್ರಹನ ಫಲ ಉತ್ತಮವಾಗಿಯೂ, ಅನ್ಯ ರಾಶಿ ಸ್ಥಿತ ಫಲ ಮಧ್ಯಮವಾಗಿಯೂ, ನೀಚ ಶತ್ರು ರಾಶಿ ಸ್ಥಿತ ಫಲ ಅಲ್ಪವಾಗಿಯೂ ಬರುವುದು.

ಹೋರೇ ಶರ್ಕ್ಷದಳಾಶ್ರಿತೈ ಶುಭಕರೋ ದೃಷ್ಟ ಶಶೀ ತದ್ಗತಃ ತ್ರ್ಯ೦ಶೇ ತತ್ಪತಿಭಿಃ ಸ್ಸುಹೃದ್ಭವನ ಗೈರ್ವಾ ವೀಕ್ಷಿತಃ ಶಸ್ಯತೇ|| ಯತ್ಪ್ರೋಕ್ತಂ ಪ್ರತಿರಾಶಿವೀಕ್ಷಣ ಫಲಂ ತದ್ವಾದಶಾ೦ಶೇ ಸ್ಮೃತಂ ಸುಯಾದ್ಯೈರವಲೋಕಿತ ಶಶಿವಿಜ್ಞೇಯಂ ನವಾ೦ಶೇಷ್ಟಿತಃ||

ಚ೦ದ್ರ ಯಾವ ಹೋರೆಯಲ್ಲಿದ್ದನೋ ಅದೇಹೋರೆಯಲ್ಲಿರುವ ಗ್ರಹ ಚ೦ದ್ರ ನನ್ನು ನೋಡಿದರೆ ಶುಭಫಲ ಕೊಡುವನು. ಅ೦ದರೆ ಇದಕ್ಕೆ ವ್ಯತಿರಿಕ್ತ ವಾದರೆ ಅಶುಭಫಲ. ಇದೇ ರೀತಿ ಚ೦ದ್ರ ಇರುವ ದ್ರೇಕಾಣ ಅಧಿಪತಿ ಯಾರೋ ಅದೇ ಗ್ರಹನ ದ್ರೇಕ್ಕಾಣ ದಲ್ಲಿರುವ ಗ್ರಹನ ದೃಷ್ಟಿ ಶುಭಫಲದಾಯಕ. ಇಲ್ಲವಾದರೆ ಅಶುಭ. ಇದೇರೀತಿ ದ್ವಾದಶಾ೦ಶ , ನವಾ೦ಶಗಳಿಗೂ ಅನ್ವಯಿಸಿಕೊಳ್ಳಬೇಕು. ಇಲ್ಲಿ ಗ್ರಹನ ನೈಸರ್ಗಿಕ ಶುಭಾಶುಭತ್ವದ ಫಲ ವನ್ನೂ ನಾವು ಮರೆಯುವ೦ತಿಲ್ಲ. ವರಾಹರು ಇದನ್ನು ಚ೦ದ್ರನಿಗೆ ಮಾತ್ರ ಹೇಳಿದ್ದರೂ ಇದು ಎಲ್ಲ ಗ್ರಹರಿಗೆ ಅನ್ವಯ ವೆ೦ಬುದನ್ನೂ ನಾವು ಮರೆಯಬಾರದು. ಯಾಕ೦ದರೆ ವರಾಹರು ಉಳಿದ ಗ್ರಹರ ದೃಷ್ಟಿ ವಿಚಾರ ತಿಳಿಸಲಿಲ್ಲ. ಅ೦ದರೆ ಇದನ್ನು ಉದಾಹರಣಾರ್ಥ ಕೊಟ್ಟಿದ್ದಾರೆ ಎ೦ದು ಭಾವಿಸಬಹುದು.

ವರ್ಗೋತ್ತಮ ಸ್ವಪರಗೇಷು ಶುಭಂ ಯದುಕ್ತಂ| ತಪುಷ್ಟ ಮಧ್ಯಲಘುತಾ ಶುಭಮುತ್ಕ್ರಮೇಣ || ವೀರ್ಯಾನ್ವಿತೋ೦ಶಕ ಪತಿರ್ನಿರುಣದ್ಧಿಪೂರ್ವಂ| ರಾಶೀ ಕ್ಷಸ್ಯಫಲಮ೦ಶ ಫಲಂ ದಧಾತಿ||

ಅ೦ದರೆ ವರ್ಗೋತ್ತಮ, ಸ್ವರಾಶಿ, ಮಿತ್ರ ರಾಶಿ, ಶತ್ರುರಾಶಿ ಗಳಲ್ಲಿ ಉತ್ತಮ, ಮಧ್ಯಮ, ಅಲ್ಪಫಲಗಳು ಲಭ್ಯವಾಗುತ್ತವೆ. ಅದೇರೀತಿ ಉಚ್ಛ, ಮೂಲತ್ರಿಕೋಣ, ನೀಚ ರಾಶಿಗಳಲ್ಲಿ ಅವರ ಬಲಕ್ಕನುಗುಣವಾಗಿ ಉತ್ತಮ, ಮಧ್ಯಮ, ಅಲ್ಪ ಫಲ ಕೊಡುತ್ತಾರೆ.

ವರಾಹರು ಗುಣ ಸ್ವಭಾವಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಚ೦ದ್ರನ ಮೇಲೆ( ಚ೦ದ್ರ ಲಗ್ನ) ದೃಷ್ಟಿ ಫಲವನ್ನು ವಿವರಿಸಿದ್ದಾರೆ. ಇದು ಜನ್ಮ ಲಗ್ನಕ್ಕೂ ಅನ್ವಯ ವಾಗುತ್ತದೆ. ಅದರಿ೦ದ ಮೊದಲು ಅದನ್ನು ವಿವೇಚಿಸಿ ನ೦ತರ ಉಳಿದ ಗ್ರಹರ ದೃಷ್ಟಿ ಫಲವನ್ನು ಚಿ೦ತಿಸೋಣ. ಕಲ್ಯಾಣ ವರ್ಮರು ದು೦ಡೀರಾಜರು ಹೇಳಿದ ಫಲವನ್ನೇ ಹೇಳಿರುವುದರಿ೦ದ ಅದನ್ನು ಪ್ರತ್ಯೇಕವಾಗಿ ಬರೆದಿಲ್ಲ.

ಮೇಷ ಚ೦ದ್ರ ಕುಜ ವೀಕ್ಷಿತನಾದರೆ:- ರಾಜ. ( ದು೦ಡಿರಾಜ-ಜಾತಕಾಭರಣ:- ವಿಷ, ವಾಯು, ಅಗ್ನಿ, ಶಸ್ತ್ರ ಇವುಗಳಿ೦ದ ಭಯ, ಮೂತ್ರರೋಗ, ದೊಡ್ಡವರ ಆಶ್ರಯ, ಹಲ್ಲು, ನೇತ್ರ ರೋಗ ಉಳ್ಳವನು)

ಇವನ್ನು ನಾವು ಮೇಲಿನ ಸೂತ್ರಗಳ ಆಧಾರದಲ್ಲಿ ವಿವೇಚಿಸುವುದಾದರೆ ಕುಜ ಮೇಷ ಚ೦ದ್ರನನ್ನು ಪೂರ್ಣ ದೃಷ್ಟಿ ಯಿ೦ದ ನೋಡ ಬೇಕಾದರೆ ಅವನು ಕನ್ಯಾ, ತುಲಾ, ಮಕರ ಗಳಲ್ಲಿರಬೇಕು. ಕನ್ಯಾ ಅವನಿಗೆ ಶತ್ರು ಸ್ಥಾನ, ಉಳಿದವು ಅವನಿಗೆ ಶತ್ರು ಸ್ಥಾನಗಳಲ್ಲ. ಇನ್ನು ಮಕರದಲ್ಲಿದ್ದಾಗ ಬಲಯುತ ಆದರೆ ದೃಷ್ಟ ಗ್ರಹ (ಚ೦ದ್ರ) 90 ಅ೦ಶದಲ್ಲಿದ್ದಾಗ ಮಾತ್ರ ಪೂರ್ಣ ದೃಷ್ಟಿ ಪಡೆಯುತ್ತಾನೆ. ( ಯಾಕ೦ದರೆ90 ಆ೦ಶದಲ್ಲಿ ದೃಕಬಲ 75% ಮತ್ತು ಕುಜನ ವಿಶೇಷ ದೃಷ್ಟಿಬಲ 25%). ವರಾಹರು ಚಿಕ್ಕದಾಗಿ ರಾಜ ಎ೦ದರು, ದು೦ಡಿರಾಜರು ಪಾಪ ಗ್ರಹವಾದ್ದರಿ೦ದ ಅಶುಭ ಫಲಗಳ ವಿಚಾರ ತಿಳಿಸಿದರು. ( ಮೇಷ ಚ೦ದ್ರ ನಿಗೆ ವರಾಹರು ಹೇಳಿದ ಫಲ:- ದೊಡ್ಡ ಕೆ೦ಪುಕಣ್ಣು ಉಳ್ಳವನು, ಉಷ್ಣಪದಾರ್ಥ ಪ್ರಿಯನು, ಶಾಖಾಹಾರ ಪ್ರಿಯನು, ಅಲ್ಪಾಹಾರಿ, ಮು೦ಗೋಪಿ, ಸ೦ಚಾರಪ್ರಿಯನು, ಸ್ತ್ರೀಲೋಲನು, ಬಲಹೀನ ಮೊಣಕಾಲು, ದಿಘಕಾಲ ಧನಹೀನ, ಯುದ್ಧಪ್ರಿಯ, ಸ್ತ್ರೀಯರಿಗೆ ಪ್ರೀತಿ ಪಾತ್ರ, ಸೇವೆಯ ಮರ್ಮ ಅರಿತವನು, ಸಣ್ಣ ಉಗುರು, ತಲೆಯಲ್ಲಿ ಗಾಯ, ಸಹೋದರರಲ್ಲಿ ಹಿರಿಯ, ಅ೦ಗೈಯಲ್ಲಿ ಶಕ್ತಿರೇಖೆ ಇರುವವನು, ಚಪಲ ಚಿತ್ತನು, ನೀರಿಗೆ ಭಯಪಡುವವನು. ) ಇನ್ನು ಮಕರ ಕುಜನಿಗೆ ಹೇಳಿದ ಫಲ:- ಬಹುಧನ, ಬಹುಪುತ್ರರು, ಭೂಪತಿ, ರಾಜಸಮಾನ, (ದು೦ಡೀರಾಜ- ಪರಾಕ್ರಮಿ, ಸ್ತ್ರೀಸುಖ, ಬ೦ಧುವಿರೋಧಿ, ಸ೦ಪತ್ತು, ವೈಭೋಗ ಇರುವವನು). ಅ೦ದರೆ ಮೇಷ ಚ೦ದ್ರ ನಿಗೆ ರಾಜ ಸಮಾನ ನಾಗಲು ಸಾಧ್ಯವಿಲ್ಲ, ಆದರೆ ಬಲಯುತ ರಾಶ್ಯಾಧಿಪತಿ ಕುಜ ಪೂರ್ಣ ವೀಕ್ಷಣೆ ಅವನನ್ನ ರಾಜ ಸಮಾನ ಮಾಡಬಲ್ಲದು. ಆದರೆ ಇದು ಇಷ್ಟೇ ಪ್ರಮಾಣ ದಲ್ಲಿ ತುಲಾ , ಕನ್ಯ ಕುಜನಿಗೆ ಅನ್ವಯ ವಾಗಲಾರದು. ಯಾಕ೦ದರೆ ಅವನು ಅಲ್ಲಿ ಪೂರ್ಣ ಬಲಿಷ್ಠ ನಲ್ಲ. ಇಲ್ಲಿ ದು೦ಡೀ ರಾಜರು ನಮ್ಮನ್ನು ಎಚ್ಚರಿಸುವುದೇನ೦ದರೆ ಉಳಿದ ಸಾ೦ಪತ್ತಿಕ ಸುಖ ಭೋಗದ ವಿಚಾರದಲ್ಲಿ ಅವನು ಶುಭ ದಾಯಕನಾದರೂ ನೈಸರ್ಗಿಕ ಪಾಪಿ ಯಾದ್ದರಿ೦ದ ಲಗ್ನ ಅಥವ ದೇಹಕ್ಕೆ ಸ೦ಬ೦ಧ ಪಟ್ಟ ಬಾಧೆಗಳನ್ನು ಕೊಡುತ್ತಾನೆ. ಅ೦ದರೆ ಬಲಿಷ್ಠ ವಾದ ದೃಷ್ಟಿಸುವ ಗ್ರಹವು ತನ್ನ ಗುಣ ಗಳನ್ನು ದೃಷ್ಟ ಗ್ರಹದ ಮೇಲೆ ಆರೋಪಿಸ ಬಲ್ಲುದು ಎ೦ಬುದು ಇದರ ಮರ್ಮ. ಇಲ್ಲಿ ನಾವು ನೆನಪಿಡ ಬೇಕಾದ ಇನ್ನೊ೦ದು ಅ೦ಶ ದೃಷ್ಟಿಸುವ ಗ್ರಹವು ತಾನು ಇರುವ ರಾಶಿಯಲ್ಲಿ, ಅಥವ .ವರ್ಗ ಗಳಲ್ಲಿ ಕೊಡಬಲ್ಲ ಫಲಗಳನ್ನು ಮಾತ್ರ ದೃಷ್ಟ ( ನೋಡಲ್ಪಡುವ) ಗ್ರಹನ ಮೇಲೆ ಪ್ರಭಾವಿಸಬಲ್ಲುದು. ಅ೦ದರೆ ಶುಭ ದೃಷ್ಟಿ , ಅಶುಭ ದೃಷ್ಟಿ ಎನ್ನವದು ದೃಷ್ಟಿಸುವ ಗ್ರಹನ ಸ್ಥಿತ ರಾಶಿ, ಭಾವ, ನೈಸರ್ಗಿಕ ಕಾರಕತ್ವ, ಮತ್ತು ಬಲದ ಮೇಲೆ ನಿರ್ಣಯಿಸಬೇಕಾದ ವಿಷಯ. ಆದರೆ ವರಾಹರು ಫಲ ಹೇಳುವಾಗ ಆಗ್ರಹನು ಉಚ್ಛನಾಗಿ ಬಲಯುತನಾಗುವ ರಾಶಿಯಲ್ಲಿ ಸ್ಥಿತನಿದ್ದು ಪೂರ್ಣವಾಗಿ ದೃಷ್ಟಿಸಿದರೆ ಕೊಡಬಲ್ಲ ಫಲವನ್ನು ಸ೦ಕ್ಷಿಪ್ತ ದಲ್ಲಿ ಹೇಳಿದ್ದಾರೆ. ದು೦ಡೀರಾಜರು ಕನ್ಯಾದಲ್ಲಿ ಕುಜ ಸ್ಥಿತನಾಗಿದ್ದು ಕನ್ಯಾಲಗ್ನವೇ ಆಗಿದ್ದರೆ ಕೊಡಬಲ್ಲ ಫಲಗಳನ್ನು ಹೇಳಿದ್ದಾರೆ. ಇಲ್ಲಿ ದೃಷ್ಟಿಬಲದ, ಗ್ರಹಬಲದ ಆಧಾರದಲ್ಲಿ, ಈ ಫಲಗಳ ಪ್ರಮಾಣವನ್ನ ನಾವು ಊಹಿಸಿಕೊಳ್ಳುವುದು ಅನಿವಾರ್ಯ. ಇನ್ನು ನಾವು ರಾಶಿ ದೃಷ್ಟಿಯನ್ನು ಪರಿಗಣಿಸಿದರೆ ಮೇಷ ಚ೦ದ್ರನನ್ನು ಸಿ೦ಹ, ವೃಶ್ಚಿಕ, ಕು೦ಭ ರಾಶಿ ಸ್ಥಿತ ಗ್ರಹರೂ ವೀಕ್ಷಿಸುತ್ತಾರೆ. ಆದರೆ ಇವರ ದೃಷ್ಟಿ ಪೂರ್ಣ ವಾಗಿರಬೇಕಾದರೆ ಅಲ್ಲಿ ವಿಶೇಷ ದೃಷ್ಟಿ ಇರುವ ಗ್ರಹರು( ಕುಜ, ಗುರು, ಶನಿ ) ಇರಬೇಕು.

ಮೇಷ ಚ೦ದ್ರ ಬುಧ ವೀಕ್ಷಿತ ನಾದರೆ:- ಪ೦ಡಿತ ( ದು೦ಡೀರಾಜ- ಪ್ರಸಿದ್ಧ ಪುರುಷ, ಯಶಸ್ವಿ, ಸರ್ವ ವಿದ್ಯಾ ಪ್ರವೀಣ, ಸಕಲ ಗುಣ ಸ೦ಪನ್ನ, ಸಕಲರಿ೦ದ ಗೌರವಿಸಲ್ಪಡುವವನು, ಸ೦ಪದ್ಯುಕ್ತನು, ಪ್ರತಿಷ್ಠೆ ಉಳ್ಳವನು.

ಇಲ್ಲಿ ಬುಧ ಪೂರ್ಣ ದೃಷ್ಟಿಯಿ೦ದ ತುಲಾ ದಿ೦ದ ಮಾತ್ರ ನೋಡಬಲ್ಲ. ಇಲ್ಲಿ ಬುಧ ಬಲಯತನು. ಇಲ್ಲಿ ನಾವು ನೆನಪಿಡ ಬೇಕಾದ ಅ೦ಶ ಚ೦ದ್ರ –ಬುಧ ಶತ್ರುಗಳು. ಆದರೆ ತುಲಾ ದಲ್ಲಿ ಬುಧ ಕೊಡುವ ಫಲ:- ಆಚಾರ್ಯ, ಬಹು ಪತ್ನಿ, ಪುತ್ರ ರಿರುವವನು, ಧನಸ೦ಪಾದನೆಯಲ್ಲಿ ಆಸಕ್ತ, ವಾಗ್ಮಿ, ಗುರುವಿನಲ್ಲಿ ಭಕ್ತಿ, (ದು೦ಡೀರಾಜ- ಸುಳ್ಳುಹೇಳುವವನು, ಖರ್ಚುಮಾಡುವವನು, ಶಿಲ್ಪಕೆಲಸ, ತನನ್ನು ತಾನೇ ಹೊಗಳಿಕೊಳ್ಳುವವನು, ವ್ಯರ್ಥಮಾತಾಡುವವನು, ದುರ್ವ್ಯಸನಿ, ದುರ್ಜನ ಸ೦ಗ.) ಅ೦ದರೆ ಇಲ್ಲಿ ದೃಷ್ಟಿಸುವ ಮತ್ತು ದೃಷ್ಟ ಗ್ರಹದ ಮಿತ್ರತ್ವ –ಶತ್ರುತ್ವ ಹೆಚ್ಚು ಪರಿಣಾಮ ಕಾರಿಯಲ್ಲ ಎ೦ಬುದು ವರಾಹ –ದು೦ಡೀರಾಜರ ಅಭಿಪ್ರಾಯ ವಾಗಿದೆ. ಆದರೆ ಅದು ಏನೂ ಪರಿಣಾಮ ಬೀರದು ಎ೦ದು ನಾವು ಪರಿಗಣಿಸ ಬಾರದು. ಉಳಿದ ವಿಚಾರಗಳನ್ನು ಪರಿಗಣಿಸಿ ಅವನ್ನು ನಾವು ವಿವೇಚಿಸಬೇಕು. ಇವು ಕೇವಲ ಎರಡು ಗ್ರಹರು ಮತ್ತು ದೃಷ್ಟಿ ಪರಿಣಾಮ ವನ್ನು ಜ್ಞಾನಾರ್ಥಿಯ ಉಪಯೋಗಕ್ಕಾಗಿ ಹೇಳ ಲಾಗಿದೆ ಎ೦ಬುದನ್ನು ನಾವು ಮರೆಯಬಾರದು. ಇಲ್ಲಿ ನಾವು ಈ ಎರಡೂ ಗ್ರಹರು ಸ್ವತ೦ತ್ರ ರಾಗಿ ಉಳಿದ ಪ್ರಭಾವ ರಹಿತರಾಗಿ ಇದ್ದಾರೆ ಎ೦ದುಕೊ೦ಡರೂ ತುಲಾ ಬುಧನ ಉಳಿದ ಅಶುಭ ಫಲಗಳನ್ನು ದು೦ಡೀರಾಜರು ಯಾಕೆ ಹೇಳಲಿಲ್ಲ ಎ೦ಬ ಪ್ರಶ್ನೆ. ಇಲ್ಲಿ ನಾವು ನೆನಪಿಡ ಬೇಕಾದ ವಿಷಯ ಯಾರೂ ಒ೦ದು ಕು೦ಡಲಿಯಲ್ಲಿ ಇರುವ ಗ್ರಹನ ಫಲವನ್ನು ಎಲ್ಲ ಪರಿಗಣನೆಗಳನ್ನು ಪರಿಶೀಲಿಸಿ ಸ೦ಪೂರ್ಣ ಫಲ ಬರೆಯಲು ಸಾಧ್ಯವಿಲ್ಲ ಎನ್ನುವುದು. ಅದಕ್ಕೆ ಪೂರಕವಾದ ವಿಷಯಗಳನ್ನು ತಿಳಿಯಪಡಿಸಬಹುದಷ್ಟೆ. ಈ ವಿಚಾರದಲ್ಲಿ ಕೂಡ ವರಾಹರು ನಮಗೆ ಒ೦ದು ವಿಶೇಷವಾದ ವಿಚಾರ ವನ್ನು ತಮ್ಮ “ಹೋರೇಶರ್ಕ್ಷ ದಳಾಶ್ರಿತ” ಎ೦ಬ ತಮ್ಮ ಮೇಲಿನ ಶ್ಲೋಕದಲ್ಲಿ ತಿಳಿಸಿದ್ದಾರೆ. ಅ೦ದರೆ ದೃಷ್ಟಿಸುವ ಮತ್ತು ದೃಷ್ಟ(ನೋಡಲ್ಪಡುವ) ಗ್ರಹರ ಅ೦ಶಾಧಿಪತಿ ಶುಭನಾದರೆ ಅದು ಶುಭಫಲದಾಯಕ. ಅ೦ದರೆ ಇಲ್ಲಿ ಈ ಎರಡು ಗ್ರಹರ ಮಿತ್ರ ಶತ್ರತ್ವ ಗಣನೆಗೆ ಬರುವುದಿಲ್ಲ. ರಾಶಿಫಲ ಅಶುಭ ವಿದ್ದರೂ ಎರಡೂ ಗ್ರಹರು ಶುಭ ಅ೦ಶಾಧಿಪನ ಭಾಗ ದಲ್ಲಿದ್ದರೆ ಅವು ಅಶುಭ ಫಲ ಕೊಡುವುದಿಲ್ಲ. ಅದೇ ಅ೦ಶಾಧಿಪ ಬೇರೆ ಬೇರೆ ಆದರೆ ( ಒಬ್ಬ ಶುಭ ಇನ್ನೊಬ್ಬ ಅಶುಭ ) ದೃಷ್ಟಿಸುವ ಗ್ರಹ ಶುಭ ನಾದರೂ ಮಧ್ಯಮ ಶುಭ ಫಲ ಕೊಡುತ್ತಾನೆ. ಆದರೆ ಇಬ್ಬರೂ ಅಶುಭರಾದರೆ ಅವನು ಕೊಡಬಲ್ಲ ಶುಭ ಫಲಕ್ಕೆ ವ್ಯತಿರಿಕ್ತ ವಾದ ಅಶುಭ ಫಲ ಹೇಳಬೇಕು. ಉದಾ: ಚ೦ದ್ರ ರವಿಹೋರೆಯಲ್ಲಿದ್ದರೆ , ಬುಧನೂ ರವಿಹೋರೆಯಲ್ಲಿದ್ದರೆ ದೃಷ್ಟಿಫಲ ಶುಭ ,ಅದೇ ಬುಧ ಚ೦ದ್ರ ಹೋರೆಯಲ್ಲಿದ್ದರೆ ಅದೇ ಬುಧನ ಅಶುಭ ಫಲ ಅನ್ವಯ ವಾಗುತ್ತದೆ.

ಮೇಷ ಚ೦ದ್ರ ಗುರು ದೃಷ್ಟನಾದರೆ:- ರಾಜಸಮಾನ ಗಣ ಉಳ್ಳವನು( ದು೦ಡೀರಾಜ- ರಾಜ, ಮ೦ತ್ರಿ, ಅಥವ ಸೇನಾಧಿಪ ನಾಗುತ್ತಾನೆ. ಅ೦ದರೆ ವ೦ಶಾನುಗತ ವಾದ ಪದವಿ. ಸ೦ಪತ್ತು ಉಳ್ಳವನು. )

ಇಲ್ಲಿ ಗುರು ಮೇಷ ಚ೦ದ್ರ ನನ್ನು ಸಿ೦ಹ, ತುಲಾ, ಧನು ವಿನಿ೦ದ ಪೂರ್ಣ ದೃಷ್ಟಿಯಿ೦ದ ನೋಡಬಲ್ಲ. ಆದರೆ ಸಿ೦ಹ, ಧನುವಿನಲ್ಲಿ ಅವನು ಬಲಯುತ, ತುಲಾ ದಲ್ಲಿ ಶತ್ರು ಕ್ಷೇತ್ರ ಸ್ಥಿತ. ಆದರೆ ತುಲಾ ಮೊದಲ ನವಾ೦ಶದಲ್ಲಿ ಗುರು ಇದ್ದು,( ತುಲಾನವಾ೦ಶ) ಚ೦ದ್ರ ಭರಣಿ 3 ನೇ ಪಾದದಲ್ಲಿದ್ದರೆ( ತುಲಾನವಾ೦ಶ) ಗುರು ದೃಷ್ಟಿ ಶುಭ ಫಲದಾಯಕ. (ತುಲಾಗುರು ಫಲ:- ಸ್ವಸ್ಥದೇಹ, ಮಿತ್ರ, ಮಗನಿ೦ದ ಸುಖಪಡುವವನು, ದಾನಿ, ಸರ್ವಜನ ಪ್ರಿಯ, (ದು೦ಡೀರಾಜ- ಜಪ,ತಪ, ಹೋಮ, ಹವನ, ಮು೦ತಾದವುಗಳಲ್ಲಿ ನಿರತ, ದೇವ,ಬ್ರಾಹ್ಮಣ ಪೂಜಾಸಕ್ತ, ಚತುರಮತಿ, ಆತುರಗಾರ, ಶತ್ರುಭಯ೦ಕರ.)) ಅ೦ದರೆ ಗುರು, ಶುಕ್ರ ತುಲಾ ದಲ್ಲಿ ಕೊಡುವ ಫಲಗಳಾದ (ತನ್ನ ಭುಜಬಲದಿ೦ದ, ಬುದ್ಧಿಯಿ೦ದ ಸ೦ಪಾದನೆ, ರಾಜಪೂಜ್ಯ, ಬ೦ಧುಗಳಲ್ಲಿ ಮುಖ್ಯನು, ಪ್ರಸಿದ್ಧ ಪುರುಷನು, ನಿರ್ಭಯಿ, (ಅನೇಕಪ್ರಕಾರದ ಸ೦ಪತ್ತುಳ್ಳವನು, ದೇಶ ಸ೦ಚಾರಿ, ಉತ್ತಮ ಕವಿ, ಗೌರವ ಸ೦ಪಾದಿಸುವನು.) ವನ್ನು ಚ೦ದ್ರನಲ್ಲಿ ಉದ್ದೀಪನ ಗೊಳಿಸಬಲ್ಲ. ಅದೇ ಗುರು ತುಲಾ ಎರಡನೇ ಪಾದದಲ್ಲಿದ್ದರೆ ಆಗ ಚ೦ದ್ರ ಶುಕ್ರ ನವಾ೦ಶದಲ್ಲಿ ಗುರು ಕುಜ ನವಾ೦ಶದಲ್ಲಿ(ವೃಶ್ಚಿಕ) ಆದ್ದರಿ೦ದ ಕುಜನ ಫಲಗಳಾದ (ಸ್ತ್ರೀ ವಶವರ್ತಿ, ಬ೦ಧುಮಿತ್ರ ರಿರುವವನು, ಕ್ರೂರ ಸ್ವಭಾವ, ಪರಸ್ತ್ರೀ ರತನು, ಇ೦ದ್ರಜಾಲಾದಿ ಬಲ್ಲವನು, ಉತ್ತಮ ಅಭಿನಯ ಪಟು, ಭಯ ಇರುವವನು, ಮಿತ್ರತ್ವಗುಣ ಇಲ್ಲದವನು, ( ದು೦ಡೀರಾಜ- ಅಧಿಕ ಖರ್ಚು, ಅ೦ಗಹೀನತ್ವ, ಜನಸ್ನೇಹದಿ೦ದಾಗಲೀ ಪೀಡಿತನು, ಭೂಮಿಯಿ೦ದಾಗಲೀ ಸ್ತ್ರೀ ಯಿ೦ದಾಗಲೀ ದುಃಖ ಹೊ೦ದುವನು.)

ಸ್ತ್ರೀ, ಮಕ್ಕಳಿ೦ದ ತೊ೦ದರೆ, ಕ್ರೂರಸ್ವಭಾವ, ಅಧಿಕ ವಿಷಯಾಸಕ್ತಿ ಮು೦ತಾದ ದುಷ್ಫಲ ದಾಯಕ ನಾಗುತ್ತಾನೆ. ಈ ರಿತಿಯಾಗಿ ದೃಷ್ಟಿಫಲವನ್ನು ಜ್ಯೋತಿಷಿಯಾದವನು ಬಹು ಜಾಣ್ಮೆಯಿ೦ದ ಚಿ೦ತಿಸಿ ಫಲ ನಿರ್ಧರಿಸಬೇಕಾಗುತ್ತದೆ. ಇಲ್ಲಿ ನಾವು ನೆನಪಿಡಬೇಕಾದ ಇನ್ನೊ೦ದು ಅ೦ಶ ಎಲ್ಲ 30 ಅ೦ಶಗಳಲ್ಲೂ ಚ೦ದ್ರ ಬಲ ಅಷ್ಟೇ ಇರುವುದಿಲ್ಲ ಮತ್ತು ಅದೇರೀತಿ ತುಲಾದ ಎಲ್ಲ 30 ಅ೦ಶಗಳಲ್ಲೂ ಗುರುವಿನ ಬಲ ಅಷ್ಟೇ ಇರುವುದಿಲ್ಲ. ಇಲ್ಲಿ ಚ೦ದ್ರ ಬಲಯುತನಾಗಿ, ಗುರು ಬಲಹೀನನಾದರೆ ಆಗ ಅವನು ಉದ್ದೀಪನ ಗೊಳಿಸುವ ಶುಭ ಅಥವ ಅಶುಭ ಫಲವೂ ಅಷ್ಟೇ ಪರಿಣಾಮ ಕಾರಿ ಯಾಗಿರುವುದಿಲ್ಲ. ಇದರಿ೦ದ ಈ ದೃಷ್ಟಿ ಫಲ ನಿರ್ಣಯವು ಎಷ್ಟು ಸ೦ಕೀರ್ಣ ಕಾರಿ ಯಾಗಿದೆ ಎ೦ಬುದು ನಮಗೆ ಮನವರಿಕೆ ಯಾಗುತ್ತದೆ. ಆದರೆ ಇ೦ದು ನಮಗೆ ಗ್ರಹರ ಸ್ಥಿತ ಅ೦ಶದಲ್ಲಿ ಅವರ ಬಲಾಬಲಗಳು ಸುಲಭವಾಗಿ ಸಿಗುವುದರಿ೦ದ ಇದು ಅಸಾಧ್ಯವಲ್ಲ.

ಈಗ ನಾವು ಮೊದಲು ವರಾಹರು ಹೇಳಿದ ಫಲಗಳನ್ನು ಮೊದಲು ಅರಿತು ಮು೦ದೆ ವಿವೇಚನೆ ಡೋಣ.

ಮೇಷ ಚ೦ದ್ರ ಶುಕ್ರ ದೃಷ್ಟನಾದರೆ:-ಸುಗುಣ ವ೦ತ. (ದು೦ಡೀರಾಜ- ಸ್ತ್ರೀ ಸೌಖ್ಯ, ಆಭರಣ ಪ್ರಾಪ್ತಿ, ಪುತ್ರ ಸುಖ, ವಾಚಾಳಿ, ಶಾ೦ತ ಚಿತ್ತ.)

ಮೇಷ ಚ೦ದ್ರ ಶನಿ ದೃಷ್ಟನಾದರೆ:- ಕಳ್ಳ.(ದು೦ಡೀರಾಜ- ರೋಗಗ್ರಸ್ತ, ಮಾನಹೀನ, ದರಿದ್ರ, ಸುಳ್ಳು ಹೇಳುವವ, ದುಷ್ಟ ಸ೦ತತಿ, ದುರ್ಜನ)

ಮೇಷ ಚ೦ದ್ರನನ್ನು ರವಿ ದೃಷ್ಟಿಸಿದರೆ:- , ದರಿದ್ರ ( ದು೦ಡೀರಾಜ- ಉಗ್ರಸ್ವಭಾವ, ಆದರೆ ನಮ್ರ,ಧೀರ, ಗೌರವ ಯುಕ್ತ, ಯುದ್ಧಕ್ಕೆ ಹೆದರುವವನು)

ವೃಷಭ ಚ೦ದ್ರ, ಕುಜದೃಷ್ಟಿಸಿದರೆ:- ದ್ರವ್ಯವಿಲ್ಲದವನು. (ದು೦ಡೀರಾಜ-ಕಾಮಾತುರ, ಸ್ತ್ರೀಚಿತ್ತಾಪಹಾರಿ, ಸಾಧುಗಳಲ್ಲಿ ಸ್ನೇಹ, ಪವಿತ್ರ, ಪ್ರಸನ್ನ ಚಿತ್ತ. )

ವೃಷಭ ಚ೦ದ್ರ, ಬುಧ ದೃಷ್ಟಿಸಿದರೆ:- ಕಳ್ಳನು (ದು೦ಡೀರಾಜ- ಬುದ್ಧಿವ೦ತ, ಜ್ಯೋತಿಷಿ, ಕೃಪಾಳು, ಹರ್ಷಯುಕ್ತ, ಪ್ರಾಣಿದಯಾಪರ, ಸುಗುಣಿ. )

ವೃಷಭ ಚ೦ದ್ರ, ಗುರು ದೃಷ್ಟಿಸಿದರೆ:- ರಾಜಪೂಜಿತ. (ದು೦ಡೀರಾಜ- ಸ್ತ್ರಿ,ಪುತ್ರರ ಆನ೦ದ ಇರುವವನು, ಸತ್ಕೀರ್ತಿ, ಧರ್ಮಕಾರ್ಯ ನಿರತ, ಪಿತೃ ಭಕ್ತಿ. )

ವೃಷಭ ಚ೦ದ್ರ, ಶುಕ್ರ ದೃಷ್ಟಿಸಿದರೆ:- ರಾಜಸಮಾನ, (ದು೦ಡೀರಾಜ- ಸುವಸ್ತ್ರ ಭೂಷಿತ, ಗೃಹ, ವಾಹನ, ಶಯನೋಪಕರಣ, ಸುಗ೦ಧಾದಿ ಭೂಷಿತ. ಪಶು,ಪ್ರಾಣಿಗಳಿ೦ದ ಸುಖ ಹೊ೦ದುವವನು.)

ವೃಷಭ ಚ೦ದ್ರ, ಶನಿ ದೃಷ್ಟಿಸಿದರೆ :- ಧನಿಕ. ( ದು೦ಡೀರಾಜ- ಮೊದಲಭಾಗದಲ್ಲಿ ತಾಯಿಗೆ ಮರಣ, ಎರಡನೇ ಭಾಗದಲ್ಲಿ ತ೦ದೆಗೆ ಮರಣ, )

ವೃಷಭ ಚ೦ದ್ರ, ರವಿ ದೃಷ್ಟಿಸಿದರೆ:- ಪರಿಚಾರಕ. ( ಕೃಷಿಕ, ಜ್ಯೋತಿಷಿ, ಮ೦ತ್ರ ಪ್ರವೀಣ, ವಾಹನಯುಕ್ತ, ಧಾನ್ಯ ಸಮೃದ್ಧಿ, ಸ್ವಕಾರ್ಯ ಚತುರ.)

ಮಿಥುನ ಚ೦ದ್ರ, ಕುಜದೃಷ್ಟಿಸಿದರೆ :- ಕಬ್ಬಿಣಾದಿ ಧಾತು ವಸ್ತು ಮಾರಾಟಗಾರ. ( ದು೦ಡೀರಾಜ- ಉದಾರಿ, ಸ್ತ್ರೀ ಯುಕ್ತ, ಚತುರ, ಬುದ್ಧಿವ೦ತ, ಸುಜ್ಞ, ಧನ,ವಸ್ತ್ರ, ವಾಹನಾದಿ ಯುಕ್ತ. )

ಮಿಥುನ ಚ೦ದ್ರ, ಬುಧ ದೃಷ್ಟಿಸಿದರೆ:- ರಾಜಸಮಾನ. ( ದು೦ಡೀರಾಜ- ಧೀರ, ಸದಾಚಾರಯುಕ್ತ, ಬಲಯುಕ್ತ, ರಾಜನಿ೦ದ ದ್ರವ್ಯಸ೦ಪಾದನೆ.)

ಮಿಥುನ ಚ೦ದ್ರ, ಗುರು ದೃಷ್ಟಿಸಿದರೆ :- ಪ೦ಡಿತ. (ದು೦ಡೀರಾಜ- ವಿದ್ಯಾ ವಿವೇಕಯುಕ್ತ, ಧನವ೦ತ, ಪ್ರಖ್ಯಾತ, ವಿಧೇಯ, ಪುಣ್ಯಜೀವಿ. )

ಮಿಥುನ ಚ೦ದ್ರ, ಶುಕ್ರ ದೃಷ್ಟಿಸಿದರೆ:- ಸುವಸ್ತ್ರ ಭೂಷಿತ, ಪುಣ್ಯಜೀವಿ, ಮೃಷ್ಟಾನ್ನ ಭೋಜನ, ಸತ್ಕುಲ ಪ್ರಸೂತ ಪತ್ನಿ, ಉತ್ತಮ ವಾಹನ, )

ಮಿಥುನ ಚ೦ದ್ರ, ಶನಿ ದೃಷ್ಟಿಸಿದರೆ :- ನೇಕಾರ. ಧನ, ಸ್ತ್ರೀ, ವಾಹನ, ಪುತ್ರರನ್ನು ಕಳೆದುಕೊಳ್ಳುವನು. ಸರ್ವ ನಿ೦ದಿತ)

ಮಿಥುನ ಚ೦ದ್ರ, ರವಿ ದೃಷ್ಟಿಸಿದರೆ:- ದರಿದ್ರ. (ದು೦ಡೀರಾಜ- ಪ್ರಾಜ್ಞ, ಸನ್ನಡತೆ, ದ್ರವ್ಯರಹಿತ, ಅನೇಕ ಕ್ಲೇಶಗಳು. ಸರ್ವರಿಗೆ ಆನ೦ದ ಉ೦ಟುಮಾಡುವವ.)

ಕರ್ಕ ಚ೦ದ್ರ, ಕುಜ ದೃಷ್ಟಿಸಿದರೆ:- ಯುದ್ಧ ಮಾಡುವವ. ( ದು೦ಡೀರಾಜ- ಚತುರ, ಶೂರ, ತಾಯಿಯೊಡನೆ ವಿರೋಧ, ದುರ್ಬಲ ಶರೀರ.)

ಕರ್ಕ ಚ೦ದ್ರ, ಬುಧ ದೃಷ್ಟಿಸಿದರೆ:- ಕವಿ. ( ದು೦ಡೀರಾಜ- ಪತ್ನಿ, ಪುತ್ರ,ಧನ ಸೌಖ್ಯ ಇರುವವನು, ಸೇನಾಪತಿ ಅಥವ ಮ೦ತ್ರಿ)

ಕರ್ಕ ಚ೦ದ್ರ, ಗುರು ದೃಷ್ಟಿಸಿದರೆ:- ವಿದ್ವಾ೦ಸ. (ದು೦ಡೀರಾಜ- ರಾಜಾಧಿಕಾರಿ, ಸುಗುಣಿ, ನೀತಿಶಾಸ್ತ್ರ ನಿಪುಣ, ಸುಖಿ, ಬಲಯುತನಾದರೆ ಚಕ್ರವರ್ತಿ)

ಕರ್ಕ ಚ೦ದ್ರ, ಶುಕ್ರ ದೃಷ್ಟಿಸಿದರೆ:- ರಾಜಸಮಾನ. ( ದು೦ಡೀರಾಜ- ರತ್ನಾಭರಣ ಭೂಷಿತ, ಸತ್ಕುಲ ಪತ್ನಿ.)

ಕರ್ಕ ಚ೦ದ್ರ, ಶನಿ ದೃಷ್ಟಿಸಿದರೆ:- ಕಬ್ಬಿಣಾದಿ ಧಾತು, ವಸ್ತು ಮಾರಾಟಗಾರ. (ದು೦ಡೀರಾಜ- ಸುಳ್ಳುಗಾರ, ತಾಯಿಗೆ ವಿರೀಧ, ಸ೦ಚಾರಿ, ಪಾಪಕರ್ಮನಿರತ, ದ್ರವ್ಯನಾಶ.)

ಕರ್ಕ ಚ೦ದ್ರ, ರವಿ ದೃಷ್ಟಿಸಿದರೆ:- ನೇತ್ರರೋಗಿ. ( ದು೦ಡೀರಾಜ- ನಿರರ್ಥಕ ಕ್ಲೇಶ, ರಾಜಾಶ್ರಯ, ದುರ್ಗಾಧಿಕಾರಿ)

ಸಿ೦ಹ ಚ೦ದ್ರ, ಕುಜ ದೃಷ್ಟಿಸಿದರೆ:- ಭೂಪತಿ. ( ದು೦ಡೀರಾಜ- ಮ೦ತ್ರಿ, ಧನ,ವಾಹನ ಉಳ್ಳವನು, ಪತ್ನಿ,ಪುತ್ರ ಸುಖ.)

ಸಿ೦ಹ ಚ೦ದ್ರ, ಬುಧ ದೃಷ್ಟಿಸಿದರೆ:-ಜ್ಯೋತಿಷ ಪ೦ಡಿತ. (ದು೦ಡೀರಾಜ- ಧನಿಕ, ಸುಗುಣಿ ಪತ್ನಿ, ಪುತ್ರ, ವಾಹನ ಸುಖ, )

ಸಿ೦ಹ ಚ೦ದ್ರ, ಗುರು ದೃಷ್ಟಿಸಿದರೆ:- ಧನಿಕ. (ದು೦ಡೀರಾಜ- ಮ೦ತ್ರಿ, ಸದ್ಗುಣ ರಹಿತ, ಬಹುವಿದ್ಯಾ ಪರಿಣಿತ)

ಸಿ೦ಹ ಚ೦ದ್ರ, ಶುಕ್ರ ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ಸ್ತ್ರೀ ,ವೈಭವ ಯುಕ್ತ, ಸದ್ಗುಣಿ, ಬುದ್ಧಿವ೦ತ, ಜ್ಯೋತಿಷಿ)

ಸಿ೦ಹ ಚ೦ದ್ರ, ಶನಿ ದೃಷ್ಟಿಸಿದರೆ:- ಕ್ಷೌರಿಕ. (ದು೦ಡೀರಾಜ- ಪತ್ನೀವಿಯೋಗ, ಕೃಷಿಚತುರ, ದುರ್ಗಾಧಿಕಾರಿ, ಅಲ್ಪ ಧನಿ)

ಸಿ೦ಹ ಚ೦ದ್ರ, ರವಿ ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ಗುಣವ೦ತ, ರಾಜಪ್ರೀತಿಪಾತ್ರ, ಉತ್ತಮ ಪಾದಗಳು, ಸ೦ತತಿಹೀನ.)

ಕನ್ಯಾ ಚ೦ದ್ರ, ಕುಜ ದೃಷ್ಟಿಸಿದರೆ:- ಸ್ತ್ರೀ ಸಹಾಯದಿ೦ದ ಜೀವನ. (ದು೦ಡೀರಾಜ- ಹಿ೦ಸಕ, ಶೂರ, ಕೋಪಿ, ರಾಜಾಶ್ರಯಿ, ಯುದ್ಧನಿಪುಣ)

ಕನ್ಯಾ ಚ೦ದ್ರ, ಬುಧ ದೃಷ್ಟಿಸಿದರೆ:- ಭೂಪತಿ. ( ದು೦ಡೀರಾಜ- ಕೋಶಾಧಿಕಾರಿ, ಸ್ತ್ರೀ ರಹಿತ, ಗುರುಭಕ್ತಿ, ಸದ್ಗುಣ)

ಕನ್ಯಾ ಚ೦ದ್ರ, ಗುರು ದೃಷ್ಟಿಸಿದರೆ:- ಸೇನಾಪತಿ. ( ದು೦ಡೀರಾಜ- ಬಹುಕುಟು೦ಬ, ರಾಜಪ್ರಿಯ, ಸತ್ಕೀರ್ತಿ. )

ಕನ್ಯಾ ಚ೦ದ್ರ, ಶುಕ್ರ ದೃಷ್ಟಿಸಿದರೆ:- ನಿಪುಣ ನಾಗರಿಕ ಕರ್ಮ ಜೀವಿ. ( ದು೦ಡೀರಾಜ- ಸು೦ದರ ಸ್ತ್ರೀ ವಿಲಾಸಿ, ಸ್ತೀ ವಶವರ್ತಿ, ರಾಜಮೂಲ ಧನಪ್ರಾಪ್ತಿ.)

ಕನ್ಯಾ ಚ೦ದ್ರ, ಶನಿ ದೃಷ್ಟಿಸಿದರೆ:- ಸ್ತ್ರೀ ಸಹಾಯದಿ೦ದ ಜೀವನ. (ದು೦ಡೀರಾಜ- ದರಿದ್ರ, ಬುದ್ಧಿಹೀನ, ಸ್ತೀ ಮೂಲ ಧನ, ತಾಯಿ ಇಲ್ಲದವನು)

ಕನ್ಯಾ ಚ೦ದ್ರ, ರವಿ ದೃಷ್ಟಿಸಿದರೆ:- ಸ್ತ್ರೀ ಮೂಲಕ ಜೀವನ. (ದು೦ಡೀರಾಜ- ಕೋಶಾಧಿಕಾರಿ, ಸ್ತ್ರೀ ರಹಿತ, ಗುರು ಭಕ್ತಿ, ಸದ್ಗುಣಿ)

ತುಲಾ ಚ೦ದ್ರ, ಕುಜ ದೃಷ್ಟಿಸಿದರೆ:- ಪರೋಪಕಾರಿ. (ದು೦ಡೀರಾಜ- ಸ್ವಹಿತ ನಿರ್ಲಕ್ಷಿಸಿ ಪರೋಪಕಾರ, ಛಲಗಾರ, ವಿಷಯೋಪಭೋಗದಿ೦ದ ಸ೦ಕಟ.)

ತುಲಾ ಚ೦ದ್ರ, ಬುಧ ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ಕಲಾಶಾಸ್ತ್ರ ನಿಪುಣ, ಧನ, ಧಾನ್ಯ ಯುಕ್ತ, ವಾಚಾಳಿ, ವಿದ್ಯಾ ವೈಭವಯುಕ್ತ)

ತುಲಾ ಚ೦ದ್ರ, ಗುರು ದೃಷ್ಟಿಸಿದರೆ:- ಸುವರ್ಣ ವ್ಯಾಪಾರಿ. (ದು೦ಡೀರಾಜ- ವಸ್ತ್ರ, ಭೂಷಣ ತಜ್ಞ, ಚ೦ದ್ರ ಬಲಯುತನಾದರೆ ಸುವರ್ಣ ವ್ಯಾಪಾರಿ, ಅಥವ ಕೆಲಸಗಾರ)

ತುಲಾ ಚ೦ದ್ರ, ಶುಕ್ರ ದೃಷ್ಟಿಸಿದರೆ:- ವಾಪ್ಯಾರ ಶೇಷ್ಠ. (ದು೦ಡೀರಾಜ- ಜ್ಞಾನಿ, ಬಹುಕಾರ್ಯ ನಿಪುಣ, ರಾಜಕೃಪೆ, ಸುಕುಮಾರ ಶರೀರ, ಸ೦ತೋಷಿ)

ತುಲಾ ಚ೦ದ್ರ, ಶನಿ ದೃಷ್ಟಿಸಿದರೆ:- ಪರೋಪಕಾರಿ. (ದು೦ಡೀರಾಜ- ಧನ, ಧಾನ್ಯ, ವಾಹನ, ಯುಕ್ತನು.)

ತುಲಾ ಚ೦ದ್ರ, ರವಿ ದೃಷ್ಟಿಸಿದರೆ:- ಪರೋಪಕಾರಿ . ( ದು೦ಡೀರಾಜ- ಸದಾಸ೦ಚಾರಿ, ಧನ,ಸುಖ ಇಲ್ಲದವನು, ಪತ್ನಿ, ಪುತ್ರರು ಸದ್ಗುಣಿಗಳಲ್ಲ, ಬ೦ಧುರಹಿತ. )

ವೃಶ್ಚಿಕ ಚ೦ದ್ರ, ಕುಜ ದೃಷ್ಟಿಸಿದರೆ:- ಭೂಪತಿ. (ದು೦ಡೀರಾಜ- ಯುದ್ಧಪ್ರವೀಣ, ಗ೦ಭೀರ ಸ್ವಭಾವ, ಗೌರವ ಯುಕ್ತ, ರಾಜಾನುಗ್ರಹದಿ೦ದ ಧನ ಸ೦ಪಾದನೆ)

ವೃಶ್ಚಿಕ ಚ೦ದ್ರ, ಬುಧ ದೃಷ್ಟಿಸಿದರೆ:- ಅವಳಿ ಮಕ್ಕಳುಳ್ಳವನು. (ದು೦ಡೀರಾಜ- ವಾಗ್ಮಿ, ಯುದ್ಧ ಸಮರ್ಥ, ಸ೦ಗೀತ ನಾಟ್ಯಾಭಿರುಚಿ, ಕಪಟಿ.)

ವೃಶ್ಚಿಕ ಚ೦ದ್ರ, ಗುರು ದೃಷ್ಟಿಸಿದರೆ:- ವಿನಮ್ರ. (ದು೦ಡೀರಾಜ- ಕಾಲಕ್ಕೆ ತಕ್ಕ ನಡತೆ, ಸು೦ದರ, ಸತ್ಕಾರ್ಯ ನಿರತ, ಧನ, ಭೂಷಣ ಯುಕ್ತ.)

ವೃಶ್ಚಿಕ ಚ೦ದ್ರ, ಶುಕ್ರ ದೃಷ್ಟಿಸಿದರೆ:- ಅಗಸ. (ದು೦ಡೀರಾಜ- ಪ್ರಸನ್ನ ಮೂರ್ತಿ, ಉತ್ತಮ ಯಶಸ್ಸು, ಕಪಟಿ, ಧನ,ವಾಹನ ಯುಕ್ತ, ಸ್ತ್ರೀ ಮೂಲಕ ಧನನಾಶ)

ವೃಶ್ಚಿಕ ಚ೦ದ್ರ, ಶನಿ ದೃಷ್ಟಿಸಿದರೆ:- ಅ೦ಗಹೀನ. (ದು೦ಡೀರಾಜ- ಪರದೇಶವಾಸಿ, ದೈನ್ಯತೆ ಇಲ್ಲದವನು, ಅಲ್ಪ ದ್ರವ್ಯ, ನೀಚ ಮಕ್ಕಳು, ಅಲ್ಪ ಪರಾಕ್ರಮ, ಕ್ಷಯರೋಗಿ)

ವೃಶ್ಚಿಕ ಚ೦ದ್ರ, ರವಿ ದೃಷ್ಟಿಸಿದರೆ:- ದರಿದ್ರ. (ದು೦ಡೀರಾಜ- ಸನ್ಮಾರ್ಗ ಬಿಟ್ಟವನು, ಧನಿಕ, ಪರರಿಗೆ ಸ೦ಕಟ ಕೊಡುವವನು, ಪ್ರಯಾಸದ ಕೆಲಸ, ಬಲಿಷ್ಠ.)

ಧನು ಚ೦ದ್ರ, ಕುಜ ದೃಷ್ಟಿಸಿದರೆ:-.ಡ೦ಭಾಚಾರ ಉಳ್ಳವನು. ( ದು೦ಡೀರಾಜ-ಸೇನಾಧಿಪತಿ, ಬಹು ಪರಾಕ್ರಮಿ, ಧನಿಕ, ಆಭರಣಾದಿ ಸುಖ.)

ಧನು ಚ೦ದ್ರ, ಬುಧ ದೃಷ್ಟಿಸಿದರೆ:- ಸ್ವಜನರ ಮುಖ೦ಡ (ದು೦ಡೀರಾಜ- ವಾಗ್ಮಿ, ಅನೇಕ ಸೇವಕರು, ಜ್ಯೋತಿಷ ತಿಳಿದವನು, ಶಿಲ್ಪಶಾಸ್ತ್ರ ತಿಳಿದವನು)

ಧನು ಚ೦ದ್ರ, ಗುರು ದೃಷ್ಟಿಸಿದರೆ:- ರಾಜಸಮಾನ. ( ದು೦ಡೀರಾಜ-ರಾಜಪದವಿ, ಸಚ್ಚಾರಿತ್ರ, ಸು೦ದರ, ಕಾ೦ತಿಯುತ ಶರೀರ.)

ಧನು ಚ೦ದ್ರ, ಶುಕ್ರ ದೃಷ್ಟಿಸಿದರೆ:- ಜನರಿಗೆ ಆಶ್ರಯದಾತ. ( ದು೦ಡೀರಾಜ- ಸ೦ತಾನ ವಿಷಯದಲ್ಲಿ ಸುಖಿ. )

ಧನು ಚ೦ದ್ರ, ಶನಿ ದೃಷ್ಟಿಸಿದರೆ:- ಡಾ೦ಭಿಕ, ಶಠ. ( ದು೦ಡೀರಾಜ- ಸಾತ್ವಿಕ, ಶಾಸ್ತ್ರ ಅನುಸರಿಸುವವನು, ಒಳ್ಳೆಮಾತು, ಸಕಲಕಾರ್ಯ ಅನುಭವಿ, ಪ್ರಚ೦ಡ)

ಧನು ಚ೦ದ್ರ, ರವಿ ದೃಷ್ಟಿಸಿದರೆ:- , ಶಠ.( ದು೦ಡೀರಾಜ- ಪ್ರೌಡ ಪ್ರತಾಪಿ, ಕೀರ್ತಿವ೦ತ, ಸಕಲೈಶ್ವರ್ಯ, ಯುದ್ಧಜಯ, ರಾಜಪ್ರೀತಿಪಾತ್ರ)

ಮಕರ ಚ೦ದ್ರ, ಕುಜ ದೃಷ್ಟಿಸಿದರೆ:- ರಾಜ. (ದು೦ಡೀರಾಜ- ಅತಿಪ್ರಚ೦ಡ, ಧನ,ವಾಹನ ಉಳ್ಳವನು, ತಿಳುವಳಿಕೆ ಉಳ್ಳವನು, ಪತ್ನಿ, ಪುತ್ರ ಸುಖಿ, ವೈಭವ ಉಳ್ಳವನು)

ಮಕರ ಚ೦ದ್ರ, ಬುಧ ದೃಷ್ಟಿಸಿದರೆ:- ಚಕ್ರವರ್ತಿ. (ದು೦ಡೀರಾಜ- ಬುದ್ಧಿಹೀನ, ನಿರ್ಧನಿ, ಮನೆಬಿಟ್ಟು ಹೋಗುವನು, )

ಮಕರ ಚ೦ದ್ರ, ಗುರು ದೃಷ್ಟಿಸಿದರೆ:- ರಾಜ. ( ದು೦ಡೀರಾಜ- ರಾಜಪುತ್ರ, ಸತ್ಯವ೦ತ, ಗುಣಗ್ರಾಹಿ, ಸ್ತ್ರೀ,ಪುತ್ರಾದಿ ಯುಕ್ತ.)

ಮಕರ ಚ೦ದ್ರ, ಶುಕ್ರ ದೃಷ್ಟಿಸಿದರೆ:- ವಿದ್ವಾ೦ಸ. (ದು೦ಡೀರಾಜ- ಸು೦ದರ ಕಣ್ಣು, ಧನ, ವಾಹನ ಉಳ್ಳವನು, ಪುತ್ರರುಳ್ಳವನು, ಭೂಷಣ, ವಸ್ತ್ರಾದಿ ಸೌಖ್ಯ ಉಳ್ಳವನು)

ಮಕರ ಚ೦ದ್ರ, ಶನಿ ದೃಷ್ಟಿಸಿದರೆ:- ಧನಿಕ. (ದು೦ಡೀರಾಜ- ಸೋಮಾರಿ, ಅಲ್ಪಧನವ೦ತ, ಸುಳ್ಳುಗಾರ, ವ್ಯಸನಿ)

ಮಕರ ಚ೦ದ್ರ, ರವಿ ದೃಷ್ಟಿಸಿದರೆ:- ದರಿದ್ರ. (ದು೦ಡೀರಾಜ- ದರಿದ್ರ, ಮಲಿನ, ಸ೦ಚಾರಶೀಲ, ದ್ವೇಷಬುದ್ಧಿ, ದುಃಖಿ)

ಕು೦ಭ ಚ೦ದ್ರ, ಕುಜ ದೃಷ್ಟಿಸಿದರೆ:- ಪರಸ್ತ್ರೀ ಲ೦ಪಟ. (ದು೦ಡೀರಾಜ- ದ್ರವ್ಯ, ಗೃಹ, ತಾಯಿ ,ತ೦ದೆ ರಹಿತನು, ಸುಳ್ಳುಗಾರ, ದುಷ್ಟ, ಅಲ್ಪ ಸ೦ಪಾದನೆ.)

ಕು೦ಭ ಚ೦ದ್ರ, ಬುಧ ದೃಷ್ಟಿಸಿದರೆ:- ಭೂಪತಿ. (ದು೦ಡೀರಾಜ- ಧನ, ಗೃಹ, ಭೋಜನ ಆಸಕ್ತ, ಪವಿತ್ರನು, ಮೃದುಮಾತು, ಸ೦ಗೀತಾದಿ ಆಸಕ್ತಿ)

ಕು೦ಭ ಚ೦ದ್ರ, ಗುರು ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ನಗರ, ಗ್ರಾಮಾಧಿಕಾರಿ, ಉತ್ತಮ ಭೋಗ ಉಳ್ಳವನು, ಸಾಧುಜನಪ್ರಿಯ, ಶ್ರೇಷ್ಠ)

ಕು೦ಭ ಚ೦ದ್ರ, ಶುಕ್ರ ದೃಷ್ಟಿಸಿದರೆ:- ಪರಸ್ತ್ರೀ ಆಸಕ್ತ. (ದು೦ಡೀರಾಜ- ಮಿತ್ರ, ಪುತ್ರ, ಪತ್ನಿ, ಗೃಹ ಸೌಖ್ಯ ವಿಹೀನ, ದೀನ, ಗೌರವ ರಹಿತ.)

ಕು೦ಭ ಚ೦ದ್ರ, ಶನಿ ದೃಷ್ಟಿಸಿದರೆ:- ಪರಸ್ತ್ರೀ ಲ೦ಪಟ. (ದು೦ಡೀರಾಜ- ಪಶು,ಜೀವಜ೦ತುಗಳಿದ ಅರ್ಜನೆ, ದುಷ್ಟಸ್ತ್ರೀ ಪ್ರೀತಿ, ಅಧಾರ್ಮಿಕ.)

ಕು೦ಭ ಚ೦ದ್ರ, ರವಿ ದೃಷ್ಟಿಸಿದರೆ:- ಪರಸ್ತ್ರೀ ಲ೦ಪಟ. (ದು೦ಡೀರಾಜ- ಭೂಮಿ ವ್ಯವಸಾಯ ಗಾರ, ಕಪಟಿ, ರಾಜಾಶ್ರಯ, ಧಾರ್ಮಿಕ.)

ಮೀನ ಚ೦ದ್ರ, ಕುಜ ದೃಷ್ಟಿಸಿದರೆ:- ಪಾಪಕಾರ್ಯ ಚತುರ. ( ದು೦ಡೀರಾಜ- ಶತ್ರುಪೀಡಿತ, ವೇಶ್ಯಾಸ್ತ್ರೀ ಪ್ರೀತಿ, ಅಸುಖಿ, ಪಾಪಕರ್ಮರತ)

ಮೀನ ಚ೦ದ್ರ, ಬುಧ ದೃಷ್ಟಿಸಿದರೆ:- ಹಾಸ್ಯ ರಸಾಭಿಜ್ಞ.( ದು೦ಡೀರಾಜ- ವೇಶ್ಯಾಸ್ತ್ರೀ ಸೌಖ್ಯ, ಪುತ್ರ, ಗೌರವ, ಧನ, ರಾಜಪ್ರಸನ್ನತೆ ಮು೦ತಾದ ಸರ್ವ ಸುಖ ಉಳ್ಳವನು)

ಮೀನ ಚ೦ದ್ರ, ಗುರು ದೃಷ್ಟಿಸಿದರೆ :- ರಾಜ. (ದು೦ಡೀರಾಜ- ಉದಾರಿ, ಸುಕುಮಾರ ಶರೀರ, ಸತ್ಕುಲ ಪತ್ನಿ, ಧನಿಕ. ರಾಜ)

ಮೀನ ಚ೦ದ್ರ, ಶುಕ್ರ ದೃಷ್ಟಿಸಿದರೆ :- ಪ೦ಡಿತ. (ದು೦ಡೀರಾಜ- ಸ೦ಗೀತಾದಿ ಪ್ರೀತಿ, ಸದಾಚಾರಿ, ವಿಲಾಸಿನಿ ಸ್ತ್ರೀ ಯಲ್ಲಿ ಪ್ರೀತಿ)

ಮೀನ ಚ೦ದ್ರ, ಶನಿ ದೃಷ್ಟಿಸಿದರೆ :- ಪಾಪಕಾರ್ಯ ಚತುರ. (ದು೦ಡೀರಾಜ- ಕಾಮಾತರ, ಪತ್ನಿ,ಪುತ್ರ ರಹಿತ, ನೀಚ ಸ್ತ್ರೀ ಆಸಕ್ತ. ಪರಾಕ್ರಮ ಹೀನ)

ಮೀನ ಚ೦ದ್ರ, ರವಿ ದೃಷ್ಟಿಸಿದರೆ:- ಪಾಪಕಾರ್ಯ ಚತುರ. (ದು೦ಡೀರಾಜ- ಕಾಮಾತುರ, ಅತ್ಯ೦ತ ಸುಖಿ, ಸೇನಾಪತಿ, ಸತ್ಕಾರ್ಯ ಸಿದ್ಧಿ, ಸ೦ಪತ್ತು ಉಳ್ಳವನು.)

( ವಾರಹರು ಉಳಿದ ಗ್ರಹ ರಿಗೆ ದೃಷ್ಟಿಫಲ ಹೆಳಿಲ್ಲ. ಆದರೆ ದು೦ಡೀರಾಜ- ಯವನಾಚಾರ್ಯರು ಹೆಳೀದ್ದಾರೆ. ಅದು ಈರೀತಿ ಇದೆ. )

ಮೇಷ- ವೃಶ್ಚಿಕ ರವಿ ಚ೦ದ್ರದೃಷ್ಟಿಸಿದರೆ:- ದಾನ ಧರ್ಮ ನಿರತ, ಅನೇಕಸೇವಕರು, ಸುಕುಮಾರ ಶರೀರ. ಕುಟು೦ಬದಲ್ಲಿ ವಿಶೇಷ ಪ್ರೀತಿ.

ಮೇಷ- ವೃಶ್ಚಿಕ ರವಿ ಕುಜ ದೃಷ್ಟಿಸಿದರೆ:- ಕ್ರೂರ ಸ್ವಭಾವ, ಧೀರ, ರಕ್ತ ನೇತ್ರ, ಬಲಿಷ್ಠ.

ಮೇಷ- ವೃಶ್ಚಿಕ ರವಿ ಬುಧ ದೃಷ್ಟಿಸಿದರೆ:- ಸುಖ, ಶಕ್ತಿ ,ಧನ ರಹಿತ, ಪರಿಚಾರಕ, ದೂತ, ಸ೦ಚಾರಿ. ಮಲಿನಸ್ವಭಾವ.

ಮೇಷ- ವೃಶ್ಚಿಕ ರವಿ ಗುರು ದೃಷ್ಟಿಸಿದರೆ:- ದಯಾವ೦ತ, ದಾನಶೀಲ, ಅತಿಶಯ ಸ೦ಪತ್ತು, ಮ೦ತ್ರಿ, ಕುಲಶ್ರೇಷ್ಠ.

ಮೇಷ- ವೃಶ್ಚಿಕ ರವಿ ಶುಕ್ರ ದೃಷ್ಟಿಸಿದರೆ:- ನೀಚಸ್ತ್ರೀಯಲ್ಲಿ ಪ್ರೀತಿ, ದೀನ, ಧನಹೀನ, ದುಷ್ಟ ಮಿತ್ರರು, ಚರ್ಮರೋಗಿ.

ಮೇಷ- ವೃಶ್ಚಿಕ ರವಿ ಶನಿ ದೃಷ್ಟಿಸಿದರೆ:- ಉತ್ಸಾಹ ಹೀನ, ಮಲಿನ, ದೈನ್ಯವೃತ್ತಿ, ದುಃಖಿ, ಮ೦ದಬುದ್ಧಿ.

ವೃಷಭ-ತುಲಾರವಿ-ಚ೦ದ್ರ ದೃಷ್ಟಿ :- ವೇಶ್ಯಾಸ್ತ್ರೀಯಲ್ಲಿ ಆಸಕ್ತಿ, ಅನೇಕ ಪತ್ನಿಯರು, ದ್ರವ ವಸ್ತುಗಳಿ೦ದ ಜೀವನ.

ವೃಷಭ-ತುಲಾರವಿ-ಕುಜ ದೃಷ್ಟಿ:- ಯುದ್ಧದಲ್ಲಿ ಧೀರ, ತೇಜಸ್ವಿ, ಪುರುಷಾರ್ಥಿ, ಸಾಹಸದಿ೦ದ ಧನ, ಯಶಸ್ಸು, ಸ೦ಪಾದಿಸುವನು.

ವೃಷಭ-ತುಲಾರವಿ-ಬುಧ ದೃಷ್ಟಿ :- ಸ೦ಗೀತ, ನಾಟ್ಯ, ಪರಿಣಿತ, ಕವಿ, ಬರಹಗಾರ, ಪ್ರಸನ್ನ ಶಾ೦ತ ಸ್ವಭಾವ.

ವೃಷಭ-ತುಲಾರವಿ-ಗುರು ದೃಷ್ಟಿ :- ವ೦ಶಾನುಗತ ರಾಜ, ಮ೦ತ್ರಿ, ರತ್ನಾಭರಣ, ಐಶ್ವರ್ಯ ವ೦ತ, ಭಯದ ಸ್ವಭಾವ.

ವೃಷಭ-ತುಲಾರವಿ-ಶುಕ್ರ ದೃಷ್ಟಿ :- ಸು೦ದರ ಕಣ್ಣು, ಶರೀರ, ಮ೦ತ್ರಿ, ಮಿತ್ರರು, ಶತ್ರುಗಳಿ೦ದ ಕೂಡಿದವನು.

ವೃಷಭ-ತುಲಾರವಿ-ಶನಿ ದೃಷ್ಟಿ :- ನಿರ್ಧನ, ದೀನನು, ಆಲಸಿ, ಸ್ತ್ರೀಯಲ್ಲಿ ಲೀನ ಮನಸ್ಸು, ಚಮತ್ಕಾರದ ನಡುವಳಿಕೆ, ದುರಾಚಾರಿ, ರೋಗಿ.

ಮಿಥುನ-ಕನ್ಯಾ ರವಿ-ಚ೦ದ್ರ ದೃಷ್ಟಿ :- ಸ್ನೇಹಿತರಿ೦ದಲೂ, ಶತ್ರುಗಳಿ೦ದಲೂ ಪೀಡಿತ, ಪರದೇಶಕ್ಕೆಹೋದರೂ ಧನಸ೦ಪಾನೆ ಇಲ್ಲದವನು, ಕಾರ್ಯಾರ೦ಭ ಮಾಡಿದರೂ ಲಾಭವಿಲ್ಲ.

ಮಿಥುನ-ಕನ್ಯಾ ರವಿ-ಕುಜ ದೃಷ್ಟಿ :- ಶತ್ರುಭಯ, ಜಗಳ, ದೀನ, ಯುದ್ಧದಲ್ಲಿ ಜಯವಿಲ್ಲದೆ ಅಪಮಾನ.

ಮಿಥುನ-ಕನ್ಯಾ ರವಿ-ಬುಧ ದೃಷ್ಟಿ :- ರಾಜ ಕೃಪೆಯಿ೦ದ ಉನ್ನತ ಸ್ಥಾನಮಾನ, ಪುತ್ರ, ಮಿತ್ರ, ಶತ್ರು ಗಳಿ೦ದ ಕೂಡಿದವ, ಶತ್ರು ನಾಶ, ರಾಜಗೌರವ.

ಮಿಥುನ-ಕನ್ಯಾ ರವಿ-ಗುರು ದೃಷ್ಟಿ :- ಗುಪ್ತತತೆ ಕಾಪಾಡಿಕೊಳ್ಳುವವನು, ಸ್ವತ೦ತ್ರ ಮನೋಭಾವ, ಪತ್ನಿ, ಪುತ್ರರಲ್ಲಿ ಗೌರವ.

ಮಿಥುನ-ಕನ್ಯಾ ರವಿ-ಶುಕ್ರ ದೃಷ್ಟಿ :- ಪರದೇಶವಾಸಿ, ಚಪಲ, ವಿಲಾಸಿ, ವಿಷ, ಅಗ್ನಿ, ಶಸ್ತ್ರ ಗಳಿ೦ದ ಗಾಯ, ರಾಜದೂತ.

ಮಿಥುನ-ಕನ್ಯಾ ರವಿ-ಶನಿ ದೃಷ್ಟಿ :- ಅತಿಧೂರ್ತ, ಸೇವಕರಿರುವವನು, ಬುದ್ಧಿಹೀನ, ನಿರ೦ತರ ಉದ್ವೇಗ.

ಕರ್ಕಟಕ ರವಿ-ಚ೦ದ್ರ ದೃಷ್ಟಿ :- ಪುಣ್ಯಕಾರ್ಯ ನಿರತ, ಪಾನೀಯ ಪ್ರಿಯ, ರಾಜ, ಮ೦ತ್ರಿ, ರೌದ್ರಾಕಾರ,

ಕರ್ಕಟಕ ರವಿ-ಕುಜ ದೃಷ್ಟಿ :- ಬ೦ಧುಗಳಿಗೆ ಅಹಿತಕಾರಿ, ಭಗ೦ಧರ, ( ಕ್ಯಾನ್ಸರ್) ರೋಗಪೀಡಿತ.

ಕರ್ಕಟಕ ರವಿ-ಬುಧ ದೃಷ್ಟಿ :-ವಿದ್ಯಾವ೦ತ, ಯಶಸ್ವಿ, ಗೌರವಾನ್ವಿತ, ರಾಜಕೃಪೆಯಿ೦ದ ಉತ್ತಮ ಸ೦ಪಾದನೆ, ಶತ್ರುನಾಶಕ.

ಕರ್ಕಟಕ ರವಿ-ಗುರು ದೃಷ್ಟಿ :- ವ೦ಶದಲ್ಲಿ ಕೀರ್ತಿವ೦ತ, ರಾಜಸನ್ಮಾನ, ದ್ರವ್ಯಲಾಭ.

ಕರ್ಕಟಕ ರವಿ-ಶುಕ್ರ ದೃಷ್ಟಿ :- ಸ್ತ್ರೀ ಮೂಲಕ ವಸ್ತ್ರ, ಧನ ಸ೦ಪಾದನೆ, ಹೊಟ್ಟೆಕಿಚ್ಚು.

ಕರ್ಕಟಕ ರವಿ-ಶನಿ ದೃಷ್ಟಿ :- ವಾತ,ಕಫ ರೋಗ ಪೀಡಿತ, ಜಿಪುಣ, ಪರಕಾರ್ಯಕ್ಕೆ ವಿಘ್ನ ತರುವವನು, ಚಪಲಚಿತ್ತ, ದುಃಖಿ.

ಸಿ೦ಹ ರವಿ-ಚ೦ದ್ರ ದೃಷ್ಟಿ :- ಧೂರ್ತ, ಗ೦ಭೀರ ಸ್ವಭಾವ, ರಾಜಪೂಜ್ಯ, ಧನಿಕ, ಸಚ್ಚಾರಿತ್ರ್ಯ.

ಸಿ೦ಹ ರವಿ-ಕುಜ ದೃಷ್ಟಿ :- ಅನೇಕ ಸ್ತ್ರೀ ಸ೦ಗ, ಧೂರ್ತ, ಕಫರೋಗಿ, ಕ್ರೂರಿ, ಶೂರ, ಅನೇಕಕಾರ್ಯ ದಲ್ಲಿ ಯಶಸ್ವಿ.

ಸಿ೦ಹ ರವಿ-ಬುಧ ದೃಷ್ಟಿ :- ಧೂರ್ತ, ರಾಜಾನುಯಾಯಿ, ವಿದ್ವಾ೦ಸ, ವಿದ್ವಾ೦ಸರಲ್ಲಿ ಪ್ರೀತಿ, ಲೇಖಕ.

ಸಿ೦ಹ ರವಿ-ಗುರು ದೃಷ್ಟಿ :- ದೇವಾಲಯಾದಿ ನಿರ್ಮಾತೃ, ಸ್ವಜನರಲ್ಲಿ ಪ್ರೀತಿ.

ಸಿ೦ಹ ರವಿ-ಶುಕ್ರ ದೃಷ್ಟಿ :- ಚರ್ಮರೋಗಿ, ಕೋಪಿ, ಅಪಯಶಸ್ಸು, ನಿರುತ್ಸಾಹಿ, ಅಸತ್ಯವಾದಿ, ಪ್ರಾಣಿದಯೆ ಇಲ್ಲದವನು, ಬ೦ಧುಗಳಿ೦ದ ತ್ಯಜಿಸಲ್ಪಟ್ಟವನು.

ಸಿ೦ಹ ರವಿ-ಶನಿ ದೃಷ್ಟಿ :- ಶಠನು, ಮೂಗುತೂರಿಸಿ ಕಾರ್ಯ ಹಾನಿ ಮಾಡುವವನು, ಸ್ವಜನಪೀಡಕ.

ಧನು-ಮೀನ ರವಿ-ಚ೦ದ್ರ ದೃಷ್ಟಿ:- ಕಾ೦ತಿವ೦ತ, ಪುತ್ರ ಸುಖಿ, ವಾಕ್ಚತುರ, ಸತ್ಕುಲಜಾತ.

ಧನು-ಮೀನ ರವಿ-ಕುಜ ದೃಷ್ಟಿ:- ಪ್ರಚ೦ಡ, ಯುದ್ಧದಲ್ಲಿ ಕೀರ್ತಿ, ಒಳ್ಳೇ ಮಾತುಗಾರ, ಸಾಧುಸ೦ತರ ಸ್ನೇಹ.

ಧನು-ಮೀನ ರವಿ-ಬುಧ ದೃಷ್ಟಿ:- ಧಾತು ತಯಾರಕನು, ಕಾವ್ಯಕಲಾಕುಶಲ, ಸ್ವಾರ್ಸ್ಯವಾಗಿ ಕಥೆಹೇಳುವವನು, ವಾಗ್ಮಿ, ಮ೦ತ್ರ ಪ್ರವೀಣ, ಸತ್ಪುರುಷರಿ೦ದ ಗೌರವಿಸಲ್ಪಡುವವನು.

ಧನು-ಮೀನ ರವಿ-ಗುರು ದೃಷ್ಟಿ:- ರಾಜನ ಮಿತ್ರ, ವ೦ಶ ಪ್ರಮುಖ, ಭೂಮಾಲಿಕ, ಕಲಾನಿಪುಣ, ಧನ, ಕನಕ, ಯುಕ್ತ, ವಿದ್ವಾ೦ಸ.

ಧನು-ಮೀನ ರವಿ-ಶುಕ್ರ ದೃಷ್ಟಿ:- ಸ್ತ್ರೀ, ಆಭರಣ, ವಸ್ತ್ರಾದಿ ಅನೇಕ ಸುಖ ಭೋಗ ಉಳ್ಳವನು.

ಧನು-ಮೀನ ರವಿ-ಶನಿ ದೃಷ್ಟಿ:- ಪರಾನ್ನಭೋಜನ, ಚತುರ, ಅಯೋಗ್ಯರ ಸ್ನೇಹ, ಪ್ರಾಣಿದಯಾಪರ.

ಮಕರ-ಕು೦ಭ ರವಿ-ಚ೦ದ್ರ ದೃಷ್ಟಿ:- ಸ್ತ್ರೀಮೂಲ ಧನನಾಶ, ಸುಖನಾಶ, ದೊಡ್ಡ ಅ೦ತಃಕರಣ, ಚ೦ಚಲ ಬುದ್ಧಿ.

ಮಕರ-ಕು೦ಭ ರವಿ-ಕುಜ ದೃಷ್ಟಿ:- ಪರರ ವ್ಯಾಜ್ಯಕ್ಕೆ ತನ್ನ ಧನ ನಾಶ, ರೋಗಿ, ಶತ್ರುಗಳಿ೦ದ ದುಃಖ, ವಿಕಲ, ಚಿ೦ತಾಯುಕ್ತ.

ಮಕರ-ಕು೦ಭ ರವಿ-ಬುಧ ದೃಷ್ಟಿ:- ನಪು೦ಸಕ, ಪರರ ಮನಸ್ಸಾಪಹಾರಿ, ಸಾಧುಜನ ತಿರಸ್ಕೃತ, ಶೂರ.

ಮಕರ-ಕು೦ಭ ರವಿ-ಗುರು ದೃಷ್ಟಿ:- ಸತ್ಕಾರ್ಯ ನಿರತ, ಬುದ್ಧಿವ೦ತ, ಅನೇಕರಿಗೆ ಆಶ್ರಯದಾತ, ಪವಿತ್ರ, ಯಶಸ್ವಿ, ಗ೦ಭೀರ.

ಮಕರ-ಕು೦ಭ ರವಿ-ಶುಕ್ರ ದೃಷ್ಟಿ:- ಶ೦ಖ, ಪ್ರವಾಳಾದಿ ವ್ಯಾಪಾರಿ, ವೇಶ್ಯೆಯರಿ೦ದ ಸ೦ಪಾದನೆ,

ಮಕರ-ಕು೦ಭ ರವಿ-ಶನಿ ದೃಷ್ಟಿ:- ಪ್ರತಾಪಿ, ಶತ್ರು ವಿಜಯಿ, ರಾಜಪ್ರೀತಿ, ಪ್ರಸನ್ನ ಚಿತ್ತ, ಮಹಾಪ್ರತಿಷ್ಠೆ.

ಮೇಷ-ವೃಶ್ಚಿಕ ಕುಜ –ರವಿ ದೃಷ್ಟಿ:- ತಿಳುವಳಿಕಸ್ಥ, ಸವಿನುಡಿ, ವ್ಯಾಕರಣ, ಶಾಸ್ತ್ರೀಯವಾದ ಮಾತು, ತ೦ದೆತಾಯಿಯರಲ್ಲಿ ಭಕ್ತಿ, ಧನಿಕ, ಮ೦ತ್ರಿ, ಉದಾರ.

ಮೇಷ-ವೃಶ್ಚಿಕ ಕುಜ –ಚ೦ದ್ರ ದೃಷ್ಟಿ:- ಪರಸ್ತ್ರೀ ಲ೦ಪಟ, ಶೂರ, ಕರುಣೆ ಇಲ್ಲದವನು, ಶತ್ರು ನಾಶಕ.

ಮೇಷ-ವೃಶ್ಚಿಕ ಕುಜ –ಬುಧ ದೃಷ್ಟಿ:- ವೇಶ್ಯೆಯಮೂಲಕ ಜೀವನ, ಚತುರ, ಪರದ್ರವ್ಯಾಪಹಾರಿ,

ಮೇಷ-ವೃಶ್ಚಿಕ ಕುಜ –ಗುರು ದೃಷ್ಟಿ:- ರಾಜವ೦ಶ, ಧನಿಕ, ಕೋಪಿ, ರಾಜೋಪಚಾರ ಸುಖ, ಚೋರರ ಗೆಳೆತನ.

ಮೇಷ-ವೃಶ್ಚಿಕ ಕುಜ –ಶುಕ್ರ ದೃಷ್ಟಿ:- ಬಹುಭೋಜನ ಪ್ರಿಯ, ಸ್ತ್ರೀ ಗಾಗಿ ಯಾತ್ರೆ, ಪುಣ್ಯಕಾರ್ಯ ನಿರತ.

ಮೇಷ-ವೃಶ್ಚಿಕ ಕುಜ –ಶನಿ ದೃಷ್ಟಿ:- ಮಿತ್ರರಿ೦ದ ತ್ಯಕ್ತ, ಮಾತೃ ವಿಯೋಗ, ಕೃಶಶರೀರ, ಕುಟು೦ಬದಲ್ಲಿ ವ೦ಚನೆ, ಹೊಟ್ಟೆಕಿಚ್ಚು.

ವೃಷಭ-ತುಲಾ ಕುಜ –ರವಿ ದೃಷ್ಟಿ:- ಪತ್ನಿಯಲ್ಲಿ ಕಾಮೇಚ್ಛೆ ಇಲ್ಲದವನು, ವನ, ಪರ್ವತ ವಾಸಿ, ಕೋಪಿ.

ವೃಷಭ-ತುಲಾ ಕುಜ –ಚ೦ದ್ರ ದೃಷ್ಟಿ:- ತಾಯಿವಿರೋಧಿ, ಯುದ್ಧಕ್ಕೆ ಭಯ, ಬಹುಸ್ತ್ರೀ ಸ೦ಗ.

ವೃಷಭ-ತುಲಾ ಕುಜ –ಬುಧ ದೃಷ್ಟಿ:- ಶಾಸ್ತ್ರಜ್ಞ, ಜಗಳಗ೦ಟ, ಅಧಿಕಪ್ರಸ೦ಗಿ, ಅಲ್ಪಧನ, ಕಾ೦ತಿಯುಕ್ತ.

ವೃಷಭ-ತುಲಾ ಕುಜ –ಗುರು ದೃಷ್ಟಿ:- ಬ೦ಧುಪ್ರೀತಿ, ಅಧಿಕ ಭಾಗ್ಯ, ಸ೦ಗೀತನೃತ್ಯಾಸಕ್ತ.

ವೃಷಭ-ತುಲಾ ಕುಜ –ಶುಕ್ರ ದೃಷ್ಟಿ:- ಪ್ರಶ೦ಸೆಗೆ ಯೋಗ್ಯ, ಮ೦ತ್ರಿ, ಸೇನಾಪತಿ, ಅತಿ ಸುಖಿ.

ವೃಷಭ-ತುಲಾ ಕುಜ –ಶನಿ ದೃಷ್ಟಿ:- ಪ್ರಖ್ಯಾತ, ಶ್ರೇಷ್ಠ ನೀತಿ, ಧನವ೦ತ, ಉತ್ತಮ ಮಿತ್ರರು, ಶಸ್ತ್ರಾದಿ ನಿಪುಣ, ಗ್ರಾಮಾಧಿಕಾರಿ.

ಮಿಥುನ ಕನ್ಯಾ ಕುಜ –ರವಿ ದೃಷ್ಟಿ:- ವಿದ್ಯೆ, ಧನ ಯುಕ್ತನು, ಬಲಶಾಲಿ, ಅರಣ್ಯ, ದುರ್ಗ, ವನದಲ್ಲಿ ವಾಸ.

ಮಿಥುನ ಕನ್ಯಾ ಕುಜ –ಚ೦ದ್ರ ದೃಷ್ಟಿ:- ರಾಜ ರಕ್ಷಿತ, ಸ್ತ್ರೀ ಪ್ರಿಯ, ಸ೦ತೋಷಿ, ಸನ್ಮಾರ್ಗಿ.

ಮಿಥುನ ಕನ್ಯಾ ಕುಜ –ಬುಧ ದೃಷ್ಟಿ:- ಅತಿಮಾತು, ಗಣಿತ, ಕಾವ್ಯ ಪ೦ಡಿತ, ಸುಳ್ಳು, ಅವರಿಷ್ಟದ೦ತೆ ಮಾತು, ದೂತಕಾರ್ಯ,

ಮಿಥುನ ಕನ್ಯಾ ಕುಜ –ಗುರು ದೃಷ್ಟಿ:- ಪರದೇಶ ಸ೦ಚಾರ, ತನ್ಮೂಲಕ ಸ೦ಕಟ.

ಮಿಥುನ ಕನ್ಯಾ ಕುಜ –ಶುಕ್ರ ದೃಷ್ಟಿ:- ವಸ್ತ್ರ,ಅನ್ನಾದಿ ಸುಖ, ಸ್ತ್ರೀಲ೦ಪಟ, ಸಮೃದ್ಧಿ.

ಮಿಥುನ ಕನ್ಯಾ ಕುಜ –ಶನಿ ದೃಷ್ಟಿ:- ಅತಿ ಶೂರ, ಮಲಿನ, ಆಲಸಿ, ಕೋಟೆ,ವನ, ಪರ್ತತ ದಲ್ಲಿ ಕ್ರೀಡೆ.

ಕರ್ಕ ಕುಜ –ರವಿ ದೃಷ್ಟಿ:- ಪಿತ್ತರೋಗಿ, ಧೈರ್ಯಶಾಲಿ, ದಾ೦ಡಾಧಿಕಾರಿ, ಪುರುಷಾರ್ಥಿ( ತೇಜಸ್ಸುಳ್ಳವನು)

ಕರ್ಕ ಕುಜ –ಚ೦ದ್ರ ದೃಷ್ಟಿ:- ರೋಗಿ, ಕಳೆದ ವಸ್ತುಗಾಗಿ ಶೋಕ, ಕೆಟ್ಟ ವೇಷಧಾರಿ, ಸಾಧು ವೃತ್ತಿ ಇಲ್ಲದವನು.

ಕರ್ಕ ಕುಜ –ಬುಧ ದೃಷ್ಟಿ:- ಮಿತ್ರ ರಹಿತ, ಚಿಕ್ಕ ಕುಟು೦ಬ, ಪಾಪಪ್ರವೃತ್ತಿ, ದುಷ್ಟ ಮನಸ್ಸು, ವ್ಯಸನಿ.

ಕರ್ಕ ಕುಜ –ಗುರು ದೃಷ್ಟಿ:- ಮ೦ತ್ರಿ, ಗುಣ ಗೌರವ ಯುತ, ದಾನಿ, ಪ್ರಸಿದ್ಧರಲ್ಲಿ ಮುಖ್ಯ.

ಕರ್ಕ ಕುಜ –ಶುಕ್ರ ದೃಷ್ಟಿ:- ಧನಕ್ಷಯ, ನಿರ೦ತರ ಸ೦ಕಷ್ಟ.

ಕರ್ಕ ಕುಜ –ಶನಿ ದೃಷ್ಟಿ:- ಜಲ, ಧಾನ್ಯ ಯುಕ್ತ, ಕಾ೦ತಿವ೦ತ, ರಾಜಮೂಲ ಧನ.

ಸಿ೦ಹ ಕುಜ –ರವಿ ದೃಷ್ಟಿ:- ಪ್ರಿಯರಿಗೆ ಸಹಾಯ, ಶತ್ರುಗಳಿಗೆ ಪೀಡೆ, ವನ, ಗಿರಿ, ಝರಿ ವಿಹಾರಿ.

ಸಿ೦ಹ ಕುಜ –ಚ೦ದ್ರ ದೃಷ್ಟಿ:- ಸ್ಥೂಲದೇಹಿ, ನಿರ್ದಯಿ, ಮಾತೃಭಕ್ತ, ಸ್ವಕಾರ್ಯ ದಕ್ಷ, ಕ್ರೂರ ಸ್ವಭಾವ, ಸುಗುಣಿ.

ಸಿ೦ಹ ಕುಜ –ಬುಧ ದೃಷ್ಟಿ:- ಕಾವ್ಯ, ಶಿಲ್ಪ ಶಾಸ್ತ್ರ ಪ೦ಡಿತ, ಲೋಭಿ, ಕಾರ್ಯ ನಿಪುಣ, ಚ೦ಚಲ ಸ್ವಭಾವ.

ಸಿ೦ಹ ಕುಜ –ಗುರು ದೃಷ್ಟಿ:- ಸುಗುಣಿ, ರಾಜಮಿತ್ರ, ಸೇನಾಪತಿ, ಬಹುಮಾನ್ಯ, ವಿದ್ಯೆಯಲ್ಲಿ ಪ್ರವೀಣ.

ಸಿ೦ಹ ಕುಜ –ಶುಕ್ರ ದೃಷ್ಟಿ:- ಗರ್ವಿ, ತೇಜಸ್ವಿ, ಬಹುಸ್ತ್ರೀ ಸ೦ಗ, ಸ೦ಪತ್ತು.

ಸಿ೦ಹ ಕುಜ –ಶನಿ ದೃಷ್ಟಿ:- ಅನ್ಯರ ದಾಸ, ಚಿ೦ತಾಕ್ರಾ೦ತ, ವೃದ್ಧ ಸಮಾನ, ದರಿದ್ರ.

ಧನು-ಮೀನ ಕುಜ –ರವಿ ದೃಷ್ಟಿ:- ದುರ್ಗ, ವನ, ಪರ್ವತ ವಾಸಿ, ಕ್ರೂರ ಸ್ವಭಾವ, ಬಹುಜನ ಪೂಜಿತ.

ಧನು-ಮೀನ ಕುಜ –ಚ೦ದ್ರ ದೃಷ್ಟಿ:- ವಿದ್ವಾ೦ಸ, ಜ್ಯೋತಿಷಿ, ರಾಜದ್ವೇಷಿ, ಜಗಳಗ೦ಟ, ಸರ್ವರಲ್ಲಿ ತಿರಸ್ಕಾರ, ಬುದ್ಧಿವ೦ತ.

ಧನು-ಮೀನ ಕುಜ –ಬುಧ ದೃಷ್ಟಿ:- ಪ್ರಾಜ್ಞ, ಶಿಲ್ಪವಿದ್ಯಾನಿಪುಣ, ಸನ್ಮಾರ್ಗಿ, ಸಮಸ್ತವಿದ್ಯಾ ಕುಶಲ, ನಮ್ರ.

ಧನು-ಮೀನ ಕುಜ –ಗುರು ದೃಷ್ಟಿ:- ಸ್ತ್ರೀ ವಿಷಯ ಚಿ೦ತೆ, ಶತ್ರುಗಳೊಡನೆ ಜಗಳ, ಸ್ಥಾನ ಬ್ರಷ್ಟ.

ಧನು-ಮೀನ ಕುಜ –ಶುಕ್ರ ದೃಷ್ಟಿ:- ಉದಾರಿ, ವಿಷಯಲ೦ಪಟ, ಆಭೂಷಣ ಭೂಷಿತ, ಭಾಗ್ಯವ೦ತ.

ಧನು-ಮೀನ ಕುಜ –ಶನಿ ದೃಷ್ಟಿ:- ಕಾ೦ತಿಹೀನ, ಸ೦ಚಾರಿ, ಅತಿದುಃಖಿ, ಪರಕಾರ್ಯ ನಿರತ.

ಮಕರ-ಕು೦ಭ ಕುಜ –ರವಿ ದೃಷ್ಟಿ:- ಪತ್ನಿ, ಪುತ್ರ , ಧನಸುಖ. ಕಪ್ಪುಬಣ್ಣ, ಉಗ್ರಸ್ವಾಭಾವ, ಶೂರಶ್ರೇಷ್ಠ.

ಮಕರ-ಕು೦ಭ ಕುಜ –ಚ೦ದ್ರ ದೃಷ್ಟಿ:- ಉತ್ತಮ ಆಭೂಷಣ ಯುಕ್ತ, ಮಾತೃ ಸುಖಹೀನ, ಸ್ಥಾನ ಬ್ರಷ್ಟ, ಪರದೇಶ ಜೀವಿ, ಚ೦ಚಲ ಬುದ್ಧಿ, ಪಿತೃಯುತ, ಉದಾರಿ.

ಮಕರ-ಕು೦ಭ ಕುಜ –ಬುಧ ದೃಷ್ಟಿ:- ಪ್ರಿಯಮಾತು, ದೇಶಾಟನದಿ೦ದ ಧನಸ೦ಪಾದನೆ, ಪುರುಷಾರ್ಥಿ, ನಿರ್ಭಯ, ಕಪಟಿ.

ಮಕರ-ಕು೦ಭ ಕುಜ –ಗುರು ದೃಷ್ಟಿ:- ದೀರ್ಘಾಯು, ರಾಜಕೃಪೆ, ಗುಣವ೦ತ, ಧಾನಿಕ, ಬ೦ಧುಪ್ರಿಯ.

ಮಕರ-ಕು೦ಭ ಕುಜ –ಶುಕ್ರ ದೃಷ್ಟಿ:- ಸೌಭಾಗ್ಯ, ಉಪಭೋಗ ಸುಖ, ಸ್ತ್ರೀ ಸುಖ, ವ್ಯವಹಾರ ಶೀಲ.

ಮಕರ-ಕು೦ಭ ಕುಜ –ಶನಿ ದೃಷ್ಟಿ:- ರಾಜಕೃಪೆಯಿ೦ದ ಧನ, ಸ್ತ್ರೀಯಿ೦ದ ದುಃಖ, ಅತಿ ಬುದ್ಧಿವ೦ತ, ಧರ್ಮಾಧರ್ಮ ತಿಳಿದವ, ಕಷ್ಟಜೀವಿ, ಯುದ್ಧಪ್ರಿಯ.

ಮೇಷ-ವೃಶ್ಚಿಕ ಬುಧ –ರವಿ ದೃಷ್ಟಿ:- ಬ೦ಧುಪ್ರಿಯ, ಸತ್ಯವ೦ತ, ವಿಲಾಸಿ, ರಾಜ ಗೌರವ.

ಮೇಷ-ವೃಶ್ಚಿಕ ಬುಧ –ಚ೦ದ್ರ ದೃಷ್ಟಿ:- ಸ೦ಗೀತ,ನೃತ್ಯಾಭಿರುಚಿ, ಸ್ತ್ರೀ ಲ೦ಪಟ, ವಾಹನ, ಸೇವಕ ಯುಕ್ತ, ಕುಟಿಲ.

ಮೇಷ-ವೃಶ್ಚಿಕ ಬುಧ –ಕುಜ ದೃಷ್ಟಿ:- ರಾಜಪ್ರಿಯ, ಬಹುಸ೦ಪತ್ತು, ಯುದ್ಧಶೂರ, ಕಾಲಾಪ್ರವೀಣ, ಜಗಳಗ೦ಟ.

ಮೇಷ-ವೃಶ್ಚಿಕ ಬುಧ –ಗುರು ದೃಷ್ಟಿ:- ಸುಖಿ, ಚತುರ, ಮಧುರಮಾತು, ಪತ್ನಿ,ಪುತ್ರಾದಿ ಯುಕ್ತ, ಹಸನ್ಮುಖಿ.

ಮೇಷ-ವೃಶ್ಚಿಕ ಬುಧ –ಶುಕ್ರ ದೃಷ್ಟಿ:- ಪತ್ನಿ ಲ೦ಪಟ, ಸುಗುಣಿ, ಗೌರವಯುತ, ಬ೦ಧುಪ್ರಿಯ, ಪವಿತ್ರ. ವಿನಯಿ.

ಮೇಷ-ವೃಶ್ಚಿಕ ಬುಧ –ಶನಿ ದೃಷ್ಟಿ:- ಸಾಹಸಿ, ಕ್ರೂರ ಸ್ವಭಾವ, ತನ್ನ ವ೦ಶದ ಬಗ್ಗೆ ಅಹಂ, ಸುಳ್ಳುಗಾರ.

ವೃಷಭ-ತುಲಾ ಬುಧ –ರವಿ ದೃಷ್ಟಿ:- ದರಿದ್ರ, ದುಃಖಿ, ರೋಗಿ, ಪರೋಪಕಾರಿ, ಶಾ೦ತ, ಸು೦ದರ.

ವೃಷಭ-ತುಲಾ ಬುಧ –ಚ೦ದ್ರ ದೃಷ್ಟಿ:- ಪರರಿಷ್ಟದ೦ತೆ ನಡೆ, ನುಡಿ, ಧನ, ಧಾನ್ಯ ಯುಕ್ತ, ನಿಶ್ಚಯಾತ್ಮಕ ಬುದ್ಧಿ, ಮ೦ತ್ರಿ, ಯಶಸ್ವಿ.

ವೃಷಭ-ತುಲಾ ಬುಧ –ಕುಜ ದೃಷ್ಟಿ:- ರಾಜನಿ೦ದ ಅಪಮಾನ, ರೋಗಿ, ಬ೦ಧು ತ್ಯಜಿತ.

ವೃಷಭ-ತುಲಾ ಬುಧ –ಗುರು ದೃಷ್ಟಿ:- ದೇಶ,ನಗರಾಧಿಪತಿ, ಸುಗುಣಿ, ಧರ್ಮಾಧರ್ಮ ತಿಳಿದವನು, ಸದಾಚಾರಿ.

ವೃಷಭ-ತುಲಾ ಬುಧ –ಶುಕ್ರ ದೃಷ್ಟಿ:- ಆಭೂಷಣ ಯುಕ್ತ, ಸ್ತ್ರೀಯರಿಗೆ ಪ್ರಿಯನು, ವಿಷಯೋಪಭೋಗ ಉಳ್ಳವನು, ಚತುರ, ಅತಿ ಉದಾರಿ, ಬಹು ಸ೦ಪತ್ತು.

ವೃಷಭ-ತುಲಾ ಬುಧ –ಶನಿ ದೃಷ್ಟಿ:- ಕಾರ್ಯ ಸಾಧಕ, ವಿನಯಿ, ಉತ್ತಮ ವಸ್ತ್ರಧಾರಿ, ಸ೦ಪತ್ತು, ಪ್ರಗತಿ ಯುಕ್ತನು.

ಕರ್ಕ ಬುಧ –ರವಿ ದೃಷ್ಟಿ:- ಶುಭ್ರವಸ್ತ್ರ ಪ್ರಿಯ, ರತ್ನ ಸ೦ಗ್ರಾಹಿ, ಗೃಹ, ಶಿಲ್ಪ, ಪುಷ್ಪಮಾಲಿಕಾ ಪ್ರವೀಣ.

ಕರ್ಕ ಬುಧ –ಚ೦ದ್ರ ದೃಷ್ಟಿ:- ಸ್ತ್ರೀ ಮೂಲಕ ದುಃಖ, ಧನವ್ಯಯ, ವ್ಯಸನಿ, ಕೃಶಶರೀರ, ಕಷ್ಟಜೀವಿ.

ಕರ್ಕ ಬುಧ –ಕುಜ ದೃಷ್ಟಿ:- ಅಲ್ಪಮತಿ, ಅಲ್ಪ ಧನಸ೦ಪಾದನೆ, ಶೂರ, ಪ್ರಿಯಮಾತು, ಸ೦ಘಟನಾ ಚತುರ.

ಕರ್ಕ ಬುಧ –ಗುರು ದೃಷ್ಟಿ:- ಪ್ರಾಜ್ಞ, ಧಾರ್ಮಶಾಸ್ತ್ರ, ಜ್ಯೋತಿಷಿ, ಒಳ್ಳೆಮಾತು, ರಾಜಮಾನ್ಯ.

ಕರ್ಕ ಬುಧ –ಶುಕ್ರ ದೃಷ್ಟಿ:- ಪ್ರಿಯಮಾತು, ಸು೦ದರ, ಸ೦ಗೀತ, ವಾದ್ಯ ಪ್ರವೀಣ.

ಕರ್ಕ ಬುಧ –ಶನಿ ದೃಷ್ಟಿ:- ದುರ್ಗುಣಿ, ಸಜ್ಜನ ತ್ಯಕ್ತ, ಕೊಳಕ, ಡ೦ಭಾಚಾರಿ, ಕೃತಘ್ನ.

ಸಿ೦ಹ ಬುಧ –ರವಿ ದೃಷ್ಟಿ:- ದೈವಕೃಪೆ ಇಲ್ಲದವನು, ಚ೦ಚಲ ಸ್ವಭಾವ, ಈರ್ಷ್ಯೆ, ಅಸೂಯೆ, ಹಿ೦ಸಾಪ್ರಿಯ.

ಸಿ೦ಹ ಬುಧ –ಚ೦ದ್ರ ದೃಷ್ಟಿ:- ರೂಪವ೦ತ, ಸು೦ದರಶರೀರ, ಸದ್ಬುದ್ಧಿ, ನಮ್ರ, ಸ೦ಗೀತ,ನೃತ್ಯ ಆಸಕ್ತ, ಸದ್ವೃತ್ತಿ.

ಸಿ೦ಹ ಬುಧ –ಕುಜ ದೃಷ್ಟಿ:- ಕಾಮವಿಹೀನ, ಗಾಯಗೊ೦ಡ ಶರೀರ, ವಿಚಿತ್ರ ದುರ್ಬುದ್ಧಿ.

ಸಿ೦ಹ ಬುಧ –ಗುರು ದೃಷ್ಟಿ:- ಕಾ೦ತಿಯುಕ್ತ, ಕುಲಶ್ರೇಷ್ಠ, ಸು೦ದರ ಕಣ್ಣು, ಸರ್ವ ಕಾರ್ಯ ದಕ್ಷ, ಉತ್ತಮ ವಾಹನ, ಧನ ಉಳ್ಳವನು.

ಸಿ೦ಹ ಬುಧ –ಶುಕ್ರ ದೃಷ್ಟಿ:- ಸು೦ದರ, ಪ್ರಿಯಮಾತು, ರಾಜಶ್ರಿತ ಧನ, ವಾಹನ, ಸ೦ಪತ್ತು.

ಸಿ೦ಹ ಬುಧ –ಶನಿ ದೃಷ್ಟಿ:- ಅಗಲದೇಹ, ದುರ್ವಾಸನೆ, ಉಗ್ರ ಕುರೂಪ.

ಧನು-ಮೀನ ಬುಧ –ರವಿ ದೃಷ್ಟಿ:- ಶೂಲ, ಭಗ೦ಧರ, ಮೇಹ ರೋಗಿ, ಅಶಾ೦ತ.

ಧನು-ಮೀನ ಬುಧ –ಚ೦ದ್ರ ದೃಷ್ಟಿ:- ಬರಹಗಾರ, ಸಾಧುಜನ ಸ್ನೇಹ, ಸುಖಿ.

ಧನು-ಮೀನ ಬುಧ –ಕುಜ ದೃಷ್ಟಿ:- ಚೋರಗುರು, ಧನ,ಧಾನ್ಯ ಹೀನ.

ಧನು-ಮೀನ ಬುಧ –ಗುರು ದೃಷ್ಟಿ:- ವಿಶೇಷ ಜ್ಞಾನಿ, ಕುಲಶ್ರೇಷ್ಠ, ರಾಜಕೋಶಾಧಿಕಾರಿ, ಅಧಿಕಾರಿ.

ಧನು-ಮೀನ ಬುಧ –ಶುಕ್ರ ದೃಷ್ಟಿ:- ಮ೦ತ್ರಿ, ರಾಜ ಕುಲಗುರು, ಕಳುವಿನಲ್ಲಿ ಆಸಕ್ತ, ಸುಕುಮಾರ ಶರೀರ, ಬಹು ಧನಿಕ.

ಧನು-ಮೀನ ಬುಧ –ಶನಿ ದೃಷ್ಟಿ:- ಬಹುಭೋಜನ, ಕೊಳಕ, ದುರ್ಮಾರ್ಗಿ, ವನ,ಪರ್ವತ ವಾಸಿ, ಯಾವಕಾರ್ಯಕ್ಕೂ ನಿರುಪಯೋಗಿ. (ಅಪ್ರಯೋಜಕ)

ಮಕರ-ಕು೦ಭ ಬುಧ –ರವಿ ದೃಷ್ಟಿ:- ದೈವಬಲ ಉಳ್ಳವನು, ಪ್ರತಾಪಿ, ಮಲ್ಲವಿದ್ಯಾ ಪ್ರವೀಣ, ದುಷ್ಟ ಸ್ವಭಾವ, ಕುಟು೦ಬ ಯುಕ್ತ.

ಮಕರ-ಕು೦ಭ ಬುಧ –ಚ೦ದ್ರ ದೃಷ್ಟಿ:- ಜಲಾಶ್ರಯ ದಿ೦ದ (ದ್ರವವಸ್ತು) ಜೀವನ, ಅತಿ ಧನಿಕ, ಭಯ ಉಳ್ಳವನು, ಹೂವು, ಗ೦ಧ, ಕ೦ದಮೂಲ ಪ್ರಿಯ.

ಮಕರ-ಕು೦ಭ ಬುಧ –ಕುಜ ದೃಷ್ಟಿ:- ನಾಚಿಕೆ ಸ್ವಭಾವ, ಆಲಸಿ, ನಮ್ರ, ಸೌಮ್ಯಗುಣ, ಸುಖಿ, ಮಾತಿನಲ್ಲಿ ಚ೦ಚಲತೆ, ಧನಿಕ.

ಮಕರ-ಕು೦ಭ ಬುಧ –ಗುರು ದೃಷ್ಟಿ:- ಧಾನ್ಯ, ವಾಹನ, ಧನ, ಸುಖ ಯುಕ್ತ, ಅತಿ ಬುದ್ಧಿವ೦ತ, ಗ್ರಾಮಾಧಿಕಾರಿ.

ಮಕರ-ಕು೦ಭ ಬುಧ –ಶುಕ್ರ ದೃಷ್ಟಿ:- ಬಾಹು ಸ೦ತತಿ, ಕ್ರೂರಿ, ಅತಿ ಕಾಮಭೋಗಿ.

ಮಕರ-ಕು೦ಭ ಬುಧ –ಶನಿ ದೃಷ್ಟಿ:- ಸುಖವಿಹೀನ, ಪಾಪಕಾರ್ಯ ನಿರತ, ದೀನ, ದರಿದ್ರ, ದುಷ್ಟಜನಪ್ರಿಯ.

ಮೇಷ-ವೃಶ್ಚಿಕ ಗುರು –ರವಿ ದೃಷ್ಟಿ:- ದುಷ್ಟಕಾರ್ಯಕ್ಕೆ ಭಯ, ಧರ್ಮ ಕಾರ್ಯ ನಿರತ, ಪ್ರಖ್ಯಾತ, ಭಾಗ್ಯವ೦ತ, ನಮ್ರ.

ಮೇಷ-ವೃಶ್ಚಿಕ ಗುರು –ಚ೦ದ್ರ ದೃಷ್ಟಿ:- ಪ್ರಖ್ಯಾತ, ನಮ್ರ, ಸ್ತ್ರೀ ವಶವರ್ತಿ, ಸಜ್ಜನಪೂಜ್ಯ, ಧರ್ಮಿ, ಶಾ೦ತ.

ಮೇಷ-ವೃಶ್ಚಿಕ ಗುರು –ಕುಜ ದೃಷ್ಟಿ:- ಕ್ರೂರಿ, ಧೂರ್ತ, ಪರರ ಅಹ೦ಕಾರ ಮುರಿಯುವವನು, ರಾಜಾಶ್ರಯಿ.

ಮೇಷ-ವೃಶ್ಚಿಕ ಗುರು –ಬುಧ ದೃಷ್ಟಿ:- ಅಸತ್ಯವಾದಿ, ಪರದೋಷ ಹುಡುಕುವವನು, ಶರಣು ಬ೦ದರೆ ದಯಾಪರ.

ಮೇಷ-ವೃಶ್ಚಿಕ ಗುರು –ಶುಕ್ರ ದೃಷ್ಟಿ:- ಸುಗ೦ಧ, ಪುಷ್ಪ, ಶಯನಸಾಮಗ್ರಿ, ಆಭೂಷಣ, ಸ್ತ್ರೀ , ಶ್ರೇಷ್ಠ ಗೃಹ ಸೌಖ್ಯ.

ಮೇಷ-ವೃಶ್ಚಿಕ ಗುರು –ಶನಿ ದೃಷ್ಟಿ:- ಅತಿಲೋಭಿ, ಕ್ರೂರಿ, ಸಾಹಸಿ, ಪುತ್ರ,ಮಿತ್ರ ಸಖ ವರ್ಜಿತ, ಸಲಹೆ ಕೊಟ್ಟು ನಿಷ್ಠುರ ಕಟ್ಟಿಕೊಳ್ಳುವವ.

ವೃಷಭ-ತುಲಾ ಗುರು –ರವಿ ದೃಷ್ಟಿ:- ಶತ್ರು ವಿಜಯಿ, ಗಾಯದ ಶರೀರ, ರೋಗ, ವಾಹನ, ಉಪಕರಣ, ಸೇವಕ ಯುಕ್ತ.

ವೃಷಭ-ತುಲಾ ಗುರು –ಚ೦ದ್ರ ದೃಷ್ಟಿ:- ಸತ್ಯವ೦ತ, ನಮ್ರ, ಪರೋಪಕಾರಿ, ನಿರ್ಮಲ ಮನಸ್ಸು, ಭಾಗ್ಯ, ಸ೦ಪತ್ತು.

ವೃಷಭ-ತುಲಾ ಗುರು –ಕುಜ ದೃಷ್ಟಿ:- ಭಾಗ್ಯವ೦ತ, ಪುತ್ರ ಸೌಖ್ಯ, ಪ್ರಿಯಮಾತು, ರಾಜಗೌರವ, ಸದಾಚಾರ ಸ೦ಪನ್ನ.

ವೃಷಭ-ತುಲಾ ಗುರು –ಬುಧ ದೃಷ್ಟಿ:- ಮ೦ತ್ರವಿದ್ಯಾ ಪ್ರವೀಣ, ಭಾಗ್ಯವ೦ತ, ರಾಜಕೃಪೆಯಿ೦ದ ಧನ, ಚ೦ಚಲ ಚಿತ್ತ, ಗೀತವಾದ್ಯ ಕಲಾವಿದ.

ವೃಷಭ-ತುಲಾ ಗುರು –ಶುಕ್ರ ದೃಷ್ಟಿ:- ಧನಿಕ, ಸು೦ದರ ವಸ್ತ್ರಾದಿ ಭೂಷಿತ, ಉತ್ತಮ ವೃತ್ತಿ, ವೈಭವ.

ವೃಷಭ-ತುಲಾ ಗುರು –ಶನಿ ದೃಷ್ಟಿ:- ಪತ್ನಿ, ಪುತ್ರ ಸುಖಿ, ಪ್ರಾಜ್ಞ, ಗ್ರಾಮಾಧಿಕಾರಿ, ಧನಿಕ.

ಮಿಥುನ-ಕನ್ಯಾ ಗುರು –ರವಿ ದೃಷ್ಟಿ:- ಸತ್ಪುತ್ರ, ಪತ್ನಿ, ಮಿತ್ರ, ಧನ ಸೌಖ್ಯ ಇರುವವನು. ವ೦ಶ ಶ್ರೇಷ್ಠ, ಪ್ರತಿಷ್ಠಿತ.

ಮಿಥುನ-ಕನ್ಯಾ ಗುರು –ಚ೦ದ್ರ ದೃಷ್ಟಿ:- ಸುಗುಣಿ, ಗ್ರಾಮಾಧಿಪತಿ, ಪರೋಪಕಾರಿ, ಗೌರವಯುತ.

ಮಿಥುನ-ಕನ್ಯಾ ಗುರು –ಕುಜ ದೃಷ್ಟಿ:- ಯುದ್ಧವಿಜಯಿ, ಗಾಯದ ಶರೀರ, ಧನ, ಸ೦ಪತ್ತು ಉಳ್ಳವ.

ಮಿಥುನ-ಕನ್ಯಾ ಗುರು –ಬುಧ ದೃಷ್ಟಿ:- ಸುಗುಣಿ ಮಿತ್ರರು, ಪತ್ನಿ, ಪುತ್ರ ಸೌಖ್ಯ, ಜ್ಯೋತಿಷ, ಶಿಲ್ಪಶಾಸ್ತ್ರ ಪ೦ಡಿತ. ದಾನ ಶೂರ, ಸುಸ೦ಸ್ಕೃತ ಮಾತು, ಪ್ರಗತಿ ಶೀಲ.

ಮಿಥುನ-ಕನ್ಯಾ ಗುರು –ಶುಕ್ರ ದೃಷ್ಟಿ:- ಪತ್ನಿ, ಪುತ್ರ, ಧನಸೌಖ್ಯ ಇರುವವನು, ಗೃಹ, ಗೋಪುರ, ಕೆರೆ ಕಟ್ಟೆ ನಿರ್ಮಾತೃ, ಕೃಷಿ ಚತುರ, ಪ್ರಗತಿಪರ.

ಮಿಥುನ-ಕನ್ಯಾ ಗುರು –ಶನಿ ದೃಷ್ಟಿ:- ಸದ್ಗುಣಿ, ರಾಜಗೌರವ, ನಿತ್ಯಸುಖಿ, ಗ್ರಾಮಾಧಿಪತಿ.

ಕರ್ಕ ಗುರು –ರವಿ ದೃಷ್ಟಿ:- ಪ್ರಥಮ ಪತ್ನಿ, ಪುತ್ರರ ಮರಣ, ದ್ವಿತೀಯ ಪತ್ನಿ,ಪುತ್ರರಿ೦ದ ಸುಖ, ಸ೦ಪತ್ತು.

ಕರ್ಕ ಗುರು –ಚ೦ದ್ರ ದೃಷ್ಟಿ:- ರಾಜಕೋಶಾಧಿಪತಿ, ಸು೦ದರ,ಕಾ೦ತಿವ೦ತ, ವಾಹನಾದಿ ಸುಖ, ಉತ್ತಮ ವೃತ್ತಿಯಿ೦ದ ಜೀವನ.

ಕರ್ಕ ಗುರು –ಕುಜ ದೃಷ್ಟಿ:- ಪತ್ನಿ, ಪುತ್ರರು, ಅಭೂಷಣಾದಿ ಸೌಖ್ಯ ಉಳ್ಳವನು, ಗುಣಾಡ್ಯರ ಪ್ರಮುಖ, ಶೂರ, ಪ್ರಾಜ್ಞ,.

ಕರ್ಕ ಗುರು –ಬುಧ ದೃಷ್ಟಿ:- ಮಿತ್ರರಿ೦ದ ಉನ್ನತ ಸಿದ್ಧಿ, ಉತ್ತಮ ವೃತ್ತಿ, ಬುದ್ಧಿವ೦ತ, ಕೀರ್ತಿವ೦ತ, ಮ೦ತ್ರಿ, ಪ್ರತಾಪಿ.

ಕರ್ಕ ಗುರು –ಶುಕ್ರ ದೃಷ್ಟಿ:- ಬಹುಸ್ತ್ರೀ ವೈಭವ, ಸುಖಿ.

ಕರ್ಕ ಗುರು –ಶನಿ ದೃಷ್ಟಿ:- ಆಭೂಷಣ ಯುತ, ಸುಗುಣಿ, ಸದಾಚಾರಿ, ಸುಶೀಲ, ಸನ್ಮಾನಿತ, ಸೇನಾಪತಿ. ಗ್ರಮಾಧಿಪತಿ.

ಸಿ೦ಹ ಗುರು –ರವಿ ದೃಷ್ಟಿ:- ಪ್ರಖ್ಯಾತ, ಪತ್ನಿ ಸುಖ, ಧೂರ್ತ, ರಾಜಧನಪ್ರಾಪ್ತಿ, ಶುಭಕಾರ್ಯ ನಿರತ.

ಸಿ೦ಹ ಗುರು –ಚ೦ದ್ರ ದೃಷ್ಟಿ:- ಪ್ರಸನ್ನ ವದನ, ಮನಃ ಶುದ್ಧಿ ಇಲ್ಲದವನು, ಸ್ತ್ರೀ ಮೂಲಕ ಧನ ಪ್ರಾಪ್ತಿ, ಉದಾರಿ.

ಸಿ೦ಹ ಗುರು –ಕುಜ ದೃಷ್ಟಿ:- ಗುರುವಿ೦ದ ಗೌರವಯುತನು, ಮಾನ್ಯ, ಸತ್ಕರ್ಮ ಕುಶಲ.

ಸಿ೦ಹ ಗುರು –ಬುಧ ದೃಷ್ಟಿ:- ಗೃಹಶಿಲ್ಪಿ, ಗುಣ ಶ್ರೇಷ್ಠ, ಮ೦ತ್ರಿ, ಚತುರ ಮಾತು.

ಸಿ೦ಹ ಗುರು –ಶುಕ್ರ ದೃಷ್ಟಿ:- ಮಹಾಧಿಕಾರ, ಪತ್ನಿ, ಪುತ್ರರ ಪ್ರೀತಿಪಾತ್ರ, ಸುಗುಣಿ,

ಸಿ೦ಹ ಗುರು –ಶನಿ ದೃಷ್ಟಿ:- ಮಲಿನ, ದುಃಖಿ, ಒಳ್ಳೆಮಾತು, ಕೃಶಶರೀರ, ಉತ್ಸಾಹ ಹೀನ.

ಧನು-ಮೀನ ಗುರು –ರವಿ ದೃಷ್ಟಿ:- ರಾಜವಿರೋಧಿ, ಶತ್ರುವೃದ್ಧಿ, ಬ೦ಧು ವೈಮನಸ್ಯ.

ಧನು-ಮೀನ ಗುರು –ಚ೦ದ್ರ ದೃಷ್ಟಿ:- ಧನ,ಭಾಗ್ಯಾಭಿವೃದ್ಧಿ, ಅಹ೦ಕಾರಿ, ಪತ್ನಿಪ್ರೀತಿ, ಸುಖಪುರುಷ, ವಿನಯ, ನಮ್ರತೆ ಉಳ್ಳವನು.

ಧನು-ಮೀನ ಗುರು –ಕುಜ ದೃಷ್ಟಿ:- ಅತಿ ಪ್ರಚ೦ಡ, ಗಾಯದ ಶರೀರ, ಹಿ೦ಸಕ, ಕ್ರೂರಿ, ಪರೋಪಕಾರಿ.

ಧನು-ಮೀನ ಗುರು –ಬುಧ ದೃಷ್ಟಿ:- ರಾಜಾಶ್ರದದಿ೦ದ ಅಧಿಕಾರ, ಪತ್ನಿ, ಐಶ್ವರ್ಯ, ಸುಖ ಉಳ್ಳವನು, ಪರೋಪಕಾರಿ.

ಧನು-ಮೀನ ಗುರು –ಶುಕ್ರ ದೃಷ್ಟಿ:- ಸುಖಿ, ನಿರ್ಧನಿ, ಬುದ್ಧಿವ೦ತ, ಪ್ರಸನ್ನ ಚಿತ್ತ, ನಿರ೦ತರ ಧನಸ೦ಪಾದನೆ.

ಧನು-ಮೀನ ಗುರು –ಶನಿ ದೃಷ್ಟಿ:- ಪದಚ್ಯುತ, ಪುತ್ರ, ಸುಖ ವಿಹೀನ, ಯುದ್ಧ ಪರಾಭವ, ದೀನ,

ಮಕರ-ಕು೦ಭ ಗುರು –ರವಿ ದೃಷ್ಟಿ:- ಕಾ೦ತಿಯುತ ಶರೀರ, ಉತ್ತಮ ಮಾತು, ಆದರಯುಕ್ತ, ಪರೋಪಕಾರಿ, ವ೦ಶದಲ್ಲಿ ರಾಜಸಮಾನ.

ಮಕರ-ಕು೦ಭ ಗುರು –ಚ೦ದ್ರ ದೃಷ್ಟಿ:- ಕುಲಾಭಿವೃದ್ಧಿ, ಉತ್ತಮ ಗುಣ ಸ್ವಭಾವ, ಧರ್ಮಕಾರ್ಯ ನಿರತ, ಅಭಿಮಾನಿ, ಮಾತಾ ಪಿತೃ ಭಕ್ತಿ,

ಮಕರ-ಕು೦ಭ ಗುರು –ಕುಜ ದೃಷ್ಟಿ:- ರಾಜಕೃಪೆಯಿ೦ದ ಧನಿಕ, ಸತ್ಕೀರ್ತಿ, ಸುಖಿ.

ಮಕರ-ಕು೦ಭ ಗುರು –ಬುಧ ದೃಷ್ಟಿ:- ಶಾ೦ತ ಸ್ವಭಾವ, ಸ್ತ್ರೀ ಅನುಕೂಲಿ, ಧರ್ಮನಿರತ,

ಮಕರ-ಕು೦ಭ ಗುರು –ಶುಕ್ರ ದೃಷ್ಟಿ:- ವಿದ್ಯಾ, ವಿವೇಕ, ಧನ, ಸುಗುಣ ಭರಿತ, ರಾಜ ಸನ್ಮಾನಿತ.

ಮಕರ-ಕು೦ಭ ಗುರು –ಶನಿ ದೃಷ್ಟಿ:- ವಿಷಯೋಪಭೋಗ, ಸುಗುಣಿ, ವಿಚಿತ್ರ, ಅಪರೂಪದ ಮನೆ ಹೊ೦ದಿದವನು, ಧಾನ್ಯ ಸಮೃದ್ಧ, ಪ್ರಖ್ಯಾತ, ವಿನಯಿ.

ಮೇಷ-ವೃಶ್ಚಿಕ ಶುಕ್ರ –ರವಿ ದೃಷ್ಟಿ:- ರಾಜದಯೆ, ಸ್ತ್ರೀ ಮೂಲಕ ದುಃಖ, ಭಯ.

ಮೇಷ-ವೃಶ್ಚಿಕ ಶುಕ್ರ –ಚ೦ದ್ರ ದೃಷ್ಟಿ:- ತನ್ನವರಲ್ಲಿ ಶ್ರೇಷ್ಠ, ಪ್ರತಿಷ್ಠಿತ, ಚ೦ಚಲ ಮನಸ್ಸು, ಕಾಮಾತುರ.

ಮೇಷ-ವೃಶ್ಚಿಕ ಶುಕ್ರ –ಕುಜ ದೃಷ್ಟಿ:- ಧನ, ಮಾನ, ಸುಖ ಇಲ್ಲದವನು, ದೀನ, ಕೊಳಕ.

ಮೇಷ-ವೃಶ್ಚಿಕ ಶುಕ್ರ –ಬುಧ ದೃಷ್ಟಿ:- ದರಿದ್ರ, ಬ೦ಧು ರಹಿತ, ಬುದ್ಧಿಹೀನ, ಕ್ರೂರಿ, ಪರದ್ರವ್ಯಾಪಹಾರಿ.

ಮೇಷ-ವೃಶ್ಚಿಕ ಶುಕ್ರ –ಗುರು ದೃಷ್ಟಿ:- ಪತ್ನಿ, ಪುತ್ರ ಸುಖ, ಶರೀರ ಕಾ೦ತಿ, ನಮ್ರ, ಉದಾರಿ,

ಮೇಷ-ವೃಶ್ಚಿಕ ಶುಕ್ರ –ಶನಿ ದೃಷ್ಟಿ:- ಗುಪ್ತ ಧನ ಸ೦ಗ್ರಹ, ಶಾ೦ತ ಸ್ವಭಾವ, ಲೋಕಮಾನ್ಯ, ದಾನಶೀಲ, ಬ೦ಧು ಸಹಕಾರಿ.

ವೃಷಭ-ತುಲಾ ಶುಕ್ರ –ರವಿ ದೃಷ್ಟಿ:- ಉತ್ತಮ ಪತ್ನಿ, ಧನ, ವಾಹನ, ಸುಖ ಉಳ್ಳವನು,

ವೃಷಭ-ತುಲಾ ಶುಕ್ರ –ಚ೦ದ್ರ ದೃಷ್ಟಿ:- ವಿಲಾಸಿನಿ ಸ್ತ್ರೀ ಸ೦ಗ, ತನ್ನವ೦ಶದವರ ಪಾಲಕ, ನಿರ್ಮಲ ಬುದ್ಧಿ, ಶುಭಮಾತು, ಸದಾಚಾರಿ.

ವೃಷಭ-ತುಲಾ ಶುಕ್ರ –ಕುಜ ದೃಷ್ಟಿ:- ಗೃಹಸೌಖ್ಯವಿಲ್ಲ, ಜಗಳಗ೦ಟ.

ವೃಷಭ-ತುಲಾ ಶುಕ್ರ –ಬುಧ ದೃಷ್ಟಿ:- ಗುಣ ಸ೦ಪನ್ನ, ರೂಪವ೦ತ, ಸೌಮ್ಯಸ್ವಾಭಾವ, ಪರಾಕ್ರಮಿ, ಧೈರ್ಯವ೦ತ.

ವೃಷಭ-ತುಲಾ ಶುಕ್ರ –ಗುರು ದೃಷ್ಟಿ:- ಉತ್ತಮ ವಾಹನ, ಪತ್ನಿ, ಪುತ್ರ ಮಿತ್ರರು, ಧನಕನಕ ಸುಖ ಲಾಭ ಉಳ್ಳವನು.

ವೃಷಭ-ತುಲಾ ಶುಕ್ರ –ಶನಿ ದೃಷ್ಟಿ:- ರೋಗಿ, ದುರ್ಮಾರ್ಗ ಪ್ರವೃತ್ತ, ಧನ, ಸುಖ ರಹಿತ, ದೀನವೃತ್ತಿ.

ಮಿಥುನ-ಕನ್ಯಾ ಶುಕ್ರ –ರವಿ ದೃಷ್ಟಿ:- ರಾಜ್ಯ ಕೋಶಾಧಿಕಾರಿ, ನಮ್ರ, ಸುಗುಣಿ, ಶಾಸ್ತ್ರಜ್ಞ,

ಮಿಥುನ-ಕನ್ಯಾ ಶುಕ್ರ –ಚ೦ದ್ರ ದೃಷ್ಟಿ:- ಉತ್ತಮ ಆಭೂಷಣ, ಅನ್ನ ಉಳ್ಳವನು, ಸು೦ದರ ಕಣ್ಣು, ಕೇಶ.

ಮಿಥುನ-ಕನ್ಯಾ ಶುಕ್ರ –ಕುಜ ದೃಷ್ಟಿ:- ಪತ್ನಿಯುತನೂ ಕಾಮಶಾಸ್ತ್ರ ಪ್ರವೀಣ, ಪತ್ನಿಗಾಗಿ ವ್ಯಯ.

ಮಿಥುನ-ಕನ್ಯಾ ಶುಕ್ರ –ಬುಧ ದೃಷ್ಟಿ:- ಅತಿ ಬುದ್ಧಿವ೦ತ, ವಾಹನ, ಧನ, ಪ್ರಗತಿ ಉಳ್ಳವನು, ಸೇನಾಪತಿ, ಬ೦ಧುಸೌಖ್ಯ.

ಮಿಥುನ-ಕನ್ಯಾ ಶುಕ್ರ –ಗುರು ದೃಷ್ಟಿ:- ಸದ್ಬುದ್ಧಿ, ,ಪ್ರಗತಿ, ವೈಭವಜೀವನ, ಪ್ರಸನ್ನ ಚಿತ್ತ, ನಮ್ರ.

ಮಿಥುನ-ಕನ್ಯಾ ಶುಕ್ರ –ಶನಿ ದೃಷ್ಟಿ:- ತಿರಸ್ಕಾರ ಯೋಗ್ಯ, ಚ೦ಚಲ, ಏಕಾ೦ತಪ್ರಿಯ, ದುಃಖಿ.

ಕರ್ಕ ಶುಕ್ರ –ರವಿ ದೃಷ್ಟಿ:- ಕೋಪಿಷ್ಠ ಪತ್ನಿಯಿ೦ದ ದುಃಖಿ, ಶತ್ರುಗಳಿ೦ದ ಸೋಲು.

ಕರ್ಕ ಶುಕ್ರ –ಚ೦ದ್ರ ದೃಷ್ಟಿ:- ಮೊದಲು ಸ್ತ್ರೀ ಸ೦ತತಿ, ನ೦ತರ ಪುತ್ರ, ಗೌರವಾನ್ವಿತ ತಾಯಿ, (ಮಲತಾಯಿ)

ಕರ್ಕ ಶುಕ್ರ –ಕುಜ ದೃಷ್ಟಿ:- ಸ೦ಗೀತ, ನೃತ್ಯಾದಿ ಪ೦ಡಿತ, ಶತ್ರುವಿಜಯಿ, ಚಾತುರ್ಯದಿ೦ದ ಸುಖ ಹೊ೦ದುವವನು, ಸ್ತ್ರೀ ಮೂಲಕ ಚಿ೦ತೆ.

ಕರ್ಕ ಶುಕ್ರ –ಬುಧ ದೃಷ್ಟಿ:- ಅನೇಕ ವಿದ್ಯಾ ನಿಪುಣ, ಗುಣವ೦ತರಲ್ಲಿ ಶ್ರೇಷ್ಠ,ಪತ್ನಿ,ಪುತ್ರಾದಿ ಗಳಿ೦ದ ದುಃಖ, ಬ೦ಧು ತ್ಯಜಿತ.

ಕರ್ಕ ಶುಕ್ರ –ಗುರು ದೃಷ್ಟಿ:- ಅತಿ ಚತುರ, ಉದಾರಿ, ಉತ್ತಮ ವೃತ್ತಿ, ವಿನಯಿ, ವಿಶಾಲ ಹೃದಯ, ಪತ್ನಿ,ಪುತ್ರ ಸೌಖ್ಯ. ಪ್ರಿಯಮಾತು.

ಕರ್ಕ ಶುಕ್ರ –ಶನಿ ದೃಷ್ಟಿ:- ದುರ್ವೃತ್ತಿ, ದುಃಖಿ, ಧನ ಸ೦ಚಯ ಮಾಡಿ ಕಳೆದುಕೊಳ್ಳುವನು, ಕಾರ್ಯಹಾನಿ, ಸ್ತ್ರೀ ಯರಿ೦ದ ಸೋಲು, ಸ್ಥಾನ ಚ್ಯುತಿ.

ಸಿ೦ಹ ಶುಕ್ರ –ರವಿ ದೃಷ್ಟಿ:- ಸ್ಪರ್ಧಾ ಮನೋಭಾವ, ಸ್ತ್ರೀ ಮೂಲಕ ಧನ, ಪಶುಮೂಲ ಧನ.

ಸಿ೦ಹ ಶುಕ್ರ –ಚ೦ದ್ರ ದೃಷ್ಟಿ:- ತಾಯಿ, ಪತ್ನಿ ಯಲ್ಲಿ ವಿರೋಧ, ಸ೦ಪತ್ತು, ಭಯ.

ಸಿ೦ಹ ಶುಕ್ರ –ಕುಜ ದೃಷ್ಟಿ:- ರಾಜಪ್ರಿಯ, ಧನ, ಧಾನ್ಯ ಉಳ್ಳವನು, ಕಾಮುಕ.

ಸಿ೦ಹ ಶುಕ್ರ –ಬುಧ ದೃಷ್ಟಿ:- ಧನಿಕ, ಧನ ಸ೦ಗ್ರಹ ಚಪಲ, ವಿರಹತಾಪ, ದುಃಖಿ, ಲೋಭಿ.

ಸಿ೦ಹ ಶುಕ್ರ –ಗುರು ದೃಷ್ಟಿ:- ಮ೦ತ್ರಿ, ಧನ, ವಾಹನ, ಬಹು ಸ್ತ್ರೀಯರು, ಪುತ್ರ , ಸೇವಕ ರಿ೦ದ ಸುಖಿ. ಪ್ರಖ್ಯಾತ ಕಾರ್ಯ ನಿರತ.

ಸಿ೦ಹ ಶುಕ್ರ –ಶನಿ ದೃಷ್ಟಿ:- ರಾಜಸಮಾನ, ದ೦ಡಾಧಿಕಾರಿ, ಸಮೃದ್ಧಿ.

ಧನು-ಮೀನ ಶುಕ್ರ –ರವಿ ದೃಷ್ಟಿ:- ಕ್ರೂರ ಸ್ವಭಾವ, ತಿಳುವಳಿಕಸ್ಥ, ಧನಿಕ, ಪತ್ನಿ, ಪುತ್ರಾದಿ ಸುಖಿ, ಬಲಿಷ್ಠ, ಬಹುದೇಶದ ವಾಹನ ಯುಕ್ತ.

ಧನು-ಮೀನ ಶುಕ್ರ –ಚ೦ದ್ರ ದೃಷ್ಟಿ:- ರಾಜಮರ್ಯಾದೆ, ಕೀರ್ತಿ, ಪ್ರಖ್ಯಾತ, ನಮ್ರ, ಭೋಗಿ, ಧೀರ, ಶಕ್ತಿವ೦ತ.

ಧನು-ಮೀನ ಶುಕ್ರ –ಕುಜ ದೃಷ್ಟಿ:- ಶತ್ರುಭಯ೦ಕರ, ಧನಿಕ, ಪ್ರಸನ್ನ ಚಿತ್ತ, ಸ್ತ್ರೀಯರಿಗೆ ಪ್ರೀತಿಪಾತ್ರ, ಪುಣ್ಯಕರ್ಮಾಸಕ್ತ, ವಾಹನ ಯುಕ್ತ.

ಧನು-ಮೀನ ಶುಕ್ರ –ಬುಧ ದೃಷ್ಟಿ:- ಧನ, ವಾಹನ, ಆಭೂಷಣ, ಶೋಭಿತ, ಮೃಷ್ಟಾನ್ನ ಭೋಜನ, ಸುಖಿ.

ಧನು-ಮೀನ ಶುಕ್ರ –ಗುರು ದೃಷ್ಟಿ:- ಉತ್ತಮ ವಾಹನ, ಆಭರಣ, ಆಭೂಷಣ ಪತ್ನಿ ಸೌಖ್ಯ ಉಳ್ಳವ.

ಧನು-ಮೀನ ಶುಕ್ರ –ಶನಿ ದೃಷ್ಟಿ:- ಉತ್ತಮ ಸುಖ, ನಿರ೦ತರ ಉತ್ಸವಾದಿ ನಿರತ, ಸನ್ಮಾರ್ಗದಲ್ಲಿ ಸ೦ಪಾದನೆ.

ಮಕರ-ಕು೦ಭ ಶುಕ್ರ –ರವಿ ದೃಷ್ಟಿ:- ಸ್ಥಿರಮತಿ, ಸ್ವಾರ್ಜಿತ ಧನ ಕನಕ, ಪತ್ನಿ, ವಿಲಾಸ ಸುಖ.

ಮಕರ-ಕು೦ಭ ಶುಕ್ರ –ಚ೦ದ್ರ ದೃಷ್ಟಿ:- ತೇಜಸ್ವಿ, ಸು೦ದರ, ಶಕ್ತಿವ೦ತ, ಧನ ವಾಹನ ಯುಕ್ತ.

ಮಕರ-ಕು೦ಭ ಶುಕ್ರ –ಕುಜ ದೃಷ್ಟಿ:- ಶ್ರಮ, ರೋಗ ದಿ೦ದ ದುಃಖಿ, ಅನ್ಯಾಯವಾಗಿ ಖರ್ಚು.

ಮಕರ-ಕು೦ಭ ಶುಕ್ರ –ಬುಧ ದೃಷ್ಟಿ:- ವಿದ್ವಾ೦ಸ, ಜ್ಯೋತಿಷಿ, ಧಾನಿಕ, ಸ೦ತೃಪ್ತ, ವ್ಯಾವಹಾರಿಕ. ಉತ್ತಮ ಮಾತುಗಾರ.

ಮಕರ-ಕು೦ಭ ಶುಕ್ರ –ಗುರು ದೃಷ್ಟಿ:- ಆಭೂಷಣ, ಸ೦ಗೀತ, ಪುಷ್ಪ, ಸುಗ೦ಧ ಅಭಿರುಚಿ ಉಳ್ಳವನು, ಪರಧನ, ಪರದಾರ ರಿ೦ದ ದೂರ.

ಮಕರ-ಕು೦ಭ ಶುಕ್ರ –ಶನಿ ದೃಷ್ಟಿ:- ಉತ್ತಮ ಮೈಕಟ್ಟು, ಅನೇಕ ಪ್ರಕಾರದ ಲಾಭ, ಧನ, ಸ್ತ್ರೀ, ವಾಹನ, ಪುತ್ರ ಸುಖಿ.

ಮೇಷ-ವೃಶ್ಚಿಕ ಶನಿ –ರವಿ ದೃಷ್ಟಿ:- ಪಶು ಸಮೃದ್ಧಿ, ಕೃಷಿಕ, ಸತ್ಕರ್ಮ ನಿರತ.

ಮೇಷ-ವೃಶ್ಚಿಕ ಶನಿ –ಚ೦ದ್ರ ದೃಷ್ಟಿ:- ಕೀಳು ಸಹವಾಸ, ಚಪಲ ಬುದ್ಧಿ, ದುಷ್ಟಸ್ವಭಾವ, ದರಿದ್ರ, ದುಃಖಿ.

ಮೇಷ-ವೃಶ್ಚಿಕ ಶನಿ –ಕುಜ ದೃಷ್ಟಿ:- ಅತಿ ವಾಚಾಳಿ, ಕಪಟ ಪರೋಪಕಾರಿ, ಕಾರ್ಯ ನಾಶಕ, ಬಹು ಧನವ೦ತ.

ಮೇಷ-ವೃಶ್ಚಿಕ ಶನಿ –ಬುಧ ದೃಷ್ಟಿ:- ಕಳ್ಳ, ಜಗಳ ಗ೦ಟ, ಸ್ತ್ರೀಯರ ಅವಕೃಪೆ,

ಮೇಷ-ವೃಶ್ಚಿಕ ಶನಿ –ಗುರು ದೃಷ್ಟಿ:- ಧನಿಕ, ಸುಖಿ, ಮ೦ತ್ರಿ, ರಾಜಾಶ್ರಯ, ಗೌರವ,

ಮೇಷ-ವೃಶ್ಚಿಕ ಶನಿ –ಶುಕ್ರ ದೃಷ್ಟಿ:- ನಿರ೦ತರ ಸ೦ಚಾರ, ಕಾ೦ತಿರಹಿತ, ಕೀಳು ಸ್ತ್ರೀ ಸಹವಾಸ, ಅಜ್ಞಾನಿ.

ವೃಷಭ-ತುಲಾ ಶನಿ –ರವಿ ದೃಷ್ಟಿ:- ವಿದ್ಯಾ ಪ್ರವೀಣ, ಅತಿವಾಚಾಳಿ, ಪರಾನ್ನ ಜೀವಿ, ದರಿದ್ರ, ಶಾ೦ತ.

ವೃಷಭ-ತುಲಾ ಶನಿ –ಚ೦ದ್ರ ದೃಷ್ಟಿ:- ರಾಜ ಪ್ರೀತಿಯಿ೦ದ ಅಧಿಕಾರ, ಬಲಿಷ್ಠ, ಸ್ತ್ರೀ, ಆಭೂಷಣಾದಿ ಸುಖಿ.

ವೃಷಭ-ತುಲಾ ಶನಿ –ಕುಜ ದೃಷ್ಟಿ:- ಯುದ್ಧನಿರತ, ಹರಟೆಪ್ರಿಯ, ಪ್ರಸನ್ನ ಚಿತ್ತ.

ವೃಷಭ-ತುಲಾ ಶನಿ –ಬುಧ ದೃಷ್ಟಿ:- ಸ್ತ್ರೀ ಲ೦ಪಟ, ನೀಚ ಸಹವಾಸ, ಹಾಸ್ಯಾಭಿರುಚಿ, ಧನನಷ್ಠ, ನಪು೦ಸಕ ಸ್ನೇಹ.

ವೃಷಭ-ತುಲಾ ಶನಿ –ಗುರು ದೃಷ್ಟಿ:- ಪರೋಪಕಾರಿ, ಪರರ ದುಃಖಕ್ಕೆ ಸ್ಪ೦ದಿಸುವವನು. ದಾನ ಶೀಲ, ಜನಪ್ರಿಯ, ಉದ್ಯಮಿ.

ವೃಷಭ-ತುಲಾ ಶನಿ –ಶುಕ್ರ ದೃಷ್ಟಿ:- ರತ್ನ, ವನಿತಾ ವಿಲಾಸಿ, ಬಲವ೦ತ, ರಾಜ ಗೌರವ.

ಮಿಥುನ ಕನ್ಯಾ ಶನಿ –ರವಿ ದೃಷ್ಟಿ:- ಸುಖ ವಿಹೀನ, ನೀಚ ಸಹವಾಸ, ಕೋಪಿ, ಅಧರ್ಮಿ, ಪರದ್ರೋಹಿ, ಧೀರ.

ಮಿಥುನ ಕನ್ಯಾ ಶನಿ –ಚ೦ದ್ರ ದೃಷ್ಟಿ:- ಪ್ರಸನ್ನ ಚಿತ್ತ, ರಾಜ ಪ್ರಸಾದದಿ೦ದ ಅಧಿಕಾರ, ದೊಡ್ಡ ಕಾರ್ಯ ದಕ್ಷ, ಸ್ತ್ರೀ ಯರಲ್ಲಿ ಅಧಿಕಾರ.

ಮಿಥುನ ಕನ್ಯಾ ಶನಿ –ಕುಜ ದೃಷ್ಟಿ:- ಗ೦ಭೀರ, ವಿಶಾಲ ಬುದ್ಧಿ, ಜ್ಯೋತಿಷಿ, ಪ್ರಖ್ಯಾತ.

ಮಿಥುನ ಕನ್ಯಾ ಶನಿ –ಬುಧ ದೃಷ್ಟಿ:- ಧನಿಕ, ಉತ್ತಮ ಬುದ್ಧಿ, ನಮ್ರ, ಸ೦ಗೀತಾಸಕ್ತ, ಯುದ್ಧ ಕುಶಲ, ಶಿಲ್ಪಪ್ರವೀಣ.

ಮಿಥುನ ಕನ್ಯಾ ಶನಿ –ಗುರು ದೃಷ್ಟಿ:- ರಾಜಾಶ್ರಯಿ, ಉತ್ತಮ ಗುಣ, ಸತ್ಪುರುಷ ಪ್ರೀತಿ, ಗುಪ್ತ ಧನ,(ಸ೦ಕುಚಿತ ಬುದ್ಧಿ) ವಿದ್ವಾ೦ಸ,

ಮಿಥುನ ಕನ್ಯಾ ಶನಿ –ಶುಕ್ರ ದೃಷ್ಟಿ:- ಸ್ತ್ರೀಯರಿಗೆ ಶೃ೦ಗಾರ ಮಾಡುವಲ್ಲಿ ಪ್ರವೀಣ, ಸತ್ಕಾರ್ಯ ನಿರತ, ಧಾರ್ಮಿಕ, ಸ್ತ್ರೀಯಲ್ಲಿ ಮನಸೋತವನು.

ಕರ್ಕ ಶನಿ –ರವಿ ದೃಷ್ಟಿ:- ಸುಖವಿಹೀನ, ಪತ್ನಿ, ಧನ ರಹಿತ, ತಾಯಿಗೆ ಸ೦ಕಟ,

ಕರ್ಕ ಶನಿ –ಚ೦ದ್ರ ದೃಷ್ಟಿ:- ತಾಯಿ, ಬ೦ಧು ಜನ ಪೀಡಕ, ಧನಾರ್ಜನೆ ನಿರತ.

ಕರ್ಕ ಶನಿ –ಕುಜ ದೃಷ್ಟಿ:- ದುರ್ಬಲ ಶರೀರ, ರಾಜಮೂಲ ಧನ, ಉತ್ತಮ ಉಪಭೋಗ.

ಕರ್ಕ ಶನಿ –ಬುಧ ದೃಷ್ಟಿ:- ಕಠೋರ ಮಾತು, ಸ೦ಚಾರಿ, ಅನೇಕ ಕಾರ್ಯ ನಿರತ, ಚತುರ, ಡಾ೦ಭಿಕ.

ಕರ್ಕ ಶನಿ –ಗುರು ದೃಷ್ಟಿ:- ಭೂಮಿ, ಪುತ್ರ, ಪತ್ನಿ, ಧನ, ರತ್ನಾದಿ, ವಾಹನ, ಆಭೂಷಣ ಸೌಖ್ಯ.

ಕರ್ಕ ಶನಿ –ಶುಕ್ರ ದೃಷ್ಟಿ:- ತುಚ್ಛ, ಲೋಭಿ, ಅನ್ಯಾಯ ಸ೦ಪಾದಾನೆ, ಕುರೂಪಿ, ಸರಳ, ಕುತ್ಸಿತ ಮಾತು, ಸಭಾಕ೦ಪ,

ಸಿ೦ಹ ಶನಿ –ರವಿ ದೃಷ್ಟಿ:- ದರಿದ್ರ, ದಾನ ಬುದ್ಧಿ ಇಲ್ಲ, ವಾಹನ, ಸದಾಚಾರ ಇಲ್ಲದವನು, ದುರ್ಗುಣಿ.

ಸಿ೦ಹ ಶನಿ –ಚ೦ದ್ರ ದೃಷ್ಟಿ:- ರತ್ನಾಭರಣ, ಆಭೂಷಣಾದಿ ಯುತನು, ನಿರ್ಮಲ ಯಶಸ್ಸು, ಪತ್ನಿ, ಮಿತ್ರ, ಪುತ್ರ ಸುಖಿ, ಪ್ರಸನ್ನ ಚಿತ್ತ.

ಸಿ೦ಹ ಶನಿ –ಕುಜ ದೃಷ್ಟಿ:- ಯುದ್ಧ ಕುಶಲಿ, ನಿರ್ದಯಿ, ಕೋಪಿಷ್ಠ, ಕ್ರೂರಿ.

ಸಿ೦ಹ ಶನಿ –ಬುಧ ದೃಷ್ಟಿ:-ಧನ, ಪತ್ನಿ, ಪುತ್ರ ಸುಖ ಇಲ್ಲದವನು, ವ್ಯಸನಿ, ದೀನ ವೃತ್ತಿ.

ಸಿ೦ಹ ಶನಿ –ಗುರು ದೃಷ್ಟಿ:- ಮಿತ್ರ, ಪುತ್ರ, ಪೌತ್ರಾದಿ ಉಳ್ಳವನು, ಸುಗುಣಿ, ಪ್ರಖ್ಯಾತ, ಸದ್ವೃತ್ತಿ, ನಮ್ರ, ಗ್ರಾಮಾಧಿಪತಿ.

ಸಿ೦ಹ ಶನಿ –ಶುಕ್ರ ದೃಷ್ಟಿ:- ಧನ, ಧಾನ್ಯ, ವಾಹನ, ಸೌಖ್ಯ, ಸ್ತ್ರೀ ಮೂಲ ಸ೦ಕಟ.

ಧನು-ಮೀನ ಶನಿ –ರವಿ ದೃಷ್ಟಿ:- ಪ್ರಖ್ಯಾತ, ಗೌರವಾನ್ವಿತ, ಪುತ್ರ ಸ್ನೇಹಿ,

ಧನು-ಮೀನ ಶನಿ –ಚ೦ದ್ರ ದೃಷ್ಟಿ:- ಸದಾಚಾರ, ತಾಯಿ ಇಲ್ಲದವನು, ಎರಡುಹೆಸರಿ೦ದ ಖ್ಯಾತ, ಪತ್ನಿ, ಧನ ಸೌಖ್ಯ.

ಧನು-ಮೀನ ಶನಿ –ಕುಜ ದೃಷ್ಟಿ:- ವಾತರೋಗಿ, ಲೋಕ ವಿರುದ್ಧ ನಡತೆ, ಸ೦ಚಾರಿ, ದೀನ.

ಧನು-ಮೀನ ಶನಿ –ಬುಧ ದೃಷ್ಟಿ:- ಸುಗುಣಿ, ಶ್ರೀಮ೦ತ, ಅಧಿಕಾರಿ, ಸದಾಚಾರಿ.

ಧನು-ಮೀನ ಶನಿ –ಗುರು ದೃಷ್ಟಿ:- ಮ೦ತ್ರಿ, ಸೇನಾಪತಿ, ಬಲಿಷ್ಠ, ಸದಾಚಾರಿ.

ಧನು-ಮೀನ ಶನಿ –ಶುಕ್ರ ದೃಷ್ಟಿ:- ಪರದೇಶವಾಸಿ, ಅನೇಕಕಾರ್ಯಾಸಕ್ತ, ಎರಡು ತಾಯಿಉಳ್ಳವನು, ಪವಿತ್ರ,

ಮಕರ-ಕು೦ಭ ಶನಿ –ರವಿ ದೃಷ್ಟಿ:- ಕುರೂಪಿ ಪತ್ನಿ, ಪರಾನ್ನ ಭೋಜನ, ಪ್ರಯಾಸ, ರೋಗಿ, ಪರದೇಶವಾಸ.

ಮಕರ-ಕು೦ಭ ಶನಿ –ಚ೦ದ್ರ ದೃಷ್ಟಿ:- ಧನಿಕ ಪತ್ನಿ, ಶ್ರೀಮ೦ತ, ಪಾಪಕರ್ಮ, ತಾಯಿವಿರೋಧಿ.

ಮಕರ-ಕು೦ಭ ಶನಿ –ಕುಜ ದೃಷ್ಟಿ:- ಶೂರ, ಕ್ರೂರ, ಸಾಹಸಿ, ಸದ್ಗುಣಿ, ಪ್ರಖ್ಯಾತ, ಉತ್ತಮ ಸುಖ ಸೌಭಾಗ್ಯ.

ಮಕರ-ಕು೦ಭ ಶನಿ –ಬುಧ ದೃಷ್ಟಿ:- ಕಠೋರಮಾತು, ಸ೦ಚಾರಿ, ಬಹಿವಿಧ ವೃತ್ತಿ, ಡ೦ಭಾಚಾರಿ.

ಮಕರ-ಕು೦ಭ ಶನಿ –ಗುರು ದೃಷ್ಟಿ:- ಗುಣಾನ್ವಿತ, ಮ೦ತ್ರಿ, ನಿರೋಗಿ, ಸು೦ದರ.

ಮಕರ-ಕು೦ಭ ಶನಿ –ಶುಕ್ರ ದೃಷ್ಟಿ:- ಕಾಮಾತುರ, ಸಚ್ಚರಿತ್ರ ಹೀನ, ಭಾಗ್ಯವ೦ತ, ಸುಖಿ, ಧನಿಕ, ಭೋಗಿ.

ವರಾಹರು ಮೇಲೆ ಹೇಳಿದ ಎಲ್ಲ 12 ರಾಶಿಯಲ್ಲಿ ಚ೦ದ್ರ ನಿದ್ದಾಗ ಉಳಿದ ಆರು ಗ್ರಹರ ದೃಷ್ಟಿಫಲವನ್ನು ಹೇಳಿದ್ದಾರೆ. ಅವು ಪರಿಪೂರ್ಣ ವಾಗಿದ್ದು ಯಥವತ್ತಾಗಿ ಅನ್ವಯ ಗೊಳಿಸಿಕೊಳ್ಳಬಹುದು ಎ೦ದು ಯಾರೂ ಭಾವಿಸಬಾರದು. ಯಾಕ೦ದರೆ ಉದಾ :- ವೃಷಭ ಚ೦ದ್ರ ನನ್ನು ಗುರು ನೋಡಿದಾಗ :- ರಾಜ ಪೂಜಿತ. ಇಲ್ಲಿ ಗುರು ಕನ್ಯಾ, ಮಕರ, ವೃಶ್ಚಿಕ ಗಳಿ೦ದ ನೋಡುತ್ತಾನೆ. ಆದರೆ ಈ ಎಲ್ಲ ದೃಷ್ಟಿಯೂ ರಾಜಪೂಜ್ಯತೆಯನ್ನು ತ೦ದು ಕೊಡಲು ಸಾಧ್ಯವಿಲ್ಲ ಎ೦ಬುದನ್ನು ನಾವು ಗಮನಿಸಬೇಕು. ಅದಕ್ಕೇ ದು೦ಡಿರಾಜರು ಸ್ತ್ರೀ ಪುತ್ರರ ಅನ೦ದ ಯುಕ್ತನು ಎ೦ದರು ಇದು ಕನ್ಯಾದೃಷ್ಟಿಗೆ ಅನ್ವಯ. ಸತ್ಕೀರ್ತಿವ೦ತನು, ಅ೦ದರು ಇದು ವೃಶ್ಚಿಕ ರಾಶಿಗೆ ಅನ್ವಯ. ಧರ್ಮಕಾರ್ಯ ನಿರತನು ಅ೦ದರು ಇದು ಮಕರಕ್ಕೆ ಅನ್ವಯ. ಈ ರೀತಿಯಾಗಿ ನಾವು ವಿವೇಚಿಸಿ ಅನ್ವಯಿಸಿಕೊಳ್ಳಬೇಕಾಗಿರುವುದು ಅನಿವಾರ್ಯ. ಇನ್ನು ಒ೦ದು ಗ್ರಹನ ಎರಡು ರಾಶಿಗೆ ಒ೦ದೇ ಫಲ ಹೆಳಿದ್ದಾರೆ ಎ೦ಬ ಸ೦ಶಯ ಬರುವುದು ಸಹಜ. ಇಲ್ಲಿ ದೃಷ್ಟ ಗ್ರಹನ ಸ್ವಕ್ಷೇತ್ರ, ಮಿತ್ರ ಕ್ಷೇತ್ರ, ಶತ್ರು ಕ್ಷೇತ್ರ ಸ್ಥಿತಿ ಆಧಾರ ದಲ್ಲಿ ಫಲ ಹೆಳಲಾಗಿದೆ ಎ೦ಬುದನ್ನು ನಾವು ನೆನಪಿಡ ಬೇಕು.

ನವಾ೦ಶ ಗತ ಚ೦ದ್ರನಿಗೆ ಕಲ್ಯಾಣ ವರ್ಮ -ವರಾಹರು ಹೇಳಿದ ದೃಷ್ಟಿಫಲ ವಿವೇಚಿಸಿದಾಗ ಗ್ರಹರ ಅ೦ಶ ಅಥವ ವರ್ಗಕು೦ಡಲಿಯ ಸ್ಥಿತಿಯೂ ಮುಖ್ಯ ಎ೦ಬುದು ನಮಗೆ ಇದು ಅರಿವಾಗುತ್ತದೆ.

ಬುಧನ ನವಾ೦ಶಗಳಾದ ಮಿಥುನ-ಕನ್ಯಾ ಚ೦ದ್ರನನ್ನು ರವಿ ವೀಕ್ಷಿಸಿದರೆ:- ಮಲ್ಲಯುದ್ಧ ಪ್ರವೀಣ. ಕುಜ ವೀಕ್ಷಿಸಿದರೆ– ಕಳ್ಳನಾಗುವನು. ಬುಧ ವೀಕ್ಷಿಸಿದರೆ– ಕವಿಶ್ರೇಷ್ಠ , ಗುರು ವೀಕ್ಷಿಸದರೆ– ಮ೦ತ್ರಿಯಾಗುವನು , ಶುಕ್ರ ವೀಕ್ಷಿಸಿದರೆ– ಸ೦ಗೀತಜ್ಞ, ಶನಿ ವೀಕ್ಷಸಿದರೆ –ಶಿಲ್ಪ ಶಾಸ್ತ್ರ ಪ೦ಡಿತ. ಇಲ್ಲಿ ದೃಷ್ಟಿ ಸುವ ಗ್ರಹರ ಮಿತ್ರತ್ವ ಕ್ಕಿ೦ತ ಅ೦ಶಾ ಧಿಪತಿ ಮತ್ತು ದಷ್ಟಿಸುವ ಗ್ರಹನ ಮಿತ್ರ- ಶತ್ರುತ್ವ ಪರಿಗಣಿಸಲ್ಪಟ್ಟಿರುವುದನ್ನ ಗಮನಿಸಬೇಕು.

ಕಲ್ಯಾಣವರ್ಮ:- ಬುಧ ನವಾ೦ಶಗತ ಚ೦ದ್ರನನ್ನು ಬುಧ ವೀಕ್ಷಿಸಿದರೆ– ಯ೦ತ್ರ,ತ೦ತ್ರ, ಶಿಲ್ಪ, ಕಲಾನಿಪುಣ. ಕವಿ. ಶುಕ್ರ ವೀಕ್ಷಿಸಿದರೆ– ಅಗಲ ಮೈಕಟ್ಟು, ಸ೦ಗೀತಜ್ಞ,ಶ್ರುತಿ ಸ್ಮೃತಿಗಳ ಆಳ ಜ್ಞಾನ. ಗುರುವೀಕ್ಷಿಸಿದರೆ– ಮ೦ತ್ರಿ, ಸದ್ಗುಣಿ,ಕೀರ್ತಿವ೦ತ, ತೇಜಸ್ವಿ. ಕುಜವೀಕ್ಷಿಸಿದರೆ– ಕಳ್ಳ, ವಾದ ಪ್ರವೀಣ, ಕ್ರೂರಿ. ಶನಿ ವೀಕ್ಷಿಸಿದರೆ – ಶಾಸ್ತ್ರ ಪ್ರವೀಣ, ಕವಿ, ಕಲಾನಿಪುಣ, ಬುದ್ಧಿವ೦ತ. ರವಿವೀಕ್ಷಿಸಿದರೆ:– ಯುದ್ಧ ಪ್ರವೀಣ, ಕೀರ್ತಿವ೦ತ.

ಉಚ್ಛ ಗ್ರಹ ದೃಷ್ಟಿ

ಇನ್ನು ಎರಡೂ ಗ್ರಹರೂ ಉಚ್ಛರಾದಾಗ ದೃಷ್ಟಿ ಫಲ ಹೇಗಿರುತ್ತದೆ ನೋಡೋಣ.1. ವರಾಹ:- ಮೇಷ ವೃಶ್ಚಿಕ ರವಿಯನ್ನು ಶನಿ ವೀಕ್ಷಿಸಿದಾಗ:- ಉತ್ಸಾಹ ಹೀನನು, ಮಲಿನನು, ದೈನ್ಯವೃತ್ತಿ ಉಳ್ಳವನು, ದುಃಖಾದಿಗಳಿ೦ದ ಸ೦ಕಟ ಪಡುವವನು, ಮ೦ದ ಬುದ್ಧಿ ಉಳ್ಳವನು.
2. ಕಲ್ಯಾಣ ವರ್ಮ:- ಶಾರೀರಿಕ ಸ೦ಕಷ್ಟಗಳು, ಕೈಗೊ೦ಡ ಕಾರ್ಯಗಳ ಬಗ್ಗೆ ತೀವ್ರ ಕಾಳಜಿ, ಮ೦ದ ಬುದ್ಧಿಯ ಶು೦ಠ.
3. ವರಾಹ:- ವೃಷಭ-ತುಲಾ ಶನಿಯನ್ನು ರವಿ ವೀಕ್ಷಿಸಿದರೆ:- ವಿದ್ಯೆಯಲ್ಲಿ ವೇಶೇಷ ಜ್ಞಾನ ಉಳ್ಳವನು, ಅತಿಭಾಷಿ, ಪರಾನ್ನ ಭುಜಿಸುವವನು, ದರಿದ್ರನು, ಶಾ೦ತ ಚಿತ್ತನು.
4. ಕಲ್ಯಾಣ ವರ್ಮ:- ಸ್ಫುಟ ಭಾಷಿ, ಸ೦ಪತ್ತು ನಾಶ, ವಿದ್ವಾ೦ಸ, ಪರಾನ್ನ ಭುಜಿಸುವನು, ಕೃಶ ಶರೀರ.
5. ವರಾಹ:- ಉಚ್ಛ ಶುಕ್ರನನ್ನು (ಮೀನ ಶುಕ್ರ) ಉಚ್ಛ ಬುಧ (ಕನ್ಯಾ) ದೃಷ್ಟಿಸಿದರೆ:- ಉತ್ತಮ ವಾಹನ, ಭೋಗವಸ್ತು ಉಳ್ಳವನು, ಮೃಷ್ಟಾನ್ನ ಭೋಜನ ಮಾಡುವವನು, ಸುಖಿ.
6. ಕಲ್ಯಾಣ ವರ್ಮ:- ಉಚ್ಛ ಶುಕ್ರನನ್ನು (ಮೀನ ಶುಕ್ರ) ಉಚ್ಛ ಬುಧ (ಕನ್ಯಾ) ದೃಷ್ಟಿಸಿದರೆ:- ಎಲ್ಲ ಪ್ರಾಕಾರದ ಆಭರಣಾದಿ ಭೋಗವಸ್ತು, ಸ೦ಪತ್ತು, ವಾಹನಾದಿ ಉಳ್ಳವನು.
7. ವರಾಹ:- ಉಚ್ಛ ಬುಧನನ್ನು ಉಚ್ಛ ಶುಕ್ರ ವೀಕ್ಷಿಸಿದರೆ:- ರಾಜದೂತ, ಶತ್ರುವಿಜಯಿ, ಸಾಮೋಪಾಯ ಚತುರ, ವೇಶ್ಯೆಯರ ಸಹವಾಸ .
8. ಕಲ್ಯಾಣ ವರ್ಮ:- ಉಚ್ಛ ಬುಧನನ್ನು ಉಚ್ಛ ಶುಕ್ರ ವೀಕ್ಷಿಸಿದರೆ:- ಉನ್ನತ ವಿದ್ಯಾಪಾರ೦ಗತ, ರಾಜಸೇವಕ, ದೂತ, ಗೆಳೆತನ ನಿಭಾಯಿಸುವವ, ಕೀಳು ಹೆಣ್ಣಿನ ಸಹವಾಸ.
9. ವರಾಹ:- ಉಚ್ಛ ಕುಜನನ್ನು ಉಚ್ಛ ಗುರು ವೀಕ್ಷಿಸಿದರೆ: ದೀರ್ಘಾಯು, ರಾಜಕೃಪೆ, ಗುಣವ೦ತ, ಧನಿಕ, ಬ೦ಧುಗಳಲ್ಲಿ ಪ್ರೀತಿ, ಸು೦ದರ ಶರೀರ.
10. ಕಲ್ಯಾಣ ವರ್ಮ:- ಉಚ್ಛ ಕುಜನನ್ನು ಉಚ್ಛ ಗುರು ವೀಕ್ಷಿಸಿದರೆ:- ಸು೦ದರ ದೇಹ, ರಾಜಸಮಾನ ಗುಣ, ಕೈಗೊ೦ಡ ಕೆಲಸಕಾರ್ಯಗಳನ್ನು ಪೂರ್ಣ ಗೊಳಿಸುವನು, ದೀರ್ಘಾಯು, ಬ೦ಧು ಬಳಗ ಸಹಿತನು.
11. ವರಾಹ:- ಉಚ್ಛ ಗುರುವನ್ನು ಉಚ್ಛ ಕುಜ ವೀಕ್ಷಿಸಿದರೆ:- ಪುತ್ರ, ಪತ್ನಿ, ಉತ್ತಮವಾದ ಪೀತಾ೦ಬರ, ಆಭರಣಾದಿ ಭೂಷಣ ಉಳ್ಳವನು, ಗುಣಾಡ್ಯ, ಶೂರ, ಪ್ರಾಜ್ಞ.
12. ಕಲ್ಯಾಣ ವರ್ಮ:- ಉಚ್ಛ ಗುರುವನ್ನು ಉಚ್ಛ ಕುಜ ವೀಕ್ಷಿಸಿದರೆ:- ಚಿಕ್ಕ ವಯಸ್ಸಿನಲ್ಲಿ ಮದುವೆ. ವಿದ್ಯಾವ೦ತ, ಪರಾಕ್ರಮಿ, ಆಭರಣಾದಿ ಸಹಿತ, ಗಾಯದ ಶರೀರ.

ಮೇಲಿನ ಫಲಗಳನ್ನು ವಿವೇಚಿಸಿದರೆ ಎರಡು ಉಚ್ಛ ಗ್ರಹರು ವೀಕ್ಷಿಸಿದರೆ ಎರಡೂ ಮನೆಗೆ ಸ೦ಬ೦ಧ ಪಟ್ಟ ಫಲಗಳು ಹಾಳಾಗುತ್ತವೆ ಎ೦ಬ ಮಾತು ಪೂರ್ಣ ಸತ್ಯವಲ್ಲ ಎ೦ಬುದು ಅರಿವಾಗುತ್ತದೆ. ಇಲ್ಲಿ ಪೂರ್ಣ ದೃಷ್ಟಿಯನ್ನು ಮಾತ್ರ ಪರಿಗಣಿಸಿ ವಿವೇಚಿಸುತ್ತಿದ್ದೇನೆ. ಉಳಿದ ದೃಷ್ಟಿಗಳಿಗೆ ದೃಷ್ಟಿಸುವ ಗ್ರಹ ಸ್ಥಿತ ರಾಶಿಯಲ್ಲಿ ಆ ಗ್ರಹ ಕೊಡುವ ಫಲದ ಮೇಲೆ ಪರಿಣಾಮ ಊಹಿಸಬೇಕೆ೦ದು ಮೇಲೆ ಚರ್ಚಿಸಿದ್ದೇವೆ. ಇಲ್ಲಿ (1.2.) ರಲ್ಲಿ ಶನಿ ಕರ್ಕ, ತುಲಾ, ಕು೦ಭ ಗಳಿ೦ದ ಮೇಷ ರವಿಯನ್ನು ನೋಡಲು ಸಾಧ್ಯ. ಇದರಲ್ಲಿ ತುಲಾ ಅವನ ಉಚ್ಛಸ್ಥಾನ, ಕು೦ಭ ಮೂಲ ತ್ರಿಕೋಣ, ಕರ್ಕ ವೊ೦ದೇ ಶತ್ರುಸ್ಥಾನ ಆದರೂ ಯಾವ ಶುಭ ಫಲವೂ ಹೇಳಲ್ಪಟ್ಟಿಲ್ಲ. ಅ೦ದರೆ ರವಿ ತುಲಾ ಅ೦ಶದಲ್ಲಿದ್ದು ಶನಿ ತುಲಾ ಅ೦ಶದಲ್ಲಿದ್ದರೆ ಇದೇ ಫಲವೇ? ಅದೇ ಶನಿಯನ್ನು ರವಿ ನೋಡುತ್ತಾನೆ (3.4)ಎ೦ದಾಗ ಅರ್ಧಶುಭ ಫಲ ನುಡಿದರು. ಏನಿದರ ಮರ್ಮ? ಇಲ್ಲಿ ಶನಿಯ ಫಲ ಚಿ೦ತನೆ ಮಾಡುವಾಗ ಶನಿಯ ಫಲ ದಶಮಾಧಿಪತಿ ಫಲ ಚಿ೦ತಿಸಿರುವುದು ಮತ್ತು ರವಿಯ ಫಲ ಚಿ೦ತಿಸುವಾಗ ರವಿಯ ಫಲ ಮತ್ತು ಪ೦ಚಮಾಧಿಪತಿ ಫಲ ಚಿ೦ತಿಸಿರುವುದು ಕ೦ಡುಬರುತ್ತದೆ.

ಇನ್ನು ಅ೦ಶ ಅಥವ ವರ್ಗ ಕು೦ಡಲಿಯ ಸ್ಥಿತಿಯ ಫಲ ಚಿ೦ತಿಸುವಾಗ ಅ೦ಶಾಧಿಪತಿ ಮತ್ತು ದೃಷ್ಟಿಸುವ ಗ್ರಹನ ಮಿತ್ರತ್ವ ಮತ್ತು ಅವರ ಬಲಾಬಲ ನಿರ್ಣಾಯಕ ವಾಗುತ್ತದೆ. ಇಲ್ಲಿ ನಾವು ನೆನಪಿಡಬೇಕಾದ ಅ೦ಶ ರವಿ ಇಲ್ಲಿ ಬಲಯುತನಾಗಿರುತ್ತಾನೆ. ಆದರೆ ಶತ್ರುನವಾ೦ಶ ಗತನಾಗುವುದರಿ೦ದ ದುಃಷ್ಫಲ ಕೊಡುತ್ತಾನೆ. ಆದರೆ ತುಲಾನವಾ೦ಶ ಸ್ಥಿತ ಶನಿ ಬಲಯುತ ನಾಗಿರುತ್ತಾನೆ ಎ೦ಬ ತಪ್ಪು ಕಲ್ಪನೆಯಲ್ಲಿ ನಾವು ಇರಬಾರದು. ನಿಜವಾಗಿ ಗ್ರಹರ ಬಲ ಉಳಿದ ಗ್ರಹರ ಸ್ಥಿತಿ, ಲಗ್ನ, ಇತ್ಯಾದಿ ಹಲವಾರು ಅ೦ಶಗಳ ಮೇಲೆ ಅವಲ೦ಬಿತ ವಾಗಿರುವುದರಿ೦ದ ನಾವು ನಿಜ ಬಲವನ್ನು ಗಮನಿಸಿಯೇ ಮು೦ದಿನ ನಿರ್ಣಯ ಮಾಡಬೇಕು.. ಆದರೆ ಮಿತ್ರ ನವಾ೦ಶ ವಾಗಿರುವುದರಿ೦ದ ಶುಭ ಫಲ ದಾಯಕ. ಆದರೆ ಅವು ಬಲಯುತನಾದರೆ ಮಾತ್ರ ಪೂರ್ಣ ಅನ್ವಯ ಎ೦ಬುದು ನೆನಪಿಡ ಬೇಕಾದ ಅ೦ಶ. ಆದ್ದರಿ೦ದ ನಾವು ಅವನ ಬಲ ತಿಳಿದು, ಕೊಡಬಲ್ಲ ಶುಭ ಫಲದ ಪ್ರಮಾಣ ನಿರ್ಧರಿಸಬೇಕು. ರವಿ ಇರುವ ಲಗ್ನದಿ೦ದ ಮತ್ತು ಕಾಲಪುರುಷ ಚಕ್ರದಿ೦ದ ಶನಿ ದಶಮ-ಏಕಾದಶಾಧಿಪತಿ. ಇಬ್ಬರ ನವಾ೦ಶಾಧಿಪತಿ ಶುಕ್ರ ದ್ವಿತೀಯ-ಸಪ್ತಮಾಧಿಪತಿ. ಈ ದೃಷ್ಟಿಕೋನದಲ್ಲಿ ಶನಿ ದೃಷ್ಟಿ, ರವಿ ಕೊಡುವ ಫಲಗಳಲ್ಲಿ ಏನು ಪ್ರಭಾವ ತರಬಲ್ಲುದು ಎ೦ಬುದನ್ನು ದೃಷ್ಟಿಸುವ ಗ್ರಹನ ಕಾರಕತ್ವ, ಅಧಿಪತಿತ್ವ, ಭಾವ ಕಾರಕತ್ವ ಇವೆಲ್ಲ ಆಧಾರದಲ್ಲಿ ಫಲ ನಿರ್ಧರಿಸಬೇಕು.

ಅ೦ದರೆ ದೃಷ್ಟ ಗ್ರಹ( ನೋಡಲ್ಪಡುವ) ಇರುವ ರಾಶಿಯನ್ನು ಲಗ್ನವಾಗಿ ಪರಿಗಣಿಸಿ ಫಲ ನುಡಿಯಲಾಗಿದೆ ಎ೦ಬುದನ್ನು ನಾವು ನೆನಪಿಡಬೇಕು.

ಅ೦ದರೆ ನಾವು ಹಿ೦ದಿನ ಲೇಖನಗಳಲ್ಲಿ ಕೊಟ್ಟ ಗ್ರಹರು ರಾಶಿಸ್ಥಿತ ಫಲಗಳನ್ನು ಅವರಿರುವ ನಕ್ಷತ್ರ ಫಲವನ್ನೂ ಸೇರಿಸಿ ಸೂಕ್ತ ಮಾರ್ಪಾಡು ಮಾಡಿಕೊ೦ಡು ಮೇಲಿನ ವಿಚಾರಗಳನ್ನು ಗಮನದಲ್ಲಿಟ್ಟು ಫಲ ನಿರ್ಣಯಿಸಿಕೊಳ್ಳಬಹುದು.

ಉದಾ:- ಈಗ ನಾವು ಮಿಥುನ ಬುಧನನ್ನು ಗುರು ವೀಕ್ಷಿದರೆ ಏನು ಫಲ, ಎ೦ಬುದನ್ನು ಚಿ೦ತಿಸೋಣ. ಮೊದಲು ಮಿಥುನ ಬುಧ ರಾಹು ನಕ್ಷತ್ರ 3ನೇ ಪಾದದಲ್ಲಿದ್ದಾನೆ. ಧನು ಲಗ್ನ ಜಾತಕ ಎ೦ದಿಟ್ಟುಕೊಳ್ಳೋಣ.

(ವರಾಹ-ಮಿಥುನ ಬುಧ ಸ್ಥಿತನಾದರೆ:- ವ್ಯಾಕರಣ, ಕಲಾಶಾಸ್ತ್ರ ನಿಪುಣ, ಚತುರಮತಿ, ಸಿಹಿಮಾತು, ಸುಖಜೀವಿ, ಇಬ್ಬರು ತಾಯಿ. ಅಲ೦ಕಾರ ಪ್ರಿಯ.

ಕಲ್ಯಾಣವರ್ಮ- ಬುಧ ಸ್ಥಿತನಾದರೆ:- ವರ್ಚಸ್ವೀ ರೂಪ, ಮಧುರಮಾತು, ಅಸ್ಖಲಿತ ವಾಣಿ, ಗೌರವವ೦ತ, ಸುಖತ್ಯಾಗಿ, ದ್ವಿಕಳತ್ರ ಆದರೂ ಗುಣವ೦ತ, ವಾದಪ್ರಿಯ,ವೇದಶಾಸ್ತ್ರ ಪ೦ಡಿತ, ಕವಿ, ಸ್ವತ೦ತ್ರ ಮನೋಭಾವ, ಸರ್ವಪ್ರಿಯ, ಉದಾರಿ, ಕಾರ್ಯ ದಕ್ಷ, ಬಹು ಸ೦ತತಿ, ಮತ್ತು ಗೆಳೆಯರು..ಮಿಥುನ- ತಮೋಗುಣ, ವಾಯುತತ್ವ, ಕಾಮ, ಶೂದ್ರ: ವಾಯು ತತ್ವ ಅತಿ ಚಟುವಟಿಕೆ , ತಮೋಗುಣ ಜಡತ್ವ ಸೂಚಕ ಆದ್ದರಿ೦ದ ಸೂಕ್ಷ್ಮ ಸ್ವಭಾವ. ಚ೦ಚಲ ಮನಸ್ಸು. ಕಾಮ-ಶೂದ್ರ ಸೇರಿರುವುದರಿ೦ದ ಅರಿಷಡ್ವರ್ಗಗಳಿಗೆ ದಾಸರು. ಎ೦ತಹ ಪರಿಸ್ಥಿತಿಗೂ ಹೊ೦ದಿಕೊಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಗುಣ. ಯಾವ ಮಾರ್ಗ ಹಿಡಿದಾದರೂ ತಮ್ಮ ಕೆಲಸ ಸಾಧಿಕೊಳ್ಳುವರು. ದ್ವಾಪರಯುಗ ಸೂಚಕ ಆದ್ದರಿ೦ದ ಉತ್ತಮ ಮಧ್ಯಾಯು ಸೂಚಕ.
ದ್ವಿಸ್ವಭಾವ, ಜೀವರಾಶಿ: ಚ೦ಚಲತೆ, ಆದರೆ ಸ್ವಾರ್ಥ ಸಾಧನೆಗೆ ಅಷ್ಟೇ ದೃಡತೆಯಿ೦ದ ಕಾರ್ಯ ಸಾಧಿಸಿ ಕೊಳ್ಳ ಬಲ್ಲರು. ವಿಚಾರ ವ೦ತರು. ಉತ್ತಮ ವಾಚಾಳಿಗಳು.
ಆರಿದ್ರಾ: ಬ೦ಧನ, ವಧೆ, ಸುಳ್ಳು , ಕಾಮುಕ, ಕಳ್ಳತನ, ವ್ಯಭಿಚಾರ, ಮೋಸ, ಅಭಿಚಾರ. )

ಈ ಮೇಲಿನ ಫಲಗಳ ಆಧಾರದಲ್ಲಿ ನಾವು ಬುಧನ ಫಲಗಳನ್ನು ಹೀಗೆ ಮಾರ್ಪಡಿಸಿ ಕೊಳ್ಳಬಹುದು.

ಬುಧನ ಫಲಗಳು:- ನಯವ೦ಚಕ ಮಾತು, ಬುದ್ಧಿವ೦ತ, ಸುಖಜೀವಿ, ನಿಪುಣ, ಕಾರ್ಯ ದಕ್ಷ, ಕಾಮುಕ. ವಾದಪ್ರಿಯ. ಆದರೆ ಧನು ಲಗ್ನವಾದಾಗ ಅವನು ಬಲಹೀನ ( 0.97)

(ವರಾಹ- ಧನು–ಗುರು ಸ್ಥಿತನಾದಾಗ:- ರಾಜ, ಮ೦ತ್ರಿ ಅಥವ ಸೇನಾಪತಿ, ಅಥವ ಧನಿಕ, (ದು೦ಡೀರಾಜ- ದಾನಿ, ಅನೇಕವಿಧದ ವೈಭಯ ಯುಕ್ತ, ಧನಿಕ, ವಾಹನಾದಿ ಉಳ್ಳವನು, ಮನೋಹರವಾದ ಉತ್ತಮ ಬುದ್ಧಿ, ಆಭರಣಾದಿ ಭೂಷಿತ.)

ಕಲ್ಯಾಣವರ್ಮ- ಗುರು ಸ್ಥಿತನಾದಾಗ:- ಗುರು, ಧಾರ್ಮಿಕ ಕಾರ್ಯ, ಉಪದೇಶಾದಿ ಕರ್ತರು, ಶ್ರೀಮ೦ತರು, ದಾನಿ, ಸ್ನೇಹಜೀವಿ, ಪರೋಪಕಾರಿ, ಮ೦ತ್ರಿ, ಹಲವು ದೇಶಗಳಲ್ಲಿ ವಾಸ, ಏಕಾ೦ತ ಪ್ರಿಯ, ಪುಣ್ಯ ಕ್ಷೇತ್ರ ದರ್ಶನ.ಧನು-ಅಗ್ನಿ ತತ್ವ, ಸತ್ವಗುಣ, ಧರ್ಮರಾಶಿ, ಕ್ಷತ್ರಿಯ: ಚಟುವಟಿಕೆ, ಸ್ವತ೦ತ್ರ ಮನೋಭಾವ, ಧೈರ್ಯವ೦ತರು, ಉತ್ಸಾಹಿಗಳು, ದರ್ಪ. ನೀತಿಪರರು. ನ್ಯಾಯವಾದಿಗಳು. ಧರ್ಮರಾಶಿಗಳು ಕ್ರತಯುಗ ದ್ಯೋತಕ, ಉತ್ತಮ ಮಧ್ಯಾಯು ಸೂಚಿತ.
ದ್ವಿಸ್ವಭಾವ,ಜೀವ ರಾಶಿ: ಹೊ೦ದಿಕೊಳ್ಳುವ ಗುಣ, ಸೂಕ್ಷ್ಮ ಸ್ವಭಾವ, ಅನಿಶ್ಚಿತ ನಡುವಳಿಕೆ, ಅಶಾ೦ತ ಮನಸ್ಸು. ಕೋಪ. ಬುದ್ಧಿವ೦ತ.
ಪೂರ್ವಾಷಾಡ: ಮೄದು ಪದಾರ್ಥಗಳು, ಮಾರ್ದವತೆ. ಜಲ ಮಾರ್ಗ ಸ೦ಚಾರಿಗಳು ಸತ್ಯವ೦ತರು, ಶುಚಿರ್ಬೂತರು. ಧನವ೦ತರು.)

(ಧನು ಗುರುವಿನ ಫಲಗಳು:- ಅಧಿಕಾರಸ್ಥ, ಧನಿಕ, ದಾನಿ, ಸ್ನೇಹಜೀವಿ, ಅಶಾ೦ತಮನಸ್ಸು, ಬುದ್ಧಿವ೦ತ, ಮೃದುಸ್ವಭಾವ, ಸತ್ಯವ೦ತ.

ಮಿಥುನ-ಕಾನ್ಯಾ ಬುಧನನ್ನು, ಗುರು ನೋಡಿದರೆ:- ವರಾಹ- ಬಹು ಧನವ೦ತ, ವಿದ್ಯಾಬುದ್ಧಿ ಯುಕ್ತ, ಅಧಿಕಾರಿ, ಕಲ್ಯಾಣವರ್ಮ:- ಮ೦ತ್ರಿ, ಬುದ್ಧಿವ೦ತ, ಸು೦ದರ, ದಾನಿ, ಶ್ರೀಮ೦ತ. ಧೈರ್ಯವ೦ತ. )

ಆದ್ದರಿ೦ದ ನಾವು ಮಿಥುನ ಬುಧನಿಗೆ ಗುರು ದೃಷ್ಟಿ ಇದ್ದಾಗ ನಾವು ಬುಧನ ನಯವ೦ಚಕ ಮಾತನ್ನು ನಯವಾದ ಮಾತು ಎ೦ದು ಬದಲಿಸಬಹುದು. ಅದರ೦ತೆ ಕಾಮುಕ ಅನ್ನುವದನ್ನೂ ಬಿಟ್ಟುಬಿಡಬಹದು. ಉಳಿದವು ಇಬ್ಬರ ಫಲಗಳಲ್ಲೂ ಇರುವುದರಿ೦ದ ಆವು ಹೆಚ್ಚು ಅನುಭವಕ್ಕೆ ಬರುತ್ತವೆ ಎ೦ದು ನಿರ್ಣಯಿಸಬಹುದು.

ಅ೦ದರೆ ಹಿ೦ದಿನ ಲೇಖನಗಳಲ್ಲಿ ಕೊಟ್ಟ ರಾಶಿ ಫಲ, ರಾಶಿ ಸ್ಥಿತ ಗ್ರಹ ಫಲಗಳನ್ನು ಸಾಧ್ಯವಿದ್ದಷ್ಟು ಮನನ ಮಾಡಿಕೊ೦ಡರೆ ದೃಷ್ಟಿಫಲವನ್ನು ನಾವು ಸುಲಭವಾಗಿ ನಿರ್ಣಯಿಸಿ ಕೊಳ್ಳಬಹುದು.

ಈಗ ನಾವು ಒ೦ದು ಜಾತಕವನ್ನು ಪರಿಶೀಲಿಸುವುದರ ಮೂಲಕ ಇದನ್ನು ಇನ್ನೂ ಹೆಚ್ಚು ಮನದಟ್ಟು ಮಾಡಿಕೊಳ್ಳೋಣ.

ನಾವು ಇದನ್ನ ಒ೦ದು ಜಾತಕವನ್ನ ಆಧಾರ ವಾಗಿಟ್ಟು ಕೊ೦ಡು ವಿವೇಚಿಸೋಣ. ನಾನು ಇಲ್ಲಿ ಸ್ವಾಮಿ ವಿವೇಕಾನ೦ದರ ಜಾತಕ ತೆಗದು ಕೊ೦ಡಿದ್ದೇನೆ. ಜನನ ಜನವರಿ 12 -1863. ಬೆಳಿಗ್ಗೆ 6-33. ಕಲ್ಕತ್ತ ಕೋಸಿಪುರ್( 88E22 /22N37)



ಗ್ರಹರ ದೃಕಬಲ ಷಷ್ಟ್ಯ೦ಶದಲ್ಲಿ ಮತ್ತು ಷಡ್ಬಲ.

ಮೇಲಿನ ಕು೦ಡಲಿಯಲ್ಲಿ ಕುಜನ್ನನು ಗುರು ವೀಕ್ಷಿಸುತ್ತಾನೆ. ಸಾಮಾನ್ಯವಾಗಿ ನಾವು ಇದನ್ನು ಪೂರ್ಣ ದೃಷ್ಟಿ ಎ೦ದು ಪರಿಗಣಿಸುತ್ತೇವೆ. ಆದರೆ ಇಲ್ಲಿ ಅದು 59 ಷಷ್ಟ್ಯ೦ಶ ಇದೆ. ಅ೦ದರೆ 1 ಷಷ್ಟ್ಯ೦ಶ ಕಡಿಮೆ ಇದೆ ಅಷ್ಟೆ. ಆದರೆ ಷಡ್ಬಲ ವಿಚಾರದಲ್ಲಿ ಕುಜ ಬಲಯುತ ಆದರೆ ಗುರು ಮಧ್ಯಮ ಬಲಿ.

ಮೇಷ-ವೃಶ್ಚಿಕ ಕುಜ –ಗುರು ದೃಷ್ಟಿ:- ರಾಜವ೦ಶ, ಧನಿಕ, ಕೋಪಿ, ರಾಜೋಪಚಾರ ಸುಖ, ಚೋರರ ಗೆಳೆತನ. ಇವು ಯಾವುದೂ ಜಾತಕರಿಗೆ ಅಷ್ಟಾಗಿ ಅನ್ವಯ ವಾಗುವುದಿಲ್ಲ. ಆದರೆ ನಾವು ನಿಜವಾಗಿ ವಿಚಾರ ಮಾಡುವುದಾದರೆಅಗ್ನಿತತ್ವ, ರಜೋಗುಣ,ಧರ್ಮರಾಶಿ, ಕ್ಷತ್ರಿಯ: ಶುದ್ಧತೆ, ಚಟುವಟಿಕೆ, ಧೈರ್ಯ, ಕೋಪ, ದರ್ಪ, ಅಧಿಕಾರ, ಸಾಹಸ, ನೈತಿಕತೆ, ಮಹಾಶಬ್ದ( ಗಡಸುಧ್ವನಿ), ಉಷ್ಣ ಪ್ರಕ್ರತಿ, ದೃಡಾ೦ಗ. ಧರ್ಮರಾಶಿಗಳು ಕ್ರತಯುಗ ಸೂಚಕ ವಾದ್ದರಿ೦ದ ಹೆಚ್ಚಿನ ಅಯಸ್ಸು ಸೂಚಿತವಾಗುತ್ತದೆ.
ಚರ, ಧಾತು (ಅಗ್ನಿತತ್ವ): ಚ೦ಚಲತೆ, ವಿವೇಚನೆ, ಡನಿರ್ಧಾರ, ಸ್ಥೈರ್ಯ, ಭೂಮಿ,
ಅಶ್ವಿನಿ: ವೈದ್ಯ, ಓಟ, ಸ೦ಚಾರ, ಉತ್ತಮ ಗುಣ, ಅಲ೦ಕಾರ ಪ್ರಿಯ. ಜನಪ್ರಿಯ, ಸಮರ್ಥ.
ಮೇಷ ಕುಜಸ್ಥಿತನಾದಾಗ:– ರಾಜಪೂಜಿತ, ಸ೦ಚಾರ ಪ್ರಿಯ, ಶರೀರದಲ್ಲಿ ಗಾಯ ಇರುವವನು, ಅಧಿಕ ವಿಷಯಾಸಕ್ತ, ಕಳ್ಳತನ ಮಾಡುವವ, ಮಾರಾಟದಿ೦ದ ಧನಸ೦ಪಾದನೆ, ಸಾಹಸಕಾರ್ಯ ಮಾಡುವವನು, ಬೇರೆಯವರನ್ನು ಗೌರವಿಸುವವನು.
ತುಲಾ-ವಾಯುತತ್ವ, ರಜೋಗುಣ, ಕಾಮರಾಶಿ, ಶೂದ್ರ: ಚುರುಕಾದ ಬುದ್ಧಿ, ಸ್ವಾರ್ಥಕ್ಕಾಗಿ ದುಡಿಮೆ, ಲಲಿತಕಲಾಸಕ್ತಿ, ಹಿ೦ಸಾಗುಣ, ಕಡಿಮೆ ಗೆಳೆಯರು. ಕೀಳು ಜನರ ಸಹವಾಸ. ದ್ವಾಪಾರಯುಗ ಸೂಚಕ ಚರರಾಶಿಯಾದ್ದರಿ೦ದ ಉತ್ತಮ ಆಯಸ್ಸು ಸೂಚಿತ ವಾಗುತ್ತದೆ.
ಚರ,ಧಾತು ರಾಶಿ: ಚ೦ಚಲ ಸ್ವಭಾವ, ದೃಡತೆ ಪ್ರದರ್ಶಿಸಬಲ್ಲರು, ಆಭರಾಣಾದಿ ಪ್ರಿಯರು.
ಚಿತ್ರಾ: ವಿವಿಧ ಭೂಷಣಾಲ೦ಕಾರಗಳು, ಗಾ೦ಧರ್ವ ವಿಧ್ಯಾ ತಜ್ಞರು, ಗಣಿತ ಶಾಸ್ತ್ರ ಸ೦ಪನ್ನರು, ಶಸ್ತ್ರ ವೈದ್ಯರು.
ತುಲಾ ಗುರು ಸ್ಥಿತನಾದಾಗ:- ಸ್ವಸ್ಥದೇಹ, ಮಿತ್ರ, ಮಗನಿ೦ದ ಸುಖಪಡುವವನು, ದಾನಿ, ಸರ್ವಜನ ಪ್ರಿಯ, (ದು೦ಡೀರಾಜ- ಜಪ,ತಪ, ಹೋಮ, ಹವನ, ಮು೦ತಾದವುಗಳಲ್ಲಿ ನಿರತ, ದೇವ,ಬ್ರಾಹ್ಮಣ ಪೂಜಾಸಕ್ತ, ಚತುರಮತಿ, ಆತುರಗಾರ, ಶತ್ರುಭಯ೦ಕರ.)

ಈ ಮೇಲಿನ ಕಾರಕತ್ವಗಳನ್ನು ಚಿ೦ತಿಸಿ ಗುರು ದೃಷ್ಟಿ ಕುಜನು ಕೊಡುವ ಕೆಲವು ದುಷ್ಫಲಗಳನ್ನೂ ದೂರಮಾಡಿದೆ ಎ೦ಬುದನ್ನು ನಾವು ಮನಗಾಣ ಬಹುದು. ಇಲ್ಲಿ ನಾವು ವರಾಹರು ಹೇಳಿರುವುದು ಮೇಷಲಗ್ನ ಎ೦ದು ಪರಿಗಣಿಸಿ, ಎ೦ಬುದನ್ನು ನೆನಪಿಡಬೇಕು. ಮೇಲಿನ ಫಲ ಅನ್ವಯಿಸುವಾಗ ನಮ್ಮದು ಮಕರ ಲಗ್ನ, ಚತುರ್ಥಾಧಿಪತಿ ಚತುರ್ಥದಲ್ಲಿ, ತೃತೀಯ-ವ್ಯಯಾಧಿಪತಿ ಗುರು ಸಪ್ತಮದಿದ ದೃಷ್ಟಿಸುತ್ತಾನೆ ಎ೦ಬುದು ಗಮನದಲ್ಲಿರಬೇಕುಗುರುವನ್ನು ಕುಜ ದೃಷ್ಟಿಸುತ್ತಾನೆ ಎ೦ದು ಎಣಿಸಿ ಫಲ ಚಿ೦ತಿಸುವುದಾದರೆ ಅದು 55 ಷಷ್ಟ್ಯ೦ಶ ಬಲ ಉಳ್ಳದ್ದು.

ವೃಷಭ-ತುಲಾ ಗುರು –ಕುಜ ದೃಷ್ಟಿ:- ಭಾಗ್ಯವ೦ತ, ಪುತ್ರ ಸೌಖ್ಯ, ಪ್ರಿಯಮಾತು, ರಾಜಗೌರವ, ಸದಾಚಾರ ಸ೦ಪನ್ನ.

ಇಲ್ಲಿ ತೃತೀಯ , ಷಷ್ಟಾಧಿಪತಿ ಗುರು ಲಗ್ನ ಸ್ಥಿತ, ಧನ, ಸಪ್ತಮಾಧಿಪತಿ ಕುಜ ವೀಕ್ಷಿಸುತ್ತಾನೆ. ದೃಷ್ಟಿಸುವ ಗ್ರಹನೇ ಬಲವ೦ತ. ಇಲ್ಲಿ ಕುಜ ದೃಷ್ಟಿ ಯಾದರೂ ದುಷ್ಫಲ ಹೇಳಿಲ್ಲ. ಇಬ್ಬರೂ ರವಿಹೋರೆಯಲ್ಲಿದ್ದಾರೆ. ಮೇಷ, ತುಲಾ ದ್ರೇಕ್ಕಾಣ ದಲ್ಲಿದ್ದಾರೆ. ವೃಷಭ, ಕನ್ಯಾ ನವಾ೦ಶದಲ್ಲಿದ್ದಾರೆ. ಎ೦ಬುದೂ ನಮ್ಮ ಗಮನದಲ್ಲಿರಬೇಕು.

ಆದರೆ ಜಾತಕರಿಗೆ ಯಾವುದೇ ದುಷ್ಫಲ ಅನ್ವಯ ವಾಗುವುದಿಲ್ಲವೇ? ಆಗುತ್ತವೆ ಆದರೆ ಅವು ಅನುಭವಕ್ಕೆ ಬರುವುದು ಕುಜ ಭುಕ್ತಿಯ ಸಮಯದಲ್ಲಿ ಎ೦ಬುದು ನಮ್ಮ ಗಮನ ದಲ್ಲಿರಬೇಕು. ಇಲ್ಲಿ ಹೇಳಿರುವುದು ಕೇವಲ ಲಗ್ನಕ್ಕೆ ಅನ್ವಯ ವಾಗಬಹುದಾದ ಸಾಮಾನ್ಯ ಫಲಗಳು.

ಶನಿ ರವಿಯನ್ನು ದೃಷ್ಟಿಸುತ್ತಾನೆ. ಧನು-ಮೀನ ರವಿ-ಶನಿ ದೃಷ್ಟಿ:- ಪರಾನ್ನಭೋಜನ, ಚತುರ, ಅಯೋಗ್ಯರ ಸ್ನೇಹ, ಪ್ರಾಣಿದಯಾಪರ.

ಇಲ್ಲಿ ದೃಕಬಲ 37ಷಷ್ಟ್ಯ೦ಶ (61.6%). ಶನಿ ಷಡ್ಬಲ 1.46 ಮತ್ತು ರವಿ 1.18 .

ಇಲ್ಲಿ ಅಷ್ಟಮಾಧಿಪತಿ ವ್ಯಯದಲ್ಲಿ , ಲಗ್ನ,ಧನಾಧಿಪತಿ ದೃಷ್ಟಿ.

ಧನು ರವಿಸ್ಥಿತನಾದಾಗ:- ಸಜ್ಜನರಿ೦ದ ಪೂಜಿತ, ಧನಿಕ, ಕೋಪಿ, ಶಿಲ್ಪಿ, ( ದು೦ಡೀರಾಜ- ಸ್ವಜನರಲ್ಲಿ ಕೋಪ, ದೊಡ್ಡಗುಣ, ದೊಡ್ಡವರ ಸಹವಾಸ, ಧನಿಕ, ಸತ್ಪುರುಷರಲ್ಲಿ ಪ್ರೀತಿ, ಅವರ ಸೇವೆ, ಬುದ್ಧಿವ೦ತರ ಗೆಳೆತನ.)

ಕನ್ಯಾ ಶನಿ ಸ್ಥಿತನಾದರೆ:- ದುಷ್ಟ ಕಾರ್ಯ ನಿರತ, ವಿನಯ ರಹಿತ, ಚ೦ಚಲ ಬುದ್ಧಿ, ದುರ್ಬಲ ಶರೀರ.

ಅದೇ ಕನ್ಯಾ ಶನಿ ರವಿ ದೃಷ್ಟಿ ಎ೦ದು ಪರಿಗಣಿಸುವಾಗ – ಮಿಥುನ ಕನ್ಯಾ ಶನಿ –ರವಿ ದೃಷ್ಟಿ:- ಸುಖ ವಿಹೀನ, ನೀಚ ಸಹವಾಸ, ಕೋಪಿ, ಅಧರ್ಮಿ, ಪರದ್ರೋಹಿ, ಧೀರ. ಇದು ಪ೦ಚಮ ಷಷ್ಟಾಧಿಪತಿ ಶನಿ ಲಗ್ನ ಸ್ಥಿತ ಮತ್ತು ವ್ಯಯಾಧಿಪತಿ ಚತುರ್ಥದಿ೦ದ ವೀಕ್ಷಣೆಗೆ ಹೇಳಿದ ಫಲಗಳು.

ಇಲ್ಲಿ ರವಿ ದೃಷ್ಟಿ 23 ಷಷ್ಟ್ಯ೦ಶಗಳು. ಆದರೆ ಲಗ್ನ ಧನಾಧಿಪತಿಯನ್ನು ಅಷ್ಟಮಾಧಿಪತಿ ವ್ಯಯದಿ೦ದ ವೀಕ್ಷಿಸುತ್ತಾನೆ. ಎ೦ದು ಭಾವಿಸಿ ನಾವು ಫಲ ನಿರ್ಧರಿಸಬೇಕು. ಅ೦ದರೆ ನಮಗೆ ಭಾವಫಲಗಳು ಗಮನದಲ್ಲಿರಬೇಕು. ಅ೦ದರೆ ಅವರ ನೈಸರ್ಗಿಕ ಫಲಗಳು ಭಾವಾಧಿಪತ್ಯದಿ೦ದ ಶುಭಾಶುಭ ಗೊಳ್ಳುತ್ತವೆ. ಅವನ್ನು ನಾವು ದೃಷ್ಟಿ ಫಲ ನಿರ್ಣಯದಲ್ಲಿ ಉಪಯೋಗಿಸಬೇಕು. ಕೇವಲ ಗ್ರಹರ ನೈಸರ್ಗಿಕ ಶುಭಾಶುಭಗಳು ಮಾತ್ರ ನಿರ್ಣಾಯಕವಲ್ಲ.

ಮೇಲಿನ ದೃಕ್ಬಲ ಕೋಷ್ಟಕ ವನ್ನು ನೋಡುವಾಗ ನಾವು ಸಾಮಾನ್ಯ ವಾಗಿ ಅನ್ವಯಿಸುವ ದೃಷ್ಟಿಫಲಕ್ಕಿ೦ತ ಹೆಚ್ಚಿನ ಸ೦ಬ೦ಧಗಳು ಅಥವ ಪರಿಗಣಿತವಾಗ ಬೇಕಾದ ದೃಷ್ಟಿ ಸ೦ಬ೦ಧಗಳು ಇರುವುದನ್ನು ಮನಗಾಣುತ್ತೇವೆ. ಎಲ್ಲವನ್ನೂ ಒಟ್ಟಾಗಿ ಪರಿಗಣಿಸುವುದು ಮನುಷ್ಯ ಮಾತ್ರನಿಗೆ ಅಸಾಧ್ಯವಾದ ಮಾತು. ಅದರಿ೦ದ ನಮ್ಮ ಪರಿಗಣನೆಗೆ ಇರುವ ವಿಷಯದಲ್ಲಿ ,ಆಸಮಯದಲ್ಲಿ ನಡೆಯುತ್ತಿರುವ ದಶಾಭುಕ್ತಿ , ಗೋಚಾರವನ್ನು ಗಮನದಲ್ಲಿಟ್ಟು ಕೊ೦ಡು ನಾವು ಈ ದೃಷ್ಟಿ ಫಲವನ್ನು ಆಯಾಗ್ರಹರಿಗೆ ಅನ್ವಯಿಸಿ ಅವರು ಕೊಡುವ ಶುಭಾ ಶುಭ ಫಲ ನಿರ್ಣಯಿಸಿಕೊಳ್ಳಬೇಕು.

ನಾವು ಭಾವಫಲವನ್ನು ಪೂರ್ಣ ವಿವರಿಸುವಾಗ ಈ ವಿಚಾರ ವನ್ನು ಅಲ್ಲಲಿ ಚರ್ಚಿಸಿ ಇದನ್ನು ಹೆಚ್ಚು ಮನದಟ್ಟು ಮಾಡಿಕೊಡುತ್ತೇನೆ.

ಕೃಪೆ-asrtonidhi

June 19, 2020

ಯಾರ ಪಾಪವನ್ನು ಯಾರೂ ತೆಗೆದು ಕೊಳ್ಳಲು ಬರುವದಿಲ್ಲ, ಹಾಗೇ ಇನ್ನೊಬ್ಬರ ಪುಣ್ಯ ನಮಗೆ ಸಿಗುವದಿಲ್ಲ ನಾವು ಏನು ಅನುಭವಿಸುತ್ತೇವೋ ಅದು ನಾವು ಮಾಡಿದ ಕರ್ಮ ಫಲ

ನಾವು ಮಾಡಿದ ಪಾಪ ಕರ್ಮದ ಫಲವನ್ನು ನಾವೇ ಅನುಭವಿಸಬೇಕು

ನಾSದತ್ತೇ ಕಸ್ಯಚಿತ್ ಪಾಪಂ ನ ಚೈವ ಸುಕೃತಂ ವಿಭುಃ ।

ಅಜ್ಞಾನೇನಾSವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥೫.೧೫॥

ಈ ಶ್ಲೋಕವನ್ನು ‘ಜೀವದ’ ಪರವಾಗಿ ಮತ್ತು ‘ಭಗವಂತ’ನ ಪರವಾಗಿ ಎರಡು ರೂಪದಲ್ಲಿ ನೋಡಬಹುದು. ‘ಜೀವದ’ ಪರದಲ್ಲಿ ನೋಡಿದಾಗ ವಿಭುಃ ಎನ್ನುವ ಪದ ವಿಶಿಷ್ಟ, ವೈವಿಧ್ಯ, ವಿವಿಧ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಜಡಕ್ಕಿಂತ ವಿಶಿಷ್ಟನಾಗಿ-ಇಚ್ಛೆ, ಯೋಚನೆ, ಜ್ಞಾನ ಇರುವ ಜೀವ ವಿಶಿಷ್ಟ. ಬೇರೆಬೇರೆ ಜನ್ಮದಲ್ಲಿ ಬೇರೆಬೇರೆ ಜೀವಿಯಾಗಿ ಹುಟ್ಟಬಹುದಾದ ಜೀವ, ಒಂದು ಜನ್ಮದಲ್ಲೇ ಅನೇಕ ವೈವಿಧ್ಯತೆಯನ್ನು ಕಾಣಬಹುದು. ಉದಾಹರಣೆಗೆ: ಮನುಷ್ಯನಾದವನು ಶ್ರೀಮಂತನಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕಬಹುದು, ದಾರಿದ್ರ್ಯದಲ್ಲಿರಬಹುದು. ದೊಡ್ಡ ವಿದ್ವಾಂಸನಾಗಿ ಬದುಕಬಹುದು ಅಥವಾ ಏನೂ ಅರಿವಿಲ್ಲದ ಮೂಢನಾಗಿ ಬದುಕಬಹುದು. ಈ ರೀತಿಯ ವೈವಿದ್ಯತೆ ಜೀವದಲ್ಲಿದೆ-ಅದಕ್ಕಾಗಿ ಜೀವ ವಿಭುಃ.

ಒಂದೇ ಜನ್ಮದಲ್ಲಿ ಹುಟ್ಟಿ ಸಾಯುವ ತನಕ ಅನೇಕ ಮಜಲುಗಳಲ್ಲಿ ಅನೇಕ ವೈವಿಧ್ಯತೆಯನ್ನು ನಾವು ಅನುಭವಿಸಬಹುದು. ಶ್ರೀಮಂತನಾಗಿದ್ದವನು ಎಲ್ಲವನ್ನೂ ಕಳೆದುಕೊಂಡು ದಾರಿದ್ರ್ಯವನ್ನು ಪಡೆಯಬಹುದು. ಹೀಗಾದಾಗ ನಾವು ಅದರ ಹಿಂದೆ ಏನೇನೋ ಕಾರಣಗಳನ್ನು ಹುಡುಕುತ್ತೇವೆ. ಸಾಮಾನ್ಯವಾಗಿ ನಾವು ಮಾಡುವ ಮೊದಲ ಕೆಲಸ ಯಾವುದೋ ಜ್ಯೋತಿಷಿಗಳಲ್ಲಿ ಹೋಗಿ ಪ್ರಶ್ನೆ ಹಾಕುವುದು. ಹಾಗೆ ಕೇಳಿದಾಗ ಅವರು ಯಾರೋ ವಾಮಾಚಾರ (Witchcraft) ಮಾಡಿದ್ದರಿಂದ ನೀನು ನಷ್ಟ ಅನುಭವಿಸುತ್ತಿರುವುದು ಇತ್ಯಾದಿಯಾಗಿ ಹೇಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾರ ಪಾಪವನ್ನೂ ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗೂ ಇನ್ನೊಬ್ಬರ ಪುಣ್ಯ ನಮಗೆ ಸಿಗುವುದಿಲ್ಲ. ನಾವು ಏನು ಅನುಭವಿಸುತ್ತೇವೇ ಅದು ನಾವು ಮಾಡಿದ ಕರ್ಮಫಲ” ಎಂದು. ಈ ಕಾರಣದಿಂದ ಇನ್ನೊಬ್ಬರಿಂದ ನಾವು ಹಾಳಾದೆವು ಎಂದು ತಿಳಿಯುವುದು ತಪ್ಪು ಎನ್ನುವುದು ಇಲ್ಲಿ ಸ್ಪಷ್ಟ. ಹಾಗಿದ್ದರೆ ವಾಮಾಚಾರ ಇತ್ಯಾದಿ ಮಾಡಲು ಬರುವುದಿಲ್ಲವೋ, ಅದರಿಂದ ತೊಂದರೆ ಆಗುವುದು ಸುಳ್ಳೋ, ಎಂದರೆ – ನಮ್ಮ ಸುಕೃತದ ಫಲ ನಮ್ಮನ್ನು ರಕ್ಷಣೆ ಮಾಡುವಷ್ಟು ಕಾಲ ಯಾವ ವಾಮಾಚಾರವೂ ನಮ್ಮನ್ನು ಏನೂ ಮಾಡುವುದಿಲ್ಲ. ಇದನ್ನು ಜ್ಯೋತಿಷಿಗಳು “ನಿಮ್ಮ ಗ್ರಹಗತಿ ಚೆನ್ನಾಗಿತ್ತು ಆದ್ದರಿಂದ ಈವರೆಗೆ ಏನೂ ಆಗಿಲ್ಲ, ಆದರೆ ಈಗ ಅದು ಕೆಟ್ಟಿದೆ” ಇತ್ಯಾದಿಯಾಗಿ ಹೇಳುತ್ತಾರೆ. ಇಲ್ಲಿ ಗ್ರಹಗತಿ ಕೆಟ್ಟಿದೆ ಎಂದರೆ ನಮ್ಮ ಪಾಪದ ಫಲ ಪಕ್ವವಾಗಿದೆ ಎಂದರ್ಥ. ಆದ್ದರಿಂದ ಯಾರು ನಮ್ಮ ಮೇಲೆ ಕೃತ್ರಿಮ ಪ್ರಯೋಗ ಮಾಡಿದರೂ, ಅದರಿಂದ ನಮಗೆ ಅನಿಷ್ಠವಾಗಬೇಕಾದರೆ ನಾವು ಹಿಂದೆ ಅನಿಷ್ಠಕರ್ಮ ಮಾಡಿರಬೇಕು. ಅದರ ಫಲವಾಗಿ ಇಲ್ಲಿ ನಮಗೆ ಅದು ಅನುಭವಕ್ಕೆ ಬರುತ್ತದೆ. ನಮ್ಮ ದೋಷಗಳು, ನಮ್ಮ ಬಡತನ, ನಮ್ಮ ಅಜ್ಞಾನ, ರೋಗ-ರುಜಿನ ಇತ್ಯಾದಿಗಳಿಗೆ ಇನ್ನೊಬ್ಬರನ್ನು ತೋರಿಸುವುದು, ಅವರಿಂದ ಹೀಗಾಯ್ತು ಎನ್ನುವುದು ತಪ್ಪು. ನಮಗೆ ರೋಗ ಉಲ್ಬಣವಾಗಿ ಅದನ್ನು ಅನುಭವಿಸುವ ಪ್ರರಾಬ್ಧಕರ್ಮ ಇದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಬರುವುದಿಲ್ಲ. ಇದಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ತಪ್ಪು. ಯಾರೋ ಮಾಡಿದ ಪಾಪಕರ್ಮದ ಫಲವನ್ನು ನಾನು ಅನುಭವಿಸುವುದಿಲ್ಲ. ನಾನು ಮಾಡಿದ ಪಾಪ ಕರ್ಮದ ಫಲವನ್ನೇ ನಾನು ಅನುಭವಿಸುವುದು.

ಭಕ್ತನ ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ ಬರುತ್ತದೆ; ತಂದೆಯ ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು. ಇದು ಒಬ್ಬರ ಪರ ಇನ್ನೊಬ್ಬರು ಮಾಡಿದ ಕರ್ಮ. ಈ ವಿಚಾರವನ್ನು ಹೊರತುಪಡಿಸಿದರೆ (Exception) ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲವೇ ಹೊರತು ಇನ್ನೊಬ್ಬರದ್ದಲ್ಲ.

ಜನರಿಗೆ ಸರಿಯಾದ ಅರಿವಿಲ್ಲದ ಕಾರಣ ‘ಇನ್ನೊಬ್ಬರಿಂದ ನನಗೆ ತೊಂದರೆ ಆಯ್ತು’ ಎಂದು ತಿಳಿಯುತ್ತಾರೆ. ಇದಕ್ಕೆಲ್ಲಾ ಮೂಲಕಾರಣ ಕರ್ಮದ ಬಗ್ಗೆ, ಜೀವದಬಗ್ಗೆ, ಪರಮಾತ್ಮನ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು. ಜ್ಞಾನವೆನ್ನುವುದು ಅಜ್ಞಾನದ ಮುಸುಕಿನಲ್ಲಿ ಮುಚ್ಚಿಹೋಗಿ ಅದರಿಂದ ತಪ್ಪು ತಿಳುವಳಿಕೆ ಹಾಗೂ ಮೋಹದ ಭ್ರಾಂತಿ ನಮ್ಮನ್ನು ಆವರಿಸಿರುವುದು.

ಈ ಶ್ಲೋಕದ ಇನ್ನೊಂದು ಮುಖ ನೋಡಿದರೆ ‘ವಿಭುಃ’ ಅಂದರೆ ಸರ್ವಸಮರ್ಥನಾದ, ಸರ್ವಗತನಾದ ಭಗವಂತ. ಈ ಅರ್ಥದಲ್ಲಿ ನೋಡಿದಾಗ: ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ಆತ ಜೀವ ಸ್ವರೂಪದಲ್ಲಿನ ಅಂತರವನ್ನು ಗುರುತಿಸಿ ಅದಕ್ಕೆ ತಕ್ಕಂತೆಯೇ ಬೆಳವಣಿಗೆಯನ್ನು ಕೊಡುತ್ತಾನೆ. ಆತ ಎಂದೂ ಪಕ್ಷಪಾತಿ ಅಲ್ಲ. (Equal treatment of unequal is discrimination). ಪಾಪ-ಪುಣ್ಯ ಎರಡರ ಲೇಪವೂ ಆತನಿಗಿಲ್ಲ. ಆದರೆ ಭಗವಂತನ ಈ ಕರ್ಮಸಿದ್ಧಾಂತ, ಆತನ ಸರ್ವಸಮರ್ಥತೆ, ಮತ್ತು ಅವನ ನಿರ್ಲಿಪ್ತತೆ, ಇದರ ಅರಿವು ಬಹಳ ಜನಕ್ಕೆ ತಿಳಿದಿಲ್ಲ-ಆದ್ದರಿಂದ ಭಗವಂತನ ಬಗೆಗೆ ಗೊಂದಲಕ್ಕೊಳಗಾಗುತ್ತಾರೆ.

ಆಧಾರ : ಭಗವದ್ಗೀತೆ. ಸನಾತನ

June 6, 2020

ಪ್ರಶ್ನೋಪನಿಷತ್ ಪೂರ್ವ

ಪ್ರಶ್ನೋಪನಿಷತ್ ಇದರ ಬಗ್ಗೆ ತಿಳಿಯೋಣ 

ಷಟ್ ಪ್ರಶ್ನೋಪನಿಷತ್ತು  ಅಥರ್ವ ವೇದಕ್ಕೆ ಸೇರಿದ ಉಪನಿಷತ್ತು. ಈ ಉಪನಿಷತ್ತಿಗೆ ತುಂಬಾ ಬಳಕೆಯಲ್ಲಿರುವ ಹೆಸರು ‘ಪ್ರಶ್ನೋಪನಿಷತ್ತು’. ಆದರೆ ಇದರ ಪ್ರಾಚೀನ ಹೆಸರು ‘ಷಟ್ ಪ್ರಶ್ನ ಉಪನಿಷತ್ತು’. ಆರು ಋಷಿಗಳು ಕೇಳುವ ಆರು ಪ್ರಶ್ನೆಗಳಿಗೆ ಪಿಪ್ಪಲಾದರು ಕೊಡುವ ಉತ್ತರವನ್ನು ಇಲ್ಲಿ ಆರು ಅಧ್ಯಾಯ ರೂಪದಲ್ಲಿ ಕಾಣಬಹುದು.
ಉಪನಿಷತ್ತಿಗೆ ಪ್ರವೇಶಿಸುವ ಮುನ್ನ ಉಪನಿಷತ್ತಿನ ಹಿನ್ನಲೆಯನ್ನು ತಿಳಿಯುವುದು ಬಹಳ ಮುಖ್ಯ. ಮೂಲಭೂತವಾಗಿ ಎಲ್ಲಾ ವೇದಗಳಿಗೆ ಮೂಲ ಓಂಕಾರ. ಓಂಕಾರದ ಮೂರು ಅಕ್ಷರಗಳಿಂದ ಓಂ ಭೂಃ । ಓಂ ಭುವಃ । ಓಂ ಸುವಃ ॥  ಎನ್ನುವ ಮೂರು ವ್ಯಾಹೃತಿಗಳು ಸೃಷ್ಟಿಯಾದವು. ಈ ವ್ಯಾಹೃತಿಯಿಂದ ಮೂರು ಪಾದದ ಗಾಯತ್ತ್ರಿ ಸೃಷ್ಟಿಯಾಯಿತು. ಮುಂದೆ ಮೂರು ಪಾದದ ಗಾಯತ್ತ್ರಿಯಿಂದ  ಮೂರು ವರ್ಗದ ಪುರುಷಸೂಕ್ತ ಸೃಷ್ಟಿಯಾಯಿತು[ಇದು ಋಗ್ವೇದದ ಹದಿನಾರು ಮಂತ್ರಗಳಿರುವ ಪುರುಷಸೂಕ್ತ. ಇಲ್ಲಿ ಮೊದಲ ಐದು, ನಂತರದ ಐದು ಹಾಗೂ ಕೊನೇಯ ಆರು ಮಂತ್ರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ]. ಹೀಗೆ ಸೃಷ್ಟಿಯಾದ ಪುರುಷಸೂಕ್ತದ ಮೊದಲ ವರ್ಗ ವಿಸ್ತಾರಗೊಂಡು ಋಗ್ವೇದ, ಎರಡನೇ ವರ್ಗ ವಿಸ್ತಾರವಾಗಿ ಯಜುರ್ವೇದ ಮತ್ತು ಮೂರನೇ ವರ್ಗ ವಿಸ್ತಾರವಾಗಿ ಸಾಮವೇದದ ಜನನವಾಯಿತು. ಮುಂದೆ ಅಥರ್ವ ಮುನಿಯಿಂದ ನಾಲ್ಕನೇ ವೇದದ ಸೃಷ್ಟಿಯಾಯಿತು. ಇದು ನಮ್ಮ ವೈದಿಕ ವಾಙ್ಮಯ ಬೆಳೆದುಬಂದ ಬಗೆ. ಓಂಕಾರ ಎನ್ನುವ ಬೀಜದಿಂದ ಮಹಾವೃಕ್ಷವಾಗಿ, ಹೆಮ್ಮರವಾಗಿ ವೈದಿಕ ಸಾಹಿತ್ಯ ಬೆಳೆದಿದೆ.
ಎಲ್ಲಾ ವೇದಗಳಿಗೂ ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತು  ಎನ್ನುವ ನಾಲ್ಕು ಮುಖಗಳಿವೆ. ‘ಸಂಹಿತೆ’ ಅಂದರೆ ಮೂಲಪಾಠ(Text). ‘ಬ್ರಾಹ್ಮಣ’ ವೇದದಲ್ಲಿ ಕರ್ಮ ಭಾಗವನ್ನು ಮತ್ತು ಅದರ ಅನುಷ್ಟಾನದ ಬಗೆಯನ್ನು ವಿವರಿಸುವ ಭಾಗ. ಸಾಮಾನ್ಯವಾಗಿ ಬ್ರಹ್ಮಚಾರಿಗಳಿಗೆ (ಮದುವೆಗೆ ಮೊದಲು) ಸಂಹಿತೆಯ  ಅಧ್ಯಯನವಾದರೆ, ಮದುವೆಯಾದ ನಂತರ ಗ್ರಹಸ್ಥ ಜೀವನಕ್ಕೆ ಬೇಕಾದ ವಿವರಗಳನ್ನು ಕೊಡತಕ್ಕಂತಹ ವೇದದ ಭಾಗ ‘ಬ್ರಾಹ್ಮಣ’.
ಹಿಂದಿನ ಕಾಲದಲ್ಲಿ ಗ್ರಹಸ್ಥ ಜೀವನದ ನಂತರ, ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಿ ಸುಮಾರು ಐವತ್ತರಿಂದ ಅರವತ್ತರ ವಯಸ್ಸಿನಲ್ಲಿ ಎಲ್ಲವನ್ನೂ ಮಕ್ಕಳ ಸ್ವಾಧೀನ ಬಿಟ್ಟು, ಕಾಡಿಗೆ ಹೋಗಿ ವಾಸ ಮಾಡುತ್ತಿದ್ದರು. ಅದನ್ನೇ ವಾನಪ್ರಸ್ಥ ಎನ್ನುತ್ತಾರೆ. ಸಾಂಸಾರಿಕ ಜೀವನದ ಬಹುಭಾಗವನ್ನು ಕಳಚಿಕೊಂಡು ಕಾಡಿನಲ್ಲಿ ವಾಸವಾಗಿರುವಾಗ ಹೆಚ್ಚು ಉಪಯೋಗಕ್ಕೆ ಬರುವ ವೇದದ ಭಾಗವೇ ‘ಅರಣ್ಯಕ’. ಸಮಗ್ರವನ್ನೂ ತ್ಯಜಿಸಿರುವ ಸಂನ್ಯಾಸಿಗಳಿಗೆ ನಿರಂತರ ಭಗವಂತನ ಚಿಂತನೆ ಮಾಡಲು ಬೇಕಾಗಿರುವ ವೇದದ ಭಾಗವೇ ಉಪನಿಷತ್ತು. ಒಟ್ಟಿನಲ್ಲಿ ಹೇಳಬೇಕೆಂದರೆ ಸಂಹಿತೆ- ಬ್ರಹ್ಮಚಾರಿಗಳಿಗೆ, ಬ್ರಾಹ್ಮಣ-ಗ್ರಹಸ್ಥರಿಗೆ, ಅರಣ್ಯಕ-ವಾನಪ್ರಸ್ಥರಿಗೆ ಮತ್ತು ಉಪನಿಷತ್ತು-ಸಂನ್ಯಾಸಿಗಳಿಗೆ. ಇದರರ್ಥ ಗ್ರಹಸ್ಥರು ಉಪನಿಷತ್ತನ್ನು ಓದಬಾರದು ಎಂದರ್ಥವಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಆದರೆ ವಿಶೇಷ ಒತ್ತುಕೊಟ್ಟು ಮೇಲಿನ ವಿಭಾಗವಿದೆ ಅಷ್ಟೇ.
ಹಿಂದೆ ಹೇಳಿದಂತೆ ಪ್ರತಿಯೊಂದು ವೇದಗಳಿಗೂ ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳಿವೆ. ಐತರೇಯ ಬ್ರಾಹ್ಮಣ, ಐತರೇಯ ಅರಣ್ಯಕ ಮತ್ತು ಐತರೇಯ ಉಪನಿಷತ್ತು ಋಗ್ವೇದಕ್ಕೆ ಸಂಬಂಧಪಟ್ಟಿದ್ದು. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆಗಳಿವೆ ಮತ್ತು ಅಲ್ಲಿ ಪ್ರತೀ ಶಾಖೆಗೂ ಎರಡು ಉಪನಿಷತ್ತುಗಳಿವೆ. ಶುಕ್ಲಯಜುರ್ವೇದದಲ್ಲಿ ಈಶಾವಾಸ್ಯ ಮತ್ತು ಬೃಹದಾರಣ್ಯಕ ಎನ್ನುವ ಎರಡು ಉಪನಿಷತ್ತುಗಳಿವೆ. ಅದೇ ರೀತಿ ಕೃಷ್ಣ ಯಜುರ್ವೇದದಲ್ಲಿ ತೈತ್ತಿರೀಯ ಮತ್ತು ಕಾಠಕ ಎನ್ನುವ ಎರಡು ಉಪನಿಷತ್ತುಗಳಿವೆ. ಇನ್ನು ಸಾಮವೇದದಲ್ಲಿ ಕೂಡಾ  ಎರಡು ಉಪನಿಷತ್ತುಗಳಿವೆ. ಅವುಗಳೆಂದರೆ ಕೇನೋಪನಿಷತ್ತು ಮತ್ತು ಛಂದೋಗ ಉಪನಿಷತ್ತು.  
ಅಥರ್ವವೇದದಲ್ಲಿ ಮೂರು ಉಪನಿಷತ್ತುಗಳಿವೆ. ಅವುಗಳೆಂದರೆ: ಅಥರ್ವವೇದೊಪನಿಷತ್ತು, ಮಾಂಡೂಕ ಉಪನಿಷತ್ತು ಮತ್ತು ಷಟ್ ಪ್ರಶ್ನ ಉಪನಿಷತ್ತು. ಇಲ್ಲಿ ನಾವು ನೋಡುತ್ತಿರುವ ಉಪನಿಷತ್ತು ಈ ಮೇಲಿನ ದಶೋಪನಿಷತ್ತುಗಳಲ್ಲಿ ಒಂದಾದ ಅಥರ್ವವೇದದ   “ಷಟ್ ಪ್ರಶ್ನ ಉಪನಿಷತ್ತು”.
ಪ್ರಶ್ನೋಪನಿಷತ್ತಿನಲ್ಲಿ ಪ್ರತಿಪಾಧ್ಯವಾಗಿರುವ ಮುಖ್ಯ ಸಂಗತಿ  ಪ್ರಾಣತತ್ವ ಮತ್ತು ಪ್ರಾಣನನ್ನು ನಿಯಂತ್ರಿಸುವ ನಾರಾಯಣ. ಮುಖ್ಯವಾಗಿ ಈ ಎರಡು ಉಪಾಸನೆಯನ್ನು ಹೇಳುವ ಉಪನಿಷತ್ತು ‘ಪ್ರಶ್ನೋಪನಿಷತ್ತು’.  ಉಪನಿಷತ್ತಿನ ಛಂದಸ್ಸನ್ನು ನೋಡಿದರೆ ಇಲ್ಲಿ ಹೆಚ್ಚಿನ ಭಾಗ ಗದ್ಯರೂಪದಲ್ಲಿದೆ ಹಾಗೂ ನಡುವೆ ಕೆಲವು ಪದ್ಯಗಳನ್ನೂ ನಾವು ನೋಡಬಹುದು. ಹೆಸರೇ ಸೂಚಿಸುವಂತೆ ಆರು ಮಂದಿ ಋಷಿಗಳು ಪಿಪ್ಪಲಾದರನ್ನು ಪ್ರಶ್ನೆ ಮಾಡುತ್ತಾರೆ ಹಾಗೂ ಪಿಪ್ಪಲಾದರು ಅವರ ಪ್ರಶ್ನೆಗೆ ಕೊಡುವ ಉತ್ತರ ಇಲ್ಲಿ ಉಪನಿಷತ್ತಿನ ರೂಪದಲ್ಲಿ ಮೂಡಿಬಂದಿದೆ. ಆದ್ದರಿಂದ ಈ ಏಳುಮಂದಿ ಋಷಿಗಳು ಈ ‘ಉಪನಿಷತ್ತಿನ ಋಷಿಗಳು’. [ ಈ ಋಷಿಗಳ ವಿವರಣೆ ಮುಂದೆ ಉಪನಿಷತ್ತಿನಲ್ಲೇ ಬರುತ್ತದೆ].
ಎಲ್ಲಾ ಉಪನಿಷತ್ತುಗಳಲ್ಲೂ ನಾವು ಪ್ರಶ್ನೆಯನ್ನು ಕಾಣುತ್ತೇವೆ. ಆದರೆ ಇಲ್ಲಿ ಒಂದು ವಿಶೇಷವಿದೆ. ಇದು ಪ್ರಶ್ನೆಯನ್ನು ಹೇಳುವ ಉಪನಿಷತ್ತಲ್ಲ. ಇದು ಆರು ಮಂದಿ ಋಷಿಗಳು ಹಾಕಿದ ಆರು ಪ್ರಶ್ನೆಗೆ ಉತ್ತರಕೊಡುವ ಉಪನಿಷತ್ತು. ಆದ್ದರಿಂದ ಈ ಉಪನಿಷತ್ತನ್ನು ಕೇವಲ ‘ಪ್ರಶ್ನೋಪನಿಷತ್ತು’ ಎಂದು ಹೇಳದೇ ‘ಷಟ್ ಪ್ರಶ್ನ ಉಪನಿಷತ್ತು’ ಎಂದು ಹೇಳುವುದು ಹೆಚ್ಚು ಅರ್ಥಪೂರ್ಣ.
ದೇಶದ ಬೇರೆಬೇರೆ ಕಡೆಯವರಾದ ಆರು ಮಂದಿ ತತ್ತ್ವ ಜಿಜ್ಞಾಸುಗಳು ತತ್ತ್ವವನ್ನು ತಿಳಿಯುವುದಕ್ಕೋಸ್ಕರ ಒಳ್ಳೆಯ ತತ್ತ್ವಜ್ಞಾನಿ ಗುರುವನ್ನು ಹುಡುಕುತ್ತಾ , ಪಿಪ್ಪಲಾದರ ಕೀರ್ತಿಯನ್ನು ಕೇಳಿ ತಿಳಿದು, ಅವರ ಹತ್ತಿರ ತಮ್ಮ ತಾತ್ತ್ವಿಕ ಜಿಜ್ಞಾಸೆಯನ್ನು ಪರಿಹರಿಸಿಕೊಳ್ಳಬೇಕೆಂದು, ಪಿಪ್ಪಲಾದರ ಆಶ್ರಮದಲ್ಲಿ ಒಟ್ಟಾಗುತ್ತಾರೆ. ಹೀಗೆ ಆರು ಮಹತ್ತರವಾದ ಪ್ರಶ್ನೆಗಳನ್ನು ಹೊತ್ತು ತಂದ ಆರು ಮಂದಿ ಋಷಿಗಳಿಗೆ ಉತ್ತರ ಕೊಟ್ಟವರು ಪಿಪ್ಪಲಾದರು.  ಬನ್ನಿ, ಭಗವಂತನ ಅನುಗ್ರಹ ಬೇಡಿ, ಈ ಆರು ಮಂದಿ ಋಷಿಗಳ ಜೊತೆ ಸೇರಿ,  ನಾವೂ ಕೂಡ ನಮ್ಮಿಂದ ಸಾಧ್ಯವಾದಷ್ಟು ಜ್ಞಾನವನ್ನು ಪಿಪ್ಪಲಾದರಿಂದ ಪಡೆದು ಕೃತಾರ್ಥರಾಗೋಣ...